Tag: IPL

  • 2023ರಲ್ಲಿ ಫೈನಲ್ಲಿನಲ್ಲಿ ಏನಾಯ್ತು – ಲಕ್ಷ, ಕೋಟಿ ಬಾಚಿಕೊಂಡವರು ಈಗ ಏನ್‌ ಮಾಡ್ತಾರೆ?

    2023ರಲ್ಲಿ ಫೈನಲ್ಲಿನಲ್ಲಿ ಏನಾಯ್ತು – ಲಕ್ಷ, ಕೋಟಿ ಬಾಚಿಕೊಂಡವರು ಈಗ ಏನ್‌ ಮಾಡ್ತಾರೆ?

    ಅಹಮದಾಬಾದ್‌: 16ನೇ ಐಪಿಎಲ್‌ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಪದಾರ್ಪಣೆ ಆವೃತ್ತಿಯಲ್ಲಿ (2022) ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಗುಜರಾತ್‌ ಟೈಟಾನ್ಸ್‌ ತಂಡ 2023ರಲ್ಲಿ ಚೆನ್ನೈ ವಿರುದ್ಧ ಸೋತು ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

    2023ರ ಐಪಿಎಲ್‌ ಆವೃತ್ತಿಯನ್ನ ಸಮರ್ಪಕವಾಗಿ ಬಳಸಿಕೊಂಡ ಆಟಗಾರರು ಉದಯೋನ್ಮುಖ ಪ್ರತಿಭೆಗಳಾಗಿ ಬೆಳಕಿಗೆ ಬಂದರು. ಆಟಗಾರರ ಸ್ಫೋಟಕ ಪ್ರದರ್ಶನದಿಂದ ಅತಿಹೆಚ್ಚು ಬಾತಿ ತಂಡಗಳು ಇನ್ನಿಂಗ್ಸ್‌ವೊಂದರಲ್ಲಿ 200 ರನ್‌ಗಳ ಗಡಿ ದಾಟಿದ ದಾಖಲೆಯ ಆವೃತ್ತಿ ಅದಾಗಿತ್ತು. ಉತ್ತಮ ಪ್ರದರ್ಶನ ನೀಡಿದ ಆಟಗಾರರು ಲಕ್ಷ ಲಕ್ಷ ಬಾಚಿಕೊಂಡರು. ಈ ಐಪಿಎಲ್‌ ಬಳಿಕ ಯಶಸ್ವಿ ಜೈಸ್ವಾಲ್‌, ಧ್ರುವ್‌ ಜುರೆಲ್‌, ಜಿತೇಶ್‌ ಶರ್ಮಾ, ರಿಂಕು ಸಿಂಗ್‌, ಶಿವಂ ದುಬೆ, ಸರ್ಫರಾಜ್‌ ಖಾನ್‌ ಮೊದಲಾದ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟರು.

    ಅಲ್ಲದೇ 2023ರ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 257 ರನ್‌ ಗಳಿಸಿ ಅತಿಹೆಚ್ಚು ರನ್‌ ಗಳಿಸಿ ಐಪಿಎಲ್‌ ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಹೆಚ್ಚು ರನ್‌ ಗಳಿಸಿದ 2ನೇ ತಂಡವಾಯಿತು. ಈ ಸೀಸನ್‌ನಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ 59 ರನ್‌ಗಳಿಗೆ ಆಲೌಟ್‌ ಆಗಿದ್ದು, ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪಂದ್ಯವಾಗಿತ್ತು.

    2024ರಲ್ಲಿ 10 ತಂಡಗಳೂ ತಂಡದ ಆಟಗಾರರಲ್ಲಿ ಬದಲಾವಣೆ ಮಾಡಿಕೊಂಡಿವೆ. ಚೆನ್ನೈ ಸೂಪರ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌ ನಂತಹ ಬಲಿಷ್ಠ ತಂಡಗಳ ನಾಯಕತ್ವದಲ್ಲೂ ಬದಲಾವಣೆಯಾಗಿದೆ. ಹಾಗಾಗಿ 2024ರ ಐಪಿಎಲ್‌ ರೋಚಕತೆಯಿಂದ ಕೂಡಿರಲಿದೆ.

    2023ರ ಐಪಿಎಲ್‌ ಪ್ರಶಸ್ತಿ ಮತ್ತು ನಗದು ಬಹುಮಾನ ಪಡೆದವರ ಪಟ್ಟಿ:
    ಚಾಂಪಿಯನ್ಸ್‌: ಸಿಎಸ್‌ಕೆ – 20 ಕೋಟಿ ರೂ.
    ರನ್ನರ್‌ ಅಪ್: ಗುಜರಾತ್ ಟೈಟಾನ್ಸ್ – 12.5 ಕೋಟಿ ರೂ.

    ಆರೆಂಜ್ ಕ್ಯಾಪ್: ಶುಭಮನ್ ಗಿಲ್- 890 ರನ್ -10 ಲಕ್ಷ ರೂ.
    ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ- 28 ವಿಕೆಟ್- 10 ಲಕ್ಷ ರೂ.

    ಸೀಸನ್‌ನ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್ – ರಾಜಸ್ಥಾನ್‌ ರಾಯಲ್ಸ್‌ – 10 ಲಕ್ಷ ರೂ.
    ಸೂಪರ್ ಸ್ಟ್ರೈಕರ್ – ಗ್ಲೆನ್‌ ಮ್ಯಾಕ್ಸ್‌ವೆಲ್: ಆರ್‌ಸಿಬಿ, ಸ್ಟ್ರೈಕ್‌ರೇಟ್‌ -183.48 – 10 ಲಕ್ಷ ರೂ.

    ಮೋಸ್ಟ್‌ ವ್ಯಾಲ್ಯುಯೆಬಲ್ ಪ್ಲೇಯರ್‌: ಶುಭಮನ್ ಗಿಲ್ – 10 ಲಕ್ಷ ರೂ.
    ಗೇಮ್ ಚೇಂಜರ್- ಶುಭಮನ್ ಗಿಲ್- 10 ಲಕ್ಷ ರೂ.

    ಅತಿ ಹೆಚ್ಚು ಬೌಂಡರಿ: ಶುಭಮನ್ ಗಿಲ್ – 85 – 10 ಲಕ್ಷ ರೂ.
    ಅತಿ ದೊಡ್ಡ ಸಿಕ್ಸರ್ – ಫಾಫ್ ಡು ಪ್ಲೆಸಿಸ್: ಆರ್‌ಸಿಬಿ – 115 ಮೀಟರ್ – 10 ಲಕ್ಷ ರೂ.
    ಸೀಸನ್‌ನ ಅದ್ಭುತ ಕ್ಯಾಚ್: ರಶೀದ್ ಖಾನ್ – ಗುಜರಾತ್ ಟೈಟಾನ್ಸ್- 10 ಲಕ್ಷ ರೂ.
    ಮನರಂಜಿಸಿದ ತಂಡ – ಡೆಲ್ಲಿ ಕ್ಯಾಪಿಟಲ್ಸ್

    2023ರ ಫೈನಲ್ ಪಂದ್ಯದ ಪ್ರಶಸ್ತಿಗಳ ವಿವರ:
    ಸೂಪರ್‌ ಸ್ಟ್ರೈಕರ್‌: ಅಜಿಂಕ್ಯ ರಹಾನೆ- 1 ಲಕ್ಷ ರೂ.
    ಗೇಮ್ ಚೇಂಜರ್: ಸಾಯಿ ಸುದರ್ಶನ್- 1 ಲಕ್ಷ ರೂ.
    ವ್ಯಾಲ್ಯುಯೆಬಲ್ ಪ್ಲೇಯರ್‌: ಸಾಯಿ ಸುದರ್ಶನ್- 1 ಲಕ್ಷ ರೂ.

    ಅತಿ ದೊಡ್ಡ ಸಿಕ್ಸರ್: ಸಾಯಿ ಸುದರ್ಶನ್- 1 ಲಕ್ಷ ರೂ.
    ಅದ್ಭುತ ಕ್ಯಾಚ್: ಎಂ.ಎಸ್ ಧೋನಿ- 1 ಲಕ್ಷ ರೂ.
    ಪಂದ್ಯ ಶ್ರೇಷ್ಠ: ಡಿವೋನ್ ಕಾನ್ವೇ – 1 ಲಕ್ಷ ರೂ

  • ಕೋಟಿ ಸರದಾರರ ಮೇಲೆ ಬೆಟ್ಟದಷ್ಟು ನಿರೀಕ್ಷೆ – ದುಬಾರಿ ಬೆಲೆಗೆ ಬಿಕರಿಯಾದ ಟಾಪ್‌-5 ಬ್ಯಾಟರ್ಸ್‌ ಯಾರು?

    ಕೋಟಿ ಸರದಾರರ ಮೇಲೆ ಬೆಟ್ಟದಷ್ಟು ನಿರೀಕ್ಷೆ – ದುಬಾರಿ ಬೆಲೆಗೆ ಬಿಕರಿಯಾದ ಟಾಪ್‌-5 ಬ್ಯಾಟರ್ಸ್‌ ಯಾರು?

    ದುಬೈ: ವಿಶ್ವದ ಶ್ರೀಮಂತ ಟೂರ್ನಿ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 17ನೇ ಆವೃತ್ತಿಗೆ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ಅಲ್ಲದೇ ಮಿಚೆಲ್‌ ಸ್ಟಾರ್ಕ್‌ ಸೇರಿದಂತೆ ದುಬಾರಿ ಬೆಲೆಗೆ ಬಿಕರಿಯಾದ ಟಾಪ್‌ ಆಟಗಾರರ ಮೇಲೆ ಈ ಬಾರಿ ಬೆಟ್ಟದಷ್ಟು ನಿರೀಕ್ಷೆಯಿದೆ. 17ನೇ ಆವೃತ್ತಿಯಲ್ಲಿ 10 ತಂಡಗಳು ಕಣಕ್ಕಿಳಿಯುತ್ತಿದ್ದು, ಪ್ರತಿ ತಂಡಕ್ಕೂ ಎಂದಿನಂತೆ 14 ಲೀಗ್‌ ಪಂದ್ಯಗಳಿರಲಿವೆ. ಲೀಗ್‌ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ ನಾಲ್ಕು ತಂಡಗಳು ಪ್ಲೇ ಆಫ್‌ ತಲುಪಲಿವೆ. ದುಬಾರಿ ಬೆಲೆಗೆ ಬಿಕರಿಯಾದ ಆಟಗಾರರು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

    ದುಬಾರಿ ಬೆಲೆಗೆ ಹರಾಜಾದ ಟಾಪ್‌-5 ಆಟಗಾರರು ಯಾರು?
    * ಮಿಚೆಲ್‌ ಸ್ಟಾರ್ಕ್‌ – 24.75 ಕೋಟಿ ರೂ. (ಕೋಲ್ಕತ್ತಾ ನೈಟ್‌ರೈಡರ್ಸ್‌)
    * ಪ್ಯಾಟ್‌ ಕಮ್ಮಿನ್ಸ್‌ – 20.50 ಕೋಟಿ ರೂ. (ಸನ್‌ ರೈಸರ್ಸ್‌ ಹೈದರಾಬಾದ್‌)
    * ಡೇರಿಲ್‌ ಮಿಚೆಲ್‌ – 14 ಕೋಟಿ ರೂ. (ಚೆನ್ನೈ ಸೂಪರ್‌ ಕಿಂಗ್ಸ್‌)
    * ಅಕ್ಷರ್‌ ಪಟೇಲ್‌ – 11.75 ಕೋಟಿ ರೂ. (ಪಂಜಾಬ್‌ ಕಿಂಗ್ಸ್‌)
    * ಅಲ್ಝಾರಿ ಜೋಸೆಫ್‌ – 11.50 ಕೋಟಿ ರೂ. (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು)

    ಟ್ರೇಂಡ್‌ ವಿಂಡೋ ನಿಯಮದ ಮೂಲಕ ಖರೀದಿಸಿದ ದುಬಾರಿ ಆಟಗಾರರು:
    * ಕ್ಯಾಮರೂನ್‌ ಗ್ರೀನ್‌ – 17.5 ಕೋಟಿ ರೂ. (ಮುಂಬೈ ಇಂಡಿಯನ್ಸ್‌ನಿಂದ ಆರ್‌ಸಿಬಿಗೆ)
    * ಹಾರ್ದಿಕ್‌ ಪಾಂಡ್ಯ – 15 ಕೋಟಿ ರೂ. (ಗುಜರಾತ್‌ ಟೈಟಾನ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ);

    2023ರ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರ್ರನ್ 18.50 ಕೋಟಿ ರೂ.ಗೆ ಮಾರಾಟವಾಗಿದ್ದು ಐಪಿಎಲ್‌ನಲ್ಲಿ ಇತಿಹಾಸವಾಗಿತ್ತು. ಆದ್ರೆ 2024ರ ಟೂರ್ನಿಗೆ ಕಳೆದ ಡಿಸೆಂಬರ್‌ 19 ರಂದು ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ, ಆಸೀಸ್‌ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ 20.50 ಕೋಟಿ ರೂ.ಗೆ ಮಾರಾಟವಾಗಿ ಸ್ಯಾಮ್‌ ಕರ್ರನ್‌ ದಾಖಲೆ ಮುರಿದಿದ್ದರು. ಆದ್ರೆ 2023ರ ಏಕದಿನ ವಿಶ್ವಕಪ್ ವಿಜೇತ ತಂಡದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸ್ಟಾರ್‌ ವೇಗಿ ಮಿಚೆಲ್‌ ಸ್ಟಾರ್ಕ್‌ 24.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಪಾಲಾಗಿ ದಾಖಲೆ ಬರೆದರು.

    ಸ್ಟಾರ್ಕ್‌ ದುಬಾರಿಯಾಗಿದ್ದು ಏಕೆ?
    ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಲ್‌ರೌಂಡರ್‌ ಪ್ರದರ್ಶನ ತೋರಿದ್ದ ಮಿಚೆಲ್‌ ಸ್ಟಾರ್ಕ್‌ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ 3 ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

  • ಇಂದಿನಿಂದ ಐಪಿಎಲ್‌ ಹಬ್ಬ – ಸಿಎಸ್‌ಕೆ ವಿರುದ್ಧ ಮೈಲುಗಲ್ಲು ಸಾಧಿಸುತ್ತಾರಾ ಕೊಹ್ಲಿ?

    ಇಂದಿನಿಂದ ಐಪಿಎಲ್‌ ಹಬ್ಬ – ಸಿಎಸ್‌ಕೆ ವಿರುದ್ಧ ಮೈಲುಗಲ್ಲು ಸಾಧಿಸುತ್ತಾರಾ ಕೊಹ್ಲಿ?

    – ಉದ್ಘಾಟನಾ ಪಂದ್ಯದಲ್ಲೇ ದಿಗ್ಗಜರ ನಡುವೆ ಕಾಳಗ

    ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ (IPL) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 6:30ಕ್ಕೆ ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

    ಉದ್ಘಾಟನಾ ಪಂದ್ಯದಲ್ಲೇ ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಗಳು ಕಾದಾಡಲಿವೆ. ಈ ವೇಳೆ ಉಭಯ ತಡಗಳ ನಡುವಿನ ಮುಖಾಮುಖಿಯಲ್ಲಿ ಆಟಗಾರರ ವೈಯಕ್ತಿಕ ದಾಖಲೆಗಳ ವಿವರ ಇಲ್ಲಿ ನೀಡಲಾಗಿದೆ.

     

    ಕೊಹ್ಲಿ ಮೈಲುಗಲ್ಲಿಗೆ ಒಂದು ರನ್‌ ಬಾಕಿ:
    ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಪರಸ್ಪರ ಮುಖಾಮುಖಿಯಲ್ಲಿ ಅಧಿಕ ರನ್‌ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ (Virat Kohli) ಹೆಸರಲ್ಲಿದೆ. ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧ ಬರೋಬ್ಬರಿ 985 ರನ್ ಗಳಿಸಿದ್ದಾರೆ. ಅವರು ಇನ್ನು 15 ರನ್ ಗಳಿಸಿದರೆ, ತಂಡವೊಂದರ ವಿರುದ್ಧ 1,000 ರನ್ ಪೂರೈಸಿದ ಆರ್‌ಸಿಬಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.  ಇದನ್ನೂ ಓದಿ: IPL 2024: ಅತ್ಯುತ್ತಮ ಜೊತೆಯಾಟದಲ್ಲೂ ಆರ್‌ಸಿಬಿ ಆಟಗಾರರೇ ಟಾಪ್‌!

    ದುಬೆ ಗರಿಷ್ಠ ರನ್‌ ದಾಖಲೆ:
    ಸಿಎಸ್‌ಕೆ ತಂಡದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಉಭಯ ತಂಡಗಳ ಪೈಪೋಟಿಯಲ್ಲಿ ಗರಿಷ್ಠ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಜಡ್ಡುಗೆ ಅಗ್ರಸ್ಥಾನವಿದೆ. ಇನ್ನೂ ಆರ್‌ಸಿಬಿ ವಿರುದ್ಧ ಶಿವಂ ದುಬೆ (Shiva Dubey) ಅಜೇಯ 95 ರನ್ ಗಳಿಸುವ ಮೂಲಕ, ಉಭಯ ತಂಡಗಳ ಮುಖಾಮುಖಿಯ ಪಂದ್ಯವೊಂದರಲ್ಲೇ ವೈಯಕ್ತಿಕ ಗರಿಷ್ಠ ಸ್ಕೋರ್‌ ಗಳಿಸಿದ ದಾಖಲೆ ಹೊಂದಿದ್ದಾರೆ.

    ಗೆಲುವಿನಲ್ಲೂ ಸಿಎಸ್‌ಕೆ ಟಾಪ್‌:
    ಉಭಯ ತಂಡಗಳು ಈವರೆಗೆ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 20 ಮತ್ತು ಆರ್‌ಸಿಬಿ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ. ಉಭಯ ತಂಡಗಳು ಈವರೆಗೆ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 20 ಮತ್ತು ಆರ್‌ಸಿಬಿ 10 ಪಂದ್ಯಗಳನ್ನು ಗೆದ್ದಿದೆ. ಒಂದು ಬಾರಿ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಸಿಎಸ್‌ಕೆ 58 ರನ್‌ಗಳಿಂದ ಗೆದ್ದಿತ್ತು. ಇದನ್ನೂ ಓದಿ: ನಾಯಕ ಸ್ಥಾನದಿಂದ ಕೆಳಗಿಳಿದ ಧೋನಿ – ಸಿಎಸ್‌ಕೆ ತಂಡ‌ಕ್ಕೆ ಋತುರಾಜ್‌ ನೂತನ ಸಾರಥಿ

    ಪಿಚ್‌ ರಿಪೋರ್ಟ್‌ ಹೇಗಿದೆ?
    ಚಿದಂಬರಂ (ಚೆಪಾಕ್‌) ಕ್ರೀಡಾಂಗಣದಲ್ಲಿ ಪಿಚ್ ಸಾಮಾನ್ಯವಾಗಿ ನಿಧಾನ ಮತ್ತು ಕಡಿಮೆ ವೇಗ ಇರುತ್ತದೆ. ಸ್ಪಿನ್ನರ್‌ಗಳಿಗೆ ಹೆಚ್ಚು ಹೆಚ್ಚಿ ಅನುಕೂಲಕರವಾಗಿದ್ದು, ಉತ್ತಮ ಹಿಡಿತ ಸಾಧಿಸಬಹದು. ಆದ್ದರಿಂದ ಚೆನ್ನೈ ತಂಡವು ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಮಹೇಶ್ ತೀಕ್ಷಣ ಅವರಂತಹ ಅನುಭವಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಅಲ್ಲದೇ ಚೊಚ್ಚಲ ಐಪಿಎಲ್‌ ಪ್ರವೇಶಿಸಿರುವ ಬೆಂಗಳೂರು ಮೂಲದ ರಚಿನ್‌ ರವೀಂದ್ರ ಅವರ ಬೌಲಿಂಗ್‌ ತಂಡಕ್ಕೆ ಇನ್ನಷ್ಟು ಬಲ ತುಂಬಲಿದೆ. ಇನ್ನು ಆರ್‌ಸಿಬಿ ತಂಡದಲ್ಲಿ ಕರ್ಣ್‌ ಶರ್ಮಾ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರಿಗೆ ಅನುಕೂಲವಾಗಲಿದೆ. ಆರ್‌ಸಿಬಿ ತಂಡದಲ್ಲಿ ವೇಗಿಗಳು ಹೆಚ್ಚಾಗಿರುವ ಕಾರಣ, ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರಿದರಷ್ಟೇ ಹಿಡಿತ ಸಾಧಿಸಬಹುದು.

  • ಐಪಿಎಲ್‌,  RCB Unbox ಕಾರ್ಯಕ್ರಮ – ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ ಸೇವೆ

    ಐಪಿಎಲ್‌, RCB Unbox ಕಾರ್ಯಕ್ರಮ – ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ ಸೇವೆ

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Cricket Stadium) ಮಂಗಳವಾರ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ (RCB Unbox Event) ಮತ್ತು ಮೂರು ಐಪಿಎಲ್‌ (IPL) ಪಂದ್ಯಗಳನ್ನು ವೀಕ್ಷಿಸುವ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಎಂಟಿಸಿ (BMTC) ಸಿಹಿ ಸುದ್ದಿ ನೀಡಿದೆ.

    ಮಾರ್ಚ್‌ 19 ಮಂಗಳವಾರ ‘ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ’ ನಡೆಯಲಿದೆ. ಮಾರ್ಚ್‌ 25, 29 ಮತ್ತು ಏಪ್ರಿಲ್‌ 2ರಂದು ಐಪಿಎಲ್ ಕ್ರಿಕೆಟ್‌ ಪಂದ್ಯನಡೆಯಲಿದ್ದು ಆ ದಿನ ಸಂಜೆ ಮತ್ತು ರಾತ್ರಿ ಹೆಚ್ಚುವರಿ ಬಿಎಂಟಿಸಿ ಬಸ್ಸುಗಳನ್ನು ಇಳಿಸುವುದಾಗಿ ತಿಳಿಸಿದೆ.  ಇದನ್ನೂ ಓದಿ: ರಾಜಕೀಯವಾಗಿ ಡಿಕೆಶಿ ನನಗೆ ವಿಷ ಹಾಕಿದ್ದಾರೆ: ಹೆಚ್‍ಡಿಕೆ ಕಿಡಿ

    ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್‌ ಸಿಟಿಗೆ, ಎಂಟಿಸಿಟಿ–ನಾಯಂಡಹಳ್ಳಿ ಮೂಲಕ ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್‌ಗೆ, ಎಚ್‌ಎಎಲ್ ರಸ್ತೆ ಮೂಲಕ ಕಾಡುಗೋಡಿ ಬಸ್‌ ನಿಲ್ದಾಣಕ್ಕೆ, ಹೂಡಿ ರಸ್ತೆ ಮೂಲಕ ಕಾಡುಗೋಡಿ ಬಸ್‌ ನಿಲ್ದಾಣಕ್ಕೆ ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್‌ಶಿಪ್‌ಗೆ, ನಾಗವಾರ–ಟ್ಯಾನರಿ ರಸ್ತೆ ಮೂಲಕ ಆರ್‌.ಕೆ. ಹೆಗಡೆ ನಗರಕ್ಕೆ, ಹೆಣ್ಣೂರು ರಸ್ತೆ ಮೂಲಕ ಬಾಗಲೂರಿಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಇದನ್ನೂ ಓದಿ: ಯೋಗ ಗುರು ಬಾಬಾ ರಾಮ್‌ದೇವ್, ಪತಂಜಲಿ ಮುಖ್ಯಸ್ಥನಿಗೆ ಸುಪ್ರೀಂ ಸಮನ್ಸ್

    ಸರ್ಜಾಪುರ, ಬನ್ನೇರುಘಟ್ಟ ಮೃಗಾಲಯ, ನೆಲಮಂಗಲ, ಯಲಹಂಕ 5ನೇ ಹಂತ, ಹೊಸಕೋಟೆಗಳಿಗೂ ಹೆಚ್ಚುವರಿ ಬಸ್‌ ವ್ಯವಸ್ಥೆ ಇರಲಿದೆ.

  • ಕೊನೆಗೂ  ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

    ಕೊನೆಗೂ ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

    ಬೆಂಗಳೂರು: ಪ್ರತಿ ಬಾರಿಯೂ ಈ ಸಲ ಕಪ್‌ ನಮ್ದೆ (ESCN) ಎನ್ನುತ್ತಿದ್ದ ಆರ್‌ಸಿಬಿ (RCB) ಅಭಿಮಾನಿಗಳ ಕನಸು ಈಡೇರಿದ್ದು, ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (WPL) ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ.

    ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ರಾತ್ರಿಯಿಡಿ #RCB  ಟ್ರೆಂಡ್‌ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರಿನ(Bengaluru) ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲೂ ಅಭಿಮಾನಿಗಳ ಆರ್‌ಸಿಬಿ ಆರ್‌ಸಿಬಿ ಎಂದು ಹೇಳಿ ಘೋಷಣೆ ಮೊಳಗಿಸುತ್ತಿದ್ದರು.

    ಈ ಸಂಭ್ರಮಕ್ಕೆ ಕಾರಣವೂ ಇತ್ತು. ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ರಂತಹ ಘಟಾನುಘಟಿ ಆಟಗಾರರಿದ್ದರೂ ಇಲ್ಲಿಯವರೆಗೆ ಕಪ್‌ ಗೆದ್ದಿರಲಿಲ್ಲ.  ಇದನ್ನೂ ಓದಿ: WPL Champions: ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – ಆರ್‌ಸಿಬಿ ಚೊಚ್ಚಲ ಚಾಂಪಿಯನ್‌!

    https://twitter.com/ustadkalyan/status/1769415797804527779?t=AjwwXqpJ788e1ZePmaqcaw&s=08

    ಕಳೆದ 16 ಐಪಿಎಲ್‌ (IPL) ಟೂರ್ನಿ ಪೈಕಿ ಪುರುಷರ ತಂಡ 2009, 2011, 2016 ಫೈನಲ್‌ ಪ್ರವೇಶಿಸಿದ್ದರೂ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು. ಆದರೆ ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಆರ್‌ಸಿಬಿ ಅಭಿಮಾನಿಗಳ ಬಹು ವರ್ಷದ ಕನಸು ಈಡೇರಿತು.

    ಫೈನಲ್‌ ಪಂದ್ಯದ ವೇಳೆ ಮಾತನಾಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil) ಪ್ರತಿಬಾರಿಯೂ ನಮ್ಮ ತಂಡವನ್ನು ಅಭಿಮಾನಿಗಳು ಈ ಸಲ ಕಪ್‌ ನಮ್ದೆ ಎಂದು ಹೇಳಿ ಹುರಿದುಂಬಿಸುತ್ತಿದ್ದರು. ಈ ಬಾರಿ ನಾವು ಕಪ್‌ ಗೆದ್ದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ:  ಧೋನಿ ಟ್ರೆಂಡ್‌ ಮುಂದುವರಿಸಿದ ಸ್ಮೃತಿ – ಮಂಧಾನ ನಾಯಕತ್ವಕ್ಕೆ ಭೇಷ್‌ ಅಂದ್ರು ಫ್ಯಾನ್ಸ್‌!

    ನಾಯಕಿ ಸ್ಮೃತಿ ಮಂಧನಾ(Smriti Mandhana), ಪ್ರತಿಬಾರಿ ಅಭಿಮಾನಿಗಳು “ಈ ಸಲ ಕಪ್‌ ನಮ್ದೇ” ಎಂದು ಹೇಳುತ್ತಿದ್ದರು. ಆದರೆ ಈ ಬಾರಿ “ಈ ಸಲ ಕಪ್‌ ನಮ್ದು” ಎಂದು ಹೇಳಬಹುದು ಎಂದು ಸಂತಸ ವ್ಯಕ್ತಪಡಿಸಿದರು.

  • 10,000 ರನ್‌ ಪೂರೈಸಿ ದಾಖಲೆ; ಬಾಬಾರ್‌ ಸ್ಫೋಟಕ ಆಟಕ್ಕೆ ಗೇಲ್‌, ವಿರಾಟ್‌ ಕೊಹ್ಲಿ ದಾಖಲೆ ಉಡೀಸ್‌

    10,000 ರನ್‌ ಪೂರೈಸಿ ದಾಖಲೆ; ಬಾಬಾರ್‌ ಸ್ಫೋಟಕ ಆಟಕ್ಕೆ ಗೇಲ್‌, ವಿರಾಟ್‌ ಕೊಹ್ಲಿ ದಾಖಲೆ ಉಡೀಸ್‌

    ಇಸ್ಲಾಮಾಬಾದ್‌: ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಫ್ಲಾಪ್‌ ಪ್ರದರ್ಶನ ನೀಡಿದ್ದ ಪಾಕ್‌ ತಂಡದ ಮಾಜಿ ನಾಯಕ ಬಾಬರ್‌ ಆಜಂ (Babar Azam)ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಭರ್ಜರಿ ಫಾರ್ಮ್‌ ಕಂಡುಕೊಂಡಿದ್ದಾರೆ.

    ಈ ಲೀಗ್‌ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 10 ಸಾವಿರ ರನ್‌ ಪೂರೈಸಿದ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ (Chris Gayle) ಹಾಗೂ ವಿರಾಟ್‌ ಕೊಹ್ಲಿ (Virat Kohli) ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ICC Test Ranking: 14 ಸ್ಥಾನ ಜಿಗಿದು ಟಾಪ್‌-20ಯಲ್ಲಿ ಸ್ಥಾನ ಪಡೆದ ಯಶಸ್ವಿ!

    ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಆಜಂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಟಿ20 ಸ್ವರೋಪದಲ್ಲಿ ಅತಿ ವೇಗವಾಗಿ 10 ಸಾವಿರ ರನ್‌ ಪೂರೈಸಿದ ದಾಖಲೆ ಮಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಬಾಬರ್ 6 ರನ್ ಗಳಿಸುತ್ತಿದ್ದಂತೆ 271 ಪಂದಗಳಲ್ಲೇ 10,000 ರನ್ ಪೂರ್ಣಗೊಳಿಸಿದ್ದಾರೆ.

    CHRIS GAYLE

    2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಆಟಗಾರ ಕ್ರಿಸ್ ಗೇಲ್ ರಾಜ್ ಕೋಟ್ ಅಂಗಳದಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ಧ ತಮ್ಮ 285ನೇ ಟಿ20 ಇನಿಂಗ್ಸ್ ನಲ್ಲಿ ಅತಿ ವೇಗದ 10,000 ಚುಟುಕು ರನ್ ಪೂರೈಸಿ ಮಹತ್ತರ ದಾಖಲೆ ಸೃಷ್ಟಿಸಿದ್ದರು. ಈಗ ಆ ದಾಖಲೆ ಬಾಬರ್ ಹಿಂದಿಕ್ಕಿದ್ದಾರೆ. ಅಲ್ಲದೇ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ 3,000 ರನ್ ಪೂರೈಸಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 4ನೇ ಟೆಸ್ಟ್‌ ಪಂದ್ಯಕ್ಕೆ ಕೆ.ಎಲ್‌ ರಾಹುಲ್‌ ಕಂಬ್ಯಾಕ್‌ – ಸುಳಿವು ಕೊಟ್ಟ ರೋಹಿತ್‌

    ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 10,000 ರನ್ ಪೂರೈಸಿದ ಸ್ಟಾರ್ಸ್‌:
    * 271 ಪಂದ್ಯ- ಬಾಬರ್ ಆಜಂ- ಪಾಕಿಸ್ತಾನ
    * 285 ಪಂದ್ಯ- ಕ್ರಿಸ್ ಗೇಲ್- ವೆಸ್ಟ್ ಇಂಡೀಸ್
    * 299 ಪಂದ್ಯ- ವಿರಾಟ್ ಕೊಹ್ಲಿ- ಭಾರತ
    * 303 ಪಂದ್ಯ- ಡೇವಿಡ್ ವಾರ್ನರ್- ಆಸ್ಟ್ರೇಲಿಯಾ
    * 327 ಪಂದ್ಯ- ಆರನ್‌ ಫಿಂಚ್- ಆಸ್ಟ್ರೇಲಿಯಾ
    * 350 ಪಂದ್ಯ- ಜೋಸ್‌ ಬಟ್ಲರ್- ಇಂಗ್ಲೆಂಡ್‌

  • 89 ಸಾವಿರ ಕೋಟಿ ತಲುಪಿತು ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ- ಯಾವ ತಂಡದ್ದು ಎಷ್ಟು?

    89 ಸಾವಿರ ಕೋಟಿ ತಲುಪಿತು ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ- ಯಾವ ತಂಡದ್ದು ಎಷ್ಟು?

    ಮುಂಬೈ: ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡಿ ಸುದ್ದಿಯಾಗಿರುವ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ (IPL Brand Value) ಭಾರೀ ಏರಿಕೆಯಾಗಿದೆ. 2023ರ ಆವೃತ್ತಿಯ ನಂತರ 23% ಏರಿಕೆಯಾಗಿ ಈಗ 10.7 ಶತಕೋಟಿ ಡಾಲರ್‌ಗೆ (ಅಂದಾಜು 89,232 ಕೋಟಿ ರೂ.) ಏರಿಕೆಯಾಗಿದೆ.

    ಬ್ರ್ಯಾಂಡ್‌ ಕನ್ಸಲ್ಟೆನ್ಸಿ ಕಂಪನಿ ಬ್ರ್ಯಾಂಡ್‌ ಫೈನಾನ್ಸ್‌ ವರದಿ ಪ್ರಕಾರ 2008ರಲ್ಲಿ ಐಪಿಎಲ್‌ ಆರಂಭಗೊಂಡ ಬಳಿಕ ಅದರ ಮೌಲ್ಯ 433% ಏರಿಕೆಯಾಗಿದೆ.

    ಸ್ಟೇಡಿಯಂ ಸಾಮರ್ಥ್ಯ, ಇಂಟರ್‌ನೆಟ್‌ನಲ್ಲಿ ಐಪಿಎಲ್‌ ವೀಕ್ಷಣೆ, ತಂಡಗಳ ಮೀಡಿಯಾ ಪ್ರಾಯೋಜಕತ್ವ ಇತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡಿ ಬ್ರ್ಯಾಂಡ್‌ ಮೌಲ್ಯಮಾಪನ ಮಾಡಲಾಗಿದೆ.

    ತಂಡಗಳ ಪೈಕಿ ಮುಂಬೈ ಇಂಡಿಯನ್ಸ್‌ (MI) ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್‌ ಮೌಲ್ಯ 87 ದಶಲಕ್ಷ ಡಾಲರ್‌ (725 ಕೋಟಿ ರೂ.), ಚೆನ್ನೈ ಸೂಪರ್‌ ಕಿಂಗ್ಸ್‌ 81 ದಶಲಕ್ಷ ಡಾಲರ್‌ (674 ಕೋಟಿ ರೂ.) ಇದೆ.

    ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) 78.6 ದಶಲಕ್ಷ ಡಾಲರ್‌ (ಅಂದಾಜು 655 ಕೋಟಿ ರೂ.) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) 69.8 ದಶಲಕ್ಷ ಡಾಲರ್‌ (581 ಕೋಟಿ ರೂ.) ಬ್ರ್ಯಾಂಡ್‌ ಮೌಲ್ಯವನ್ನು ಹೊಂದಿದೆ.

    ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಪರಿಚಯಿಸಿದ ನಂತರ ತಂಡಗಳ ಜೊತೆ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.  ಇದನ್ನೂ ಓದಿ: ಅರ್ಜುನ ಪ್ರಶಸ್ತಿಗೆ ಶಮಿ ಹೆಸರು ಶಿಫಾರಸು

    ಯಾವ ತಂಡ ಮೌಲ್ಯ ಎಷ್ಟು?
    1. ಮುಂಬೈ ಇಂಡಿಯನ್ಸ್‌ – 725 ಕೋಟಿ ರೂ.
    2. ಚೆನ್ನೈ ಸೂಪರ್‌ ಕಿಂಗ್ಸ್‌ – 674 ಕೋಟಿ ರೂ.
    3. ಕೋಲ್ಕತ್ತಾ ನೈಟ್‌ ರೈಡರ್ಸ್‌ – 655 ಕೋಟಿ ರೂ.
    4. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 581 ಕೋಟಿ ರೂ.
    5. ಗುಜರಾತ್‌ ಟೈಟಾನ್ಸ್‌ – 545 ಕೋಟಿ ರೂ.
    6. ಡೆಲ್ಲಿ ಕ್ಯಾಪಿಟಲ್ಸ್‌ – 534 ಕೋಟಿ ರೂ.
    7. ರಾಜಸ್ಥಾನ ರಾಯಲ್ಸ್‌ – 520 ಕೋಟಿ ರೂ.
    8 ಸನ್‌ರೈಸರ್ಸ್‌ ಹೈದರಾಬಾದ್‌- 401 ಕೋಟಿ ರೂ.
    9. ಲಕ್ನೋ ಸೂಪರ್‌ ಜೈಂಟ್ಸ್‌ – 392 ಕೋಟಿ ರೂ.
    10. ಪಂಜಾಬ್‌ ಕಿಂಗ್ಸ್‌ – 377 ಕೋಟಿ ರೂ.

     

  • ಟೀಂ ಇಂಡಿಯಾ ವಿರುದ್ಧದ 3 ಸರಣಿಗಳಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ – ಏಡನ್‌ ಮಾರ್ಕ್ರಮ್‌ ನಾಯಕ

    ಟೀಂ ಇಂಡಿಯಾ ವಿರುದ್ಧದ 3 ಸರಣಿಗಳಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ – ಏಡನ್‌ ಮಾರ್ಕ್ರಮ್‌ ನಾಯಕ

    ಪ್ರಿಟೋರಿಯಾ: ಭಾರತ (Team India) ವಿರುದ್ಧದ ಮೂರು ಸರಣಿಗಳಿಗೆ ದಕ್ಷಿಣ ಆಫ್ರಿಕಾ (South Africa) ತಂಡ ಪ್ರಕಟಿಸಿದ್ದು, ಟಿ20 ಮತ್ತು ಏಕದಿನ ಸರಣಿಯಿಂದ ನಾಯಕ ತೆಂಬಾ ಬವುಮಾ ಮತ್ತು ಕಗಿಸೊ ರಬಾಡ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಇಬ್ಬರೂ ಆಟಗಾರರು ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಏಡನ್‌ ಮಾರ್ಕ್ರಮ್‌ (Aiden Markram) ಮುನ್ನೆಡೆಸಲಿದ್ದಾರೆ.

    ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮುಖಾಮುಖಿ 3 ಪಂದ್ಯಗಳ ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. ಬಳಿಕ ನಡೆಯಲಿರುವ ಏಕದಿನ ಸರಣಿಯಿಂದ ಖಾಯಂ ನಾಯಕ ತೆಂಬಾ ಬವುಮಾಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನವನ್ನು ಏಡನ್‌ ಮಾರ್ಕ್ರಮ್‌ ತುಂಬಲಿದ್ದಾರೆ. ಇದನ್ನೂ ಓದಿ: IND vs AUS T20I: ಕೊನೆ ಪಂದ್ಯದಲ್ಲಿ ಭಾರತಕ್ಕೆ ಗೆಲುವು; 4-1 ಅಂತರದಿಂದ ಸರಣಿ ಕೈವಶ

    ಮಾಕ್ರ್ರಾಮ್ ಈ ಹಿಂದೆಯೂ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಉಳಿದಂತೆ ಟಿ20 ಸರಣಿಗೆ ಆಯ್ಕೆಯಾಗಿರುವ ಜೆರಾಲ್ಡ್ ಕೊಯೆಟ್ಜಿ, ಮಾರ್ಕೊ ಯಾನ್ಸನ್ ಮತ್ತು ಲುಂಗಿ ಎನ್‍ಗಿಡಿಗೆ ಮೂರನೇ ಟಿ20 ಮತ್ತು ಏಕದಿನ ಸರಣಿಯಿಂದ ಕೋಕ್ ನೀಡಲಾಗಿದೆ.

    ಮೂರು ಸ್ವರೂಪಗಳಿಗೆ ದಕ್ಷಿಣ ಆಫ್ರಿಕಾದ ತಂಡ
    ಟಿ20 ತಂಡ: ಏಡನ್‌ ಮಾರ್ಕ್ರಮ್‌ (ನಾಯಕ), ಒಟ್ನೀಲ್ ಬಾರ್ಟ್‍ಮನ್, ಮ್ಯಾಥ್ಯೂ ಬ್ರಿಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ, ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ಲಿಜಾದ್ ವಿಲಿಯಮ್ಸ್. ಲುಂಗಿ ಎನ್‍ಗಿಡಿ.

    ಏಕದಿನ ತಂಡ: ಏಡನ್‌ ಮಾರ್ಕ್ರಮ್‌ (ನಾಯಕ), ಒಟ್ನಿಯೆಲ್ ಬಾರ್ಟ್‍ಮ್ಯಾನ್, ಟೋನಿ ಡಿ ಜೊರ್ಜಿ, ನಾಂಡ್ರೆ ಬರ್ಗರ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್, ಲಿಜಾದ್ ವಿಲಿಯಮ್ಸ್.

    ಟೆಸ್ಟ್ ತಂಡ: ತೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‍ಹ್ಯಾಮ್, ಆಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಏಡನ್‌ ಮಾರ್ಕ್ರಮ್‌, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕೀಗನ್ ಪೀಟರ್ಸನ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರೆನ್. ಇದನ್ನೂ ಓದಿ: ಐಪಿಎಲ್ 2024 ಮಿನಿ ಹರಾಜಿನ ಅಧಿಕೃತ ದಿನಾಂಕ ಪ್ರಕಟ – 1166 ಆಟಗಾರರು ನೋಂದಣಿ

  • ಐಪಿಎಲ್ 2024 ಮಿನಿ ಹರಾಜಿನ ಅಧಿಕೃತ ದಿನಾಂಕ ಪ್ರಕಟ – 1166 ಆಟಗಾರರು ನೋಂದಣಿ

    ಐಪಿಎಲ್ 2024 ಮಿನಿ ಹರಾಜಿನ ಅಧಿಕೃತ ದಿನಾಂಕ ಪ್ರಕಟ – 1166 ಆಟಗಾರರು ನೋಂದಣಿ

    ನವದೆಹಲಿ: ಐಪಿಎಲ್ 2024ರ ಮಿನಿ ಹರಾಜು (IPL 2024 Auction) ಪ್ರಕ್ರಿಯೆಗೆ ಅಧಿಕೃತ ದಿನಾಂಕ ಪ್ರಕಟಗೊಂಡಿದೆ. ಡಿ.19ರಂದು ದುಬೈನಲ್ಲಿ ಐಪಿಎಲ್ 2024ರ ಹರಾಜು ಪ್ರಕ್ರಿಯೆ ನಡೆಸುವುದರ ಕುರಿತು ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಮಾಹಿತಿ ನೀಡಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ.

    ಮಿನಿ ಹರಾಜಿಗೆ 1166 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 830 ಭಾರತೀಯರಾಗಿದ್ದಾರೆ. ಉಳಿದ 336 ಆಟಗಾರರು ವಿದೇಶಿಗರಾಗಿದ್ದಾರೆ. 1166 ಆಟಗಾರರು ಐಪಿಎಲ್ ತಂಡ ಸೇರಿಕೊಳ್ಳುವ ಉತ್ಸಾಹ ತೋರಿದ್ದರೂ, 10 ತಂಡಗಳು ಭರ್ತಿ ಮಾಡಬೇಕಿರುವುದು ಕೇವಲ 77 ಸ್ಲಾಟ್ ಮಾತ್ರ. ಹೀಗಾಗಿ ಹರಾಜಿನಲ್ಲಿ ಪಾಲ್ಗೊಂಡಿರುವ 1000ಕ್ಕೂ ಅಧಿಕ ಆಟಗಾರರಿಗೆ ನಿರಾಸೆಯಾಗಲಿದೆ. ಇದನ್ನೂ ಓದಿ: WPL 2024 ಹರಾಜಿಗೆ 165 ಪ್ಲೇಯರ್ಸ್‌ ನೋಂದಣಿ – ಯಾರಾಗ್ತಾರೆ ಈ ಬಾರಿಯ ಟಾಪ್‌ ಪ್ಲೇಯರ್‌?

    ಅಲ್ಲದೇ, ಶಾರ್ಟ್‍ಲಿಸ್ಟ್ ಮಾಡಿದ ಆಟಗಾರರು ಮಾತ್ರ ಅಂತಿಮ ಪಟ್ಟಿಯಲ್ಲಿ ಇರಲಿದ್ದಾರೆ. ಶೀಘ್ರದಲ್ಲೇ ಹರಾಜಿಗೆ ಲಭ್ಯವಿರುವ ಆಟಗಾರರ ಪಟ್ಟಿಯನ್ನು ಐಪಿಎಲ್ ಪ್ರಕಟಿಸಲಿದೆ. ಡಿ.12ರ ವರೆಗೆ ಟ್ರೇಡಿಂಗ್ ವಿಂಡೋ ತೆರೆದಿರಲಿದ್ದು, ಆಟಗಾರರ ಬದಲಾಗುವ ಸಾಧ್ಯತೆ ಕೂಡ ಇದೆ.

    ಈ ಬಾರಿಯ ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಹರಾಜಿನಲ್ಲಿ ಕೇಂದ್ರಬಿಂದು ಆಗಲಿದ್ದಾರೆ. ಟೀಂ ಇಂಡಿಯಾದ ಆಟಗಾರರಾದ ಶಾರ್ದೂಲ್ ಠಾಕೂರ್, ಹರ್ಷಲ್ ಪಟೇಲ್, ಉಮೇಶ್ ಯಾದವ್ ಭಾರಿ ಮೊತ್ತಕ್ಕೆ ತಂಡ ಸೇರಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಈಗಾಗಲೇ ಈ ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ – ಟ್ರಕ್‌ಗೆ ಲಗೇಜ್‌ ಲೋಡ್‌ ಮಾಡಿದ ಆಟಗಾರರು

  • ಮುಂಬೈಗೆ ಮರಳಿರುವುದು ಖುಷಿಯಾಗಿದೆ: ಹಾರ್ದಿಕ್ ಪಾಂಡ್ಯ

    ಮುಂಬೈಗೆ ಮರಳಿರುವುದು ಖುಷಿಯಾಗಿದೆ: ಹಾರ್ದಿಕ್ ಪಾಂಡ್ಯ

    ಮುಂಬೈ: ಐಪಿಎಲ್ 2024ರ ಆವೃತ್ತಿಗೆ (IPL) ಮುಂಬೈ ಇಂಡಿಯನ್ಸ್ (Mumbai Indians) ತಂಡದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಕಳೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕನಾಗಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಇದೀಗ ಮತ್ತೆ ಹಳೆಯ ತಂಡ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಮಿನಿ ಹರಾಜಿಗೂ ಮುನ್ನವೇ ಗುಜರಾತ್ ಟೈಟಾನ್ಸ್ (Gujarat Titans) ತೊರೆದು ಅವರು ಮುಂಬೈ ಸೇರಿದ್ದಾರೆ. ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಪಾಂಡ್ಯ ಅನೇಕ ನೆನಪುಗಳು ಕಣ್ಗಳ ಮುಂದೆ ಹಾದು ಹೋದವು, ನನಗೆ ಮರಳಿ ಮುಂಬೈ ಸೇರಿರುವುದಕ್ಕೆ ಖುಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಐಪಿಎಲ್‍ನ ನೂತನ ಆವೃತ್ತಿಗೂ ಮುನ್ನ ಪಾಂಡ್ಯ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ಹೀಗಾಗಿ ಹಾರ್ದಿಕ್ ಐಪಿಎಲ್ 2024ಕ್ಕೂ ಮುನ್ನ ಮುಂಬೈ ಫ್ರಾಂಚೈಸಿ ಸೇರಲು ಅವರು ಚರ್ಚೆ ನಡೆಸಿದ್ದರು ಎಂದು ಹಿಂದೆ ವರದಿಯಾಗಿತ್ತು. ಪಾಂಡ್ಯ ಅವರನ್ನು 2022ರ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ರಿಲೀಸ್ ಮಾಡಿತ್ತು. ಬಳಿಕ ಹಾರ್ದಿಕ್ ಪಾಂಡ್ಯ ಅವರನ್ನು 2022ರ ಮೆಗಾ ಹರಾಜಿನ ಡ್ರಾಫ್ಟ್‌ನಲ್ಲಿ ಟೈಟಾನ್ಸ್ ಆಯ್ಕೆ ಮಾಡಿತ್ತು.

    ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ಸೇರುವುದಕ್ಕೂ ಮುನ್ನ 7 ಆವೃತ್ತಿಗಳಲ್ಲಿ ಮುಂಬೈ ಪರ ಆಡಿದ್ದರು. 2022ರಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಪ್ರತಿನಿಧಿಸಿತ್ತು. ಟೈಟಾನ್ಸ್ ಪರ ನಾಯಕನಾಗಿ ಪ್ರತಿನಿಧಿಸಿದ್ದ ಪಾಂಡ್ಯ ತನ್ನ ಚೊಚ್ಚಲ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್ ಆಗುವಂತೆ ಮಾಡಿದರು. ಅಲ್ಲದೇ 2023ರಲ್ಲಿ ಗುಜರಾತ್ ದ್ವಿತೀಯ ಸ್ಥಾನ ಪಡೆದಿತ್ತು.

    ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ವಾಪಸಾಗಿದ್ದಕ್ಕೆ ನೀತಾ ಅಂಬಾನಿ ವಿಶೇಷ ಪ್ರತಿಕ್ರಿಯೆ ನೀಡಿದ್ದಾರೆ. ಅವರನ್ನು ಮನೆಗೆ ಮರಳಿ ಸ್ವಾಗತಿಸಲು ನಾವು ಕಾತುರದಿಂದಿದ್ದೇವೆ. ಇದು ಮುಂಬೈ ಇಂಡಿಯನ್ಸ್ ಕುಟುಂಬದೊಂದಿಗೆ ಸಂಭ್ರಮದ ಪುನರ್ಮಿಲನವಾಗಿದೆ. ಮುಂಬೈ ಇಂಡಿಯನ್ಸ್‌ಗೆ ಭವಿಷ್ಯದ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ.