Tag: IPL Schedule

  • ಮುಂದಿನ 3 ಐಪಿಎಲ್ ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

    ಮುಂದಿನ 3 ಐಪಿಎಲ್ ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

    ನವದೆಹಲಿ: ಈ ಬಾರಿಯ ಐಪಿಎಲ್ ಸೀಸನ್ ಸೇರಿದಂತೆ 2026 ಹಾಗೂ 2027ರ ಸೀಸನ್‌ಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ.

    ಇಂದು (ನ.22) ಭಾರತೀಯ ಕ್ರಿಕೆಟ್ ಮಂಡಳಿಯು (Board of Control for Cricket in India) 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) ವೇಳಾಪಟ್ಟಿ ಪ್ರಕಟಿಸಿದ್ದು, ಜೊತೆಗೆ 2026 ಹಾಗೂ 2027ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ಬಿಸಿಸಿಐ ಪಂದ್ಯಗಳು ಸಮೀಪಿಸುತ್ತಿದ್ದಂತೆ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಆದರೆ ಈ ಬಾರಿ ಮೂರು ಸೀಸನ್‌ಗಳ ವೇಳಾಪಟ್ಟಿಯನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಸಚಿವರೊಬ್ಬರ ತಲೆದಂಡಕ್ಕೆ ಸಿದ್ಧತೆ!

    2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ. ಇನ್ನೂ ಈ ಬಾರಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಇದೇ ತಿಂಗಳ 24 ಹಾಗೂ 25 ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದೆ.

    ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿಯಂತೆ 2026ರ ಟೂರ್ನಿಯು ಮಾರ್ಚ್ 15 ರಂದು ಪ್ರಾರಂಭವಾಗಿ ಮೇ 31 ರವರೆಗೆ ನಡೆಯಲಿದೆ ಹಾಗೂ 2027ರ ಟೂರ್ನಿಯು ಮಾರ್ಚ್ 14 ರಂದು ಪ್ರಾರಂಭವಾಗಿ ಮೇ 30 ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

    ವೇಳಾಪಟ್ಟಿ ಪ್ರಕಟಣೆಯಿಂದಾಗಿ ಫ್ರ್ಯಾಂಚೈಸಿಗಳು ಹಾಗೂ ಆಟಗಾರರು ಹರಾಜು ಪ್ರಕ್ರಿಯೆಗಾಗಿ ಯೋಜನೆಯನ್ನು ಹಾಕಿಕೊಳ್ಳಲು ಸಹಕಾರಿಯಾಗುತ್ತದೆ. ಮುಂದಿನ ಮೂರು ಐಪಿಎಲ್ ಸೀಸನ್‌ಗಳಿಗೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಲಭ್ಯತೆಯನ್ನು ಬಿಸಿಸಿಐ ದೃಢಪಡಿಸಿದೆ.ಇದನ್ನೂ ಓದಿ: ಭಾರತದ ಒತ್ತಡಕ್ಕೆ ಮಣಿದ ಕೆನಡಾ – ಮೋದಿ ಹೆಸರನ್ನು ಉಲ್ಲೇಖಿಸಿ ಮಾಧ್ಯಮ ವರದಿಯನ್ನು ತಿರಸ್ಕರಿಸಿದ ಸರ್ಕಾರ

  • ಐಪಿಎಲ್ 2020: ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಡೇಟ್ ಫಿಕ್ಸ್

    ಐಪಿಎಲ್ 2020: ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಡೇಟ್ ಫಿಕ್ಸ್

    ಅಬುಧಾಬಿ: ಐಪಿಎಲ್ 2020ರ ಪ್ಲೇ ಆಫ್ಸ್, ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ ಬಿಡುಗಡೆ ಮಾಡಿದೆ.

    ನವೆಂಬರ್ 5 ರಿಂದ 10ರ ವರೆಗೂ ದುಬೈ ಮತ್ತು ಅಬುಧಾಬಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಈ ಕುರಿತ ಅಧಿಕೃತ ಮಾಹಿತಿಯನ್ನು ಐಪಿಎಲ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

    ನ.3 ರಂದು ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಬಿಡುಗಡೆಯಾಗಿದ್ದು, ನವೆಂಬರ್ 4ರಂದು ವಿಶ್ರಾಂತಿ ನೀಡಲಾಗಿದೆ. ನ.5 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ದುಬೈ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಂದಿನಂತೆ ಅಂಕಪಟ್ಟಿಯಲ್ಲಿ ಮೊದಲ 2 ಸ್ಥಾನಗಳಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡದ ಫೈನಲ್‍ಗೆ ತಲುಪಲಿದೆ.

    ನ.6 ರಂದು ಅಬುಧಾಬಿಯಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ನ.7 ವಿಶ್ರಾಂತಿಯ ದಿನವಾಗಿದ್ದು, ನ.8 ರಂದು 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ವೇಳೆ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಸೋತ ತಂಡ ಹಾಗೂ ಎಲಿಮೆನೇಟರ್ ಪಂದ್ಯದಲ್ಲಿ ಗೆದ್ದ ಪಂದ್ಯಗಳ ನಡುವೆ ಹಣಾಹಣಿ ನಡೆಯಲಿದ್ದು, ಗೆಲುವು ಪಡೆದ ತಂಡ ಫೈನಲ್ ತಲುಪಲಿದೆ.

    ನ.9 ವಿಶ್ರಾಂತಿಯ ದಿನವಾಗಿದ್ದು, ಐಪಿಎಲ್ 2020ರ ಫೈನಲ್ ಪಂದ್ಯ ದುಬೈನಲ್ಲಿ ನ.10 ರಂದು ನಡೆಯಲಿದೆ. ಕ್ವಾಲಿಫೈಯರ್ 1 ಮತ್ತು 2 ಪಂದ್ಯಗಳಲ್ಲಿ ಗೆಲುವು ಪಡೆದ ತಂಡಗಳು ಕಪ್‍ಗಾಗಿ ಮುಖಾಮುಖಿ ಆಗಲಿದೆ. ಪ್ಲೇ ಆಫ್ಸ್, ಫೈನಲ್ ಪಂದ್ಯ ರಾತ್ರಿ 7.30ರಿಂದ ಆರಂಭವಾಗಲಿದೆ. ಇತ್ತ ಮಹಿಳಾ ಟಿ20 ಚಾಲೆಂಜ್‍ಗೆ ಶಾರ್ಜಾ ವೇದಿಕೆಯನ್ನು ಫಿಕ್ಸ್ ಮಾಡಲಾಗಿದ್ದು, ಆದ್ದರಿಂದ ಇಲ್ಲಿ ಪ್ಲೇ ಆಫ್ಸ್ ಪಂದ್ಯಗಳನ್ನು ನಿರ್ವಹಿಸುತ್ತಿಲ್ಲ. ಈ ಲೀಗ್ ನವೆಂಬರ್ 4 ರಿಂದ 9ರವರೆಗೂ ನಡೆಯಲಿದೆ.

  • ಕೊನೆಗೂ ಐಪಿಎಲ್ ಶೆಡ್ಯೂಲ್ ಬಿಡುಗಡೆಗೆ ಮುಹೂರ್ತ ಫಿಕ್ಸ್

    ಕೊನೆಗೂ ಐಪಿಎಲ್ ಶೆಡ್ಯೂಲ್ ಬಿಡುಗಡೆಗೆ ಮುಹೂರ್ತ ಫಿಕ್ಸ್

    ಮುಂಬೈ: ಬಹುನಿರೀಕ್ಷಿತ 2020ರ ಐಪಿಎಲ್ ಆವೃತ್ತಿ ಸೆ.19 ರಿಂದ ಆರಂಭವಾಗುತ್ತಿದ್ದು, ಆದರೆ ಇದುವರೆಗೂ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿಲ್ಲ. ಸದ್ಯ ಈ ಕುರಿತು ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ, ಟೂರ್ನಿಯ ಶೆಡ್ಯೂಲ್ ಬಿಡುಗಡೆಯಾಗುವ ದಿನಾಂಕವನ್ನು ತಿಳಿಸಿದ್ದಾರೆ.

    ಗಂಗೂಲಿ ಟೂರ್ನಿಯ ಶೆಡ್ಯೂಲ್ ಬಿಡುಗಡೆ ಕುರಿತು ಎಬಿಪಿ ನ್ಯೂಸ್‍ನೊಂದಿಗೆ ಮಾತನಾಡಿದ್ದು, ಬಿಸಿಸಿಐ ಟೂರ್ನಿಯ ವೇಳಾಪಟ್ಟಿಯನ್ನು ಸೆ.4ರ ಶುಕ್ರವಾರದಂದು ಬಿಡುಗಡೆ ಮಾಡಲಿದೆ ಎಂದಿದ್ದಾರೆ.

    ಮಾಧ್ಯಮ ವರದಿಗಳ ಅನ್ವಯ ಟೂರ್ನಿಯ ವೇಳಾಪಟ್ಟಿಯನ್ನು ಈ ಹಿಂದೆಯೇ ಬಿಡುಗಡೆ ಮಾಡಲು ಬಿಸಿಸಿಐ ಸಿದ್ಧತೆ ನಡೆಸಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 12 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಶೆಡ್ಯೂಲ್ ಬಿಡುಗಡೆಯನ್ನು ಮುಂದೂಡಿತ್ತು. ಆದರೆ ಸದ್ಯ ಸಿಎಸ್‍ಕೆ ತಂಡದ ಸದಸ್ಯರು ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದು, ಶೆಡ್ಯೂಲ್ ಬಿಡುಗಡೆಗೆ ಮುಹೂರ್ತ ನಿಗದಿ ಮಾಡಿದೆ.

    ಆದರೆ ಬಿಸಿಸಿಐ ಇಡೀ ಟೂರ್ನಿಯ ಶೆಡ್ಯೂಲ್ ಬಿಡುಗಡೆ ಮಾಡಲಿದೇಯಾ ಅಥವಾ ಹಂತ ಹಂತದಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡುತ್ತಾ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಲಭಿಸಿಲ್ಲ. ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಯಾವ ದಿನಾಂಕದಲ್ಲಿ ಕಣಕ್ಕಿಳಿಯಲಿದೆ ಎಂದು ತಿಳಿದುಕೊಳ್ಳಲು ಕಾತುರರಾಗಿದ್ದಾರೆ.