Tag: IPL Auction 2022

  • ಹರಾಜಾಗದಿದ್ದರೂ ಇನ್ನೂ ಮುಚ್ಚಿಲ್ಲ ಐಪಿಎಲ್ ಬಾಗಿಲು – ಅವಕಾಶದ ನಿರೀಕ್ಷೆಯಲ್ಲಿ ಸ್ಟಾರ್ ಆಟಗಾರರು

    ಹರಾಜಾಗದಿದ್ದರೂ ಇನ್ನೂ ಮುಚ್ಚಿಲ್ಲ ಐಪಿಎಲ್ ಬಾಗಿಲು – ಅವಕಾಶದ ನಿರೀಕ್ಷೆಯಲ್ಲಿ ಸ್ಟಾರ್ ಆಟಗಾರರು

    ಮುಂಬೈ: ಐಪಿಎಲ್ ಹರಾಜಿನಲ್ಲಿ ಸುರೇಶ್ ರೈನಾ ಸೇರಿದಂತೆ ಕೆಲ ಸ್ಟಾರ್ ಆಟಗಾರರು ಅನ್‍ಸೋಲ್ಡ್ ಆಗಿದ್ದಾರೆ. ಆದರೆ ಇನ್ನೂ ಕೂಡ ಅವರಿಗೆ ಆಡುವ ಅವಕಾಶ ಇದೆ.

    ಹರಾಜಿನಲ್ಲಿ 2 ಕೋಟಿ ಮೂಲಬೆಲೆ ಹೊಂದಿದ್ದ ಸುರೇಶ್ ರೈನಾ, ಸ್ಟೀವ್ ಸ್ಮಿತ್, ಆರೋನ್ ಫಿಂಚ್ ಸೇರಿದಂತೆ ಕೆಲ ಆಟಗಾರರು ಅನ್‍ಸೋಲ್ಡ್ ಆಗಿ ನಿರಾಸೆ ಅನುಭವಿಸಿದ್ದಾರೆ. ಆದರೆ ಅವರಿಗೆ ಈ ವರ್ಷ ಐಪಿಎಲ್ ಆಡುವ ಅವಕಾಶ ಇನ್ನೂ ಕೂಡ ಇದೆ. ಪೂರ್ತಿಯಾಗಿ ಅವಕಾಶದ ಬಾಗಿಲು ಮುಚ್ಚಿಲ್ಲ. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

    ಇದೀಗ ಪ್ರಸ್ತುತ ತಂಡಕ್ಕೆ ಆಯ್ಕೆ ಆಗಿರುವ ಆಟಗಾರರ ಪೈಕಿ ಯಾರಾದರೂ ಗಾಯಳುವಾಗಿ ಅಥವಾ ಇತರ ಕಾರಣಗಳಿಂದ ಹೊರಗುಳಿಯಲು ನಿರ್ಧರಿಸಿದರೆ ಆಗ ಬದಲಿ ಆಟಗಾರರಾಗಿ ಈ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಇದೆ. ಈ ಹಿಂದೆ ಸಾಕಷ್ಟು ಆಟಗಾರರು ಹರಾಜಾಗದೇ ನಂತರ ಬದಲಿ ಆಟಗಾರರಾಗಿ ತಂಡ ಸೇರಿಕೊಂಡು ಮಿಂಚುಹರಿಸಿದ್ದಾರೆ. ಇದನ್ನೂ ಓದಿ: ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ

    ರೈನಾ, ಸ್ಮಿತ್, ಫಿಂಚ್ ಈ ಹಿಂದೆ ಐಪಿಎಲ್ ಸೇರಿದಂತೆ ರಾಷ್ಟ್ರೀಯ ತಂಡದಲ್ಲಿ ಭರ್ಜರಿ ಪ್ರದರ್ಶನ ನೀಡಿದವರು. ಅದರಲ್ಲೂ ಟಿ20 ಕ್ರಿಕೆಟ್‍ನಲ್ಲಿ ಹೊಡಿ ಬಡಿ ಆಟದ ಮೂಲಕ ಈ ಹಿಂದೆ ಈ ಮೂವರು ಆಟಗಾರರು ಕೂಡ ಸದ್ದು ಮಾಡಿದ್ದರು. ಆದರೆ ಈ ಬಾರಿಯ ಹರಾಜಿನಲ್ಲಿ ಅನ್‍ಸೋಲ್ಡ್ ಆಗಿರುವುದು ವಿರ್ಪಯಾಸ.

  • ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ

    ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ

    ಢಾಕಾ: ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಬಾಂಗ್ಲಾ ದೇಶದ ಆಲ್ ರೌಂಡರ್ ಆಟಗಾರ ಶಕೀಬ್ ಅಲ್ ಹಸನ್ ಏಕೆ ಮಾರಾಟವಾಗದೇ ಉಳಿದುಕೊಂಡರು ಎಂಬುವುದನ್ನು ಶಕೀಬ್ ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ಅವರು ಫೇಸ್‍ಬುಕ್ ಪೋಸ್ಟ್ ಮಾಡಿ ಬಹಿರಂಗಪಡಿಸಿದ್ದಾರೆ.

    ಇತ್ತೀಚೆಗೆ ಮುಕ್ತಾಯಗೊಂಡ (ಐಪಿಎಲ್) ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜಿನಲ್ಲಿ ಮಾರಾಟವಾಗದ 76 ಆಟಗಾರರಲ್ಲಿ ಬಾಂಗ್ಲಾದೇಶದ ಆಲ್ ರೌಂಡರ್ ಮತ್ತು ಮಾಜಿ ನಾಯಕ ಶಕೀಬ್ ಅಲ್ ಹಸನ್ ಕೂಡ ಒಬ್ಬರಾಗಿದ್ದಾರೆ. ಶಕೀಬ್ 2011ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಐಪಿಎಲ್‍ನಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಐಪಿಎಲ್ ವಿಜೇತ ತಂಡದ ಭಾಗವಾಗಿದ್ದರು.

    ಈ ಹಿಂದೆ ಶಕೀಬ್ ಅವರನ್ನು ಐಪಿಎಲ್‍ನಲ್ಲಿ ಒಂದೆರಡು ಫ್ರಾಂಚೈಸಿಗಳು ಸಂಪರ್ಕಿಸಿದ್ದವು. ಆದರೆ ದಕ್ಷಿಣ ಆಫ್ರಿಕಾದ ಸರಣಿಗಾಗಿ ರಾಷ್ಟ್ರೀಯ ತಂಡಕ್ಕೆ ಅವರು ಆಯ್ಕೆಯಾದ ಹಿನ್ನೆಲೆ, ಅವರು ಐಪಿಎಲ್‍ನ ಪೂರ್ಣ ಆವೃತ್ತಿಯಲ್ಲಿ ಉಳಿದುಕೊಳ್ಳಲಾಗದ ಕಾರಣ ಅವರನ್ನು ಖರೀದಿಸಲು ಯಾವುದೇ ತಂಡಗಳು ಮುಂದಾಗಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಹಾರಿದವ ಒಬ್ಬ, ಹಿಡಿದವ ಇನ್ನೊಬ್ಬ – ಮ್ಯಾಕ್ಸ್‌ವೆಲ್‌ ಕ್ಯಾಚ್ ಕಂಡು ದಂಗಾದ ಫೀಲ್ಡರ್

    ಕೆಲವು ತಂಡಗಳು ಅವರನ್ನು ಸಂಪರ್ಕಿಸಿದವು. ಆದರೆ ಶ್ರೀಲಂಕಾದ ಸರಣಿಯಿಂದಾಗಿ ಅವರು ಐಪಿಎಲ್‍ನ ಪೂರ್ಣ ಆವೃತ್ತಿಯವರೆಗೆ ಲಭ್ಯರಿಲ್ಲ. ಅದೇ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಿಲ್ಲ. ಇದು ಅಂತ್ಯವಲ್ಲ ಮುಂದಿನ ವರ್ಷ ಮತ್ತೆ ಐಪಿಎಲ್ ಬರುತ್ತೇ ನಿರಾಶೆಗೊಳಗಾಗಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿದರು.

    ಶಕೀಬ್ ಐಪಿಎಲ್‍ನ ಕೊನೆಯ ಎರಡು ಸೀಸನ್‍ಗಳಲ್ಲಿ 11 ಪಂದ್ಯಗಳಲ್ಲಿ ಕೇವಲ 56 ರನ್‍ಗಳನ್ನು ಗಳಿಸಿ ಕೇವಲ 6 ವಿಕೆಟ್‍ಗಳನ್ನು ಪಡೆದಿದ್ದಾರೆ. ಅವರು ಈ ಹಿಂದೆ ಐಪಿಎಲ್ 2020ರ ಸೀಸನ್ ಸಹ ಕಳೆದುಕೊಂಡಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

    ಒಂದು ವೇಳೆ ಐಪಿಎಲ್ 2022ರ ಕಾರಣದಿಂದಾಗಿ ಶಕೀಬ್ ದಕ್ಷಿಣ ಆಫ್ರಿಕಾ ಸರಣಿಯನ್ನು ಕಳೆದುಕೊಂಡಿದ್ದರೆ ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿತ್ತು. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಐಪಿಎಲ್‍ಗೆ ಆಯ್ಕೆಯಾಗಲು ಅವರು ಶ್ರೀಲಂಕಾ ಸರಣಿಯನ್ನು ಬಿಟ್ಟುಬಿಡಬೇಕಾಗಿತ್ತು ಎಂದು ತಿಳಿಸಿದರು.

    ಬಾಂಗ್ಲಾದೇಶ ಕ್ರಿಕೆಟ್ ತಂಡವು ಇದೇ ಮಾರ್ಚ್ ಅಂತ್ಯದಲ್ಲಿ ಮತ್ತು ಏಪ್ರಿಲ್ ಆರಂಭದಲ್ಲಿ, ಐಪಿಎಲ್ 2022ರ ಮಧ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

    ಅಫ್ಘಾನಿಸ್ತಾನ ವಿರುದ್ಧದ ಸರಣಿಯ ನಂತರ ಬಾಂಗ್ಲಾ ತಂಡವು 3 ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈ ಗೊಳ್ಳಲಾಗಿದೆ. ಏಕದಿನ ಸರಣಿಯು ಮಾರ್ಚ್ 23 ರಂದು ಪೂರ್ಣಗೊಳ್ಳುತ್ತದೆ. ಎರಡು ಟೆಸ್ಟ್ ಪಂದ್ಯಗಳು ಏಪ್ರಿಲ್ 12 ರವರೆಗೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆ ಬಾಂಗ್ಲಾ ಆಟಗಾರರು ಐಪಿಎಲ್‍ನ ಮೊದಲ 15 ದಿನಗಳವರೆಗೆ ಲಭ್ಯವಿರುವುದಿಲ್ಲ.

  • ಇಶಾನ್ ಕಿಶನ್‍, ಚಹರ್‌ಗಿಂತಲೂ ಹೆಚ್ಚಿನ ಮೊತ್ತಕ್ಕೆ ಬಿಕರಿಯಾದ ಆಟಗಾರರ ಪಟ್ಟಿ

    ಇಶಾನ್ ಕಿಶನ್‍, ಚಹರ್‌ಗಿಂತಲೂ ಹೆಚ್ಚಿನ ಮೊತ್ತಕ್ಕೆ ಬಿಕರಿಯಾದ ಆಟಗಾರರ ಪಟ್ಟಿ

    ಬೆಂಗಳೂರು: ಬಹು ನಿರೀಕ್ಷಿತ 2022ರ ಐಪಿಎಲ್ ಆಟಗಾರರ ಹರಾಜು ಪೂರ್ಣಗೊಂಡಿದೆ. ಕೆಲ ಆಟಗಾರರು ದುಬಾರಿ ಮೊತ್ತಕ್ಕೆ ಬಿಕರಿಯಾದರೆ ಇನ್ನೂ ಕೆಲ ಆಟಗಾರರು ಅನ್‍ಸೋಲ್ಡ್ ಆಗಿ ನಿರಾಸೆ ಅನುಭವಿಸಿದ್ದಾರೆ.

    ಈ ನಡುವೆ 2 ದಿನಗಳ ಹರಾಜಿನಲ್ಲಿ ಇಶಾನ್ ಕಿಶನ್ 15.5 ಕೋಟಿ ರೂ. ಮತ್ತು ದೀಪಕ್ ಚಹರ್ 14 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದರು. ಆದರೆ, ಐಪಿಎಲ್‍ನಲ್ಲಿ ಇವರಿಗಿಂತಲೂ ಹೆಚ್ಚಿನ ಮೊತ್ತ ಪಡೆದ ಆಟಗಾರರೂ ಆಡಳಿದ್ದಾರೆ. ಇದನ್ನೂ ಓದಿ: IPL Auction -15.25 ಕೋಟಿಗೆ ಇಶಾನ್ ಕಿಶನ್ ಸೇಲ್‌

    ಹೌದು ಮೆಗಾ ಹರಾಜಿಗೂ ಮುನ್ನ ಎಲ್ಲಾ ತಂಡಗಳಿಗೂ ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಅವಕಾಶವಿತ್ತು. ಇದರಲ್ಲಿ ಕೆ.ಎಲ್ ರಾಹುಲ್‍ಗೆ ಲಕ್ನೋ ಫ್ರಾಂಚೈಸ್ ಬರೋಬ್ಬರಿ 17 ಕೋಟಿ ರೂ. ನೀಡಿತ್ತು. ಇದು ಐಪಿಎಲ್‍ನ ಇತಿಹಾಸದಲ್ಲೇ ಆಟಗಾರನೊಬ್ಬ ಪಡೆದ ಹೆಚ್ಚಿನ ಮೊತ್ತವಾಗಿದೆ.  ಇದನ್ನೂ ಓದಿ: IPL ಹರಾಜಿನಲ್ಲಿ ಅನ್‍ಸೋಲ್ಡ್ ಆದ ಸ್ಟಾರ್ ಆಟಗಾರರು

    ರಾಹುಲ್ ಬಳಿಕ ರೋಹಿತ್ ಶರ್ಮಾ-ಮುಂಬೈ ಇಂಡಿಯನ್ಸ್, ರವೀಂದ್ರ ಜಡೇಜಾ – ಚೆನ್ನೈ ಸೂಪರ್ ಕಿಂಗ್ಸ್, ಮತ್ತು ರಿಷಭ್ ಪಂತ್ – ಡೆಲ್ಲಿ ಕ್ಯಾಪಿಟಲ್ಸ್ ತಲಾ 16 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಈ ಮೂಲಕ ಹರಾಜಿನಲ್ಲಿ ಇಶಾನ್ ಕಿಶನ್‍ಗಿಂತಲೂ ಹೆಚ್ಚಿನ ಮೊತ್ತಕ್ಕೆ ಈ ಮೊದಲೇ ತಂಡ ಸೇರಿದ್ದ ಆಟಗಾರರು ಮುಂದಿನ ಐಪಿಎಲ್‍ನಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬ ಕುತೂಹಲವಿದೆ. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

     

     

  • ಐಪಿಎಲ್‍ನಲ್ಲಿ 8 ತಂಡದ ಪರ ಆಡಲಿದ್ದಾರೆ 16 ಕನ್ನಡಿಗರು

    ಐಪಿಎಲ್‍ನಲ್ಲಿ 8 ತಂಡದ ಪರ ಆಡಲಿದ್ದಾರೆ 16 ಕನ್ನಡಿಗರು

    ಬೆಂಗಳೂರು: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು ಹರಾಜಿನಲ್ಲಿ 16 ಕರ್ನಾಟಕದ ಆಟಗಾರರು 8 ತಂಡಕ್ಕೆ ಸೇಲ್ ಆಗಿದ್ದಾರೆ.

    ಈ ಹಿಂದಿನ ಐಪಿಎಲ್ ಮತ್ತು ಕರ್ನಾಟಕ ರಾಜ್ಯ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ 16 ಕನ್ನಡಿಗರಿಗೆ ಐಪಿಎಲ್‍ನಲ್ಲಿ ಬೇಡಿಕೆ ಕಂಡು ಬಂತು. ಅದರಲ್ಲೂ 8 ಕನ್ನಡಿಗರು ಕೋಟಿ ವೀರರಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

    ಒಟ್ಟು 12 ತಂಡಗಳ ಪೈಕಿ 10 ತಂಡಗಳು ಪ್ರತಿಭಾನ್ವಿತ ಕನ್ನಡಿಗ ಆಟಗಾರರ ಮೇಲೆ ನಂಬಿಕೆ ಇಟ್ಟು ಖರೀದಿಸಿದೆ. ಈ ಪೈಕಿ ಕೆ.ಎಲ್ ರಾಹುಲ್‍ಗೆ 17 ಕೋಟಿ ರೂ. ನೀಡಿ ಲಕ್ನೋ ಸೂಪರ್ ಜೈಂಟ್ ಖರೀದಿಸಿದರೆ, ಮಯಾಂಕ್ ಅರ್ಗವಾಲ್‍ಗೆ 12 ಕೋಟಿ ರೂ. ನೀಡಿ ರಾಜಸ್ಥಾನ್ ಬರಮಾಡಿಕೊಂಡಿದೆ. ಪ್ರಸಿದ್ಧ್ ಕೃಷ್ಣರನ್ನು 10 ಕೋಟಿ ನೀಡಿ ರಾಜಸ್ಥಾನ ರಾಯಲ್ಸ್ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಈ ಮೂವರು ಕರ್ನಾಟಕದ ದುಬಾರಿ ಆಟಗಾರರೆನಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಇನ್ನೂಳಿದಂತೆ ದೇವದತ್ ಪಡಿಕ್ಕಲ್ ರಾಜಸ್ಥಾನ ರಾಯಲ್ಸ್ 7 ಕೋಟಿ, ಮನೀಶ್ ಪಾಂಡೆ ಲಕ್ನೋ ಸೂಪರ್ ಜೈಂಟ್ಸ್ 4.60 ಕೋಟಿ, ಅಭಿನವ್ ಮನೋಹರ್ ಗುಜರಾತ್ ಟೈಟಾಟ್ಸ್ 2.60 ಕೋಟಿ, ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ 2 ಕೋಟಿ, ಕರಣ್ ನಾಯರ್ ರಾಜಸ್ಥಾನ ರಾಯಲ್ಸ್ 1.40 ಕೋಟಿ, ಕೃಷ್ಣಪ್ಪ ಗೌತಮ್ ಲಕ್ನೋ ಸೂಪರ್ ಜೈಂಟ್ಸ್ 90 ಲಕ್ಷ, ಶ್ರೇಯಸ್ ಗೋಪಾಲ್ ಸನ್‍ರೈಸರ್ಸ್ ಹೈದರಾಬಾದ್ 75 ಲಕ್ಷ, ಪ್ರವೀಣ್ ದುಬೆ ಡೆಲ್ಲಿ ಕಾಪಿಟಲ್ಸ್ 50 ಲಕ್ಷ, ಕೆ.ಸಿ ಕಾರ್ಯಪ್ಪ ರಾಜಸ್ಥಾನ ರಾಯಲ್ಸ್ 30 ಲಕ್ಷ, ರವಿಕುಮಾರ್ ಸಮರ್ಥ್, ಜಗದೀಶ್ ಸುಚಿತ್, ಅನೀಶ್ವರ್ ಗೌತಮ್, ಲವ್‍ನಿತ್ ಸಿಸೋದಿಯಾ ತಲಾ 20 ಲಕ್ಷ ರೂ. ಪಡೆದು ಕ್ರಮವಾಗಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

     

  • RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

    RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

    ಬೆಂಗಳೂರು: 15ನೇ ಆವೃತ್ತಿ ಐಪಿಎಲ್ ಮೆಗಾ ಹರಾಜು ಮುಕ್ತಾಯಗೊಂಡಿದೆ. ಹರಾಜಿನಲ್ಲಿ ಕರ್ನಾಟಕ ಮೂಲದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಕೇವಲ ಇಬ್ಬರು ಕನ್ನಡಿಗರನ್ನು ಖರೀದಿಸಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ.

    ಆರ್​ಸಿಬಿ ತಂಡ ಮೆಗಾ ಹರಾಜಿನಲ್ಲಿ ಒಟ್ಟು 88.45 ಕೋಟಿ ರೂ. ಖರ್ಚು ಮಾಡಿ ಒಟ್ಟು 22 ಜನ ಆಟಗಾರರನ್ನು ಖರೀದಿಸಿದೆ. ಆದರೆ ಸ್ಥಳೀಯ ಆಟಗಾರರ ಪೈಕಿ ಕರ್ನಾಟಕದ ಯುವ ಆಟಗಾರ ಅನೀಶ್ವರ್ ಗೌತಮ್ ಮತ್ತು ಲವ್‌ನಿತ್‌ ಸಿಸೋದಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನೀಶ್ವರ್ ಗೌತಮ್ ಮತ್ತು ಲವ್‌ನಿತ್‌ ಸಿಸೋದಿಯಾ ಭಾರತದ ಅಂಡರ್-19 ತಂಡದಲ್ಲಿ ಮತ್ತು ಕರ್ನಾಟಕ ರಾಜ್ಯ ತಂಡದಲ್ಲಿ ಮಿಂಚು ಹರಿಸಿದ್ದಾರೆ. ಈ ಪ್ರದರ್ಶನವನ್ನು ಗಮನಿಸಿ ತಲಾ 20 ಲಕ್ಷ ರೂ. ನೀಡಿ ಆರ್​ಸಿಬಿ ಇಬ್ಬರು ಆಟಗಾರರನ್ನು ಖರೀದಿಸಿದೆ. ಇದನ್ನೂ ಓದಿ: ಈ ವರ್ಷ ಆಡದೇ ಇದ್ದರೂ ಆರ್ಚರ್‌ಗೆ ಮುಂಬೈ 8 ಕೋಟಿ ನೀಡಿದ್ದು ಯಾಕೆ: ರಿವೀಲ್‌ ಮಾಡಿದ ಆಕಾಶ್‌ ಅಂಬಾನಿ

     

    ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರಾದ ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣರಂತಹ ಆಟಗಾರರು ಇದ್ದರೂ ಕೂಡ ಆರ್​ಸಿಬಿ ಮಾತ್ರ ಕರ್ನಾಟಕದ ಆಟಗಾರರನ್ನು ಖರೀದಿಸಲು ಮುಂದಾಗಲಿಲ್ಲ. ಈ ನಡೆಯನ್ನು ಗಮನಿಸಿ ಕರ್ನಾಟಕದ ಮಾಜಿ ಆಟಗಾರರು ಮತ್ತು ಆರ್​ಸಿಬಿ ಅಭಿಮಾನಿಗಳು ಆರ್​ಸಿಬಿ ಆಡಳಿತ ಮಂಡಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಆರ್​ಸಿಬಿ ಹರಾಜಿನಲ್ಲಿ ಈವರೆಗೆ ಹೆಸರೇ ಕೇಳಿರದ ಆಟಗಾರರನ್ನು ಖರೀದಿಸಿದೆ. ಆದರೆ ಕರ್ನಾಟಕದಲ್ಲೇ ಇದ್ದ ಪ್ರತಿಭಾನ್ವಿತ ಆಟಗಾರರನ್ನುಕಡೆಗಣಿಸಿದೆ. ಹಾಗಾಗಿ ಕರ್ನಾಟಕದ ಆಟಗಾರರು ಹೆಚ್ಚಿರುವ ತಂಡಕ್ಕೆ ನಾವು ಐಪಿಎಲ್‍ನಲ್ಲಿ ಸಪೋರ್ಟ್ ಮಾಡುತ್ತೇವೆ ಎಂದು ಕರ್ನಾಟಕದ ಮಾಜಿ ಆಟಗಾರರೊಬ್ಬರು ವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.

     

  • ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಬೆಂಗಳೂರು: 15ನೇ ಆವೃತ್ತಿ ಐಪಿಎಲ್‍ಗೂ ಮುನ್ನ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಇಂದು ಅಂತ್ಯಗೊಂಡಿದೆ. ಹಲವು ಸ್ಟಾರ್ ಆಟಗಾರರು ಹರಾಜಾಗದೆ ಉಳಿದರೆ ಇನ್ನೂ ಕೆಲ ಆಟಗಾರರು ಬಿಕರಿಯಾಗಿದ್ದಾರೆ.

    ಒಟ್ಟು 204 ಆಟಗಾರರು ಹರಾಜಾಗಿದ್ದು, 550 ಕೋಟಿ ರೂ.ಗಳನ್ನು ಫ್ರಾಂಚೈಸ್‌ಗಳು ಖಚು ಮಾಡಿದೆ. ಎರಡನೇ ದಿನದ ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರಮುಖವಾಗಿ ಅಂಡರ್-19 ಆಟಗಾರರು ಉತ್ತಮ ಬೇಡಿಕೆ ಪಡೆದಿದ್ದಾರೆ. ರಾಜ್ ಬಾವ, ರಾಜವರ್ಧನ್ ಹಂಗೇರ್ಕರ್ ಕೋಟಿ ವೀರರಾದರೆ, ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಯಶ್ ಧುಲ್ 50 ಲಕ್ಷ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. 2ನೇ ದಿನದ ಹರಾಜಿನಲ್ಲಿ ಲಿಯಾಮ್ ಲಿವಿಂಗ್‍ಸ್ಟೋನ್ 11.50 ಕೋಟಿ ರೂ., ಟಿಮ್ ಡೇವಿಡ್ 8.25 ಕೋಟಿ, ಜೋಫ್ರಾ ಆರ್ಚರ್ 8 ಕೋಟಿ, ರೊಮಾರಿಯೋ ಶೆಫರ್ಡ್ 7.75 ಕೋಟಿ ರೂ. ಪಡೆದು ಬಿಕರಿಯಾದರು. ಇದನ್ನೂ ಓದಿ: IPL 2022 Auction: ಲಿವಿಂಗ್‍ಸ್ಟೋನ್ ದುಬಾರಿ ವಿದೇಶಿ ಆಟಗಾರ – ಫಿಂಚ್, ಮಾರ್ಗನ್ ಅನ್‍ಸೋಲ್ಡ್

    ದುಬಾರಿ ಆಟಗಾರರ ಪಟ್ಟಿ:
    ಲಿಯಾಮ್ ಲಿವಿಂಗ್‍ಸ್ಟೋನ್ ಪಂಜಾಬ್-11.50 ಕೋಟಿ ರೂ, ಜೋಫ್ರಾ ಆರ್ಚರ್ ಮುಂಬೈ – 8 ಕೋಟಿ, ರೊಮಾರೊಯೋ ಶೆಫರ್ಡ್ ಹೈದರಾಬಾದ್ – 7.75 ಕೋಟಿ, ಒಡೆನ್ ಸ್ಮಿತ್ ಪಂಜಾಬ್-6 ಕೋಟಿ, ಖಲೀಲ್ ಅಹಮದ್ ಡೆಲ್ಲಿ- 5.25 ಕೋಟಿ, ಮಾರ್ಕೋ ಜೆನ್ಸನ್ ಹೈದರಾಬಾದ್ – 4.20 ಕೋಟಿ, ಚೇತನ್ ಸಕಾರಿಯ ಡೆಲ್ಲಿ 4.2 ಕೋಟಿ, ಶಿವಂ ದುಬೆ ಚೆನ್ನೈ – 4 ಕೋಟಿ,  ಏಡನ್ ಮಾಕ್ರರ್ಮ್ ಹೈದರಾಬಾದ್ – 2.6 ಕೋಟಿ, ರಾಜ್ ಬಾವ ಪಂಜಾಬ್ 2 ಕೋಟಿ ರೂ.ಗೆ ಸೇಲ್ ಅಚ್ಚರಿ ಮೂಡಿಸಿದರು. ಇದನ್ನೂ ಓದಿ: ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ

    ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದ ಸುರೇಶ್ ರೈನಾ, ಆರೋನ್ ಫಿಂಚ್, ಸ್ಟೀವ್ ಸ್ಮಿತ್, ಇಶಾಂತ್ ಶರ್ಮಾ, ಇಯಾನ್ ಮಾರ್ಗನ್, ಶ್ರೀಶಾಂತ್, ಮೊಹಮ್ಮದ್ ನಬಿ, ಮಾಕ್ರರ್ಮ್ ಸೇರಿದಂತೆ ಪ್ರಮುಖ ಆಟಗಾರರು ಅನ್‍ಸೋಲ್ಡ್ ಆಗಿದ್ದಾರೆ.

  • ಐಪಿಎಲ್ ಮೆಗಾ ಹರಾಜಿಗೆ ಬೆಂಗಳೂರು ಸಜ್ಜು – ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು

    ಐಪಿಎಲ್ ಮೆಗಾ ಹರಾಜಿಗೆ ಬೆಂಗಳೂರು ಸಜ್ಜು – ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು

    ಬೆಂಗಳೂರು: 2022ರ ಐಪಿಎಲ್ ಆರಂಭಕ್ಕೂ ಮುನ್ನ ಫೆ.12 ಮತ್ತು 13ರಂದು ಬೆಂಗಳೂರಿನ ಹೋಟೆಲ್ ಐಟಿಸಿ ಗಾರ್ಡೇನಿಯದಲ್ಲಿ ಮೆಗಾ ಹರಾಜು ನಡೆಯಲಿದೆ. ಈಗಾಗಲೇ 10 ಫ್ರಾಂಚೈಸ್‍ಗಳು ಕೂಡ ಹರಾಜಿನಲ್ಲಿರುವ 590 ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದೆ.

    ಕ್ರಿಕೆಟ್ ಲೋಕದ ಅತ್ಯಂತ ದುಬಾರಿ ಲೀಗ್ ಎಂದು ಹೆಸರುವಾಸಿಯಾಗಿರುವ ಐಪಿಎಲ್‍ನಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಕನಸಾಗಿರುತ್ತದೆ. ಇದೀಗ ಫೆ.12 ಮತ್ತು 13ರ ಮೆಗಾ ಹರಾಜಿನ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಹರಾಜಿನಲ್ಲಿ 370 ಭಾರತೀಯ ಆಟಗಾರರು ಮತ್ತು 220 ವಿದೇಶಿ ಆಟಗಾರರು ಸೇರಿ ಒಟ್ಟು 590 ಆಟಗಾರರು ಕಾಣಿಸಿಕೊಂಡಿದ್ದು, ಇವರಲ್ಲಿ ಯಾರು ಕೋಟಿ ವೀರರಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ತವರಿನಲ್ಲಿ ಕೊಹ್ಲಿ ಹೊಸ ಮೈಲಿಗಲ್ಲು – ಧೋನಿ, ಸಚಿನ್ ಜೊತೆ Elite ಪಟ್ಟಿಗೆ ಸೇರ್ಪಡೆ

    ಫ್ರಾಂಚೈಸ್‍ಗಳು ಹಲವು ಲೆಕ್ಕಾಚಾರಗಳನ್ನು ಹಾಕಿಕೊಂಡು ಆಟಗಾರರ ಮೇಲೆ ಹಣ ಸುರಿಯಲು ಪ್ಲಾನ್ ಹಾಕಿಕೊಂಡಿದ್ದಾರೆ. 10 ಫ್ರಾಂಚೈಸ್‍ಗಳು ಕೂಡ ಅಳೆದು ತೂಗಿ ಆಟಗಾರರ ಆಯ್ಕೆಗೆ ಸಿದ್ಧತೆ ಮಾಡಿಕೊಂಡಿದೆ. ಹರಾಜಿನಲ್ಲಿರುವ ಸ್ಟಾರ್ ಆಟಗಾರರ ಪೈಕಿ ಶ್ರೇಯಸ್ ಅಯ್ಯರ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್, ದೀಪಕ್ ಚಹಾರ್, ಇಶಾನ್ ಕಿಶನ್, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡ, ಫಾಬಿನ್ ಅಲೆನ್, ಡ್ವೇನ್ ಬ್ರಾವೋ, ಎವಿನ್ ಲೆವಿಸ್, ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಶಕಿಬ್ ಅಲ್ ಹಸನ್, ಕ್ವಿಂಟನ್ ಡಿ ಕಾಕ್, ಶಿಮ್ರೋನ್ ಹೆಟ್ಮೇರ್, ನಿಕೋಲಸ್ ಪೂರನ್, ಲ್ಯಾಮ್ ಲಿವಿಂಗ್‍ಸ್ಟೋನ್, ರಾಸ್ಸಿ ವಾನ್ ಡೇರ್ ಡೆಸನ್ ಮೇಲೆ ಎಲ್ಲಾ ಫ್ರಾಂಚೈಸ್‍ಗಳು ಮುಗಿ ಬೀಳುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ

    ಒಟ್ಟು 10 ಫ್ರಾಂಚೈಸ್‍ಗಳ ಪೈಕಿ ಪಂಜಾಬ್ ಕಿಂಗ್ಸ್ ಜೊತೆ 72 ಕೋಟಿ ರೂ., ಸನ್ ರೈಸರ್ಸ್ ಹೈದರಾಬಾದ್ 68 ಕೋಟಿ, ರಾಜಸ್ಥಾನ್ ರಾಯಲ್ಸ್ 62 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 57 ಕೋಟಿ, ಮುಂಬೈ ಇಂಡಿಯನ್ಸ್ 48 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 48 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 48 ಕೋಟಿ, ಡೆಲ್ಲಿ ಕಾಪಿಟಲ್ಸ್ 47.50 ಕೋಟಿ, ಲಕ್ನೋ ಸೂಪರ್ ಜೈಂಟ್ಸ್ 59 ಕೋಟಿ ಮತ್ತು ಗುಜರಾತ್ ಟೈಟಾನ್ಸ್ ಜೊತೆ 52 ಕೋಟಿ ರೂ. ಇದ್ದು ಈ ಹಣದಲ್ಲಿ ಕನಿಷ್ಠ 18 ಗರಿಷ್ಠ 25 ಆಟಗಾರರನ್ನು ಖರೀದಿಸಲು ಅವಕಾಶ ಇದೆ.