Tag: IPL Retention 2025

  • IPL Retention | ಲಕ್ನೋದಿಂದ ರಾಹುಲ್‌ ಔಟ್‌ – ಪೂರನ್‌, ರಾಕೆಟ್‌ ವೇಗಿ ಮಯಾಂಕ್‌ಗೆ ಬಂಪರ್‌ ಗಿಫ್ಟ್‌

    IPL Retention | ಲಕ್ನೋದಿಂದ ರಾಹುಲ್‌ ಔಟ್‌ – ಪೂರನ್‌, ರಾಕೆಟ್‌ ವೇಗಿ ಮಯಾಂಕ್‌ಗೆ ಬಂಪರ್‌ ಗಿಫ್ಟ್‌

    ಲಕ್ನೋ: ಐಪಿಎಲ್‌ ಪ್ರವೇಶಿಸಿದ ಮೊದಲ ಎರಡು ಆವೃತ್ತಿಗಳಲ್ಲಿ ತಂಡವನ್ನು ಪ್ಲೇ ಆಫ್ಸ್‌ಗೆ ಕೊಂಡೊಯ್ದಿದ್ದ ನಾಯಕ ಕೆ.ಎಲ್‌ ರಾಹುಲ್‌ (KL Rahul) ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಫ್ರಾಂಚೈಸಿ ರಿಲೀಸ್‌ ಮಾಡಿದೆ. ಈ ಬೆನ್ನಲ್ಲೇ ಸ್ಫೋಟಕ ಬ್ಯಾಟರ್‌ ನಿಕೋಲಸ್‌ ಪೂರನ್‌ ಅವರಿಗೆ ದುಬಾರಿ ಸಂಭಾವನೆ ನೀಡಿ ತಂಡದಲ್ಲೇ ಉಳಿಸಿಕೊಂಡಿದೆ.

    ಓರ್ವ ವಿದೇಶಿ ಆಟಗಾರ ಸೇರಿದಂತೆ 5 ಐವರನ್ನು ಉಳಿಸಿಕೊಂಡಿರುವ ಲಕ್ನೋ ಫ್ರಾಂಚೈಸಿ ಒಂದು ಆರ್‌ಟಿಎಂ ಕಾರ್ಡ್‌ ಬಾಕಿ ಉಳಿಸಿಕೊಂಡಿದೆ. ಇದನ್ನೂ ಓದಿ: IPL Retention | 2025ರ ಐಪಿಎಲ್‌ಗೆ ಲೆಜೆಂಡ್‌ ಮಹಿ ಫಿಕ್ಸ್‌ – ರುತುರಾಜ್‌, ಜಡ್ಡುಗೆ ಬಂಪರ್‌

    ಲಕ್ನೋ ತಂಡದಲ್ಲಿ ಉಳಿದವರ‍್ಯಾರು?
    * ನಿಕೋಲಸ್‌ ಪೂರನ್‌ – 21 ಕೋಟಿ ರೂ.
    * ರವಿ ಬಿಷ್ಣೋಯಿ – 11 ಕೋಟಿ ರೂ.
    * ಮಯಾಂಕ್‌ ಯಾದವ್‌ – 11 ಕೋಟಿ ರೂ.
    * ಮೊಹ್ಶಿನ್‌ ಖಾನ್‌ – 4 ಕೋಟಿ ರೂ.
    * ಆಯುಶ್‌ ಬದೋನಿ – 4 ಕೋಟಿ ರೂ.

    ಪೂರನ್‌ ಮುಂದಿನ ಕ್ಯಾಪ್ಟನ್‌?
    29 ವರ್ಷದ ನಿಕೋಲಸ್‌ ಪೂರನ್‌ (Nicholas Pooran) 2017ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. ಆ ಬಳಿಕ 2019ರ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ಅವರನ್ನ 4.2 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದ್ರೆ 2022ರ ಮೆಗಾ ಹರಾಜಿನಲ್ಲಿ 10.72 ಕೋಟಿ ರೂ.ಗೆ ಪೂರನ್‌ ಅವರನ್ನು ಖರೀದಿ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿ 2023ರಲ್ಲಿ ತಂಡದಿಂದ ರಿಲೀಸ್‌ ಮಾಡಿತು. ನಂತರ ಲಕ್ನೋ ಫ್ರಾಂಚೈಸಿ 16 ಕೋಟಿ ರೂ.ಗೆ ಪೂರನ್‌ ಅವರನ್ನ ಖರೀದಿ ಮಾಡಿತು. ಇದೀಗ 2025ರ ಆವೃತ್ತಿಗೆ 21 ಕೋಟಿ ರೂ.ಗಳಿಗೆ ರೀಟೆನ್‌ ಮಾಡಿಕೊಂಡಿದೆ. ಇದೀಗ ರಾಹುಲ್‌ ಅವರನ್ನು ಬಿಡುಗಡೆಗೊಳಿಸಿದ್ದು, ಪೂರನ್‌ ತಂಡದ ನಾಯಕನಾಗಲಿದ್ದಾರೆ ಎಂದು ತಿಳಿದುಬಂದಿದೆ. 2019 ರಿಂದ 2024ರ ವರೆಗೆ 76 ಪಂದ್ಯಗಳನ್ನಾಡಿರುವ ನಿಕೋಲಸ್‌ ಪೂರನ್‌, 1,769 ರನ್‌ ಗಳಿಸಿದ್ದಾರೆ. ಇದರಲ್ಲಿ 9 ಅರ್ಧಶತಕ, 113 ಬೌಂಡರಿ, 127 ಭರ್ಜರಿ ಸಿಕ್ಸರ್‌ಗಳೂ ಸೇರಿವೆ.

    2025 ರಿಂದ 2027ರ ಐಪಿಎಲ್‌ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ. ಇದನ್ನೂ ಓದಿ: IPL Retention | ರಿಷಬ್‌ ಪಂತ್‌ ಸೇರಿ ಸ್ಟಾರ್‌ ಆಟಗಾರರೇ ಔಟ್‌ – ಆಲ್‌ರೌಂಡರ್‌ಗೆ ಮಣೆ ಹಾಕಿದ ಡೆಲ್ಲಿ

  • IPL Retention | ಇಂದು ಐಪಿಎಲ್‌ ರೀಟೆನ್ಶನ್‌ ಪಟ್ಟಿ ರಿಲೀಸ್‌ – ಕ್ಯಾಪ್ಟನ್‌ಗಳನ್ನೇ ಹೊರದಬ್ಬುವ ಸಾಧ್ಯತೆ!

    IPL Retention | ಇಂದು ಐಪಿಎಲ್‌ ರೀಟೆನ್ಶನ್‌ ಪಟ್ಟಿ ರಿಲೀಸ್‌ – ಕ್ಯಾಪ್ಟನ್‌ಗಳನ್ನೇ ಹೊರದಬ್ಬುವ ಸಾಧ್ಯತೆ!

    – 75 ಕೋಟಿ ಬಳಸಲು ಫ್ರಾಂಚೈಸಿಗಳಿಗೆ ಅನುಮತಿ

    ಮೈಸೂರು: ಇಡೀ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಕ್ರಿಕೆಟ್‌ ಅಭಿಮಾನಿಗಳ (Cricket Fans) ಚಿತ್ತ ಈಗ ಬಿಸಿಸಿಐನತ್ತ ನೆಟ್ಟಿದೆ. ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳು ಇಂದು ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿ (IPL Retention List) ಬಿಡುಗಡೆ ಮಾಡಲು ಇಂದು (ಅ.31) ಕೊನೆಯದಿನವಾಗಿದೆ.

    ತಾವು ಉಳಿಸಿಕೊಂಡ ಹಾಗೂ ತಾವು ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್‌ನ (IPL 2025) 10 ತಂಡಗಳ ಮಾಲೀಕರು ಸಂಜೆ 4:30 ರಿಂದ 5:30 ಗಂಟೆ ಒಳಗೆ ಪ್ರಕಟಿಸಲಿದ್ದಾರೆ. ಜಿಯೋ ಸಿನಿಮಾದಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಬಿಸಿಸಿಐ 6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಿದ್ದು, ರೀಟೆನ್ಶನ್‌ ಪಾಲಿಸಿ ಕೆಲವು ತಂಡಗಳಿಗೆ ಕಬ್ಬಿಣದ ಕಡಲೆ ಆಗಿದೆ. ತಂಡದಲ್ಲಿ ಬಹುತೇಕ ಸ್ಟಾರ್ ಆಟಗಾರರು ಇದ್ದು ಕೇವಲ ಆರು ಜನರನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.

    ಆಟಗಾರರ ಆಯ್ಕೆ ಹೇಗಿರಲಿದೆ?
    ಇನ್ನು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಈಗಾಗಲೇ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ. ಅಂದರೆ ಆರು ಜನರನ್ನು ಉಳಿಸಿಕೊಳ್ಳುವ ತಂಡದಲ್ಲಿ ಗರಿಷ್ಠ ಇಬ್ಬರು ವಿದೇಶಿ ಆಟಗಾರನಿಗೆ ಉಳಿಸಿಕೊಳ್ಳುವ ಅವಕಾಶ ಇದ್ದು, ಇಬ್ಬರು ಅನ್‌ ಕ್ಯಾಪ್ಡ್‌ ಪ್ಲೇಯರ್‌ಗಳನ್ನು ತಂಡ ಉಳಿಸಿಕೊಳ್ಳಬಹುದು. ಅಲ್ಲದೇ ಮಾಲೀಕರು ರೈಟ್‌ ಟು ಮ್ಯಾಚ್‌ ಕಾರ್ಡ್‌ ಅವಕಾಶದ ಲಾಭವನ್ನು ಸಹ ಐಪಿಎಲ್‌ ಹರಾಜಿನಲ್ಲಿ ಪಡೆಯಬಹುದು. ಕೇವಲ ಒಂದು ಕಾರ್ಡ್‌ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ.

    ಒಬ್ಬ ಪ್ಲೇಯರ್‌ಗೆ ಎಷ್ಟು ಹಣ?
    ಬಿಸಿಸಿಐ ಆಟಗಾರರಿಗೆ ಎಷ್ಟು ಹಣವನ್ನು ನೀಡಬೇಕು ಎಂಬುದನ್ನು ಸಹ ಸ್ಪಷ್ಟವಾಗಿದೆ ತಿಳಿಸಿದೆ. ಮೊದಲ ಮತ್ತು 4ನೇ ಆಯ್ಕೆಯ ಆಟಗಾರನಿಗೆ ತಲಾ 18 ಕೋಟಿ ರೂ. ನೀಡಬಹುದಾಗಿದೆ. 2 ಮತ್ತು 5ನೇ ಆಯ್ಕೆಯ ಆಟಗಾರನಿಗೆ ತಲಾ 14 ಕೋಟಿ ರೂ. ಹಾಗೂ 3ನೇ ಆಯ್ಕೆಯ ಆಟಗಾರನಿಗೆ 11 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಅಲ್ಲದೇ ಅನ್‌ ಕ್ಯಾಪ್ಡ್ ಆಟಗಾರರಿಗೆ 4 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ.

    ಪರ್ಸ್‌ ಸೈಜ್‌ ಎಷ್ಟು?
    ಈ ಬಾರಿ ಬಿಸಿಸಿಐ ಪರ್ಸ್‌ ಮೊತ್ತ ದೊಡ್ಡದು ಮಾರಿದೆ. ಈ ಬಾರಿ ಮಾಲೀಕರು 120 ಕೋಟಿ ರೂ.ಗಳನ್ನ ತಮ್ಮ ಪರ್ಸ್‌ನಲ್ಲಿ ಹೊಂದಿರುತ್ತಾರೆ. ಅಲ್ಲದೇ ಈ ಹಣದ ಮೂಲಕವೇ ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರಿಗೆ ಗಾಳ ಹಾಕಲಾಗುತ್ತದೆ. ಇನ್ನು ಒಂದು ತಂಡ ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶ ನೀಡಲಾಗಿದೆ. ರಿಟೇನ್‌ ಆಟಗಾರರಿಗೆ 75 ಕೋಟಿ ರೂ. ಬಳಕೆ ಮಾಡಲು ನಿಯಮ ವಿಧಿಸಿದೆ.

    ಮುಖ್ಯಾಂಶಗಳು
    * ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಧೋನಿ ರಿಟೇನ್‌ ಸಾಧ್ಯತೆ
    * ಆರ್‌ಸಿಬಿಗೆ ನಾಯಕನಾಗಿ ಕೊಹ್ಲಿ ರೀ ಎಂಟ್ರಿ ಸಾಧ್ಯತೆ
    * ಶ್ರೇಯಸ್‌ ಅಯ್ಯರ್‌, ಆಂಡ್ರೆ ರಸೆಲ್‌, ಮಿಚೆಲ್‌ ಸ್ಟಾರ್ಕ್‌ ತಂಡದಿಂದ ಹೊರಬೀಳುವ ಸಾಧ್ಯತೆ
    * 23 ಕೋಟಿ ರೂ.ಗೆ ಹೆನ್ರಿಚ್‌ ಕ್ಲಾಸೆನ್‌ ಉಳಿಸಿಕೊಳ್ಳಲು ಸನ್‌ರೈಸರ್ಸ್‌ ಪ್ಲ್ಯಾನ್‌
    * ಕೆ.ಎಲ್‌ ರಾಹುಲ್‌, ಫಾಫ್‌ ಡು ಪ್ಲೆಸಿಸ್‌, ಶ್ರೇಯಸ್‌ ಅಯ್ಯರ್‌ ಸೇರಿ ಕ್ಯಾಪ್ಟನ್‌ಗಳೇ ಹೊರಬೀಳುವ ಸಾಧ್ಯತೆ
    * ಕ್ಯಾಪ್ಟನ್‌ ಶುಭಮನ್‌ ಗಿಲ್‌ಗಿಂತ ಕಡಿಮೆ ಸಂಭಾವನೆಗೆ ಒಪ್ಪಿದ ಗಿಲ್‌?

    ರೀಟೆನ್ಶನ್‌ನಲ್ಲಿ ಗಮನಿಸಬೇಕಾದದ್ದು
    * 10 ಫ್ರಾಂಚೈಸಿಗಳು ತಲಾ 6 ಆಟಗಾರರನ್ನು ಹೊಂದಲು ಅವಕಾಶ
    * ಪ್ರತಿ ತಂಡಕ್ಕೆ ಗರಿಷ್ಠ 5 ವಿದೇಶಿ ಆಟಗಾರರನ್ನು ರಿಟೇನ್‌ ಮಾಡಿಕೊಳ್ಳಲು ಅವಕಾಶ
    * ಮೊದಲ ರಿಟೇನ್‌ ಆಟಗಾರರಿಗೆ 18 ಕೋಟಿ ರೂ.
    * ಪ್ರತಿ ಫ್ರಾಂಚೈಸಿಯು 2 ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳನ್ನ ಹೊಂದಲು ಅವಕಾಶ
    * 75 ಕೋಟಿ ರೂ.ಗಳನ್ನ ರೀಟೆನ್ಶನ್‌ಗೆ ಬಳಲು ಅವಕಾಶ
    * ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳಿಗೆ ಫ್ರಾಂಚೈಸಿಗಳು ನೀಡಬೇಕಾದ ಮೊತ್ತ 4 ಕೋಟಿ ರೂ.

  • ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ನಿಕೋಲಸ್‌ ಪೂರನ್‌ ಮುಂದಿನ ಕ್ಯಾಪ್ಟನ್‌?

    ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ನಿಕೋಲಸ್‌ ಪೂರನ್‌ ಮುಂದಿನ ಕ್ಯಾಪ್ಟನ್‌?

    ಲಕ್ನೋ: ಐಪಿಎಲ್‌ ಪ್ರವೇಶಿಸಿದ ಮೊದಲ ಎರಡು ಆವೃತ್ತಿಗಳಲ್ಲಿ ತಂಡವನ್ನು ಪ್ಲೇ ಆಫ್ಸ್‌ಗೆ ಕೊಂಡೊಯ್ದಿದ್ದ ನಾಯಕ ಕೆ.ಎಲ್‌ ರಾಹುಲ್‌ (KL Rahul) ಅವರನ್ನು ಬಿಡುಗಡೆಗೊಳಿಸಲು ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

    ಕೆ.ಎಲ್‌ ರಾಹುಲ್‌ ಅವರನ್ನು ಹೊರದಬ್ಬಲು ಮುಂದಾಗಿರುವ ಫ್ರಾಂಚೈಸಿಯು ಸ್ಫೋಟಕ ಬ್ಯಾಟರ್‌ ನಿಕೋಲಸ್ ಪೂರನ್ (Nicholas Pooran), ರಾಕೆಟ್‌ ವೇಗಿ ಮಯಾಂಕ್ ಯಾದವ್ ಮತ್ತು ಸ್ಪಿನ್ನರ್‌ ರವಿ ಬಿಷ್ಣೋಯಿ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಮುಂದಿನ ಆವೃತ್ತಿಯಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರು ಆರ್‌ಸಿಬಿ (RCB) ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳ ನಡುವೆ ಅವರನ್ನು ಫ್ರಾಂಚೈಸಿ‌ ಬಿಡುಗಡೆ ಮಾಡಿದೆ ಎಂದು ವರದಿಗಳು ಹೇಳಿವೆ.

    ಪೂರನ್‌ ಮುಂದಿನ ಕ್ಯಾಪ್ಟನ್‌?
    29 ವರ್ಷದ ನಿಕೋಲಸ್‌ ಪೂರನ್‌ 2017ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. ಆ ಬಳಿಕ 2019ರ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ ಅವರನ್ನ 4.2 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದ್ರೆ 2022ರ ಮೆಗಾ ಹರಾಜಿನಲ್ಲಿ 10.72 ಕೋಟಿ ರೂ.ಗೆ ಪೂರನ್‌ ಅವರನ್ನು ಖರೀದಿ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿ 2023ರಲ್ಲಿ ತಂಡದಿಂದ ರಿಲೀಸ್‌ ಮಾಡಿತು. ನಂತರ ಲಕ್ನೋ ಫ್ರಾಂಚೈಸಿ 16 ಕೋಟಿ ರೂ.ಗೆ ಪೂರನ್‌ ಅವರನ್ನ ಖರೀದಿ ಮಾಡಿತು. ಇದೀಗ ರಾಹುಲ್‌ ಅವರನ್ನು ಬಿಡುಗಡೆಗೊಳಿಸಿದ್ದು, ಪೂರನ್‌ ತಂಡದ ನಾಯಕನಾಗಲಿದ್ದಾರೆ ಎಂದು ತಿಳಿದುಬಂದಿದೆ. 2019 ರಿಂದ 2024ರ ವರೆಗೆ 76 ಪಂದ್ಯಗಳನ್ನಾಡಿರುವ ನಿಕೋಲಸ್‌ ಪೂರನ್‌, 1,769 ರನ್‌ ಗಳಿಸಿದ್ದಾರೆ. ಇದರಲ್ಲಿ 9 ಅರ್ಧಶತಕ, 113 ಬೌಂಡರಿ, 127 ಭರ್ಜರಿ ಸಿಕ್ಸರ್‌ಗಳೂ ಸೇರಿವೆ.

    2025 ರಿಂದ 2027ರ ಐಪಿಎಲ್‌ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ. ಅದಕ್ಕಾಗಿ ಅಕ್ಟೋಬರ್‌ 31ರ ಸಂಜೆ 4:30 ಗಂಟೆಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಬಿಡುಗಡೆಯಾಗಲಿದೆ.

    ಕನ್ನಡಿಗನಿಗೆ ಮಣೆಹಾಕಲಿದೆಯೇ ಆರ್‌ಸಿಬಿ?
    2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡದ ನಾಯಕನಾಗಿದ್ದ ಕೆ.ಎಲ್‌ ರಾಹುಲ್‌ (KL Rahul) ಸತತ 2 ಬಾರಿ ತಂಡವನ್ನು ಪ್ಲೇ ಆಫ್‌ ಪ್ರವೇಶಿಸುವಂತೆ ಮಾಡಿದ್ದರು. ಆದ್ರೆ ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ. 2024ರ ಐಪಿಎಲ್‌ ಆವೃತ್ತಿಯಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಲಕ್ನೋ ಹೀನಾಯವಾಗಿ ಸೋತಿತ್ತು. ಈ ವೇಳೆ ಲಕ್ನೋ ಫ್ರಾಂಚೈಸಿ ಮಾಲೀಕರಾದ ಸಂಜೀವ್‌ ಗೋಯೆಂಕಾ ರಾಹುಲ್‌ ವಿರುದ್ಧ ಮೈದಾನದಲ್ಲೇ ರೇಗಾಡಿದ್ದರು. ಈ ವೀಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯಿಂದ ರಾಹುಲ್‌, ಲಕ್ನೋ ತಂಡದಲ್ಲಿ ಮುಂದುವರಿಯುವ ಆಸಕ್ತಿ ಕಳೆದುಕೊಂಡಿದ್ದು, ಮೆಗಾ ಹರಾಜಿಗೂ ಮುನ್ನ ರಾಹುಲ್‌ ಆರ್‌ಸಿಬಿ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    KL RAHUL 04

    ಐಪಿಎಲ್‌ ವೃತ್ತಿ ಆರಂಭಿಸಿದ್ದು ಆರ್‌ಸಿಬಿಯಿಂದಲೇ:
    2013ರಿಂದ ಐಪಿಎಲ್‌ ವೃತ್ತಿ ಬದುಕು ಆರಂಭಿಸಿದ ಕೆ.ಎಲ್‌ ರಾಹುಲ್‌ ಮೊದಲು ಸೇರಿದ್ದು ಆರ್‌ಸಿಬಿ ತಂಡವನ್ನೇ. 2013ರಲ್ಲಿ ಆರ್‌ಸಿಬಿ ತಂಡದಲ್ಲಿ ಆಡಿದ್ದ ರಾಹುಲ್‌ 2014 ಮತ್ತು 2015ರಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಪಾಲಾಗಿದ್ದರು. ಪುನಃ 2016ರಲ್ಲಿ ಆರ್‌ಸಿಬಿ ತಂಡವನ್ನೇ ಸೇರಿಕೊಂಡಿದ್ದರು. 2017ರಲ್ಲಿ ಆರ್‌ಸಿಬಿಯಲ್ಲೇ ಆಡುವ ಅವಕಾಶವಿದ್ದರೂ ಗಾಯದ ಸಮಸ್ಯೆಯಿಂದ ಹೊರಗುಳಿದ್ದರು. ಬಳಿಕ 2018 ರಿಂದ 2021ರ ವರೆಗೆ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿದ್ದ ಕೆ.ಎಲ್‌ ರಾಹುಲ್‌ 2022ರಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಸೇರಿಕೊಂಡರು.

    ಈ ವರೆಗೆ ಐಪಿಎಲ್‌ನಲ್ಲಿ 132 ಪಂದ್ಯಗಳನ್ನಾಡಿರುವ ಕೆ.ಎಲ್‌ ರಾಹುಲ್‌ 134.61 ಸ್ಟ್ರೈಕ್ ರೇಟ್‌ನಲ್ಲಿ 4,683 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 37 ಅರ್ಧಶತಕ ಸೇರಿವೆ.

  • 2025ರ ಐಪಿಎಲ್‌ನಲ್ಲೂ ಮಹಿ ಆಡೋದು ಫಿಕ್ಸ್‌ – ಅ.31ಕ್ಕೆ ರಿಟೇನ್‌ ಆಟಗಾರರ ಭವಿಷ್ಯ!

    2025ರ ಐಪಿಎಲ್‌ನಲ್ಲೂ ಮಹಿ ಆಡೋದು ಫಿಕ್ಸ್‌ – ಅ.31ಕ್ಕೆ ರಿಟೇನ್‌ ಆಟಗಾರರ ಭವಿಷ್ಯ!

    ಮುಂಬೈ: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜಿಗೂ (IPL Mega Auction 2025) ಮುನ್ನವೇ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಲೆಜೆಂಡ್‌ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೀವಾಳ ಎಂ.ಎಸ್‌ ಧೋನಿ (MS Dhoni) 2025ರ ಐಪಿಎಲ್‌ ಆವೃತ್ತಿಯಲ್ಲೂ ಕಣಕ್ಕಿಳಿಯೋದು ಫಿಕ್ಸ್‌ ಆಗಿದೆ.

    ಈಗಾಗಲೇ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಫ್ರಾಂಚೈಸಿ ಮಾಲೀಕರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. 2025ರ ಐಪಿಎಲ್‌ನಲ್ಲೂ ಮಹಿ ಆಡುತ್ತಾರೆ ಎಂದು ಫ್ರಾಂಚೈಸಿ ಮಾಲೀಕ ಎನ್‌. ಶ್ರೀನಿವಾಸನ್‌ ತಿಳಿಸಿರುವುದಾಗಿ ವರದಿಯಾಗಿದೆ. ಆದ್ರೆ ಮಹಿ ತಂಡದಲ್ಲಿ ಮೊದಲ ರಿಟೇನ್‌ ಆಟಗಾರನಾಗಿ ಉಳಿಯುತ್ತಾರಾ? ಅಥವಾ ಅನ್‌ಕ್ಯಾಪ್ಡ್‌ ಪ್ಲೇಯರ್‌ (ಹೊಸಬರು) ಆಗಿ ತಂಡದಲ್ಲಿರುತ್ತಾರಾ? ಎಂಬುದು ಪಟ್ಟಿ ಬಿಡುಗಡೆ ಮಾಡಿದ ಬಳಿಕ ತಿಳಿಯಲಿದೆ. ಇದನ್ನೂ ಓದಿ: IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    ಅ.31ಕ್ಕೆ ಆಟಗಾರರ ಭವಿಷ್ಯ:
    2025 ಐಪಿಎಲ್‌ ಮೆಗಾ ಹರಾಜು ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್‌ 31ರಂದು ಸಂಜೆ 4:30ರ ವೇಳೆಗೆ ಎಲ್ಲಾ ಫ್ರಾಂಚೈಸಿಗಳು ತಂಡದ ರಿಟೇನ್‌ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಿವೆ. ಜಿಯೋ ಸಿನಿಮಾದಲ್ಲಿ (Jio Cinema) ಇದರ ನೇರ ಪ್ರಸಾರ ನಡೆಯಲಿದೆ. ಇದನ್ನೂ ಓದಿ: ಒಂದೇ ದಿನ 14 ವಿಕೆಟ್‌ ಉಡೀಸ್‌ – ಭಾರತದ ವಿರುದ್ಧ ಕಿವೀಸ್‌ಗೆ 301 ರನ್‌ಗಳ ಭರ್ಜರಿ ಮುನ್ನಡೆ

    ಮಹಿ ನಂ.1 ರಿಟೇನ್‌ ಆಟಗಾರ?
    ಮೂಲಗಳ ಪ್ರಕಾರ, ಮಹಿ ಮುಂದಿನ ಆವೃತ್ತಿಯಲ್ಲಿ ಚೆನ್ನೈ ತಂಡದಲ್ಲಿ ಆಡಲಿದ್ದು, ಫ್ರಾಂಚೈಸಿ ಅವರನ್ನು ನಂ.1 ರಿಟೇನರ್‌ ಮಾಡಿಕೊಂಡಿದೆ. ಇನ್ನುಳಿದಂತೆ ನಾಯಕ ಋತುರಾಜ್‌ ಗಾಯಕ್ವಾಡ್‌ ನಂ.2, ಆಲ್‌ರೌಂಡರ್‌ ರವೀಂದ್ರ ಜಡೇಜಾ ನಂ.3 ಆಟಗಾರನಾಗಿ ತಂಡದಲ್ಲಿ ಉಳಿಯಲಿದ್ದಾರೆ. ಇದರೊಂದಿಗೆ ಶಿವಂ ದುಬೆ, ಡೆವೊನ್ ಕಾನ್ವೆ, ಮತೀಶ ಪತಿರಣ ಮತ್ತು ರಮೀಜ್‌ ರಿಜ್ವಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ರೆ ಕೆಲವು ವರದಿಗಳು ಧೋನಿ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಅ.31ರಂದು ಫ್ರಾಂಚೈಸಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದ ಬಳಿಕ ಯಾರ ಭವಿಷ್ಯ ಹೇಗೆ? ಎಂಬುದು ಗೊತ್ತಾಗಲಿದೆ. ಇದನ್ನೂ ಓದಿ: ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

    ರಿಟೇನ್‌ ಆಟಗಾರರಿಗೆ ಮೊತ್ತ ಎಷ್ಟು?
    ಈ ಬಾರಿ ಐಪಿಎಲ್‌ನಲ್ಲಿ ಮಹತ್ವದ ಬದಲಾವಣೆ ತಂದಿರುವ ಬಿಸಿಸಿಐ 5 ಆಟಗಾರರನ್ನು ರಿಟೇನ್‌ ಮಾಡಿಕೊಳ್ಳಲು ಹಾಗೂ 1 ಆರ್‌ಟಿಎಂ ಕಾರ್ಡ್‌ (RTM Card) ಬಳಕೆಗೆ ಅನುಮತಿ ನೀಡಿದೆ. ಈ ಪೈಕಿ ಇಬ್ಬರು ಆಟಗಾರರ (ಮೊದಲು ಮತ್ತು 4ನೇ ರಿಟೇನ್‌ ಆಟಗಾರ) ತಲಾ 18 ಕೋಟಿ ರೂ. ಪಡೆಯಲಿದ್ದಾರೆ. 2 ಮತ್ತು 5ನೇ ಆಟಗಾರ ತಲಾ 14 ಕೋಟಿ ರೂ. ಹಾಗೂ 3ನೇ ರಿಟೇನ್‌ ಆಟಗಾರ 11 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಆದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದ ಆಟಗಾರರನ್ನು ಅನ್‌ಕ್ಯಾಪ್ಡ್‌ ಪ್ಲೇಯರ್‌ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ನಿಯಮದಂತೆ 4 ಕೋಟಿ ರೂ. ಮಾತ್ರವೇ ಸಂಭಾವನೆ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.