Tag: IPL

  • ಅಭಿಷೇಕ್‌ ಶರ್ಮಾ, ಕ್ಲಾಸೆನ್‌ ಕ್ಲಾಸಿಕ್‌ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 9 ರನ್‌ ಜಯ

    ಅಭಿಷೇಕ್‌ ಶರ್ಮಾ, ಕ್ಲಾಸೆನ್‌ ಕ್ಲಾಸಿಕ್‌ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 9 ರನ್‌ ಜಯ

    ನವದೆಹಲಿ: ಆರಂಭದಲ್ಲಿ ಬ್ಯಾಟರ್‌ಗಳ ಅಬ್ಬರದ ಬ್ಯಾಟಿಂಗ್‌ ನಂತರ ಬೌಲರ್‌ಗಳ ಬಿಗಿ ದಾಳಿಯಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) 9 ರನ್‌ಗಳ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 6 ವಿಕೆಟ್‌ ನಷ್ಟಕ್ಕೆ 197 ರನ್‌ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 188 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಡೆಲ್ಲಿ ನಾಯಕ ಡೇವಿಡ್‌ ವಾರ್ನರ್‌ (David Warner) ಶೂನ್ಯಕ್ಕೆ ಔಟಾದರೂ 2ನೇ ವಿಕೆಟಿಗೆ ಫಿಲ್‌ ಸಾಲ್ಟ್‌ ಮತ್ತು ಮಿಚೆಲ್‌ ಮಾರ್ಷ್‌ 68 ಎಸೆತಗಳಿಗೆ 112 ರನ್‌ ಜೊತೆಯಾಟವಾಟವಾಡಿದರು. ಆದರೆ ಫಿಲ್‌ ಸಾಲ್ಟ್‌ ಔಟಾದ ಬೆನ್ನಲ್ಲೇ ಡೆಲ್ಲಿ ಕುಸಿತ ಆರಂಭವಾಯಿತು. ಮಧ್ಯಮ ಕ್ರಮಾಂಕದ ಅಕ್ಷರ್‌ ಪಟೇಲ್‌ ಹೊರತು ಪಡಿಸಿ ಉಳಿದ ಬ್ಯಾಟರ್‌ಗಳಿಂದ ಯಾವುದೇ ಪ್ರತಿರೋಧ ಬಾರದ ಕಾರಣ ಡೆಲ್ಲಿ ಈ ಪಂದ್ಯದಲ್ಲೂ ಸೋಲನ್ನು ಅನುಭವಿಸಿದೆ.  ಇದನ್ನೂ ಓದಿ: IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB – ರನ್‌ ಹೊಳೆಯಲ್ಲಿ ತೇಲಾಡಿ 2ನೇ ಸ್ಥಾನಕ್ಕೇರಿದ ಲಕ್ನೋ

    ಡೆಲ್ಲಿ ಪರ ಫಿಲ್‌ ಸಾಲ್ಟ್‌ 59 ರನ್‌(35 ಎಸೆತ, 9 ಬೌಂಡರಿ) ಮಿಚೆಲ್‌ ಮಾರ್ಷ್‌ 63 ರನ್‌(39 ಎಸೆತ, 1 ಬೌಂಡರಿ, 6 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ ಔಟಾಗದೇ 29 ರನ್‌ (14 ಎಸೆತ, 1 ಬೌಂಡರಿ, 2 ಸಿಕ್ಸರ್‌) ಬಾರಿಸಿ ಗೆಲುವಿನದ ದಡದತ್ತ ತಂದರು.

    ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್‌ (IPL) ಅಂಕಪಟ್ಟಿಯಲ್ಲಿ ಹೈದರಾಬಾದ್‌ 6 ಅಂಕದೊಂದಿಗೆ 8ನೇ ಸ್ಥಾನಕ್ಕೆ ಜಿಗಿದರೆ ಡೆಲ್ಲಿ 4 ಅಂಕಗಳೊಂದಿಗೆ 10ನೇ ಸ್ಥಾನದಲ್ಲೇ ಮುಂದುವರಿದಿದೆ.

    ಹೈದರಾಬಾದ್‌ ಪರ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ 67 ರನ್‌(36 ಎಸೆತ, 12 ಬೌಂಡರಿ, 1 ಸಿಕ್ಸರ್‌) ಹೊಡೆದರೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್‌ ಕ್ಲಾಸೆನ್‌ ಔಟಾಗದೇ 53 ರನ್‌(27 ಎಸೆತ, 2 ಬೌಂಡರಿ, 4 ಸಿಕ್ಸರ್‌), ಅಬ್ದುಲ್‌ ಸಮದ್‌ 28 ರನ್‌(21 ಎಸೆತ, 1 ಬೌಂಡರಿ, 1 ಸಿಕ್ಸರ್)‌ ಹೊಡೆದ ಪರಿಣಮಾಮ ತಂಡದ ಮೊತ್ತ 190 ರನ್‌ ಗಡಿ ದಾಟಿತು.

  • ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟಕ್ಕೆ ಪಂಜಾಬ್‌ ಪಂಚರ್‌, ಲಕ್ನೋಗೆ 56 ರನ್‌ಗಳ ಭರ್ಜರಿ ಜಯ

    ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟಕ್ಕೆ ಪಂಜಾಬ್‌ ಪಂಚರ್‌, ಲಕ್ನೋಗೆ 56 ರನ್‌ಗಳ ಭರ್ಜರಿ ಜಯ

    – ಐಪಿಎಲ್‌ನಲ್ಲಿ ದಾಖಲಾಯ್ತು ಎರಡನೇ ಅತ್ಯಧಿಕ ಮೊತ್ತ

    ಮೊಹಾಲಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 56 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 5 ವಿಕೆಟ್‌ ನಷ್ಟಕ್ಕೆ 257 ರನ್‌ ಹೊಡೆಯಿತು. ಭಾರೀ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ 19.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟ್‌ ಆಯ್ತು

    ಪಂಜಾಬ್‌ ಆರಂಭದಲ್ಲೇ ತನ್ನ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಶಿಖರ್‌ ಧವನ್‌ 1 ರನ್‌ ಗಳಿಸಿ ಔಟಾದರೆ ಪ್ರಭಾಸಿಮ್ರಾನ್ ಸಿಂಗ್ 9 ರನ್‌ ಗಳಿಸಿ ಔಟಾದರು. ಆದರೆ ಅಥರ್ವ ತೈದೆ ಮತ್ತು ಸಿಕಂದರ್ ರಜಾ ಮೂರನೇ ವಿಕೆಟಿಗೆ 47 ಎಸೆತದಲ್ಲಿ 78 ರನ್‌ ಜೊತೆಯಾಟವಾಡಿದರು.

    ಅಥರ್ವ ತೈದೆ 66 ರನ್‌(36 ಎಸೆತ, 8 ಬೌಂಡರಿ, 2 ಸಿಕ್ಸರ್)‌, ಸಿಕಂದರ್‌ ರಾಜಾ 36 ರನ್‌(22 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಸ್ಯಾಮ್‌ ಕರ್ರನ್‌ 21 ರನ್‌(11 ಎಸೆತ, 2 ಬೌಂಡರಿ, 1 ಸಿಕ್ಸರ್‌), ಜಿತೇಶ್‌ ಶರ್ಮಾ 24 ರನ್‌( 10 ಎಸೆತ, 3 ಸಿಕ್ಸರ್‌) ಸಿಡಿಸಿ ಸ್ವಲ್ಪ ಪ್ರತಿರೋಧ ತೋರಿದರು. ಉಳಿದ ಆಟಗಾರರಿಂದ ನಿರೀಕ್ಷಿತ ಆಟ ಬಾರದ ಕಾರಣ ಪಂಜಾಬ್‌ 201 ರನ್‌ಗಳಿಗೆ ಆಲೌಟ್‌ ಆಯ್ತು. ಪಂಜಾಬ್‌ ಬ್ಯಾಟರ್‌ಗಳನ್ನು ನಿಯಂತ್ರಿಸಲು ಲಕ್ನೋ ಪರವಾಗಿ 8 ಮಂದಿ ಬೌಲ್‌ ಮಾಡಿದ್ದರು.

    ರನ್‌ ಸುರಿಮಳೆ:
    ಲಕ್ನೋ ತಂಡ ಆರಂಭದಿಂದಲೇ ಬ್ಯಾಟ್‌ ಬೀಸಲು ಆರಂಭಿಸಿತ್ತು. ಕೆಎಲ್‌ ರಾಹುಲ್‌ 12 ರನ್‌(9 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಕೈಲ್‌ ಮೇಯರ್ಸ್‌ ಮತ್ತು ಮಾರ್ಕಸ್ ಸ್ಟೊಯಿನಿಸ್ ಮೂರನೇ ವಿಕೆಟಿಗೆ 47 ಎಸೆತಗಳಲ್ಲಿ 89 ರನ್‌ ಜೊತೆಯಾಟವಾಡಿದರು. ನಾಲ್ಕನೇ ವಿಕೆಟಿಗೆ ಸ್ಟೊಯಿನಿಸ್ ಮತ್ತು ನಿಕೂಲಸ್‌ ಪೂರನ್‌ 30 ಎಸೆತಗಳಲ್ಲಿ 76 ರನ್‌ ಚಚ್ಚಿದರು.

    ಕೈಲ್‌ ಮೇಯರ್ಸ್‌ 54 ರನ್‌(24 ಎಸೆತ, 7 ಬೌಂಡರಿ, 4 ಸಿಕ್ಸರ್)‌ , ಆಯುಷ್ ಬದೋನಿ 43 ರನ್‌(24 ಎಸೆತ, 3 ಬೌಂಡರಿ, 3 ಸಿಕ್ಸರ್‌), ಸ್ಟೊಯಿನಿಸ್ 72 ರನ್‌(40 ಎಸೆತ, 6 ಬೌಂಡರಿ, 5 ಸಿಕ್ಸರ್‌), ನಿಕೂಲಸ್‌ ಪೂರನ್‌ 45 ರನ್‌(19 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರು.

    ಲಕ್ನೋ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಪಂಜಾಬ್‌ ತಂಡ 7 ಬೌಲರ್‌ಗಳನ್ನು ಬಳಸಿತ್ತು. ಅಷ್ಟೇ ಅಲ್ಲದೇ ಇತರ ರೂಪದಲ್ಲಿ 15 ರನ್‌(ಲೆಗ್‌ ಬೈ6, ನೋಬಾಲ್‌ 4, ವೈಡ್‌ 5) ನೀಡಿದ ಪರಿಣಾಮ ಲಕ್ನೋ 5 ವಿಕೆಟ್‌ ನಷ್ಟಕ್ಕೆ 257 ರನ್‌ ಹೊಡೆದಿತ್ತು.

    ಈ ಪಂದ್ಯದಲ್ಲಿ ಲಕ್ನೋ ಪರ 14 ಸಿಕ್ಸ್‌, 27 ಬೌಂಡರಿ ದಾಖಲಾದರೆ ಪಂಜಾಬ್‌ ಪರ 8 ಸಿಕ್ಸ್‌ 16 ಬೌಂಡರಿ ಸಿಡಿಯಲ್ಪಟ್ಟಿತ್ತು.

    ಎರಡನೇ ಅತ್ಯಧಿಕ ಮೊತ್ತ:
    ಲಕ್ನೋ ಇಂದು ಹೊಡೆದ 257 ರನ್‌ ಐಪಿಎಲ್‌ (IPL) ಇತಿಹಾಸದಲ್ಲಿ ತಂಡವೊಂದರ ಎರಡನೇ ಅತ್ಯಧಿಕ ಸ್ಕೋರ್‌ ಆಗಿದೆ. ಈ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 263 ರನ್‌ ಹೊಡೆದಿತ್ತು. ಇದು ಈವರೆಗಿನ ತಂಡವೊಂದರ ಅತ್ಯಧಿಕ ಮೊತ್ತವಾಗಿದೆ.

    ಲಕ್ನೋ ತಂಡದ ರನ್‌ ಏರಿದ್ದು ಹೇಗೆ?
    50 ರನ್‌ – 20 ಎಸೆತ
    100 ರನ್‌ – 49 ಎಸೆತ
    150 ರನ್‌ – 77 ಎಸೆತ
    200 ರನ್‌ – 99 ಎಸೆತ
    250 ರನ್‌ – 116 ಎಸೆತ
    257 ರನ್‌ – 120 ಎಸೆತ

  • 4 ರನ್‌ಗಳಿಗೆ 3 ವಿಕೆಟ್‌ ಪತನ – ಚೆನ್ನೈಗೆ ಸೋಲು, ಮೊದಲ ಸ್ಥಾನಕ್ಕೆ ರಾಜಸ್ಥಾನ ಜಿಗಿತ

    4 ರನ್‌ಗಳಿಗೆ 3 ವಿಕೆಟ್‌ ಪತನ – ಚೆನ್ನೈಗೆ ಸೋಲು, ಮೊದಲ ಸ್ಥಾನಕ್ಕೆ ರಾಜಸ್ಥಾನ ಜಿಗಿತ

    ಜೈಪುರ: ಐಪಿಎಲ್‌ (IPL) ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ಧ ರಾಜಸ್ಥಾನ ರಾಯಲ್ಸ್‌ (Rajasthan Royals) 32 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 202 ರನ್‌ ಹೊಡೆದಿತ್ತು. ಗೆಲ್ಲಲು 203 ರನ್‌ಗಳ ಕಠಿಣ ಸವಾಲು ಪಡೆದ ಚೆನ್ನೈ 20 ಓವರ್‌ಗಳಲ್ಲಿ6 ವಿಕೆಟ್‌ ನಷ್ಟಕ್ಕೆ 170 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಈ ಪಂದ್ಯವನ್ನು ಗೆಲ್ಲುವ ಮೂಲಕ ರಾಜಸ್ಥಾನ ಅಂಕಪಟ್ಟಿಯಲ್ಲಿ 10 ಅಂಕ (0.939 ನೆಟ್‌ ರನ್‌ ರೇಟ್‌) ಪಡೆದು ಮೊದಲ ಸ್ಥಾನಕ್ಕೆ ಜಿಗಿದಿದೆ. 10 ಅಂಕ ಪಡೆದಿರುವ ಚೆನ್ನೈ 0.376 ನೆಟ್‌ ರನ್‌ ರೇಟ್‌ನೊಂದಿಗೆ ಮೂರನೇ ಸ್ಥಾನಕ್ಕೆ ಜಾರಿದೆ. ಗುಜರಾತ್‌ ತಂಡವೂ 10 ಅಂಕ 0.580 ನೆಟ್‌ ರನ್‌ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ

    ಚೆನ್ನೈ ತಂಡದ ಆರಂಭ ಉತ್ತಮವಾಗಿತ್ತು, ಮೊದಲ ವಿಕೆಟಿಗೆ 42 ರನ್‌ ಬಂದಿತ್ತು. 1 ವಿಕೆಟ್‌ ನಷ್ಟಕ್ಕೆ 69 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಚೆನ್ನೈ ನಂತರ 4 ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತು. ಚೆನ್ನೈ ಪರ ಋತುರಾಜ್‌ ಗಾಯಕ್‌ವಾಡ್‌ 47 ರನ್‌(29 ಎಸೆತ, 5 ಬೌಂಡರಿ, 1 ಸಿಕ್ಸರ್)‌, ಶಿವಂ ದುಬೆ 52 ರನ್‌(33 ಎಸೆತ, 2 ಬೌಂಡರಿ, 4 ಸಿಕ್ಸರ್‌), ಮೊಯಿನ್‌ ಅಲಿ ಮತ್ತು ರವೀಂದ್ರ ಜಡೇಜಾ ತಲಾ 23 ರನ್‌ ಹೊಡೆದರು. ಇದನ್ನೂ ಓದಿ: IPL 2023: ವಾಷಿಂಗ್ಟನ್‌ ಸುಂದರ್‌ ಔಟ್‌ – SRHಗೆ ಗಾಯದ ಮೇಲೆ ಬರೆ

    ತಮ್ಮ ಉತ್ತಮ ಬೌಲಿಂಗ್‌ನಿಂದ ಚೆನ್ನೈ ಬ್ಯಾಟರ್‌ಗಳನ್ನು ರಾಜಸ್ಥಾನ ಬೌಲರ್‌ಗಳು ಕಟ್ಟಿ ಹಾಕಿದರು. ಆಡಂ ಜಂಪಾ 3 ವಿಕೆಟ್‌, ಅಶ್ವಿನ್‌ 2 ವಿಕೆಟ್‌ ಪಡೆದರೆ ಕುಲದೀಪ್‌ ಯಾದವ್‌ 1 ವಿಕೆಟ್‌ ಕಿತ್ತರು.

    ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ರಾಜಸ್ಥಾನದ ಪರವಾಗಿ ಯಶಸ್ವಿ ಜೈಸ್ವಾಲ್‌ 77 ರನ್‌(43 ಎಸೆತ, 8 ಬೌಂಡರಿ, 4 ಸಿಕ್ಸರ್‌) ಜೋಸ್‌ ಬಟ್ಲರ್‌ 27 ರನ್‌(21 ಎಸೆತ, 4 ಬೌಂಡರಿ), ಧ್ರುವ್ ಜುರೆಲ್ ಔಟಾಗದೇ 34 ರನ್‌(15 ಎಸೆತ, 3 ಬೌಂಡರಿ, 2 ಸಿಕ್ಸರ್)‌, ದೇವದತ್ತ ಪಡಿಕ್ಕಲ್‌ ಔಟಾಗದೇ 27 ರನ್‌(13 ಎಸೆತ, 5 ಬೌಂಡರಿ) ಹೊಡೆದ ಪರಿಣಾಮ ರಾಜಸ್ಥಾನ 5 ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸಿತು. ರಾಜಸ್ಥಾನದ ಕೊನೆಯ 50 ರನ್‌ 21 ಎಸೆತಗಳಲ್ಲಿ ದಾಖಲಾಗಿತ್ತು.

  • ನನ್ನ ನವಜಾತ ಮಗನನ್ನು ನೋಡಲು ಸಾಧ್ಯವಾಗುತ್ತಿಲ್ಲ: ವರುಣ್ ಚಕ್ರವರ್ತಿ ಭಾವುಕ

    ನನ್ನ ನವಜಾತ ಮಗನನ್ನು ನೋಡಲು ಸಾಧ್ಯವಾಗುತ್ತಿಲ್ಲ: ವರುಣ್ ಚಕ್ರವರ್ತಿ ಭಾವುಕ

    ಬೆಂಗಳೂರು: ಆರ್‌ಸಿಬಿ (RCB) ಹಾಗೂ ಕೆಕೆಆರ್ (KKR) ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ (Varun Chakravarthy) ತಮ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು (Player of the Match) ಪತ್ನಿ ಹಾಗೂ ನವಜಾತ ಮಗನಿಗೆ ಅರ್ಪಿಸಿದ್ದಾರೆ.

    ಪಂದ್ಯ ಮುಗಿದ ಬಳಿಕ ನಡೆದ ಬಳಿಕ ಹರ್ಷ ಬೋಗ್ಲೆ ಅವರನ್ನು ಮಾತನಾಡಿಸಿದರು. ಈ ವೇಳೆ ಐಪಿಎಲ್ ಮುಗಿದ ಬಳಿಕ ಮಗನನ್ನು ನೋಡುವುದಾಗಿ ಹೇಳಿ ಭಾವುಕರಾದರು. ಇದನ್ನೂ ಓದಿ: IPL 2023: ವಾಷಿಂಗ್ಟನ್‌ ಸುಂದರ್‌ ಔಟ್‌ – SRHಗೆ ಗಾಯದ ಮೇಲೆ ಬರೆ

    ಬುಧವಾರದ ಪಂದ್ಯದಲ್ಲಿ 4 ಓವರ್‌ನಲ್ಲಿ 27 ರನ್ ನೀಡಿ 3 ವಿಕೆಟ್‍ಗಳನ್ನು ಪಡೆದ ವರುಣ್ ತಮ್ಮ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಬೌಲಿಂಗ್ ಕೌಶಲ್ಯ ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆಯಾಗುತ್ತಿರುವುದಕ್ಕೆ ವರುಣ್ ಚಕ್ರವರ್ತಿ ಹೆಮ್ಮೆ ಪಟ್ಟಿದ್ದಾರೆ.

    ವರುಣ್ ಅವರನ್ನು ಸಂದರ್ಶಿದ ಹರ್ಷ ಬೋಗ್ಲೆ ಕೊನೆಗೆ ಐಪಿಎಲ್ ನಡುವೆ ಚಕ್ರವರ್ತಿಯವರಿಗೆ ಮಗನನ್ನು ನೋಡಲು ಅವಕಾಶ ನೀಡುವಂತೆ ಕೆಕೆಆರ್ ಸಿಇಒ ವೆಂಕ್ ಮೈಸೂರ್ ಅವರಿಗೆ ಮನವಿ ಮಾಡಿಕೊಂಡರು.

    ಕಳೆದ 4 ಪಂದ್ಯಗಳನ್ನು ಸೋತಿದ್ದ ಕೆಕೆಆರ್ ಈ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧ ತಾನು ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವುದು ವಿಶೇಷ. ಈ ಜಯದೊಂದಿಗೆ ಅಂಕ ಪಟ್ಟಿಯಲ್ಲಿ ಕೆಕೆಆರ್ 7ನೇ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: ನಾವು ಸೋಲೋದಕ್ಕೆ ಅರ್ಹರು – ಕಿಂಗ್‌ ಕೊಹ್ಲಿ ಹತಾಶೆ

  • ಕಳಪೆ ಫೀಲ್ಡಿಂಗ್‌ಗೆ ಬೆಂಗಳೂರು ಬಲಿ – ಕೋಲ್ಕತ್ತಾಗೆ 21 ರನ್‌ಗಳ ಜಯ

    ಕಳಪೆ ಫೀಲ್ಡಿಂಗ್‌ಗೆ ಬೆಂಗಳೂರು ಬಲಿ – ಕೋಲ್ಕತ್ತಾಗೆ 21 ರನ್‌ಗಳ ಜಯ

    ಬೆಂಗಳೂರು: ಕಳಪೆ ಫೀಲ್ಡಿಂಗ್‌, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಸೋಲನ್ನು ಅನುಭವಿಸಿದೆ. 21 ರನ್‌ಗಳಿಂದ ಗೆದ್ದ ಕೋಲ್ಕತ್ತಾ ಈ ಆವೃತ್ತಿಯಲ್ಲಿ ಮೂರನೇ  ಜಯವನ್ನು ದಾಖಲಿಸಿತು.

    ಗೆಲ್ಲಲು 201 ರನ್‌ಗಳ ಕಠಿಣ ಗುರಿಯನ್ನು ಪಡೆದ ಬೆಂಗಳೂರು ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 179 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಆವೃತ್ತಿಯಲ್ಲಿ ತಾನು ಆರ್‌ಸಿಬಿ ವಿರುದ್ಧ ಆಡಿದ ಎರಡು ಪಂದ್ಯಗಳನ್ನು ಕೋಲ್ಕತ್ತಾ ಗೆದ್ದಿರುವುದು ವಿಶೇಷ. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

    ಇನ್ನಿಂಗ್ಸ್‌ ಆರಂಭಿಸಿದ ಕೊಹ್ಲಿ (Virat Kohli) ಮತ್ತು ಫಾಫ್‌ ಡು ಪ್ಲೆಸಿಸ್‌ ಆರಂಭದಿಂದಲೇ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು. ಆದರೆ ಡುಪ್ಲೆಸಿಸ್‌ ಬಲವಾದ ಹೊಡೆತ ಹೊಡೆಯಲು ಹೋಗಿ 17 ರನ್‌(7 ಎಸೆತ, 1 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು. ನಂತರ ಬಂದ ಶಾಬಾಜ್‌ ಅಹ್ಮದ್‌ 2 ರನ್‌, ಮ್ಯಾಕ್ಸ್‌ವೆಲ್‌ 5 ರನ್‌ ಗಳಿಸಿ ಔಟಾದರು.

    ವಿಕೆಟ್‌ ಉರುಳುತ್ತಿದ್ದರೂ ಕೊಹ್ಲಿ ಮತ್ತು ಮಹಿಪಾಲ್ ಲೋಮ್ರೋರ್ 4ನೇ ವಿಕೆಟಿಗೆ 34 ಎಸೆತಗಳಲ್ಲಿ 55 ರನ್‌ ಜೊತೆಯಾಟವಾಡಿದರು. ಕೊಹ್ಲಿ ಲೋಮ್ರೋರ್‌ 34 ರನ್‌(18 ಎಸೆತ, 1 ಬೌಂಡರಿ, 3 ಸಿಕ್ಸರ್‌), ಕೊಹ್ಲಿ54 ರನ್‌(37 ಎಸೆತ, 6 ಬೌಂಡರಿ) ಹೊಡೆದು ವೆಂಕಟೇಶ್‌ ಅಯ್ಯರ್‌ ಬೌಂಡರಿ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. ದಿನೇಶ್‌ ಕಾರ್ತಿಕ್‌ 22 ರನ್‌ಗಳಿಸಿ ಕ್ಯಾಚ್‌ ನೀಡಿ ಹೊರ ನಡೆದರು.

    ವರುಣ್‌ ಚಕ್ರವರ್ತಿ 27 ರನ್‌ ನೀಡಿ 3 ವಿಕೆಟ್‌ ಪಡೆದರೆ, ಸುಯೇಶ್‌ ಶರ್ಮಾ ಮತ್ತು ಅಂಡ್ರೆ ರಸಲ್‌ ತಲಾ 2 ವಿಕೆಟ್‌ ಪಡೆದರು. ಬೌಲಿಂಗ್‌ ನಿಯಂತ್ರಣದ ಜೊತೆ ಅತ್ಯುತ್ತಮ ಫೀಲ್ಡಿಂಗ್‌ನಿಂದ ಕೋಲ್ಕತ್ತಾ ಈ ಪಂದ್ಯವನ್ನು ಗೆದ್ದುಕೊಂಡಿತು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತಾ ಜೇಸನ್‌ ರಾಯ್‌ 56 ರನ್‌(29 ಎಸೆತ, 4 ಬೌಂಡರಿ, 5 ಸಿಕ್ಸರ್‌), ನಾರಾಯಣ ಜಗದೀಶನ್‌ 27 ರನ್‌(29 ಎಸೆತ, 4 ಬೌಂಡರಿ) ಹೊಡೆದು ಔಟಾದರು. 2 ಜೀವದಾನ ಪಡೆದ ನಾಯಕ ನಿತೀಶ್‌ ರಾಣಾ ಸ್ಫೋಟಕ 48 ರನ್‌(21 ಎಸೆತ, 3 ಬೌಂಡರಿ, 4 ಸಿಕ್ಸರ್‌) ಹೊಡೆದರೆ ಕೊನೆಯಲ್ಲಿ ರಿಂಕು ಸಿಂಗ್‌ ಔಟಾಗದೇ 18 ರನ್‌(10 ಎಸೆತ, 2 ಬೌಂಡರಿ, 1 ಸಿಕ್ಸರ್‌) ಡೇವಿಡ್‌ ವೈಸ್‌ ಔಟಾಗದೇ 12 ರನ್‌(3 ಎಸೆತ, 2 ಸಿಕ್ಸರ್)‌ ಸಿಡಿಸಿದ ಪರಿಣಾಮ ಕೋಲ್ಕತ್ತಾ ಅಂತಿಮವಾಗಿ 5 ವಿಕೆಟ್‌ ನಷ್ಟಕ್ಕೆ 200 ರನ್‌ ಗಳಿಸಿತು.

  • ಗುಜರಾತ್‌ಗೆ 55 ರನ್‌ಗಳ ಭರ್ಜರಿ ಜಯ – ಮುಂಬೈಗೆ ಹೀನಾಯ ಸೋಲು

    ಗುಜರಾತ್‌ಗೆ 55 ರನ್‌ಗಳ ಭರ್ಜರಿ ಜಯ – ಮುಂಬೈಗೆ ಹೀನಾಯ ಸೋಲು

    ಅಹಮದಾಬಾದ್‌: ಬ್ಯಾಟರ್‌ಗಳ ಸ್ಫೋಟಕ ಆಟ ಮತ್ತು ಬೌಲರ್‌ಗಳ ಉತ್ತಮ ಬೌಲಿಂಗ್‌ ಪ್ರದರ್ಶದಿಂದ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಗುಜರಾತ್‌ ಟೈಟಾನ್ಸ್‌ (Gujarat Titans) 55 ರನ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 6 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಮುಂಬೈ ತಂಡ ಆರಂಭದಲ್ಲೇ ನಾಯಕ ರೋಹಿತ್‌ ಶರ್ಮಾ (Rohith Sharma) ವಿಕೆಟ್‌ ಕಳೆದುಕೊಂಡಿತು. 59 ರನ್‌ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್‌ ಕಳೆದುಕೊಂಡಿತ್ತು. ಕ್ಯಾಮರೂನ್‌ ಗ್ರೀನ್‌ 33 ರನ್(26‌ ಎಸೆತ, 3 ಸಿಕ್ಸರ್‌), ಸೂರ್ಯಕುಮಾರ್‌ ಯಾದವ್‌ 23 ರನ್‌ (12 ಎಸೆತ, 3 ಬೌಂಡರಿ,1 ಸಿಕ್ಸರ್‌), ನೆಹಾಲ್ ವಧೇರಾ 40 ರನ್‌ (21 ಎಸೆತ, 3 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಸ್ವಲ್ಪ ಪ್ರತಿರೋಧ ತೋರಿದರು.

    ನೂರ್‌ ಅಹ್ಮದ್‌ 3 , ರಶೀದ್‌ ಖಾನ್‌ ಮತ್ತು ಮೋಹಿತ್‌ ಶರ್ಮಾ ತಲಾ 2, ಹಾರ್ದಿಕ್‌ ಪಾಂಡ್ಯ 1 ವಿಕೆಟ್‌ ಪಡೆದರು.

    ಸವಾಲಿನ ಮೊತ್ತ:
    ಗುಜರಾತ್‌ 12 ರನ್‌ ಗಳಿಸುವಷ್ಟರಲ್ಲೇ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಶುಭಮನ್‌ ಗಿಲ್‌ ಸ್ಫೋಟಕ 56 ರನ್‌(34 ಎಸೆತ, 7 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು.

    ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ 46 ರನ್‌ (22 ಎಸೆತ, 2 ಬೌಂಡರಿ, 4 ಸಿಕ್ಸರ್)‌, ಅಭಿನವ್‌ ಮನೋಹರ್‌ 42 ರನ್‌(21 ಎಸೆತ, 3 ಬೌಂಡರಿ, 3 ಸಿಕ್ಸರ್)‌ ಸಿಡಿಸಿ ಔಟಾದರು. ರಾಹುಲ್‌ ತೆವಾಟಿಯಾ ಔಟಾಗದೇ 20 ರನ್‌ (5 ಎಸೆತ, 3 ಸಿಕ್ಸರ್)‌ ಸಿಡಿಸಿದ ಪರಿಣಾಮ ತಂಡದ ಮೊತ್ತ 200 ರನ್‌ಗಳ ಗಡಿ ದಾಟಿತ್ತು.

    ರನ್‌ ಏರಿದ್ದು ಹೇಗೆ?
    50 ರನ್‌ – 36 ಎಸೆತ
    100 ರನ್‌ -73 ಎಸೆತ
    150 ರನ್‌ -102 ಎಸೆತ
    200 ರನ್‌ – 116 ಎಸೆತ

  • ಕೊನೆಯ ಓವರ್‌ನಲ್ಲಿ ಮುಕೇಶ್‌ ಮ್ಯಾಜಿಕ್‌, ಅಕ್ಷರ್‌ ಆಲ್‌ರೌಂಡರ್‌ ಆಟ – ಡೆಲ್ಲಿಗೆ 7 ರನ್‌ಗಳ ರೋಚಕ ಜಯ

    ಕೊನೆಯ ಓವರ್‌ನಲ್ಲಿ ಮುಕೇಶ್‌ ಮ್ಯಾಜಿಕ್‌, ಅಕ್ಷರ್‌ ಆಲ್‌ರೌಂಡರ್‌ ಆಟ – ಡೆಲ್ಲಿಗೆ 7 ರನ್‌ಗಳ ರೋಚಕ ಜಯ

    ಹೈದರಾಬಾದ್‌: ಕೊನೆಗೆ ಬೌಲರ್‌ಗಳು ನೀಡಿದ ಅತ್ಯುತ್ತಮ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ ಹೈದರಾಬಾದ್‌ ಸನ್‌ ರೈಸರ್ಸ್‌ (Sunrisers Hyderabad) ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 144 ರನ್‌ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ್ದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 137 ರನ್‌ ಹೊಡೆದು ಸೋಲೊಪ್ಪಿಕೊಂಡಿತು. ಐಪಿಎಲ್‌ (IPL) ಅಂಕಪಟ್ಟಿಯಲ್ಲಿ 7 ಪಂದ್ಯ ಆಡಿ 2 ರಲ್ಲಿ ಜಯಗಳಿಸಿರುವ ಡೆಲ್ಲಿ 4 ಅಂಕ ಪಡೆದು 10ನೇ ಸ್ಥಾನದಲ್ಲೇ ಮುಂದುವರೆದರೆ ಹೈದರಾಬಾದ್‌ 2 ಜಯ ಸಾಧಿಸಿ 4 ಅಂಕ ಪಡೆದು 9ನೇ ಸ್ಥಾನದಲ್ಲಿ ಮುಂದುವರೆದಿದೆ.

    ಕೊನೆಯ 30 ಎಸೆತಗಳಲ್ಲಿ ಹೈದರಾಬಾದ್‌ ತಂಡಕ್ಕೆ 51 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 13 ರನ್‌ ಬಂದರೆ 18ನೇ ಓವರ್‌ನಲ್ಲಿ 15 ರನ್‌ ಬಂದಿತ್ತು. 19ನೇ ಓವರ್‌ನಲ್ಲಿ10 ರನ್‌ ಬಂದರೂ ಹೆನ್ರಿಕ್ ಕ್ಲಾಸೆನ್ ಔಟಾದ ಪರಿಣಾಮ ಪಂದ್ಯ ರೋಚಕ ಘಟ್ಟಕ್ಕೆ ತಿರುಗಿತು.

    ಕೊನೆಯ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿತ್ತು. ಮುಕೇಶ್‌ ಕುಮಾರ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿ ಕೇವಲ 5 ರನ್‌ ಬಿಟ್ಟುಕೊಡುವ ಮೂಲಕ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಹೈದರಾಬಾದ್‌ ಪರ ಮಯಾಂಕ್‌ ಅಗರ್‌ವಾಲ್‌ 49 ರನ್‌ (39 ಎಸೆತ, 7 ಬೌಂಡರಿ), ಹೆನ್ರಿಕ್ ಕ್ಲಾಸೆನ್ 31 ರನ್‌ (19 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು. ವಾಷಿಂಗ್ಟನ್‌ ಸುಂದರ್‌ ಔಟಾಗದೇ 24 ರನ್‌(15 ಎಸೆತ, 3 ಬೌಂಡರಿ) ಹೊಡೆದರು.

    ಅಕ್ಷರ್‌ ಪಟೇಲ್‌ ಮತ್ತು ಅನ್ರಿಚ್‌ ನೋರ್ಕಿಯ ತಲಾ 2 ವಿಕೆಟ್‌ ಪಡೆದರೆ, ಇಶಾಂತ್‌ ಶರ್ಮಾ, ಕುಲದೀಪ್‌ ಯಾದವ್‌ ತಲಾ ಒಂದು ವಿಕೆಟ್‌ ಪಡೆದರು.  ಇದನ್ನೂ ಓದಿ: Mood Of Karnataka ಚಾಪ್ಟರ್‌ 2 – ಕಾಂಗ್ರೆಸ್ಸಿಗಿಲ್ಲ ಬಹುಮತ, ಮೊದಲಿಗಿಂತ ಬಿಜೆಪಿ ಸ್ವಲ್ಪ ಸುಧಾರಣೆ

    ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ನಾಯಕ ಡೇವಿಡ್‌ ವಾರ್ನರ್‌ 21 ರನ್‌, ಮಿಷೆಲ್‌ ಮಾರ್ಷ್‌ 25 ರನ್‌(15 ಎಸೆತ, 5 ಬೌಂಡರಿ), ಮನೀಷ್‌ ಪಾಂಡ 34 ರನ್‌(27 ಎಸೆತ), ಅಕ್ಷರ್‌ ಪಟೇಲ್‌ 34 ರನ್‌ (34 ಎಸೆತ, 4 ಬೌಂಡರಿ) ಹೊಡೆದು ಔಟಾದರು.

  • IPL – 100 ಕ್ಯಾಚ್ ಹಿಡಿದು ಕಿಂಗ್ ಕೊಹ್ಲಿ ಸಾಧನೆ

    IPL – 100 ಕ್ಯಾಚ್ ಹಿಡಿದು ಕಿಂಗ್ ಕೊಹ್ಲಿ ಸಾಧನೆ

    ನವದೆಹಲಿ: ಆರ್‌ಸಿಬಿ (RCB) ಆಟಗಾರ ವಿರಾಟ್ ಕೊಹ್ಲಿ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinaswammy Stadium) ನಡೆದ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ಹೊಸ ಸಾಧನೆ ಗೈದಿದ್ದಾರೆ.

    ಐಪಿಎಲ್ (IPL) ಪಂದ್ಯಗಳ ಫೀಲ್ಡರ್ ಆಗಿ 100 ಕ್ಯಾಚ್‍ಗಳನ್ನು ಪೂರ್ಣಗೊಳಿಸಿದ ಕೊಹ್ಲಿ, ಒಟ್ಟಾರೆ ನೂರು ಕ್ಯಾಚ್ ಹಿಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆದ ಎರಡು ಕ್ಯಾಚ್ ಆರ್‌ಸಿಬಿ ಪಾಲಿಗೆ ವರವಾದವು. ಇದನ್ನೂ ಓದಿ: ಜೈಸ್ವಾಲ್ ಕ್ಯಾಚ್ ಹಿಡಿದು ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ

    ಈಗ ವಿರಾಟ್ 228 ಪಂದ್ಯಗಳಲ್ಲಿ ಒಟ್ಟು 101 ಕ್ಯಾಚ್‍ಗಳನ್ನು ಪಡೆದಿದ್ದು, ಆಲ್‍ರೌಂಡರ್ ಕೀರಾನ್ ಪೊಲಾರ್ಡ್ (Kieron Pollard) 103 ಕ್ಯಾಚ್‍ಗಳು ಮತ್ತು ಬ್ಯಾಟರ್ ಸುರೇಶ್ ರೈನಾ (Suresh Raina) 204 ಪಂದ್ಯಗಳಲ್ಲಿ 109 ಕ್ಯಾಚ್‍ಗಳನ್ನು ಪಡೆದಿದ್ದಾರೆ. ನಂತರದ ಸ್ಥಾನಕ್ಕೆ ಕೊಹ್ಲಿ ಎಂಟ್ರಿ ಕೊಟ್ಟಿದ್ದಾರೆ.

     

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‍ಸಿಬಿ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. 190 ರನ್‍ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಟಿ20 – 6000 ರನ್ ಗಡಿ ದಾಟಿದ ಸೂರ್ಯಕುಮಾರ್

  • ಜೈಸ್ವಾಲ್ ಕ್ಯಾಚ್ ಹಿಡಿದು ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ

    ಜೈಸ್ವಾಲ್ ಕ್ಯಾಚ್ ಹಿಡಿದು ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ರೋಚಕತೆಯಿಂದ ಕೂಡಿದ್ದ ಆರ್‌ಸಿಬಿ (RCB) ಹಾಗೂ ರಾಜಸ್ಥಾನ್ ರಾಯಲ್ಸ್ (Rajasthan Royals) ನಡುವಿನ IPL ಪಂದ್ಯದ ವೇಳೆ ಕೊಹ್ಲಿಯ (Virat Kohli) ಫ್ಲೈಯಿಂಗ್ ಕಿಸ್‍ಗೆ ಅನುಷ್ಕಾ ಶರ್ಮಾ (Anushka Sharma) ರೋಮಾಂಚನಗೊಂಡ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‍ನಿಂದ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯದ ಸಮಯದಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೆಡೆಗೆ ಹಾರಿಸಿದ ಪ್ರಣಯ ಸೂಚಕ ಸಿಹಿಮುತ್ತು ಕೊಹ್ಲಿ ಪ್ರೇಮಿಗಳ ಹೃದಯಗಳನ್ನು ಗೆದ್ದಿತು. ಯಶಸ್ವಿ ಜೈಸ್ವಾಲ್ (Jaiswal) ಅವರು ಬ್ಯಾಟ್ ಬೀಸಿದಾಗ ಕೊಹ್ಲಿಯ ಕೈಗೆ ನೇರವಾಗಿ ಕ್ಯಾಚ್ ಹೋಯಿತು. ಅದೇ ಸಂಭ್ರಮದಲ್ಲಿ ಕೊಹ್ಲಿ, ಅನುಷ್ಕಾ ಅವರೆಡೆಗೆ ಆನ್‍ಫೀಲ್ಡ್‌ನಿಂದಲೇ ಸಿಹಿ ಮುತ್ತು ರವಾನಿಸಿದರು.

    ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 7 ರನ್‍ಗಳ ರೋಚಕ ಗೆಲುವು ಸಾಧಿಸಲು ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ (Maxwell) ಇಬ್ಬರಿಂದ ದಾಖಲಾದ ಶತಕ ಪ್ರಮುಖ ಪಾತ್ರವಹಿಸಿತು.

    ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. 190 ರನ್‍ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: BCCIಗೆ ಲಕ್ಷ ಲಕ್ಷ ನಷ್ಟ – ಅರ್ಷ್‌ದೀಪ್‌ ಮುರಿದ 2 ಸ್ಟಂಪ್ಸ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ..

  • ಟಿ20 – 6000 ರನ್ ಗಡಿ ದಾಟಿದ ಸೂರ್ಯಕುಮಾರ್

    ಟಿ20 – 6000 ರನ್ ಗಡಿ ದಾಟಿದ ಸೂರ್ಯಕುಮಾರ್

    ಮುಂಬೈ: ಮುಂಬೈ ಇಂಡಿಯನ್ಸ್ (Mumbai Indians) ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಟಿ20 (T20) ಪಂದ್ಯದಲ್ಲಿ 6,000 ರನ್‍ಗಳ ಗಡಿಯನ್ನು ದಾಟಿದ್ದಾರೆ.

    ಮುಂಬೈನಲ್ಲಿ ನಡೆದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಐಪಿಎಲ್‌ (IPL) ಪಂದ್ಯದಲ್ಲಿ, 215 ರನ್ ಚೇಸಿಂಗ್ ವೇಳೆ ಸೂರ್ಯಕುಮಾರ್ 26 ಎಸೆತಗಳಲ್ಲಿ 57 ರನ್ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದನ್ನೂ ಓದಿ: `ನಮ್ಮ ಹಸಿರು ಭೂಮಿಗಾಗಿʼ – ಪರಿಸರ ಕಾಳಜಿ ಸಂದೇಶ ಕೊಟ್ಟ RCB

    ಈ ಇನ್ನಿಂಗ್ಸ್‌ನೊಂದಿಗೆ ಅವರು 248 ಪಂದ್ಯಗಳಲ್ಲಿ ಮತ್ತು 226 ಇನ್ನಿಂಗ್ಸ್‌ಗಳಲ್ಲಿ 34.01 ಸರಾಸರಿಯಲ್ಲಿ 6,021 ರನ್ ಗಳಿಸಿದ್ದಾರೆ. ಅವರ ರನ್ 149.55 ಸ್ಟ್ರೈಕ್ ರೇಟ್‍ನಲ್ಲಿದೆ. ಸೂರ್ಯಕುಮಾರ್ ಅವರ ಕ್ರಿಕೆಟ್ ಜೀವನದಲ್ಲಿ ಮೂರು ಶತಕಗಳು ಮತ್ತು 38 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಸೂರ್ಯಕುಮಾರ್ ಅವರ ಅಂತಾರಾಷ್ಟ್ರೀಯ ಮಟ್ಟದ ಅಂಕಿ ಅಂಶಗಳು ಅಭಿಮಾನಿಗಳನ್ನು ಬೆರಗುಗೊಳಿಸಿದೆ.

    ಅವರು ಟೀಂ ಇಂಡಿಯಾ (Team India) ಆಟಗಾರರಾಗಿ ಮೂರು ಶತಕಗಳು ಮತ್ತು 13 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. 2022ರ ಐಸಿಸಿ ಟಿ20 ಕ್ರಿಕೆಟರ್ ಪ್ರಶಸ್ತಿ ವಿಜೇತರಾಗಿದ್ದರು.

    ಪಂದ್ಯದಲ್ಲಿ 215 ರನ್‍ಗಳನ್ನು ಬೆನ್ನಟ್ಟಿದ ಮುಂಬೈ ಇಶಾನ್ ಕಿಶನ್‍ನನ್ನು ಬೇಗನೆ ಕಳೆದುಕೊಂಡಿತು. ಆದರೆ ನಾಯಕ ರೋಹಿತ್ ಶರ್ಮಾ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 44 ರನ್ ಸೇರಿಸಿದರು. 43 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‍ಗಳೊಂದಿಗೆ ಗ್ರೀನ್ 67 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‍ನೊಂದಿಗೆ 57 ರನ್ ಗಳಿಸಿದರು. ಮುಂಬೈ ಉತ್ತಮ ಹೋರಾಟದ ನಡುವೆಯೂ ಸೋಲು ಕಂಡಿತು. ಪಂಜಾಬ್ ತಂಡ 13 ರನ್‍ಗಳಿಂದ ಗೆಲುವು ದಾಖಲಾಯಿತು.

    ಈ ಗೆಲುವಿನೊಂದಿಗೆ ಪಂಜಾಬ್ ಏಳು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಮೂರು ಸೋಲು ಸೇರಿ ಒಟ್ಟು ಎಂಟು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಮುಂಬೈ ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಮೂರು ಸೋಲು ಕಂಡು ಒಟ್ಟು ಆರು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

    ಟಿ20ಯಲ್ಲಿ ವೇಗವಾಗಿ 6,000 ರನ್ ಗಳಿಸಿದ ಆಟಗಾರರು
    ಆಂಡ್ರೆ ರಸೆಲ್ (3,550 ಎಸೆತಗಳಿಗೆ), ಗ್ಲೆನ್ ಮ್ಯಾಕ್ಸ್‌ವೆಲ್ (3,890 ಎಸೆತ), ಕೀರಾನ್ ಪೊಲಾರ್ಡ್ (3918 ಎಸೆತ), ಕ್ರಿಸ್ ಗೇಲ್ (4,008 ಎಸೆತ), ಸೂರ್ಯಕುಮಾರ್ ಯಾದವ್ 4,017 ಎಸೆತಗಳಿಗೆ 6,000 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ