ಬೆಂಗಳೂರು: 2025ರ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗೆದ್ದು 18 ವರ್ಷಗಳ ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿತು. ಆದ್ರೆ ಈ ಖುಷಿ ಒಂದು ದಿನವೂ ಉಳಿಯಲಿಲ್ಲ. ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ರು. ಈ ಎಲ್ಲ ಬೆಳವಣಿಗೆಗಳ ನಡುವೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ (TJ Abraham) ಆರ್‌ಸಿಬಿ ವಿರುದ್ಧ ಫಿಕ್ಸಿಂಗ್ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ (Bengaluru Stampede Case) ಸಂಬಂಧಿಸಿದಂತೆ ಸಿಎಂ, ಡಿಸಿಎಂ ಸೇರಿದಂತೆ ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಟಿಜೆ ಅಬ್ರಹಾಂ ದೂರು ದಾಖಲಿಸಿದ್ದಾರೆ. ಇದೇ ವೇಳೆ ಆರ್‌ಸಿಬಿ ವಿರುದ್ಧ ಫಿಕ್ಸಿಂಗ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: `ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್
ಪಂದ್ಯ ಆರಂಭಕ್ಕೂ ಮುನ್ನವೇ ಕಾರ್ಯಕ್ರಮ ಆಯೋಜನೆ ಪ್ಲ್ಯಾನ್ ಮಾಡಿದ್ದು ಹೇಗೆ? ಆಗಿದ್ದರೆ ಮೊದಲೇ ಆರ್‌ಸಿಬಿ ಗೆಲ್ಲುವ ಬಗ್ಗೆ ನಿಮಗೆ ಮಾಹಿತಿ ಇತ್ತಾ? ಅಥವಾ ಮ್ಯಾಚ್ ಫಿಕ್ಸಿಂಗ್ ಆಗಿತ್ತಾ? ಈ ಬಗ್ಗೆ ಅನುಮಾನ ಇದೆ. ಈ ಬಗ್ಗೆಯೂ ಬಿಸಿಸಿಐಗೆ ಮುಂದಿನ ದಿನಗಳಲ್ಲಿ ದೂರು ಕೊಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: 5 ಎಸೆತಗಳಲ್ಲಿ 5 ವಿಕೆಟ್ – ಮತ್ತೆ ದಿಗ್ವೇಶ್ ರಾಥಿ ಕಮಾಲ್
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಚಾಂಪಿಯನ್ ಕಿರೀಟವನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ 17 ವರ್ಷ, 6,256 ದಿನಗಳು, 90,08,640 ನಿಮಿಷಗಳ ಕಾಯುವಿಕೆಗೆ ಅಂತ್ಯಹಾಡಿದೆ. 18 ವರ್ಷಗಳನ್ನೂ ಪೂರೈಸಿರುವ ವಿಶ್ವದ ಶ್ರೀಮಂತ ಟೂರ್ನಿಯಲ್ಲಿ ಈವರೆಗೆ ಯಾವೆಲ್ಲಾ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ? ಇದುವರೆಗೂ ಟ್ರೋಫಿ ಗೆಲ್ಲದ ತಂಡ ಯಾವುದು? ಎಂಬ ವಿವರ ಇಲ್ಲಿದೆ…
ಪ್ರಸ್ತುತ ಆಡುತ್ತಿರುವ ತಂಡಗಳು ಮತ್ತು ನಿಷ್ಕ್ರಿಯ ತಂಡಗಳು ಸೇರಿ ಒಟ್ಟು 15 ತಂಡಗಳು ಈವರೆಗೆ ಐಪಿಎಲ್‌ನಲ್ಲಿ ಆಡಿವೆ ಮತ್ತು ಆಡುತ್ತಿವೆ. ಆದರೆ ಟ್ರೋಫಿ ಗೆದ್ದಿರುವ ತಂಡಗಳು ಮಾತ್ರ 8 ಮಾತ್ರ. ಉಳಿದಂತೆ ಪ್ರಸ್ತುತ ಆಡುತ್ತಿರುವ 3 ಸೇರಿ ಒಟ್ಟು 8 ತಂಡಗಳು (ನಿಷ್ಕ್ರಿಯ ತಂಡಗಳು ಸೇರಿ) ಪ್ರಶಸ್ತಿ ಜಯಿಸಿಲ್ಲ ಎಂಬಹುದು ಗಮನಾರ್ಹ.
18ನೇ ಆವೃತ್ತಿಯಲ್ಲಿ ಆರ್‌ಸಿಬಿಗೆ ಚೊಚ್ಚಲ ಕಿರೀಟ
2008ರಲ್ಲಿಂದಲೂ ʻಈ ಸಲ ಕಪ್ ನಮ್ದೇʼ ಅನ್ನೋ ಘೋಷವಾಕ್ಯದೊಂದಿಗೆ ಕಣಕ್ಕಿಳಿಯುತ್ತಿದ್ದ ಆರ್‌ಸಿಬಿ, ಈ ಬಾರಿಯೂ ಅದೇ ಉತ್ಸಾಹದಲ್ಲಿತ್ತು. ಅಭಿಮಾನಿಗಳ ನಿರೀಕ್ಷೆಯಂತೆ ಕೊನೆಗೂ 18ನೇ ಆವೃತ್ತಿಯ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಚಾಂಪಿಯನ್ಸ್
2008ರ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಟ್ರೋಫಿ ಗೆದ್ದುಕೊಂಡಿತು. ಚುಟುಕು ಪಂದ್ಯಾವಳಿಗೆ ಹುಮ್ಮಸು ತುಂಬಿದ್ದ ಈ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಶೇನ್ ವಾರ್ನ್ ತಂಡದ ನಾಯಕತ್ವ ವಹಿಸಿದ್ದರು.
2009ರಲ್ಲಿ ಡೆಕ್ಕನ್ ಚಾರ್ಜಸ್‌ಗೆ ಕಿರೀಟ
2009ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ಆಗಲೇ ಜನಮನ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪದಾರ್ಪಣೆ ಮಾಡಿದ 2ನೇ ಆವೃತ್ತಿಯಲ್ಲೇ ಫೈನಲ್ ತಲುಪಿತ್ತು. ಆದ್ರೆ ಫೈನಲ್‌ನಲ್ಲಿ ಆಡಂ ಗಿಲ್ಕ್ರಿಸ್ಟ್ ನಾಯಕತ್ವದಲ್ಲಿದ್ದ ಡೆಕ್ಕನ್ ಚಾರ್ಜಸ್ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತು. 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಡೆಕ್ಕನ್ ಪ್ರಶಸ್ತಿ ಗೆದ್ದುಕೊಂಡಿತು.
5 ಬಾರಿ ಚೆನ್ನೈ ʻಸೂಪರ್ʼ ಚಾಂಪಿಯನ್
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹೊರತುಪಡಿಸಿದ್ರೆ ಅತಿಹೆಚ್ಚು ಬಾರಿ ಚಾಂಪಿಯನ್ಸ್ ಪಟ್ಟ ಧಕ್ಕಿಸಿಕೊಂಡ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್. ಇದರ ಖ್ಯಾತಿಯೂ ಸಹ ಚೆನ್ನೈ ತಂಡದ ಜೀವಾಳವೇ ಆಗಿರುವ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ಅವರಿಗೆ ಸಲ್ಲುತ್ತದೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010, 2011, 2018, 2021, 2023ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಋತುರಾಜ್ ಗಾಯಕ್ವಾಡ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಮುಂಬೈಗೂ 5 ಬಾರಿ ಕಿರೀಟ:
ಚೆನ್ನೈ ಸೂಪರ್ ಕಿಂಗ್ಸ್ ತಂಡದಂತೆ ಮುಂಬೈ ಇಂಡಿಯನ್ಸ್ ಸಹ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2013, 2015, 2017, 2019, 2020ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿದ್ದಾರೆ.
ಹಾಲಿ ಚಾಂಪಿಯನ್ ಕೆಕೆಆರ್‌ಗೆ 3 ಬಾರಿ ಪಟ್ಟ:
2024ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ಸ್ ಆಗಿದೆ. 2012, 2014 ಗೌತಮ್ ಗಂಭೀರ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿದ್ದ ಕೆಕೆಆರ್, 2024 ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದೆ ವಿಶೇಷವೆಂದ್ರೆ ಆಗಲೂ ಕೆಕೆಆರ್‌ಗೆ ಮೆಂಟರ್ ಆಗಿದ್ದು ಗೌತಮ್ ಗಂಭೀರ್ ಅವರೇ. ಅಜಿಂಕ್ಯ ರಹಾನೆ ಪ್ರಸ್ತುತ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಸನ್ ರೈಸರ್ಸ್ 2016ರ ಚಾಂಪಿಯನ್
2016ರ ರೋಚಕ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ರೋಚಕ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತ್ತು. ಅಂದು ಡೇವಿಡ್ ವಾರ್ನರ್ ತಂಡದ ನಾಯಕತ್ವ ವಹಿಸಿದ್ದರು.
ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಟೈಟಾನ್ಸ್
ಇನ್ನೂ 2022ರಲ್ಲಿ ಟೂರ್ನಿಯಲ್ಲಿ ಆಗಷ್ಟೇ ಪದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿಗೆ ಮುತ್ತಿಟ್ಟಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರಶಸ್ತಿ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿತ್ತು.
ಈವರೆಗೆ 11 ವರ್ಷಗಳ ಬಳಿಕ 2ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ನಿಷ್ಕ್ರಿಯಗೊಂಡ ತಂಡಗಳ ಪೈಕಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪುಣೆ ವಾರಿಯರ್ಸ್, ಗುಜರಾತ್ ಲಯನ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ತಂಡಗಳು ಟ್ರೋಫಿ ಗೆದ್ದಿಲ್ಲ.
18ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಶುರುವಾಗಿದ್ದು, ಇದೇ ಮಾರ್ಚ್ 22ರಿಂದ ಮೆಗಾ ಟೂರ್ನಿ ಆರಂಭಗೊಳ್ಳಲಿದೆ. 2025ರ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳ ನಡುವೆ ನಡೆಯಲಿದೆ. ಇನ್ನೂ ಮೊದಲ ಸೂಪರ್ ಸಂಡೇನಲ್ಲಿ ತಲಾ 5 ಬಾರಿ ಚಾಂಪಿಯನ್‌ಗಳಾಗಿರುವ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಇದೀಗ 17 ವರ್ಷಗಳನ್ನೂ ಪೂರೈಸಿರುವ ವಿಶ್ವದ ಶ್ರೀಮಂತ ಟೂರ್ನಿ 18ನೇ ವರ್ಷಕ್ಕೆ ಕಾಲಿಟ್ಟಿದೆ. ಹೀಗಿರುವಾಗ ಈವರೆಗೆ ಯಾವೆಲ್ಲಾ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ? ಇದುವರೆಗೂ ಟ್ರೋಫಿ ಗೆಲ್ಲದ ತಂಡ ಯಾವುದು? ಎಂಬ ವಿವರ ಇಲ್ಲಿದೆ…
2008ರಲ್ಲಿ ಆರಂಭಗೊಂಡ ಐಪಿಎಲ್ ಟೂರ್ನಿ 2024ರ ವರೆಗೆ 17 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಇದೀಗ 18ನೇ ಆವೃತ್ತಿಗೆ ಸಜ್ಜಾಗಿದೆ. ಪ್ರಸ್ತುತ ಆಡುತ್ತಿರುವ ತಂಡಗಳು ಮತ್ತು ನಿಷ್ಕ್ರಿಯ ತಂಡಗಳು ಸೇರಿ ಒಟ್ಟು 15 ತಂಡಗಳು ಈವರೆಗೆ ಐಪಿಎಲ್‌ನಲ್ಲಿ ಆಡಿವೆ ಮತ್ತು ಆಡುತ್ತಿವೆ. ಆದರೆ ಟ್ರೋಫಿ ಗೆದ್ದಿರುವ ತಂಡಗಳು ಮಾತ್ರ 7 ಮಾತ್ರ. ಉಳಿದಂತೆ ಪ್ರಸ್ತುತ ಆಡುತ್ತಿರುವ ನಾಲ್ಕು ಸೇರಿ ಒಟ್ಟು 8 ತಂಡಗಳು (ನಿಷ್ಕ್ರಿಯ ತಂಡಗಳು ಸೇರಿ) ಪ್ರಶಸ್ತಿ ಜಯಿಸಿಲ್ಲ ಎಂಬಹುದು ಗಮನಾರ್ಹ.
ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಚಾಂಪಿಯನ್ಸ್
2008ರ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಟ್ರೋಫಿ ಗೆದ್ದುಕೊಂಡಿತು. ಚುಟುಕು ಪಂದ್ಯಾವಳಿಗೆ ಹುಮ್ಮಸು ತುಂಬಿದ್ದ ಈ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಶೇನ್ ವಾರ್ನ್ ತಂಡದ ನಾಯಕತ್ವ ವಹಿಸಿದ್ದರು.
2009ರಲ್ಲಿ ಡೆಕ್ಕನ್ ಚಾರ್ಜಸ್‌ಗೆ ಕಿರೀಟ
2009ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ಆಗಲೇ ಜನಮನ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪದಾರ್ಪಣೆ ಮಾಡಿದ 2ನೇ ಆವೃತ್ತಿಯಲ್ಲೇ ಫೈನಲ್ ತಲುಪಿತ್ತು. ಆದ್ರೆ ಫೈನಲ್‌ನಲ್ಲಿ ಆಡಂ ಗಿಲ್ಕ್ರಿಸ್ಟ್ ನಾಯಕತ್ವದಲ್ಲಿದ್ದ ಡೆಕ್ಕನ್ ಚಾರ್ಜಸ್ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತು. 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಡೆಕ್ಕನ್ ಪ್ರಶಸ್ತಿ ಗೆದ್ದುಕೊಂಡಿತು.
5 ಬಾರಿ ಚೆನ್ನೈ ʻಸೂಪರ್ʼ ಚಾಂಪಿಯನ್
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹೊರತುಪಡಿಸಿದ್ರೆ ಅತಿಹೆಚ್ಚು ಬಾರಿ ಚಾಂಪಿಯನ್ಸ್ ಪಟ್ಟ ಧಕ್ಕಿಸಿಕೊಂಡ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್. ಇದರ ಖ್ಯಾತಿಯೂ ಸಹ ಚೆನ್ನೈ ತಂಡದ ಜೀವಾಳವೇ ಆಗಿರುವ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ಅವರಿಗೆ ಸಲ್ಲುತ್ತದೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010, 2011, 2018, 2021, 2023ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಋತುರಾಜ್ ಗಾಯಕ್ವಾಡ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಮುಂಬೈಗೂ 5 ಬಾರಿ ಕಿರೀಟ:
ಚೆನ್ನೈ ಸೂಪರ್ ಕಿಂಗ್ಸ್ ತಂಡದಂತೆ ಮುಂಬೈ ಇಂಡಿಯನ್ಸ್ ಸಹ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2013, 2015, 2017, 2019, 2020ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿದ್ದಾರೆ.
ಹಾಲಿ ಚಾಂಪಿಯನ್ ಕೆಕೆಆರ್‌ಗೆ 3 ಬಾರಿ ಪಟ್ಟ:
2024ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ಸ್ ಆಗಿದೆ. 2012, 2014 ಗೌತಮ್ ಗಂಭೀರ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿದ್ದ ಕೆಕೆಆರ್, 2024 ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದೆ ವಿಶೇಷವೆಂದ್ರೆ ಆಗಲೂ ಕೆಕೆಆರ್‌ಗೆ ಮೆಂಟರ್ ಆಗಿದ್ದು ಗೌತಮ್ ಗಂಭೀರ್ ಅವರೇ. ಅಜಿಂಕ್ಯ ರಹಾನೆ ಪ್ರಸ್ತುತ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಸನ್ ರೈಸರ್ಸ್ 2016ರ ಚಾಂಪಿಯನ್
2016ರ ರೋಚಕ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ರೋಚಕ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತ್ತು. ಅಂದು ಡೇವಿಡ್ ವಾರ್ನರ್ ತಂಡದ ನಾಯಕತ್ವ ವಹಿಸಿದ್ದರು.
ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಟೈಟಾನ್ಸ್
ಇನ್ನೂ 2022ರಲ್ಲಿ ಟೂರ್ನಿಯಲ್ಲಿ ಆಗಷ್ಟೇ ಪದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿಗೆ ಮುತ್ತಿಟ್ಟಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರಶಸ್ತಿ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿತ್ತು.
ಈವರೆಗೆ ಮೂರು ಬಾರಿ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಜೊತೆಗೆ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ನಿಷ್ಕ್ರಿಯಗೊಂಡ ತಂಡಗಳ ಪೈಕಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪುಣೆ ವಾರಿಯರ್ಸ್, ಗುಜರಾತ್ ಲಯನ್ಸ್, ಕೊಚ್ಚಿ ಟಸ್ಕಸ್ ಕೇರಳ ತಂಡಗಳು ಟ್ರೋಫಿ ಗೆದ್ದಿಲ್ಲ.
ಚೆನ್ನೈ: 2024ರ 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಹೀನಾಯ ಸೋಲನುಭವಿಸಿತು. ತಂಡದ ಸೋಲಿನ ದುಃಖ ತಡೆಯಲಾರದೇ ಕಾವ್ಯ ಮಾರನ್ ಅವರು ಕಣ್ಣೀರಿಟ್ಟರು.
ಚೆಪಕ್ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ಗೆಲುವು ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಳಪೆ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಿಂದಾಗಿ ಪ್ಯಾಟ್ ಕಮಿನ್ಸ್ ನಾಯಕತ್ವದ ಎಸ್‌ಆರ್‌ಎಚ್ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಕೆಕೆಆರ್ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಹೈದರಾಬಾದ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಯಾವೊಬ್ಬ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಬ್ಯಾಟರ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಇದನ್ನು ಕಂಡು ಫ್ರಾಂಚೈಸಿ ಮಾಲೀಕರಾದ ಕಾವ್ಯ ಮಾರನ್ ಸಪ್ಪೆ ಮೋರೆ ಹಾಕಿಕೊಂಡು ಕೂತಿದ್ದರು. ಪಂದ್ಯದ ಆರಂಭದಿಂದ ಕೊನೆ ವರೆಗೂ ಅವರ ಮುಖದಲ್ಲಿ ಬೇಸರ ಆವರಿಸಿತ್ತು.
ಕೊನೆ ಕ್ಷಣದಲ್ಲಿ ಹೈದರಾಬಾದ್ ಸೋಲು ಖಚಿತವಾಗುತ್ತಿದ್ದಂತೆ ಕಾವ್ಯ ಮಾರನ್ ಅವರ ಮನದಲ್ಲಿದ್ದ ದುಃಖದ ಕಟ್ಟೆಯೊಡೆಯಿತು. ಎಷ್ಟೇ ಪ್ರಯತ್ನಿಸಿದರೂ ಅಳು ತಡೆಯಲಾಗಲಿಲ್ಲ. ಕಣ್ಣಲ್ಲಿ ನೀರು ಹರಿಯಿತು. ಈ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಂಡ ಸೋತರೂ ರನ್ನರ್ ಅಪ್ ವರೆಗೂ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಚಪ್ಪಾಳೆ ತಟ್ಟುವ ಮೂಲಕ ಆಟಗಾರರನ್ನು ಅಭಿನಂದಿಸಿದರು. ಇದನ್ನೂ ಓದಿ: IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್!
2024ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ಎಸ್‌ಆರ್‌ಹೆಚ್ ವಿರುದ್ಧ ಅದ್ಧೂರಿ ಜಯ ಸಾಧಿಸುವ ಮೂಲಕ 17ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನೂ 3ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು 2ನೇ ಬಾರಿಗೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
2012 ಮತ್ತು 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡ 10 ವರ್ಷಗಳ ಬಳಿಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್ ಗಂಭೀರ್ ಈ ಬಾರಿ ತಂಡದ ಕೋಚ್ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ. ಇದನ್ನೂ ಓದಿ: ಕೆಕೆಆರ್ ಬೌಲರ್‌ಗಳ ಅಬ್ಬರಕ್ಕೆ ಕರಗಿದ ಸನ್ ತಾಪ – 113ಕ್ಕೆ ಹೈದರಾಬಾದ್ ಆಲೌಟ್; ಕೋಲ್ಕತ್ತಾಗೆ 114 ರನ್‌ಗಳ ಗುರಿ!
ಮುಂಬೈ: 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಬಳಿಕ ನಿವೃತ್ತಿ (Dhoni Retirement) ಸುಳಿವು ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಎಂ.ಎಸ್ ಧೋನಿ 2024ರ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
MS Dhoni said, “I just had knee surgery, if everything goes right, you’ll see me playing the IPL one year at a time. If not, I’ll watch the match with fans (smiles)”. pic.twitter.com/j7Iu6XmGHZ
ಪ್ರಸಕ್ತ ವರ್ಷದ ಐಪಿಎಲ್‌ನಲ್ಲಿ ಸಿಎಸ್‌ಕೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಐಪಿಎಲ್ ಬಳಿಕ ಧೋನಿ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಧೋನಿ, 2024ರ ಐಪಿಎಲ್ ಕುರಿತು ಮಾತನಾಡಿದ್ದಾರೆ. ಮಿನಿ ಹರಾಜಿಗೂ ಮುನ್ನ ಆಟಗಾರರ ಪಟ್ಟಿ ಸಲ್ಲಿಸುವಂತೆ ನವೆಂಬರ್ 15ರ ವರೆಗೆ ಗಡುವು ನೀಡಲಾಗಿದೆ. ಈ ನಡುವೆ ಮತ್ತೊಮ್ಮೆ ಧೋನಿ ತಮ್ಮ ನಿವೃತ್ತಿ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಮಹಿ, ನನಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಯಾಗಿದೆ (Knee Surgery). ಎಲ್ಲವೂ ಅಂದುಕೊಂಡಂತೆ ನಡೆದರೆ, ನಾನು ಒಂದು ವರ್ಷ ಐಪಿಎಲ್ ಆಡುವುದನ್ನು ನೋಡುತ್ತೀರಿ. ಇಲ್ಲದಿದ್ದರೆ ಅಭಿಮಾನಿಗಳೊಂದಿಗೆ ಕುಳಿತು ಪಂದ್ಯವನ್ನು ವೀಕ್ಷಣೆ ಮಾಡುತ್ತೇನೆ ಎಂದು ಮುಗುಳ್ನಕ್ಕಿದ್ದಾರೆ. ಇದನ್ನೂ ಓದಿ: ಪಾಕ್ ತಂಡಕ್ಕೆ ಇನ್ಮುಂದೆ ಬಿರಿಯಾನಿ ಬಂದ್ – ಆನ್‌ಲೈನ್‌ನಲ್ಲಿ ಬುಕ್ ಮಾಡಿ ಸಿಕ್ಕಿಬಿದ್ದ ಆಟಗಾರರು
ಧೋನಿ ಟೀಂ ಇಂಡಿಯಾ (Team India) ಬಳಿಕ ಅತೀ ಹೆಚ್ಚು ಭಾವನಾತ್ಮಕವಾಗಿ ಸಂಬಂಧ ಹೊಂದಿರುವ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡ. ಐಪಿಎಲ್ 2008ರಲ್ಲಿ ಆರಂಭವಾದ ಬಳಿಕ ಚೆನ್ನೈ ಪರ ಆಡುತ್ತಿರುವ ಧೋನಿ ವಿಶೇಷವಾದ ಸಂಬಂಧ ಚೆನ್ನೈ ತಂಡ ಮತ್ತು ತಮಿಳುನಾಡಿನ ಜನರೊಂದಿಗೆ ಹೊಂದಿದ್ದಾರೆ. 16ನೇ ಐಪಿಎಲ್ ಆವೃತ್ತಿಯಲ್ಲೇ ಮಹಿ ನಿವೃತ್ತಿ ಘೋಷಣೆ ಮಾಡುವ ಎಲ್ಲ ಸುಳಿವು ನೀಡಿದ್ದರು. 5ನೇ ಬಾರಿ ಟ್ರೋಫಿ ಗೆದ್ದ ಬಳಿಕ ಮಹಿ 2024ರ ಐಪಿಎಲ್‌ನಲ್ಲೂ ಆಡುವುದಾಗಿ ಘೋಷಣೆ ಮಾಡಿದರು. ಇದನ್ನೂ ಓದಿ: ವಿಶ್ವಕಪ್‌ನ ಟಾಪ್ 7 ತಂಡಗಳು 2025 ರ ಚಾಂಪಿಯನ್ಸ್ ಟ್ರೋಫಿಗೆ – ಪಾಕಿಸ್ತಾನ ಡೈರೆಕ್ಟ್ ಎಂಟ್ರಿ
ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2023ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗು ಬಡಿದು ಚೆನ್ಮೈ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಲ್ಲದೇ 2008, 2012, 2013, 2015, 2019ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಇದನ್ನೂ ಓದಿ: IPL Champions: ಗುಡ್‌ನ್ಯೂಸ್ – ಸದ್ಯಕ್ಕಿಲ್ಲ ನಿವೃತ್ತಿ, ಮುಂದಿನ IPLನಲ್ಲೂ ಕಣಕ್ಕಿಳಿಯಲಿದ್ದಾರೆ ಮಹಿ
16ನೇ ಆವೃತ್ತಿ ಐಪಿಎಲ್ ಬಳಿಕ ಮಹಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯವಾಗಿದೆ. ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ. ಆದ್ರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೈಹಿಕ ಸಾಮರ್ಥ್ಯಕ್ಕೆ ಸುಲಭವಲ್ಲ. ಆದ್ರೆ ಅಭಿಮಾನಿಗಳಿಗೆ ಉಡುಗೊರೆಯಾಗಲಿದೆ ಎಂದು ತಿಳಿಸಿದ್ದರು.
ಚೆನ್ನೈ: ನಿನ್ನೆ ನಡೆದ 16ನೇ ಆವೃತ್ತಿಯ ಐಪಿಎಲ್ (IPL 2023) ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್ (CSK) 5ನೇ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತು.
ಈ ಮೂಲಕ ಗೆಲುವಿನ ಓಟದಲ್ಲಿ ಸಾಗುತ್ತಿದ್ದ ಗುಜರಾತ್ ಟೈಟಾನ್ಸ್ (GT) ಆಟಕ್ಕೆ ಬ್ರೇಕ್ ಹಾಕುವ ಜೊತೆಗೆ 5 ಬಾರಿ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ (MI) ದಾಖಲೆಯನ್ನ ಸರಿಗಟ್ಟಿತು.
215 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ಬಳಿಕ ತಡರಾತ್ರಿ 12:10ಕ್ಕೆ ಆರಂಭಗೊಂಡಿತು. ಮಳೆ ಅಡ್ಡಿಯಾಗಿದ್ದರಿಂದ ಡಕ್ವರ್ತ್ ಲೂಯಿಸ್ (DSL) ನಿಯಮ ಅನ್ವಯಿಸಲಾಯಿತು. ಈ ನಿಯಮದ ಪ್ರಕಾರ ಸಿಎಸ್‌ಕೆ 15 ಓವರ್‌ಗಳಲ್ಲಿ 171 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್ ಪಡೆಯಿತು. ಆದರೆ ಸಂಘಟಿತ ಬ್ಯಾಟಿಂಗ್ ಪ್ರದರ್ಶನದಿಂದ ನಿಗದಿತ ಓವರ್‌ಗಳಲ್ಲಿ ರನ್ ಪೂರೈಸುವಲ್ಲಿ ಯಶಸ್ವಿಯಾಯಿತು. ಮಧ್ಯ ರಾತ್ರಿಯಲ್ಲಿ ಆರಂಭಗೊಂಡ ಪಂದ್ಯ ಕೊನೇ ಕ್ಷಣದ ವರೆಗೂ ರೋಚಕತೆಯಿಂದ ಕೂಡಿತ್ತು.
ಇನ್ನೂ 2023ರ ಐಪಿಎಲ್ ಆರಂಭದಿಂದಲೂ ಸಹ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಗ್ಗೆ ಧೋನಿ ಬಳಿ ಕೇಳಿದಾಗ ಸ್ಪಷ್ಟ ಉತ್ತರ ಬಂದಿರಲಿಲ್ಲ. ಇದೀಗ ಫೈನಲ್ ಪಂದ್ಯ ಮುಗಿದ ಬಳಿಕ ಎಲ್ಲ ಗೊಂದಲಗಳಿಗೆ ಧೋನಿ ತೆರೆ ಎಳೆದಿದ್ದು, ಮುಂದಿನ ಐಪಿಎಲ್‌ನಲ್ಲೂ ಆಡುವ ಸುಳಿವು ಕೊಟ್ಟಿದ್ದಾರೆ. ಇದು ಮಹಿ ಅಭಿಮಾನಿಗಳಿಗೆ ಹಬ್ಬವಾಗಿದೆ.
ಐಪಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಧೋನಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯವಾಗಿದೆ. ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ. ಆದ್ರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೈಹಿಕ ಸಾಮರ್ಥ್ಯಕ್ಕೆ ಸುಲಭವಲ್ಲ. ಆದ್ರೆ ಅಭಿಮಾನಿಗಳಿಗೆ ಉಡುಗೊರೆಯಾಗಲಿದೆ ಎಂದು ತಿಳಿಸಿದ್ದಾರೆ.
ನಾನು ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನಿಜ ಹೇಳಬೇಕೆಂದರೆ ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹಾಗಾಗಿ ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಭಾವುಕರಾಗಿದ್ದಾರೆ.