Tag: IPL

  • ಜಿಯೋ ಸಿನಿಮಾದಲ್ಲಿ ದಾಖಲೆ ಬರೆದ ಧೋನಿಯ ಅವಳಿ ಸಿಕ್ಸರ್

    ಜಿಯೋ ಸಿನಿಮಾದಲ್ಲಿ ದಾಖಲೆ ಬರೆದ ಧೋನಿಯ ಅವಳಿ ಸಿಕ್ಸರ್

    ಚೆನ್ನೈ: ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ (MA Chidambaram Stadium) ಸೋಮವಾರ ನಡೆದ ಚನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧದ ಐಪಿಎಲ್‍ನ (IPL) ಆರನೇ ಪಂದ್ಯದಲ್ಲಿ ಧೋನಿ (MS Dhoni) ಸಿಡಿಸಿದ ಅವಳಿ ಸಿಕ್ಸರ್‌ಗಳು ಜಿಯೋ ಸಿನಿಮಾದಲ್ಲಿ 1.7 ಕೋಟಿ ವೀಕ್ಷಣೆ ಕಂಡಿದ್ದು ನೂತನ ದಾಖಲೆ ನಿರ್ಮಿಸಿದೆ.

    ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಬ್ಯಾಟಿಂಗ್‍ನಲ್ಲಿ ಅಬ್ಬರಿಸಿದ್ದ ಧೋನಿ ಆಟವನ್ನು ಜಿಯೋ ಸಿನಿಮಾದಲ್ಲಿ 1.6 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿದ್ದ ಪಂದ್ಯವಾಗಿತ್ತು. ಆದರೆ ಈಗ ಈ ದಾಖಲೆಯನ್ನು ಸೋಮವಾರ ನಡೆದ ಪಂದ್ಯ ಮುರಿದಿದೆ. ಇದನ್ನೂ ಓದಿ: ಗಾಯಕ್ವಾಡ್‌ ಭರ್ಜರಿ ಬ್ಯಾಟಿಂಗ್‌, ಮೊಯಿನ್‌ ಅಲಿ ಮಾರಕ ಬೌಲಿಂಗ್‌ – ತವರಿನಲ್ಲಿ ಚೆನ್ನೈಗೆ 12 ರನ್‌ಗಳ ಜಯ

    ಲಕ್ನೋ ವಿರುದ್ಧದ ಪಂದ್ಯದಲ್ಲಿ 20ನೇ ಓವರ್‍ನ ಮೊದಲ ಎಸೆತಕ್ಕೆ ರವೀಂದ್ರ ಜಡೇಜಾ ಔಟಾದ ಬಳಿಕ ಕ್ರೀಸ್‍ಗೆ ಆಗಮಿಸಿದ ಧೋನಿ ಎದುರಾಳಿ ತಂಡದ ವೇಗಿ ಮಾರ್ಕ್‍ವುಡ್ ಎಸೆದ 3 ಎಸೆತಗಳಿಗೆ ಎರಡು ಸಿಕ್ಸರ್ ಬಾರಿಸಿದರು. 148 ಕಿ.ಮೀ ವೇಗವಾಗಿ ಧೋನಿಯತ್ತ ನುಗ್ಗಿದ ಚೆಂಡು ಬ್ಯಾಟ್ ಪ್ರಹಾರಕ್ಕೆ 89 ಮೀಟರ್ ದೂರಕ್ಕೆ ಹೋಗಿತ್ತು. ನಂತರದ ಎಸೆತವನ್ನು ಧೋನಿ ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ಮಾಡಿದ್ದರು. ಆದರೆ ಈ ಪ್ರಯತ್ನ ವಿಫಲವಾಗಿ ಕ್ಯಾಚ್ ನೀಡಿ ಅಂಗಳ ತೊರೆದರು.

    ಸಿಎಸ್‍ಕೆ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿದರೆ ಲಕ್ನೋ 7 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿತು. ಈ ಮೂಲಕ ಚೆನ್ನೈ 12 ರನ್‍ಗಳ ಜಯದೊಂದಿಗೆ ಐಪಿಎಲ್‍ನಲ್ಲಿ ಮೊದಲ ಗೆಲುವು ಸಾಧಿಸಿತು. ಇದನ್ನೂ ಓದಿ: IPL 2023 – ಚಿಯರ್‌ ಗರ್ಲ್ಸ್‌ ಝಲಕ್‌ ನೋಡಿ

  • ಈ ಸಲ ಕಪ್ ನಹೀ ಎಂದ ಆರ್‌ಸಿಬಿ ಕ್ಯಾಪ್ಟನ್

    ಈ ಸಲ ಕಪ್ ನಹೀ ಎಂದ ಆರ್‌ಸಿಬಿ ಕ್ಯಾಪ್ಟನ್

    ಬೆಂಗಳೂರು: ಆವೃತ್ತಿಯಲ್ಲಿ ಮತ್ತೊಮ್ಮೆ ತಂಡವು ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆಯಿಂದ ಅಂಗಳಕ್ಕೆ ಇಳಿದಿದೆ. ಆದರೆ ತಂಡ ಇನ್ನೂ ಪಂದ್ಯವನ್ನು ಆಡುವುದಕ್ಕಿಂತ ಮೊದಲೇ ನಾಯಕ ಫಾಫ್ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.

    ಇಂಡಿಯನ್ ಪ್ರೀಮಿಯರ್ ಲೀಗ್ (IPL) 16ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಕಠಿಣ ಹೋರಾಟವನ್ನು ಅಭಿಮಾನಿಗಳು ಸಂಪೂರ್ಣವಾಗಿ ಆನಂದಿಸಿದರು. ಅದೇ ರೀತಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಸಹ ಏ.2ರಂದು ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ತನ್ನ ಹೋರಾಟವನ್ನು ಆರಂಭಿಸಲಿದೆ. ವಿರಾಟ್ ಕೊಹ್ಲಿ ಇರುವಿಕೆಯಿಂದಾಗಿ, ಅಭಿಮಾನಿಗಳು ಈ ತಂಡಕ್ಕೆ ಹೆಚ್ಚಿನ ಪ್ರೀತಿಯನ್ನು ನೀಡುತ್ತಿದ್ದಾರೆ. ಆದರೆ ಆರ್‌ಸಿಬಿಗೆ (RCB) ಇದುವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇದರ ನಡುವೆ ತಂಡದ ನಾಯಕ ಫಾಫ್ ಡುಪ್ಲೆಸಿ ಹೇಳಿರುವ ಹೇಳಿಕೆಯ ವಿಡಿಯೋ ಒಂದು ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ: IPL 2023: ಮಾರ್ಕ್‌ ಮಾರಕ ಬೌಲಿಂಗ್‌, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್‌ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ

    ಆರ್‌ಸಿಬಿ ಅಭಿಮಾನಿಗಳ ಘೋಷ ವಾಕ್ಯ ಎಂದೇ ಮಾತಾಗಿರುವ “ಈ ಸಲ ಕಪ್ ನಮ್ದೇ” ಎಂಬ ವಾಕ್ಯ ಪ್ರತಿ ವರ್ಷ ಟ್ರೆಂಡ್ ಆಗುತ್ತದೆ. ಆದರೆ ಆರ್‌ಸಿಬಿ ನಾಯಕ ಇದೇ ಸಾಲನ್ನು ತಪ್ಪಾಗಿ ಉಚ್ಚರಿಸುವ ಮೂಲಕ ಎಡವಟ್ಟು ಮಾಡಿದ್ದಾರೆ. ತಂಡದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಮತ್ತು ಫಾಫ್ ಡುಪ್ಲೆಸಿಸ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ, ಫಾಫ್ ಡುಪ್ಲೆಸಿ ಈ ಸಲ ಕಪ್ ನಮ್ದೇ ಎನ್ನುವ ಬದಲಿಗೆ “ಈ ಸಲ ಕಪ್ ನಹೀ” ಎಂದು ಹೇಳಿದ್ದಾರೆ.

     

    ಆರ್‌ಸಿಬಿ ನಾಯಕನೇ ಕಪ್ ನಹೀ ಎಂದು ಹೇಳಿದ್ದಕ್ಕೆ ಪಕ್ಕದಲ್ಲಿ ಕುಳಿತಿದ್ದ ಕೊಹ್ಲಿ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ದಾಖಲೆ ಮೇಲೆ ಕೊಹ್ಲಿ ಕಣ್ಣು:
    ಐಪಿಎಲ್‍ನಲ್ಲಿ 7,000 ರನ್ ಗಡಿ ದಾಟಲು ವಿರಾಟ್ ಕೊಹ್ಲಿಗೆ (Virat Kohli) 376 ರನ್ ಅಗತ್ಯವಿದೆ. ಐಪಿಎಲ್ 2023ರಲ್ಲಿ ಕೊಹ್ಲಿ 376 ರನ್ ಗಳಿಸಿದರೆ, ಈ ಟೂರ್ನಿಯಲ್ಲಿ 7,000 ರನ್ ಪೂರೈಸಿದ ಮೊದಲ ಬ್ಯಾಟ್ಸ್‍ಮನ್ ಎಂಬ ಇತಿಹಾಸ ನಿರ್ಮಿಸಲಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗಾಗಿ (ಆರ್‌ಸಿಬಿ) ಕಳೆದ 15 ಆವೃತ್ತಿಗಳನ್ನು ಆಡಿದ ಏಕೈಕ ಆಟಗಾರ. ಐಪಿಎಲ್‍ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅವರ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ (Crisgel) ಅವರನ್ನು ಹಿಂದಿಕ್ಕಲು ಎರಡು ಶತಕಗಳ ಅಗತ್ಯವಿದೆ. ಕ್ರಿಸ್ ಗೇಲ್ ಐಪಿಎಲ್‍ನಲ್ಲಿ 6 ಶತಕಗಳನ್ನು ಬಾರಿಸಿದ್ದರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ತಲಾ 5 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

    ಬೆಂಗಳೂರು- ಮುಂಬೈ ಸಂಪೂರ್ಣ ತಂಡ:

    ರಾಯಲ್ ಚಾಲೆಂಜರ್ಸ್ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ ವುಡ್, ಮೊಹಮ್ಮದ್ ಸಿರಾಜ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್‍ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ಮೈಕೆಲ್ ಬ್ರೇಸ್‍ವೆಲ್.

    ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಜೋಫ್ರಾ ಆರ್ಚರ್, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣ್‍ದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆನ್‍ಡಾರ್ಫ್, ಆಕಾಶ್ ಮಧ್ವಾಲ್, ಕ್ಯಾಮರೋನ್ ಗ್ರೀನ್, ಜ್ಯೆ ರಿಚಡ್ರ್ಸನ್, ಪಿಯೂಷ್ ಚಾವ್ಲಾ, ದುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್, ಸಂದೀಪ್ ವಾರಿಯರ್. ಇದನ್ನೂ ಓದಿ: Team India ಸೂಪರ್‌ ಪವರ್‌ ಆಗಿದೆ ಅಂತಾ BCCIಗೆ ದುರಹಂಕಾರ – ಇಮ್ರಾನ್‌ ಖಾನ್‌ ಕಿಡಿ

  • IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 16 ನೇ ಆವೃತ್ತಿ ಮಾ.31 ರಂದು ಪ್ರಾರಂಭವಾಗಲಿದೆ. ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಮೇ 28 ರಂದು ಫೈನಲ್ ಪಂದ್ಯ ನಡೆಯಲಿದ್ದು, ಟೂರ್ನಿಯ ಆರಂಭಕ್ಕೂ ಮುನ್ನ, ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿಯಲಿರುವ 5 ಆಟಗಾರ ಪಟ್ಟಿ ಇಲ್ಲಿದೆ.

    ಜಸ್ಪ್ರೀತ್ ಬುಮ್ರಾ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಬುಮ್ರಾ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿದ್ದು ಮುಂಬರುವ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ರಿಷಬ್ ಪಂತ್: ಕಾರು ಅಪಘಾತದಿಂದ ಪಂತ್, ತೀವ್ರಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ (Rishabh Pant) ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

    ಜಾನಿ ಬೈರ್‍ಸ್ಟೋವ್: ಐಪಿಎಲ್ ಅತ್ಯಂತ ಪ್ರಭಾವಶಾಲಿ ಬ್ಯಾಟರ್‌ಗಳಲ್ಲಿ ಒಬ್ಬರಾದ ಬೈರ್‍ಸ್ಟೋವ್ (Jonny Bairstow), ಕಾಲು ಮುರಿತದಿಂದ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಪಂಜಾಬ್ ಕಿಂಗ್ಸ್ ಅವರ ಬದಲಿಗೆ ಮ್ಯಾಟ್ ಶಾರ್ಟ್ ಅವರನ್ನು ಆಯ್ಕೆಮಾಡಿಕೊಂಡಿದೆ.

    KKR

    ಕೈಲ್ ಜೆಮಿಸನ್: ಬೆನ್ನಿನ ಗಾಯದಿಂದ ಶಸ್ತ್ರಚಿಕಿತ್ಸೆಗೊಳಗಾದ ಜೆಮಿಸನ್ (Kyle Jamieson) ನಾಲ್ಕು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ. ಸಿಎಸ್‍ಕೆ ಅವರ ಬದಲಿಯಾಗಿ ದಕ್ಷಿಣ ಆಫ್ರಿಕಾದ ವೇಗಿ ಸಿಸಂಡಾ ಮಗಾಲಾ ಅವರನ್ನು ಆಯ್ಕೆ ಮಾಡಿಕೊಂಡಿದೆ.

    ಶ್ರೇಯಸ್ ಅಯ್ಯರ್: ಬೆನ್ನುನೋವಿನಿಂದಾಗಿ ಶ್ರೇಯಸ್ ಅಯ್ಯರ್ (Shreyas Iyer) ಹೊರಗುಳಿದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‍ನ ಇವರ ಸ್ಥಾನವನ್ನು ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವರನ್ನು ತುಂಬಲಿದ್ದಾರೆ. ಇದನ್ನೂ ಓದಿ: ಪ್ರಾಕ್ಟೀಸ್‌ ಟೈಮ್‌ನಲ್ಲಿ ಧೋನಿ ಸಿಕ್ಸರ್‌ ಸುರಿಮಳೆ – ಹುಚ್ಚೆದ್ದು ಕುಣಿದ ಫ್ಯಾನ್ಸ್‌

  • ಐಪಿಎಲ್- ಆರ್‌ಸಿಬಿ ಕೆಲವು ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಅನುಮಾನ

    ಐಪಿಎಲ್- ಆರ್‌ಸಿಬಿ ಕೆಲವು ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಅನುಮಾನ

    ಬೆಂಗಳೂರು: ಮೊಣಕಾಲು ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) 2023ರ ಐಪಿಎಲ್‍ನಲ್ಲಿ (IPL) ಆರ್‌ಸಿಬಿ ತಂಡದ ಪರವಾಗಿ ಎಲ್ಲಾ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಅನುಮಾನ.

    ಈ ಬಗ್ಗೆ ಆರ್‌ಸಿಬಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಮಾತಾಡಿರುವ ಮ್ಯಾಕ್ಸ್‌ವೆಲ್, ಗಾಯ ಗುಣವಾಗಲು ತಿಂಗಳುಗಳು ಬೇಕಾಗಬಹುದು. ಆದರೆ ಐಪಿಎಲ್‍ನಲ್ಲಿ ಪಾಲ್ಗೊಳ್ಳಲು ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್‌ 360ಗೆ ಯುವರಾಜ್‌ ಸಿಂಗ್‌ ಬೆಂಬಲ

    ಕೋವಿಡ್ ನಿರ್ಬಂಧದಿಂದ ಎರಡು ವರ್ಷಗಳ ನಂತರ ಆರ್‌ಸಿಬಿಯ (RCB) ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಆಡಲು  ಮ್ಯಾಕ್ಸ್‌ವೆಲ್ ಕಾತುರದಲ್ಲಿದ್ದಾರೆ.

    ಇತ್ತೀಚೆಗೆ ನಡೆದ ಟೀಂ ಇಂಡಿಯಾ (Team India)ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಏಕದಿನ ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಆಡಿ, ಉಳಿದ ಎರಡು ಪಂದ್ಯಗಳಲ್ಲಿ ಗೈರಾಗಿದ್ದರು. ಸ್ನೇಹಿತನೊಂದಿಗೆ ಟೆನ್ನಿಸ್ ಕೋರ್ಟ್‍ನಲ್ಲಿ (Tennis court) ಓಡುವಾಗ ಇಬ್ಬರೂ ಸಿಲುಕಿ ಬಿದ್ದು ಮ್ಯಾಕ್ಸ್ ಗಾಯಗೊಂಡಿದ್ದರು. ಇದನ್ನೂ ಓದಿ: ಪ್ರಶ್ನೆಪತ್ರಿಕೆಯಲ್ಲಿ ಕೊಹ್ಲಿ ಫೋಟೋ ನೋಡಿ ವಿದ್ಯಾರ್ಥಿಗಳು ಶಾಕ್!

  • 750,000 ಡಾಲರ್ ಅಂದ್ರೆ ಎಷ್ಟು ಅಂತ ಗೊತ್ತಿರಲಿಲ್ಲ- ಕಾರು ಖರೀದಿಯ ಬಗ್ಗೆ ಯೋಚಿಸಿದ್ದ ರೋಹಿತ್

    750,000 ಡಾಲರ್ ಅಂದ್ರೆ ಎಷ್ಟು ಅಂತ ಗೊತ್ತಿರಲಿಲ್ಲ- ಕಾರು ಖರೀದಿಯ ಬಗ್ಗೆ ಯೋಚಿಸಿದ್ದ ರೋಹಿತ್

    ನವದೆಹಲಿ: ಐಪಿಎಲ್ ಹರಾಜಿನಲ್ಲಿ ಡೆಕ್ಕನ್ ಚಾರ್ಜರ್ಸ್ (Deccan Chargers) ತಂಡಕ್ಕೆ ಆಯ್ಕೆಯಾದಾಗಿನ ರೋಚಕ ವಿಚಾರವೊಂದನ್ನು ರೋಹಿತ್ ಶರ್ಮಾ (Rohit Sharma) ತೆರಿದಿಟ್ಟಿದ್ದಾರೆ.

    2008ರಲ್ಲಿ ಮೊದಲ ಬಾರಿಗೆ ಐಪಿಎಲ್ ( IPL) ಆರಂಭವಾಗಿತ್ತು. ಈ ವೇಳೆ 20 ವರ್ಷದ ರೋಹಿತ್ ಶರ್ಮಾ ಅವರನ್ನು ಡೆಕ್ಕನ್ ಚಾರ್ಜರ್ಸ್ ತಂಡ ಖರೀದಿಸಿತ್ತು. ಹರಾಜಾದ ವಿಷಯ ತಿಳಿದು ಅಚ್ಚರಿಗೊಂಡಿದ್ದ ರೋಹಿತ್ ಶರ್ಮಾ ಸಿಕ್ಕಿದ ಹಣದಿಂದ ಕಾರನ್ನು ಖರೀದಿಸುವ ಬಗ್ಗೆ ಯೋಚನೆ ಮಾಡಿದ್ದ ವಿಚಾರವನ್ನು ಈಗ ಬಹಿರಂಗ ಮಾಡಿದ್ದಾರೆ. ಇದನ್ನೂ ಓದಿ: IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ಹೈದರಾಬಾದ್ ತಂಡ 7,50,000 ಡಾಲರ್ ನೀಡಿ ಖರೀದಿಸಿದಾಗ ಅಂದು ನಾನು 3 ರಿಂದ 3.5 ಕೋಟಿ ರೂ. ಸಿಗಬಹುದು ಎಂದು ಅಂದುಕೊಂಡಿದ್ದೆ. ಅದರಲ್ಲೂ ನನ್ನ ಬಿಡ್ ಬಹಳ ತಡವಾಗಿ ಆಗಿತ್ತು. ಇಷ್ಟೊಂದು ಮೊತ್ತದ ಹಣವನ್ನು ಕೇಳಿ ನಾನು ಕಾರು ಖರೀದಿಸುವ ಬಗ್ಗೆ ಅಲ್ಲೇ ಯೋಚಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಸೆಣಸಿದ್ದ ಅವರು ಮೂರು ಅವೃತ್ತಿಯಲ್ಲಿ 1170 ರನ್ ದಾಖಲಿಸಿಕೊಂಡಿದ್ದರು. ನಂತರ 2011ರಲ್ಲಿ ಮುಂಬೈ ತಂಡ 13 ಕೋಟಿ ರೂ.ಗಳಿಗೆ ಅವರನ್ನು ಖರೀದಿಸಿತ್ತು. ಅಂದಿನಿಂದ ಮುಂಬೈ ಇಂಡಿಯನ್ (Mumbai Indians) ತಂಡದ ಸದಸ್ಯರಾಗಿ ಉಳಿದ ರೋಹಿತ್ 2013ರಲ್ಲಿ ತಂಡದ ಗೆಲುವಿನಲ್ಲಿ ಪಾತ್ರವಹಿಸಿದ್ದರು. 2015, 2017, 2019 ಹಾಗೂ 2020ರ ತಂಡವನ್ನು ಮುನ್ನಡೆಸಿದ್ದರು.

    ಈ ಬಾರಿಯ ಐಪಿಎಲ್‍ಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಹತ್ತು ವರ್ಷ ಪೂರೈಸಲಿದ್ದಾರೆ. ಎಪ್ರಿಲ್ 2 ರಂದು ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (Royal Challengers) ವಿರುದ್ಧ ಆಡಲಿದ್ದಾರೆ. ಇದನ್ನೂ ಓದಿ: ಇನ್ಮುಂದೇ ಮಂಡ್ಯದಲ್ಲಿ ಮೂರನೇ ಆಟ ಶುರು : ಬಿಜೆಪಿ ಸೇರುವುದಾಗಿ ಶಿವರಾಮೇಗೌಡ ಘೋಷಣೆ

  • ಬಹುಕಾಲದ ಗೆಳತಿಯನ್ನ ವರಿಸಿದ ಲಂಕಾ ಕ್ರಿಕೆಟಿಗ ಹಸರಂಗ

    ಬಹುಕಾಲದ ಗೆಳತಿಯನ್ನ ವರಿಸಿದ ಲಂಕಾ ಕ್ರಿಕೆಟಿಗ ಹಸರಂಗ

    ಕೊಲೊಂಬೊ: ಶ್ರೀಲಂಕಾ ತಂಡದಲ್ಲಿ ಸ್ಪಿನ್ ಮಾಂತ್ರಿಕ ಎಂದೇ ಖ್ಯಾತಿಯಾಗಿರುವ ಕ್ರಿಕೆಟಿಗ ವಾನಿಂದು ಹಸರಂಗ (Wanindu Hasaranga) ತನ್ನ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಆರ್‌ಸಿಬಿ (RCB) ತಂಡದ ಆಲ್‌ರೌಂಡರ್ ಸಹ ಆಗಿರುವ ವಾನಿಂದು ಹಸರಂಗ, ಗೆಳತಿ ವಿಂದ್ಯಾ (Vindya) ವಿವಾಹದ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: WPL 2023: ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು – ಗುಜರಾತ್ ಜೈಂಟ್ಸ್‌ಗೆ 11 ರನ್ ರೋಚಕ ಜಯ

    ಶ್ರೀಲಂಕಾ (SriLanka) ತಂಡದಲ್ಲಿ ತನ್ನ ಸ್ಪಿನ್ ಬೌಲಿಂಗ್ ಹಾಗೂ ಸ್ಫೋಟಕ ಆಟದಿಂದ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಸರಂಗ. ಆರ್‌ಸಿಬಿ ತಂಡದಲ್ಲಿ ಆಲ್‌ರೌಂಡರ್ ಆಗಿಯೂ ಮಿಂಚಿದ್ದಾರೆ. ಇದನ್ನೂ ಓದಿ: Ind Vs Aus: ಆಸ್ಟ್ರೇಲಿಯಾದ ಪ್ರಧಾನಿ‌ ಜೊತೆ ಮೋದಿ ಮ್ಯಾಚ್ ವೀಕ್ಷಣೆ

    ಮಾರ್ಚ್ 9 ರಂದು ಆತ್ಮೀಯರ ಸಮ್ಮುಖದಲ್ಲಿ ಹಸರಂಗ-ವಿಂದ್ಯಾ ಜೋಡಿಯ ವಿವಾಹ (Marriage) ಮಹೋತ್ಸವ ಜರುಗಿದೆ. ನವ ಜೋಡಿಯ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭಕೋರಿದ್ದಾರೆ. ಇತ್ತ ಆರ್‌ಸಿಬಿ ತಂಡ ಕೂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ನವದಂಪತಿಗೆ ಶುಭ ಹಾರೈಸಿದೆ. ಇದನ್ನೂ ಓದಿ: ಜೊನಾಸೆನ್‌ ಆಲ್‌ರೌಂಡರ್‌ ಆಟ, ತಾಲಿಯಾ ಏಕಾಂಗಿ ಹೋರಾಟ – ಡೆಲ್ಲಿ ಕ್ಯಾಪಿಟಲ್ಸ್‌ಗೆ 42 ರನ್‌ಗಳ ಭರ್ಜರಿ ಜಯ

    2022ರ ಏಷ್ಯಾಕಪ್ (AisaCup 2022) ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆಲ್‌ರೌಂಡರ್ ಪ್ರದರ್ಶನ ನೀಡಿದ್ದ ಹಸರಂಗ ತಂಡದ ಗೆಲುವಿಗೆ ಕಾರಣರಾಗಿದ್ದರು. ಇದರೊಂದಿಗೆ 2022ರ ಟಿ20 ವಿಶ್ವಕಪ್‌ನಲ್ಲಿ (T20 WorldCup) 15 ವಿಕೆಟ್ ಪಡೆಯುವ ಮೂಲಕ ಅತಿಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು.

  • TNPL ನಲ್ಲೂ ದುಡ್ಡೋ ದುಡ್ಡು – ದುಬಾರಿ ಬೆಲೆಗೆ ಹರಾಜಾದ IPL ಚಾಂಪಿಯನ್ಸ್ ತಂಡದ ಆಟಗಾರ

    TNPL ನಲ್ಲೂ ದುಡ್ಡೋ ದುಡ್ಡು – ದುಬಾರಿ ಬೆಲೆಗೆ ಹರಾಜಾದ IPL ಚಾಂಪಿಯನ್ಸ್ ತಂಡದ ಆಟಗಾರ

    ಚೆನ್ನೈ: ಐಪಿಎಲ್ (IPL) ಮಾದರಿಯಂತೆ ಇದೇ ಮೊದಲ ಬಾರಿಗೆ ತಮಿಳುನಾಡು ಪ್ರೀಮಿಯರ್ ಲೀಗ್ (TNPL)ಗೆ ಹರಾಜು ಪ್ರಕ್ರಿಯೆ ನಡೆಯಿತು.

    ಹರಾಜು ಪ್ರಕ್ರಿಯೆಯನ್ನು ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. 6 ಆವೃತ್ತಿಗಳನ್ನು ನಡೆಸಿರುವ ಟಿಎನ್‌ಪಿಎಲ್ ತನ್ನ 7ನೇ ಆವೃತ್ತಿಗೆ ಐಪಿಎಲ್ ಮಾದರಿಯಲ್ಲೇ ಹರಾಜು ಪ್ರಕ್ರಿಯೆ ನಡೆಸಿತು. ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾದ (Team India) ಆಲ್‌ರೌಂಡರ್ ಆರ್. ಅಶ್ವಿನ್ (R Ashwin) ಸಹ ಪಾಲ್ಗೊಂಡಿದ್ದು, ದಿಂಡಿಗಲ್ ಡ್ರ‍್ಯಾಗನ್ಸ್ ಫ್ರಾಂಚೈಸಿ ಪರವಾಗಿ ಬಿಡ್ಡಿಂಗ್ ಮಾಡಿದರು. ಇದೇ ಮೊದಲ ಬಾರಿಗೆ ನಡೆದ ಹರಾಜು ಪ್ರಕ್ರಿಯೆಲ್ಲಿ ಪ್ರಮುಖ ಆಟಗಾರರು ಲಕ್ಷ ಲಕ್ಷ ಬಾಚಿಕೊಂಡರು.

    ಟಿಎನ್‌ಪಿಎಲ್‌ನಲ್ಲಿ ದಿಂಡಿಗಲ್ ಡ್ರ‍್ಯಾಗನ್ಸ್, ಲೈಕಾ ಕೋವೈ ಕಿಂಗ್ಸ್ (Lyca Kovai Kings), ನೆಲ್ಲೈ ರಾಯಲ್ ಕಿಂಗ್ಸ್, ಐಡ್ರೀಮ್ ತಿರುಪ್ಪೂರ್ ತಮಿಳು ಸೇರಿದಂತೆ 8 ತಂಡಗಳಿಗಾಗಿ ಹರಾಜು ನಡೆಸಲಾಯಿತು. ಪ್ರತಿ ತಂಡಕ್ಕೆ ಹರಾಜಿನಲ್ಲಿ ಖರ್ಚು ಮಾಡಲು 60 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಇದನ್ನೂ ಓದಿ: ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್

    ಈ ವೇಳೆ ಟಿಎನ್‌ಪಿಎಲ್‌ನಲ್ಲಿ ಐಪಿಎಲ್ (IPL) ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಆಟಗಾರ ಸಾಯಿ ಸುದರ್ಶನ್ (Sai Sudarshan) ದಾಖಲೆ ಮೊತ್ತಕ್ಕೆ ಬಿಕರಿಯಾದರು. ಲೈಕಾ ಕೋವೈ ಕಿಂಗ್ಸ್ ಸಾಯಿ ಸುದರ್ಶನ್ ಒಬ್ಬರಿಗೇ 21.6 ಲಕ್ಷ ರೂ. ಬಿಡ್ ಮಾಡುವ ಮೂಲಕ ಗಮನ ಸೆಳೆಯಿತು. ಎಡಗೈ ಬ್ಯಾಟರ್ ಆಗಿರುವ ಸುದರ್ಶನ್‌ಗೆ ಭಾರೀ ಪೈಪೋಟಿ ಉಂಟಾಗಿತ್ತು. ಅಂತಿಮವಾಗಿ ಲೈಕಾ ಕೋವೈ ಕಿಂಗ್ಸ್ 21.6 ಲಕ್ಷ ರೂ.ಗಳಿಗೆ ಬಿಡ್ ಮಾಡಿತು.

    ಸದ್ಯ ಸುದರ್ಶನ್ ಐಪಿಎಲ್ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡಲಿದ್ದಾರೆ. ಕಳೆದ ಬಾರಿ 20 ಲಕ್ಷ ರೂ.ಗೆ ಐಪಿಎಲ್‌ಗೆ ಹರಾಜಾಗಿದ್ದ ಸುದರ್ಶನ್ ಇದೀಗ ಐಪಿಎಲ್‌ಗಿಂತಲೂ ದುಬಾರಿ ಮೊತ್ತಕ್ಕೆ ಟಿಎನ್‌ಪಿಎಲ್‌ಗೆ ಬಿಕರಿಯಾಗಿದ್ದಾರೆ. ಇದನ್ನೂ ಓದಿ: ನನ್ನ ದೇಶ ನನ್ನ ಕಣ್ಣೀರು ನೋಡಬಾರದು – ವಿಶ್ವಕಪ್ ಕನಸು ಭಗ್ನಗೊಂಡಿದ್ದಕ್ಕೆ ಕಣ್ಣೀರಿಟ್ಟ ಕೌರ್

    2021ರ ಐಪಿಎಲ್ ಮೆಗಾ ಹರಾಜಿನಲ್ಲಿ ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಕಳೆದ ಸೀಸನ್‌ನಲ್ಲಿ ಅವರು 5 ಪಂದ್ಯಗಳಲ್ಲಿ 145 ರನ್ ಗಳಿಸಿದ್ದರು. ನಿಯಮಿತವಾಗಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರೂ, 2023ರ ಐಪಿಎಲ್‌ನಲ್ಲಿ ಕೂಡ ಅವರು ತಂಡದಲ್ಲಿ ಉಳಿದುಕೊಂಡಿದ್ದಾರೆ.

    ಮೊದಲ ದಿನದ ಟಿಎನ್‌ಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸುದರ್ಶನ್ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ನಂತರದಲ್ಲಿ ಸಂಜಯ್ ಯಾದವ್ 17.60 ಲಕ್ಷ ರೂಗೆ ಚೆಪಾಕ್ ಸೂಪರ್ ಗಿಲ್ಲಿಸ್ ತಂಡಕ್ಕೆ ಖರೀದಿಯಾದರೆ, ಶಿವಂ ಸಿಂಗ್ 15.95 ಲಕ್ಷ ರೂ.ಗಳಿಗೆ ದಿಂಡಿಗಲ್ ಡ್ರ್ಯಾಗನ್ಸ್‌ಗೆ ಹರಾಜಾದರು. 2ನೇ ದಿನದ ಹರಾಜಿನಲ್ಲಿ 50 ಸಾವಿರ ಮೂಲ ಬೆಲೆಯ ಕಿರಣ್ ಆಕಾಶ್ ಅವರನ್ನ ಕೋವೈ ಕಿಂಗ್ಸ್ 6.40 ಲಕ್ಷ ರೂ.ಗೆ ಖರೀದಿ ಮಾಡಿತು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • WPL 2023 – ಟಾಟಾ ಸಮೂಹಕ್ಕೆ ಟೈಟಲ್ ಹಕ್ಕು

    WPL 2023 – ಟಾಟಾ ಸಮೂಹಕ್ಕೆ ಟೈಟಲ್ ಹಕ್ಕು

    ನವದೆಹಲಿ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಕ್ರಿಕೆಟ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವದ ಹಕ್ಕನ್ನು ಟಾಟಾ ಗ್ರೂಪ್ (TaTa Group) ತನ್ನದಾಗಿಸಿಕೊಂಡಿದೆ.

    ಚೀನಾದ (China) ಹ್ಯಾಂಡ್‌ಸೆಟ್ ತಯಾರಕರಾದ ವಿವೋ (Vivo), ಒಪ್ಪಂದದಿಂದ ಹಿಂದೆ ಸರಿದ ನಂತರ 5 ವರ್ಷಗಳ ಅವಧಿಗೆ ಟಾಟಾ ಸಮೂಹ ಡಬ್ಲ್ಯೂಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿದೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?

    ಕಳೆದ ವರ್ಷ ಟಾಟಾ ಸಮೂಹವು ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ಪಡೆದಿತ್ತು. ಇದೀಗ ಡಬ್ಲ್ಯೂಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆಯಲು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಟೈಟಲ್ ಪ್ರಾಯೋಕತ್ವದ ಮೌಲ್ಯವನ್ನು ಇನ್ನೂ ಖಚಿತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: WPL Auction 2023 ಹರಾಜು ನಡೆಸಿಕೊಟ್ಟ ಮಲ್ಲಿಕಾಗೆ ಬೇಷ್ ಎಂದ ಡಿಕೆ

    ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿಯ ಪಂದ್ಯಗಳು ಮಾರ್ಚ್ 4ರಿಂದ ಮುಂಬೈನ ಬ್ರಬೌರ್ನ್ ಕ್ರೀಡಾಂಗಣ ಮತ್ತು ಡಿ.ವೈ. ಪಾಟೀಲ್ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಬಿಸಿಸಿಐ ಈಗಾಗಲೇ ಮಹಿಳಾ ಮಾಧ್ಯಮ ಹಕ್ಕು ಮಾರಾಟದಿಂದ 951 ಕೋಟಿ ರೂ. ಮತ್ತು 5 ತಂಡಗಳ ಮಾರಾಟದಿಂದ 4,700 ಕೋಟಿ ರೂ. ಆದಾಯ ಬಾಚಿಕೊಂಡಿದೆ. ಇದನ್ನೂ ಓದಿ: WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?

    ಈ ತಿಂಗಳ ಆರಂಭದಲ್ಲಿ ನಡೆದ ಆಟಗಾರ್ತಿಯರ ಹರಾಜಿನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (Smriti Mandhana) ಅತ್ಯಧಿಕ 3.40 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಕರಿಯಾದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2007ರ ಟಿ20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ

    2007ರ ಟಿ20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ

    ಮುಂಬೈ: ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್ (T20 World Cup) ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಫೈನಲ್ ಪಂದ್ಯದ ಹೀರೋ ಜೋಗಿಂದರ್ ಶರ್ಮಾ (Joginder Sharma) ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ (Retirement) ಘೋಷಿಸಿದ್ದಾರೆ.

     

    2002 ರಿಂದ 2017ರ ವರೆಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಜೋಗಿದಂರ್ ಶರ್ಮಾ 2007 ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹೀರೋ ಆಗಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲುವಿಗೆ 13 ರನ್ ಬೇಕಾಗಿತ್ತು. ಈ ಮೊತ್ತವನ್ನು ಬಿಟ್ಟುಕೊಡದೆ ತಮ್ಮ ಅದ್ಭುತ ದಾಳಿಯ ಮೂಲಕ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಆ ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಜೋಗಿಂದರ್ ಶರ್ಮಾ ಆಗೊಮ್ಮೆ ಹೀಗೊಮ್ಮೆ ತಂಡದಲ್ಲಿ ಸ್ಥಾನ ಪಡೆದು ಬಳಿಕ ತಂಡದಿಂದ ದೂರ ಉಳಿದಿದ್ದರು. ಇದೀಗ ಎಲ್ಲಾ ಮಾದರಿ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದಾರೆ. ಇದನ್ನೂ ಓದಿ: ಮೂಳೆ ಮುರಿದರೂ ಎಡಗೈ ಒಂದರಲ್ಲೇ ಬ್ಯಾಟಿಂಗ್ – ವಿಹಾರಿ ಫೈಟ್ ಬ್ಯಾಕ್‍ಗೆ ಮೆಚ್ಚುಗೆ

    ಈ ಬಗ್ಗೆ ಬಿಸಿಸಿಐಗೆ (BCCI) ಪತ್ರ ಬರೆದಿದ್ದ ಜೋಗಿಂದರ್ ಶರ್ಮಾ, 2007 ರಿಂದ 2017ರ ವರೆಗಿನ ನನ್ನ ಕ್ರಿಕೆಟ್‌ ಜರ್ನಿಗೆ ಇದೀಗ ವಿದಾಯ ಘೋಷಿಸುತ್ತಿದ್ದು, ಬಿಸಿಸಿಐ, ಹರಿಯಾಣ ಕ್ರಿಕೆಟ್ ಬೋರ್ಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗೆ (CSK) ಧನ್ಯವಾದ ತಿಳಿಸುತ್ತೇನೆ. ತಂಡದ ಸಹ ಆಟಗಾರರು, ಕೋಚ್, ಮೆಂಟರ್, ಸಹಾಯಕ ಸಿಬ್ಬಂದಿ ಜೊತೆ ನನ್ನ ಕುಟುಂಬ ಸದಸ್ಯರಿಗೆ ಧನ್ಯವಾದ ಎಂದು ವಿದಾಯ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: T20Iː ಧೋನಿ ಹೋದ್ಮೇಲೆ ಜವಾಬ್ದಾರಿ ನನ್ನ ಮೇಲಿದೆ – ಪಾಂಡ್ಯ ಭಾವುಕ

    ಜೋಗಿಂದರ್ ಶರ್ಮಾ ಭಾರತ ಪರ ತಲಾ 4 ಏಕದಿನ ಮತ್ತು ಟಿ20 ಪಂದ್ಯಗಳಿಂದ ಒಟ್ಟು 5 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್‍ನಲ್ಲಿ (IPL) ಒಟ್ಟು 16 ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದಾರೆ.

    ಹರಿಯಾಣದ ಡಿಎಸ್‍ಪಿ:
    ಜೋಗಿಂದರ್ ಶರ್ಮಾ ಕ್ರಿಕೆಟ್ ಬಳಿಕ ವೃತ್ತಿಯಲ್ಲಿ ಪೊಲೀಸ್ ಆಗಿದ್ದು ಪ್ರಸ್ತುತ ಹರಿಯಾಣದ ಡಿಎಸ್‍ಪಿ (DSP) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿವಾದಗಳಿಂದ ಸದ್ದು ಮಾಡಿದ BBL

    ವಿವಾದಗಳಿಂದ ಸದ್ದು ಮಾಡಿದ BBL

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k