Tag: IPL 2018

  • ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗೌತಮ್ ಗಂಭೀರ್!

    ನವದೆಹಲಿ: ಐಪಿಎಲ್ 2018 ರ 11ನೇ ಆವೃತ್ತಿಯಲ್ಲಿ ಸತತ ನಿರಾಸ ಪ್ರದರ್ಶನ ತೋರಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದು, ಯುವ ಆಟಗಾರ ಶ್ರೇಯಸ್ ಅಯ್ಯರ್ ಗೆ ನಾಯಕತ್ವ ಪಟ್ಟ ನೀಡಲಾಗಿದೆ.

    ಡೆಲ್ಲಿ ತಂಡದ ನಾಯಕತ್ವ ವಹಿಸಿದ್ದ ಗೌತಮ್ ಗಂಭೀರ್ ತಂಡದ ನಿರಾಸ ಪ್ರದರ್ಶನದ ಹೊಣೆ ಹೊತ್ತು ಸ್ವತಃ ನಾಯಕತ್ವ ಪಟ್ಟದಿಂದ ಬುಧವಾರ ಹಿಂದೆ ಸರಿದಿದ್ದಾರೆ. ಗಂಭೀರ್ ನಾಯಕತ್ವ ಪಟ್ಟದಿಂದ ಕೆಳಗಿಳಿದ ಕಾರಣ ಡೆಲ್ಲಿ ತಂಡದ ಮ್ಯಾನೇಜ್‍ಮೆಂಟ್ ಶ್ರೇಯಸ್ ಅವರನ್ನು ನಾಯಕರನ್ನಾಗಿ ನೇಮಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಂಭೀರ್ ನಾಯಕತ್ವ ತೊರೆಯುವ ಸಂಗತಿ ನನ್ನ ಸ್ವತಃ ನಿರ್ಧಾರವಾಗಿದ್ದು, ತನ್ನ ಮೇಲೆ ಯಾರ ಒತ್ತಡವು ಇಲ್ಲ. ಅಲ್ಲದೇ ನನ್ನ ನಿರ್ಧಾರದ ಕುರಿತು ತಂಡದ ಮ್ಯಾನೇಜ್ ಮೆಂಟ್ ಗೆ ತಿಳಿಸಿದ ಬಳಿಕ ಹಲವು ಸುತ್ತು ಚರ್ಚೆಗಳು ನಡೆಸಲಾಗಿದೆ ಎಂದರು.

    ಟೂರ್ನಿಯಲ್ಲಿ ಇದುವರೆಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡ 6 ಪಂದ್ಯಗಳನ್ನು ಆಡಿದೆ. ಉಳಿದಂತೆ 8 ರ ಘಟಕ್ಕೆ ತಲುಪಲು ಇನ್ನು 8 ಪಂದ್ಯಗಳನ್ನು ಆಡಬೇಕಿದೆ. ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಪಡೆದಿದೆ. ಟೂರ್ನಿಯಲ್ಲಿಯ ಮಧ್ಯದಲ್ಲಿ ತಂಡದ ನಾಯತ್ವ ಬದಲಾವಣೆ ಮಾಡುವುದು ತಂಡದ ಮೇಲೆ ಋಣಾತ್ಮಕ ಪ್ರಭಾವ ಉಂಟು ಮಾಡಲಿದೆ ಎಂಬ ಅಂಶದ ಬಳಿಕವೂ ಗಂಭೀರ್ ಅವರ ನಿರ್ಧಾರದ ಮೇರೆಗೆ ಈ ಬದಲಾವಣೆ ಮಾಡಲಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯದ ಸೋಲಿನ ಬಳಿಕ ಗಂಭೀರ್ ತಂಡದ ನಾಯಕತ್ವ ತೊರೆಯುವ ನಿರ್ಧಾರವನ್ನು ತಂಡದ ಮ್ಯಾನೇಜ್ ಮೆಂಟ್ ಮುಂದೇ ತಿಳಿಸಿದ್ದರು. ಬಳಿಕ ಹಲವು ಬಾರಿ ಚರ್ಚೆ ನಡೆಸಿ ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಟಿಂಗ್ ಹಾಗೂ ಗಂಭೀರ್ ಜಂಟಿಯಾಗಿ ನಿರ್ಧಾರ ಪ್ರಕಟಿಸಿದ್ದಾರೆ.

    ನಾಯಕತ್ವದ ಬದಲಾವಣೆ ನಿರ್ಧಾರದಿಂದ ಮುಂದಿನ ಕೊಲ್ಕತ್ತಾ ವಿರುದ್ಧದ ಪಂದ್ಯವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಗಂಭೀರ್ ಅವರ ಈ ನಿರ್ಧಾರಕ್ಕೆ ವೈಯಕ್ತಿಕವಾಗಿ ಅವರು ತಂಡಕ್ಕೆ ರನ್ ಕೊಡುಗೆ ನೀಡದಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಟೂರ್ನಿಯಲ್ಲಿ ಗಂಭೀರ್ ಒಂದು ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು, ಬಳಿಕ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಟೂರ್ನಿಯಲ್ಲಿ ಒಟ್ಟಾರೆ 6 ಪಂದ್ಯಗಳಿಂದ ಗಂಭೀರ್ 85 ರನ್ ಗಳಿಸಿದ್ದಾರೆ. ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಕೊಲ್ಕತ್ತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಎರಡು ಬಾರಿ ಕಪ್ ಗೆಲ್ಲಲು ಕಾರಣರಾಗಿದ್ದರು.

    ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್ ಕಳೆದ ಆರ್ ಸಿಬಿ ಹಾಗೂ ಚೆನ್ನೈ ತಂಡಗಳ ವಿರುದ್ಧ ಅರ್ಧಶತಕ ಗಳಿಸಿ ಮಿಂಚಿದ್ದರು. ಆದರೆ ಈ ಎರಡು ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಪಡೆಯಲು ವಿಫಲವಾಗಿತ್ತು.

  • ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ಮೊಹಾಲಿ: ಐಪಿಎಲ್ 2018 ರ ಆವೃತ್ತಿಗೆ ಸೆಹ್ವಾಗ್ ನನ್ನನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ಅನ್ನು ರಕ್ಷಿಸಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹಾಸ್ಯದ ಟ್ವೀಟ್ ಮಾಡಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಗೇಲ್ ಶತಕ ಸಿಡಿಸಿ ಪಂಜಾಬ್ ಗೆಲುವಿಗೆ ಕಾರಣರಾಗಿದ್ದರು. ಈ ಕುರಿತು ಸಂತೋಷ ಹಂಚಿಕೊಂಡ ಸೆಹ್ವಾಗ್ ಕ್ರಿಸ್ ಗೇಲ್‍ರನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ರಕ್ಷಣೆ ಮಾಡಿರುವುದಾಗಿ ಗೇಲ್ ರ ಕಾಲೆಳೆದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೇಲ್ ಹೌದು ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ಎಲ್ಲರೂ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಸಲಹೆ ನೀಡಿದರು. ಆದರೆ ಇಲ್ಲಿ ನನ್ನ ಹೆಸರಿಗೆ ಗೌರವ ಗಳಿಸಲು ಮಾತ್ರ ಇರುವುದಾಗಿ ಹೇಳಿದ್ದಾರೆ.

    ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೇಲ್ ರನ್ನು ತಂಡಕ್ಕೆ ಪಡೆಯಲು ಐಪಿಎಲ್ ಫ್ರಾಂಚೈಸಿಗಳು ಹಿಂದೇಟು ಹಾಕಿತ್ತು. ಈ ವೇಳೆ ಕಿಂಗ್ಸ್ ಇಲೆವೆನ್ ತಂಡದ ಮೆಂಟರ್ ಆಗಿದ್ದ ಸೆಹ್ವಾಗ್ ಗೇಲ್‍ರನ್ನು ಮೂಲ ಬೆಲೆಗೆ 2ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಕನ್ನಡಿಗ ಕೆ.ಎಲ್ ರಾಹುಲ್ ಕ್ರಿಸ್ ಗೇಲ್ ಆಟದ ಕುರಿತು ಎಲ್ಲಾ ತಂಡದ ಬೌಲರ್ ಗಳಿಗೂ ಎಚ್ಚರಿಕೆ ನೀಡಿದ್ದರು.

    ಸದ್ಯ ಇದನ್ನು ಸಾಬೀತು ಪಡಿಸಿರುವ ಗೇಲ್ ಹೈದರಾಬಾದ್ ವಿರುದ್ಧ ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಶತಕ ಸಿಡಿಸಿದರು. ಈ ಮೂಲಕ 2018 ಐಪಿಎಲ್ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಐಪಿಎಲ್ ನಲ್ಲಿ ಅತೀಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ 279 ಸಿಕ್ಸರ್ ಮೂಲಕ ಗೇಲ್ ಮೊದಲ ಸ್ಥಾನ ಪಡೆದಿದ್ದಾರೆ. ನಂತರದಲ್ಲಿ ರೋಹಿತ್ ಶರ್ಮಾ(179), ರೈನಾ(174), ಎಬಿಡಿವಿಲಿಯರ್ಸ್(167), ಕೊಹ್ಲಿ(166) ಸ್ಥಾನ ಪಡೆದಿದ್ದಾರೆ.

  • ಆರ್‌ಸಿಬಿ ಟೀಂ ಭೇಟಿಗೆ ತೆರಳಿದ್ದ ಮಿ.ನಾಗ್ ಮೇಲೆ ಗುಡುಗಿದ ವಿರಾಟ್ ಕೊಹ್ಲಿ

    ಆರ್‌ಸಿಬಿ ಟೀಂ ಭೇಟಿಗೆ ತೆರಳಿದ್ದ ಮಿ.ನಾಗ್ ಮೇಲೆ ಗುಡುಗಿದ ವಿರಾಟ್ ಕೊಹ್ಲಿ

    ಬೆಂಗಳೂರು: ಹಿಂದಿನ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಗೆಲವು ಪಡೆದಿದ್ದ ಆರ್‌ಸಿಬಿ ತಂಡ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿತ್ತು. ಈ ವೇಳೆ ಆರ್‌ಸಿಬಿ ಟೀಂ ಉಳಿದುಕೊಂಡಿರುವ ಹೋಟೆಲ್‍ಗೆ ಬಂದಿದ್ದ ಮಿ.ನಾಗ್ ಮೇಲೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗುಡುಗಿದ್ದಾರೆ.

    ಎಂದಿನಂತೆ ಮೋಜು ಮಸ್ತಿಯಲ್ಲಿ ತೊಡಗಿದ್ದ ನಾಗ್ ಎಲ್ಲ ಆಟಗಾರರೊಂದಿಗೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ರು. ಮಿ.ನಾಗ್ ಪ್ರಶ್ನೆಗಳನ್ನು ಕೇಳಿದ ವಿರಾಟ್ ಕೊಹ್ಲಿ ಕೋಪಗೊಂಡಿದ್ದಾರೆ.

    ನಾಗ್ ಹೇಳಿದ್ದೇನು?: ಕರ್ನಾಟಕದಲ್ಲಿ ಚುನಾವಣೆ ಬರುತ್ತಿದೆ ಹಾಗಾಗಿ ಎಲ್ಲ ಆಟಗಾರರು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕೆಂದು ಹೇಳುತ್ತಿದ್ದರು. ಹಲವಾರು ಜನ ನನಗೆ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಮಾಡಿಸುವುದರ ಬಗ್ಗೆ ಪ್ರಶ್ನಿಸಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಎಲ್ಲರ ಹತ್ತಿರ ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಇರಬೇಕೆಂದು ನನ್ನ ಆಶಯ. ಆರ್‌ಸಿಬಿ ಟೀಂನಲ್ಲಿರುವ ಭಾರತ ಆಟಗಾರರಲ್ಲದೇ ವಿದೇಶಿ ಆಟಗಾರರು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಮಾಡಿಸಬೇಕೆಂದು ಮಿ. ನಾಗ್ ಹೇಳುತ್ತಿದ್ದರು. ಅಷ್ಟೇ ಅಲ್ಲದೇ ಆಧಾರ್ ಕಾರ್ಡ್ ಗಾಗಿ ಮಿ. ನಾಗ್ ಹಲವು ಆಟಗಾರರ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಂಡರು. ಇದೇ ವಿಷಯಕ್ಕಾಗಿ ಮಿ.ನಾಗ್ ಮತ್ತು ಅವರ ಕ್ಯಾಮೆರಾಮೆನ್ ನಡುವೆ ವಾಗ್ವಾದವು ನಡೆಯಿತು.

    ಸಮಯ ವ್ಯರ್ಥ: ಮಿ. ನಾಗ್‍ನ ಈ ವರ್ತನೆಯಿಂದ ವಿರಾಟ್ ಕೊಹ್ಲಿ ಅವರ ಮೇಲೆ ಕೋಪಗೊಂಡು, ನೀವು ಯಾವಾಗಲೂ ಜನರ ಸಮಯವನ್ನು ಹಾಳು ಮಾಡುತ್ತೀರ. ಪ್ರತಿ ವರ್ಷ ಹೀಗೆ ಮಾಡುತ್ತೀರ. ನೀನು ನಿನ್ನ ಬ್ಲಡಿ ಹೇರ್ ಬ್ಯಾಂಡ್ ಕೂಡ ಚೇಂಜ್ ಮಾಡಿಲ್ಲ ಎಂದು ವಿರಾಟ್ ಕೊಹ್ಲಿ ಅಸಮಾಧಾನ ಹೊರ ಹಾಕಿದ್ರು.

    ನನಗೆ ಇದು ಅರ್ಥವಾಗುತ್ತಿಲ್ಲ. ನನ್ನ ಆಧಾರ್ ಕಾರ್ಡ್ ಯಾಕೆ ಮಾಡಲಾಗುತ್ತಿದೆ. ನನಗೆ ಬೆಂಗಳೂರು ಎಂದರೆ ಇಷ್ಟ. ಹಾಗಾಂತ ನಾನು ವೋಟ್ ಮಾಡಲು ಸಾಧ್ಯವಿಲ್ಲ ಎಂದು ನ್ಯೂಜಿಲೆಂಡ್ ಆಟಗಾರ ಬ್ರೆಂಡಮ್ ಮೆಕಲಮ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ವಿದೇಶಿಗರು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಏಕೆ ಮಾಡಿಸಬೇಕು, ಅವರು ಇಲ್ಲಿ ಇರುವುದ್ದೀಲ್ಲ. ಇದ್ದೆಲ್ಲ ಯಾಕೆ ಎಂದು ಯಜುವೆಂದರ್ ಚಹಲ್ ಹೇಳಿದ್ದರು.

    ಈ ಕುರಿತು ಮಾತನಾಡಿದ ಮಿ.ನಾಗ್, ಇದೊಂದು ಫನ್ನಿ ವಿಡಿಯೋ ಇದಾಗಿದ್ದು, ಈ ಬಾರಿ ಎಲ್ಲರೂ ತಮ್ಮ ಬೆರಳನ್ನು ವೋಟ್ ಮಾಡೋಕ್ಕೆ ಉಪಯೋಗಿಸಬೇಕೆಂಬ ಸಂದೇಶವನ್ನು ನೀಡಿದ್ದಾರೆ.

    https://www.youtube.com/watch?v=xxJ0f8MYoiM

  • ಅಣ್ಣನ ಬೌಲಿಂಗ್‍ನಲ್ಲಿ ಸೂಪರ್ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ನೋಡಿ

    ಅಣ್ಣನ ಬೌಲಿಂಗ್‍ನಲ್ಲಿ ಸೂಪರ್ ಕ್ಯಾಚ್ ಹಿಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ನೋಡಿ

    ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್, ಕೃನಾಲ್ ಎಸೆತದಲ್ಲಿ ಸಿಡಿಸಿದ ಚೆಂಡನ್ನು ಡೈವ್ ಮಾಡಿ ಹಿಡಿಯುವ ಮೂಲಕ ಹಾರ್ದಿಕ್ ಪಾಂಡ್ಯ ಸೂಪರ್ ಕ್ಯಾಚ್ ಹಿಡೆದಿದ್ದಾರೆ. ಈ ಮೂಲಕ ಪಾಂಡ್ಯ ಸಹೋದರರು ಮೋಡಿ ಮಾಡಿದ್ದಾರೆ.

    ಮುಂಬೈ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿ ತಂಡದ ಪರ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಮ್ಯಾಕ್ಸ್ ವೆಲ್ ಕೇವಲ 6 ಎಸೆತಗಳಲ್ಲಿ 13 ರನ್ ಸಿಡಿಸಿದ್ದರು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಕೃನಾಲ್ ಪಾಂಡ್ಯ ಮ್ಯಾಕ್ಸ್ ವೆಲ್ ರನ್ನು ಔಟ್ ಮಾಡಿದರು. ಕೃನಾಲ್ ೆಸೆತದಲ್ಲಿ  13 ಓವರ್ 2ನೇ ಬಾರಿ ಹೊಡೆತಕ್ಕೆ ಮುಂದಾದ ಮಾಕ್ಸ್ ವೆಲ್ ಬೌಂಡರಿಯತ್ತ ಬಾಲ್ ಸಿಡಿಸಿದರು. ಈ ವೇಳೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ರನ್ನಿಂಗ್ ಡೈವ್ ಹೊಡೆದು ಕ್ಯಾಚ್ ಹಿಡಿದರು.

    ಇದಕ್ಕೂ ಮುನ್ನ ಕೇವಲ 25 ರನ್ ಎಸೆತಗಳಿಂದ 47 ಸಿಡಿಸಿದ್ದ ರಿಷಭ್ ಪಂತ್ ರ ವಿಕೆಟನ್ನು ಕೃನಾಲ್ ಪಾಂಡ್ಯ ಪಡೆದಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದ್ದು, ಪಾಂಡ್ಯ ಸಹೋದರರಿಗೆ ಅಭಿಮಾನಿಗಳು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

    ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಮುಂಬೈ ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಸೋಲುವ ಮೂಲಕ ಟೂರ್ನಿಯಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದೆ. ಮತ್ತೊಂದೆಡೆ ಮುಂಬೈ ವಿರುದ್ಧದ ಗೆಲುವಿನ ಸವಿ ಪಡೆದ ಡೆಲ್ಲಿ  7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಜಯದ ಖಾತೆ ತೆರೆದಿದೆ.

  • 1 ವಿಕೆಟ್ ಪಡೆದು ಮಿಂಚಿದ ರಶೀದ್ ಖಾನ್‍ಗೆ ಪಂದ್ಯಶ್ರೇಷ್ಠ ಗೌರವ!

    1 ವಿಕೆಟ್ ಪಡೆದು ಮಿಂಚಿದ ರಶೀದ್ ಖಾನ್‍ಗೆ ಪಂದ್ಯಶ್ರೇಷ್ಠ ಗೌರವ!

    ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಬೌಲರ್ ರಶೀದ್ ಖಾನ್ 1 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿದ್ದಾರೆ.

    ಪಂದ್ಯದಲ್ಲಿ ರಶೀದ್ ಖಾನ್ 4 ಓವರ್ ಬೌಲಿಂಗ್ ಮಾಡಿದ್ದರು. 4 ಓವರ್ ನಲ್ಲಿ 13 ರನ್ ನೀಡಿದ್ದರು. ಇವರ ಬಾಲಿಗೆ ರನ್ ಗಳಿಸಲು ಮುಂಬೈ ಆಟಗಾರರು ಪರದಾಡಿದ್ದರು. 24 ಎಸೆತಗಳ ಪೈಕಿ 18 ಬಾಲಿಗೆ ಯಾವುದೇ ರನ್ ಬಂದಿರಲಲ್ಲ. ರಶೀದ್ ಖಾನ್ 2 ಬೌಂಡರಿ ಮತ್ತು ಒಂದು ವೈಡ್ ಮಾತ್ರ ನೀಡಿದ್ದರು. ಪಂದ್ಯದಲ್ಲಿ ರಶೀದ್ ಖಾನ್ 3.25 ಎಕಾನಮಿಯಲ್ಲಿ ಬೌಲಿಂಗ್ ಮಾಡಿ ರನ್ನಿಗೆ ಕಡಿವಾಣ ಹಾಕಿದ್ದರು.

    ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್‍ಗಳಿಸಿತ್ತು. 148 ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಪಂದ್ಯ ಗೆದ್ದಿತ್ತು. ಕೊನೆಯ ಓವರ್ ನಲ್ಲಿ 11 ರನ್ ಬೇಕಿತ್ತು. ಕಟ್ಟಿಂಗ್ ಎಸೆದ ಮೊದಲ ಎಸೆತವನ್ನು ಹೂಡ ಸಿಕ್ಸರ್ ಗೆ ಅಟ್ಟಿದ್ದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಂದ ಕಾರಣ ಹೈದರಾಬಾದ್ ತಂಡ ಜಯಗಳಿಸಿತು.

    ಹೈದರಾಬಾದ್ ಪರ ಸಂದೀಪ್ ಶರ್ಮಾ, ಸ್ಟ್ಯಾನ್‍ಲೇಕ್, ಕೌಲ್ ತಲಾ ಎರಡು ವಿಕೆಟ್ ಪಡೆದರೆ, ರಶೀದ್ ಖಾನ್ ಮತ್ತು ಶಕೀಬ್ ಉಲ್ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು.

  • `49 ರನ್’ಗೆ ಆಲೌಟ್ ಮಾಡಿದ್ದ ಆಟಗಾರರ ವಿರುದ್ಧ RCB ಸ್ವೀಟ್ ರಿವೆಂಜ್

    `49 ರನ್’ಗೆ ಆಲೌಟ್ ಮಾಡಿದ್ದ ಆಟಗಾರರ ವಿರುದ್ಧ RCB ಸ್ವೀಟ್ ರಿವೆಂಜ್

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಬಾರಿ ಟೂರ್ನಿಯಲ್ಲಿ ತಮ್ಮನ್ನು 49 ರನ್ ಗಳಿಗೆ ಆಲೌಟ್ ಮಾಡಿದ್ದ ಆಟಗಾರರ ಮೇಲೆ ಸ್ವೀಟ್ ರಿವೆಂಜ್ ತಿರಿಸಿಕೊಂಡಿದ್ದು, ತಾವು ಕಡಿಮೆ ಮೊತ್ತಕ್ಕೆ ಆಲೌಟ್ ಆಗಲು ಕಾರಣರಾಗಿದ್ದ ನಾಲ್ಕು ವೇಗದ ಬೌಲರ್‍ಗಳನ್ನು ಈ ಬಾರಿ ಖರೀದಿಸಿದೆ.

    ಈ ಬಾರಿಯ ಹರಾಜಿನ ವೇಳೆ ಆರ್ ಸಿಬಿ ಅಚ್ಚರಿ ಎನ್ನುವಂತೆ ಕಳೆದ ಬಾರಿ ತಮ್ಮ ತಂಡ ಸೋಲಿಗೆ ಕಾರಣವಾಗಿದ್ದ ಕ್ರಿಸ್ ವೋಕ್ಸ್ (7.4 ಕೋಟಿ ರೂ.), ಉಮೇಶ್ ಯಾದವ್ (4.2 ಕೋಟಿ ರೂ.), ನಾಥನ್ ಕೌಲ್ಟರ್-ನೈಲ್ ಮತ್ತು ಕಾಲಿನ್ ಡೆ ಗ್ರಾಂಡ್ ಹೋಮ್ (ತಲಾ 2.2 ಕೋಟಿ ರೂ.) ರನ್ನು ಖರೀದಿಸಿದೆ. ಈ ಮೂಲಕ ಆರ್ ಸಿಬಿ ತನ್ನ ತಂಡದ ಬೌಲಿಂಗ್ ಸಾಮರ್ಥ್ಯನ್ನು ಹೆಚ್ಚಿಸಿಕೊಂಡಿದೆ.

    ಐಪಿಎಲ್ ಟೂರ್ನಿ ಆರಂಭದಿಂದಲೂ ಬ್ಯಾಂಟಿಂಗ್ ನಲ್ಲಿ ಉತ್ತಮ ತಂಡವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪ್ರಾಂಚೈಸಿಗಳು ಉತ್ತಮ ಬೌಲರ್ ಗಳನ್ನು ಆಯ್ಕೆ ಮಾಡುವುದರಲ್ಲಿ ವಿಫಲವಾಗುತಿತ್ತು. ಆದರೆ ಈ ಬಾರಿ ಆರ್ ಸಿಬಿ ಉತ್ತಮ ತಂಡವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ‌.

    ಐಪಿಎಲ್ 2017ರ ಟೂರ್ನಿಯ 27ನೇ ಪಂದ್ಯದ ಕೋಲ್ಕತ್ತಾ ಹಾಗೂ ಆರ್ ಸಿಬಿ ತಂಡಗಳ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಕೋಲ್ಕತ್ತಾ 131 ರನ್‍ಗಳ ಅಂತರದಲ್ಲಿ ಭಾರೀ ಗೆಲುವು ಪಡೆದಿತ್ತು. ಆರ್ ಸಿಬಿ ಪರ ಯಾವೊಬ್ಬ ಆಟಗಾರ ಸಹ ಎರಡಂಕ್ಕಿಯನ್ನು ದಾಟದೆ ತಂಡ ಕೇವಲ 49 ರನ್ ಗಳಿಗೆ ಆಲೌಟ್ ಆಗಿತ್ತು.

    ಈ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ಪರ ಕ್ರಿಸ್ ವೋಕ್ಸ್, ನಾಥನ್ ಕೌಲ್ಟರ್-ನೈಲ್ ಮತ್ತು ಕಾಲಿನ್ ಡೆ ಗ್ರಾಂಡ್ ಹೋಮ್ ತಲಾ 3 ವಿಕೆಟ್ ಪಡೆದರೆ. ಉಮೇಶ್ ಯಾದವ್ 1 ವಿಕೆಟ್ ಪಡೆದು ಆರ್ ಸಿಬಿ ಸೋಲಿಗೆ ಕಾರಣರಾಗಿದ್ದರು. ಆದರೆ ಈ ಬಾರಿ ನಾಲ್ಕು ಬೌಲರ್ ಗಳು ಆರ್ ಸಿಬಿ ತಂಡದ ಪರ ಆಡಲಿದ್ದಾರೆ. ಈ ಮೂಲಕ ಆರ್ ಸಿಬಿ ಪ್ರಾಂಚೈಸಿಗಳು ಸ್ವೀಟ್ ರಿವೆಂಜ್ ತೋರಿಸಿದ್ಧಾರೆ.