Tag: IPL

  • ಹೈದ್ರಾಬಾದ್ ಹಾರಾಟಕ್ಕೆ ಬ್ರೇಕ್ ಹಾಕಿದ ‘ಗ್ರೀನ್‌ಬಾಯ್ಸ್’- RCBಗೆ 67 ರನ್‌ಗಳ ಭರ್ಜರಿ ಜಯ

    ಹೈದ್ರಾಬಾದ್ ಹಾರಾಟಕ್ಕೆ ಬ್ರೇಕ್ ಹಾಕಿದ ‘ಗ್ರೀನ್‌ಬಾಯ್ಸ್’- RCBಗೆ 67 ರನ್‌ಗಳ ಭರ್ಜರಿ ಜಯ

    ಮುಂಬೈ: RCB ನಾಯಕ ಫಾಫ್ ಡು ಪ್ಲೆಸಿಸ್, ರಜತ್ ಪಟಿದಾರ್ ಬ್ಯಾಟಿಂಗ್ ಅಬ್ಬರ ಹಾಗೂ ವನಿಂದು ಜೋಶ್, ಹ್ಯಾಜಲ್‌ವುಡ್ ಅವರ ಬೌಲಿಂಗ್ ಕಮಾಲ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 67 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

    ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ, ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಭರ್ಜರಿ 192 ರನ್ ಚಚ್ಚಿ, ಹೈದರಾಬಾದ್ ತಂಡಕ್ಕೆ 193 ರನ್‌ಗಳ ಗುರಿ ನೀಡಿತ್ತು. ಈ ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 125 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    IPL 2022 RCB VS SRH 9

    ಕಳೆದ ಬಾರಿ 67 ರನ್‌ಗಳಿಸಿ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿ 2ನೇ ಮುಖಾಮುಖಿಯಲ್ಲಿ ರನ್‌ಗಳಿಂದ ಹೈದರಾಬಾದ್ ತಂಡವನ್ನು ಮಣಿಸಿ ತನ್ನ ಸೇಡು ತೀರಿಸಿಕೊಂಡಿದೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

    ಆರ್‌ಸಿಬಿ ನೀಡಿದ 193 ರನ್‌ಗಳ ಗುರಿ ಬೆನ್ನತ್ತಿದ ಎಸ್‌ಆರ್‌ಎಚ್ ತಂಡವು ಮೊದಲ ಓವರ್‌ನಲ್ಲೇ 1 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡು, ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

    IPL 2022 RCB VS SRH 9

    ನಂತರ ಬ್ಯಾಟಿಂಗ್ ನಡೆಸಿದ ಏಡೆನ್ ಮಾರ್ಕ್ರಾಮ್ ಹಾಗೂ ರಾಹುಲ್ ತ್ರಿಪಾಟಿ ಅವರ ಜೊತೆಯಾಟವು 8 ಓವರ್‌ಗಳಲ್ಲಿ 51 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತು. ಏಡನ್ ಮರ್ಕ್ರಾಮ್ 27 ಎಸೆತಗಳಲ್ಲಿ 1 ಸಿಕ್ಸ್, 1 ಬೌಂಡರಿ ಸೇರಿ 21 ರನ್‌ಗಳಿಸಿ ನಿರ್ಗಮಿಸಿದರು. ಇದನ್ನೂ ಓದಿ: ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್‌

    ಇದಾದ ಬಳಿಕ ಆರ್‌ಸಿಬಿ ಬೌಲರ್‌ಗಳ ವಿರುದ್ಧ ದಾಳಿ ನಡೆಸಿದ ರಾಹುಲ್ ತ್ರಿಪಾಟಿ ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ 36 ಎಸೆತಗಳಲ್ಲಿ 58 ರನ್ (6 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರುವಂತೆ ಮಾಡಿದ್ದರು. ಇವರ ಆಟಕ್ಕೆ ಬ್ರೇಕ್ ಹಾಕಿದ ಶಹಬಾಜ್ ಅಹ್ಮದ್ 37ನೇ ಎಸೆತದಲ್ಲಿ ತ್ರಿಪಾಟಿ ವಿಕೆಟ್ ಉರುಳಿಸಿದರು. ಇದರಿಂದ ಎಸ್‌ಆರ್‌ಎಚ್ ಬಹುತೇಕ ತನ್ನ ಗೆಲುವಿನ ಖಚಿತತೆಯನ್ನು ಕಳೆದುಕೊಂಡಿತು.

    IPL 2022 RCB VS SRH 14

    ನಂತರ ಬಂದ ಬ್ಯಾಟರ್‌ಗಳಲ್ಲಿ ನಿಕೋಲಸ್ ಪೂರನ್ 14 ಎಸೆತಗಳಲ್ಲಿ 19 ರನ್, ಜಗದೀಶ್ ಸುಚಿತ್ 2, ಶಶಾಂಕ್ ಸಿಂಗ್ 8 ರನ್, ಭುವನೇಶ್ವರ್ ಕುಮಾರ್ 8, ಫಜಲ್ಹಕ್ ಫಾರೂಕಿ 2 ಗಳಿಸಿದರೆ, ಉಳಿದವರು ಶೂನ್ಯಕ್ಕೆ ನಿರ್ಗಮಿಸಿದರು. ಹೈದರಾಬಾದ್ ತಂಡದ ಪರ ಜಗದೀಶ್ ಸುಚಿತ್ 4 ಓವರ್‌ಗಳಲ್ಲಿ 2 ವಿಕೆಟ್, ಕಿರಿತ್ ತ್ಯಾಗಿ 1 ವಿಕೆಟ್ ಪಡೆದರು.

    ವನಿಂದು, ಜೋಶ್ ಬೌಲಿಂಗ್ ಕಮಾಲ್: ಆರ್‌ಸಿಬಿ ತಂಡದ ಪರ ವನಿಂದು ಹಸರಂಗ ಉತ್ತಮ ಬೌಲಿಂಗ್‌ ಮೂಲಕ ಕಮಾಲ್ ಮಾಡಿದರು. ವನಿಂದು 4 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ 5 ವಿಕೆಟ್ ಗಳನ್ನು ಕಬಳಿಸಿದರೆ, ಜೋಶ್ ಹ್ಯಾಜಲ್‌ವುಡ್ ಸಹ 3 ಓವರ್‌ಗಳಲ್ಲಿ ಕೇವಲ 10 ರನ್‌ಗಳನ್ನು ನೀಡಿ 3 ವಿಕೆಟ್ ಉರುಳಿಸಿದರು.

    IPL 2022 RCB VS SRH 14

    RCBಗೆ ಡು ಪ್ಲೆಸಿಸ್‌ ಆಸರೆ:  ಟಾಸ್‌ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡರು. ವಿರಾಟ್ ಕೊಹ್ಲಿ ಒಂದೇ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದ ಬಳಿಕ ಆರಂಭಿಕ ಆಘಾತ ಎದುರಾಯಿತು. ಈ ಪೈಕಿ ವಿರಾಟ್ ಕೊಹ್ಲಿ ಪಂದ್ಯದ ಮೊದಲನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸುವ ಮೂಲಕ ಗೋಲ್ಡನ್ ಡಕ್ ಔಟ್ ಆದರು. ಬಳಿಕ ಫಾಫ್ ಡು ಪ್ಲೆಸಿಸ್ ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು.

    IPL 2022 RCB VS SRH 2

    ಹೈದರಾಬಾದ್ ಬೌಲರ್‌ಗಳನ್ನು ಬೆಂಡೆತ್ತಿದ ನಾಯಕ ಫಾಫ್ ಡು ಪ್ಲೆಸಿಸ್ 50 ಎಸೆತಗಳಲ್ಲಿ 73 ರನ್ (8 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗುಳಿದರು. ಇದಕ್ಕೆ ಜೊತೆಯಾಗಿ ನಿಂತ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಪಟಿದಾರ್ 38 ಎಸೆತಗಳಲ್ಲಿ 48 ರನ್ (4 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಡುಪ್ಲೆಸಿ ಹಾಗೂ ಪಟಿದಾರ್ ಅವರ ಇಬ್ಬರ ಜೊತೆಯಾಟವು 73 ಎಸೆತಗಳಲ್ಲಿ ಭರ್ಜರಿ 105 ರನ್ (ಫಾಫ್ ಡು ಪ್ಲೆಸಿಸ್ ಹಾಗೂ ಪಡಿತರ್ ಜೋಡಿ)ಗಳನ್ನು ಪೇರಿಸಿತು. 100 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    IPL 2022 RCB VS SRH 14

    ನಂತರ ಬಂದ ಸಿಕ್ಸರ್ ವೀರ ಖ್ಯಾತಿಯ ಗ್ಲೆನ್ ಮ್ಯಾಕ್ಸ್‌ವೆಲ್‌ 24 ಎಸೆತಗಳಲ್ಲಿ 33 ರನ್ ಬಾರಿಸಿದರು ಹಾಗೂ ಅಂತಿಮ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ ಅಜೇಯ 30 ರನ್ (1 ಬೌಂಡರಿ, 4 ಸಿಕ್ಸರ್) ಬಾರಿಸಿ ಆರ್‌ಸಿಬಿಗೆ ನೆರವಾದರು ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಗ್ಲೇನ್ ಮ್ಯಾಕ್ಸ್‌ವೆಲ್‌ 2 ವಿಕೆಟ್, ಶಹಬಾಜ್ ಅಹ್ಮದ್ 1 ವಿಕೆಟ್ ಗಳಿಸಿದರು.

    ರನ್ ಏರಿದ್ದು ಹೇಗೆ?
    41 ಎಸೆತ 50 ರನ್
    69 ಎಸೆತ 100 ರನ್
    104 ಎಸೆತ 150 ರನ್
    120 ಎಸೆತ 192 ರನ್

  • ವಿಶ್ವ ತಾಯಂದಿರ ದಿನಕ್ಕೆ ಶುಭಕೋರಿದ ಟಾಪ್ ಕ್ರಿಕೆಟರ್ಸ್- ನಿಮ್ಮ ಶಕ್ತಿಗೆ ಸಾಟಿಯಿಲ್ಲವೆಂದ ಕೊಹ್ಲಿ

    ವಿಶ್ವ ತಾಯಂದಿರ ದಿನಕ್ಕೆ ಶುಭಕೋರಿದ ಟಾಪ್ ಕ್ರಿಕೆಟರ್ಸ್- ನಿಮ್ಮ ಶಕ್ತಿಗೆ ಸಾಟಿಯಿಲ್ಲವೆಂದ ಕೊಹ್ಲಿ

    ಮುಂಬೈ: ಪ್ರತಿಯೊಬ್ಬರ ಜೀವನಕ್ಕೂ ಅಮ್ಮನೇ ಪ್ರಪಂಚ. ಆಕೆಯ ತ್ಯಾಗ, ಪರಿಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಆದರೆ ಅಮ್ಮನಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೂ ಒಂದು ದಿನವಿದೆ. ಅದಕ್ಕಾಗಿಯೇ ಪ್ರತಿ ವರ್ಷವು ಮೇ ತಿಂಗಳ 2ನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 8 ರಂದು ಆಚರಿಸಲಾಗುತ್ತಿದೆ.

    SACHIN

    ಈ ದಿನದಂದು ಪ್ರತಿಯೊಬ್ಬರು ತಮ್ಮ ಅಮ್ಮನಿಗಾಗಿ ವಿಶೇಷ ಉಡುಗೊರೆಗಳನ್ನು ನೀಡಿ, ಶುಭಾಶಯ ಕೋರುತ್ತಾರೆ. ಇಡೀ ಭಾರತವೇ ತಾಯಂದಿರ ದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಪ್ರಮುಖ ಕ್ರಿಕೆಟಿಗರು ಅಮ್ಮನನ್ನು ನೆನೆದು ಶುಭಕೋರಿದ್ದಾರೆ. ಭಾರತೀಯ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮಾಜಿ ನಾಯಕ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ಮೊದಲಾದವರು ತಮ್ಮ ತಾಯಂದಿರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ.  ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಸ್ಫೋಟಕ ಆಟ – ಹೌ ಇಸ್ ದಿ ಜೋಶ್ ಎಂದ ವಾರ್ನರ್

    RCB ಆರಂಭಿಕ ಆಟಗಾರರೂ ಆಗಿರುವ ವಿರಾಟ್‌ಕೊಹ್ಲಿ ಟ್ವಿಟ್ಟರ್‌ನಲ್ಲಿ, ಎಲ್ಲಾ ತಾಯಂದಿರಿಗೂ ಬಹಳಷ್ಟು ಪ್ರೀತಿ ಮತ್ತು ಸಂತೋಷ ತರಲಿ. ನಿಮ್ಮ ಶಕ್ತಿಗೆ ಸಾಟಿಯಿಲ್ಲ. ನಿಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು ಎಂದು ಟ್ವಿಟ್ಟರ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಜಮಾನ ಪ್ರೀಮಿಯರ್ ಲೀಗ್ ಶುರು: ಡಾ.ವಿಷ್ಣು ಹೆಸರಿನಲ್ಲಿ ಅಭಿಮಾನಿಗಳ ಅಭಿಮಾನ

    ಸಚಿನ್ ತೆಂಡೂಲ್ಕರ್ ಸಹ ತಮ್ಮ ದತ್ತು ಪಡೆದ ಬೆಕ್ಕಿನೊಂದಿಗೆ ಅಮ್ಮನ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಮಗೆ ಜಗತ್ತಿನಲ್ಲಿ ಸಾವಿರ ಚಿಂತೆಗಳಿರಬಹುದು. ಆದರೆ ನಾವು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿದ್ದೇವೆಯೇ ಎಂಬುದೇ ನಮ್ಮ ತಾಯಿಯ ಮುಖ್ಯಚಿಂತೆಯಾಗಿ ಉಳಿದಿರುತ್ತದೆ. ಅಂತಹ ತಾಯಿಯ ಪ್ರೀತಿ. ನಮ್ಮ ದತ್ತು ಪಡೆದ ಬೆಕ್ಕಿನೊಂದಿಗೆ ನನ್ನ ಆಕೆ ಇಲ್ಲಿದ್ದಾರೆ ಎಂದು ಬರೆದಿದ್ದಾರೆ.

    ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ತಾಯಂದಿರ ದಿನಕ್ಕೆ ಶುಭಕೋರಿ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ನಾಯಕ ಕೇನ್ ವಿಲಿಯಮ್ಸನ್, ಗ್ಲೆನ್‌ಫಿಲಿಪ್ಸ್, ಶಶಾಂಕ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಮೊದಲಾದವರು ತಾಯಂದಿರ ದಿನದ ಶುಭಾಶಯ ಕೋರಿದ್ದಾರೆ. ಆರ್‌ಸಿಬಿಯ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಶೇಷ ದಿನದಂದು ಎಲ್ಲಾ ತಾಯಿಯರಿಗೆ ಶುಭ ಹಾರೈಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

    ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ರಶೀದ್ ಖಾನ್ ತಮ್ಮ ದಿವಂಗತ ತಾಯಿಗಾಗಿ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. ಪ್ರಿಯ ಅಮ್ಮ, ನೀವು ಹಿಂತಿರುಗಿ ಸ್ವಲ್ಪ ಸಮಯ ಇರಬಹುದೇ, ನಾನು ನಿಮ್ಮ ಧ್ವನಿಯನ್ನು ಕೇಳಲು ಮತ್ತು ನೀವು ನಗುವುದನ್ನು ನೋಡಲು ಬಯಸುತ್ತೇನೆ. ನಾನು ನಿನ್ನನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ಬಯಸುತ್ತೇನೆ. ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುವುದಿಲ್ಲ. ಆದರೆ, ನಿನ್ನನ್ನು ನೆನಪಿಸಿಕೊಳ್ಳುತ್ತೇನೆ. ಪ್ರತಿದಿನ ನೆನಪಿಸಿಕೊಳ್ಳುತ್ತೇನೆ. ಆದರೆ ನಿನ್ನನ್ನು ಕಳೆದುಕೊಂಡಿರುವುದು ಎಂದಿಗೂ ದೂರವಾಗದ ನೋವು. ಅಮ್ಮಂದಿರ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದು, ತಮ್ಮ ತಾಯಿಯ ಸಮಾಧಿ ಬಳಿ ಪ್ರಾರ್ಥಿಸುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

  • ಹೈದರಾಬಾದ್ ವಿರುದ್ಧ ಸ್ಫೋಟಕ ಆಟ – ಹೌ ಇಸ್ ದಿ ಜೋಶ್ ಎಂದ ವಾರ್ನರ್

    ಹೈದರಾಬಾದ್ ವಿರುದ್ಧ ಸ್ಫೋಟಕ ಆಟ – ಹೌ ಇಸ್ ದಿ ಜೋಶ್ ಎಂದ ವಾರ್ನರ್

    ಮುಂಬೈ: ಎಡಗೈ ಬ್ಯಾಟ್ಸ್‌ಮ್ಯಾನ್ ಡೇವಿಡ್ ವಾರ್ನರ್ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಬಳಿಕ ವಾರ್ನರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಂಭ್ರಮಾಚರಣೆಯನ್ನು ಮಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ಬಾಲಿವುಡ್‌ನ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದಲ್ಲಿರುವ ಫೇಮಸ್ ಡೈಲಾಗ್ ಹೌ ಇಸ್ ದಿ ಜೋಶ್ ಎಂಬಂತೆ ವಾರ್ನರ್ ತಮ್ಮ ತಂಡದ ಸದಸ್ಯರನ್ನು ಉದ್ದೇಶಿಸಿ ಫುಲ್ ಜೋಶ್ ತೋರಿಸಿದ್ದಾರೆ. ಈ ವೀಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಬರೆದ ಡೇವಿಡ್ ವಾರ್ನರ್

    ವೀಡಿಯೋದಲ್ಲಿ ವಾರ್ನರ್ ತಮ್ಮ ತಂಡದ ಸದಸ್ಯರನ್ನು ಉದ್ದೇಶಿಸಿ ಹೌ ಇಸ್ ದಿ ಜೋಶ್ ಎನ್ನುತ್ತಾರೆ. ಇದಕ್ಕೆ ತಂಡದ ಇತರ ಸದಸ್ಯರು ಅನುಸರಿಸಿ, ಹೈ ಸರ್ ಎಂದು ಕೂಗಿದ್ದಾರೆ.

    ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಡೆಲ್ಲಿ ತಂಡದ ಡೇವಿಡ್ ವಾರ್ನರ್ ಟಿ-20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

    ವಾರ್ನರ್ ತಮ್ಮ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ, 3 ಸಿಕ್ಸ್‌ಗಳನ್ನು ಒಳಗೊಂಡಂತೆ 92 ರನ್‌ಗಳನ್ನು ಗಳಿಸುವ ಮೂಲಕ ಟಿ-20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಅರ್ಧಶತಕಗಳನ್ನು ಗಳಿಸಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

  • ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

    ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

    ಮುಂಬೈ: ಭಾನುವಾರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪರಿಸರ ಜಾಗೃತಿಗಾಗಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

    ಪ್ರತಿ ವರ್ಷ ಆರ್‌ಸಿಬಿ ತಂಡ ಟೂರ್ನಿಯ 1 ಪಂದ್ಯದಲ್ಲಿ ಹಸಿರು ಜೆರ್ಸಿತೊಟ್ಟು ಪರಿಸರ ರಕ್ಷಣೆ ಕುರಿತಾಗಿ ವಿಶೇಷ ಅರಿವನ್ನು ಮೂಡಿಸುತ್ತಿತ್ತು. ಈ ಬಾರಿಯೂ ಕೂಡ ಹಸಿರು ಬಣ್ಣದ ಜೆರ್ಸಿ ತೊಟ್ಟು ನಾಳೆ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡ ಆಡಳಿದೆ. ಈಗಾಗಲೇ ಆಟಗಾರರು ಹಸಿರು ಬಣ್ಣದ ಜೆರ್ಸಿ ತೊಟ್ಟು ಕಾಣಿಸಿಕೊಳ್ಳುವ ವೀಡಿಯೋ ಆರ್‌ಸಿಬಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್‌

    ಕಳೆದ ವರ್ಷ ಆರ್‌ಸಿಬಿ ತಂಡ ಹಸಿರು ಬಣ್ಣದ ಜೆರ್ಸಿಯ ಬದಲು ಪಿಪಿಇ ಕಿಟ್‍ನಂಥ ತಿಳಿ ನೀಲಿ ಬಣ್ಣದ ಜೆರ್ಸಿಯೊಂದಿಗೆ ಕೆಕೆಆರ್ ವಿರುದ್ಧ ಕಣ್ಣಕ್ಕಿಳಿದು ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಿತ್ತು. ಇದಲ್ಲದೆ ಪಂದ್ಯದ ಬಳಿಕ ಎಲ್ಲಾ ಆಟಗಾರರ ಜೆರ್ಸಿಯನ್ನು ಹರಾಜು ಹಾಕಲಾಗಿತ್ತು. ಇದರಿಂದ ಬಂದ ಹಣವನ್ನು ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಆರ್‌ಸಿಬಿ ಫ್ರಾಂಚೈಸ್ ಮುಂದಾಗಿತ್ತು. ಇದನ್ನೂ ಓದಿ: ಐಪಿಎಲ್‍ನಲ್ಲಿ ವೇಗಿಗಳ ಮಿಂಚಿನ ಎಸೆತಗಳ ದಾಖಲೆ

    ಇದೀಗ 15ನೇ ಆವೃತ್ತಿ ಐಪಿಎಲ್‍ನಲ್ಲಿ ಸೋಲು ಗೆಲುವಿನೊಂದಿಗೆ ಮುನ್ನುಗ್ಗಿ ಆರ್‌ಸಿಬಿ ತಂಡ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈಗಾಗಲೇ 11 ಪಂದ್ಯಗಳಿಂದ 6 ಜಯ 5 ಸೋಲು ಕಂಡು ಒಟ್ಟು 12 ಅಂಕ ಸಂಪಾದಿಸಿದ್ದು, ಇನ್ನೂಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್‍ಗೆ ಏರುವ ನಿರೀಕ್ಷೆಯಲ್ಲಿದೆ.

  • ಐಪಿಎಲ್‍ನಲ್ಲಿ ವೇಗಿಗಳ ಮಿಂಚಿನ ಎಸೆತಗಳ ದಾಖಲೆ

    ಐಪಿಎಲ್‍ನಲ್ಲಿ ವೇಗಿಗಳ ಮಿಂಚಿನ ಎಸೆತಗಳ ದಾಖಲೆ

    ಮುಂಬೈ: 15ನೇ ಆವೃತ್ತಿ ಐಪಿಎಲ್‍ನಲ್ಲಿ ಹೈದರಾಬಾದ್ ತಂಡದ ವೇಗದ ಬೌಲರ್ ಉಮ್ರಾನ್ ಮಲಿಕ್ ತಮ್ಮ ವೇಗದ ಎಸೆತಗಳ ಮೂಲಕ ಎದುರಾಳಿ ತಂಡದ ಆಟಗಾರರಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ.

    ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ 2022ರ ಐಪಿಎಲ್‍ನಲ್ಲಿ ವೇಗದ ಎಸೆತ ಎಸೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ಗಂಟೆಗೆ 155.60 ಮತ್ತು 154.80 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಸದ್ದು ಮಾಡಿದ್ದರು. ಇದನ್ನೂ ಓದಿ: ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್

    15ನೇ ಆವೃತ್ತಿ ಐಪಿಎಲ್‍ನಲ್ಲಿ ಉಮ್ರಾನ್ ಮಲಿಕ್ 10 ಪಂದ್ಯಗಳಿಂದ 15 ವಿಕೆಟ್ ಕಿತ್ತು ಉದಯೋನ್ಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. 25 ರನ್ ನೀಡಿ 5 ವಿಕೆಟ್ ಕಿತ್ತಿರುವುದು ಮಲಿಕ್ ಬೆಸ್ಟ್ ಬೌಲಿಂಗ್ ಆಗಿದೆ. ಈ ಮೂಲಕ 15ನೇ ಆವೃತ್ತಿ ಐಪಿಎಲ್‍ನಲ್ಲಿ ಟೀಂ ಇಂಡಿಯಾಗೆ ವೇಗದ ಬೌಲರ್ ಒಬ್ಬನ ಪರಿಚಯವಾಗಿದೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಐಪಿಎಲ್‍ನ ಇತಿಹಾಸವನ್ನು ಗಮನಿಸಿದಾಗ ರಾಜಸ್ಥಾನ ತಂಡದ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಶಾನ್ ಟೈಟ್ ಗಂಟೆಗೆ 157.71 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಬರೆದಿದ್ದು, ಆ ಬಳಿಕ ಇದೀಗ ಮಲಿಕ್ ಗಂಟೆಗೆ 157 ಕಿ.ಮೀ. ವೇಗದಲ್ಲಿ ಮಿಂಚಿನ ಬೌಲಿಂಗ್ ಮಾಡಿ ಗಮನಸೆಳೆದಿದ್ದಾರೆ. ಇವರಿಬ್ಬರ ಬಳಿಕ ಆನ್ರಿಚ್ ನಾರ್ಟ್ಜೆ ಗಂಟೆಗೆ 156.22 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ತಮ್ಮ ಉರಿ ಚೆಂಡಿನ ಮೂಲಕ ಬ್ಯಾಟ್ಸ್‌ಮ್ಯಾನ್‌ಗಳನ್ನು ಕಕ್ಕಾಬಿಕ್ಕಿಯಾಗಿಸಿದ್ದರು.

  • ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್

    ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್

    ಮುಂಬೈ: ಹೈದರಾಬಾದ್ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಬಳಿಕ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ನೆಟ್ಟಿಗರಗೆ ಆಹಾರವಾಗಿದ್ದಾರೆ.

    ಹೌದು ನಿನ್ನೆ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿಯ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿದರು. ಹೈದರಾಬಾದ್ ಬೌಲರ್‌ಗಳನ್ನು ಹೈರಾಣಾಗಿಸಿದ ವಾರ್ನರ್ ತಮ್ಮ ಈ ಹಿಂದಿನ ಫ್ರಾಂಚೈಸ್ ವಿರುದ್ಧ ಸೇಡಿಗೆ ಬಿದ್ದಂತೆ ಬ್ಯಾಟಿಂಗ್ ನಡೆಸಿದರು. ಇದನ್ನೂ ಓದಿ: ವಾರ್ನರ್, ಪೊವೆಲ್ ಪರಾಕ್ರಮ – ಹೈದರಾಬಾದ್ ಹೈರಾಣ

    ವಾರ್ನರ್ ಬೌಂಡರಿ, ಸಿಕ್ಸರ್ ಸಿಡಿಸುತ್ತ ಹಾರಿ, ಚೀರಿ ಅಜೇಯ 92 ರನ್ (58 ಎಸೆತ, 12 ಬೌಂಡರಿ, 3 ಸಿಕ್ಸ್) ಚಚ್ಚಿ ಆರಂಭದಿಂದ ಕೊನೆಯ ಎಸೆತದವರೆಗೆ ಕಾಡಿದರು. ಈ ಪ್ರದರ್ಶನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    14ನೇ ಆವೃತ್ತಿ ಐಪಿಎಲ್‍ನಲ್ಲಿ ವಾರ್ನರ್ ಕಳಪೆ ಪ್ರದರ್ಶನ ತೋರಿದ ಬಳಿಕ ನಾಯಕತ್ವದಿಂದ ಕೆಳಗಿಳಿಸಿ ಕೆಲ ಪಂದ್ಯಗಳಿಂದ ವಾರ್ನರ್‌ಗೆ ಕೊಕ್ ನೀಡಲಾಗಿತ್ತು. ಆ ಬಳಿಕ 15ನೇ ಆವೃತ್ತಿ ಐಪಿಎಲ್ ಮೆಗಾ ಹರಾಜಿನಲ್ಲಿ ಹೈದರಾಬಾದ್ ತಂಡ ವಾರ್ನರ್‌ರನ್ನು ರಿಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟು ಕೊಟ್ಟಿತು. ಹರಾಜಿನಲ್ಲಿ ಡೆಲ್ಲಿ ತಂಡ ವಾರ್ನರ್‌ರನ್ನು ಖರೀದಿಸಿತು. ಇದೀಗ ವಾರ್ನರ್ ಡೆಲ್ಲಿ ಪರ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ: 10 ವಿಕೆಟ್ ಕಿತ್ತು ಇತಿಹಾಸ ಬರೆದ ಪಂದ್ಯದ ಜೆರ್ಸಿಯನ್ನು ಹರಾಜಿಗಿಟ್ಟ ಅಜಾಜ್ ಪಟೇಲ್

    ಕರ್ಮ ರೀಟರ್ನ್ ಹೊಡೆದಿದೆ. ಹೈದರಾಬಾದ್ ತಂಡ ವಾರ್ನರ್‌ಗೆ ಮಾಡಿದ ಅವಮಾನಕ್ಕೆ ಇದೀಗ ಸರಿಯಾದ ಶಿಕ್ಷೆ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿವಿಧ ಕಾಮೆಂಟ್‍ಗಳ ಮೂಲಕ ಹೈದರಾಬಾದ್ ತಂಡದ ಕಾಲೆಳೆದಿದ್ದಾರೆ.

  • ವಾರ್ನರ್, ಪೊವೆಲ್ ಪರಾಕ್ರಮ – ಹೈದರಾಬಾದ್ ಹೈರಾಣ

    ವಾರ್ನರ್, ಪೊವೆಲ್ ಪರಾಕ್ರಮ – ಹೈದರಾಬಾದ್ ಹೈರಾಣ

    ಮುಂಬೈ: ಬ್ಯಾಟಿಂಗ್‍ನಲ್ಲಿ ಡೇವಿಡ್ ವಾರ್ನರ್ ಮತ್ತು ಪೊವೆಲ್ ಪರಾಕ್ರಮದ ಮುಂದೆ ಧೂಳಿಪಟವಾದ ಹೈದರಾಬಾದ್ ಬೌಲರ್‌ಗಳ ಉರಿ ಚೆಂಡಿನ ದಾಳಿ ಒಂದು ಕಡೆಯಾದರೆ, ಇನ್ನೊಂದೆಡೆ ಬ್ಯಾಟ್ಸ್‌ಮ್ಯಾನ್‌ಗಳ ವೈಫಲ್ಯದಿಂದಾಗಿ ಡೆಲ್ಲಿ ವಿರುದ್ಧ ಹೈದರಾಬಾದ್ 21 ರನ್‍ಗಳ ಅಂತರದಿಂದ ಸೋಲಿಗೆ ಶರಣಾಯಿತು.

    208 ರನ್‍ಗಳ ಬಾರಿ ಮೊತ್ತವನ್ನು ಚೇಸ್ ಮಾಡುವ ವೇಳೆ ಹೈದರಾಬಾದ್ ಪರ ನಿಕೋಲಸ್ ಪೂರನ್ ಏಕಾಂಗಿ ಹೋರಾಟ ನಡೆಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಹೈದರಾಬಾದ್‍ಗೆ ಗೆಲುವಿನ ಆಸೆ ಚಿಗುರಿಸಿದ ಪೂರನ್ 62 ರನ್ (34 ಎಸೆತ, 2 ಬೌಂಡರಿ, 6 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆಗೆ ಬ್ರೇಕ್ ಬಿತ್ತು. ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 186 ರನ್‍ಗಳಿಸಿ 21 ರನ್‍ಗಳಿಂದ ಸೋಲು ಅನುಭವಿಸಿತು.

    ಡೆಲ್ಲಿ ನೀಡಿದ ಬೃಹತ್ ಗುರಿ ಬೆನ್ನಟ್ಟುವಲ್ಲಿ ಹೈದರಾಬಾದ್ ಆರಂಭದಲ್ಲೇ ಎಡವಿತು. ತಂಡದ ಮೊತ್ತ 24 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ರಾಹುಲ್ ತ್ರಿಪಾಠಿ ಮತ್ತು ಮಾಕ್ರಾರ್ಮ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದರೂ ಹೆಚ್ಚು ಹೊತ್ತು ನಡೆಯಲಿಲ್ಲ.

    ಡೆಲ್ಲಿ ಬೌಲರ್‌ಗಳ ಶಿಸ್ತಿನ ದಾಳಿಗೆ ತ್ರಿಪಾಠಿ 22 ರನ್ (18 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಮಾಕ್ರಾರ್ಮ್ 42 ರನ್ (25 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು.

    ಮೊದಲು ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನ ನೀಡಿದರು. ನಾಯಕನ ನಿರ್ಧಾರದಂತೆ ಹೈದರಾಬಾದ್ ಬೌಲರ್‌ಗಳು ಆರಂಭದಲ್ಲೇ ಮನ್‍ದೀಪ್ ಸಿಂಗ್ ಮತ್ತು ಮಿಚೆಲ್ ಮಾರ್ಷ್ ಅವರ ಪ್ರಮುಖ 2 ವಿಕೆಟ್ ಕಿತ್ತು ಆರಂಭಿಕ ಮುನ್ನಡೆಯನ್ನು ತಂದುಕೊಟ್ಟರು.

    ಆರಂಭಿಕ ಆಘಾತದ ಬಳಿಕ ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ರಿಷಭ್ ಪಂತ್ ಚೇತರಿಕೆ ನೀಡಿದರು. ಪಂತ್ 26 ರನ್ (16 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು.

    ವಾರ್ನರ್, ಪೊವೆಲ್ ರಣಾರ್ಭಟ:
    ಮೂರು ವಿಕೆಟ್ ಕಳೆದುಕೊಂಡ ಬಳಿಕ ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ರೋವ್ಮನ್ ಪೊವೆಲ್ ಮನಬಂತಂತೆ ಬ್ಯಾಟ್‍ಬೀಸಿದರು. ಹೈದರಾಬಾದ್ ಬೌಲರ್‌ಗಳ ಉರಿ ಚೆಂಡಿನ ದಾಳಿಯನ್ನು ಬೌಂಡರಿ, ಸಿಕ್ಸರ್‌ಗೆ ಸರಾಗವಾಗಿ ಅಟ್ಟಿದ ಈ ಜೋಡಿ ವೇಗವಾಗಿ ರನ್ ಏರಿಸಲು ಆರಂಭಿಸಿತು.

    ಅದರಲ್ಲೂ ವಾರ್ನರ್ ಅಂತು ತಮ್ಮ ಈ ಹಿಂದಿನ ಫ್ರಾಂಚೈಸ್ ವಿರುದ್ಧ ಸೇಡು ತಿರಿಸಿಕೊಳ್ಳುತ್ತಿರುವಂತೆ ಬೌಂಡರಿ, ಸಿಕ್ಸ್ ಚಚ್ಚಿ ಕಾಡಿದರು. ಒಂದು ಹಂತದಲ್ಲಿ 180ರ ಗಡಿದಾಟುವ ಹಂತದಲ್ಲಿದ್ದ ವೇಳೆ ಪೊವೆಲ್ ಸ್ಫೋಟಕ ಆಟಕ್ಕೆ ಮುಂದಾದರು ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದ ಹೈದರಾಬಾದ್ ಬೌಲರ್‌ಗಳಿಗೆ ನೀರು ಕುಡಿಸಿದ ಈ ಜೋಡಿ 4 ವಿಕೆಟ್‍ಗೆ ಮುರಿಯದ 122 ರನ್ (66 ಎಸೆತ) ಜೊತೆಯಾಟವಾಡಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಂತಿಮವಾಗಿ ವಾರ್ನರ್ ಅಜೇಯ 92 ರನ್ (58 ಎಸೆತ, 12 ಬೌಂಡರಿ, 3 ಸಿಕ್ಸ್) ಮತ್ತು ಪೊವೆಲ್ 67 ರನ್ (35 ಎಸೆತ, 3 ಬೌಂಡರಿ, 6 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 207 ರನ್‍ಗಳ ಬೃಹತ್ ಮೊತ್ತ ಪೇರಿಸಿದರು.

    ರನ್ ಏರಿದ್ದು ಹೇಗೆ?
    36 ಎಸೆತ 50 ರನ್
    67 ಎಸೆತ 100 ರನ್
    150 ರನ್ 99 ಎಸೆತ
    200 ರನ್ 119 ಎಸೆತ
    207 ರನ್ 120 ಎಸೆತ

  • ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    ಪುಣೆ: ಆರ್‌ಸಿಬಿ ಮತ್ತು ಚೆನ್ನೈ ನಡುವೆ ಜಿದ್ದಾಜಿದ್ದಿನ ಕಾದಾಟ ಮೈದಾನದಲ್ಲಿ ನಡೆಯುತ್ತಿದ್ದರೆ, ಇತ್ತ ಗ್ಯಾಲರಿಯಲ್ಲಿ ಹುಡುಗಿಯೊಬ್ಬಳು ಆರ್‌ಸಿಬಿ ಅಭಿಮಾನಿ ಹುಡುಗನೊಬ್ಬನಿಗೆ ಪ್ರಪೋಸ್ ಮಾಡಿ ಎಲ್ಲರ ಮನಗೆದ್ದಿದ್ದಾಳೆ.

    ಹೌದು ಈ ಬಾರಿಯ ಐಪಿಎಲ್‍ನಲ್ಲಿ ರೋಚಕ ಕಾದಾಟ ಒಂದು ಕಡೆಯಾದರೆ, ಇನ್ನೊಂದೆಡೆ ಸೀಮಿತ ಪ್ರೇಕ್ಷಕರು ಮೈದಾನಕ್ಕೆ ಆಗಮಿಸಿ ಕೊರೊನಾ ಬಳಿಕ ಕ್ರಿಕೆಟ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಆಟಗಾರರು ಭರ್ಜರಿ ಪ್ರದರ್ಶನದ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು, ಕುಣಿಯುವಂತೆ ಮಾಡುತ್ತಿದ್ದಾರೆ. ಇತ್ತ ಅಭಿಮಾನಿಗಳು ಆಟಗಾರರಿಗೆ ವಿಭಿನ್ನ ರೀತಿಯಲ್ಲಿ ಚಿಯರ್ ಅಪ್ ಮಾಡುತ್ತಿದ್ದಾರೆ. ಅದೇ ರೀತಿ ನಿನ್ನೆ ಪುಣೆಯಲ್ಲಿ ನಡೆದ ಆರ್‌ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯದ ವೇಳೆ ಜೋಡಿ ಹಕ್ಕಿಗಳು ಪ್ರೇಮ ನಿವೇದನೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಆರ್‌ಸಿಬಿ ಆರ್ಭಟಕ್ಕೆ ಸೈಲೆಂಟಾದ ಕಿಂಗ್ಸ್ – ಚೆನ್ನೈ ವಿರುದ್ಧ 13 ರನ್‍ಗಳ ಜಯ

    ಆರ್‌ಸಿಬಿ ನೀಡಿದ ಪೈಪೋಟಿಯ ಮೊತ್ತವನ್ನು ಚೆನ್ನೈ ಚೇಸ್ ಮಾಡುತ್ತಿದ್ದ ವೇಳೆ ಗ್ಯಾಲರಿಯಲ್ಲಿದ್ದ ಹುಡುಗಿಯೊಬ್ಬಳು ಮಂಡಿಯೂರಿ ರಿಂಗ್ ತೋರಿಸಿ ಹುಡುಗನಿಗೆ ಪ್ರಪೋಸ್ ಮಾಡಿದ್ದಾಳೆ. ಈ ದೃಶ್ಯವನ್ನು ಕ್ಯಾಮೆರಾಮ್ಯಾನ್ ಸೆರೆ ಹಿಡಿದ್ದಾನೆ. ಈ ದೃಶ್ಯ ಸೆರೆಯಾಗುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಜಯಘೋಷ ಮೊಳಗಿಸಿದ್ದಾರೆ. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ವೈರಲ್ ಆಗುತ್ತಿದ್ದು, ಜೋಡಿ ಹಕ್ಕಿಗಳ ಫೋಟೋ ಹಂಚಿಕೊಂಡು ನೆಟ್ಟಿಗರು ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ವೃದ್ಧಿಮಾನ್ ಸಹಾಗೆ ಬೆದರಿಕೆ ಪ್ರಕರಣ – ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ

    ಈ ದೃಶ್ಯದ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು, ಆರ್‌ಸಿಬಿ ಅಭಿಮಾನಿಗೆ ಸ್ಮಾರ್ಟ್ ಹುಡುಗಿಯ ಪ್ರೇಮ ನಿವೇದನೆ. ಆತ ಆರ್‌ಸಿಬಿ ತಂಡದ ನಿಷ್ಠಾವಂತ ಅಭಿಮಾನಿಯಾಗಿದ್ದರೆ, ಈಕೆಗೂ ನಿಷ್ಠಾವಂತ ಜೋಡಿಯಾಗಿರುತ್ತಾನೆ. ಶುಭವಾಗಲಿ ಈ ಜೋಡಿಗೆ ಎಂದು ಹಾರೈಸಿದ್ದಾರೆ.

    2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ದೀಪಕ್ ಚಹರ್ ಗೆಳತಿ ಜಯಾ ಭಾರದ್ವಾಜ್ ಅವರಿಗೆ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿದ್ದರು.

  • ಆರ್‌ಸಿಬಿ ಆರ್ಭಟಕ್ಕೆ ಸೈಲೆಂಟಾದ ಕಿಂಗ್ಸ್ – ಚೆನ್ನೈ ವಿರುದ್ಧ 13 ರನ್‍ಗಳ ಜಯ

    ಆರ್‌ಸಿಬಿ ಆರ್ಭಟಕ್ಕೆ ಸೈಲೆಂಟಾದ ಕಿಂಗ್ಸ್ – ಚೆನ್ನೈ ವಿರುದ್ಧ 13 ರನ್‍ಗಳ ಜಯ

    ಪುಣೆ: ಗೆಲುವಿಗಾಗಿ ಕೊನೆಯ ವರೆಗೆ ಹೋರಾಡಿದ ಚೆನ್ನೈ ಬ್ಯಾಟ್ಸ್‌ಮ್ಯಾನ್‌ಗಳ ಮುಂದೆ ಭರ್ಜರಿ ಪ್ರದರ್ಶನ ನೀಡಿದ ಆರ್‌ಸಿಬಿ ಬೌಲರ್‌ಗಳು ತಂಡಕ್ಕೆ 13 ರನ್‍ಗಳ ಜಯ ದಕ್ಕಿಸಿಕೊಟ್ಟರು.

    ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ತಂಡಕ್ಕೆ ಹರ್ಷಲ್ ಪಟೇಲ್ ಪ್ರಮುಖ ಮೂರು ವಿಕೆಟ್ ಕಿತ್ತು ಚೆನ್ನೈ ಗೆಲುವಿನ ಆಸೆಗೆ ಬ್ರೇಕ್ ಹಾಕಿದರು. ಆರ್‌ಸಿಬಿ ನೀಡಿದ 174 ರನ್‍ಗಳ ಚೇಸ್ ಮಾಡಿದ ಚೆನ್ನೈಗೆ ಕಡೆ ಕ್ಷಣದಲ್ಲಿ ಡ್ವೈನ್ ಪ್ರಿಟೋರಿಯಸ್ ಮತ್ತು ಮಹೇಶ್ ತೀಕ್ಷಣ ಗೆಲುವಿನ ಆಸೆ ಮೂಡಿಸಿದರೂ, ಜಯ ತಂದುಕೊಡುವಲ್ಲಿ ವಿಫಲರಾದರು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊ0ಂಡು 160 ರನ್ ಬಾರಿಸಿ 13 ರನ್‍ಗಳ ಅಂತರದಿಂದ ಸೋಲು ಕಂಡಿತು.

    ಗೆಲ್ಲಲು 173 ರನ್‍ಗಳ ಪೈಪೋಟಿಯ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಗಾಯಕ್ವಾಡ್ 28 ರನ್ (23 ಎಸೆತ, 3 ಬೌಂಡರಿ, 1 ಸಿಕ್ಸ್) ಡೇವಿಡ್ ಕಾನ್‍ವೇ 56 ರನ್ (37 ಎಸೆತ, 6 ಬೌಂಡರಿ, 2 ಸಿಕ್ಸ್) ಚಚ್ಚಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಇವರಿಬ್ಬರ ವಿಕೆಟ್ ಕಳೆದುಕೊಂಡ ಬಳಿಕ ಚೆನ್ನೈ ತಂಡ ಕುಸಿತಕ್ಕೊಳಗಾಯಿತು. ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ 34 ರನ್ (27 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆ ಕಮರಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡಿಯಿತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‍ಗೆ 62 ರನ್ (44 ಎಸೆತ) ಜೊತೆಯಾಟವಾಡಿ ಚೆನ್ನೈ ಬೌಲರ್‌ಗಳನ್ನು ಕಾಡಿದರು.

    ಕೊಹ್ಲಿ 30 ರನ್ (33 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಡು ಪ್ಲೆಸಿಸ್ 38 ರನ್ (22 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಆ ಬಳಿಕ ರಜತ್ ಪಾಟಿದಾರ್ 21 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸ್) ಚಚ್ಚಿ ರನ್ ಮಧ್ಯಮಕ್ರಮಾಂಕದಲ್ಲಿ ರನ್ ಹೆಚ್ಚಿಸಿ ಹೊರ ನಡೆದರು.

    ಆರ್‌ಸಿಬಿಗೆ ಕಡಿವಾಣ ಹಾಕಿದ ತೀಕ್ಷಣ
    ಮಹಿಪಾಲ್ ಲೋಮ್ರೋರ್ 42 ರನ್ (27 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ ಅಜೇಯ 26 ರನ್ (17 ರನ್, 1 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.

    ಕೊನೆ ಕ್ಷಣದಲ್ಲಿ ಮಹೇಶ್ ತೀಕ್ಷಣ ಕೆಲ ಕ್ರಮಾಂಕದ 3 ವಿಕೆಟ್ ಬೇಟೆಯಾಡಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್ ಒಟ್ಟು ಗೂಡಿಸಿತು.

  • ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಮರಳಿ ಪಡೆದ ಬಳಿಕ ಮಹೇಂದ್ರ ಸಿಂಗ್ ಧೋನಿ ಮುಂದಿನ ಬಾರಿ ಐಪಿಎಲ್‍ನಲ್ಲಿ ನೂತನ ಜವಾಬ್ದಾರಿಯ ಮೂಲಕ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ.

    ನಿನ್ನೆ ಪುಣೆಯಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮೊದಲು ವೀಕ್ಷಕ ವಿವರಣೆಗಾರ ಡ್ಯಾನಿ ಮಾರಿಸನ್, ಧೋನಿ ನೀವು ಮುಂದಿನ ಬಾರಿ ಐಪಿಎಲ್‍ನಲ್ಲಿ ಹಳದಿ ಜೆರ್ಸಿಯಲ್ಲಿ ಕಾಣಿಸುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಧೋನಿ ಖಂಡಿತ ನಾನು ಮುಂದಿನ ಬಾರಿಯೂ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಎಂದರು. ಇದನ್ನೂ ಓದಿ: ಧೋನಿಯಿಂದ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್ 

    ಮಾತು ಮುಂದುವರಿಸಿದ ಧೋನಿ ಮುಂದಿನ ಬಾರಿಯ ಐಪಿಎಲ್‍ನಲ್ಲಿ ಖಂಡಿತವಾಗಿಯೂ ನನ್ನನ್ನು ಹಳದಿ ಜೆರ್ಸಿಯಲ್ಲಿ ನೋಡಲಿದ್ದೀರಿ. ಆದರೆ ಈ ಹಳದಿ ಜೆರ್ಸಿಯಲ್ಲೋ ಅಥವಾ ಬೇರೆ ಹಳದಿ ಜೆರ್ಸಿಯಲ್ಲೋ ಗೊತ್ತಿಲ್ಲ ಎಂದು ದ್ವಂದ್ವ ಹೇಳಿಕೆ ನೀಡಿದರು. ಇದನ್ನೂ ಓದಿ: ಅಂಪೈರ್‌ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು

    ಈ ಮೂಲಕ ಧೋನಿ ಮುಂದಿನ ಐಪಿಎಲ್ ವೇಳೆ ಸಿಎಸ್‍ಕೆ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುವ ಸುಳಿವನ್ನು ನೀಡಿದ್ದಾರೆ. ಆದರೆ ಧೋನಿ ಎಂದರೇ ಅಚ್ಚರಿ ನಿರ್ಧಾರಗಳಿಗೆ ಹೆಸರುವಾಸಿಯಾದವರು. ಹಾಗಾಗಿ ಧೋನಿ ಮುಂದಿನ ಬಾರಿಯ ಐಪಿಎಲ್‍ನಲ್ಲಿ ಆಟಗಾರನಾಗಿಯೂ ಆಡಬಹುದು ಅಥವಾ ಸಹಾಯಕ ಕೋಚ್ ಆಗಿಯೂ ತಂಡದಲ್ಲಿ ಕಾಣಿಸಿಕೊಳ್ಳಬಹುದು ಧೋನಿ ನಿರ್ಧಾರದ ಮೇಲಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಜಡೇಜಾ CSK ನಾಯಕತ್ವ ತ್ಯಜಿಸಲು ಪ್ರಮುಖ ಕಾರಣವಿದು!

    15ನೇ ಆವೃತ್ತಿ ಐಪಿಎಲ್ ಹರಾಜಿನಲ್ಲಿ ತಮ್ಮ ಬದಲು ಮೊದಲನೇ ಆಯ್ಕೆಯಾಗಿ ರವೀಂದ್ರ ಜಡೇಜಾರನ್ನು ರಿಟೈನ್‌ ಮಾಡಿಕೊಳ್ಳುವಂತೆ ಧೋನಿ ಚೆನ್ನೈ ತಂಡಕ್ಕೆ ಸಲಹೆ ನೀಡಿದ್ದರು. ಆ ಬಳಿಕ ಟೂರ್ನಿ ಆರಂಭಕ್ಕೂ ಮೊದಲು ನಾಯಕತ್ವ ತ್ಯಜಿಸಿ ಜಡೇಜಾಗೆ ಪಟ್ಟ ಕಟ್ಟಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡು ಚೆನ್ನೈ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಈ ಮೂಲಕ ಧೋನಿ ತಮ್ಮ ಅಚ್ಚರಿಯ ನಿರ್ಧಾರಗಳ ಸರಣಿಯನ್ನು ಮುಂದುವರಿಸಿದ್ದಾರೆ.