Tag: IPL

  • ಕೊಹ್ಲಿಗಾಗಿ ಫೋಟೋ ಸಮೇತ ಸ್ಪೆಷಲ್ ಸಂದೇಶ ಕಳುಹಿಸಿದ ಅನುಷ್ಕಾ ಶರ್ಮಾ

    ಕೊಹ್ಲಿಗಾಗಿ ಫೋಟೋ ಸಮೇತ ಸ್ಪೆಷಲ್ ಸಂದೇಶ ಕಳುಹಿಸಿದ ಅನುಷ್ಕಾ ಶರ್ಮಾ

    ಬೆಂಗಳೂರು: ಇಂದೋರ್ ನಲ್ಲಿ ಸೋಮವಾರದ ಆರ್ ಸಿಬಿ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಪತಿ ಕೊಹ್ಲಿ ಹೆಸರು ಹೊಂದಿರುವ ಟೀ ಶರ್ಟ್ ಧರಿಸಿರುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಬೆಂಬಲ ನೀಡಿದ್ದಾರೆ.

    ಇಂದೋರ್ ನಲ್ಲಿ ನಡೆಯುತ್ತಿರುವ ಪಂದ್ಯ ಆರ್ ಸಿಬಿ ತಂಡಕ್ಕೆ ಬಹುಮುಖ್ಯವಾದ ಪಂದ್ಯವಾಗಿದ್ದು, ಉತ್ತಮ ಪ್ರದರ್ಶನ ನೀಡಲು ಬೆಂಬಲ ಸೂಚಿಸಿ ಫೋಟೋ ಪೋಸ್ಟ್ ಮಾಡಿದ್ದಾರೆ.

    https://www.instagram.com/p/BiwpAjPAaa9/?utm_source=ig_embed

    ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವು ಪಡೆದಿದ್ದ ಆರ್ ಸಿಬಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿತ್ತು. ಪಂಜಾಬ್ ವಿರುದ್ಧ ಪಂದ್ಯದಲ್ಲೂ ಗೆಲ್ಲಲೇ ಬೇಕಾದ ಒತ್ತಡ ಎದುರಿಸುತ್ತಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ಪರ ಉತ್ತಮ ಜೊತೆಯಾಟ ನೀಡಿದ ನಾಯಕ ಕೊಹ್ಲಿ ಹಾಗೂ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ತಂಡಕ್ಕೆ ಸ್ಫೂರ್ತಿ ನೀಡಿದೆ. ಸರಣಿಯಲ್ಲಿ ಸತತ ಸೋಲುಗಳ ಮೂಲಕ ನೀರಸ ಪ್ರದರ್ಶನ ನೀಡಿದ ಆರ್ ಸಿಬಿ ತಂಡದ ಡೆಲ್ಲಿ ವಿರುದ್ಧ ಗೆಲುವಿನ ಬಳಿಕ ಆಡಿರುವ 11 ಪಂದ್ಯದಲ್ಲಿ 4 ರಲ್ಲಿ ಗೆಲುವು ಪಡೆದು 8 ಅಂಕಗಳೊಂದಿಗೆ 7ನೇ ಸ್ಥಾನ ಪಡೆದಿದೆ.

  • ಆನ್ ಫೀಲ್ಡ್ ನಲ್ಲೇ ರವೀಂದ್ರ ಜಡೇಜಾಗೆ ಚಮಕ್ ಕೊಟ್ಟ ಧೋನಿ! -ವಿಡಿಯೋ ನೋಡಿ

    ಆನ್ ಫೀಲ್ಡ್ ನಲ್ಲೇ ರವೀಂದ್ರ ಜಡೇಜಾಗೆ ಚಮಕ್ ಕೊಟ್ಟ ಧೋನಿ! -ವಿಡಿಯೋ ನೋಡಿ

    ಪುಣೆ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಆನ್ ಫೀಲ್ಡ್ ನಲ್ಲೇ ರವೀಂದ್ರ ಚಮಕ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಹೈದರಾಬಾದ್ ವಿರುದ್ಧ ಪಂದ್ಯದ 7ನೇ ಓವರ್ ವೇಳೆ ಘಟನೆ ನಡೆದಿದ್ದು, ಶಿಖರ್ ಧವನ್ ಬ್ಯಾಟಿಂಗ್ ವೇಳೆ ಬಾಲ್ ಶಾರ್ಟ್ ಮಿಡ್ ವಿಕೆಟ್ ಕಡೆ ಸಾಗಿತ್ತು. ಎದುರಾಳಿ ತಂಡದ ಬ್ಯಾಟ್ಸ್‍ಮನ್ ರನ್ ಕದಿಯಲು ಅವಕಾಶ ನೀಡಬಾರದೆಂದು ಧೋನಿ ಬಾಲ್ ಚೇಸ್ ಮಾಡಿದರು. ಈ ವೇಳೆ ಮತ್ತೊಂದು ಬದಿಯಿಂದ ಬಂದ ಜಡೇಜಾ ಬರುತ್ತಿದ್ದರು. ಕೈಗೆ ಬಾಲ್ ಸಿಕ್ಕ ಕೂಡಲೇ ಧೋನಿ ಜಡೇಜಾ ಕಡೆ ಬಾಲ್ ಎಸೆಯುವಂತೆ ಮಾಡಿ ಹೆದರಿಸಿದ್ದಾರೆ. ಇದನ್ನು ಕಂಡ ಜಡೇಜಾ ಒಮ್ಮೆಲೆ ಶಾಕ್ ಆಗಿದ್ದಾರೆ. ಬಳಿಕ ಒಂದು ಕ್ಷಣ ಇಬ್ಬರ ಮುಖದಲ್ಲೂ ನಗು ಕಂಡಿತ್ತು.

    https://twitter.com/PRINCE3758458/status/995637268361687040?

    ಸದ್ಯ ಚೆನ್ನೈ ತಂಡ ಹೈದರಾಬಾದ್ ವಿರುದ್ಧ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಪ್ಲೇ ಆಫ್ ಗೆ ಪ್ರವೇಶ ಪಡೆದಿದೆ. ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಂಬಟಿ ರಾಯುಡು ಅಜೇಯ ಶತಕ (100 ರನ್, 62 ಎಸೆತ, ತಲಾ 7 ಸಿಕ್ಸರ್ ಹಾಗೂ ಬೌಂಡರಿ) ಸಿಡಿಸಿ ಮಿಂಚಿದರು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

  • ಗೌತಮ್ ಗಂಭೀರ್ 10 ವರ್ಷಗಳ ಹಿಂದಿನ ದಾಖಲೆ ಮುರಿದ ಪಂತ್

    ಗೌತಮ್ ಗಂಭೀರ್ 10 ವರ್ಷಗಳ ಹಿಂದಿನ ದಾಖಲೆ ಮುರಿದ ಪಂತ್

    ನವದೆಹಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಶನಿವಾರ ನಡೆದ ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ರಿಷಬ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಡೆಲ್ಲಿ ಪರ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಸೋಲುಂಡರೂ ಪಂತ್ ಬ್ಯಾಟ್ ನಿಂದ ಸರಾಗವಾಗಿ ರನ್ ಹರಿದು ಬಂದಿತ್ತು. ಈ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ತಮ್ಮ ಮೊದಲ ಶತಕ ಸಿಡಿಸಿದ್ದ ಪಂತ್ ಬೆಂಗಳೂರು ವಿರುದ್ಧವು ಅರ್ಧ ಶತಕ (61 ರನ್, 34 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ 582 ರನ್ ಗಳಿಸಿದರು.

    ಈ ಮೂಲಕ ಡೆಲ್ಲಿ ಪರ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಪಂತ್ ಮಾಜಿ ನಾಯಕ ಗೌತಮ್ ಗಂಭೀರ್ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ನ ಮೊದಲ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಗಂಭೀರ್ 2008 ರಲ್ಲಿ 534 ರನ್ ಸಿಡಿಸಿದ್ದರು. 10 ವರ್ಷಗಳ ಬಳಿಕ ಡೆಲ್ಲಿ ಪರ 20 ವರ್ಷದ ಪಂತ್ ಈ ದಾಖಲೆಯನ್ನು ಮುರಿದಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಪಂತ್ ಒಟ್ಟಾರೆ 1 ಶತಕ ಹಾಗೂ ನಾಲ್ಕು ಅರ್ಧ ಶತಕ ಹಾಗೂ 61 ಬೌಂಡರಿ, 31 ಸಿಕ್ಸರ್ ಸಿಡಿಸಿದ್ದಾರೆ.

    ಐಪಿಎಲ್ ಚೊಚ್ಚಲ ಶತಕ ಸಿಡಿಸಿ ಟೂರ್ನಿಯಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. ಮನಿಷ್ ಪಾಂಡೆ ಐಪಿಎಲ್ ನಲ್ಲಿ ಶತಕ ಗಳಿಸಿದ ಕಿರಿಯ ಆಟಗಾರರಾಗಿದ್ದಾರೆ. 2009 ರಲ್ಲಿ ಪಾಂಡೇ 19 ವರ್ಷ 253 ದಿನ ವಯಸ್ಸಿನಲ್ಲಿ ಶತಕ ಸಿಡಿಸಿದ್ದರು. ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ (22 ವರ್ಷ 151 ದಿನ) ಲ್ಲಿ 3ನೇ ಸ್ಥಾನ ಪಡೆದಿದ್ದಾರೆ.

  • ಐಪಿಎಲ್‍ನಲ್ಲಿ ಮತ್ತೊಮ್ಮೆ ಅಂಪೈರ್ ಎಡವಟ್ಟು-ಅಭಿಮಾನಿಗಳು ಗರಂ

    ಐಪಿಎಲ್‍ನಲ್ಲಿ ಮತ್ತೊಮ್ಮೆ ಅಂಪೈರ್ ಎಡವಟ್ಟು-ಅಭಿಮಾನಿಗಳು ಗರಂ

    ಕೋಲ್ಕತ್ತಾ: ಐಪಿಎಲ್ 11ನೇ ಆವೃತ್ತಿಯಲ್ಲಿ ಆನ್ ಫೀಲ್ಡ್ ನಲ್ಲಿದ್ದ ಅಂಪೈರ್ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

    ಈಡನ್ ಗಾಡ್ ನಲ್ಲಿ ನಡೆದ ಕೋಲ್ಕತಾ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ಎಡವಟ್ಟು ಮಾಡಿಕೊಂಡಿದ್ದಾರೆ. 16 ನೇ ಓವರ್ ಬೌಲ್ ಮಾಡುತ್ತಿದ್ದ ಕೋಲ್ಕತ್ತಾ ವೇಗಿ ಟಾಮ್ ಕುರ್ರಾನ್ 5ನೇ ಎಸೆತವನ್ನು ಆನ್ ಫೀಲ್ಡ್ ಅಂಪೈರ್ ನೋ ಬಾಲ್ ನೀಡಿದರು. ಆದರೆ ಬಳಿಕ ರಿಪ್ಲೈಯಲ್ಲಿ ಇದು ನೋ ಬಾಲ್ ಆಗದಿರುವುದು ಕಂಡು ಬಂದಿದೆ.

    ಈ ವೇಳೆ ಬೌಲರ್ ಟಾಮ್ ಹಾಗೂ ಕೆಕೆಆರ್ ತಂಡದ ನಾಯಕ ಕಾರ್ತಿಕ್ ಅಂಪೈರ್ ಮನವೊಲಿಸಲು ಪ್ರಯತ್ನಿಸಿದರೂ ಅಂಪೈರ್ ತಮ್ಮ ತೀರ್ಪನ್ನು ಮರು ಪರಿಶೀಲಿಸಲಿಲ್ಲ. ಈ ಹಿಂದೆ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ತಂಡದ ಬೌಲರ್ ಆಂಡ್ರ್ಯೂ ಟೈ ಆನ್ ಫೀಲ್ಡ್ ಅಂಪೈರ್ ತಪ್ಪಿನಿಂದ ದಂಡ ತೆತ್ತಿದ್ದರು. ಅಲ್ಲದೇ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಂ ಸನ್ ಚೆನ್ನೈ ವಿರುದ್ಧ ಪಂದ್ಯದಲ್ಲಿ ಸೊಂಟದಿಂದ ಮೇಲ್ಭಾಗಕ್ಕೆ ಬಂದ ಪೂಲ್ ಟಾಸ್ ಎಸೆತವನ್ನು ಸಿಕ್ಸರ್ ಗೆ ಆಟ್ಟಿದ್ದರೂ ಅಂಪೈರ್ ನೋ ಬಾಲ್ ತೀರ್ಪು ನೀಡಿರಲಿಲ್ಲ. ಸದ್ಯ ಅಂಪೈರ್ ಎಡವಟ್ಟಿನ ವಿರುದ್ಧ ಹಲವು ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲದಲ್ಲಿ ಹಂಚಿಕೊಂಡಿದ್ದಾರೆ.

    ನಿಯಮ ಏನು ಹೇಳುತ್ತೆ?
    ಐಸಿಸಿ ನಿಯಮಗಳ ಪ್ರಕಾರ ಅಂಪೈರ್ ಒಮ್ಮೆ ನೀಡಿದ ತೀರ್ಪನ್ನು ಮತ್ತೆ ದೃಶ್ಯಗಳನ್ನು ನೋಡಿ ಬದಲಿಸುವಂತಿಲ್ಲ. ತೀರ್ಪು ಪ್ರಕಟಿಸುವ ಮುನ್ನ ಮೂರನೇ ಅಂಪೈರ್ ಸಹಾಯ ಪಡೆಯ ಬಹುದಾಗಿದೆ.

  • ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಶಾರುಖ್ ಖಾನ್

    ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಶಾರುಖ್ ಖಾನ್

    ಕೋಲ್ಕತ್ತಾ: ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಕೆಕೆಆರ್ ತಂಡದ ಮಾಲೀಕರಾಗಿರುವ ಶಾರುಖ್ ಖಾನ್ ಕೆಕೆಆರ್ ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

    ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ತಂಡ 102 ರನ್ ಗಳ ಭಾರೀ ಅಂತರದಲ್ಲಿ ಸೋಲುಂಡಿತ್ತು. ಈ ಕುರಿತು ಟ್ವೀಟ್ ಮಾಡಿರುವ ಶಾರುಖ್, ಕ್ರೀಡೆ ಎಂಬುವುದು ಸ್ಫೂರ್ತಿಯಾಗಿದ್ದು, ಇಲ್ಲಿ ಸೋಲು ಅಥವಾ ಗೆಲುವು ಸಾಮಾನ್ಯ. ಆದರೆ ತಂಡದಲ್ಲಿ ಇಂದು ಗೆಲುವಿನ ಸ್ಫೂರ್ತಿ ಕ್ಷೀಣಿಸಿದ್ದರಿಂದ ಮಾಲೀಕನಾಗಿ ತಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳಬೇಕಿದೆ ಎಂದು ಬರೆದುಕೊಂಡಿದ್ದಾರೆ.

    ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಂಬೈ ನಾಲ್ಕನೇ ಸ್ಥಾನಕ್ಕೆ ಏರಿದೆ. ಕೊಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಮುಂಬೈ ಉತ್ತಮ ರನ್ ರೆಟ್ ನೊಂದಿಗೆ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.

    ಕೋಲ್ಕತ್ತಾ ತಂಡ ಕಳೆದ ಮೂರು ದಿನಗಳಲ್ಲಿ ಮುಂಬೈ ವಿರುದ್ಧ ಮುಖಾಮುಖಿ ಆದ ಎರಡು ಪಂದ್ಯಗಳಲ್ಲೂ ಸೋಲುಂಡಿದೆ. ಅಲ್ಲದೇ ಇದುವರೆಗೂ ಐಪಿಎಲ್ ನಲ್ಲಿ ಆಡಿರುವ 23 ಪಂದ್ಯಗಳಲ್ಲಿ 18 ರಲ್ಲಿ ಪಂದ್ಯದಲ್ಲಿ ಸೋತಿದೆ. ಇದರಲ್ಲಿ 8 ಪಂದ್ಯಗಳನ್ನು ಸತತವಾಗಿ ಸೋತಿರುವುದು ವಿಶೇಷವಾಗಿದೆ.

    ಮುಂಬೈ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ಆಟಗಾರ ಈಶಾನ್ ಕಿಶಾನ್ ಕೇವಲ 21 ಎಸೆತಗಳಲ್ಲಿ 62 ರನ್(7 ಬೌಂಡರಿ, 6 ಸಿಕ್ಸರ್) ಸಿಡಿಸಿ ಮಿಂಚಿದ್ದರು. ಪಂದ್ಯದ ಬಳಿಕ ಮಾತನಾಡಿದ ಈಶಾನ್, ಯುವ ಆಟಗಾರರಿಗೆ ಟಾಪ್ ಆರ್ಡರ್ ನಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ತಂಡದ ನಾಯಕ ಹಾಗೂ ಮಾಲೀಕರ ಪ್ರೋತ್ಸಾಹ ಉತ್ತಮವಾಗಿದ್ದು, ತಾನು ಯಾವುದೇ ಆರ್ಡರ್ ನಲ್ಲಿ ಆಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

  • ಪ್ರತಿ ವಿಕೆಟ್ ಪಡೆದಾಗ್ಲೂ ಆಂಡ್ರ್ಯೂ ಟೈ ಕೈ ಕಪ್ಪು ಪಟ್ಟಿಗೆ ಮುತ್ತು ಕೊಟ್ಟಿದ್ದು ಯಾಕೆ?

    ಪ್ರತಿ ವಿಕೆಟ್ ಪಡೆದಾಗ್ಲೂ ಆಂಡ್ರ್ಯೂ ಟೈ ಕೈ ಕಪ್ಪು ಪಟ್ಟಿಗೆ ಮುತ್ತು ಕೊಟ್ಟಿದ್ದು ಯಾಕೆ?

    ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಆಡಿದ್ದ ಪಂಜಾಬ್ ತಂಡದ ವೇಗಿ ಆಂಡ್ರ್ಯೂ ಟೈ ಪ್ರತಿ ವಿಕೆಟ್ ಪಡೆದ ಬಳಿಕ ಕೈಪಟ್ಟಿಗೆ ಮುತ್ತಿಡುತ್ತಿದ್ದರು. ಆದರೆ ಅಭಿಮಾನಿಗಳಿಗೆ ಇದರ ಹಿಂದಿನ ಕಾರಣ ಮಾತ್ರ ಗೊತ್ತಾಗಿರಲಿಲ್ಲ. ಪಂದ್ಯದ ಬಳಿಕ ಐಪಿಎಲ್‍ನಲ್ಲಿ ಗರಿಷ್ಠ ವಿಕೆಟ್ ಪಡೆದವರಿಗೆ ಸಿಗುವ `ಪರ್ಪಲ್’ ಕ್ಯಾಪ್ ಪಡೆದ ಬಳಿಕ ಇದರ ಹಿಂದಿನ ಕಾರಣವನ್ನು ಸ್ವತಃ ಆಂಡ್ರ್ಯೂ ಟೈ ಬಹಿರಂಗಗೊಳಿಸಿದ್ದಾರೆ.

    ಪರ್ಪಲ್ ಕ್ಯಾಪ್ ಸ್ವೀಕರಿಸುವ ವೇಳೆ ಭಾವೋದ್ವೇಗಕ್ಕೆ ಒಳಗಾದ ಟೈ, “ಇದೊಂದು ಕಠಿಣ ದಿನವಾಗಿತ್ತು. ಇಂದು ನನ್ನ ಅಜ್ಜಿ ನಮ್ಮನ್ನ ಅಗಲಿದ್ದಾರೆ. ನನ್ನ ಈ ಪ್ರದರ್ಶನವನ್ನು ಅಜ್ಜಿಗೆ ಸಮರ್ಪಿಸುತ್ತೇನೆ. ಇದು ನನ್ನ ಪಾಲಿಗೆ ಭಾವೋದ್ವೇಗದ ಪಂದ್ಯ. ಎಷ್ಟೇ ಕಷ್ಟ ಎದುರಾದರೂ ನನಗೆ ಯಾವಾಗಲೂ ಕ್ರಿಕೆಟ್ ಮೇಲಿನ ಅಭಿಮಾನ ಕಡಿಮೆಯಾಗುವುದಿಲ್ಲ” ಎಂದು ಟೈ ಪ್ರತಿಕ್ರಿಯಿಸಿದರು. ಸಂಕಷ್ಟದ ಸಮಯದಲ್ಲಿಯೂ ತನ್ನ ಬೆಂಬಲಕ್ಕೆ ನಿಂತ ಸಹ ಆಟಗಾರರಿಗೂ ಟೈ ಧನ್ಯವಾದ ಹೇಳಿದರು.

    ನಿನ್ನೆ ನಡೆದ ಐಪಿಎಲ್ 40ನೇ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಆಂಡ್ರ್ಯೂ ಟೈ 34 ರನ್ ಗೆ 4 ವಿಕೆಟ್‍ಗಳನ್ನು ಕಬಳಿಸಿದ್ದರು. ಆ ಮೂಲಕ ಟೂರ್ನಿಯಲ್ಲಿ ತನ್ನ ವಿಕೆಟ್ ಗಳಿಕೆಯನ್ನು 16 ಕ್ಕೇರಿಸಿದ್ದರು. ಪಂದ್ಯದ ವೇಳೆ ಆಂಡ್ರ್ಯೂ ಟೈ `ಗ್ರಾಂಡ್‍ಮಾ’ ಎಂದು ಬರೆದಿದ್ದ ಕೈ ಪಟ್ಟಿಯನ್ನು ಧರಿಸಿ ಆಡಿದ್ದರು. ಪ್ರತಿ ವಿಕೆಟ್ ಪಡೆದ ಬಳಿಕ ಕೈ ಪಟ್ಟಿಗೆ ಮುತ್ತಿಟ್ಟರು. ಟೈ ಸಾಹಸದ ಹೊರತಾಗಿಯೂ ಜೈಪುರದ ಸವಾಯ್ ಮಾನ್‍ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 15 ರನ್‍ಗಳ ಸೋಲನ್ನು ಅನುಭವಿಸಿತ್ತು.

  • ಕೊಹ್ಲಿ ಸೂಪರ್ ಕ್ಯಾಚ್ ಪಡೆದ ಯೂಸುಫ್- ಅಭಿಮಾನಿಗಳ ರಿಯಾಕ್ಷನ್ ಹೀಗಿದೆ

    ಕೊಹ್ಲಿ ಸೂಪರ್ ಕ್ಯಾಚ್ ಪಡೆದ ಯೂಸುಫ್- ಅಭಿಮಾನಿಗಳ ರಿಯಾಕ್ಷನ್ ಹೀಗಿದೆ

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ, ಹೈದರಾಬಾದ್ ನಡುವಿನ ಪಂದ್ಯದಲ್ಲಿ ಕೊಹ್ಲಿ ಸೂಪರ್ ಕ್ಯಾಚ್ ಪಡೆದ ಯೂಸುಫ್ ಪಠಾಣ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದ 9 ಓವರ್ ನಲ್ಲಿ ಸ್ಟೈಕ್ ನಲ್ಲಿದ್ದ ಕೊಹ್ಲಿ ಶಕೀಬ್ ಎಸೆತವನ್ನು ಬೌಂಡರಿಗಟ್ಟಲು ಯತ್ನಿಸಿದರು. ಈ ವೇಳೆ ಫೀಲ್ಡ್‍ನಲ್ಲಿದ್ದ 35 ವರ್ಷದ ಯೂಸುಫ್ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮದೇ ಅಭಿಪ್ರಾಯ ತಿಳಿಸಿ ಟ್ವೀಟ್ ಮಾಡಿದ್ದಾರೆ.

    ಆರ್‌ಸಿಬಿ ವಿರುದ್ಧ ಪಂದ್ಯದ ಗೆಲುವಿನೊಂದಿಗೆ ಹೈದರಾಬಾದ್ ಐಪಿಎಲ್ 2018 ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಆಡಿರುವ 10 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಪಡೆದಿರುವ ಹೈದರಾಬಾದ್ 16 ಅಂಕಗಳನ್ನು ಪಡೆದಿದೆ. ಇನ್ನು ಹೈದರಾಬಾದ್ ವಿರುದ್ಧ ಸೋಲಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದು, ಆಡಿರುವ 10 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಗೆಲುವು ಪಡೆದು 6 ಅಂಕಗಳನ್ನು ಪಡೆದುಕೊಂಡಿದೆ.

  • ಸ್ನೇಹಿತನಿಗೆ ಚೆನ್ನೈ ಡ್ರೆಸ್ಸಿಂಗ್ ರೂಮ್ ತೋರಿಸಿದ ಎಂಎಸ್ ಧೋನಿ – ವಿಡಿಯೋ ನೋಡಿ

    ಸ್ನೇಹಿತನಿಗೆ ಚೆನ್ನೈ ಡ್ರೆಸ್ಸಿಂಗ್ ರೂಮ್ ತೋರಿಸಿದ ಎಂಎಸ್ ಧೋನಿ – ವಿಡಿಯೋ ನೋಡಿ

    ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಶ್ವಾನಪ್ರಿಯ ಎಂಬುವುದು ಅಭಿಮಾನಿಗಳಿಗೆ ತಿಳಿದ ಸಂಗತಿ. ಆದ್ರೆ ಈ ಬಾರಿ ಧೋನಿ ತಮ್ಮ ನೆಚ್ಚಿನ ಶ್ವಾನವನ್ನು ಡ್ರೆಸ್ಸಿಂಗ್ ರೂಮ್‍ಗೆ ಕರೆತಂದಿದ್ದಾರೆ.

    ಈ ಕುರಿತು ಸಿಎಸ್‍ಕೆ ತಂಡ ತನ್ನ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಡ್ರೆಸಿಂಗ್ ರೂಮ್ ಗೆ ಧೋನಿ ಅವರು ಶ್ವಾನವನ್ನು ಕರೆತಂದಿದ್ದು ಈ ವೇಳೆ ಇತರೇ ಆಟಗಾರಿಗೆ ತನ್ನ ಫ್ರೆಂಡ್ ಎಂದು ಪರಿಚಯಿಸಿದ್ದಾರೆ. ಅಲ್ಲದೇ ಸಿಎಸ್‍ಕೆ ತಂಡ, ಧೋನಿ ಅವರಗೊಂದಿಗೆ ಶ್ವಾನ ಕ್ರೀಡಾಂಗಣದಲ್ಲಿ ಒಡಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದೆ.

    ಸದ್ಯ ಸಿಎಸ್‍ಕೆ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿರುವ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಹತ್ತು ಪಂದ್ಯಗಳಿಂದ ನಾಯಕ ಧೋನಿ 90 ಸರಾಸರಿ ಯಲ್ಲಿ 360 ಸಿಡಿಸಿದ್ದಾರೆ. ಇದರಲ್ಲಿ 19 ಬೌಂಡರಿ, 27 ಸಿಕ್ಸರ್ ಹಾಗೂ 3 ಅರ್ಧ ಶತಕಗಳು ಸೇರಿದೆ.

  • ಉತ್ತಪ್ಪ ಕ್ಯಾಚ್ ಮಿಸ್ ಆಗಿದ್ದಕ್ಕೆ ಮಯಾಂಕ್ ಮೇಲೆ ಕೋಪಗೊಂಡ ಹಾರ್ದಿಕ್ – ವಿಡಿಯೋ

    ಉತ್ತಪ್ಪ ಕ್ಯಾಚ್ ಮಿಸ್ ಆಗಿದ್ದಕ್ಕೆ ಮಯಾಂಕ್ ಮೇಲೆ ಕೋಪಗೊಂಡ ಹಾರ್ದಿಕ್ – ವಿಡಿಯೋ

    ಮುಂಬೈ: ಕೊಲ್ಕತ್ತಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ಆಟಗಾರ ಉತ್ತಪ್ಪ ನೀಡಿದ್ದ ಕ್ಯಾಚ್ ಮುಂಬೈ ಯುವ ಆಟಗಾರ ಮಯಾಂಕ್ ಮಾರ್ಕಂಡೆ ಡ್ರಾಪ್ ಮಾಡಿದಕ್ಕೆ ಹಾರ್ದಿಕ್ ಪಾಂಡ್ಯ ಕೋಪ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದ 6ನೇ ಓವರ್ ವೇಳೆ 4 ರನ್ ಗಳಿಸಿದ್ದ ಉತ್ತಪ್ಪ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ ಈ ವೇಳೆ ಮಯಾಂಕ್ ಕೈಗೆ ಬಂದಿದ್ದ ಬಾಲನ್ನು ಹಿಡಿಯಲು ವಿಫಲರಾಗಿದ್ದರು. ಇದರಿಂದ ಕ್ಷಣ ಮಾತ್ರ ಶಾಕ್ ಗೆ ಒಳಗಾದ ಹಾರ್ದಿಕ್, ಮಾರ್ಕಂಡೆ ವಿರುದ್ಧ ಕೋಪ ಪ್ರದರ್ಶಿಸಿದರು. ಜೀವದಾನ ಪಡೆದ ಬಳಿಕ ಉತ್ತಪ್ಪ ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದರು. ಕೇವಲ 35 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅರ್ಧ ಶತಕ (54 ರನ್) ಸಿಡಿಸಿದರು.

    ಸದ್ಯದ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯದ ಮುಂಬೈ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಕನಸನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಅದ್ದರಿಂದ ಆನ್ ಫೀಲ್ಡ್ ನಲ್ಲಿ ಮಾಡುವ ಪ್ರತಿ ತಪ್ಪಿಗೂ ತಂಡ ಭಾರೀ ದಂಡ ತೆರಬೇಕಾಗುತ್ತದೆ. ಸದ್ಯ ಕೆಕೆಆರ್ ವಿರುದ್ಧ ಗೆಲುವು ಪಡೆದ ಮುಂಬೈ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5 ನೇ ಸ್ಥಾನ ಪಡೆದಿದೆ.

    4 ಸಾವಿರ ರನ್: ಮುಂಬೈ ವಿರುದ್ಧ 54 ರನ್ ಗಳೊಂದಿಗೆ ರಾಬಿನ್ ಉತ್ತಪ್ಪ ಐಪಿಎಲ್ ನಲ್ಲಿ 4 ಸಾವಿರ ರನ್ ಪೂರೈಸಿ ಅತಿ ಹೆಚ್ಚು ರನ್ ಗಳಿಸಿದ 5ನೇ ಆಟಗಾರ ಎನಿಸಿಕೊಂಡರು. ಈ ಮೂಲಕ ಡೇವಿಡ್ ವಾರ್ನರ್ ರನ್ನು ಹಿಂದಿಕ್ಕಿದರು. ಒಟ್ಟು 159 ಪಂದ್ಯಗಳಲ್ಲಿ 29.25 ಸರಾಸರಿಯಲ್ಲಿ 4,37 ರನ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ರೈನಾ (4,801 ರನ್), ಕೊಹ್ಲಿ (4,775 ರನ್) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದಿದ್ದಾರೆ.

  • ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಎರಡು ದಾಖಲೆ ಮುರಿದ ರೋ`ಹಿಟ್’ ಶರ್ಮಾ

    ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಎರಡು ದಾಖಲೆ ಮುರಿದ ರೋ`ಹಿಟ್’ ಶರ್ಮಾ

    ಇಂದೋರ್: 2018 ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಬಳಗ ಉತ್ತಮ ಆರಂಭ ಪಡೆದಿದ್ದರು, ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ.

    ಪಂಜಾಬ್ ವಿರುದ್ಧದ ಗೆಲುವುನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 300 ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅಲ್ಲದೇ ಐಪಿಎಲ್ ಚೇಸಿಂಗ್ ವೇಳೆ ಗೆಲುವು ಪಡೆದ ತಂಡದ ಪರ 17 ಬಾರಿ ಔಟಾಗದೆ ಉಳಿದ ಆಟಗಾರ ಎಂಬ ದಾಖಲೆಯನ್ನು ಬರೆದರು.

    ರೋಹಿತ್ ಶರ್ಮಾ ಒಟ್ಟಾರೆ ಟಿ20 ಮಾದರಿಯಲ್ಲಿ 300 ಸಿಕ್ಸರ್ ಸಿಡಿಸಿದ್ದು, ಅಂತರಾಷ್ಟ್ರೀಯ ಹಾಗೂ ದೇಶಿಯ ಟೂರ್ನಿಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಕ್ರಿಸ್ ಗೇಲ್ (844 ಸಿಕ್ಸರ್) ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಚೇಸಿಂಗ್ ವೇಳೆ 16 ಬಾರಿ ನಾಟೌಟ್ ಆಗಿ ಉಳಿದಿದ್ದ ಗೌತಮ್ ಗಂಭೀರ್ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.

    ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9 ಪಂದ್ಯಗಳಿಂದ 6 ಅಂಕ ಪಡೆದು 5ನೇ ಸ್ಥಾನ ಪಡೆದಿದೆ. ಪಂಜಾಬ್ ವಿರುದ್ಧ ಕಣಕ್ಕೆ ಇಳಿಯಲು ಅವಕಾಶ ಪಡೆದ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಅರ್ಧ ಶತಕ ಸಿಡಿಸಿದ್ದರು. 47 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಮಿಂಚಿದರು.