ಮುಂಬೈ: ತನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿ, ನಂತರದ ಸೀಸನ್ನಲ್ಲೂ ಫೈನಲ್ಗೇರಿದ್ದ ಗುಜರಾತ್ ಟೈಟಾನ್ಸ್ (Gujarat Titans) ಫ್ರಾಂಚೈಸಿಯು ರಶೀದ್ ಖಾನ್, ನಾಯಕ ಶುಭಮನ್ ಗಿಲ್ (Shubman Gill) ಸೇರಿ ಐವರು ಪ್ರಮುಖ ಆಟಗಾರರನ್ನ ತಂಡದಲ್ಲೇ ಉಳಿಸಿಕೊಂಡಿದೆ.
ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಗುಜರಾತ್ ಟೈಟಾನ್ಸ್ ತಂಡ ಲೀಗ್ ಸುತ್ತಿನಲ್ಲೇ ಹೊರಬಿದ್ದಿತ್ತು. ಹೀಗಾಗಿ ಮುಂದಿನ ಆವೃತ್ತಿಗೆ ಬಲಿಷ್ಠ ತಂಡ ಕಟ್ಟಲು ಸಿದ್ದವಾಗಿರುವ ಗುಜರಾತ್, ಮೆಗಾ ಹರಾಜಿಗೂ ಮುನ್ನ ಐವರು ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಅವರಲ್ಲಿ ನಾಯಕ ಶುಭ್ಮನ್ ಗಿಲ್, ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಸೇರಿದರೆ, ಉಳಿದಂತೆ ಅನುಭವಿ ಆಟಗಾರರಾದ ಮೊಹಮ್ಮದ್ ಶಮಿ, ಡೇವಿಡ್ ಮಿಲ್ಲರ್, ಉಮೇಶ್ ಯಾದವ್, ಕೇನ್ ವಿಲಿಯಮ್ಸನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.
ಗಿಲ್‌ಗಿಂತಲೂ ರಶೀದ್ ದುಬಾರಿ!
* ರಶೀದ್ ಖಾನ್ – 18 ಕೋಟಿ ರೂ.
* ಶುಭಮನ್ ಗಿಲ್ – 16.5 ಕೋಟಿ ರೂ.
* ಸಾಯಿ ಸುದರ್ಶನ್ – 8.5 ಕೋಟಿ ರೂ.
* ರಾಹುಲ್ ತೆವಾಟಿಯ – 4 ಕೋಟಿ ರೂ.
* ಶಾರೂಖ್ ಖಾನ್ – 4 ಕೋಟಿ ರೂ.
2025 ರಿಂದ 2027ರ ಐಪಿಎಲ್ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ.
ನಿರೀಕ್ಷೆಯಂತೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಹೆನ್ರಿಚ್ ಕ್ಲಾಸೆನ್ (Heinrich Klaasen) ಅವರನ್ನು 23 ಕೋಟಿ ರೂ.ಗಳಿಗೆ ಧಾರಣೆ ಮಾಡಿಕೊಂಡಿದೆ. ಇದರೊಂದಿಗೆ ಪ್ಯಾಟ್ ಕಮ್ಮಿನ್ಸ್, ನಿತೀಶ್ ರೆಡ್ಡಿ, ಟ್ರಾವಿಸ್ ಹೆಡ್ ಅವರಿಗೆ ದುಬಾರಿ ಸಂಭಾವನೆ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ. ಈ ಮೂಲಕ ಐಪಿಎಲ್‌ನಲ್ಲೇ 2ನೇ ಅತಿಹೆಚ್ಚು ಸಂಭಾವನೆ ಪಡೆದ ಆಟಗಾರನಾಗಿ ಹೊರಹೊಮ್ಮಿದ್ದಾರೆ. 2024 ಐಪಿಎಲ್ ಮಿನಿ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ 24.50 ಕೋಟಿ ರೂ.ಗೆ ಕೆಕೆಆರ್‌ಗೆ ಬಿಕರಿಯಾಗಿದ್ದು, ಈವರೆಗಿನ ದಾಖಲೆ.
ಮುಂಬೈ: 2025ರ ಮೆಗಾ ಹರಾಜಿಗೂ ಮುನ್ನವೇ ಹಾಲಿ ಚಾಂಪಿಯನ್ಸ್ ಕೆಕೆಆರ್ (KKR) ಸ್ಟಾರ್ ಆಟಗಾರರನ್ನ ಹೊರದಬ್ಬಿದೆ. ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಬಿಕರಿಯಾಗಿದ್ದ ಮಿಚೆಲ್ ಸ್ಟಾರ್ಕ್ (Mitchell starc), ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.
ರಿಂಕು, ರಸ್ಸೆಲ್, ರಾಣಾ ಸೇರಿಂದಂತೆ ಆಲ್‌ರೌಂಡರ್, ಬೌಲರ್‌ಗಳಿಗೆ ಮಣೆಹಾಕಿರುವ ಕೋಲ್ಕತ್ತಾ ನೈಟ್‌ರೈಡರ್ಸ್ ಇಬ್ಬರು ವಿದೇಶಿ ಆಟಗಾರರು ಸೇರಿದಂತೆ 6 ಆಟಗಾರರನ್ನು ಉಳಿಸಿಕೊಂಡಿದೆ. ಈ ಪೈಕಿ ಕಳೆದ ಆವೃತ್ತಿಯಲ್ಲಿ 55 ಲಕ್ಷ ರೂ. ಸಂಭಾವನೆ ಪಡೆದಿದ್ದ ರಿಂಕು ಸಿಂಗ್‌ಗೆ 13 ಕೋಟಿ ರೂ. ಕೊಟ್ಟು ಖರೀದಿ ಮಾಡಿರುವುದು ವಿಶೇಷ. ಇದನ್ನೂ ಓದಿ: IPL Retention | ರಿಷಬ್ ಪಂತ್ ಸೇರಿ ಸ್ಟಾರ್ ಆಟಗಾರರೇ ಔಟ್ – ಆಲ್‌ರೌಂಡರ್‌ಗೆ ಮಣೆ ಹಾಕಿದ ಡೆಲ್ಲಿ
ಕೆಕೆಆರ್‌ನಲ್ಲಿ ಯಾರಿಗೆ ಎಷ ಉಳಿಕೆ?
* ರಿಂಕು ಸಿಂಗ್ – 13 ಕೋಟಿ ರೂ.
* ವರುಣ್ ಚಕ್ರವರ್ತಿ – 12 ಕೋಟಿ ರೂ.
* ಸುನೀಲ್ ನರೇನ್ – 12 ಕೋಟಿ ರೂ.
* ಆಂಡ್ರೆ ರಸ್ಸೆಲ್ – 12 ಕೋಟಿ ರೂ.
* ಹರ್ಷಿತ್ ರಾಣಾ – 4 ಕೋಟಿ ರೂ.
* ರಮಣದೀಪ್ ಸಿಂಗ್ – 4 ಕೋಟಿ ರೂ.
2025 ರಿಂದ 2027ರ ಐಪಿಎಲ್ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ.
ಚೆನ್ನೈ: 2025ರ ಐಪಿಎಲ್ ಟೂರ್ನಿ ಸಿಎಸ್‌ಕೆ (CSK) ತಂಡದ ಉಸಿರಾಗಿರುವ ಎಂ.ಎಸ್ ಧೋನಿ (MS Dhoni) ಅವರ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಬಿಸಿಸಿಐ ರಿಟೇನ್ ನಿಯಮದ ಕುರಿತು ಕೈಗೊಳ್ಳುವ ನಿರ್ಧಾರದ ಮೇಲೆ ಮಹಿ 2025ರ ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಾರಾ? ಇಲ್ವಾ ಅನ್ನೋದು ಗೊತ್ತಾಗಲಿದೆ. ಈ ನಡುವೆ ಸಿಎಸ್‌ಕೆ ಫ್ರಾಂಚೈಸಿ ಉಳಿಸಿಕೊಳ್ಳಬಹುದಾದ ಐವರು ಆಟಗಾರರ ಕಿರುಪಟ್ಟಿಯನ್ನು (IPL 2025 Retention List) ಸಿದ್ಧಪಡಿಸಿದೆ.
ಬಿಸಿಸಿಐ (BCCI) ಆರ್‌ಟಿಎಂ (ರೈಟ್ ಟು ಮ್ಯಾಚ್) ಸೇರಿದಂತೆ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಿದೆ ಎಂಬ ವರದಿಗಳಿದ್ದರೂ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಹಾಗಾಗಿ ಸದ್ಯದ ನಿಯಮದ ಪ್ರಕಾರ 4 ರಿಂದ 5 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದ್ದು, CSK ರಿಟೇನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ 5 ಆಟಗಾರರನ್ನ ಪಟ್ಟಿ ಮಾಡಿದೆ. ಈ ಪೈಕಿ ನಾಯಕ ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ, ಮಥೀಶ ಪತಿರನ ಮತ್ತು ಎಂ.ಎಸ್ ಧೋನಿ ಸ್ಥಾನ ಪಡೆದುಕೊಂಡಿದ್ದಾರೆ.
ಸ್ಟಾರ್ ಆಟಗಾರರಿಗೆ ಕೊಕ್?
ರಿಟೇನ್ ಆಟಗಾರರ ಪಟ್ಟಿಯಲ್ಲಿ, ದೀಪಕ್ ಚಹಾರ್, ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್, ಮಹೇಶ್ ತೀಕ್ಷಣ, ರಚಿನ್ ರವೀಂದ್ರ ಸೇರಿ ಮುಂತಾದವರಿಗೆ ಸ್ಥಾನವಿಲ್ಲ. 2025ರ ಆವೃತ್ತಿಯ ಬಳಿಕ ಎಂ.ಎಸ್ ಧೋನಿ ಐಪಿಎಲ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂಬುದನ್ನು ಗಮನಿಸಿ ಫ್ರಾಂಚೈಸಿ ಪ್ರಮುಖ ಆಟಗಾರರನ್ನೂ ಹೊರದಬ್ಬಿ ಮಹಿ ಅವರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: IPL 2025 | ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನೂತನ ಮೆಂಟರ್ ಆಗಿ ಜಹೀರ್ ಖಾನ್ ನೇಮಕ
ಫ್ರಾಂಚೈಸಿ ಬೇಡಿಕೆ ಏನು?
ಸಿಎಸ್‌ಕೆ ಫ್ರಾಂಚೈಸಿ ಮಾಲೀಕರು ಈ ಹಿಂದೆ ಬಿಸಿಸಿಐಗೆ ಹಳೆಯ ನಿಯಮವನ್ನೇ ಜಾರಿಗೆ ತರುವಂತೆ ಕೇಳಿಕೊಂಡಿದ್ದರು. ಹಿಂದಿನ ನಿಯಮವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿ 5 ವರ್ಷಗಳಿಗಿಂತ ಹೆಚ್ಚು ಅವಧಿಯಾದರೆ ಅವರನ್ನ ಅನ್‌ಕ್ಯಾಪ್ಡ್ ವಿಭಾಗದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ಮಾಡಿಕೊಟ್ಟಿತು. ಆದ್ರೆ ಫ್ರಾಂಚೈಸಿ ಬೇಡಿಕೆಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: IPL 2025 | ಐಪಿಎಲ್ ಅಖಾಡದಲ್ಲಿ ʻಇಂಪ್ಯಾಕ್ಟ್ʼ ವಾರ್, ಪರ-ವಿರೋಧ ಚರ್ಚೆ; ಏನಿದು ನಿಯಮ?
ಏನಿದು ಆರ್‌ಟಿಎಂ ಕಾರ್ಡ್ ರೂಲ್ಸ್?
ಆರ್‌ಟಿಎಂ ಕಾರ್ಡ್ (ರೈಟ್ ಟು ಮ್ಯಾಚ್ ಕಾರ್ಡ್ – RTM Card) ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಇದನ್ನು ಆರ್‌ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್‌ಟಿಎಂ ಬಳಸಲು ಅವಕಾಶ ನೀಡಿದರೇ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿದೆ.