ಮುಂಬೈ: ಎಂಎಸ್ ದೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಮತ್ತೆ ಅಲಂಕರಿಸಿದ ಬಳಿಕ ತಂಡದಲ್ಲಿ ಮತ್ತೆ ಹುರುಪು ಎದ್ದು ಕಾಣಿಸುತ್ತಿದೆ. ಐಪಿಎಲ್‌ನ 15ನೇ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಸಿಎಸ್‌ಕೆ ತಂಡ 6 ಪಂದ್ಯಗಳಲ್ಲಿ ಸೋಲನ್ನನುಭವಿಸಿತ್ತು. ಬಳಿಕ ಸಿಎಸ್‌ಕೆ ತಂಡದ ಕ್ಯಾಪ್ಟನ್ಸಿಯನ್ನು ತೊರೆದ ರವೀಂದ್ರ ಜಡೇಜಾ ಸ್ಥಾನಕ್ಕೆ ಮತ್ತೆ ಧೋನಿ ಮರಳಿದ್ದಾರೆ.
ಭಾನುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪಂದ್ಯದಲ್ಲಿ ಧೋನಿ ತಂಡ 13 ರನ್‌ಗಳ ಜಯ ಸಾಧಿಸಿತು. ಸಿಎಸ್‌ಕೆ ಗೆಲುವಿನ ಸಂಭ್ರಮದಲ್ಲಿರುವಾಗಲೇ ದಕ್ಷಿಣ ಆಫ್ರಿಕಾದ ಆಟಗಾರ ಡೇಲ್ ಸ್ಟೇನ್ ಧೋನಿಯ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಡೇಲ್ ಸ್ಟೇನ್ ತಮ್ಮ ಜೆರ್ಸಿಯಲ್ಲಿ ಧೋನಿಯ ಹಸ್ತಾಕ್ಷರ ಪಡೆದಿರುವ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇಬ್ಬರು ಕ್ರಿಕೆಟ್ ದಿಗ್ಗಜರು ತಮ್ಮ ಅಭಿಮಾನವನ್ನು ಹಂಚಿಕೊಂಡಿರುವ ಹೃದಯಸ್ಪರ್ಶಿ ಫೋಟೋಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಶತಕ ವಂಚಿತ ಗಾಯಕ್ವಾಡ್ – ಧೋನಿ ಟೀಂ ಗೆ 13 ರನ್‌ಗಳ ಜಯ
MS Dhoni and Dale Steyn after the yesterday’s match – Two Legends of the game. pic.twitter.com/wsrlKqtMEI
ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸಿಎಸ್‌ಕೆ ತಂಡ ಹೈದರಾಬಾದ್ ವಿರುದ್ಧ 13 ರನ್‌ಗಳ ಜಯ ಸಾಧಿಸಿತು. ಚೆನ್ನೈ ನೀಡಿದ 203 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಹೈದರಾಬಾದ್ ತಂಡ 189 ರನ್ ಪೇರಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಅಂಪೈರ್ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಹಾಗೂ ಕಾನ್ವೆ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಫಲವಾಗಿ ಚೆನ್ನೈ ತಂಡವು 13 ರನ್‌ಗಳ ಜಯ ಸಾಧಿಸಿತು.
ಸಿಎಸ್‌ಕೆ ನೀಡಿದ 203 ರನ್ಗಳ ಗುರಿ ಪಡೆದ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 189 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಹೈದರಾಬಾದ್ ತಂಡವು ಮೊದಲ ಓವರ್‌ನಲ್ಲಿ ಫೋರ್, ಸಿಕ್ಸರ್‌ಗಳನ್ನು ಸಿಡಿಸುತ್ತಾ ರನ್ ಮಳೆಗರೆಯುತ್ತಾ ಉತ್ತಮ ಶುಭಾರಂಭವನ್ನೇ ನೀಡಿತ್ತು. ಮೊದಲ 5 ಓವರ್‌ಗೆ 52 ರನ್ ಸಿಡಿಸಿದ್ದ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅವರ ಜೊತೆಯಾಟವು ಪವರ್ ಪ್ಲೇ ಮುಗಿಯುವ ವೇಳೆಗೆ 60 ರನ್‌ಗಳನ್ನು ಪೂರೈಸಿತ್ತು. ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 39 ರನ್ (5 ಬೌಂಡರಿ, 1 ಸಿಕ್ಸರ್) ಚಚ್ಚುವ ಮೂಲಕ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದರು.
ಪವರ್ ಪ್ಲೇ ಮುಗಿಯುತ್ತಿದ್ದಂತೆ ಹೈದರಾಬಾದ್ ಹಾರಟಕ್ಕೆ ಬ್ರೇಕ್ ಹಾಕಿದ ವೇಗಿಯ ಬೌಲರ್ ಮುಖೇಶ್ ಚೌಧರಿ 6ನೇ ಓವರ್‌ನಲ್ಲಿ ಸತತ 2 ವಿಕೆಟ್‌ಗಳನ್ನು ಉರುಳಿಸಿದರು. 3 ನೇ ಕ್ರಮಾಂಕದಲ್ಲಿ ಬಂದ ರಾಹುಲ್ ತ್ರಿಪಾಟಿ ಸಹ ಶೂನ್ಯಕ್ಕೆ ನಿರ್ಗಮಿಸಿದ್ದು, ಹೈದರಾಬಾದ್ ಗೆಲುವಿನ ಕನಸಿಗೆ ಆರಂಭಿಕ ಆಘಾತ ನೀಡಿತು.
ಪವರ್ ಪ್ಲೇ ನಂತರ ನಿಧಾನಗತಿಯಲ್ಲಿ ಮುಂದುವರಿದ ಹೈದರಾಬಾದ್ ತಂಡವು 10 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 95 ರನ್ ಗಳಿಸಿತ್ತು. 2 ವಿಕೆಟ್ ಕಳೆದುಕೊಂಡ ನಂತರ ಚೆನ್ನೈ ಬೌಲರ್‌ಗಳ ವಿರುದ್ಧ ತಮ್ಮ ದಾಳಿ ಮುಂದುವರಿಸಿದ ಟೀಂ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ 37 ಎಸೆತಗಳಲ್ಲಿ 47 ರನ್‌ಗಳನ್ನು (2 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದರು. ನಂತರ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಐಡೆನ್ ಮಾರ್ಕ್ರಾಮ್ 17 ರನ್, ಶಶಾಂಕ್ ಸಿಂಗ್ 15 ರನ್‌ಗಳಿಸಿದರು.
ನಿಕೋಲಸ್ ಅರ್ಧಶತಕ ಹೋರಾಟ: ಮಧ್ಯಮ ಕ್ರಮಾಂಕದಲ್ಲಿ ಬಂದ ನಿಕೋಲಸ್ ಪೂರನ್ ಆಕರ್ಷಕ ಅರ್ಧ ಶತಕ ಗಳಿಸುವ ಮೂಲಕ ತಂಡದ ಗೆಲುವಿಗೆ ಕೊನೆಯವರೆಗೂ ಹೋರಾಡಿದರು. ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದ ನಿಕೋಲಸ್ 33 ಎಸೆತಗಳಲ್ಲಿ 64 ರನ್‌ಗಳಿಸಿದರು. ಹೈದರಾಬಾದ್ ತಂಡದಲ್ಲಿ 4 ಓವರ್‌ಗೆ ಅತಿಹೆಚ್ಚು 42 ರನ್ ನೀಡಿದ ಟಿ.ನಟರಾಜನ್ 2 ವಿಕೆಟ್‌ಗಳನ್ನು ಪಡೆದರು.
ಮುಖೇಶ್ ಚೌಧರಿ ಬೌಲಿಂಗ್ ಕಮಾಲ್: ಹೈದ್ರಾಬಾದ್ ತಂಡದ ಪ್ರಮುಖ ಬ್ಯಾಟರ್‌ಗಳನ್ನು ಉರುಳಿಸಿದ ಮುಖೇಶ್ ಚೌಧರಿ ತಮ್ಮ ಆಕರ್ಷಕ ಬೌಲಿಂಗ್‌ನಿಂದ ಕಮಾಲ್ ಮಾಡಿದರು. 3 ಓವರ್‌ಗಳಲ್ಲಿ 22 ರನ್‌ಗಳನ್ನಷ್ಟೇ ನೀಡಿ 4 ವಿಕೆಟ್ ಕಬಳಿಸಿದರು. ಇದರು ತಂಡದ ಗೆಲುವಿಗೆ ಕಾರಣವಾಯ್ತು.
ಋತುರಾಜ್ ಶತಕ ವಂಚಿತ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಗ್ರ ಕ್ರಮಾಂಕದ ಆಟಗಾರರು ಆರಂಭದ ನಾಲ್ಕೂದು ಓವರ್‌ನಲ್ಲಿ ಸಾಧಾರಣ ಮೊತ್ತವನ್ನೇ ದಾಖಲಿಸಿದರು. ಪವರ್ ಪ್ಲೇ ಮುಗಿಯುತ್ತಿದ್ದಂತೆ ಹೈದ್ರಾಬಾದ್ ಬೌಲರ್‌ಗಳನ್ನು ಬೆಂಡೆತ್ತಿದ್ದ ಋರುರಾಜ್ ಗಾಯಕ್ವಾಡ್ ಹಾಗೂ ಡಿಪಿ ಕಾನ್ವೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 203 ರನ್‌ಗಳ ಬೃಹತ್ ಮೊತ್ತ ದಾಖಲಿಸಿದರು. 99 ರನ್‌ಗಳಿಸಿದ ಋತುರಾಜ್ ಶತಕ ವಂಚಿತರಾಗಿದ್ದು, ಸಿಎಸ್‌ಕೆ ತಂಡಕ್ಕೆ ಕೊಂಚ ಬೇಸರವನ್ನುಂಟುಮಾಡಿತು.
ಹೈದರಾಬಾದ್ ತಂಡದ ಬಲಿಷ್ಠ ಬೌಲಿಂಗ್ ಪಡೆಯನ್ನು ಪುಡಿಗಟ್ಟಿದ ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 202 ರನ್‌ಗಳಿಸಿ ಹೈದರಾಬಾದ್ ತಂಡಕ್ಕೆ 203 ರನ್‌ಗಳ ಗುರಿ ನೀಡಿತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೇವಲ 57 ಎಸೆತಗಳಲ್ಲಿ 99 ರನ್ (6 ಸಿಕ್ಸರ್, 6 ಬೌಂಡರಿ) ಚಚ್ಚಿದರು. ಈ ಮೂಲಕ ಐಪಿಎಲ್‌ನಲ್ಲಿ 1 ಸಾವಿರ ರನ್‌ಗಳನ್ನು ಪೂರೈಸಿದರು.
ಇವರಿಗೆ ಅದ್ಭುತವಾಗಿ ಸಾಥ್ ನೀಡಿದ ಕಾನ್ವೆ 55 ಎಸೆತಗಳಲ್ಲಿ 85 ರನ್‌ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಮಹೇಂದ್ರಸಿಂಗ್ ಧೋನಿ 7 ಎಸೆತಗಳಲ್ಲಿ 1 ಬೌಂಡರಿ ಸೇರಿ 8 ರನ್‌ಗಳಿಸಿ ಕ್ಯಾಚ್ ನೀಡಿ ಹೊರನಡೆದರು. ನಿರ್ಗಮಿತ ನಾಯಕ ರವಿಂದ್ರ ಜಡೇಜಾ 1 ರನ್‌ಗಳಿಸಿ ಅಜೇಯರಾಗುಳಿದರು.
ರನ್ ಏರಿದ್ದು ಹೇಗೆ?
45 ಎಸೆತ 50 ರನ್
65 ಎಸೆತ 100 ರನ್
88 ಎಸೆತ 150 ರನ್
120 ಎಸೆತ 202 ರನ್
ಮುಂಬೈ: ಬ್ಯಾಟಿಂಗ್‍ನಲ್ಲಿ ರಾಹುಲ್, ಹೂಡಾ ಹೊಡಿ ಬಡಿ ಆಟ ಬೌಲಿಂಗ್‍ನಲ್ಲಿ ಮೊಹ್ಸಿನ್ ಖಾನ್ ಮಾರಕ ದಾಳಿಗೆ ಬೆಚ್ಚಿ ಬಿದ್ದ ಡೆಲ್ಲಿ ದರ್ಬಾರ್ ನಡೆಸಲಾಗದೇ ಲಕ್ನೋ ವಿರುದ್ಧ ಕೇವಲ 6 ರನ್‍ಗಳಿಂದ ಸೋಲು ಕಂಡಿದೆ.
196 ರನ್‍ಗಳ ಟಾರ್ಗೆಟ್ ಬೆನ್ನಟುವ ವೇಳೆ ರೋವ್ಮನ್ ಪೊವೆಲ್ 35 ರನ್ (21 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಡೆಲ್ಲಿ ಗೆಲುವಿನ ಕನಸಿಗೆ ಹಿನ್ನಡೆ ಆಯಿತು. ಆದರೆ ಇತ್ತ ಅಕ್ಷರ್ ಪಟೇಲ್ ಡೆಲ್ಲಿ ಗೆಲುವಿಗಾಗಿ ಹೋರಾಡಲು ಮುಂದಾದರು ಕಡೆಯ ವರೆಗೆ ಲಕ್ನೋ ಬೌಲರ್‌ಗಳಿಂದ ಗೆಲುವು ಕಸಿಯಲು ಪ್ರಯತ್ನಿಸಿದ ಅಕ್ಷರ್ ಪಟೇಲ್ ಅಜೇಯ 42 ರನ್ (24 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿದ ಹೊರತಾಗಿಯು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್ ಸಿಡಿಸಲಷ್ಟೇ ಶಕ್ತವಾಗಿ 6 ರನ್‍ಗಳ ಅಂತರದ ಸೋಲು ಕಾಣಬೇಕಾಯಿತು.
ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 13 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಆ ಬಳಿಕ ಮಿಚೆಲ್ ಮಾರ್ಷ್ ಮತ್ತು ನಾಯಕ ಪಂತ್ ಜೊತೆಗೂಡಿ ರನ್ ಏರಿಸಲು ಮುಂದಾದರು. ಮಿಚೆಲ್ ಮಾರ್ಷ್ ಸ್ಫೋಟಕ 37 ರನ್ (20 ಎಸೆತ, 3 ಬೌಂಡರಿ, 3 ಸಿಕ್ಸ್) ಮತ್ತು ರಿಷಭ್ ಪಂತ್ 44 ರನ್ (30 ಎಸೆತ, 7 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಡೆಲ್ಲಿ ತಂಡದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ಗಳನ್ನು ಟಾರ್ಗೆಟ್ ಮಾಡಿ ವಿಕೆಟ್ ಬೇಟೆಯಾಡಿದ ಮೊಹ್ಸಿನ್ ಖಾನ್ ಪ್ರಮುಖ 4 ವಿಕೆಟ್ ಕಿತ್ತು ಡೆಲ್ಲಿಗೆ ಶಾಕ್ ನೀಡಿದರು.
ಈ ಮೊದಲು ಟಾಸ್ ಗೆದ್ದ ಲಕ್ನೋ ನಾಯಕ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಬಂದರು. ಅದರಂತೆ ರಾಹುಲ್ ಮತ್ತು ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಮೊದಲ 4 ಓವರ್‌ಗಳಲ್ಲಿ 40 ರನ್ ಚಚ್ಚಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡುತ್ತಿದ್ದಂತೆ ಶಾರ್ದೂಲ್ ಠಾಕೂರ್ ದಾಳಿಗಿಳಿದ ಡಿ ಕಾಕ್ 23 ರನ್ (13 ಎಸೆತ, 3 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಈ ಮೊದಲು ಟಾಸ್ ಗೆದ್ದ ಲಕ್ನೋ ನಾಯಕ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಬಂದರು. ಅದರಂತೆ ರಾಹುಲ್ ಮತ್ತು ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಮೊದಲ 4 ಓವರ್‌ಗಳಲ್ಲಿ 40 ರನ್ ಚಚ್ಚಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡುತ್ತಿದ್ದಂತೆ ಶಾರ್ದೂಲ್ ಠಾಕೂರ್ ದಾಳಿಗಿಳಿದು ಡಿ ಕಾಕ್ 23 ರನ್ (13 ಎಸೆತ, 3 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ರಾಹುಲ್, ಹೂಡಾ ಭರ್ಜರಿ ಬ್ಯಾಟಿಂಗ್
ಆ ಬಳಿಕ ಜೊತೆಯಾದ ದೀಪಕ್ ಹೂಡಾ ಮತ್ತು ರಾಹುಲ್ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಇಬ್ಬರೂ ಕೂಡ ಬೌಂಡರಿ, ಸಿಕ್ಸರ್ ಸಿಡಿಸುತ್ತ ಲಕ್ನೋ ರನ್ ಹೆಚ್ಚಿಸಲು ಮುಂದಾದರು. ಈ ಜೋಡಿ 14.3 ಓವರ್‌ಗಳ ವರೆಗೆ ಕ್ರಿಸ್‍ನಲ್ಲಿ ನಿಂತು 2ನೇ ವಿಕೆಟ್‍ಗೆ 95 ರನ್ (61 ಎಸೆತ) ಗಳ ಜೊತೆಯಾಟವಾಡಿತು. ಈ ವೇಳೆ ಮತ್ತೆ ದಾಳಿಗಿಳಿದ ಠಾಕೂರ್, ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಹೂಡಾ 52 ರನ್ (34 ಎಸೆತ, 6 ಬೌಂಡರಿ, 1 ಸಿಕ್ಸ್) ವಿಕೆಟ್ ಕಿತ್ತು ಬ್ರೇಕ್ ನೀಡಿದರು.
ಇತ್ತ ರಾಹುಲ್ ಮಾತ್ರ ಆರ್ಭಟ ನಿಲ್ಲಿಸಲಿಲ್ಲ. ಸರಾಗವಾಗಿ ರನ್ ಏರಿಸುತ್ತಿದ್ದ ರಾಹುಲ್ ಕಡೆಗೆ 77 ರನ್ (51 ಎಸೆತ, 4 ಬೌಂಡರಿ, 5 ಸಿಕ್ಸ್) ಸಿಡಿಸಿ ಠಾಕೂರ್‌ಗೆ ಮೂರನೇ ಬಳಿಯಾದರು. ನಂತರ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಸ್ಟೊಯಿನಿಸ್ ಅಜೇಯ 17 ರನ್ (16 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಕೃನಾಲ್ ಪಾಂಡ್ಯ 9 ರನ್ (6 ಎಸೆತ) ಸಿಡಿಸಿ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 195 ರನ್‍ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು.
ರನ್ ಏರಿದ್ದು ಹೇಗೆ
31 ಎಸೆತ 50 ರನ್
63 ಎಸೆತ 100 ರನ್
97 ಎಸೆತ 150 ರನ್
120 ಎಸೆತ 195 ರನ್
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. ಆದರೆ 2022ರ ಐಪಿಎಲ್ ಆರಂಭಕ್ಕೂ ಮೊದಲು ಎಂಎಸ್ ಧೋನಿ ಸಿಎಸ್‌ಕೆ ನಾಯಕತ್ವವನ್ನು ತೊರೆದು, ಅಭಿಮಾನಿಗಳಿಗೆ ಭಾರೀ ಆಘಾತ ನೀಡಿದ್ದರು.
ಧೋನಿ ಬಳಿಕ ಸಿಎಸ್‌ಕೆ ನಾಯಕತ್ವವನ್ನು ವಹಿಸಿಕೊಂಡಿದ್ದ ರವೀಂದ್ರ ಜಡೇಜಾ ಶನಿವಾರ ತಮ್ಮ ಸ್ಥಾನವನ್ನು ಧೋನಿಗೆ ಮರಳಿ ನೀಡುತ್ತಿರುವುದರ ಬಗ್ಗೆ ಘೋಷಿಸಿದ್ದಾರೆ. ಈ ವಿಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹುಚ್ಚೆದ್ದಿರುವ ಧೋನಿ ಅಭಿಮಾನಿಗಳು ಮೀಮ್ಸ್ ಸುರಿಮಳೆಯನ್ನೇ ಹರಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ನಾಯಕತ್ವ ತೊರೆದ ರವೀಂದ್ರ ಜಡೇಜಾ – ಧೋನಿಗೆ ಮತ್ತೆ ಪಟ್ಟ
Ravindra Jadeja handed over the CSK captaincy back to Dhoni
ಕಳೆದ ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದ ಸಿಎಸ್‌ಕೆ ತಂಡ, ಈ ಬಾರಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತಿದೆ. ಈ ಹಿನ್ನೆಲೆಯಲ್ಲಿ ಜಡೇಜಾ ತಮ್ಮ ಆಟದ ಮೇಲೆ ಕೆಂದ್ರೀಕರಿಸುವ ಸಲುವಾಗಿ ಸಿಎಸ್‌ಕೆ ನಾಯಕತ್ವವನ್ನು ಧೋನಿಗೆ ವಾಪಾಸ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಸೋಲಿನ ಶಾಕ್ – ಕಡೆಗೂ ಗೆದ್ದು ಬೀಗಿದ ಮುಂಬೈ
ಈ ಬಾರಿಯ ಐಪಿಎಲ್ ಮ್ಯಾಚ್‌ನಲ್ಲಿ ಸಿಎಸ್‌ಕೆ ತಂಡ ಕೇವಲ 2 ಪಂದ್ಯಗಳನ್ನು ಗೆದ್ದಿದೆ. 15ನೇ ಆವೃತ್ತಿ ಐಪಿಎಲ್ ಪ್ರಾರಂಭದಲ್ಲಿ ಸತತ 4 ಪಂದ್ಯಗಳನ್ನು ಸೋತ ಬಳಿಕ 5ನೇ ಪಂದ್ಯದಲ್ಲಿ ಸಿಎಸ್‌ಕೆ ಮೊದಲ ಬಾರಿ ಗೆಲುವು ಸಾಧಿಸಿತು. ಆ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಸಿಎಸ್‌ಕೆ ನಂತರ ಮತ್ತೆ ಸೋಲಿನತ್ತ ಮುಖ ಮಾಡಿದೆ. ಇದೀಗ ಜಡೇಜಾ ಬದಲು ಧೋನಿ ನಾಯಕತ್ವ ನಿರ್ವಹಿಸಲು ಮುಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಮುಂಬೈ: ರಾಜಸ್ಥಾನ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾರ ಬಿಗ್ ಪಾಟ್ನರ್ ಶಿಪ್ ಮೂಲಕ ಯಶಸ್ವಿ ಚೇಸ್ ಮಾಡಿದ ಮುಂಬೈ ತಂಡ 5 ವಿಕೆಟ್‍ಗಳಿಂದ ಗೆದ್ದಿದೆ. ಈ ಮೂಲಕ ಮುಂಬೈ 15ನೇ ಆವೃತ್ತಿಯ ಮೊದಲ ಗೆಲುವು ಕಂಡಿದೆ.
ರಾಜಸ್ಥಾನ ನೀಡಿದ 159 ರನ್ಗಳ ಗುರಿ ಬೆನ್ನಟ್ಟಿದ ಮುಂಬೈಗೆ 3ನೇ ವಿಕೆಟ್‍ಗೆ ಯಾದವ್ ಮತ್ತು ತಿಲಕ್ ವರ್ಮಾರ 81 ರನ್ (56 ಎಸೆತ) ಗಳ ಜೊತೆಯಾಟ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿತು. ಅಂತಿಮವಾಗಿ ಕೀರನ್ ಪೊಲಾರ್ಡ್ 10 ರನ್, ಟಿಮ್ ಡೇವಿಡ್ ಅಜೇಯ 26 ರನ್ ( 9 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಸಿಕ್ಸ್ ಮೂಲಕ ಮ್ಯಾಚ್ ಗೆಲ್ಲಿಸಿದ ಸ್ಯಾಮ್ 6 ರನ್ (1 ಎಸೆತ, 1 ಸಿಕ್ಸ್) ಸಿಡಿಸಿ ಇನ್ನೂ 4 ಎಸೆತ ಬಾಕಿ ಇರುವಂತೆ ಮುಂಬೈಗೆ 5 ವಿಕೆಟ್‍ಗಳ ಅಂತರದ ಜಯ ತಂದುಕೊಟ್ಟರು. ಈ ಮೂಲಕ ಸತತ 8 ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವಿನ ನಗೆ ಬೀರಿತು.
ಮುಂಬೈ ನೀಡಿದ 159 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ 2 ರನ್ ಮತ್ತು ಇಶಾನ್ ಕಿಶನ್ 26 ರನ್ (18 ಎಸೆತ, 4 ಬೌಂಡರಿ, 1 ಸಿಕ್ಸ್) ಆರಂಭಿಕ ವೈಫಲ್ಯ ಮತ್ತೆ ಮುಂದುವರಿಯಿತು. ಆ ಬಳಿಕ ಒಂದಾದ ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮುಂಬೈಗೆ ಮೊದಲ ಗೆಲುವು ದಕ್ಕಿಸಿಕೊಡಲು ಹೋರಾಟ ನಡೆಸಲು ಮುಂದಾದರು. ತಿಲಕ್ ವರ್ಮಾ ಆಟ 35 ರನ್ (30 ಎಸೆತ, 1 ಬೌಂಡರಿ, 2 ಸಿಕ್ಸ್)ಗೆ ಅಂತ್ಯವಾಯಿತು. ಆದರೆ ಈ ಮೊದಲು ಸೂರ್ಯಕುಮಾರ್ ಜೊತೆ ಉಪಯುಕ್ತ 81 ರನ್ (56 ಎಸೆತ) ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಯಾದವ್ 51 ರನ್ (39 ಎಸೆತ, 5 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಎಂದಿನಂತೆ ತಮ್ಮ ಹೊಡಿ ಬಡಿ ಆಟ ಶುರು ಹಚ್ಚಿಕೊಂಡರು. ಆದರೆ ಅವರಿಗೆ ಇತರ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಸಾಥ್ ನೀಡಲಿಲ್ಲ.
ದೇವದತ್ ಪಡಿಕ್ಕಲ್ 15 ರನ್, ಸಂಜು ಸ್ಯಾಮ್ಸನ್ 16 ರನ್, ಡೇರಿಲ್ ಮಿಚೆಲ್ 17 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಬೃಹತ್ ಮೊತ್ತದ ರಾಜಸ್ಥಾನ ತಂಡದ ಪ್ಲಾನ್ ತಲೆಕೆಳಗಾಯಿತು. ಆದರೆ ಒಂದು ಕಡೆ ಬಟ್ಲರ್ ಮಾತ್ರ ಸ್ಫೋಟಕ ಆಟ ನಿಲ್ಲಿಸಲಿಲ್ಲ 15 ಓವರ್‌ಗಳ ವರೆಗೆ ಕ್ರಿಸ್‍ನಲ್ಲಿದ್ದ ಬಟ್ಲರ್ 67 ರನ್ (52 ಎಸೆತ, 5 ಬೌಂಡರಿ, 4 ಸಿಕ್ಸ್) ಬಾರಿಸಿ ಔಟ್ ಆದರು. ಕೆಲ ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್ 21 ರನ್ (9 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ರನ್ ಹೆಚ್ಚಿಸಲು ಮುಂದಾದರು. ಅಂತಿಮವಾಗಿ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಪೇರಿಸಿತು.
ಮುಂಬೈ ಪರ ಹೃತಿಕ್ ಶೋಕೀನ್ ಮತ್ತು ರಿಲೆ ಮೆರೆಡಿತ್ ತಲಾ 2 ವಿಕೆಟ್ ಪಡೆದರೆ, ಕುಮಾರ್ ಕಾರ್ತಿಕೇಯ ಮತ್ತು ಡೇನಿಯಲ್ ಸ್ಯಾಮ್ಸ್ ತಲಾ 1 ವಿಕೆಟ್ ಹಂಚಿಕೊಂಡರು.
ಮುಂಬೈ: ರಾಹುಲ್ ತೆವಾಟಿಯ ಹಾಗೂ ಡೇವಿಡ್ ಮಿಲ್ಲರ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಆರ್‌ಸಿಬಿ ವಿರುದ್ಧ ಗುಜರಾತ್ ತಂಡವು 6 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಐಪಿಎಲ್ ಪ್ಲೇ ಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ.
ಮುಂಬೈನ ಬ್ರಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗಿಳಿದ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲು ಬ್ಯಾಟ್ ಮಾಡಿ ಗುಜರಾತ್‌ಗೆ 171 ರನ್‌ಗಳ ಗುರಿ ನೀಡಿತ್ತು. ಈ ರನ್‌ಗಳ ಗುರಿ ಪಡೆದ ಗುಜರಾತ್ ಟೈಟನ್ಸ್ ತಂಡವು 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿ ಗೆಲುವು ದಾಖಲಿಸಿತು.
ಕಳೆದ ನಾಲ್ಕೈದು ಪಂದ್ಯಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಜವಾಬ್ದಾರಿ ಅರ್ಧಶತಕ ಸಿಡಿಸಿದ್ದಾರೆ. 45 ಎಸೆತಗಳಿಗೆ 50 ರನ್ ಬಾರಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದ್ದನ್ನು ಸಾಬೀತು ಮಾಡಿದ್ದಾರೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲ 9 ಪಂದ್ಯಗಳಲ್ಲಿ ಕೇವಲ 128 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಗರಿಷ್ಟ 48 ರನ್ ಗಳಿಸಿದ್ದರು. ಎರಡು ಬಾರಿ ಅರ್ಧಕ ಶತಕ ಕೈತಪ್ಪಿತ್ತು. ಕೊನೆಯ 3 ಪಂದ್ಯಗಳಲ್ಲಿ, 2 ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿ, ಒಂದು ಪಂದ್ಯದಲ್ಲಿ 9 ರನ್‌ಗಳಿಸಿ ಭಾರೀ ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ ಎಲ್ಲ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿರುವ ವಿರಾಟ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಈ ಪಂದ್ಯದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 53 ಎಸೆತಗಳಿಗೆ 58 ರನ್ ಬಾರಿಸಿ (53 ಎಸೆತ, 6 ಫೋರ್, 1 ಸಿಕ್ಸರ್) ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಫಾಫ್ ಡು ಪ್ಲೆಸಿಸ್ ಶೂನ್ಯಕ್ಕೆ ಔಟಾದ ಬಳಿಕ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಪಾಟಿದರ್ ಹಾಗೂ ವಿರಾಟ್ ಕೊಹ್ಲಿ ಅವರ ಜೊತೆಯಾಟ 74 ಎಸೆತಗಳಲ್ಲಿ 99 ರನ್‌ಗಳನ್ನು ಕಲೆಹಾಕಿತು. ಇನ್ನು ರಜತ್ ಪಾಟಿದರ್ ಸಹ ಭರ್ಜರಿ 52 ರನ್ ಬಾರಿಸಿ (32 ಎಸೆತ, 5 ಫೋರ್, 2 ಸಿಕ್ಸರ್) ಮಿಂಚಿದರು. ಇವರಿಬ್ಬರ ಸಾಂಗಿಕ ಬ್ಯಾಟಿಂಗ್ ಪ್ರದರ್ಶದಿಂದ ತಂಡವು 16 ಓವರ್‌ಗಳಲ್ಲಿ 120 ರನ್‌ಗಳ ಗಡಿ ದಾಟಿತ್ತು.
ನಂತರ ಕಣಕ್ಕಿಳಿದ ಸಿಕ್ಸರ್‌ವೀರ ಗ್ಲೇನ್ ಮ್ಯಾಕ್ಸ್‌ವೆಲ್ ಕೇವಲ 18 ಎಸೆತಗಳಲ್ಲಿ 2 ಸಿಕ್ಕರ್, 3 ಬೌಂಡರಿಗಳನ್ನು ಸಿಡಿಸುವ ಮೂಲಕ 33 ರನ್ ಪೇರಿಸಿದರು. ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್ ತಲಾ 2 ರನ್‌ಗಳಿಸಿದರು. ಕೊನೆಯಲ್ಲಿ ಬ್ಯಾಟಿಂಗಿಳಿದ ಮಹಿಪಾಲ್ ಲೊಮ್ರೋರ್ 8 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿ, 16 ರನ್ ಕಮಾಲ್ ಮಾಡಿದರು. ಇದರಿಂದಾಗಿ ತಂಡವು ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 170 ರನ್‌ಗಳನ್ನು ಬಾರಿಸಿ, ಎದುರಾಳಿ ಗುಜರಾತ್ ಟೈಟನ್ಸ್‌ಗೆ 171 ರನ್‌ಗಳ ಗುರಿ ನೀಡಿತು.
ಶುಭಾರಂಭ ನೀಡಿದ ಗಿಲ್-ಸಹಾ: 15 ಐಪಿಎಲ್ ಅವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟನ್ಸ್ ತಂಡವು ಉತ್ತಮ ಫಾರ್ಮ್‌ನಲ್ಲಿದ್ದು ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೇ ನೀಡಿತು. ಆರಂಭದಲ್ಲಿ ಕ್ರೀಸ್‌ಗಿಳಿದ ಶುಭಮನ್ ಗಿಲ್, ವೃದ್ಧಿಮಾನ್ ಸಹಾ ಅವರ ಜೊತೆಯಾಟ ಉತ್ತಮ ಶುಭಾರಂಭ ನೀಡಿತು. 45 ಎಸೆತಗಳಲ್ಲಿ 51 ರನ್ ಕಲೆಹಾಕಿತ್ತು.
ಈ ವೇಳೆ ಸಹಾ 23 ರನ್ (22 ಎಸೆತ, 4 ಬೌಂಡರಿ) ನಿರ್ಗಮಿಸಿದರೆ, ಗಿಲ್ 31 ರನ್ (28 ಎಸೆತ, 3 ಫೋರ್, 1 ಸಿಕ್ಸರ್) ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸಾಯಿ ಸುದರ್ಶನ್ 20 ರನ್ ಗಳಿಸಿದರು. ಫಾರ್ಮ್‌ನಲ್ಲಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 5 ಎಸೆತಗಳಲ್ಲಿ 3 ರನ್ ಗಳಿಸಿ ನಿರ್ಗಮಿಸಿದ್ದು, ಗುಜರಾಜ್‌ಗೆ ದೊಡ್ಡ ಆಘಾತ ನೀಡಿತು. ಈ ವೇಳೆಗೆ ತಂಡ 10.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 78 ರನ್ ಗಳಿಸಿತ್ತು.
ತೆವಾಟಿಯಾ – ಮಿಲ್ಲರ್ ಬ್ಯಾಟಿಂಗ್ ಅಬ್ಬರ:
5-6ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿದ ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿನವು ತಂಡದ ಗೆಲುವಿಕೆ ಕಾರಣವಾಯಿತು. ಮಿಲ್ಲರ್, ತೆವಾಟಿಯಾ ಕೇವಲ 40 ಎಸೆತಗಳಲ್ಲಿ 79 ರನ್ ಚಚ್ಚಿದರು. ಡೇವಿಡ್ ಮಿಲ್ಲರ್ 24 ಎಸೆತಗಳಲ್ಲಿ 39 (1 ಸಿಕ್ಸರ್, 4 ಬೌಂಡರಿ) ರನ್ ಗಳಿಸಿದರೆ, ರಾಹುಲ್ ತೆವಾಟಿಯಾ 25 ಎಸೆತಗಳಲ್ಲೇ 43 ರನ್ (2 ಸಿಕ್ಸರ್, ಬೌಂಡರಿ) ಪೇರಿಸಿ ತಂಡಕ್ಕೆ ರೋಚಕ ಜಯ ತಂಡುಕೊಟ್ಟರು.
ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ 42ನೇ ಪಂದ್ಯದಲ್ಲಿ ಲಕ್ನೋ ತಂಡವು 20 ರನ್‌ಗಳ ಗೆಲುವು ದಾಖಲಿಸಿತು.
154 ರನ್‌ಗಳ ಗುರಿಯನ್ನು ಪಡೆದ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ಗೆದ್ದು ಫೀಲ್ಡಿಂಗಿಳಿದ ಕಿಂಗ್ಸ್ ಪಂಜಾಬ್ ತಂಡವು ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 153 ರನ್ ಕಲೆಹಾಕಿ, ಎದುರಾಳಿ ಪಂಜಾಬ್ ತಂಡಕ್ಕೆ 154 ರನ್‌ಗಳ ಗುರಿ ನೀಡಿತ್ತು. ಇದನ್ನೂ ಓದಿ: ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್
ಪಂಜಾಬ್ ತಂಡವು ಮೊದಲ 3 ಓವರ್‌ಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತು. ಪಂಜಾಬ್ ಟೀಂ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 25 ರನ್‌ಗಳಿಸಿ, 4ನೇ ಓವರ್‌ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಇನ್ನೂ ಕಳೆದ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿ 2ನೇ ಸ್ಥಾನ ಗಳಿಸಿಕೊಂಡ ಶಿಖರ್ ಧವನ್ ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. 15 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ಔಟಾದರು.
3ನೇ ಕ್ರಮಾಂಕದಲ್ಲಿ ಬಂದ ಜಾನಿ ಬೈರ್‌ಸ್ಟೋವ್ 28 ಎಸೆತಗಳಲ್ಲಿ 32 ರನ್‌ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ಇದರಿಂದ ತಂಡದಲ್ಲಿ ಗೆಲುವಿನ ಭರವಸೆ ಚಿಗುರಿತ್ತು. 15 ಓವರ್‌ಗೆ ಪಂಜಾಬ್ ತಂಡವು 103 ರನ್‌ಗಳನ್ನು ಕಲೆಹಾಕಿತ್ತು. ಇನ್ನು 5 ಓವರ್‌ಗಳಲ್ಲಿ 51 ರನ್‌ಗಳ ಅಗತ್ಯವಿದ್ದಾಗಲೇ ಜಾನಿ ಬೈರ್‌ಸ್ಟೋವ್ ತಮ್ಮ ವಿಕೆಟ್ ಒಪ್ಪಿಸಿದರು. ಇದರಿಂದ ಪಂಜಾಬ್ ಗೆಲುವಿನ ಭರವಸೆ ಕಳೆದುಕೊಂಡಿತು. ಇದನ್ನೂ ಓದಿ: ಸಿಕ್ಸ್ ಸಿಡಿಸಿದಕ್ಕೆ ಕೋಪ – ಕ್ರೀಡಾ ಸ್ಫೂರ್ತಿ ಮರೆತ ಹರ್ಷಲ್ ಪಟೇಲ್
ನಂತರ ಬಂದ ಜೀತೇಶ್ ಶರ್ಮಾ 2 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 18 ರನ್, ಕಗಿಸೋ ರಬಾಡ 2 ರನ್, ರಾಹುಲ್ ಚಹಾರ್ 4 ರನ್ ಗಳಿಸಿದ್ದರು. ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿದ್ದ ಪಂಜಾಬ್ ತಂಡ 18 ಓವರ್ ಮುಗಿಯುವ ವೇಳೆಗೆ ತನ್ನ ಗೆಲುವಿನ ಸಂಪೂರ್ಣ ಭರವಸೆ ಕಳೆದುಕೊಂಡಿತು. ಕೊನೆಯ ಓವರ್ ವರೆಗೂ ಹೋರಾಡಿದ ರಿಷಿ ಧವನ್ 22 ಎಸೆತಗಳಲ್ಲಿ 21 ರನ್‌ಗಳನ್ನು ಸಿಡಿಸಿದರು.
ರಬಾಡಾ ಬೌಲಿಂಗ್ ಕಮಾಲ್: ಆರಂಭದಿಂದಲೇ ಲಕ್ನೋ ತಂಡವನ್ನು ಮಂಕಾಗಿಸುವಲ್ಲಿ ಪಂಜಾಬ್ ತಂಡ ಯಶಸ್ವಿಯಾಯಿತು. ನಾಯಕನ ನಿರೀಕ್ಷೆಗೆ ತಕ್ಕಂತೆ ಪ್ರಮುಖ ಬ್ಯಾಟರ್‌ಗಳನ್ನು ಕಡಿಮೆ ರನ್‌ಗಳಲ್ಲೇ ಔಟಾಗಿಸಿದರು. ದಕ್ಷಿಣ ಆಫ್ರಿಕಾದ ವೇಗಿಯ ಬೌಲರ್ ಕಗಿಸೋ ರಬಾಡ 4 ಓವರ್‌ಗಳಲ್ಲಿ 38 ರನ್ ನೀಡಿದರೂ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಉಳಿದಂತೆ ರಾಹುಲ್ ಚಹರ್ 2 ವಿಕೆಟ್ ಮತ್ತು ಸಂದೀಪ್ ಶರ್ಮಾ ಒಂದು ವಿಕೆಟ್ ಪಡೆದರು. ಬೌಲಿಂಗ್‌ನಲ್ಲಿ ಲಕ್ನೋ ಬ್ಯಾಟರ್‌ಗಳನ್ನು ಉರುಳಿಸಿದ ತಂಡ ಬ್ಯಾಟಿಂಗ್ ವೈಫಲ್ಯದಿಂದ ಸೋಲು ಕಂಡಿತು. ಇದನ್ನೂ ಓದಿ: 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್.ರಾಹುಲ್ 11 ಎಸೆತಗಳಲ್ಲಿ 6 ರನ್ ಕಲೆಹಾಕಿ ಔಟಾದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 13 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಹಿನ್ನಡೆ ಅನುಭವಿಸಿತು.
ಈ ವೇಳೆ ದಕ್ಷಿಣ ಆಫ್ರಿಕಾದ ಮತ್ತೋರ್ವ ಆಟಗಾರ ಕ್ವಿಂಟನ್ ಡಿಕಾಕ್ ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ಅವರ 85 ರನ್‌ಗಳ ಜೊತೆಯಾಟವು ತಂಡ 150 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಕ್ವಿಂಟನ್ ಡಿ ಕಾಕ್ ತಮ್ಮ ಜವಾಬ್ದಾರಿಯುತ ಆಟದಿಂದ 46 ರನ್ (37 ಎಸೆತ, 4 ಫೋರ್, 2 ಸಿಕ್ಸರ್) ಗಳಿಸಿದರೆ, ದೀಪಕ್ ಹೂಡಾ 34 ರನ್ ( 28 ಎಸೆತ, 1 ಫೋರ್, 2 ಸಿಕ್ಸರ್) ಗಳಿಸಿ ನಿರ್ಗಮಿಸಿದರು. ಉಳಿದಂತೆ ಕೃನಾಲ್ ಪಾಂಡ್ಯ 7 ರನ್, ಮಾರ್ಕಸ್ ಸ್ಟೊಯಿನಿಸ್ 1 ರನ್, ಆಯುಷ್ ಬದೋನಿ 4 ರನ್, ಜೇಸನ್ ಹೋಲ್ಡರ್ 11 ರನ್, ದುಷ್ಮಂತ ಚಮೀರ 17 ರನ್ ಕಲೆಹಾಕಿದರೆ, ಮೊಹ್ಸಿನ್ ಖಾನ್ ಅಜೇಯ 13 ರನ್ ಹಾಗೂ ಅವೇಶ್ ಖಾನ್ ಅಜೇಯ 2 ರನ್ ದಾಖಲಿಸಿದರು.
ಮುಂಬೈ: ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ರೋವ್ಮನ್ ಪೋವೆಲ್ ಹಾಗೂ ಡೇವಿಡ್ ವಾರ್ನರ್ ಅವರ ಬ್ಯಾಟಿಂಗ್ ಅಬ್ಬರದಿಂದ ಡೆಲ್ಲಿ ತಂಡವು ಗೆದ್ದು ಬೀಗಿತು.
ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದು, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 147 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿ 4 ವಿಕೆಟ್‍ಗಳ ಜಯವನ್ನು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 7.3 ಓವರ್‌ಗಳಲ್ಲಿ 35 ರನ್‌ಗಳಿಗೆ ತನ್ನ ಮೊದಲ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರನ್ ಫಿಂಚ್ 3 ರನ್, ವೆಂಕಟೇಶ್ ಐಯ್ಯರ್ 6 ರನ್, ಸುನೀಲ್ ನರೈನ್ ಗೋಲ್ಡನ್ ಡಕ್ ಔಟ್ ಮತ್ತು ಬಾಬಾ ಇಂದ್ರಜಿತ್ 6 ರನ್ ಗಳಿಸಿ ಔಟ್ ಆದರು.
ಹೀಗೆ ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೆ, ಮತ್ತೊಂದೆಡೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಂಡದ ನಾಯಕ ಶ್ರೇಯಸ್ ಐಯ್ಯರ್ 37 ಎಸೆತಗಳಲ್ಲಿ 42 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಭರವಸೆಯ ಆಟಗಾರ ಆಂಡ್ರೆ ರಸೆಲ್ ಶೂನ್ಯಕ್ಕೆ ನಿರ್ಗಮಿಸಿದ್ದು, ತಂಡಕ್ಕೆ ಮತ್ತಷ್ಟು ಆಘಾತ ತಂದೊಡ್ಡಿತು. ಟಿಮ್ ಸೌಥಿ ಹಾಗೂ ಹರ್ಷಿತ್ ರಾಣಾ ಇಬ್ಬರೂ ಇದೇ ಸಮಯಕ್ಕೆ ಡಕ್ ಔಟ್ ಆದರು. 6 ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ರಾಣಾ 34 ಎಸೆತಗಳಲ್ಲಿ 57 ರನ್ ಆಕರ್ಷಕ ಅರ್ಧಶತಕ ಗಳಿಸಿದರು. ನಿತೀಶ್ ರಾಣಾರ ಜವಾಬ್ದಾರಿಯುತ ಆಟವು ತಂಡದ ಮೊತ್ತವನ್ನು 140 ಗಡಿದಾಟಿಸುವಲ್ಲಿ ಯಶಸ್ವಿಯಾಯಿತು.
ಆರಂಭದಲ್ಲೇ ಟಾಸ್ ಗೆದ್ದು ಫೀಲ್ಡಿಂಗ್‌ಗೆ ಇಳಿದ ಡೆಲ್ಲಿ ತಂಡವು ಭರ್ಜರಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ತಂಡದ ಬೌಲರ್‌ಗಳು 150 ರನ್ ಗಡಿಯೊಳಗೆ ಕೆಕೆಆರ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಬೌಲಿಂಗ್‌ನಲ್ಲಿ ಮುಸ್ತಾಫಿಜೋರ್ ರೆಹಮಾನ್ 3, ಚೇತನ್ ಸಕರ್ಯ, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್‌ಗಳಿಸಿದರೆ, ಕುಲದೀಪ್ 3 ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದರು.
ಇನ್ನೂ ಬ್ಯಾಟಿಂಗ್‌ನಲ್ಲು ಅಬ್ಬರಿಸಿದ ಡೆಲ್ಲಿ ತಂಡ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಿದ್ದರೂ ರನ್‌ಗಳ ಕೊರತೆಯಾಗದಂತೆ ನೋಡಿಕೊಂಡಿತು. ಪೃಥ್ವಿಶಾ ಔಟಾದ ಬಳಿಕವು ಕೆಕೆಆರ್ ಬೌಲರ್‌ಗಳನ್ನು ಬೆಂಡೆತ್ತಿದ ಡೇವಿಡ್ ವಾರ್ನರ್ 26 ಎಸೆತಗಳಲ್ಲಿ 42 ರನ್‌ಗಳಿಸಿದರು. ಮಿಚೇಲ್ ಮಾರ್ಶ್ 13 ರನ್, ಲಲಿತ್ ಯಾದವ್ 22 ರನ್‌ಗಳನ್ನು ಪೇರಿಸುವ ಮೂಲಕ ರನ್ ಸ್ಥಿರತೆ ಕಾಯ್ದುಕೊಂಡರು. ಈ ನಡುವೆ ನಾಯಕ ರಿಷಬ್ ಪಂತ್ 2ನೇ ರನ್ನಿಗೆ ಔಟಾಗಿದ್ದು, ತಂಡಕ್ಕೆ ಪೆಟ್ಟು ನೀಡಿದಂತಿತ್ತು. ಇನ್ನೇನು ಡೆಲ್ಲಿ ತಂಡವು ಸೋಲುವುದು ಖಚಿತ ಎಂದೇ ಭಾವಿಸಲಾಗಿತ್ತು.
ಆದರೆ, ಡೆಲ್ಲಿ ತಂಡಕ್ಕೆ ಗೆಲುವಿನ ಕನಸು ಚಿಗುರಿಸಿದ ರೊವ್ಮನ್ ಪೋವೆಲ್ ತಮ್ಮ ಭರ್ಜರಿ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು. 7ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಪೋವೆಲ್ ಕೇವಲ 16 ಎಸೆತಗಳಲ್ಲಿ 33 ರನ್‌ಗಳ (1 ಫೋರ್, 3 ಸಿಕ್ಸರ್) ಸಿಡಿಸುವ ಮೂಲಕ ತಮ್ಮ ಡೆಲ್ಲಿ ತಂಡದ ಗೆಲುವಿಗೆ ಕಾರಣರಾದು. ಇದಕ್ಕೆ ಬ್ಯಾಟಿಂಗ್ ಸಾಥ್ ನೀಡಿದ ಶಾರ್ದೂಲ್ ಠಾಕೂರ್ ಸಹ 17 ಎಸೆತಗಳಲ್ಲಿ 24 ರನ್ ಪೇರಿಸಿ ಜವಾಬ್ದಾರಿ ಮೆರೆದರು. ಇದೆಲ್ಲರ ಫಲವಾಗಿ 147 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡವು 19ನೇ ಓವರ್‌ಗೆ 150 ರನ್‌ಗಳಿಸುವ ಮೂಲಕ ತನ್ನ ಗೆಲುವು ದಾಖಲಿಸಿತು.
ಪುಣೆ: ರಾಜಸ್ಥಾನ ರಾಯಲ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ಬಳಿಕ ರಾಜಸ್ಥಾನ ತಂಡದ ಆಲ್‍ರೌಂಡರ್ ರಿಯಾನ್ ಪರಾಗ್‍ಗೆ ಆರ್‌ಸಿಬಿ ಬೌಲರ್ ಹರ್ಷಲ್ ಪಟೇಲ್ ಶೇಕ್ ಹ್ಯಾಂಡ್ ಮಾಡದೆ ಕ್ರೀಡಾ ಸ್ಫೂರ್ತಿ ಮರೆತ ಪ್ರಸಂಗ ನಡೆದಿದೆ.
ನಿನ್ನೆ ನಡೆದ ಆರ್‌ಸಿಬಿ ಮತ್ತು ರಾಜಸ್ಥಾನ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರಾಜಸ್ಥಾನ ತಂಡಕ್ಕೆ ಆಲ್‍ರೌಂಡರ್ ರಿಯಾನ್ ಪರಾಗ್ ನೆರವಾದರು. ತಂಡದ ರನ್ ಹಿಗ್ಗಿಸಲು ಕೊನೆಯ ಓವರ್‌ನಲ್ಲಿ ಸ್ಫೋಟಕ ಆಟಕ್ಕೆ ಮುಂದಾದ ಪರಾಗ್, ಹರ್ಷಲ್ ಪಟೇಲ್ ಎಸೆದ ಕೊನೆಯ ಓವರ್‌ನಲ್ಲಿ 1 ಫೋರ್ ಮತ್ತು 2 ಸಿಕ್ಸ್ ಚಚ್ಚಿದರು. ಇದರಿಂದ ಕೋಪಗೊಂಡ ಹರ್ಷಲ್ ಪಟೇಲ್ ಡಗೌಟ್ ಕಡೆಗೆ ಸಾಗುತ್ತಿದ್ದ ಪರಾಗ್‍ರನ್ನು ಕೆಣಕಿದರು. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: ಕೊನೆಯಲ್ಲಿ ಪರಾಗ್ ಸ್ಫೋಟಕ ಆಟ – ಆರ್‌ಆರ್‌ಗೆ 29 ರನ್‍ಗಳ ಜಯ, ಮತ್ತೆ ಕೊಹ್ಲಿ ವಿಫಲ
ಆ ಬಳಿಕ ಹಿರಿಯ ಆಟಗಾರರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತಗೊಂಡಿತು. ಆ ನಂತರ ರಾಜಸ್ಥಾನ ತಂಡ ಆರ್‌ಸಿಬಿ ವಿರುದ್ಧ ಗೆದ್ದ ಬಳಿಕ ಆಟಗಾರರು ಪರಸ್ಪರ ಶೇಕ್ ಹ್ಯಾಂಡ್ ಮಾಡುತ್ತಿದ್ದರು. ಪರಾಗ್, ಹರ್ಷಲ್ ಪಟೇಲ್‍ಗೆ ಶೇಕ್ ಹ್ಯಾಂಡ್ ಮಾಡಲು ಮುಂದಾದಾಗ ಪಟೇಲ್ ನಿರಾಕರಿಸಿ ಕಿರಿಯ ಆಟಗಾರನ ಮುಂದೆ ಕ್ರೀಡಾ ಸ್ಫೂರ್ತಿ ಮರೆತರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಹರ್ಷಲ್ ಪಟೇಲ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್
ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆರ್‌ಸಿಬಿ ತಂಡ ರಾಜಸ್ಥಾನ ನೀಡಿದ 145 ರನ್‍ಗಳ ಅಲ್ಪಮೊತ್ತವನ್ನು ಚೇಸ್ ಮಾಡಲಾಗದೇ 29 ರನ್‍ಗಳ ಅಂತರದಿಂದ ಸೋಲು ಕಂಡಿತು. ಇತ್ತ ರಾಜಸ್ಥಾನ ತಂಡ ಆರ್‌ಸಿಬಿ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಮುಂಬೈ: ಕೊನೆಯಲ್ಲಿ ರಿಯಾನ್ ಪರಾಗ್ ಸ್ಫೋಟಕ ಆಟ ನಂತರ ಬೌಲರ್‍ಗಳು ಉತ್ತಮ ಪ್ರದರ್ಶನದಿಂದ ಆರ್‌ಸಿಬಿ ವಿರುದ್ಧ ರಾಜಸ್ಥಾನ 29 ರನ್‍ಗಳ ಜಯ ಸಾಧಿಸಿದೆ.
145 ರನ್‍ಗಳ ಸುಲಭ ಸವಾಲನ್ನು ಪಡೆದ ಆರ್‌ಸಿಬಿ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 19.3 ಓವರ್‍ಗಳಲ್ಲಿ 115 ರನ್‍ಗಳಿಗೆ ಆಲೌಟ್ ಆಯ್ತು.
ಆರ್‌ಸಿಬಿ ತಂಡಕ್ಕೂ ಆರಂಭದಲ್ಲೇ ಆಘಾತ ಕಾದಿತ್ತು. ಮೊದಲ ಓವರ್‍ನಲ್ಲೇ ಕೊಹ್ಲಿ 2 ಬೌಂಡರಿ ಬಾರಿಸಿದ ನಂತರ ಉತ್ತಮ ಫಾರ್ಮ್‍ನಲ್ಲಿದ್ದಾರೆ ಎಂದುಕೊಂಡಿತ್ತು. ಭರವಸೆ ಹುಸಿಯಾಗಿಸಿದ ಕೊಹ್ಲಿ 2ನೇ ಓವರ್ ನಲ್ಲೇ ತಮ್ಮ ವಿಕೆಟ್ ಒಪ್ಪಿಸಿ ಹೊರನಡೆದರು. ಇದನ್ನೂ ಓದಿ: 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್
ನಾಯಕ ಫಾಫ್ ಡು ಪ್ಲೆಸಿಸ್ 23(21 ಎಸೆತ), ರಜತ್ ಪತಿದರ್ 16 ರನ್, ಹಸರಂಗ 18 ರನ್ ಹೊಡೆದು ಔಟಾದರು. ರಾಜಸ್ಥಾನ ಪರ ಕುಲದೀಪ್ ಸೆನ್ 4, ಅಶ್ವಿನ್ 3, ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರು.
ಪುಣೆಯ ಎಂಸಿಎ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ರಾಜಾಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲೇ ಕಷ್ಟ ಎದುರಿಸಿತು. ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ನಾಯಕನ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಪ್ರದರ್ಶಿಸಿದ ಬೌಲರ್‌ಗಳು ರಾಜಸ್ಥಾನ್ ರಾಯಲ್ಸ್ ತಂಡವನ್ನು 144 ರನ್‍ಗಳಿಗೆ ಕಟ್ಟಿಹಾಕಿದರು.
ರಾಜಸ್ಥಾನ್ ಪರ ರಿಯಾನ್ ಪರಾಗ್ 29 ಎಸೆತಗಳಲ್ಲಿ 56 ರನ್‍ಗಳಿಸಿ ತಂಡಕ್ಕೆ ಆಸರೆಯಾದರು. ಜವಾಬ್ದಾರಿ ಆಟ ಪ್ರದರ್ಶಿಸುತ್ತಿದ್ದ ಸಂಜೂ ಸ್ಯಾಮ್ಸನ್(27) ರಿವರ್ಸ್ ಸ್ವೀಪ್ ಮೂಲಕ ಫೋರ್ ಹೊಡೆಯುವ ಪ್ರಯತ್ನದಿಂದ ಕ್ಲೀನ್ ಬೌಲ್ಡ್ ಆದರು.
ರಾಜಸ್ಥಾನ್‍ಗೆ ಪರಾಗ್ ಆಸರೆ: ಆರ್‌ಸಿಬಿ ಬೌಲಿಂಗ್ ದಾಳಿಗೆ ಆರಂಭದಲ್ಲೇ ತತ್ತರಿಸಿದ ರಾಜಸ್ಥಾನ್ ರಾಯಲ್ಸ್‍ಗೆ ರಿಯಾನ್ ಪರಾಗ್ 56 ರನ್(29 ಎಸೆತ, 3 ಬೌಂಡರಿ, 4 ಸಿಕ್ಸರ್) ಗಳಿಸಿ ಆಸರೆಯಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಉತ್ಸಾಹ ಕಳೆದು ಕೊಳ್ಳದೇ ಬಿರುಸಿನ ಆಟವಾಡಿದ ರಿಯಾನ್ ಪರಾಗ್ ಆಕರ್ಷಕ ಅರ್ಧಶತಕ ಬಾರಿಸಿದರು. ಅಲ್ಲದೇ ತಂಡದ ಮೊತ್ತವನ್ನು 140ರ ಗಡಿದಾಟಿಸುವಲ್ಲಿ ಯಶಸ್ವಿಯಾದರು.
ಆರ್‍ಆರ್ ಬ್ಯಾಟಿಂಗ್ ವೈಫಲ್ಯ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್‍ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಓಪನರ್‍ಗಳಾಗಿ ಕಣಕ್ಕಿಳಿದ ಜಾಸ್ ಬಟ್ಲರ್ 8 ರನ್ ಹಾಗೂ ದೇವದತ್ ಪಡಿಕ್ಕಲ್ 7 ರನ್ ಹೊಡೆದು ಔಟಾದರು. ನಂತರ ಬ್ಯಾಟಿಂಗ್‍ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಆರ್.ಅಶ್ವಿನ್ ಬಿರುಸಿನ ಆಟವಾಡಿ 17 ರನ್ ಹೊಡೆದು ಹೊರನಡೆದರು. ನಾಯಕ ಸಂಜು ಸ್ಯಾಮ್ಸನ್ 27 ರನ್, ಮಧ್ಯಮ ಕ್ರಮಾಂಕದಲ್ಲಿ ಬಂದ ಡ್ಯಾರೆಲ್ ಮಿಚೆಲ್ 16 ರನ್ ಹೊಡೆದು ಔಟಾದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೌಲರ್‍ಗಳು ಉತ್ತಮ ಪ್ರದರ್ಶನ ನೀಡಿದರು. ಜಾಶ್ ಹೇಜಲ್‍ವುಡ್ 2 ಪ್ರಮುಖ ವಿಕೆಟ್ ಪಡೆದು ಮಿಂಚಿದರೆ ಇವರಿಗೆ ಉತ್ತಮ ಸಾಥ್ ನೀಡಿದ ವನಿಂದು ಹಸರಂಗ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು.