Tag: IPL

  • ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್‌ ಲಿಸ್ಟ್

    ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್‌ ಲಿಸ್ಟ್

    ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‍ನ (IPL) 16ನೇ ಆವೃತ್ತಿ ಆರಂಭಕ್ಕೂ ಮುನ್ನ ಫ್ರಾಂಚೈಸ್ ನಿನ್ನೆ ರಿಟೈನ್ (Retention) ಮತ್ತು ಬಿಡುಗಡೆಗೊಳಿಸಿದ (Release) ಆಟಗಾರರ ಪಟ್ಟಿಯನ್ನು ಸಲ್ಲಿಸಿದೆ. ಹಲವು ಲೆಕ್ಕಾಚಾರಗಳೊಂದಿಗೆ 10 ತಂಡಗಳು ತಮ್ಮ ಗೇಮ್ ಪ್ಲಾನ್‍ನೊಂದಿಗೆ ರಿಟೈನ್ ಪಟ್ಟಿ ಸಲ್ಲಿಕೆ ಮಾಡಿದೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಬಹುತೇಕ ಕಳೆದ ಬಾರಿ ಆಡಿದ ತಂಡದ ಪ್ರಮುಖ ಆಟಗಾರರನ್ನು ಹಾಗೆ ಉಳಿಸಿಕೊಂಡಿದೆ. ಈ ಮೂಲಕ 15ನೇ ಆವೃತ್ತಿಯಲ್ಲಿ ಆಡಿದ ಬಹುತೇಕ 11 ಮಂದಿ ಆಟಗಾರರು ಈ ಬಾರಿಯೂ ತಂಡದಲ್ಲಿದ್ದು ಈ ಮೂಲಕ ಹಳೆಯ ತಂಡಕ್ಕೆ ಮತ್ತಷ್ಟು ಹೊಸಬರ ಸೇರ್ಪಡೆಯೊಂದಿಗೆ ಪ್ರಶಸ್ತಿಯತ್ತ ಕಣ್ಣಿಟ್ಟಿದೆ. ಆದರೆ ತಂಡದಲ್ಲಿದ್ದ ಇಬ್ಬರು ಕನ್ನಡಿಗರನ್ನು ಕೈಬಿಟ್ಟಿದೆ. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ಬೈ ಹೇಳಿದ್ರೂ ಮುಂಬೈ ತಂಡದಲ್ಲೇ ಇರಲಿದ್ದಾರೆ ಪೋಲಾರ್ಡ್‌

    ಇದೀಗ ಬಿಡುಗಡೆಗೊಂಡ ಆಟಗಾರರ ಪೈಕಿ ಡ್ವೇನ್ ಬ್ರಾವೋ, ನಿಕೋಲಸ್ ಪೂರನ್, ಜೇಸನ್ ರಾಯ್, ಮನೀಶ್ ಪಾಂಡೆ ಪ್ರಮುಖರಾಗಿ ಗೋಚರಿಸುತ್ತಿದ್ದು, ಇವರೊಂದಿಗೆ ಬೆನ್‍ಸ್ಟೋಕ್ಸ್, ಸ್ಯಾಮ್ ಕರ್ರನ್, ಕ್ಯಾಮರನ್ ಗ್ರೀನ್ ಬೇಡಿಕೆಯ ಆಟಗಾರರಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
    ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರಣ್ ಶರ್ಮಾ, ಮಹಿಪಾಲ್ ಲೋಮರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‍ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್ ಇದನ್ನೂ ಓದಿ: ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

    ಬಿಡುಗಡೆಗೊಳಿಸಿದ ಆಟಗಾರರು: ಜೇಸನ್ ಬೆಹ್ರೆಂಡಾರ್ಫ್, ಅನೀಶ್ವರ್ ಗೌತಮ್, ಚಾಮಾ ಮಿಲಿಂದ್, ಲುವ್ನಿತ್ ಸಿಸೋಡಿಯಾ, ಶೆರ್ಫೇನ್ ರುದ್ರಫೋರ್ಡ್‌
    ಉಳಿದಿರುವ ಹಣ: 8.75 ಕೋಟಿ ರೂ.

    ಚೆನ್ನೈ ಸೂಪರ್ ಕಿಂಗ್ಸ್ (CSK)
    ಉಳಿಸಿಕೊಂಡಿರುವ ಆಟಗಾರರು: ಎಂ.ಎಸ್ ಧೋನಿ, ಅಂಬಟಿ ರಾಯುಡು, ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಎಸ್ ಸೇನಾಪತಿ, ರವೀಂದ್ರ ಜಡೇಜಾ, ಮೊಯೀನ್ ಅಲಿ, ಮಿಚೆಲ್ ಸ್ಯಾಂಟ್ನರ್, ಡ್ವೈನ್ ಪ್ರಿಟೋರಿಯಸ್, ಶಿವಂ ದುಬೆ, ಆರ್ ಹಂಗರ್ಗೇಕರ್, ದೀಪಕ್ ಚಾಹರ್, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ, ತುಷಾರ್‌ ದೇಶ್‌ಪಾಂಡೆ, ಮಹೇಶ್ ಪತಿರಣ, ಪ್ರಶಾಂತ್ ಸೋಲಂಕಿ

    ಬಿಡುಗಡೆಗೊಳಿಸಿದ ಆಟಗಾರರು: ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಆಡಮ್ ಮಿಲ್ನೆ, ಹರಿ ನಿಶಾಂತ್, ಕ್ರಿಸ್ ಜೋರ್ಡಾನ್, ಭಗತ್ ವರ್ಮಾ, ಕೆಎಂ ಆಸಿಫ್, ನಾರಾಯಣ ಜಗದೀಶನ್
    ಉಳಿದಿರುವ ಹಣ: 20.45 ಕೋಟಿ ರೂ. ಇದನ್ನೂ ಓದಿ: 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    ದೆಹಲಿ ಕ್ಯಾಪಿಟಲ್ಸ್ (DC)
    ಉಳಿಸಿಕೊಂಡಿರುವ ಆಟಗಾರರು: ರಿಷಭ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್‍ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಚ್ ನೋಟ್ರ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‍ಗಿಡಿ, ಮುಸ್ತಾಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಓಸ್ತ್ವಾಲ್

    ಬಿಡುಗಡೆಗೊಳಿಸಿದ ಆಟಗಾರರು: ಶಾರ್ದೂಲ್ ಠಾಕೂರ್, ಟಿಮ್ ಸೀಫರ್ಟ್, ಅಶ್ವಿನ್ ಹೆಬ್ಬಾರ್, ಶ್ರೀಕರ್ ಭರತ್, ಮನದೀಪ್ ಸಿಂಗ್
    ಉಳಿದಿರುವ ಹಣ: 19.45 ಕೋಟಿ ರೂ.

    IPL 2022 RCB VS SRH 9

    ಸನ್‍ರೈಸರ್ಸ್ ಹೈದರಾಬಾದ್ (SRH)
    ಉಳಿಸಿಕೊಂಡಿರುವ ಆಟಗಾರರು: ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಏಡೆನ್ ಮಾಕ್ರರ್ಂ, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ

    IPL 2022 RCB VS SRH 9

    ಬಿಡುಗಡೆಗೊಳಿಸಿದ ಆಟಗಾರರು: ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜಗದೀಶ್ ಸುಚಿತ್, ಪ್ರಿಯಮ್ ಗಾರ್ಗ್, ರವಿಕುಮಾರ್ ಸಮರ್ಥ್, ರೊಮಾರಿಯೋ ಶೆಫರ್ಡ್, ಸೌರಭ್ ದುಬೆ, ಸೀನ್ ಅಬಾಟ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್
    ಉಳಿದಿರುವ ಹಣ: 42.25 ಕೋಟಿ ರೂ.

    ರಾಜಸ್ಥಾನ್‌ ರಾಯಲ್ಸ್ (RR)
    ಉಳಿಸಿಕೊಂಡಿರುವ ಆಟಗಾರರು: ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಒಬೆದ್ ಮೆಕಾಯ್, ನವದೀಪ್ ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್, ಆರ್.ಅಶ್ವಿನ್, ಯಜುವೇಂದ್ರ ಚಹಲ್, ಕೆ.ಸಿ ಕಾರಿಯಪ್ಪ

    ಬಿಡುಗಡೆಗೊಳಿಸಿದ ಆಟಗಾರರು: ಅನುನಯ್ ಸಿಂಗ್, ಕಾರ್ಬಿನ್ ಬಾಷ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಕರುಣ್ ನಾಯರ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಶುಭಂ ಗರ್ವಾಲ್, ತೇಜಸ್ ಬರೋಕಾ
    ಉಳಿದಿರುವ ಹಣ: 13.2 ಕೋಟಿ ರೂ.

    ಮುಂಬೈ ಇಂಡಿಯನ್ಸ್ (MI)
    ಉಳಿಸಿಕೊಂಡಿರುವ ಆಟಗಾರರು: ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಟ್ರಿಸ್ಟಾನ್ ಸ್ಟಬ್ಸ್, ರಮಣದೀಪ್ ಸಿಂಗ್, ಟಿಮ್ ಡೇವಿಡ್, ಜಸ್ಪ್ರೀತ್ ಬುಮ್ರಾ, ಜೋಫ್ರಾ ಆರ್ಚರ್, ಹೃತಿಕ್ ಶೋಕಿನ್, ಕುಮಾರ್ ಕಾರ್ತಿಕೇಯ ಸಿಂಗ್, ಜೇಸನ್ ಬೆಹ್ರೆನ್‍ಡಾರ್ಫ್, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಆಕಾಶ್ ಮಧ್ವಲ್

    ಬಿಡುಗಡೆಗೊಳಿಸಿದ ಆಟಗಾರರು: ಪೋಲಾರ್ಡ್, ಅನ್ಮೋಲ್ಪ್ರೀತ್ ಸಿಂಗ್, ಆರ್ಯನ್ ಜುಯಲ್, ಬೇಸಿಲ್ ಥಂಪಿ, ಡೇನಿಯಲ್ ಸಾಮ್ಸ್, ಫ್ಯಾಬಿಯನ್ ಅಲೆನ್, ಜಯದೇವ್ ಉನದ್ಕಟ್, ಮಯಾಂಕ್ ಮಾರ್ಕಾಂಡೆ, ಮುರುಗನ್ ಅಶ್ವಿನ್, ರಾಹುಲ್ ಬುದ್ಧಿ, ರಿಲೆ ಮೆರೆಡಿತ್, ಸಂಜಯ್ ಯಾದವ್, ಟೈಮಲ್ ಮಿಲ್ಸ್
    ಉಳಿದಿರುವ ಹಣ: 20.55 ಕೋಟಿ ರೂ.

    ಲಕ್ನೋ ಸೂಪರ್ ಜೈಂಟ್ಸ್ (LSG)
    ಉಳಿಸಿಕೊಂಡಿರುವ ಆಟಗಾರರು: ಕೆಎಲ್ ರಾಹುಲ್, ಆಯುಷ್ ಬದೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್‍ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯಿ

    ಬಿಡುಗಡೆಗೊಳಿಸಿದ ಆಟಗಾರರು: ಆಂಡ್ರ್ಯೂ ಟೈ, ಅಂಕಿತ್ ರಾಜ್‍ಪೂತ್, ದುಷ್ಮಂತ ಚಮೀರಾ, ಎವಿನ್ ಲೂಯಿಸ್, ಜೇಸನ್ ಹೋಲ್ಡರ್, ಮನೀಶ್ ಪಾಂಡೆ, ಶಹಬಾಜ್ ನದೀಮ್
    ಉಳಿದಿರುವ ಹಣ: 23.35 ಕೋಟಿ ರೂ.

    ಗುಜರಾತ್ ಟೈಟಾನ್ಸ್ (GT)
    ಉಳಿಸಿಕೊಂಡಿರುವ ಆಟಗಾರರು: ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ, ರಶೀದ್ ಖಾನ್, ವಿಜಯ್ ಶಂಕರ್, ಆರ್.ಸಾಯಿ ಕಿಶೋರ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ನೂರ್ ಅಹ್ಮದ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್

    IPL 2022 SCK VS GT 4

    ಬಿಡುಗಡೆಗೊಳಿಸಿದ ಆಟಗಾರರು: ರಹಮಾನುಲ್ಲಾ ಗುರ್ಬಾಜ್, ಲಾಕಿ ಫರ್ಗುಸನ್, ಡೊಮಿನಿಕ್ ಡ್ರೇಕ್ಸ್, ಗುರುಕೀರತ್ ಸಿಂಗ್, ಜೇಸನ್ ರಾಯ್, ವರುಣ್ ಆರೋನ್
    ಉಳಿದಿರುವ ಹಣ: 19.25 ಕೋಟಿ ರೂ.

    ಪಂಜಾಬ್ ಕಿಂಗ್ಸ್ (PBKS)
    ಉಳಿಸಿಕೊಂಡಿರುವ ಆಟಗಾರರು: ಶಿಖರ್ ಧವನ್, ಶಾರುಖ್ ಖಾನ್, ಜಾನಿ ಬೈರ್‍ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‍ಸ್ಟೋನ್, ಅಥರ್ವ ಟೈಡೆ, ಅರ್ಷ್‍ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಹರ್, ಹಪ್ರ್ರೀತ್ ಬ್ರಾರ್

    ಬಿಡುಗಡೆಗೊಳಿಸಿದ ಆಟಗಾರರು: ಮಯಾಂಕ್ ಅಗರ್ವಾಲ್, ಒಡೆನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ರಿಟಿಕ್ ಚಟರ್ಜಿ
    ಉಳಿದಿರುವ ಹಣ: 32.2 ಕೋಟಿ ರೂ.

    IPL 2022 MI VS KKR 0 06

    ಕೋಲ್ಕತ್ತಾ ನೈಟ್ ರೈಡರ್ಸ್ (KKR)
    ಉಳಿಸಿಕೊಂಡಿರುವ ಆಟಗಾರರು: ಶ್ರೇಯಸ್ ಅಯ್ಯರ್, ರಹಮಾನುಲ್ಲಾ ಗುರ್ಬಾಜ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ನಿತೀಶ್ ರಾಣಾ, ಅನುಕುಲ್ ರಾಯ್, ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಉಮೇಶ್ ಯಾದವ್, ಸಿವಿ ವರುಣ್, ಹರ್ಷಿತ್

    IPL DC VS KKR 9

    ಬಿಡುಗಡೆಗೊಳಿಸಿದ ಆಟಗಾರರು: ಪ್ಯಾಟ್ ಕಮ್ಮಿನ್ಸ್, ಸ್ಯಾಮ್ ಬಿಲ್ಲಿಂಗ್ಸ್, ಅಮನ್ ಖಾನ್, ಶಿವಂ ಮಾವಿ, ಮೊಹಮ್ಮದ್ ನಬಿ, ಚಾಮಿಕಾ ಕರುಣಾರತ್ನೆ, ಆರೋನ್ ಫಿಂಚ್, ಅಲೆಕ್ಸ್ ಹೇಲ್ಸ್, ಅಭಿಜೀತ್ ತೋಮರ್, ಅಜಿಂಕ್ಯ ರಹಾನೆ, ಅಶೋಕ್ ಶರ್ಮಾ, ಬಾಬಾ ಇಂದ್ರಜಿತ್, ಪ್ರಥಮ್ ಸಿಂಗ್, ರಮೇಶ್ ಕುಮಾರ್, ರಸಿಖ್ ಸಲಾಂ, ಶೆಲ್ಡನ್ ಜಾಕ್ಸನ್
    ಉಳಿದಿರುವ ಹಣ: 7.05 ಕೋಟಿ ರೂ.

    Live Tv
    [brid partner=56869869 player=32851 video=960834 autoplay=true]

  • ಐಪಿಎಲ್‌ಗೆ ಗುಡ್‌ಬೈ ಹೇಳಿದ್ರೂ ಮುಂಬೈ ತಂಡದಲ್ಲೇ ಇರಲಿದ್ದಾರೆ ಪೋಲಾರ್ಡ್‌

    ಐಪಿಎಲ್‌ಗೆ ಗುಡ್‌ಬೈ ಹೇಳಿದ್ರೂ ಮುಂಬೈ ತಂಡದಲ್ಲೇ ಇರಲಿದ್ದಾರೆ ಪೋಲಾರ್ಡ್‌

    ಮುಂಬೈ: ಮುಂಬೈ ಇಂಡಿಯನ್ಸ್‌(Mumbai Indians) ತಂಡದ ಆಲ್‌ರೌಂಡರ್‌, ವಿಂಡೀಸ್‌ ಆಟಗಾರ ಕಿರನ್‌ ಪೋಲಾರ್ಡ್‌(Kieron Pollard) ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL) ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

    2010 ರಿಂದ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಪೋಲಾರ್ಡ್‌ ಇನ್ನು ಮುಂದೆ ಬ್ಯಾಟಿಂಗ್‌ ಕೋಚ್‌(Batting Coach) ಆಗಿ ಮುಂದುವರಿಯಲಿದ್ದಾರೆ.

    ಕೊನೆಯ ಸ್ಲಾಗ್‌ ಓವರ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದ ಪೋಲಾರ್ಡ್‌ ಆಕ್ರಮಣಕಾರಿ ಆಟಕ್ಕೆ ಪ್ರಸಿದ್ದರಾಗಿದ್ದರು. ಸಿಕ್ಸರ್‌, ಬೌಂಡರಿ ಚಚ್ಚುವ ಮೂಲಕ ಮುಂಬೈ ತಂಡದ ಆಧಾರಸ್ತಂಭವಾಗಿ ಪಂದ್ಯದ ಫಲಿತಾಂಶವನ್ನೇ ಬದಲಾಯಿಸುತ್ತಿದ್ದರು. ಇದನ್ನೂ ಓದಿ: ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

    “ನಾನು ಇನ್ನೂ ಕೆಲವು ವರ್ಷಗಳ ಕಾಲ ಆಟವಾಡಲು ಉದ್ದೇಶಿಸಿದ್ದರಿಂದ ಇದು ಸುಲಭವಾದ ನಿರ್ಧಾರವಲ್ಲ. ಮುಂಬೈ ಇಂಡಿಯನ್ಸ್‌ ಪರ ಆಡಿದ ಬಳಿಕ ಮತ್ತೆ ಎಂಐ ವಿರುದ್ಧ ಆಡಲು ಬಯಸುವುದಿಲ್ಲ. ಒಮ್ಮೆ ಎಂಐ ಪರ ಆಡಿದ ಬಳಿಕ ಯಾವಾಗಲೂ ನಾನು ಎಂಐ ಆಗಿರುತ್ತೇನೆ. ಎಂಐಗೆ ಭಾವನಾತ್ಮಕ ವಿದಾಯ ಅಲ್ಲ. ಮುಂಬೈ ಇಂಡಿಯನ್ಸ್‌ ತಂಡದ ಜೊತೆಗಿನ ಚರ್ಚೆಯ ಬಳಿಕ ನಾನು ಐಪಿಎಲ್‌ ಬದುಕಿಗೆ ನಿವೃತ್ತಿ ಹೇಳುತ್ತಿದ್ದೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

    ತಂಡದ ಮಾಲಕಿ ನೀತಾ ಅಂಬಾನಿ(Nita. M. Ambani) ಪೊಲಾರ್ಡ್‌ ಆಟವನ್ನು ಮೆಲುಕು ಹಾಕಿ ಶುಭ ಹಾರೈಸಿದ್ದಾರೆ.

    “ಐಪಿಎಲ್‌ ಮೂರನೇ ಆವೃತ್ತಿಯಿಂದ ನಾವು ಪೊಲಾರ್ಡ್‌ ಸಂತೋಷ, ಬೆವರು ಮತ್ತು ಕಣ್ಣೀರನ್ನು ಹಂಚಿಕೊಂಡಿದ್ದೇವೆ. ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ನಮ್ಮ ಚಾಂಪಿಯನ್ಸ್ ಲೀಗ್ ಟ್ರೋಫಿ ಮತ್ತು ಎಲ್ಲಾ 5 ಐಪಿಎಲ್‌ ವಿಜೇತ ತಂಡದ ಭಾಗವಾಗಿದ್ದಾರೆ. ಮೈದಾನದಲ್ಲಿ ಅವರ ಮ್ಯಾಜಿಕ್ ನೋಡುವುದನ್ನು ನಾವು ತಪ್ಪಿಸಿಕೊಳ್ಳುತ್ತೇವೆ. ಆದರೆ ಅವರು ಎಂಐ ತಂಡಕ್ಕೆ ಆಡುವುದನ್ನು ಮುಂದುವರಿಸುತ್ತಾರೆ. ಬ್ಯಾಟಿಂಗ್ ತರಬೇತುದಾರರಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಪೋಲಾರ್ಡ್‌ ಅವರ ಹೊಸ ಪ್ರಯಾಣವು ಅವರಿಗೆ ಇನ್ನೂ ಹೆಚ್ಚಿನ ವೈಭವ, ವಿಜಯ ತರಲಿ” ಎಂದು ನೀತಾ ಅಂಬಾನಿ ಶುಭ ಹಾರೈಸಿದ್ದಾರೆ.

    ಐಪಿಎಲ್‌ ಸಾಧನೆ:
    ಒಟ್ಟು 171 ಇನ್ನಿಂಗ್ಸ್‌ ಆಡಿರುವ ಪೋಲಾರ್ಡ್‌ 147.32 ಸ್ಟ್ರೈಕ್‌ ರೇಟ್‌ನಲ್ಲಿ 3,412 ರನ್‌ ಹೊಡೆದಿದ್ದಾರೆ. ಗರಿಷ್ಟ 87 ರನ್‌ ಹೊಡೆದಿರುವ ಇವರು 16 ಅರ್ಧಶತಕ ಬಾರಿಸಿದ್ದಾರೆ.

    107 ಇನ್ನಿಂಗ್ಸ್‌ನಲ್ಲಿ 69 ವಿಕೆಟ್‌ 103 ಕ್ಯಾಚ್‌ಗಳನ್ನು ಪಡೆದಿದ್ದಾರೆ. 44 ರನ್‌ಗಳಿಗೆ 4 ವಿಕೆಟ್‌ ಪಡೆದಿದ್ದು ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ

    ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ

    ಮೆಲ್ಬರ್ನ್: ಟಿ20 ವಿಶ್ವಕಪ್‌ನ (T20 World Cup) ಸೆಮಿಫೈನಲ್ ಕದನದಲ್ಲಿ ಭಾರತ (India) ಹೀನಾಯವಾಗಿ ಸೋತು ಎರಡು ದಿನ ಕಳೆದರೂ ಅಭಿಮಾನಿಗಳಿಗೆ ಮಾತ್ರ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಬಿಸಿ-ಬಿಸಿ ಚರ್ಚೆಗಳು ನಡೆಯುತ್ತಲೇ ಇವೆ.

    ಟೀಂ ಇಂಡಿಯಾ (Team India) ಎದುರಾಳಿಗಳಿಗಳು ಭಾರತದ ಸೋಲನ್ನು ಸಂಭ್ರಮಿಸುತ್ತಿದ್ದರೆ, ತಜ್ಞರು ಇದಕ್ಕೆ ಕಾರಣಗಳನ್ನು ಹುಡುಕಿದ್ದಾರೆ. ಈ ನಡುವೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಗರು (Cricketer) ಟೀಂ ಇಂಡಿಯಾ ಸೋಲಿಗೆ ಕಾರಣಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಅದರಲ್ಲಿ ಐಪಿಎಲ್ (IPL) ಪ್ರಮುಖ ಕಾರಣ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಭಯಂಕರವಾಗಿ ಆಡಿದ್ರೂ ಭಾರತ ಸೋಲೋದಕ್ಕೆ ಅರ್ಹವಾಗಿತ್ತು- ಅಖ್ತರ್ ಟೀಕೆ

    ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ (Wasim Akram), ಶೋಯೆಬ್ ಮಲಿಕ್ (Shoaib Malik), ವಕಾರ್ ಯೂನಿಸ್ ಮೊದಲಾದವರು ಟೀಂ ಇಂಡಿಯಾ ಸೆಮಿಫೈನಲ್ ಸೋಲಿಗೆ ಕಾರಣಗಳನ್ನ ವಿಶ್ಲೇಷಣೆ ಮಾಡಿದ್ದಾರೆ. 2007ರ ಟಿ20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲೇ ಟೀಂ ಇಂಡಿಯಾ ಕೊನೆಯದಾಗಿ ಟಿ20 ವಿಶ್ವಕಪ್ ಗೆದ್ದಿತ್ತು. ಇದಾದ ಮರು ವರ್ಷದಲ್ಲಿ ಅಂದರೆ 2008 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾಯಿತು. ಅಂದಿನಿಂದಲೂ ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿದೆ. 2011ರಲ್ಲಿ ಮಾತ್ರ ಏಕದಿನ ವಿಶ್ವಕಪ್ ಗೆದ್ದಿತು. ಆಗ ಎಂ.ಎಸ್‌.ಧೋನಿ (MS Dhoni) ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿದ್ದರು ಎಂದು ಹೇಳಿದ್ದಾರೆ.

    ಭಾರತ ಮತ್ತು ಇತರ ತಂಡಗಳ ನಡುವೆ ದೊಡ್ಡ ವ್ಯತ್ಯಾಸವೆಂದರೆ ಅದು ಐಪಿಎಲ್ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಐಪಿಎಲ್ ಆರಂಭವಾದ ನಂತರ ಟಿಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೀನಾಯ ಸೋಲಿನ ಬಳಿಕ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೋಹಿತ್‌ ಶರ್ಮಾ

    ಇದೇ ಸಂದರ್ಭದಲ್ಲಿ ಐಪಿಎಲ್ ಜೊತೆಗೆ ಹೆಚ್ಚುವರಿ ಫ್ಯಾಂಚೈಸಿ ಲೀಗ್ ಆಡುವುದು ಭಾರತಕ್ಕೆ ಸಹಾಯ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೋಯೆಬ್ ಮಲ್ಲಿಕ್, ಖಂಡಿತಾ ಹೌದು. ಯುವ ಆಟಗಾರರಿಗೆ ಮಾನ್ಯತೆ ಪಡೆಯಲು ಐಪಿಎಲ್ ಒಂದು ದೊಡ್ಡ ವೇದಿಕೆ. ಈ ಲೀಗ್‌ಗಳು ಆಟಗಾರರಿಗೆ ಪರಿಸ್ಥಿತಿಗಳನ್ನು ಹೆಚ್ಚು ನಿಖರವಾಗಿ ನಿರ್ಣಯಿಸಲು ಸಹಾಯ ಮಾಡುತ್ತವೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ವ್ಯತ್ಯಾಗಳ ಬಗ್ಗೆ ತಿಳಿಸುತ್ತದೆ. ಹೆಚ್ಚುವರಿ ಜವಾಬ್ದಾರಿಗಳು, ನಿಮ್ಮ ಪ್ರದರ್ಶನ ಹೇಗಿರಬೇಕು ಅನ್ನೋ ಮಾರ್ಕ್ ಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ವಿಶ್ವವಿಖ್ಯಾತಿ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುತ್ತಾರೆ. ಈ ಎಲ್ಲ ಪಾಠಗಳು ಐಪಿಎಲ್ ಕಲಿಸುತ್ತದೆ ಎಂದು ಮಲಿಕ್ ಸಲಹೆ ನೀಡಿದ್ದಾರೆ.

    2008ರಲ್ಲಿ ಐಪಿಎಲ್ ಆರಂಭವಾಯಿತು. ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇತ್ತೀಚಿನ ಐಪಿಎಲ್ ಆವೃತ್ತಿಗಳಲ್ಲಿ ಬಹುಪಾಲು ತಂಡಗಳಿಗೆ ಟೀಂ ಇಂಡಿಯಾ ಆಟಗಾರರೇ ನಾಯಕರಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • #ArrestKohli: ಫ್ಯಾನ್ಸ್‌ವಾರ್‌ನಲ್ಲಿ ನಡೆದೇ ಹೋಯ್ತು ಕೊಲೆ – ಕಿಂಗ್ ಕೊಹ್ಲಿ ಬಂಧನಕ್ಕೆ ಆಗ್ರಹ

    #ArrestKohli: ಫ್ಯಾನ್ಸ್‌ವಾರ್‌ನಲ್ಲಿ ನಡೆದೇ ಹೋಯ್ತು ಕೊಲೆ – ಕಿಂಗ್ ಕೊಹ್ಲಿ ಬಂಧನಕ್ಕೆ ಆಗ್ರಹ

    ಚೆನ್ನೈ: ಟಿ20 ವಿಶ್ವಕಪ್ (T20 WorldCup) ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಕ್ಕೆ ಬಂದಿಳಿದಿರುವ ಟೀಂ ಇಂಡಿಯಾ (Team India) ಕಾಂಗರೂ ನಾಡಿನಲ್ಲಿ ಅಭ್ಯಾಸ ಆರಂಭಿಸಿದೆ. ಏಷ್ಯಾಕಪ್ -2022 (AisaCup) ಗ್ರೇಟ್ ಕಂಬ್ಯಾಕ್ ಆಗಿರುವ ವಿರಾಟ್ ಕೊಹ್ಲಿ ಅವರಿಂದ ಭರ್ಜರಿ ರನ್‌ಗಳನ್ನ ಅಭಿಮಾನಿಗಳು ಎದುರುನೋಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಕೊಹ್ಲಿಯನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    #ArrestKohli ಹ್ಯಾಶ್‌ಟ್ಯಾಗ್‌ನೊಂದಿಗೆ ಅಭಿಯಾನ ಶುರುವಾಗಿದ್ದು, ವಿರಾಟ್ ಕೊಹ್ಲಿ (Virat Kohli) ಅವರನ್ನ ಅರೆಸ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ಗಲಾಟೆಯಲ್ಲಿ ಸಂಭವಿಸಿದ ದುರಂತದಿಂದ ಇದೀಗ ಸ್ಟಾರ್‌ಗಳು ತಲೆ ಕೆಡಿಸಿಕೊಳ್ಳುವಂತಾಗಿದೆ. ಇದನ್ನೂ ಓದಿ: ಬಿಸಿಸಿಐಗೆ ಜಿಎಸ್‍ಟಿ ಬರೆ – 2023ರ ವಿಶ್ವಕಪ್‍ಗೂ ಮುನ್ನ 955 ಕೋಟಿ ರೂ. ನಷ್ಟದ ಭೀತಿ

    ಘಟನೆಗೆ ಕಾರಣವೇನು?
    ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬಗ್ಗೆ ಸ್ನೇಹಿತರಿಬ್ಬರ ನಡುವೆ ನಡೆದ ಚರ್ಚೆ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ತಮಿಳುನಾಡಿನ (Tamilnadu) ಅರಿಯಾಲೂರ್ ಜಿಲ್ಲೆಯಲ್ಲಿ ನಡೆದಿದೆ. ಆರ್‌ಸಿಬಿ ತಂಡವನ್ನು ಲೇವಡಿ ಮಾಡಿದ್ದ ಕಾರಣಕ್ಕಾಗಿ ಸ್ನೇಹಿತ ಮುಂಬೈ ಇಂಡಿಯನ್ಸ್ ಹಾಗೂ ರೋಹಿತ್ ಶರ್ಮಾ ಅಭಿಮಾನಿಯನ್ನು ಕೊಲೆ ಮಾಡಿದ್ದಾನೆ.  

    ಕೊಲೆ ಆರೋಪಿಯನ್ನು ಈಗಾಗಲೇ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಮದ್ಯ ಸೇವಿಸಿ ಇಬ್ಬರೂ ಸ್ನೇಹಿತರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕುರಿತಾಗಿ ಅಭಿಮಾನದಿಂದ ವಾಗ್ವಾದ ಮಾಡುತ್ತಿದ್ದರು. ವಾಗ್ವಾದ ವಿಕೋಪಕ್ಕೆ ತಿರುಗಿ ಧರ್ಮರಾಜ್ ತನ್ನ ಸ್ನೇಹಿತನಾಗಿದ್ದ ವಿಘ್ನೇಶ್‌ನನ್ನು ಬಾಟಲಿಯಿಂದ ಹೊಡೆದು ಸಾಯಿಸಿದ್ದಾನೆ. ಇದನ್ನೂ ಓದಿ: ಲಂಕನ್ನರಿಗೆ ಲಗಾಮು ಹಾಕಿ 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ

    https://twitter.com/its_monk45/status/1580963457742307328

    ಘಟನೆಯ ಬೆನ್ನಲ್ಲೇ ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವಿರಾಟ್ ಕೊಹ್ಲಿಯನ್ನು ಬಂಧಿಸಿ ಎನ್ನುವ ಅಭಿಯಾನ ಆರಂಭಿಸಿದ್ದಾರೆ. ಇದಕ್ಕೆ ಕೌಂಟರ್ ನೀಡುವ ಪ್ರಯತ್ನವನ್ನು ಕೊಹ್ಲಿ ಹಾಗೂ ಆರ್‌ಸಿಬಿ ಅಭಿಮಾನಿಗಳು ಮಾಡಿದ್ದಾರೆ.

    ಐಪಿಎಲ್‌ನಲ್ಲಿ (IPL) ಕಾದಾಡುವ ಇದೇ ಆಟಗಾರರು, ಟೀಂ ಇಂಡಿಯಾ ಪರ ಒಟ್ಟಿಗೇ ಕಣಕ್ಕಿಳಿಯುವ ಮೂಲಕ ದೇಶವೇ ಗರ್ವ ಪಡುವಂತಹ ರೀತಿಯಲ್ಲಿ ಆಡುತ್ತಿದ್ದಾರೆ. ಆದರೆ ಹುಟ್ಟು ಅಭಿಮಾನದಿಂದ ಆಗಿರುವ ಘಟನೆ ಸ್ಟಾರ್ ಕ್ರಿಕೆಟಿಗರಿಗೆ ತಲೆನೋವುಂಟು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ನೆಚ್ಚಿನ ಕ್ರಿಕೆಟಿಗ ರಾಸ್‌ ಟೇಲರ್‌: ಜೈಶಂಕರ್‌

    ನನ್ನ ನೆಚ್ಚಿನ ಕ್ರಿಕೆಟಿಗ ರಾಸ್‌ ಟೇಲರ್‌: ಜೈಶಂಕರ್‌

    ನವದೆಹಲಿ: ನನಗೆ ವೈಯಕ್ತಿಕವಾಗಿ ನೆಚ್ಚಿನ ಆಟಗಾರ ನ್ಯೂಜಿಲೆಂಡ್ (New Zealand) ಕ್ರಿಕೆಟಿಗ ರಾಸ್ ಟೇಲರ್ (Ross Taylor) ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ (S. Jaishankar) ತಿಳಿಸಿದರು.

    ಭಾರತ (India) ಮತ್ತು ನ್ಯೂಜಿಲೆಂಡ್‌ ನಡುವಿನ ಕ್ರಿಕೆಟ್‌ ಬಾಂಧವ್ಯವನ್ನು ಶ್ಲಾಘಿಸಿದ ಅವರು, ನಮಗೆ ನ್ಯೂಜಿಲೆಂಡ್‌ ಎಂದಾಗ ಅನೇಕ ವಿಷಯಗಳು ಮನಸ್ಸಿಗೆ ಬರುತ್ತದೆ. ಆದರೆ ಅದಕ್ಕೆ ಉತ್ತಮ ಉದಾಹರಣೆಯೆಂದರೆ ಕ್ರಿಕೆಟ್‌ (Cricket) ಎಂದು ಹೇಳುತ್ತೇನೆ. ಭಾರತ ಹಾಗೂ ನ್ಯೂಜಿಲೆಂಡ್‌ ದೇಶಗಳು ಕ್ರಿಕೆಟ್‌ ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿಯನ್ನು ಹೊಂದಿವೆ ಎಂದು ಹೇಳಿದರು.

    ಭಾರತೀಯರು ಎಂದಿಗೂ ಜಾನ್ ರೈಟ್ ಅವರನ್ನು ಮರೆಯುವುದಿಲ್ಲ ಎಂದ ಅವರು, ಭಾರತೀಯರಿಗೆ ಹೆಚ್ಚು ತಿಳಿದಿರುವ ನ್ಯೂಜಿಲೆಂಡ್ ಆಟಗಾರ ವಿಲಿಯಮ್ಸನ್ ಆಗಿದ್ದಾರೆ. ಅವರು ನಮ್ಮ ದೇಶದ ವಿರುದ್ಧ ಆಡುವುದನ್ನು ಹೊರತು ಪಡಿಸಿ ಹೆಚ್ಚಿನ ಸಮಯ ನಾವು ಅವರನ್ನು ಇಷ್ಟ ಪಡುತ್ತೇವೆ. ಆದರೆ ನನ್ನ ನೆಚ್ಚಿನ ಆಟಗಾರ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಆದರೆ ಅದು ಬೇರೆ ವಿಷಯ ಎಂದು ಈ ವೇಳೆ ತಿಳಿಸಿದರು.

    ಭಾರತದ ಮಾಜಿ ಕೋಚ್‌ ನ್ಯೂಜಿಲೆಂಡ್‌ನ ಜಾನ್‌ ರೈಟ್‌, ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ (CSK) ಮುಖ್ಯ ಕೋಚ್‌ ನೈಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್‌ ಫ್ಲೆಮಿಂಗ್‌ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದರು. ಫ್ಲೆಮಿಂಗ್‌ 2010, 2011, 2018 ಹಾಗೂ 2021ರಲ್ಲಿ CSK ಟೀಂಗೆ ಕೋಚ್‌ ಆಗಿ ಮಾರ್ಗದರ್ಶನ ನೀಡಿದ್ದರು. ಈ ಸಮಯದಲ್ಲಿ ಐಪಿಎಲ್‌ನ ಕಿರೀಟವನ್ನು CSK ತಂಡ ತನ್ನದಾಗಿಸಿಕೊಂಡಿತ್ತು. ಇದರ ಜೊತೆಗೆ ಕಿವೀಸ್‌ನ ನಾಯಕ ವಿಲಿಯಮ್ಸನ್‌ ಸನ್‌ರೈಸರ್ಸ್‌ ಹೈದರಾಬಾದ್‌ನ ಪ್ರಸ್ತುತ ನಾಯಕರಾಗಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ

    ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ತವರಿನ ಅಭಿಮಾನಿಗಳ ಮುಂದೆ ಐಪಿಎಲ್‍ಗೆ (IPL) ನಿವೃತ್ತಿ ಘೋಷಿಸುವುದು ಬಹುತೇಕ ಖಚಿತಗೊಂಡಿದೆ.

    15ನೇ ಆವೃತ್ತಿ ಐಪಿಎಲ್ ಧೋನಿಯ ಕೊನೆಯ ಆವೃತ್ತಿ ಎಂದು ಹೇಳಲಾಗಿತ್ತು. ಆದರೆ ಧೋನಿ ನಾನು 16ನೇ ಆವೃತ್ತಿ ಐಪಿಎಲ್ ಆಡುವುದಾಗಿ ಹೇಳಿದ್ದರು. ಜೊತೆಗೆ ಒಂದು ಮಹತ್ತರವಾದ ಆಸೆಯನ್ನು ವ್ಯಕ್ತಪಡಿಸಿದ್ದರು. ಇದೀಗ ಆ ಆಸೆ ನೆರವೇರುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: 2022ರಲ್ಲಿ ಭಾರತ ಆಡಿದ್ದು 27 ಟಿ20 ಪಂದ್ಯ – ಬುಮ್ರಾ ಆಡಿದ್ದು ಬರೀ 3 ಪಂದ್ಯ!

    ಧೋನಿ ಟೀಂ ಇಂಡಿಯಾ ಬಳಿಕ ಅತೀ ಹೆಚ್ಚು ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುವ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡ. ಐಪಿಎಲ್ 2008ರಲ್ಲಿ ಆರಂಭವಾದ ಬಳಿಕ ಚೆನ್ನೈ ಪರ ಆಡುತ್ತಿರುವ ಧೋನಿ ವಿಶೇಷವಾದ ಸಂಬಂಧವನ್ನು ಚೆನ್ನೈ ತಂಡ ಮತ್ತು ತಮಿಳುನಾಡಿನ ಜನರೊಂದಿಗೆ ಹೊಂದಿದ್ದಾರೆ. ಹಾಗಾಗಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈ ನಗರದ ಎಂ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಅಚ್ಚು-ಮೆಚ್ಚಿನ ಪ್ರೇಕ್ಷಕರ ಮುಂದೆ ಆಡಿ ನಿವೃತ್ತಿ ಘೋಷಿಸುವ ಆಸೆಯನ್ನು ಧೋನಿ ವ್ಯಕ್ತಪಡಿಸಿದ್ದರು. ನನ್ನ ಕೊನೆಯ ತವರಿನ ಏಕದಿನ ಪಂದ್ಯ ರಾಂಚಿಯಲ್ಲೇ ನಡೆದಿದ್ದರೆ ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲೇ ಇರಬೇಕೆಂದು ಆಶಿಸುತ್ತೇನೆ. ಇದು ಮುಂದಿನ ವರ್ಷ ಆಗಿರುತ್ತಾ ಅಥವಾ ಮುಂದಿನ ಐದು ವರ್ಷದಲ್ಲಿ ಆಗುತ್ತಾ ನಿಜಕ್ಕೂ ಗೊತ್ತಿಲ್ಲ ಎಂದು ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಓಡೆನ್ ಸ್ಮಿತ್, ಬೇಬಿ ಎಬಿಡಿ ಹೊಡಿಬಡಿ ಆಟ – ತಲಾ ಆರಾರು ಎಸೆತ ಐದೈದು ಸಿಕ್ಸ್ 60 ರನ್‌

    ಇದೀಗ ಧೋನಿ ಆಸೆಯಂತೆ ಅವರ ಕೊನೆಯ ಪಂದ್ಯ ಚೆನ್ನೈನಲ್ಲೇ ನಡೆಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ 2023ರ ಐಪಿಎಲ್ ಪಂದ್ಯಗಳು ತವರಿನ ಚರಣದ ಪಂದ್ಯಗಳೊಂದಿಗೆ ನಡೆಯಲಿದೆ ಎಂದು ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿ ಹೊರಬಿದ್ದ ಬಳಿಕ ಧೋನಿ ನಿವೃತ್ತಿ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ ಎಂಬುದು ಬಹತೇಕ ಖಚಿಗೊಂಡಿದೆ. ಇದು ಧೋನಿ ಅಭಿಮಾನಿಗಳಲ್ಲಿ ಸಂತಸ ತಂದಿದೆ.

    2019ರ ಬಳಿಕ ಧೋನಿ ಚೆನ್ನೈನಲ್ಲಿ ಆಡಿಲ್ಲ. ಕೊರೊನಾದಿಂದಾಗಿ (Corona) 2020ರ ಐಪಿಎಲ್ ಯುಎಇನಲ್ಲಿ (UAE) ನಡೆದರೆ, 2021ರ ಐಪಿಎಲ್ ಮೊದಲ ಚರಣ ಭಾರತದಲ್ಲಿ ನಡೆದರೆ, ಎರಡನೇ ಚರಣ ಯುಎಇನಲ್ಲಿ ನಡೆದಿತ್ತು. 2022ರ ಐಪಿಎಲ್ ಮುಂಬೈ ಮತ್ತು ಪುಣೆ ನಗರದಲ್ಲಿ ಮಾತ್ರ ನಡೆದಿತ್ತು. ಇದೀಗ 2023ರ ಐಪಿಎಲ್ ಎಲ್ಲಾ ನಗರದಲ್ಲೂ ನಡೆಯಲಿದ್ದು, ಪ್ರತಿ ತಂಡಗಳಿಗೆ ತವರಿನ ಪಂದ್ಯ ಕೂಡ ಸಿಗಲಿದೆ. ಹಾಗಾಗಿ ಧೋನಿ ಮತ್ತೆ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡುವ ಬಯಕೆ ಈಡೇರಲಿದೆ. ಇದನ್ನೂ ಓದಿ: ಹಸುಗಳನ್ನು ರಕ್ಷಿಸಿ – ಲಂಪಿ ವೈರಸ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಿಖರ್ ಧವನ್

    ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2008, 2012, 2013, 2015, 2019ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಧೋನಿ ಆರಂಭಿಕ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿರುವುದು ವಿಶೇಷ. ಮಧ್ಯದಲ್ಲಿ ಚೆನ್ನೈ ತಂಡ ಐಪಿಎಲ್‍ನಲ್ಲಿ ಬ್ಯಾನ್ ಆದಾಗ ಮಾತ್ರ ಧೋನಿ ಇತರ ಫ್ರಾಂಚೈಸ್ ಪರ ಆಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಏಷ್ಯಾಕಪ್ ಸೋಲು, ರೊಚ್ಚಿಗೆದ್ದ ಅಭಿಮಾನಿಗಳು – #BoycottIPL ಟ್ರೆಂಡ್

    ಏಷ್ಯಾಕಪ್ ಸೋಲು, ರೊಚ್ಚಿಗೆದ್ದ ಅಭಿಮಾನಿಗಳು – #BoycottIPL ಟ್ರೆಂಡ್

    ದುಬೈ: ಏಷ್ಯಾಕಪ್‍ನ (Asia Cup 2022) ಸೂಪರ್ ಫೋರ್ ಹಂತದಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಇದರಿಂದಾಗಿ ರೊಚ್ಚಿಗೆದ್ದ ಅಭಿಮಾನಿಗಳು #BoycottIPL ಅಭಿಯಾನ ಆರಂಭಿಸಿದ್ದಾರೆ.

    ಇದೀಗ #BoycottIPL ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಟೀಂ ಇಂಡಿಯಾ (Team India) ಆಟಗಾರರು ಐಪಿಎಲ್‍ನಲ್ಲಿ (IPL) ತೋರ್ಪಡಿಸುವ ಆಟದ ವೈಕರಿ ರಾಷ್ಟ್ರೀಯ ತಂಡದ ಪರ ಕಾಣುತ್ತಿಲ್ಲ. ಐಪಿಎಲ್‍ನಲ್ಲಿ ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಮಿಂಚುವ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಕಳಪೆ ಆಟದ ಮೂಲಕ ತಂಡದ ಸೋಲಿಗೆ ಕಾರಣರಾಗುತ್ತಿದ್ದಾರೆ. ಹಾಗಾಗಿ ಐಪಿಎಲ್‍ನ್ನು ಬಾಯ್‍ಕಾಟ್ (BoycottIPL) ಮಾಡಿ ಎಂದು ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ. ಇದನ್ನೂ ಓದಿ: ಭಾರತದ ಖೇಲ್ ಖತಂ: ಏಷ್ಯಾ ಕಪ್‌ನಿಂದ ಬಹುತೇಕ ಔಟ್‌

    ನಿನ್ನೆ ಶ್ರೀಲಂಕಾ ವಿರುದ್ಧ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಸೋತು ಮುಖಭಂಗ ಅನುಭವಿಸಿದೆ. ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ, 174 ರನ್‍ಗಳ ಗುರಿ ನೀಡಿತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್‍ಗಳಿಸಿ ರೋಚಕ ಜಯ ಸಾಧಿಸಿ ಫೈನಲ್ ಟಿಕೆಟ್ ಖಾತ್ರಿ ಪಡಿಸಿಕೊಂಡಿದೆ. ಈ ಸೋಲಿನೊಂದಿಗೆ ಭಾರತದ ಏಷ್ಯಾಕಪ್ ಫೈನಲ್ ಹಾದಿ ಬಹುತೇಕ ಮುಚ್ಚಿಕೊಂಡಿದೆ. ಹಾಗಾಗಿ ಅಭಿಮಾನಿಗಳು ಟೀಂ ಇಂಡಿಯಾದ ಆಟಗಾರರ ಪ್ರದರ್ಶನದ ಕುರಿತಾಗಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    https://twitter.com/LumbhaniOm/status/1567392614424481792

    ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿ ಮಹತ್ವದ ಟೂರ್ನಿಗಳಲ್ಲಿ ಭಾರತ ನಿರಾಸೆ ಅನುಭವಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಐಪಿಎಲ್ ಎಂದು ಕಿಡಿಕಾರುತ್ತಿದ್ದಾರೆ. ಒಂದು ಕಡೆ ಐಪಿಎಲ್ ಕುರಿತಾಗಿ ಟೀಕೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಐಪಿಎಲ್‍ನಿಂದಾಗಿ ಅದೆಷ್ಟೋ ಯುವ ಆಟಗಾರರು ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಒಂದು ಕಡೆ ಐಪಿಎಲ್‍ನಿಂದಾಗಿ ಲಾಭವಾದರೆ, ಇನ್ನೊಂದು ಕಡೆ ನಷ್ಟವೂ ಆಗುತ್ತಿದೆ. ಹಾಗಾಗಿ ಐಪಿಎಲ್ ಕುರಿತಾಗಿ ಇದೀಗ ಚರ್ಚೆ ಜೋರಾಗಿದೆ.

    https://twitter.com/DilbarRaghav/status/1567397980365541377

    Live Tv
    [brid partner=56869869 player=32851 video=960834 autoplay=true]

  • ವಿದೇಶಿ ಲೀಗ್‌ನತ್ತ ಕಣ್ಣು – ಐಪಿಎಲ್‌ಗೆ ರೈನಾ ಗುಡ್‌ಬೈ

    ವಿದೇಶಿ ಲೀಗ್‌ನತ್ತ ಕಣ್ಣು – ಐಪಿಎಲ್‌ಗೆ ರೈನಾ ಗುಡ್‌ಬೈ

    ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಸುರೇಶ್‌ ರೈನಾ ಇಂಡಿಯನ್ ಪ್ರೀಮಿಯರ್‌ ಲೀಗ್‌ ಸೇರಿದಂತೆ ಎಲ್ಲಾ ಮಾದರಿಯ ದೇಶಿ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿದ ಅವರು, ನನ್ನ ದೇಶ ಮತ್ತು ರಾಜ್ಯ ಉತ್ತರ ಪ್ರದೇಶವನ್ನು ಪ್ರತಿನಿಧಿಸುವುದು ಒಂದು ಗೌರವ. ನಾನು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಕೆಲ ದಿನಗಳಿಂದ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ರೈನಾ 2023ರ ಐಪಿಎಲ್‌ನಲ್ಲಿ ಆಡಲಿದ್ದಾರೆ ಎನ್ನಲಾಗುತ್ತಿತ್ತು.  ಸೋಮವಾರ ಟ್ವಿಟ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವೀಡಿಯೋ ಅಪ್ಲೋಡ್‌ ಮಾಡಿದ್ದರು. ಆದರೆ ಈಗ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

    2020ರಲ್ಲಿ ಎಂ.ಎಸ್‌ ಧೋನಿ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಿನವೇ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಇದನ್ನೂ ಓದಿ: ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

    ಐಪಿಎಲ್‌ 2022 ಟೂರ್ನಿ ಸಲುವಾಗಿ ನಡೆದ ಮೆಗಾ ಆಕ್ಷನ್‌ಗೂ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸುರೇಶ್‌ ರೈನಾ ಅವರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ 2 ಕೋಟಿ ಮೂಲ ಬೆಲೆಯ ಹೊಂದಿದ್ದ ರೈನಾ ಅವರನ್ನು ಯಾವುದೇ ತಂಡ ಖರೀದಿ ಮಾಡಿರಲಿಲ್ಲ. ಕೋವಿಡ್‌ ಕಾರಣದಿಂದ ಐಪಿಎಲ್‌ 2021ರಲ್ಲಿ ಆಡಿರಲಿಲ್ಲ.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಇನ್ನು 2-3 ವರ್ಷ ಕ್ರಿಕೆಟ್‌ ಆಡುವ ಬಯಕೆಯನ್ನು ಹೊಂದಿದ್ದೇನೆ. ಇಂದು ಉತ್ತರ ಪ್ರದೇಶದ ತಂಡ ಪ್ರತಿಭಾನ್ವಿತ ಆಟಗಾರನ್ನು ಹೊಂದಿದೆ. ಹೀಗಾಗಿ ಪ್ರತಿಭಾನ್ವಿತರಿಗೆ ಅವಕಾಶ ಮಾಡಿಕೊಡಲು ಉತ್ತರ ಪ್ರದೇಶ ಕ್ರಿಕೆಟ್‌ ಬೋರ್ಡ್‌ನಿಂದಲೂ ಎನ್‌ಒಸಿ ಪಡೆದುಕೊಂಡಿದ್ದೇನೆ ಎಂದಿದ್ದಾರೆ.

    ವಿಶ್ವದ ವಿವಿಧ ಲೀಗ್‌ಗಳಲ್ಲಿ ಆಡುವ ಉದ್ದೇಶ ಹೊಂದಿದ್ದೇನೆ. ದಕ್ಷಿಣ ಆಫ್ರಿಕಾ, ಯುಎಇ ಮತ್ತು ಶ್ರೀಲಂಕಾದ ಫ್ರಾಂಚೈಸಿಗಳು ಈಗಾಗಲೇ ನನ್ನನ್ನು ಸಂಪರ್ಕಿಸಿವೆ. ನನ್ನ ವೃತ್ತಿಬದುಕಿಗೆ ನೆರವಾದ ಬಿಸಿಸಿಐ ಮತ್ತು ಯುಪಿಸಿಎಗೆ ಧನ್ಯವಾದ. ನನ್ನ ನಿರ್ಧಾರದ ಬಗ್ಗೆ ಬಿಸಿಸಿಐಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

    ಐಪಿಎಲ್‌ನಲ್ಲಿ 5,000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಯನ್ನು ಸುರೇಶ್‌ ರೈನಾ ಹೊಂದಿದ್ದಾರೆ. ಈವರೆಗೆ ಆಡಿದ 205 ಪಂದ್ಯಗಳಿಂದ 5,528 ರನ್‌ ಹೊಡೆದಿದ್ದಾರೆ.

    ಸುಮಾರು 13 ವರ್ಷಗಳ ಕಾಲ ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಸುರೇಶ್ ರೈನಾ, 18 ಟೆಸ್ಟ್, 226 ಏಕದಿನ ಪಂದ್ಯಗಳು ಹಾಗೂ 78 ಟಿ20 ಪಂದ್ಯಗಳನ್ನ ಆಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೇ ಸರಿಸುಮಾರು 8,000 ರನ್‍ಗಳನ್ನ ಪೂರೈಸಿದ್ದಾರೆ. ಅಲ್ಲದೇ 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವಿಗೆ ಸುರೇಶ್ ರೈನಾ ಅವರ ಪಾತ್ರವೂ ಅಪಾರವಾಗಿದೆ. ಕೆಲ ಪಂದ್ಯಗಳಲ್ಲಿ ನಾಯಕನಾಗಿಯೂ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    ಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಕಳೆದ ಒಂದೂವರೆ ತಿಂಗಳ ಹಿಂದೆ, ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಜೊತೆಗಿನ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಆಕೆಯೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿದ್ದರು. ಸುಷ್ಮಿತಾ ಜೊತೆಗೆ ತಾವು ಅತೀ ಸಲುಗೆಯಿಂದ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.

    ಸುಷ್ಮಿತಾ ಜೊತೆ ತಾವು ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಮೋದಿ ಬಹಿರಂಗ ಪಡಿಸುತ್ತಿದ್ದಂತೆಯೇ ಸುಷ್ಮಿತಾ ವಿದೇಶಕ್ಕೆ ಹಾರಿದರು. ತಮ್ಮ ನಡುವೆ ಅಂಥದ್ದೇನೂ ಇಲ್ಲ ಎಂದು ಬಿಂಬಿಸಲು ಹೊರಟರು. ಆದರೆ, ಮೋದಿ ಪೋಸ್ಟ್ ಮಾಡಿದ್ದ ಫೋಟೋಗಳು ಹಲವು ಅನುಮಾನಗಳಿಗೆ ಕಾರಣವಾಗಿದ್ದವು. ಡೇಟಿಂಗ್ ಮಾಡದೇ ಅಷ್ಟೊಂದು ಕ್ಲೋಸ್ ಆಗಿರಲು ಹೇಗೆ ಸಾಧ್ಯ? ಎಂದು ಹಲವರು ಪ್ರಶ್ನೆ ಮಾಡಿದ್ದರು. ಆದರೂ, ಮೋದಿ ತಮ್ಮ ನಿಲುವಿಗೆ ಬದ್ಧರಾಗಿ ಉಳಿದರು.  ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಈ ನಡುವೆ ಮೊನ್ನೆಯಷ್ಟೇ ಸುಷ್ಮಿತಾ ಸೇನ್ ತಮ್ಮ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ವಿದೇಶದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಮಾಜಿ ಬಾಯ್ ಫ್ರೆಂಡ್ ಜೊತೆ ಮತ್ತೆ ಸುಷ್ಮಿತಾ ಒಂದಾದರಾ ಎನ್ನುವ ಪ್ರಶ್ನೆಗಳು ಕೂಡ ಮೂಡಿದವು. ಈ ವಿಷಯ ಲಲಿತ್ ಮೋದಿಗೆ ಭಾರೀ ಮುಜುಗರ ಉಂಟು ಮಾಡಿದೆ ಅನಿಸತ್ತೆ. ಹಾಗಾಗಿಯೇ ಸುಷ್ಮಿತಾ ಅವರಿಂದ ಅಂತರ ಕಾಪಾಡಿಕೊಳ್ಳಲು ಅವರು ಮುಂದಾಗಿದ್ದಾರೆ.

    ತಮ್ಮ ಮಾಜಿ ಬಾಯ್ ಫ್ರೆಂಡ್ ಜೊತೆ ಸುಷ್ಮಿತಾ ವಿದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಲಲಿತ್ ಮೋದಿ, ಆಕೆಯನ್ನು ಸೋಷಿಯಲ್ ಮೀಡಿಯಾದಿಂದ ಅನ್ ಫ್ರೆಂಡ್ ಮಾಡಿದ್ದಾನೆ. ಇನ್ಸ್ಟಾದಲ್ಲಿ ತಮ್ಮ ಹೆಸರಿನ ಮುಂದೆ ಸುಷ್ಮಿತಾ ಹೆಸರು ಹಾಕಿಕೊಂಡಿದ್ದರು. ಅದನ್ನೂ ಕೂಡ ಅವರು ತಗೆದಿದ್ದಾರೆ. ಅಲ್ಲಿಗೆ ಸುಷ್ಮಿತಾ ಪ್ರೀತಿಗೆ ಎಳ್ಳು ನೀರು ಬಿಟ್ಟಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

    ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

    ಚೆನ್ನೈ: ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

    2023ರ ಐಪಿಎಲ್‌ ಸರಣಿಗೆ ನಮ್ಮ ತಂಡವನ್ನು ಧೋನಿಯೇ ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ತಂಡ ಸಿಇಒ ಕಾಸಿ ವಿಶ್ವನಾಥನ್‌ ತಿಳಿಸಿದ್ದಾರೆ.

    ಧೋನಿ 2020ರಲ್ಲೇ ಎಲ್ಲ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರೂ ಐಪಿಎಲ್‌ಗೆ ನಿವೃತ್ತಿ ಹೇಳಿಲ್ಲ. ಕಳೆದ ವರ್ಷದ ಐಪಿಎಲ್‌ನಲ್ಲೇ ಧೋನಿ ನಿವೃತ್ತಿ ಹೇಳಬಹುದು ಎಂವ ವದಂತಿ ಹರಡಿತ್ತು. ಆದರೆ ಧೋನಿ ನಿವೃತ್ತಿ ನಿರ್ಧಾರ ಕೈಗೊಂಡಿರಲಿಲ್ಲ.  ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ

    MS DHONI (2)

    ಕಳೆದ ನವೆಂಬರ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ನನ್ನ ಕೊನೆಯ ತವರಿನ ಏಕದಿನ ಪಂದ್ಯ ರಾಂಚಿಯಲ್ಲೇ ನಡೆದಿದ್ದರೆ ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲೇ ಇರಬೇಕೆಂದು ಆಶಿಸುತ್ತೇನೆ. ಇದು ಮುಂದಿನ ವರ್ಷ ಆಗಿರುತ್ತಾ ಅಥವಾ ಮುಂದಿನ ಐದು ವರ್ಷದಲ್ಲಿ ಆಗುತ್ತಾ ನಿಜಕ್ಕೂ ಗೊತ್ತಿಲ್ಲ ಎಂದು ಹೇಳಿದ್ದರು.

    ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. 2008, 2012, 2013, 2015, 2019ರಲ್ಲಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು.

    Live Tv
    [brid partner=56869869 player=32851 video=960834 autoplay=true]