Tag: IPL

  • ರಬಡಾ ಬೌಲಿಂಗ್‍ಗೆ ಧೋನಿ ಬಾಯ್ಸ್ ತತ್ತರ – ಚೆನ್ನೈಗೆ ಎರಡನೇ ಸೋಲು

    ರಬಡಾ ಬೌಲಿಂಗ್‍ಗೆ ಧೋನಿ ಬಾಯ್ಸ್ ತತ್ತರ – ಚೆನ್ನೈಗೆ ಎರಡನೇ ಸೋಲು

    ದುಬೈ: ಡೆಲ್ಲಿ ಕ್ಯಾಪಿಟಲ್ ತಂಡದ ಶಿಸ್ತುಬದ್ಧವಾದ ಬೌಲಿಂಗ್ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್-2020ಯಲ್ಲಿ ಎರಡನೇ ಸೋಲು ಕಂಡಿದೆ. ಈ ಮೂಲಕ ಡೆಲ್ಲಿ ತಂಡ 44 ರನ್‍ಗಳ ಅಂತರದಲ್ಲಿ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಡೆಲ್ಲಿ ಕ್ಯಾಪಿಟಲ್ ತಂಡ ಪೃಥ್ವಿ ಶಾ ಅವರು ಭರ್ಜರಿ ಅರ್ಧಶತಕ ಮತ್ತು ಪಂತ್ ಅವರ ಸೂಪರ್ ಬ್ಯಾಟಿಂಗ್ ಫಲದಿಂದ ನಿಗದಿತ 20 ಓವರಿನಲ್ಲಿ 175 ರನ್ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಆರಂಭದಿಂದಲೂ ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಗಿತ್ತು. ಪರಿಣಾಮ ನಿಗದಿತ 20 ಓವರಿನಲ್ಲಿ ಕೇವಲ 131 ಗಳಿಸಿ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು. ಕೊನೆಯಲ್ಲಿ ಧೋನಿ ಇದ್ದರೂ ಯಾವುದೇ ಮ್ಯಾಜಿಕ್ ನಡೆಯಲಿಲ್ಲ.

    ಡೆಲ್ಲಿ ಕ್ಯಾಪಿಟಲ್ ತಂಡದ ಎಲ್ಲ ಬೌಲರ್ ಗಳು ಉತ್ತಮವಾಗಿ ಬಾಲಿಂಗ್ ಮಾಡಿದರು. ಬೌಲಿಂಗ್‍ನಲ್ಲಿ ಕಮಾಲ್ ಮಾಡಿದ ಅಕ್ಷರ್ ಪಟೇಲ್ ಪಟೇಲ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ 18 ರನ್ ಕೊಟ್ಟು ಒಂದು ವಿಕೆಟ್ ಪಡೆದರು. ಇವರ ನಂತರ ಅನ್ರಿಚ್ ನಾಟ್ರ್ಜೆ ಅವರು 4 ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಕೇವಲ 21 ರನ್ ನೀಡಿದರು. ಡೆತ್ ಓವರಿನಲ್ಲಿ ಉತ್ತಮವಾಗಿ ಬೌಲ್ ಮಾಡಿದ ರಬಡಾ ನಾಲ್ಕು ಓವರ್ ಎಸೆದು ಮೂರು ವಿಕೆಟ್ ಕಿತ್ತು 26 ರನ್ ನೀಡಿದರು.

    ಚೆನ್ನೈಗೆ ಆರಂಭಿಕ ಅಘಾತ ನೀಡಿದ ಅಕ್ಷರ್ ಪಟೇಲ್ 14 ರನ್‍ಗಳಿಸಿ ಆಡುತ್ತಿದ್ದ ಶೇನ್ ವ್ಯಾಟ್ಸನ್ ಹೆಟ್ಮಿಯರ್ ಅವರಿಗೆ ಕ್ಯಾಚ್ ಇತ್ತು ಔಟ್ ಆದರು. ನಂತರ ಪವರ್ ಪ್ಲೇ ಮುಕ್ತಾಯದ ಕೊನೆ ಬಾಲಿನಲ್ಲಿ ಮುರಳಿ ವಿಜಯ್ ಅವರು ಕೂಡ ಅನ್ರಿಚ್ ನಾಟ್ರ್ಜೆ ಅವರಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ಈ ಮೂಲಕ ಚೆನ್ನೈ ಆರು ಓವರ್ ಮುಕ್ತಾಯದ ವೇಳೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಕೇವಲ 34 ರನ್ ಪೇರಿಸಿತು.

    ಮೊದಲಿನಿಂದಲೂ ಡೆಲ್ಲಿ ಬೌಲರ್ ಚೆನ್ನೈ ಬ್ಯಾಟ್ಸ್ ಮ್ಯಾನ್‍ಗಳ ಮೇಲೆ ಒತ್ತಡ ಹಾಕಿದರು. ಇದೇ ವೇಳೆ ಇಲ್ಲದ ರನ್ ಕದಿಯಲು ಹೋಗಿ ಋತುರಾಜ್ ಗಾಯಕವಾಡ್ ಅವರು ರನ್ ಔಟ್ ಆದರು. ನಂತರ ಜೊತೆಯಾದ ಕೇದಾರ್ ಜಾಧವ್ ಮತ್ತು ಫಾಫ್ ಡು ಪ್ಲೆಸಿಸ್ ತಾಳ್ಮೆಯ ಆಟಕ್ಕೆ ಮುಂದಾದರು. ಈ ವೇಳೆ ಪ್ಲೆಸಿಸ್ ಅವರಿಗೆ ಹೆಟ್ಮಿಯರ್ ಅವರು ಒಂದು ಜೀವದಾನ ಕೂಡ ನೀಡಿದರು.

    ಇದೇ ವೇಳೆ 39 ಬಾಲಿಗೆ 54 ರನ್ ಸಿಡಿಸಿದ್ದ ಜೊತೆಯಾಟವನ್ನು ಅನ್ರಿಚ್ ನಾಟ್ರ್ಜೆ ಮುರಿದು ಹಾಕಿದರು. 26 ರನ್ ಗಳಿಸಿ ಆಡುತ್ತಿದ್ದ ಜಾಧವ್ ಅವರನ್ನು ನಾಟ್ರ್ಜೆ ಅವರು ಎಲ್‍ಬಿಡಬ್ಯ್ಲೂಗೆ ಬೀಳಿಸಿದರು. ನಂತರ ರಬಡಾ ಅವರ ಬೌಲಿಂಗ್‍ನಲ್ಲಿ 43ರನ್ ಸಿಡಿಸಿದ್ದ ಫಾಫ್ ಡು ಪ್ಲೆಸಿಸ್ ಅವರು ಔಟ್ ಆದರು. ಇದಾದ ನಂತರ ಕೊನೆಯ ಓವರಿನಲ್ಲಿ ನಾಯಕ ಧೋನಿಯವರು ಪಂತ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಇದಾದ ನಂತರ ಜಡೇಜಾ ಅವರು ಕೂಡ ರಬಡಾ ಬೌಲಿಂಗ್‍ಗೆ ಬಲಿಯಾದರು.

  • ಪೃಥ್ವಿ ಶಾ ಅರ್ಧಶತಕ, ಪಂತ್ ಅಬ್ಬರ – ಚೆನ್ನೈಗೆ 176 ರನ್ ಟಾರ್ಗೆಟ್

    ಪೃಥ್ವಿ ಶಾ ಅರ್ಧಶತಕ, ಪಂತ್ ಅಬ್ಬರ – ಚೆನ್ನೈಗೆ 176 ರನ್ ಟಾರ್ಗೆಟ್

    ದುಬೈ: ಆರಂಭಿಕ ಆಟಗಾರ ಪೃಥ್ವಿ ಶಾ ಅವರ ಮಿಂಚಿನ ಅರ್ಧಶತಕ ಮತ್ತು ರಿಷಭ್ ಪಂತ್ ಅವರು ಅಬ್ಬರದ ಬ್ಯಾಟಿಂಗ್ ಫಲವಾಗಿ ಐಪಿಎಲ್ ಏಳನೇ ಮ್ಯಾಚಿನಲ್ಲಿ ಡೆಲ್ಲಿ ತಂಡ ಚೆನ್ನೈಗೆ 176 ರನ್‍ಗಳ ಟಾರ್ಗೆಟ್ ನೀಡಿದೆ.

    ಡೆಲ್ಲಿಗೆ ಸಾಧಾರಣ ಆರಂಭ ನೀಡಿದ ಪೃಥ್ವಿ ಶಾ ಮತ್ತು ಶಿಖರ್ ಧವನ್, ಪವರ್ ಪ್ಲೇ ಮುಕ್ತಾಯದ ವೇಳೆಗೆ ಒಂದು ವಿಕೆಟ್ ಕಳೆದುಕೊಳ್ಳದೇ ಡೆಲ್ಲಿ 36 ರನ್ ಸೇರಿಸಿತು. ಪವರ್ ಪ್ಲೇ ವೇಳೆ ಚೆನ್ನೈ ತಂಡ ಉತ್ತಮವಾಗಿ ಫೀಲ್ಡಿಂಗ್ ಮಾಡಿತು. ನಂತರ ಚೆನ್ನೈ ಸ್ಪಿನ್ನರ್ ಗಳನ್ನು ದಂಡಿಸಿದ ಧವನ್ ಮತ್ತು ಪೃಥ್ವಿ ಶಾ ಬ್ಯಾಕ್ ಟು ಬ್ಯಾಕ್ ಫೋರ್ ಹೊಡೆದು ಮಿಂಚಿದರು. ಈ ವೇಳೆ ಭರ್ಜರಿಯಾಗಿ ಆಡಿದ ಪೃಥ್ವಿ ಶಾ 35 ಎಸೆತಗಳಲ್ಲಿ ಐದನೇ ಐಪಿಎಲ್ ಅರ್ಧಶತಕ ಪೂರ್ಣಗೊಳಿಸಿದರು.

    ಸಿಕ್ಸರ್ ಮತ್ತು ಫೋರುಗಳ ಸುರಿಮಳೆಗೈದ ಡೆಲ್ಲಿ ಆರಂಭಿಕ ಬ್ಯಾಟ್ಸ್ ಮ್ಯಾನ್‍ಗಳು, 10 ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 88 ರನ್ ಸಿಡಿಸಿದರು. ಈ ವೇಳೆ 35 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಧವನ್ ಅವರು ಸಲ್ಲದ ಹೊಡೆತಕ್ಕೆ ಕೈ ಹಾಕಿ ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ 43 ಎಸೆತಗಳಿಗೆ 64 ರನ್ (9 ಫೋರ್, 1 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ಪೃಥ್ವಿ ಶಾ ಧೋನಿಯವರ ಸ್ಟಂಪಿಂಗ್‍ಗೆ ಬಲಿಯಾದರು.

    15 ಓವರಿನ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡ 124 ರನ್ ಕಲೆಹಾಕಿತು. ಬಳಿಕ ಒಂದಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ರನ್ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಟ್ ಬೀಸಿದರು. ಜೊತೆಗೆ ಈ ಜೋಡಿ 35 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿತು. ಆದರೆ 18ನೇ ಓವರಿನ ಕೊನೆಯ ಬಾಲಿನಲ್ಲಿ ಧೋನಿ ಹಿಡಿದ ಸೂಪರ್ ಕ್ಯಾಚಿಗ್ 26 ರನ್ ಗಳಿಸಿದ್ದ ಐಯ್ಯರ್ ಬಲಿಯಾದರು.

    ಈ ವೇಳೆ ಮಿಂಚಿನ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಅವರು, 25 ಬಾಲಿಗೆ 37 ರನ್ ಸಿಡಿಸಿ ಡೆಲ್ಲಿ ತಂಡ 170 ಗಡಿ ದಾಟಲು ಸಹಾಯಕವಾದರು. ಈ ಇನ್ನಿಂಗ್ಸ್‍ನಲ್ಲಿ ಪಂತ್ 6 ಭರ್ಜರಿ ಫೋರ್ ಚಚ್ಚಿದರು. ಚೆನ್ನೈ ತಂಡ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಇಂದಿನ ಪಂದ್ಯದಲ್ಲಿ ಚೆನ್ನೈ ತಂಡದ ಫೀಲ್ಡಿಂಗ್ ಕ್ಲಿಕ್ ಆಯ್ತು.

  • ರಾಹುಲ್ ಶತಕ, ರವಿ ಬಿಷ್ಣೋಯ್ ಬೌಲಿಂಗ್ ಕಮಾಲ್ – ಆರ್‌ಸಿಬಿಗೆ ಹೀನಾಯ ಸೋಲು

    ರಾಹುಲ್ ಶತಕ, ರವಿ ಬಿಷ್ಣೋಯ್ ಬೌಲಿಂಗ್ ಕಮಾಲ್ – ಆರ್‌ಸಿಬಿಗೆ ಹೀನಾಯ ಸೋಲು

    – ಪಂಜಾಬ್ ಬೌಲಿಂಗ್ ಎದುರು ಮಂಕಾದ ಕೊಹ್ಲಿ ಪಡೆ

    ದುಬೈ: ನಾಯಕ ಕೆ.ಎಲ್ ರಾಹುಲ್ ಅವರು ಭರ್ಜರಿ ಶತಕ ಮತ್ತು ರವಿ ಬಿಷ್ಣೋಯ್ ಬೌಲಿಂಗ್ ಕಮಾಲ್‍ನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-2020ಯಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.

    ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್, ರಾಹುಲ್ ಅವರು ಸೂಪರ್ ಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ ಭರ್ಜರಿ 206 ರನ್ ಸೇರಿಸಿತು. ಈ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಕೊಹ್ಲಿ ಪಡೆ ಆರಂಭದಲ್ಲೇ ಮುಗ್ಗರಿಸಿತು. ಹೀಗಾಗಿ 16.5 ಓವರ್ ಆಟವಾಡಿದ ಆರ್‍ಸಿಬಿ 109 ರನ್‍ಗಳಿಸಿ ಆಲೌಟ್ ಆಯ್ತು. ಈ ಮೂಲಕ ಪಂಜಾಬ್ 98 ರನ್‍ಗಳ ದೊಡ್ಡ ಅಂತರದಲ್ಲಿ ಗೆಲವು ಸಾಧಿಸಿತು.

    ಪಂಜಾಬ್ ಪರವಾಗಿ ಉತ್ತಮವಾಗಿ ಬೌಲ್ ಮಾಡಿದ ರವಿ ಬಿಷ್ಣೋಯ್ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು 21 ರನ್ ನೀಡಿದರು. ಶೆಲ್ಡನ್ ಕಾಟ್ರೆಲ್ ಅವರು ಮೂರು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು, ಕೇವಲ 17 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮೊಹಮ್ಮದ್ ಶಮಿ ಮೂರು ಓವರ್ ಬೌಲ್ ಮಾಡಿ 14 ರನ್ ನೀಡಿ ಒಂದು ವಿಕೆಟ್ ಪಡೆದರು.

    ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್, ಮೊದಲ ಓವರಿನಲ್ಲೇ ಒಂದು ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ರವಿ ಬಿಷ್ಣೋಯ್ ಅವರಿಗೆ ಕ್ಯಾಚ್ ಇತ್ತು ಹೊರ ನಡೆದರು. ನಂತರ ಬಂದ ಜೋಶ್ ಫಿಲಿಪ್ ಅವರು ಸೊನ್ನೆ ಸುತ್ತಿ ಮೊಹಮ್ಮದ್ ಶಮಿ ಅವರ ಬೌಲಿಂಗ್‍ಗೆ ಬಲಿಯಾದರು. ನಂತರ ಮೂರನೇ ಓವರಿನಲ್ಲಿ ನಾಯಕ ವಿರಾಟ್ ಕೊಹ್ಲಿಯವರು ದೊಡ್ಡ ಹೊಡೆತಕ್ಕೆ ಕೈ ಹಾಕಿ ಕಾಟ್ರೆಲ್ ಅವರಿಗೆ ವಿಕೆಟ್ ಒಪ್ಪಿಸಿದರು.

    ಪಂಜಾಬ್ ಬೌಲರ್ ಗಳು ಆಕ್ರಮಣಕಾರಿಯಾಗಿ ಬೌಲ್ ಮಾಡಿದರು. ನಂತರ ಹೊಂದಾದ ಎಬಿ ಡಿವಿಲಿಯರ್ಸ್ ಮತ್ತು ಆರನ್ ಫಿಂಚ್ ಉತ್ತಮವಾಗಿ ಬ್ಯಾಟ್ ಬೀಸಿದರು. ಪರಿಣಾಮ ಬೆಂಗಳೂರು ತಂಡ ಪವರ್ ಪ್ಲೇ ಮುಕ್ತಾಯದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 40 ಪೇರಿಸಿತ್ತು. ನಂತರ ಏಳನೇ ಓವರಿನಲ್ಲಿ ರವಿ ಬಿಷ್ಣೋಯ್ ಅವರಿಗೆ ಕ್ಲೀನ್ ಬೌಲ್ಡ್ ಆದ ಆರನ್ ಫಿಂಚ್ 20 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಮುರುಗನ್ ಅಶ್ವಿನ್ ಅವರ ಬೌಲಿಂಗ್‍ನಲ್ಲಿ ಸರ್ಫರಾಜ್ ಖಾನ್ ಅವರಿಗೆ ಕ್ಯಾಚ್ ಇತ್ತು 28 ರನ್ ಗಳಿಸಿದ್ದ ಡಿವಿಲಿಯರ್ಸ್ ಔಟ್ ಆದರು.

    ನಂತರ ಕೆಲ ಕಾಲ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಕ್ರಿಸಿಗೆ ಕಚ್ಚಿಕೊಂಡಿದ್ದರು. ಆದರೆ 12ನೇ ಓವರಿನ ಕೊನೆ ಬಾಲಿನಲ್ಲಿ ಮ್ಯಾಕ್ಸ್ ವೆಲ್ ಅವರಿಗೆ ಶಿವಂ ದುಬೆ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಉಮೇಶ್ ಯಾದವ್ ಅವರು ಸೊನ್ನೆ ಸುತ್ತಿ ವಾಪಸ್ ಹೋದರು. 30 ರನ್ ಗಳಿಸಿ ಆಡುತ್ತಿದ್ದ ವಾಷಿಂಗ್ಟನ್ ಸುಂದರ್ ಅವರು ರವಿ ಬಿಷ್ಣೋಯ್ ಬೌಲಿಂಗ್‍ನಲ್ಲಿ ಕ್ಯಾಚ್ ಇತ್ತು ಪೆವಿಲಿಯನ್ ಸೇರಿದರು. ನಂತರ ಸೈನಿ ಮತ್ತು ಚಹಲ್ ಔಟ್ ಆಗುವ ಮೂಲಕ ಬೆಂಗಳೂರು ತಂಡ ಆಲ್‍ಔಟ್ ಆಯ್ತು.

  • ಶತಕದೊಂದಿಗೆ ಸಚಿನ್ ದಾಖಲೆ ಮುರಿದ ರಾಹುಲ್ – ಆರ್‌ಸಿಬಿಗೆ 207 ರನ್‍ಗಳ ಟಾರ್ಗೆಟ್

    ಶತಕದೊಂದಿಗೆ ಸಚಿನ್ ದಾಖಲೆ ಮುರಿದ ರಾಹುಲ್ – ಆರ್‌ಸಿಬಿಗೆ 207 ರನ್‍ಗಳ ಟಾರ್ಗೆಟ್

    – 2 ಕ್ಯಾಚ್ ಕೈಚೆಲ್ಲಿದ ಕೊಹ್ಲಿ, ಓವರಿಗೆ 26 ರನ್ ಬಿಟ್ಟುಕೊಟ್ಟ ಸ್ಟೇನ್

    ದುಬೈ: ಇಂದು ನಡೆಯುತ್ತಿರುವ ಐಪಿಎಲ್ 6ನೇ ಮ್ಯಾಚಿನಲ್ಲಿ ಕೆಎಲ್ ರಾಹುಲ್ ಅವರ ಮಿಂಚಿನ ಶತಕದಿಂದ ಪಂಜಾಬ್ ತಂಡ ಬೆಂಗಳೂರು ತಂಡಕ್ಕೆ 207 ಟಾರ್ಗೆಟ್ ನೀಡಿದೆ.

    ಈ ಮ್ಯಾಚಿನಲ್ಲಿ ಅಬ್ಬರದ ಆಟವಾಡಿ ಮಿಂಚಿದ ಕನ್ನಡಿಗ ಕೆಎಲ್ ರಾಹುಲ್ ಅವರು, ಐಪಿಎಲ್‍ನಲ್ಲಿ ತನ್ನ ಎರಡನೇ ಶತಕವನ್ನು ದಾಖಲಿಸಿದರು. ದುಬೈ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಸಿಡಿಸಿದ ರಾಹುಲ್, ಕೇವಲ 61 ಬಾಲಿನಲ್ಲಿ ಶತಕ ಸಿಡಿಸಿ ಮಿಂಚಿದರು. ಏಳು ಸಿಕ್ಸ್ ಮತ್ತು 15 ಫೋರ್ ಸಿಡಿಸಿ ರಾಹುಲ್ 69 ಎಸೆತಗಳಲ್ಲಿ ಬರೋಬ್ಬರಿ 132 ರನ್ ಚಚ್ಚಿದರು.

    ಹೊಸ ದಾಖಲೆ ನಿರ್ಮಿಸಿದ ಕೆಲ್ ರಾಹುಲ್, ಐಪಿಎಲ್ ಇತಿಹಾಸದಲ್ಲೇ ಬಹುಬೇಗ ಎರಡು ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. 2013ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ ಕೆಎಲ್ ರಾಹುಲ್ ಕೇವಲ 60 ಇನ್ನಿಂಗ್ಸ್ ಗಳಲ್ಲಿ 2 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ 63 ಇನ್ನಿಂಗ್ಸ್‌ಗಳಲ್ಲಿ 2 ಸಾವಿರ ರನ್ ಪೂರೈಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ.

    16ನೇ ಓವರ್ ಕೊನೆಯ ಬಾಲಿನಲ್ಲಿ ಕೆ.ಎಲ್ ರಾಹುಲ್‍ಗೆ ಜೀವದಾನ ಸಿಕ್ಕಿತು. ಡೇಲ್ ಸ್ಟೇನ್ ಅವರ ಎಸೆದ ಬಾಲನ್ನು ರಾಹುಲ್ ಲೆಗ್ ಸೈಡ್ ಕಡೆ ಹೊಡೆದರು. ಆಗ ಕೊಹ್ಲಿ ಅವರು ಕ್ಯಾಚ್ ಅನ್ನು ಬೌಂಡರಿ ಲೈನಿನಲ್ಲಿ ಕೈಚೆಲ್ಲಿದರು. ನಂತರ 17ನೇ ಓವರಿನ ಕೊನೆ ಬಾಲಿನಲ್ಲಿ ಮತ್ತೆ ಕೊಹ್ಲಿ ಅವರು ಕೆಎಲ್ ರಾಹುಲ್ ಅವರು ಸಿಂಪಲ್ ಕ್ಯಾಚ್ ಅನ್ನು ಡ್ರಾಪ್ ಮಾಡಿದರು.

    ಪಂಜಾಬ್‍ಗೆ ತಂಡಕ್ಕೆ ಕೆ.ಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು. ಬೆಂಗಳೂರು ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಅವರು ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ಕಳೆದು ಕೊಳ್ಳದೇ 50 ರನ್ ಸೇರಿಸಿದರು. ಆದರೆ ಆರನೇ ಓವರಿನಲ್ಲಿ 26 ರನ್ ಗಳಿಸಿ ಆಡುತ್ತಿದ್ದ ಮಾಯಾಂಕ್ ಅಗರ್ವಾಲ್ ಅವರು ಚಹಲ್ ಅವರು ಗೂಗ್ಲಿಗೆ ಬಲಿಯಾದರು.

    ನಂತರ ನಿಕೋಲಸ್ ಪೂರನ್ ಅವರ ಜೊತೆ ಸೇರಿಕೊಂಡು ಉತ್ತಮವಾಗಿ ಕೆ.ಎಲ್ ರಾಹುಲ್ ಬ್ಯಾಟ್ ಬೀಸಿದರು. ಪರಿಣಾಮ 10 ಓವರ್ ಮುಕ್ತಾಯಕ್ಕೆ ಪಂಜಾಬ್ ತಂಡ ಒಂದು ವಿಕೆಟ್ ಕಳೆದುಕೊಂಡು 90 ರನ್ ಪೇರಿಸಿತು. ಈ ವೇಳೆ 36 ಬಾಲಿಗೆ ನಾಯಕ ಕೆ.ಎಲ್ ರಾಹುಲ್ ಅರ್ಧಶತಕ ಬಾರಿಸಿ ಮಿಂಚಿದರು. ನಂತರ ಉತ್ತಮವಾಗಿ ಆಡಿದ ಪೂರನ್ ಮತ್ತು ರಾಹುಲ್ ಕೇವಲ 37 ಎಸೆತದಲ್ಲಿ ಅರ್ಧಶತಕದ ಜೊತೆಯಾಟವಾಡಿದರು.

    ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದ್ದ ನಿಕೋಲಸ್ ಪೂರನ್ ಅವರು 17 ರನ್ ಗಳಿಸಿ ಎಬಿ ಡಿವಿಲಿಯರ್ಸ್ ಹಿಡಿದ ಉತ್ತಮ ಕ್ಯಾಚ್‍ಗೆ ಬಲಿಯಾದರು. ನಂತರ ದುಬೆಯವರ ಓವರಿನಲ್ಲಿ ಫಿಂಚ್ ಹಿಡಿದ ಸೂಪರ್ ಕ್ಯಾಚಿಗೆ ಗ್ಲೆನ್ ಮ್ಯಾಕ್ಸ್ ವೆಲ್ ಪೆವಿಲಿಯನ್ ಸೇರಿದರು. ನಂತರ ಜೊತೆಯಾದ ರಾಹುಲ್ ಮತ್ತು ಕರಣ್ ಕೊನೆಯ ಎರಡು ಓವರಿನಲ್ಲಿ 49 ರನ್ ಸಿಡಿಸಿ ಪಂಜಾಬ್ ತಂಡವನ್ನು 200 ರನ್‍ಗಳ ಗಡಿ ದಾಟಿಸಿದರು.

  • 6 ಸಿಕ್ಸರ್ ಸಿಡಿಸಿದ ರೋಹಿತ್ – ಕೋಲ್ಕತ್ತಾಗೆ 196 ರನ್‍ಗಳ ಟಾರ್ಗೆಟ್

    6 ಸಿಕ್ಸರ್ ಸಿಡಿಸಿದ ರೋಹಿತ್ – ಕೋಲ್ಕತ್ತಾಗೆ 196 ರನ್‍ಗಳ ಟಾರ್ಗೆಟ್

    ಅಬುಧಾಬಿ: ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 196 ದೊಡ್ಡ ಮೊತ್ತದ ಟಾರ್ಗೆಟ್ ನೀಡಿದೆ.

    ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಧೋನಿ ನಂತರ 200 ಸಿಕ್ಸರ್ ಸಿಡಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್ (326) ಮತ್ತು ಎರಡನೇ ಸ್ಥಾನದಲ್ಲಿ ಎಬಿಡಿ ವಿಲಿಯರ್ಸ್ (214) ಮತ್ತು ಮೂರನೇ ಸ್ಥಾನದಲ್ಲಿ ಧೋನಿ (212) ಇದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ಬಂದ ಮುಂಬೈ ಇಂಡಿಯನ್ಸ್‍ಗೆ ಆರಂಭಿಕ ಆಘಾತ ನೀಡಿದ ಶಿವಂ ಮಾವಿ, ಪಂದ್ಯದ ಎರಡನೇ ಓವರಿನಲ್ಲಿ ಆರಂಭಿಕ ಕ್ವಿಂಟನ್ ಡಿ ಕಾಕ್ ಒಂದು ರನ್‍ ಗಳಿಗೆ ಔಟ್ ಆದರು. ಆದರೆ ನಂತರ ಒಂದಾದ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಬ್ಯಾಟ್ ಬೀಸಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ತಂಡ ಒಂದು ವಿಕೆಟ್ ಕಳೆದುಕೊಂಡು 59 ರನ್ ಗಳಿಸಿತು.

    ನೈಟ್ ರೈಡರ್ಸ್ ಬೌಲರ್ ಗಳನ್ನು ಕಾಡಿದ ಈ ಜೋಡಿ ಉತ್ತಮವಾಗಿ ಜೊತೆಯಾಟವಾಡಿತು. ಈ ಮೂಲಕ ಹತ್ತು ಓವರ್ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್ ತಂಡ 94 ರನ್ ಗಳಿಸಿತು. ಆದರೆ 11ನೇ ಓವರಿನಲ್ಲಿ ಇಲ್ಲದ ರನ್ ಕದಿಯಲು ಹೋದ ಸೂರ್ಯಕುಮಾರ್ ಯಾದವ್ 28 ಬಾಲಿಗೆ 47 ರನ್ ಸಿಡಿಸಿ ರನೌಟ್ ಆದರು. ನಂತರ ಬಂದು ರೋಹಿತ್‍ಗೆ ಉತ್ತಮ ಸಾತ್ ನೀಡಿದ ಸೌರಭ್ ತಿವಾರಿ 15ನೇ ಓವರಿನಲ್ಲಿ 21 ರನ್‍ಗಳಿಸಿ ಸುನಿಲ್ ನರೈನ್ ಅವರಿಗೆ ಔಟ್ ಆಗಿ ಹೊರ ನಡೆದರು.

    ನಂತರ ರೋಹಿತ್ ಜೊತೆಯಾಗಿ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು, ಆದರೆ 54 ಎಸೆತದಲ್ಲಿ 80 ರನ್ (3 ಫೋರ್, 6 ಸಿಕ್ಸ್) ಸಿಡಿಸಿ ಆಡುತ್ತಿದ್ದ ರೋಹಿತ್ ಶರ್ಮಾ ಶಿವಂ ಮಾವಿ ಅವರ ಬೌಲಿಂಗ್‍ನಲ್ಲಿ ಔಟ್ ಆದರು. ನಂತರ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ಪಾಂಡ್ಯ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಕೀರನ್ ಪೊಲಾರ್ಡ್ ಮತ್ತು ಕೃನಾಲ್ ಪಾಂಡ್ಯ ಸೇರಿ ಮುಂಬೈ ತಂಡವನ್ನು 190ರ ಗಡಿ ದಾಟಿಸಿದರು.

  • ಸನ್ ರೈಸರ್ಸ್‍ಗೆ ಆರಂಭಿಕ ಆಘಾತ – ಐಪಿಎಲ್‍ನಿಂದ ಮಿಚೆಲ್ ಮಾರ್ಷ್ ಔಟ್

    ಸನ್ ರೈಸರ್ಸ್‍ಗೆ ಆರಂಭಿಕ ಆಘಾತ – ಐಪಿಎಲ್‍ನಿಂದ ಮಿಚೆಲ್ ಮಾರ್ಷ್ ಔಟ್

    ಅಬುಧಾಬಿ: ಐಪಿಎಲ್ ಆರಂಭದಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್‍ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರಬಂದಿದ್ದಾರೆ.

    ಕಳೆದ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಮಾರ್ಷ್ ಗಾಯಗೊಂಡಿದ್ದರು. ಬೌಲಿಂಗ್ ಮಾಡುವ ವೇಳೆ ಹೊಸ ಶೂ ಧರಿಸಿದ್ದ ಕಾರಣ ಅವರ ಪಾದಕ್ಕೆ ಗಾಯವಾಗಿತ್ತು. ಈಗ ಇದೇ ಸಮಸ್ಯೆಯಿಂದ ಮಾರ್ಷ್ ಟೂರ್ನಿಯಿಂದ ಹೊರಬಂದಿದ್ದು, ಹೈದರಾಬಾದ್ ತಂಡಕ್ಕೆ ಆರಂಭಿಕ ಹಿನ್ನೆಡೆಯಾಗಿದೆ.

    ಈ ವಿಚಾರವಾಗಿ ತನ್ನ ಅಧಿಕೃತ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಿಚೆಲ್ ಮಾರ್ಷ್ ಅವರು ಟೂರ್ನಿಯಿಂದ ಹೊರಬಂದಿದ್ದಾರೆ. ಅವರು ಬೇಗ ಗಾಯದಿಂದ ಗುಣಮುಖರಾಗಲಿ ಎಂದು ನಾವು ಹಾರೈಸುತ್ತೇವೆ. ವೆಸ್ಟ್ ಇಂಡೀಸ್ ತಂಡದ ಆಲ್‍ರೌಂಡರ್ ಜೇಸನ್ ಹೋಲ್ಡರ್ ಅವರು ಅವರ ಜಾಗಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದೆ.

    ಸೋಮವಾರ ನಡೆದ ಆರ್‍ಸಿಬಿ ವಿರುದ್ಧ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಅವರು ಐದನೇ ಓವರ್ ಬೌಲಿಂಗ್ ಮಾಡಿದ್ದರು. ಈ ಓವರಿನ ಎರಡನೇ ಬಾಲ್ ಎಸೆದಾಗ ಫಿಂಚ್ ಅವರು ಅದನ್ನು ನೇರವಾಗಿ ಹೊಡೆದರು, ಈ ವೇಳೆ ಇದನ್ನು ತಡೆಯಲು ಹೋಗಿ ಮಾರ್ಷ್ ಅವರು ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಇದಾದ ನಂತರವೂ ಕೂಡ ಎರಡು ಬಾಲ್ ಬೌಲ್ ಮಾಡಿದ ಮಾರ್ಷ್ ನಂತರ, ಪಾದದ ನೋವಿನಿಂದ ಮೈದಾನದಿಂದ ಹೊರಬಂದಿದ್ದರು.

    ಕೇವಲ ನಾಲ್ಕು ಬಾಲ್ ಬೌಲ್ ಮಾಡಿ ಮಾರ್ಷ್ ಹೊರಬಂದರು, ಇದಾದ ನಂತರ ವಿಜಯ್ ಶಂಕರ್ ಅವರು ಉಳಿದ ಎರಡು ಬಾಲನ್ನು ಹಾಕಿದ್ದರು. ನಂತರ ಹೈದರಾಬಾದ್ ಬ್ಯಾಟಿಂಗ್ ವೇಳೆ ಕೂಡ ಗಾಯವಾಗಿದ್ದರೂ ಮಿಚೆಲ್ ಮಾರ್ಷ್ ತಂಡಕ್ಕಾಗಿ ಬ್ಯಾಟಿಂಗ್ ಬೀಸಲು ಬಂದಿದ್ದರು. ಆದರೆ ಮೊದಲ ಬಾಲಿನಲ್ಲೇ ಕ್ಯಾಚ್ ಕೊಟ್ಟು ಔಟ್ ಆದರು. ಆದರೆ ನಿಲ್ಲಲೂ ಆಗದ ಸ್ಥಿತಿಯಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದೆ ಎಂದು ಬ್ಯಾಟಿಂಗ್ ಮಾಡಲು ಬಂದ ಮಾರ್ಷ್‍ಗೆ ಅಪಾರ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗಿತ್ತು.

  • ಐಪಿಎಲ್ ಬೆಟ್ಟಿಂಗ್ ದಂಧೆ – 6 ಮಂದಿ ಬಂಧನ, ಆರು ಲಕ್ಷ ವಶಕ್ಕೆ

    ಐಪಿಎಲ್ ಬೆಟ್ಟಿಂಗ್ ದಂಧೆ – 6 ಮಂದಿ ಬಂಧನ, ಆರು ಲಕ್ಷ ವಶಕ್ಕೆ

    ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರು ಮಂದಿಯನ್ನು ಬೆಂಗಳೂರು ಕ್ರೈಮ್ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.

    ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಿದೆ. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿವೆ. ಇದರ ಜೊತೆಗೆ ಐಪಿಎಲ್ ಬೆಟ್ಟಿಂಗ್ ದಂಧೆಗಳು ಕೂಡ ಆರಂಭವಾಗಿವೇ. ತಡರಾತ್ರಿ ಐಪಿಎಲ್ ದಂಧೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ತಡರಾತ್ರಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ನಾವು ಬಂಧಿಸಿದ್ದೇವೆ. ಈ ವೇಳೆ ಬೆಟ್ಟಿಂಗ್ ದಂಧೆಗೆ ಬಳಸುತ್ತಿದ್ದ ಆರು ಲಕ್ಷವನ್ನು ನಾವು ವಶಕ್ಕೆ ಪಡೆದಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ಬಾನಸವಾಡಿ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    ಐಪಿಎಲ್ ಕಾವು ಈಗಾಗಲೇ ಹೆಚ್ಚಾಗಿದೆ. ಕೊರೊನಾ ಕಾರಣದಿಂದ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಯುಇಗೆ ಶಿಫ್ಟ್ ಆಗಿದೆ. ಯುಎಇಯ ಮೂರು ಮೈದಾನದಲ್ಲಿ ಐಪಿಎಲ್ ನಡೆಯುತ್ತಿದೆ. ನಿನ್ನೆ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಿದ್ದವು, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಾಯಲ್ಸ್ ತಂಡ 16 ರನ್‍ಗಳ ಅಂತರದಲ್ಲಿ ಗೆಲುವನ್ನು ದಾಖಲಿಸಿದೆ. ಇಂದು ಕೋಲ್ಕತ್ತಾ ಮತ್ತು ಮುಂಬೈ ತಂಡ ಐಪಿಎಲ್ 5ನೇ ಪಂದ್ಯವನ್ನು ಆಡಲಿವೆ.

  • 2 ಸ್ಟಂಪ್, 2 ಕ್ಯಾಚ್ ಕೀಪಿಂಗ್‍ನಲ್ಲೂ ಚೆನ್ನೈ ಕಾಡಿದ ಸ್ಯಾಮ್ಸನ್ – ಸಿಎಸ್‍ಕೆಗೆ ಮೊದಲ ಸೋಲು

    2 ಸ್ಟಂಪ್, 2 ಕ್ಯಾಚ್ ಕೀಪಿಂಗ್‍ನಲ್ಲೂ ಚೆನ್ನೈ ಕಾಡಿದ ಸ್ಯಾಮ್ಸನ್ – ಸಿಎಸ್‍ಕೆಗೆ ಮೊದಲ ಸೋಲು

    – ಕ್ರೀಸ್‍ನಲ್ಲಿದ್ದೂ ಮೋಡಿ ಮಾಡದ ಧೋನಿ, ಡು ಪ್ಲೆಸಿಸ್ ಅಬ್ಬರ ವ್ಯರ್ಥ

    ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಉತ್ತಮ ಬೌಲಿಂಗ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್-2020ಯಲ್ಲಿ ಶುಭಾರಂಭ ಮಾಡಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಮತ್ತು ಸ್ಟೀವ್ ಸ್ಮಿತ್ ಅವರ ಉತ್ತಮ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ಜೋಫ್ರಾ ಆರ್ಚರ್ ಅವರ ಮಿಂಚಿನಂತ ಹೊಡೆತಗಳ ಸಲುವಾಗಿ ಭರ್ಜರಿ 217 ರನ್‍ಗಳ ಟಾರ್ಗೆಟ್ ನೀಡಿತ್ತು. ಆದರೆ ಇದನ್ನು ಬೆನ್ನಟ್ಟಿದ ಚೆನ್ನೈ ತಂಡ ರಾಯಲ್ಸ್ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರಿನಲ್ಲಿ ಕೇವಲ 199 ರನ್ ಗಳಿಸಿ 16 ರನ್‍ಗಳಿಂದ ಸೋಲುಂಡಿತು.

    ಬ್ಯಾಟಿಂಗ್ ಮೂಲಕ ಚೆನ್ನೈ ತಂಡವನ್ನು ಕಾಡಿದ್ದ ಸಂಜು ಸ್ಯಾಮ್ಸನ್, ಕೀಪಿಂಗ್‍ನಲ್ಲೂ ಮೋಡಿ ಮಾಡಿದರು. ಇಂದಿನ ಪಂದ್ಯದಲ್ಲಿ ಎರಡು ಸ್ಟಂಪ್ ಮತ್ತು ಎರಡು ಕ್ಯಾಚ್ ಹಿಡಿದು ಸಿಎಸ್‍ಕೆ ತಂಡವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಫಾಫ್ ಡು ಪ್ಲೆಸಿಸ್ ಮತ್ತು ಕೇದಾರ್ ಜಾಧವ್ ಅವರನ್ನು ಕ್ಯಾಚ್ ಹಿಡಿದು ಔಟ್ ಮಾಡಿದರೆ, ಸ್ಯಾಮ್ ಕರ್ರನ್ ಮತ್ತು ರುತುರಾಜ್ ಗಾಯಕವಾಡ್ ಅವರನ್ನು ಸ್ಟಂಪ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು.

    ಚೆನ್ನೈ ಉತ್ತಮ ಆರಂಭ ನೀಡಿದ ಮುರಳಿ ವಿಜಯ್ ಮತ್ತು ಶೇನ್ ವ್ಯಾಟ್ಸನ್, ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ಕಳೆದು ಕೊಳ್ಳದೇ 53 ರನ್ ಸೇರಿದರು. ಆದರೆ ಆರನೇ ಓವರಿನಲ್ಲಿ ಲೆಗ್ ಸೈಡ್ ಕಡೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶೇನ್ ವ್ಯಾಟ್ಸನ್ (21 ಎಸೆತ, 33 ರನ್) ರಾಹುಲ್ ತೇವಟಿಯಾ ಅವರಿಗೆ ಬೌಲ್ಡ್ ಆದರು. ನಂತರ ಶ್ರೇಯಾಸ್ ಗೋಪಾಲ್ ಅವರ ಓವರಿನಲ್ಲಿ 21 ರನ್ ಗಳಿಸಿ ಆಡುತ್ತಿದ್ದ ಮುರುಳಿ ವಿಜಯ್ ಕೂಡ ಓಟ್ ಆದರು.

    ಮುರುಳಿ ವಿಜಯ್ ನಂತರ ಬಂದ ಸ್ಯಾಮ್ ಕರ್ರನ್ ಅವರು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದರು. ಆದರೆ ಮುಂದೆ ಬಂದು ಹೊಡೆಯುವ ಪ್ರಯತ್ನದಲ್ಲಿ ತೇವಟಿಯಾ ಬೌಲಿಂಗ್‍ನಲ್ಲಿ ಸ್ಟಂಪಿಂಗ್ ಬಲೆಗೆ ಬಿದ್ದರು. ಇದಾದ ನಂತರ ಬಂದ ರುತುರಾಜ್ ಗಾಯಕವಾಡ್ ಅವರು ಸೊನ್ನೆ ಸುತ್ತಿ ಬಂದ ದಾರಿ ಸುಂಕವಿಲ್ಲ ಎಂಬಂತೆ ವಾಪಸ್ ಹೋದರು.

    ಈ ವಿಕೆಟ್ ನಂತರ ಜೊತೆಯಾದ ಫಾಫ್ ಡು ಪ್ಲೆಸಿಸ್ ಮತ್ತು ಕೇದಾರ್ ಜಾಧವ್ ಅವರು ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ 16 ಬಾಲಿನಲ್ಲಿ 22 ರನ್ ಹೊಡೆದು ಆಡುತ್ತಿದ್ದ ಕೇದಾರ್ ಜಾಧವ್ ಅವರು ಟಾಮ್ ಕುರ್ರನ್ ಅವರ ಬೌಲಿಂಗ್‍ನಲ್ಲಿ ಸಂಜು ಸ್ಯಾಮ್ಸನ್ ಅವರು ಹಿಡಿದ ಸೂಪರ್ ಕ್ಯಾಚ್‍ಗೆ ಬಲಿಯಾದರು. ನಂತರ ಪ್ಲೆಸಿಸ್ (37 ಎಸೆತ, 72 ರನ್) ಅವರು ಓಟ್ ಆದರು. ಆದರೆ ಕೊನೆಯ ಬಾಲ್‍ವರೆಗೂ ಕ್ರೀಸಿನಲ್ಲಿದ್ದ ಧೋನಿ ಯಾವುದೇ ಮೋಡಿ ಮಾಡಲಿಲ್ಲ.

  • ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ, 2 ಬಾಲ್ ಆಡಿದ ನಂತ್ರ ವಿಶ್ವಾಸ ಹೆಚ್ಚಾಯ್ತು: ಪಡಿಕಲ್

    ಅಬುಧಾಬಿ: ಪಂದ್ಯಕ್ಕೂ ಮುನ್ನ ಒತ್ತಡದಲ್ಲಿ ಇದ್ದೆ. ಆದರೆ ಎರಡು ಬಾಲ್ ಆಡಿದ ನಂತರ ವಿಶ್ವಾಸ ಜಾಸ್ತಿ ಆಯ್ತು ಎಂದು ಆರ್‍ಸಿಬಿ ತಂಡ ಉದಯೋನ್ಮುಖ ಆಟಗಾರ ದೇವದತ್ ಪಡಿಕಲ್ ಹೇಳಿದ್ದಾರೆ.

    ಸೋಮವಾರ ರಾತ್ರಿ ನಡೆದ ಐಪಿಎಲ್ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸೂಪರ್ ಆಗಿ ಬ್ಯಾಟ್ ಬೀಸಿದ ಕನ್ನಡಿಗ ದೇವದತ್ ಪಡಿಕಲ್ ಒಂದು ಮ್ಯಾಚಿನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಆದರೆ ಅವರು ಪಂದ್ಯಕ್ಕೂ ಮುನ್ನ ಬಹಳ ನರ್ವಸ್ ಆಗಿದ್ದೆ ಎಂದು ಚಹಲ್ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

    ಪಂದ್ಯ ಮುಗಿದ ಬಳಿಕ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಜೊತೆ ಪಡಿಕಲ್ ಮಾತನಾಡಿದ್ದಾರೆ. ಈ ವೇಳೆ ಪಂದ್ಯಕ್ಕೂ ಮುನ್ನ ನರ್ವಸ್ ಆಗಿದ್ದೆ. ಸಂಜೆ ಊಟದ ನಂತರ ರೂಮಿನಲ್ಲೂ ಕೂಡ ತುಂಬ ಗೊಂದಲದಲ್ಲಿ ಓಡಾಡುತ್ತಿದ್ದೆ. ಆದರೆ ಬ್ಯಾಟಿಂಗ್ ಮಾಡಲು ಬಂದಾಗ ಎರಡು ಬಾಲ್ ಆಡಿದ ನಂತರ ವಿಶ್ವಾಸ ಹೆಚ್ಚಾಯ್ತು. ಇದಾದ ನಂತರ ಚೆನ್ನಾಗಿ ಆಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಓದಿ: ಆರ್‌ಸಿಬಿ ಡೆಬ್ಯು ಗೆಲುವಿನೊಂದಿಗೆ ಎಲೈಟ್ ಪಟ್ಟಿಗೆ ಕೊಹ್ಲಿ ಸೇರ್ಪಡೆ

    ಇದೇ ವೇಳೆ ವಿರಾಟ್, ಫಿಂಚ್ ಮತ್ತು ಎಬಿಡಿ ಜೊತೆ ಆಟವಾಡುತ್ತಿರುವ ಅನುಭವ ಹಂಚಿಕೊಂಡಿರುವ ಪಡಿಕಲ್, ಕಳೆದ ಒಂದು ತಿಂಗಳಿನಿಂದ ನಾವು ಅಭ್ಯಾಸ ಮಾಡುತ್ತಿದ್ದೇವೆ. ಈ ವೇಳೆ ವಿರಾಟ್ ಬಹಳ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದರು. ಅಲ್ಲಿ ನಮಗೆ ಕಲಿಯುವುದಕ್ಕೆ ಬಹಳ ಇತ್ತು. ಕೊಹ್ಲಿ ಅವರನ್ನು ನಾನು ಪ್ರಶ್ನೆ ಮಾಡುತ್ತಲೇ ಇರುತ್ತಿದ್ದೆ. ಈ ಪಂದ್ಯದಲ್ಲಿ ನಾನು ಫಿಂಚ್ ಅವರ ಜೊತೆ ಆಟವಾಡಿದೆ. ಈ ವೇಳೆ ಅವರು ನನಗೆ ಸ್ಟ್ರೈಕ್ ನೀಡುತ್ತಿದ್ದರು. ಇದರಿಂದ ನನಗೆ ಬಹಳ ಖುಷಿ ಆಯ್ತು ಎಂದು ಪಡಿಕಲ್ ತಿಳಿಸಿದ್ದಾರೆ.

    ಸೋಮವಾರ ದುಬೈ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 20 ವರ್ಷದ ಯುವ ಆರ್‍ಸಿಬಿ ಆಟಗಾರ ಪಡಿಕ್ಕಲ್ 36 ಎಸೆತದಲ್ಲಿ ಅರ್ಧಶತಕ ಚಚ್ಚಿ ಅಂತಿಮವಾಗಿ 56 ರನ್ ಹೊಡೆದು ಔಟಾಗಿದ್ದರು. 42 ಎಸೆತ ಎದುರಿಸಿದ ಇನ್ನಿಂಗ್ಸ್‍ನಲ್ಲಿ 8 ಬೌಂಡರಿ ಸಿಡಿಸಿದ್ದರು. ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ 20, ಐಪಿಎಲ್‍ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ದೇವದತ್ ಪಡಿಕಲ್ ಪಾತ್ರವಾಗಿದ್ದಾರೆ.

  • ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಐಪಿಎಲ್

    ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಐಪಿಎಲ್

    ನವದೆಹಲಿ: ಸೆಪ್ಟೆಂಬರ್ 19ರಿಂದ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ ಆರಂಭಿಕ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದೆ.

    ಕಳೆದ ಮಾರ್ಚ್ ತಿಂಗಳಿನಲ್ಲೇ ನಡೆಯಬೇಕಿದ್ದ ಐಪಿಎಲ್, ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿತ್ತು. ಈ ನಡುವೆ ಐಪಿಎಲ್ ಅನ್ನು ಈ ಬಾರೀ ರದ್ದು ಮಾಡಲಾಗುತ್ತದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಬಿಸಿಸಿಐ ಈ ಬಾರಿಯ ಐಪಿಎಲ್ ಅನ್ನು ನಡೆಸಲೇಬೇಕು ಎಂದು ಪಣತೊಟ್ಟು ಯುಎಇಯಲ್ಲಿ ಟೂರ್ನಿಯನ್ನು ಯಶಸ್ವಿಯಾಗಿ ಆರಂಭ ಮಾಡಿತ್ತು. ಅದರ ಪ್ರತಿಫಲ ಎಂಬಂತೆ ಐಪಿಎಲ್ ತನ್ನ ಆರಂಭಿಕ ಪಂದ್ಯದಲ್ಲೇ ಬಹು ದೊಡ್ಡ ದಾಖಲೆ ಬರೆದಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರು, ಡ್ರೀಮ್ 11 ಐಪಿಎಲ್ ಮೊದಲ ಪಂದ್ಯದಲ್ಲೇ ದಾಖಲೆ ಬರೆದಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ, ಐಪಿಎಲ್ ಆರಂಭಿಕ ಪಂದ್ಯವನ್ನು ಸುಮಾರು 20 ಕೋಟಿ ಜನರು ಆನ್‍ಲೈನ್ ಮತ್ತು ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಕ್ರೀಡಾ ಟೂರ್ನಿಯ ಮೊದಲ ಪಂದ್ಯವನ್ನು ಇಷ್ಟೊಂದು ಜನರು ವೀಕ್ಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಟ್ವೀಟ್ ಮಾಡಿದ್ದು, ಧನ್ಯವಾದಗಳು ಇಂಡಿಯಾ ಇದು ಡ್ರೀಮ್ 11 ಐಪಿಎಲ್‍ನಲ್ಲಿ ಡ್ರೀಮ್ ಆರಂಭವಾಗಿದೆ. ಇಡೀ ಐಪಿಎಲ್ ಇತಿಹಾಸದಲ್ಲೇ ಟಿವಿ ಮತ್ತು ಡಿಜಿಟೆಲ್ ಮಾಧ್ಯಮದಲ್ಲಿ ಅತೀ ಹೆಚ್ಚು ಜನರು ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಮುಂಬೈ ಮತ್ತು ಚೆನ್ನೈ ನಡುವಿನ ಮೊದಲ ಪಂದ್ಯವನ್ನು 200 ದಶಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದೆ.

    ಐಪಿಎಲ್ ಆರಂಭಿಕ ಪಂದ್ಯದಲ್ಲಿ ಐಪಿಎಲ್‍ನ ಜನಪ್ರಿಯ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಕೊರೊನಾ ಸಮಯದಲ್ಲಿ ಯಾವುದೇ ಮನರಂಜನೆ ಇಲ್ಲದೇ ಬೇಸತ್ತಿದ್ದ ಜನರು, ಆರಂಭಿಕ ಪಂದ್ಯವನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಐಪಿಎಲ್ ಹೊಸ ದಾಖಲೆ ಬರೆಯಲು ದಾರಿ ಮಾಡಿಕೊಟ್ಟಿದ್ದಾರೆ.

    ಸೆಪ್ಟಂಬರ್ 19ರಂದು ಅಬುಧಾಬಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಜಯಭೇರಿ ಭಾರಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಮುಂಬೈ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು. ಅದರಂತೆ ನಿಗದಿತ 20 ಓವರ್ ಗಳಲ್ಲಿ ಮುಂಬೈ ಕೇವಲ 162 ರನ್ ಗಳಿಸಿತ್ತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಅಂಬಾಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿಸ್ ಅವರ ಅಮೋಘ ಅರ್ಧ ಶತಕದಿಂದ 5 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು.