Tag: IPL Betting

  • ಐಪಿಎಲ್ ಬೆಟ್ಟಿಂಗ್ ಆಡಲು ಮನೆಗಳ್ಳತನ ಮಾಡುತ್ತಿದ್ದ ಖದೀಮ ಪೊಲೀಸರ ಅತಿಥಿ

    ಐಪಿಎಲ್ ಬೆಟ್ಟಿಂಗ್ ಆಡಲು ಮನೆಗಳ್ಳತನ ಮಾಡುತ್ತಿದ್ದ ಖದೀಮ ಪೊಲೀಸರ ಅತಿಥಿ

    ಮಂಡ್ಯ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ನಡೆಯುವ ವೇಳೆ ಬೆಟ್ಟಿಂಗ್‌ ಹಣಕ್ಕಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಖತರ್ನಾಕ್‌ ಒಬ್ಬನನ್ನ ಮಂಡ್ಯ ಪೊಲೀಸರು (Mandya Police) ಬಂಧಿಸಿದ್ದಾರೆ.

    ಸಂತೋಷ್‌ ಅಲಿಯಾಸ್ ಐಪಿಎಲ್ ಸಂತೋಷ್ ಬಂಧಿತ ಆರೋಪಿ. ಈತ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮುದಿಗೆರೆ ಗ್ರಾಮದವನು. ಹೆಸರಿಗೆ ವ್ಯವಸಾಯ ಕಸುಬಾದ್ರೆ, ಮೂಲ ಕಾಯಕ ಮನೆಗಳ್ಳತನ ಮಾಡೋದು ಬಳಿಕ ಅದರಿಂದ ಬಂದ ಹಣದಲ್ಲಿ ಐಪಿಎಲ್‌ ಬೆಟ್ಟಿಂಗ್ (IPL Betting) ಆಡೋದು ಕಾಯಕವಾಗಿತ್ತು. ಇದನ್ನೂ ಓದಿ: ಇಡೀ ವಿಮಾನ ಸುಟ್ಟು ಭಸ್ಮವಾದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ

    ಈತ ಐಪಿಎಲ್ ಬೆಟ್ಟಿಂಗ್ ಅತಿಯಾಗಿ ಆಡುತ್ತಿದ್ದರಿಂದ ಈತನನ್ನು ಐಪಿಎಲ್ ಸಂತೋಷ್ ಅಂತಾನೇ ಕರೆಯುತ್ತಿದ್ರು‌. ಈ ವ್ಯಕ್ತಿ ಬಿಂಡಗನವಿಲೆ, ಬೆಳ್ಳೂರು, ನಾಗಮಂಗಲ, ತುರುವೆಕೆರೆ, ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಮನೆಗಳ್ಳತನವನ್ನು ಮಾಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ. ಪದೇ ಪದೇ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾದ್ದರಿಂದ ನಾಗಮಂಗಲ ಸಿಪಿಐ ನಿರಂಜನ್ ನೇತೃತ್ವದಲ್ಲಿ ಪಿಎಸ್‌ಐ ರವಿಕುಮಾರ್, ಮಾರುತಿ ಒಳಗೊಂಡ 10 ಜನರ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.

    ಬಳಿಕ ಈ ತಂಡ ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಆಧರಿಸಿ ಖತರ್ನಾಕ್ ಸಂತೋಷ್‌ನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದೆ. ಬಂಧಿತನಿಂದ 40 ಲಕ್ಷ ಮೌಲ್ಯದ 490 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಮಗಳು – ಬಾರದ ಲೋಕಕ್ಕೆ ಹೋದ್ಳು..!

  • ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸ್ತಿದ್ದ ಇಬ್ಬರು ಅರೆಸ್ಟ್ – 3 ಮೊಬೈಲ್ ಸೇರಿ 6.99 ಲಕ್ಷ ರೂ. ನಗದು ಜಪ್ತಿ

    ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸ್ತಿದ್ದ ಇಬ್ಬರು ಅರೆಸ್ಟ್ – 3 ಮೊಬೈಲ್ ಸೇರಿ 6.99 ಲಕ್ಷ ರೂ. ನಗದು ಜಪ್ತಿ

    ಯಾದಗಿರಿ: ಐಪಿಎಲ್ ಬೆಟ್ಟಿಂಗ್ (IPL Betting) ದಂಧೆ ನಡೆಸುತ್ತಿದ್ದ ಇಬ್ಬರನ್ನು ಶಹಾಪುರ ಪೋಲಿಸರು (Shahapura Police) ಬಂಧಿಸಿದ್ದು, ಮೂರು ಮೊಬೈಲ್ ಸೇರಿ 6.99 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ.

    ಸುರಪುರ (Surpura) ತಾಲೂಕಿನ ಕಕ್ಕಸಗೇರಾ ತಾಂಡಾದ ಪುಂಡಲೀಕ, ಏವೂರು ತಾಂಡಾದ ಹರಿಪ್ರಸಾದ್ ಇಬ್ಬರು ಬಂಧಿತ ಆರೋಪಿಗಳು.ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಹಗರಣ – ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ ಅರೆಸ್ಟ್

    ಯಾದಗಿರಿ (Yadagiri) ಜಿಲ್ಲೆಯ ಶಹಾಪುರ ಪಟ್ಟಣದ ಮಡಿವಾಳೇಶ್ವರ ಏರಿಯಾದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಎಸ್.ಎಂ.ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಇಬ್ಬರು ದಂಧೆಕೋರರನ್ನು ಬಂಧಿಸಿದ್ದಾರೆ.

    ಕ್ರಿಕ್365ಡೇ ಆಪ್‌ನಲ್ಲಿ ಇಬ್ಬರು ಬೆಟ್ಟಿಂಗ್ ನಡೆಸುತ್ತಿದ್ದು, ಸದ್ಯ ಪೊಲೀಸರು ಆರೋಪಿಗಳ ಬಳಿಯಿದ್ದ 3 ಮೊಬೈಲ್ ಹಾಗೂ 6.99 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ (Shahapura Police Station) ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: 3.5 ಕೆಜಿ ಚಿನ್ನಾಭರಣ ದರೋಡೆ ಕೇಸ್ – ಐವರು ಅರೆಸ್ಟ್, ಓರ್ವ ಆರೋಪಿ ನೇಣಿಗೆ ಶರಣು

  • IPL ಕ್ರಿಕೆಟ್‌ ಬೆಟ್ಟಿಂಗ್‌ ಗೀಳಿನಿಂದ 1 ಕೋಟಿ ರೂ. ಕಳ್ಕೊಂಡ ಪತಿ – ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

    IPL ಕ್ರಿಕೆಟ್‌ ಬೆಟ್ಟಿಂಗ್‌ ಗೀಳಿನಿಂದ 1 ಕೋಟಿ ರೂ. ಕಳ್ಕೊಂಡ ಪತಿ – ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

    ಬೆಂಗಳೂರು: ಪತಿಯು ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ ಗೀಳಿನಿಂದಾಗಿ 1 ಕೋಟಿ ರೂ. ಕಳೆದುಕೊಂಡಿದ್ದರಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

    ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಆಗಿರುವ ದರ್ಶನ್‌ ಬಾಬು ಪತ್ನಿ ರಂಜಿತಾ (24) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಐಸಿಸ್ ಸೇರಿ ಉಗ್ರನಾಗಲು ಬಯಸಿದ್ದ ಐಐಟಿ ವಿದ್ಯಾರ್ಥಿ ಅರೆಸ್ಟ್ – ಕರ್ನಾಟಕಕ್ಕಿದೆಯಾ ಲಿಂಕ್?

    ಐಪಿಎಲ್‌ಗಾಗಿ ಬೆಟ್ಟಿಂಗ್‌ (IPL Betting) ಗೀಳಿಗೆ ಸಿಲುಕಿದ್ದ ದರ್ಶನ್‌ ಬಾಬು 1.5 ಕೋಟಿ ರೂ.ಗೂ ಅಧಿಕ ಸಾಲ ಮಾಡಿದ್ದ. ಸಾಲ ಕೊಟ್ಟವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ಮಹಿಳೆ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.

    ಹೊಳಲ್ಕೆರೆಯ ಮನೆಯ ಬೆಡ್‌ರೂಂ ನಲ್ಲಿ ಮಾ.19 ರಂದು ರಂಜಿತಾಳ ಮೃತದೇಹ ಪತ್ತೆಯಾಗಿದೆ. ತನ್ನ ಈ ನಿರ್ಧಾರಕ್ಕೆ ಸಾಲ ನೀಡಿದ ವ್ಯಕ್ತಿಯೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಆಕೆ ಬರೆದಿದ್ದಾಳೆ. ಪ್ರಕರಣ ಸಂಬಂಧ ರಂಜಿತಾ ತಂದೆ ತನ್ನ ಅಳಿಯನಿಗೆ ಕಾನೂನುಬಾಹಿರವಾಗಿ ಸಾಲ ನೀಡಿರುವ 13 ಮಂದಿ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ವಿಜಯಪುರ ಕೋಲ್ಡ್ ಬ್ಲಡ್ ಮರ್ಡರ್ ಕೇಸ್ – 1 ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು

    ದರ್ಶನ್‌ 2021 ರಿಂದ 2023 ರ ವರೆಗೆ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಹಣ ಹಾಕಿ ಎಲ್ಲವನ್ನೂ ಕಳೆದುಕೊಂಡಿದ್ದ. ಕ್ರಿಕೆಟ್‌ ಬೆಟ್ಟಿಂಗ್‌ಗೆ ಐಡಿಯಾ ಜೊತೆ ಹಣ ಕೊಟ್ಟವರು ಹಣ ಹಿಂದಿರುಗಿಸುವಂತೆ ದಂಪತಿಗೆ ಕಿರುಕುಳ ನೀಡುತ್ತಿದ್ದರು. ದರ್ಶನ್‌ 54 ಲಕ್ಷ ರೂ. ಸಾಲ ಹಿಂದಿರುಗಿಸಲು ಬಾಕಿ ಇದೆ ಎಂದು ರಂಜಿತಾ ತಂದೆ ಆರೋಪಿಸಿದ್ದಾರೆ.

  • ಐಪಿಎಲ್ ಬೆಟ್ಟಿಂಗ್ ಹೆಚ್ಚಳ ಎಚ್ಚರಿಕೆ – ನಗರದಲ್ಲಿ ಹೈ ಅಲರ್ಟ್

    ಐಪಿಎಲ್ ಬೆಟ್ಟಿಂಗ್ ಹೆಚ್ಚಳ ಎಚ್ಚರಿಕೆ – ನಗರದಲ್ಲಿ ಹೈ ಅಲರ್ಟ್

    ಬೆಂಗಳೂರು: ಇಂದಿನಿಂದ ಐಪಿಎಲ್  (IPL) ಆರಂಭವಾತ್ತಿರುವ ಹಿನ್ನೆಲೆ ಭಾರೀ ಪ್ರಮಾಣದ ಬೆಟ್ಟಿಂಗ್ (IPL Betting) ನಡೆಯೋ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ಪೊಲೀಸ್ (Police) ಕಮಿಷನರ್ ದಯಾನಂದ್ ಅವರಿಗೆ ಮಾಹಿತಿ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಡಿಸಿಪಿಗಳಿಗೆ ಅಲರ್ಟ್ ಆಗಿರುವಂತೆ ಕಮಿಷನರ್ ಸೂಚಿಸಿದ್ದಾರೆ.

    ನಗರದಾದ್ಯಂತ (Bengaluru), ಆಯಾ ಠಾಣಾ ವ್ಯಾಪ್ತಿಯಲ್ಲಿನ ಬುಕ್ಕಿಗಳ ಮೇಲೆ ತೀವ್ರ ನಿಗಾ ಇಡಬೇಕು. ಈ ಹಿಂದೆ ಬೆಟ್ಟಿಂಗ್ ಕೇಸ್‍ನಲ್ಲಿ ಅರೆಸ್ಟ್ ಆಗಿ ಜಾಮೀನಿನ ಮೇಲೆ ಬಂದಿರುವವರ ಮೇಲೂ ತೀವ್ರ ನಿಗಾ ವಹಿಸಬೇಕು. ಅಲ್ಲದೇ ಬೆಟ್ಟಿಂಗ್‍ಗಾಗಿಯೇ ಹೋಟೆಲ್, ಲಾಡ್ಜ್‍ಗಳಲ್ಲಿ ರೂಮ್ ಪಡೆಯುವವರಿದ್ದು, ಸೂಕ್ತ ಪರಿಶೀಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: IPL 2024: ಅತ್ಯುತ್ತಮ ಜೊತೆಯಾಟದಲ್ಲೂ ಆರ್‌ಸಿಬಿ ಆಟಗಾರರೇ ಟಾಪ್‌!

    ಆನ್‍ಲೈನ್ ಆಪ್‍ಗಳ ಮೂಲಕವೂ ಬೆಟ್ಟಿಂಗ್ ನಡೆಯಲಿದ್ದು, ಅಂತಹವರ ಪತ್ತೆಯನ್ನು ಮಾಡಿ ಕಾನೂನು ಕ್ರಮ ಜರುಗಿಸಬೇಕು. ಠಾಣಾ ವ್ಯಾಪ್ತಿಯ ಪೊಲೀಸರ ಜೊತೆಗೆ ಸಿಸಿಬಿಯೂ ಫುಲ್ ಅಲರ್ಟ್ ಆಗಿರಬೇಕು. ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಸಿಸಿಬಿಯಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಎಲ್ಲಾ ಆಯಾಮದಲ್ಲೂ ಮಾಹಿತಿ ಪಡೆಯುವುದರ ಮೂಲಕ ಅಲರ್ಟ್ ಇರಲು ಸೂಚನೆ ಇರಬೇಕು ಎಂದು ಸೂಚಿಸಲಾಗಿದೆ.

    ಹಳೇ ಬೆಟ್ಟಿಂಗ್ ಕೇಸಲ್ಲಿ ಬಂಧನವಾಗಿ, ಈಗ ಹೊರಗಡೆ ಇರುವವರ ಮೇಲೆ ಸಿಸಿಬಿ ಹದ್ದಿನ ಕಣ್ಣಿಟ್ಟಿದ್ದು, ನಗರದಾದ್ಯಂತ ಬಾತ್ಮೀದಾರರನ್ನು ಸಹ ಸಿಸಿಬಿ (CCB) ಅಲರ್ಟ್ ಆಗಿರುವಂತೆ ಸೂಚಿಸಿದೆ. ಇದನ್ನೂ ಓದಿ: Breaking: ನಾಯಕ ಸ್ಥಾನದಿಂದ ಕೆಳಗಿಳಿದ ಧೋನಿ – ಸಿಎಸ್‌ಕೆ ತಂಡ‌ಕ್ಕೆ ಋತುರಾಜ್‌ ನೂತನ ಸಾರಥಿ

  • IPL ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ

    IPL ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ

    ಚಿತ್ರದುರ್ಗ: ಐಪಿಎಲ್ ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಠಾಣೆಯಲ್ಲಿ ಬೆಳಕಿಗೆ ಬಂದಿದೆ.

    ದಸರಾ ಹಬ್ಬದ ಆಯುಧ ಪೂಜೆ ಹಿನ್ನೆಲೆಯಲ್ಲಿ ಇಸ್ಪಿಟ್ ಜೂಜುಕೋರ ತಮ್ಮಣ್ಣಗೆ ಪರಶುರಾಂಪುರ ಠಾಣೆಯಲ್ಲಿ ಪಿಎಸ್‍ಐ ಸ್ವಾತಿ ಸನ್ಮಾನಿಸಿದ್ದಾರೆ. ಪರಶುರಾಂಪುರ ಠಾಣೆ ಪಿಎಸ್‍ಐ ಸ್ವಾತಿ ನೇತ್ರತ್ವದಲ್ಲಿ ಪೂಜಾ ಕಾರ್ಯಕ್ರಮದ ಅಂಗವಾಗಿ ಸನ್ಮಾನ ಸಮಾರಂಭ ನಡೆದಿದ್ದೂ, ಅಕ್ರಮ ದಂಧೆಕೋರರಿಗೆ ಪೊಲೀಸರು ಸನ್ಮಾನ ಮಾಡಿ ಸತ್ಕರಿಸಿದ್ದಾರೆ.  ಇದನ್ನೂ ಓದಿ: ಮಂಗಳೂರಿನಲ್ಲಿ 150 ಮಂದಿಗೆ ತ್ರಿಶೂಲ ಹಂಚಿದ ವಿಹೆಚ್‍ಪಿ!

    ಇನ್ನು ಈ ದಂಧೆಕೋರ ತಮ್ಮಣ್ಣ ತಳಕು ಠಾಣೆ ವ್ಯಾಪ್ತಿಯ ಐಪಿಎಲ್ ಬೆಟ್ಟಿಂಗ್, ಇಸ್ಪಿಟ್ ಜೂಜಾಟ ಕೇಸುಗಳಲ್ಲಿ ಭಾಗಿಯಾಗಿದ್ದೂ, ಈ ದಂಧೆಕೋರರ ದಂಧೆಗೆ ಪೊಲೀಸರು ಸಾಥ್ ನೀಡ್ತಿದ್ದಾರೆಂಬ ಆರೋಪ ಸಹ ವ್ಯಕ್ತವಾಗಿದೆ. ಇಂತಹ ಸಮಾಜಘಾತುಕರನ್ನು ಮಟ್ಟ ಹಾಕಬೇಕಾದ ಪೊಲೀಸರೇ ಈ ರೀತಿ ಅಕ್ರಮ ದಂಧೆಕೋರರಿಗೆ ಹಾರ, ತುರಾಯಿ, ಶಾಲು ಹಾಕಿ ಸನ್ಮಾನಿಸಿರೋದು ಸಾರ್ವಜನಿಕರ ಆಕ್ರೋಶಕ್ಕೆ ದಾರಿಯಾಗಿದೆ. ಇನ್ನು ತಮ್ಮಣ್ಣನನ್ನು ಪಿಎಸ್‍ಐ ಸನ್ಮಾನಿಸುತ್ತಿರೋ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದೂ, ಪೊಲೀಸರ ಈ ಕೆಲಸಕ್ಕೆ ಪ್ರಜ್ಞಾವಂತರಿಂದ ಬಾರಿ ಟೀಕೆಗಳು ಕೇಳಿಬಂದಿವೆ. ಇದನ್ನೂ ಓದಿ: IPL ಬೆಟ್ಟಿಂಗ್- ಸಾಲ ಮಾಡಿ ನದಿಗೆ ಹಾರಿ ಜೀವ ಬಿಟ್ಟ

  • ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ- 12.5 ಲಕ್ಷ ರೂ. ನಗದು ಜಪ್ತಿ

    ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ- 12.5 ಲಕ್ಷ ರೂ. ನಗದು ಜಪ್ತಿ

    – ಇಬ್ಬರು ಆರೋಪಿಗಳ ಬಂಧನ

    ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಇಬ್ಬರು ಬುಕ್ಕಿಗಳನ್ನು ಬಂಧಿಸಿದೆ.

    ಹೊಯ್ಸಳ ಗೌಡ (48), ನರಸಿಂಹ ಮೂರ್ತಿ (38) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 13.5 ಲಕ್ಷ ನಗದು 2 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ಮಲ್ಲೇಶ್ವರಂ ನ.11ನೇ ಕ್ರಾಸ್ ರಸ್ತೆ ಬಳಿ ಆರೋಪಿಗಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳು, ವೆಬ್‍ಸೈಟ್ ಮೂಲಕ ರೇಶ್ಯೂ ನಿರ್ಧಾರ ಮಾಡುತ್ತಿದ್ದರು. ಮೊಬೈಲ್ ಮೂಲಕ ಹಣವನ್ನು ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.

    ಕಳೆದ ವಾರದ ಇದೇ ರೀತಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಒಬ್ಬ ಬುಕ್ಕಿಯನ್ನು ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದರು. ಆರೋಪಿಯಿಂದ 30.5 ಲಕ್ಷ ರೂ. ನಗದು ಹಾಗೂ ಎರಡು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿತ್ತು.