Tag: IPL

  • ನಾಳೆ ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್ – ಎಲ್ಲಿ ಪಾರ್ಕ್ ಮಾಡಬಹುದು?

    ನಾಳೆ ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್ – ಎಲ್ಲಿ ಪಾರ್ಕ್ ಮಾಡಬಹುದು?

    ಬೆಂಗಳೂರು: ಭಾರತ-ಪಾಕಿಸ್ತಾನ ಕದನ ವಿರಾಮದ ಬಳಿಕ ನಾಳೆಯಿಂದ ಐಪಿಎಲ್ ಮತ್ತೆ ಆರಂಭವಾಗುತ್ತಿದೆ. ಎಂ.ಚಿನ್ನಸ್ವಾಮಿ ಸ್ಟೇಡಿಯಂ (M Chinnaswamy Stadium) ಸುತ್ತಮುತ್ತ ನೋ ಪಾರ್ಕಿಂಗ್ ಇರಲಿದೆ.

    ಭಾರತ-ಪಾಕ್ ಉದ್ವಿಗ್ನತೆಯಿಂದಾಗಿ ಮೇ 8ರಂದು ಐಪಿಎಲ್ (IPL) ಸ್ಥಗಿತಗೊಂಡಿತ್ತು. ಕದನ ವಿರಾಮ ಘೋಷಣೆಯಾದ ಬಳಿಕ ಮತ್ತೆ ಆರಂಭವಾಗುತ್ತಿದ್ದು, ಮೇ 17ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ (RCB) ಹಾಗೂ ಕೆಕೆಆರ್ (KKR) ತಂಡಗಳು ಮುಖಾಮುಖಿಯಾಗಲಿವೆ.ಇದನ್ನೂ ಓದಿ: ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮವಿವಾಹ – ರಕ್ಷಣೆ ಕೋರಿ ಪೊಲೀಸ್ ಮೊರೆ ಹೋದ ನವಜೋಡಿ

    ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರಿ ಪೊಲೀಸರು ಅಲರ್ಟ್ ಘೋಷಿಸಿದ್ದು, ಟ್ರಾಫಿಕ್ ತಡೆಗಟ್ಟಲು ಹಲವು ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಸುಗಮ ಸಂಚಾರಕ್ಕಾಗಿ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೂ ಸ್ಟೇಡಿಯಂ ಸುತ್ತಮುತ್ತ ನೋ ಪಾರ್ಕಿಂಗ್ ಇರಲಿದೆ.

    ಪಂದ್ಯ ವೀಕ್ಷಿಸಲು ಬರುವವರಿಗೆ ಪಾರ್ಕಿಂಗ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್‌ಪ್ ಮತ್ತು ಡ್ರಾಪ್ ಮಾಡಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಸ್ಟೇಡಿಯಂ ಸುತ್ತಮುತ್ತ ಪಾರ್ಕಿಂಗ್ ಕೊರತೆಯಿರುವುದರಿಂದ ಬಿಎಂಟಿಸಿ, ಮೆಟ್ರೋ ಬಳಸಲು ಮನವಿ ಮಾಡಲಾಗಿದೆ.

    ಎಲ್ಲೆಲ್ಲಿ ವಾಹನಗಳ ನಿಲುಗಡೆ ನಿಷೇಧ?
    1. ಕ್ವೀನ್ಸ್ ರಸ್ತೆ- ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಕಡೆ
    2. ಎಂ.ಜಿ ರಸ್ತೆ- ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಕಡೆ
    3. ಲಿಂಕ್ ರಸ್ತೆ- ಎಂ.ಜಿ ರಸ್ತೆಯಿಂದ ಕಬ್ಬನ್ ಪಾರ್ಕ್ ರಸ್ತೆವರೆಗೆ
    4. ರಾಜಭವನ ರಸ್ತೆ- ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ
    5. ಸೆಂಟ್ರಲ್ ಸ್ಟ್ರಿಟ್ ರಸ್ತೆಯ ಎರಡೂ ಕಡೆ
    6. ಕಬ್ಬನ್ ರಸ್ತೆ- ಸಿ.ಟಿ.ಓ. ವೃತ್ತದಿಂದ ಡಿಕೆನ್ ಸನ್ ರಸ್ತೆ ಜಂಕ್ಷನ್‌ನ ರಸ್ತೆಯ ಎರಡೂ ಕಡೆ
    7. ಸೆಂಟ್ ಮಾರ್ಕ್ಸ್ ರಸ್ತೆ- ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ
    8. ಮ್ಯೂಸಿಯಂ ರಸ್ತೆ-,ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆ ವರೆಗೆ ಹಾಗೂ ಆಶಿರ್ವಾದಂ ವೃತ್ತದವರೆಗೆ
    9. ಕಸ್ತೂರಬಾ ರಸ್ತೆ- ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ
    10. ಮಲ್ಯ ಆಸ್ಪತ್ರೆ ರಸ್ತೆ- ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ.
    11. ಕಬ್ಬನ್‌ಪಾರ್ಕ್ ಒಳಭಾಗ- ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ
    11. ಲ್ಯಾವೆಲ್ಲಿ ರಸ್ತೆ- ಕ್ವೀನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ
    12. ವಿಠಲ್ ಮಲ್ಯ ರಸ್ತೆ- ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ ಮಾರ್ಕ್ಸ್ ರಸ್ತೆಯ ಬಿಷಪ್‌ಕಾಟನ್ ಬಾಲಕಿಯರ ಶಾಲೆಯವರೆಗೆ

    ಪಾರ್ಕಿಂಗ್ ವ್ಯವಸ್ಥೆ:
    1. ಪಂದ್ಯ ವೀಕ್ಷಣೆ ಮಾಡಲು ಬರೋರಿಗೆ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್, ಯು.ಬಿ.ಸಿಟಿ ನಿಲುಗಡೆ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ
    2. ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ಪಾರ್ಕಿಂಗ್
    3. ಕೆ.ಎಸ್.ಸಿ.ಎ. ಸದಸ್ಯರ ವಾಹನಗಳಿಗೆ ಸೆಂಟ್ ಜೋಸೆಫ್ ಬಾಲಕರ ಶಾಲೆ ಮೈದಾನ.ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಪಾಕ್‌ ಫ್ರೀ ವೀಸಾ ಕೊಡುತ್ತೆ, ಮಂಜುನಾಥ್ ನೋಡ್ಕೊಂಡು ಬರಲಿ: ಯತ್ನಾಳ್ ಕಿಡಿ

  • ನಂಗೆ ಧೋನಿ ಮೇಲೆ ಸಕತ್ ಲವ್ – ಮೀನಾಕ್ಷಿ ಚೌಧರಿ ಮನದಾಳದ ಮಾತು‌

    ನಂಗೆ ಧೋನಿ ಮೇಲೆ ಸಕತ್ ಲವ್ – ಮೀನಾಕ್ಷಿ ಚೌಧರಿ ಮನದಾಳದ ಮಾತು‌

    ಧೋನಿ (Dhoni) ಅಂದ್ರೆ ನಂಗೆ ಸಕತ್‌ ಇಷ್ಟ, ಅವ್ರ ಮೇಲೆ ತುಂಬಾ ಲವ್‌ ಇದೆ ಎಂದು ನಟಿ ಮೀನಾಕ್ಷಿ ಚೌಧರಿ (Meenakshi Chaudhary) ಕಾರ್ಯಕ್ರಮದ ವೇದಿಕೆವೊಂದರಲ್ಲಿ ಮನಬಿಚ್ಚಿ ಮಾತಾಡಿದ್ದಾರೆ. ಅವರು ಮಾತಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವೈರಲ್‌ ಆದ ವೀಡಿಯೋದಲ್ಲಿ, ಧೋನಿಗಾಗಿಯೇ ನಾನು ಕ್ರಿಕೆಟ್‌ ನೋಡಲು ಆರಂಭಿಸಿದೆ. ಅವರು ಯಾವ ತಂಡಕ್ಕಾಗಿ ಆಡುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ಅವರ ಸ್ಟೈಲ್‌ ಹಾಗೂ ಆತ್ಮವಿಶ್ವಾಸ ಉಳಿದ ಆಟಗಾರರಿಗೂ ಸ್ಫೂರ್ತಿ ನೀಡುತ್ತದೆ. ನಾನು ಧೋನಿಯ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

    ಯುವ ನಟಿ ಮೀನಾಕ್ಷಿ ಚೌಧರಿ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷ ‘ಗುಂಟೂರ್ ಕರಮ್’ ಚಿತ್ರದೊಂದಿಗೆ ಮತ್ತು ಈ ವರ್ಷ ‘ಸಂಕ್ರಾಂತಿಕಿ ವಸ್ತುನ್ನಾಂ’ ಸಿನಿಮಾದೊಂದಿಗೆ ಭಾರೀ ಸಂಚಲನ ಮೂಡಿಸಿದ್ದರು. ಮತ್ತೊಂದು ದೊಡ್ಡ ಚಿತ್ರದೊಂದಿಗೆ ಹ್ಯಾಟ್ರಿಕ್ ಹಿಟ್ ಗಳಿಸುವ ಗುರಿಯನ್ನು ಈ ಬೆಡಗಿ ಹೊಂದಿದ್ದಾರೆ.

    ಸದ್ಯ ತೆಲುಗಿನ ‘ಅನಕನಕ ಒಕ ರಾಜು’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವನ್ನು ಚೊಚ್ಚಲ ನಿರ್ದೇಶಕ ಮಾರಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನವೀನ್ ಪೊಲಿಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

    ಐಪಿಎಲ್‌ 2025 (IPL 2025) ಆವೃತ್ತಿಯಿಂದ ಮನೆ ಕಡೆ ಹೆಜ್ಜೆ ಹಾಕಿರುವ ಧೋನಿ ಪಡೆ ಬುಧವಾರದ ಪಂದ್ಯದಲ್ಲಿ ಸಮಾಧಾನಕರ ಗೆಲುವು ಸಾಧಿಸಿತ್ತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪ್ಲೇ-ಆಫ್‌ ಆಸೆ ಹೊತ್ತಿದ್ದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಕನಸನ್ನು ಧೋನಿ ಪಡೆ ಭಗ್ನಗೊಳಿಸಿತ್ತು. ಈ ಪಂದ್ಯದ ಬೆನ್ನಲ್ಲೇ ಭಾರತ ಹಾಗೂ ಪಾಕ್‌ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್‌ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನೂ ಒಂದು ವಾರ ಮುಂದೂಡಿಕೆಯಾಗಿದ್ದ ಐಪಿಎಲ್‌ ಪಂದ್ಯಗಳು (IPL Match) ಮೇ 17 ರಿಂದ ಮತ್ತೆ ಆರಂಭವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

  • ಮೇ 17 ರಿಂದ ಮತ್ತೆ ಐಪಿಎಲ್‌ ಆರಂಭ

    ಮೇ 17 ರಿಂದ ಮತ್ತೆ ಐಪಿಎಲ್‌ ಆರಂಭ

    ಮುಂಬೈ: ಒಂದು ವಾರ ಮುಂದೂಡಿಕೆಯಾಗಿದ್ದ ಐಪಿಎಲ್‌ ಪಂದ್ಯಗಳು (IPL Match) ಮೇ 17 ರಿಂದ ಮತ್ತೆ ಆರಂಭವಾಗಲಿದೆ.

    ಮೇ 29ಕ್ಕೆ ಮೊದಲ ಕ್ವಾಲಿಫೈಯರ್‌ ಪಂದ್ಯ ನಡೆದರೆ ಮೇ 30 ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಜೂನ್‌ 1 ರಂದು ಎರಡನೇ ಕ್ವಾಲಿಫೈಯರ್‌ ಪಂದ್ಯ ನಡೆದರೆ ಜೂನ್‌ 3 ರಂದು ಫೈನಲ್‌ ಪಂದ್ಯ ನಡೆಯಲಿದೆ.

    ಬೆಂಗಳೂರು, ಜೈಪುರ, ದೆಹಲಿ, ಮುಂಬೈ, ಅಹಮದಾಬಾದ್‌, ಲಕ್ನೋದಲ್ಲಿ ಉಳಿದ ಪಂದ್ಯಗಳು ನಡೆಯಲಿದೆ. ಕ್ವಾಲಿಫೈಯರ್‌, ಎಲಿಮಿನೇಟರ್‌ ಮತ್ತು ಫೈನಲ್‌ ಪಂದ್ಯದ ಸ್ಥಳಗಳು ನಿಗದಿಯಾಗಿಲ್ಲ. ಇದನ್ನೂ ಓದಿ: ಪಾಕ್‌ ಜೊತೆ ಮಾತುಕತೆ ನಡೆದ್ರೆ ಭಯೋತ್ಪಾದನೆ, POK ಬಗ್ಗೆ ಮಾತ್ರ: ಮೋದಿ ಖಡಕ್‌ ಮಾತು

    ಆರ್‌ಸಿಬಿ (RCB) ಮತ್ತು ಕೆಕೆಆರ್‌ (KKR) ಮಧ್ಯೆ ಮೇ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮೊದಲ ಪಂದ್ಯ ನಡೆಯಲಿದೆ.

  • ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ರದ್ದಾಗುತ್ತಾ ಐಪಿಎಲ್‌?- ಅತ್ತ ಪಾಕ್‌ ಸೂಪರ್‌ ಲೀಗ್‌ ದುಬೈಗೆ ಶಿಫ್ಟ್‌

    ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ರದ್ದಾಗುತ್ತಾ ಐಪಿಎಲ್‌?- ಅತ್ತ ಪಾಕ್‌ ಸೂಪರ್‌ ಲೀಗ್‌ ದುಬೈಗೆ ಶಿಫ್ಟ್‌

    ನವದೆಹಲಿ: ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟ ಬೆನ್ನಲ್ಲೇ ಇದೀಗ ಐಪಿಎಲ್‌(IPL 2025) ರದ್ದಾಗುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ.

    ಕ್ರಿಕೆಟ್‌ ಪ್ರಿಯರ ಹಬ್ಬವಾಗಿದ್ದ ಐಪಿಎಲ್‌ ಭಾರತ- ಪಾಕ್‌(India-Pakistan) ನಡುವಿನ ಯುದ್ಧ ಛಾಯೆಯಿಂದ ರದ್ದಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಗುರುವಾರ ಧರ್ಮಶಾಲಾದಲ್ಲಿ ಪಂಜಾಬ್‌ ಕಿಂಗ್ಸ್‌(Panjab Kings) ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ನಡುವೆ ನಡೆಯುತ್ತಿದ್ದ ಪಂದ್ಯವನ್ನೂ ರದ್ದು ಮಾಡಲಾಗಿತ್ತು. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    ಜಮ್ಮು ಮತ್ತು ಪಠಾಣ್‌ಕೋಟ್ ನಗರಗಳಲ್ಲಿ ದಾಳಿಯ ಎಚ್ಚರಿಕೆಗಳು ಬಂದಿದ್ದರಿಂದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಚಾರವಾಗಿ BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಖಾಸಗಿ ವಾಹಿನಿಯಲ್ಲಿ ಮಾತನಾಡಿದ್ದರು. ಐಪಿಎಲ್‌ 2025 ಸೀಸನ್‌ನ ಉಳಿದ ಪಂದ್ಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಭೆ ಕರೆಯುಲಿದ್ದೇವೆ. ಸದ್ಯಕ್ಕೆ ಕೆಲವು ಪಂದ್ಯಗಳನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಅನುಗುಣವಾಗಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ- ಪಾಕ್‌ ನಡುವೆ ಹೆಚ್ಚಿದ ಉದ್ವಿಗ್ನತೆ – ಬಿಎಸ್‌ಎಫ್‌ ಮುಖ್ಯಸ್ಥರೊಂದಿಗೆ ಅಮಿತ್‌ ಶಾ ಚರ್ಚೆ

    ಆಟಗಾರರನ್ನು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ರೈಲಿನ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇವೆ. ಆಟಗಾರರು ರೈಲಿನ ಮೂಲಕ ಡೆಲ್ಲಿಗೆ ತೆರಳುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.

    ಇನ್ನು ಧರ್ಮಶಾಲಾದಲ್ಲಿ ಮೇ 11ರಂದು ಮುಂಬಯಿ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಧರ್ಮಶಾಲಾ ಏರ್ ಪೋರ್ಟ್‌ನಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಈ ಪಂದ್ಯ ಅಹ್ಮದಾಬಾದ್‌ಗೆ ಸ್ಥಳಾಂತರಿಸಿದ್ದಾರೆ. ಇದನ್ನೂ ಓದಿ: ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಭಾರತದ ಹಾಗೂ ಪಾಕ್‌ ನಡುವಿನ ಸಂಘರ್ಷದ ಹಿನ್ನೆಲೆ ಐಪಿಎಲ್‌ ಲೀಗ್‌ ಮುಂದುವರಿಸಬೇಕೆ ಅಥವಾ ಬೇಡವೆ ಎಂದು ನಿರ್ಧರಿಸುವ ಮುನ್ನ ಸರ್ಕಾರದ ನಿರ್ದೇಶನಗಳಿಗೆ ಎದುರು ನೋಡುತ್ತಿದ್ದೇವೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಲಕ್ನೋ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌ ಎಂದು ಮಾಹಿತಿ ನೀಡಿದ್ದಾರೆ.

    ಅಲ್ಲದೇ ಪಾಕ್‌ನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ್‌ ಸೂಪರ್‌ ಲೀಗ್‌ನ ಉಳಿದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲು ಪಿಸಿಬಿ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಹೈಅಲರ್ಟ್‌ – ದೇಶಾದ್ಯಂತ 24 ಏರ್‌ಪೋರ್ಟ್‌ಗಳು ತಾತ್ಕಾಲಿಕ ಬಂದ್‌

    ಏ. 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕ್‌ ಉಗ್ರರ 9 ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು. ಗುರುವಾರ ತಡರಾತ್ರಿಯೂ ಭಾರತ ಪಾಕಿಸ್ತಾನದ ವಿವಿಧ ನಗರಗಳನ್ನು ಮೇಲೆ ದಾಳಿ ನಡೆಸಿದ್ದು, ಇದೀಗ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಭಾರತ ಪಾಕ್‌ ನಡುವಿನ ಯುದ್ಧದ ಛಾಯೆಯು ಐಪಿಎಲ್‌ ಪಂದ್ಯಗಳ ಮೇಲೂ ಬಿಳಲಿದೆಯೇ ಎಂದು ಕಾದು ನೋಡಬೇಕಿದೆ.

  • ವೈಭವ್‌ ʻಯಶಸ್ವಿʼ ಶತಕ – 14ರ ಬಾಲಕನ ಆಟಕ್ಕೆ ಗುಜರಾತ್‌ ಧೂಳಿಪಟ, ರಾಜಸ್ಥಾನ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ವೈಭವ್‌ ʻಯಶಸ್ವಿʼ ಶತಕ – 14ರ ಬಾಲಕನ ಆಟಕ್ಕೆ ಗುಜರಾತ್‌ ಧೂಳಿಪಟ, ರಾಜಸ್ಥಾನ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಜೈಪುರ: 14ರ ಬಾಲಕ ವೈಭವ್‌ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್‌ ಸ್ಫೋಟಕ ಶತಕದ ಜೊತೆಯಾಟ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 9 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿರುವ ಗುಜರಾತ್‌ ಟೈಟಾನ್ಸ್‌ 12 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ.

    ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟ್ ಬೀಸಿದ ಗುಜರಾತ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 209 ರನ್ ಕಲೆಹಾಕಿತು. ಗೆಲುವಿಗೆ 210 ರನ್‌ಗಳ ಗುರಿ ಪಡೆದ ರಾಜಸ್ಥಾನ್‌ 15.5‌ ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 212 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

    ಆರಂಭಿಕ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಅಬ್ಬರದ ಆಟವಾಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 71 ಎಸೆತಗಳಲ್ಲಿ ಸ್ಫೋಟಕ 166 ರನ್‌ಗಳ ಜೊತೆಯಾಟ ನೀಡಿತು. 14 ವರ್ಷದ ವೈಭವ್ ಕೇವಲ 35 ಬಾಲ್‌ಗಳಿಗೆ ಸೆಂಚುರಿ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಯಶಸ್ವಿ ಜೈಸ್ವಾಲ್ 40 ಬಾಲ್‌ಗಳಿಗೆ 70 ರನ್ ಗಳಿಸಿದರೇ, ನಾಯಕ ರಿಯಾನ್ ಪರಾಗ್ 15 ಎಸೆತಗಳಿಗೆ 32 ರನ್ ಗಳಿಸಿ ಅಜೇಯರಾಗಿ ಉಳಿದರು.

    ಗುಜರಾತ್ ಪರ ಆರಂಭಿಕ ಆಟಗಾರರಾಗಿ ನಾಯಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಫೀಲ್ಡಿಗಿಳಿದು 62 ಬಾಲ್‌ಗಳಿಗೆ 93 ರನ್ ಗಳಿಸಿ ಉತ್ತಮ ಜೊತೆಯಾಟವಾಡಿದರು. ಬಳಿಕ ಸುದರ್ಶನ್ 30 ಎಸೆತಗಳಿಗೆ 39 ರನ್‌ಗಳಿಸಿ ಔಟಾದರು. ಬಳಿಕ ಜೊತೆಯಾದ ಗಿಲ್ ಹಾಗೂ ಜೋಶ್ ಬಟ್ಲರ್ 38 ಎಸೆತಗಳಿಗೆ 74 ರನ್‌ಗಳ ಕಲೆ ಹಾಕಿ ತಂಡವನ್ನು ಮುನ್ನಡೆಸಿದರು. ನಾಯಕ ಗಿಲ್ 50 ಬಾಲ್‌ಗಳಲ್ಲಿ 4 ಸಿಕ್ಸರ್ ಹಾಗೂ 5 ಫೋರ್ ಸಿಡಿಸಿ 84 ರನ್ ಗಳಿಸಿ ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದರು. ಬಟ್ಲರ್ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದರು.

    ರಾಜಸ್ಥಾನ ಪರ ತೀಕ್ಷಣ 2 ವಿಕೆಟ್ ಕಿತ್ತರೆ ಜೋಫ್ರಾ ಆರ್ಚರ್ ಮತ್ತು ಸಂದೀಪ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

  • SRH Vs MI – ಇಶಾನ್ ಕಿಶನ್ ವಿವಾದಿತ `ಔಟ್’ – ಮ್ಯಾಚ್ ಫಿಕ್ಸಿಂಗ್ ಚರ್ಚೆ!

    SRH Vs MI – ಇಶಾನ್ ಕಿಶನ್ ವಿವಾದಿತ `ಔಟ್’ – ಮ್ಯಾಚ್ ಫಿಕ್ಸಿಂಗ್ ಚರ್ಚೆ!

    ಹೈದರಾಬಾದ್‌: ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಬುಧವಾರ ನಡೆದ ಪಂದ್ಯ ಫಿಕ್ಸ್ ಆಗಿತ್ತೇ? ಎಂಬ ಚರ್ಚೆ ಆರಂಭವಾಗಿದೆ.

    ಸನ್ ರೈಸರ್ಸ್ ತಂಡದ ಬ್ಯಾಟರ್ ಇಶಾನ್ ಕಿಶನ್ ಅವರು ಅಂಪೈರ್‌ ತೀರ್ಮಾನವನ್ನು ಪ್ರಶ್ನಿಸದೇ (Ishan Kishan Out Controversy) ಪೆವಿಲಿಯನ್‌ನತ್ತ ಯಾಕೆ ತೆರಳಿದರು ಎಂಬುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಬ್ಯಾಟರ್, ಬೌಲರ್ ಮತ್ತು ಅಂಪೈರ್ ಗಳ ವರ್ತನೆ ನೋಡಿ ನೆಟ್ಟಿಗರು ಇದು ಮ್ಯಾಚ್ ಫಿಕ್ಸಿಂಗ್ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ರೋಹಿತ್‌, ಬೌಲ್ಟ್‌ ಆರ್ಭಟಕ್ಕೆ ʻಸನ್‌ʼ ಬರ್ನ್‌; 7 ವಿಕೆಟ್‌ಗಳ ಭರ್ಜರಿ ಜಯ, ಮೂರಕ್ಕೇರಿದ ಮುಂಬೈ, 4ನೇ ಸ್ಥಾನಕ್ಕೆ ಕುಸಿದ RCB

    ನಡೆದಿದ್ದೇನು?
    ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಟ್ರಾವಿಸ್ ಹೆಡ್ ಅವರು 2ನೇ ಓವರ್ ನ2ನೇ ಎಸೆತದಲ್ಲಿ ಡಕೌಟ್ ಆದರು. ಬಳಿಕ ಬಂದ ಇಶಾನ್ ಕಿಶನ್ ಅವರು ಕೇವಲ 1 ರನ್ ಗಳಿಸಿದ್ದರು, ಆಗ ವೇಗಿ ದೀಪಕ್ ಚಾಹರ್ ಎಸೆದ 3ನೇ ಓವರಿನ ಮೊದಲನೇ ಎಸೆತದಲ್ಲೇ ಔಟ್ ಆಗಿದ್ದೇನೆಂದು ತಾನಾಗಿಯೇ ಪೆವಿಲಿಯನ್‌ಗೆ ಮರಳಿದ್ದರು.

    ಚಾಹರ್ ಎಸೆದ ಚೆಂಡು ಲೆಗ್ ಸೈಡ್ ನಲ್ಲಿ ಇಶಾನ್ ಕಿಶನ್ ಅವರ ತಲೆಯ ಸಮೀಪದಿಂದ ತೆರಳಿ ವಿಕೆಟ್ ಕೀಪರ್ ಕೈ ಸೇರಿತ್ತು. ಈ ವೇಳೆ, ನಾಯಕ ಹಾರ್ದಿಕ್ ಪಾಂಡ್ಯನನ್ನು ಹೊರತುಪಡಿಸಿದರೆ ಬೇರಾರೂ ಅಪೀಲ್ ಮಾಡಿರಲಿಲ್ಲ. ಬೌಲರ್ ಸಹ ಗೊಂದಲದಲ್ಲಿದ್ದರು. ಆದರೆ ಅಂಪೈರ್ ಮಾತ್ರ ಒವರ್‌ನ ಮೊದಲ ಬೌನ್ಸರ್ ಎಂದು ಭುಜದ ಮೇಲೆ ಕೈ ತೋರಿಸಿದವರು ತಕ್ಷಣವೇ ಬದಲಾಯಿಸಿ ತಲೆ ಮೇಲೆ ಕೈಯೆತ್ತಿ ಔಟ್ ಎಂದು ತೀರ್ಪು ನೀಡಿದ್ದು ಪ್ರೇಕ್ಷಕರ ಗೊಂದಲಕ್ಕೆ ಕಾರಣವಾಗಿತ್ತು. ಆಶ್ಚರ್ಯವೆಂದರೆ ಇಶಾನ್ ಕಿಶನ್ ಅವರಾಗಿಯೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಲು ಶುರು ಮಾಡಿದ ಮೇಲೆ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಅಲ್ಟ್ರಾ ಎಡ್ಜ್ ಟೆಕ್ನಾಲಜಿಯಲ್ಲಿ ಅವರು ನಾಟೌಟ್ ಎಂಬುದು ಸಾಬೀತಾಗಿದೆ.

    ಇದೀಗ ಕೆಲವರು ಇದು ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿದ್ದಾರೆ. ಮತ್ತೆ ಕೆಲವರು ಇಶಾನ್ ಕಿಶನ್ ಅವರು ತಮ್ಮ ಹಿಂದಿನ ತಂಡವಾಗಿರುವ ಮುಂಬೈ ಇಂಡಿಯನ್ಸ್ ಋಣವನ್ನು ಈ ಮೂಲಕ ತೀರಿಸಿದ್ದಾರೆ ಎಂದು ಗೇಲಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್‌, ಪೋರೆಲ್‌ ಅಮೋಘ ಫಿಫ್ಟಿ – ಡೆಲ್ಲಿ ಕ್ಯಾಪಿಟಲ್ಸ್‌ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು

  • ಲಕ್ನೋ ಸೂಪರ್‌ ಆಟಕ್ಕೆ ಶರಣಾದ ರಾಯಲ್ಸ್‌ – 2 ರನ್‌ಗಳ ರೋಚಕ ಜಯ

    ಲಕ್ನೋ ಸೂಪರ್‌ ಆಟಕ್ಕೆ ಶರಣಾದ ರಾಯಲ್ಸ್‌ – 2 ರನ್‌ಗಳ ರೋಚಕ ಜಯ

    ಜೈಪುರ: ಕೊನೆಯಲ್ಲಿ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದಿಂದ ರಾಜಸ್ಥಾನ ರಾಯಲ್ಸ್‌ (Rjasthan Royals) ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) 2 ರನ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಲಕ್ನೋ 5 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 20 ಓವರ್‌ಗಳಲ್ಲಿ 5 ವಿಕೆಟಿ ನಷ್ಟಕ್ಕೆ 178 ರನ್‌ ಹೊಡೆದು ಸೋಲನ್ನು ಒಪ್ಪಿಕೊಂಡಿತ್ತು.

    ಕೊನೆಯ ಓವರ್‌ವರೆಗೂ ಗೆಲುವು ರಾಜಸ್ಥಾನ ಕಡೆಗೆ ವಾಲಿತ್ತು. ಕೊನೆಯ 6 ಎಸೆತಗಳಲ್ಲಿ 9 ರನ್‌ ಬೇಕಿತ್ತು.ಕ್ರೀಸ್‌ನಲ್ಲಿ ಹೆಟ್ಮೇಯರ್‌ ಮತ್ತು ಧ್ರುವ್‌ ಜುರೇಲ್‌ ಇದ್ದರು. ಮೊದಲ ಎರಡು ಎಸೆತದಲ್ಲಿ ಸಿಂಗಲ್‌ ಮತ್ತು 2 ರನ್‌ ತೆಗೆದ ಹೆಟ್ಮೇಯರ್‌ ಮೂರನೇ ಎಸೆತದಲ್ಲಿ ಕ್ಯಾಚ್‌ ನೀಡಿ ಔಟಾಗುವ ಮೂಲಕ ಪಂದ್ಯ ರೋಚಕ ಘಟ್ಟದತ್ತ ತಿರುಗಿತು.

    4ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 5 ಎಸೆತದಲ್ಲಿ ದುಬೆ ಸಿಕ್ಸ್‌ ಸಿಡಿಸಲು ಹೋದರು. ಆದರೆ ಮಿಲ್ಲರ್‌ ಕ್ಯಾಚ್‌ ಡ್ರಾಪ್‌ ಮಾಡಿದ ಕಾರಣ 2 ರನ್‌ ಓಡಿದರು. ಕೊನೆಯ ಎಸೆತದಲ್ಲಿ 4 ರನ್‌ ಬೇಕಿತ್ತು. ಆದರೆ ದುಬೆ ಸಿಂಗಲ್‌ ರನ್‌ ತೆಗೆದ ಕಾರಣ ಲಕ್ನೋ ಪಂದ್ಯವನ್ನು ಗೆದ್ದುಕೊಂಡಿತು.

    ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ಸೂಪರ್‌ ಓವರ್‌ನಲ್ಲಿ ಸೋತಿತ್ತು. ಈಗ ಲಕ್ನೋ ವಿರುದ್ಧವೂ ಕೊನೆ ಕ್ಷಣದಲ್ಲಿ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟ ಕಾರಣ ರಾಜಸ್ಥಾನ ಸೋಲು ಕಂಡಿದೆ.

    ರಾಜಸ್ಥಾನ ಪರ ಜೈಸ್ವಾಲ್‌ 74 ರನ್‌(52 ಎಸೆತ, 5 ಬೌಂಡರಿ, 4 ಸಿಕ್ಸ್‌), ಮೊದಲ ಪಂದ್ಯವಾಡಿದ 14 ರ ಸೂರ್ಯವಂಶಿ 34 ರನ್‌(20 ಎಸೆತ, 2 ಬೌಂಡರಿ, 3 ಸಿಕ್ಸ್‌), ನಾಯಕ ರಿಯಾನ್‌ ಪರಾಗ್‌ 39 ರನ್‌(26 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ ಔಟಾದರು. ಅವೇಶ್‌ ಖಾನ್‌ ಮೂರು ವಿಕೆಟ್‌ ಕೀಳುವ ಮೂಲಕ ರಾಜಸ್ಥಾನಕ್ಕೆ ಶಾಕ್‌ ನೀಡಿದರು.

    ಲಕ್ನೋ ಪರ ಮಾರ್ಕ್ರಾಮ್ 66 ರನ್‌(45 ಎಸೆತ, 5 ಬೌಂಡರಿ, 3 ಸಿಕ್ಸ್‌), ಅಯುಷ್‌ ಬದೋನಿ 50 ರನ್‌ (34 ಎಸೆತ, 5 ಬೌಂಡರಿ, 1 ಸಿಕ್ಸ್‌) ಹೊಡೆದರೆ ಕೊನೆಯಲ್ಲಿ ಅಬ್ದುಲ್‌ ಸಮಾದ್‌ ಔಟಾಗದೇ 30 ರನ್‌ (10 ಎಸೆತ, 4 ಸಿಕ್ಸ್‌) ಸಿಡಿಸಿದ ಪರಿಣಾಮ ತಂಡ 180 ರನ್‌ ಗಳಿಸಿತು.

  • ಮೊದಲ ಎಸೆತದಲ್ಲಿ ಸಿಕ್ಸ್‌ ಸಿಡಿಸಿದ 14ರ ವೈಭವ್‌ – ಒಂದೇ ಪಂದ್ಯದಲ್ಲಿ 2 ದಾಖಲೆ

    ಮೊದಲ ಎಸೆತದಲ್ಲಿ ಸಿಕ್ಸ್‌ ಸಿಡಿಸಿದ 14ರ ವೈಭವ್‌ – ಒಂದೇ ಪಂದ್ಯದಲ್ಲಿ 2 ದಾಖಲೆ

    ಜೈಪುರ: ತಾನು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸ್‌ ಸಿಡಿಸುವ ಮೂಲಕ ರಾಜಸ್ಥಾನ (Rjasthan Royals) 14 ವರ್ಷದ ಯುವ ಬ್ಯಾಟರ್‌ ವೈಭವ್‌ ಸೂರ್ಯವಂಶಿ (Vaibhav Suryavanshi) ಐಪಿಎಲ್‌ನಲ್ಲಿ ದಾಖಲೆ ಬರೆದಿದ್ದಾರೆ.

    14 ವರ್ಷ, 23 ದಿನಗಳ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರವಾಗಿದ್ದಾರೆ. ಇದರ ಜೊತೆ ಮೊದಲ ಪಂದ್ಯದಲ್ಲಿ ಮೊದಲ ಎಸೆತದಲ್ಲಿ ಸಿಕ್ಸ್‌ ಸಿಡಿಸಿದ ಕಿರಿಯ ಆಟಗಾರ ಎಂಬ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

    ನಾಯಕ ಸಂಜು ಸಾಮ್ಸನ್‌ ಗಾಯಗೊಂಡ ಹಿನ್ನೆಲೆಯಲ್ಲಿ ಲಕ್ನೋ (Lucknow Super Giants) ವಿರುದ್ಧ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಓಪನರ್‌ ಆಗಿ ಆಗಮಿಸಿದ ಸೂರ್ಯವಂಶಿ ಅವರು ಮೊದಲ ಓವರ್‌ ಎಸೆದ ಶಾರ್ದೂಲ್‌ ಠಾಕೂರ್‌ ಅವರ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದರು.

    ಈ ಪಂದ್ಯದಲ್ಲೇ ಸ್ಫೋಟಕ ಆಟ ಪ್ರದರ್ಶಿಸಿದ ಸೂರ್ಯವಂಶಿ 34 ರನ್‌ ರನ್‌ (20 ಎಸೆತ, 2 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದರು. ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್‌ ಜೊತೆ 52 ಎಸೆತಗಳಲ್ಲಿ 85 ರನ್‌ ಜೊತೆಯಾಟವಾಡಿದ್ದರು. ಔಟಾಗಿ ಪೆವಿಲಿಯನ್‌ ಕಡೆಗೆ ಹೋಗವಾಗ ಸೂರ್ಯವಂಶಿ ಕಣ್ಣೀರು ಹಾಕುತ್ತಾ ಹೆಜ್ಜೆ ಹಾಕಿದರು.

     

     

    ಐಪಿಎಲ್‌ ಹರಾಜಿನಲ್ಲಿ ಸೂರ್ಯವಂಶಿಯನ್ನು ರಾಜಸ್ಥಾನ ರಾಯಲ್ಸ್‌ 1.1 ಕೋಟಿ ರೂ. ನೀಡಿ ಖರೀದಿಸಿತ್ತು.

    5ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದ ವೈಭವ್, 12ನೇ ವಯಸ್ಸಿಗೆ ಪ್ರಥಮ ದರ್ಜೆ ಪಂದ್ಯವಾಡಿದ್ದರು. ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಆಡಿದ್ದಾರೆ. 13ನೇ ವಯಸ್ಸಿನೊಳಗೆ ಭಾರತ ಅಂಡರ್-19 ತಂಡದಲ್ಲೂ ಕಾಣಿಸಿಕೊಂಡಿದ್ದಾರೆ.

    2023 ರಲ್ಲಿ ರಣಜಿ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ಸೂರ್ಯವಂಶಿ, ಆ ಬಳಿಕ ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್ 19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 64 ಎಸೆತಗಳಲ್ಲಿ 104 ರನ್ ಸಿಡಿಸಿ ಮಿಂಚಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿ, ಅಂಡರ್-19 ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದರು.

    ಸೂರ್ಯವಂಶಿ ಈವರೆಗೆ ಒಟ್ಟು 49 ಶತಕಗಳನ್ನು ಸಿಡಿಸಿದ್ದಾರೆ. ಇದರಿಂದಲೇ ವೈಭವ್ ಹೆಸರು ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.

  • ತವರಿನಲ್ಲಿ ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲು – ಬೆಂಗಳೂರಿನಲ್ಲಿ ಪಂಜಾಬ್‌ ಕಿಂಗ್‌

    ತವರಿನಲ್ಲಿ ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲು – ಬೆಂಗಳೂರಿನಲ್ಲಿ ಪಂಜಾಬ್‌ ಕಿಂಗ್‌

    ಬೆಂಗಳೂರು: ತವರಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ (RCB) ಹ್ಯಾಟ್ರಿಕ್‌ ಸೋಲಾಗಿದೆ. ಮಳೆಯ (Rain) ಆಟದಲ್ಲಿ ಆರ್‌ಸಿಬಿ ವಿರುದ್ಧ ಪಂಜಾಬ್‌ ಕಿಂಗ್ಸ್‌ (Punjab Kings) 5 ವಿಕೆಟ್‌ಗಳ ಜಯ ಗಳಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದೆ.

    ಮಳೆಯಿಂದಾಗಿ 7:30ಕ್ಕೆ ಆರಂಭವಾಗಿದ್ದ ಪಂದ್ಯ 2 ಗಂಟೆ ತಡವಾಗಿ 9:30ಕ್ಕೆ ಆರಂಭವಾಯಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. ಕೊನೆಯಲ್ಲಿ ಟಿಮ್‌ ಡೇವಿಡ್‌ (Tim David) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ 9 ವಿಕೆಟ್‌ ನಷ್ಟಕ್ಕೆ 95 ರನ್‌ ಹೊಡೆಯಿತು.

    ಸುಲಭದ ಸವಾಲನ್ನು ಬೆನ್ನಟ್ಟಿದ ಪಂಜಾಬ್‌ 12.1  ಓವರ್‌ಗಳಲ್ಲಿ 5  ವಿಕೆಟ್‌ ನಷ್ಟಕ್ಕೆ 98 ರನ್‌ ಹೊಡೆದು ಜಯಗಳಿಸಿತು. ಈ ಮೊದಲು ಗುಜರಾತ್‌ ಟೈಟಾನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯವನ್ನು ಸೋತಿತ್ತು. ಈಗ ಮತ್ತೆ ತವರಿನಲ್ಲಿ ರಾಜಸ್ಥಾನದ ವಿರುದ್ಧ ಸೋತಿದೆ. ಇದನ್ನೂ ಓದಿ: ʻಈ ಸಲ ಕಪ್‌ ನಮ್ದೇʼ ಅಂತ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತೆ: ಅನಿಲ್‌ ಕುಂಬ್ಳೆ

    ಪಂಜಾಬ್‌ ಪರ ನೆಹಾಲ್ ವಧೇರಾ ಔಟಾಗದೇ 33 ರನ್‌ (19 ಎಸೆತ, 3 ಬೌಂಡರಿ, 3 ಸಿಕ್ಸ್‌) ಪ್ರಿಯಾಂಶ್‌ ಆರ್ಯ 16 ರನ್‌, ಪ್ರಭುಸಿಮ್ರಾನ್‌ಸಿಂಗ್‌ 13 ರನ್‌ ಹೊಡೆದು ಜಯವನ್ನು ತಂದುಕೊಟ್ಟರು.

    ಆರ್‌ಸಿಬಿ ಪರ ಸಾಲ್ಟ್‌ 4 ರನ್‌, ಕೊಹ್ಲಿ 1 ರನ್‌, ನಾಯಕ ಪಾಟೀದರ್‌ 23 ರನ್‌ (18 ಎಸೆತ, 1 ಬೌಂಡರಿ, 1 ಸಿಕ್ಸ್‌ ) ಹೊಡೆದು ಔಟಾದರು.

    63 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದ್ದರೂ ಕೊನೆಯಲ್ಲಿ ಡೇವಿಡ್‌ ಔಟಾಗದೇ ಸ್ಫೋಟಕ 50 ರನ್‌ (26 ಎಸೆತ, 5 ಬೌಂಡರಿ, 3 ಸಿಕ್ಸ್‌) ಹೊಡೆದು ತಂಡದ ಮೊತ್ತವನ್ನು 90 ರನ್‌ಗಳ ಗಡಿಯನ್ನು ದಾಟಿಸಿದರು.

    ಆರ್ಶ್‌ದೀಪ್‌ ಸಿಂಗ್‌, ಜಾನ್‌ಸೆನ್‌ ಚಹಲ್‌, ಹರ್‌ಪ್ರೀತ್‌ ಬಾರ್‌ ತಲಾ 2 ವಿಕೆಟ್‌ ಪಡೆದರು.

  • ʻಈ ಸಲ ಕಪ್‌ ನಮ್ದೇʼ ಅಂತ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತೆ: ಅನಿಲ್‌ ಕುಂಬ್ಳೆ

    ʻಈ ಸಲ ಕಪ್‌ ನಮ್ದೇʼ ಅಂತ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತೆ: ಅನಿಲ್‌ ಕುಂಬ್ಳೆ

    ಬೆಂಗಳೂರು: ಇಲ್ಲಿನ ಸದಾಶಿವನಗರದಲ್ಲಿರುವ ಡಿಸಿಎಂ ನಿವಾಸದಲ್ಲಿಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ (Anil Kumble) ಡಿ.ಕೆ ಶಿವಕುಮಾರ್‌ ಅವರನ್ನ ಭೇಟಿಯಾದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ.. ಆರ್‌ಸಿಬಿ ಕಪ್‌ ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

    ಈ ಸಲ ಆರ್‌ಸಿಬಿ (RCB) ಕಪ್‌ ಗೆಲ್ಲುವ ನಿರೀಕ್ಷೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಅದನ್ನ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತಲ್ಲ. ಕಪ್‌ ಗೆಲ್ಲುವ ನಿರೀಕ್ಷೆ ಅಂತು ಇದ್ದೇ ಇದೆ ಅಂತ ಹೇಳಿದ್ದಾರೆ.

    ಕಳೆದ 18 ವರ್ಷಗಳಿಂದಲೂ ಐಪಿಎಲ್‌ ಚೆನ್ನಾಗಿ ನಡೆದುಕೊಂಡು ಬಂದಿದೆ. ಈ ಆವೃತ್ತಿಯಲ್ಲಿ ಏನಾಗುತ್ತೆ ನೋಡೋಣ. ಇವತ್ತಿನ ಆರ್‌ಸಿಬಿ ಮ್ಯಾಚ್‌ಗೆ ಆಲ್ ದಿ ಬೆಸ್ಟ್ ಹೇಳುವೆ ಎಂದರಲ್ಲದೇ, ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿ ಇದ್ದೆ. ಅದೇ ಸಮಸ್ಯೆ ನನಗೆ ಎಂದು ಮುಗುಳುನಕ್ಕರು.