Tag: IPL 2021

  • ಐಪಿಎಲ್ 10 ತಂಡಗಳ ಪೈಕಿ 2 ತಂಡಕ್ಕೆ ಕನ್ನಡಿಗರ ನಾಯಕತ್ವ – ಮೂವರು ನೂತನ ನಾಯಕರ ಎಂಟ್ರಿ

    ಐಪಿಎಲ್ 10 ತಂಡಗಳ ಪೈಕಿ 2 ತಂಡಕ್ಕೆ ಕನ್ನಡಿಗರ ನಾಯಕತ್ವ – ಮೂವರು ನೂತನ ನಾಯಕರ ಎಂಟ್ರಿ

    ಮುಂಬೈ: 15ನೇ ಆವೃತ್ತಿ ಐಪಿಎಲ್ ಹಲವು ವಿಶೇಷತೆಗಳೊಂದಿಗೆ ಮತ್ತೆ ಆರಂಭವಾಗುತ್ತಿದೆ. ಈ ಬಾರಿ ಒಟ್ಟು 10 ತಂಡಗಳನ್ನು ಹತ್ತು ಸಾರಥಿಗಳು ಮುನ್ನಡೆಸಲು ಸಿದ್ಧರಾಗಿದ್ದಾರೆ.

    8 ತಂಡಗಳಿದ್ದ ಐಪಿಎಲ್ ಕೂಟಕ್ಕೆ ಹೊಸದಾಗಿ 2 ತಂಡ ಸೇರುವುದರೊಂದಿಗೆ ತಂಡಗಳ ಒಟ್ಟು ಸಂಖ್ಯೆ 10ಕ್ಕೆ ಏರಿದೆ. ಹತ್ತು ತಂಡಗಳ ಪೈಕಿ ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ ನಾಯಕರಾಗಿ ಕೆ.ಎಲ್ ರಾಹುಲ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಮಯಾಂಕ್ ಅರ್ಗವಾಲ್ ಕಾಣಿಸಿಕೊಳ್ಳುವ ಮೂಲಕ ಈ ಬಾರಿ ಇಬ್ಬರು ಕನ್ನಡಿಗರು ಐಪಿಎಲ್ ತಂಡಗಳ ನಾಯಕತ್ವ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮಯಾಂಕ್, ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮೊಟ್ಟಮೊದಲ ಬಾರಿಗೆ ನಾಯಕತ್ವದ ಹೊಣೆ ಹೊತ್ತಿದ್ದಾರೆ. ಇದನ್ನೂ ಓದಿ: ಗೆಳತಿ ಜೊತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್

    ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಎಸ್‍ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ. 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾದರೆ, 2 ಬಾರಿ ಕಪ್ ಗೆದ್ದಿರುವ ಕೋಲ್ಕತ್ತಾ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕತ್ವದ ಬಲ ಇದೆ. ಇದನ್ನೂ ಓದಿ: RCB ನಾಯಕನಾಗಿ ಫಾಫ್ ಡು ಪ್ಲೆಸಿಸ್ ನೇಮಕ

    ತಲಾ ಒಂದೊಂದು ಬಾರಿ ಚಾಂಪಿಯನ್ ಆಗಿ ಮೆರೆದಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೇನ್ ವಿಲಿಯಮ್ಸನ್ ನಾಯಕರಾಗಿ ಸಮರ್ಥವಾಗಿ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಡೆಲ್ಲಿ ತಂಡಕ್ಕೆ ರಿಷಬ್ ಪಂತ್ ನಾಯಕತ್ವದ ಶಕ್ತಿ ಇದೆ.  ಇದನ್ನೂ ಓದಿ: ಭಾರತ Vs ಶ್ರೀಲಂಕಾ ಟೆಸ್ಟ್ – ಅಪ್ಪು ಫೋಟೋ ಜೊತೆ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಂಡ ಸುದೀಪ್

    14 ಆವೃತ್ತಿಗಳ ಪೈಕಿ ಈಗಿರುವ 5 ತಂಡಗಳು ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡರೆ ಈ ಹಿಂದಿನ ಆವೃತ್ತಿಗಳಿಂದಲೂ ಇರುವ ಆರ್​ಸಿಬಿ, ಪಂಜಾಬ್, ಡೆಲ್ಲಿ ತಂಡಗಳು ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರಿಲ್ಲ. ಈ ಬಾರಿ ಆಟಗಾರರ ಮೆಗಾ ಹರಾಜಿನ ಬಳಿಕ ತಂಡ ರಚನೆಯಾಗಿದ್ದು, ಎಲ್ಲಾ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಈ ಬಾರಿ 10 ತಂಡಗಳ ಮಧ್ಯೆ 15ನೇ ಅವೃತ್ತಿಯ ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಕಾದಾಟ ನಡೆಯಲಿದೆ.

  • ಪ್ಲೇ ಆಫ್‌ಗೆ ಕೋಲ್ಕತ್ತಾ ಬಹುತೇಕ ಎಂಟ್ರಿ- ಪವಾಡ ನಡೆದ್ರೆ ಮುಂಬೈಗೆ ಚಾನ್ಸ್‌

    ಪ್ಲೇ ಆಫ್‌ಗೆ ಕೋಲ್ಕತ್ತಾ ಬಹುತೇಕ ಎಂಟ್ರಿ- ಪವಾಡ ನಡೆದ್ರೆ ಮುಂಬೈಗೆ ಚಾನ್ಸ್‌

    ಶಾರ್ಜಾ: ರಾಜಸ್ಥಾನ ವಿರುದ್ಧ 86 ರನ್‌ ಗಳಿಂದ ಗೆದ್ದ ಕೋಲ್ಕತ್ತಾ ಬಹುತೇಕ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದ್ದು, ಪಂಜಾಬ್‌ ತಂಡ ಟೂರ್ನಿಯಿಂದ ಔಟ್‌ ಆಗಿದೆ.

    ಗೆಲ್ಲಲು 172 ರನ್‌ಗಳ ಕಠಿಣ ಸವಾಲನ್ನು ಪಡೆದ ರಾಜಸ್ಥಾನ 16.1 ಓವರ್‌ ಗಳಲ್ಲಿ 85 ರನ್‌ಗಳಿಸಿ ಆಲೌಟ್‌ ಆಯ್ತು. ಕೊನೆಯ ಪಂದ್ಯವನ್ನು ಸೋಲುವ ಮೂಲಕ ರಾಜಸ್ಥಾನ ತಂಡವೂ ಐಪಿಎಲ್‌ನಿಂದ ಔಟ್‌ ಆಗಿದೆ.

    ಕೋಲ್ಕತ್ತಾ ತಂಡ ಬಹುತೇಕ ಪ್ಲೇ ಆಫ್‌ ಪ್ರವೇಶಿಸಿದೆ. ನಾಳೆ ಸನ್‌ ರೈಸರ್ಸ್‌ ಹೈದರಾಬಾದ್‌ ಮತ್ತು ಮುಂಬೈ ಮಧ್ಯೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಮೊದಲು ಬ್ಯಾಟ್‌ ಮಾಡಿ 170ಕ್ಕೂ ಹೆಚ್ಚು ರನ್‌ಗಳಿಂದ ಜಯಗಳಿಸಿದರೆ ಮಾತ್ರ ಪ್ಲೇ ಆಫ್‌ ಪ್ರವೇಶಿಸಬಹುದು. ಈ ರೀತಿಯ ಫಲಿತಾಂಶ ದಾಖಲಾಗಬೇಕಾದರೆ ಪವಾಡವೇ ನಡೆಯಬೇಕು.

    ಮೊದಲ ಓವರಿನಲ್ಲಿ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿದ ರಾಜಸ್ತಾನ ಪರ ರಾಹುಲ್‌ ತೆವಾಟಿಯಾ 44 ರನ್‌(36 ಎಸೆತ, 5 ಬೌಂಡರಿ, 2 ಸಿಕ್ಸರ್‌) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಕೋಲ್ಕತ್ತಾ ಪರ ಶಿವಂ ಮಾವಿ 4 ವಿಕೆಟ್‌, ಲೂಕಿ ಫರ್ಗ್ಯೂಸನ್‌ 3 ವಿಕೆಟ್‌, ಶಕಿಬ್‌ ಉಲ್‌ ಹಸನ್‌ ಮತ್ತು ವರುಣ್‌ ಚಕ್ರವರ್ತಿ 1 ವಿಕೆಟ್‌ ಪಡೆದರು. ಇದನ್ನೂ ಓದಿ: ಗೆಳತಿಗೆ ಸ್ಟೇಡಿಯಂನಲ್ಲೇ ಪ್ರಪೋಸ್‌ ಮಾಡಿದ ದೀಪಕ್‌ ಚಹರ್‌ 

    ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತಾ ಪರ ಶುಭಮನ್‌ ಗಿಲ್‌ 56 ರನ್‌(44 ಎಸೆತ, 4 ಬೌಂಡರಿ, 2 ಸಿಕ್ಸರ್‌), ವೆಂಕಟೇಶ್‌ ಅಯ್ಯರ್‌ 38 ರನ್‌( 35 ಎಸೆತ, 3 ಬೌಂಡರಿ, 2 ಸಿಕ್ಸರ್‌), ರಾಹುಲ್‌ ತ್ರಿಪಾಠಿ 21 ರನ್‌(14 ಎಸೆತ, 3 ಬೌಂಡರಿ) ಹೊಡೆದು ಔಟಾದರು.

  • ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

    ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

    ದುಬೈ: ನಾಯಕ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 135 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ 13 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 139 ರನ್‌ ಹೊಡೆಯುವ ಮೂಲಕ ಗುರಿಯನ್ನು ತಲುಪಿತು. ಇನ್ನಿಂಗ್ಸ್‌ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ರಾಹುಲ್‌ ಔಟಾಗದೇ 98 ರನ್‌(42 ಎಸೆತ, 7 ಬೌಂಡರಿ, 8 ಸಿಕ್ಸರ್‌) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಈ ಪಂದ್ಯಕ್ಕೂ ಮೊದಲು ಪಂಜಾಬ್‌ ರನ್‌ ರೆಟ್‌ -0.241ಇತ್ತು. ಈಗ ಇದು -0.001 ಏರಿಕೆಯಾಗಿದೆ. ಪಂಜಾಬ್‌ ಪರ ರಾಹುಲ್‌ ಬಿಟ್ಟರೆ ಮಯಾಂಕ್‌ ಅಗರವಾಲ್‌ 12 ರನ್‌, ಏಡನ್ ಮಾರ್ಕ್ರಮ್ 13 ರನ್‌ ಗಳಿಸಿ ಔಟಾದರು.

    ಇಂದಿನ ಪಂದ್ಯವನ್ನು ಪಂಜಾಬ್‌ ಗೆದ್ದರೂ ಪ್ಲೇ ಆಫ್‌ಗೆ ಹೋಗುವ ಆಸೆ ಬಹಳ ಕ್ಷೀಣವಾಗಿದೆ. ಯಾಕೆಂದರೆ ರಾಜಸ್ಥಾನ ವಿರುದ್ಧ ಕೋಲ್ಕತ್ತಾ ಭಾರೀ ಅಂತರದಿಂದ ಸೋಲಬೇಕು. ಅಷ್ಟೇ ಅಲ್ಲದೇ ನಾಳೆ ನಡೆಯಲಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ಗೆಲ್ಲಬೇಕು. ಸದ್ಯದ ಮಟ್ಟಿಗೆ ಈ ಫಲಿತಾಂಶ ಬರುವುದು ಬಹಳ ಕಷ್ಟ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಭಾರತದ ನೂತನ ಸಿಕ್ಸರ್ ಕಿಂಗ್ ಆದ ಹಿಟ್‍ಮ್ಯಾನ್

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಚೆನ್ನೈ ಪಂಜಾಬ್‌ ಬೌಲರ್‌ಗಳ ಬಿಗಿಯಾದ ದಾಳಿಗೆ 6 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತು. ಫಾಫ್‌ ಡುಪ್ಲೆಸಿಸ್‌ 76 ರನ್‌(55 ಎಸೆತ, 8 ಬೌಂಡರಿ, 2 ಸಿಕ್ಸರ್‌) ಹೊಡೆದು ಪ್ರತಿರೋಧ ತೋರಿದ್ದು ಬಿಟ್ಟರೆ ಬೇರೆ ಆಟಗಾರರಿಂದ ಹೋರಾಟ ಕಂಡು ಬರಲಿಲ್ಲ.

    ರವೀಂದ್ರ ಜಡೇಜಾ ಔಟಾಗದೇ 15 ರನ್‌, ಧೊನಿ ಮತ್ತು ಋತುರಾಜ್‌ ಗಾಯಕ್‌ವಾಡ್‌ 12 ರನ್‌ ಹೊಡೆದು ಔಟಾದರು. ಚೆನ್ನೈ ಪರ ಕ್ರಿಸ್‌ ಜೋರ್ಡನ್‌, ಅರ್ಶದೀಪ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರೆ ಮೊಹಮ್ಮದ್‌ ಶಮಿ, ರವಿ ಬಿಶ್ನೋಯಿ ತಲಾ 1 ವಿಕೆಟ್‌ ಪಡೆದರು.

  • ಹೈದರಾಬಾದ್‌ಗೆ ರೋಚಕ 4 ರನ್‌ ಜಯ – ಕೊನೆಯಲ್ಲಿ ಪಂದ್ಯ ಕೈ ಚೆಲ್ಲಿದ ಆರ್‌ಸಿಬಿ

    ಹೈದರಾಬಾದ್‌ಗೆ ರೋಚಕ 4 ರನ್‌ ಜಯ – ಕೊನೆಯಲ್ಲಿ ಪಂದ್ಯ ಕೈ ಚೆಲ್ಲಿದ ಆರ್‌ಸಿಬಿ

    ಅಬುಧಾಬಿ: ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ರೋಚಕವಾಗಿ 4 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ.

    142 ರನ್‌ಗಳ ಸವಾಲು ಪಡೆದ ಬೆಂಗಳೂರು 6 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರುವ ಅವಕಾಶವನ್ನು ಕಳೆದುಕೊಂಡಿತು.

    ಕೊನೆಯ ಎರಡು ಓವರ್‌ಗಳಲ್ಲಿ 18 ರನ್‌ ಬೇಕಿತ್ತು. ಹೋಲ್ಡರ್‌ ಎಸೆದ 19ನೇ ಓವರಿನಲ್ಲಿ 5 ರನ್‌ ಬಂತು. ಕೊನೆಯ ಓವರಿನಲ್ಲಿ 13 ರನ್‌ ಬೇಕಿತ್ತು. ಭುವನೇಶ್ವರ್‌ ಕುಮಾರ್‌ ಎಸೆದ ಕೊನೆಯ ಮೂರು ಎಸೆತಗಳಲ್ಲಿ 12 ರನ್‌ ಬೇಕಿತ್ತು. ಎಬಿಡಿ ವಿಲಿಯರ್ಸ್‌ 4ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದರು. ಆದರೆ 5ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 6ನೇ ಎಸೆತದಲ್ಲಿ 1 ರನ್‌ ಬಂತು. 1, 3, 5ನೇ ಎಸೆತದಲ್ಲಿ ಯಾವುದೇ ರನ್‌ ಬಾರದ ಕಾರಣ ಆರ್‌ಸಿಬಿ ಪಂದ್ಯವನ್ನು ಸೋತಿತು.

    ಪಡಿಕಲ್‌ 41 ರನ್‌(52 ಎಸೆತ, 4 ಬೌಂಡರಿ), ಮ್ಯಾಕ್ಸ್‌ವೆಲ್‌ 40 ರನ್‌(25 ಎಸೆತ, 3 ಬೌಂಡರಿ, 2 ಸಿಕ್ಸರ್‌), ಎಬಿಡಿ ಔಟಾಗದೇ 19 ರನ್‌(13 ಎಸೆತ, 1 ಬೌಂಡರಿ, 1 ಸಿಕ್ಸರ್‌), ಶಹಬಾಜ್‌ ಅಹ್ಮದ್‌ 14 ರನ್‌(9 ಎಸೆತ, 2 ಬೌಂಡರಿ) ಹೊಡೆದರು.

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಹೈದರಬಾದ್‌ ಆರಂಭದಲ್ಲೇ ಅಭಿಷೇಕ್‌ ಶರ್ಮಾ ಅವರ ವಿಕೆಟ್‌ ಕಳೆದುಕೊಂಡರೂ ಎರಡನೇ ವಿಕೆಟಿಗೆ ಜೇಸನ್‌ ರಾಯ್‌ ಮತ್ತು ಕೇನ್‌ ವಿಲಿಯಮ್ಸನ್‌ 58 ಎಸೆತಗಳಲ್ಲಿ 70 ರನ್‌ ಜೊತೆಯಾಟವಾಡಿದರು.

    ಕೇನ್‌ ವಿಲಿಯಮ್ಸನ್‌ 31 ರನ್‌(29 ಎಸೆತ, 4 ಬೌಂಡರಿ) ಹೊಡೆದು ಔಟಾದರೆ ಜೇಸನ್‌ ರಾಯ್‌ 44 ರನ್‌(38 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಸ್ಲಾಗ್‌ ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ರನ್‌ಗೆ ಕಡಿವಾಣ ಹಾಕಿದ ಕಾರಣ ಹೈದರಾಬಾದ್‌ ಮೊತ್ತ ಏರಲಿಲ್ಲ.

    ಹರ್ಷಲ್‌ ಪಟೇಲ್‌ 3, ಡೇನ್‌ ಕ್ರಿಸ್ಟಿಯನ್‌ 2, ಚಹಲ್‌ ಮತ್ತು ಜಾರ್ಜ್‌ ಗಾರ್ಟನ್‌ ತಲಾ ಒಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ 

  • 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ದುಬೈ: ವೆಸ್ಟ್ ಇಂಡೀಸ್ ಸ್ಟಾರ್ ಆಟಗಾರ, ಪಂಜಾಬ್ ಕಿಂಗ್ಸ್ ತಂಡದ ಕ್ರಿಸ್ ಗೇಲ್ ಬಯೋಬಬಲ್‍ಗೆ ಬೇಸತ್ತು 14ನೇ ಐಪಿಎಲ್‍ನಿಂದ ಹೊರ ನಡೆದಿದ್ದಾರೆ.

    ಕಳೆದ ಕೆಲ ತಿಂಗಳಿನಿಂದ ನಾನು ಸಿಡಬ್ಲ್ಯುಐ ಬಬಲ್, ಸಿಪಿಎಲ್ ಬಬಲ್ ನಂತರ ಐಪಿಎಲ್ ಬಬಲ್‍ನ ಭಾಗವಾಗಿದ್ದೇನೆ. ಈಗ ನಾನು ಮಾನಸಿಕವಾಗಿ ಸಿದ್ಧವಾಗಲು ಮತ್ತು ರಿಫ್ರೆಶ್ ಆಗಲು ಬಯಸುತ್ತೇನೆ ಎಂದು ಗೇಲ್ ಹೇಳಿದ್ದಾರೆ. ಇದನ್ನೂ ಓದಿ: ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಲು ದುಬೈನಲ್ಲಿ ವಿರಾಮ ಪಡೆಯುತ್ತಿದ್ದೇನೆ. ನನಗೆ ಅನುಮತಿ ನೀಡಿದ ಪಂಜಾಬ್ ತಂಡಕ್ಕೆ ಧನ್ಯವಾದಗಳು. ಮುಂಬರುವ ಪಂದ್ಯಗಳಿಗೆ ಶುಭ ಹಾರೈಕೆಗಳು ಎಂದು ಗೇಲ್ ಹೇಳಿದ್ದಾರೆ.

    ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಗೇಲ್ ಲಭ್ಯ ಇರುವುದಿಲ್ಲ ಎಂದು ಪಂಜಾಬ್ ತಂಡ ಟ್ವೀಟ್ ಮಾಡಿದೆ.

    42 ವರ್ಷದ ಗೇಲ್ ಈ ವರ್ಷ ವೆಸ್ಟ್ ಇಂಡೀಸ್, ಸೈಂಟ್ ಕೀಟ್ಸ್, ನೆವಿಸ್ ಪ್ಯಾಟ್ರಿಯಾಟ್ಸ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲ ಟೂರ್ನಿಗಳು ಬಯೋಬಬಲ್ ಆಡಿಯಲ್ಲಿ ನಡೆದಿತ್ತು. ಹೀಗಾಗಿ ಆಟಗಾರರು ಕೋವಿಡ್ 19 ನಿಯಮವನ್ನು ಉಲ್ಲಂಘಿಸುವಂತಿಲ್ಲ.

  • ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್

    ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್

    ದುಬೈ: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಮೇಲೆ ದಂಡ ಹೇರಲಾಗಿದೆ. 2ನೇ ಬಾರಿ ರಾಜಸ್ಥಾನ ತಂಡ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 24 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

    ಸಂಜು ಸ್ಯಾಮ್ಸನ್ ಅಲ್ಲದೇ ಆಡಿದ 11 ಮಂದಿ ಆಟಗಾರರಿಗೂ ದಂಡ ವಿಧಿಸಲಾಗಿದೆ. ಪ್ರತಿಯೊಬ್ಬರಿಗೂ 6 ಲಕ್ಷ ಅಥವಾ ಪಂದ್ಯದ ವೈಯಕ್ತಿಕ ಶುಲ್ಕದ ಶೇ.25 ರಷ್ಟನ್ನು ದಂಡವಾಗಿ ಪಾವತಿಸಬೇಕು ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    24 ಲಕ್ಷ ಯಾಕೆ?
    ಐಪಿಎಲ್ ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ.

    ಐಪಿಎಲ್‌ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್‌ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ.

    ಪ್ರತಿ ಪಂದ್ಯದಲ್ಲಿ 2 ನಿಮಿಷ 30 ಸೆಕೆಂಡಿನ 4 ಸ್ಟ್ರಟೆಜಿಕ್‌ ಟೈಮ್‌ ಔಟ್‌ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ತಂಡ 6-9 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಎರಡನೇ ಸ್ಟ್ರಟೆಜಿಕ್‌ ಟೈಮ್‌ ಔಟ್‌ ಅನ್ನು ಬ್ಯಾಟಿಂಗ್ ತಂಡ 13-16 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.

    ದಂಡ ಯಾಕೆ?
    ಐಪಿಎಲ್‌ ಅಂದ್ರೆ ಬಿಸಿನೆಸ್‌. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ.

    ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್‌ ಮಾಡಿದರೆ ಅದು ಐಪಿಎಲ್‌ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ. ಇದನ್ನೂ ಓದಿ: ಧೋನಿ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದ ಜಡೇಜಾ

    ಐಪಿಎಲ್‌ಗೆ ಹೆಚ್ಚಿನ ಆದಾಯ ಬರುತ್ತಿರುವುದು ಟಿವಿ ರೈಟ್ಸ್‌ನಿಂದ. ಟಿವಿಯಲ್ಲಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಅದರಲ್ಲೂ 2 ಪಂದ್ಯ ಒಂದೇ ದಿನ ನಿಗದಿಯಾದರೆ ಎರಡನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಯಾಕೆಂದರೆ ಜಾಹೀರಾತುಗಳು ಮೊದಲೇ ಬುಕ್‌ ಆಗಿರುತ್ತದೆ.

    ಏನೇ ಮಾಡಿದರೂ ಶಿಸ್ತು ಇರಬೇಕು. ಹೀಗಾಗಿ ಯಾರಿಗೂ ಸಮಸ್ಯೆ ಆಗದೇ ಇರಲು ಮತ್ತು ಎಲ್ಲ ಸರಿಯಾದ ಸಮಯಕ್ಕೆ ಮುಕ್ತಾಯವಾಗಲು ಪಂದ್ಯ ಮುಗಿಯಲು ಸಮಯವನ್ನು ನಿಗದಿ ಮಾಡಲಾಗಿದೆ. ಹೆಚ್ಚು ಸಮಯ ತೆಗೆದುಕೊಂಡರೆ ದಂಡ ವಿಧಿಸಲಾಗುತ್ತದೆ. ಈ ಕಾರಣಕ್ಕೆ ಶಿಸ್ತುಬದ್ಧವಾಗಿ ನಡೆದುಕೊಂಡ ತಂಡಕ್ಕೆ ಫೇರ್‌ ಪ್ಲೇ ಅಂಕಗಳನ್ನು ನೀಡಲಾಗುತ್ತದೆ. ಇಬ್ಬರು ಫೀಲ್ಡ್‌ ಅಂಪೈರ್‌ ಮತ್ತು ಮೂರನೇ ಅಂಪೈರ್‌ ಈ ಅಂಕವನ್ನು ತಂಡಗಳಿಗೆ ನೀಡುತ್ತಾರೆ.

  • ಹೈದರಾಬಾದ್ ವಿರುದ್ಧ ಡೆಲ್ಲಿಗೆ 8 ವಿಕೆಟ್‍ಗಳ ಭರ್ಜರಿ ಜಯ

    ಹೈದರಾಬಾದ್ ವಿರುದ್ಧ ಡೆಲ್ಲಿಗೆ 8 ವಿಕೆಟ್‍ಗಳ ಭರ್ಜರಿ ಜಯ

    ದುಬೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

    135 ರನ್‍ಗಳ ಗುರಿಯನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 139 ರನ್ ಹೊಡೆದು ಜಯಗಳಿಸಿತು. ಈ ಮೂಲಕ 9 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಸಂಪಾದಿಸಿರುವ ಡೆಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

    ಶಿಖರ್ ಧವನ್ 42 ರನ್(37 ಎಸೆತ, 6 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರೆ ಶ್ರೇಯಸ್ ಅಯ್ಯರ್ ಔಟಾಗದೇ 47 ರನ್(41 ಎಸೆತ, 2 ಬೌಂಡರಿ, 2 ಸಿಕ್ಸರ್) ರಿಷಭ್ ಪಂತ್ ಔಟಾಗದೇ 35 ರನ್(21 ಎಸೆತ, 3 ಬೌಂಡರಿ, 2 ಸಿಕ್ಸರ್) ಚಚ್ಚಿದರು. ಇದನ್ನೂ ಓದಿ: ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಮೊದಲ ಓವರಿನಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟ್ ಕಳೆದುಕೊಂಡಿತ್ತು.

    ವೃದ್ಧಿಮಾನ್ ಸಹಾ 18 ರನ್ ರನ್, ಅಬ್ದುಲ್ ಸಮಾದ್ 28 ರನ್(21 ಎಸೆತ, 2 ಬೌಂಡರಿ, 1 ಸಿಕ್ಸರ್), ರಶೀದ್ ಖಾನ್ 22 ರನ್(19 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು.

    ಕಗಿಸೋ ರಬಡಾ 3 ವಿಕೆಟ್ ಪಡೆದರೆ ಅನ್ರಿಚ್ ನಾಟ್ರ್ಜೆ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.

  • RCB ಹೀನಾಯ ಸೋಲಿಗೆ ಏನಂದ್ರು ಕ್ರಿಕೆಟ್ ಪ್ರೇಮಿಗಳು?

    RCB ಹೀನಾಯ ಸೋಲಿಗೆ ಏನಂದ್ರು ಕ್ರಿಕೆಟ್ ಪ್ರೇಮಿಗಳು?

    ಐಪಿಎಲ್ 14ನೇ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್‌ಗಳ ಭಾರೀ ಅಂತರದ ಸೋಲು ಅನುಭವಿಸಿದೆ.

    ಬೆಂಗಳೂರು: ಕೆಕೆಆರ್ ವಿರುದ್ಧ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಸೋಲು ಅನುಭವಿಸಿದೆ. ಈ ಆವೃತ್ತಿಯ ಮೊದಲ ಸೋಲಿನ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ಮೊದಲ ಪಂದ್ಯ ದೇವರಿಗೆ, ಸೋತರು ಪಾಯಿಂಟ್ ಪಟ್ಟಿಯಲ್ಲಿ ಹತ್ತು ಅಂಕ ಗಳಿಸಿದೆ ಎನ್ನುವ ಮಾತುಗಳು ಆರ್‌ಸಿಬಿ ಅಭಿಮಾನಿಗಳಿಂದ ಕೇಳಿದರೆ, ಬೆಂಗಳೂರು ತಂಡದ ಹೀನಾಯ ಪ್ರದರ್ಶನ, ವಿರಾಟ್ ಕ್ಯಾಪ್ಟನ್ ಇಂದ ಇಳಿದಿದ್ದು ಒಳ್ಳೆಯದಾಯಿತು ಅಂತ ಮತ್ತಷ್ಟು ಜನ ಹೇಳಿದ್ದಾರೆ.

    ‘ಈ ಆಟವು ಸೋತಿರಬಹುದು, ಆದರೆ ಕೊನೆಯಲ್ಲಿ ನಾವು #IPL2021 ಅನ್ನು ಗೆಲ್ತಿವಿ’ ಎಂದು ಮೇಘಶ್ರೀ ಎನ್ನುವವರು ಕೂ ಮಾಡಿದ್ದಾರೆ.

    ‘ಇತಿಹಾಸವನ್ನು ರಚಿಸಲಾಗಿದೆ: ಐಪಿಎಲ್ ಇತಿಹಾಸದಲ್ಲಿ 3 ವಿಭಿನ್ನ ಜೆರ್ಸಿಗಳಲ್ಲಿ ಸೋತ ಮೊದಲ ತಂಡ ಆರ್ಸಿಬಿ’ ಎಂದು ನಿಶ್ಚಿತ್ ಎನ್ನುವವರು ಕೂ ಮಾಡಿದ್ದಾರೆ. ಇದನ್ನೂ ಓದಿ: ಆರ್​ಸಿಬಿಯಿಂದ ಹೀನಾಯ ಪ್ರದರ್ಶನ – ಕೆಕೆಆರ್​ಗೆ 9 ವಿಕೆಟ್‍ಗಳ ಭರ್ಜರಿ ಜಯ

    ‘ನಿನ್ನೆ #ABD ಔಟ್ ಆದಾಗ ಹಾರ್ಟ್ ಬೀಟ್ ನಿಂತಂಗ್ ಆಗಿತ್ತು! ‘ ಎಂದು ಸುದರ್ಶನ್ ಕೂ ಮಾಡಿದ್ದಾರೆ.

    ’11 ಜನ ಆಟಗಾರರಿಗೂ ಬ್ಯಾಟಿಂಗ್ ನೀಡಿ ಮಾನವೀಯತೆ ಮೆರೆದ RCB’ ಎಂದು ಬೇಸರದಲ್ಲಿ ಅಭಿಮಾನಿಯೊಬ್ಬರು ಕೂ ಮಾಡಿದ್ದಾರೆ.


  • ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    – ಯುಎಇನಲ್ಲಿ ನಡೆಸಲು ಬಿಸಿಸಿಐ ನಿರ್ಧಾರ

    ನವದೆಹಲಿ: ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ 2021ರ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿತ್ತು. ಇದೀಗ ಉಳಿದ ಪಂದ್ಯಗಳ ದಿನಾಂಕವನ್ನು ಬಿಸಿಸಿಐ ಪ್ರಕಟಿಸಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

    ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಬಿಸಿಸಿಐ ಸ್ಪೆಷಲ್ ಜನರಲ್ ಮೀಟಿಂಗ್(ಎಸ್‍ಜಿಎಂ) ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದಲ್ಲಿ ಮಳೆಗಾಲ ಆರಂಭವಾಗುವ ಹಿನ್ನೆಲೆ ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಇದೇ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಐಪಿಎಲ್‍ನ ಉಳಿದ ಪಂದ್ಯಗಳು ನಡೆಯಲಿವೆ. ಇದನ್ನೂ ಓದಿ: ಐಪಿಎಲ್ ದ್ವಿತೀಯಾರ್ಧದಲ್ಲಿ ಧೋನಿ ಬ್ಯಾಟ್‍ನಿಂದ ರನ್ ಮಳೆ ಸುರಿಯಲಿದೆ: ದೀಪಕ್ ಚಹರ್

    ಈ ಕುರಿತು ಶನಿವಾರವೇ ಘೊಷಿಸಿರುವ ಬಿಸಿಸಿಐ, ವಿವೋ ಐಪಿಎಲ್-2021 ಸೀಸನ್‍ನ ಉಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್‍ನಲ್ಲಿ ಪಂದ್ಯಗಳು ನಡೆಯಲಿದ್ದು, ಭಾರತದಲ್ಲಿ ಮಾನ್ಸೂನ್ ಆರಂಭವಾಗುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್

    ಕೆಲ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಮೇ 4ರಂದು ಐಪಿಎಲ್-2021ನ್ನು ಮುಂದೂಡಲಾಗಿತ್ತು. ಪಂದ್ಯಾವಳಿ ಮುಂದೂಡುವುದಕ್ಕೂ ಮುನ್ನ 29 ಪಂದ್ಯಗಳು ನಡೆದಿವೆ. ಕೆಕೆಆರ್‍ನ ಇಬ್ಬರು ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಇತರೆ ತಂಡಗಳ ಕೆಲ ಆಟಗಾರರಲ್ಲಿ ಸಹ ಕೋವಿಡ್ ಪತ್ತೆಯಾಗಿತ್ತು. ಹೀಗಾಗಿ ಪಂದ್ಯವನ್ನು ಮುಂದೂಡಲಾಗಿತ್ತು.

  • ಚೆನ್ನೈ ಅದ್ಭುತ ಆಟ, ಆರ್‌ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು: ಕಿಚ್ಚ

    ಚೆನ್ನೈ ಅದ್ಭುತ ಆಟ, ಆರ್‌ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು: ಕಿಚ್ಚ

    ಬೆಂಗಳೂರು: ಐಪಿಎಲ್‍ನ ಹೈ ವೋಲ್ಟೇಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಜಡೇಜಾ ಮ್ಯಾಜಿಕ್‍ನಿಂದಾಗಿ 69 ರನ್ ಗಳಿಂದ ಚೆನ್ನೈ ಭರ್ಜರಿ ಜಯ ಸಾಧಿಸಿದೆ. ಈ ಬಗ್ಗೆ ನಟ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ವೆಲ್ ಪ್ಲೇಯ್ಡ್ ಚೆನ್ನೈ ಸೂಪರ್ ಕಿಂಗ್ಸ್, ಇಲ್ಲಿಂದ ಇನ್ನೂ ಹೆಚ್ಚು ಆಸಕ್ತಿದಾಕವಾಗಿದೆ. ಅಲ್ಲದೆ ಆರ್ ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು. ನಮ್ಮ ಹೃದಯ ಹಾಗೂ ಶುಭಾಶಯ ಯಾವತ್ತೂ ಆರ್ ಸಿಬಿ ಜೊತೆಗೆ ಇರುತ್ತದೆ. ಮುಂದಿನ ಪಂದ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: 1 ಓವರ್‌ನಲ್ಲಿ  5 ಸಿಕ್ಸ್, 1 ಮೇಡನ್ 3 ವಿಕೆಟ್ – ಜಡೇಜಾ ಜಾದೂ, ಚೆನ್ನೈಗೆ 69 ರನ್‍ಗಳ ಭರ್ಜರಿ ಜಯ

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‍ರೌಂಡರ್ ರವೀಂದ್ರ ಜಡೇಜಾ ಮೋಡಿ ಕುರಿತು ಸಹ ಮೆಚ್ಚುಗೆ ವ್ಯಕ್ತಪಡಿಸಿರುವ ಕಿಚ್ಚ, ತುಂಬಾ ಅದ್ಭುತವಾಗಿ ಆಡಿದ್ದೀರಿ, ಇಂದು ನಿಜವಾಗಿಯೂ ನೀವು ಸೂಪರ್ ಮ್ಯಾನ್ ರೀತಿ ಕಂಡಿರಿ, ಸರ್ವಶಕ್ತ ಎಂದು ಹಾಡಿ ಹೊಗಳಿದ್ದಾರೆ.

    ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ 69 ರನ್‍ಗಳಿಂದ ಚೆನ್ನೈ ಗೆದ್ದು ಬೀಗಿದೆ. ರವೀಂದ್ರ ಜಡೇಜಾ ಅವರ ಆಲ್‍ರೌಂಡರ್ ಆಟದಿಂದ ಈ ಭರ್ಜರಿ ಗೆಲುವು ಸಾಧ್ಯವಾಗಿದ್ದು, ಗೆಲ್ಲಲು 192 ರನ್‍ಗಳ ಕಠಿಣ ಗುರಿಯನ್ನು ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ಈ ಮೂಲಕ ಸತತ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು, ಈಗ ಎರಡನೇ ಸ್ಥಾನಕ್ಕೆ ಜಾರಿದೆ. ಚೆನ್ನೈ ಮೊದಲ ಸ್ಥಾನಕ್ಕೆ ಏರಿದೆ.

    ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜಡೇಜಾ ಇಂದು ವಾಷಿಂಗ್ಟನ್ ಸುಂದರ್ ಅವರನ್ನು ಕ್ಯಾಚ್ ಔಟ್ ಮಾಡಿದ್ದರೆ ಮ್ಯಾಕ್ಸ್ ವೆಲ್ ಮತ್ತು ಎಬಿಡಿ ವಿಲಿಯರ್ಸ್ ಅವರನ್ನು ಬೌಲ್ಡ್ ಮಾಡಿದರು. ಅಷ್ಟೇ ಅಲ್ಲದೇ ಡೇನಿಯಲ್ ಕ್ರಿಸ್ಟಿಯನ್ ಅವರನ್ನು ರನೌಟ್ ಮಾಡಿದರು. ಅಂತಿಮವಾಗಿ ಜಡೇಜಾ 4 ಓವರ್‍ಗಳ ಕೋಟಾದಲ್ಲಿ 1 ಮೇಡನ್ ಮಾಡಿ 13 ರನ್ ನೀಡಿ 4 ವಿಕೆಟ್ ಕಿತ್ತರು.