Tag: IPL

  • RCB ಸೇರಿದ ದೈತ್ಯ ಆಸೀಸ್‌ ಆಟಗಾರ – ರಾಯಲ್‌ ಚಾಲೆಂಜರ್ಸ್‌ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

    RCB ಸೇರಿದ ದೈತ್ಯ ಆಸೀಸ್‌ ಆಟಗಾರ – ರಾಯಲ್‌ ಚಾಲೆಂಜರ್ಸ್‌ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

    – ಅಧಿಕೃತ ಪಟ್ಟಿ ಬಿಡುಗಡೆಗೊಳಿಸಿದ ಐಪಿಎಲ್‌ ಮಂಡಳಿ

    ಮುಂಬೈ: 16 ಆವೃತ್ತಿ ಕಳೆದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಈ ಬಾರಿ ಬಲಿಷ್ಠ ಆಟಗಾರರ ಪಡೆ ಕಟ್ಟಿ, ಟ್ರೋಫಿ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. ಕಳೆದ ಆವೃತ್ತಿಯಲ್ಲಿದ್ದ 11 ಆಟಗಾರರಿಗೆ ಗೇಟ್‌ ಪಾಸ್‌ ನೀಡಿದ್ದು, 18 ಆಟಗಾರರನ್ನ ತಂಡದಲ್ಲಿ ಉಳಿಸಿಕೊಂಡಿದೆ.

    ಅಲ್ಲದೇ ಪರ್ಸ್‌ನಲ್ಲಿ 40.75 ಕೋಟಿ ರೂ. ಉಳಿಸಿಕೊಂಡಿದ್ದ ಆರ್‌ಸಿಬಿ, ಟ್ರೇಡ್‌ ವಿಂಡೋ (T) ನಿಯಮದಲ್ಲಿ ಮುಂಬೈ ತಂಡದಿಂದ 17.5 ಕೋಟಿ ರೂ.ಗೆ ಕ್ಯಾಮರೂನ್‌ ಗ್ರೀನ್‌ (Cameron Green) ಅವರನ್ನು ಖರೀದಿ ಮಾಡಿದೆ. ಇದರಿಂದ ಆರ್‌ಸಿಬಿ (RCB) ಪರ್ಸ್‌ ಮೊತ್ತ 23.25 ಕೋಟಿ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: IPL 2024 Retention: 10 ತಂಡಗಳಲ್ಲಿ 173 ಜನ ಸೇಫ್‌ – 50 ಆಟಗಾರರಿಗೆ ಗೇಟ್‌ಪಾಸ್‌ – ಇಲ್ಲಿದೆ ಡಿಟೇಲ್ಸ್‌

    ಕ್ಯಾಮರೂನ್‌ ಗ್ರೀನ್‌ ಅವರನ್ನು ಖರೀದಿಸಿರುವ ಬಗ್ಗೆ ಆರ್‌ಸಿಬಿ ಕೂಡ ತನ್ನ ಅಧಿಕೃತ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಗ್ರೀನ್‌ ಕೂಡ ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಐಪಿಎಲ್‌ (IPL 2023) ಪ್ರವೇಶಿಸಿದ ಗ್ರೀನ್‌ 16 ಪಂದ್ಯಗಳಿಂದ 50.22 ಸರಾಸರಿಯಲ್ಲಿ 425 ರನ್‌ ಗಳಿಸಿದ್ದಾರೆ. ಇದರಲ್ಲಿ 1 ಶತಕ, 2 ಅರ್ಧಶತಕಗಳೂ ಸೇರಿವೆ. ಬೌಲಿಂಗ್‌ನಲ್ಲಿ 9.50 ಎಕಾನಮಿಯಲ್ಲಿ 6 ವಿಕೆಟ್‌ ಪಡೆದಿದ್ದಾರೆ. ಇದನ್ನೂ ಓದಿ: IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    ಯಾವ ಫ್ರಾಂಚೈಸಿಯಲ್ಲಿ ಎಷ್ಟು ಹಣ ಬಾಕಿಯಿದೆ?

    ಚೆನ್ನೈ ಸೂಪರ್‌ ಕಿಂಗ್ಸ್‌
    ಖರ್ಚು ಮಾಡಿದ ಒಟ್ಟು ಹಣ – 68.6 ಕೋಟಿ
    ಬಾಕಿ ಉಳಿದಿರುವ ಹಣ – 31.4 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    ಡೆಲ್ಲಿ ಕ್ಯಾಪಿಟಲ್ಸ್‌
    ಖರ್ಚು ಮಾಡಿದ ಒಟ್ಟು ಹಣ – 71.05 ಕೋಟಿ
    ಬಾಕಿ ಉಳಿದಿರುವ ಹಣ – 28.95 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 9

    ಗುಜರಾತ್‌ ಟೈಟಾನ್ಸ್
    ಖರ್ಚು ಮಾಡಿದ ಒಟ್ಟು ಹಣ – 61.85 ಕೋಟಿ
    ಬಾಕಿ ಉಳಿದಿರುವ ಹಣ – 38-15 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಕೋಲ್ಕತ್ತಾ ನೈಟ್‌ರೈಡರ್ಸ್‌
    ಖರ್ಚು ಮಾಡಿದ ಒಟ್ಟು ಹಣ – 67.3 ಕೋಟಿ
    ಬಾಕಿ ಉಳಿದಿರುವ ಹಣ – 32.7 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 12

    ಲಕ್ನೋ ಸೂಪರ್‌ ಜೈಂಟ್ಸ್‌
    ಖರ್ಚು ಮಾಡಿದ ಒಟ್ಟು ಹಣ – 86.85 ಕೋಟಿ
    ಬಾಕಿ ಉಳಿದಿರುವ ಹಣ – 13.15 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    ಮುಂಬೈ ಇಂಡಿಯನ್ಸ್
    ಖರ್ಚು ಮಾಡಿದ ಒಟ್ಟು ಹಣ -‌ 82.25 ಕೋಟಿ
    ಬಾಕಿ ಉಳಿದಿರುವ ಹಣ – 17.75 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಪಂಜಾಬ್‌ ಕಿಂಗ್ಸ್‌
    ಖರ್ಚು ಮಾಡಿದ ಒಟ್ಟು ಹಣ – 70.9 ಕೋಟಿ
    ಬಾಕಿ ಉಳಿದಿರುವ ಹಣ – 29.1 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಆರ್‌ಸಿಬಿ
    ಖರ್ಚು ಮಾಡಿದ ಒಟ್ಟು ಹಣ – 76.75
    ಬಾಕಿ ಉಳಿದಿರುವ ಹಣ – 23.25
    ಲಭ್ಯವಿರುವ ಸ್ಲಾಟ್‌ಗಳು – 6

    ರಾಜಸ್ಥಾನ್‌ ರಾಯಲ್ಸ್‌
    ಖರ್ಚು ಮಾಡಿದ ಒಟ್ಟು ಹಣ – 85.5 ಕೋಟಿ
    ಬಾಕಿ ಉಳಿದಿರುವ ಹಣ – 14.5 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 8

    ಸನ್‌ ರೈಸರ್ಸ್‌ ಹೈದರಾಬಾದ್‌
    ಖರ್ಚು ಮಾಡಿದ ಒಟ್ಟು ಹಣ – 66 ಕೋಟಿ
    ಬಾಕಿ ಉಳಿದಿರುವ ಹಣ – 34 ಕೋಟಿ
    ಲಭ್ಯವಿರುವ ಸ್ಲಾಟ್‌ಗಳು – 6

    10 ತಂಡಗಳ ಲೆಕ್ಕಾಚಾರ
    ತಂಡಗಳಿಗೆ ನಿಗದಿ ಮಾಡಿದ ಹಣ – 100 ಕೋಟಿ (ತಲಾ)
    ಒಟ್ಟು ಖರ್ಚು ಮಾಡಿರುವ ಹಣ – 737.05 ಕೋಟಿ
    ಬಾಕಿ ಉಳಿಸಿಕೊಂಡಿರುವ ಹಣ – 262.95 ಕೋಟಿ
    ಬಾಕಿ ಉಳಿದಿರುವ ಸ್ಲಾಟ್‌ಗಳು – 77

  • KKR, SRH, LSG, PBKS ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ..

    KKR, SRH, LSG, PBKS ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ..

    ಮುಂಬೈ: 2024ರ ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಹಾಗೂ ಕೈ ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್‍ರೈಸರ್ಸ್ ಹೈದರಾಬಾದ್ ತಂಡಗಳು ಸಹ ತಮ್ಮ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ.

    ಲಕ್ನೋ ಸೂಪರ್ ಜೈಂಟ್ಸ್
    ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್ (ಆರ್‌ಆರ್ ತಂಡದಿಂದ ಟ್ರೇಡ್), ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಕೃನಾಲ್ ಪಾಂಡ್ಯ, ಯುಧ್ವಿರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್ ತಂಡಕ್ಕೆ ರಿಟೇನ್ ಆಗಿದ್ದಾರೆ.

    ಜಯದೇವ್ ಉನದ್ಕತ್, ಡೇನಿಯಲ್ ಸಾಮ್ಸ್, ಮನನ್ ವೋಹ್ರಾ, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಅರ್ಪಿತ್ ಗುಲೇರಿಯಾ, ಸೂಯಾರ್ಂಶ್ ಶೆಡ್ಗೆ, ಕರುಣ್ ನಾಯರ್ ಆಟಗಾರರನ್ನು ಕೈಬಿಡಲಾಗಿದೆ.

    ಸನ್ ರೈಸರ್ಸ್ ಹೈದರಾಬಾದ್
    ಅಬ್ದುಲ್ ಸಮದ್, ಐಡೆನ್ ಮಾಕ್ರ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಅನ್ಮೋಲ್‍ಪ್ರೀತ್ ಸಿಂಗ್, ಉಪೇಂದ್ರ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಸನ್ವಿರ್ ಸಿಂಗ್, ಭುವನೇಶ್ವರ್ ಕುಮಾರ್, ಫಜಲ್ಹಾಕ್ ಫರೂಕಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಮಯಾಂಕ್ ಮಾಕರ್ಂಡೆ, ಶಹಬಾಜ್ ಅಹ್ಮದ್ (ಟ್ರೇಡಿಂಗ್) ತಂಡದಲ್ಲಿದ್ದಾರೆ.

    ಹ್ಯಾರಿ ಬ್ರೂಕ್, ಆದಿಲ್ ರಶೀದ್, ಅಕೇಲ್ ಹೊಸೈನ್, ಕಾರ್ತಿಕ್ ತ್ಯಾಗಿ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್ ಆಟಗಾರರಿಗೆ ತಂಡ ಕೊಕ್ ನೀಡಿದೆ.

    ಕೋಲ್ಕತ್ತಾ ನೈಟ್ ರೈಡರ್ಸ್
    ಮುಂಬರುವ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಲು ಮುಂದಾಗಿದೆ. ಫ್ರಾಂಚೈಸಿಯು ಬರೋಬ್ಬರಿ 12 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ತಂಡವು ತನ್ನ ಹಳೆಯ ಆಟಗಾರರಾದ ರಸೆಲ್ ಹಾಗೂ ನರೈನ್ ಅವರನ್ನು ಉಳಿಸಿಕೊಂಡಿದೆ.

    ಗಾಯದ ಸಮಸ್ಯೆಯಿಂದಾಗಿ 2023ರ ಐಪಿಎಲ್‍ನಲ್ಲಿ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್‍ನಲ್ಲಿ ಆಡಲಿದ್ದಾರೆ. ಅತ್ಯುತ್ತಮ ಬ್ಯಾಟರ್ ರಿಂಕು ಸಿಂಗ್ ಅವರನ್ನು ಉಳಿಸಿಕೊಂಡಿದೆ. ಶಾರ್ದೂಲ್ ಠಾಕೂರ್ ಸೇರಿದಂತೆ ತಂಡದಿಂದ ಒಟ್ಟು 12 ಕ್ರಿಕೆಟಿಗರನ್ನು ಬಿಡುಗಡೆ ಮಾಡಿದೆ. ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಆರ್ಯ ದೇಸಾಯಿ, ಡೇವಿಡ್ ವೈಸ್, ಶಾರ್ದೂಲ್ ಠಾಕೂರ್, ನಾರಾಯಣ್ ಜಗದೀಸನ್, ಮಂದೀಪ್ ಸಿಂಗ್, ಕುಲ್ವಂತ್ ಖೆಜ್ರೋಲಿಯಾ, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾಲ್ರ್ಸ್ ಅವರನ್ನು ರಿಲೀಸ್ ಮಾಡಿದೆ.

    ಪಂಜಾಬ್ ಕಿಂಗ್ಸ್
    ಶಿಖರ್ ಧವನ್, ಜಿತೇಶ್ ಶರ್ಮಾ, ಜಾನಿ ಬೈರ್‍ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‍ಸ್ಟನ್, ಮ್ಯಾಥ್ಯೂ ಶಾರ್ಟ್, ಹರ್‍ಪ್ರೀತ್ ಭಾಟಿಯಾ, ಅಥರ್ವ ಟೈಡೆ, ರಿಷಿ ಧವನ್, ಸ್ಯಾಮ್ ಕರನ್, ಸಿಕಂದರ್ ರಜಾ, ಶಿವಂ ಸಿಂಗ್, ಹರ್‍ಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ಕಗಿಸೊ ರಬಾಡಾ, ನಥನ್ ಎಲಿಸ್, ರಾಹುಲ್ ಚಹಾರ್, ಗುರ್ನೂರ್ ಬ್ರಾರ್, ವಿದ್ವತ್ ಕಾವೇರಪ್ಪ ತಂಡಕ್ಕೆ ರಿಟೇನ್ ಆಗಿದ್ದಾರೆ.

    ಶಾರುಖ್ ಖಾನ್, ರಾಜ್ ಬಾವಾ, ಬಲ್ತೇಜ್ ಧಂಡಾ, ಮೋಹಿತ್ ರಥಿ, ಭಾನುಕಾ ರಾಜಪಕ್ಸೆ ಅವರನ್ನು ತಂಡದಿಂದ ಕೈಬಿಡಲಾಗಿದೆ.

  • ಲಕ್ನೋ ಬಿಟ್ಟು ಕೋಲ್ಕತ್ತ ಸೇರಿದ ಗಂಭೀರ್‌

    ಲಕ್ನೋ ಬಿಟ್ಟು ಕೋಲ್ಕತ್ತ ಸೇರಿದ ಗಂಭೀರ್‌

    ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್‌ಗೆ (Lucknow Super Giants) ಗುಡ್‌ಬೈ ಹೇಳಿದ್ದಾರೆ.

    ಅಧಿಕೃತವಾಗಿ ಎಲ್‌ಎಸ್‌ಜಿ (LSG) ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಮತ್ತೆ ಮರಳಿದ್ದಾರೆ. ಕೆಕೆಆರ್‌ ತಂಡದಲ್ಲಿದ್ದಾಗ ನಾಯಕರಾಗಿ ಎರಡು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ಕೆಕೆಆರ್‌ನ ಸಿಇಒ ವೆಂಕಿ ಮೈಸೂರು (Venky Mysuru) ಅವರು ಬುಧವಾರ ಈ ಸಂಬಂಧ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್‌ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್‌ ಬಗ್ಗೆ ಅಖಿಲೇಶ್‌ ಟೀಕೆ

    ಗಂಭೀರ್‌ ಮೆಂಟರ್‌ ಆಗಿ ಬರುತ್ತಿರುವುದನ್ನು ಕೆಕೆಆರ್‌ ಸಹ-ಮಾಲೀಕ ಶಾರುಖ್‌ ಖಾನ್‌ ಸ್ವಾಗತಿಸಿದ್ದಾರೆ. ಫ್ರಾಂಚೈಸಿಗೆ ಗಂಭೀರ್ ಆಗಮನವನ್ನು ‘ನಾಯಕನ ಹಿಂತಿರುಗುವಿಕೆ’ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

    ಗಂಭೀರ್ ಎರಡು ವರ್ಷಗಳ ಕಾಲ LSG ಯ ಸಲಹೆಗಾರರಾಗಿ ಪಾತ್ರ ನಿರ್ವಹಿಸಿದ್ದರು. IPL 2022 ಆವೃತ್ತಿಯಲ್ಲಿ ತಂಡ ಫೈನಲ್ ತಲುಪಲು ಅಪಾರ ಶ್ರಮಿಸಿದ್ದರು. 2023 ರ ಆವೃತ್ತಿಯಲ್ಲಿ LSG ಲೀಗ್ ಸ್ಟ್ಯಾಂಡಿಂಗ್‌ನಲ್ಲಿ ಮೂರನೇ ಸ್ಥಾನ ಗಳಿಸಿತು. ಆದರೆ ಸತತವಾಗಿ ಎರಡನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ವಿಶ್ವಕಪ್‌ ಮುಗೀತು, T20 ಹಂಗಾಮ ಶುರು – ಟೀಂ ಇಂಡಿಯಾದ ಮುಂದಿದೆ ಸಾಲು ಸಾಲು ಸರಣಿ!

    ಭಾವನಾತ್ಮಕ ಪೋಸ್ಟ್ ಮೂಲಕ ಗಂಭೀರ್‌ ಲಕ್ನೋ ತಂಡದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ. “ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗಿನ ನನ್ನ ಪ್ರಯಾಣದ ಅಂತ್ಯವನ್ನು ನಾನು ಘೋಷಿಸುತ್ತಿದ್ದೇನೆ. ಈ ಪ್ರಯಾಣವನ್ನು ಸ್ಮರಣೀಯವಾಗಿಸಿದ ಎಲ್ಲಾ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಪ್ರತಿಯೊಬ್ಬರ ಬಗ್ಗೆಯೂ ಅಪಾರ ಪ್ರೀತಿಯಿದ್ದು, ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಈ ಗಮನಾರ್ಹ ಫ್ರಾಂಚೈಸ್ ಅನ್ನು ರಚಿಸುವಾಗ ಸ್ಪೂರ್ತಿದಾಯಕ ನಾಯಕತ್ವಕ್ಕಾಗಿ ಮತ್ತು ನನ್ನ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಾನು ಡಾ. ಸಂಜೀವ್ ಗೋಯೆಂಕಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ತಂಡವು ಭವಿಷ್ಯದಲ್ಲಿ ಅದ್ಭುತಗಳನ್ನು ಮಾಡುತ್ತದೆ. ಪ್ರತಿಯೊಬ್ಬ LSG ಅಭಿಮಾನಿಯನ್ನು ಹೆಮ್ಮೆಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಆಲ್ ದಿ ಬೆಸ್ಟ್ LSG ಬ್ರಿಗೇಡ್” ಎಂದು ಎಕ್ಸ್‌ನಲ್ಲಿ ಗಂಭೀರ್‌ ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: 3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ – ಕೋಪವನ್ನೇ ಶಕ್ತಿಯಾಗಿಸಿ ಪಿಚ್‌ಗೆ ಇಳಿದಿದ್ದೇ ರೋಚಕ!

  • ಆರ್‌ಸಿಬಿಯಲ್ಲಿ ಆಡಲು ರಚಿನ್ ಉತ್ಸಾಹ – ಟ್ವೀಟ್ ವೈರಲ್

    ಆರ್‌ಸಿಬಿಯಲ್ಲಿ ಆಡಲು ರಚಿನ್ ಉತ್ಸಾಹ – ಟ್ವೀಟ್ ವೈರಲ್

    ನವದೆಹಲಿ: ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ರಚಿನ್ ರವೀಂದ್ರ (Rachin Ravindra) ಬೆಂಗಳೂರಿನ (Bengaluru) ಬಗ್ಗೆ ಅಪಾರ ಒಲವು ಹೊಂದಿದ್ದಾರೆ. ಪಂದ್ಯದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತಷ್ಟು ಕ್ರಿಕೆಟ್ ಆಡುವ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ.

    ರಚಿನ್ ರವೀಂದ್ರ ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಆಡುವ ಹಂಬಲ ವ್ಯಕ್ತವಾಗಿದೆ. ಈ ಬಗ್ಗೆ ಅವರು ಮಾಡಿದ ಟ್ವೀಟ್ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ – ವೀಡಿಯೋ ವೈರಲ್

    2023ರ ಐಸಿಸಿ ಏಕದಿನ ವಿಶ್ವಕಪ್ (World Cup) ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದ ರಚಿನ್, ನಂತರವೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದುವರೆಗೂ ನ್ಯೂಜಿಲೆಂಡ್ ಪರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಎಲ್ಲಾ 9 ಪಂದ್ಯಗಳನ್ನಾಡಿ ಮೂರು ಶತಕ ಸಹಿತ 565 ರನ್ ಸಿಡಿಸಿದ್ದಾರೆ.

    ಟ್ವಿಟ್ಟರ್‌ನಲ್ಲಿ ರಚಿನ್ ರವೀಂದ್ರ ಹಲೋ ಆರ್‌ಸಿಬಿ ಫ್ಯಾನ್ಸ್ ಎಂದು ಬರೆದುಕೊಂಡು ಆರ್‍ಸಿಬಿಯಲ್ಲಿ ಆಡುವ ಇಂಗಿತವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಮುಂದಿರುವ ಘೋರ ಸವಾಲು ಯಾವುದು? – ಎಷ್ಟು ರನ್‌ ಅಂತರದಲ್ಲಿ ಗೆದ್ದರೆ ಸೆಮಿಸ್‌ ತಲುಪಬಹುದು?

  • ಒಂದು ವರ್ಷದಲ್ಲಿ BCCI ಪಾವತಿಸಿದ ಟ್ಯಾಕ್ಸ್ ಎಷ್ಟು ಗೊತ್ತೆ?

    ಒಂದು ವರ್ಷದಲ್ಲಿ BCCI ಪಾವತಿಸಿದ ಟ್ಯಾಕ್ಸ್ ಎಷ್ಟು ಗೊತ್ತೆ?

    ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉತ್ತಮ ಆದಾಯ ಗಳಿಸುವ ಜೊತೆಗೆ ಭಾರೀ ಮೊತ್ತದ ತೆರಿಗೆಯನ್ನೂ ಪಾವತಿಸುತ್ತಿದೆ.

    2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಬರೋಬ್ಬರಿ 1,159 ಕೋಟಿ ರೂ. ಆದಾಯ ತೆರಿಗೆ ಪಾವತಿಸಿರುವುದನ್ನು ಬಹಿರಂಗಪಡಿಸಿದೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಕಳೆದ 5 ವರ್ಷಗಳಲ್ಲಿ ಬಿಸಿಸಿಐ ಪಾವತಿಸಿದ ಆದಾಯ ತೆರಿಗೆ ಮತ್ತು ಅದರ ಆದಾಯ ಮತ್ತು ವೆಚ್ಚಗಳ ವಿವರಗಳನ್ನು ನೀಡಿದ್ದಾರೆ. ಇದನ್ನೂ ಓದಿ: ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿ ಹಿಗ್ಗಾಮುಗ್ಗ ಟ್ರೋಲ್‌ಗೆ ಗುರಿಯಾದ ಪಾಂಡ್ಯ – ಅಭಿಮಾನಿಗಳು ಕೆಂಡ

    ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ 2024-27ರ ವರೆಗೆ ವಾರ್ಷಿಕವಾಗಿ 230 ಮಿಲಿಯನ್ ಡಾಲರ್ (ಸುಮಾರು 19 ಸಾವಿರ ಕೋಟಿ ರೂ.) ಹಣವನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ (ICC) ಪಡೆಯಲಿದೆ. ಐಸಿಸಿಯ ವಾರ್ಷಿಕ ಆದಾಯದಿಂದ ಅತಿ ಹೆಚ್ಚು ಮೊತ್ತವನ್ನು ಪಡೆಯುತ್ತಿರುವ ಬಿಸಿಸಿಐ ಸಂಸ್ಥೆ, ದೊಡ್ಡ ಮೊತ್ತದ ತೆರಿಗೆಯನ್ನೂ ಸರ್ಕಾರಕ್ಕೆ ಪಾವತಿಸುತ್ತಿದೆ.

    ಬಿಸಿಸಿಐಗೆ ಬರುತ್ತಿರುವ ಆದಾಯ ಮೂಲಗಳಲ್ಲಿ ಐಸಿಸಿ ಹಾಗೂ ಐಪಿಎಲ್‌ನಿಂದ (IPL) ಬರುವ ಆದಾಯ ಮೂಲಗಳು ಪ್ರಮುಖವಾಗಿವೆ. ಆಟಗಾರರ ಭಾಗವಹಿಸುವಿಕೆ ಮತ್ತು ಪ್ರಾಯೋಜಕತ್ವಗಳೆರಡರಲ್ಲೂ ಐಪಿಎಲ್ ವಿಶ್ವದ ಅತ್ಯಂತ ಲಾಭದಾಯಕ ಕ್ರಿಕೆಟ್ ಲೀಗ್ ಆಗಿ ಹೊರಹೊಮ್ಮಿದೆ. ಇದು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಸೂರ್ಯನ ಆರ್ಭಟಕ್ಕೆ ವಿಂಡೀಸ್‌ ಕಂಗಾಲು, ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ – ಸರಣಿ ಜಯದ ಕನಸು ಜೀವಂತ

    2020-21ನೇ ಹಣಕಾಸು ವರ್ಷದಲ್ಲಿ ಬಿಸಿಸಿಐ ಆದಾಯ ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ 844.92 ಕೋಟಿ ರೂ. ಪಾವತಿಸಿದೆ. 2019-20ರಲ್ಲಿ ಸಂಸ್ಥೆ 882.29 ಕೋಟಿ ರೂ. ತೆರಿಗೆ ಪಾವತಿಸಿದೆ. 2019ರ ಆರ್ಥಿಕ ವರ್ಷದಲ್ಲಿ ಮಂಡಳಿಯು 815.08 ಕೋಟಿ ರೂ. ಮೊತ್ತವನ್ನ ತೆರಿಗೆಯಾಗಿ ಸರ್ಕಾರಕ್ಕೆ ಪಾವತಿಸಿದೆ. ಇದು 2017-18ರಲ್ಲಿ ಪಾವತಿಸಿದ 596.63 ಕೋಟಿ ರೂ.ಗಿಂತ ತುಂಬಾ ಹೆಚ್ಚಾಗಿದೆ.

    2021-22ನೇ ಹಣಕಾಸು ವರ್ಷದಲ್ಲಿ ಬಿಸಿಸಿಐ 7,606 ಕೋಟಿ ರೂ. ಆದಾಯ ಗಳಿಸಿದ್ದರೆ, ಸಂಸ್ಥೆಯ ವೆಚ್ಚ 3,064 ಕೋಟಿ ರೂ.ಗಳಷ್ಟಿದೆ. ವೆಚ್ಚ 3,064 ಕೋಟಿ ರೂ.ಗಳಷ್ಟಿತ್ತು. 2020-21ರಲ್ಲಿ ಇದೇ ಬಿಸಿಸಿಐ ಆದಾಯ 4,735 ಕೋಟಿ ರೂ. ಮತ್ತು ವೆಚ್ಚ 3,080 ಕೋಟಿ ರೂ. ಆಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸನ್‍ರೈಸರ್ಸ್‍ಗೆ ಮುಖ್ಯ ಕೋಚ್ ಆಗಿ ಡೇನಿಯಲ್ ವೆಟ್ಟೋರಿ ಆಯ್ಕೆ

    ಸನ್‍ರೈಸರ್ಸ್‍ಗೆ ಮುಖ್ಯ ಕೋಚ್ ಆಗಿ ಡೇನಿಯಲ್ ವೆಟ್ಟೋರಿ ಆಯ್ಕೆ

    ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಮುಖ್ಯ ಕೋಚ್ ಆಗಿ ಬ್ರಿಯಾನ್ ಲಾರಾ ಬದಲಿಗೆ ಡೇನಿಯಲ್ ವೆಟ್ಟೋರಿ (Daniel Vettori) ನೇಮಕಗೊಂಡಿದ್ದಾರೆ.

    ವೆಟ್ಟೋರಿ ಅವರು ಈ ಹಿಂದೆ 2014 ರಿಂದ 2018ರ ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿದ್ದರು. ಪ್ರಸ್ತುತ ಆಸ್ಟ್ರೇಲಿಯಾ ಪುರುಷರ ತಂಡದೊಂದಿಗೆ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸನ್‍ರೈಸರ್ಸ್ ಆರು ಋತುಗಳಲ್ಲಿ ಟಾಮ್ ಮೂಡಿ (2019 ಮತ್ತು 2022), ಟ್ರೆವರ್ ಬೇಲಿಸ್ (2020 ಮತ್ತು 2021), ಮತ್ತು ಲಾರಾ (2023) ಅವರನ್ನು ಬದಲಿಸಿದೆ. 2023ರ ಐಪಿಎಲ್ ಸೀಸನ್‍ಗೆ ಮುಂಚಿತವಾಗಿ ಲಾರಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ತಂಡವು ನಾಲ್ಕು ಗೆಲುವುಗಳನ್ನು ದಾಖಲಿಸಿತ್ತು. ಬಳಿಕ ಹತ್ತು ಸೋಲುಗಳೊಂದಿಗೆ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದನ್ನೂ ಓದಿ: ಈ ಸಲ ವಿಶ್ವಕಪ್ ನಮ್ದೆ – ರೋಹಿತ್ ಶರ್ಮಾ ವಿಶ್ವಾಸ

    ಇದು 2024ರ ಋತುವಿಗಾಗಿ ಮೂರನೇ ಉನ್ನತ ಮಟ್ಟದ ಕೋಚಿಂಗ್ ನೇಮಕಾತಿಯಾಗಿದೆ. ಜಸ್ಟಿನ್ ಲ್ಯಾಂಗರ್ ಲಕ್ನೋ ಸೂಪರ್ ಜೈಂಟ್ಸ್‍ನಲ್ಲಿ ಆಂಡಿ ಫ್ಲವರ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು. ನಂತರ ಫ್ಲವರ್ ಅದೇ ಸ್ಥಾನಕ್ಕೆ ಆರ್‌ಸಿಬಿಗೆ ಸೇರ್ಪಡೆಗೊಂಡರು.

    2016 ರಿಂದ 2020 ರವರೆಗೆ ಸನ್‍ರೈಸರ್ಸ್ ಪ್ರತಿ ಋತುವಿನಲ್ಲೂ ಪ್ಲೇಆಫ್‍ಗಳನ್ನು ತಲುಪಿತ್ತು. ಆದರೆ ಆ ಯಶಸ್ಸನ್ನು ಪುನರಾವರ್ತಿಸಲು ಟೀಂ ವಿಫಲವಾಗಿದೆ. ಈಗ ವೆಟ್ಟೋರಿ ಮತ್ತು ಏಡೆನ್ ಮಾಕ್ರ್ರಾಮ್ ಅವರ ಮಾರ್ಗದರ್ಶನದ ಮೂಲಕ ಮತ್ತೆ ಹಳೆಯ ಲಯಕ್ಕೆ ಮರಳಲು ಮುಂದಾಗಿದೆ.

    ಐಪಿಎಲ್ (IPL) 2021 ರಿಂದ ಸನ್‍ರೈಸರ್ಸ್ ಕೇವಲ 13 ಪಂದ್ಯಗಳನ್ನು ಗೆದ್ದಿದೆ. ಅಲ್ಲದೇ 29 ಪಂದ್ಯಗಳಲ್ಲಿ ಸೋಲು ಕಂಡಿದೆ. ಇದು ಕೋಚ್‍ಗಳ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಈ ಹಿಂದೆ ಐಪಿಎಲ್‍ನಲ್ಲಿ ಮುಖ್ಯ ತರಬೇತುದಾರರಾಗಿ ವೆಟ್ಟೋರಿ 2015ರಲ್ಲಿ ಆರ್‍ಸಿಬಿಗೆ ಪ್ಲೇಆಫ್‍ಗೆ ಮತ್ತು 2016 ರಲ್ಲಿ ಫೈನಲ್‍ಗೆ ಪ್ರವೇಶಿಸಲು ಸಹಕರಿಸಿದ್ದರು. ಇದನ್ನೂ ಓದಿ: ನಮ್ಮ ಬ್ಯಾಟಿಂಗ್‌ ಕಳಪೆಯಾಗಿತ್ತು – ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪಾಂಡ್ಯ ಬೇಸರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಡಿಯಾ ಪದ ಬಳಕೆ ತಡೆ ನೀಡಲು PIL- 26 ವಿಪಕ್ಷಗಳಿಗೆ ದೆಹಲಿ ಹೈಕೋರ್ಟ್ ನೋಟಿಸ್

    ಇಂಡಿಯಾ ಪದ ಬಳಕೆ ತಡೆ ನೀಡಲು PIL- 26 ವಿಪಕ್ಷಗಳಿಗೆ ದೆಹಲಿ ಹೈಕೋರ್ಟ್ ನೋಟಿಸ್

    ನವದೆಹಲಿ: ವಿರೋಧ ಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ (INDIA) ಎಂದು ನಾಮಕರಣ ಮಾಡಿದ ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‍ಗೆ (Delhi Highcourt) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಗಿರೀಶ್ ಭಾರದ್ವಾಜ್ ಎಂಬವರು ಈ ಅರ್ಜಿ ಸಲ್ಲಿಸಿದ್ದು, ಇಂಡಿಯಾ ಪದ ಬಳಕೆ ಮಾಡದಂತೆ ಸೂಚಿಸಲು ಮನವಿ ಮಾಡಿದ್ದಾರೆ.

    ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ವಿಭಾಗೀಯ ಪೀಠ 26 ವಿರೋಧ ಪಕ್ಷಗಳು, ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ (Central Election Commission) ನೋಟಿಸ್ ನೀಡಿ ಅಕ್ಟೋಬರ್ 31 ರಂದು ವಿಚಾರಣೆ ಮುಂದೂಡಿತು. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌ – ಸೂರತ್‌ ನ್ಯಾಯಾಲಯ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆ

    ಅರ್ಜಿದಾರರ ಪರ ಹಿರಿಯ ವಕೀಲ ಅರುಣಾ ಶ್ಯಾಮ್ ವಾದ ಮಂಡಿಸಿ, ವಿಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಭಾರತದ (India) ಹೆಸರನ್ನು ಬಳಸುತ್ತಿವೆ. ಇದು 2024 ರ ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಶಾಂತಿಯುತ, ಪಾರದರ್ಶಕ ಮತ್ತು ನ್ಯಾಯಯುತ ಮತದಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ನಾಗರಿಕರನ್ನು ಅನಗತ್ಯ ಹಿಂಸಾಚಾರಕ್ಕೆ ಒಡ್ಡಬಹುದು ಮತ್ತು ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಹದಗೆಡಲು ಕಾರಣವಾಗಬಹುದು.

    1950ರ ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯಿದೆಯ ಸೆಕ್ಷನ್ 2 ಮತ್ತು 3 ರ ಅಡಿಯಲ್ಲಿ ಭಾರತ ಎಂಬ ಹೆಸರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆ ವಿರೋಧ ಪಕ್ಷಗಳು ಭಾರತೀಯ ಧ್ವಜ ಮತ್ತು ಇಂಡಿಯಾ ಪದ ಬಳಕೆ ಮಾಡದಂತೆ ತಡೆಯಲು ನ್ಯಾಯಾಲಯಕ್ಕೆ ಮನವಿ ಮಾಡಿದರು.

    ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿ ವಿಚಾರಣೆಗೆ ಸಮಯ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಹಿನ್ನೆಲೆ ಕೋರ್ಟ್ ವಿಚಾರಣೆಯನ್ನು ಮುಂದೂಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧೋನಿ ವಿಮಾನದಲ್ಲಿ ಮಲಗಿದ್ದಾಗ ಕದ್ದು ಫೋಟೋ ಕ್ಲಿಕ್ – ಗಗನಸಖಿ ನಿರ್ಧಾರ ಸರಿಯೇ?

    ಧೋನಿ ವಿಮಾನದಲ್ಲಿ ಮಲಗಿದ್ದಾಗ ಕದ್ದು ಫೋಟೋ ಕ್ಲಿಕ್ – ಗಗನಸಖಿ ನಿರ್ಧಾರ ಸರಿಯೇ?

    ಮುಂಬೈ: ಟೀಂ ಇಂಡಿಯಾದ (Team India) ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ಕೋಟ್ಯಂತರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅಭಿಮಾನಿಗಳು ಒಮ್ಮೆಯಾದ್ರೂ ಮಹಿಯನ್ನ ಹತ್ತಿರದಿಂದ ನೋಡ್ಬೇಕು ಅಂತಾ ಆಸೆ ಪಡ್ತಾರೆ. ಅಂತಹ ಒಂದು ಕ್ಷಣ ಸಿಕ್ಕರೂ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲಾರದೇ ಇರೋದಿಲ್ಲ. 2023 IPL ಟೂರ್ನಿಯಲ್ಲಿ ಮಹಿ ನೋಡಲೆಂದೇ ಸಾವಿರಾರು ಕಿಲೋ ಮೀಟರ್‌ಗಳಿಂದ ಅಭಿಮಾನಿಗಳು ಬಂದಿದ್ರು. ಇದೀಗ ಗಗನಸಖಿಯೊಬ್ಬಳು ಅಂತಹದ್ದೇ ಕ್ಷಣವನ್ನ ಫೋಟೋದಲ್ಲಿ ಸೆರೆಹಿಡಿಯಲು ಹೋಗಿ ಸುದ್ದಿಯಾಗಿದ್ದಾಳೆ.

    ಇತ್ತೀಚೆಗೆ ವಿಮಾನ ಪ್ರಯಾಣ ಸಮಯದಲ್ಲಿ MSD ಪಕ್ಕದಲ್ಲಿ ನಿಂತು ಗಗನ ಸಖಿಯೊಬ್ಬಳು (Air Hostess) ಫೋಟೋ ತೆಗೆದುಕೊಂಡಿದ್ದಾಳೆ. ಆದ್ರೆ ಈ ಫೋಟೋ ತೆಗೆದುಕೊಳ್ಳುವಾಗ ಧೋನಿ ಸಣ್ಣ ನಿದ್ರೆಗೆ ಜಾರಿದ್ದರು. ಹಾಗಾಗಿ ಇದು ಅವರಿಗೆ ಗೊತ್ತೇ ಇರಲಿಲ್ಲ. ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಗಗನಸಖಿ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 48 ರನ್‌ ಚಚ್ಚಿದ ಆಫ್ಘನ್‌ ಬ್ಯಾಟರ್‌ – ಮೈದಾನದಲ್ಲೇ ಕಣ್ಣೀರಿಟ್ಟ ಬೌಲರ್‌

    ಒಬ್ಬ ಅಭಿಮಾನಿಯಾಗಿ ನಾನು ಸಹ ಅವರನ್ನ ನೋಡಲು ಬಯಸುತ್ತೇನೆ. ಆದ್ರೆ ಅವರ ಅನುಮತಿಯಿಲ್ಲದೇ ಅವರ ಪರ್ಸನಲ್ ಸ್ಪೇಸ್‌ಗೆ ಅಡ್ಡಿಪಡಿಸಲು ಬಯಸುವುದಿಲ್ಲ. ಇನ್ಮುಂದೆ ಹೀಗೆ ಮಾಡ್ಬೇಡಿ ಅಂತಾ ಅಭಿಮಾನಿಯೊಬ್ಬರು ಕೇಳಿಕೊಂಡಿದ್ದಾರೆ. ಮತ್ತೊಬ್ಬರು, ಯಾರಾದರೂ ಗಗನಸಖಿಯರಿಗೆ ಹೆಚ್ಚು ವೃತ್ತಿಪರರಾಗಿರಲು ಮತ್ತು ಅವರ ಗೌಪ್ಯತೆಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚಿಸಬಹುದೇ ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಧೋನಿ ಜಾಗದಲ್ಲಿ ಯುವತಿ, ಗಗನಸಖಿ ಜಾಗದಲ್ಲಿ ಧೋನಿ ಇದ್ದರೆ ಇಷ್ಟು ಹೊತ್ತಿಗೆ ಮಹಿಳಾ ಹೋರಾಟಗಾರರು ಕಟು ಪದಗಳಲ್ಲಿ ಟೀಕೆ ಮಾಡುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

    ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 5 ಬಾರಿ ಚಾಂಪಿಯನ್ ಟ್ರೋಫಿ ಎತ್ತಿ ಹಿಡಿದಿರುವ ಮಹಿ ಮುಂದಿನ ಋತುವಿನಲ್ಲೂ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಅಭಿಮಾನಿಗಳು ಸಂತಗೊಂಡಿದ್ದಾರೆ. ಇತ್ತೀಚೆಗೆ ತಮ್ಮದೇ ನಿರ್ಮಾಣ ಧೋನಿ ಎಂಟರ್ಟೈನ್ಮೆಂಟ್‌ ಪ್ರೈವೇಟ್ ಸಂಸ್ಥೆ ಪ್ರಾರಂಭಿಸುವ ಮೂಲಕ ಮನರಂಜನಾ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಂಡೀಸ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್‌ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಕ್ಸ್ ಪ್ಯಾಕ್ ತೋರಿಸಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಅರ್ಜುನ್ ತೆಂಡೂಲ್ಕರ್

    ಸಿಕ್ಸ್ ಪ್ಯಾಕ್ ತೋರಿಸಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಅರ್ಜುನ್ ತೆಂಡೂಲ್ಕರ್

    ಮುಂಬೈ: ಐಪಿಎಲ್ (IPL) ಬಳಿಕ ಕಾಣಿಸಿಕೊಳ್ಳುತ್ತಿರುವ ಯುವ ವೇಗಿ ಅರ್ಜುನ್ ತೆಂಡೂಲ್ಕರ್ (Arjun Tendulkar) ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ.

    ಮುಂಬರುವ ದೇವಧರ್ ಟ್ರೋಫಿಗೆ ದಕ್ಷಿಣ ವಲಯಕ್ಕಾಗಿ ಆಡಲಿರುವ ಅರ್ಜುನ್ ತೆಂಡೂಲ್ಕರ್ ಸಿಕ್ಸ್‌ಪ್ಯಾಕ್‌ (Six Pack) ಫೋಟೋವೊಂದನ್ನ ಹಂಚಿಕೊಂಡಿದ್ದು, ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ – ಸಚಿನ್‌ ತೆಂಡೂಲ್ಕರ್‌ ಪುತ್ರನ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್‌

    ಕಳೆದ ಜೂನ್ ತಿಂಗಳಲ್ಲಿ ನಡೆದ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಗೋವಾ ಪರ ಆಟವಾಡಿದ್ದ ಅರ್ಜುನ್ ತೆಂಡೂಲ್ಕರ್ 20 ದಿನಗಳ ಶಿಬಿರಕ್ಕೆ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಆಗಮಿಸಿದ್ದರು. 130 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಎಡಗೈ ವೇಗಿ ಈಗಾಗಲೇ ರಣಜಿಯಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಮುಂಬರುವ ದೇವಧರ್ ಟ್ರೋಫಿಗೆ ದಕ್ಷಿಣ ವಲಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ತಂಡವನ್ನ ಮುನ್ನಡೆಸಲಿದ್ದಾರೆ.

    2021ರಲ್ಲಿ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾಗಿದ್ದ ಅರ್ಜುನ್ ತೆಂಡೂಲ್ಕರ್ 2022ರ ಐಪಿಎಲ್ ಹರಾಜಿನಲ್ಲಿ ಅರ್ಜುನ್ ಮುಂಬೈ ಇಂಡಿಯನ್ಸ್ಗೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. 2021ರಲ್ಲಿ ಐಪಿಎಲ್‌ಗೂ ಮುನ್ನವೇ ಗಾಯಗೊಂಡಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದರು. 2021ರ ಆವೃತ್ತಿಯಲ್ಲಿ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ. 2022ರಲ್ಲೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾದರೂ ಮೈದಾನದಲ್ಲಿ ಆಡುವ ಅವಕಾಶ ಸಿಗಲಿಲ್ಲ.

    2023ರ ಆವೃತ್ತಿಯಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿತು. ನಾಲ್ಕು ಪಂದ್ಯಗಳಲ್ಲಿ ಮುಂಬೈ ಪರ ಆಡಿದ ಅರ್ಜುನ್ ಮೂರು ವಿಕೆಟ್‌ಗಳನ್ನ ಪಡೆದು 92 ರನ್ ಬಿಟ್ಟುಕೊಟ್ಟರು. ಅದರಲ್ಲೂ ಕಿಂಗ್ಸ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 31 ರನ್ ಬಿಟ್ಟುಕೊಡುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • RCB ಏಕೆ ಐಪಿಎಲ್‌ ಟ್ರೋಫಿ ಗೆದ್ದಿಲ್ಲ – ತಂಡದಿಂದ ಕೈಬಿಟ್ಟ ಮೇಲೆ ಪ್ರಾಮಾಣಿಕ ಉತ್ತರ ಕೊಟ್ಟ ಚಾಹಲ್‌

    RCB ಏಕೆ ಐಪಿಎಲ್‌ ಟ್ರೋಫಿ ಗೆದ್ದಿಲ್ಲ – ತಂಡದಿಂದ ಕೈಬಿಟ್ಟ ಮೇಲೆ ಪ್ರಾಮಾಣಿಕ ಉತ್ತರ ಕೊಟ್ಟ ಚಾಹಲ್‌

    ಮುಂಬೈ: ಪ್ರತಿಷ್ಠಿತ ಐಪಿಎಲ್‌ (IPL) ಟೂರ್ನಿ 16 ಆವೃತ್ತಿ ಕಳೆದರೂ ಆರ್‌ಸಿಬಿ (RCB) ಒಂದು ಬಾರಿಯೂ ಐಪಿಎಲ್‌ ಟ್ರೋಫಿ ಗೆಲ್ಲಲು ಏಕೆ ಸಾಧ್ಯವಾಗಿಲ್ಲ? ಎನ್ನುವ ಪ್ರಶ್ನೆಗೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಯಜುವೇಂದ್ರ ಚಾಹಲ್‌ (Yuzvendra Chahal) ತಂಡ ಕೈಬಿಟ್ಟ ನಂತರ ಪ್ರಾಮಾಣಿಕ ಉತ್ತರ ಕೊಟ್ಟಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಚಾಹಲ್‌, ಆರ್‌ಸಿಬಿ ಬಹುತೇಕ ಸೀಸನ್‌ಗಳಲ್ಲಿ ಅತ್ಯುತ್ತಮ ತಂಡವಾಗಿತ್ತು. ಆದರೂ ಒಮ್ಮೆಯೂ ಟ್ರೋಫಿ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ. ಕಳೆದ 8 ವರ್ಷಗಳಿಂದ ನಾನೂ ಆ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಲ್ಕರಾಝ್‌ಗೆ ಚೊಚ್ಚಲ ವಿಂಬಲ್ಡನ್‌ ಕಿರೀಟ – ಸೋಲಿಸಿದ ಆಟಗಾರನನ್ನೇ ಬಾಯ್ತುಂಬ ಹೊಗಳಿದ ದಿಗ್ಗಜ ಜೊಕೊವಿಕ್!

    2021ರಲ್ಲಿ ಆವೃತ್ತಿಯ ನಂತರ ಆರ್‌ಸಿಬಿ ತಂಡದಿಂದ ಚಾಹಲ್‌ ಅವರನ್ನ ಕೈಬಿಡಲಾಯಿತು. ಈ ಕುರಿತು ಸಂದರ್ಶನದಲ್ಲಿ ಮಾತನಾಡುವಾಗ 2016ರ ಆವೃತ್ತಿ ಐಪಿಎಲ್‌ ಟೂರ್ನಿಯನ್ನ ನೆನಪಿಸಿಕೊಂಡಿದ್ದಾರೆ. ಅಂದು ಆರ್‌ಸಿಬಿ ತಂಡ ಸನ್‌ ರೈಸರ್ಸ್‌ ಹೈದರಾಬಾದ್‌ನೊಂದಿಗೆ ಫೈನಲ್‌ನಲ್ಲಿ ಎದುರಾಗಿತ್ತು. ಗೆಲ್ಲುವ ಸನಿಹಕ್ಕೆ ಬಂದು 8 ರನ್‌ಗಳಿಂದ ಸೋತು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಆರ್‌ಸಿಬಿ ಕ್ರಿಸ್‌ಗೇಲ್‌, ಕೆ.ಎಲ್‌ ರಾಹುಲ್‌, ಎ.ಬಿ.ಡಿ ವಿಲಿಯರ್ಸ್‌, ಶೇನ್‌ ವಾಟ್ಸನ್‌ರಂತಹ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನ ಹೊಂದಿತ್ತು. ನಾನೂ ಕೂಡ ಆ ಸೀಸನ್‌ನಲ್ಲಿ ಮೊದಲ ಬಾರಿಗೆ ಪರ್ಪಲ್‌ ಕ್ಯಾಪ್‌ ಗಳಿಸಿದ್ದೆ. ಆದರೂ ಟ್ರೋಫಿ ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಲೀಗ್‌ನಲ್ಲಿ, ಸೆಮಿಫೈನಲ್‌ನಲ್ಲಿ ಗೆದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ಆಡುವಾ ಹೈದರಾಬಾದ್‌ ವಿರುದ್ಧ 8 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿದ್ದೆವು. ಅದು ನಮಗೆ ಭಾರೀ ನೋವನ್ನು ಉಂಟು ಮಾಡಿತ್ತು. ಆದ್ರೆ ಪ್ರತಿ ಬಾರಿ ಸೋತಾಗಲೂ ಮುಂದಿನ ವರ್ಷ ನಾವು ವಿಭಿನ್ನವಾಗಿ ಏನು ಮಾಡಬಹುದು ಎಂಬುದರ ಕುರಿತು ಮಾತುಕತೆ ನಡೆಯುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: RCB ಕೈಬಿಡುವಾಗ ಒಂದೂ ಮಾತು ಕೂಡ ಹೇಳಲಿಲ್ಲ – ಬೇಸರ ಹಂಚಿಕೊಂಡ ಚಾಹಲ್

    ಈ ಹಿಂದಿನ ಸೀಸನ್‌ ವೊಂದರಲ್ಲಿ ಸತತ 6 ಪಂದ್ಯಗಳಲ್ಲಿ ಸೋತಿದ್ದೆವು. 7ನೇ ಪಂದ್ಯ ಗೆದ್ದಾಗ ಪ್ರಶಸ್ತಿಯನ್ನೇ ಗೆದ್ದಷ್ಟು ಸಂತಸದಿಂದ ಸಂಭ್ರಮಿಸಿದ್ದೆವು. ಆದ್ರೆ ಈ ಬಾರಿ ರಾಜಸ್ತಾನ ರಾಯಲ್ಸ್‌ ತಂಡ ಅತ್ಯುತ್ತಮವಾಗಿತ್ತು. ಆದ್ರೂ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ನಮ್ಮ ಕೈಯಲ್ಲಿ ಇಲ್ಲದ ವಿಷಯಗಳ ಬಗ್ಗೆ ನಾವು ಯೋಚಿಸುವುದೂ ಇಲ್ಲ ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]