Tag: IPL

  • ಸಾನಿಯಾ ಮಿರ್ಜಾ ಸಹೋದರಿಯೊಂದಿಗೆ ಟೀಂ ಇಂಡಿಯಾ ಮಾಜಿ ನಾಯಕನ ಪುತ್ರ ಡೇಟಿಂಗ್!

    ಸಾನಿಯಾ ಮಿರ್ಜಾ ಸಹೋದರಿಯೊಂದಿಗೆ ಟೀಂ ಇಂಡಿಯಾ ಮಾಜಿ ನಾಯಕನ ಪುತ್ರ ಡೇಟಿಂಗ್!

    ಹೈದರಾಬಾದ್: ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಅಸಾದುದ್ದೀನ್‍ರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಅನಮ್ ಮಿರ್ಜಾ ಈಗಾಗಲೇ ಅಕ್ಬರ್ ರಷಿದ್ ಎಂಬವರೊಂದಿಗೆ ವಿವಾಹವಾಗಿದ್ದರು. ಆದರೆ 2 ವರ್ಷದ ಬಳಿಕ ಇಬ್ಬರ ವಿವಾಹ ಸಂಬಂಧ ಮುರಿದು ಬಿದ್ದಿತ್ತು. ಅನಮ್, ಅಸಾದುದ್ದೀನ್ ಜೋಡಿ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಕಾಣಿಸಿಕೊಂಡಿದ್ದು, ತವರಿನ ಟೀಂ ಹೈದರಾಬಾದ್‍ಗೆ ಬೆಂಬಲ ಸೂಚಿಸಲು ಸಾನಿಯಾ ಮಿರ್ಜಾ, ಅನಮ್ ಇಬ್ಬರು ಅಸಾದುದ್ದೀನ್ ರೊಂದಿಗೆ ಆಗಮಿಸಿದ್ದರು. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಇತ್ತ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದ ಸಾನಿಯಾ ಮಿರ್ಜಾ ಕೂಡ ಮಗುವನ್ನು ಮನೆಯಲ್ಲೇ ಬಿಟ್ಟು ಆಗಮಿಸಿದ್ದರು. ಈ ವೇಳೆ ಅನಮ್ ರೊಂದಿಗೆ ಅಸಾದುದ್ದೀನ್ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಸದ್ಯ ಇಬ್ಬರು ಡೇಟಿಂಗ್ ನಲ್ಲಿದ್ದು, ಶೀಘ್ರವೇ ಮದುವೆ ಆಗಲಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಈ ವರದಿಗೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಸಾನಿಯಾ ಮಿರ್ಜಾ, ಅಸಾದುದ್ದೀನ್ ರೊಂದಿಗೆ ಇರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ‘ಫ್ಯಾಮಿಲಿ’ ಎಂದು ಬರೆದುಕೊಂಡಿದ್ದರು.

    ಅಂದಹಾಗೇ 25 ವರ್ಷದ ಸಾನಿಯಾ ಸಹೋದರಿ ಅನಮ್ ಶೂಟಿಂಗ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿ ಯಶಸ್ವಿ ಕಾಣದೇ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಇತ್ತ 28 ವರ್ಷದ ಅಸಾದುದ್ದೀನ್ ಕೂಡ ತಂದೆಯಂತೆ ಕ್ರಿಕೆಟ್‍ನಲ್ಲಿ ಮಿಂಚಲು ಯತ್ನಿಸಿ ಸಾಕಷ್ಟು ಯಶಸ್ಸು ಲಭಿಸದೇ ಸದ್ಯ ವಕೀಲ ವೃತ್ತಿಯಲ್ಲಿ ತೊಡಗಿದ್ದಾರೆ.

     

    View this post on Instagram

     

    Family ❤️ @asad_ab18

    A post shared by Sania Mirza (@mirzasaniar) on

  • ಐಪಿಎಲ್ ಫೈನಲ್ ಚೆನ್ನೈನಿಂದ ಹೈದರಾಬಾದ್‍ಗೆ ಶಿಫ್ಟ್

    ಐಪಿಎಲ್ ಫೈನಲ್ ಚೆನ್ನೈನಿಂದ ಹೈದರಾಬಾದ್‍ಗೆ ಶಿಫ್ಟ್

    ಮುಂಬೈ: 2019ರ ಇಂಡಿಯನ್ ಪ್ರೀಮಿಯರ್ ಲೀಗ್‍ನ ಫೈನಲ್ ಪಂದ್ಯ ಚೆನ್ನೈ ಬದಲಾಗಿ ಹೈದರಾಬಾದ್‍ನಲ್ಲಿ ನಡೆಯಲಿದೆ. ಮೇ 12 ರಂದು ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

    ಕಳೆದ ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ತಂಡದ ತವರಿನಲ್ಲಿ ಟೂರ್ನಿಯ ಫೈನಲ್ ಪಂದ್ಯ ನಡೆಸಲಾಗುತ್ತದೆ. ಆದರೆ ಚಿದಂಬರಂ ಸ್ಟೇಡಿಯಂನಲ್ಲಿರುವ ಮೂರು ಕಡೆ ಪ್ರೇಕ್ಷಕರ ಸ್ಟ್ಯಾಂಡ್ ಗಳಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ವಿಫಲವಾಗಿತ್ತು. ಇದರಿಂದಾಗಿ ಬಿಸಿಸಿಐ ಅನಿವಾರ್ಯವಾಗಿ ಈ ಬಾರಿ ಫೈನಲ್ ಪಂದ್ಯವನ್ನು ಹೈದರಾಬಾದಿಗೆ ಶಿಫ್ಟ್ ಮಾಡಿದೆ.

    ಟೂರ್ನಿಯ ಆರಂಭಿಕ ಪಂದ್ಯವನ್ನು ಚೆನ್ನೈ ತಂಡ ತವರಿನಲ್ಲಿ ಆಯೋಜನೆ ಮಾಡಿತ್ತು. ಆದರೆ ಫೈನಲ್ ಪಂದ್ಯ ನಡೆಸಲು ಬೇಕಾದ ಅನುಮತಿಯನ್ನು ಪಡೆದುಕೊಳ್ಳಲು ವಿಫಲವಾಗಿತ್ತು. ಇತ್ತ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯ ಮೇ 8 ರಂದು ಹಾಗೂ 2ನೇ ಕ್ವಾಲಿಫೈರ್ ಪಂದ್ಯ ಮೇ 10 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಚೆನ್ನೈ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆದರೆ ಮೊದಲ ಕ್ವಾಲಿಫೈಯರ್ ಚೆನ್ನೈನಲ್ಲಿ ನಡೆಯಲಿದೆ.

  • ಕುಡಿದು ಕ್ರೀಡಾಂಗಣದಲ್ಲೇ ಗಲಾಟೆ – ಆ್ಯಂಕರ್ ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲು

    ಕುಡಿದು ಕ್ರೀಡಾಂಗಣದಲ್ಲೇ ಗಲಾಟೆ – ಆ್ಯಂಕರ್ ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲು

    ಹೈದರಾಬಾದ್: ಐಪಿಎಲ್ ಭಾಗವಾಗಿ ಹೈದರಾಬಾದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಕುಡಿದು ಅಸಭ್ಯವಾಗಿ ವರ್ತಿಸಿ, ಪಂದ್ಯ ವಿಕ್ಷೀಸಲು ಅಡ್ಡಪಡಿಸಿದ ಕಾರಣ ಯುವತಿ ಸೇರಿದಂತೆ 6 ಮಂದಿಯ ಮೇಲೆ ದೂರು ದಾಖಲಿಸಲಾಗಿದೆ.

    ಹೈದರಾಬಾದ್ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯ ವೇಳೆ ಘಟನೆ ನಡೆದಿದ್ದು, ಭರತ್ ಫೈನಾನ್ಸಿಯಲ್ ಇನ್ಕ್ಲೂಷನ್ ಲಿ. ಕಂಪೆನಿಯ ಉಪಾಧ್ಯಕ್ಷರಾದ ಸಂತೋಷ್ ಉಪಾಧ್ಯಾಯ್ ಎಂಬವರು ಉಪ್ಪಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ್ಯಂಕರ್ ಪ್ರಶಾಂತಿ ಸೇರಿದಂತೆ ಕೆಲ ಯುವಕರು ಪಂದ್ಯ ನೋಡಲು ಅಡ್ಡಿ ಪಡಿಸಿ ದಾಂಧಲೆ ನಡೆಸಿದ್ದರು ಎಂದು ದೂರಿದ್ದಾರೆ.

    ಪೊಲೀಸರು ಸದ್ಯ ಕೆ ಪೂರ್ಣಿಮ (27), ಕೆ ಪ್ರಿಯಾ (23), ಸಿ ಪ್ರಶಾಂತಿ (32), ವಿ ಶ್ರೀಕಾಂತ್ ರೆಡ್ಡಿ (48), ಎಲ್ ಸುರೇಶ್ (28), ಜಿ ವೇಣುಗೋಪಾಲ್ (38) ಎಂಬವರ ವಿರುದ್ಧ ಎಫ್‍ಐಆರ್ ದಾಖಲಿಸಿದೆ. ಕ್ರೀಡಾಂಗಣದ ಬಾಕ್ಸ್ ನಂ.22ರಲ್ಲಿ ಘಟನೆ ನಡೆದಿದ್ದು, ಐಪಿಸಿ ಸೆಕ್ಷನ್ 341, 188, 506 ಮತ್ತು 70(ಬಿ) ಅಡಿ ದೂರು ದಾಖಲಾಗಿದೆ.

  • ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    ಬೌಂಡರಿ ಗೆರೆ ಬಳಿ ಅದ್ಭುತ ಕ್ಯಾಚ್ – ಇನ್‍ಗ್ರಾಮ್, ಅಕ್ಷರ್ ಮೋಡಿಗೆ ಗೇಲ್ ಔಟ್ : ವಿಡಿಯೋ

    – ನಿಯಮ ಬದಲಿಸಿ ಎಂದ ನೆಟ್ಟಿಗರು

    ನವದೆಹಲಿ: ಕಿಂಗ್ಸ್ ಇಲೆವನ್ ವಿರುದ್ಧದ ಪಂದ್ಯವನ್ನು ದೆಹಲಿ ತಂಡ ಕೊನೆಯ ಎರಡು ಎಸೆತ ಬಾಕಿ ಇರುವಾಗ ಗೆದ್ದುಕೊಂಡರೂ ಈ ಪಂದ್ಯದಲ್ಲಿ ಕಾಲಿನ್ ಇನ್‍ಗ್ರಾಮ್ ಕ್ಯಾಚ್ ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

    ಸದ್ಯ ಸೂಪರ್ ಫಿಟ್ ಫೀಲ್ಡರ್ ಗಳ ಸಂಖ್ಯೆ ಸದ್ಯ ಹೆಚ್ಚಾಗುತ್ತಲೇ ಇದ್ದು, ಪಂಜಾಬ್ ವಿರುದ್ಧ ಪಂದ್ಯದಲ್ಲೂ ಕಾಲಿನ್ ಇನ್‍ಗ್ರಾಮ್ ಸೂಪರ್ ಕ್ಯಾಚ್ ಪಡೆದಿದ್ದಾರೆ. ಕಾಲಿನ್, ಅಕ್ಷರ್ ಇಬ್ಬರ ಜೋಡಿ ಕ್ಯಾಚ್ ಪಡೆಯುವಲ್ಲಿ ಮೋಡಿ ಮಾಡಿದ್ದು, ಪಂದ್ಯದ 12ನೇ ಓವರಿನ 2ನೇ ಎಸೆತದಲ್ಲಿ ಗೇಲ್ ಬೀಸಿದ ಸಿಕ್ಸರ್ ರನ್ನು ಬೌಂಡರಿ ಗೆರೆ ಬಳಿ ಕ್ಯಾಚ್ ಪಡೆದ ಇನ್‍ಗ್ರಾಮ್ ನಾನು ಬೌಂಡರಿ ಗೆರೆ ದಾಟುತ್ತಿದ್ದೇನೆ ಎಂದು ಅರಿವಾಗುತ್ತಿದಂತೆ ಅಲ್ಪ ದೂರದಲ್ಲಿದ್ದ ಅಕ್ಷರ್ ಗೆ ಬಾಲ್ ಪಾಸ್ ಮಾಡಿ ಕ್ಯಾಚ್ ಪೂರ್ಣಗೊಳಿಸುವಂತೆ ಮಾಡಿದ್ರು.

    ಅಕ್ಷರ್ ಕ್ಯಾಚ್ ಪೂರ್ಣಗೊಳಿಸಿದ ಪರಿಣಾಮ 37 ಎಸೆತಗಳಲ್ಲಿ 69 ರನ್ ಗಳಿಸಿ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಗೇಲ್ ಪೆವಿಲಿಯನ್ ಸೇರಿದರು. ಅಲ್ಲದೇ ಕ್ಯಾಚ್ ಪಡೆಯುವ ವೇಳೆ ಇನ್‍ಗ್ರಾಮ್ ತೋರಿದ ಸಮಯ ಪ್ರಜ್ಞೆಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕ್ಯಾಚ್ ಪಡೆಯಲು ಇನ್‍ಗ್ರಾಮ್ ಶ್ರಮವಹಿಸಿದ್ದರೂ ಕೂಡ ನಿಯಮಗಳಂತೆ ಈ ಕ್ಯಾಚ್ ಅಕ್ಷರ್ ಪಟೇಲ್ ಖಾತೆಗೆ ಸೇರಿತ್ತು. ಈ ನಿಯಮಗಳ ಬಗ್ಗೆಯೂ ಹಲವರು ಪ್ರಶ್ನೆ ಮಾಡಿದ್ದು, ನಿಯಮಗಳ ಬದಲಾವಣೆ ಅಗತ್ಯ ಇದೆ ಎಂದಿದ್ದಾರೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ ಗಳಲ್ಲಿ 163 ರನ್ ಸಿಡಿಸಿದ ಪಂಜಾಬ್ ಡೆಲ್ಲಿಗೆ 164 ರನ್ ಗಳ ಗುರಿ ನೀಡಿತು. ಸವಾಲಿನ ಗುರಿ ಬೆನ್ನತ್ತಿದ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ 19.4 ಓವರಿನಲ್ಲೇ ಗೆಲುವಿನ ರನ್ ಗಳಿಸಿ 5 ವಿಕೆಟ್ ಜಯ ಪಡೆಯಿತು. ಪಂದ್ಯಲ್ಲಿ ಧವನ್ 56 ರನ್ (41 ಎಸೆತ, 7 ಬೌಂಡರಿ, 1 ಸಿಕ್ಸರ್), ಶ್ರೇಯಸ್ 58 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮುಂಬೈ 2ನೇ ಸ್ಥಾನದಲ್ಲಿದ್ದರೆ, ಅಷ್ಟೇ ಅಂಕ ಪಡೆದಿರುವ ಡೆಲ್ಲಿ ಕಡಿಮೆ ರನ್ ರೇಟ್ ಕಾರಣದಿಂದ 3ನೇ ಸ್ಥಾನ ಪಡೆದುಕೊಂಡಿದೆ.

  • ಮಂಕಡ್ ರನೌಟ್ ಭೀತಿ – ಬ್ಯಾಟ್ ಇಟ್ಟು ಕ್ರೀಸ್‍ನಲ್ಲಿ ಕುಳಿತ ಕೊಹ್ಲಿ : ವಿಡಿಯೋ ನೋಡಿ

    ಮಂಕಡ್ ರನೌಟ್ ಭೀತಿ – ಬ್ಯಾಟ್ ಇಟ್ಟು ಕ್ರೀಸ್‍ನಲ್ಲಿ ಕುಳಿತ ಕೊಹ್ಲಿ : ವಿಡಿಯೋ ನೋಡಿ

    ಕೋಲ್ಕತ್ತಾ: ಶುಕ್ರವಾರ ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮಂಕಡ್ ರನ್ ಔಟ್ ಆಗುವ ಭೀತಿಗೆ ಒಳಗಾಗಿದ್ದರು.

    ಆಗಿದ್ದು ಇಷ್ಟು, 18ನೇ ಓವರನ್ನು ಸ್ಪಿನ್ನರ್ ಸುನೀಲ್ ನರೈನ್ ಎಸೆಯುತ್ತಿದ್ದರು. ಕೊನೆಯ ಎಸೆತವನ್ನು ಹಾಕಲು ಬಂದ ನರೈನ್ ಬಾಲ್ ಹಾಕದೇ ಮುಂದಕ್ಕೆ ಹೋಗಿ ಮಂಕಡ್ ರನೌಟ್ ಮಾಡಲು ಪ್ರಯತ್ನಿಸಿದ್ದರು. ನರೈನ್ ಕೈಯಿಂದ ಬಾಲ್ ಬೀಳದನ್ನು ನೋಡಿದ ಕೂಡಲೇ ಕೊಹ್ಲಿ ಅಲರ್ಟ್ ಆಗಿ ಕ್ರೀಸ್‍ನಲ್ಲೇ ಬ್ಯಾಟ್ ಇಟ್ಟು ಕುಳಿತುಬಿಟ್ಟಿದ್ದಾರೆ. ನಂತರ ನರೈನ್ ಅವರನ್ನು ನೋಡಿ ನಕ್ಕಿದ್ದಾರೆ.

    ಈ ಪಂದ್ಯವನ್ನು ಬೆಂಗಳೂರು 10 ರನ್‍ಗಳಿಂದ ಗೆದ್ದುಕೊಂಡಿದೆ. ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಆರ್‌ಸಿಬಿ ತಂಡ ಕೆಕೆಆರ್ ತಂಡಕ್ಕೆ 214 ರನ್‍ಗಳ ಗುರಿಯನ್ನು ನೀಡಿತ್ತು. ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 100 ರನ್( 58 ಎಸೆತ, 9 ಬೌಂಡರಿ, 4 ಸಿಕ್ಸರ್) ಹೊಡೆದು ಐಪಿಎಲ್‍ನಲ್ಲಿ 5ನೇ ಶತಕ ಸಿಡಿಸಿದರು.

    ವಿರಾಟ್ ಕೊಹ್ಲಿ ಹೊರತಾಗಿ ಮೋಯಿನ್ ಅಲಿ 66 ರನ್(28 ಎಸೆತ, 5 ಬೌಂಡರಿ, 6 ಸಿಕ್ಸರ್) ಸಿಡಿಸಿದರ ಪರಿಣಾಮ ಬೆಂಗಳೂರು ತಂಡ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು.

    ಕಠಿಣ ಸವಾಲವನ್ನು ಬೆನ್ನೆಟ್ಟಿದ ಕೋಲ್ಕತ್ತಾ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ನಿತೀಶ್ ರಾಣಾ ಔಟಾಗದೇ 85 ರನ್(46 ಎಸೆತ, 9 ಬೌಂಡರಿ, 5 ಸಿಕ್ಸರ್), ರಸೆಲ್ 65 ರನ್(25 ಎಸೆತ, 2 ಬೌಂಡರಿ, 9 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನ ಹತ್ತಿರ ತಂದಿದ್ದರು.

     

  • ಐಪಿಎಲ್ ಬೆಟ್ಟಿಂಗ್‍ಗೆ ಯುವಕ ಬಲಿ

    ಐಪಿಎಲ್ ಬೆಟ್ಟಿಂಗ್‍ಗೆ ಯುವಕ ಬಲಿ

    ಹಾಸನ: ಐಪಿಎಲ್ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿ ಹಣ ತೀರಿಸಲಾಗದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಮೃತಪಟ್ಟ ಘಟನೆ ಆಲೂರು ತಾಲೂಕಿನ ಬದುಕರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಲತೇಶ್ ಕುಮಾರ್ (25) ಮೃತ ಯುವಕ. ಲತೇಶ್ ಕುಮಾರ್ ಹಾಸನದ ರಾಜೀವ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿದ್ದನು. ಲತೇಶ್ ಐಪಿಎಲ್ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದನು. ಬಳಿಕ ಸ್ನೇಹಿತರ ಕಿರುಕುಳ ತಾಳಲಾರದೇ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದನು.

    ವಿಷ ಕುಡಿದು ಏಕೆ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಲತೇಶ್‍ನನ್ನು ಪೋಷಕರು ಪ್ರಶ್ನಿಸಿದ್ದಾರೆ. ಆಗ ಲತೇಶ್ ಐಪಿಎಲ್ ಬೆಟ್ಟಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಅಲ್ಲದೆ ಐಪಿಎಲ್ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದೇನೆ. ಹಣ ನೀಡು ಎಂದು ಕಿರುಕುಳ ನೀಡುತ್ತಿದ್ದರು. ಹಾಗಾಗಿ ವಿಷ ಸೇವಿಸಿದ್ದೇನೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದನು.

    ಲತೇಶ್ ಕಳೆದ ಒಂದು ತಿಂಗಳಿನಿಂದ ಪ್ರತಿ ಪಂದ್ಯದ ಮೇಲೂ ಬೆಟ್ಟಿಂಗ್ ಕಟ್ಟುತ್ತಿದ್ದ. ಆದರೆ ಪ್ರತಿ ಪಂದ್ಯದಲ್ಲೂ ಲತೇಶ್ ಸೋತು ಹಣ ಕಳೆದುಕೊಳ್ಳುತ್ತಿದ್ದನು.

    ಬೆಟ್ಟಿಂಗ್ ನಲ್ಲಿ ಸೋತ ಲತೇಶ್ ಕುಮಾರ್‍ಗೆ ಹಣ ನೀಡು ಎಂದು ಅನಿಲ್ ಹಾಗೂ ಗಣೇಶ್ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಲತೇಶ್ ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಲತೇಶ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆಎಲ್ ರಾಹುಲ್‍ಗೆ ಜನ್ಮದಿನದ ಶುಭ ಕೋರಿದ ಪಾಂಡ್ಯ

    ಕೆಎಲ್ ರಾಹುಲ್‍ಗೆ ಜನ್ಮದಿನದ ಶುಭ ಕೋರಿದ ಪಾಂಡ್ಯ

    – ಐಪಿಎಲ್‍ನಲ್ಲಿ ರಾಹುಲ್ ವಿಶೇಷ ಸಾಧನೆ

    ಮೊಹಾಲಿ: ಟೀಂ ಇಂಡಿಯಾ ಯುವ ಆಟಗಾರ ಕೆಎಲ್ ರಾಹುಲ್ ಇಂದು ತಮ್ಮ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಆಟಗಾರರು ರಾಹುಲ್‍ಗೆ ಶುಭಕೋರಿದ್ದಾರೆ.

    ಕಾಫಿ ವಿಥ್ ಕರಣ್ ಶೋ ಬಳಿಕ ಟೀಂ ಇಂಡಿಯಾಗೆ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದ ರಾಹುಲ್ ಹಾಗೂ ಪಾಂಡ್ಯ ವಿಶ್ವಕಪ್ ಆಯ್ಕೆ ಆಗಿರುವ ಸಂಭ್ರಮದಲ್ಲಿದ್ದು, ಹಾರ್ದಿಕ್ ಪಾಂಡ್ಯ, ಕೃಣಾಲ್, ಅಕ್ಷರ್ ಪಟೇಲ್ ಅವರೊಂದಿಗೆ ಸಂಭ್ರಮ ಆಚರಿಸಿಕೊಂಡಿದ್ದಾರೆ. ರಾಹುಲ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶುಭ ಕೋರಿರುವ ಹಾರ್ದಿಕ್ ಪಾಂಡ್ಯ, ಇಡೀ ಜೀವನಕ್ಕೆ ನನಗೆ ಸಹೋದರನಿದ್ದಂತೆ ನಡೆದಿದ್ದನ್ನು ಹೊರತು ಪಡಿಸಿ ಈ ವರ್ಷವನ್ನು ಸ್ಮರಣೀಯವಾಗಿಸೋಣ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/BwXevAylkLI/?utm_source=ig_embed

    ಇತ್ತ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಅರ್ಧ ಶತಕಗಳಿಸಿ ತಂಡದ ಗೆಲುವಿಗೆ ರಾಹುಲ್ ಕಾರಣರಾಗಿದ್ದರು. ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಶತಕ ಸಿಡಿಸಿದ್ದ ರಾಹುಲ್, 23 ಪಂದ್ಯಗಳಿಂದ 1 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಐಪಿಎಲ್ ನಲ್ಲಿ 1 ಸಾವಿರ ರನ್ ಪೂರೈಸಿದ 8ನೇ ಆಟಗಾರರಾಗಿದ್ದಾರೆ.

  • ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ ಕೆಎಲ್ ರಾಹುಲ್

    ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ ಕೆಎಲ್ ರಾಹುಲ್

    ಮುಂಬೈ: 2019ರ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ಕಳೆದ 7 ಪಂದ್ಯಗಳಲ್ಲಿ 317 ರನ್ ಸಿಡಿಸಿ ಮಿಂಚಿದ್ದಾರೆ. ಅಲ್ಲದೇ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ಪಂದ್ಯದ ಬಳಿಕ ಸಿಕ್ಕ ಬಿಡುವಿನ ಅವಧಿಯಲ್ಲಿ ರಾಹುಲ್ ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ಸಮಯ ಕಳೆದಿದ್ದಾರೆ.

    ಮುಂಬೈ ಬಂದ್ರಾ ಪ್ರದೇಶದಲ್ಲಿರುವ ಮುಸ್ಕಾನ್ ಫೌಂಡೇಶನ್‍ನ ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಹುಲ್ ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆದಿದ್ದಾರೆ. ಈ ವೇಳೆ ಮಕ್ಕಳೊಂದಿಗೆ ತೆಗೆದುಕೊಂಡಿದ್ದ ಫೋಟೋಗಳನ್ನು ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

    ಕೆಎಲ್ ರಾಹುಲ್ ಅವರು ನಮ್ಮ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿ ಸಮಯವನ್ನು ಕಳೆದಿದ್ದಾರೆ. ಸ್ಟಾರ್ ಆಟಗಾರರು ಇಂತಹ ಕಾರ್ಯಕ್ಕೆ ಮುಂದಾಗಿದ್ದು ಉತ್ತಮ ನಡೆಯಾಗಿದ್ದು, ಅವರ ಈ ಭೇಟಿ ಕೆಲ ಮಕ್ಕಳಿಗೆ ಪ್ರೇರಣೆ ಆಗಲಿದೆ. ರಾಹುಲ್ ಭೇಟಿಯಿಂದ ಮಕ್ಕಳು ಅಚ್ಚರಿಗೊಂಡಿದ್ದರು. ಇದನ್ನಷ್ಟೇ ನಾವು ಸ್ಟಾರ್ ಗಳಿಂದ ನಿರೀಕ್ಷೆ ಮಾಡುತ್ತೇವೆ. ಅವರಿಗೆ ಧನ್ಯವಾದ ಎಂದು ಸಂಸ್ಥೆ ಪೋಸ್ಟ್ ನಲ್ಲಿ ತಿಳಿಸಿದೆ.

    ರಾಹುಲ್ ಕಳೆದ ವರ್ಷ ಫಾರ್ಮ್ ಸಮಸ್ಯೆಯಿಂದ ನಿರಾಸೆ ಮೂಡಿಸಿದ್ದರು. ಆದರೆ ಸದ್ಯ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದು ವಿಶ್ವಕಪ್ ಆಯ್ಕೆ ಬಗ್ಗೆ ಮೇಲೆ ಕುತೂಹಲ ಮೂಡಿಸಿದೆ. ನಾಳೆ ಬಿಸಿಸಿಐ ವಿಶ್ವಕಪ್ ಟೂರ್ನಿಗೆ 15 ಆಟಗಾರರ ಪಟ್ಟಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದ್ದು, 26 ವರ್ಷದ ಕೆಎಲ್ ರಾಹುಲ್ ಸ್ಥಾನ ಪಡೆಯುತ್ತರಾ ಎಂಬ ಕುತೂಹಲ ಹೆಚ್ಚಿದೆ.

  • ಸೆಹ್ವಾಗ್ ಕನಸಿನ ತಂಡದಲ್ಲಿ ಕೆಎಲ್ ರಾಹುಲ್‍ಗೆ ಸ್ಥಾನ

    ಸೆಹ್ವಾಗ್ ಕನಸಿನ ತಂಡದಲ್ಲಿ ಕೆಎಲ್ ರಾಹುಲ್‍ಗೆ ಸ್ಥಾನ

    ಮುಂಬೈ: 2019 ವಿಶ್ವಕಪ್‍ಗೆ ಟೀಂ ಇಂಡಿಯಾ ತಂಡದ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಕನಸಿನ ತಂಡವನ್ನು ಆಯ್ಕೆ ಮಾಡಿದ್ದಾರೆ.

    2015ರ ವಿಶ್ವಕಪ್ ತಂಡಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸೆಹ್ವಾಗ್ 8 ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ.

    ವಿಶ್ವಕಪ್ ಟೂರ್ನಿ ಮೇ ತಿಂಗಳಿನಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ ಅಧಿಕೃತ ತಂಡ ಏ.15ಕ್ಕೆ ಘೋಷಣೆಯಾಗುವ ಸಾಧ್ಯತೆ ಇದೆ. ಇತ್ತ ಸೆಹ್ವಾಗ್ ತಮ್ಮ ತಂಡದಲ್ಲಿ ಐವರು ಬ್ಯಾಟ್ಸ್ ಮನ್ ಗಳು, 2 ವಿಕೆಟ್ ಕೀಪರ್ ಗಳು ಸೇರಿದಂತೆ ಮೂವರು ಅಲೌಂಡರ್ ಗಳೊಂದಿಗೆ 5 ಬೌಲರ್ ಗಳನ್ನು ಆಯ್ಕೆ ಮಾಡಿದ್ದಾರೆ.

    ಸದ್ಯ ಐಪಿಎಲ್ ಟೂರ್ನಿ ಸಾಗುತ್ತಿರುವ ಹಿನ್ನೆಲೆಯಲ್ಲಿ ತಂಡದ ಎಲ್ಲಾ ಆಟಗಾರರು ಬ್ಯುಸಿಯಾಗಿದ್ದು, ತಂಡದಲ್ಲಿ ಪ್ರಮುಖ 4 ಸ್ಥಾನಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆದಿದೆ. ಇತ್ತ ತಂಡದ ಘೋಷಣೆ ಆದ ಬೆನ್ನಲ್ಲೇ ಆಟಗಾರರು ವಿಶ್ವಕಪ್‍ಗೆ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುಲು ಸಾಧ್ಯವಾಗಲಿದೆ.

    ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಎಂಎಸ್ ಧೋನಿ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಶಮಿ, ಕೇದಾರ್ ಜಾಧವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಚಹಲ್, ವಿಜಯ್ ಶಂಕರ್, ಬುಮ್ರಾ, ರಿಷಬ್ ಪಂತ್.

    ಧೋನಿಗೆ 2-3 ಪಂದ್ಯ ನಿಷೇಧ: ಇದೇ ವೇಳೆ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮೈದಾನದಲ್ಲಿ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದ ಬಗ್ಗೆ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ. ಮೈದಾನದಲ್ಲಿ ಇಂತಹ ವರ್ತನೆ ತೋರಿದ ಹಿನ್ನೆಲೆಯಲ್ಲಿ ಧೋನಿ ಅವರಿಗೆ 2 ರಿಂದ 3 ಪಂದ್ಯಗಳ ನಿಷೇಧ ಮಾಡುವುದಕ್ಕೆ ಅರ್ಹ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರಿಗೆ ಕೇವಲ ಪಂದ್ಯದ ಶೇ.50ರಷ್ಟು ಸಂಭಾವನೆಯನ್ನು ಮಾತ್ರ ದಂಡವಾಗಿ ವಿಧಿಸಲಾಗಿದೆ. ಮುಂದಿನ ಅವಧಿಯಲ್ಲಿ ಬೇರೆ ತಂಡದ ನಾಯಕ ಕೂಡ ಇದೇ ರೀತಿ ವರ್ತನೆ ಮಾಡಿದರೆ ಅಂಪೈರ್ ಗಳಿಗೆ ಯಾವ ರೀತಿಯ ಬೆಲೆ ಇರಲಿದೆ ಎಂದು ಪ್ರಶ್ನಿಸಿದ್ದಾರೆ.

  • ಕೊನೆಗೂ ಗೆಲುವಿನ ಖಾತೆ ತೆರೆದ ಆರ್‌ಸಿಬಿ – ಪಂಜಾಬ್ ವಿರುದ್ಧ 8 ವಿಕೆಟ್‍ಗಳ ಜಯ

    ಕೊನೆಗೂ ಗೆಲುವಿನ ಖಾತೆ ತೆರೆದ ಆರ್‌ಸಿಬಿ – ಪಂಜಾಬ್ ವಿರುದ್ಧ 8 ವಿಕೆಟ್‍ಗಳ ಜಯ

    ಮೋಹಾಲಿ: ಐಪಿಎಲ್ 2019ನೇ ಆವೃತ್ತಿಯಲ್ಲಿ ಸತತ ಆರು ಸೋಲುಗಳಿಗೆ ಗುರಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮೊದಲ ಗೆಲುವನ್ನು ದಾಖಲಿಸಿದೆ.

    ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ 99 ರನ್ ಸಿಡಿಸಿ ಆರ್‌ಸಿಬಿಗೆ 174 ರನ್‍ಗಳ ಗುರಿ ನೀಡಿತ್ತು. ಮೊದಲು ಬ್ಯಾಟಿಂಗ್ ಮಾಡಲು ಬಂದ ಪಾರ್ಥಿವ್ ಪಟೇಲ್ 19 ರನ್ ತೆಗೆದುಕೊಂಡು ಔಟ್ ಆದರು.

    ನಾಯಕ ವಿರಾಟ್ ಕೊಹ್ಲಿ 67 ರನ್ ಸಿಡಿಸಿ ಉತ್ತಮವಾಗಿ ಪ್ರದರ್ಶನ ನೀಡಿದರು. ಅಲ್ಲದೆ ಎಬಿಡಿ ವಿಲಿಯರ್ಸ್ ಕೂಡ 59 ರನ್ ಸಿಡಿಸುವ ಮೂಲಕ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದರು. ವಿರಾಟ್ ಹಾಗೂ ಎಬಿಡಿ ವಿಲಿಯರ್ಸ್ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ 8 ವಿಕೆಟ್ ಅಂತರದ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಪಂದ್ಯದಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.