Tag: IPL

  • ಪಾಂಡ್ಯ ಆಲ್‍ರೌಂಡರ್ ಆಟ ರಾಜಸ್ಥಾನ ಪರದಾಟ – ಮುಂದುವರಿದ ಗುಜರಾತ್ ಗೆಲುವಿನ ಓಟ

    ಪಾಂಡ್ಯ ಆಲ್‍ರೌಂಡರ್ ಆಟ ರಾಜಸ್ಥಾನ ಪರದಾಟ – ಮುಂದುವರಿದ ಗುಜರಾತ್ ಗೆಲುವಿನ ಓಟ

    ಮುಂಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಆಟಕ್ಕೆ ರಾಜಸ್ಥಾನ ಥಂಡ ಹೊಡೆದಿದೆ. ರಾಜಸ್ಥಾನ ವಿರುದ್ಧ ಗುಜರಾತ್ 37 ರನ್‌ಗಳ ಅಂತರದ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    ಗುಜರಾತ್ ಪರ ಬ್ಯಾಟಿಂಗ್‍ನಲ್ಲಿ ಪಾಂಡ್ಯ, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್ ಮಿಂಚಿದರೆ, ಬೌಲಿಂಗ್‍ನಲ್ಲಿ ಲಾಕಿ ಫರ್ಗುಸನ್, ಯಶ್ ದಯಾಳ್ ಕಮಾಲ್ ಮಾಡಿದರು.

    ಗೆಲ್ಲಲು 193 ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಶೂನ್ಯ ಸುತ್ತಿದರು. ಒಂದುಕಡೆ ವಿಕೆಟ್ ಉರುಳುತ್ತಿದ್ದರು ಜೋಸ್ ಬಟ್ಲರ್ ಮಾತ್ರ ಎಂದಿನಂತೆ ಹೊಡಿಬಡಿ ಆಟದ ಮೂಲಕ ಗಮನಸೆಳೆದರು. ಆದರೆ 54 ರನ್ (24 ಎಸೆತ, 8 ಬೌಂಡರಿ, 3 ಸಿಕ್ಸ್)ಗಳಿಗೆ ಬಟ್ಲರ್ ಆಟ ಕೊನೆಗೊಂಡಿತು. ಆ ಬಳಿಕ ಶಿಮ್ರಾನ್ ಹೆಟ್ಮೆಯರ್ 29 ರನ್ (17 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಗುಜರಾತ್ ಬೌಲರ್‍ಗಳಿಗೆ ಕಾಡಿದರು. ಅಂತಿಮವಾಗಿ ರಾಜಸ್ಥಾನ 20 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌  ಕಳೆದುಕೊಂಡು 155 ರನ್‌ ಗಳಿಸಲಷ್ಟೇ ಶಕ್ತವಾಗಿ 37 ರನ್‌ಗಳಿಂದ ಸೋಲೊಪ್ಪಿಕೊಂಡಿತು.

    ಹಾರ್ದಿಕ್ ಪಾಂಡ್ಯ ಆರ್ಭಟ
    ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ತಂಡ ಆರಂಭದಲ್ಲೇ ಅಗ್ರ ಕ್ರಮಾಂಕದ ಮೂರು ವಿಕೆಟ್‍ಗಳನ್ನು 53 ರನ್‍ಗಳಿಗೆ ಕಳೆದುಕೊಂಡಿತು. ಆ ಬಳಿಕ ಒಂದಾದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಅಭಿನವ್ ಮನೋಹರ್ ಗುಜರಾತ್ ತಂಡಕ್ಕೆ ಚೇತರಿಕೆ ನೀಡಿದರು.

    ಒಂದುಕಡೆ ಪಾಂಡ್ಯ ಅಬ್ಬರಿಸಲು ಪ್ರಾರಂಭಿಸುತ್ತಿದ್ದಂತೆ ಅಭಿನವ್ ಮನೋಹರ್ ಕೂಡ ಮನಮೋಹಕ ಹೊಡೆತಗಳಿಗೆ ಮುಂದಾದರು. ಈ ಜೋಡಿ 4ನೇ ವಿಕೆಟ್‍ಗೆ 86 ರನ್ (55 ಎಸೆತ) ಒಟ್ಟುಗೂಡಿಸಿತು. ಅಭಿನವ್ ಮನೋಹರ್ 43 ರನ್ (28 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು.

    ಬಳಿಕ ಬಂದ ಡೇವಿಡ್ ಮಿಲ್ಲರ್ ರಾಜಸ್ಥಾನ್ ಬೌಲರ್‌ಗಳಿಗೆ ಕಂಟಕವಾದರು. ಇನ್ನೊಂದೆಡೆ ಪಾಂಡ್ಯ ಮಾತ್ರ ರಾಜಸ್ಥಾನ ಬೌಲರ್‌ಗಳ ಮುಂದೆ ತಮ್ಮ ಪರಾಕ್ರಮ ಮೆರೆದರು. ಈ ಜೋಡಿ ಅಜೇಯ 53 ರನ್ (25 ಎಸೆತ) ಸಿಡಿಸಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಅಂತಿಮವಾಗಿ ಪಾಂಡ್ಯ ಅಜೇಯ 87 ರನ್ (52 ಎಸೆತ, 8 ಬೌಂಡರಿ, 4 ಸಿಕ್ಸ್) ಮತ್ತು ಮಿಲ್ಲರ್ 31 ರನ್ (14 ಎಸೆತ, 5 ಬೌಂಡರಿ, 1 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತು.

  • ಸತತ ಸೋಲಿನ ಸುಳಿಯಲ್ಲಿರುವ ಮುಂಬೈಗೆ ಮತ್ತೊಂದು ಬರೆ

    ಸತತ ಸೋಲಿನ ಸುಳಿಯಲ್ಲಿರುವ ಮುಂಬೈಗೆ ಮತ್ತೊಂದು ಬರೆ

    ಮುಂಬೈ: 15 ಐಪಿಎಲ್ ಆವೃತ್ತಿಯಲ್ಲಿ ಕಳೆದ 5 ಪಂದ್ಯಗಳಲ್ಲೂ ಸತತವಾಗಿ ಸೋಲನ್ನು ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಬರೆ ಬಿದ್ದಿದೆ.

    ಹೌದು.. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ 11 ಸಹ ಆಟಗಾರರಿಗೆ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    IPL 2022 MI (1)

    ಬುಧವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಆಸೋಸಿಯೆಶನ್ ಸ್ಟೇಡಿಯಂನಲ್ಲಿ ನಡೆದ ಕಿಂಗ್ಸ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಪ್ರದರ್ಶಿಸಿದ್ದಕ್ಕಾಗಿ ರೋಹಿತ್ ಶರ್ಮಾಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ತಂಡದ 10 ಸಹ ಆಟಗಾರರಿಗೆ ತಲಾ 6 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ ಶೇ.25 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಯೋಜಕರು ತಿಳಿಸಿದ್ದಾರೆ.

    15ನೇ ಆವೃತ್ತಿಯ ಐಪಿಎಲ್‌ನ ಕಿಂಗ್ಸ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ 186 ರನ್‌ಗಳಿಸಿದ ಮುಂಬೈ ಇಂಡಿಯನ್ಸ್ ತಂಡವು 12 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿದೆ. ಇದರಿಂದಾಗಿ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯುವಂತಾಗಿದೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    suryakumar and rohith sharma

    ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಸತತವಾಗಿ 5 ಪಂದ್ಯಗಲ್ಲಿ ಸೋಲನ್ನು ಕಂಡಿದೆ. ಪಂಜಾಬ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾವು ಮೈದಾನದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಕೊನೆಯ ಇನ್ನಿಂಗ್ಸನಲ್ಲಂತೂ ಗೆಲುವಿನ ಸಮೀಪಕ್ಕೆ ಬಂದಿದ್ದೇವೆ. ಆದರೆ, ಪ್ರಮುಖ ರನೌಟ್‌ಗಳು ಸಂಭವಿಸಿದ್ದರಿಂದ ಸೋಲಾಯಿತು. ಬದಲಾವಣೆಗಾಗಿ ಹೊಸ ಆಲೋಚನಾ ಕ್ರಮವನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

     

  • 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    ಮುಂಬೈ: ಗಾಯಾಳುವಾಗಿ ಎನ್‍ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿರುವ ಟೀಂ ಇಂಡಿಯಾದ ವೇಗಿ ದೀಪಕ್ ಚಹರ್ ಮತ್ತೆ ಗಾಯಗೊಂಡು ನಾಲ್ಕು ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾದ ಸಂಕಷ್ಟ ಎದುರಾಗಿದೆ.

    ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ವೇಳೆ ದೀಪಕ್ ಚಹರ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಚಹರ್ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಈ ತಿಂಗಳ ಕೊನೆಗೆ ಫಿಟ್ ಆಗಿ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಚಹರ್ ಮತ್ತೆ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದ್ದು ಮುಂದಿನ 4 ತಿಂಗಳು ಕ್ರಿಕೆಟ್‍ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಹರ್‌ರನ್ನು 14 ಕೋಟಿ ರೂ. ನೀಡಿ ಖರೀದಿಸಿತ್ತು. ಆ ಬಳಿಕ ಗಾಯಗೊಂಡು ಮೊದಲ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಚಹರ್ ಏಪ್ರಿಲ್‍ನಲ್ಲಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸ್ ತಿಳಿಸಿತ್ತು. ಆದರೆ ಇದೀಗ ಚಹರ್ ಮತ್ತೆ ಗಾಯಗೊಂಡಿರುವುದರಿಂದ ಪೂರ್ತಿ ಐಪಿಎಲ್‍ನಿಂದ ಹೊರಗುಳಿಯಲಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳಲು 4 ತಿಂಗಳು ಬೇಕಾಗಿರುವುದರಿಂದ 2022ರ ಅಕ್ಟೋಬರ್, ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲೂ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: RCB ಕಪ್ ಗೆಲ್ಲುವ ವರೆಗೆ ಮದುವೆ ಆಗಲ್ಲ – ಅಭಿಮಾನಿಯ ಪೋಸ್ಟರ್ ವೈರಲ್

    ಚಹರ್ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ತಂಡಕ್ಕೆ ನೆರವಾಗುತ್ತಿದ್ದರು ಹಾಗಾಗಿ ಐಪಿಎಲ್‍ನಲ್ಲಿ ಚೆನ್ನೈ ತಂಡ ಚಹರ್ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು ಆದರೆ ಪೂರ್ತಿ ಐಪಿಎಲ್‍ನಿಂದ ಚಹರ್ ಹೊರಗುಳಿದಿರುವುದರಿಂದ ಚೆನ್ನೈ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇತ್ತ ಟೀಂ ಇಂಡಿಯಾದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದ ಚಹರ್ ಟಿ20 ವಿಶ್ವಕಪ್‍ನಿಂದ ಹೊರಗುಳಿದರೆ ತಂಡಕ್ಕೆ ಕೊಂಚ ಮಟ್ಟಿನ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ.

     

  • ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    ಪುಣೆ: ಪಂಜಾಬ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಜ್ಯೂನಿಯರ್ ಎಬಿಡಿ ಖ್ಯಾತಿಯ ಬ್ರೆವಿಸ್ ಮತ್ತು ಸೂರ್ಯಕುಮಾರ್ ಯಾದವ್ ಹೋರಾಟದ ನಡುವೆಯು ಗೆಲುವು ಮರಿಚಿಕೆಯಾಯಿತು.

    198 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭದಲ್ಲೇ ಆಫಾತ ಎದುರಾಯಿತು ಇಶಾನ್ ಕಿಶನ್ 3 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ರೋಹಿತ್ ಶರ್ಮಾ 28 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ಬಂದ ಜ್ಯೂನಿಯರ್ ಎಬಿಡಿ ಖ್ಯಾತಿಯ ಬ್ರೆವಿಸ್ ಮುಂಬೈ ಬೌಲರ್‌ಗಳಿಗೆ ಅಷ್ಟ ದಿಕ್ಕುಗಳನ್ನು ಪರಿಚಯಿಸುವಂತೆ ಬ್ಯಾಟ್ ಬೀಸಲು ಆರಂಭಿಸಿ 8ನೇ ಓವರ್‌ನ ಕೊನೆಯ 4 ಎಸೆತಗಳನ್ನು ಸತತ ಸಿಕ್ಸರ್‌ಗಟ್ಟಿ ಅಬ್ಬರಿಸಿ ಬೊಬ್ಬಿರಿದರು. ಇನ್ನೇನು ಅರ್ಧಶತಕದ ಹೊಸ್ತಿಲಲ್ಲಿದ್ದ ವೇಳೆ ಬ್ರೆವಿಸ್ 49 ರನ್ (25 ಎಸೆತ, 4 ಬೌಂಡರಿ, 5 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ನಂತರ ಸೂರ್ಯ ಕುಮಾರ್ ಯಾದವ್ 43 ರನ್ (30 ಎಸೆತ, 1 ಬೌಂಡರಿ, 4 ಸಿಕ್ಸ್) ಸಿಡಿಸಿ ವಿಕೆಟ್ ಕೈ ಚೆಲ್ಲಿಕೊಂಡಂತೆ ಮುಂಬೈ ಗೆಲುವು ಮತ್ತಷ್ಟು ದೂರವಾಯಿತು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 186 ರನ್ ಪೇರಿಸಲಷ್ಟೆ ಶಕ್ತವಾಗಿ 13 ರನ್‍ಗಳಿಂದ ಸೋಲು ಕಂಡಿತು.

    ಈ ಮೊದಲು ಟಾಸ್ ಗೆದ್ದ ಮುಂಬೈ ಕ್ಯಾಪ್ಟನ್ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡರು. ಇತ್ತ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮೊರೆ ಹೋಯಿತು. ಮಯಾಂಕ್ ಅಗರ್‌ವಾಲ್ ಮತ್ತು ಶಿಖರ್ ಧವನ್ ಮುಂಬೈ ಬೌಲರ್‌ಗಳ ದಾಳಿಯನ್ನು ಬೌಂಡರಿ, ಸಿಕ್ಸರ್‌ಗೆ ಬಡಿದಟ್ಟಿದರು. ಈ ಜೋಡಿ ಮೊದಲ ವಿಕೆಟ್‍ಗೆ 97 ರನ್ (57 ಎಸೆತ)ಗಳ ಜೊತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಮುರುಗನ್ ಅಶ್ವಿನ್ ಬರಬೇಕಾಯಿತು. ಮಯಾಂಕ್ ಅಗರ್‌ವಾಲ್ 52 ರನ್ (32 ಎಸೆತ, 6 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು.

    ಬಳಿಕ ಬಂದ ಬ್ಯಾಟ್ಸ್‌ಮ್ಯಾನ್‌ಗಳು ಮುಂಬೈ ಬೌಲರ್‌ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಆದರೆ ಇತ್ತ ಧವನ್ ಮಾತ್ರ ತಮ್ಮ ಹೊಡಿಬಡಿ ಆಟ ಮುಂದುವರಿಸಿದರು. ಅಂತಿಮವಾಗಿ 70 ರನ್ (50 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ಕೊನೆಗೆ ಜಿತೇಶ್ ಶರ್ಮಾ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಅಜೇಯ 30 ರನ್ (15 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು.

  • RCB ಕಪ್ ಗೆಲ್ಲುವ ವರೆಗೆ ಮದುವೆ ಆಗಲ್ಲ – ಅಭಿಮಾನಿಯ ಪೋಸ್ಟರ್ ವೈರಲ್

    RCB ಕಪ್ ಗೆಲ್ಲುವ ವರೆಗೆ ಮದುವೆ ಆಗಲ್ಲ – ಅಭಿಮಾನಿಯ ಪೋಸ್ಟರ್ ವೈರಲ್

    ಮುಂಬೈ: 15ನೇ ಆವೃತ್ತಿ ಐಪಿಎಲ್‍ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಆರ್​ಸಿಬಿ ಅಭಿಮಾನಿಯೊಬ್ಬರು ಹಿಡಿದಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

    ಆರ್​ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯದ ವೇಳೆ ಆರ್​ಸಿಬಿ ಅಭಿಮಾನಿ ಹುಡುಗಿಯೊಬ್ಬಳು ಆರ್​ಸಿಬಿ ಕಪ್ ಗೆಲ್ಲುವ ವರೆಗೆ ಮದುವೆ ಆಗಲ್ಲ ಎಂದು ಬರೆದುಕೊಂಡಿದ್ದ ಪೋಸ್ಟರ್ ಒಂದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಕ್ಯಾಮೆರಾಮ್ಯಾನ್ ಗ್ಯಾಲರಿ ಕಡೆ ಫೋಕಸ್ ಮಾಡಿ ಪೋಸ್ಟರ್ ಹಿಡಿದು ನಿಂತಿದ್ದ ಯುವತಿಯನ್ನು ಚಿತ್ರಿಸುತ್ತಿದ್ದಂತೆ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ. ಇದನ್ನೂ ಓದಿ: 74 ಎಸೆತಗಳಲ್ಲಿ 165 ರನ್‌ ಚಚ್ಚಿದ ಉತ್ತಪ್ಪ, ದುಬೆ – ಚೆನ್ನೈಗೆ 23 ರನ್‌ಗಳ ಜಯ

    14 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ಆರ್​ಸಿಬಿ ತಂಡ ಈ ಬಾರಿಯಾದರು ಕಪ್ ಗೆಲ್ಲಲಿ ಎಂಬ ಬಯಕೆ ಅಭಿಮಾನಿಗಳದ್ದು, ಹಾಗಾಗಿ ಪ್ರತಿ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿ ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಾರೆ. ಐಪಿಎಲ್‍ನಲ್ಲಿರುವ 10 ತಂಡಗಳ ಪೈಕಿ ಆರ್​ಸಿಬಿ ತಂಡಕ್ಕೆ ಅತಿ ಹೆಚ್ಚು ಅಭಿಮಾನಿಗಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ತಂಡಕ್ಕೆ ಚಿಯರ್ ಆಪ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು: ರವಿಶಾಸ್ತ್ರಿ

    ಇದೀಗ ಈ ಐಪಿಎಲ್ ಪೋಸ್ಟರ್ ಮತ್ತು ಹುಡುಗಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಹಾರವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಾಜಿ ಕ್ರಿಕೆಟರ್ ಅಮಿತ್ ಮಿಶ್ರಾ ಇದೀಗ ಈ ಹುಡುಗಿಯ ಪೋಷಕರಿಗೆ ತಲೆನೋವು ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.

  • IPL ಬೆಟ್ಟಿಂಗ್ ದಾಳಿ ವೇಳೆ ಪೊಲೀಸರಿಗೆ ಹೆದರಿ ಓಡುವಾಗ ಬಿದ್ದು ವ್ಯಕ್ತಿ ಸಾವು

    IPL ಬೆಟ್ಟಿಂಗ್ ದಾಳಿ ವೇಳೆ ಪೊಲೀಸರಿಗೆ ಹೆದರಿ ಓಡುವಾಗ ಬಿದ್ದು ವ್ಯಕ್ತಿ ಸಾವು

    ರಾಯಚೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಐಪಿಎಲ್ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಈ ಮಾಹಿತಿ ಮೇರೆಗೆ ರಾಯಚೂರು ತಾಲೂಕಿನ ಯರಗೇರಾ ಠಾಣೆ ಪೊಲೀಸರು ವಡವಟ್ಟಿ ಗ್ರಾಮದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಇದೇ ವೇಳೆ ಪೊಲೀಸರು ಎಲ್ಲಿ ಬಂಧಿಸುತ್ತಾರೋ ಎಂದು ಹೆದರಿ ಓಡುವಾಗ ಕಾಲುಜಾರಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

    ಸ್ವಾಮಿ(35) ಮೃತ ವ್ಯಕ್ತಿಯಾಗಿದ್ದು, ಇವರು ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು ಪೊಲೀಸರ ದಾಳಿಗೆ ಹೆದರಿ ಓಡಿ ಹೋಗಲು ಯತ್ನಿಸಿದಾಗ ಬಿದ್ದು ಸಾವನ್ನಪ್ಪಿದ್ದಾರೆ ಅಂತ ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಐಪಿಎಲ್ ಬೆಟ್ಟಿಂಗ್ ಹಾಗೂ ವ್ಯಕ್ತಿ ಸಾವಿನ ಬಗ್ಗೆ ಪ್ರತ್ಯೇಕ ಎರಡು ಪ್ರಕರಣಗಳು ಯರಗೇರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ:  ಈಶ್ವರಪ್ಪರನ್ನು ಸಮರ್ಥಿಸಿಕೊಂಡ ಸಿ.ಟಿ ರವಿ, ಗೋಪಾಲಯ್ಯ

    ವ್ಯಕ್ತಿ ಸಾವು ಅಸಹಜ ಸಾವು ಅಂತ ಪ್ರಕರಣ ದಾಖಲಾಗಿದ್ದು, ಐಪಿಎಲ್ ಬೆಟ್ಟಿಂಗ್ ದಾಳಿಗೂ ವ್ಯಕ್ತಿ ಸಾವಿಗೂ ಸಂಬಂಧವಿಲ್ಲ. ಎರಡು ಪ್ರತ್ಯೇಕ ಘಟನೆಗಳು ಮೃತನ ಕುಟುಂಬಸ್ಥರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಮಹಿಳೆಯ ಮೊದಲ ಕೆಲಸದ ರಹಸ್ಯ ಬಿಚ್ಚಿಟ್ಟ ನಟಿ ಪ್ರಣಿತಾ

  • 74 ಎಸೆತಗಳಲ್ಲಿ 165 ರನ್‌ ಚಚ್ಚಿದ ಉತ್ತಪ್ಪ, ದುಬೆ – ಚೆನ್ನೈಗೆ 23 ರನ್‌ಗಳ ಜಯ

    74 ಎಸೆತಗಳಲ್ಲಿ 165 ರನ್‌ ಚಚ್ಚಿದ ಉತ್ತಪ್ಪ, ದುಬೆ – ಚೆನ್ನೈಗೆ 23 ರನ್‌ಗಳ ಜಯ

    ಮುಂಬೈ: ಶಿವಂ ದುಬೆ ಮತ್ತು ರಾಬಿನ್‌ ಉತ್ತಪ್ಪ ಅವರ ಸ್ಫೋಟಕ ಅರ್ಧಶತಕದಿಂದ ಆರ್‌ಸಿಬಿ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 23 ರನ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 217 ರನ್‌ಗಳ ಕಠಿಣ ಗುರಿ ಪಡೆದ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 193 ರನ್‌ ಗಳಿಸಿತು. ಈ ಮೂಲಕ ಸತತ 4 ಪಂದ್ಯಗಳನ್ನು ಸೋತಿದ್ದ ಚೆನ್ನೈ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದೆ.

    ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿದ ಆರ್‌ಸಿಬಿ 50 ರನ್‌ಗಳಿಸುವಷ್ಟರಲ್ಲೇ 4 ವಿಕೆಟ್‌ ಕಳೆದುಕೊಂಡಿತ್ತು. ನಂತರ ಮ್ಯಾಕ್ಸ್‌ವೆಲ್‌ 26 ರನ್‌(11 ಎಸೆತ, 2 ಬೌಂಡರಿ, 2 ಸಿಕ್ಸರ್‌) ಶಬಾಜ್‌ ಅಹ್ಮದ್‌ 41 ರನ್‌(27 ಎಸೆತ, 4 ಬೌಂಡರಿ) ಪ್ರಭುದೇಸಾಯಿ 34 ರನ್‌(18 ಎಸೆತ, 5 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು. ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆದರೆ 34 ರನ್‌(14 ಎಸೆತ, 2 ಬೌಂಡರಿ, 3 ಸಿಕ್ಸರ್‌) ಹೊಡೆದ ವೇಳೆ ಸಿಕ್ಸ್‌ ಸಿಡಿಸಲು ಹೋಗಿ ಬೌಂಡರಿ ಗೆರೆಯ ಬಳಿ ಜಡೇಜಾ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. ಇದನ್ನೂ ಓದಿ: ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು: ರವಿಶಾಸ್ತ್ರಿ

    ಸ್ಫೋಟಕ ಅರ್ಧಶತಕ: 6.4 ಓವರ್‌ ಆಗಿದ್ದಾಗ ಚೆನ್ನೈ 36 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಉತ್ತಪ್ಪ ಮತ್ತು ಶಿವಂ ದುಬೆ ನಿಧನವಾಗಿ ರನ್‌ ಏರಿಸತೊಡಗಿದರು.

    10 ಓವರ್‌ಗೆ 60 ರನ್‌ಗಳಿಸಿದ್ದ ಚೆನ್ನೈ ನಂತರದ 10 ಓವರ್‌ನಲ್ಲಿ ಬರೋಬ್ಬರಿ 156 ರನ್‌ ಗಳಿಸಿತ್ತು. ಉತ್ತಪ್ಪ ಮತ್ತು ದುಬೆ ಮೂರನೇ ವಿಕೆಟ್‌ಗೆ ಕೇವಲ 74 ಎಸೆತಗಳಲ್ಲಿ 165 ರನ್‌ ಚಚ್ಚಿದರು.

    ಮ್ಯಾಕ್ಸ್‌ವೆಲ್‌ ಎಸೆದ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಉತ್ತಪ್ಪ 3 ಸಿಕ್ಸ್‌ ಸಿಡಿಸಿದರು. ಸಿರಾಜ್‌ ಎಸೆದ 18ನೇ ಓವರ್‌ನಲ್ಲಿ 24 ರನ್‌ ಬಂತು.

    ಅಂತಿಮವಾಗಿ ಉತ್ತಪ್ಪ 88 ರನ್‌(50 ಎಸೆತ, 4 ಬೌಂಡರಿ, 9 ಸಿಕ್ಸರ್‌) ಶಿವಂ ದುಬೆ 95 ರನ್‌(46 ಎಸೆತ, 5 ಬೌಂಡರಿ, 8 ಸಿಕ್ಸರ್‌) ಸಿಡಿಸಿ ಔಟಾದರು. 4 ಬೈ, 2 ಲೆಗ್‌ ಬೈ, 1 ನೋಬಾಲ್‌, 6 ವೈಡ್‌ ಹಾಕಿದ ಆರ್‌ಸಿಬಿ ಇತರ ರೂಪದಲ್ಲಿ 13 ರನ್‌ ನೀಡಿತ್ತು. ಆಕಾಶ್‌ ದೀಪ್‌ 4 ಓವರ್‌ ಎಸೆದು 58 ರನ್‌ ನೀಡಿ ದುಬಾರಿಯಾದರು.

    ರನ್‌ ಏರಿದ್ದು ಹೇಗೆ?
    50 ರನ್‌ – 52 ಎಸೆತ
    100 ರನ್‌ -78 ಎಸೆತ
    150 ರನ್‌ – 98 ಎಸೆತ
    200 ರನ್‌ -112 ಎಸೆತ
    216 ರನ್‌ – 120 ಎಸೆತ

  • ಗುಜರಾತ್‌ಗೆ ಸೋಲಿನ ಗುದ್ದು ಕೊಟ್ಟ ಹೈದರಾಬಾದ್ – 8 ವಿಕೆಟ್‍ಗಳ ಜಯ

    ಗುಜರಾತ್‌ಗೆ ಸೋಲಿನ ಗುದ್ದು ಕೊಟ್ಟ ಹೈದರಾಬಾದ್ – 8 ವಿಕೆಟ್‍ಗಳ ಜಯ

    ಮುಂಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಹೈದರಾಬಾದ್ ತಂಡ ಗುಜರಾತ್ ವಿರುದ್ಧ 8 ವಿಕೆಟ್‍ಗಳ ಅಂತರದಿಂದ ಗೆದ್ದು ಬೀಗಿದೆ.

    ಗೆಲ್ಲಲು 163 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಉತ್ತಮ ಆರಂಭ ಪಡೆಯಿತು. ಅಭಿಷೇಕ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ಗುಜರಾತ್ ಬೌಲರ್‌ಗಳಿಗೆ ಕಾಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 64 ರನ್ (53 ಎಸೆತ) ಗಳ ಜೊತೆಯಾಟವಾಡಿತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್ ಶರ್ಮಾ 42 ರನ್ (32 ಎಸೆತ, 4 ಬೌಂಡರಿ) ವಿಕೆಟ್ ಪಡೆಯುವಲ್ಲಿ ರಶೀದ್ ಖಾನ್ ಯಶಸ್ವಿಯಾದರು. ಬಳಿಕ ಬಂದ ರಾಹುಲ್ ತ್ರಿಪಾಠಿ 17 ರನ್ (11 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಗಾಯಗೊಂಡು ನಿವೃತ್ತರಾದರು.

    ಇತ್ತ ಕೇನ್ ವಿಲಿಯಮ್ಸನ್ 57 ರನ್ (46 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ನಾಯಕನಾಟವಾಡಿದರು. ಅಂತಿಮವಾಗಿ 19.1 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಇನ್ನೂ 5 ಎಸೆತ ಬಾಕಿ ಇರುವಂತೆ ಹೈದರಾಬಾದ್ 168 ರನ್ ಸಿಡಿಸಿ 8 ವಿಕೆಟ್‍ಗಳಿಂದ ಗೆಲುವು ದಾಖಲಿಸಿತು.

    ಟಾಸ್ ಗೆದ್ದ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಎದುರಾಳಿ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಹೈದರಾಬಾದ್ ಬೌಲರ್‌ಗಳು ಕೂಡ ನಾಯಕನ ನಿರ್ಧಾರಂತೆ ಗುಜರಾತ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಆರಂಭದಿಂದಲೇ ಕಡಿವಾಣ ಹಾಕಿದರು. ಗುಜರಾತ್ ಪರ ನಾಯಕ ಹಾರ್ದಿಕ್ ಪಾಂಡ್ಯ ಏಕಾಂಗಿ ಹೋರಾಟ ನಡೆಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ಪಾಂಡ್ಯ ಕೊನೆಯ ಎಸೆತದ ವರೆಗೆ ಬ್ಯಾಟ್ ಬೀಸಿ ಭರ್ತಿ 50 ರನ್ (42 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು.

    ಪಾಂಡ್ಯಗೆ ಉತ್ತಮ ಸಾಥ್ ನೀಡಿದ ಕನ್ನಡಿಗ ಅಭಿನವ್ ಮನೋಹರ್ 35 ರನ್ (21 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಈ ಮೊದಲು ಪಾಂಡ್ಯ ಜೊತೆ 5ನೇ ವಿಕೆಟ್‍ಗೆ 50 ರನ್ (32 ಎಸೆತ) ಜೊತೆಯಾಟವಾಡಿ ತಂಡಕ್ಕೆ ನೆರವಾದರು. ಅಂತಿಮವಾಗಿ ಗುಜರಾತ್ ತಂಡ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು.

    ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ ಮತ್ತು ಟಿ.ನಟರಾಜನ್ ತಲಾ 2 ವಿಕೆಟ್ ಕಿತ್ತು ಗುಜರಾತ್ ತಂಡಕ್ಕೆ ಮುಳುವಾದರು. ಮಾರ್ಕೊ ಜಾನ್ಸೆನ್ ಮತ್ತು ಉಮ್ರಾನ್ ಮಲಿಕ್ ತಲಾ 1 ವಿಕೆಟ್ ಹಂಚಿಕೊಂಡರು.

  • ಕಳೆದ ವರ್ಷ ಬೆಂಚ್ ಬಿಸಿ ಮಾಡಿದ ಆಟಗಾರರು ಈ ಬಾರಿ ಮ್ಯಾಚ್ ವಿನ್ನರ್ಸ್‌

    ಕಳೆದ ವರ್ಷ ಬೆಂಚ್ ಬಿಸಿ ಮಾಡಿದ ಆಟಗಾರರು ಈ ಬಾರಿ ಮ್ಯಾಚ್ ವಿನ್ನರ್ಸ್‌

    ಮುಂಬೈ: 14ನೇ ಆವೃತ್ತಿ ಐಪಿಎಲ್‍ನಲ್ಲಿ ಉಮೇಶ್ ಯಾದವ್ ಮತ್ತು ಕುಲ್‍ದೀಪ್ ಯಾದವ್ ಬೆರಳೆಣಿಕೆ ಪಂದ್ಯವಾಡಿದ್ದನ್ನು ಹೊರತು ಪಡಿಸಿ ಹೆಚ್ಚಿನ ಪಂದ್ಯಗಳಲ್ಲಿ ಹೊರಗುಳಿದಿದ್ದರು. ಆದರೆ ಈ ಬಾರಿ ಇವರಿಬ್ಬರೂ ಕೂಡ ಮ್ಯಾಚ್ ವಿನ್ನರ್‌ಗಳಾಗಿ ಸದ್ದು ಮಾಡುತ್ತಿದ್ದಾರೆ.

    14ನೇ ಆವೃತ್ತಿ ಐಪಿಎಲ್‍ನಲ್ಲಿ ಉಮೇಶ್ ಯಾದವ್ ಡೆಲ್ಲಿ ಕಾಪಿಟಲ್ಸ್ ಪರ ಕೇವಲ 2 ಪಂದ್ಯ ಆಡಿದ್ದರು. ಉಳಿದ ಬಹುತೇಕ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಉಮೇಶ್ ಯಾದವ್‍ರಂತೆ ಕುಲ್‍ದೀಪ್ ಯಾದವ್ 14ನೇ ಆವೃತ್ತಿ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಬೆರಳೆಣಿಕೆಯ ಪಂದ್ಯವಾಡಿ ಆ ಬಳಿಕ ಹೊರಗುಳಿದಿದ್ದರು. ಆದರೆ 15ನೇ ಆವೃತ್ತಿ ಐಪಿಎಲ್‍ನಲ್ಲಿ ಈ ಇಬ್ಬರೂ ಆಟಗಾರರು ಕೂಡ ತಮ್ಮ ಭರ್ಜರಿ ಬೌಲಿಂಗ್ ಮೂಲಕ ಎದುರಾಳಿ ಆಟಗಾರಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಜೊತೆಗೆ ಪರ್ಪಲ್ ಕ್ಯಾಪ್‍ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಹುಲ್ ಗೋಲ್ಡನ್ ಡಕ್ – ನಿರಾಸೆಗೊಂಡ ಆಥಿಯಾ ಶೆಟ್ಟಿ

    ಈಗಾಗಲೇ 15ನೇ ಆವೃತ್ತಿಯ ಮೊದಲ 5 ಪಂದ್ಯಗಳನ್ನು ಗಮನಿಸಿದಾಗ ಉಮೇಶ್ ಯಾದವ್ ಮತ್ತು ಕುಲ್‍ದೀಪ್ ಯಾದವ್ ಎದುರಾಳಿ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದಾರೆ. ಉಮೇಶ್ ಯಾದವ್ 5 ಪಂದ್ಯಗಳಿಂದ 10 ವಿಕೆಟ್ ಕಬಳಿಸಿದ್ದು, ಕುಲ್‍ದೀಪ್ ಯಾದವ್ 4 ಪಂದ್ಯಗಳಿಂದ 10 ವಿಕೆಟ್ ಕಿತ್ತು ಘರ್ಜಿಸುತ್ತಿದ್ದಾರೆ. ಇದನ್ನೂ ಓದಿ: ಡೆಲ್ಲಿ ಗೆಲುವಿನ ಸಂಭ್ರಮಾಚರಣೆ- ಹೌ ಈಸ್ ದಿ ಜೋಶ್: ವಾರ್ನರ್

    ಈ ಹಿಂದಿನ ಆವೃತ್ತಿ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನವನ್ನು ಕಂಡು ಫ್ರಾಂಚೈಸಿಗಳು ಈ ಇಬ್ಬರನ್ನು ಬೆಂಚ್ ಬಿಸಿ ಮಾಡಿಸಿತ್ತು. ಈ ಬಾರಿ ನೂತನ ಫ್ರಾಂಚೈಸ್‍ಗಳು ಯಾದವ್ ದ್ವಯರ ಮೇಲೆ ಭರವಸೆ ಇಟ್ಟಿರುವುದಕ್ಕೆ ಸರಿಯಾಗಿ ತಮ್ಮ ಭರ್ಜರಿ ಬೌಲಿಂಗ್ ಮೂಲಕ ತಂಡದ ಮ್ಯಾಚ್ ವಿನ್ನರ್ ಆಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  • ಡೆಲ್ಲಿ ಗೆಲುವಿನ ಸಂಭ್ರಮಾಚರಣೆ- ಹೌ ಈಸ್ ದಿ ಜೋಶ್: ವಾರ್ನರ್

    ಡೆಲ್ಲಿ ಗೆಲುವಿನ ಸಂಭ್ರಮಾಚರಣೆ- ಹೌ ಈಸ್ ದಿ ಜೋಶ್: ವಾರ್ನರ್

    ಮುಂಬೈ: ಭಾನುವಾರ ಕೆಕೆಆರ್ ಮತ್ತು ಡೆಲ್ಲಿ ತಂಡದ ನಡುವೆ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಕೋಲ್ಕತ್ತಾ ತಂಡವನ್ನು ಕಟ್ಟಿಹಾಕಿದ ಡೆಲ್ಲಿ ತಂಡ 44 ರನ್‍ಗಳ ಅಂತರದ ಜಯ ಸಾಧಿಸಿತ್ತು. ಈ ಜಯವನ್ನು ಡೆಲ್ಲಿ ಟೀಂ ಡ್ರೇಸಿಂಗ್ ರೂಮ್‍ನಲ್ಲಿ ಸಂಭ್ರಮಿಸಿಕೊಂಡಿದೆ.

    ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್‍ನ ತಂಡದ ಪರ ಆಡುತ್ತಿದ್ದ ಓಪನರ್ ಡೇವಿಡ್ ವಾರ್ನರ್ ಡ್ರೆಸಿಂಗ್ ರೂಮ್‍ನಲ್ಲಿ ಹೌ ಈಸ್ ದಿ ಜೋಶ್ ಎಂದು ತಂಡವನ್ನು ಹುರಿದುಂಬಿಸಿದರು.

    ಈ ಬಗ್ಗೆ ಡೆಲ್ಲಿ ತಂಡದ ಅಧಿಕೃತ ಇನ್ಸ್‌ಸ್ಟಾಗ್ರಾಮ್ ಖಾತೆ ವೀಡಿಯೋ ತುಣುಕನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ವಾರ್ನರ್ ಹೌ ಈಸ್ ದಿ ಜೋಶ್ ಎಂದು ಕೇಳುತ್ತಾರೆ. ಅದಕ್ಕೆ ತಂಡದ ಉಳಿದ ಆಟಗಾರರು ಹೈ ಸರ್ ಎನ್ನುತ್ತಾರೆ. ಈ ಡೈಲಾಗ್ ಹಿಂದಿ ಸಿನಿಮಾ ಉರಿಯದ್ದಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

     

    View this post on Instagram

     

    A post shared by Delhi Capitals (@delhicapitals)

     

    ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಳಿ ತಂಡ ಡೆಲ್ಲಿಯನ್ನು ಮೊದಲು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಮನಬಂದಂತೆ ಬ್ಯಾಟ್ ಬೀಸಿದರು. ಕೋಲ್ಕತ್ತಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 93 ರನ್ (52 ಎಸೆತ)ಗಳ ಜೊತೆಯಾಟವಾಡಿದರು. ಪೃಥ್ವಿ ಶಾ 51 ರನ್ (29 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು. ಇದನ್ನೂ ಓದಿ: ಡೆಲ್ಲಿ ದರ್ಬಾರ್‌ಗೆ ಕೆಕೆಆರ್ ಢಮಾರ್ – ಮಿಂಚಿದ ವಾರ್ನರ್

    ಆ ಬಳಿಕ ಪಂತ್ ಜೊತೆಗೂಡಿದ ವಾರ್ನರ್ ಮತ್ತಷ್ಟು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಅಂತಿಮವಾಗಿ ವಾರ್ನರ್ 61 ರನ್ (45 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ರಿಷಭ್ ಪಂತ್ 27 ರನ್ (14 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ 2ನೇ ವಿಕೆಟ್‍ಗೆ 55 ರನ್ (27 ಎಸೆತ) ಒಟ್ಟು ಸೇರಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಚಹಲ್, ಹೆಟ್ಮೆಯರ್ ಆಟಕ್ಕೆ ಲಕ್ನೋ ಲಾಕ್ – ರಾಜಸ್ಥಾನಕ್ಕೆ ರೋಚಕ ಜಯ