Tag: IPL

  • IPL 2024: ಐಪಿಎಲ್ ಜಾಹೀರಾತಿನಲ್ಲಿ ನಟ ಪ್ರಭಾಸ್ ‘ಕಲ್ಕಿ’ ಲುಕ್

    IPL 2024: ಐಪಿಎಲ್ ಜಾಹೀರಾತಿನಲ್ಲಿ ನಟ ಪ್ರಭಾಸ್ ‘ಕಲ್ಕಿ’ ಲುಕ್

    ಪಿಎಲ್ 2024ರ (IPL) ಜಾಹೀರಾತು ತಯಾರಾಗಿದ್ದು, ದಕ್ಷಿಣದ ಹೆಸರಾಂತ ನಟ ಪ್ರಭಾಸ್ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ತಮ್ಮ ಕಲ್ಕಿ ಸಿನಿಮಾವನ್ನೂ ಅವರು ಪ್ರಮೋಟ್ ಮಾಡಿದ್ದಾರೆ. ಕಲ್ಕಿ ಸಿನಿಮಾದ ಲುಕ್ ಅನ್ನೇ ಜಾಹೀರಾತಿನಲ್ಲೂ (Advertisement) ತಂದಿದ್ದಾರೆ. ಹಾಗಾಗಿ ಸಹಜವಾಗಿಯೇ ಪ್ರಭಾಸ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಒಂದು ಕಡೆ ಐಪಿಎಲ್ ಜಾಹೀರಾತು ಮತ್ತೊಂದು ಕಡೆ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಜೊತೆಗೆ ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಭಾರತದ ಭಾಷೆಗಳಿಗೆ ಅಷ್ಟೇ ಅಲ್ಲ, ಇಂಗ್ಲಿಷ್ ಗೂ ಈ ಸಿನಿಮಾ ಡಬ್ ಆಗಿ ಹಾಲಿವುಡ್ (Hollywood) ನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.

    ಪ್ರಭಾಸ್‌ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್‌ ಹಾಸನ್‌ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.

     

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

  • ಮುಂಬೈ ವಿರುದ್ಧ ರೋಚಕ ಜಯ – ಮೂರನೇ ಸ್ಥಾನಕ್ಕೆ ಜಿಗಿದ ಲಕ್ನೋ

    ಮುಂಬೈ ವಿರುದ್ಧ ರೋಚಕ ಜಯ – ಮೂರನೇ ಸ್ಥಾನಕ್ಕೆ ಜಿಗಿದ ಲಕ್ನೋ

    ಲಕ್ನೋ: ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ರೋಚಕ 4 ವಿಕೆಟ್‌ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 7 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಲಕ್ನೋ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 145 ರನ್‌ ಹೊಡೆದು ಜಯಗಳಿಸಿತು.

    ಕೊನೆಯ 4 ಓವರ್‌ಗಳಲ್ಲಿ ಲಕ್ನೋ ತಂಡ ಗೆಲ್ಲಲು 23 ರನ್‌ ಬೇಕಿತ್ತು. 17 ಓವರ್‌ ಎಸೆದ ಬುಮ್ರಾ (Jasprit Bumrah) 1 ರನ್‌ ನೀಡುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು.

    ಜೆರಾಲ್ಡ್ ಕೋಟ್ಜಿ 18ನೇ ಓವರ್‌ನಲ್ಲಿ 9 ರನ್‌ ನೀಡಿ ಟರ್ನರ್‌ ಅವರನ್ನು ಬೌಲ್ಡ್‌ ಮಾಡಿದರು. ಕೊನೆಯ 12 ಎಸೆತಗಳಲ್ಲಿ 13 ರನ್‌ ಬೇಕಿತ್ತು. ಹಾರ್ದಿಕ್‌ ಎಸೆದ ಮೊದಲ ಬಾಲಿಗೆ ಬದೌನಿ ರನೌಟ್‌ ಆದರು. ಈ ಓವರ್‌ನಲ್ಲಿ 10 ರನ್‌ ಬರುವ ಮೂಲಕ ಪಂದ್ಯ ಮುಂಬೈಯಿಂದ ಜಾರಿತು. ಕೊನೆಯ ಓವರ್‌ನ ಮೊದಲ ಎಡು ಎಸೆತಗಳಲ್ಲಿ ಪೂರನ್‌ 3 ರನ್‌ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

    ಲಕ್ನೋ ಪರ ಸ್ಟೊಯಿನೆಸ್‌ 62 ರನ್‌(45 ಎಸೆತ, 7 ಬೌಂಡರಿ, 2 ಸಿಕ್ಸ್‌), ಕೆಎಲ್‌ ರಾಹುಲ್‌ 28 ರನ್‌(22 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು. ಮುಂಬೈ ಪರ ಇಶನ್‌ ಕಿಶನ್‌ 32 ರನ್‌ (36 ಎಸೆತ, 3 ಬೌಂಡರಿ), ನೆಹಾಲ್ ವಧೇರಾ 46 ರನ್‌(41 ಎಸೆತ, 4 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 35 ರನ್‌ ( 18 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದರು.

  • ಡೆಲ್ಲಿ ವಿರುದ್ಧ ಆಲ್‌ರೌಂಡರ್‌ ಪ್ರದರ್ಶನ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

    ಡೆಲ್ಲಿ ವಿರುದ್ಧ ಆಲ್‌ರೌಂಡರ್‌ ಪ್ರದರ್ಶನ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

    ಕೋಲ್ಕತ್ತಾ: ಆರಂಭದಲ್ಲಿ ಬೌಲರ್‌ ನಂತರ ಬ್ಯಾಟರ್‌ಗಳ ಅತ್ಯುತ್ತಮ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 9 ವಿಕೆಟ್‌ ನಷ್ಟಕ್ಕೆ 153 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಡೆಲ್ಲಿ ಇನ್ನೂ 21 ಎಸೆತ ಬಾಕಿ ಇರುವಂತೆಯೇ 157 ರನ್‌ ಹೊಡೆದು ಜಯಗಳಿಸಿತು.

    ಕೋಲ್ಕತ್ತಾ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ (Phil Salt) ಆರಂಭದಲ್ಲೇ ಅಬ್ಬರಿಸಲು ಆರಂಭಿಸಿದ್ದರು. 68 ರನ್‌(33 ಎಸೆತ, 7 ಬೌಂಡರಿ, 5 ಸಿಕ್ಸರ್‌) ಸಿಡಿಸಿ ಔಟಾದರು. ಕೊನೆಯಲ್ಲಿ ಮುರಿಯದ 4ನೇ ವಿಕೆಟಿಗೆ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ 43 ಎಸೆತಗಳಲ್ಲಿ 57 ರನ್‌ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಶ್ರೇಯಸ್‌ ಅಯ್ಯರ್‌ ಔಟಾಗದೇ 33 ರನ್‌(23 ಎಸೆತ, 3 ಬೌಂಡರಿ, 1 ಸಿಕ್ಸ್‌) ವೆಂಕಟೇಶ್‌ ಅಯ್ಯರ್ ಔಟಾಗದೇ 26 ರನ್‌(23‌ ಎಸೆತ, 2 ಬೌಂಡರಿ,1 ಸಿಕ್ಸ್‌) ಹೊಡೆದರು.  ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ – ಊಟಿ, ಕೊಡೈಕೆನಾಲ್‌ಗೆ ಹೋಗಬೇಕಾದ್ರೆ ಇ-ಪಾಸ್‌ ಕಡ್ಡಾಯ

    ಡೆಲ್ಲಿ ಪರ ನಾಯಕ ರಿಷಭ್‌ ಪಂತ್‌ 27 ರನ್ ಹೊಡೆದರೆ ಕೊನೆಯಲ್ಲಿ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಔಟಾಗದೇ 35 ರನ್‌ (26 ಎಸೆತ, 5 ಬೌಂಡರಿ, 1 ಸಿಕ್ಸರ್‌) ಸಿಡಿಸಿದ ಪರಿಣಾಮ ತಂಡ 150 ರನ್‌ಗಳ ಗಡಿಯನ್ನು ದಾಟಿತು.

    ಕೋಲ್ಕತ್ತಾ ಪರ ವರುಣ್‌ ಚಕ್ರವರ್ತಿ 16 ರನ್‌ ನೀಡಿ 3 ವಿಕೆಟ್‌ ಕಿತ್ತರೆ ವೈಭವ್‌ ಅರೋರಾ ಮತ್ತು ಹರ್ಷಿತ್‌ ರಾಣಾ ತಲಾ 2 ವಿಕೆಟ್‌ ಪಡೆದರು.

  • ಮುಂಬೈ ಪೊಲೀಸರಿಂದ ನಟಿ ತಮನ್ನಾಗೆ ಸಮನ್ಸ್

    ಮುಂಬೈ ಪೊಲೀಸರಿಂದ ನಟಿ ತಮನ್ನಾಗೆ ಸಮನ್ಸ್

    ಕ್ರಮವಾಗಿ ಐಪಿಎಲ್ (IPL) ಪಂದ್ಯವನ್ನು ಪ್ರಸಾರ ಮಾಡಿದ್ದಕ್ಕಾಗಿ ದಕ್ಷಿಣದ ಹೆಸರಾಂತ ತಾರೆ ತಮನ್ನಾ ಭಾಟಿಯಾಗೆ (Tamannaah Bhatia) ಮುಂಬೈ ಸೈಬರ್ ಪೊಲೀಸ್ ಸಮನ್ಸ್ (Summons) ಜಾರಿ ಮಾಡಿದ್ದಾರೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

    2023ರಲ್ಲಿ ಅಕ್ರಮವಾಗಿ ಐಪಿಎಲ್ ಪಂದ್ಯ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದ್ದು, ವಯಾಕಾಮ್‌ಗೆ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಉಂಟುಮಾಡಿದ ಪ್ರಕರಣ ಇದಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ನಟ ಸಂಜಯ್ ದತ್ ಅವರಿಗೆ ಸಮನ್ಸ್ ನೀಡಲಾಗಿತ್ತು. ವಿದೇಶ ಪ್ರವಾಸ ಹಿನ್ನಲೆ ವಿಚಾರಣೆಯಿಂದ ವಿನಾಯಿತಿ ಕೇಳಿದ್ದರು ಸಂಜಯ್ ದತ್.

     

    ಐಪಿಎಲ್ ಪಂದ್ಯ ಪ್ರಸಾರದ ಹಕ್ಕನ್ನು ಹೊಂದಿರುವ ವಯಾಕಾಮ್, ಈ ನಟ ನಟಿಯರ ವಿರುದ್ಧ ದೂರು ನೀಡಿತ್ತು. ದೂರಿಗೆ ಸಂಬಂಧಿಸಿದಂತೆ ಈ ಹಿಂದೆ ಸಂಜಯ್ ದತ್ ಅವರಿಗೆ, ಈಗ ತಮನ್ನಾಗೆ ನೋಟಿಸ್ ಜಾರಿ ಮಾಡಿದೆ.

  • ಆ ಕಡೆ ಐಪಿಎಲ್, ಈ ಕಡೆ ಸಿನಿಮಾ: ಬ್ಯುಸಿಯಾದ ಪ್ರೀತಿ ಜಿಂಟಾ

    ಆ ಕಡೆ ಐಪಿಎಲ್, ಈ ಕಡೆ ಸಿನಿಮಾ: ಬ್ಯುಸಿಯಾದ ಪ್ರೀತಿ ಜಿಂಟಾ

    ರೋಬ್ಬರಿ ಆರು ವರ್ಷಗಳ ನಂತರ ಪ್ರೀತಿ ಜಿಂಟಾ (Preity Zinta) ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳಿಂದ ವಿದೇಶದಲ್ಲೇ ಬೀಡು ಬಿಟ್ಟಿರುವ ಪ್ರೀತಿ, ಈಗ ಐಪಿಎಲ್ (IPL) ಪಂದ್ಯಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಒಂದು ಕಡೆ ಐಪಿಎಲ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಪ್ರೀತಿ ಜಿಂಟಾ ಮದುವೆಯಾಗಿ ವಿದೇಶದಲ್ಲಿ ಸೆಟಲ್ ಆದ ನಂತರ ಸಿನಿಮಾ ರಂಗವನ್ನೇ ಮರೆತಿದ್ದರು. ಇದೀಗ ಸನ್ನಿ ಡಿಯೋಲ್ ಜೊತೆ ಡ್ಯುಯೇಟ್ ಹಾಡೋಕೆ ನಟಿ ಹೊರಟಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಹುಮ್ಮಸ್ಸು ಡಬಲ್ ಆಗಿದೆ.

    ‘ಗದರ್ 2’ (Gadar 2) ಮೂಲಕ ಸಕ್ಸಸ್ ಕಂಡಿರುವ ಸನ್ನಿ ಡಿಯೋಲ್ (Sunny Deol) ಜೊತೆ ಪ್ರೀತಿ ಜಿಂಟಾ ಜೊತೆಯಾಗಿ ನಟಿಸುತ್ತಿದ್ದಾರೆ. ಹೊಸ ಸಿನಿಮಾಗೆ ‘ಲಾಹೋರ್ 1947’ ಎಂದು ಟೈಟಲ್ ಇಡಲಾಗಿದೆ. ಚಿತ್ರಕ್ಕೆ ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಟ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.

     

    ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾಗೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಎರಡ್ಮೂರು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈಗ ‘ಲಾಹೋರ್ 1947’ (Lahore 1947) ಚಿತ್ರದ ಮೂಲಕ ಮತ್ತೆ ಈ ಜೋಡಿ ಜೊತೆಯಾಗುತ್ತಿದ್ದಾರೆ. ‘ಗದರ್ 2’ ಚಿತ್ರದ ಸಕ್ಸಸ್ ಸನ್ನಿ ಡಿಯೋಲ್ ಕೆರಿಯರ್ ಮರುಜೀವ ನೀಡಿದೆ. ಹಾಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಸಂಪತ್ತಿನ ಮರು ಹಂಚಿಕೆ: ಆರ್‌ಆರ್‌, ಕೆಕೆಆರ್‌ನಿಂದ 4 ಅಂಕ ತೆಗೆದು ಉಳಿದ ತಂಡಗಳಿಗೆ ಹಂಚಿದಂತೆ – ವೆಂಕಟೇಶ್‌ ಪ್ರಸಾದ್‌

    ಸಂಪತ್ತಿನ ಮರು ಹಂಚಿಕೆ: ಆರ್‌ಆರ್‌, ಕೆಕೆಆರ್‌ನಿಂದ 4 ಅಂಕ ತೆಗೆದು ಉಳಿದ ತಂಡಗಳಿಗೆ ಹಂಚಿದಂತೆ – ವೆಂಕಟೇಶ್‌ ಪ್ರಸಾದ್‌

    ಬೆಂಗಳೂರು: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ (Congress Manifesto) ಘೋಷಣೆ ಮಾಡಿದ ಸಂಪತ್ತಿನ ಮರು ಹಂಚಿಕೆಯನ್ನು (Wealth Redistribution) ಟೀಂ ಇಂಡಿಯಾದ (Team India) ಮಾಜಿ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ (Venkatesh Prasad) ಐಪಿಎಲ್‌ ಅಂಕಪಟ್ಟಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.

    ಶ್ರೀಮಂತರ ಸಂಪತ್ತನ್ನು ಬಡವರಿಗೆ (Poor) ಮರುಹಂಚಿಕೆ ಮಾಡುವುದಾಗಿ ರಾಜಕೀಯ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಬಡವರನ್ನು ನಿಜವಾಗಿಯೂ ಮೇಲಕ್ಕೆ ಎತ್ತಬೇಕು. ಆದರೆ ಈ ಚಿಂತನೆಯ ಪ್ರಕ್ರಿಯೆಯು ತುಂಬಾ ಕರುಣಾಜನಕವಾಗಿದೆ. ನಾವು ರಾಜಸ್ಥಾನ ರಾಯಲ್ಸ್‌ನಿಂದ 4 ಅಂಕ, ಕೋಲ್ಕತ್ತಾ ನೈಟ್‌ ರೈಡರ್ಸ್‌, ಸನ್‌ ರೈಸರ್ಸಸ್‌ ಹೈದಾಬಾದ್‌ನಿಂದ 4 ಅಂಕಗಳನ್ನ ತೆಗೆದು ಕೆಳಗಿನ 3 ತಂಡಗಳಿಗೆ ಮರು-ಹಂಚಿಕೆ ಮಾಡಿದರೆ ಅವರು ಪ್ಲೇ ಆಫ್‌ಗೆ ಬರಬಹುದು ಎಂದು ಟ್ವೀಟ್‌ ಮಾಡಿ ಕಾಲೆಳೆದಿದ್ದಾರೆ.  ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಗೆಲುವಿನ ಖಾತೆ ತೆರೆದ ಬಿಜೆಪಿ!

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳಿರುವವರಿಗೆ ಮರುಹಂಚಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆರೋಪಿಸಿದ ಒಂದು ದಿನದ ನಂತರ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಧರ್ಮದ ತಾಯಂದಿರು ಗಂಡ-ಮಕ್ಕಳನ್ನ ಕಳೆದುಕೊಳ್ತಾರೆ: ಯತೀಂದ್ರ

    ಏಪ್ರಿಲ್ 6 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ದೇಶದಲ್ಲಿನ ಜನರ ನಡುವೆ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸು ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸಲಿದೆ ಎಂದು ಹೇಳಿದ ನಂತರ ಪ್ರಧಾನಿಯವರ ಈ ಹೇಳಿಕೆಯು ಹೊರಬಿದ್ದಿದೆ.

     

    ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತರಿಗೆ ಎಷ್ಟು ಜನರು ಸೇರಿದ್ದಾರೆ ಎಂಬುದನ್ನು ನಿರ್ಧರಿಸಲು ನಾವು ಮೊದಲು ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸುತ್ತೇವೆ. ನಂತರ ನಾವು ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸುತ್ತೇವೆ. ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಸಮೀಕ್ಷೆಯ ನಂತರ ಜನರಿಗೆ ಸರಿಯಾದ ಪಾಲು ನೀಡುವುದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ ಎಂದು ರಾಹುಲ್‌ ಗಾಂಧಿ (Rahul Gandhi) ಹೈದರಾಬಾದ್‌ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ತಿಳಿಸಿದ್ದರು.

     

  • ಪಂಜಾಬ್‌ ವಿರುದ್ಧ 3 ವಿಕೆಟ್‌ ಜಯ – 6ನೇ ಸ್ಥಾನಕ್ಕೆ ಜಿಗಿತ ಗುಜರಾತ್‌

    ಪಂಜಾಬ್‌ ವಿರುದ್ಧ 3 ವಿಕೆಟ್‌ ಜಯ – 6ನೇ ಸ್ಥಾನಕ್ಕೆ ಜಿಗಿತ ಗುಜರಾತ್‌

    ಮುಲ್ಲನಪುರ: ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಗುಜರಾತ್‌ ಟೈಟಾನ್ಸ್‌ (Gujarat Titans) ಪಂಜಾಬ್‌ ಕಿಂಗ್ಸ್‌(Punjab Kings) ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಪಂಜಾಬ್‌ 20 ಓವರ್‌ಗಳಲ್ಲಿ 142 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 146 ರನ್‌ ಹೊಡೆದು ಜಯಗಳಿಸಿತು.

    ಈ ಪಂದ್ಯವನ್ನು ಗೆಲ್ಲುವ ಮೂಲಕ 8ನೇ ಸ್ಥಾನದಲ್ಲಿದ್ದ ಗುಜರಾತ್‌ 6ನೇ ಸ್ಥಾನಕ್ಕೆ ಜಿಗಿದಿದೆ.

    ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್‌ 35 ರನ್‌ (29 ಎಸೆತ, 5 ಬೌಂಡರಿ), ಸಾಯಿ ಸುದರ್ಶನ್‌ 31 ರನ್‌(34 ಎಸೆತ, 3 ಬೌಂಡರಿ) ಕೊನೆಯಲ್ಲಿ ರಾಹುಲ್‌ ತೆವಾಟಿಯ ಔಟಾಗದೇ 36 ರನ್‌(18 ಎಸೆತ, 7 ಬೌಂಡರಿ) ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು. ಪಂಜಾಬ್‌ ಪರ ಹರ್ಷಲ್‌ ಪಟೇಲ್‌ 3 ವಿಕೆಟ್‌, ಲಿವಿಂಗ್‌ಸ್ಟೋನ್‌ 2 ವಿಕೆಟ್‌ ಕಿತ್ತರು.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಉತ್ತಮ ಆರಂಭ ಪಡೆದಿತ್ತು. ಮೊದಲ ವಿಕೆಟಿಗೆ 52 ರನ್‌ ಜೊತೆಯಾಟ ಬಂದಿತ್ತು. ನಂತರ ನಿರಂತರ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಇದನ್ನೂ ಓದಿ: IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    ಪಂಜಬ್‌ ಪರ ಪ್ರಭ್‌ಸಿಮ್ರಾನ್‌ ಸಿಂಗ್‌ 35 ರನ್‌ ( 21 ಎಸೆತ, 3 ಬೌಂಡರಿ, 3 ಸಿಕ್ಸರ್‌), ಹರ್‌ಪ್ರೀತ್‌ ಬ್ರಾರ್‌ 29 ರನ್‌ (12 ಎಸೆತ, 4 ಬೌಂಡರಿ, 1 ಸಿಕ್ಸರ್‌) ಸಿಡಿಸಿದ ಪರಿಣಾಮ ತಂಡದ ಮೊತ್ತ 140 ರನ್‌ಗಳ ಗಡಿ ದಾಟಿತು. ಗುಜರಾತಿನ ಸಾಯ್‌ ಕಿಶೋರ್‌ 4 ವಿಕೆಟ್‌ ಕಿತ್ತರೆ ನೂರ್‌ ಅಹ್ಮದ್‌ ಮತ್ತು ಮೋಹಿತ್‌ ಶರ್ಮಾ ತಲಾ 2 ವಿಕೆಟ್‌ ಪಡೆದರು.

  • ಟ್ರಾವಿಸ್ ಸ್ಪೋಟಕ ಬ್ಯಾಟಿಂಗ್‌ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 67 ರನ್‌ಗಳ ಭರ್ಜರಿ ಜಯ

    ಟ್ರಾವಿಸ್ ಸ್ಪೋಟಕ ಬ್ಯಾಟಿಂಗ್‌ – ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 67 ರನ್‌ಗಳ ಭರ್ಜರಿ ಜಯ

    ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದೆ ಡೆಲ್ಲಿ ಕ್ಯಾಪಿಟಲ್ಸ್  (Delhi Capitals) ಹಾಗೂ ಸನ್​ ರೈಸರ್ಸ್​ ಹೈದರಾಬಾದ್ (Sunrisers Hyderabad) ತಂಡದ ನಡುವಿನ ಐಪಿಎಲ್‌ ಪಂದ್ಯದಲ್ಲಿ ಹೈದರಾಬಾದ್ 67 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಸ್ಪೋಟಕ ಬ್ಯಾಟಿಂಗ್‌ನಿಂದ 6 ಓವರ್‌ಗಳಲ್ಲಿ 125 ರನ್‌ಗಳನ್ನು ಕಲೆಹಾಕಿ ಉತ್ತಮ ಆರಂಭ ಪಡೆದುಕೊಂಡಿತು. ತಂಡದ ಪರ ಟ್ರಾವಿಸ್ ಹೆಡ್ 32 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದರೆ, ಶಹಬಾಜ್ 29 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 59 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ ಎದುರಾಳಿ ತಂಡದ ಗೆಲುವಿಗೆ 267 ರನ್‌ಗಳ ಗುರಿ ನೀಡಿತು. ಇದನ್ನೂ ಓದಿ: ರನ್‌ ಹೊಳೆಯಲ್ಲಿ ತೇಲಾಡಿದ ಸನ್‌ ರೈಸರ್ಸ್‌ – ಒಂದೇ ಇನ್ನಿಂಗ್ಸ್‌ನಲ್ಲಿ 4 ದಾಖಲೆ ಉಡೀಸ್‌!

    ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ 19.1 ಓವರ್‌ಗಳಲ್ಲಿ 199 ರನ್‌ಗಳನ್ನು ಕಲೆ ಹಾಕಿ ಹೈದರಾಬಾದ್ ತಂಡಕ್ಕೆ ಶರಣಾಯಿತು.

    ಡೆಲ್ಲಿ ಕ್ಯಾಪಿಟಲ್ಸ್‌ ಪರ 18 ಎಸೆತಗಳಲ್ಲಿ ಜಾಕ್ ಫ್ರೇಸರ್ ಮೆಕ್‌ಗುರ್ಕ್ 7 ಸಿಕ್ಸರ್‌ ಹಾಗೂ 5 ಬೌಂಡರಿ ಸಿಡಿಸಿ 65 ರನ್‌ ಕಲೆ ಹಾಕಿ ವಿಕೆಟ್‌ ಒಪ್ಪಿಸಿದರು. ರಿಷಬ್ ಪಂತ್ 35 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಬೌಂಡರಿಗಳ ನೆರವಿನಿಂದ 44 ರನ್‌ ಕಲೆ ಹಾಕಿ ಪೆವಿಲಿಯನ್‌ಗೆ ಮರಳಿದರು. ಅಭಿಷೇಕ್ ಪೊರೆಲ್ 22 ಎಸೆತಗಳಲ್ಲಿ 7 ಬೌಂಡರಿ ಸಿಡಿಸಿ 1 ಸಿಕ್ಸರ್‌ ನೆರವಿನಿಂದ 42 ರನ್‌ ಗಳಿಸಿ ಔಟಾದರು. ಉಳಿದಂತೆ ಪೃಥ್ವಿ ಶಾ 16, ಟ್ರಿಸ್ಟಾನ್ ಸ್ಟಬ್ಸ್ 10 ರನ್‌ ಕಲೆ ಹಾಕಿ ಪೆವಿಲಿಯನ್‌ಗೆ ಮರಳಿದರು.

    ಎಸ್‌ಆರ್‌ಹೆಚ್‌ ಪರ ಅಭಿಷೇಕ್‌ ಶರ್ಮಾ 12 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 46 ರನ್‌ ಕಲೆಹಾಕಿ ಔಟಾದರು. ನಿತೀಶ್‌ ಕುಮಾರ್‌ ರೆಡ್ಡಿ 27 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 2 ಬೌಂಡರಿ ನೆರವಿನಿಂದ 37 ರನ್‌ ಗಳಿಸಿ ಔಟಾದರು. ಹೆನ್ರಿಚ್ ಕ್ಲಾಸೆನ್ 15, ಅಬ್ದುಲ್ ಸಮದ್ 13 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

    ಡೆಲ್ಲಿ ಪರ ಕುಲ್‌ದೀಪ್‌ ಯಾದವ್‌ 4 ಓವರ್‌ಗಳಲ್ಲಿ 55 ರನ್‌ ನೀಡಿ 4 ವಿಕೆಟ್‌, ಮುಕೇಶ್ ಕುಮಾರ್ 4 ಓವರ್‌ಗಳಲ್ಲಿ 57 ರನ್‌ ನೀಡಿ 1 ವಿಕೆಟ್‌ ಹಾಗೂ ಅಕ್ಸರ್‌ ಪಟೇಲ್‌ 4 ಓವರ್‌ಗಳಲ್ಲಿ 29 ರನ್‌ ನೀಡಿ 1 ವಿಕೆಟ್‌ ಉರುಳಿಸಿದರು. ಇದನ್ನೂ ಓದಿ: IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್‌ ರೈಸರ್ಸ್‌

  • ರಾಹುಲ್‌ ಅಬ್ಬರದ ಆಟ – ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್‌ಗಳ ಭರ್ಜರಿ ಜಯ

    ರಾಹುಲ್‌ ಅಬ್ಬರದ ಆಟ – ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್‌ಗಳ ಭರ್ಜರಿ ಜಯ

    ಲಕ್ನೋ: ಇಲ್ಲಿನ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 34ನೇ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್‌ಜೈಂಟ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ, ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಅಜೇಯ ಅರ್ಧಶತಕ ಮತ್ತು ಮಹೇಂದ್ರ ಸಿಂಗ್ ಸ್ಫೋಟಕ ಆಟದಿಂದ ಎದುರಾಳಿ ತಂಡ ಲಕ್ನೋ ಸೂಪರ್‌ಜೈಂಟ್ಸ್‌ಗೆ 177 ರನ್‌ಗಳ ಗುರಿ ನೀಡಿತು.

    ಈ ಗುರಿಯನ್ನು ಬೆನ್ನಟ್ಟಿದ ಲಕ್ನೋ ತಂಡ, 19 ಓವರ್‌ ಗಳಲ್ಲಿ 180 ರನ್‌ ಗಳಿಸಿ ಗೆಲವು ಸಾಧಿಸಿತು. ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಪವರ್‌ಪ್ಲೇ ಅಂತ್ಯಕ್ಕೆ ಲಕ್ನೋ ವಿಕೆಟ್ ನಷ್ಟವಿಲ್ಲದೆ 54 ರನ್ ದಾಖಲಿಸಿತು.

    ಬಳಿಕ ಕ್ವಿಂಟನ್ ಡಿ ಕಾಕ್ 43 ಎಸೆತಗಳಲ್ಲಿ 54 ರನ್‌ ಗಳಿಸಿದರು. ಕೆ.ಎಲ್‌ ರಾಹುಲ್‌ 53 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 9 ಬೌಂಡರಿ ನೆರವಿನಿಂದ 82 ರನ್‌ ಗಳಿಸಿ ಔಟಾದರು. ನಂತರ ಅಖಾಡಕ್ಕಿಳಿದ ನಿಕೋಲಸ್ ಪೂರನ್ 12 ಎಸೆತಗಳಲ್ಲಿ 23, ಮಾರ್ಕಸ್ ಸ್ಟೊಯಿನಿಸ್ 8 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.

    ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟ್‌ ಬೀಸಿದ ಅಜಿಂಕ್ಯ ರಹಾನೆ ಮತ್ತು ರಚಿನ್ ರವೀಂದ್ರ ದೊಡ್ಡ ಆರಂಭ ನೀಡಲಿಲ್ಲ. ತಂಡದ ಮೊತ್ತ 4 ರನ್‌ಗಳಾಗಿದ್ದಾಗ ರಚಿನ್ ರವೀಂದ್ರ ಸೊನ್ನೆಗೆ ಔಟಾದರು. ನಂತರ ಬಂದ ನಾಯಕ ಋತುರಾಜ್ ಗಾಯಕ್ವಾಡ್ 13 ಎಸೆತಗಳಲ್ಲಿ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಶಿವಂ ದುಬೆ 3 ರನ್, ಸಮೀರ್ ರಿಜ್ವಿ 1 ರನ್ ಗಳಿಸಿ ಬೇಗನೆ ಪೆವಿಲಿಯನ್‌ಗೆ ಮರಳಿದರು.

    ಬಳಿಕ ಕ್ರೀಸ್‌ಗೆ ಬಂದ ರವೀಂದ್ರ ಜಡೇಜಾ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ಅಜೇಯ 57 ರನ್ ಬಾರಿಸಿದರು. ಮೊಯಿನ್ ಅಲಿ 20 ಎಸೆತಗಳಲ್ಲಿ 3 ಸಿಕ್ಸರ್ ಮೂಲಕ 30 ರನ್ ಗಳಿಸಿದರೆ, ಮಾಜಿ ನಾಯಕ ಎಂಎಸ್ ಧೋನಿ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 28 ರನ್ ಬಾರಿಸಿ ಅಜೇಯರಾಗಿ ಉಳಿದರು.

    ಇನ್ನು ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕೃನಾಲ್ ಪಾಂಡ್ಯ 3 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್, ಯಶ್ ಠಾಕೂರ್, ರವಿ ಬಿಷ್ಣೋಯಿ ಮತ್ತು ಮಾರ್ಕಸ್ ಸ್ಟೋಯಿನಿಸ್ ತಲಾ ಒಂದೊಂದು ವಿಕೆಟ್ ಪಡೆದರು.

  • IPL 2024: ಲಕ್ನೋ ವಿರುದ್ಧ ಕೆಕೆಆರ್‌ಗೆ 8 ವಿಕೆಟ್‍ಗಳ ಜಯ

    IPL 2024: ಲಕ್ನೋ ವಿರುದ್ಧ ಕೆಕೆಆರ್‌ಗೆ 8 ವಿಕೆಟ್‍ಗಳ ಜಯ

    ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್‍ನಲ್ಲಿ ನಡೆಯುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಮತ್ತು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಡುವಿನ ಐಪಿಎಲ್ (IPL) ಪಂದ್ಯದಲ್ಲಿ ಕೋಲ್ಕತ್ತಾ ತಂಡ 8 ವಿಕೆಟ್‍ಗಳ ಜಯಗಳಿಸಿದೆ.

    ಲಕ್ನೋ ನೀಡಿದ 162 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡ 15.4 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಭರ್ಜರಿ ಜಯಗಳಿಸಿದೆ.

    ಆರಂಭಿಕ ಆಟಗಾರ ಸುನಿಲ್ ನರೈನ್ ಅವರು 6 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು. ಬಳಿಕ ಆರು ಎಸೆತಗಳಲ್ಲಿ ಏಳು 7 ಗಳಿಸಿ ರಘುವಂಶಿ ಔಟಾದರು. ಬಳಿಕ ಕಣಕ್ಕಿಳಿದ ಪಿಲ್ ಸಾಲ್ಟ್ 47 ಎಸೆತಗಳಿಗೆ 89 ಹಾಗೂ ಶ್ರೇಯಸ್ ಅಯ್ಯರ್ 38 ಎಸೆತಗಳಿಗೆ 38 ರನ್‍ಗಳನ್ನು ಕಲೆಹಾಕಿ ತಂಡವನ್ನು ಗೆಲುವಿನ ದಡ ತಲುಪಿಸಿದರು.

    ಟಾಸ್ ಗೆದ್ದು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಬೀಸಿದ ಲಕ್ನೋ ಸೂಪರ್‌‌ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‍ಗೆ 161 ರನ್ ಕಲೆಹಾಕಿತ್ತು. ಲಕ್ನೋ ಪರ ನಿಕೋಲಸ್ ಪುರನ್ 32 ಎಸೆತಗಳಲ್ಲಿ ಎರಡು 4 ಹಾಗೂ ನಾಲ್ಕು 6 ನೆರವಿನಿಂದ ಗರಿಷ್ಠ 45 ರನ್ ಗಳಿಸಿದರೆ, ನಾಯಕ ಕೆಎಲ್ ರಾಹುಲ್ 27 ಎಸೆತಗಳಲ್ಲಿ 39 ರನ್ ಗಳಿಸಿದ್ದರು.

    5 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 10 ರನ್ ಗಳಿಸಿ ಮಾರ್ಕಸ್ ಸ್ಟೊಯಿನಿಸ್ ಔಟಾದರು. ಬಳಿಕ ಕ್ರೀಸ್‍ಗೆ ಬಂದ ನಿಕೋಲಸ್ 45 ರನ್‍ಗಳ ಕಲೆಹಾಕಿ ತಂಡದ ಮೊತ್ತ ಹೆಚ್ಚಿಸಿದರು. ದೀಪಕ್ ಹೂಡಾ ಹತ್ತು ಎಸೆತಗಳಿಗೆ 8 ರನ್ ಗಳಿಸಿ ಪೆವಿಲಿಯನ್‍ಗೆ ಮರಳಿದರು. ಆಯುಷ್ ಬಡೋನಿ 27 ಎಸೆತಗಳಲ್ಲಿ ಎರಡು ಫೋರ್ ಹಾಗೂ ಒಂದು ಸಿಕ್ಸ್ ನೆರವಿನಿಂದ 29 ರನ್ ಗಳಿಸಿದರು. ಕ್ವಿಂಟನ್ ಡಿ ಕಾಕ್ ಎಂಟು ಎಸೆತಗಳಲ್ಲಿ 10ರನ್ ಗಳಿಸಿ ಔಟಾದರು. ಅರ್ಷದ್ ಖಾನ್ ನಾಲ್ಕು ಎಸೆತಗಳಲ್ಲಿ ಕೇವಲ 5ರನ್ ಮಾತ್ರ ಗಳಿಸಿದರು.