Tag: IPL

  • RCB ಕೈಬಿಡುವಾಗ ಒಂದೂ ಮಾತು ಕೂಡ ಹೇಳಲಿಲ್ಲ – ಬೇಸರ ಹಂಚಿಕೊಂಡ ಚಾಹಲ್

    RCB ಕೈಬಿಡುವಾಗ ಒಂದೂ ಮಾತು ಕೂಡ ಹೇಳಲಿಲ್ಲ – ಬೇಸರ ಹಂಚಿಕೊಂಡ ಚಾಹಲ್

    ನವದೆಹಲಿ: ಆರ್‌ಸಿಬಿ (RCB) ತಂಡದಿಂದ ನನ್ನನ್ನು ಕೈ ಬಿಡುವಾಗ ಒಂದು ಫೋನ್ ಕರೆ ಕೂಡ ಮಾಡಿ ಮಾಹಿತಿ ನೀಡಿರಲಿಲ್ಲ. ತಂಡಕ್ಕಾಗಿ ನಾನು 8 ವರ್ಷಗಳ ಕಾಲ ಪಂದ್ಯಗಳನ್ನು ಆಡಿದ್ದೆ ಎಂದು ಯಜುವೇಂದ್ರ ಚಾಹಲ್ (Yuzvendra Chahal) ಬೇಸರದ ಸಂಗತಿಯನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

    ಐಪಿಎಲ್ (IPL) 2023ರ ಹರಾಜಿಗೂ ಮುನ್ನ ಪ್ರಕಟಿಸಿದ ಆಟಗಾರರ ಪಟ್ಟಿಯಲ್ಲಿ ಸ್ಪಿನ್ನರ್ ಯಜುವೇಂದ್ರ ಚಾಹಲ್‍ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿತ್ತು. ಈ ಬಗ್ಗೆ ಯಾವುದೇ ಮಾತುಕತೆ ನಡೆಸಲಿಲ್ಲ. ನಾನು ಆರ್‌ಸಿಬಿಗಾಗಿ 114 ಪಂದ್ಯಗಳನ್ನು ಆಡಿದ್ದೆ ಎಂದು ಚಾಹಲ್ ಹೇಳಿದ್ದಾರೆ. ಇದನ್ನೂ ಓದಿ: ತೂಕದಿಂದಲೇ ಗಮನ ಸೆಳೆದ ಕಾರ್ನ್‍ವಾಲ್ ವಿಂಡೀಸ್‌ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?

    2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಾಹಲ್ ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿದ್ದರು. ನಂತರ ಆರ್‌ಸಿಬಿ ಕೈಬಿಟ್ಟ ವಿಚಾರದ ಬಗ್ಗೆ ಚಾಹಲ್ ಮಾತನಾಡಿ ಬೇಸರವನ್ನು ಹೊರಹಾಕಿದ್ದಾರೆ.

    ಬೆಂಗಳೂರು ತಂಡ ನನ್ನ ಸಾಮರ್ಥ್ಯದ ಪ್ರದರ್ಶನಕ್ಕೆ ಅವಕಾಶ ನೀಡಿತು. ವಿರಾಟ್ ನನ್ನ ಮೇಲೆ ಬಹಳ ನಂಬಿಕೆ ಇಟ್ಟಿದ್ದರು. ನಮ್ಮ ತಂಡ ಕುಟುಂಬದಂತೆ ಇತ್ತು. ಅದರಿಂದ ಹೊರ ಹಾಕಿರುವುದು ಒಂದು ಕೆಟ್ಟ ಅನುಭವವಾಗಿದೆ. ಹರಾಜಿನಲ್ಲಿ ಹೇಗಾದರೂ ಮಾಡಿ ಖರೀದಿ ಮಾಡುತ್ತೇವೆ ಎಂದಿದ್ದರು. ಆದರೆ ಕೈ ಬಿಟ್ಟಾಗ ಬಹಳ ನೋವಾಯಿತು. ಸಿಟ್ಟಿಗೆ ಸಹ ಕಾರಣವಾಯಿತು ಎಂದು ಚಾಹಲ್ ಹೇಳಿಕೊಂಡಿದ್ದಾರೆ.

    ಐಪಿಎಲ್ 2023 ರಲ್ಲಿ ಆರ್‌ಸಿಬಿ ವಿರುದ್ಧ ನಾನು ಮೊದಲ ಪಂದ್ಯ ಆಡಿದಾಗ ಆರ್‌ಸಿಬಿ ಕೋಚ್‍ಗಳು ಸೇರಿದಂತೆ ಯಾರೊಂದಿಗೂ ಮಾತನಾಡಲಿಲ್ಲ. ನಿರಂತರವಾಗಿ ಸೋತರೂ ಆರ್‌ಸಿಬಿಯನ್ನು ಕೈಬಿಡದ ಅಭಿಮಾನಿಗಳಿಗಾಗಿ ನಾನು ಸೋತಿದ್ದೇನೆ. ಆರ್‌ಸಿಬಿ ಹಾಗೂ ನನಗೆ ವಿಶೇಷವಾದ ನಂಟಿದೆ. ಅದನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಚಾಹಲ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿಗೆ ಯುವ ಆಟಗಾರರನ್ನು ಬೆಳೆಸುವ ಕಲೆ ಚೆನ್ನಾಗಿ ಗೊತ್ತಿದೆ – ಇಶಾಂತ್ ಶರ್ಮಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಹಾಯಕ ಕೋಚ್‍ಗಳಿಗೆ ಗೇಟ್‍ಪಾಸ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

    ಸಹಾಯಕ ಕೋಚ್‍ಗಳಿಗೆ ಗೇಟ್‍ಪಾಸ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ (IPL) 2022 ಮತ್ತು 2023ರ ಋತುಗಳಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಸಹಾಯಕ ಕೋಚ್‍ಗಳಾದ ಅಜಿತ್ ಅಗರ್ಕರ್ ಮತ್ತು ಶೇನ್ ವ್ಯಾಟ್ಸನ್ ಅವರನ್ನು ಕೈ ಬಿಡಲಾಗಿದೆ.

    2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನದಲ್ಲಿದ್ದರೆ, 2023 ರಲ್ಲಿ 9 ಸ್ಥಾನಕ್ಕೆ ಕುಸಿತ ಕಂಡಿತ್ತು. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 5 ಗೆಲುವುಗಳನ್ನು ದಾಖಲಿಸಿತು. ರಿಷಭ್ ಪಂತ್ ಹೊರಗುಳಿದಿದ್ದರಿಂದ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ತಂಡ ಗೆಲುವಿಗಾಗಿ ಹೋರಾಟ ನಡೆಸಿತ್ತು. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್‌ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್‌ ಪ್ಲ್ಯಾನ್‌ – ಇದರಿಂದ ಯಾರಿಗೆ ನಷ್ಟ?

    2022ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ 14 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆದ್ದಿದೆ. ಆದರೆ ಲೀಗ್‍ನಲ್ಲಿ 8 ಪಂದ್ಯಗಳನ್ನು ಗೆದ್ದು ನಾಲ್ಕನೇ ಸ್ಥಾನದಲ್ಲಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್‍ಗಿಂತ (RCB) ಉತ್ತಮ ರನ್ ರೇಟ್ ಹೊಂದಿದ್ದರೂ ಸಹ ಪ್ಲೇಆಫ್‍ನಲ್ಲಿ ಸ್ಥಾನ ಪಡೆಯಲು ಡೆಲ್ಲಿ ವಿಫಲವಾಗಿತ್ತು.

    ಡೆಲ್ಲಿ ಕ್ಯಾಪಿಟಲ್ಸ್‌ನ ಇತ್ತೀಚಿನ ಪ್ರಕಟಣೆಯಲ್ಲಿ ರಿಕಿ ಪಾಂಟಿಂಗ್ ಅವರು ಮುಖ್ಯ ಕೋಚ್ ಆಗಿ ತಮ್ಮ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ. ಸೌರವ್ ಗಂಗೂಲಿ ಮಾರ್ಗದರ್ಶಕರಾಗಿ ಮುಂದುವರಿಯಲಿದ್ದಾರೆ. ಪಾಂಟಿಂಗ್ ಅವರು ಐಪಿಎಲ್ 2018ರ ಮೊದಲು ಮುಖ್ಯ ತರಬೇತುದಾರರಾಗಿದ್ದಾರೆ. ಐಪಿಎಲ್ 2024ಕ್ಕೆ ಎದುರು ನೋಡುತ್ತಿರುವ ತಂಡ, ರಿಷಬ್ ಪಂತ್ ನಾಯಕತ್ವದ ನಿರೀಕ್ಷೆಯಲ್ಲಿದೆ. ಈ ನಡುವೆ ಅಜಿತ್ ಅಗರ್ಕರ್ ಟೀಮ್ ಇಂಡಿಯಾದ ಮುಂದಿನ ಮುಖ್ಯ ಆಯ್ಕೆದಾರರಾಗಬಹುದು ಎಂಬ ವರದಿ ಪ್ರಕಟವಾಗಿದೆ. ಇದನ್ನೂ ಓದಿ: Asian Games 2023 – ಶಿಖರ್‌ ಧವನ್‌ಗೆ ಟೀಂ ಇಂಡಿಯಾ ನಾಯಕತ್ವ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾತ್ರಿ ಇಡೀ ಪಾರ್ಟಿ ಮಾಡಿ ಬೆಳಗ್ಗೆ 250 ರನ್ ಹೊಡೆದ ವಿರಾಟ್ ಕೊಹ್ಲಿ

    ರಾತ್ರಿ ಇಡೀ ಪಾರ್ಟಿ ಮಾಡಿ ಬೆಳಗ್ಗೆ 250 ರನ್ ಹೊಡೆದ ವಿರಾಟ್ ಕೊಹ್ಲಿ

    ನವದೆಹಲಿ: ವಿರಾಟ್ ಕೊಹ್ಲಿ (Virat Kohli) ತಮ್ಮ ಬಾಲ್ಯದ ದಿನಗಳಲ್ಲಿ ಹೇಗಿದ್ದರು? ಈಗ ವಯಸ್ಸಿಗೆ ತಕ್ಕಂತೆ ಹೇಗೆ ಬದಲಾಗಿದ್ದಾರೆ ಎಂಬ ವಿಚಾರವೊಂದು ಈಗ ಚರ್ಚೆಗೆ ಬಂದಿದೆ.

    ಹಿರಿಯ ವೇಗಿ ಇಶಾಂತ್ ಈ ಬಗ್ಗೆ ಯೂಟ್ಯೂಬ್ ಚಾನೆಲ್‍ನಲ್ಲಿ ರಣವೀರ್ ಅಲ್ಲಾಬಾಡಿಯಾ ಅವರೊಂದಿಗೆ ಮಾತನಾಡಿದ್ದಾರೆ. ನಾವು ಕೋಲ್ಕತ್ತಾದಲ್ಲಿ ಪಂದ್ಯವನ್ನು ಆಡುವಾಗ ಕೊಹ್ಲಿ ಇಡೀ ರಾತ್ರಿ ಪಾರ್ಟಿ ಮಾಡಿದ್ದರು. ಮರುದಿನ ಬೆಳಗ್ಗೆಯ ಮ್ಯಾಚ್‍ನಲ್ಲಿ ಅವರು 250 ರನ್ ಹೊಡೆದಿದ್ದರು ಎಂದರು. ಇದನ್ನೂ ಓದಿ: ವಿಂಡೀಸ್‌ ವಿರುದ್ಧ T20 ಸರಣಿ – ಟೀಂ ಇಂಡಿಯಾಕ್ಕೆ ರಿಂಕು ಸಿಂಗ್‌ ಆಯ್ಕೆ?

    2012 ರಲ್ಲಿ ವಿಶ್ವಕಪ್ (World Cup) ನಂತರ ಕೊಹ್ಲಿ ತಮ್ಮ ದೈಹಿಕ ಅಂಶಗಳನ್ನು ಬದಲಾಯಿಸಿರುವುದು ಉತ್ತಮ ವಿಷಯವಾಗಿದೆ. ಅವರ ಆಹಾರಕ್ರಮ ಹಾಗೂ ಅವರ ಇಚ್ಛಾ ಶಕ್ತಿಯಿಂದ ಕ್ರಿಕೆಟ್‍ನಲ್ಲಿ ಉನ್ನತ ಮಟ್ಟಕ್ಕೆ ಬೆಳೆದರು. ಅವರ ದೈಹಿಕ ಕಸರತ್ತು ಹಾಗೂ ಮಾನಸಿಕ ಸ್ಥೈರ್ಯದಿಂದ ಅವರಿಗೆ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಇಶಾಂತ್ ಉಲ್ಲೇಖಿಸಿದ್ದಾರೆ.

    2023ರ ಐಪಿಎಲ್‍ನಲ್ಲಿ (IPL) ಡೆಲ್ಲಿ ಕ್ಯಾಪಿಟಲ್ಸ್‍ಗಾಗಿ ಇಶಾಂತ್ ಆಡಿದ್ದರು. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದ ಬ್ಯಾಟಿಂಗ್ ಜವಾಬ್ದಾರಿಯನ್ನು ಕೊಹ್ಲಿ ಮುನ್ನಡೆಸಲಿದ್ದಾರೆ. ಕೊಹ್ಲಿ ಭಾರತದ ಪರ 109 ಟೆಸ್ಟ್ ಪಂದ್ಯಗಳಲ್ಲಿ 8479 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಕಣಕ್ಕಿಳಿಯುತ್ತಾ ಪಾಕ್‌ ತಂಡ – ಭದ್ರತೆ ಕಾರಣ ನೀಡಿದ್ರೆ ಸ್ಥಳ ಬದಲಾವಣೆ ಮಾಡಬಹುದು ಎಂದ ಅಶ್ವಿನ್‌

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಚೆಲುವ ಚಾಮರಾಜನಗರದಲ್ಲಿ ಟ್ರ್ಯಾಕ್ಟರ್‌ ಓಡಿಸಿದ BCCI ಅಧ್ಯಕ್ಷ ರೋಜರ್ ಬಿನ್ನಿ

    ಚೆಲುವ ಚಾಮರಾಜನಗರದಲ್ಲಿ ಟ್ರ್ಯಾಕ್ಟರ್‌ ಓಡಿಸಿದ BCCI ಅಧ್ಯಕ್ಷ ರೋಜರ್ ಬಿನ್ನಿ

    – IPL ನಿಂದ ಅಂತರಾಷ್ಟ್ರೀಯ ಟೂರ್ನಿಗಳಿಗೆ ತೊಂದರೆಯಿಲ್ಲ, ಟಿ20, ಐಪಿಎಲ್‌, ಏಕದಿನ ಕ್ರಿಕೆಟ್‌ಗೆ ವ್ಯತ್ಯಾಸವಿದೆ 

    ಚಾಮರಾಜನಗರ: ಬಿಸಿಸಿಐ ಅಧ್ಯಕ್ಷರಾದ ನಂತರ ಇದೇ ಮೊದಲಬಾರಿಗೆ ಚಾಮರಾಜನಗರಕ್ಕೆ (Chamarajanagar) ರೋಜರ್‌ ಬಿನ್ನಿ (Roger Binny) ಶುಕ್ರವಾರ ಭೇಟಿ ನೀಡಿದ್ದರು.

    ಖಾಸಗಿ ಕಾರ್ಯಕ್ರಮದ ಹಿನ್ನೆಲೆ ನಗರಕ್ಕೆ ಭೇಟಿ ನೀಡಿದ್ದ ಅವರು, ಇದೇ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ಓಡಿಸಿ ಖುಷಿಪಟ್ಟರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದನ್ನೂ ಓದಿ: ಒಂದೇ ಎಸೆತದಲ್ಲಿ 18 ರನ್ ಕೊಟ್ಟ ರಣಧೀರ – ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಟಿಎನ್‍ಪಿಎಲ್ ಆಟಗಾರ

    IPL ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಿಗೆ ತೊಂದರೆಯಿಲ್ಲ. T20, ಏಕದಿನ, ಟೆಸ್ಟ್‌ ಹಾಗೂ ಏಕದಿನ ಟೂರ್ನಿಗಳಿಗೆ ವ್ಯತ್ಯಾಸವಿದೆ. ನಾವು ಟೆಸ್ಟ್ ಕ್ರಿಕೆಟ್‌ ಅನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಟೆಸ್ಟ್ ನಲ್ಲಿ ಕ್ರಿಕೆಟ್ ಭವಿಷ್ಯ ಅಡಗಿದೆ. ವೀಕ್ಷಕರ ಮನರಂಜನೆಗಾಗಿ ಐಪಿಎಲ್ ನಡೀತಿದೆ. ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ (WTC) ಫೈನಲ್‌ ಪಂದ್ಯದಲ್ಲಿ ಮೊದಲ ದಿನ ಭಾರತ (Team India), ಆಸ್ಟ್ರೇಲಿಯಾ (Australia) ವಿರುದ್ಧ ಸರಿಯಾಗಿ ಆಡಲಿಲ್ಲ. ಟೀಂ ಆಯ್ಕೆಯ ವೇಳೆಯಲ್ಲೂ ಸಣ್ಣ ತಪ್ಪು ಆಗಿದೆ. ಇಲ್ಲದಿದ್ದರೆ ಆ ಪಂದ್ಯ ಗೆಲ್ಲುತ್ತಿದ್ದೆವು. ಪಂದ್ಯ ಗೆಲ್ಲಬೇಕೆಂದರೆ ಇಡೀ ವರ್ಷ ಅಭ್ಯಾಸ ಮಾಡುವ ಅವಶ್ಯಕತೆಯಿಲ್ಲ. ಬದಲಿಗೆ ಟಿ20, ಏಕದಿನ, ಟೆಸ್ಟ್‌ ಕ್ರಿಕೆಟ್‌ ಯಾವುದೇ ಆಗಲಿ, ಎಲ್ಲದಕ್ಕೂ ಆಟಗಾರರು ಹೊಂದಾಣಿಕೆ ಆಗಬೇಕು. ಆಗ ಅವರು ಉತ್ತಮ ಆಟಗಾರರಾಗಿರುತ್ತಾರೆ ಎಂದು ತಿಳಿಸಿದರು.

  • ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ

    ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ

    ಚೆನ್ನೈ: ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಗೆದ್ದು ಐಪಿಎಲ್‌ ಚಾಂಪಿಯನ್‌ (IPL Champion) ಪಟ್ಟ ಅಲಂಕರಿಸಿದ ಬೆನ್ನಲ್ಲೇ ಈಗ ತಮಿಳುನಾಡು (Tamil Nadu) ರಾಜಕೀಯ ನಾಯಕರು ಇದರಲ್ಲೂ ರಾಜಕೀಯ ಮಾಡಿದ್ದಾರೆ.

    ಸಿಎಸ್‌ಕೆ ಜಯಗಳಿಸಿದ ಬೆನ್ನಲ್ಲೇ ಡಿಎಂಕೆ “ಗುಜರಾತ್ ಮಾದರಿಯ ಮೇಲೆ ದ್ರಾವಿಡ ಮಾದರಿಯ ವಿಜಯ” ಎಂದು ಡಿಎಂಕೆ (DMK) ಸಂದೇಶ ಪ್ರಕಟಿಸಿದೆ. ಇದನ್ನೂ ಓದಿ: IPLನಲ್ಲಿ ದುಡ್ಡೋ ದುಡ್ಡು; ಚಾಂಪಿಯನ್ಸ್‌ ತಂಡಕ್ಕೆ 20 ಕೋಟಿ, ಲಕ್ಷ ಲಕ್ಷ ಬಾಚಿಕೊಂಡ ಗಿಲ್‌ – ಯಾರಿಗೆ ಎಷ್ಟೆಷ್ಟು ಲಕ್ಷ?

    ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (K Annamalai), ಜಡೇಜಾ ಬಿಜೆಪಿ ಕಾರ್ಯಕರ್ತ ಮತ್ತು ಅವರು ಗುಜರಾತ್ ಮೂಲದವರು. ಅವರ ಪತ್ನಿ ಬಿಜೆಪಿ ಶಾಸಕಿ. ತಮಿಳಿಗನಾಗಿ ನನಗೂ ಹೆಮ್ಮೆ ಇದೆ. ಸಿಎಸ್‌ಕೆಗಿಂತ ಜಿಟಿಯಲ್ಲಿ ಹೆಚ್ಚು ತಮಿಳು ಆಟಗಾರರಿದ್ದರು ಎಂದು ಹೇಳಿದ್ದಾರೆ.

    ರವೀಂದ್ರ ಜಡೇಜಾ (Ravindra Jadeja) ಎಲ್ಲಿಯೂ ಬಿಜೆಪಿಗೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿಲ್ಲ. ಆದರೆ ಅವರ ಪತ್ನಿ 2019ರಲ್ಲಿ ಬಿಜೆಪಿ ಸೇರ್ಪಡೆಯಾಗಿ 2022ರ ಚುನಾವಣೆಯಲ್ಲಿ ಜಾಮ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿ 80 ಸಾವಿರ ಮತಗಳಿಂದ ಜಯಗಳಿಸಿದ್ದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಗುಜರಾತ್‌ 4 ವಿಕೆಟ್‌ ನಷ್ಟಕ್ಕೆ 214 ರನ್‌ ಗಳಿಸಿತ್ತು. ಚೆನ್ನೈ ಬ್ಯಾಟಿಂಗ್‌ ವೇಳೆ ಭಾರೀ ಮಳೆ ಸುರಿದ ಪರಿಣಾಮ ಚೆನ್ನೈಗೆ ಗೆಲುವಿಗೆ 15 ಓವರ್‌ಗಳಲ್ಲಿ 171 ರನ್‌ಗಳ ಟಾರ್ಗೆಟ್‌ ನೀಡಲಾಗಿತ್ತು.

    ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 15 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಗುರಿಯನ್ನು ತಲುಪಿತು. ಕೊನೆಯ ಎರಡು ಎಸೆತಗಳಲ್ಲಿ 10 ರನ್‌ ಬೇಕಿತ್ತು. ಮೋಹಿತ್‌ ಶರ್ಮಾ ಎಸೆದ 15ನೇ ಓವರಿನ 5ನೇ ಎಸೆತದಲ್ಲಿ ಜಡೇಜಾ ಸಿಕ್ಸ್‌ ಸಿಡಿಸಿದರೆ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

  • IPL 2023: GT vs MI ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಕಾಟ

    IPL 2023: GT vs MI ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಕಾಟ

    ಅಹಮದಾಬಾದ್‌: ಮುಂಬೈ ಇಂಡಿಯನ್ಸ್‌ (Mumbai Indians) ಹಾಗೂ ಗುಜರಾತ್‌ ಟೈಟಾನ್ಸ್‌ (Gujarat Taitans) ನಡುವಿನ ಹೈವೋಲ್ಟೇಜ್‌ ಕದನಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದು, ಮಳೆ ಅಡ್ಡಿಯಾಗಿದೆ.

    ಅಹಮದಾಬಾದ್‌ನಲ್ಲಿ ಮಳೆ ಜೋರಾಗಿದ್ದು, ಮೈದಾನವನ್ನು ಟಾರ್ಪಲ್‌ಗಳಿಂದ ಮುಚ್ಚಲಾಗಿದೆ. ಸದ್ಯ ಮಳೆಯಿಂದ (Rain) ಪಂದ್ಯ ರದ್ದಾಗುವ ಭೀತಿ ಎದುರಾಗಿದೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    2ನೇ ಆವೃತ್ತಿಯಲ್ಲಿ ಪ್ಲೇ ಆಫ್‌ ಪ್ರವೇಶಿಸಿರುವ ಗುಜರಾತ್‌ ಟೈಟಾನ್ಸ್‌ ಸತತ 2ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದರೆ, 5 ಬಾರಿ ಚಾಂಪಿಯನ್‌ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್‌ 2ನೇ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದು 6ನೇ ಬಾರಿ ಕಪ್‌ ಗೆಲ್ಲುವ ತವಕದಲ್ಲಿದೆ. ಇಂದು ಇತ್ತಂಡಗಳ ನಡುವೆ ಹಣಾಹಣಿ ನಡೆಯಲಿದ್ದು, ಗೆದ್ದ ತಂಡ ಫೈನಲ್‌ನಲ್ಲಿ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ಧೋನಿ ಫ್ಯಾನ್ಸ್‌ ಜೊತೆ ಕಿರಿಕ್‌ ತೆಗೆದ ಜಡೇಜಾ – RCB ತಂಡ ಸೇರಲು ಆಫರ್‌ ಕೊಟ್ರು ಫ್ಯಾನ್ಸ್‌

  • ಮಂಡ್ಯದಲ್ಲಿ ಐಪಿಎಲ್ ಬೆಟ್ಟಿಂಗ್ ಹಣಕ್ಕಾಗಿ ಯುವಕನ ಕೊಲೆ

    ಮಂಡ್ಯದಲ್ಲಿ ಐಪಿಎಲ್ ಬೆಟ್ಟಿಂಗ್ ಹಣಕ್ಕಾಗಿ ಯುವಕನ ಕೊಲೆ

    ಮಂಡ್ಯ: ಐಪಿಎಲ್ (IPL) ಬೆಟ್ಟಿಂಗ್ ಹಣದ ವಿಚಾರಕ್ಕೆ ಯುವಕರ ಗುಂಪಿನಲ್ಲಿ ಜಗಳವಾಗಿ, ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಮದ್ದೂರಿನ (Maddur) ಹುಲಿಗೆರೆಪುರದಲ್ಲಿ ನಡೆದಿದೆ.

    ಚಿಕ್ಕರಸಿನಕೆರೆ ಗ್ರಾಮದ ಪುನೀತ್ (30) ಕೊಲೆಯಾದ ಯುವಕನಾಗಿದ್ದಾನೆ. ಪುನೀತ್ ಸ್ನೇಹಿತರ ಜೊತೆಗೆ ಐಪಿಎಲ್ ಬೆಟ್ಟಿಂಗ್ ಕಟ್ಟಿದ್ದ. ಆತ ಗೆದ್ದ ಹಣವನ್ನು ಕೊಡುವಂತೆ ಕೇಳಿದ್ದಾನೆ. ಆಗ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಮರದ ತುಂಡಿನಿಂದ ಪುನೀತ್ ತಲೆಯ ಮೇಲೆ ಸ್ನೇಹಿತ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ನೈತಿಕ ಪೊಲೀಸ್‍ಗಿರಿ ಪ್ರಕರಣ – ಇಬ್ಬರು ಆರೋಪಿಗಳು ಅರೆಸ್ಟ್

    ಕೂಡಲೆ ಹಲ್ಲೆಗೊಳಗಾದ ಪುನೀತ್‍ನನ್ನು ಕೆ.ಎಂ ದೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ (Mysuru)ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪುನೀತ್ ಸಾವನ್ನಪ್ಪಿದ್ದಾನೆ.

    ಘಟನೆಯ ಸ್ಥಳಕ್ಕೆ ಮಂಡ್ಯ (Mandya) ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

  • ಓದಿದ್ದು ಎಂಜಿನಿಯರಿಂಗ್, 24ನೇ ವಯಸ್ಸಿನಲ್ಲಿ ಲೆದರ್ ಬಾಲ್ ಅಭ್ಯಾಸ – ಈಗ ಸ್ಟಾರ್ ಬೌಲರ್

    ಓದಿದ್ದು ಎಂಜಿನಿಯರಿಂಗ್, 24ನೇ ವಯಸ್ಸಿನಲ್ಲಿ ಲೆದರ್ ಬಾಲ್ ಅಭ್ಯಾಸ – ಈಗ ಸ್ಟಾರ್ ಬೌಲರ್

    – ಲಕ್ನೋ ವಿರುದ್ಧ 5 ವಿಕೆಟ್ ಕಿತ್ತ ಆಕಾಶ್

    ಬೆಂಗಳೂರು: ಬಾಲ್ಯದಲ್ಲೇ ಲೆದರ್ ಬಾಲ್‍ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದ್ದರೆ ಮಾತ್ರ ಆತ ಮುಂದೆ ಸ್ಟಾರ್ ಆಟಗಾರನಾಗುತ್ತಾನೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಈ ನಂಬಿಕೆ ಸುಳ್ಳು, ಮನಸ್ಸಿದ್ದರೆ ಯಾವ ವಯಸ್ಸಿನಲ್ಲೂ ಅಭ್ಯಾಸ ಮಾಡಿದರೆ ಉತ್ತಮ ಆಟಗಾರನಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಆಕಾಶ್.

    ಕೆಲವು ವರ್ಷಗಳ ಹಿಂದೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಉತ್ತರಾಖಂಡ್ ಮೂಲದ ಯುವ ಎಂಜಿನಿಯರ್ ಆಕಾಶ್ ಮಧ್ವಾಲ್ (Akash Madhwal) ಈಗ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    2019ರಲ್ಲಿ ಮೊದಲ ಬಾರಿ ರೆಡ್ ಬಾಲ್ ಕ್ರಿಕೆಟ್ ಟ್ರಯಲ್ಸ್‍ನಲ್ಲಿ ಪಾಲ್ಗೊಂಡಿದ್ದ ಆಕಾಶ್, ಮೊದಲ ಪ್ರಯತ್ನದಲ್ಲೇ ಉತ್ತರಾಖಂಡ್ ತಂಡದ ಅಂದಿನ ಕೋಚ್ ವಸೀಮ್ ಜಾಫರ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. 24ನೇ ವಯಸ್ಸಿನವರೆಗೂ ಲೆದರ್ ಬಾಲ್ ಆಡಿರದ ಆಕಾಶ್, ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಎದುರು 3.3 ಓವರ್‌ಗಳಲ್ಲಿ 5 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ದಾಖಲೆ ಸರಿಗಟ್ಟಿದ್ದರು.

    ಈ ಮೂಲಕ 16ನೇ ಆವೃತ್ತಿಯ ಐಪಿಎಲ್ (IPL) ಟೂರ್ನಿಯ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಅಸಾಧಾರಣ ಬೌಲಿಂಗ್ ಪ್ರದರ್ಶನದ ಬಲದಿಂದ ಮುಂಬೈ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಎಲ್‍ಎಸ್‍ಜಿ ಎದುರು 81 ರನ್‍ಗಳ ಜಯ ದಾಖಲಿಸಿದೆ.

    ಕೋಚ್ ಹೇಳೋದು ಏನು?
    ವಿಶಿಷ್ಟ ಬೌಲಿಂಗ್ ಶೈಲಿಯ ಆಕಾಶ್ ಅವರಲ್ಲಿ ವಿಶೇಷ ಸಾಮಥ್ರ್ಯವಿದೆ. ಹೀಗಾಗಿ 2019ರ ಕರ್ನಾಟಕ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಪಂದ್ಯಕ್ಕೆ ಅವರನ್ನು ಅಂದಿನ ಕೋಚ್ ವಸೀಮ್ ಜಾಫರ್ ನೇರವಾಗಿ ಆಯ್ಕೆ ಮಾಡಿದ್ದರು. ಟೂರ್ನಿಯಲ್ಲಿ ಅವರು ರನ್ ನೀಡಿದರೂ ಬೌಲಿಂಗ್ ಮಾಡಿಸಿದ್ದೆ. ಹೆಚ್ಚು ಪಂದ್ಯಗಳನ್ನು ಆಡಿದಷ್ಟೂ ಅವರ ಬೌಲಿಂಗ್ ಸುಧಾರಣೆಗೊಳ್ಳುತ್ತದೆ ಎಂದಿದ್ದೆ ಎಂದು ಮುಖ್ಯ ಕೋಚ್ ಮನೀಶ್ ಜಾ ಹೇಳಿದ್ದಾರೆ.

    ಆಕಾಶ್ ಟೆನಿಸ್ ಬಾಲ್ ಆಟಗಾರ ಹೀಗಾಗಿ ಅವರ ಬೌಲಿಂಗ್‍ನಲ್ಲಿ ವೇಗವಿತ್ತಾದರೂ ನೇರ ಮತ್ತು ನಿಖರತೆ ಇರಲಿಲ್ಲ. ಈ ನಡುವೆ ತಮ್ಮ ಬೌಲಿಂಗ್‍ನಲ್ಲಿ ಹಲವು ಪ್ರಯೋಗ ಕೂಡ ಮಾಡುತ್ತಿದ್ದರು. ಉತ್ತಮ ಸಾಮಥ್ರ್ಯ ಇರುವಾಗ ಸ್ಲೋ ಬಾಲ್ ಪ್ರಯತ್ನ ಯಾಕೆ ಎಂದಿದ್ದೆ. ಈಗ ಉತ್ತಮ ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.

    ಟೀಮ್ ಇಂಡಿಯಾ ವಿಕೆಟ್‍ಕೀಪರ್ ರಿಷಭ್ ಪಂತ್ (Rishabh Pant) ಅವರ ಉತ್ತರಾಖಂಡ್ ನಿವಾಸದ ಎದುರು ಮನೆಯಲ್ಲೇ ಆಕಾಶ್ ಮಧ್ವಾಲ್ ಕೂಡ ಇದ್ದಾರೆ. ಆಕಾಶ್ ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ, 2013ರಲ್ಲಿ ವೀರ ಮರಣ ಹೊಂದಿದ್ದಾರೆ. ಓದಿನಲ್ಲಿ ಬಹಳ ಚುರುಕಿದ್ದ ಆಕಾಶ್ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಕ್ರಿಕೆಟ್‍ನ್ನು ಕೇವಲ ಹವ್ಯಾಸವನ್ನಾಗಿ ತೆಗೆದುಕೊಂಡಿದ್ದ ಆಕಾಶ್ ಇಂದು ಉತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

  • ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

    ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

    ಬೆಂಗಳೂರು: ಐಪಿಎಲ್ (IPL) ನಿವೃತ್ತಿ ಘೋಷಿಸಿದ್ದ ಕ್ರಿಸ್ ಗೇಲ್ (Chris Gayle) ಮತ್ತೆ ಐಪಿಎಲ್‍ಗೆ ಮರಳುವ ಮಾತಾಡಿದ್ದಾರೆ. ಹೌದು, ವಿರಾಟ್ ಕೊಹ್ಲಿಯ (Virat Kohli) ದಾಖಲೆಯಿಂದ ನಿದ್ರೆ ಕಳೆದುಕೊಂಡಿರುವ ಗೇಲ್ ಮುಂಬರುವ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ನೀಡಿದ್ದಾರೆ.

    16ನೇ ಆವೃತ್ತಿಯ ಐಪಿಎಲ್‍ನಲ್ಲಿ ಎರಡನೇ ಶತಕ ಸಿಡಿಸಿದ ಕೊಹ್ಲಿ ದಾಖಲೆ ಬರೆದಿದ್ದಾರೆ. ಈ ಮೂಲಕ ಕೊಹ್ಲಿ ಶತಕ 7ಕ್ಕೆ ಏರಿದೆ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಎಂಬ ಪಟ್ಟವನ್ನು ವಿರಾಟ್ ಈಗ ಅಲಂಕರಿಸಿದ್ದಾರೆ. ಹೈದರಾಬಾದ್ ವಿರುದ್ಧ ಶತಕ ಬಾರಿಸಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ್ದ ಕ್ರಿಸ್ ಗೇಲ್ ಜೊತೆ ಕೊಹ್ಲಿ ಜಂಟಿ ದಾಖಲೆ ಹೊಂದಿದ್ದರು. ಗೇಲ್ 6 ಶತಕ ಬಾರಿಸಿ ಐಪಿಎಲ್‍ನಲ್ಲಿ ದಾಖಲೆ ಮಾಡಿದ್ದರು. ಇದೀಗ ಕೊಹ್ಲಿ ಗೇಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದನ್ನೂ ಓದಿ: RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

    ಈ ಬಗ್ಗೆ ಕ್ರಿಸ್ ಗೇಲ್, ಕೊಹ್ಲಿ ಕಡೆಯಿಂದ ಅದ್ಭುತ ಆಟಗಾರಿಕೆ ಮೂಡಿಬಂದಿದೆ. ಅವರು ನನ್ನ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನಿವೃತ್ತಿ ಹಿಂಪಡೆದು ಐಪಿಎಲ್‍ಗೆ ಮರಳುತ್ತೇನೆ. ಕೊಹ್ಲಿ ಅತ್ಯುತ್ತಮ ಆಟಗಾರ, ತಂಡವನ್ನು ಗೆಲ್ಲಿಸಲು ಸಾಕಷ್ಟು ಶ್ರಮವಹಿಸುತ್ತಾರೆ. ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಆಟ ಅದ್ಭುತವಾಗಿರುತ್ತದೆ ಎಂದಿದ್ದಾರೆ.

    ಆರ್‌ಸಿಬಿ (RCB) ಪರ ಐಪಿಎಲ್‍ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿಯ ಪಾಲಾಗಿದೆ. ಜೊತೆಗೆ ಟೀಮ್ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರಾಗಿದ್ದಾರೆ. ಐಪಿಎಲ್ 2023 ರಲ್ಲಿ 14 ಪಂದ್ಯಗಳನ್ನು ಆಡಿದ ವಿರಾಟ್ ಕೊಹ್ಲಿ, 639 ರನ್ ಗಳಿಸಿದರು. 53.25 ಸರಾಸರಿ ಜೊತೆಗೆ 139.82 ಸ್ಟ್ರೈಕ್‍ರೇಟ್ ಕಾಪಾಡಿಕೊಂಡಿದ್ದಾರೆ. ಫಾಪ್, ಶುಭ್‍ಮನ್ ಗಿಲ್ ಬಳಿಕ ಈ ಬಾರಿಯ ಸೀಸನ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.

    ಕೊಹ್ಲಿಯ ದಾಖಲೆ ನಡುವೆಯು, ಐಪಿಎಲ್ 2023 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರ ನಡೆದಿದೆ. ಈ ಮೂಲಕ ಇಷ್ಟು ವರ್ಷಗಳಂತೆ ಈ ವರ್ಷವೂ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ. ಇದನ್ನೂ ಓದಿ: IPL 2023 Playoffs: ಮೇ 23ಕ್ಕೆ CSK vs GT ಹೈವೋಲ್ಟೇಜ್‌ ಕದನ – ಮಹಿ ಮೇಲೆ ಎಲ್ಲರ ಕಣ್ಣು

  • ಸೂರ್ಯ ಸ್ಫೋಟಕ ಶತಕ, ಕೊನೆಯವರೆಗೂ ಹೋರಾಡಿದ ರಶೀದ್‌ – ಮುಂಬೈಗೆ 27 ರನ್‌ಗಳ ಜಯ

    ಸೂರ್ಯ ಸ್ಫೋಟಕ ಶತಕ, ಕೊನೆಯವರೆಗೂ ಹೋರಾಡಿದ ರಶೀದ್‌ – ಮುಂಬೈಗೆ 27 ರನ್‌ಗಳ ಜಯ

    ಮುಂಬೈ: ಸೂರ್ಯಕುಮಾರ್‌ ಯಾದವ್‌ (SuryaKumar Yadav) ಅವರ ಸ್ಫೋಟಕ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 27 ರನ್‌ ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 5 ವಿಕೆಟ್‌ ನಷ್ಟಕ್ಕೆ 218 ರನ್‌ ಗಳಿಸಿತು. ಗೆಲ್ಲಲು 219 ರನ್‌ಗಳ ಕಠಿಣ ಸವಾಲು ಪಡೆದ ಗುಜರಾತ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಮುಂಬೈ 14 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದರೆ ಗುಜರಾತ್‌ 16 ಅಂಕ ಪಡೆದು ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

    ಆರಂಭದಿಂದಲೇ ವಿಕೆಟ್‌ ಕಳೆದುಕೊಂಡ ಗುಜರಾತ್‌ 55 ರನ್‌ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್‌ ಕಳೆದುಕೊಂಡಿತ್ತು. ವಿಜಯ್‌ ಶಂಕರ್‌ 29 ರನ್‌(14 ಎಸೆತ, 6 ಬೌಂಡರಿ), ಡೇವಿಡ್‌ ಮಿಲ್ಲರ್‌ 41 ರನ್‌(26 ಎಸೆತ, 4 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು.  ಇದನ್ನೂ ಓದಿ: ಪಾಕ್‌ ತಂಡದ ನಾಯಕನಿಗಿಂತ 9 ಪಟ್ಟು ಹೆಚ್ಚು ವೇತನವನ್ನ ಒಂದು ಸೀಸನ್‌ನಲ್ಲಿ ಪಡೀತಾರೆ ಯಶಸ್ವಿ

    103 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಾಗ ಗುಜರಾತ್‌ ಸುಲಭವಾಗಿ ಆಲೌಟ್‌ ಆಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಕೊನೆಯಲ್ಲಿ ರಶೀದ್‌ ಖಾನ್‌ ಸ್ಫೋಟಕ ಅರ್ಧಶತಕ ಸಿಡಿಸಿ ಸೋಲಿನ ಅಂತರವವನ್ನು ಕಡಿಮೆ ಮಾಡಿದರು. ಮುರಿಯದ 9ನೇ ವಿಕೆಟಿಗೆ ರಶೀದ್‌ ಖಾನ್‌ ಮತ್ತು ಜೋಸೆಫ್‌ 40 ಎಸೆತಗಳಲ್ಲಿ 88 ರನ್‌ ಜೊತೆಯಾಟವಾಡಿದರು. ರಶೀದ್‌ ಖಾನ್‌ ಔಟಾಗದೇ 79 ರನ್‌(32 ಎಸೆತ, 3 ಬೌಂಡರಿ,‌ 10 ಸಿಕ್ಸರ್) ಚಚ್ಚಿದರು.

    ಮೊದಲು ಬ್ಯಾಟ್‌ ಮಾಡಿದ ಮುಂಬೈ ಉತ್ತಮ ಆರಂಭ ಪಡೆಯಿತು. ಇಶನ್‌ ಕಿಶನ್‌ ಮತ್ತು ರೋಹಿತ್‌ ಶರ್ಮಾ ಮೊದಲ ವಿಕೆಟಿಗೆ 61 ರನ್‌ಗಳ ಜೊತೆಯಾಟವಾಡಿದರು. ರೋಹಿತ್‌ ಶರ್ಮಾ 29 ರನ್‌ (18 ಎಸೆತ, 3 ಬೌಂಡರಿ, 2 ಸಿಕ್ಸರ್‌) ಸಿಡಿಸಿದರೆ ಕಿಶನ್‌ ಕಿಶನ್‌ 31 ರನ್‌(20 ಎಸೆತ, 4 ಬೌಂಡರಿ, 1 ಸಿಕ್ಸರ್)‌ ಚಚ್ಚಿದರು.

    ಸೂರ್ಯಕುಮಾರ್‌ ಆರಂಭದಿಂದಲೇ ಅಬ್ಬರಿಸಲು ಆರಂಭಿಸಿದರು. ಪರಿಣಾಮ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸೂರ್ಯ 49 ಎಸೆತಗಳಲ್ಲಿ ಶತಕ ಹೊಡೆದರು. ಸೂರ್ಯಕುಮಾರ್‌ ಮತ್ತು ವಿಷ್ಣು ವಿನೋದ್‌ 4ನೇ ವಿಕೆಟಿಗೆ 42 ಎಸೆತಗಳಲ್ಲಿ 65 ರನ್‌ ಹೊಡೆದರೆ ಮುರಿಯದ 5ನೇ ವಿಕೆಟಿಗೆ ಕ್ಯಾಮರೂನ್‌ ಗ್ರೀನ್‌ ಜೊತೆ 18 ಎಸೆತಗಳಲ್ಲಿ 54 ರನ್‌ ಚಚ್ಚಿದರು. 54 ರನ್‌ಗಳಲ್ಲಿ ಗ್ರೀನ್‌ ಮೂರು ಎಸೆತಗಳಲ್ಲಿ3 ರನ್‌ ಮಾತ್ರ ಹೊಡೆದಿದ್ದರು. 20ನೇ ಓವರಿನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಸೂರ್ಯ ಶತಕ ಸಿಡಿಸಿದರು.

     
    ಮೋಹಿತ್‌ ಶರ್ಮಾ ಎಸೆದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಸೂರ್ಯಕುಮಾರ್‌ 20 ರನ್‌ ಚಚ್ಚಿದರು. 19ನೇ ಓವರ್‌ನಲ್ಲಿ 17 ರನ್‌, 20ನೇ ಓವರ್‌ನಲ್ಲಿ 17 ರನ್‌ ಬಂದಿತ್ತು. ಅಂತಿಮವಾಗಿ ಸೂರ್ಯ ಔಟಾಗದೇ 103 ರನ್‌ (49 ಎಸೆತ, 11 ಬೌಂಡರಿ, 6 ಸಿಕ್ಸರ್‌) ಹೊಡೆದರೆ ವಿಷ್ಣು ವಿನೋದ್‌ 30 ರನ್‌ (20 ಎಸೆತ, 2 ಬೌಂಡರಿ, 2 ಸಿಕ್ಸರ್) ‌ ಹೊಡೆದು ಔಟಾದರು.