Tag: IPL

  • ಜೈಸ್ವಾಲ್‌ ಅಬ್ಬರಕ್ಕೆ ಕೋಲ್ಕತ್ತಾ ಧೂಳೀಪಟ – ರಾಜಸ್ಥಾನಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

    ಜೈಸ್ವಾಲ್‌ ಅಬ್ಬರಕ್ಕೆ ಕೋಲ್ಕತ್ತಾ ಧೂಳೀಪಟ – ರಾಜಸ್ಥಾನಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

    ಕೋಲ್ಕತ್ತಾ: ಯವ ಆಟಗಾರ ಯಶಸ್ವಿ ಜೈಸ್ವಾಲ್‌ ದಾಖಲೆಯ ವೇಗದ ಅರ್ಧಶತಕ ಮತ್ತು ನಾಯಕ ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಆಟದಿಂದಾಗಿ ರಾಜಯಸ್ಥಾನ ರಾಯಲ್ಸ್‌ (Rajasthan Royals ) ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders ) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲ್ಲಲು 150 ರನ್‌ಗಳ ಗುರಿಯನ್ನು ಪಡೆದ ರಾಜಸ್ಥಾನ 13.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 151 ರನ್‌ ಹೊಡೆಯುವ ಮೂಲಕ ಗೆಲುವಿನ ನಗೆ ಬೀರಿತು.

    21 ವರ್ಷದ ಯುವ ಆಟಗಾರ ಜೈಸ್ವಾಲ್‌ (Yashasvi Jaiswal ) ಕೇವಲ 13 ಎಸೆತಗಳಲ್ಲಿ 50 ರನ್‌ (6 ಬೌಂಡರಿ, 3 ಸಿಕ್ಸ್‌) ಚಚ್ಚುವ ಮೂಲಕ ಕೆಎಲ್‌ ರಾಹುಲ್‌ (KL Rahul) ಅವರ ಹೆಸರಿನಲ್ಲಿದ್ದ ವೇಗದ ಅರ್ಧಶತಕ ದಾಖಲೆಯನ್ನು ಮುರಿದರು. ಈ ಮೊದಲು  2018ರ ಆವೃತ್ತಿಯಲ್ಲಿ ರಾಹುಲ್‌14 ಎಸೆತಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಇದನ್ನೂ ಓದಿ: IPL 2023: ಪ್ಲೇ ಆಫ್ ಲೆಕ್ಕಾಚಾರ ಏನು? – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ RCB ಫ್ಯಾನ್ಸ್

    ಮೊದಲ ವಿಕೆಟಿಗೆ 30 ರನ್‌ ಬಂದರೂ ಬಟ್ಲರ್‌ ಕೊಡುಗೆ ಶೂನ್ಯ. ಮುರಿಯದ ಎರಡನೇ ವಿಕೆಟಿಗೆ ಜೈಸ್ವಾಲ್‌ ಮತ್ತು ಸಂಜು ಸ್ಯಾಮ್ಸನ್‌ (Sanju Samson) 69 ಎಸೆತಗಳಲ್ಲಿ 121 ರನ್‌ ಜೊತೆಯಾಟವಾಡಿದರು.

    ಅಂತಿಮವಾಗಿ ಜೈಸ್ವಾಲ್‌ ಔಟಾಗದೇ 98 ರನ್‌ (47 ಎಸೆತ, 12 ಬೌಂಡರಿ, 5 ಸಿಕ್ಸರ್)‌, ಸಂಜು ಸ್ಯಾಮ್ಸನ್‌ ಔಟಾಗದೇ 48 ರನ್‌ (29 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು. 16 ಎಸೆತಗಳಲ್ಲಿ ರಾಜಸ್ಥಾನದ ಮೊದಲ 50 ರನ್‌ ಬಂದಿದ್ದರೆ 49 ಎಸೆತಗಳಲ್ಲಿ 100 ರನ್‌ ಗಡಿ ದಾಟಿತ್ತು. ಪಂದ್ಯವನ್ನು ಗೆಲ್ಲುವ ಮೂಲಕ 5ನೇ ಸ್ಥಾನದಲ್ಲಿದ್ದ ರಾಜಸ್ಥಾನ 3ನೇ ಸ್ಥಾನಕ್ಕೆ ಜಿಗಿದರೆ 6ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ 7ನೇ ಸ್ಥಾನಕ್ಕೆ ಜಾರಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ವೆಂಕಟೇಶ್‌ ಅಯ್ಯರ್‌ 57 ರನ್‌(42 ಎಸೆತ, 2 ಬೌಂಡರಿ, 4 ಸಿಕ್ಸರ್‌) ನಾಯಕ ನಿತೀಶ್‌ ರಾಣಾ 22 ರನ್‌ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

    ಚಹಲ್‌ 25 ರನ್‌ ನೀಡಿ 4 ವಿಕೆಟ್‌ ಕಿತ್ತರೆ ಬೌಲ್ಟ್‌ 2 ವಿಕೆಟ್‌, ಸಂದೀಪ್‌ ಶರ್ಮಾ ಮತ್ತು ಆಸೀಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಸೂರ್ಯ ಸ್ಫೋಟಕ ಆಟಕ್ಕೆ ಆರ್‌ಸಿಬಿ ಬರ್ನ್‌ – ಮುಂಬೈಗೆ 6 ವಿಕೆಟ್‌ಗಳ ಭರ್ಜರಿ ಜಯ

    ಸೂರ್ಯ ಸ್ಫೋಟಕ ಆಟಕ್ಕೆ ಆರ್‌ಸಿಬಿ ಬರ್ನ್‌ – ಮುಂಬೈಗೆ 6 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಸೂರ್ಯಕುಮಾರ್‌ ಸ್ಫೋಟಕ ಅರ್ಧಶತಕದ ಆಟದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ವಿರುದ್ಧ ಮುಂಬೈ ಇಂಡಿಯನ್ಸ್‌ (Mumbai Indians) 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.

    ಆರ್‌ಸಿಬಿ ನೀಡಿದ 200 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 16.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 200 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು. ಆರ್‌ಸಿಬಿ 11 ಪಂದ್ಯಗಳಿಂದ 12 ಅಂಕ ಗಳಿಸಿದರೆ ಬೆಂಗಳೂರು 11 ಪಂದ್ಯಗಳಿಂದ 10 ಅಂಕಗಳಿಸಿ 7ನೇ ಸ್ಥಾನಕ್ಕೆ ಜಾರಿತು.

    ನಾಯಕ ರೋಹಿತ್‌ ಶರ್ಮಾ ಮತ್ತು ಇಶನ್‌ ಕಿಶನ್‌ ಮೊದಲ ವಿಕೆಟಿಗೆ 4.4 ಓವರಿಗೆ 51 ರನ್‌ ಜೊತೆಯಾಟವಾಡಿದರು. ಇದರಲ್ಲಿ ಇಶನ್‌ ಕಿಶನ್‌ ಪಾಲು 42 ರನ್‌(21 ಎಸೆತ, 4 ಬೌಂಡರಿ, 4 ಸಿಕ್ಸರ್)‌. ರೋಹಿತ್‌ ಶರ್ಮಾ 7 ರನ್‌ ಗಳಿಸಿ ಔಟಾದರು.

    ಮೂರನೇ ವಿಕೆಟಿಗೆ ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತು ನೆಹಾಲ್ ವಧೇರಾ 66 ಎಸೆತಗಳಿಗೆ 140 ರನ್‌ ಜೊತೆಯಾಡಿದರು. ಸೂರ್ಯಕುಮಾರ್‌ ಯಾದವ್‌ ತಮ್ಮ ಹಳೆಯ ಲಯಕ್ಕೆ ಮರಳಿದ್ದು 6 ಸಿಕ್ಸ್‌ ಸಿಡಿಸಿದರು. ಅಂತಿಮವಾಗಿ ಸೂರ್ಯ 83 ರನ್‌ (35 ಎಸೆತ, 7 ಬೌಂಡರಿ) ಸಿಡಿಸಿ ಔಟಾದರು. ನೆಹಾಲ್ ವಧೇರಾ ಔಟಾಗದೇ 52 ರನ್‌ (34 ಎಸೆತ, 4 ಬೌಂಡರಿ, 3 ಸಿಕ್ಸರ್‌) ಸಿಡಿಸಿದರು. ಹರ್ಷಲ್‌ ಪಟೇಲ್‌ 3.3 ಓವರ್‌ ಎಸೆದು 41 ರನ್‌ ನೀಡಿದರೆ ವನಿಂದು ಹಸರಂಗ 4 ಓವರ್‌ ಎಸೆದು 53 ರನ್‌ ನೀಡಿ 2 ವಿಕೆಟ್‌ ಪಡೆದರು.

    26 ಎಸೆತಗಳಲ್ಲಿ ಸೂರ್ಯ ಅರ್ಧತಕ ಸಿಡಿಸಿದ್ದರು. ಸೂರ್ಯ ಸ್ಫೋಟಕ ಆಟದಿಂದಾಗಿ 10.1 ಓವರಿಗೆ ಮುಂಬೈ 100 ರನ್‌ ಗಳಿಸಿದ್ದರೆ 15.4 ಓವರ್‌ಗಳಲ್ಲಿ 192 ರನ್‌ ಗಳಿಸಿತ್ತು.

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಬೆಂಗಳೂರು ಮೊದಲ ಓವರ್‌ನಲ್ಲೇ 1 ರನ್‌ ಗಳಿಸಿ ಕೊಹ್ಲಿ ಔಟಾದರೆ ತಂಡದ ಮೊತ್ತ 16 ರನ್‌ ಆಗುವಷ್ಟರಲ್ಲಿ ಅನುಜ್‌ ರಾವತ್‌ ಔಟಾದರು.

    ಮೂರನೇ ವಿಕೆಟಿಗೆ ಫಾಫ್‌ ಡುಪ್ಲೆಸಿಸ್‌ ಮತ್ತು ಗ್ಲೇನ್‌ ಮ್ಯಾಕ್ಸಿವೆಲ್‌ 62 ಎಸೆತಗಳಲ್ಲಿ 120 ರನ್‌ ಜೊತೆಯಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

    ಡುಪ್ಲೆಸಿಸ್‌ 65 ರನ್‌ (41 ಎಸೆತ, 5 ಬೌಂಡರಿ, 3 ಸಿಕ್ಸರ್‌), ಗ್ಲೇನ್‌ ಮ್ಯಾಕ್ಸ್‌ವೆಲ್‌ 68 ರನ್‌ (33 ಎಸೆತ, 8 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರು. ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ 30 ರನ್‌(18 ಎಸೆತ, 4 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಕೇದಾರ್‌ ಜಾದವ್ ಮತ್ತು ವನಿಂದು ಹಸರಂಗ ಔಟಾಗದೇ 12 ರನ್‌ ಹೊಡೆದ ಪರಿಣಾಮ ಆರ್‌ಸಿಬಿ 6 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು.

  • ರಸೆಲ್‌ 3 ಸಿಕ್ಸ್‌, ಕೊನೆಯ ಎಸೆತವನ್ನು ಬೌಂಡರಿಗಟ್ಟಿದ ರಿಂಕು – ಕೋಲ್ಕತ್ತಾಗೆ 5 ವಿಕೆಟ್‌ಗಳ ರೋಚಕ ಜಯ

    ರಸೆಲ್‌ 3 ಸಿಕ್ಸ್‌, ಕೊನೆಯ ಎಸೆತವನ್ನು ಬೌಂಡರಿಗಟ್ಟಿದ ರಿಂಕು – ಕೋಲ್ಕತ್ತಾಗೆ 5 ವಿಕೆಟ್‌ಗಳ ರೋಚಕ ಜಯ

    ಕೋಲ್ಕತ್ತಾ: ಕೊನೆಯಲ್ಲಿ ಆ್ಯಂಡ್ರೆ ರಸೆಲ್ (Andre Russell) ಮತ್ತು ರಿಂಕು ಸಿಂಗ್‌ (Rinku Singh ) ಅವರ ಸ್ಫೋಟಕ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಪಂಜಾಬ್‌ ಕಿಂಗ್ಸ್‌ (Punjab Kings ) ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    180 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ ಪರ ರಿಂಕು ಸಿಂಗ್‌ 20ನೇ ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.

    ಕೊನೆಯ 24 ಎಸೆತಗಳಲ್ಲಿಕೋಲ್ಕತ್ತಾ ಜಯಗಳಿಸಲು 54 ರನ್‌ಗಳ ಅಗತ್ಯವಿತ್ತು. 17ನೇ ಓವರ್‌ನಲ್ಲಿ 15 ರನ್‌ ಬಂದರೆ 18ನೇ ಓವರ್‌ನಲ್ಲಿ 10 ರನ್‌ ಬಂದಿತ್ತು. ಕೊನೆಯ 12 ಎಸೆತಗಳಲ್ಲಿ 26 ರನ್‌ ಬೇಕಿತ್ತು. ಸ್ಯಾಮ್‌ ಕರ್ರನ್‌ ಎಸೆದ 19ನೇ ಓವರ್‌ನಲ್ಲಿ ರಸೆಲ್‌ 3 ಸಿಕ್ಸ್‌ ಸಿಡಿಸಿದರು. ಈ ಓವರ್‌ನಲ್ಲಿ ಎರಡು ಸಿಂಗಲ್‌ ಸೇರಿ 20 ರನ್‌ ಬಂತು.

    ಕೊನೆಯ ಓವರನ್‌ಲ್ಲಿ 6 ರನ್‌ ಬೇಕಿತ್ತು. ಅರ್ಶದೀಪ್‌ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್‌ ಬಂದಿರಲಿಲ್ಲ. ನಂತರದ ಎರಡು ಎಸೆತದಲ್ಲಿ ಸಿಂಗಲ್‌ ರನ್‌ ನಾಲ್ಕನೇ ಎಸೆತದಲ್ಲಿ 2 ರನ್‌ ಬಂತು. 5ನೇ ಎಸೆತ ಬ್ಯಾಟ್‌ ತಾಗದ ಬಾಲ್‌ ಕೀಪರ್‌ ಕೈಸೇರಿತು. ಈ ವೇಳೆ ರನ್‌ ಓಡಿದ ಪರಿಣಾಮ ರಸೆಲ್‌ ನಾನ್‌ಸ್ಟ್ರೈಕ್‌ನಲ್ಲಿ ರನೌಟ್‌ ಆದರು. ಕೊನೆಯ ಎಸೆತವನ್ನು ರಿಂಕು ಸಿಂಗ್‌ ಬೌಂಡರಿಗೆ ಅಟ್ಟಿದ ಪರಿಣಾಮ ಕೋಲ್ಕತ್ತಾ 5 ವಿಕೆಟ್‌ ನಷ್ಟಕ್ಕೆ 182 ರನ್‌ ಹೊಡೆಯುವ ಮೂಲಕ ಜಯಗಳಿಸಿತು. ಇದನ್ನೂ ಓದಿ: ಚುನಾವಣಾ ದಿನ ನಂದಿಗಿರಿಧಾಮ ಸಂಪೂರ್ಣ ಬಂದ್‌

    ರಸೆಲ್‌ 42 ರನ್‌(23 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರೆ ರಿಂಕು ಸಿಂಗ್‌ ಔಟಾಗದೇ 21 ರನ್‌(10 ಎಸೆತ, 2 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಕೋಲ್ಕತ್ತಾ ಪರ ಜೇಸನ್‌ ರಾಯ್‌ 38 ರನ್‌(24 ಎಸೆತ, 8 ಬೌಂಡರಿ), ನಾಯಕ ನಿತೀಶ್‌ ರಾಣಾ 51 ರನ್‌(38 ಎಸೆತ, 6 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ 53 ರನ್‌ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ವಿಕೆಟ್‌ ಕಳೆದುಕೊಂಡಿದ್ದರೂ ನಾಯಕ ಶಿಖರ್‌ ಧವನ್‌ 57 ರನ್‌(47 ಎಸೆತ, 9 ಬೌಂಡರಿ, 1 ಸಿಕ್ಸರ್‌) ಹೊಡೆದು ತಂಡವನ್ನು ಮೇಲೆತ್ತಿದ್ದರು.

    ಲಿವಿಂಗ್‌ಸ್ಟೋನ್‌ 15 ರನ್‌, ಜಿತೇಶ್‌ ಶರ್ಮಾ 21 ರನ್‌, ರಿಶಿ ಧವನ್‌ 19 ರನ್‌ (11 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟದರು. ಕೊನೆಯಲ್ಲಿ ಶಾರೂಖ್‌ ಖಾನ್‌ ಔಟಾಗದೇ 21 ರನ್‌(8 ಎಸೆತ, 3 ಬೌಂಡರಿ, 1 ಸಿಕ್ಸರ್‌), ಹಪ್ರೀತ್‌ ಬ್ರಾರ್‌ ಔಟಾಗದೇ 17 ರನ್‌‌ (9 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದ ಕಾರಣ ಪಂಜಾಬ್‌ 7 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿತು.

  • ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಗಾಂಧಿನಗರ: ಇದೇ ಮೊದಲ ಬಾರಿಗೆ ಐಪಿಎಲ್ (IPL) ಇತಿಹಾಸದಲ್ಲಿ ಅಣ್ಣ ತಮ್ಮ ಇಬ್ಬರು ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. 16ನೇ ಐಪಿಎಲ್ ಆವೃತ್ತಿಯಲ್ಲಿ ಭಾನುವಾರ ನಡೆಯುತ್ತಿರುವ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಡುವಿನ ಪಂದ್ಯವೂ ಸಹೋದರರ ಸವಾಲ್‍ಗೆ ವೇದಿಕೆಯಾಗಿದೆ.

    ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಲಕ್ನೋ ತಂಡದ ನಾಯಕನಾಗಿ ಕೃನಾಲ್ ಪಾಂಡ್ಯ (Krunal Pandya) ಕಣಕ್ಕಿಳಿದಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಗಳನ್ನು ಹೊಂದಿರುವ ಇತ್ತಂಡದ ನಾಯಕರು ಕಣದಲ್ಲಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ: ಶೇಕ್‍ಹ್ಯಾಂಡ್ ವಿವಾದಕ್ಕೆ ತೆರೆ ಎಳೆದ ಕೊಹ್ಲಿ, ಗಂಗೂಲಿ

    ಐಪಿಎಲ್ ಫ್ರಾಂಚೈಸಿಯಲ್ಲಿ ಈ ಹಿಂದೆ ಅನೇಕ ಸಹೋದರರು ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. ಆದ್ರೆ ಇದೇ ಮೊದಲ ಬಾರಿಗೆ ನಾಯಕರಾಗಿ ಅಣ್ಣ ತಮ್ಮ ಕಣದಲ್ಲಿ ಅಬ್ಬರಿಸುತ್ತಿರುವುದು ರೋಚಕವಾಗಿದೆ. ಕಳೆದ ವಾರ ಆರ್‌ಸಿಬಿ (RCB) ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೆ.ಎಲ್ ರಾಹುಲ್ (KL Rahul) ಗಾಯಕ್ಕೆ ತುತ್ತಾಗಿದ್ದರಿಂದ ಕೃನಾಲ್ ಪಾಂಡ್ಯ ನಾಯಕತ್ವ ವಹಿಸಿಕೊಂಡಿದ್ದಾರೆ.

    ಇನ್ನೂ 2022ರಲ್ಲಿ ಮೊದಲಬಾರಿಗೆ ಐಪಿಎಲ್ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವದಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವ ಮೂಲಕ ಪಾಂಡ್ಯ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇತ್ತಂಡಗಳಿಗೂ ಇದು ಸವಾಲಿನ ಪಂದ್ಯವಾಗಿದೆ.

    2023ರ ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಗುಜರಾತ್ ತಂಡ 14 ಅಂಕಗಳೊಂದಿಗೆ ಟಾಪ್ 1 ಸ್ಥಾನದಲ್ಲಿದೆ. ಆದ್ರೆ 10 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಲಕ್ನೋ 11 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗುಜರಾತ್ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಲಕ್ನೋ ಗೆದ್ದರೆ ಟಾಪ್ 2ನೇ ಸ್ಥಾನಕ್ಕೆ ಬರಲಿದೆ.

    ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಕರಣ್ ಶರ್ಮಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್ ಮತ್ತು ಅವೇಶ್ ಖಾನ್.

    ಇಂಪ್ಯಾಕ್ಟ್ ಪ್ಲೇಯರ್ಸ್: ಆಯುಷ್ ಬಡೋನಿ, ಅಮಿತ್ ಮಿಶ್ರಾ, ಡೇನಿಯಲ್ ಸಾಮ್ಸ್, ಯದ್ವೀರ್ ಸಿಂಗ್ ಮತ್ತು ಪ್ರೇರಕ್ ಮಂಕಡ್.

    ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್ ಮತ್ತು ಮೊಹಮ್ಮದ್ ಶಮಿ.

    ಇಂಪ್ಯಾಕ್ಟ್ ಪ್ಲೇಯರ್ಸ್: ಅಲ್ಜಾರಿ ಜೋಸೆಫ್, ದಸುನ್ ಶನಕ, ಕೆಎಸ್ ಭರತ್, ಶಿವಂ ಮಾವಿ ಮತ್ತು ಜಯಂತ್ ಯಾದವ್. ಇದನ್ನೂ ಓದಿ: RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ 

  • ಶೇಕ್‍ಹ್ಯಾಂಡ್ ವಿವಾದಕ್ಕೆ ತೆರೆ ಎಳೆದ ಕೊಹ್ಲಿ, ಗಂಗೂಲಿ

    ಶೇಕ್‍ಹ್ಯಾಂಡ್ ವಿವಾದಕ್ಕೆ ತೆರೆ ಎಳೆದ ಕೊಹ್ಲಿ, ಗಂಗೂಲಿ

    ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ರಾಯಲ್ ಚಾಲೆಂಜರ್ಸ್ (RCB) ತಂಡಗಳ ನಡುವಿನ ಐಪಿಎಲ್ (IPL) ಪಂದ್ಯದ ನಂತರ ವಿರಾಟ್ ಕೊಹ್ಲಿ (Virat Kohli) ಹಾಗೂ ಸೌರವ್ ಗಂಗೂಲಿ (Sourav Ganguly) ಶೇಕ್ ಹ್ಯಾಂಡ್ ಮಾಡುವ ಮೂಲಕ ತಮ್ಮ ಸುತ್ತಲಿನ ವಿವಾದಕ್ಕೆ ತೆರೆ ಎಳೆದಿದ್ದಾರೆ.

    ಕಳೆದ ಬಾರಿ ಈ ಎರಡು ತಂಡಗಳು ಪರಸ್ಪರ ಮುಖಾಮುಖಿಯಾದಾಗ ಶೇಕ್‍ಹ್ಯಾಂಡ್ ಮಾಡದೇ ಇರುವುದು ವಿವಾದದ ವಿಷಯವಾಗಿತ್ತು. ಅಲ್ಲದೆ ಇದಾದ ನಂತರ ಇಬ್ಬರೂ ಇನ್‍ಸ್ಟಾಗ್ರಾಮ್‍ನಲ್ಲಿ ಪರಸ್ಪರ ಅನ್‍ಫಾಲೋ ಮಾಡಿದ್ದರು ಎಂದು ವರದಿಯಾಗಿತ್ತು. ಈಗ ಶನಿವಾರದ ಪಂದ್ಯದಲ್ಲಿ ಡಿಸಿ ಗೆಲುವು ಸಾಧಿಸಿದ ನಂತರ ಇಬ್ಬರು ಮಾತನಾಡಿದ್ದು ವಿವಾದಕ್ಕೆ ತೆರೆ ಬಿದ್ದಂತಾಗಿದೆ. ಇದನ್ನೂ ಓದಿ: RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ಫಿಲ್ ಸಾಲ್ಟ್ (Phil Salt)  ಸಿಕ್ಸರ್, ಬೌಂಡರಿ ಬ್ಯಾಟಿಂಗ್ ಹಾಗೂ ಯಶಸ್ವಿ ಬೌಲಿಂಗ್ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ (Royal Challengers Bangalore) ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತು.

    ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. 182 ರನ್‍ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 16.4 ಓವರ್‌ಗಳಲ್ಲೇ 187ರನ್ ಸಿಡಿಸಿ ಸುಲಭವಾಗಿ ಜಯ ಗಳಿಸಿತು.

    ಸಾಲ್ಟ್ 45 ಎಸೆತಗಳಲ್ಲಿ 87 ರನ್ ಗಳಿಸುವುದರ ಜೊತೆಗೆ, ಡೇವಿಡ್ ವಾರ್ನರ್ 14 ಎಸೆತಗಳಲ್ಲಿ 22, ಮಿಚೆಲ್ ಮಾರ್ಷ್ 17 ಎಸೆತಗಳಲ್ಲಿ 26 ಮತ್ತು ರಿಲೀ ರೊಸ್ಸೌವ್ 21 ಎಸೆತಗಳಿಗೆ ಔಟಾಗದೆ 29 ರನ್ ಕಲೆ ಹಾಕಿದರು. ಇದು ಡೆಲ್ಲಿಯ ಸತತ ಎರಡನೇ ಗೆಲುವಾಗಿದೆ. ಅಲ್ಲದೆ ಆರ್‌ಸಿಬಿ 10 ಪಂದ್ಯಗಳಲ್ಲಿ ಐದನೇ ಸೋಲು ಇದಾಗಿದೆ. ಇದನ್ನೂ ಓದಿ: IPLನಲ್ಲಿ 7 ಸಾವಿರ ರನ್‌ ಸಿಡಿಸಿ ದಾಖಲೆ ಬರೆದ ರನ್‌ ಮಿಷಿನ್‌ ಕೊಹ್ಲಿ

  • ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ – ಓರ್ವ ಅರೆಸ್ಟ್

    ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ – ಓರ್ವ ಅರೆಸ್ಟ್

    ನವದೆಹಲಿ: ಕೆಕೆಆರ್ (KKR) ತಂಡದ ಕ್ರಿಕೆಟಿಗ ನಿತೀಶ್ ರಾಣಾ (Nitish Rana)ಅವರ ಪತ್ನಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸರು (Delhi Police) ಓರ್ವನನ್ನು ಬಂಧಿಸಿದ್ದಾರೆ.

    KILLING CRIME

    ರಾಣಾ ಅವರ ಪತ್ನಿ ಸಾಚಿ ಮಾರ್ವಾ (Saachi Marwah) ಅವರು ದೆಹಲಿಯ ಕೀರ್ತಿ ನಗರದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯಲು ಪ್ರಾರಂಭಿಸಿದ್ದಾರೆ. ಕೃತ್ಯವನ್ನು ಮುರ್ವಾ ಅವರು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಹಾಡಹಗಲೇ ಗುಂಡೇಟು – ಮಹಾನಗರ ಪಾಲಿಕೆಯ ಸದಸ್ಯೆಯ ಪತಿಯ ಬರ್ಬರ ಹತ್ಯೆ

    ನಾನು ಪೊಲೀಸರಿಗೆ ಫೋನ್‍ನಲ್ಲಿ ಮಾಹಿತಿ ನೀಡಿದಾಗ, ಸುರಕ್ಷಿತವಾಗಿ ಮನೆ ತಲುಪಿದ್ದೀರಾ? ಹೋಗಲಿ ಬಿಡಿ, ಮುಂದಿನ ಬಾರಿ ಇದೇ ರೀತಿ ನಡೆದರೆ ನಂಬರ್ ನೋಟ್ ಮಾಡಿಕೊಳ್ಳುವಂತೆ ಹೇಳಿದರು. ಅದಕ್ಕೆ ಪ್ರತಿಯಾಗಿ ಮಾರ್ವಾ ಅವರು ಮುಂದಿನ ಬಾರಿ ಅವರ ಫೋನ್ ನಂಬರ್‌ಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಆಕ್ರೋಶದಿಂದ ಬರೆದುಕೊಂಡಿದ್ದಾರೆ.

    ಮಾರ್ವಾ ಅವರು ಆರ್ಕಿಟೆಕ್ಚರಲ್ ಡಿಸೈನರ್ ಆಗಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಕ್ರಿಕೆಟಿಗ ನಿತೀಶ್ ರಾಣಾ ಅವರ ಪತ್ನಿಯಾಗಿದ್ದಾರೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ – ಓರ್ವ ಉಗ್ರನ ಹತ್ಯೆ

  • ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

    ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

    ಲಕ್ನೋ: ಸಂಘಟಿತ ಬೌಲಿಂಗ್‌ ದಾಳಿ ಹಾಗೂ ಉತ್ತಮ ಫೀಲ್ಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 18 ರನ್‌ಗಳ ಜಯ ಸಾಧಿಸಿತು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 126 ರನ್‌ ಗಳನ್ನಷ್ಟೇ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ 19.5 ಓವರ್‌ಗಳಲ್ಲಿ 108 ರನ್‌ ಗಳಿಸಿ ಸರ್ವಪತನಕಂಡಿತು. ಈ ಮೂಲಕ ತವರಿನಲ್ಲೇ ಸೋತು ಮುಖಭಂಗ ಅನುಭವಿಸಿತು. ಇದನ್ನೂ ಓದಿ: ಆರಂಭದಲ್ಲೇ ಗಾಯಕ್ಕೆ ತುತ್ತಾದ ಕೆ.ಎಲ್‌ ರಾಹುಲ್‌ – ಅತಿಯಾಗೆ ಭಾರೀ ನಿರಾಸೆ

    ಬೌಲಿಂಗ್‌ ಪಿಚ್‌ ಎನಿಸಿಕೊಂಡಿರುವ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಆರ್‌ಸಿಬಿ ರನ್‌ ಕದಿಯಲು ತಿಣುಕಾಡಿತ್ತು. ಕಳಪೆ ಬ್ಯಾಟಿಂಗ್‌ ಫಾರ್ಮ್‌ನಿಂದಾಗಿ ಈ ಆವೃತ್ತಿಯಲ್ಲಿ ಅತ್ಯಂತ ಕಡಿಮೆ ರನ್‌ ದಾಖಲಿಸಿತ್ತು. ಮೊದಲ ವಿಕೆಟ್‌ ಪತನಕ್ಕೆ 9 ಓವರ್‌ಗಳಲ್ಲಿ ಕೇವಲ 62 ರನ್‌ ಗಳನ್ನಷ್ಟೇ ದಾಖಲಿಸಿತ್ತು. ಮೊದಲ 10 ಓವರ್‌ಗಳಲ್ಲಿ 65 ರನ್‌ ಗಳಿಸಿದ್ದ ಆರ್‌ಸಿಬಿ, ಮುಂದಿನ 10 ಓವರ್‌ಗಳಲ್ಲಿ ಕೇವಲ 61 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

    ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದವರಲ್ಲಿ ವಿರಾಟ್‌ ಕೊಹ್ಲಿ ಹಾಗೂ ಡುಪ್ಲೆಸಿಸ್‌ ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಕೈಚೆಲ್ಲಿದರು. ಇದನ್ನೂ ಓದಿ:  ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

    ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ 31 ರನ್‌, ಫಾಫ್‌ ಡು ಪ್ಲೆಸಿಸ್‌ 44 ರನ್‌ ಹಾಗೂ ದಿನೇಶ್‌ ಕಾರ್ತಿಕ್‌ 16 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ 10 ರನ್‌ ಸಹ ಗಳಿಸಲಿಲ್ಲ.

    ಇತ್ತ ಚೇಸಿಂಗ್‌ ಆರಂಭಿಸಿದ ಲಕ್ನೋ ಸಹ ರನ್‌ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿತು. ಪವರ್‌ ಪ್ಲೇನಲ್ಲೇ 34 ರನ್‌ ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿತ್ತು. 10ನೇ ಓವರ್‌ಗೆ 63 ರನ್‌ ಗಳಿಸಿತ್ತು. ಇನ್ನೂ 60 ಎಸೆತಗಳಲ್ಲಿ 64 ರನ್‌ಗಳ ಅಗತ್ಯವಿತ್ತು. 11ನೇ ಓವರ್‌ನಿಂದ 19ನೇ ಓವರ್‌ವರೆಗೆ ಕ್ರಮವಾಗಿ 2, 4, 1, 4, 4, 1, 8, 9, 8 ರನ್‌ ಸೇರ್ಪಡೆಯಾಯಿತು. ಗಾಯಕ್ಕೆ ತುತ್ತಾಗಿದ್ದರೂ ಕೊನೆಯಲ್ಲಿ ಕಣಕ್ಕಿಳಿದ ರಾಹುಲ್‌ ರನ್‌ ಗಳಿಸುವಲ್ಲಿ ವಿಫಲರಾದರು. ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್‌ ಅವಕಾಶ ಸಿಕ್ಕರೂ ಕಾಲಿಗೆ ನೋವಾಗಿದ್ದರಿಂದ ರನ್‌ ಓಡಲು ಆಗದೇ ತಂಡವನ್ನು ಸೋಲಿ ಸುಳಿಗೆ ತಳ್ಳಿದರು. ಕೊನೆಯ ಓವರ್‌ನಲ್ಲಿ ಕೇವಲ 4 ರನ್‌ಗಳಷ್ಟೇ ಸೇರ್ಪಡೆಯಾಯಿತು.

    ಲಕ್ನೋ ಸೂಪರ್‌ ಜೈಂಟ್ಸ್‌ ಪರ ಕೃಷ್ಣಪ್ಪ ಗೌತಮ್‌ 23 ರನ್‌, ಕೃನಾಲ್‌ ಪಾಂಡ್ಯ 14 ರನ್‌ ಮಾರ್ಕಸ್‌ ಸ್ಟೋಯ್ನಿಸ್‌ 13 ರನ್‌, ನವೀನ್-ಉಲ್-ಹಕ್ 13 ರನ್‌ ಗಳಿಸಿದರು.

    ಲಕ್ನೋ ಸೂಪರ್‌ ಜೈಂಟ್ಸ್‌ ಪರ ನವೀನ್-ಉಲ್-ಹಕ್ 3 ವಿಕೆಟ್‌ ಪಡೆದರೆ, ರವಿ ಬಿಷ್ಣೋಯಿ, ಅಮಿತ್‌ ಮಿಶ್ರಾ ತಲಾ 2 ವಿಕೆಟ್‌ ಕಿತ್ತರು. ಕೃಷ್ಣಪ್ಪ ಗೌತಮ್‌ 1 ವಿಕೆಟ್‌ ಪಡೆದರು. ಇನ್ನೂ ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್‌, ಕರ್ಣ್ ಶರ್ಮಾ ತಲಾ ಎರಡು ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ವಾನಿಂದು ಹಸರಂಗ, ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ಕ್ರಿಕೆಟ್ ಕನಸಿಗಾಗಿ ಪಾನಿ ಪುರಿ ಮಾರಾಟ ಮಾಡಿದ್ದೆ – ಜೈಸ್ವಾಲ್

    ಕ್ರಿಕೆಟ್ ಕನಸಿಗಾಗಿ ಪಾನಿ ಪುರಿ ಮಾರಾಟ ಮಾಡಿದ್ದೆ – ಜೈಸ್ವಾಲ್

    ಮುಂಬೈ: ಕ್ರಿಕೆಟ್ ಕನಸನ್ನು ನನಸಾಗಿಸಲು ರಸ್ತೆ ಬದಿಯಲ್ಲಿ ಪಾನಿ ಪುರಿ ಮಾರುತ್ತಿದ್ದೆ ಎಂದು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಹೇಳಿಕೊಂಡಿರುವ ಹಳೇಯ ಸುದ್ದಿ ಈಗ ವೈರಲ್ ಆಗಿದೆ.

    ಭಾನುವಾರದ ಮುಂಬೈ ವಿರುದ್ಧದ ಐಪಿಎಲ್ (IPL) ಪಂದ್ಯದಲ್ಲಿ ಜೈಸ್ವಾಲ್ 62 ಎಸೆತಗಳಿಗೆ 124 ರನ್ ಗಳಿಸಿದರು. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‍ಮನ್ ಮತ್ತು ಮಾಜಿ ಹೈದರಾಬಾದ್ (Sunrisers Hyderabad) ತಂಡದ ಮಾಜಿ ಕೋಚ್ ಟಾಮ್ (Tom Moody) ವಿಶೇಷ ಪ್ರತಿಭೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸ್‌ – ಮುಂಬೈಗೆ 6 ವಿಕೆಟ್‌ಗಳ ರೋಚಕ ಜಯ

    ಜೈಸ್ವಾಲ್ ಐಪಿಎಲ್‍ನಲ್ಲಿ ಗಳಿಸಿದ ಚೊಚ್ಚಲ ಶತಕವು ಪ್ರಸಕ್ತ ಋತುವಿನ ಅತ್ಯಧಿಕ ಸ್ಕೋರ್ ಮಾತ್ರವಲ್ಲದೆ ಒಟ್ಟು 9 ಪಂದ್ಯಗಳಿಂದ 428 ರನ್ ಹೊಡೆಯುವ ಮೂಲಕ ಆರೆಂಜ್ ಕ್ಯಾಪ್ ಸಿಕ್ಕಿದೆ.

    ಜೈಸ್ವಾಲ್ ಉತ್ತಮ ಪ್ರತಿಭೆಯನ್ನು ಹೊಂದಿದ್ದಾರೆ. ಟೀಂ ಇಂಡಿಯಾ ಹಾಗೂ ರಾಜಸ್ಥಾನ ತಂಡಕ್ಕೆ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. 213 ರನ್‍ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಹೊಡೆದು 6 ವಿಕೆಟ್‍ಗಳ ಜಯವನ್ನು ಸಾಧಿಸಿತು.

    ಪಾನಿ ಪುರಿ ಕತೆ:
    11 ವರ್ಷದವರಾಗಿದ್ದಾಗ ನಾನು ಹೆತ್ತವರಿಲ್ಲದೆ ಮುಂಬೈಗೆ (Mumbai) ತೆರಳಿದ್ದೆ. ಅಲ್ಲಿ ಚಿಕ್ಕಪ್ಪನ ಜೊತೆ ಗುಡಿಸಿಲಿನಲ್ಲಿ ವಾಸವಾಗಿದ್ದೆ. ನಂತರ ಬೇರೆ ಕಡೆ ತೆರಳಲು ಹೇಳಿದರು. ನಂತರ ಆಜಾದ್ ಮೈದಾನ (ಮುಂಬೈ ಕ್ರೀಡಾ ಮೈದಾನ) ಬಳಿಯ ಟೆಂಟ್‍ನಲ್ಲಿ ಉಳಿಯಲು ಪ್ರಾರಂಭಿಸಿದೆ. ಹಗಲಿನಲ್ಲಿ ಅಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಆಹಾರದ ಖರ್ಚಿಗಾಗಿ ರಾತ್ರಿ ವೇಳೆ ಪಾನಿ ಪುರಿ ಮಾರಾಟ ಮಾಡುತ್ತಿದ್ದೆ ಎಂದು ಜೈಸ್ವಾಲ್ 2020ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಇದನ್ನೂ ಓದಿ: ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ

  • ಕೊನೆಯ ಓವರ್‌ನಲ್ಲಿ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸ್‌ – ಮುಂಬೈಗೆ 6 ವಿಕೆಟ್‌ಗಳ ರೋಚಕ ಜಯ

    ಕೊನೆಯ ಓವರ್‌ನಲ್ಲಿ ಡೇವಿಡ್‌ ಹ್ಯಾಟ್ರಿಕ್‌ ಸಿಕ್ಸ್‌ – ಮುಂಬೈಗೆ 6 ವಿಕೆಟ್‌ಗಳ ರೋಚಕ ಜಯ

    ಮುಂಬೈ: ಟಿಮ್‌ ಡೇವಿಡ್‌ (Tim David ) ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸ್‌ ಸಿಡಿಸಿದ ಪರಿಣಾಮ ರಾಜಸ್ಥಾನ ರಾಯಲ್ಸ್‌ (Rajasthan Royals ) ವಿರುದ್ಧ ಮುಂಬೈ ಇಂಡಿಯನ್ಸ್‌ (Mumbai Indians) 6 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 213 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 19.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 214 ರನ್‌ ಹೊಡೆದು ಪಂದ್ಯವನ್ನು ಗೆದ್ದುಕೊಂಡಿತು.

    ಕೊನೆಯ 24 ಎಸೆತಗಳಲ್ಲಿ ಮುಂಬೈ ಗೆಲ್ಲಲು 57 ರನ್‌ಗಳ ಅಗತ್ಯವಿತ್ತು. 17 ನೇ ಓವರ್‌ನಲ್ಲಿ 14 ರನ್‌, 18ನೇ ಓವರ್‌ನಲ್ಲಿ 11 ರನ್‌, 19ನೇ ಓವರ್‌ನಲ್ಲಿ 15 ರನ್‌ ಬಂದಿತ್ತು. ಕೊನೆ 6 ಎಸೆತಗಳಲ್ಲಿ 17 ರನ್‌ ಬೇಕಿತ್ತು. ಜೇಸನ್‌ ಹೋಲ್ಡರ್‌ ಎಸೆತ ಪ್ರಥಮ ಮೂರು ಎಸೆತವನ್ನು ಟಿಮ್‌ ಡೇವಿಡ್‌ ಸಿಕ್ಸರ್‌ಗೆ ಅಟ್ಟಿ ಜಯವನ್ನು ತಂದುಕೊಟ್ಟರು. ಟಿಮ್‌ ಡೇವಿಡ್‌ ಮತ್ತು ತಿಲಕ್‌ ವರ್ಮಾ ಮುರಿಯದ 5ನೇ ವಿಕೆಟಿಗೆ 23 ಎಸೆತಗಳಲ್ಲಿ 62 ರನ್‌ ಜೊತೆಯಾಟವಾಡಿದ ಪರಿಣಾಮ ಮುಂಬೈ ಜಯದ ನಗೆ ಬೀರಿದೆ.

    ಟಿಮ್‌ ಡೇವಿಡ್‌ ಔಟಾಗದೇ 45 ರನ್‌(14 ಎಸೆತ, 2 ಬೌಂಡರಿ, 5 ಸಿಕ್ಸ್‌), ತಿಲಕ್‌ ವರ್ಮಾ ಔಟಾಗದೇ 29 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದರು.

    ರೋಹಿತ್‌ ಶರ್ಮಾ ಕೇವಲ 3 ರನ್‌ಗಳಿಸಿ ಔಟಾದರೂ ಮಧ್ಯಮ ಇಶನ್‌ ಕಿಶನ್‌ ಮತ್ತು ಕ್ಯಾಮರೂನ್‌ ಗ್ರೀನ್‌ ಎರಡನೇ ವಿಕೆಟಿಗೆ 38 ಎಸೆತಗಳಲ್ಲಿ 62 ರನ್‌ ಬಾರಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಾಲ್ಕನೇಯ ವಿಕೆಟಿಗೆ ಸೂರ್ಯಕುಮಾರ್‌ ಯಾದವ್‌ ಮತ್ತು ತಿಲಕ್‌ ವರ್ಮಾ 31 ಎಸೆತಗಳಲ್ಲಿ 51 ರನ್‌ ಜೊತೆಯಾಟವಾಡಿದರು.

    ಇಶನ್‌ ಕಿಶನ್‌ 28 ರನ್‌(23 ಎಸೆತ, 4 ಬೌಂಡರಿ), ಕ್ಯಾಮರೂನ್‌ ಗ್ರೀನ್‌ 44 ರನ್‌(26 ಎಸೆತ, 4 ಬೌಂಡರಿ, 2 ಸಿಕ್ಸರ್)‌, ಸೂರ್ಯಕುಮಾರ್‌ ಯಾದವ್‌ 55 ರನ್‌( 29 ಎಸೆತ, 8 ಬೌಂಡರಿ, 2 ಸಿಕ್ಸರ್)‌ ಹೊಡೆದು ಔಟಾದರು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ ಉತ್ತಮ ಆರಂಭ ಪಡೆದು ಮೊದಲ ವಿಕೆಟಿಗೆ 72 ರನ್‌ ಗಳಿಸಿತು. ಜೋಸ್‌ ಬಟ್ಲರ್‌ 18 ರನ್‌ ಗಳಿಸಿ ಔಟಾದರು. ಒಂದು ಕಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ಯಶಸ್ವಿ ಜೈಸ್ವಾಲ್ ಮುಂಬೈ ಬೌಲರ್‌ಗಳನ್ನು ಬೆಂಡೆತ್ತಿ ಶತಕ ಹೊಡೆದರು.

    ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಜೈಸ್ವಾಲ್‌ 32 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 53 ಎಸೆತಗಳಲ್ಲಿ ಶತಕ ಬಾರಿಸಿದರು. ಅಂತಿಮವಾಗಿ 62 ಎಸೆತಗಳಲ್ಲಿ 124 ರನ್‌ (16 ಬೌಂಡರಿ, 8 ಸಿಕ್ಸರ್‌) ಹೊಡೆದು 19.4 ಓವರ್‌ನಲ್ಲಿ ಔಟಾದರು. 124 ರನ್‌ ಹೊಡೆಯುವ ಮೂಲಕ ಈ ಐಪಿಎಲ್‌ನ ಗರಿಷ್ಠ ವೈಯಕ್ತಿಕ ಸ್ಕೋರ್‌ ಜೊತೆಗೆ ಒಟ್ಟು 428 ರನ್‌ ಹೊಡೆಯುವ ಮೂಲಕ ಆರೇಂಜ್‌ ಕ್ಯಾಪ್‌ ಧರಿಸಿದರು.

    ಸಂಜು ಸ್ಯಾಮ್ಸನ್‌ 14 ರನ್‌, ಜೇಸನ್‌ ಹೋಲ್ಡರ್‌ 11 ರನ್‌ ಗಳಿಸಿ ಔಟಾದರು. ಇತರ ರೂಪದಲ್ಲೇ 25 ರನ್( ಬೈ1, ಲೆಗ್‌ಬೈ 7, ನೋಬಾಲ್‌ 1, ವೈಡ್‌ 16) ಬಂದಿದ್ದರಿಂದ ರಾಜಸ್ಥಾನ 7 ವಿಕೆಟ್‌ ನಷ್ಟಕ್ಕೆ 212 ರನ್‌ ಹೊಡೆಯಿತು.

  • ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ

    ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ

    ನವದೆಹಲಿ: ವಾರ್ನರ್ 50 ಎಸೆತಗಳನ್ನು ಆಡಿದ್ದರೆ 50 ರನ್‍ಗಳಿಂದ ಡೆಲ್ಲಿ  (Delhi Capitals) ಸೋಲುತ್ತಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಗುಡುಗಿದ್ದಾರೆ.

    16ನೇ ಆವೃತ್ತಿಯ 8 ಐಪಿಎಲ್ (IPL) ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳೊಂದಿಗೆ ಡೇವಿಡ್ ವಾರ್ನರ್ (David Warner)ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ಹೋಗುವ ಸಾಧ್ಯತೆ ಕ್ಷೀಣಿಸಿದೆ. ತಂಡದ ಕಳಪೆ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ ಹರ್ಭಜನ್ ಇದರ ಸಂಪೂರ್ಣ ಹೊಣೆಯನ್ನು ವಾರ್ನರ್ ಮೇಲೆ ಹಾಕಿದ್ದಾರೆ. ಇದನ್ನೂ ಓದಿ: ಅಭಿಷೇಕ್‌ ಶರ್ಮಾ, ಕ್ಲಾಸೆನ್‌ ಕ್ಲಾಸಿಕ್‌ ಆಟ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 9 ರನ್‌ ಜಯ

    ವಾರ್ನರ್ ತಂಡವನ್ನು ಮುನ್ನೆಡೆಸಲು ವಿಫಲರಾಗಿದ್ದಾರೆ. ಇದು ತುಂಬಾ ನಿರಾಶಾದಾಯಕವಾಗಿದೆ. ಈಗಲೂ ವಾರ್ನರ್, ಇತರ ಆಟಗಾರರ ತಪ್ಪುಗಳ ಬಗ್ಗೆ ಹೇಳುತ್ತಾರೆ. ಆದರೆ ನೀವು ಏನು ಮಾಡಿದ್ದೀರಿ? ನೀವು ಯಾವುದೇ ಉತ್ತಮ ಪ್ರದರ್ಶನ ತೋರಿಸಲಿಲ್ಲ. ದೆಹಲಿ ಕುಸಿಯಲು ಕಾರಣವನ್ನು ಹುಡುಕಲು ವಾರ್ನರ್ ಕನ್ನಡಿಯಲ್ಲಿ ನೋಡಬೇಕು ಎಂದು ಹರ್ಭಜನ್ ಗರಂ ಆಗಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರ್ ಪಟೇಲ್‍ಗೆ (Axar Patel) ತಂಡದ ನಾಯಕತ್ವವನ್ನು ನೀಡಬೇಕೆಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್‍ನ ಉಳಿದ ಲೀಗ್ ಹಂತದಲ್ಲಿ ಕೇವಲ 6 ಪಂದ್ಯಗಳು ಬಾಕಿಯಿದ್ದು, ಪ್ಲೇಆಫ್‍ಗಳ ಬೇಟೆಯಲ್ಲಿ ಉಳಿಯಬೇಕಾದರೆ ಡೆಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ.

    ಈ ಋತುವಿನಲ್ಲಿ ವಾರ್ನರ್ 8 ಪಂದ್ಯಗಳಲ್ಲಿ 38.5 ರ ಸರಾಸರಿಯಲ್ಲಿ 306 ರನ್ ಗಳಿಸಿದ್ದಾರೆ. ಶನಿವಾರದ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ರನ್‍ಗಳಿಂದ ಗೆದ್ದುಕೊಂಡಿದೆ. ಇದನ್ನೂ ಓದಿ: IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB