Tag: IPL

  • ಬೆಂಗಳೂರು | ಡಿಸಿಎಂ ಡಿಕೆಶಿ ಭೇಟಿಯಾದ ಕ್ರಿಕೆಟ್‌ ದಿಗ್ಗಜ ಅನಿಲ್ ಕುಂಬ್ಳೆ

    ಬೆಂಗಳೂರು | ಡಿಸಿಎಂ ಡಿಕೆಶಿ ಭೇಟಿಯಾದ ಕ್ರಿಕೆಟ್‌ ದಿಗ್ಗಜ ಅನಿಲ್ ಕುಂಬ್ಳೆ

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ (Anil Kumble) ಅವರಿಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರನ್ನ ಭೇಟಿಯಾದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಉಪಮುಖ್ಯಮಂತ್ರಿಗಳನ್ನ ಭೇಟಿಯಾದರು.

    ಈ ಕುರಿತು ಡಿಸಿಎಂ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ನನ್ನ ನಿವಾಸದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ, ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್‌ಗೆ ಅಪಾರವಾದ ಕೊಡುಗೆ ನೀಡಿದ ಹೆಮ್ಮೆಯ ಹೆಮ್ಮೆಯ ಕನ್ನಡಿಗನೊಂದಿಗೆ ಸಂವಾದದಲ್ಲಿ ತೊಡಗಿಸಿಕೊಂಡಿದ್ದು ಸಂತಸವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ನನ್ನ ಹೆಸರಲ್ಲೊಂದು ದೇವಸ್ಥಾನ ಆಗಬೇಕು ಎಂದ ಊರ್ವಶಿ – ಟ್ರೋಲ್ ಆದ ನಟಿ

    ಇನ್ನೂ ಡಿಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್ ಕುಂಬ್ಳೆ, ವೈಯುಕ್ತಿಕ ಕೆಲಸದ ನಿಮಿತ್ತ ಡಿಸಿಎಂ ಭೇಟಿ ಆಗಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಕಾಫಿ ತೋಟದ ಸೊಬಗಿಗೆ ಮಾರುಹೋದ ಬ್ಯಾಡ್ಮಿಂಟರ್ ತಾರೆ – ಪಿವಿ ಸಿಂಧುಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವಾಸೆ!

    ಅಲ್ಲದೇ ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಪಂದ್ಯಗಳ ಕುರಿತು ಮಾತನಾಡಿ, ಆರ್‌ಸಿಬಿ ಹೀಗೇ ಆಡಲಿ, ಇನ್ನೂ ಅರ್ಧ ಕೂಡ ಟೂರ್ನಿ ಆಗಿಲ್ಲ. ಆರ್‌ಸಿಬಿ ಇನ್ನೂ ಬೆಂಗಳೂರಿನಲ್ಲಿ ಪಂದ್ಯ ಗೆದ್ದಿಲ್ಲ, ಆದ್ರೆ ಪ್ರದರ್ಶನ ನೋಡಿದ್ರೆ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುವ ನಿರೀಕ್ಷೆ ಇದ್ದೇ ಇದೆ. ಇವತ್ತಿನ ಮ್ಯಾಚ್‌ ಗೆ ಆಲ್ ದಿ ಬೆಸ್ಟ್ ಹೇಳುವೆ, ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿ ಇದ್ದೆ. ಅದೇ ಸಮಸ್ಯೆ ನನಗೆ ಎಂದು ಮುಗುಳುನಕ್ಕರು. ಇದನ್ನೂ ಓದಿ: ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

  • ಕೊನೆಗೂ ಗೆದ್ದ ಚೆನ್ನೈ – ಲಕ್ನೋ ವಿರುದ್ಧ ರೋಚಕ ಜಯ

    ಕೊನೆಗೂ ಗೆದ್ದ ಚೆನ್ನೈ – ಲಕ್ನೋ ವಿರುದ್ಧ ರೋಚಕ ಜಯ

    ಲಕ್ನೋ: ಕೊನೆಯಲ್ಲಿ ನಾಯಕ ಧೋನಿ (MS Dhoni) ಮತ್ತು ಶಿವಂ ದುಬೆ (Shivam Dube) ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ ರೋಚಕ 4 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಲಕ್ನೋ 7 ವಿಕೆಟ್‌ ನಷ್ಟಕ್ಕೆ 166 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಇನ್ನು ಮೂರು ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 5 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು.

     

    ಚೆನ್ನೈ ಕಳೆದ 5 ಪಂದ್ಯಗಳಲ್ಲಿ ಸತತ ಸೋಲನ್ನು ಅನುಭವಿಸಿತ್ತು. ಈಗ 7ನೇ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ನೀಡಿದೆ. ಮುರಿಯದ 6ನೇ ವಿಕೆಟಿಗೆ ಧೋನಿ ಮತ್ತು ದುಬೆ 28 ಎಸೆತಗಳಲ್ಲಿ 57 ರನ್‌ ಹೊಡೆಯುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಧೋನಿ ಔಟಾದಗೇ 26 ರನ್‌ (11 ಎಸೆತ, 4 ಬೌಂಡರಿ) ಶಿವಂ ದುಬೆ ಔಟಾಗದೇ 43 ರನ್‌ (37 ಎಸೆತ, 3 ಬೌಂಡರಿ, 2 ಸಿಕ್ಸ್‌ ) ಹೊಡೆದರು.

    ಚೆನ್ನೈ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ ರಚಿನ್‌ ರವೀಂದ್ರ ಮತ್ತು ಶೇಕ್‌ ರಶೀದ್‌ 52 ರನ್‌ ಜೊತೆಯಾಟವಾಡಿದರು. ಇಂದು ಮೊದಲ ಪಂದ್ಯವಾಡಿದ ಶೇಕ್‌ ರಶೀದ್‌ 27 ರನ್‌ ಹೊಡೆದರೆ ರಚಿನ್‌ ರವೀಂದ್ರ 37 ರನ್‌(22 ಎಸೆತ, 5 ಬೌಂಡರಿ) ಹೊಡೆದು ವಿಕೆಟ್‌ ಒಪ್ಪಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರೂ ದುಬೆ ತಾಳ್ಮೆಯಿಂದ ಇನ್ನಿಂಗ್ಸ್‌ ಕಟ್ಟಿದ್ದರು.

     

    ಲಕ್ನೋ ಪರ ನಾಯಕ ರಿಷಭ್‌ ಪಂತ್‌ ಈ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದರು. 63 ರನ್‌(49 ಎಸೆತ, 4 ಬೌಂಡರಿ, 4 ಸಿಕ್ಸ್‌) ಆರಂಭಿಕ ಆಟಗಾರ ಮಿಚೆಲ್‌ ಮಾರ್ಷ್‌ 30 ರನ್‌( 25 ಎಸೆತ, 2 ಬೌಂಡರಿ, 2 ಸಿಕ್ಸ್‌) ಹೊಡೆದು ‌ಔಟಾದರು. ನೂರ್‌ ಅಹ್ಮದ್ ಮತ್ತು ಪತಿರಾನ ತಲಾ ಎರಡು ವಿಕೆಟ್‌ ಪಡೆದರು.

  • ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ

    ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ

    -ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಗ್ಲೆನ್

    ಚಂಡೀಗಢ: ಪಂಜಾಬ್ ಕಿಂಗ್ಸ್ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ (Glenn Maxwell) ಐಪಿಎಲ್ (IPL) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ (BCCI) ಪಂದ್ಯದ ಶೇ.25 ರಷ್ಟು ದಂಡ ವಿಧಿಸಿದೆ.

    ಏ.8 ರಂದು ಪಂಜಾಬ್‌ನ (Punjab) ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ  ಕ್ರೀಡಾಂಗಣದಲ್ಲಿ (Maharaja Yadavindra Singh International Cricket Stadium) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ನಡುವೆ ನಡೆದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಬಿಸಿಸಿಐ ಪಂದ್ಯದ ಶೇ.25 ರಷ್ಟು ಶುಲ್ಕ ಪಾವತಿಸುವಂತೆ ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಿದ್ದು, ಈ ಸೀಸನ್‌ನಲ್ಲಿ ದಂಡಕ್ಕೆ ಒಳಗಾದ ಆರನೇ ಆಟಗಾರರಾಗಿದ್ದಾರೆ.ಇದನ್ನೂ ಓದಿ: ಆರ್ಯನ ಆರ್ಭಟಕ್ಕೆ ಚೆನ್ನೈ ಉಡೀಸ್; ಪಂಜಾಬ್‌ಗೆ 18 ರನ್‌ಗಳ ಜಯ

    ನೀತಿ ಸಂಹಿತೆ ಉಲ್ಲಂಘಿಸಿದ ಕುರಿತು ಬಿಸಿಸಿಐ ನಿರ್ದಿಷ್ಟ ಕಾರಣ ತಿಳಿಸಿಲ್ಲವಾದರೂ, ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಹಾಗೂ ಮ್ಯಾಚ್ ರೆಫರಿಯ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಇದೇ ರೀತಿ ಅಪರಾಧ ಮಾಡಿದ್ದಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧದ ಪಂದ್ಯದ ಸಮಯದಲ್ಲಿ ಗುಜರಾತ್ ಟೈಟಾನ್ಸ್ (Gujrat Titans) ಆಟಗಾರ ಇಶಾಂತ್ ಶರ್ಮಾಗೆ (Ishant Sharma) ದಂಡ ವಿಧಿಸಲಾಗಿತ್ತು.

    ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಆರ್ಟಿಕಲ್ 2.2ರ ಅಡಿಯಲ್ಲಿ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ಗ್ರೌಂಡ್ ಉಪಕರಣಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗಪಡಿಸಿಕೊಂಡರೆ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ ಉದ್ದೇಶಪೂರ್ವಕವಾಗಿ ವಿಕೆಟ್‌ಗಳನ್ನು ಹೊಡೆಯುವುದು ಅಥವಾ ಒದೆಯುವುದು ಮತ್ತು ಅಜಾಗರೂಕತೆಯಿಂದ ಅಥವಾ ನಿರ್ಲಕ್ಷ್ಯದಿಂದ ಜಾಹೀರಾತು ಫಲಕಗಳು, ಡ್ರೆಸ್ಸಿಂಗ್ ಕೋಣೆಯ ಬಾಗಿಲು, ಕನ್ನಡಿ, ಕಿಟಕಿಗಳು ಮತ್ತು ಇತರ ನೆಲೆವಸ್ತುಗಳು ಮತ್ತು ಫಿಟ್ಟಿಂಗ್‌ಗಳಿಗೆ ಹಾನಿಯನ್ನುಂಟುಮಾಡುವುದು ಮತ್ತು ಆಟಗಾರನು ಹತಾಶೆಯಿಂದ ಬ್ಯಾಟ್‌ನ್ನು ತೀವ್ರವಾಗಿ ಬೀಸಿ ಹಾನಿಯನ್ನುಂಟು ಮಾಡಿದಾಗ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ.

    ಈ ಸೀಸನ್‌ನಲ್ಲಿ ದಿಗ್ವೇಶ್ ಸಿಂಗ್, ರಿಷಬ್ ಪಂತ್ ಮತ್ತು ರಿಯಾನ್ ಪರಾಗ್ ಸೇರಿದಂತೆ ಹಲವಾರು ಆಟಗಾರರಿಗೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಹಾಗೂ ನಿಧಾನಗತಿಯ ಓವರ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ.

    ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 18 ರನ್‌ಗಳ ರೋಚಕ ಗೆಲುವು ಸಾಧಿಸಿದ್ದು, ಮೊದಲ ಬ್ಯಾಟಿಂಗ್ ಮಾಡಿದ್ದ ಪಂಜಾಬ್ 219 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 201 ರನ್ ಗಳಿಸಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್‌ ಅವರ ಬೌಲಿಂಗ್ ಅಬ್ಬರದಿಂದ ಸಿಎಸ್‌ಕೆ ಸೋಲುವಲ್ಲಿ ಕಾರಣವಾಯಿತು. ಸಿಎಸ್‌ಕೆ ವಿರುದ್ಧದ ಗೆಲುವಿನೊಂದಿಗೆ ಪಿಬಿಕೆಎಸ್ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ಈ ಸೀಸನ್‌ನಲ್ಲಿ ಸತತ ನಾಲ್ಕನೇ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಸ್ಫೋಟಕ ಶತಕ – ಎಬಿಡಿ, ಕೊಹ್ಲಿ ದಾಖಲೆ ಪುಡಿಗಟ್ಟಿದ 24ರ ಯುವಕ

  • ಆರ್‌ಸಿಬಿ ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ!

    ಆರ್‌ಸಿಬಿ ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ!

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ.

    ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ 2019ರ ಬಳಿಕ ಗೆದ್ದಿರಲಿಲ್ಲ. ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ 2008ರ ಮೊದಲ ಐಪಿಎಲ್‌ ಆವೃತ್ತಿಯ ಬಳಿಕ ಆರ್‌ಸಿಬಿಗೆ ಇಲ್ಲಿ ಗೆಲುವು ದಕ್ಕಿರಲಿಲ್ಲ. ಮುಂಬೈನಲ್ಲಿ ಆರ್‌ಸಿಬಿ ಕೊನೆಯ ಬಾರಿ ಗೆದ್ದಿದ್ದು 2015 ರಲ್ಲಿ. ಆದರೆ ಈ ಬಾರಿ ಮೂರು ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ. ಇದನ್ನೂ ಓದಿ: ಪಾಂಡ್ಯ ಪರಾಕ್ರಮ ವ್ಯರ್ಥ, ಮುಂಬೈ ಭದ್ರಕೋಟೆ ಛಿದ್ರ – ಆರ್‌ಸಿಬಿಗೆ 12 ರನ್‌ಗಳ ರೋಚಕ ಜಯ

    ಮೊದಲ ಪಂದ್ಯದಲ್ಲಿ ಕೋಲ್ಕತ್ತಾ (KKR) ವಿರುದ್ಧ 7 ವಿಕೆಟ್‌ಗಳಿಂದ ಗೆದ್ದ ಆರ್‌ಸಿಬಿ ಎರಡನೇ ಪಂದ್ಯದಲ್ಲಿ ಚೆನ್ನೈ (CSK) ವಿರುದ್ಧ 50 ರನ್‌ಗಳಿಂದ ಗೆದ್ದು ಬೀಗಿತ್ತು. ಮೂರನೇ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ (GT) ವಿರುದ್ಧ ಆರ್‌ಸಿಬಿ ಸೋತಿತ್ತು. ಈಗ ಮುಂಬೈ (MI) ವಿರುದ್ಧ ನಡೆದ ನಾಲ್ಕನೇ ಪಂದ್ಯದಲ್ಲಿ ರೋಚಕ 12 ರನ್‌ ಗಳಿಂದ ಗೆದ್ದು ಬೀಗಿದೆ. ಇದನ್ನೂ ಓದಿ: New Zealand v/s Pakistan – ಕ್ರಿಕೆಟ್ ಪಂದ್ಯದ ವೇಳೆಯೇ ಗ್ರೌಂಡ್‌ನಲ್ಲಿ ಪವರ್‌ಕಟ್; ಮುಂದೇನಾಯ್ತು?

    ಚೆನ್ನೈ ಮತ್ತು ಮುಂಬೈ ವಿರುದ್ಧದ ಪಂದ್ಯದಲ್ಲಿ ಉತ್ತಮ ಆಟವಾಡಿದ ನಾಯಕ ರಜತ್‌ ಪಾಟಿದರ್‌ (Rajat Patidar) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ. ಚೆನ್ನೈ ವಿರುದ್ಧ ರಜತ್‌ ಪಟೀದಾರ್‌ 51 ರನ್‌(32 ಎಸೆತ, 4 ಬೌಂಡರಿ, 3 ಸಿಕ್ಸ್‌) ಹೊಡೆದರೆ ಮುಂಬೈ ವಿರುದ್ಧ 64 ರನ್‌ (32 ಎಸೆತ, 5 ಬೌಂಡರಿ, 4 ಸಿಕ್ಸ್‌) ಚಚ್ಚಿದ್ದರು.

     

     

    ಸೋಮವಾರ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 221 ರನ್‌ ಬಾರಿಸಿತ್ತು. 222 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಮುಂದೆ ಆರ್‌ಸಿಬಿ ಏ.10 ರಂದು ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಾದಾಡಲಿದೆ.

    ಅಂಕಪಟ್ಟಿಯಲ್ಲಿ ಆರ್‌ಸಿಬಿ 6 ಅಂಕ ಸಂಪಾದಿಸಿದರೂ ನೆಟ್‌ ರನ್‌ ರೇಟ್‌ನಲ್ಲಿ ಹಿಂದಿರುವ ಕಾರಣ ಮೂರನೇ ಸ್ಥಾನದಲ್ಲಿದೆ. ಆಡಿರುವ ಮೂರು ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಸ್ಥಾನದಲ್ಲಿದ್ದರೆ 4 ಪಂದ್ಯವಾಡಿ ಮೂರರಲ್ಲಿ ಜಯಗಳಿಸಿರುವ ಗುಜರಾತ್‌ ಎರಡನೇ ಸ್ಥಾನದಲ್ಲಿದೆ.

  • ಮೈದಾನದಲ್ಲೇ ಧೀಮಾಕು ತೋರಿಸಿದ ದಿಗ್ವೇಶ್ ರಥಿಗೆ ಬಿತ್ತು ಭಾರೀ ದಂಡ

    ಮೈದಾನದಲ್ಲೇ ಧೀಮಾಕು ತೋರಿಸಿದ ದಿಗ್ವೇಶ್ ರಥಿಗೆ ಬಿತ್ತು ಭಾರೀ ದಂಡ

    ಲಕ್ನೋ: ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಧೀಮಾಕು ತೋರಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಬೌಲರ್‌ ದಿಗ್ವೇಶ್ ರಥಿಗೆ (Digvesh Rathi) ಬಿಸಿಸಿಐ ಭಾರೀ ದಂಡ ವಿಧಿಸಿದೆ.

    ಐಪಿಎಲ್ (IPL) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶುಲ್ಕದ 25% ಪ್ರತಿಶತ ದಂಡ ಮತ್ತು ಒಂದು ಡಿಮೆರಿಟ್‌ ಪಾಯಿಂಟ್‌ ನೀಡಲಾಗಿದೆ. ಇದನ್ನೂ ಓದಿ: ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

     

    ಆಗಿದ್ದೇನು?
    ದಿಗ್ವೇಶ್ ರಥಿ ಮೂರನೇ ಓವರ್‌ ಎಸೆಯುತ್ತಿದ್ದರು. 5ನೇ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಪ್ರಿಯಾಂಶ್ ಆರ್ಯ ಅವರು ಬಲವಾಗಿ ಹೊಡೆಯಲು ಯತ್ನಿಸಿ ಶಾರ್ದೂಲ್‌ ಠಾಕೂರ್‌ ಕೈಗೆ ಕ್ಯಾಚ್‌ ನೀಡಿ ಹೊರ ನಡೆದರು.

    8 ರನ್‌ ಗಳಿಸಿ ಮೈದಾನ ತೊರೆಯುತ್ತಿದ್ದಾಗ ರಥಿ ಪ್ರಿಯಾಂಶ್ ಆರ್ಯ ಬಳಿ ಬಂದು ಪತ್ರ ಬರೆಯುವ ಮೂಲಕ ಸಂಭ್ರಮಿಸಿದ್ದರು. ಉದ್ದೇಶಪೂರ್ವಕವಾಗಿ ಆಟಗಾರನ ಬಳಿ ಬಂದು ಸಂಭ್ರಮಾಚರಣೆ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ್ದಕ್ಕೆ ದಿಗ್ವೇಶ್ ರಥಿ ದಂಡ ವಿಧಿಸಿದೆ. ಇದನ್ನೂ ಓದಿ: ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 7 ವಿಕೆಟ್‌ ನಷ್ಟಕ್ಕೆ 171 ರನ್‌ ಹೊಡೆಯಿತು. ಗುರಿ ಬೆನ್ನಟ್ಟಿದ ಪಂಜಾಬ್‌ 16.2 ಓವರ್‌ಗಳಲ್ಲಿ 177 ರನ್‌ ಹೊಡೆದು ಜಯಗಳಿಸಿತು. ಪ್ರಭಸಿಮ್ರನ್ ಸಿಂಗ್ (Prabhsimran Singh) ಮತ್ತು ಶ್ರೇಯಸ್‌ ಅಯ್ಯರ್‌ (Shreyas Iyer) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಪಂಜಾಬ್‌ ಕಿಂಗ್ಸ್‌ (Punjab Kings) ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಈ ಜಯದಿಂದ ಐದನೇ ಸ್ಥಾನದಲ್ಲಿದ್ದ ಪಂಜಾಬ್‌ ಎರಡನೇ ಸ್ಥಾನಕ್ಕೆ ಜಿಗಿದರೆ ಮೂರನೇ ಸ್ಥಾನದಲ್ಲಿದ್ದ ಲಕ್ನೋ ಆರನೇ ಸ್ಥಾನಕ್ಕೆ ಜಾರಿದೆ.

     

  • ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

    ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

    ಮೆಲ್ಬರ್ನ್‌ : ವಿರಾಟ್‌ ಕೊಹ್ಲಿ (Virat Kohli) ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ. ಹೀಗಂತ ಸಿಡ್ನಿ ಸಿಕ್ಸರ್‌ (Sydney Sixers) ತಂಡವೇ ಅಧಿಕೃತವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕೊಹ್ಲಿ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆ ತಲೆಗೆ ಹುಳ ಬಿಟ್ಟಿದೆ.

    ಭಾರತದಲ್ಲಿ ಹೇಗೆ ಇಂಡಿಯನ್‌ ಪೀಮಿಯರ್‌ ಲೀಗ್‌ (IPL) ಇದೆಯೋ ಅದೇ ರೀತಿ ಆಸ್ಟ್ರೇಲಿಯಾದಲ್ಲಿ (Austrila) ಬಿಗ್‌ ಬ್ಯಾಷ್‌ ಲೀಗ್‌ (BBL) ಇದೆ. ಈ ಲೀಗ್‌ನಲ್ಲಿರುವ ಸಿಡ್ನಿ ಸಿಕ್ಸರ್‌, ಮುಂದಿನ ಎರಡು ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ ನಮ್ಮ ತಂಡವನ್ನು ಪ್ರತಿನಿಧಿಸುತ್ತಾರೆ ಎಂದು ಪೋಸ್ಟ್‌ ಮಾಡಿದೆ.

     

    ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನಲ್ಲೇ ಸಿಡ್ನಿ ಸಿಕ್ಸರ್‌ ಏಪ್ರಿಲ್‌ ಫೂಲ್ಸ್‌ ಡೇ (April Fools Day) ಎಂದು ಪೋಸ್ಟ್‌ ಮಾಡಿ ಎದ್ದಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

    ಬಿಸಿಸಿಐ (BCCI) ಐಪಿಎಲ್‌ಗೆ ಆದ್ಯತೆ ನೀಡುವ ಮತ್ತು ದೇಶೀಯ ಕ್ರಿಕೆಟ್‌ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ನೀತಿಯಿಂದಾಗಿ ಭಾರತೀಯ ಆಟಗಾರರು ಇತರ ಕ್ರಿಕೆಟ್ ಲೀಗ್‌ಗಳಿಗೆ ಆಸಕ್ತಿ ತೋರಿಸುತ್ತಿಲ್ಲ.  ಇದನ್ನೂ ಓದಿ: ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌

    ಇದರ ಜೊತೆ ಇನ್ನೊಂದು ಕಾರಣ ಇದೆ. ಭಾರತದ ಯಾವುದೇ ಕ್ರಿಕೆಟಿಗ ಕೂಡ ವಿದೇಶಿ ಕ್ರಿಕೆಟ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸಬೇಕೆಂದರೆ ಆ ಆಟಗಾರ ಬಿಸಿಸಿಐ ಜೊತೆಗಿನ ಎಲ್ಲಾ ರೀತಿಯ ಸಂಬಂಧವನ್ನು ಕಡಿತಗೊಳಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಐಪಿಎಲ್‌ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಬೇಕಾಗುತ್ತದೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

    ಬಿಸಿಸಿಐ ವಿದೇಶಿ ಟೂರ್ನಿಗೆ ಹೋಗಲೇಬಾರದು ಎಂದು ಯಾವುದೇ ನಿರ್ಬಂಧ ಹೇರಿಲ್ಲ. ಸದ್ಯ ಐಪಿಎಲ್‌ನಷ್ಟು ಪ್ರಚಾರ ಬೇರೆ ಯಾವುದೇ ಕ್ರಿಕೆಟ್‌ ಟೂರ್ನಿಗೆ ಇಲ್ಲ. ಹೀಗಾಗಿ ಭಾರತದ ಆಟಗಾರರು ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಲು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ.

     

  • ಬೆಂಗಳೂರಿನಲ್ಲಿ ನಡೆಯುವ ಐಪಿಎಲ್‌ ಪಂದ್ಯಾವಳಿಗಳಿಗೆ ಮೆಟ್ರೋ ಸೇವೆ ವಿಸ್ತರಣೆ

    ಬೆಂಗಳೂರಿನಲ್ಲಿ ನಡೆಯುವ ಐಪಿಎಲ್‌ ಪಂದ್ಯಾವಳಿಗಳಿಗೆ ಮೆಟ್ರೋ ಸೇವೆ ವಿಸ್ತರಣೆ

    ಬೆಂಗಳೂರು: ಏ.2ರಂದು ಬೆಂಗಳೂರಿನಲ್ಲಿ (Bengaluru) ಈ ಸೀಸನ್‌ನ ಮೊದಲ ಐಪಿಎಲ್  (IPL) ಪಂದ್ಯ ನಡೆಯಲಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಐಪಿಎಲ್ ಪಂದ್ಯಾವಳಿಗಳಿಗೆ ಮೆಟ್ರೋ ಸೇವೆ ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

    ಬೆಂಗಳೂರಿನಲ್ಲಿ ಒಟ್ಟು 7 ಮ್ಯಾಚ್‌ಗಳು ನಡೆಯಲಿವೆ. 7 ಪಂದ್ಯಗಳು ನಡೆಯುವ ದಿನ ಮೆಟ್ರೋ (Namma Metro) ಸೇವೆ ವಿಸ್ತರಣೆ ಮಾಡಲಾಗಿದೆ. ಮೆಟ್ರೋ ರೈಲು ಸೇವೆಯನ್ನು ರಾತ್ರಿ 12:30ರವರೆಗೂ ವಿಸ್ತರಿಸಿದೆ ಎಂದು ಬಿಎಂಆರ್‌ಸಿಎಲ್ (BMRCL) ಮಾಹಿತಿ ನೀಡಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಕಂಪಿಸಿದ ಭೂಮಿ – ಗಾಬರಿಗೊಂಡು ಮನೆಯಿಂದ ಹೊರಗೆ ಓಡಿದ ಜನ

    ಚಲ್ಲಘಟ್ಟ, ಮಾದಾವರ, ರೇಷ್ಮೆ ಸಂಸ್ಥೆ ಮತ್ತು ವೈಟ್‌ಫೀಲ್ಡ್ ಮಾರ್ಗಗಳಲ್ಲಿ ಮಧ್ಯ ರಾತ್ರಿ 12:30ರವರೆಗೂ ಮೆಟ್ರೋ ಸಂಚರಿಸಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ನಾಲ್ಕು ಟರ್ಮಿನಲ್‌ಗಳಿಗೂ ಮಧ್ಯರಾತ್ರಿ 1:15ಕ್ಕೆ ಹೊರಡಲಿದೆ. ಏ.8, ಏ.10, ಏ.18, ಏ.24, ಮೇ 3, 13 ಮತ್ತು 17ರಂದು ಬೆಂಗಳೂರಿನಲ್ಲಿ ಐಪಿಎಲ್ ಮ್ಯಾಚ್ ನಡೆಯಲಿವೆ. ನಾಳೆ (ಏ.2) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಜಿಟಿ ತಂಡದ ನಡುವೆ ಮೊದಲ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಒಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಎಫೆಕ್ಟ್ – ಬೆಂಗಳೂರಿಗೆ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್ ಘೋಷಣೆ

  • ನಾಳೆ ಬೆಂಗಳೂರಿನಲ್ಲಿ ಸೀಸನ್‌ನ ಮೊದಲ ಐಪಿಎಲ್ ಪಂದ್ಯ – ಚಿನ್ನಸ್ವಾಮಿ ಸುತ್ತಮುತ್ತ ಬಂದೋಬಸ್ತ್

    ನಾಳೆ ಬೆಂಗಳೂರಿನಲ್ಲಿ ಸೀಸನ್‌ನ ಮೊದಲ ಐಪಿಎಲ್ ಪಂದ್ಯ – ಚಿನ್ನಸ್ವಾಮಿ ಸುತ್ತಮುತ್ತ ಬಂದೋಬಸ್ತ್

    ಬೆಂಗಳೂರು: ನಾಳೆ (ಏ.2) ಬೆಂಗಳೂರಿನಲ್ಲಿ ಐಪಿಎಲ್ (IPL) ಸೀಸನ್ 18ರ ಮೊದಲ ಮ್ಯಾಚ್ ನಡೆಯಲಿದ್ದು, ಆರ್‌ಸಿಬಿ-ಜಿಟಿ (RCB vs GT) ಮುಖಾಮುಖಿಯಾಗಲಿದೆ. ಐಪಿಎಲ್ ಪಂದ್ಯ ಹಿನ್ನೆಲೆ ಸಂಚಾರಿ ಪೊಲೀಸರು ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಸುತ್ತಮುತ್ತ ಟ್ರಾಫಿಕ್ ತಡೆಗಟ್ಟಲು ಹಲವು ಕ್ರಮ ಕೈಗೊಂಡಿದ್ದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಟ್ರಾಫಿಕ್ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

    ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಸ್ಟೇಡಿಯಂ ಸುತ್ತಮುತ್ತ ನೋ ಪಾರ್ಕಿಂಗ್ ಇರಲಿದ್ದು, ಮ್ಯಾಚ್ ನೋಡಲು ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳ ಕೊರತೆ ಇರುವುದರಿಂದ ಬಿಎಂಟಿಸಿ, ಮೆಟ್ರೋ ಬಳಸಲು ಮನವಿ ಮಾಡಿದ್ದಾರೆ. ಓಲಾ, ಊಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್ ಆಪ್ ಮತ್ತು ಡ್ರಾಪ್ ಮಾಡಲು ಸ್ಥಳ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರು| ವಾಕಿಂಗ್ ವೇಳೆ ಮಾಲಕಿ ಕೈಯಿಂದ ಸಾಕು ನಾಯಿ ಕಿತ್ತೊಯ್ದ ಕಳ್ಳರು

    ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?
    *ಕ್ವೀನ್ಸ್ ರಸ್ತೆಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ.
    *ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ.
    *ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ.
    *ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ.
    *ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಎರಡೂ ಕಡೆ.
    *ಕಬ್ಬನ್ ರಸ್ತೆಯಲ್ಲಿ, ಸಿ.ಟಿ.ಓ. ವೃತ್ತದಿಂದ ಡಿಕೆನ್ಸ್ನ್ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆ.
    *ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ, ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ.
    *ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆವರೆಗೆ ಹಾಗೂ ಆಶಿರ್ವಾದಂ ವೃತ್ತದವರೆಗೆ.
    *ಕಸ್ತೂರ್ಬಾ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ.
    *ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ.
    *ಕಬ್ಬನ್‌ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ.
    *ಲ್ಯಾವೆಲ್ಲಿ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ.
    *ವಿಠಲ್ ಮಲ್ಯ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ ಮಾರ್ಕ್ಸ್ ರಸ್ತೆಯ ಬಿಷಪ್‌ಕಾಟನ್ ಬಾಲಕೀಯರ ಶಾಲೆಯವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ.

    ಪಾರ್ಕಿಂಗ್‌ಗೂ ಸ್ಥಳ ನಿಗದಿ:
    ಪಂದ್ಯ ವೀಕ್ಷಣೆ ಮಾಡಲು ಬರೋರಿಗೆ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್ ಜೊತೆಗೆ ಯು.ಬಿ.ಸಿಟಿ ನಿಲುಗಡೆ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಕೆಎಸ್‌ಸಿಎ ಸದಸ್ಯರ ವಾಹನಗಳನ್ನು ಸೆಂಟ್ ಜೋಸೆಫ್ ಬಾಲಕರ ಶಾಲೆ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಬೆಲೆ ಏರಿಕೆ ಬಗ್ಗೆ ಮುಂಚೆ ಹೇಳಿದ್ರೆ ಕಾಂಗ್ರೆಸ್ 50 ಸೀಟು ಗೆಲ್ಲುತ್ತಿರಲಿಲ್ಲ: ಸಿ.ಟಿ.ರವಿ ಕಿಡಿ

  • ಬೌಲಿಂಗ್‌, ಫೀಲ್ಡಿಂಗ್‌, ಬ್ಯಾಟಿಂಗ್‌ನಲ್ಲಿ ಡೆಲ್ಲಿ ಕಮಾಲ್‌ – ಹೈದರಾಬಾದ್‌ಗೆ ಮತ್ತೆ ಸನ್‌ಸ್ಟ್ರೋಕ್‌

    ಬೌಲಿಂಗ್‌, ಫೀಲ್ಡಿಂಗ್‌, ಬ್ಯಾಟಿಂಗ್‌ನಲ್ಲಿ ಡೆಲ್ಲಿ ಕಮಾಲ್‌ – ಹೈದರಾಬಾದ್‌ಗೆ ಮತ್ತೆ ಸನ್‌ಸ್ಟ್ರೋಕ್‌

    ವಿಶಾಖಪಟ್ಟಣ: ಅತ್ಯುತ್ತಮ ಫೀಲ್ಡಿಂಗ್‌, ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 18.4 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭವದ ಸವಾಲನ್ನು ಬೆನ್ನಟ್ಟಿದ ಡೆಲ್ಲಿ 16 ಓವರ್‌ಗಳಲ್ಲಿ 166 ರನ್‌ ಹೊಡೆದು ಜಯ ಸಾಧಿಸಿತು.

    ಡೆಲ್ಲಿ ಪರ ಫಾಫ್‌ ಡುಪ್ಲೆಸಿಸ್‌ ಆರಂಭದಲ್ಲೇ ಅಬ್ಬರಿಸಿದರು. ಡುಪ್ಲೆಸಿಸ್‌ ಮತ್ತು ಮೆಕ್‌ಗುರ್ಕ್ ಮೊದಲ ವಿಕೆಟಿಗೆ 55 ಎಸೆತಗಳಲ್ಲಿ 81 ರನ್‌ ಜೊತೆಯಾಟವಾಡಿ ಭದ್ರವಾದ ಅಡಿಪಾಯ ಹಾಕಿದರು. ಡುಪ್ಲೆಸಿಸ್‌ 50 ರನ್‌ (27 ಎಸೆತ, 3 ಬೌಂಡರಿ, 3 ಸಿಕ್ಸ್‌ ) ಹೊಡೆದರೆ ಮೆಕ್‌ಗುರ್ಕ್ 38 ರನ್‌(32 ಎಸೆತ, 4 ಬೌಂಡರಿ, 2 ಸಿಕ್ಸ್‌ ) ಹೊಡೆದು ಔಟಾದರು. ನಂತರ ಬಂದ ನಾಯಕ ಕೆಎಲ್‌ ರಾಹುಲ್‌ 15 ರನ್‌ (5 ಎಸೆತ, 2 ಬೌಂಡರಿ, 1 ಸಿಕ್ಸ್‌) ಹೊಡೆದು ಪೆವಿಲಿಯನ್‌ ಸೇರಿದರು. ಇದನ್ನೂ ಓದಿ: ಬೌಂಡರಿ ಬಳಿ ಮೇಲಕ್ಕೆ ಜಿಗಿದು ಕ್ಯಾಚ್‌ – ಮೆಕ್‌ಗುರ್ಕ್ ಮ್ಯಾಜಿಕ್‌ಗೆ ಅಂಕಿತ್‌ ಔಟ್‌

    ಅತ್ಯುತ್ತಮ ಫೀಲ್ಡಿಂಗ್‌: ಡೆಲ್ಲಿ ಗೆಲುವಿನಲ್ಲಿ ಫೀಲ್ಡಿಂಗ್‌ ಮುಖ್ಯ ಪಾತ್ರವಹಿಸಿತ್ತು. ಆರಂಭದಲ್ಲಿ ಅಭಿಶೇಕ್‌ ಶರ್ಮಾ 1 ರನ್‌ಗಳಿಸಿ ರನೌಟ್‌ ಆದರು. ನಂತರ ಬಂದ ಇಶನ್‌ ಕಿಶನ್‌ ಅವರು ಸಿಕ್ಸ್‌ ಸಿಡಿಸಲು ಹೋಗಿ ಸ್ಟಬ್ಸ್‌ ಹಿಡಿದ ಕ್ಯಾಚ್‌ಗೆ ಔಟಾದರು.

    ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರು 74 ರನ್‌(41 ಎಸೆತ, 5 ಬೌಂಡರಿ, 6 ಸಿಕ್ಸ್‌) ಹೊಡೆದು ಸ್ಫೋಟಕ ಆಟವಾಡುತ್ತಿದ್ದ ಅಂಕಿತ್‌ ವರ್ಮಾ ಅವರ ಕ್ಯಾಚನ್ನು ಬೌಂಡರಿ ಬಳಿ ಹಾರಿ ಹಿಡಿದರು. ಇದಕ್ಕೂ ಮೊದಲು ಪ್ಯಾಟ್‌ ಕಮ್ಮಿನ್ಸ್‌ ಅವರ ಕ್ಯಾಚನ್ನು ಹಿಡಿದಿದ್ದರು. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

     

     

     

    ಅಕ್ಷರ್‌ ಪಟೇಲ್‌ ಅವರು ನಿತೀಶ್‌ ಕುಮಾರ್‌ ರೆಡ್ಡಿ ಮತ್ತು ಡುಪ್ಲೆಸಿಸ್‌ ಅವರು ಮಲ್ಡರ್‌ ಅವರ ಕ್ಯಾಚನ್ನು ಡೈವ್‌ ಮಾಡಿದ ಹಿಡಿದ ಕಾರಣ ಹೈದರಾಬಾದ್‌ ಅಂತಿಮವಾಗಿ 163 ರನ್‌ಗಳಿಗೆ ಆಲೌಟ್‌ ಆಯ್ತು.

    ಮಿಶೆಲ್‌ ಸ್ಟ್ರಾರ್ಕ್‌ 5 ವಿಕೆಟ್‌ ಪಡೆದರೆ ಕುಲದೀಪ್‌ ಯಾದವ್‌ 3 ವಿಕೆಟ್‌, ಮೋಹಿತ್‌ ಶರ್ಮಾ 1 ವಿಕೆಟ್‌ ಕಿತ್ತರು.

     

     

    ಅಂಕಪಟ್ಟಿಯಲ್ಲಿ ಸತತ 2 ಪಂದ್ಯಗಳನ್ನು ಗೆದ್ದ ಆರ್‌ಸಿಬಿ ಮೊದಲ ಸ್ಥಾನದಲ್ಲಿದ್ದರೆ ಡೆಲ್ಲಿ 2 ಸ್ಥಾನಕ್ಕೆ ಜಿಗಿಯಿತು. ಮೂರು ಪಂದ್ಯಗಳ ಪೈಕಿ 1 ಜಯ ಎರಡರಲ್ಲಿ ಸೋಲು ಸಂಪಾದಿಸಿದ ಹೈದರಾಬಾದ್‌ ಏಳನೇ ಸ್ಥಾನಕ್ಕೆ ಜಾರಿದೆ.

  • ಬೌಂಡರಿ ಬಳಿ ಮೇಲಕ್ಕೆ ಜಿಗಿದು ಕ್ಯಾಚ್‌ – ಮೆಕ್‌ಗುರ್ಕ್ ಮ್ಯಾಜಿಕ್‌ಗೆ  ಅನಿಕೇತ್‌ ಔಟ್‌

    ಬೌಂಡರಿ ಬಳಿ ಮೇಲಕ್ಕೆ ಜಿಗಿದು ಕ್ಯಾಚ್‌ – ಮೆಕ್‌ಗುರ್ಕ್ ಮ್ಯಾಜಿಕ್‌ಗೆ ಅನಿಕೇತ್‌ ಔಟ್‌

    ವಿಶಾಖಪಟ್ಟಣ: ಸನ್‌ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (DC) ತಂಡದ ಜೇಕ್ ಫ್ರೇಸರ್-ಮೆಕ್‌ಗುರ್ಕ್ (Jake Fraser-McGurk) ಅದ್ಭುತವಾದ ಕ್ಯಾಚ್‌ ಹಿಡಿದು ಎಲ್ಲರನ್ನೂ ನಿಬ್ಬೆರಾಗಿಸಿದ್ದಾರೆ.

    ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ಬಂಡೆಯಂತೆ ನಿಂತು ಅನಿಕೇತ್ ವರ್ಮಾ ಬ್ಯಾಟ್‌ ಬೀಸುತ್ತಿದ್ದರು. 34 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮುನ್ನುಗುತ್ತಿದ್ದರು.

    ಕುಲದೀಪ್‌ ಎಸೆದ 16ನೇ ಓವರ್‌ ಐದನೇ ಎಸೆತದಲ್ಲಿ ಸಿಕ್ಸ್‌ ಸಿಡಿಸಲು ಅನಿಕೇತ್‌ ವರ್ಮಾ ಬಲವಾಗಿ ಬ್ಯಾಟ್‌ ಬೀಸಿದರು. ಈ ಡೀಪ್‌ ಮಿಡ್‌ ವಿಕೆಟ್‌ನಲ್ಲಿದ್ದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಗಾಳಿಯಲ್ಲಿ ಮೇಲಕ್ಕೆ ಹಾರಿ ಕ್ಯಾಚ್‌ ಹಿಡಿದರು. ಒಂದು ವೇಳೆ ಕ್ಯಾಚ್‌ ಹಿಡಿಯದೇ ಇದ್ದರೆ ಸಿಕ್ಸ್‌ಗೆ ಹೋಗುತ್ತಿತ್ತು. ಮೆಕ್‌ಗುರ್ಕ್ ಸರಿಯಾದ ಸಮಯಕ್ಕೆ ಮೇಲಕ್ಕೆ ಜಿಗಿದು 74 ರನ್‌(41 ಎಸೆತ, 5 ಬೌಂಡರಿ, 6 ಸಿಕ್ಸ್‌) ಸಿಡಿಸಿದ ಅಂಕಿತ್‌ ವರ್ಮಾ ಅವರನ್ನು ಔಟ್‌ ಮಾಡಿ ತಂಡಕ್ಕೆ ದೊಡ್ಡ ರಿಲೀಫ್‌ ನೀಡಿದರು. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

     

    ಈ ಪಂದ್ಯದಲ್ಲೇ ಮೆಕ್‌ಗುರ್ಕ್ ಪ್ಯಾಟ್‌ ಕಮ್ಮಿನ್ಸ್‌ ಅವರ ಕ್ಯಾಚನ್ನು ಬೌಂಡರಿ ಬಳಿಯೇ ಹಿಡಿದಿದ್ದರು. ಇದನ್ನೂ ಓದಿ: 43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್ – ಸಿಎಸ್‌ಕೆ ಪರ ಐತಿಹಾಸಿಕ ದಾಖಲೆ ಬರೆದ ಕೂಲ್ ಕ್ಯಾಪ್ಟನ್

    ಆಸ್ಟ್ರೇಲಿಯಾ ಮೆಕ್‌ಗುರ್ಕ್ ಈ ರೀತಿ ಕ್ಯಾಚ್‌ ಹಿಡಿಯುವುದು ಇದು ಮೊದಲೆನಲ್ಲ. ಈ ಹಿಂದೆ ಬಿಗ್‌ ಬ್ಯಾಷ್‌ ಲೀಗ್‌ನಲ್ಲೂ ಬೌಂಡರಿ ಬಳಿಯೇ ಕ್ಯಾಚ್‌ ಹಿಡಿದಿದ್ದರು.