Tag: IPL 2022

  • ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?

    ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?

    ಮುಂಬೈ: ವಿಶ್ವದ ಬೇರೆಲ್ಲಾ ದೇಶಗಳಿಗಿಂತಲೂ ಭಾರತ ಸಂಸ್ಕೃತಿ ವಿಶಿಷ್ಟ. ಕಲೆ, ಆಹಾರ ಸಂಸ್ಕೃತಿ, ಕೇಶ ವಿನ್ಯಾಸ ಹಾಗೂ ಧರಿಸುವ ಬಟ್ಟೆ ಎಲ್ಲದರಲ್ಲೂ ಒಂದೊಂದು ವಿಶೇಷತೆ ಇದ್ದೇ ಇದೆ. ಅದಕ್ಕಾಗಿ ಎಲ್ಲರೂ ಭಾರತದ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ಕೆಲ ಭಾರತೀಯರು ವಿದೇಶಕ್ಕೆ ತೆಳಿದ್ದರೂ ಆಗಾಗ್ಗೆ ಭಾರತದ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಜಾಲತಾಣಗಳಲ್ಲಿ ಹಾಸ್ಯ ಮಾಡಿ ಟ್ರೋಲ್‌ಗಳಿಗೂ ಗುರಿಯಾಗುತ್ತಿದ್ದಾರೆ.

    ಹಾಗೆಯೇ ಏಷ್ಯಾಕಪ್ ಬ್ಯುಸಿಯಲ್ಲಿರುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾಗೂ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಭಾರತೀಯ ಗ್ರಾಮೀಣ ಶೈಲಿಯಲ್ಲಿ ತಮಗೆ ಊಟ ಬಡಿಸುತ್ತಿರುವ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಧೋನಿ ಹಿಡಿದ ಕ್ಯಾಚ್‍ಗಳಿಗಿಂತ ಬಿಟ್ಟ ಕ್ಯಾಚ್‍ಗಳು ಮಹತ್ವದ್ದಾಗಿತ್ತು: ಪಾಕ್ ಆಟಗಾರ ರಶೀದ್ ಲತೀಫ್ ಟೀಕೆ

     

    View this post on Instagram

     

    A post shared by Shikhar Dhawan (@shikhardofficial)

    ಭಾರತೀಯ ಶೈಲಿಯಲ್ಲಿ ತಮಗೆ ಊಟ ಬಡಿಸುತ್ತಿರುವ ವೀಡಿಯೋ ಒಂದನ್ನು ಹರಿಯಬಿಟ್ಟಿದ್ದು, ಊಟ ಬಡಿಸುತ್ತಿದ್ದಂತೆ ಸಾಕು-ಸಾಕು, ಅರೆ ಸಾಕು ಅಂತ ಹೇಳ್ತಿಲ್ವಾ? ಊಟ ಬೇಕು ಅಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡಿ’ ಎನ್ನುವಂತೆ ಕೈ ಸನ್ನೆ ಮಾಡುತ್ತಿದ್ದಾರೆ. ಶೀಖರ್ ಧವನ್ ಅವರ ಈ ವೀಡಿಯೋ ಅವರ ಅಭಿಮಾನಿಗಳಿಗೆ ಭಾರೀ ಖುಷಿ ಕೊಟ್ಟಿದ್ದು, ಲಕ್ಷಾಂತರ ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.

    SHIKHAR DHAVAN

    ಶಿಖರ್ ಧವನ್ ಕೇವಲ ಮನರಂಜನೆಯ ಉದ್ದೇಶದಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳು ಎಂಜಾಯ್ ಮಾಡಲಿ ಎನ್ನುವ ಉದ್ದೇಶದಿಂದ ಶಿಖರ್ ಧವನ್ ಆಗಾಗ ಇಂತಹ ಫನ್ನಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆದರೆ ಈ ವೀಡಿಯೋನಲ್ಲಿ ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಎನ್ನುವುದು ಚರ್ಚೆಯಾಗುತ್ತಿದೆ. ಇದನ್ನೂ ಓದಿ: T20 ಸರಣಿಯಲ್ಲಿ ಟೀಂ ಇಂಡಿಯಾದಿಂದ ಹೊರಬಿದ್ದ ಧವನ್‌ಗೆ ಅಪ್ಪನಿಂದಲೇ ಥಳಿತ!

    IPL CSK VS PANJAB

    ಕೆಲ ದಿನಗಳ ಹಿಂದೆಯಷ್ಟೇ ಐಪಿಎಲ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು ಗೆಲುವು ಸಾಧಿಸುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದೇ ಆವೃತ್ತಿಯಲ್ಲಿ ಧವನ್ 6 ಸಾವಿರ ರನ್‌ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದರು. ಆದರೆ ಅವರು ಕ್ವಾಲಿಫೈಯರ್‌ಗೆ ಸೆಲೆಕ್ಟ್ ಆಗಲಿಲ್ಲ ವೆಂದು ತಮ್ಮ ತಂದೆ ಥಳಿಸಿರುವುದಾಗಿ ತಮಾಷೆಯ ವೀಡಿಯೋವನ್ನೂ ಹಂಚಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಕಿಚ್ಚ ಸುದೀಪ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ಜೋಸ್ ಬಟ್ಲರ್

    ಮುಂಬೈ: ಇಂಗ್ಲೆಂಡ್ ತಂಡದ ಕ್ರಿಕೆಟಿಗ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬ್ಯಾಟ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    2022ರ 15ನೇ ಆವೃತ್ತಿ ಐಪಿಎಲ್‌ನಲ್ಲಿ ತಾವು ಆಡಿದ್ದ ಬ್ಯಾಟ್ ಮೇಲೆ ಸಹಿ ಮಾಡಿ ಅದನ್ನು ಕಿಚ್ಚ ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಸುದೀಪ್ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಟವಾಡಿದ ಫೋಟೋವೊಂದನ್ನು ರಾಜಾಸ್ಥಾನ್ ರಾಯಲ್ಸ್ ತಂಡವು ಟ್ವೀಟ್‌ನಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಮುಂಬೈಗೆ 725 ರನ್‍ಗಳ ದಾಖಲೆಯ ಜಯ – ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 129 ವರ್ಷಗಳ ಬಳಿಕ ರೆಕಾರ್ಡ್ ಬ್ರೇಕ್

    ಇದಕ್ಕೆ ಉತ್ಸಾಹದಿಂದಲೇ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ವಿಶೇಷ ವೀಡಿಯೋವೊಂದನ್ನು ಮಾಡಿದ್ದು, ಜೋಸ್ ಬಟ್ಲರ್‌ಗೆ ಧನ್ಯವಾದ ಹೇಳಿದ್ದಾರೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ಅದರೊಂದಿಗೆ ಬ್ಯಾಟ್ ಸಿಗಲು ಸಹಾಯ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಕನ್ನಡಿಗ ಕೆ.ಸಿ.ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಧನ್ಯವಾದ ಸಲ್ಲಿಸಿದ್ದಾರೆ.

    `ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು. ನಾನು ಇದನ್ನು ನಿರೀಕ್ಷೆ ಸಹ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ ಈ ವೀಡಿಯೋ ಮಾಡಿದ್ದೇನೆ. ವೈಯಕ್ತಿಕವಾಗಿ ನೀವು ಸಹಿ ಮಾಡಿದಂಥ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಧನ್ಯವಾದ. ಇದನ್ನು ನಾನು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ ಎಂದು ಕೃತಜ್ಞತಾ ವೀಡಿಯೋವನ್ನು ಸುದೀಪ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯ ದಾಖಲೆಯ ರನ್ ಶಿಖರವನ್ನು ಪುಡಿಗಟ್ಟಿದ ಬಾಬರ್ ಅಜಾಮ್‌

    ಈ ಬಾರಿ ಐಪಿಎಲ್ ಸೀಜನ್‌ನಲ್ಲೂ ಜೋಸ್ ಬಟ್ಲರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ ಎಂದಿರುವ ಸುದೀಪ್ ಖಂಡಿತವಾಗಿ ನಾನು ಇದನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

    15ನೇ ಆವೃತ್ತಿ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಏಕಾಂಗಿ ಹೋರಾಟದ ಮೂಲಕ ರಾಜಾಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್ ಪಂದ್ಯದ ವೆರೆಗೆ ಮುನ್ನಡೆಸಿದ್ದರು. ಒಟ್ಟು 15 ಪಂದ್ಯಗಳಲ್ಲಿ 718 ರನ್‌ಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಳಿಸಿಕೊಂಡರು.

  • ಧೋನಿಯಿಂದ ತಾನು ಕಲಿತದ್ದನ್ನು ರಿವೀಲ್ ಮಾಡಿದ ಆಫ್ರಿಕಾದ ವೇಗಿ ಡ್ವೈನ್ ಪ್ರಿಟೋರಿಯಸ್

    ಧೋನಿಯಿಂದ ತಾನು ಕಲಿತದ್ದನ್ನು ರಿವೀಲ್ ಮಾಡಿದ ಆಫ್ರಿಕಾದ ವೇಗಿ ಡ್ವೈನ್ ಪ್ರಿಟೋರಿಯಸ್

    ಕೇಪ್‍ಟೌನ್: ದಕ್ಷಿಣ ಆಫ್ರಿಕಾದ ಆಲ್‍ರೌಂಡರ್ ಡ್ವೈನ್ ಪ್ರಿಟೋರಿಯಸ್ ನಾನು ಎಂಎಸ್ ಧೋನಿ ಅವರಂತೆ ಶಾಂತವಾಗಿರುವ ಗುಣ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡ್ವೈನ್ ಪ್ರಿಟೋರಿಯಸ್‍ರನ್ನು 50 ಲಕ್ಷ ರೂ. ಮೂಲ ಬೆಲೆ ನೀಡಿ ಖರೀದಿಸಿತ್ತು. ಈ ಮೂಲಕ ಡ್ವೈನ್ ಅವರು ತಮ್ಮ ಮೊದಲ ಐಪಿಎಲ್ ಅಭಿಯಾನ ಪ್ರಾರಂಭಿಸಿದ್ದರು. ಸದ್ಯ ಡ್ವೈನ್ ಭಾರತದ ವಿರುದ್ಧ ಮುಂಬರುವ ಟಿ20 ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೈದಾನದಲ್ಲೇ ಬ್ಯಾಟ್‍ನಲ್ಲಿ ಮ್ಯಾಜಿಕ್ ಮಾಡಿದ ರೂಟ್

    ಐಪಿಎಲ್ 2022ರಲ್ಲಿ ಅವರು ಕೇವಲ ಆರು ಪಂದ್ಯಗಳನ್ನು ಆಡಿದ್ದಲ್ಲದೇ ಬ್ಯಾಟಿಂಗ್‍ನಲ್ಲಿ 44 ರನ್ ಹೊಡೆದು ಬೌಲಿಂಗ್‍ನಲ್ಲಿ ಆರು ವಿಕೆಟ್ ಪಡೆದಿದ್ದರು.

    ಧೋನಿಯವರೊಂದಿಗೆ ಕಳೆದ ಕೆಲ ಅನುಭವಗಳ ಬಗ್ಗೆ ಡ್ವೈನ್ ಮಾತನಾಡಿ, ಸೀಮಿತ ಅವಕಾಶಗಳ ಹೊರತಾಗಿಯೂ, ಧೋನಿ ಜೊತೆಗೆ ಆಡುವುದು ನನ್ನ ದೊಡ್ಡ ಲಾಭವಾಗಿತ್ತು. ಇದು ನನ್ನ ಮೊದಲ ಐಪಿಎಲ್ ಅಭಿಯಾನವಾಗಿದೆ. ಚೆನ್ನೈ ತಂಡವು ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಇದನ್ನೂ ಓದಿ: 22ನೇ ಗ್ರ್ಯಾನ್ ಸ್ಲಾಂನ ಕಿರೀಟ ಮುಡಿಗೇರಿಸಿಕೊಂಡ ನಡಾಲ್ – ನಾರ್ವೆಯ ಕಾಸ್ಪರ್ ರೂಡ್‍ಗೆ ನಿರಾಸೆ

    ನಾನು ಧೋನಿಯವರೊಂದಿಗೆ ಕಳೆದ ಪ್ರತಿ ಕ್ಷಣಗಳನ್ನು ಆನಂದಿಸಿದ್ದೇನೆ. ಅವರ ಅಡಿಯಲ್ಲಿ ಆಡುವುದನ್ನು ಮತ್ತು ಅವರೊಂದಿಗೆ ಬ್ಯಾಟಿಂಗ್ ಮಾಡುವುದನ್ನು ನಾನು ನಿಜವಾಗಿಯೂ ಆನಂದಿಸಿದ್ದೇನೆ. ಭಾರತದಲ್ಲಿ ಅವರು ಹೊಂದಿರುವ ಬ್ರ್ಯಾಂಡ್ ಮೌಲ್ಯವು ಅವರು ಎಷ್ಟು ದೊಡ್ಡವರು ಎಂಬುದನ್ನು ತೋರಿಸುತ್ತದೆ. ನಾನು ಸಹ ಚೆನ್ನೈ ತಂಡದ ಒಂದು ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಹೇಳಿದರು.

    ಕ್ರೀಸ್‍ನಲ್ಲಿ ಎಷ್ಟು ಶಾಂತವಾಗಿರಬೇಕು ಮತ್ತು ಪಂದ್ಯದ ಅಂತಿಮಘಟ್ಟದಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಾನು ಧೋನಿಯಿಂದ ತಿಳಿದುಕೊಂಡಿದ್ದೇನೆ. ಇದು ನಾನು ಕಲಿತ ದೊಡ್ಡ ವಿಷಯ ಎಂದು ತಿಳಿಸಿದರು.

  • ಐಪಿಎಲ್‍ನಲ್ಲಿ ಕಳ್ಳಾಟ ನಡೆದಿದೆ, ಪಿಐಎಲ್‍ನ ಅಗತ್ಯ ಬರಬಹುದು: ಸುಬ್ರಮಣಿಯನ್ ಸ್ವಾಮಿ

    ಐಪಿಎಲ್‍ನಲ್ಲಿ ಕಳ್ಳಾಟ ನಡೆದಿದೆ, ಪಿಐಎಲ್‍ನ ಅಗತ್ಯ ಬರಬಹುದು: ಸುಬ್ರಮಣಿಯನ್ ಸ್ವಾಮಿ

    ನವದೆಹಲಿ: ಟಾಟಾ ಐಪಿಎಲ್‍ನಲ್ಲಿ ಕಳ್ಳಾಟ ನಡೆದಿದೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗಳಿಂದ ಹರಿದಾಡುತ್ತಿದೆ. ಅಮಿತಾ ಶಾ ಪುತ್ರ ಜಯ್ ಶಾ ಬಿಸಿಸಿಐನ ಸರ್ವಾಧಿಕಾರಿಯಾಗಿರುವುದರಿಂದ ಈ ಬಗ್ಗೆ ಸರ್ಕಾರ ತನಿಖೆ ನಡೆಸುವುದು ಅನುಮಾನ ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸುವ ಅಗತ್ಯ ಬರಬಹುದು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬಾಂಬ್ ಸಿಡಿಸಿದ್ದಾರೆ.

    ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಟಾಟಾ ಐಪಿಎಲ್ ಕ್ರಿಕೆಟ್ ಫಲಿತಾಂಶ ಗಮನಿಸಿದ ಬಳಿಕ ಮೋಸದಾಟ ನಡೆದಿದೆ ಎಂದು ಗುಪ್ತಚರ ಸಂಸ್ಥೆಗಳಲ್ಲಿ ವ್ಯಾಪಕವಾದ ಚರ್ಚೆ ನಡೆದಿದೆ. ಅಮಿತ್ ಶಾ ಅವರ ಪುತ್ರ ಬಿಸಿಸಿಐನ ಸರ್ವಾಧಿಕಾರಿಯಾಗಿರುವುದರಿಂದ ಸರ್ಕಾರ ಈ ಬಗ್ಗೆ ತನಿಖೆ ನಡೆಸಲು ಮುಂದಾಗುವುದು ಅನುಮಾನ. ಹಾಗಾಗಿ ಪಿಐಎಲ್‍ನ ಅಗತ್ಯ ಬರಬಹುದು ಎಂದು ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕುತೂಹಲಕ್ಕೆ ತೆರೆ ಎಳೆದ ಗಂಗೂಲಿ – ಮಾರ್ಗದರ್ಶಕರ ರಾಯಭಾರಿಯಾದ ದಾದಾ

    15ನೇ ಆವೃತ್ತಿ ಐಪಿಎಲ್ ಕೆಲದಿನಗಳ ಹಿಂದೆ ಮುಕ್ತಾಯಗೊಂಡಿತ್ತು. ಫೈನಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಬಗ್ಗುಬಡಿದು ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಿತ್ತು. ಫೈನಲ್ ಪಂದ್ಯ ಗುಜರಾತ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿತ್ತು. ಫೈನಲ್ ಪಂದ್ಯ ವೀಕ್ಷಣೆಗಾಗಿ ಸ್ಟೇಡಿಯಂಗೆ ಅಮಿತ್ ಶಾ ದಂಪತಿ ಆಗಮಿಸಿದ್ದರು. ಇದನ್ನೂ ಓದಿ: ಟೀಂ ಇಂಡಿಯಾದ ಈ ಬೌಲರ್ ದಕ್ಷಿಣ ಆಫ್ರಿಕಾಗೆ ಕಂಟಕ

  • ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಶೋಯೆಬ್ ಅಕ್ತರ್

    ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಶೋಯೆಬ್ ಅಕ್ತರ್

    ಮುಂಬೈ: ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ದೈತ್ಯ ಬೌಲರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ಭಾರತ ತಂಡದ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್ ಆಗಿ ಗುರುತಿಸಿಕೊಂಡವರು. ಆದರೆ ಅವರ ಬ್ಯಾಟ್‍ನಿಂದ ಇತ್ತೀಚಿಗೆ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ನವೆಂಬರ್ 2019 ರಿಂದ ಅವರು ಯಾವುದೇ ಅಂತರಾಷ್ಟ್ರೀಯ ಮ್ಯಾಚ್‍ಗಳಲ್ಲಿಯೂ ಶತಕವನ್ನು ಗಳಿಸಿಲ್ಲ. ಐಪಿಎಲ್ 2022 ಆವೃತ್ತಿಯಲ್ಲಿಯೂ ಸಹ ಅವರು ಅಷ್ಟೇನು ಹೇಳಿಕೊಳ್ಳುವಷ್ಟು ಆಟವಾಡಿಲ್ಲ. ಆರ್‌ಸಿಬಿ ತಂಡದ ಪರ ಆಡುತ್ತಿರುವ ಅವರು 16 ಪಂದ್ಯಗಳನ್ನು ಆಡಿ 22.73ರ ಸರಾಸರಿಯಲ್ಲಿ 341ರನ್ ಗಳಿಸಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಪದರ್ಶನ ನೀಡದೆ ಕೇವಲ 2 ಅರ್ಧಶತಕಗಳನ್ನು ಗಳಿಸುವಷ್ಟರಲ್ಲಿ ಶಕ್ತರಾಗಿದ್ದಾರೆ. ಇದಲ್ಲದೇ ಬೆಂಗಳೂರು ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರ ಇತ್ತೀಚಿನ ಕಳಪೆ ಆಟವನ್ನು ಗಮನಿಸಿರುವ ಎಷ್ಟೋ ಮಾಜಿ ಆಟಗಾರರು ಹಾಗೂ ಅಭಿಮಾನಿಗಳು ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ ತಂಡವನ್ನು ಗೌರವಿಸಿದ ಗುಜರಾತ್ ಸರ್ಕಾರ – ಹಾರ್ದಿಕ್ ಪಾಂಡ್ಯಗೆ ವಿಶೇಷ ಉಡುಗೊರೆ

    IPL 2022 VIRAT KOHLI

    ಆದರೆ, ಶೋಯೆಬ್ ಅಕ್ತರ್, ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ನೀವು ವಿರಾಟ್ ಕೊಹ್ಲಿ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತೀಲ್ಲ. ಅವರಿಗೆ ಗೌರವ ಕೊಡಿ. ನೀವು ವಿರಾಟ್ ಕೊಹ್ಲಿಗೆ ಏಕೆ ಗೌರವ ನೀಡುವುದಿಲ್ಲ? ಪಾಕಿಸ್ತಾನಿಯಾಗಿ ನಾನು ಹೇಳುತ್ತೇನೆ ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅವರು ಏಕದಿನ ಪಂದ್ಯಗಳಲ್ಲಿ 110 ಶತಕಗಳನ್ನು ಹೊಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ನಂತರ ಕೊಹ್ಲಿಗೆ ಕೆಲ ಸೂಚನೆಗಳನ್ನು ನೀಡಿದ ಅವರು, ಭಯಪಡಬೇಡಿ ನೀವು 45 ವರ್ಷ ವಯಸ್ಸಿನವರೆಗೆ ಆಡಬೇಕು. ಪ್ರಸ್ತುತ ಪರಿಸ್ಥಿತಿಯು ನಿಮ್ಮನ್ನು 110 ಶತಕಗಳನ್ನು ಬಾರಿಸಲು ಸಿದ್ಧಗೊಳಿಸುತ್ತಿದೆ. ಜನರು ನಿಮ್ಮನ್ನು ಅಲ್ಲಗಳಿಯುತ್ತಿದ್ದಾರೆ. ಅವರು ನಿಮ್ಮ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ. ದೀಪಾವಳಿಯಂದು ನೀವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದೀರಿ, ಅದರಲ್ಲಿ ನಿಮ್ಮನ್ನು ಟೀಕಿಸಲಾಗಿದೆ. ಅವರು ನಿಮ್ಮ ಹೆಂಡತಿ, ನಿಮ್ಮ ಮಗುವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹಾಗಾಗಿ ಯಾರ ಮಾತಿಗೂ ನೀವು ಕಿವಿಗೊಡದೇ ನನ್ನ ಮಾತುಗಳನ್ನು ನೆನಪಿನಲ್ಲಿಡಿ. ಅದನ್ನು ಇಂದಿನಿಂದಲೇ ಪಾಲಿಸಿ ಎಂದಿದ್ದಾರೆ.

  • ಜೋಸ್ ಬಟ್ಲರ್‌ಗೆ ಮಿಸ್ ಆಯಿತು ವಿಶೇಷ ಸಾಧನೆ

    ಜೋಸ್ ಬಟ್ಲರ್‌ಗೆ ಮಿಸ್ ಆಯಿತು ವಿಶೇಷ ಸಾಧನೆ

    ಮುಂಬೈ: 15ನೇ ಆವೃತ್ತಿ ಐಪಿಎಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದರೆ ಫೈನಲ್ ಪಂದ್ಯ ಸೋತ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ವಿಶೇಷ ಸಾಧನೆಯೊಂದರಿಂದ ವಂಚಿರಾಗಿದ್ದಾರೆ.

    ಜೋಸ್ ಬಟ್ಲರ್ 15ನೇ ಆವೃತ್ತಿ ಐಪಿಎಲ್‍ನಲ್ಲಿ ಪ್ರಚಂಡ ಫಾರ್ಮ್‍ನಲ್ಲಿದ್ದರು. ಆಡಿದ 17 ಪಂದ್ಯಗಳಲ್ಲಿ 4 ಶತಕ 4 ಅರ್ಧಶತಕ ಸಿಡಿಸಿ ಬರೋಬ್ಬರಿ 863 ರನ್ ಚಚ್ಚಿ ಈ ಬಾರಿ ರಾಜಸ್ಥಾನ ತಂಡ ಫೈನಲ್‍ಗೆ ಎಂಟ್ರಿ ಕೊಡಲು ಮಹತ್ವದ ಪಾತ್ರ ವಹಿಸಿದ್ದರು. ಆದರೆ ಅವರಿಗೆ ಫೈನಲ್‍ನಲ್ಲಿ ಒಂದು ಮಹತ್ವದ ಸಾಧನೆಯೊಂದು ಜೆಸ್ಟ್ ಮಿಸ್ ಆಗಿದೆ. ಇದನ್ನೂ ಓದಿ: ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ಈ ಹಿಂದೆ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಚಾಂಪಿಯನ್ ಆದಾಗ ರಾಬಿನ್ ಉತ್ತಪ್ಪ 660 ರನ್ ಸಿಡಿಸಿ ಆರಂಜ್ ಕ್ಯಾಪ್ ಪಡೆದಿದ್ದರು. ಜೊತೆಗೆ ಅವರ ತಂಡ ಚಾಂಪಿಯನ್ ಆಗಿತ್ತು. ಆ ಬಳಿಕ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಋತುರಾಜ್ ಗಾಯಕ್ವಾಡ್ 635 ರನ್ ಹೊಡೆದು ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು, ಈ ವೇಳೆ ಚೆನ್ನೈ ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ಜೋಸ್ ಬಟ್ಲರ್ 863 ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಆದರೆ ಅವರ ತಂಡ ಮಾತ್ರ ಫೈನಲ್‍ನಲ್ಲಿ ಸೋತು ರನ್ನರ್‌ಅಪ್‌ ಸ್ಥಾನಕ್ಕೆ ತೃಪಿ ಪಡೆದಿದೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ಈ ಮೂಲಕ ಬಟ್ಲರ್ ರಾಬಿನ್ ಉತ್ತಪ್ಪ ಮತ್ತು ಗಾಯಕ್ವಾಡ್ ಅವರ ರೀತಿಯ ವಿಶೇಷ ಸಾಧನೆಯಿಂದ ಬಟ್ಲರ್ ವಂಚಿರಾಗಿದ್ದಾರೆ. ಆದರೆ ಈ ಬಾರಿ ಬಟ್ಲರ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.

  • ಐಪಿಎಲ್ ಫೈನಲ್ ಮ್ಯಾಚ್: `ಕೆಜಿಎಫ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ರಣ್‌ವೀರ್ ಸಿಂಗ್

    ಐಪಿಎಲ್ ಫೈನಲ್ ಮ್ಯಾಚ್: `ಕೆಜಿಎಫ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ರಣ್‌ವೀರ್ ಸಿಂಗ್

    ಬಾಲಿವುಡ್‌ನ ಸ್ಟಾರ್ ನಟ ರಣ್‌ವೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ತಾನ ರಾಯಲ್ಸ್ ಐಪಿಎಲ್ ಮ್ಯಾಚ್‌ಗೆ ಅತಿಥಿಯಾಗಿ ಬಂದು ಮ್ಯಾಚ್ ವೀಕ್ಷಿಸಿದ್ದಾರೆ. ಜೊತೆಗೆ ʻಕೆಜಿಎಫ್‌ʼ ಸೂಪರ್‌ ಹಿಟ್ ಹಾಡುಗಳಿಗೆ ರಣ್‌ವೀರ್ ಸಿಂಗ್ ಹೆಜ್ಜೆ ಹಾಕಿದ್ದಾರೆ.

    ಅಹಮದ್‌ಬಾದ್‌ನ ಮೋದಿ ಕ್ರಿಡಾಂಗಣದಲ್ಲಿ ಭಾನುವಾರ ಐಪಿಲ್ ಮ್ಯಾಚ್‌ಗೆ ಕ್ರಿಡಾ ಅಭಿಮಾನಿಗಳ ಜೊತೆ ಬಾಲಿವುಡ್ ಸ್ಟರ‍್ಸ್ ಕೂ ಸಾಥ್ ನೀಡಿದ್ದಾರೆ. ಅಕ್ಷಯ್ ಕುಮಾರ್, ಎ.ಆರ್ ರೆಹಮಾನ್, ರಣ್‌ವೀರ್ ಸಿಂಗ್ ಕೂಡ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ತಾನ ರಾಯಲ್ಸ್ ಐಪಿಎಲ್ ಮ್ಯಾಚ್ ನೋಡಿ ಸವಿದಿದ್ದಾರೆ. ಈ ವೇಳೆ ಎ.ಆರ್ ರೆಹಮಾನ್ ಜೈ ಹೋ ಮತ್ತು ಮಾ ತುಜೇ ಸಲಾಮ್ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು ರಣ್‌ವೀರ್ ಸಿಂಗ್ ಕೆಹಿಎಫ್ ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ಶೂಟಿಂಗ್‍ಗೂ 9 ತಿಂಗಳ ಹಿಂದೆಯೇ ಪ್ರಿಪರೇಶನ್ ಮಾಡ್ಕೊಂಡೆ: ಸುದೀಪ್

    `ಕೆಜಿಎಫ್’ ಸೂಪರ್ ಹಿಟ್ ಸಾಂಗ್ಸ್, ವಾತಿ ಕಮಿಂಗ್, ಆರ್‌ಆರ್‌ಆರ್ ಚಿತ್ರದ `ನಾಟು ನಾಟು’ ಸಾಂಗ್ ಸೇರಿದಂತೆ ಪತ್ನಿ ದೀಪಿಕಾ ನಟನೆಯ ಚಿತ್ರದ ಹಾಡುಗಳಿಗೂ ರಣ್‌ವೀರ್ ಸಿಂಗ್ ಕುಣಿದು ಕುಪ್ಪಳಿಸಿದ್ದಾರೆ. ಭರ್ಜರಿ ಐಪಿಎಫ್ ಮ್ಯಾಚ್ ಜತೆ ರಣ್‌ವೀರ್ ಜಬರ್‌ದಸ್ತ್ ಡ್ಯಾನ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

  • ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ಅಮಿತ್ ಶಾ ದಂಪತಿ – ಮೋದಿ ಬರುವ ನಿರೀಕ್ಷೆ

    ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ಅಮಿತ್ ಶಾ ದಂಪತಿ – ಮೋದಿ ಬರುವ ನಿರೀಕ್ಷೆ

    ಅಹಮದಾಬಾದ್: 2022ರ ಐಪಿಎಲ್ ಫೈನಲ್ ಪಂದ್ಯವನ್ನು ಗೃಹ ಸಚಿವ ಅಮಿತ್ ಶಾ ದಂಪತಿ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿ ವೀಕ್ಷಿಸಿದ್ದಾರೆ.

    ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಫೈನಲ್ ಪಂದ್ಯ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಸ್ಟೇಡಿಯಂ ಅಹಮದಾಬಾದ್‍ನಲ್ಲಿ ನಡೆಯುತ್ತಿದೆ. ಪಂದ್ಯ ನೋಡಲು ಅಮಿತ್ ಶಾ ದಂಪತಿ ಆಗಮಿಸಿದ್ದಾರೆ. ಸ್ಟೇಡಿಯಂನಲ್ಲಿ ಕೂತು ಆಟ ನೋಡುತ್ತಿರುವಂತೆ  ಕ್ಯಾಮೆರಾಮ್ಯಾನ್‌ ಅವರತ್ತ ಕ್ಯಾಮೆರಾ ತಿರುಗಿಸಿದ್ದಾನೆ. ಈ ವೇಳೆ ಸ್ಕ್ರೀನ್ ಮೇಲೆ ಅಮಿತ್ ಶಾ ದಂಪತಿ ಕಾಣಿಸಿಕೊಳ್ಳುತ್ತಿದ್ದಂತೆ ಓಹೋ ಎಂದು ಐಪಿಎಲ್ ಪ್ರೇಕ್ಷಕರು ಜೈಕಾರ ಹೊರಡಿಸಿದ್ದಾರೆ. ಇದನ್ನೂ ಓದಿ: IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    ಪ್ರೇಕ್ಷಕರು ಜೋರಾಗಿ ಕಿರುಚಾಡುತ್ತಿದ್ದಂತೆ ಅಮಿತ್ ಶಾ ವಿಕ್ಟರಿ ಸಿಂಬಲ್ ತೋರಿಸಿದರು. ಇನ್ನೂ ಪಂದ್ಯ ನೋಡಲು ಪ್ರಧಾನಿ ನರೇಂದ್ರ ಮೋದಿ ಕೂಡ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: 2014ರ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದೇ ಐಪಿಎಲ್ ಫೈನಲ್

    ಈ ಮೊದಲು ನಡೆದ ಸಮಾರೋಪ ಸಮಾರಂಭದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಬಾಲಿವುಡ್ ನಟ ರಣವೀರ್ ಸಿಂಗ್, ಅನೇಕ ಚಿತ್ರಗಳ ಹಾಡಿಗೆ ಹೆಜ್ಜೆ ಹಾಕುವ ಮೂಲಕ ರಂಜಿಸಿದರು. ಅಲ್ಲದೇ ಕೆಜಿಎಫ್ 2 ಚಿತ್ರದ ‘ಧೀರಾ ಧೀರಾ’ ಮತ್ತು ಥೀಮ್ ಸಾಂಗ್‍ಗೆ ರಣವೀರ್ ಸಿಂಗ್ ಕುಣಿದು ಕುಪ್ಪಳಿಸಿದರು. ಅಲ್ಲದೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು. ಪಂದ್ಯ ವೀಕ್ಷಿಸಲು ಅಕ್ಷಯ್ ಕುಮಾರ್ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಆಗಮಿಸಿದ್ದಾರೆ.

  • IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ

    ಅಹಮದಾಬಾದ್: 15ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯದ ಸಮಾರೋಪ ಸಮಾರಂಭದಲ್ಲಿ ವಿಶ್ವದ ಅತಿ ದೊಡ್ಡ ಜೆರ್ಸಿಯನ್ನು ಅನಾವರಣಗೊಳಿಸಿ ಗಿನ್ನಿಸ್ ದಾಖಲೆ ಬರೆದಿದೆ.

    ಐಪಿಎಲ್ ಯಶಸ್ವಿ 15ನೇ ವರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ 66-44 ಮೀಟರ್ ಉದ್ದದ ವಿಶ್ವದ ಅತಿ ದೊಡ್ಡ ಜೆರ್ಸಿಯನ್ನು ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅನಾವರಣಗೊಳಿಸಲಾಯಿತು. ಈ ಜೆರ್ಸಿ ವಿಶ್ವದ ಅತೀ ದೊಡ್ಡ ಜೆರ್ಸಿ ಎಂಬ ನಿಟ್ಟಿನಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಬರೆದಿದೆ. ಇದನ್ನೂ ಓದಿ: 2014ರ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದೇ ಐಪಿಎಲ್ ಫೈನಲ್

    ಸಮಾರೋಪ ಸಮಾರಂಭದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಬಾಲಿವುಡ್ ನಟ ರಣವೀರ್ ಸಿಂಗ್, ಅನೇಕ ಚಿತ್ರಗಳ ಹಾಡಿಗೆ ಹೆಜ್ಜೆ ಹಾಕುವ ಮೂಲಕ ರಂಜಿಸಿದರು. ಅಲ್ಲದೇ ಕೆಜಿಎಫ್ 2 ಚಿತ್ರದ ‘ಧೀರಾ ಧೀರಾ’ ಮತ್ತು ಥೀಮ್ ಸಾಂಗ್‍ಗೆ ರಣವೀರ್ ಸಿಂಗ್ ಕುಣಿದು ಕುಪ್ಪಳಿಸಿದರು. ಈ ಮೂಲಕ ಐಪಿಎಲ್‍ನಲ್ಲಿಯೂ ಕೆಜಿಎಫ್ ಹವಾ ಕಾಣಿಸಿಕೊಂಡಿತು. ಅಲ್ಲದೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು. ಇದನ್ನೂ ಓದಿ: ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್

    ವೇದಿಕೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ನಡೆಸಿಕೊಟ್ಟರು.

     

  • 2014ರ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದೇ ಐಪಿಎಲ್ ಫೈನಲ್

    2014ರ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದೇ ಐಪಿಎಲ್ ಫೈನಲ್

    ಅಹಮದಾಬಾದ್: 2014ರ ಐಪಿಎಲ್ ಬಳಿಕ ಮೊಟ್ಟ ಮೊದಲ ಬಾರಿಗೆ ಸ್ಟಾರ್ ಕ್ರಿಕೆಟ್ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಲ್ಲದ ತಂಡಗಳು ಐಪಿಎಲ್‍ನ ಫೈನಲ್ ಪಂದ್ಯವಾಡುತ್ತಿದೆ.

    ಹೌದು ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪಾರುಪತ್ಯ ಮೆರೆದಿದೆ. ಆದರೆ ಈ ಬಾರಿ ಈ ಎರಡು ತಂಡಗಳು ಲೀಗ್‍ನಲ್ಲೇ ತಮ್ಮ ಅಭಿಯಾನ ಮುಗಿಸಿದೆ. ಇತ್ತ ಭರ್ಜರಿ ಪ್ರದರ್ಶನದ ಮೂಲಕ ನೂತನ ತಂಡ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಫೈನಲ್ ಕಾದಾಟಕ್ಕೆ ಸಿದ್ಧವಾಗಿವೆ. ಇದನ್ನೂ ಓದಿ: ಟೈಟಾನ್ಸ್ Vs ರಾಯಲ್ಸ್ ಫೈನಲ್ – ಯಾರಾಗ್ತಾರೆ ಚಾಂಪಿಯನ್?

    2008ರಲ್ಲಿ ಐಪಿಎಲ್ ಆರಂಭವಾದಗಿನಿಂದಲೂ ಧೋನಿ, ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಒಂದಲ್ಲ ಒಂದು ತಂಡದಲ್ಲಿ ಆಡಿ ಫೈನಲ್ ಪಂದ್ಯಕ್ಕೆ ಎಂಟ್ರಿಕೊಟ್ಟಿರುವ ಇತಿಹಾಸವಿದೆ. ಆದರೆ ಈ ಬಾರಿ ಈ ಮೂರು ಜನ ಆಟಗಾರರಿದ್ದ ತಂಡಗಳು ಫೈನಲ್‍ಗೆ ತಲುಪಲು ವಿಫಲಗೊಂಡಿದೆ. ಇದನ್ನೂ ಓದಿ: ಐಪಿಎಲ್ ಫೈನಲ್‍ನಲ್ಲಿ ಕರ್ನಾಟಕದ ಕಲಾ ತಂಡಗಳ ಮೆರುಗು

    ಐಪಿಎಲ್ ಇತಿಹಾಸ ನೋಡಿದಾಗ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಚಾಂಪಿಯನ್ ಆದರೆ, ಚೆನ್ನೈ 4 ಬಾರಿ ಪ್ರಶಸ್ತಿ ಗೆದ್ದಿದೆ. 2008, 2010, 2011, 2012, 2013, 2015, 2018, 2019, 2021ರಲ್ಲಿ ಚೆನ್ನೈ ತಂಡ ಫೈನಲ್‍ಗೆ ಲಗ್ಗೆ ಇಟ್ಟು 2010, 2011, 2018 ಮತ್ತು 2021ರಲ್ಲಿ ಧೋನಿ ತಂಡ ಚಾಂಪಿಯನ್ ಆಗಿತ್ತು. 2010, 2013, 2015, 2017, 2019, 2020 ಫೈನಲ್‍ಗೆ ತೇರ್ಗಡೆ ಹೊಂದಿದ್ದ ಮುಂಬೈ 2010ರಲ್ಲಿ ಸೋತು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದನ್ನು ಹೊರತು ಪಡಿಸಿ ಉಳಿದ ಎಲ್ಲಾ ಫೈನಲ್‍ಗಳನ್ನು ಗೆದ್ದಿತ್ತು. 2009, 2011, 2016 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್‍ಗೆ ಹೋಗಿತ್ತು. ಆದರೆ ಫೈನಲ್‍ನಲ್ಲಿ ಮುಗ್ಗರಿಸಿ ಮೂರು ಬಾರಿಯೂ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ವಿಫಲಗೊಂಡಿತ್ತು. ಈ ಎಲ್ಲಾ ಫೈನಲ್ ಪಂದ್ಯಗಳಲ್ಲಿ ಧೋನಿ, ಕೊಹ್ಲಿ, ರೋಹಿತ್ ಒಬ್ಬರಲ್ಲ ಒಬ್ಬರು ಆಡಿದ್ದರು. ಇದನ್ನೂ ಓದಿ: ಮಹಿಳಾ ಟಿ20 ಚಾಲೆಂಜ್ ಫೈನಲ್ – ವೆಲಾಸಿಟಿ ವಿರುದ್ಧ ಗೆದ್ದ ಸೂಪರ್ನೋವಾಸ್ ಚಾಂಪಿಯನ್

    IPL 2022 MI VS KKR 02

    2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಫೈನಲ್ ತಲುಪಿತ್ತು ಈ ವೇಳೆ ಈ ಮೂರು ಜನ ಆಟಗಾರರಿಲ್ಲದ ತಂಡವೊಂದು ಮೊದಲ ಬಾರಿಗೆ ಐಪಿಎಲ್ ಫೈನಲ್ ಆಡಿತ್ತು. ಆ ಬಳಿಕ ಇದೀಗ 2022ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಈ ಮೂರು ಜನ ಆಟಗಾರರಿಲ್ಲದ ತಂಡವೊಂದು ಆಡುತ್ತಿದೆ.

    ಇಂದು ಫೈನಲ್ ಪಂದ್ಯವಾಡುತ್ತಿರುವ ಗುಜರಾತ್ ಟೈಟಾನ್ಸ್ ಚೊಚ್ಚಲ ಆವೃತ್ತಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ರಾಜಸ್ಥಾನ ತಂಡ 14 ವರ್ಷಗಳ ಬಳಿಕ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಕಾತರದಲ್ಲಿದೆ.