ಬೆಂಗಳೂರು: 2ನೇ ದಿನದ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ನ ಆಲ್‍ರೌಂಡರ್ ಆಟಗಾರ ಲಿಯಾಮ್ ಲಿವಿಂಗ್‍ಸ್ಟೋನ್‍ಗೆ 11.50 ಕೋಟಿ ರೂ. ಕೊಟ್ಟು ಪಂಜಾಬ್ ಕಿಂಗ್ಸ್ ಖರೀದಿಸಿದೆ.
ಲಿವಿಂಗ್‍ಸ್ಟೋನ್ ಇಂಗ್ಲೆಂಡ್ ತಂಡದ ಪರ ಅಬ್ಬರದ ಬ್ಯಾಟಿಂಗ್ ಮೂಲಕ ಎಲ್ಲರ ಗಮನಸೆಳೆದಿದ್ದರು. ಈ ಬಾರಿ ಐಪಿಎಲ್ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಲ್ಲಿದ್ದರು. ಅದರಂತೆ ಇಂದು ನಡೆದ ಹರಾಜಿನಲ್ಲಿ ಕೋಲ್ಕತ್ತಾ, ಪಂಜಾಬ್ ಮತ್ತು ಹೈದರಾಬಾದ್ ಫ್ರಾಂಚೈಸ್‍ಗಳು ಲಿವಿಂಗ್‍ಸ್ಟೋನ್‍ರನ್ನು ಖರೀದಿಸಲು ಪೈಪೋಟಿ ನಡೆಸಿದವು ಅಂತಿಮವಾಗಿ ಪಂಜಾಬ್ 11.50 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಲಿವಿಂಗ್ ಸ್ಟೋನ್ ದುಬಾರಿ ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ
ಆದರೆ ಈವರೆಗಿನ ಹರಾಜಿನಲ್ಲಿ 2021 ಟಿ20 ವಿಶ್ವಕಪ್ ವಿಜೇತ ತಂಡದ ನಾಯಕ ಆಸ್ಟ್ರೇಲಿಯಾದ ಆರನ್ ಫಿಂಚ್ ಮತ್ತು 2019ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ಈ ಬಾರಿ ಅನ್‍ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ ನಿನ್ನೆ ಸುರೇಶ್ ರೈನಾ, ಸ್ಟೀವ್ ಸ್ಮಿತ್ ಅನ್‌ಸೋಲ್ಡ್ ಆಗಿದ್ದರು. ಇಂದು ನಡೆಯುವ 2ನೇ ಸುತ್ತಿನ ಹರಾಜಿನಲ್ಲಿ ಮತ್ತೆ ಅನ್‌ಸೋಲ್ಡ್ ಆಟಗಾರರು ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: IPL ಹರಾಜಿನಲ್ಲಿ ಅನ್‍ಸೋಲ್ಡ್ ಆದ ಸ್ಟಾರ್ ಆಟಗಾರರು
ಬೆಂಗಳೂರು: ಟೀಂ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಇಶಾನ್ ಕಿಶನ್ ಮೆಗಾ ಹರಾಜಿನಲ್ಲಿ ಬಿಕರಿಯಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಕಡೆಯ ವರೆಗೆ ಇಶಾನ್ ಕಿಶನ್‍ಗೆ ಬಿಡ್ ಮಾಡಿತು. ಈ ಹಿಂದಿನ ಆವೃತ್ತಿಗಳಲ್ಲಿ ಮುಂಬೈ ತಂಡದೊಂದಿಗಿದ್ದ ಇಶಾನ್ ಕಿಶನ್‍ರನ್ನು ಮತ್ತೆ ತಂಡಕ್ಕೆ ಸೆಳೆಯ ಬೇಕೆಂದು ಮುಂಬೈ ಫ್ರಾಂಚೈಸ್ ಪಣತೊಟ್ಟು ಕಡೆಗೆ 15.25 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಇದನ್ನೂ ಓದಿ: IPL ಹರಾಜಿನಲ್ಲಿ ಅನ್‍ಸೋಲ್ಡ್ ಆದ ಸ್ಟಾರ್ ಆಟಗಾರರು
ಕಿಶನ್ ಈ ಮೂಲಕ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಭಾರತದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವರಾಜ್ ಸಿಂಗ್‌ಗೆ 16 ಕೋಟಿ ರೂ. ನೀಡಿ ಖರೀದಿಸಿತ್ತು. ಇದು ಭಾರತೀಯ ಆಟಗಾರನೊಬ್ಬನಿಗೆ ನೀಡಿದ ಅತಿ ಹೆಚ್ಚಿನ ಹಣವಾಗಿದೆ. ಇದನ್ನೂ ಓದಿ: ಈ ಹಿಂದಿನ ಆವೃತ್ತಿಗಳ ಐಪಿಎಲ್‍ನ ಕೋಟಿ ವೀರರು
ಇನ್ನೂಳಿದಂತೆ ದೀಪಕ್ ಚಹರ್ 14 ಕೋಟಿ ರೂ. ಚೆನ್ನೈ ಸೂಪರ್ ಕಿಂಗ್ಸ್, ಶ್ರೇಯಸ್ ಅಯ್ಯರ್ 12.25 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್,. ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 10.75 ಕೋಟಿ ರೂ. ನೀಡಿ ಖರೀದಿಸಿ ಬಿಕರಿಯಾಗಿಸಿದೆ.
ಬೆಂಗಳೂರು: ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರರಾಗಿ ಮಿಂಚಿದ ಸುರೇಶ್ ರೈನಾ, ಡೇವಿಡ್ ಮಿಲ್ಲರ್, ಸ್ಟೀವ್ ಸ್ಮಿತ್ ಮತ್ತು ಶಕೀಬ್ ಅಲ್ ಹಸನ್ 2022ನೇ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‍ಸೋಲ್ಡ್ ಅಗಿದ್ದಾರೆ.
ಟಿ20 ಕ್ರಿಕೆಟ್‍ನಲ್ಲಿ ಈ ಹಿಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ಆಟಗಾರರನ್ನು ಖರೀದಿಸಲು ಯಾವ ತಂಡ ಕೂಡ ಮುಂದಾಗಿಲ್ಲ. ಡೇವಿಡ್ ಮಿಲ್ಲರ್ ಮತ್ತು ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‍ನಲ್ಲಿ ಬಲಿಷ್ಠ ಆಟಗಾರರು. ಇನ್ನೂ ಆಲ್‍ರೌಂಡರ್ ಆಗಿ ಮಿಂಚಿದ್ದ ಶಕೀಬ್ ಅಲ್ ಹಸನ್‍ರನ್ನು ಕೂಡ ಖರೀದಿಸಲು ಮುಂದಾಗಿಲ್ಲ. ಇದನ್ನೂ ಓದಿ: ಈ ಹಿಂದಿನ ಆವೃತ್ತಿಗಳ ಐಪಿಎಲ್‍ನ ಕೋಟಿ ವೀರರು
ಈ ಎಲ್ಲರೊಂದಿಗೆ ಅಚ್ಚರಿ ಎಂದರೆ ಐಪಿಎಲ್‍ನ ಸ್ಟಾರ್ ಆಟಗಾರ ಸುರೇಶ್ ರೈನಾರನ್ನು ಯಾರು ಕೂಡ ಖರೀದಿಸಲು ಮುಂದಾಗದಿರುವುದು ವಿಪರ್ಯಾಸ. ಸಿಎಸ್‍ಕೆ ತಂಡ ಐಪಿಎಲ್ ಇತಿಹಾಸದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿದೆ. ಈ ನಾಲ್ಕು ಬಾರಿ ಚಾಂಪಿಯನ್ ಆದಾಗಲೂ ರೈನಾ ಸಿಎಸ್‍ಕೆ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಆಗಿ ತಂಡಕ್ಕೆ ಬಲ ತುಂಬಿದ್ದರು. ಅದಲ್ಲದೆ ಚೆನ್ನೈ ಪರ 171 ಪಂದ್ಯಗಳಿಂದ 1 ಶತಕ ಮತ್ತು 33 ಅರ್ಧಶತಕ ಸಹಿತ 4,687 ರನ್ ಗಳಿಸಿದ್ದಾರೆ. ಇದು ಸಿಎಸ್‍ಕೆ ತಂಡದಲ್ಲಿದ್ದ ಆಟಗಾರನ ವ್ಯಯಕ್ತಿಕ ಹೆಚ್ಚು ರನ್, ಅದೇ ರೀತಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರ ಕೂಡ ರೈನಾ. ಇಷ್ಟು ಮಾತ್ರವಲ್ಲದೆ ರೈನಾ ಬ್ಯಾಟಿಂಗ್ ಜೊತೆಗೆ ಅದ್ಭುತ ಫೀಲ್ಡಿಂಗ್ ಕೂಡ ಮಾಡಿದ್ದಾರೆ. ಸಿಎಸ್‍ಕೆ ಪರ ಪರ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಕೂಡ ರೈನಾ ಹೆಸರಲ್ಲೇ ಇದೆ. ಅಲ್ಲದೇ ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿದ್ದರು ಆದರೆ ಇದೀಗ ರೈನಾ ಅನ್‍ಸೋಲ್ಡ್ ಆಟಗಾರನಾಗಿದ್ದಾರೆ. ಇದನ್ನೂ ಓದಿ: ತವರಿನಲ್ಲಿ ಕೊಹ್ಲಿ ಹೊಸ ಮೈಲಿಗಲ್ಲು – ಧೋನಿ, ಸಚಿನ್ ಜೊತೆ Elite ಪಟ್ಟಿಗೆ ಸೇರ್ಪಡೆ
ಮುಂಬೈ: ಅದೆಷ್ಟೋ ಆಟಗಾರರು ಅಂಡರ್-19 ವಿಶ್ವಕಪ್‍ನಲ್ಲಿ ಮಿಂಚಿ, ಬಳಿಕ ಐಪಿಎಲ್‍ನಲ್ಲಿ ಕಾಣಿಸಿಕೊಂಡ ಉದಾಹರಣೆ ಇದೆ. ಇದೀಗ 2022 ಐಪಿಎಲ್ ಹರಾಜಿಗೂ ಮುನ್ನ ಭಾರತ ಅಂಡರ್-19 ತಂಡದಲ್ಲಿ ಮಿಂಚುತ್ತಿರುವ ಐವರು ಆಟಗಾರರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಪ್ರತಿ ಬಾರಿ ಐಪಿಎಲ್ ಹರಾಜಿಗೂ ಮುನ್ನ ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಐಪಿಎಲ್ ಫ್ರಾಂಚೈಸ್‍ಗಳು ಮಾಡಿಕೊಂಡು ಬಂದಿದೆ. ಇದೀಗ 2022ರ ಐಪಿಎಲ್ ಮೆಗಾ ಹರಾಜು ಫೆಬ್ರವರಿಯಲ್ಲಿ ನಡೆಯಲಿದೆ. ಅತ್ತ ಅಂಡರ್-19 ವಿಶ್ವಕಪ್‍ನಲ್ಲಿ ಭಾರತದ ಯುವ ಆಟಗಾರರು ಘರ್ಜಿಸುತ್ತಿದ್ದಾರೆ. ಇದನ್ನೂ ಓದಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್‍ನಲ್ಲಿ ಗಮನಸೆಳೆದ ಮಹಿಳಾ ಅಂಪೈರ್
ಅದರಲ್ಲೂ 2022ರ ಅಂಡರ್-19 ತಂಡದ ನಾಯಕ ಯಶ್ ಧುಲ್, ಬ್ಯಾಟ್ಸ್‌ಮ್ಯಾನ್‌ಗಳಾದ ಆಂಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್ ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆಲ್‍ರೌಂಡರ್ ಆಗಿ ರಾಜ್ ಬಾವಾ ಜಬರ್ದಸ್ತ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿಕ್ಕಿ ಓಸ್ವಾಲ್ ಸೂಪರ್ ಸ್ಪೆಲ್ ಮಾಡುತ್ತಿದ್ದಾರೆ. ಈ ಐವರ ಭರ್ಜರಿ ಆಟದ ನೆರವಿನಿಂದ ಭಾರತ ತಂಡ ಉತ್ತಮ ಪ್ರದರ್ಶನ ತೋರಿ ಮುನ್ನಗುತ್ತಿದೆ. ಇದೀಗ ಈ ಐವರು ಆಟಗಾರರ ಪ್ರದರ್ಶನವನ್ನು ಗಮನಿಸಿ ಐಪಿಎಲ್ ಫ್ರಾಂಚೈಸ್‍ಗಳು ಹರಾಜಿನಲ್ಲಿ ಖರೀದಿಗೆ ಮುಂದಾಗುವರೇ ಎಂಬ ಕುತೂಹಲವಿದೆ. ಈ ಎಲ್ಲದಕ್ಕೂ ಫೆ.12ರ ವರೆಗೆ ಕಾಯಲೇಬೇಕಾಗಿದೆ.
ಮುಂಬೈ: 2022ರ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿರುವ ಆಟಗಾರರ ಪಟ್ಟಿ ಬಿಡುಗಡೆ ಗೊಂಡಿದೆ. ಈ ಪಟ್ಟಿಯಲ್ಲಿ ದೇಶಿ ಸ್ಟಾರ್ ಆಟಗಾರಾದ ಶಾರೂಖ್ ಖಾನ್ ಮತ್ತು ಅವೇಶ್ ಖಾನ್ ಮೂಲ ಬೆಲೆ ಕಂಡು ಅಭಿಮಾನಿಗಳು ದಂಗಾಗಿದ್ದಾರೆ.
ಹೌದು ಈ ಬಾರಿಯ ಐಪಿಎಲ್‍ನಲ್ಲಿ 1,214 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ಕೊಟ್ಟಿದ್ದಾರೆ. ಈ ಬಾರಿ 5 ಕ್ಯಾಟಗರಿಯಲ್ಲಿ ಆಟಗಾರರಿಗೆ ಬೆಲೆ ನಿಗದಿಪಡಿಸಲಾಗಿದೆ. 2 ಕೋಟಿ, 1.5 ಕೋಟಿ, 1 ಕೋಟಿ, 50 ಲಕ್ಷ ಮತ್ತು 20 ಲಕ್ಷ ರೂಪಾಯಿಯ ಮೂಲ ಬೆಲೆ ಕ್ಯಾಟಗರಿಯಲ್ಲಿ ಆಟಗಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್
ಅಚ್ಚರಿ ಎಂಬಂತೆ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದ, ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್, ಮಿಚೆಲ್ ಸ್ಟಾರ್ಕ್ ಐಪಿಎಲ್‍ನಿಂದ ಹಿಂದೆ ಸರಿದಿದ್ದಾರೆ. ಈ ನಡುವೆ ಈ ಹಿಂದಿನ ಐಪಿಎಲ್ ಮತ್ತು ದೇಶಿ ಟೂರ್ನಿಗಳಲ್ಲಿ ಮಿಂಚುಹರಿಸಿದ ಆಟಗಾರಾದ ಶಾರೂಖ್ ಖಾನ್ ಮತ್ತು ಆವೇಶ್ ಖಾನ್ ಮೂಲಬೆಲೆಯನ್ನು 20 ಲಕ್ಷ ಫಿಕ್ಸ್ ಮಾಡಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಕೊನೆಯ ಎಸೆತದಲ್ಲಿ ಸಿಕ್ಸರ್, ತಮಿಳುನಾಡಿಗೆ ಟ್ರೋಫಿ – ಕರ್ನಾಟಕಕ್ಕೆ ವಿರೋಚಿತ ಸೋಲು
ಅವೇಶ್ ಖಾನ್ 14ನೇ ಆವೃತ್ತಿ ಐಪಿಎಲ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರ ಎಂಬ ಹಿರಿಮೆ ಪಾತ್ರರಾಗಿದ್ದರೆ, ಶಾರೂಖ್ ಖಾನ್ ವಿಜಯ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮಿಳುನಾಡು ತಂಡವನ್ನು ತನ್ನ ಉತ್ತಮ ಬ್ಯಾಟಿಂಗ್ ಮೂಲಕ ಚಾಂಪಿಯನ್ ಮಾಡಿದ್ದರು.
WHAT. A. FINISH! 👌 👌
A last-ball SIX from @shahrukh_35 does the trick! 💪 💪
Tamil Nadu hold their nerve & beat the spirited Karnataka side by 4 wickets to seal the title-clinching victory. 👏 👏 #TNvKAR#SyedMushtaqAliT20#Final