Tag: IPL Auction

  • IPL Auction 2026 | ಡಿಸೆಂಬರ್‌ನಲ್ಲಿ ಮಿನಿ ಹರಾಜು – ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌!

    IPL Auction 2026 | ಡಿಸೆಂಬರ್‌ನಲ್ಲಿ ಮಿನಿ ಹರಾಜು – ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌!

    – ಐವರು ಸ್ಟಾರ್‌ ಪ್ಲೇಯರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
    – ಫ್ರಾಂಚೈಸಿಗಳ ಪರ್ಸ್‌ ಮೊತ್ತ 151 ಕೋಟಿಗೆ ಹೆಚ್ಚಳ

    ಮುಂಬೈ: ಮುಂದಿನ ಡಿಸೆಂಬರ್‌ 13 ರಿಂದ 15ರ ಅವಧಿಯಲ್ಲಿ 2026ರ ಐಪಿಎಲ್‌ ಟೂರ್ನಿಗೆ ಮಿನಿ ಹರಾಜು (IPL Mini Auction) ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್‌ಲೈನ್‌ ಫಿಕ್ಸ್‌ ಮಾಡಲಾಗಿದೆ.

    ಮುಂದಿನ ನವೆಂಬರ್‌ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ಐಪಿಎಲ್‌ ಮಂಡಳಿ ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

    3 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯಲಿದೆ. 2025ರ ಐಪಿಎಲ್‌ ಟೂರ್ನಿ ವೇಳೆ ಮೆಗಾ ಹರಾಜು ನಡೆದಿತ್ತು. ಆದ್ದರಿಂದ ಈ ಬಾರಿ ಮಿನಿ ಹರಾಜು ನಡೆಯಲಿದೆ. ಆದ್ರೆ ಬಿಸಿಸಿಐ (BCCI) ಈಗಾಗಲೇ ವಿಧಿಸಿರುವಂತೆ ಕಳೆದಬಾರಿಗಿಂತ ಫ್ರಾಂಚೈಸಿಗಳ ಪರ್ಸ್‌ ಮೊತ್ತ ಹಿಗ್ಗಲಿದೆ.

    ಪರ್ಸ್‌ ಮೊತ್ತ ಇನ್ನಷ್ಟು ಹೆಚ್ಚಳ
    ಈ ಹಿಂದೆ 90 ಕೋಟಿ ರೂ.ಗಳಷ್ಟಿದ್ದ ಐಪಿಎಲ್‌ ಫ್ರಾಂಚೈಸಿಗಳ ಪರ್ಸ್‌ 2023-24ರ ಐಪಿಎಲ್‌ ಟೂರ್ನಿಯಲ್ಲಿ 100 ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಬಿಸಿಸಿಐ ಮೂರು ವರ್ಷಗಳ ಅವಧಿಗೆ ವೇತನ ಸೇರಿ ಪರ್ಸ್‌ ಮೊತ್ತವನ್ನ 157 ಕೋಟಿ ರೂ.ಗಳ ವರೆಗೆ ಹೆಚ್ಚಿಸಿದೆ. ಅದರಂತೆ 2025ರ ಐಪಿಎಲ್‌ ಟೂರ್ನಿಯಲ್ಲಿ ಫ್ರಾಂಚೈಸಿಗಳು ಸಂಬಳ ಮಿತಿ ಸೇರಿ ತಲಾ 146 ಕೋಟಿ ರೂ. ಬಳಕೆ ಮಾಡಿದ್ದವು. 2026ರ ಟೂರ್ನಿಗೆ 151 ಕೋಟಿ ರೂ. ಬಳಕೆ ಮಾಡಲಿದ್ದು, 2027ರ ಟೂರ್ನಿಗೆ 157 ಕೋಟಿ ರೂ.ಗಳನ್ನು ಫ್ರಾಂಚೈಸಿಗಳು ಬಳಸಲಿವೆ. ಇದನ್ನೂ ಓದಿ: 2027ರ ವಿಶ್ವಕಪ್‌ ಆಡೋದು ಡೌಟ್‌ – ಆಸೀಸ್‌ ಸರಣಿ ಬಳಿಕ ʻಹಿಟ್‌ಮ್ಯಾನ್‌, ಕ್ರಿಕೆಟ್‌ ಲೋಕದ ಕಿಂಗ್‌ ಯುಗ ಅಂತ್ಯ?

    ಐವರು ಸ್ಟಾರ್‌ಗಳನ್ನ ಹೊರದಬ್ಬಲು ಮುಂದಾದ ಸಿಎಸ್‌ಕೆ
    ಇನ್ನೂ ಮಿನಿ ಹರಾಜಿಗೂ ಮುನ್ನ ರಿಟೇನ್‌ ಆಟಗಾರರ ಪಟ್ಟಿ ಬಿಡುಗಡೆಗೊಳಿಸಲು ಡೆಡ್‌ಲೈನ್‌ ಫಿಕ್ಸ್‌ ಮಾಡ್ತಿದ್ದಂತೆ ದೀಪಕ್ ‌ಹೂಡ, ವಿಜಯ್‌ ಶಂಕರ್‌, ರಾಹುಲ್‌ ತ್ರಿಪಾಟಿ, ಸ್ಯಾಮ್‌ ಕರ್ರನ್‌, ಡಿವೋನ್‌ ಕಾನ್ವೆ ಅವರನ್ನ ತಂಡದಿಂದ ಹೊರಬ್ಬಲು ಫ್ರಾಂಚೈಸಿ ನಿರ್ಧರಿಸಿದೆ ಎಂಧು ತಿಳಿದುಬಂದಿದೆ. ಈ ಬಗ್ಗೆ ಸಿಎಸ್‌ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: 6 ಆಟಗಾರರ ರಿಟೇನ್‌ಗೆ ಬಿಸಿಸಿಐ ಅವಕಾಶ, ಪರ್ಸ್‌ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!

  • ಸಿಎಸ್‌ಕೆಗೆ ಆರ್‌.ಅಶ್ವಿನ್‌ ವಾಪಸ್‌; 9.75 ಕೋಟಿಗೆ ಹರಾಜು – ರಚಿನ್‌ ರವೀಂದ್ರ 4 ಕೋಟಿಗೆ ಸೇಲ್‌

    ಸಿಎಸ್‌ಕೆಗೆ ಆರ್‌.ಅಶ್ವಿನ್‌ ವಾಪಸ್‌; 9.75 ಕೋಟಿಗೆ ಹರಾಜು – ರಚಿನ್‌ ರವೀಂದ್ರ 4 ಕೋಟಿಗೆ ಸೇಲ್‌

    ಪಿಎಲ್‌ 2025 ಮೆಗಾ ಹರಾಜಿನಲ್ಲಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಹಾಗೂ ಬ್ಯಾಟರ್‌ ರಚಿನ್‌ ರವೀಂದ್ರ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಲಾಗಿದ್ದಾರೆ.

    ಆರ್‌.ಅಶ್ವಿನ್‌ 9.75 ಕೋಟಿ ಮತ್ತು ರಚಿನ್ 4 ಕೋಟಿಗೆ ಬಿಡ್‌ ಆಗಿದ್ದಾರೆ.

    ತಮ್ಮ ಚೊಚ್ಚಲ IPL ಋತುವಿನಲ್ಲಿ, ರಚಿನ್ 10 ಪಂದ್ಯಗಳಲ್ಲಿ 222 ರನ್ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಭಾವ ಬೀರಿದ್ದರು. ಸರಣಿಯಲ್ಲಿ ಶತಕ ಬಾರಿಸಿದ ಇಬ್ಬರು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು.

    ಭಾರತದ ಅನುಭವಿ ಸ್ಪಿನ್ನರ್‌ ತಾವು 2008 ರಿಂದ 2015 ರ ವರೆಗೆ ತಾವು ಆಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮರಳಿದ್ದಾರೆ. 2008 ರಲ್ಲಿ ಸಿಎಸ್‌ಕೆ ಐಪಿಎಲ್‌ನಲ್ಲಿ 211 ಪಂದ್ಯಗಳಲ್ಲಿ ಅಶ್ವಿನ್ 180 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 800 ರನ್ ಗಳಿಸಿದ್ದಾರೆ. ಅಶ್ವಿನ್‌ 2024ನೇ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಆಡಿದ್ದರು.

  • IPL 2024 Auction: ಇನ್‌ಸ್ಟಾದಲ್ಲಿ ವಾರ್ನರ್‌ ಬ್ಲಾಕ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌

    IPL 2024 Auction: ಇನ್‌ಸ್ಟಾದಲ್ಲಿ ವಾರ್ನರ್‌ ಬ್ಲಾಕ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌

    ರಂಭಿಕ ಬ್ಯಾಟರ್ ಡೇವಿಡ್‌ ವಾರ್ನರ್‌‌ (David Warner) ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ಇನ್‌ಸ್ಟಾಗ್ರಾಂ, ಫೇಸ್‌ಬುಕ್‌‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾಡಿದೆಯಂತೆ. ಈ ವಿಚಾರವನ್ನು ಸ್ವತಃ ವಾರ್ನರ್‌ ಅವರೇ ಶೇರ್‌ ಮಾಡಿಕೊಂಡಿದ್ದಾರೆ.

    ಟ್ರಾವಿಸ್‌ ಹೆಡ್‌ (Travis Head) ಅವರನ್ನು ಹರಾಜಿನಲ್ಲಿ ಹೈದರಾಬಾದ್ ಇಂದು ಖರೀದಿಸಿದೆ. ದುಬೈನಲ್ಲಿ ನಡೆದ ಐಪಿಎಲ್ 2024 ಹರಾಜಿನಲ್ಲಿ ಟ್ರಾವಿಸ್ ಹೆಡ್‌ ಅವರನ್ನು ಸನ್‌ರೈಸರ್ಸ್‌ 6.80 ಕೋಟಿಗೆ ಖರೀದಿಸಿತು. ಹೀಗಾಗಿ ಟ್ರಾವಿಸ್‌ ಹೆಡ್‌ಗೆ ಡೇವಿಡ್ ವಾರ್ನರ್‌ ಅವರು ಅಭಿನಂದನೆ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ಇನ್‌ ಸ್ಟಾ ಹಾಗೂ ಫೇಸ್‌ಬುಕ್‌ ನಲ್ಲಿ ಬ್ಲಾಕ್ ಆಗಿರೋ ವಿಚಾರ ವಾರ್ನರ್‌ ಗಮನಕ್ಕೆ ಬಂದಿದೆ. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

    ಡೇವಿಡ್‌ ವಾರ್ನರ್‌ ಸನ್‌ರೈಸರ್ಸ್‌ ಹೈದರಾಬಾದ್ ಪರ ಐಪಿಎಲ್‌ನಲ್ಲಿ (IPL) ಆಡಿದ್ದರು. ಸನ್‌ರೈಸರ್ಸ್ ಹೈದರಾಬಾದ್‌ನ ನಾಯಕನಾಗಿ ಐಪಿಎಲ್ 2016ರ ಪ್ರಶಸ್ತಿಯನ್ನು ವಾರ್ನರ್‌ ಗೆದ್ದಿದ್ದರು. ಆದರೆ ಈಗ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದಲ್ಲಿ ಆಡುತ್ತಿದ್ದಾರೆ. ಇದನ್ನೂ ಓದಿ: IPL 2024 Auction: ಚೆನ್ನೈ ಪಾಲಾದ ಕನ್ನಡಿಗ ರಚಿನ್‌ – ಕಿವೀಸ್‌ ಫ್ಲೇವರ್‌ ಆಯ್ತು ಸೂಪರ್‌ ಕಿಂಗ್ಸ್‌!

  • IPL 2024: ಮಿನಿ ಹರಾಜಿಗೆ 590 ಮಂದಿ ಶಾರ್ಟ್‌ಲಿಸ್ಟ್‌ – ಮಹತ್ವದ ಬದಲಾವಣೆಗೆ ಮುಂದಾದ RCB

    IPL 2024: ಮಿನಿ ಹರಾಜಿಗೆ 590 ಮಂದಿ ಶಾರ್ಟ್‌ಲಿಸ್ಟ್‌ – ಮಹತ್ವದ ಬದಲಾವಣೆಗೆ ಮುಂದಾದ RCB

    ಮುಂಬೈ: ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್‌ ಮಿನಿ ಹರಾಜಿಗೆ (IPL Auction) ಒಟ್ಟು 590 ಮಂದಿ ಶಾರ್ಟ್‌ಲಿಸ್ಟ್‌ ಆಗಿದ್ದಾರೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಬಿಡಗಡೆಗೊಳಿಸಬಲ್ಲ ಹಾಗೂ ಉಳಿಸಿಕೊಳ್ಳಬಲ್ಲ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಸಜ್ಜಾಗುತ್ತಿವೆ. ಇದರೊಂದಿಗೆ ಫ್ರಾಂಚೈಸಿಗಳ ನಡುವೆ ಆಟಗಾರರ ಟ್ರೇಡಿಂಗ್‌ ಕೂಡ ನಡೆಯುತ್ತಿದೆ.

    ವಿಶೇಷವೆಂದರೆ ಈ ಬಾರಿ ಮಿನಿ ಹರಾಜಿಗೆ ಶಾರ್ಟ್‌ಲಿಸ್ಟ್‌ ಆದವರ ಪೈಕಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) 10 ಕ್ರಿಕೆಟಿಗರು (Cricketers) ಸೇರಿದ್ದಾರೆ. ತಕ್ಕಮಟ್ಟಿಗೆ ಆಡುವ ಮುಜ್ತಾಬಾ ಯೂಸುಫ್, ರಾಸಿಖ್ ಸಲಾಮ್, ಪರ್ವೇಜ್ ರಸೂಲ್, ಕಮ್ರಾನ್ ಇಕ್ಬಾಲ್, ಫಾಜಿಲ್ ರಶೀದ್, ಹೆನಾನ್ ಮಲಿಕ್, ಅಬಿದ್ ಮುಷ್ತಾಕ್, ನಾಸಿರ್ ಲೋನ್, ಔಕಿಬ್ ನಬಿ ಮತ್ತು ವಿವ್ರಾಂತ್ ಶರ್ಮಾ 10 ಆಟಗಾರರ ಬಗ್ಗೆ ಪ್ರಮುಖ ಫ್ರಾಂಚೈಸಿಗಳು ಆಸಕ್ತಿ ತೋರಿವೆ. ಇದನ್ನೂ ಓದಿ: ಮೊದಲ ಬಾರಿಗೆ ದೇಶದಲ್ಲಿ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌’ ಆಯೋಜನೆ: ಅನುರಾಗ್‌ ಠಾಕೂರ್‌

    ಮುಜ್ತಾಬಾ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದಲ್ಲಿ ನೆಟ್ ಬೌಲರ್ ಆಗಿದ್ದರು, ಈ ಬಾರಿ ಅವರು ತಂಡಗಳಲ್ಲಿ ಒಂದರಲ್ಲಿ ಶಾಶ್ವತ ಸ್ಥಾನ ಪಡೆಯುವ ಉತ್ತಮ ಅವಕಾಶವಿದೆ. ಇನ್ನೂ ಹಿಂದಿನ ಮೂರು ಹರಾಜಿನಲ್ಲಿ ಮಾರಾಟವಾಗದ ನಂತರವೂ ಪರ್ವೇಜ್‌ ರಸೂಲ್‌ ಮತ್ತೊಮ್ಮೆ ತಮ್ಮ ಹೆಸದರನ್ನು 50 ಲಕ್ಷ ರೂ. ಮೂಲಬೆಲೆಗೆ ಹರಾಜಿಗೆ ಇಟ್ಟಿದ್ದಾರೆ. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್‌ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್‌ ಬಗ್ಗೆ ಅಖಿಲೇಶ್‌ ಟೀಕೆ

    ಮಹತ್ವದ ಬದಲಾವಣೆಗೆ ಮುಂದಾದ RCB: 16 ಆವೃತ್ತಿ ಕಳೆದರೂ ಒಂದು ಟೂರ್ನಿಯಲ್ಲೂ ಟ್ರೋಫಿ ಗೆಲ್ಲದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಈ ಬಾರಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲು ಎದುರು ನೋಡುತ್ತಿದೆ. ಅದರಂತೆ ಕಳೆದ ಆವೃತ್ತಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಪರ ಆಡಿದ್ದ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ಅವರನ್ನ ಹರ್ಷಲ್‌ ಪಟೇಲ್‌ ಅವರ ಸ್ಥಾನಕ್ಕೆ ಆಯ್ಕೆ ಮಾಡಲು ಬೆಂಗಳೂರು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

    ಹರ್ಷಲ್ ಪಟೇಲ್‌ 2021ರ ಐಪಿಎಲ್‌ ಟೂರ್ನಿಗಳಿಂದ ಆರ್‌ಸಿಬಿ ತಂಡಕ್ಕೆ ಪ್ರಮುಖ ಕೀ ಆಟಗಾರರಾಗಿದ್ದಾರೆ. 2021ರ ಆವೃತ್ತಿಯಲ್ಲಿ ಹರ್ಷಲ್ ಪಟೇಲ್‌ ಅವರು 15 ಪಂದ್ಯಗಳಿಂದ 32 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಪರ್ಪಲ್‌ ಕ್ಯಾಪ್‌ ಗೆದ್ದಿದ್ದರು. ಆದರೆ, ಕಳೆದ 2023ರ ಐಪಿಎಲ್‌ ಟೂರ್ನಿಯಲ್ಲಿ 13 ಪಂದ್ಯಗಳಿಂದ ಕೇವಲ 14 ವಿಕೆಟ್‌ಗಳನ್ನಷ್ಟೇ ಪಡೆದಿದ್ದರು. ಮತ್ತೊಂದೆಡೆ ಶಾರ್ದುಲ್‌ ಠಾಕೂರ್‌ ಅವರು 2023ರ ಐಪಿಎಲ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಕೆಲ ಪಂದ್ಯಗಳನ್ನು ಹೊರತುಪಡಿಸಿ ಶಾರ್ದುಲ್‌ ಠಾಕೂರ್‌ ಅವರು ಬಹುತೇಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಅಂದ ಹಾಗೆ ಮಿನಿ ಹರಾಜಿಗೂ ಮುನ್ನ ಬೆಂಗಳೂರು ಹಾಗೂ ಕೋಲ್ಕತಾ ಫ್ರಾಂಚೈಸಿಗಳು ಹರ್ಷಲ್ ಪಟೇಲ್‌ ಮತ್ತು ಶಾರ್ದುಲ್‌ ಠಾಕೂರ್‌ ಅವರನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ.

    ಶಾರ್ದುಲ್ ಠಾಕೂರ್‌ ಮತ್ತು ಹರ್ಷಲ್‌ ಪಟೇಲ್‌ ಇಬ್ಬರನ್ನೂ ಈ ಎರಡೂ ತಂಡಗಳು 10.75 ಕೋಟಿ ರೂ. ಗಳಿಗೆ ಖರೀದಿಸಿದ್ದವು ಎಂಬುದು ಆಸಕ್ತದಾಯಕ ಸಂಗತಿಯಾಗಿದೆ. ಶಾರ್ದುಲ್ ಠಾಕೂರ್ ಅವರು ಭಾರತ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದಾರೆ. ಇತ್ತೀಚೆಗೆ ಮುಗಿದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆದ್ದರಿಂದ ಬೌಲಿಂಗ್‌ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲರು ಎಂಬ ಕಾರಣದಿಂದ ಶಾರ್ದೂಲ್‌ ಠಾಕೂರ್‌ ಅವರನ್ನ ಆರ್‌ಸಿಬಿ ತನ್ನ ತಂಡಕ್ಕೆ ಕರೆತರಲು ಆಸಕ್ತಿ ತೋರಿದೆ.

  • IPL Auction 2023: ಸ್ಯಾಮ್, ಗ್ರೀನ್, ಬೆನ್ ಮೇಲೆ ಫ್ರಾಂಚೈಸ್ ಕಣ್ಣು – ಕನ್ನಡಿಗರಿಗೂ ಹೆಚ್ಚಿದ ಡಿಮ್ಯಾಂಡ್

    IPL Auction 2023: ಸ್ಯಾಮ್, ಗ್ರೀನ್, ಬೆನ್ ಮೇಲೆ ಫ್ರಾಂಚೈಸ್ ಕಣ್ಣು – ಕನ್ನಡಿಗರಿಗೂ ಹೆಚ್ಚಿದ ಡಿಮ್ಯಾಂಡ್

    ತಿರುವನಂತಪುರಂ: ಐಪಿಎಲ್‍ ಮಿನಿ ಹರಾಜು (IPL Mini Auction)  ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಕೊಚ್ಚಿಯಲ್ಲಿ 2023ರ ಐಪಿಎಲ್‍ಗೂ ಮುನ್ನ ಆಟಗಾರರ ಹರಾಜು ನಡೆಯಲಿದ್ದು, ಎಲ್ಲಾ ಫ್ರಾಂಚೈಸ್‍ಗಳ ಕಣ್ಣು ಆಲ್‍ರೌಂಡರ್‌ಗಳಾದ ಬೆನ್ ಸ್ಟೋಕ್ಸ್ (Ben Stokes), ಸ್ಯಾಮ್ ಕರ್ರನ್ (SamCurran) ಮತ್ತು ಕ್ಯಾಮರೂನ್ ಗ್ರೀನ್ (Cameron Green) ಮೇಲಿದೆ. ಈ ಮೂವರನ್ನು ಖರೀದಿಸಲು ಫ್ರಾಂಚೈಸ್‍ಗಳು ಮುಗಿ ಬೀಳುವ ಸಾಧ್ಯತೆ ಹೆಚ್ಚಿದೆ.

    ಈಗಾಗಲೇ ಈ ಮೂವರ ಖರೀದಿಗೆ 10 ಫ್ರಾಂಚೈಸ್‍ಗಳು ಪೈಪೋಟಿ ನೀಡಲು ಸಿದ್ಧತೆ ಆರಂಭಿಸಿವೆ. ಇಂದಿನ ಮಿನಿ ಹರಾಜಿನಲ್ಲಿ ಈ ಮೂವರು ಟ್ರಂಪ್‍ಕಾರ್ಡ್ ಆಗಿದ್ದು, ಕೋಟಿ, ಕೋಟಿ ರೂ.ಗೆ ಬಿಕರಿ ಆಗುವ ಎಲ್ಲಾ ಸಾಧ್ಯತೆಗಳಿವೆ. ಈ ಮೂವರಿಗೂ 2 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ. ಇವರೊಂದಿಗೆ ಕರ್ನಾಟಕದ ಇಬ್ಬರು ಆಟಗಾರರು ಈ ಬಾರಿ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗುವ ಭರವಸೆ ಮೂಡಿಸಿದ್ದಾರೆ. ಕನ್ನಡಿಗರ ಪೈಕಿ ಮಯಾಂಕ್ ಅಗರ್ವಾಲ್‌ ಮತ್ತು ಮನೀಶ್ ಪಾಂಡೆ ಬೇಡಿಕೆಯ ಆಟಗಾರರಾಗಿ ಗುರುತಿಸಿಕೊಂಡಿದ್ದು, ಇವರಿಬ್ಬರೂ ಮೇಲು ಹಲವು ಫ್ರಾಂಚೈಸ್‍ಗಳು ಒಂದು ಕಣ್ಣಿಟ್ಟಿದೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

    ಹರಾಜಿನಲ್ಲಿ ಈಗಾಗಲೇ 405 ಆಟಗಾರರ ಅಂತಿಮ ಪಟ್ಟಿ ಸಿದ್ಧಗೊಂಡಿದೆ. ಈ ಪಟ್ಟಿಯಲ್ಲಿ 273 ಭಾರತೀಯ ಆಟಗಾರರು ಕಾಣಿಸಿಕೊಂಡರೆ, 132 ಮಂದಿ ವಿದೇಶಿ ಅಟಗಾರರು ಸೇರಿದ್ದಾರೆ. ಒಟ್ಟು 991 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆ ಬಳಿಕ 10 ಫ್ರಾಂಚೈಸ್‍ಗಳ ಜೊತೆ ಚರ್ಚಿಸಿ ಅಂತಿಮವಾಗಿ 369 ಆಟಗಾರರ ಪಟ್ಟಿ ಸಿದ್ಧಗೊಂಡಿತು. ನಂತರ 36 ಆಟಗಾರರ ಹೆಚ್ಚುವರಿ ಸೇರ್ಪಡೆಯೊಂದಿಗೆ ಒಟ್ಟು 405 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಮಧ್ಯಾಹ್ನ 2:30 ರಿಂದ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದನ್ನೂ ಓದಿ: ರೋಹಿತ್‍ಗೆ ಗೇಟ್‍ ಪಾಸ್ – ಪಾಂಡ್ಯ ಸೀಮಿತ ಓವರ್‌ಗಳ ನಾಯಕ?

    IPL

    ಯಾವ ತಂಡದಲ್ಲಿ ಎಷ್ಟು ಹಣ ಬಾಕಿ:
    ಸನ್‍ರೈಸರ್ಸ್ ಹೈದರಾಬಾದ್ (SRH) – 42.25 ಕೋಟಿ ರೂ. ಬಾಕಿ ಇದ್ದು 4 ವಿದೇಶಿ ಆಟಗಾರರು ಸಹಿತ 13 ಆಟಗಾರರನ್ನು ಖರೀದಿಸಬಹುದು.
    ಚೆನ್ನೈ ಸೂಪರ್ ಕಿಂಗ್ಸ್ (CSK) – 20.45 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ 7 ಆಟಗಾರರನ್ನು ಖರೀದಿ ಮಾಡಬಹುದು.

    ಡೆಲ್ಲಿ ಕಾಪಿಟಲ್ಸ್ (DC) – 19.45 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ 5 ಆಟಗಾರ ಖರೀದಿಗೆ ಅವಕಾಶವಿದೆ.
    ಗುಜರಾತ್ ಟೈಟಾನ್ಸ್ (GT) – 19.25 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 7 ಆಟಗಾರನ್ನು ಈ ಬಾರಿ ಖರೀದಿ ಮಾಡಬಹುದು.

    ಕೋಲ್ಕತ್ತಾ ನೈಟ್ ರೈಡರ್ಸ್ (KKR) – 7.05 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 11 ಆಟಗಾರರನ್ನು ಖರೀದಿಸಬಹುದು
    ಲಕ್ನೋ ಸೂಪರ್ ಜೈಂಟ್ಸ್ (LSG) – 23.35 ಕೋಟಿ ರೂ. ಬಾಕಿ ಇದ್ದು, 4 ವಿದೇಶಿ ಸಹಿತ 10 ಆಟಗಾರನ್ನು ಖರೀದಿಗೆ ಅವಕಾಶವಿದೆ.

    ಮುಂಬೈ ಇಂಡಿಯನ್ಸ್ (MI) – 20.55 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 9 ಆಟಗಾರರನ್ನು ಖರೀದಿ ಮಾಡಬಹುದು.
    ಪಂಜಾಬ್ ಕಿಂಗ್ಸ್ (PBKS) – 32.2 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 9 ಆಟಗಾರರನ್ನು ಖರೀದಿಸಬಹುದು.
    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – 8.75 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ ಒಟ್ಟು 7 ಆಟಗಾರ ಖರೀದಿಗೆ ಅವಕಾಶವಿದೆ.
    ರಾಜಸ್ಥಾನ ರಾಯಲ್ಸ್ (RR) – 13.2 ಕೋಟಿ ರೂ. ಬಾಕಿ ಇದ್ದು, 4 ವಿದೇಶಿ ಸಹಿತ 13 ಆಟಗಾರರನ್ನು ಖರೀದಿಸಬಹುದು.

    Live Tv
    [brid partner=56869869 player=32851 video=960834 autoplay=true]

  • ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ #Boycott_ChennaiSuperKings ಅಭಿಯಾನ!

    ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ #Boycott_ChennaiSuperKings ಅಭಿಯಾನ!

    ಚೆನ್ನೈ: ಐಪಿಎಲ್ ಮೆಗಾ ಹರಾಜಿನ ಬಳಿಕ ಇದೀಗ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಸ್‍ಕೆ ವಿರುದ್ಧ #Boycott_ChennaiSuperKings ಎಂಬ ಅಭಿಯಾನ ಆರಂಭವಾಗಿದೆ.

    ಚೆನ್ನೈ ಸೂಪರ್ ಕಿಂಗ್ ಮೆಗಾ ಹರಾಜಿನಲ್ಲಿ ಶ್ರೀಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣರನ್ನು ಖರೀದಿಸಿದೆ. ಇದನ್ನು ವಿರೋಧಿಸಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

    ಅಭಿಯಾನಕ್ಕೆ ಏನು ಕಾರಣ:
    ಅಭಿಯಾನ ಆರಂಭವಾಗಲು ಪ್ರಮುಖ ಕಾರಣ ಮಹೇಶ್ ತೀಕ್ಷಣ ಸಿಂಹಳೀಯ ಬೌಲರ್ ಎಂಬುದು. 2009ರಲ್ಲಿ ಎಲ್‍ಟಿಟಿಇ ವಿರುದ್ಧದ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಂಹಳೀಯ ಸೈನಿಕರು ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಯುದ್ಧಾಪರಾಧ ಎಸಗಿದ್ದರು. ಇದರಿಂದ ತಮಿಳುನಾಡು ಮತ್ತು ಶ್ರೀಲಂಕಾ ನಡುವೆ ವೈಮನಸ್ಸಿದೆ.  ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಇದೀಗ ತಮಿಳುನಾಡು ಮೂಲದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಂಹಳೀಯ ಬೌಲರ್ ಸೇರ್ಪಡೆ ಆಗಿರುವುದನ್ನು ಅಭಿಮಾನಿಗಳು ವಿರೋಧಿಸಲು ಆರಂಭಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ವೈರಲ್ ಆಗ ತೊಡಗಿದೆ.

  • ಐಪಿಎಲ್‌ ಬಿಡ್‌ –  ಬಿಕರಿಯಾಗದ ಟಾಪ್‌ ಆಟಗಾರರು

    ಐಪಿಎಲ್‌ ಬಿಡ್‌ – ಬಿಕರಿಯಾಗದ ಟಾಪ್‌ ಆಟಗಾರರು

    ವಚೆನ್ನೈ: ಐಪಿಎಲ್‌ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌ ದುಬಾರಿ ಬೆಲೆಗೆ ಬಿಡ್‌ ಆಗಿದ್ದರೆ ಹಲವು ತಾರಾ ಆಟಗಾರರು ಬಿಕರಿ ಆಗಲಿಲ್ಲ.

    ಇಂಗ್ಲೆಂಡಿನ ಜೇಸನ್‌ ರಾಯ್, ಅಲೆಕ್ಸ್‌ ಹೇಲ್ಸ್‌, ಆದಿಲ್‌ ರಶೀದ್‌,  ಆಸ್ಟ್ರೇಲಿಯಾ ಆರೋನ್‌ ಫಿಂಚ್‌, ನ್ಯೂಜಿಲೆಂಡಿನ ಆಟಗಾರರಾದ ಕೋರೆ ಆಂಡರ್‌ಸನ್‌, ಮಾರ್ಟಿ ಗಪ್ಟಿಲ್‌, ಟಿಮ್‌ ಸೌಥಿ, ವೆಸ್ಟ್‌ ಇಂಡೀಸಿನ ಎವಿನ್‌ ಲೆವಿಸ್‌ ಅವರನ್ನು ಯಾರೂ ಖರೀದಿಸುವ ಮನಸ್ಸು ಮಾಡಲಿಲ್ಲ. ಕಳೆದ ಐಪಿಎಲ್‌ನಲ್ಲಿ ಆರೋನ್‌ ಫಿಂಚ್‌ ಬೆಂಗಳೂರು ಪರ ಆಡಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ.

    ಕನ್ನಡಿಗರ ಪೈಕಿ ಕೆ. ಗೌತಮ್‌ 9.25 ಕೋಟಿಗೆ ಚೆನ್ನೈ ತಂಡದ ಪಾಲಾಗಿದ್ದರೆ, ಕರಣ್‌ ನಾಯರ್‌ 50 ಲಕ್ಷಕ್ಕೆ ಕೆಕೆಆರ್‌, ಜೆ. ಸುಚಿತ್‌ 30 ಲಕ್ಷಕ್ಕೆ ಹೈದರಬಾದ್‌, ಕರಿಯಪ್ಪ 20 ಲಕ್ಷಕ್ಕೆ ರಾಜಸ್ಥಾನಕ್ಕೆ ಮಾರಾಟವಾಗಿದ್ದಾರೆ.

    ಈ ಬಾರಿ ಬಿಡ್‌ನಲ್ಲಿ ಆಲ್‌ರೌಂಡರ್‌ ಮತ್ತು ವೇಗದ ಬೌಲರ್‌ಗಳಿಗೆ ಬೇಡಿಕೆ ಇತ್ತು. 2020-21 ಬಿಗ್‌ ಬ್ಯಾಶ್‌ ಲೀಗ್‌ನಲ್ಲಿ ಗರಿಷ್ಟ ವಿಕೆಟ್‌ ಪಡೆದಿದ್ದ ಜಾಯ್‌ ರಿಚರ್ಡ್‌ಸನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ಖರೀದಿ ಮಾಡಿದೆ.

    ಕಳೆದ ವರ್ಷ 10 ಕೋಟಿ ರೂ. ನೀಡಿ ಆರ್‌ಸಿಬಿ ಮೋರಿಸ್‌ ಅವರನ್ನು ಖರೀದಿಸಿತ್ತು. ಈ ಬಾರಿ 75 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ನೊಂದಾಯಿಸಿಕೊಂಡಿದ್ದ ಮೋರಿಸ್‌ ಅವರನ್ನು ಖರೀದಿಸಲು ರಾಜಸ್ಥಾನ, ಮುಂಬೈ, ಪಂಜಾಬ್‌ ಪೈಪೋಟಿ ನಡೆಸಿದ್ದವು. ಕೊನೆಗೆ ಮೋರಿಸ್‌ ಅವರನ್ನು 16.25 ಕೋಟಿ ರೂ.ಗೆ ಬಿಡ್‌ ಮಾಡಿ ರಾಜಸ್ಥಾನ ಖರೀದಿಸಿತು.

  • ಫಿಂಚ್, ಮೋರಿಸ್ ಆರ್‌ಸಿಬಿಗೆ- ದಾಖಲೆ ಬೆಲೆಗೆ ಪ್ಯಾಟ್ ಕಮಿನ್ಸ್ ಸೇಲ್

    ಫಿಂಚ್, ಮೋರಿಸ್ ಆರ್‌ಸಿಬಿಗೆ- ದಾಖಲೆ ಬೆಲೆಗೆ ಪ್ಯಾಟ್ ಕಮಿನ್ಸ್ ಸೇಲ್

    ಕೋಲ್ಕತ್ತಾ: 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊದಲ ದಿನದ ಹರಾಜು ಪ್ರಕ್ರಿಯೆ ಅಬ್ಬರದಿಂದ ಸಾಗಿದ್ದು, ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮಿನ್ಸ್ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದಾರೆ.

    ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 2016 ರಲ್ಲಿ 16 ಕೋಟಿಗೆ ಹರಾಜಾಗಿದ್ದ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅತ್ಯಂತ ದುಬಾರಿ ಬೆಲೆಗೆ ಹರಾಜು ಆಗಿದ್ದರು. ಈಗ ಅವರನ್ನು ಬಿಟ್ಟರೆ ಕೆಕೆಆರ್ ತಂಡಕ್ಕೆ 15.5 ಕೋಟಿಗೆ ಈ ಬಾರಿ ಪ್ಯಾಟ್ ಕಮಿನ್ಸ್ ಹರಾಜು ಆಗಿದ್ದಾರೆ. ಕಮಿನ್ಸ್‍ಗಾಗಿ ಆರ್‌ಸಿಬಿ ತಂಡವು ಕೂಡ 14.75 ರ ವರೆಗೂ ಬಿಡ್ ಕೂಗಿದ್ದು, ಅಂತಿಮವಾಗಿ ಕೆಕೆಆರ್ ತಂಡ 15.5 ಕೋಟಿಗೆ ಪ್ಯಾಟ್ ಕಮಿನ್ಸ್ ಅವರನ್ನು ಖರೀದಿ ಮಾಡಿದೆ.

    ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಕೇವಲ ಇಬ್ಬರು ಆಟಗಾರನ್ನು ಖರೀದಿಸಿದ ಆರ್‌ಸಿಬಿ, ಮೊದಲಿಗೆ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮ್ಯಾನ್ ಆರೋನ್ ಫಿಂಚ್ ಅವರನ್ನು 4.40 ಕೋಟಿ ನೀಡಿ ಖರೀದಿ ಮಾಡಿತು. ನಂತರ ಸೌಥ್ ಆಫ್ರಿಕಾದ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರನ್ನು 10 ಕೋಟಿಗೆ ಖರೀದಿ ಮಾಡಿದೆ. ಈ ಮೂಲಕ ತನ್ನ ಖಾತೆಯಲ್ಲಿದ್ದ 27.75 ಕೋಟಿ ಹಣದಲ್ಲಿ 14.4 ಕೋಟಿ ಹಣವನ್ನು ಖರ್ಚು ಮಾಡಿದೆ.

    ಡೇಲ್ ಸ್ಟೇನ್ ಆನ್‍ಸೋಲ್ಡ್, ಮ್ಯಾಕ್ಸ್ ವೆಲ್‍ಗೆ 10.75 ಕೋಟಿ
    ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆನ್‍ಸೋಲ್ಡ್ ಆಟಗಾರನಾಗಿ ಉಳಿದಿದ್ದಾರೆ. ಆದರೆ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10.75 ಕೋಟಿ ಕೊಟ್ಟು ಖರೀದಿ ಮಾಡಿದೆ. ಇಂಗ್ಲೆಂಡ್ ತಂಡದ ಆಟಗಾರ ಕ್ರಿಸ್ ವೋಕ್ಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ ತಂಡ 1.5 ಕೋಟಿ ನೀಡಿ ಖರೀದಿ ಮಾಡಿದೆ.

    ಲಿನ್‍ಗೆ ಇಲ್ಲ ಬೇಡಿಕೆ, ಹರಾಜಿನಲ್ಲಿ ಮಿಂಚಿದ ಮಾರ್ಗನ್
    ಕಳೆದ ಬಾರಿ ಕೋಲ್ಕತ್ತಾ ತಂಡದಲ್ಲಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ ಲಿನ್ ಅವರನ್ನು ಆರಂಭಿಕ ಬೆಲೆ 2 ಕೋಟಿ ಕೊಟ್ಟು ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿದೆ. ಈ ಬಾರಿ ಹರಾಜಿನಲ್ಲಿ ಮಿಂಚಿದ ಇಂಗ್ಲೆಂಡ್ ನಾಯಕ ಮಾರ್ಗನ್ 5.25 ಕೋಟಿಗೆ ಕೆಕೆಆರ್ ಪಾಲಾಗಿದ್ದಾರೆ. ಇವರ ಜೊತೆಗೆ ಮತ್ತೊಬ್ಬ ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ಅವರನ್ನು ಡೆಲ್ಲಿ ಕ್ಯಾಪಿಟಲ್ ತಂಡ 1.5 ಕೋಟಿ ನೀಡಿ ಖರೀದಿ ಮಾಡಿದೆ.

    ಪಂಜಾಬ್‍ಗೆ ಸಲ್ಯೂಟ್ ಹೊಡೆದ ಯೋಧ ಕಾಟ್ರೆಲ್
    ವೆಸ್ಟ್ ಇಂಡೀಸ್ ತಂಡದ ಬೌಲರ್ ಶೆಲ್ಡನ್ ಕಾಟ್ರೆಲ್ ಅವರನ್ನು 8.5 ಕೋಟಿ ನೀಡಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿ ಮಾಡಿದೆ. ಆಸ್ಟ್ರೇಲಿಯನ್ ವೇಗಿ ನೇಥನ್ ಕೌಲ್ಟರ್ ನೈಲ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 8 ಕೋಟಿ ನೀಡಿ ಖರೀದಿ ಮಾಡಿದೆ. ಇವರ ಜೊತೆಗೆ ಆಸ್ಟ್ರೇಲಿಯಾದ ವಿಕೆಟ್‍ಕೀಪರ್ ಬ್ಯಾಟ್ಸ್ ಮನ್ ಅಲಕ್ಸ್ ಕೇರಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 2.4 ಕೋಟಿ ಕೊಟ್ಟು ಖರೀದಿಸಿದೆ. ಕೇರಿಗಾಗಿ ಆರ್‍ಸಿಬಿ 2.3 ಕೋಟಿ ವರೆಗೆ ಬಿಡ್ಡಿಂಗ್ ಮಾಡಿತ್ತು.

    ತಂಡಕ್ಕೆ ಬೇಕಾದ ಆಟಗಾರರ ಭೇಟೆಯಲ್ಲಿ ಚೆನ್ನೈ
    ತಂಡವನ್ನು ಬಲಪಡಿಸುವ ನಿಟ್ಟಿನಲ್ಲಿ ಆಟಗಾರರನ್ನು ಖರೀದಿಸುತ್ತಿರುವ ಕ್ಯಾಪ್ಟನ್ ಕೂಲ್ ಧೋನಿ ನಾಯಕತ್ವದ ತಂಡ ಚೆನ್ನೈ ಸೂಪರ್ ಕಿಂಗ್ಸ್, ಮೊದಲಿಗೆ ಇಂಗ್ಲೆಂಡ್ ತಂಡದ ಯುವ ಆಲ್ ರೌಂಡರ್ ಆಟಗಾರ ಸ್ಯಾಮ್ ಕರ್ರನ್ ಅವರನ್ನು 5.5 ಕೋಟಿ ನೀಡಿ ಖರೀದಿ ಮಾಡಿದೆ. ಇವರನ್ನು ಬಿಟ್ಟರೇ ಭಾರತದ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರನ್ನು 6.75 ಕೋಟಿ ನೀಡಿ ಚೆನ್ನೈ ಖರೀದಿ ಮಾಡಿದೆ.

    ಸನ್ ರೈಸರ್ಸ್ ಪಾಲಾದ ಭಾರತದ ಅಂಡರ್-19 ಕ್ಯಾಪ್ಟನ್ ಗಾರ್ಗ್
    ಭಾರತದ ಅಂಡರ್-19 ತಂಡದ ನಾಯಕ ಪ್ರಿಯಮ್ ಗಾರ್ಗ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 1.9 ಕೋಟಿ ನೀಡಿ ಖರೀದಿ ಮಾಡಿದೆ. ಇವರನ್ನು ಬಿಟ್ಟರೆ ದೇಶಿಯ ಪ್ರತಿಭೆಗಳಾದ ರಾಹುಲ್ ತ್ರಿಪಾಠಿ ಅವರನ್ನು 60 ಲಕ್ಷ ಕೆಕೆಅರ್ ತಂಡ, ದೀಪಕ್ ಹುಡಾ ಅವರನ್ನು 50 ಲಕ್ಷ ನೀಡಿ ಪಂಜಾಬ್ ತಂಡ, ಯಶಸ್ವಿ ಜಸ್ವಾಲ್ ಅವರನ್ನು 2.40 ಕೋಟಿ ನೀಡಿ ರಾಜಸ್ತಾನ್ ರಾಯಲ್ಸ್ ತಂಡ ಮತ್ತು ಜಯ್‍ದೇವ್ ಉನಾದ್ಕಟ್ ಅವರನ್ನು 3 ಕೋಟಿ ರಾಜಸ್ಥಾನ್ ತಂಡ ಖರೀದಿ ಮಾಡಿದೆ.

    ಕನ್ನಡಿಗ ರಾಬಿನ್ ಉತ್ತಪ್ಪ ರಾಜಸ್ಥಾನಕ್ಕೆ
    ಶಿಲ್ಪಾ ಶೆಟ್ಟಿ ಮಾಲೀಕತ್ವದ ರಾಜಸ್ಥಾನ್ ರಾಯಲ್ಸ್ ತಂಡವೂ ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು 3 ಕೋಟಿಗೆ ಖರೀದಿ ಮಾಡಿದೆ. ಇವರನ್ನು ಬಿಟ್ಟರೆ ಕನ್ನಡಿಗನಾದ ಸ್ಟುವರ್ಟ್ ಬಿನ್ನಿ ಹಾಗೂ ಚೇತೇಶ್ವರ್ ಪೂಜಾರ, ಯೂಸಫ್ ಪಠಾಣ್, ಕೆ.ಸಿ ಕಾರಿಯಪ್ಪ ಆನ್‍ಸೋಲ್ಡ್ ಆಗಿ ಉಳಿದಿದ್ದಾರೆ.

  • 2018 ಐಪಿಎಲ್ ಹರಾಜು – ಮೊದಲ ದಿನವೇ ಆಟಗಾರರಿಗೆ ಧಮಾಕಾ

    2018 ಐಪಿಎಲ್ ಹರಾಜು – ಮೊದಲ ದಿನವೇ ಆಟಗಾರರಿಗೆ ಧಮಾಕಾ

    ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ನಗರದಲ್ಲಿ ನಡೆಯುತ್ತಿದ್ದು, ಟೀಂ ಪ್ರಾಂಚೈಸಿಗಳು ಹಣದ ಹೊಳೆ ಹರಿಸಿ ಆಟಗಾರರನ್ನು ಖರೀಧಿಸಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್‍ನಲ್ಲಿ ಕರ್ನಾಟಕದ ಆಟಗಾರರಿಗೆ ನಿರೀಕ್ಷೆ ಮೀರಿದ ಬಂಪರ್ ಆಫರ್ ಲಭಿಸಿದೆ.

    ಪ್ರಮುಖವಾಗಿ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಿದ್ದ ಕೆ.ಎಲ್ ರಾಹುಲ್ ರನ್ನು ಕಿಂಗ್ಸ್ ಇಲೆವೆನ್ ತಂಡ ಬರೋಬ್ಬರಿ 11 ಕೋಟಿ ರೂ. ಕೊಟ್ಟು ಖರೀದಿಸಿದೆ. ಅದೇ ರೀತಿ ಮನೀಶ್ ಪಾಂಡೆಗೆ 11 ರೂ. ಕೋಟಿ ಕೊಟ್ಟು ಸನ್ ರೈಸರ್ಸ್ ಹೈದರಾಬಾದ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಕರುಣ್ ನಾಯರ್ ಅವರಿಗೆ 5.6 ಕೋಟಿ ರೂ. ನೀಡಿ ಪಂಜಾಬ್ ಖರೀದಿಸಿದೆ. ರಾಬಿನ್ ಉತ್ತಪ್ಪ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 6.40 ಕೋಟಿ ರೂ. ನೀಡಿ ಖರೀದಿಸಿದೆ.

     ಇಂದು ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಟಾಪ್ ಟೆನ್ ಆಟಗಾರರ ಪಟ್ಟಿ
    1. ಬೆನ್ ಸ್ಟೋಕ್ಸ್ – ರಾಜಸ್ಥಾನ ರಾಯಲ್ಸ್ – 12.5 ಕೋಟಿ ರೂ.
    2. ಮನೀಶ್ ಪಾಂಡೆ – ಸನ್‍ರೈಸರ್ಸ್ ಹೈದ್ರಾಬಾದ್ – 11 ಕೋಟಿ ರೂ.
    3. ಕೆ. ಎಲ್ ರಾಹುಲ್ – ಕಿಂಗ್ಸ್ ಇಲೆವೆನ್ ಪಂಜಾಬ್ – 11 ಕೋಟಿ ರೂ.
    4. ಕ್ರಿಸ್ ಲಿನ್ – ಕೊಲ್ಕತ್ತಾ ನೈಟ್ ರೈಡರ್ಸ್ – 9.6 ಕೋಟಿ ರೂ.
    5. ಮಿಚೆಲ್ ಸ್ಟಾರ್ಕ್ – ಕೊಲ್ಕತ್ತಾ ನೈಟ್ ರೈಡರ್ಸ್ -9.4 ಕೋಟಿ ರೂ.
    6. ಗ್ಲೇನ್ ಮ್ಯಾಕ್ಸ್ ವೆಲ್ – ಡೆಲ್ಲಿ ಡೇರ್ ಡೆವಿಲ್ಸ್ – 9 ಕೋಟಿ ರೂ.
    7. ಕೃನಾಲ್ ಪಾಂಡ್ಯ – ಮುಂಬೈ ಇಂಡಿಯನ್ಸ್‌ – 8.8 ಕೋಟಿ ರೂ.
    8. ಸಂಜು ಸ್ಯಾಮ್ಸನ್‌ – ರಾಜಸ್ಥಾನ ರಾಯಲ್ಸ್‌ – 8 ಕೋಟಿ ರೂ.
    9. ಕೇದಾರ್‌ ಜಾಧವ್‌ –  ಚೆನ್ನೈ ಸೂಪರ್‌ ಕಿಂಗ್ಸ್‌ – 7.8 ಕೋಟಿ ರೂ.
    10. ಆರ್.ಅಶ್ವಿನ್ – ಕಿಂಗ್ಸ್ ಇಲೆವೆನ್ ಪಂಜಾಬ್ – 7.6 ಕೋಟಿ ರೂ.

    https://twitter.com/IPLCricket/status/957241773977415680

    ಹರಾಜಿನಲ್ಲಿ ಖರೀದಿಯಾದ ಯುವ ಆಟಗಾರರು :
    1) ಸಿದ್ಧಾರ್ಥ್ ಕೌಲ್ – ಸನ್ ರೈಸರ್ಸ್ ಹೈದರಾಬಾದ್ – 3.8 ಕೋಟಿ ರೂ.
    2) ಬಸಿಲ್ ಥಾಂಪಿ – ಸನ್ ರೈಸರ್ಸ್ ಹೈದರಾಬಾದ್ -95 ಲಕ್ಷ ರೂ.
    3) ಸೂರ್ಯ ಕುಮಾರ್ ಯಾದವ್ – ಮುಂಬೈ ಇಂಡಿಯನ್ಸ್ – 3.2 ಕೋಟಿ ರೂ.
    4) ಶುಬ್ಮಾನ್ ಗಿಲ್ – ಕೊಲ್ಕತ್ತಾ ನೈಟ್ ರೈಡರ್ಸ್ – 1.8 ಕೋಟಿ ರೂ.
    5) ಕುಲ್ವಂತ್ ಖೇಜ್ರೋಲಿಯಾ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 85 ಲಕ್ಷ

    https://twitter.com/IPLCricket/status/957239277162778624

    ಹರಾಜಿನಲ್ಲಿ ಮಾರಾಟವಾಗದ ಪ್ರಮುಖ ಆಟಗಾರರು : ಐಪಿಎಲ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿರುವ ಕ್ರಿಸ್ ಗೇಲ್ ಹಾಗೂ ವಿಕೆಟ್ ದಾಖಲೆ ಹೊಂದಿರುವ ಲಸಿಂತ್ ಮಲಿಂಗಾ ಇಬ್ಬರೂ ಮಾರಾಟವಾಗದೇ ಉಳಿದರು. ಐಸಿಸಿ ಟಿ-20 ಬೌಲಿಂಗ್ ರ್ಯಾಂಕಿಂಗ್‍ನಲ್ಲಿ ನಂ. 1 ಸ್ಥಾನದಲ್ಲಿರುವ ನ್ಯೂಜಿಲೆಂಡ್‍ನ ಇಶ್ ಸೋಧಿ, ವೇಗದ ಬೌಲರ್ ಇಶಾಂತ್ ಶರ್ಮಾ, ಟಿಮ್ ಸೌಥಿ, ಮುರಳಿ ವಿಜಯ್, ಜಾಯ್ ರೂಟ್, ಹಿಮಾಂಶು ರಾಣಾ, ಮುಚೇಲ್ ಜಾನ್ಸನ್ ಮಾರಟವಾಗದೆ ಉಳಿದರು.

    https://twitter.com/IPLCricket/status/957238327240949760

    https://twitter.com/IPLCricket/status/957216135132471296

  • ಐಪಿಎಲ್ 11ರಲ್ಲಿ ರಾಜ್ಯದ ಆಟಗಾರರಿಗೆ ಬಂಪರ್ – ರಾಹುಲ್ 11 ಕೋಟಿ, ಕರುಣ್ ನಾಯರ್ 5.60 ಕೋಟಿ ರೂ.ಗೆ ಸೇಲ್

    ಐಪಿಎಲ್ 11ರಲ್ಲಿ ರಾಜ್ಯದ ಆಟಗಾರರಿಗೆ ಬಂಪರ್ – ರಾಹುಲ್ 11 ಕೋಟಿ, ಕರುಣ್ ನಾಯರ್ 5.60 ಕೋಟಿ ರೂ.ಗೆ ಸೇಲ್

    ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 11ನೇ ಆವೃತ್ತಿಯ ಹರಾಜು ಬೆಂಗಳೂರಿನಲ್ಲಿ ಶುರುವಾಗಿದೆ. ಕರ್ನಾಟಕ ಇಬ್ಬರು ಆಟಗಾರರು ಐಪಿಎಲ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದಾರೆ.

    ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾಗಿದ್ದಾರೆ. ಕರುಣ್ ನಾಯರ್ ಮೂಲ ಬೆಲೆ 50 ಲಕ್ಷ ಇದ್ದರೂ ಅವರನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡ 5.60 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.

    ಇನ್ನೋರ್ವ ಆಟಗಾರ ಕೆ.ಎಲ್ ರಾಹುಲ್ 11 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ. ರಾಹುಲ್ ಕಳೆದ ಸೀಸನ್‍ನಲ್ಲಿ ಆರ್‍ಸಿಬಿ ಪರ ಆಡಿದ್ದರು. ಈ ಬಾರಿ ರಾಹುಲ್ ಖರೀದಿಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪಂಜಾಬ್ ಹಾಗೂ ಹೈದರಾಬಾದ್ ತಂಡಗಳು ರಾಹುಲ್‍ರನ್ನು ಖರೀದಿಸಲು ತೀವ್ರ ಪೈಪೋಟಿ ನಡೆಸಿದ್ದರು. ಕೊನೆಗೆ ರಾಹುಲ್ ಪಂಜಾಬ್ ತಂಡದ ಪಾಲಾದರು.

    ಶಿಖರ್ ಧವನ್ ಹರಾಜಿನಲ್ಲಿ ಸೇಲ್ ಆದ ಮೊದಲ ಆಟಗಾರ ಎನಿಸಿಕೊಂಡರು. ಶಿಖರ್ ಧವನ್‍ಗೆ 2 ಕೋಟಿ ರೂ. ಮೂಲ ಬೆಲೆ ಫಿಕ್ಸ್ ಮಾಡಲಾಗಿತ್ತು. ಆದರೆ ಧವನ್ 5.20 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾದರು.

    ಇಂದಿನ ಹರಾಜಿನಲ್ಲಿ 36 ಆಟಗಾರರ ಬೇಸ್ ಪ್ರೈಸ್ 2 ಕೋಟಿ ರೂ. ಎಂದು ನಿಗದಿಗೊಳಿಸಲಾಗಿತ್ತು. ಭಾನುವಾರದವರೆಗೆ ನಡಯಲಿರುವ ಹರಾಜಿನಲ್ಲಿ ಒಟ್ಟು 8 ತಂಡಗಳಿಗಾಗಿ 182 ಆಟಗಾರರ ಹರಾಜು ನಡೆಯಲಿದೆ.

    https://twitter.com/IPLCricket/status/957150488742514690

    https://twitter.com/IPLCricket/status/957155147653746689