Tag: IPL 2025 Auction

  • IPL 2025 Auction: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಪಂತ್‌ ಸೇಲ್‌ – 27 ಕೋಟಿಗೆ ಲಕ್ನೋ ಪಾಲು

    IPL 2025 Auction: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಪಂತ್‌ ಸೇಲ್‌ – 27 ಕೋಟಿಗೆ ಲಕ್ನೋ ಪಾಲು

    ಪಿಎಲ್‌ 2025 ಮೆಗಾ ಹರಾಜಿನಲ್ಲಿ ರಿಷಬ್‌ ಪಂತ್‌ ದಾಖಲೆ ಬರೆದಿದ್ದಾರೆ. ಬರೋಬ್ಬರಿ 27 ಕೋಟಿಗೆ ಲಕ್ನೋ ಸೂಪರ್‌ಜೈಂಟ್ಸ್‌ ಪಾಲಾಗಿದ್ದಾರೆ. ಆ ಮೂಲಕ ಐಪಿಎಲ್‌ನಲ್ಲೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

    ರಿಷಬ್‌ಗಾಗಿ ಲಕ್ನೋ ಫ್ರಾಂಚೈಸಿ ಮೊದಲು ಬಿಡ್‌ ಮಾಡಿತು. ಬಳಿಕ ಆರ್‌ಸಿಬಿ, ಎಸ್‌ಆರ್‌ಹೆಚ್‌ ಬಿಡ್‌ ಮಾಡಿದವು. 20.75 ಕೋಟಿಗೆ ಲಕ್ನೋ ಬಿಡ್‌ ಮಾಡಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ಆರ್‌ಟಿಎಂ ಬಳಸುವುದಾಗಿ ಹೇಳಿತು.

    ಎಲ್‌ಎಸ್‌ಜಿ ಬಿಡ್‌ ಮೊತ್ತವನ್ನು 27 ಕೋಟಿಗೆ ಏರಿಸಿದ್ದರಿಂದ ಡೆಲ್ಲಿ ಹಿಂದೆ ಸರಿಯಿತು. ಅಂತಿಮವಾಗಿ ಪಂತ್‌ ದಾಖಲೆ ಮೊತ್ತಕ್ಕೆ ಲಕ್ನೋ ಪಾಲಾದರು.

    ಐಪಿಎಲ್‌ ವೃತ್ತಿ ಜೀವನದಲ್ಲಿ ಈವರೆಗೆ 107 ಪಂದ್ಯಗಳನ್ನಾಡಿರುವ ರಿಷಬ್‌ ಪಂತ್‌ 3,284 ರನ್‌ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 18 ಅರ್ಧಶತಕಗಳು ಸೇರಿವೆ.

    ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸಿದ್ದರು. ಟೀಂ ಇಂಡಿಯಾ ಸೋತ ಹೊರತಾಗಿಯೂ ಪಂತ್‌ ಅವರ ಬ್ಯಾಟಿಂಗ್‌ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಸಹಯವಾಗಿಯೇ ಜನಪ್ರಿಯತೆ ಹೆಚ್ಚಿಸಿತ್ತು.

  • ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

    ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

    ಬೆಂಗಳೂರು: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಮೆಗಾ ಹರಾಜಿಗೂ ಮುನ್ನವೇ ವಿರಾಟ್‌ ಕೊಹ್ಲಿ (Virat Kohli) ಆರ್‌ಸಿಬಿ ತಂಡದ ಕ್ಯಾಪ್ಟನ್‌ ಆಗಿ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು ಎರಚಿದೆ.

    ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಅವರು 2022 ರಿಂದ 2024ರ ವರೆಗೆ ಆರ್‌ಸಿಬಿ ತಂಡವನ್ನು ಮುನ್ನಡೆಸಿದರು. ಎರಡು ಬಾರಿ ಪ್ಲೇ ಆಫ್‌ ಹಂತ ತಲುಪಿಸಿದ್ದರೂ, ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು. ಈ ಬಾರಿ ಆರ್‌ಸಿಬಿ ರಿಟೇನ್‌ ಆಟಗಾರರ ಪಟ್ಟಿಯಿಂದ ಡುಪ್ಲೆಸಿ ಅವರನ್ನು ಹೊರಗಿಟ್ಟ ಬಳಿಕ ಕೊಹ್ಲಿ ನಾಯಕತ್ವ ವಹಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ತಂಡದ ಮ್ಯಾನೇಜ್‌ಮೆಂಟ್ ನಾಯಕತ್ವದ ಬದಲಾವಣೆಯ ಬಗ್ಗೆ ಈಗಾಗಲೇ ಚರ್ಚಿಸಿದೆ. ನಾಯಕತ್ವದ ಸ್ಥಾನ ಅಲಂಕರಿಸಲು ಕೊಹ್ಲಿ ಉತ್ಸುಕರಾಗಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಆದ್ರೆ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು ಎರಚಿದೆ.

    ವದಂತಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್, ಈ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: IPL Retention | ಡುಪ್ಲೆಸಿ ಔಟ್‌, ಆರ್‌ಸಿಬಿಯಲ್ಲಿ ತ್ರಿಬಲ್‌ ಸ್ಟಾರ್‌; ಕೊಹ್ಲಿ ಸಂಭಾವನೆಯಲ್ಲಿ ದಿಢೀರ್‌ 6 ಕೋಟಿ ಏರಿಕೆ

    ಕೊಹ್ಲಿ ಈ ಹಿಂದೆ 2013 ರಿಂದ 2021 ರವರೆಗೆ ಆರ್‌ಸಿಬಿ ನಾಯಕತ್ವ ವಹಿಸಿದ್ದರು. ತಂಡವನ್ನು ನಾಲ್ಕು ಬಾರಿ ಪ್ಲೇ ಆಫ್‌ಗೆ ತಲುಪಿಸುವಲ್ಲಿ ಶ್ರಮಿಸಿದ್ದರು. ಇದೀಗ 18ನೇ ಆವೃತ್ತಿಗೂ ಕೊಹ್ಲಿ ಆರ್‌ಸಿಬಿ ತಂಡವನ್ನೇ ಪ್ರತಿನಿಧಿಸಿದ್ದಾರೆ. ಮುಂದಿನ ಐಪಿಎಲ್‌ಗೆ ಕೊಹ್ಲಿಯನ್ನು ಫ್ರಾಂಚೈಸಿ 21 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದನ್ನೂ ಓದಿ: IPL 2025: ಆರ್‌ಸಿಬಿ ಕ್ಯಾಪ್ಟನ್‌ ಆಗಿ ವಿರಾಟ್‌ ಕೊಹ್ಲಿ ರೀ ಎಂಟ್ರಿ?

    ರಿಟೇನ್‌ ಆಟಗಾರರು ಯಾರು – ಎಷ್ಟು ಸಂಭಾವನೆ?
    ವಿರಾಟ್‌ ಕೊಹ್ಲಿ – 21 ಕೋಟಿ ರೂ.
    ರಜತ್‌ ಪಾಟೀದಾರ್‌ – 11 ಕೋಟಿ ರೂ.
    ಯಶ್‌ ದಯಾಳ್‌ – 5 ಕೋಟಿ ರೂ.

  • IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?

    IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?

    – ಫ್ರಾಂಚೈಸಿಗಳಿಗೆ 5 ಆಟಗಾರರನ್ನು ಉಳಿಸಿಕೊಳ್ಳಲು ಸಿಗುತ್ತಾ ಅವಕಾಶ?

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ರ ಮೆಗಾ ಹರಾಜು ಈ ವರ್ಷದ ಕೊನೆಯಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೂ ಮೊದಲು ಐಪಿಎಲ್‌ ಫ್ರಾಂಚೈಸಿ ತಂಡಗಳು ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳ ಬಗ್ಗೆ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರವು ಕುತೂಹಲ ಮೂಡಿಸಿದೆ.

    ಬಿಸಿಸಿಐ ಐಪಿಎಲ್‌ ಮೆಗಾ ಹರಾಜಿನ ಮೊದಲು, ಐಪಿಎಲ್‌ ಫ್ರಾಂಚೈಸಿಗಳು ಐದು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಬಹುದು. ಯಾವುದೇ ರೈಟ್‌ ಟು ಮ್ಯಾಚ್‌ ಆಯ್ಕೆ ಲಭ್ಯವಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ನಡೆದರೆ ಮುಂಬೈ ಇಂಡಿಯನ್ಸ್‌ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಯಶಸ್ವಿಯಾಗಲಿದೆ.

    ಐವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದರೆ, ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ ಸ್ಟಾರ್‌ಗಳೊಂದಿಗೆ ಮುಂದುವರಿಯಬಹುದು. ಅಲ್ಲದೇ, ಚೆನ್ನೈ ಸೂಪರ್‌ ಕಿಂಗ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳಿಗೂ ಇದರಿಂದ ಅನುಕೂಲ ಆಗಲಿದೆ.

    ಐಪಿಎಲ್ ಮೆಗಾ ಹರಾಜು ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದಕ್ಕಾಗಿ ನಿಯಮಗಳು ಮತ್ತು ನಿಬಂಧನೆಗಳನ್ನು ಬೋರ್ಡ್ ಫಾರ್ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಸಿಐ) ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡುತ್ತದೆ ಎಂದು ತಿಳಿದುಬಂದಿದೆ.

    ಐಪಿಎಲ್‌ನ 10 ಫ್ರಾಂಚೈಸಿ ತಂಡಗಳ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿದೆ. ಈ ಸಭೆಯಲ್ಲಿ ಮೆಗಾ ಹರಾಜಿಗೂ ಮುನ್ನ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು 5 ಅಥವಾ 6 ಕ್ಕೆ ಹೆಚ್ಚಿಸಬೇಕು ಎಂಬ ಪ್ರಾಸ್ತಾಪ ಬಿಸಿಸಿಐ ಮುಂದಿದೆ. ಬಿಸಿಸಿಐ ಮನವಿ ಪರಿಗಣಿಸಿದ್ದು, ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.

    ಐಪಿಎಲ್‌ ಕಳೆದ ಹತ್ತು ವರ್ಷಗಳಲ್ಲಿ ಎರಡು ದೊಡ್ಡ ಹರಾಜುಗಳನ್ನು ನಡೆಸಿದೆ. ಮೊದಲ ಪ್ರಮುಖ ಹರಾಜು 2014 ರಲ್ಲಿ ನಡೆಯಿತು. ಕಳೆದ ನಾಲ್ಕು ವರ್ಷಗಳಲ್ಲಿ 2018 ಮತ್ತು 2022 ರಲ್ಲಿ ಎರಡು ಮೆಗಾ ಹರಾಜು ಪ್ರಕ್ರಿಯೆ ನಡೆದಿವೆ.