Tag: IPL 2024 Champions

  • Photos Gallery: ಚಾಂಪಿಯನ್ಸ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ಸಂಭ್ರಮಿಸಿದ ಕ್ಷಣ ಹೀಗಿತ್ತು…

    Photos Gallery: ಚಾಂಪಿಯನ್ಸ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ಸಂಭ್ರಮಿಸಿದ ಕ್ಷಣ ಹೀಗಿತ್ತು…

    17ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕೋಲ್ಕತ್ತಾ ನೈಟ್ ರೈರ‍್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. 2012 ಮತ್ತು 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡ 10 ವರ್ಷಗಳ ಬಳಿಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಂಣದಲ್ಲಿ ಸೂಪರ್ ಸಂಡೇ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್ ಗೆದ್ದ ಬಳಿಕ ಇಡೀ ಕ್ರೀಡಾಂಗಣದ ತುಂಬ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಕ್ರೀಡಾಳುಗಳು ಕುಣಿದು ಕುಪ್ಪಳಿಸಿದರು. ಟ್ರೋಫಿ ಎತ್ತಿ ಮುದ್ದಾಡಿದರು, ಒಬ್ಬರನ್ನೊಬ್ಬರು ಅಪ್ಪಿಕೊಂಡು ಭಾವುಕರಾದರು. ಈ ಸಂಭ್ರಮದ ಪ್ರತಿಯೊಂದು ಕ್ಷಣವೂ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಅವುಗಳನ್ನು ಕಣ್ತುಂಬಿಕೊಳ್ಳಲು ಮುಂದೆ ನೋಡಿ…

  • ಫೈನಲ್‌ನಲ್ಲಿ ಕೋಲ್ಕತ್ತಾ ವಿರುದ್ಧ ಹೈದರಾಬಾದ್‌ಗೆ ಸೋಲು; ದುಃಖ ತಡೆಯಲಾರದೇ ಕಣ್ಣೀರಿಟ್ಟ ಕಾವ್ಯ ಮಾರನ್‌

    ಫೈನಲ್‌ನಲ್ಲಿ ಕೋಲ್ಕತ್ತಾ ವಿರುದ್ಧ ಹೈದರಾಬಾದ್‌ಗೆ ಸೋಲು; ದುಃಖ ತಡೆಯಲಾರದೇ ಕಣ್ಣೀರಿಟ್ಟ ಕಾವ್ಯ ಮಾರನ್‌

    ಚೆನ್ನೈ: 2024ರ 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ಹೀನಾಯ ಸೋಲನುಭವಿಸಿತು. ತಂಡದ ಸೋಲಿನ ದುಃಖ ತಡೆಯಲಾರದೇ ಕಾವ್ಯ ಮಾರನ್‌ ಅವರು ಕಣ್ಣೀರಿಟ್ಟರು.

    ಚೆಪಕ್‌ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್‌ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಗೆಲುವು ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಳಪೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಪ್ರದರ್ಶನದಿಂದಾಗಿ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಎಸ್‌ಆರ್‌ಎಚ್‌ ಸೋಲೊಪ್ಪಿಕೊಂಡಿತು.‌ ಇದನ್ನೂ ಓದಿ: ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಹೈದರಾಬಾದ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಯಾವೊಬ್ಬ ಬ್ಯಾಟರ್‌ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಬ್ಯಾಟರ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಇದನ್ನು ಕಂಡು ಫ್ರಾಂಚೈಸಿ ಮಾಲೀಕರಾದ ಕಾವ್ಯ ಮಾರನ್‌ ಸಪ್ಪೆ ಮೋರೆ ಹಾಕಿಕೊಂಡು ಕೂತಿದ್ದರು. ಪಂದ್ಯದ ಆರಂಭದಿಂದ ಕೊನೆ ವರೆಗೂ ಅವರ ಮುಖದಲ್ಲಿ ಬೇಸರ ಆವರಿಸಿತ್ತು.

    ಕೊನೆ ಕ್ಷಣದಲ್ಲಿ ಹೈದರಾಬಾದ್‌ ಸೋಲು ಖಚಿತವಾಗುತ್ತಿದ್ದಂತೆ ಕಾವ್ಯ ಮಾರನ್‌ ಅವರ ಮನದಲ್ಲಿದ್ದ ದುಃಖದ ಕಟ್ಟೆಯೊಡೆಯಿತು. ಎಷ್ಟೇ ಪ್ರಯತ್ನಿಸಿದರೂ ಅಳು ತಡೆಯಲಾಗಲಿಲ್ಲ. ಕಣ್ಣಲ್ಲಿ ನೀರು ಹರಿಯಿತು. ಈ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಂಡ ಸೋತರೂ ರನ್ನರ್‌ ಅಪ್‌ ವರೆಗೂ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಚಪ್ಪಾಳೆ ತಟ್ಟುವ ಮೂಲಕ ಆಟಗಾರರನ್ನು ಅಭಿನಂದಿಸಿದರು. ಇದನ್ನೂ ಓದಿ: IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!

    2024ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಎಸ್‌ಆರ್‌ಹೆಚ್‌ ವಿರುದ್ಧ ಅದ್ಧೂರಿ ಜಯ ಸಾಧಿಸುವ ಮೂಲಕ 17ನೇ ಆವೃತ್ತಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇನ್ನೂ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

    2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್‌ ಗಂಭೀರ್‌ ಈ ಬಾರಿ ತಂಡದ ಕೋಚ್‌ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ. ಇದನ್ನೂ ಓದಿ: ಕೆಕೆಆರ್‌ ಬೌಲರ್‌ಗಳ ಅಬ್ಬರಕ್ಕೆ ಕರಗಿದ ಸನ್‌ ತಾಪ – 113ಕ್ಕೆ ಹೈದರಾಬಾದ್‌ ಆಲೌಟ್‌; ಕೋಲ್ಕತ್ತಾಗೆ 114 ರನ್‌ಗಳ ಗುರಿ!

  • ಅಂದು ಕ್ಯಾಪ್ಟನ್, ಇಂದು ಮೆಂಟರ್‌ ಆಗಿ ಟ್ರೋಫಿ‌ ಗೆದ್ದುಕೊಟ್ಟ ಗಂಭೀರ್‌; ಹಣೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡ ಬಾದ್‌ ಷಾ

    ಅಂದು ಕ್ಯಾಪ್ಟನ್, ಇಂದು ಮೆಂಟರ್‌ ಆಗಿ ಟ್ರೋಫಿ‌ ಗೆದ್ದುಕೊಟ್ಟ ಗಂಭೀರ್‌; ಹಣೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡ ಬಾದ್‌ ಷಾ

    ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ತಂಡವು ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಆದ್ರೆ ಕೆಕೆಆರ್‌ ಗೆಲುವಿನ ಹಿಂದೆ ಟೂರ್ನಿಯುದ್ಧಕ್ಕೂ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರ ಪಾತ್ರ ಅಷ್ಟೇ ಪ್ರಮುಖವಾಗಿದೆ.

    ಹೌದು. ಮೊದಲಿನಿಂದಲೂ ಕೆಕೆಆರ್‌ ತಂಡದೊಂದಿಗೆ (KKR Team) ಅವಿನಾಭಾವ ಸಂಬಂಧ ಹೊಂದಿರುವ ಗೌತಮ್‌ ಗಂಭೀರ್‌ 2022, 2023ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. 2024ರಲ್ಲಿ ಮತ್ತೆ ತವರು ತಂಡಕ್ಕೆ ಮೆಂಟರ್‌ ಆಗಿ ಮರಳಿದ ಗಂಭೀರ್‌ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆಕೆಆರ್‌ ತಂಡದ ನಾಯಕನಾಗಿ ಮತ್ತು ಕೋಚ್‌ ಆಗಿ ಕೆಕೆಆರ್‌ ತಂಡಕ್ಕೆ ಮೂರು ಟ್ರೋಫಿ ಗೆದ್ದುಕೊಟ್ಟಿರುವುದು ಮತ್ತೊಂದು ವಿಶೇಷ.

    2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ತಮ್ಮ ನಾಯಕತ್ವದಲ್ಲಿ ಕೆಕೆಆರ್‌ ತಂಡವನ್ನು ಚಾಂಪಿಯನ್‌ ಆಗಿ ಮಾಡಿದ್ದರು. ಇದೀಗ 10 ವರ್ಷಗಳ ಬಳಿಕ ಕೋಚ್‌ ಆಗಿ ತಂಡವನ್ನು ಮುನ್ನಡೆಸಿದ ಗಂಭೀರ್‌ ತಂಡವನ್ನು ಚಾಂಪಿಯನ್‌ ಆಗಿ ಮಾಡಿದ್ದಾರೆ. ಇದನ್ನೂ ಓದಿ: ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

    ಹಣೆಗೆ ಮುತ್ತಿಟ್ಟ ಶಾರುಖ್‌:
    ಕೆಕೆಆರ್‌ ಗೆಲುವಿನ ಸಂಭ್ರಮಾಚರಣೆ ವೇಳೆ ಫ್ರಾಂಚೈಸಿ ಮಾಲೀಕರೂ ಆದ ನಟ ಶಾರುಖ್ ಖಾನ್, ಕೆಕೆಆರ್‌ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಅವರ ಹಣೆಗೆ ಮುತ್ತಿಟ್ಟು ಅಭಿನಂದನೆ ಸಲ್ಲಿಸಿದ್ದಾರೆ. ಕೆಕೆಆರ್‌ ತಂಡ ಗೆಲುವು ಸಾಧಿಸುತ್ತಿದ್ದಂತೆ ಮೈದಾನಕ್ಕೆ ಧುಮುಕಿದ ಬಾದ್‌ ಶಾ, ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಬಳಿಕ ತಂಡದ ಪ್ರತಿಯೊಬ್ಬ ಆಟಗಾರರಿಗೂ ಪ್ರೀತಿಯ ಅಪ್ಪುಗೆ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಮತ್ತೆ ತವರಿಗೆ ಮರಳಿ ಚಾಂಪಿಯನ್‌ ಕಿರೀಟ ಗೆದ್ದುಕೊಟ್ಟ ಗೌತಮ್‌ ಗಂಭೀರ್‌ ಅವರ ಗಣೆಗೆ ಮುತ್ತಿಟ್ಟು ಖುಷಿ ಹಂಚಿಕೊಂಡಿದ್ದಾರೆ.

    ಐಪಿಎಲ್‌ನಲ್ಲಿ ಗೌತಮ್‌ ಗಂಭೀರ್‌ ಸಾಧನೆ:
    ಐಪಿಎಲ್‌ನಲ್ಲಿ ಗೌತಮ್‌ ಗಂಭೀರ್‌ ಅವರು ತಮ್ಮದೇ ವಿಶೇಷ ಸಾಧನೆ ಮಾಡಿದ್ದಾರೆ. ತಂಡವೊಂದರ ನಾಯಕನಾಗಿ 2 ಬಾರಿ ಹಾಗೂ ತಂಡವೊಂದರ ಕೋಚ್‌ ಆಗಿ 1 ಬಾರಿ ಐಪಿಎಲ್‌ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ನಾಯಕನಾಗಿ 3 ಬಾರಿ ಪ್ಲೇ ಆಫ್‌ ವರೆಗೆ ತಂಡವನ್ನು ಮುನ್ನಡೆಸಿದ್ದರೆ, ಕೋಚ್‌ ಆಗಿಯೂ ಮೂರು ಬಾರಿ ತಂಡವೊಂದನ್ನು ಮುನ್ನಡೆಸಿದ ಕೀರ್ತಿ ಇವರ ಹೆಸರಿಗಿದೆ.

    2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಗೌತಮ್‌ ಗಂಭೀರ್‌ ಅವರ ನೇತೃತ್ವದಲ್ಲಿ ಮೊದಲ ಎರಡೂ ಆವೃತ್ತಿಗಳಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತು. ಇದನ್ನೂ ಓದಿ:  IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!