Tag: IPL Rules

  • ನನಗೆ ಐಪಿಎಲ್‌ಗಿಂತಲೂ ಟೆಸ್ಟ್‌ ಕ್ರಿಕೆಟ್‌ ಮುಖ್ಯ: ಬಿಸಿಸಿಐ ಹೊಸ ನಿಯಮದ ಕುರಿತು ಕಮ್ಮಿನ್ಸ್‌ ರಿಯಾಕ್ಷನ್‌

    ನನಗೆ ಐಪಿಎಲ್‌ಗಿಂತಲೂ ಟೆಸ್ಟ್‌ ಕ್ರಿಕೆಟ್‌ ಮುಖ್ಯ: ಬಿಸಿಸಿಐ ಹೊಸ ನಿಯಮದ ಕುರಿತು ಕಮ್ಮಿನ್ಸ್‌ ರಿಯಾಕ್ಷನ್‌

    ಮುಂಬೈ: 2025ರಿಂದ 2027 ಆವೃತ್ತಿಗಳಿಗೆ ಬಿಸಿಸಿಐ ವಿಧಿಸಿರುವ ಹೊಸ ನಿಯಮಗಳ (BCCI IPL Rules) ಕುರಿತು ಆಸೀಸ್‌ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) ಪ್ರತಿಕ್ರಿಯೆ ನೀಡಿದ್ದು, ನನಗೆ ಐಪಿಎಲ್‌ಗಿಂತಲೂ ಟೆಸ್ಟ್‌ ಕ್ರಿಕೆಟ್‌ ಮುಖ್ಯ ಎಂದು ಹೇಳಿದ್ದಾರೆ.

    ಹೌದು. ಬಿಸಿಸಿಐ ಹೊಸ ನಿಯಮದ ಫ್ರಾಂಚೈಸಿಗಳು ಖರೀದಿ ಮಾಡಿದ ನಂತರ ವಿದೇಶಿ ಆಟಗಾರರು ಲೀಗ್‌ನಿಂದ ಹಿಂದೆ ಸರಿದರೆ 2 ವರ್ಷಗಳ ಕಾಲ ನಿಷೇಧ ಹೇರಲಾಗುತ್ತದೆ. ವೈದ್ಯಕೀಯ ಮತ್ತು ಫಿಟ್‌ನೆಸ್‌ ಸಮಸ್ಯೆ ಇರುವ ಆಟಗಾರರಿಗೆ ಮಾತ್ರ ಟೂರ್ನಿಯಿಂದ ಹೊರಗುಳಿಯಲು ಅವಕಾಶವಿರುತ್ತದೆ ಎಂದು ಹೇಳಿದೆ. ಈ ನಿಮಯದ ಬಗ್ಗೆ ಕಮ್ಮಿನ್ಸ್‌ ಪ್ರತಿಕ್ರಿಯೆ ನೀಡಿದ್ದು, ಇದು ತನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಮ್ಮಿನ್ಸ್ ಹೇಳಿದ್ದಾರೆ.

    ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈಗಿನ ಐಪಿಎಲ್‌ ನಿಯಮಗಳು ಬದಲಾಗಿವೆ. ಈ ಹಿಂದೆಯೂ ನಾನು ಹರಾಜಿನ ನಂತರ ಐಪಿಎಲ್‌ನಿಂದ (IPL 2025) ಹಿಂದೆ ಸರಿದಿಲ್ಲ. ಹಾಗಾಗಿ ಈ ನಿಯಮ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಆದರೂ ಐಪಿಎಲ್‌ಗೆ ಸಂಬಂಧಿಸಿದ ಒಂದು ಅಂಶವನ್ನು ಪರಿಗಣಿಸುವುದಾದ್ರೆ, ನನಗೆ ಐಪಿಎಲ್‌ಗಿಂತ ಟೆಸ್ಟ್‌ ಕ್ರಿಕೆಟ್‌ ತುಂಬಾ ಮುಖ್ಯ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಆರ್ಭಟಕ್ಕೆ ದಾಖಲೆಗಳು ಧೂಳಿಪಟ – ನಿಜಕ್ಕೂ ಇದು ಬೆಂಕಿ ಟೀಂ ಎಂದ ಸೂರ್ಯ!

    2024ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಪ್ಯಾಟ್‌ ಕಮ್ಮಿನ್ಸ್‌ ಅವರನ್ನು 20.50 ಕೋಟಿ ರೂ.ಗೆ ಖರೀದಿ ಮಾಡಿತು. ಬಳಿಕ ಹೈದರಾಬಾದ್‌ ತಂಡದ ನಾಯಕನಾಗಿ ಮುನ್ನಡೆಸಿದ ಪ್ಯಾಟ್‌ ಕಮ್ಮಿನ್ಸ್‌ ತಂಡವನ್ನು ಫೈನಲ್‌ವರೆಗೆ ಕೊಂಡೊಯ್ದಿದ್ದರು. 31 ವರ್ಷ ವಯಸ್ಸಿನ ಕಮ್ಮಿನ್ಸ್‌ 2027ರ ವರೆಗೆ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಆಸೀಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ -‌ ಕಿಂಗ್‌ ಕೊಹ್ಲಿಗೆ ಸರಿಸಮನಾಗಿ ನಿಂತ ಮಿಸ್ಟರ್‌ 360

    ನ.22ರಿಂದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ:
    ಮುಂದಿನ ನವೆಂಬರ್‌ನಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ನ.22 ರಿಂದ 2025ರ ಜನವರಿ 7ರ ವರೆಗೆ ಭಾರತ ಮತ್ತು ಆಸೀಸ್‌ ನಡುವೆ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿ ನಡೆಯಲಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸರಣಿ ಗೆದ್ದುಕೊಂಡಿತ್ತು. ಆ ಬಳಿಕ ನಡೆದ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವದ ಆಸೀಸ್‌ ತಂಡ ಭಾರತ ತಂಡವನ್ನು ಸೋಲಿಸಿ WTC ಟ್ರೋಫಿ ಎತ್ತಿ ಹಿಡಿದಿತ್ತು. ಇದನ್ನೂ ಓದಿ: ಸಂಜು, ಸೂರ್ಯ ಬ್ಯಾಟಿಂಗ್‌ ಅಬ್ಬರ – ಬಾಂಗ್ಲಾ ವಿರುದ್ಧ ಭಾರತಕ್ಕೆ 133 ರನ್‌ ಭರ್ಜರಿ ಜಯ; 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌

    ಐಪಿಎಲ್‌ನ ಹೊಸ ನಿಯಮಗಳೇನು?
    * ಫ್ರಾಂಚೈಸಿಯೊಂದು ಆರ್‌ಟಿಎಂ ಕಾರ್ಡ್‌ನೊಂದಿಗೆ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು.
    * ಅಲ್ಲದೇ ಪ್ರತಿ ಫ್ರಾಂಚೈಸಿ 5 ಕ್ಯಾಪ್ಡ್‌ (ಭಾರತೀಯ ಮತ್ತು ಸಾಗರೋತ್ತರ) ಮತ್ತು 2 ಅನ್‌ಕ್ಯಾಪ್ಡ್‌ಪ್ಲೇಯರ್‌ಗಳನ್ನು ಹೊಂದಬಹುದು.
    * ಫ್ಯಾಂಚೈಸಿಗಳ ಪರ್ಸ್‌ ಮೊತ್ತವನ್ನು 100 ಕೋಟಿ ರೂ. ನಿಂದ 120 ಕೋಟಿ ರೂ. ಹೆಚ್ಚಿಸಲಾಗಿದೆ. ಹಾಗಾಗಿ 2025ರ ಐಪಿಎಲ್‌ ಋತುವಿನಲ್ಲಿ ಸಂಬಳ ಮಿತಿ ಸೇರಿ ಒಟ್ಟು ಪರ್ಸ್‌ ಮೊತ್ತ 146 ಕೋಟಿ ರೂ., 2026ಕ್ಕೆ 151 ಕೋಟಿ ರೂ., 2027ಕ್ಕೆ 157 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
    * ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಂದ್ಯ ಶುಲ್ಕವನ್ನು ಪರಿಚಯಿಸಲಾಗಿದೆ. ಈ ಮೂಲಕ ಪ್ರತಿ ಆಟಗಾರನು ಲೀಗ್‌ ಪಂದ್ಯವೊಂದಕ್ಕೆ 7.5 ಲಕ್ಷ ರೂ. ಹೆಚ್ಚುವರಿ ಪಡೆದುಕೊಳ್ಳಲಿದ್ದಾರೆ.
    * ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದೇಶಿ ಆಟಗಾರರು ಮೆಗಾ ಹರಾಜಿಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ವರ್ಷ ಅವರು ಹರಾಜಿನಲ್ಲಿ ನೋಂದಾಯಿಸಲು ಅನರ್ಹರಾಗುತ್ತಾರೆ.
    * ಹರಾಜಿನಲ್ಲಿ ಆಯ್ಕೆಯಾದ ಯಾವುದೇ ವಿದೇಶಿ ಆಟಗಾರ, ಬಳಿಕ ಐಪಿಎಲ್‌ ಆರಂಭಕ್ಕೂ ಮುನ್ನ ತನ್ನನ್ನು ಅಲಭ್ಯಗೊಳಿಸಿದ್ರೆ, ಮುಂದಿನ 2 ಸೀಸನ್‌ಗಳಿಗೆ ನಿಷೇಧಿಸಲಾಗುತ್ತದೆ.
    * ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ 5 ವರ್ಷ ಪೂರೈಸಿದ ಭಾರತೀಯ ಕ್ರಿಕೆಟ್‌ ಆಟಗಾರರನ್ನ ಅನ್‌ಕ್ಯಾಪ್ಡ್‌ ಪ್ಲೇಯರ್‌ ಎಂದು ಪರಿಗಣಿಸಲಾಗುತ್ತದೆ. ಇದು ಭಾರತೀಯ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ.
    * 2025 ರಿಂದ 2027ರ ಆವೃತ್ತಿಗಳಲ್ಲಿಯೂ ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌ ಮುಂದುವರಿಯುತ್ತದೆ.

  • IPL 2023: ಸೋಲಿನ ಬೆನ್ನಲ್ಲೇ RCBಗೆ ಶಾಕ್‌ – ನಾಯಕ ಡುಪ್ಲೆಸಿಸ್‌ಗೆ 12 ಲಕ್ಷ ದಂಡ

    IPL 2023: ಸೋಲಿನ ಬೆನ್ನಲ್ಲೇ RCBಗೆ ಶಾಕ್‌ – ನಾಯಕ ಡುಪ್ಲೆಸಿಸ್‌ಗೆ 12 ಲಕ್ಷ ದಂಡ

    ಬೆಂಗಳೂರು: ಆರ್‌ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದ ಬಳಿಕ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ವೇಗಿ ಅವೇಶ್‌ ಖಾನ್‌ (Avesh Khan) ಮೈದಾನದಲ್ಲೇ ಹೆಲ್ಮೆಟ್‌ ಕಿತ್ತೆಸೆದು ಆಕ್ರಮಣಕಾರಿ ವರ್ತನೆ ತೋರಿದ್ದಕ್ಕಾಗಿ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ.

    ಇದರೊಂದಿಗೆ ಆರ್‌ಸಿಬಿ ತಂಡ ನಿಧಾನಗತಿಯ ಓವರ್‌ ರೇಟ್‌ ಕಾಯ್ದುಕೊಂಡಿದ್ದಕ್ಕಾಗಿ ಐಪಿಎಲ್‌ ಆಡಳಿತ ಮಂಡಳಿ ನಾಯಕ ಫಾಫ್‌ ಡುಪ್ಲೆಸಿಸ್‌ಗೆ (Faf du Plessis) ಭಾರೀ ದಂಡ ವಿಧಿಸಿದೆ. ಆರ್‌ಸಿಬಿ ತಂಡವು ನಿಗದಿತ ಸಮಯದಲ್ಲಿ ತಮ್ಮ ಕೋಟಾವನ್ನ ಪೂರ್ಣಗೊಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಡುಪ್ಲೆಸಿಸ್‌ಗೆ 12 ಲಕ್ಷ ರೂ. ದಂಡ ವಿಧಿಸಿದೆ. ಇದನ್ನೂ ಓದಿ: IPL 2023: ಈ ಬಾರಿ ಹೊಸ ರೂಲ್ಸ್‌ಗಳೇನು ಗೊತ್ತಾ? – ಫ್ಯಾನ್ಸ್‌ ತಿಳಿಯಲೇಬೇಕಾದ ಸಂಗತಿಗಳಿವು

    ಇನ್ನೂ ಲಕ್ನೋ ತಂಡದ ವೇಗಿ ಅವೇಶ್‌ ಖಾನ್‌ ಕೊನೆಯ ಎಸೆತವನ್ನು ಎದುರಿಸಲಾಗದೇ ಒಂದು ರನ್‌ ಬೈಸ್‌ ಕದ್ದು ಗೆಲುವು ಸಾಧಿಸಿದ ಬಳಿಕ ಅತ್ಯುತ್ಸಾಹದಲ್ಲಿ ತಮ್ಮ ಹೆಲ್ಮೆಟ್‌ ಅನ್ನು ಕಿತ್ತು ಮೈದಾನಕ್ಕೆ ಎಸೆತದರು. ಇದು ಆಕ್ರಮಣಕಾರಿ ವರ್ತನೆಯಾಗಿದ್ದು, ಐಪಿಎಲ್‌ ನೀತಿ ಸಂಹಿತೆ 2.2ರ ಪ್ರಕಾರ ಅಪರಾಧವಾಗಿದ್ದು, ರೆಫೆರಿಯಿಂದ ವಾಗ್ದಂಡನೆ ವಿಧಿಸಲಾಯಿತು. ಬಳಿಕ ಅವೇಶ್‌ ಖಾನ್‌ ಕ್ಷಮೆಕೋರಿದರು. ಇದನ್ನೂ ಓದಿ: IPL 2023: ಸೈಲೆಂಟಾಗಿರ್ಬೇಕ್‌ ಅಷ್ಟೇ – RCB ಫ್ಯಾನ್ಸ್‌ಗೆ ಗಂಭೀರ್‌ ವಾರ್ನಿಂಗ್‌

    IPL ಹೊಸ ರೂಲ್ಸ್‌ ಹೇಳೋದೇನು?
    ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಹಲವು ಹೊಸ ನಿಯಮಗಳನ್ನ (IPL NewRules) ತರಲಾಗಿದೆ. ಆ ನಿಯಮದ ಪ್ರಕಾರ ಐಪಿಎಲ್‌ನಲ್ಲಿ ಒಂದು ಪಂದ್ಯಕ್ಕೆ 3 ಗಂಟೆ ಸಮಯ ನಿಗದಿಯಾಗಿರುತ್ತೆ. ಹಾಗಾಗಿ ಪ್ರತಿ ತಂಡ 90 ನಿಮಿಷಗಳ ಒಳಗೆ 20 ಓವರ್​ಗಳ ಕೋಟಾ ಮುಗಿಸಬೇಕಿರುತ್ತದೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದಲ್ಲಿ, ಪ್ರತಿ ಓವರ್‌ನಲ್ಲಿ ಹೆಚ್ಚುವರಿ ಆಟಗಾರರನ್ನ 30 ಯಾರ್ಡ್‌ ವೃತ್ತದೊಳಗೆ ಇರಿಸಬೇಕಾಗುತ್ತದೆ. ಜೊತೆಗೆ ದಂಡಕ್ಕೂ ಒಳಗಾಗಬೇಕಾಗುತ್ತದೆ ಎಂದು ಹೇಳಿದೆ.