Tag: IPL

  • ಕೊಹ್ಲಿಯ ಈ ಸಾಧನೆಗೂ ಮುನ್ನವೇ ವಿಶ್ ಮಾಡಿದ ದೋಸ್ತಿ ABD

    ಕೊಹ್ಲಿಯ ಈ ಸಾಧನೆಗೂ ಮುನ್ನವೇ ವಿಶ್ ಮಾಡಿದ ದೋಸ್ತಿ ABD

    ದುಬೈ: ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡ ಶುರುವಾದಾಗಿನಿಂದಲೂ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರಿಬ್ಬರ ಸ್ನೇಹ ಗೊತ್ತಿರದ ವಿಷಯವೇನಲ್ಲ. ಕೆಲ ವರ್ಷಗಳಲ್ಲಿ ಈ ಇಬ್ಬರ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮೆಚ್ಚುವಂತೆ ಮಾಡಿದೆ. ಇಬ್ಬರು ಕ್ರೀಸ್‌ಗಿಳಿದು ಅಬ್ಬರಿಸಿದ ಅವಿಸ್ಮರಣೀಯ ಕ್ಷಣಗಳನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ.

    ಆದರೆ ಎಬಿಡಿ ಅವರು ನಿವೃತ್ತಿ ಘೋಷಿಸಿದ ನಂತರ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. 2022ರ 15ನೇ ಆವೃತ್ತಿ ಐಪಿಎಲ್ ಹಾಗೂ ಆ ನಂತರದಲ್ಲಿ ನಡೆದ ಏಕದಿನ ಪಂದ್ಯಗಳಲ್ಲೂ ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಆದರೆ ದೀರ್ಘ ವಿರಾಮದ ಬಳಿಕ ಏಷ್ಯಾಕಪ್-2022 ಟಿ20 ಮೂಲಕ ಮತ್ತೆ ತಂಡಕ್ಕೆ ಮರಳಿದ್ದಾರೆ. 

    Virat Kohli, AB De Villiers RCB

    ಅವರಿಂದು ತಮ್ಮ 100ನೇ ಪಂದ್ಯವನ್ನಾಡುವುದಕ್ಕೂ ಮುನ್ನವೇ ಕೊಹ್ಲಿ ಅವರ ಪಕ್ಕಾ ದೋಸ್ತಿ ಎಬಿಡಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಶುಭ ಕೋರಿದ್ದಾರೆ. ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ

    ವಿರಾಟ್ ಕೊಹ್ಲಿ ಇಂದು T20 ಆವೃತ್ತಿಯ ತಮ್ಮ 100ನೇ ಪಂದ್ಯವನ್ನಾಡಲಿದ್ದು, ಏಕದಿನ, ಟೆಸ್ಟ್ ಹಾಗೂ ಟಿ20 ಆವೃತ್ತಿಗಳಲ್ಲಿ 100 ಪಂದ್ಯಗಳನ್ನು ಪೂರೈಸಿದ ಮೊದಲ ಭಾರತೀಯನಾಗಲಿದ್ದಾರೆ. ಕೊಹ್ಲಿ ಇಲ್ಲಿಯವರೆಗೆ 102 ಟೆಸ್ಟ್ ಮತ್ತು 262 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. T20 ನಲ್ಲಿ 99 ಪಂದ್ಯಗಳನ್ನಾಡಿರುವ ಅವರು ಇಂದು ಇಂಡೋ-ಪಾಕ್ ಕದನದಲ್ಲಿ 100ನೇ ಪಂದ್ಯವನ್ನಾಡಲಿದ್ದಾರೆ. ಈ ವಿಶೇಷ ಸಾಧನೆಗೆ ಸಾಕ್ಷಿಯಾಗುವಂತೆ ಎಬಿಡಿ ಶುಭ ಕೋರಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

    ಈ ಕುರಿತು ಟ್ವೀಟ್‌ನಲ್ಲಿ ವೀಡಿಯೋ ಸಂದೇಶ ಹಂಚಿಕೊಂಡಿರುವ ಎಬಿಡಿ `ಎಲ್ಲಾ ಮೂರು ಮಾದರಿಗಳಲ್ಲೂ 100 ಪಂದ್ಯಗಳನ್ನಾಡಿದ ಮೊದಲ ಭಾರತೀಯನಾಗುತ್ತಿರುವ ನನ್ನ ಉತ್ತಮ ಸ್ನೇಹಿತ ವಿರಾಟ್ ಕೊಹ್ಲಿ ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಎಂತಹ ಅದ್ಭುತ ಸಾಧನೆ ವಿರಾಟ್ ನಿಮ್ಮದು. ನಿಮ್ಮ ಬಗ್ಗೆ ನಮಗೆಲ್ಲರಿಗೂ ತುಂಬಾ ಹೆಮ್ಮೆ ಇದೆ. ನಿಮ್ಮ 100ನೇ ಟಿ20 ಅಂತರಾಷ್ಟ್ರೀಯ ಆಟ ಎಲ್ಲರಿಗೂ ಅತ್ಯುತ್ತಮವಾಗಿರಲಿ. ನಾವು ನಿಮ್ಮನ್ನು ಗಮನಿಸುತ್ತಿರುತ್ತೇವೆ’ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • IPLನಲ್ಲಿ ಸೊನ್ನೆಗೆ ಔಟಾಗಿದ್ದಕ್ಕೆ ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ರು –  ರಾಸ್‌ ಟೇಲರ್‌ ರೋಚಕ ಅನುಭವ

    IPLನಲ್ಲಿ ಸೊನ್ನೆಗೆ ಔಟಾಗಿದ್ದಕ್ಕೆ ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ರು – ರಾಸ್‌ ಟೇಲರ್‌ ರೋಚಕ ಅನುಭವ

    ಮುಂಬೈ: ಐಪಿಎಲ್‌ ನಲ್ಲಿ ಸೊನ್ನೆ ರನ್‌ಗಲಿಗೆ ಔಟಾಗಿದ್ದಕ್ಕೆ ಫ್ರಾಂಚೈಸಿ ತಂಡದ ಮಾಲೀಕರೊಬ್ಬರು ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ದರು ಎಂದು ನ್ಯೂಜಿಲ್ಯಾಂಡ್ ಫೇಮಸ್‌ ಕ್ರಿಕೆಟಿಗ ರಾಸ್ ಟೇಲರ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತಂಡದಲ್ಲಿ 2011ರ ಐಪಿಎಲ್ ಸೀಸನ್ ನಲ್ಲಿ ತಮಗೆ ಆದ ರೋಚಕ ಅನುಭವವನ್ನು ಬಹಿರಂಗಪಡಿಸಿದ್ದಾರೆ.

    ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮಾಲಿಕರ ಪೈಕಿ, ಓರ್ವ ತಮಗೆ 3-4 ಬಾರಿ ಕಪಾಳ ಮೋಕ್ಷ ಮಾಡಿದ್ದರು ಎಂಬ ಅಘಾತಕಾರಿ ಅಂಶ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ

    “ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಡಕ್ ಔಟ್ ಆದ ಬೆನ್ನಲ್ಲೇ ಫ್ರಾಂಚೈಸಿ ಮಾಲಿಕರೊಬ್ಬರು ಕಪಾಳಮೋಕ್ಷ ಮಾಡಿದ್ದರು ಎಂದು ಟೇಲರ್ ತಮ್ಮ ಹೊಸ ಆತ್ಮಚರಿತ್ರೆ ʻರಾಸ್ ಟೇಲರ್; ಬ್ಲಾಕ್ ಅಂಡ್‌ ವೈಟ್ʼ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    195 ರನ್ ಗಳ ಚೇಸಿಂಗ್ ಸವಾಲು ಇತ್ತು, ನಾನು ಎಲ್ ಬಿಡಬ್ಲ್ಯೂಗೆ ಡಕ್ ಔಟ್ ಆದೆ, ನಾವು ಗುರಿಯ ಸಮೀಪ ಹೋಗಲು ಸಾಧ್ಯವಾಗಲಿಲ್ಲ ಎಂದು ಟೇಲರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

    ಪಂದ್ಯದ ಬಳಿಕ ಹೋಟೆಲ್‌ನ ಟಾಪ್‌ ಫ್ಲೋರ್‌ ಡ್ರೆಸ್ಸಿಂಗ್‌ ರೂಂ ನಲ್ಲಿದ್ದ ನನಗೆ ರಾಯಲ್ ಚಾಲೆಂಜರ್ಸ್ ನ ಮಾಲಿಕರ ಪೈಕಿ ಓರ್ವರು, ʻರಾಸ್ ಟೇಲರ್ ನಾವು ನಿಮಗೆ ಡಕ್ ಔಟ್ ಆಗುವುದಕ್ಕಾಗಿ ಮಿಲಿಯನ್ ಡಾಲರ್ಸ್ ಹಣ ನೀಡಿಲ್ಲ ಎಂದು 3-4 ಬಾರಿ ಕಪಾಳಕ್ಕೆ ಬಾರಿಸಿದ್ದರು ʼಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ಲೀಗ್‍ನಲ್ಲಿ ಫ್ರಾಂಚೈಸಿ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್

    ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ಲೀಗ್‍ನಲ್ಲಿ ಫ್ರಾಂಚೈಸಿ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್

    ಮುಂಬೈ: ಮುಂಬೈ ಇಂಡಿಯನ್ಸ್ ಬ್ರ್ಯಾಂಡ್ ಅನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಇಟ್ಟಿದೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್‍ನಲ್ಲಿ ಒಂದು ಫ್ರಾಂಚೈಸಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡಿದೆ.

    ಭಾರತದಲ್ಲಿ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿ ಮಾಡುವುದು, ಫುಟ್‍ಬಾಲ್ ಲೀಗ್ ನಡೆಸುವುದು, ಕ್ರೀಡೆಯ ಪ್ರಾಯೋಜಕತ್ವ, ಕನ್ಸಲ್ಟನ್ಸಿ ಹಾಗೂ ಅಥ್ಲೀಟ್ ಪ್ರತಿಭಾ ನಿರ್ವಹಣೆ ಮತ್ತು ಉದ್ಯಮದ ಉತ್ತಮ ಅಭ್ಯಾಸಗಳನ್ನು ಅಳವಡಿಸುವುದು ಸೇರಿದಂತೆ ಕ್ರೀಡಾ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಹತ್ವದ ಪಾತ್ರ ವಹಿಸುತ್ತಿದೆ. ರಿಲಯನ್ಸ್ ಫೌಂಡೇಶನ್ ಸ್ಪೋರ್ಟ್ಸ್ ಎಂಬ ಆರ್‌ಐಎಲ್‌, ಸಿಎಸ್‍ಆರ್ ವಿಭಾಗವು ಭಾರತದ ಒಲಿಂಪಿಕ್ಸ್ ಚಳವಳಿಯನ್ನು ಮುನ್ನಡೆಸುತ್ತಿದೆ. ದೇಶದ ವಿವಿಧೆಡೆಯ ಅಥ್ಲೀಟ್‍ಗಳು ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಆಗಲು ಇದು ಅವಕಾಶ ಒದಗಿಸುತ್ತಿದೆ ಮತ್ತು ಜಾಗತಿಕ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಈ ವರ್ಷದ ಆರಂಭದಲ್ಲಿ, 40 ವರ್ಷಗಳ ನಂತರದಲ್ಲಿ 2023ರಲ್ಲಿ ಮುಂಬೈನಲ್ಲಿ ಇಂಟರ್‌ನ್ಯಾಷನಲ್‌ ಒಲಿಂಪಿಕ್ಸ್ ಕಮಿಟಿ ಸೆಷನ್ ನಡೆಸಲು ಯಶಸ್ವಿಯಾಗಿ ಪ್ರಯತ್ನ ನಡೆಸಿದೆ. ಇದೀಗ ದಕ್ಷಿಣ ಆಫ್ರಿಕಾದ ಟಿ20 ಲೀಗ್‍ನಲ್ಲಿ ಒಂದು ಫ್ರಾಂಚೈಸಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡಿ ಕ್ರೀಡೆಗೆ ಇನ್ನಷ್ಟು ಸಹಕಾರಿಯಾಗಲು ಮುಂದಾಗಿದೆ. ಇದಲ್ಲದೆ ಯುಎಇ ಮೂಲದ ಅಂತಾರಾಷ್ಟ್ರೀಯ ಲೀಗ್ ಟಿ-20 ತಂಡವನ್ನು ಖರೀದಿಸಲು ಪ್ಲಾನ್ ಮಾಡುತ್ತಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

    ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್‍ನ ನಿರ್ದೇಶಕಿ ನೀತಾ ಅಂಬಾನಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಿಲಯನ್ಸ್ ಕುಟುಂಬಕ್ಕೆ ಹೊಸ ಟಿ20 ತಂಡವನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ಮುಂಬೈ ಇಂಡಿಯನ್ಸ್ ಬ್ರ್ಯಾಂಡ್ ಅನ್ನು ದಕ್ಷಿಣ ಆಫ್ರಿಕಾಗೆ ತೆಗೆದುಕೊಂಡು ಹೋಗಲು ನಾವು ಬಯಸಿದ್ದೇವೆ. ಭಾರತದಷ್ಟೇ ದಕ್ಷಿಣ ಆಪ್ರಿಕಾ ಕೂಡ ಕ್ರಿಕೆಟ್‍ನ್ನು ಪ್ರೀತಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಕ್ರೀಡಾ ಪರಿಸರವಿದೆ. ಈ ಸಹಭಾಗಿತ್ವ ಶಕ್ತಿ ಮತ್ತು ಸಹಭಾಗಿತ್ವವನ್ನು ನಾವು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಕರಾವಳಿಯ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ್ ಗೌಡ ವಿರುದ್ಧ ಪ್ರಕರಣ ದಾಖಲು

    ರಿಲಾಯನ್ಸ್ ಜಿಯೋದ ಚೇರ್ಮನ್ ಆಕಾಶ್ ಅಂಬಾನಿ ಮಾತನಾಡಿ, ನಮ್ಮ ದಕ್ಷಿಣ ಆಫ್ರಿಕಾ ಫ್ರಾಂಚೈಸಿಯಿಂದಾಗಿ ಮೂರು ದೇಶಗಳಲ್ಲಿ ಮೂರು ಟಿ20 ಟೀಮ್‍ಗಳಿವೆ. ಕ್ರಿಕೆಟ್‍ನಲ್ಲಿ ನಮ್ಮ ಪರಿಣಿತಿ ಮತ್ತು ಆಳವಾದ ಜ್ಞಾನವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ಇದು ತಂಡವನ್ನು ನಿರ್ಮಾಣ ಮಾಡಲು ಮತ್ತು ಅಭಿಮಾನಿಗಳಿಗೆ ಉತ್ತಮ ಕ್ರಿಕೆಟ್ ಅನುಭವವನ್ನು ಇದು ಒದಗಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕ್ರಿಕೆಟ್ ಸೌತ್ ಆಫ್ರಿಕಾ ಆರು ತಂಡಗಳನ್ನು ಒಳಗೊಂಡ ಟಿ20 ಟೂರ್ನಿ ಆಯೋಜನೆ ಮಾಡುವುದಾಗಿ ಘೋಷಿಸಿದೆ. ಮೊದಲ ಟೂರ್ನಮೆಂಟ್ 2023 ಜನವರಿಯಲ್ಲಿ ನಡೆಯಲಿದೆ. ಟೂರ್ನಮೆಂಟ್‍ನಲ್ಲಿ ಆರು ತಂಡಗಳು ಇರಲಿವೆ. ರೌಂಡ್ ರಾಬಿನ್ ಹಂತದಲ್ಲಿ ಪರಸ್ಪರ ಎರಡು ಬಾರಿ ಆಟ ಆಡಲಿವೆ. ನಂತರ ಅಗ್ರ ಮೂರು ತಂಡಗಳು ಪ್ಲೇಆಫ್‍ಗೆ ಹೋಗಲಿವೆ. ಮೂರರಿಂದ ನಾಲ್ಕು ವಾರಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.

    Live Tv
    [brid partner=56869869 player=32851 video=960834 autoplay=true]

  • ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

    ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

    ಜೋಹಾನ್ಸ್‌ಬರ್ಗ್‌: ಕ್ರಿಕೆಟ್ ದಕ್ಷಿಣ ಆಫ್ರಿಕಾದ ಚೊಚ್ಚಲ ಟಿ20 ಲೀಗ್‌ನಲ್ಲಿ ಎಲ್ಲಾ ಆರು ತಂಡಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳು ಖರೀದಿಸಿವೆ.

    ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮಾಲೀಕರು ಹರಾಜಿನ ಸಮಯದಲ್ಲಿ ಫ್ರಾಂಚೈಸಿಗಳನ್ನು ಯಶಸ್ವಿಯಾಗಿ ಬಿಡ್ ಮಾಡಿದ್ದಾರೆ.

    ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಮುಂಬೈ ಇಂಡಿಯನ್ಸ್ ಕೇಪ್ ಟೌನ್ ಫ್ರಾಂಚೈಸಿಯನ್ನು ಖರೀದಿಸಿದರೆ, ಸನ್ ರೈಸರ್ಸ್ ಮಾಲೀಕತ್ವದ ಸನ್ ಟಿವಿ ಗ್ರೂಪ್ ಪೋರ್ಟ್ ಎಲಿಜಬೆತ್ ಫ್ರಾಂಚೈಸಿಯನ್ನು ಖರೀದಿ ಮಾಡಿದೆ.

    ಕಳೆದ ವರ್ಷಾಂತ್ಯದಲ್ಲಿ ಲಕ್ನೋ ಐಪಿಎಲ್ ಫ್ರಾಂಚೈಸಿಯನ್ನು 7090 ಕೋಟಿ ರೂ. ನೀಡಿ ಖರೀದಿಸಿದ್ದ ಆರ್‌ಪಿ ಸಂಜೀವ್ ಗೋಯೆಂಕಾ ಡರ್ಬನ್ ತಂಡವನ್ನು ಖರೀದಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪಾರ್ಲ್ ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ಮಾಲೀಕರಾಗಿರುವ ಜಿಂದಾಲ್ ಸೌತ್ ವೆಸ್ಟ್ ಸ್ಪೋರ್ಟ್ಸ್ ಪ್ರಿಟೋರಿಯಾವನ್ನು ಖರೀದಿಸಿದೆ.  ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ಬೆನ್‌ ಸ್ಟೋಕ್ಸ್‌ ನಿವೃತ್ತಿ ಘೋಷಣೆ 

    ಐಪಿಎಲ್‌ನ ಕೋಲ್ಕತಾ ಸೇರಿದಂತೆ 4 ವಿವಿಧ ಟಿ20 ಲೀಗ್‌ನ ತಂಡದ ಒಡೆತನ ಹೊಂದಿರುವ ನೈಟ್ ರೈಡರ್ಸ್‌ ಸಂಸ್ಥೆ ಹಾಗೂ ರಾಯಲ್ ಚಾಲೆ೦ಜರ್ಸ್‌ ಬೆಂಗಳೂರು ಫ್ರಾಂಚೈಸಿ ಈ ಲೀಗ್‌ನಲ್ಲಿ ಯಾವುದೇ ತಂಡವನ್ನು ಖರೀದಿಸಿಲ್ಲ. ದ.ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್‌ ಲೀಗ್‌ ಆಯುಕ್ತರಾಗಿ ನೇಮಕಗೊಂಡಿದ್ದು, ಲೀಗ್‌ನ ವೇಳಾಪಟ್ಟಿ, ಮಾದರಿ ಪ್ರಕಟವಾಗಬೇಕಿದೆ.

    ಈ ಮೊದಲು 2 ಬಾರಿ ದಕ್ಷಿಣ ಆಫ್ರಿಕಾ ಟಿ20 ಲೀಗ್ ಆರಂಭಿಸಿತ್ತು. ಈ ಮೊದಲು 2017ರಲ್ಲಿ ಗ್ಲೋಬಲ್ 20 ಲೀಗ್‌ ಆರಂಭಿಸಿತ್ತು. ಬಳಿಕ ಮಾಡಿ ಸೂಪರ್ ಲೀಗ್ ಶುರು ಮಾಡಿದ್ದರೂ ಪ್ರಸಾರ ಹಕ್ಕು ಪಡೆಯಲು ಯಾವುದೇ ಸಂಸ್ಥೆಗಳು ಬರದ ಕಾರಣ ಆ ಲೀಗ್ ಕೂಡಾ ನಡೆದಿರಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಐಪಿಎಲ್‌ ನೋಡಿ ಕಲಿಯಬೇಕು – ಐಸಿಸಿ ವಿರುದ್ಧ ಕ್ರೀಡಾ ವಾಹಿನಿಗಳು ಕಿಡಿ

    ಐಪಿಎಲ್‌ ನೋಡಿ ಕಲಿಯಬೇಕು – ಐಸಿಸಿ ವಿರುದ್ಧ ಕ್ರೀಡಾ ವಾಹಿನಿಗಳು ಕಿಡಿ

    ಮುಂಬೈ: ಐಪಿಎಲ್‌ನಲ್ಲಿ ಹೇಗೆ ಪಾರದರ್ಶಕವಾಗಿ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡಲಾಯಿತೋ ಅದೇ ರೀತಿಯಾಗಿ ಐಸಿಸಿ ತನ್ನ ಟೂರ್ನಿಯ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡಬೇಕು ಎಂದು ದೇಶದಲ್ಲಿರುವ ಕ್ರೀಡಾ ವಾಹಿನಿಗಳು ಆಗ್ರಹಿಸಿವೆ.

    ಐಸಿಸಿ ಪುರುಷರ ವಿಶ್ವಕಪ್‌, ಟಿ20 ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಪ್ರಸಾರ ಸಂಬಂಧ ಕ್ರೀಡಾ ವಾಹಿನಿಗಳಿಂದ ಬಿಡ್‌ ಆಹ್ವಾನಿಸಲಾಗಿದೆ. 2024ರಿಂದ 8 ವರ್ಷ ಅವಧಿಗೆ ಪ್ರಸಾರ ಹಕ್ಕನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡದ್ದಕ್ಕೆ ಕ್ರೀಡಾ ವಾಹಿನಿಗಳು ಆಕ್ಷೇಪ ವ್ಯಕ್ತಪಡಿಸಿವೆ.

    ಭಾರತ ಕ್ರಿಕೆಟ್‌ನ ದೊಡ್ಡ ಮಾರುಕಟ್ಟೆಯಾಗಿರುವ ಕಾರಣ ಭಾರತದ ಮಾಧ್ಯಮ ಹಕ್ಕು ಮಾರಾಟಕ್ಕೆ ಪ್ರತ್ಯೇಕ ಬಿಡ್‌ ಕರೆಯಲಾಗಿದೆ. ಡಿಸ್ನಿಸ್ಟಾರ್‌, ಎಸ್‌ಪಿಎನ್‌, ಝಿ ಮತ್ತು ವಯಾಕಾಮ್‌ 18 ಕಂಪನಿಗಳು ಖರೀದಿಗೆ ಆಸಕ್ತಿ ತೋರಿಸಿವೆ.

    ಆಕ್ಷೇಪ ಯಾಕೆ?
    ಇ ಹರಾಜು ನಡೆಸದೇ ಮುಚ್ಚಿದ ಲಕೋಟೆಯಲ್ಲಿ ಬಿಡ್‌ ಮೊತ್ತವನ್ನು ನೀಡಬೇಕು. ಬಿಡ್‌ ಸಲ್ಲಿಕೆ ಮತ್ತು ಅಂತಿಮ ಪ್ರಕಟಣೆಗೆ ಮೂರು ವಾರಗಳ ಅವಧಿ ನೀಡಿರುವುದು. 4 ವರ್ಷ ಮತ್ತು 8 ವರ್ಷಗಳ ಹಕ್ಕು ಖರೀದಿಗೆ ಸರಿಯಾದ ಮಾನದಂಡ ಇಲ್ಲದಿರುವುದು. ಬಿಡ್‌ನ ಮೊತ್ತ ಶೇ.5 ರಷ್ಟು ಹಣವನ್ನು ಠೇವಣಿಯಾಗಿ ಇಡಬೇಕೆಂಬ ಷರತ್ತಿಗೆ ವಿರೋಧ ವ್ಯಕ್ತಪಡಿಸಿವೆ.

    ಪಾರದರ್ಶಕವಾಗಿ ಮಾಧ್ಯಮ ಹಕ್ಕುಗಳ ಮಾರಾಟವನ್ನು ಹೇಗೆ ಮಾಡಬಹುದು ಎಂಬುದನ್ನು ಬಿಸಿಸಿಐ ನೋಡಿ ಐಸಿಸಿ ಕಲಿಯಬೇಕೆಂದು 4 ಕ್ರೀಡಾ ವಾಹಿನಿಗಳ ಅಧಿಕಾರಿಗಳು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    8 ವರ್ಷಕ್ಕೆ ನಾವು 100 ದಶಲಕ್ಷ ಡಾಲರ್‌ ಬಿಡ್‌ ಮಾಡಿದ್ದರೆ 4 ವರ್ಷಕ್ಕೆ ನನ್ನ ಪ್ರತಿಸ್ಪರ್ಧಿ ವಾಹಿನಿ 60 ದಶಲಕ್ಷ ಡಾಲರ್‌ ಬಿಡ್‌ ಮಾಡಿದರೆ ಅತಿ ಹೆಚ್ಚು ಬಿಡ್‌ ಮಾಡಿದವರು ಯಾರು ಎಂದು ವಾಹಿನಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಂಬಲ್ಡನ್‌ ಟೆನ್ನಿಸ್‌ ಟೂರ್ನಿಯಲ್ಲೂ ಕೆಜಿಎಫ್‌ ಹವಾ

    ಐಸಿಸಿ ವಾದವೇನು?
    ಪಾರದರ್ಶಕತೆ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ನಾವು ಇ-ಹರಾಜು ಮಾಡುತ್ತಿಲ್ಲ. ಏಕೆಂದರೆ ಜಾಗತಿಕ ಮಟ್ಟದಲ್ಲಿ ಈ ಪ್ರಕ್ರಿಯೆ ಮಾಡಬೇಕಾಗುವುದರಿಂದ ಮುಚ್ಚಿನ ಲಕೋಟೆಯಲ್ಲಿ ಬಿಡ್‌ಗಳನ್ನು ಆಹ್ವಾನಿಸುತ್ತಿದ್ದೇವೆ. ಈ ಹಿಂದೆಯೂ ಈ ವಿಧಾನವನ್ನು ಬಳಸಲಾಗಿತ್ತು ಎಂದು ಐಸಿಸಿ ಹೇಳಿದೆ.

    ಐಸಿಸಿ ಬಿಡ್‌ಗೆ ಯಾವುದೇ ಮೂಲ ಬೆಲೆಯನ್ನು ನಿಗದಿ ಪಡಿಸಿಲ್ಲ. ಆಗಸ್ಟ್‌ 22ರ ಒಳಗಡೆ ವಾಹಿನಿಗಳು ಬಿಡ್‌ ಸಲ್ಲಿಸಬೇಕಿದೆ. ಬಿಡ್‌ ವಿಜೇತರ ಹೆಸರನ್ನು ಸೆಪ್ಟೆಂಬರ್‌ ಮೊದಲ ವಾರದಲ್ಲಿ ಪ್ರಕಟಿಸಲಿದೆ.

    IPL

    ಈ ಹಿಂದೆ ಐಸಿಸಿ ಕೇಂದ್ರ ಕಚೇರಿ ಲಂಡನ್‌ನಲ್ಲಿ ಇತ್ತು. ಆದರೆ ಇಂಗ್ಲೆಂಡ್‌ ಸರ್ಕಾರ ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 2005ರಲ್ಲಿ ಐಸಿಸಿಯ ಪ್ರಧಾನ ಕಚೇರಿಯನ್ನು ಲಾರ್ಡ್ಸ್‌ನಿಂದ ದುಬೈಗೆ ಸ್ಥಳಾಂತರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ

    ಲಂಡನ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಇಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

    2021ರ ಐಪಿಎಲ್ ನಂತರ ಸತತ ಬ್ಯಾಟಿಂಗ್ ವೈಫಲ್ಯದಿಂದ ಹಿನ್ನಡೆ ಕಂಡಿದ್ದ ಇಯಾನ್ ಮಾರ್ಗನ್ ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.

    13 ವರ್ಷಗಳ ಇಂಗ್ಲೆಂಡ್ ತಂಡದ ಪಯಣದಲ್ಲಿ ಐಯಾನ್ ಮಾರ್ಗನ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡ 2019ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮೊಟ್ಟ ಮೊದಲ ಬಾರಿಗೆ ಗೆದ್ದು ಸಂಭ್ರಮಿಸಿತ್ತು. 2010ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಲ್ಲಿ ಮಾರ್ಗನ್ ಆಡಿದ್ದರು. 2021ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನೊಂದಿಗೆ ಸೆಣಸಾಡಿ ಕೆಕೆಆರ್ ತಂಡಕ್ಕೆ ರನ್ನರ್‌ಅಪ್ ಪ್ರಶಸ್ತಿ ತಂದುಕೊಡುವಲ್ಲಿ ಮಾರ್ಗನ್ ಅವರ ಪಾತ್ರ ಅಪಾರವಾಗಿತ್ತು.

    2006ರಲ್ಲಿ ಐರ್ಲೆಂಡ್ ಪರ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 3 ವರ್ಷಗಳ ಬಳಿಕ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಯಾದರು. ಹಲವು ವರ್ಷಗಳ ಕಾಲ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಐಸಿಇ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನೂ ಕಾಯ್ದುಕೊಂಡಿತ್ತು.

    ಇಯಾನ್ ಮಾರ್ಗನ್ ಈವರೆಗೆ 225 ಏಕದಿನ, 73 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 13 ಶತಕಗಳೊಂದಿಗೆ 39.75ರ ಸರಾಸರಿಯಲ್ಲಿ 6,957 ರನ್ ದಾಖಲಿಸಿದ್ದಾರೆ. ಅದರಲ್ಲೂ ಅವರು 126 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 76 ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.

    Live Tv

  • ಆರ್‌ಸಿಬಿಗೆ ಸೇರಿಸಿಕೊಂಡಾಗಿನಿಂದ ಗೇಲ್ ನನ್ನ ಬೆಸ್ಟ್ ಫ್ರೆಂಡ್ ಎಂದು ಫೋಟೋ ಹಂಚಿಕೊಂಡ ವಿಜಯ್ ಮಲ್ಯ

    ಆರ್‌ಸಿಬಿಗೆ ಸೇರಿಸಿಕೊಂಡಾಗಿನಿಂದ ಗೇಲ್ ನನ್ನ ಬೆಸ್ಟ್ ಫ್ರೆಂಡ್ ಎಂದು ಫೋಟೋ ಹಂಚಿಕೊಂಡ ವಿಜಯ್ ಮಲ್ಯ

    ಲಂಡನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)  ತಂಡಕ್ಕೆ ಕ್ರಿಸ್ ಗೇಲ್‍ರನ್ನು ಸೇರಿಸಿಕೊಂಡಾಗಿನಿಂದ ನನಗೆ ಉತ್ತಮ ಸ್ನೇಹಿತ ಎಂದು ಬರೆದುಕೊಂಡು ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಗೇಲ್ ಕುರಿತಾಗಿ ಮೆಚ್ಚುಗೆಯ ನುಡಿಗಳನ್ನು ಬರೆದುಕೊಂಡಿರುವ ಮಲ್ಯ, ನನ್ನ ಉತ್ತಮ ಸ್ನೇಹಿತ ಕ್ರಿಸ್ಟೋಫರ್ ಹೆನ್ರಿ ಗೇಲ್, ಯೂನಿವರ್ಸ್ ಬಾಸ್ ಅವರನ್ನು ಭೇಟಿಯಾಗಲು ಸಂತೋಷವಾಗುತ್ತದೆ. ನಾನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಾಗಿನಿಂದ ಗೇಲ್ ಮತ್ತು ನನ್ನ ನಡುವೆ ಉತ್ತಮ ಒಡನಾಟವಿದ್ದು, ಆತ ನಾ ಕಂಡ ಅತ್ಯುತ್ತಮ ಆಟಗಾರ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    2011ರಲ್ಲಿ ಗೇಲ್‍ರನ್ನು ಆರ್‌ಸಿಬಿ ತಂಡ ಖರೀದಿಸಿತ್ತು. ಆ ಬಳಿಕ ಆರ್‌ಸಿಬಿ ತಂಡದಲ್ಲಿ ಮಿಂಚಿದ ಗೇಲ್‍ರನ್ನು 2018ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಖರೀದಿಸಿತು. 2022ರ ಐಪಿಎಲ್ ಮೆಗಾ ಹರಾಜಿನಿಂದ ಸ್ವತಃ ಗೇಲ್ ಹಿಂದೆ ಸರಿದು ಐಪಿಎಲ್‍ನಲ್ಲಿ ಆಡಿರಲಿಲ್ಲ. ಇದನ್ನೂ ಓದಿ: 2021-22ರ ಅವಧಿಯಲ್ಲಿ ಟೀಂ ಇಂಡಿಯಾಗೆ 6 ನಾಯಕರು

    ಗೇಲ್ ಐಪಿಎಲ್‍ನಲ್ಲಿ ಒಟ್ಟು 142 ಪಂದ್ಯಗಳಿಂದ 4,965 ರನ್ ಚಚ್ಚಿದ್ದು, ಒಟ್ಟು 3 ಫ್ರಾಂಚೈಸ್‍ಗಳ ಪರ ಆಡಿದ್ದಾರೆ. ಐಪಿಎಲ್‍ನಲ್ಲಿ ಗೇಲ್ ಸಿಡಿಸಿರುವ 175 ರನ್ ವೈಯಕ್ತಿಕ ಹೆಚ್ಚಿನ ಗಳಿಕೆ ಯಾಗಿದೆ.

    Live Tv

  • IPL ಈಗ ವಿಶ್ವದ ದುಬಾರಿ ಲೀಗ್ – ಆದರೂ ಒಲಿಂಪಿಕ್ಸ್‌ನಲ್ಲಿ ಯಾಕಿಲ್ಲ?

    IPL ಈಗ ವಿಶ್ವದ ದುಬಾರಿ ಲೀಗ್ – ಆದರೂ ಒಲಿಂಪಿಕ್ಸ್‌ನಲ್ಲಿ ಯಾಕಿಲ್ಲ?

    ಮುಂಬೈ: ಮುಂಬರುವ ಐಪಿಎಲ್ ಲೀಗ್ ಮಾಧ್ಯಮ ಪ್ರಸಾರದ ಹಕ್ಕು ಪ್ರತಿ ಪಂದ್ಯಕ್ಕೆ 107.5 ಕೋಟಿ ರೂ.ಗೆ ಬಿಕಾರಿಯಾಗುವ ಮೂಲಕ ವಿಶ್ವದ 2ನೇ ದುಬಾರಿ ಕ್ರೀಡಾ ಲೀಗ್ ಆಗಿ ಹೊರಹೊಮ್ಮಿದೆ. ದೊಡ್ಡ ಕ್ರೀಡಾ ಲೀಗ್ ಆಗಿ ಹೊರಹೊಮ್ಮಿದ್ದರೂ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್ ಇನ್ನೂ ಸೇರ್ಪಡೆಯಾಗಿಲ್ಲ ಯಾಕೆ ಎಂಬುದೇ ಪ್ರಶ್ನೆ.

    ವಿಶ್ವದ ದುಬಾರಿ ಕ್ರೀಡೆಗಳಾದ ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್ (NFL) ಹಾಗೂ ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ಬಾಲ್(EPL) ಅನ್ನೂ ಹಿಂದಿಕ್ಕಿದೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ

    IPL

    2018-2022ರ ಅವಧಿಗೆ 16,348 ಕೋಟಿ ರೂಪಾಯಿಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್ ಇಂಡಿಯಾ, ಪ್ರತಿ ಪಂದ್ಯದ ಪ್ರಸಾರಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈ ಬಾರಿ 5 ವರ್ಷಗಳ ಅವಧಿಗೆ ಒಟ್ಟು 370 ಪಂದ್ಯಗಳು ನಡೆಯಲಿದ್ದು, ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿತ್ತು. ಆದರೆ 2023-2027ರ ನಡುವಿನ ಮಾಧ್ಯಮ ಪ್ರಸಾರ ಹಕ್ಕಿಗೆ ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆದಿದ್ದು ಟಿವಿ ಪ್ರಸಾರಕ್ಕೆ 57.5 ಕೋಟಿ ಡಿಜಿಟಲ್ ಪ್ರಸಾರಕ್ಕೆ 50 ಸಾವಿರ ಕೋಟಿ ಕೋಟಿ ಮೌಲ್ಯಕ್ಕೆ ಬಿಕರಿಯಾಗಿದೆ. ಆದರೂ ಕ್ರಿಕೆಟ್ ಒಲಿಂಪಿಕ್ಸ್‌ಗೆ  ಏಕೆ ಸೇರ್ಪಡೆಯಾಗಿಲ್ಲ ಎನ್ನುವುದು ಹಲವರ ಪ್ರಶ್ನೆಯಾಗಿದೆ.

    ಕ್ರಿಕೆಟ್ ಸೇರ್ಪಡೆ ಏಕಿಲ್ಲ?: ಏಕೆಂದರೆ ಒಲಿಂಪಿಕ್ಸ್‌ನಲ್ಲಿ ಪ್ರಾಬಲ್ಯ ಹೊಂದಿರುವ ದೇಶಗಳಲ್ಲಿ ಕ್ರಿಕೆಟ್ ತನ್ನದೇ ಛಾಪು ಮೂಡಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಕ್ರಿಕೆಟ್ ಅನ್ನು ಒಲಿಂಪಿಕ್ಸ್‌ಗೆ ಸೇರಿಸುವ ಉದ್ದೇಶವನ್ನು ಕೈಬಿಡಲಾಗಿದೆ. 1896 ರಲ್ಲಿ ಅಥೆನ್ಸ್‌ನಲ್ಲಿ ನಡೆದ ಮೊದಲ ಆಧುನಿಕ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್ ಅನ್ನು ಒಂದು ಭಾಗವಾಗಿ ಸೇರಿಸಲಾಗಿತ್ತು. ಆದರೆ ಹೆಚ್ಚಿನ ಜನರನ್ನು ಸೆಳೆಯುವಲ್ಲಿ ವಿಫಲವಾದ್ದರಿಂದ ಕ್ರೀಡಾಕೂಟದಿಂದ ಕೈಬಿಡಲಾಯಿತು.

    ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದ್ದರೂ ಒಲಿಂಪಿಕ್ಸ್‌ನಲ್ಲಿ ಪ್ರಾಬಲ್ಯ ಹೊಂದಿರುವ ದೇಶಗಳಲ್ಲಿ ಛಾಪು ಮೂಡಿಸುವಲ್ಲಿ ವಿಫಲವಾಗಿದೆ. ಆತಿಥೇಯ ರಾಷ್ಟ್ರಗಳು ಕ್ರಿಕೆಟ್ ಇಲ್ಲದ ರಾಷ್ಟ್ರಗಳಾಗಿರುವುದರಿಂದ ಈವೆಂಟ್‌ಗಳಲ್ಲಿ ಸೇರ್ಪಡೆಗೊಳಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಡಿಸ್ನಿ ಸ್ಟಾರ್, ವಯಾಕಾಮ್ ತೆಕ್ಕೆಗೆ IPL ಪ್ರಸಾರ ಹಕ್ಕು – ಪ್ರತಿ ಪಂದ್ಯಕ್ಕೆ 107.5 ಕೋಟಿ

    ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಲು ಪ್ರತ್ಯೇಕ ಕ್ರೀಡಾಂಗಣದ ಅವಶ್ಯಕತೆಯಿದೆ. ಜೊತೆಗೆ ಸಮಯ ನಿಗದಿ ಮಾಡಬೇಕಾಗುತ್ತದೆ. ಮುಖ್ಯವಾಗಿ ಇದರ ತಾಂತ್ರಿಕ ನೆರವಿಗೆ ಆರ್ಥಿಕತೆಯೂ ಮುಖ್ಯವಾಗುತ್ತದೆ. ಇದೆಲ್ಲದರ ನಡುವೆ ದೀರ್ಘಕಾಲದ ಕ್ರೀಡೆ ವೀಕ್ಷಿಸಲು ಕೆಲವೇ ಆಸಕ್ತ ರಾಷ್ಟ್ರಗಳನ್ನು ಹೊಂದಿರುವುದರಿಂದ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಿಲ್ಲ. ಒಂದು ವೇಳೆ ಕ್ರಿಕೆಟ್ ಅಯೋಜಿಸಲೇಬೇಕಿದ್ದರೆ ಆತಿಥೇಯ ನಗರಗಳ ಕ್ರಿಕೆಟ್ ಸಂಸ್ಕೃತಿಯ ಆಧಾರದ ಮೇಲೆ ಕ್ರೀಡೆಯ ಸೇರ್ಪಡೆಗಾಗಿ ಬಿಡ್ ಮಾಡಬಹುದಾಗಿದೆ.

    2028ರ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆ: ವಿಶ್ವ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಮಾಡುವ ಕೂಗು ಮತ್ತೊಮ್ಮೆ ಎದ್ದಿದೆ. ಕಳೆದ ಟೋಕಿಯೋ ಒಲಿಂಪಿಕ್ಸ್‌ ನಲ್ಲೇ ಕ್ರಿಕೆಟ್ ಸೇರ್ಪಡೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೂ ಈಗ 2028ರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅಧಿಕೃತವಾಗಿ ಸೇರ್ಪಡೆಯಾಗಲಿದೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬ್ಲಾರ್ಕೆ ಅವರು ತಿಳಿಸಿದ್ದಾರೆ. ಇದನ್ನೂ ಓದಿ: IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ

    ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಹಿಂದೆ ಕ್ರಿಕೆಟ್ ಆಟವೂ ಒಂದು ಭಾಗವಾಗಿತ್ತಾದರೂ ನಂತರ ಹೆಚ್ಚು ಸಮಯ ಬೇಕಾಗಿರುವುದರಿಂದ ಜೊತೆಗೆ ಅದಕ್ಕಾಗಿಯೇ ಪ್ರತ್ಯೇಕವಾದ ಬೃಹತ್ ಕ್ರೀಡಾಂಗಣದ ಅವಶ್ಯಕತೆ ಇದ್ದರಿಂದ ಕ್ರಿಕೆಟ್ ಅನ್ನು ಒಲಿಂಪಿಕ್ಸ್‌ ನಿಂದ ಕೈಬಿಡಲಾಗಿತ್ತು. ಇದೀಗ 2028ರ ಒಲಿಂಪಿಕ್‌ನಲ್ಲಿ ಕ್ರಿಕೆಟ್ ಸೇರಿಸುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಕ್ರಿಕೆಟ್ ಸೇರ್ಪಡೆಯಾದರೆ ಅದನ್ನು ಯಾವ ಮಾದರಿಯಲ್ಲಿ ಆಡಿಸಬೇಕು ಎಂಬುದರ ರೂಪುರೇಷೆಗಳನ್ನು ರಚಿಸುವುದು ಮುಖ್ಯವಾಗಿದೆ.

    2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್ ಸೇರಿದಂತೆ ಜಾಗತಿಕಮಟ್ಟದ 28 ಕ್ರೀಡೆಗಳು ಸೇರ್ಪಡೆಯಾಗಿದೆ. ಒಂದು ವೇಳೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಬೇಕಾದರೆ ಅದು ಕೂಡ ವಿಶ್ವಮಟ್ಟದಲ್ಲಿ ಪ್ರಚಲಿತಕ್ಕೆ ಬರಬೇಕು ಅದಕ್ಕಾಗಿ ಅನೇಕ ಕ್ರಮಗಳನ್ನು ಐಸಿಸಿ ಕಮಿಟಿಯು ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ.

    ಅಮೆರಿಕಾದಲ್ಲೂ ಕೂಡ ಕ್ರಿಕೆಟ್ ಅನ್ನು ಪ್ರಚುರಪಡಿಸುವ ಸಲುವಾಗಿ 2024 ಚುಟುಕು ವಿಶ್ವಕಪ್ ಅನ್ನು ನಡೆಸಲು ಚಿಂತಿಸುತ್ತಿವೆ. ಆಸ್ಟ್ರೆಲಿಯಾ, ವೆಸ್ಟ್ಇಂಡೀಸ್ ನಡುವಿನ ಸರಣಿ ಅಲ್ಲದೆ, ಬರುವ ಆಗಸ್ಟ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಟಿ20 ಸರಣಿ ನಡೆಸುವುದಕ್ಕೂ ಐಸಿಸಿ ಚಿಂತನೆ ನಡೆಸಿದೆ.

    ಐಸಿಸಿಯು ಟಿ20 ಮಾದರಿ ಕ್ರಿಕೆಟ್‌ಗೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಒಂದು ವೇಳೆ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್ ಸೇರ್ಪಡೆ ಆದರೆ ಐಪಿಎಲ್‌ನಂತೆ ಟಿ20 ಮಾದರಿಯ ಕ್ರಿಕೆಟ್ ನಡೆಯಬಹುದು ಎಂದು ಅಭಿಮಾನಿಗಳ ಲೆಕ್ಕಾಚಾರ ಇದೆ.

    ಪ್ಯಾಕೇಜ್ – ಎ (ಟಿವಿ ಪ್ರಸಾರಕ್ಕೆ)

    • ಒಟ್ಟು ಪಂದ್ಯಗಳು – 410
    • ನಿಗದಿತ ಮೌಲ್ಯ – 49 ಸಾವಿರ ಕೋಟಿ
    • ಒಟ್ಟು ಮೌಲ್ಯ – 23,575 ಕೋಟಿ
    • ಪ್ರತಿ ಪಂದ್ಯದ ಮೌಲ್ಯ – 57.5 ಕೋಟಿ

    ಪ್ಯಾಕೇಜ್ – ಬಿ (ಡಿಜಿಟಲ್ ಪ್ರಸಾರಕ್ಕೆ)

    • ಒಟ್ಟು ಪಂದ್ಯಗಳು – 410
    • ನಿಗದಿತ ಮೌಲ್ಯ – 33 ಸಾವಿರ ಕೋಟಿ
    • ಒಟ್ಟು ಮೌಲ್ಯ – 20,500 ಕೋಟಿ
    • ಪ್ರತಿ ಪಂದ್ಯದ ಮೌಲ್ಯ – 50 ಕೋಟಿ

  • ಡಿಸ್ನಿ ಸ್ಟಾರ್, ವಯಾಕಾಮ್ ತೆಕ್ಕೆಗೆ IPL ಪ್ರಸಾರ ಹಕ್ಕು – ಪ್ರತಿ ಪಂದ್ಯಕ್ಕೆ 107.5 ಕೋಟಿ

    ಡಿಸ್ನಿ ಸ್ಟಾರ್, ವಯಾಕಾಮ್ ತೆಕ್ಕೆಗೆ IPL ಪ್ರಸಾರ ಹಕ್ಕು – ಪ್ರತಿ ಪಂದ್ಯಕ್ಕೆ 107.5 ಕೋಟಿ

    ಮುಂಬೈ: ಸತತ 3 ದಿನಗಳಿಂದ ರೋಚಕತೆಯಿಂದ ಕೂಡಿದ್ದ 2023-27ರ ಅವಧಿಯ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ.

    IPL2022 GT VS RR - GT STARTS

    ವಾಲ್ಟ್ ಡಿಸ್ನಿ (ಡಿಸ್ನಿಸ್ಟಾರ್) ಸಂಸ್ಥೆಯ ಐಪಿಎಲ್ ಟಿವಿ ಪ್ರಸಾರದ ಹಕ್ಕನ್ನು ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್‌ ಮಾಲೀಕತ್ವದ ವಯಾಕಾಮ್18 ಸಂಸ್ಥೆಯು ಡಿಜಿಟಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ. ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯ 107.5 ಕೋಟಿ ಮೊತ್ತಕ್ಕೆ ಮಾರಾಟವಾಗಿದೆ. ಇದನ್ನೂ ಓದಿ: IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ

    IPL

    ‘ಟಿವಿ ಪ್ರಸಾರ ಹಕ್ಕು (ಪ್ಯಾಕೇಜ್ ಎ) 23,575 ಕೋಟಿ ರೂ.ಗೆ ಮತ್ತು ಡಿಜಿಟಲ್ ಹಕ್ಕು (ಪ್ಯಾಕೇಜ್-ಬಿ) 20,500 ಕೋಟಿ ರೂ.ಗೆ ಹರಾಜಾಗಿದೆ. ಅಂದರೆ ಪ್ರತಿ ಪಂದ್ಯ ಕ್ರಮವಾಗಿ 57.5 ಹಾಗೂ 50 ಕೋಟಿಗೆ ಬಿಕರಿಯಾಗಿದೆ. ಟಿವಿ ಹಾಗೂ ಡಿಜಿಟಲ್ ಹಕ್ಕುಗಳ ಒಟ್ಟು ಮೌಲ್ಯ 48,390 ಕೋಟಿ ಆಗಿದೆ ಬಿಸಿಸಿಐ ತಿಳಿಸಿದೆ.

  • ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

    ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

    ಮುಂಬೈ: ಲೆಕ್ಕಾಚಾರ ಯಶಸ್ವಿಯಾಗಿದ್ದು ಐಪಿಎಲ್‌ ಪ್ರಸಾರದ ಪ್ರತಿ ಪಂದ್ಯದ ಮೌಲ್ಯ 105.5 ಕೋಟಿ ರೂ.ಗಳಿಗೆ (13.5 ಮಿಲಿಯನ್‌ ಡಾಲರ್‌) ಬಿಕರಿಯಾಗಿದ್ದು, ವಿಶ್ವದ 2ನೇ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದೆ.

    ಹೌದು 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕಿಗಾಗಿ ನಡೆದ ಎರಡು ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯದ ಮೌಲ್ಯ 105.5 ಕೋಟಿ ರೂ.ಗೆ ಬಿಕರಿಯಾಗಿದ್ದು, ಈ ಮೂಲಕ ಐಪಿಎಲ್‌ ವಿಶ್ವದ ದುಬಾರಿ ಕ್ರೀಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ನಟಿಸಿದ್ರಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ?: ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮಾಜಿ ಕ್ರಿಕೆಟ್ ನಾಯಕ

    2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿತ್ತು. ಆದರೆ ಈಗ ವಾಹಿನಿಯೊಂದು 43,000 ಕೋಟಿ ರೂ.ಗೆ ಬಿಡ್‌ ಮಾಡಿ ಖರೀದಿಸಿದೆ ಎಂದು ವರದಿಯಾಗಿದೆ. ಟಿವಿ ಪ್ರಸಾರಕ್ಕೆ 57.5 ಕೋಟಿ ಹಾಗೂ ಡಿಜಿಟಲ್‌ ಪ್ರಸಾರಕ್ಕೆ 48 ಸಾವಿರ ಕೋಟಿ ರೂ.ಗಳಿಗೆ ಬಿಡ್‌ ಮಾಡಲಾಗಿದೆ. ಇದನ್ನೂ ಓದಿ: IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ

    IPL

    ಪ್ರಸ್ತುತ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರೂ. ಇದೆ. 2ನೇ ಸ್ಥಾನದಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌(ಇಪಿಎಲ್‌) ಇದ್ದು, ಪ್ರತಿ ಪಂದ್ಯದ ಮೌಲ್ಯ 81 ಕೋಟಿ ರೂ. ಆಗಿತ್ತು. ಇದೀಗ ಬಿಸಿಸಿಐ ಲೆಕ್ಕಾಚಾರದಂತೆ ಐಪಿಎಲ್‌ ಪ್ರಸಾರ 100 ಕೋಟಿ ಕೋಗಳನ್ನು ದಾಟಿದ್ದು, 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇಪಿಎಲ್‌ ಮೌಲ್ಯವನ್ನು ಹಿಂದಿಕ್ಕಿದೆ.