Tag: IPL

  • IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ

    IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ

    ನವದೆಹಲಿ: IPLನ 2023-27ರ ಅವಧಿಗೆ ಮಾಧ್ಯಮ ಪ್ರಸಾರದ ಹಕ್ಕು ಮಾರಾಟದ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಮೊದಲ ದಿನವೇ 100 ಕೋಟಿ ರೂ.ಗಳ ಗಡಿ ದಾಟಿದೆ. ಇಂದು ಹರಾಜು ಮುಕ್ತಾಯಗೊಳ್ಳಲಿದ್ದು, ಪ್ರಸಾರದ ಮೌಲ್ಯ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

    2018-2022ರ ಅವಧಿಗೆ 16,348 ಕೋಟಿ ರೂಪಾಯಿಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್ ಇಂಡಿಯಾ, ಪ್ರತಿ ಪಂದ್ಯದ ಪ್ರಸಾರಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈ ಬಾರಿ 5 ವರ್ಷಗಳ ಅವಧಿಗೆ ಒಟ್ಟು 370 ಪಂದ್ಯಗಳು ನಡೆಯಲಿದ್ದು, BCCI 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿತ್ತು. ಆದರೆ ಹರಾಜಿನ ಮೊದಲ ದಿನ ಎರಡೇ ವಿಭಾಗಗಳಲ್ಲಿ ಪ್ರತಿ ಪಂದ್ಯದ ಪ್ರಸಾರದ ಮೌಲ್ಯ 100 ಕೋಟಿ ರೂಗಳ ಗಡಿ ದಾಟಿದೆ. ಇದನ್ನೂ ಓದಿ: ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಿಂದ ಹಿಂದೆ ಸರಿದ ಅಮೆಜಾನ್

    ಇಂದು ಹರಾಜು ಪ್ರಕ್ರಿಯೆ ಮುಂದುವರಿಯುತ್ತಿದ್ದು, ಈ ಮೌಲ್ಯ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಈ ಬಾರಿ ಬಿಸಿಸಿಐ 4 ವಿಭಾಗಗಳಲ್ಲಿ ಹರಾಜು ನಡೆಸುತ್ತಿದೆ. ಈ ಪೈಕಿ ಭಾನುವಾರ ನಡೆದ ಟಿವಿ ಮತ್ತು ಡಿಜಿಟಲ್ ಮಾಧ್ಯಮ ಹಕ್ಕು ಮೌಲ್ಯ ಒಟ್ಟು 42,000 ಕೋಟಿ ರೂ.ಗೆ ಬಿಕರಿಯಾಗಿದೆ. ಈ ಎರಡೂ ವಿಭಾಗದ ಹಕ್ಕುಗಳ ಹರಾಜು ಮುಂದುವರಿದಿದ್ದು, 50,000 ಕೋಟಿ ರೂ. ದಾಟುವ ಸಾಧ್ಯತೆಯಿದೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಕ್ರೀಸ್ ಬಿಟ್ಟು ಕೊಡದ ಪಾಂಡ್ಯ ನಡೆಗೆ ಟೀಕೆ

    ಈ ಹರಾಜು ಪ್ರಕ್ರಿಯೆಯಿಂದ ಅಮೆಜಾನ್ ಹಿಂದೆ ಸರಿದಿದ್ದು, ರಿಲಯನ್ಸ್ ಒಡೆತನದ ವಯಾಕಾಂ 18, ಹಾಲಿ ಪ್ರಸಾರದ ಹಕ್ಕು ಹೊಂದಿರುವ ಡಿಸ್ನಿ (ಸ್ಟಾರ್), ಝೀ ಹಾಗೂ ಸೋನಿ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ವಯಾಕಾಮ್ 18 ಟಿವಿ, ಡಿಜಿಟಲ್ ಎರಡನ್ನೂ ತನ್ನದಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ 4 ಸಂಸ್ಥೆಗಳಲ್ಲದೇ ಟೈಮ್ಸ್ ಇಂಟರ್‌ನೆಟ್, ಫ್ಯಾನ್ ಕೋಟ್, ಫನ್‌ಏಷ್ಯಾ. ಡ್ರೀಮ್ ಇಲೆವೆನ್ ಹಾಗೂ ವಿದೇಶಿ ಸಂಸ್ಥೆಗಳು ಕೂಡ ಹರಾಜಿನಲ್ಲಿ ಪಾಲ್ಗೊಂಡಿವೆ.

  • ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಿಂದ ಹಿಂದೆ ಸರಿದ ಅಮೆಜಾನ್

    ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಿಂದ ಹಿಂದೆ ಸರಿದ ಅಮೆಜಾನ್

    ಮುಂಬೈ: 2023 ರಿಂದ 2027ವರೆಗಿನ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದ ಆನ್‍ಲೈನ್ ಶಾಪಿಂಗ್‍ನಲ್ಲಿ ಹೆಸರುವಾಸಿಯಾದ ಅಮೆಜಾನ್ ಕಂಪನಿ ಇದೀಗ ಹರಾಜಿನಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ.

    2023-2027ರ ಅವಧಿಗೆ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ ಕೆಲವೇ ದಿನಗಳು ಬಾಕಿಯಿದೆ. ಈ ನಡುವೆ ಹಲವು ಪ್ರತಿಷ್ಠಿತ ಕಂಪನಿಗಳು ಹರಾಜಿನಲ್ಲಿ ಭಾಗವಹಿಸಲು ತಯಾರಿಯಲ್ಲಿದೆ. ಈಗಾಗಲೇ ಅಂಬಾನಿ ಒಡೆತನದ ರಿಲಯನ್ಸ್, ಡಿಸ್ನಿ ಮತ್ತು ಸೋನಿ ಗ್ರೂಪ್ ಪ್ರಸಾರ ಹಕ್ಕು ಪಡೆಯಲು ಮುಂಚೂಣಿಯಲ್ಲಿದೆ. ಈ ನಡುವೆ ಅಚ್ಚರಿ ಎಂಬಂತೆ ಅಮೆಜಾನ್ ಹರಾಜಿನಿಂದ ಹಿಂದೆ ಸರಿಯಲು ಮುಂದಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಕ್ರೀಸ್ ಬಿಟ್ಟು ಕೊಡದ ಪಾಂಡ್ಯ ನಡೆಗೆ ಟೀಕೆ

    2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದೆ. ಈ ಪ್ರಕಾರ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ರೂ. ಮತ್ತು ಪ್ರತಿ ಪಂದ್ಯದ ಡಿಜಿಟಲ್ ಹಕ್ಕು 33 ಕೋಟಿ ರೂ. ಸಾಧಾರಣವಾಗಿ ಟಿವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇದ್ದು, ಡಿಜಿಟಲ್ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115 ರಿಂದ 120 ಕೋಟಿ ರೂ. ಆಗುವ ಸಾಧ್ಯತೆಯಿದೆ. ಇದನ್ನೂ ಓದಿ: ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    2008ರಲ್ಲಿ ಸೋನಿ ನೆಟ್‍ವರ್ಕ್ 10 ವರ್ಷಗಳ ಅವಧಿಗೆ ಮಾಧ್ಯಮ ಹಕ್ಕುಗಳನ್ನು 8,200 ಕೋಟಿ ರೂ. ನೀಡಿ ಖರೀದಿಸಿತ್ತು. ಆ ಬಳಿಕ 2015ರಲ್ಲಿ ನೋವಿ ಡಿಜಿಟಲ್ ಮೂರು ವರ್ಷಗಳ ಅವಧಿಗೆ ಐಪಿಎಲ್‍ನ ಜಾಗತಿಕ ಡಿಜಿಟಲ್ ಹಕ್ಕುಗಳನ್ನು 302.2 ಕೋಟಿ ರೂ. ನೀಡಿ ಪಡೆದುಕೊಂಡಿತ್ತು.

  • ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

    ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

    ನವದೆಹಲಿ: ಬಿಸಿಸಿಐ ಲೆಕ್ಕಾಚಾರ ಯಶಸ್ವಿಯಾದರೆ ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ.

    ಹೌದು. 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ ಕೆಲವೇ ದಿನಗಳು ಬಾಕಿಯಿದೆ. ಸದ್ಯದ ಲೆಕ್ಕಾಚಾರ ನೋಡಿದರೆ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಪಂಡಿತರು ಅಂದಾಜಿಸಿದ್ದಾರೆ. ಒಂದು ವೇಳೆ ಭಾರೀ ಮೊತ್ತಕ್ಕೆ ಹಕ್ಕು ಮಾರಾಟವಾದರೆ ಐಪಿಎಲ್‌ ವಿಶ್ವದ ಎರಡನೇ ದುಬಾರಿ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದೆ. ಈ ಪ್ರಕಾರ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ರೂ. ಮತ್ತು ಪ್ರತಿ ಪಂದ್ಯದ ಡಿಜಿಟಲ್‌ ಹಕ್ಕು 33 ಕೋಟಿ ರೂ. ಇದನ್ನೂ ಓದಿ: ಐಪಿಎಲ್‍ನಲ್ಲಿ ಕಳ್ಳಾಟ ನಡೆದಿದೆ, ಪಿಐಎಲ್‍ನ ಅಗತ್ಯ ಬರಬಹುದು: ಸುಬ್ರಮಣಿಯನ್ ಸ್ವಾಮಿ

    ಸಾಧಾರಣವಾಗಿ ಟೀವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇದ್ದು, ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115 ರಿಂದ 120 ಕೋಟಿ ರೂ. ಆಗುವ ಸಾಧ್ಯತೆಯಿದೆ.

    ಪ್ರಸ್ತುತ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರೂ. ಇದೆ. ಎರಡನೇ ಸ್ಥಾನದಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌(ಇಪಿಎಲ್‌) ಇದ್ದು, ಪ್ರತಿ ಪಂದ್ಯದ ಮೌಲ್ಯ 81 ಕೋಟಿ ರೂ. ಈಗ ಬಿಸಿಸಿಐ ನಿಗದಿಪಡಿಸಿರುವ ಮೂಲಬೆಲೆಯೇ ಇಪಿಎಲ್‌ ಮೌಲ್ಯವನ್ನು ಹಿಂದಿಕ್ಕಲಿದೆ. ಇದನ್ನೂ ಓದಿ: ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್‌ ಪ್ರತಿಕ್ರಿಯಿಸಿ, ಐಪಿಎಲ್ ಮಾಧ್ಯಮ ಹಕ್ಕುಗಳು ಕ್ರೀಡಾ ಉದ್ಯಮಕ್ಕೆ ಹೊಸ ಬೆಂಚ್-ಮಾರ್ಕ್‌ ಆಗಲಿದೆ. ಯಾವುದೇ ಸಂಖ್ಯೆಯನ್ನು ಊಹಿಸಲು ಬಯಸುವುದಿಲ್ಲ. ಆದರೆ ಇದು ದಾಖಲೆ ಮುರಿಯುವ ಸಂಖ್ಯೆಯಾಗಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

    ಈ ಬಾರಿ ದುಬೈಯಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ಸಿವಿಸಿ ಕ್ಯಾಪಿಟಲ್‌ 5,600 ಕೋಟಿ ರೂ. ನೀಡಿ ಅಹಮದಾಬಾದ್‌ ತಂಡವನ್ನು ಖರೀದಿಸಿದರೆ ಆರ್‌ಪಿಎಸ್‌ಜಿ ಗ್ರೂಪ್‌ 7,090 ಕೋಟಿ ರೂ. ಬಿಡ್‌ ಮಾಡಿ ಲಕ್ನೋ ತಂಡವನ್ನು ಖರೀದಿಸಿದೆ. ಬಿಸಿಸಿಐ ಎರಡು ಫ್ರಾಂಚೈಸಿಗಳ ಮಾರಾಟದಿಂದ ಒಟ್ಟು 10 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ ಬಿಸಿಸಿಐ ನಿರೀಕ್ಷೆಗೂ ಮೀರಿ 2,690 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸಿದೆ.

  • ಒಂದೇ ಒಂದು ಪಂದ್ಯವಾಡದೇ 2 ಐಪಿಎಲ್ ಕಪ್ ಗೆದ್ದ ವಿದೇಶಿ ಆಟಗಾರ

    ಒಂದೇ ಒಂದು ಪಂದ್ಯವಾಡದೇ 2 ಐಪಿಎಲ್ ಕಪ್ ಗೆದ್ದ ವಿದೇಶಿ ಆಟಗಾರ

    ಮುಂಬೈ: ಕೊಹ್ಲಿ, ಗೇಲ್, ಎಬಿಡಿಯಂತಹ ಕೆಲ ಸ್ಟಾರ್ ಆಟಗಾರರಿಗೆ ಐಪಿಎಲ್‍ನಲ್ಲಿ ಒಮ್ಮೆಯೂ ಕಪ್ ಗೆಲ್ಲುವ ಅವಕಾಶ ಸಿಕ್ಕಿಲ್ಲ. ಆದರೆ ವೆಸ್ಟ್ ಇಂಡೀಸ್‍ನ ಆಲ್‍ರೌಂಡರ್ ಡೊಮಿನಿಕ್ ಡ್ರೇಕ್ಸ್ ಐಪಿಎಲ್‍ನಲ್ಲಿ ಒಂದೇ ಒಂದು ಪಂದ್ಯವಾಡದೇ ಎರಡು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ.

    ಹೌದು ವೆಸ್ಟ್ ಇಂಡೀಸ್ ಲೀಗ್‍ನಲ್ಲಿ ಆಲ್‍ರೌಂಡರ್ ಆಟದ ಮೂಲಕ ಗಮನಸೆಳೆದ ಡೊಮಿನಿಕ್ ಡ್ರೇಕ್ಸ್ ಮೇಲೆ ಇತರ ದೇಶದಲ್ಲಿ ನಡೆಯುವ ಫ್ರಾಂಚೈಸ್ ಲೀಗ್‍ನ ಮಾಲೀಕರು ಕಟ್ಟಿದ್ದರು. ಅದರಂತೆ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‍ರೌಂಡರ್ ಸ್ಯಾಮ್ ಕರ್ರನ್ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಾಗ ಸಿಎಸ್‍ಕೆ ತಂಡ ಡೊಮಿನಿಕ್ ಡ್ರೇಕ್ಸ್‌ಗೆ ಮಣೆಹಾಕಿತು. ಆದರೆ ಡ್ರೇಕ್ಸ್ ಚೆನ್ನೈ ಪರ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಸಿಎಸ್‍ಕೆ ತಂಡ 2021ರ ಐಪಿಎಲ್‍ನಲ್ಲಿ ಚಾಂಪಿಯನ್ ಆಗಿತ್ತು. ಈ ವೇಳೆ ಡ್ರೇಕ್ಸ್ ತಂಡದಲ್ಲಿದ್ದರಿಂದ ಚಾಂಪಿಯನ್ ತಂಡದ ಆಟಗಾರನಾಗಿದ್ದರು. ಇದನ್ನೂ ಓದಿ: ಭಾರತ, ದಕ್ಷಿಣ ಆಫ್ರಿಕಾ T20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

    ಆ ಬಳಿಕ ಇದೀಗ ಮುಕ್ತಾಯಗೊಂಡ 15ನೇ ಆವೃತ್ತಿ ಐಪಿಎಲ್‍ನಲ್ಲಿ ಚಾಂಪಿಯನ್ ತಂಡ ಗುಜರಾತ್ ಟೈಟಾನ್ಸ್‌ನಲ್ಲಿ ಡೊಮಿನಿಕ್ ಡ್ರೇಕ್ಸ್ ಇದ್ದರು. ಆದರೆ ಟೈಟಾನ್ಸ್ ಪರ ಕೂಡ ಡ್ರೇಕ್ಸ್‌ಗೆ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ. ಆದರೆ ತಂಡ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಡ್ರೇಕ್ಸ್ ಸತತ 2 ಐಪಿಎಲ್‍ನಲ್ಲಿ ಟ್ರೋಫಿಗೆದ್ದ ತಂಡದ ಸದಸ್ಯನಾಗಿ ಅದೃಷ್ಟ ಖುಲಾಯಿಸಿದೆ. ಇದನ್ನೂ ಓದಿ: ಹೊಸ ಹೆಜ್ಜೆಯತ್ತ ದಾದಾ – ಗಂಗೂಲಿ ರಾಜಕೀಯ ಪ್ರವೇಶ ಫಿಕ್ಸ್?

    ಇದೀಗ ಡ್ರೇಕ್ಸ್ ಅದೃಷ್ಟದ ಆಟಗಾರ ಎಂಬ ಬಿರುದನ್ನು ಕ್ರಿಕೆಟ್ ಪ್ರೇಮಿಗಳು ನೀಡಿದ್ದು, ಡ್ರೇಕ್ಸ್ ಮಾತ್ರ ಇನ್ನೂ ಕೂಡ ಐಪಿಎಲ್‍ನ ಪದಾರ್ಪಣೆ ಪಂದ್ಯ ಕೂಡ ಆಡದಿರುವುದು ವಿಪರ್ಯಾಸ.

  • ಜೋಸ್ ಬಟ್ಲರ್‌ಗೆ ಮಿಸ್ ಆಯಿತು ವಿಶೇಷ ಸಾಧನೆ

    ಜೋಸ್ ಬಟ್ಲರ್‌ಗೆ ಮಿಸ್ ಆಯಿತು ವಿಶೇಷ ಸಾಧನೆ

    ಮುಂಬೈ: 15ನೇ ಆವೃತ್ತಿ ಐಪಿಎಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದರೆ ಫೈನಲ್ ಪಂದ್ಯ ಸೋತ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ವಿಶೇಷ ಸಾಧನೆಯೊಂದರಿಂದ ವಂಚಿರಾಗಿದ್ದಾರೆ.

    ಜೋಸ್ ಬಟ್ಲರ್ 15ನೇ ಆವೃತ್ತಿ ಐಪಿಎಲ್‍ನಲ್ಲಿ ಪ್ರಚಂಡ ಫಾರ್ಮ್‍ನಲ್ಲಿದ್ದರು. ಆಡಿದ 17 ಪಂದ್ಯಗಳಲ್ಲಿ 4 ಶತಕ 4 ಅರ್ಧಶತಕ ಸಿಡಿಸಿ ಬರೋಬ್ಬರಿ 863 ರನ್ ಚಚ್ಚಿ ಈ ಬಾರಿ ರಾಜಸ್ಥಾನ ತಂಡ ಫೈನಲ್‍ಗೆ ಎಂಟ್ರಿ ಕೊಡಲು ಮಹತ್ವದ ಪಾತ್ರ ವಹಿಸಿದ್ದರು. ಆದರೆ ಅವರಿಗೆ ಫೈನಲ್‍ನಲ್ಲಿ ಒಂದು ಮಹತ್ವದ ಸಾಧನೆಯೊಂದು ಜೆಸ್ಟ್ ಮಿಸ್ ಆಗಿದೆ. ಇದನ್ನೂ ಓದಿ: ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ಈ ಹಿಂದೆ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಚಾಂಪಿಯನ್ ಆದಾಗ ರಾಬಿನ್ ಉತ್ತಪ್ಪ 660 ರನ್ ಸಿಡಿಸಿ ಆರಂಜ್ ಕ್ಯಾಪ್ ಪಡೆದಿದ್ದರು. ಜೊತೆಗೆ ಅವರ ತಂಡ ಚಾಂಪಿಯನ್ ಆಗಿತ್ತು. ಆ ಬಳಿಕ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಋತುರಾಜ್ ಗಾಯಕ್ವಾಡ್ 635 ರನ್ ಹೊಡೆದು ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು, ಈ ವೇಳೆ ಚೆನ್ನೈ ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ಜೋಸ್ ಬಟ್ಲರ್ 863 ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಆದರೆ ಅವರ ತಂಡ ಮಾತ್ರ ಫೈನಲ್‍ನಲ್ಲಿ ಸೋತು ರನ್ನರ್‌ಅಪ್‌ ಸ್ಥಾನಕ್ಕೆ ತೃಪಿ ಪಡೆದಿದೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಈ ಮೂಲಕ ಬಟ್ಲರ್ ರಾಬಿನ್ ಉತ್ತಪ್ಪ ಮತ್ತು ಗಾಯಕ್ವಾಡ್ ಅವರ ರೀತಿಯ ವಿಶೇಷ ಸಾಧನೆಯಿಂದ ಬಟ್ಲರ್ ವಂಚಿರಾಗಿದ್ದಾರೆ. ಆದರೆ ಈ ಬಾರಿ ಬಟ್ಲರ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.

  • ಗುಜರಾತ್‌ಗೆ ಐಪಿಎಲ್‌ ಟ್ರೋಫಿ  – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಅಹಮದಾಬಾದ್‌: ಚೊಚ್ಚಲ ಐಪಿಎಲ್‌ ಗೆದ್ದ ಗುಜರಾತ್‌ ಟೈಟನ್ಸ್ 20 ಕೋಟಿ ನಗದು ಬಹುಮಾನ ಗೆದ್ದರೆ ದ್ವಿತೀಯ ಸ್ಥಾನಿ ರಾಜಸ್ಥಾನ್‌ ರಾಯಲ್ಸ್‌ 13 ಕೋಟಿ ರೂ. ಗೆದ್ದುಕೊಂಡಿದೆ.

    ರಾಜಸ್ಥಾನ ನೀಡಿದ 131 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್‌  11 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 133 ರನ್‌ ಹೊಡೆದು 7 ವಿಕೆಟ್‌ಗಳ ಜಯವನ್ನು ಸಾಧಿಸಿತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮ – ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಗುಜರಾತ್

    ಯಾವ ತಂಡಕ್ಕೆ ಎಷ್ಟು ಕೋಟಿ?
    ಗುಜರಾತ್‌ ಟೈಟನ್ಸ್‌ – 20 ಕೋಟಿ ರೂ.
    ರಾಜಸ್ಥಾನ್‌ ರಾಯಲ್ಸ್‌ – 13 ಕೋಟಿ ರೂ.
    ರಾಯಲ್ ಚಾಲೆಂಜರ್ಸ್ ಬೆಂಗಳೂರು – 7 ಕೋಟಿ ರೂ.
    ಲಕ್ನೋ ಸೂಪರ್ ಜೈಂಟ್ಸ್ – 6.5 ಕೋಟಿ ರೂ.

    ಯಾವ ಆಟಗಾರರಿಗೆ ಏನು?
    ಉದಯೋನ್ಮುಖ ಆಟಗಾರ: ಉಮ್ರಾನ್ ಮಲಿಕ್ (10 ಲಕ್ಷ ರೂ.)
    ಹೆಚ್ಚು ಸಿಕ್ಸರ್‌ಗಳು: ಜೋಸ್ ಬಟ್ಲರ್ (10 ಲಕ್ಷ ರೂ)
    ಸೂಪರ್ ಸ್ಟ್ರೈಕರ್: ದಿನೇಶ್ ಕಾರ್ತಿಕ್ (10 ಲಕ್ಷ ರೂ., ಟಾಟಾ ಪಂಚ್)

    ಗೇಮ್ ಚೇಂಜರ್ ಪ್ರಶಸ್ತಿ: ಜೋಸ್ ಬಟ್ಲರ್ (10 ಲಕ್ಷ ರೂ.)
    ಪವರ್ ಪ್ಲೇಯರ್ ಆಫ್ ದಿ ಸೀಸನ್: ಜೋಸ್ ಬಟ್ಲರ್ ( 10 ಲಕ್ಷ ರೂ.)
    ಋತುವಿನ ವೇಗದ ಎಸೆತ: ಲಾಕಿ ಫರ್ಗುಸನ್ (157.3 KPH) (10 ಲಕ್ಷ ರೂ.) ಇದನ್ನೂ ಓದಿ: IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    ಹೆಚ್ಚಿನ ಬೌಂಡರಿಗಳು: ಜೋಸ್ ಬಟ್ಲರ್ (ರೂ 10 ಲಕ್ಷ ರೂ.)
    ಪರ್ಪಲ್ ಕ್ಯಾಪ್: ಯುಜುವೇಂದ್ರ ಚಹಾಲ್ (27 ವಿಕೆಟ್, 10 ಲಕ್ಷ ರೂ.)
    ಆರೆಂಜ್ ಕ್ಯಾಪ್: ಜೋಸ್ ಬಟ್ಲರ್ (863 ರನ್, ರೂ 10 ಲಕ್ಷ)

    ಹೆಚ್ಚು ಕ್ಯಾಚ್: ಎವಿನ್ ಲೂಯಿಸ್ (ರೂ. 10 ಲಕ್ಷ)
    ಮೋಸ್ಟ್‌ ವಾಲ್ಯುಬೆಲ್‌ ಪ್ಲೇಯರ್‌(MVP): ಜೋಸ್ ಬಟ್ಲರ್ (ರೂ 10 ಲಕ್ಷ)
    ಫೇರ್ ಪ್ಲೇ ಪ್ರಶಸ್ತಿ: ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್

  • IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    ಅಹಮದಾಬಾದ್: 15ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯದ ಸಮಾರೋಪ ಸಮಾರಂಭದಲ್ಲಿ ವಿಶ್ವದ ಅತಿ ದೊಡ್ಡ ಜೆರ್ಸಿಯನ್ನು ಅನಾವರಣಗೊಳಿಸಿ ಗಿನ್ನಿಸ್ ದಾಖಲೆ ಬರೆದಿದೆ.

    ಐಪಿಎಲ್ ಯಶಸ್ವಿ 15ನೇ ವರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ 66-44 ಮೀಟರ್ ಉದ್ದದ ವಿಶ್ವದ ಅತಿ ದೊಡ್ಡ ಜೆರ್ಸಿಯನ್ನು ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅನಾವರಣಗೊಳಿಸಲಾಯಿತು. ಈ ಜೆರ್ಸಿ ವಿಶ್ವದ ಅತೀ ದೊಡ್ಡ ಜೆರ್ಸಿ ಎಂಬ ನಿಟ್ಟಿನಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಬರೆದಿದೆ. ಇದನ್ನೂ ಓದಿ: 2014ರ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದೇ ಐಪಿಎಲ್ ಫೈನಲ್

    ಸಮಾರೋಪ ಸಮಾರಂಭದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಬಾಲಿವುಡ್ ನಟ ರಣವೀರ್ ಸಿಂಗ್, ಅನೇಕ ಚಿತ್ರಗಳ ಹಾಡಿಗೆ ಹೆಜ್ಜೆ ಹಾಕುವ ಮೂಲಕ ರಂಜಿಸಿದರು. ಅಲ್ಲದೇ ಕೆಜಿಎಫ್ 2 ಚಿತ್ರದ ‘ಧೀರಾ ಧೀರಾ’ ಮತ್ತು ಥೀಮ್ ಸಾಂಗ್‍ಗೆ ರಣವೀರ್ ಸಿಂಗ್ ಕುಣಿದು ಕುಪ್ಪಳಿಸಿದರು. ಈ ಮೂಲಕ ಐಪಿಎಲ್‍ನಲ್ಲಿಯೂ ಕೆಜಿಎಫ್ ಹವಾ ಕಾಣಿಸಿಕೊಂಡಿತು. ಅಲ್ಲದೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು. ಇದನ್ನೂ ಓದಿ: ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್

    ವೇದಿಕೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ನಡೆಸಿಕೊಟ್ಟರು.

     

  • ಐಪಿಎಲ್ ಫಿನಾಲೆಯಲ್ಲಿ ಅಮೀರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಟ್ರೈಲರ್ ರಿಲೀಸ್

    ಐಪಿಎಲ್ ಫಿನಾಲೆಯಲ್ಲಿ ಅಮೀರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಟ್ರೈಲರ್ ರಿಲೀಸ್

    ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದ ಟ್ರೈಲರ್ ಇಂದು ಸಂಜೆ ರಿಲೀಸ್ ಆಗಲಿದೆ. ವಿಶೇಷ ಅಂದರೆ, ಇಂದು ಸಂಜೆ ಗುಜರಾತ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 2022 ಫೈನಲ್ ಪಂದ್ಯದಲ್ಲಿ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ

    ಇಂದು ಫಿನಾಲೆಯಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಮೊದಲ ಇನ್ನಿಂಗ್ಸ್ ನ ಪಂದ್ಯದ ಎರಡನೇ ಟೈಮ್ ಔಟ್ ಅವಧಿಯಲ್ಲಿ ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುತ್ತಿರುವುದಾಗಿ ನಟ ಅಮೀರ್ ಖಾನ್ ಟ್ವೈಟ್ ಮಾಡಿದ್ದಾರೆ. ಫೈನಲ್ ಪಂದ್ಯದ ನಡುವೆ ರಿಲೀಸ್ ಆಗಲಿರುವ ಟ್ರೈಲರ್ ಬಗ್ಗೆ ಈಗಿನಿಂದಲೇ ಕುತೂಹಲ ಶುರುವಾಗಿದೆ. ಇದನ್ನೂ ಓದಿ : ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

    ತಮ್ಮ ವೃತ್ತಿ ಬದುಕಿನುದ್ದಕ್ಕೂ ವೈಶಿಷ್ಟ್ಯ ಪೂರ್ಣ ಸಿನಿಮಾಗಳನ್ನು ಮಾಡುತ್ತಾ ಬಂದವರು ಅಮೀರ್ ಖಾನ್. ಹಾಗಾಗಿ ಇದು ಅವರ ವೃತ್ತಿ ಜೀವನದ ಮತ್ತೊಂದು ಮಹೋನ್ನತ ಚಿತ್ರ ಎಂದು ಬಣ್ಣಿಸಲಾಗುತ್ತಿದೆ. ಈ ಸಿನಿಮಾಗಾಗಿ ಅಮೀರ್ 200ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರಂತೆ. 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸಿನಿಮಾದ ಶೂಟಿಂಗ್ ನಡೆದಿರುವುದು ದಾಖಲೆ. ಇದನ್ನೂ ಓದಿ : ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಅದ್ವೈತ್ ಚಂದನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರೀಮೇಕ್ ಚಿತ್ರ ಎಂದು ಹೇಳಲಾಗುತ್ತಿದೆ. ನಟನೆಯ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಅಮೀರ್. ವಿವಿಧ ಕಾಲಘಟ್ಟದಲ್ಲಿ ಕಥೆ ನಡೆಯುವುದರಿಂದ, ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಅಮೀರ್ ಮಾಡಿಕೊಂಡಿದ್ದಾರಂತೆ.

  • ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್

    ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್

    ಪುಣೆ: ಮಹಿಳಾ ಟಿ20 ಚಾಲೆಂಜ್ ಫೈನಲ್ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಸೂಪರ್ನೋವಾಸ್ 4 ರನ್‌ಗಳ ರೋಚಕ ಜಯ ದಾಖಲಿಸಿ ಚಾಂಪಿಯನ್ ಆಗಿದೆ.

    ಗೆಲ್ಲಲು 166 ರನ್ ಗುರಿ ಪಡೆದ ವೆಲಾಸಿಟಿ ಪರ ಲಾರಾ ವೊಲ್ವಾರ್ಡ್ಟ್ ಅಜೇಯ 65 ರನ್‌ (44 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ಕೊನೆಯ ಎಸೆತದವರೆಗೆ ಗೆಲುವಿಗಾಗಿ ಕೆಚ್ಚೆದೆಯ ಹೋರಾಟ ನಡೆಸಿದರು. ಇವರಿಗೆ ಉಳಿದ ಬ್ಯಾಟರ್‌ಗಳು ಉತ್ತಮ ಸಾಥ್‌ ನೀಡಲು ವಿಫಲರಾದರು. ಇತರ ಬ್ಯಾಟರ್‌ಗಳನ್ನು ಅಬ್ಬರಿಸಲು ಸೂಪರ್ನೋವಾಸ್ ತಂಡದ ಬೌಲರ್ಸ್ ಅವಕಾಶ ನೀಡಲಿಲ್ಲ. ಸ್ಲಾಗ್‌ ಓವರ್‌ಗಳಲ್ಲಿ ಸಿಮ್ರಾನ್ ಬಹದ್ದೂರ್ ಗೆಲುವಿಗಾಗಿ ಹೋರಾಡಿದರೂ ಗೆಲುವಿನ ದಡ ಸೇರಿಸಲು ಸಾಧ್ಯವಾಗದೆ ಅಂತಿಮವಾಗಿ ವೆಲಾಸಿಟಿ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 161 ರನ್ ಪೇರಿಸಲಷ್ಟೇ ಶಕ್ತವಾಗಿ ಫೈನಲ್‍ನಲ್ಲಿ ಮುಗ್ಗರಿಸಿತು. ಸೂಪರ್ನೋವಾಸ್ ಪರ ಅಲಾನಾ ಕಿಂಗ್ ಪ್ರಮುಖ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಈ ಬಾರಿ ಮಹಿಳಾ ಟಿ20 ಚಾಲೆಂಲ್‍ಗೆ ಸೂಪರ್ನೋವಾಸ್, ಟ್ರೈಲ್ಬ್ಲೇಜರ್ಸ್ ಮತ್ತು ವೆಲಾಸಿಟಿ ಮೂರು ತಂಡಗಳು ಭಾಗವಹಿಸಿದ್ದವು. ಸೂಪರ್ನೋವಾಸ್‍ಗೆ ಹರ್ಮನ್ ಪ್ರೀತ್ ಕೌರ್, ಟ್ರೈಲ್ಬ್ಲೇಜರ್ಸ್‍ಗೆ ಸ್ಮೃತಿ ಮಂದಾನ ಮತ್ತು ವೆಲಾಸಿಟಿ ತಂಡಕ್ಕೆ ದೀಪ್ತಿ ಶರ್ಮಾ ನಾಯಕಿಯಾಗಿದ್ದರು. ಪುಣೆಯ ಎಮ್‍ಸಿಎ ಮೈದಾನದಲ್ಲಿ ಎಲ್ಲಾ ಪಂದ್ಯಗಳು ನಡೆಯಿತು. ಸೂಪರ್ನೋವಾಸ್ ಮತ್ತು ವೆಲಾಸಿಟಿ ತಂಡಗಳು ಫೈನಲ್‍ನಲ್ಲಿ ಮುಖಾಮುಖಿಯಾಗಿ ಸೂಪರ್ನೋವಾಸ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ.

    ಈ ಮೊದಲು ಟಾಸ್ ಗೆದ್ದ ವೆಲಾಸಿಟಿ ಎದುರಾಳಿ ತಂಡ ಸೂಪರ್ನೋವಾಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಬ್ಯಾಟರ್ಸ್ ವೆಲಾಸಿಟಿ ಬೌಲರ್‌ಗಳ ಬೆವರಿಳಿಸಿದರು.

    ಆರಂಭಿಕ ಆಟಗಾರ್ತಿ ಪ್ರಿಯಾ ಪುನಿಯಾ 28 ರನ್ (29 ಎಸೆತ, 2 ಸಿಕ್ಸ್), ಡಿಯಾಂಡ್ರಾ ಡಾಟಿನ್ 62 ರನ್ (44 ಎಸೆತ, 1 ಬೌಂಡರಿ, 4 ಸಿಕ್ಸ್) ಮತ್ತು ಹರ್ಮನ್‍ಪ್ರೀತ್ ಕೌರ್ 43 ರನ್ (29 ಎಸೆತ, 1 ಬೌಂಡರಿ, 3 ಸಿಕ್ಸ್) ನೆರವಿನಿಂದ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 165 ರನ್‍ಗಳ ಉತ್ತಮ ಮೊತ್ತ ಕಲೆಹಾಕಿತು.

  • ಐಪಿಎಲ್ ಫೈನಲ್ – ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿದ್ದಾರೆ ರಣ್‌ವೀರ್ ಸಿಂಗ್, ಎಆರ್ ರೆಹಮಾನ್

    ಐಪಿಎಲ್ ಫೈನಲ್ – ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿದ್ದಾರೆ ರಣ್‌ವೀರ್ ಸಿಂಗ್, ಎಆರ್ ರೆಹಮಾನ್

    ಗಾಂಧಿನಗರ: ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿರುವ ಐಪಿಎಲ್ ಸಮಾರೋಪ ಕಾರ್ಯಕ್ರಮಕ್ಕೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ. ಈ ವರ್ಷದ ಐಪಿಎಲ್ ಕೊನೆಯ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಹಾಗೂ ಖ್ಯಾತ ಗಾಯಕ ಎಆರ್ ರೆಹಮಾನ್ ಮಿಂಚಲಿದ್ದಾರೆ.

    ಹೌದು, ಐಪಿಎಲ್‌ನ ಸಮಾರೋಪ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಖ್ಯಾತ ಬಾಲಿವುಡ್ ನಟ ಹಾಗೂ ಗಾಯಕ ರಂಜಿಸುತ್ತಿರುವುದು ಖುಷಿಯ ವಿಚಾರ. ಇದರೊಂದಿಗೆ ಕಾರ್ಯಕ್ರಮದಲ್ಲಿ ಜಾರ್ಖಂಡ್‌ನ ಪ್ರಸಿದ್ಧ ‘ಚೌ’ ನೃತ್ಯವನ್ನೂ ಪ್ರದರ್ಶಿಸಲಾಗುತ್ತಿದ್ದು, ಇದಕ್ಕಾಗಿ 11 ಸದಸ್ಯರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ.

    ವೇಳಾಪಟ್ಟಿಯಲ್ಲಿ ಏನಿದೆ?
    ಐಪಿಎಲ್ ಸಮಾರೋಪ ಕಾರ್ಯಕ್ರಮ ಭಾನುವಾರ ಸಂಜೆ 6:30ರ ವೇಳೆ ಪ್ರಾರಂಭವಾಗಲಿದ್ದು, 50 ನಿಮಿಷಗಳ ಕಾಲ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ. 7:30ರ ವೇಳೆ ಟಾಸ್ ನಡೆಯಲಿದ್ದು, 30 ನಿಮಿಷಗಳ ಬಳಿಕ ಪಂದ್ಯ ಆರಂಭವಾಗಲಿದೆ. ಇದನ್ನೂ ಓದಿ: ಕೊಹ್ಲಿಯ ರನ್ ಮೆಷಿನ್ ಬಿರುದು ಕಿತ್ತುಕೊಂಡ ಸಿರಾಜ್

    ಐಪಿಎಲ್ ಪ್ರಾರಂಭವಾದ ಮೊದಲ ದಶಕದಲ್ಲಿ ಆರಂಭ ಹಾಗೂ ಸಮಾರೋಪ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸಲಾಗುತ್ತಿತ್ತು. ಆದರೆ ಸುಪ್ರಿಂ ಕೋರ್ಟ್ ನೇಮಕದ ಆಡಳಿತಾಧಿಕಾರಿಗಳ ಸಮಿತಿಯ ಅಡಿಯಲ್ಲಿ ಅದನ್ನು 3 ವರ್ಷಗಳ ವರೆಗೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ 2 ವರ್ಷಗಳಿಂದ ಐಪಿಎಲ್ ಆರಂಭ ಹಾಗೂ ಸಮಾರೋಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದನ್ನೂ ಓದಿ: ಒಂದೇ ಐಪಿಎಲ್‌ನಲ್ಲಿ 4 ಶತಕ ಸಿಡಿಸಿದ ಬಟ್ಲರ್- ಕೊಹ್ಲಿ ದಾಖಲೆಗೆ ಸಮ

    ಈ ಬಾರಿ ಮಾರ್ಚ್ 26ರಂದು ಐಪಿಎಲ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರಾರಂಭವಾದಾಗ ಉದ್ಘಾಟನಾ ಸಮಾರಂಭ ನಡೆದಿರಲಿಲ್ಲ. ಬಳಿಕ ಸಭೆ ನಡೆಸಿದ ಐಪಿಎಲ್ ಆಡಳಿತ ಮಂಡಳಿ ಸಮಾರೋಪ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಿದೆ. ಈ ಬಾರಿ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲು ಬಿಸಿಸಿಐ ಟೆಂಡರ್ ಪ್ರಕ್ರಿಯೆ ಮೂಲಕ ಪ್ರತಿಷ್ಠಿತ ಸಂಸ್ಥೆಗಳಿAದ ಬಿಡ್‌ಗಳನ್ನು ಆಹ್ವಾನಿಸಿತ್ತು.