Tag: IPL

  • ಚಿನ್ನಸ್ವಾಮಿ ಕಾಲ್ತುಳಿತ | CAT ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ – ಸಿಎಂ

    ಚಿನ್ನಸ್ವಾಮಿ ಕಾಲ್ತುಳಿತ | CAT ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ – ಸಿಎಂ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ (IPS) ಅಧಿಕಾರಿಗಳ ಅಮಾನತು ಆದೇಶವನ್ನು ರದ್ದು ಮಾಡಿರುವ ಸಿಎಟಿಗೆ (ಕೇಂದ್ರೀಯ ಆಡಳಿತ ನ್ಯಾಯಮಂಡಳಿ) ಮೇಲ್ಮನವಿ ಸಲ್ಲಿಸುವ ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

    ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳ ಅಮಾನತು ಆದೇಶವನ್ನು ರದ್ದು ಮಾಡಿರುವ ಕೇಂದ್ರೀಯ ಆಡಳಿತ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇದನ್ನೂ ಓದಿ: ಸಿದ್ದು ಫುಲ್ ಟರ್ಮ್ ಸಿಎಂ ಅಸ್ತ್ರಕ್ಕೆ ಡಿಕೆಶಿ ನೆಕ್ಸ್ಟ್ ಸಿಎಂ ಬ್ರಹ್ಮಾಸ್ತ್ರ: ಸಂಖ್ಯಾಬಲ ಡಿಸಿಎಂಗೆ ಇದೆ – ಇಕ್ಬಾಲ್ ಹುಸೇನ್

    ಶಾಸಕ ಬಿ.ಆರ್.ಪಾಟೀಲ್ (BR Patil) ಅವರ ಸಿದ್ದರಾಮಯ್ಯನವರು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಅವರ ಹೇಳಿಕೆ ಬಗ್ಗೆ ಮಾಹಿತಿಯಿಲ್ಲ. ಬಿ.ಆರ್.ಪಾಟೀಲ್ ಹಾಗೂ ನಾನು ಒಟ್ಟಿಗೆ ಶಾಸಕರಾಗಿದ್ದರಿಂದ ಹಾಗೂ ನನಗೆ ಮುಖ್ಯಮಂತ್ರಿಯಾಗಲು ಅವಕಾಶ ದೊರೆತಿದ್ದರಿಂದ, ಬಿ.ಆರ್.ಪಾಟೀಲ್‌ರವರು ಈ ರೀತಿ ಹೇಳಿಕೆ ನೀಡಿರಬಹುದು ಎಂದರು.

    ಇದೇ ವೇಳೆ ಜಾತಿಗಣತಿ (Caste Census) ನಡೆಸಲಾಗಿದೆ ಎಂಬ ಪೋಸ್ಟರ್‌ಗಳನ್ನು ಮನೆಗಳಿಗೆ ಭೇಟಿ ನೀಡದೇ, ಮನೆಯ ಮುಂದೆ ಅಂಟಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸುವ ಬಗ್ಗೆ, ಜಾತಿಗಣತಿ ನಡೆಸಲು ಹಲವು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕವೂ ಜಾತಿವಿವರಗಳನ್ನು ನೀಡಬಹುದು ಅಥವಾ ಮನೆಗಳಿಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದು. ಈ ಬಗ್ಗೆ ಸತ್ಯಾಸತ್ಯತೆ ತಿಳಿದು ಮಾಧ್ಯಮದವರು ಪ್ರಶ್ನಿಸಬೇಕು ಎಂದರು.ಇದನ್ನೂ ಓದಿ: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿಎಲ್‌ಓಗಳಾಗಿ ನೇಮಿಸದಂತೆ ಚುನಾವಣೆ ಆಯೋಗಕ್ಕೆ ಶಿಕ್ಷಣ ‌ಇಲಾಖೆ ಪತ್ರ

  • 5 ಎಸೆತಗಳಲ್ಲಿ 5 ವಿಕೆಟ್‌ – ಮತ್ತೆ ದಿಗ್ವೇಶ್‌ ರಾಥಿ ಕಮಾಲ್‌

    5 ಎಸೆತಗಳಲ್ಲಿ 5 ವಿಕೆಟ್‌ – ಮತ್ತೆ ದಿಗ್ವೇಶ್‌ ರಾಥಿ ಕಮಾಲ್‌

    ಲಕ್ನೋ: ಐಪಿಎಲ್‌ನಲ್ಲಿ (IPL) ತನ್ನ ಬೌಲಿಂಗ್‌ನಿಂದಲೇ ಸುದ್ದಿಯಾಗಿದ್ದ ಬೌಲರ್‌ ದಿಗ್ವೇಶ್‌ ರಾಥಿ (Digvesh Rathi) ಈಗ ಸ್ಥಳೀಯ ಕ್ರಿಕೆಟ್‌ ಪಂದ್ಯದಲ್ಲಿ 5 ಎಸೆತಗಳಲ್ಲಿ 5 ವಿಕೆಟ್‌ ಕಬಳಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡ ಮಾಲೀಕ ಸಂಜೀವ್‌ ಗೋಯೆಂಕಾ (Sanjiv Goenka) ದಿಗ್ವೇಶ್‌ ರಾಥಿ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಸ್ಥಳೀಯ ಟಿ20 ಪಂದ್ಯದಲ್ಲಿ ದಿಗ್ವೇಶ್ ರಾಥಿ 5 ವಿಕೆಟ್ ಪಡೆದಿರುವ ಈ ಕ್ಲಿಪ್ ಅನ್ನು ಆಕಸ್ಮಿಕವಾಗಿ ನೋಡಿದೆ. ಐಪಿಎಲ್ 2025 ರಲ್ಲಿ ಉದಯವಾದ ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

    26 ವರ್ಷದ ದಿಗ್ವೇಶ್‌ ಈ ಬಾರಿ ಐಪಿಎಲ್‌ನಲ್ಲಿ ಕಮಾಲ್‌ ಮಾಡಿದ್ದರು. 13 ಪಂದ್ಯಗಳಲ್ಲಿ 14 ವಿಕೆಟ್‌ ಪಡೆದು ಮಿಂಚಿದ್ದರು. ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲಿ ಉದ್ಧಟತನ ತೋರಿದ್ದಕ್ಕೆ ದಿಗ್ವೇಶ್ ಅವರನ್ನು ಅಮಾನತು ಮಾಡಲಾಗಿತ್ತು. ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಉದ್ಧಟತನ – ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ

    ವಿಕೆಟ್‌ ಪಡೆದ ನಂತರ ನೋಟ್‌ಬುಕ್ ಸಂಭ್ರಮಾಚರಣೆ ಮಾಡಿದ್ದಕ್ಕಾಗಿ ರಾಥಿ ಅವರಿಗೆ ದಂಡ ವಿಧಿಸಲಾಗಿತ್ತು.

     

  • ಐಪಿಎಲ್ ಬೆಟ್ಟಿಂಗ್ ಆಡಲು ಮನೆಗಳ್ಳತನ ಮಾಡುತ್ತಿದ್ದ ಖದೀಮ ಪೊಲೀಸರ ಅತಿಥಿ

    ಐಪಿಎಲ್ ಬೆಟ್ಟಿಂಗ್ ಆಡಲು ಮನೆಗಳ್ಳತನ ಮಾಡುತ್ತಿದ್ದ ಖದೀಮ ಪೊಲೀಸರ ಅತಿಥಿ

    ಮಂಡ್ಯ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ನಡೆಯುವ ವೇಳೆ ಬೆಟ್ಟಿಂಗ್‌ ಹಣಕ್ಕಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಖತರ್ನಾಕ್‌ ಒಬ್ಬನನ್ನ ಮಂಡ್ಯ ಪೊಲೀಸರು (Mandya Police) ಬಂಧಿಸಿದ್ದಾರೆ.

    ಸಂತೋಷ್‌ ಅಲಿಯಾಸ್ ಐಪಿಎಲ್ ಸಂತೋಷ್ ಬಂಧಿತ ಆರೋಪಿ. ಈತ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮುದಿಗೆರೆ ಗ್ರಾಮದವನು. ಹೆಸರಿಗೆ ವ್ಯವಸಾಯ ಕಸುಬಾದ್ರೆ, ಮೂಲ ಕಾಯಕ ಮನೆಗಳ್ಳತನ ಮಾಡೋದು ಬಳಿಕ ಅದರಿಂದ ಬಂದ ಹಣದಲ್ಲಿ ಐಪಿಎಲ್‌ ಬೆಟ್ಟಿಂಗ್ (IPL Betting) ಆಡೋದು ಕಾಯಕವಾಗಿತ್ತು. ಇದನ್ನೂ ಓದಿ: ಇಡೀ ವಿಮಾನ ಸುಟ್ಟು ಭಸ್ಮವಾದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ

    ಈತ ಐಪಿಎಲ್ ಬೆಟ್ಟಿಂಗ್ ಅತಿಯಾಗಿ ಆಡುತ್ತಿದ್ದರಿಂದ ಈತನನ್ನು ಐಪಿಎಲ್ ಸಂತೋಷ್ ಅಂತಾನೇ ಕರೆಯುತ್ತಿದ್ರು‌. ಈ ವ್ಯಕ್ತಿ ಬಿಂಡಗನವಿಲೆ, ಬೆಳ್ಳೂರು, ನಾಗಮಂಗಲ, ತುರುವೆಕೆರೆ, ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಮನೆಗಳ್ಳತನವನ್ನು ಮಾಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ. ಪದೇ ಪದೇ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾದ್ದರಿಂದ ನಾಗಮಂಗಲ ಸಿಪಿಐ ನಿರಂಜನ್ ನೇತೃತ್ವದಲ್ಲಿ ಪಿಎಸ್‌ಐ ರವಿಕುಮಾರ್, ಮಾರುತಿ ಒಳಗೊಂಡ 10 ಜನರ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.

    ಬಳಿಕ ಈ ತಂಡ ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಆಧರಿಸಿ ಖತರ್ನಾಕ್ ಸಂತೋಷ್‌ನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದೆ. ಬಂಧಿತನಿಂದ 40 ಲಕ್ಷ ಮೌಲ್ಯದ 490 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಮಗಳು – ಬಾರದ ಲೋಕಕ್ಕೆ ಹೋದ್ಳು..!

  • ಆರ್‌ಸಿಬಿ ತಂಡವನ್ನು ಮಾರಾಟ ಮಾಡುತ್ತಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

    ಆರ್‌ಸಿಬಿ ತಂಡವನ್ನು ಮಾರಾಟ ಮಾಡುತ್ತಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

    ಮುಂಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವನ್ನು ಡಿಯಾಜಿಯೊ ಮಾರಾಟ ಮಾಡುತ್ತಿಲ್ಲ ಎಂದು ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ (United Spirits) ಅಧಿಕೃತವಾಗಿ ತಿಳಿಸಿದೆ.

    ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ (Chinnaswamy Stampede Case) ಬಳಿಕ ಆರ್‌ಸಿಬಿ ಷೇರನ್ನು ಡಿಯಾಜಿಯೊ  ಮಾರಾಟ ಮಾಡಲಿದೆ ಎಂಬ ವದಂತಿ ಸುದ್ದಿಗಳು ಪ್ರಕಟವಾದ ಬೆನ್ನಲ್ಲೇ ಇಂದು ಬಾಂಬೆ ಸ್ಟಾಕ್‌ ಎಕ್ಸ್‌ಚೆಂಜ್‌ (BSE) ಈಮೇಲ್‌ ಮೂಲಕ ಸ್ಪಷ್ಟನೆ ಕೇಳಿತ್ತು.

    ಈ ಪ್ರಶ್ನೆಗೆ ಉತ್ತರ ನೀಡಿದ ಯುನೈಟೆಡ್ ಸ್ಪಿರಿಟ್ಸ್, ಆರ್‌ಸಿಬಿಯ ಸಂಭಾವ್ಯ ಪಾಲು ಮಾರಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳ ಊಹಾತ್ಮಕ ಸ್ವರೂಪದ್ದಾಗಿವೆ. ಅಂತಹ ಯಾವುದೇ ಚರ್ಚೆಗಳನ್ನು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್‌ ಶಾಕ್‌ – ಆರ್‌ಸಿಬಿ ಸೇಲ್ ಆಗುತ್ತಾ?

    ಡಿಯಾಜಿಯೊ ತೆಕ್ಕೆಗೆ ಆರ್‌ಸಿಬಿ ಹೋಗಿದ್ದು ಹೇಗೆ?
    ಐಪಿಎಲ್‌ ಆರಂಭಗೊಳ್ಳುವ ವೇಳೆ ವಿಜಯ್‌ ಮಲ್ಯ ಅವರು ಆರ್‌ಸಿಬಿ ತಂಡವನ್ನು ಖರೀದಿಸಿದ್ದರು. 2012ರಲ್ಲಿ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಕಾರ್ಯಾಚರಣೆ ನಿಲ್ಲಿಸಿತು. ಉದ್ಯಮದಲ್ಲಿ ನಷ್ಟವಾದ ಕಾರಣ ಮಲ್ಯ ಅವರ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯನ್ನು ಡಿಯಾಜಿಯೊ ಸ್ವಾಧೀನಪಡಿಸಿಕೊಂಡಿತು. ಆರ್‌ಸಿಬಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಇದ್ದ ಕಾರಣ ಅದರ ಮಾಲೀಕತ್ವ ಈಗ ಡಿಯಾಜಿಯೊಗೆ (Diageo) ಹೋಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ

  • ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ತಲಾ 5 ಕೋಟಿ ಪರಿಹಾರ ಕೊಡ್ಬೇಕು: ವಾಟಾಳ್‌ ನಾಗರಾಜ್‌ ಆಗ್ರಹ

    ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ತಲಾ 5 ಕೋಟಿ ಪರಿಹಾರ ಕೊಡ್ಬೇಕು: ವಾಟಾಳ್‌ ನಾಗರಾಜ್‌ ಆಗ್ರಹ

    ಬೆಂಗಳೂರು: ಕಾಲ್ತುಳಿತದಲ್ಲಿ (Stampede) ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ತಲಾ 5 ಕೋಟಿ ಪರಿಹಾರ ಕೊಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ (Vatal Nagaraj) ಆಗ್ರಹಿಸಿದ್ದಾರೆ.

    ಬೆಂಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI), ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್‌, ಆರ್‌ಸಿಬಿ (RCB) ಫ್ರಾಂಚೈಸಿ ಹಾಗೂ ಕರ್ನಾಟಕ ಸರ್ಕಾರ (Karnataka Government) ಸೇರಿ ಒಬ್ಬೊಬ್ಬ ಸಂತ್ರಸ್ತರ ಕುಟುಂಬಗಳಿಗೆ ತಲಾ ಐದು ಕೋಟಿ ರೂ ಪರಿಹಾರ ಜಾರಿಗೊಳಿಸಬೇಕು. ಜೊತೆಗೆ ಗಾಯಗೊಂಡವರ ಜೀವನದ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Chinnaswamy Stampede Case – ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

    Chinnaswamy Stampede

    ನಮ್ಮ ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗ ಅಂತ ಇದೆ, ಅದು ಈಗ ʻಮಾನವ ವಿರೋಧಿಗಳ ಆಯೋಗʼ ಆಗಿದೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರಲ್ಲದೇ, ದಯಾನಂದ್‌ ಅವರನ್ನ ಅಮಾನತ್ತಿನಲ್ಲಿಟ್ಟಿರುವುದು ನಾಡಿನ ಜನತೆಗೆ ಹಾಗೂ ಇಡೀ ಪೊಲೀಸ್‌ ಇಲಾಖೆಗೆ ಮಾಡಿದ ಅಪಮಾನ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್‌ ಶಾಕ್‌ – ಆರ್‌ಸಿಬಿ ಸೇಲ್‌..?

    ಏನಾಗಿತ್ತು?
    ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿತು. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿತು. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿತು. ಪಂಜಾಬ್ ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ದೀಪಾವಳಿಯಂಥಹ ಸಂಭ್ರಮ ಇತ್ತು. ಆವತ್ತು ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.

    ಮರುದಿನ ಅಂದ್ರೆ ಜೂ.4ರಂದು ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡೋಕೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್‌ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಆ ಬಳಿಕ ರಾಜ್ಯ ಸರ್ಕಾರ ಸಂತ್ರಸ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಆರ್‌ಸಿಬಿ ಫ್ರಾಂಚೈಸಿ ತಲಾ 10 ಲಕ್ಷ ರೂ. ಕೆಎಸ್‌ಸಿಎ ತಲಾ 5 ಲಕ್ಷ ಪರಿಹಾರ ಘೋಷಿಸಿತ್ತು. ನಂತರ ಕರ್ನಾಟಕ ಸರ್ಕಾರ ಪರಿಹಾರದ ಮೊತ್ತವನ್ನು 25 ಲಕ್ಷ ರೂ.ಗಳಿಗೆ ಹೆಚ್ಚಿಸಿತು.

  • 29ನೇ ವಯಸ್ಸಿಗೆ ವಿಂಡೀಸ್‌ನ ದೈತ್ಯ ಬ್ಯಾಟರ್‌ ನಿಕೋಲಸ್‌ ಪೂರನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

    29ನೇ ವಯಸ್ಸಿಗೆ ವಿಂಡೀಸ್‌ನ ದೈತ್ಯ ಬ್ಯಾಟರ್‌ ನಿಕೋಲಸ್‌ ಪೂರನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

    ಕಿಂಗ್‌ಸ್ಟನ್‌: ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಬ್ಯಾಟರ್‌ ಎಂದೇ ಗುರುತಿಸಿಕೊಂಡಿದ್ದ ನಿಕೋಲಸ್‌ ಪೂರನ್‌ (Nicholas Pooran) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. 29ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವುದು ಅಚ್ಚರಿ ತರಿಸಿದೆ.

     

    View this post on Instagram

     

    A post shared by Nicholas Pooran (@nicholaspooran)

    ಇತ್ತೀಚೆಗಷ್ಟೇ ವಿಂಡೀಸ್‌ನ (West Indies) ಕ್ರಿಕೆಟ್ ರಾಜಕೀಯದ ಬಗ್ಗೆ ಕೋಲ್ಕತಾ ನೈಟ್ ರೈಡರ್ಸ್ ಆಟಗಾರ ಆಂಡ್ರೆ ರಸ್ಸೆಲ್‌ ಪರೋಕ್ಷವಾಗಿ ಬೇಸರ ಹೊರಹಾಕಿದ್ದರು. ಈ ಬೆನ್ನಲ್ಲೇ ನಿಕೋಲಸ್‌ ಪೂರನ್‌ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್‌ ಮಲ್ಯ ಹೇಳಿದ್ದೇನು?

    ಐಪಿಎಲ್‌ನಲ್ಲಿ ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಪ್ರತಿನಿಧಿಸಿದ್ದ ಪೂರನ್‌ ಪ್ರಸ್ತುತ ಲಕ್ನೋ ಸೂಪರ್‌ ಜೈಂಟ್ಸ್‌ನಲ್ಲಿ ದುಬಾರಿ ಬೆಲೆಯ ಆಟಗಾರನಾಗಿದ್ದಾರೆ. ದುಬೈ ಕ್ರಿಕೆಟ್ ಲೀಗ್‌ನಲ್ಲೂ ಸಕ್ರಿಯವಾಗಿರುವ ಪೂರನ್‌ ಎಂಐ ಎಮಿರೇಟ್ಸ್ ಆಟಗಾರರಾಗಿದ್ದಾರೆ. ಮಾತ್ರವಲ್ಲದೇ ನಾರ್ಥನ್ ಸೂಪರ್ ಚಾರ್ಜರ್ಸ್, ಟ್ರಿಂಬಾಗೋ ನೈಟ್ ರೈಡರ್ಸ್, ಟ್ರನಿಡಾಡ್ ಆ್ಯಂಡ್ ಟೊಬಾಗೊ ಸೇರಿದಂತೆ ಹತ್ತಾರು ತಂಡಗಳನ್ನ ಪ್ರತಿನಿಧಿಸಿದ್ದಾರೆ. ಸದ್ಯ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗಷ್ಟೇ ನಿವೃತ್ತಿ ನೀಡಿದ್ದು, ಐಪಿಎಲ್‌ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದನ್ನೂ ಓದಿ: ಅದ್ಧೂರಿ ನಿಶ್ಚಿತಾರ್ಥ – ರಿಂಕುಗೆ ರಿಂಗು ಹಾಕಿದ ಸಂಸದೆ ಪ್ರಿಯಾ ಸರೋಜ್

    29 ವರ್ಷದ ನಿಕೋಲಸ್‌ ಪೂರನ್‌ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಅವರು 106 ಪಂದ್ಯಗಳನ್ನ ವಿಂಡೀಸ್‌ ಪರ ಆಡಿದ್ದಾರೆ. 2,275 ರನ್‌ಗಳೊಂದಿಗೆ ತಂಡಕ್ಕೆ ಅತಿ ಹೆಚ್ಚು ಟಿ20 ರನ್ ಗಳಿಸಿದ ಆಟಗಾರ ಎಂಬ ದಾಖಲೆ ಸಹ ಬರೆದಿದ್ದಾರೆ. ಅವರು 61 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ 39.66 ಸರಾಸರಿಯಲ್ಲಿ 1,983 ರನ್ ಸಹ ಗಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಿದ ಸಿಎಂ, ಡಿಸಿಎಂ

    ಕೊನೆಯದ್ದಾಗಿ ನಿಕೋಲಸ್‌ ಪೂರನ್‌ 2024ರ ಟಿ20 ವಿಶ್ವಕಪ್‌ ವೇಳೆ ವಿಂಡೀಸ್‌ ತಂಡವನ್ನು ಪ್ರತಿನಿಧಿಸಿದ್ದರು. ಅದಕ್ಕೂ ಮುನ್ನ ಟೀಂ ಇಂಡಿಯಾ ವಿರುದ್ಧವೇ ನಡೆದಿದ್ದ ಐದು ಪಂದ್ಯಗಳ ಟಿ20 ಸರಣಿಯನ್ನ 3-2 ಅಂತರದಲ್ಲಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 2025ರ ಐಪಿಎಲ್‌ನಲ್ಲೂ ನಿಕೋಲಸ್‌ ಪೂರನ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ ಪ್ರೇಕ್ಷಕರಿಗೆ ರಸದೌತಣ ನೀಡಿದ್ದರು.

    ನಿವೃತ್ತಿ ಘೋಷಣೆ ಬಳಿಕ ಪೂರನ್‌ ಹೇಳಿದ್ದೇನು?
    ಇನ್ನೂ ತಮ್ಮ ನಿರ್ಧಾರದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಪೂರನ್, ಇದು ಬಹಳ ಕಷ್ಟದ ನಿರ್ಧಾರ. ಆದರೆ ತುಂಬಾ ಆಲೋಚನೆ ಮತ್ತು ಚಿಂತನೆಯ ನಂತರ, ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ನಾವು ಬಹಳ ಪ್ರೀತಿಸುವ ಈ ಆಟವು ನನಗೆ ತುಂಬಾ ಸಂತೋಷ, ಮರೆಯಲಾಗದ ನೆನಪುಗಳನ್ನು ನೀಡಿದೆ. ಆ ಮೆರೂನ್ ಜೆರ್ಸಿಯನ್ನು ಧರಿಸಿ, ರಾಷ್ಟ್ರಗೀತೆಗೆ ನಿಂತು, ನಾನು ಮೈದಾನಕ್ಕೆ ಕಾಲಿಟ್ಟ ಪ್ರತಿ ಬಾರಿಯೂ ನನ್ನೆಲ್ಲವನ್ನೂ ನೀಡಿದ್ದೇನೆ. ನನ್ನ ಪಾಲಿಗೆ ಈ ಕ್ಷಣಗಳೇನು ಎದು ಪದಗಳಲ್ಲಿ ವಿವರಿಸುವುದು ಕಷ್ಟ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

  • ಟೀಂ ಇಂಡಿಯಾದ್ದು 5 ದಿನ, ಸಿಎಸ್‌ಕೆ 3 ದಿನದ ನಂತರ ಆಚರಣೆ ಮಾಡಿದ್ರೆ ಒಂದೇ ದಿನದಲ್ಲಿ ವಿಜಯೋತ್ಸವ ಆಚರಿಸಿದ್ದು ಯಾಕೆ? – ಜೆಡಿಎಸ್‌ ಆಕ್ರೋಶ

    ಟೀಂ ಇಂಡಿಯಾದ್ದು 5 ದಿನ, ಸಿಎಸ್‌ಕೆ 3 ದಿನದ ನಂತರ ಆಚರಣೆ ಮಾಡಿದ್ರೆ ಒಂದೇ ದಿನದಲ್ಲಿ ವಿಜಯೋತ್ಸವ ಆಚರಿಸಿದ್ದು ಯಾಕೆ? – ಜೆಡಿಎಸ್‌ ಆಕ್ರೋಶ

    –  ಸರ್ಕಾರದ ಪ್ರಚಾರದ ಹುಚ್ಚಿಗೆ 11 ಮಂದಿ ಬಲಿ

    ಬೆಂಗಳೂರು: ಆರ್‌ಸಿಬಿ (RCB) ವಿಜಯೋತ್ಸವನ್ನು ಒಂದೇ ದಿನದಲ್ಲಿ ಆಚರಣೆ ನಡೆಸಲು ಅನುಮತಿ ನೀಡಿದ್ದು ಯಾಕೆ ಎಂದು ಸರ್ಕಾರ ಪ್ರಶ್ನಿಸಿ ಜೆಡಿಎಸ್‌ (JDS) ಆಕ್ರೋಶವನ್ನು ಹೊರಹಾಕಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಕಾಲ್ತುಳಿತ ಪ್ರಕರಣದಲ್ಲಿ ನೈತಿಕತೆ ಹೊತ್ತು ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು ಅಂತ ಜೆಡಿಎಸ್ ಆಗ್ರಹ ಮಾಡಿದೆ. ಎಕ್ಸ್‌ನಲ್ಲಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿರೋ ಜೆಡಿಎಸ್ ಈ ಘಟನೆ ಸರ್ಕಾರದ ಭದ್ರತಾ ವೈಫಲ್ಯ ಅಂತ ಕಿಡಿಕಾರಿದೆ. ಇದನ್ನೂ ಓದಿ: ಪೊಲೀಸರು ಅನುಮತಿ ನೀಡದೇ ಇದ್ರೂ ಪಟ್ಟು ಹಿಡಿದು ವಿಜಯೋತ್ಸವ ಆಯೋಜನೆ!

     

    ಪೋಸ್ಟ್‌ನಲ್ಲಿ ಏನಿದೆ?
    ಕಾಂಗ್ರೆಸ್ ಸರ್ಕಾರದ ಹುಚ್ಚು ಪ್ರಚಾರ ಪಡೆಯುವ ಗೀಳು 11ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಅಧಿಕಾರದ ಅಮಲಿನಲ್ಲಿರುವ ಪ್ರಚಾರಪ್ರಿಯ, ಜಾಹೀರಾತು ಪ್ರಿಯ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳಲ್ಲಿ ರಾರಾಜಿಸಲು ಹೋಗಿ ಮುಗ್ಧ ಜನರ ಜೀವದ ಜೊತೆ ಚಲ್ಲಾಟವಾಡಿದೆ.

    ವಿಜಯದ ಪರೇಡ್‌ಗಳನ್ನು ಆಚರಿಸುವ ಸಮಯದಲ್ಲಿ ಸರಿಯಾದ ನಾಗರಿಕರ ಸುರಕ್ಷತಾ ಕ್ರಮಗಳನ್ನು , ಪೊಲೀಸ್ ಭದ್ರತಾ ವ್ಯವಸ್ಥೆ ಮತ್ತು ಜನಸಂದಣಿ ನಿರ್ವಹಣೆಯೊಂದಿಗೆ ಯೋಜಿಸಬೇಕು, ರಾಜಕೀಯ ಲಾಭಕ್ಕಾಗಿ ಆತುರಪಡಬಾರದು ಎಂಬುದಕ್ಕೆ ಕಾಲ್ತುಳಿತ ದುರಂತವೇ ಸಾಕ್ಷಿ. ಇದನ್ನೂ ಓದಿ: ಕಾಲ್ತುಳಿತದಲ್ಲಿ 11 ಮಂದಿ ಸಾವು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

    ಕೆಕೆಆರ್ 2 ದಿನಗಳ ನಂತರ ಕೋಲ್ಕತ್ತಾದಲ್ಲಿ ವಿಜಯ ಪರೇಡ್ ನಡೆಸಿತು. ಮುಂಬೈ 2 ದಿನಗಳ ಬಳಿಕ ವಿಜಯೋತ್ಸವ ಮೆರವಣಿಗೆ ಆಯೋಜಿಸಿತು. ಸಿಎಸ್‌ಕೆ 3 ದಿನಗಳ ನಂತರ ವಿಜಯದ ಪರೇಡ್ ನಡೆಸಿತು. ಭಾರತ ತಂಡ 5 ದಿನಗಳ ನಂತರ ತಮ್ಮ ಟಿ -20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ನಡೆಸಿತು.

    ಲಕ್ಷಾಂತರ ಜನ ಸೇರುವ ಕ್ರೀಡಾಂಗಣದ ಬಳಿ ಆಗಿರುವ ಭದ್ರತಾ ಲೋಪಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ.ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ನೈತಿಕ ಹೊಣೆಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಅಂತ ಅಗ್ರಹಿಸಿದೆ.

     

  • ಐಪಿಎಲ್‌ ಟ್ರೋಫಿ ಒಳಗಡೆ ಏನಿದೆ – ಚೆಕ್‌ ಮಾಡಿ ನೋಡಿದ ಕೊಹ್ಲಿ

    ಐಪಿಎಲ್‌ ಟ್ರೋಫಿ ಒಳಗಡೆ ಏನಿದೆ – ಚೆಕ್‌ ಮಾಡಿ ನೋಡಿದ ಕೊಹ್ಲಿ

    ಬೆಂಗಳೂರು: ಆರ್‌ಸಿಬಿ (RCB) ಐಪಿಎಲ್‌ (IPL) ಚಾಂಪಿಯನ್‌ ಆದ ಬಳಿಕ ವಿರಾಟ್‌ ಕೊಹ್ಲಿ (Virat Kohli) ಟ್ರೋಫಿ ಒಳಗಡೆ ನೋಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಪ್ರಶಸ್ತಿ ವಿತರಣೆ ಕಾರ್ಯಕ್ರಮದ ಬಳಿಕ ಆಟಗಾರರು ಕಪ್‌ ಹಿಡಿದು ಮೈದಾನದಲ್ಲಿ ಸಂಭ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಟ್ರೋಫಿಯ ಮುಚ್ಚಳವನ್ನು ತೆಗೆದು ಒಳಗಡೆ ಏನಿದೆ ಅಂತ ಚೆಕ್‌ ಮಾಡಿ ನಗುವನ್ನು ಹೊರಹಾಕಿದ್ದಾರೆ.

     

     

    ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ.

    2009, 2011, 2016ರ ಫೈನಲ್‌ ಪಂದ್ಯಗಳಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿದ್ದ ಆರ್‌ಸಿಬಿ 4ನೇ ಬಾರಿ ಫೈನಲ್ ಕಂಟಕದಿಂದ ಮುಕ್ತಿ ಪಡೆದಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ.

  • ಆರ್‌ಸಿಬಿ ಹುಡುಗರು ಕರ್ನಾಟಕಕ್ಕೆ ಗೌರವ, ಹೆಮ್ಮೆ ತಂದಿದ್ದಾರೆ: ಡಿಕೆಶಿ

    ಆರ್‌ಸಿಬಿ ಹುಡುಗರು ಕರ್ನಾಟಕಕ್ಕೆ ಗೌರವ, ಹೆಮ್ಮೆ ತಂದಿದ್ದಾರೆ: ಡಿಕೆಶಿ

    ಬೆಂಗಳೂರು: ಆರ್‌ಸಿಬಿ (RCB) ಹುಡುಗರು ನಮ್ಮ ಕರ್ನಾಟಕಕ್ಕೆ ಗೌರವ ಹಾಗೂ ಹೆಮ್ಮೆ ತಂದಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಆರ್‌ಸಿಬಿ ತಂಡಕ್ಕೆ ಶುಭಾಶಯ ಕೋರಿದ್ದಾರೆ.

    ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಮಣಿಸಿ ಕಪ್ ಗೆದ್ದ ಆರ್‌ಸಿಬಿ ತಂಡದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ತಂಡವನ್ನು ನಾವು ಗೌರವಿಸಬೇಕು. ಯಾವ ರೀತಿ ಅವರನ್ನು ಗೌರವಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಟ್ರಾಫಿಕ್‌ಗೂ ಸಮಸ್ಯೆ ಆಗಬಾರದು, ಸಾಕಷ್ಟು ಯುವಕರು ಭಾಗವಹಿಸುತ್ತಾರೆ ಎಂದರು. ಇದನ್ನೂ ಓದಿ: ಮಧ್ಯಾಹ್ನ ಬೆಂಗಳೂರಿಗೆ ಚಾಂಪಿಯನ್ಸ್ – ಸಂಜೆ ವಿಜಯೋತ್ಸವ ಮೆರವಣಿಗೆ | ಎಷ್ಟು ಗಂಟೆಗೆ ಏನು?

    ಅವರು ಶೆಡ್ಯೂಲ್ ಹಾಕಿಕೊಳ್ಳುತ್ತಾರೆ. ಆದರೆ ಕಂಟ್ರೋಲ್ ಮಾಡೋದು ನಾವು. ಗೃಹ ಸಚಿವರು, ಪೊಲೀಸ್ ಕಮೀಷನರ್ ಎಲ್ಲಾ ಕೂತು ಮಾತನಾಡಿ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ನಾನು ಕೂಡ ಸಂಪೂರ್ಣ ಮ್ಯಾಚ್ ನೋಡಿದ್ದೇನೆ. ಆರ್‌ಸಿಬಿ ಟೀಂ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರಿಗೆ ಸನ್ಮಾನ ಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಕ್ಟರಿ ಪರೇಡ್

  • ಕೊಹ್ಲಿಗೆ ಎಚ್ಚರಿಕೆ ನೀಡದ ಅಂಪೈರ್‌ಗಳ ವಿರುದ್ಧ ಗವಾಸ್ಕರ್ ಗರಂ

    ಕೊಹ್ಲಿಗೆ ಎಚ್ಚರಿಕೆ ನೀಡದ ಅಂಪೈರ್‌ಗಳ ವಿರುದ್ಧ ಗವಾಸ್ಕರ್ ಗರಂ

    ಅಹಮದಾಬಾದ್‌: ಪಂಜಾಬ್‌ (Punjab Kings) ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli) ಅವರಿಗೆ ಎಚ್ಚರಿಕೆ ನೀಡದ್ದಕ್ಕೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸುನಿಲ್‌ ಗವಾಸ್ಕರ್ (Sunil Gavaskar) ಅವರು ಅಂಪೈರ್‌ಗಳನ್ನು ಟೀಕಿಸಿದ್ದಾರೆ.

    ವಿರಾಟ್‌ ಕೊಹ್ಲಿ ಹೆಚ್ಚು ಬೌಂಡರಿ, ಸಿಕ್ಸ್‌ ಹೊಡೆಯಲು ಹೋಗದೇ ವಿಕೆಟ್‌ ಉಳಿಸುವ ಮೂಲಕ ಸಿಂಗಲ್‌, ಡಬಲ್‌ ರನ್‌ ಓಡುತ್ತಿದ್ದರು. 12ನೇ ಓವರ್‌ನಲ್ಲಿ ಚಹಲ್‌ ಎಸೆದ ಎಸೆತವನ್ನು ಕೊಹ್ಲಿ ಲಾಂಗ್‌ ಅನ್‌ ಕಡೆಗೆ ತಳ್ಳಿದರು. ಕೊಹ್ಲಿ ಮತ್ತು ಲಿವಿಂಗ್‌ಸ್ಟೋನ್ ಎರಡು ರನ್‌ ಓಡಿದರು. ರನ್‌ ಓಡುವಾಗ ಕೊಹ್ಲಿ ಪಿಚ್‌ ಮೇಲೆ ನೇರವಾಗಿ ಓಡಿದ್ದರು.

    ಈ ವಿಚಾರವನ್ನು ಪ್ರಸ್ತಾಪ ಮಾಡಿದ ಗವಸ್ಕಾರ್‌, ಕೊಹ್ಲಿ ವಿಕೆಟ್‌ಗಳ ಮಧ್ಯೆ ವೇಗವಾಗಿ ಓಡುತ್ತಾರೆ. ಚೆಂಡನ್ನು ಹೊಡೆದ ತಕ್ಷಣವೇ ಇದರಲ್ಲಿ 2 ರನ್‌ ಬರುತ್ತದೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಹೇಳಿದರು. ಮತ್ತೆ ತಮ್ಮ ವಿವರಣೆಯನ್ನು ಮುಂದುವರಿಸಿ, ಯಾವೊಬ್ಬ ಅಂಪೈರ್‌ ಕೊಹ್ಲಿಗೆ ಏನು ಹೇಳುವುದಿಲ್ಲ. ಅವರು ಮತ್ತೆ ಪಿಚ್‌ ಮೇಲೆ ನೇರವಾಗಿ ಓಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತೆ ಬ್ಯಾಟಿಂಗ್‌ ಮಾಡಬೇಕಿದೆ ಎಂದು ಎಂದು ಹೇಳುವ ಮೂಲಕ ಎಚ್ಚರಿಕೆ ನೀಡದ ಅಂಪೈರ್‌ಗಳನ್ನು ಟೀಕಿಸಿದರು. ಇದನ್ನೂ ಓದಿ: IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

    ಕ್ರಿಕೆಟ್‌ನಲ್ಲಿ ರನ್‌ ಓಡುವಾಗ ಬ್ಯಾಟರ್‌ಗಳು ಪಿಚ್‌ ಮೇಲೆ ಓಡುವಂತಿಲ್ಲ. ಪಿಚ್‌ ಮೇಲೆ ಓಡಿದ್ದರೆ ಅದು ಹಾಳಾಗಿ ಬೌಲಿಂಗ್‌ಗೆ ಸಮಸ್ಯೆ ಆಗುತ್ತದೆ. ಒಂದು ವೇಳೆ ಬ್ಯಾಟರ್‌ಗಳು ಪಿಚ್‌ ಮೇಲೆ ಓಡಿದ್ದರೆ ಅಂಪೈರ್‌ಗಳು ಎಚ್ಚರಿಕೆ ನೀಡುತ್ತಾರೆ. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಈಗ ಆರ್‌ಸಿಬಿಯ ಯಶಸ್ವಿ ನಾಯಕ

    ಫೈನಲ್‌ ಪಂದ್ಯದಲ್ಲಿ ಕೊಹ್ಲಿ 43 ರನ್‌(35 ಎಸೆತ, 3 ಬೌಂಡರಿ) ಹೊಡೆದಿದ್ದರು. ಈ ಟೂರ್ನಿಯಲ್ಲಿ ಕೊಹ್ಲಿ 15 ಪಂದ್ಯಗಳಿಂದ 657 ರನ್‌ ಹೊಡೆಯುವ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಬ್ಯಾಟರ್‌ಗಳ ಪೈಕಿ 3ನೇ ಸ್ಥಾನ ಪಡೆದಿದ್ದು ಒಟ್ಟು 8 ಅರ್ಧಶತಕ ಹೊಡೆದಿದ್ದಾರೆ.

    2008 ರಿಂದ ಆರ್‌ಸಿಬಿ ತಂಡದಲ್ಲೇ ಆಡುತ್ತಿರುವ ಕೊಹ್ಲಿ 267 ಪಂದ್ಯಗಳಿಂದ 8,661 ರನ್‌ ಹೊಡೆದಿದ್ದಾರೆ. 8 ಶತಕ, 63 ಬಾರಿ ಅರ್ಧಶತಕ ಬಾರಿಸಿದ್ದಾರೆ.