Tag: IPL Finals

  • ಈ ಸಲ ಕಪ್ ನಮ್ದು, ಒನ್‌ ಡೇ ಪಾನಿಪುರಿ ನಿಮ್ದು..!- RCB ಅಭಿಮಾನಿಯಿಂದ ಫ್ರೀ ಚಾಟ್ಸ್

    ಈ ಸಲ ಕಪ್ ನಮ್ದು, ಒನ್‌ ಡೇ ಪಾನಿಪುರಿ ನಿಮ್ದು..!- RCB ಅಭಿಮಾನಿಯಿಂದ ಫ್ರೀ ಚಾಟ್ಸ್

    ಬೆಂಗಳೂರು: ಈ ಬಾರಿ ಐಪಿಎಲ್‌ನಲ್ಲಿ (IPL) ಆರ್‌ಸಿಬಿ (RCB) ಫೈನಲ್ ತಲುಪಿರುವ ಹಿನ್ನೆಲೆ ಅಭಿಮಾನಿಯೊಬ್ಬರು ಫ್ರೀ ಚಾಟ್ಸ್ ವಿತರಿಸಲಿದ್ದಾರೆ.

    ಹೌದು, ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ (Mahalakshmi Layout) ಅನಿಲ್ ಚಾಟ್ಸ್ ಸೆಂಟರ್‌ನ ಮಾಲೀಕರು ಉಚಿತ ಚಾಟ್ಸ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೆ ಎಂಟ್ರಿಯಾಗಿರುವ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ಜೂ.8ರವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ

    ಸದ್ಯ ತಮ್ಮ ಚಾಟ್ ಸೆಂಟರ್ ಮುಂದೆ ಬೋರ್ಡ್ ಹಾಕಿಕೊಂಡಿದ್ದು, ಈ ಸಲ ಕಪ್ ನಮ್ದು ಆದ್ರೆ ಒನ್‌ ಡೇ ಪಾನಿಪುರಿ ನಿಮ್ದು, ಮಸಾಲಾಪುರಿ, ಪಾನಿಪುರಿ, ಭೇಲ್ ಪುರಿ ಫ್ರೀ ಕೊಡುವುದಾಗಿ ಬರೆದುಕೊಂಡಿದ್ದಾರೆ. ಇದೇ ಜೂ.4 ರಂದು ಸಂಜೆ 5 ಗಂಟೆಯಿಂದ ಉಚಿತ ಚಾಟ್ಸ್ ನೀಡಲಿದ್ದಾರೆ.

    ನಾಳೆ ಸಂಜೆ 7:30ಕ್ಕೆ ಆರ್‌ಸಿಬಿ ಹಾಗೂ ಪಂಜಾಬ್ ಮಧ್ಯೆ ಫೈನಲ್ ಹಣಾಹಣಿ ನಡೆಯಲಿದ್ದು, ರೋಚಕ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

  • IPL 2023 Finals: ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು, ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್ – CSK ರನ್ನರ್ ಅಪ್?

    IPL 2023 Finals: ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು, ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್ – CSK ರನ್ನರ್ ಅಪ್?

    ಅಹಮದಾಬಾದ್‌: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಗುಜರಾತ್‌ ಟೈಟಾನ್ಸ್‌ (GT) ನಡುವಿನ ಫೈನಲ್ಸ್‌ (IPL Finals) ಪಂದ್ಯ ಭಾನುವಾರ ಮಳೆಯಿಂದಾಗಿ ರದ್ದಾಗಿದೆ. ಸೋಮವಾರವೂ (ಮೇ 29) ಮಳೆಯ ಆರ್ಭಟ ಮುಂದುವರಿದರೆ, ಲೀಗ್‌ ರ‍್ಯಾಂಕಿಂಗ್‌ ಪಟ್ಟಿಯ ಆಧಾರದ ಮೇಲೆ ಚಾಂಪಿಯನ್ಸ್‌ ಪಟ್ಟ ನಿರ್ಧರಿಸಲಾಗುತ್ತದೆ.

    ಸೋಮವಾರ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ನಡುವೆ ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್‌ ಹೊರಬಿದ್ದಂತೆ ಕಾಣ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಎಲ್‌ಇಡಿ ಸ್ಕ್ರೀನ್‌ನ ಫೋಟೋವೊಂದು ಸದ್ದು ಮಾಡುತ್ತಿದೆ. ಭಾನುವಾರ ರಾತ್ರಿ ಮಳೆಯಿಂದಾಗಿ ಪಂದ್ಯವನ್ನ ರದ್ದು ಮಾಡಲಾಯಿತು. ಈ ವೇಳೆ ಕ್ರಿಕೆಟ್‌ ವೀಕ್ಷಣೆಗೆ ಇರಿಸಲಾಗಿದ್ದ ಎಲ್‌ಇಡಿ ಸ್ಕ್ರೀನ್‌ಬೋರ್ಡ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ರನ್ನರ್‌ ಅಪ್‌ ಎಂದು ತೋರಿಸಲಾಗುತ್ತಿತ್ತು. ಈ ಫೋಟೋ ಸಖತ್‌ ವೈರಲ್‌ ಆಗ್ತಿದೆ. ಇದರಿಂದ ಮತ್ತೆ ಕ್ರಿಕೆಟ್‌ ಅಭಿಮಾನಿಗಳನ್ನ ಗೊಂದಲಕ್ಕೀಡುಮಾಡಿದೆ, ಜೊತೆಗೆ ಮ್ಯಾಚ್‌ ಫಿಕ್ಸಿಂಗ್‌ ಸದ್ದು ಕೇಳಿಬರುತ್ತಿದೆ. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ ಬೈ ಹೇಳಿದ CSK ಸ್ಟಾರ್‌ ಅಂಬಾಟಿ ರಾಯುಡು

    ಮತ್ತೆ ಮಳೆಯಾದ್ರೆ ಯಾರಿಗೆ ಲಾಭ?
    ಹೌದು.. ನಿನ್ನೆಯಂತೆ ಇಂದೂ ಸಹ ಮಳೆ ಮುಂದುವರಿದು ರಾತ್ರಿ 9:40ರ ಒಳಗೆ ಬಿಡುವು ಸಿಕ್ಕರೆ ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಯಲಿದೆ. 5 ಓವರ್‌ಗಳ ಪಂದ್ಯವನ್ನಾಡಿಸಲು ರಾತ್ರಿ 12:06ರ ವರೆಗೆ ಸಮಯವಿರಲಿದೆ. ಅದೂ ಸಾಧ್ಯವಾಗದಿದ್ದಲ್ಲಿ ಸೂಪರ್‌ ಓವರ್‌ ಆಡಿಸಲು ರಾತ್ರಿ 12:50ರ ವರೆಗೆ ಸಮಯವಿರಲಿದೆ. ಒಂದು ವೇಳೆ ಸಂಪೂರ್ಣವಾಗಿ ಪಂದ್ಯ ರದ್ದಾದರೆ ಲೀಗ್‌ ಹಂತದ ಮುಕ್ತಾಯಕ್ಕೆ ಹೆಚ್ಚು ಅಂಕ ಪಡೆದ ತಂಡವನ್ನ ಚಾಂಪಿಯನ್‌ ಆಗಿ ಘೋಷಣೆ ಮಾಡಲಾಗುತ್ತದೆ. ಇದನ್ನೂ ಓದಿ: ಗಿಲ್‌ ಗಿಲ್‌ ಗಿಲ್‌ – ಕೊಹ್ಲಿ IPL ದಾಖಲೆ ಉಡೀಸ್‌ ಮಾಡ್ತಾರಾ ಗಿಲ್‌?

    ಐಪಿಎಲ್‌ 14 ಲೀಗ್‌ ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಗುಜರಾತ್‌ ಟೈಟಾನ್ಸ್‌ +0.809 ರನ್‌ರೇಟ್‌ನೊಂದಿಗೆ 20 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. ಆದ್ರೆ 14ರಲ್ಲಿ 8ರಲ್ಲಿ ಗೆಲುವು ಸಾಧಿಸಿರುವ‌ ಚೆನ್ನೈ ಸೂಪರ್‌ ಕಿಂಗ್ಸ್‌ +0.652 ರನ್‌ರೇಟ್‌ನೊಂದಿಗೆ 17 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಲೀಗ್‌ ಹಂತದ ಪಾಯಿಂಟ್ಸ್‌ ಆಧರಿಸಿ ಚಾಂಪಿಯನ್ಸ್‌ ನಿರ್ಧರಿಸುವುದಾದರೆ, ಗುಜರಾತ್‌ ಟೈಟಾನ್ಸ್‌ ಸತತ 2ನೇ ಬಾರಿಗೆ ಚಾಂಪಿಯನ್‌ ಕಿರೀಟ ಧರಿಸಲಿದೆ.

  • IPL 2023 Finals: ಬಿಟ್ಟು ಬಿಟ್ಟು ಕಾಡುತ್ತಿದೆ ಮಳೆ – ಕ್ಲೈಮ್ಯಾಕ್ಸ್‌ ಕದನಕ್ಕೆ ಬ್ರೇಕ್‌?

    IPL 2023 Finals: ಬಿಟ್ಟು ಬಿಟ್ಟು ಕಾಡುತ್ತಿದೆ ಮಳೆ – ಕ್ಲೈಮ್ಯಾಕ್ಸ್‌ ಕದನಕ್ಕೆ ಬ್ರೇಕ್‌?

    ಅಹಮದಾಬಾದ್‌: ಗುಜರಾತ್‌ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಫೈನಲ್‌ ಪಂದ್ಯ ರೋಚಕ ಘಟ್ಟಕ್ಕೆ ಬಂದುನಿಂತಿದೆ. 7 ಗಂಟೆಗೆ ಶುರುವಾದ ಮಳೆ ಬಿಟ್ಟು ಬಿಟ್ಟು ಕಾಡುತ್ತಿದೆ. ರಾತ್ರಿ 10.50 ಸಮಯ ಮೀರಿದರೂ ಮಳೆ ಬಿಡುವು ನೀಡದೇ ಆಟವಾಡಿಸುತ್ತಿದೆ.

    ರಾತ್ರಿ 9.35ರ ವೇಳೆಗೆ ಮಳೆ ನಿಂತರೇ 20 ಓವರ್‌ಗಳ ಪಂದ್ಯವನ್ನೇ ಆಡಿಸಲು ಐಪಿಎಲ್‌ ಮಂಡಳಿ ನಿರ್ಧರಿಸಿತ್ತು. ಆದ್ರೆ ಸಮಯ ಮೀರಿದ್ದು, ಇದೀಗ 5 ಓವರ್‌ಗಳ ಪಂದ್ಯಕ್ಕೆ ಆಟಗಾರರು ಅಣಿಯಾಗಬೇಕಾಗಿದೆ. ಒಂದು ವೇಳೆ 11 ಗಂಟೆ ಬಳಿಕ ಮಳೆ ನಿಂತರೇ ಮೈದಾನ ಶುಚಿಗೊಳಿಸಲು ಕನಿಷ್ಠ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ನಂತರ ಮಧ್ಯರಾತ್ರಿ 12.06 ರಿಂದ 5 ಓವರ್‌ ಪಂದ್ಯಕ್ಕೆ ಸೀಮಿತಗೊಳಿಸಲಾಗುತ್ತದೆ. ಮಳೆ ನಿರಂತರವಾಗಿ ಮುಂದುವರಿದರೆ ಪಂದ್ಯ ರದ್ದು ಮಾಡಬೇಕಾಗುತ್ತದೆ ಎಂದು ಐಪಿಎಲ್‌ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ ಬೈ ಹೇಳಿದ CSK ಸ್ಟಾರ್‌ ಅಂಬಾಟಿ ರಾಯುಡು

    ಸಂಜೆ 7 ಗಂಟೆಯಿಂದಲೇ ಆರಂಭಗೊಂಡ ಮಳೆ 8:30ರ ವೇಳೆಗೆ ಬಿಡುವು ನೀಡಿತ್ತು. ಇನ್ನೇನು ಪಂದ್ಯ ಆರಂಭಕ್ಕೆ ಎಲ್ಲ ಸಿದ್ಧತೆ ಮತ್ತೆ ವಕ್ಕರಿಸಿದ ಮಳೆರಾಯ ಬಿಟ್ಟೂ ಬಿಡದೇ ಕಾಡುತ್ತಿದೆ. ಈಗಾಗಲೇ ಪ್ರೇಕ್ಷಕರು ಹೊರಾಂಗಣದತ್ತ ಮುಖ ಮಾಡುತ್ತಿದ್ದಾರೆ. ಆದ್ದರಿಂದ ಇಂದಿನ ಪಂದ್ಯ ನಡೆಯುವುದು ಅನುಮಾನವಾಗಿದೆ. ಇಂದಿಗೆ ಪಂದ್ಯ ರದ್ದಾದರೇ ಮೇ 29 ರಂದು ಸಂಜೆ 7:30ಕ್ಕೆ ಪಂದ್ಯ ನಡೆಯಲಿದೆ. ಇದನ್ನೂ ಓದಿ: IPL 2023 Finals: ಕ್ಲೈಮ್ಯಾಕ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ – ಪಂದ್ಯ ರದ್ದಾದ್ರೆ ಕಥೆ ಏನು?

  • IPL 2023 Finals: ಕ್ಲೈಮ್ಯಾಕ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ – ಪಂದ್ಯ ರದ್ದಾದ್ರೆ ಕಥೆ ಏನು?

    IPL 2023 Finals: ಕ್ಲೈಮ್ಯಾಕ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ – ಪಂದ್ಯ ರದ್ದಾದ್ರೆ ಕಥೆ ಏನು?

    ಅಹಮದಾಬಾದ್‌: 16ನೇ ಐಪಿಎಲ್‌ (IPL 2023) ಆವೃತ್ತಿ ಅಂತಿಮ ಘಟ್ಟಕ್ಕೆ ತಲುಪಿದೆ. ಭಾನುವಾರ ಗುಜರಾತ್‌ ಟೈಟಾನ್ಸ್‌ (GT) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವೆ ರೋಚಕ ಕಾದಾಟ ನಡೆಯಲಿದೆ. ಆದ್ರೆ ಈ ಪಂದ್ಯಕ್ಕೆ ಮಳೆ (Rain) ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    10ನೇ ಬಾರಿಗೆ ಐಪಿಎಲ್‌ ಫೈನಲ್‌ಗೆ ಲಗ್ಗೆಯಿಟ್ಟಿರುವ ಚೆನ್ನೈ 4 ಬಾರಿ ಪ್ರಶಸ್ತಿ ಗೆದ್ದಿದೆ. ಆದ್ರೆ ಕಳೆದ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಬಲಿಷ್ಠ ಗುಜರಾತ್‌ ಟೈಟಾನ್ಸ್‌ ಪಡೆ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದು, ಸತತ 2ನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲು ಕಾತುರವಾಗಿದೆ. ಆದ್ರೆ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ. ಭಾನುವಾರ ರಾತ್ರಿ ಅಹಮದಾಬಾದ್‌ನಲ್ಲಿ 40% ರಿಂದ 65% ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

    ವರದಿಯ ಪ್ರಕಾರ, ಭಾನುವಾರ (ಮೇ 28) ಸಂಜೆ ವೇಳೆಗೆ 78% ಮೋಡ ಕವಿದ ವಾತಾವರಣವಿದ್ದು, ಆಟ ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮಳೆ ಬಂದ್ರೆ, ಕನಿಷ್ಠ 2 ಗಂಟೆಗಳ ಕಾಲ ಸುರಿಯಲಿದೆ ಎನ್ನಲಾಗಿದೆ.

    ಮಳೆ ಅಡ್ಡಿಯಾದ್ರೆ ಕಥೆ ಏನು?
    ಫೈನಲ್‌ ಪಂದ್ಯ ಮಳೆಯಿಂದಾಗಿ ಅಡ್ಡಿಯಾದರೆ ಅದಕ್ಕೆ ರೈನ್‌ ರೂಲ್ಸ್‌ ಮೂಲಕ ಫಲಿತಾಂಶ ನಿಗದಿಮಾಡಲು ಐಪಿಎಲ್‌ ಮಂಡಳಿ ನಿರ್ಧರಿಸಿದೆ. ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ರಾತ್ರಿ 9.40ರ ಒಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. ಇತ್ತಂಡಗಳು 20 ಓವರ್​ಗಳನ್ನು ಆಡಲಿದೆ. ಒಂದು ವೇಳೆ 9.40ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್​ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಬೇಕು.

    ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ. ರಾತ್ರಿ 11.56 ರಿಂದ 12.50ರ ಒಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್​ ನಡೆಯಲಿದೆ. ಆದರೆ ಸೂಪರ್ ಓವರ್​ ನಡೆಸಲು ಪಿಚ್ ಮತ್ತು ಮೈದಾನವು ಆಟಕ್ಕೆ ಸಿದ್ಧವಾಗಿರಬೇಕು. ಅದರಂತೆ 12.50ಕ್ಕೆ ಸೂಪರ್ ಓವರ್​ ಪಂದ್ಯ ಶುರುವಾಗಲಿದೆ.

    ಸೂಪರ್‌ ಓವರ್‌ ನಡೆಸುವುದಕ್ಕೂ ಸಾಧ್ಯವಾಗದಿದ್ದಲ್ಲಿ ಐಪಿಎಲ್‌ ಲೀಗ್‌ ಪಾಯಿಂಟ್ಸ್‌ ರ‍್ಯಾಂಕಿಂಗ್‌ನಿಂದ ಚಾಂಪಿಯನ್ಸ್‌ ಎಂದು ಘೋಷಿಸಲು ಅಥವಾ ಪಂದ್ಯವನ್ನು ಮುಂದೂಡಲು ಐಪಿಎಲ್‌ ಮಂಡಳಿ ನಿರ್ಧರಿಸಿದೆ.

    ಐಪಿಎಲ್‌ 14 ಲೀಗ್‌ ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಗುಜರಾತ್‌ ಟೈಟಾನ್ಸ್‌ +0.809 ರನ್‌ರೇಟ್‌ನೊಂದಿಗೆ 20 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. ಆದ್ರೆ 14ರಲ್ಲಿ 8ರಲ್ಲಿ ಗೆಲುವು ಸಾಧಿಸಿರುವ‌ ಚೆನ್ನೈ ಸೂಪರ್‌ ಕಿಂಗ್ಸ್‌ +0.652 ರನ್‌ರೇಟ್‌ನೊಂದಿಗೆ 17 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಲೀಗ್‌ ಹಂತದ ಪಾಯಿಂಟ್ಸ್‌ ಆಧರಿಸಿ ಚಾಂಪಿಯನ್ಸ್‌ ನಿರ್ಧರಿಸುವುದಾದರೆ, ಗುಜರಾತ್‌ ಟೈಟಾನ್ಸ್‌ ಸತತ 2ನೇ ಬಾರಿಗೆ ಚಾಂಪಿಯನ್‌ ಕಿರೀಟ ಧರಿಸಲಿದೆ.