Tag: IPL 2018

  • ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಕೊನೆ ಸ್ಥಾನದಲ್ಲಿ ಹೊರಬಿದ್ದ ತಂಡ ಎನಿಸಿಕೊಂಡರೂ ತಂಡದ ಯುವ ಆಟಗಾರ ರಿಷಭ್ ಪಂತ್ ವೈಯಕ್ತಿಕವಾಗಿ ದಾಖಲೆ ನಿರ್ಮಿಸಿದ್ದಾರೆ.

    ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಂತ್ ಅರ್ಧ ಶತಕ (44 ಎಸೆತ, 64 ರನ್) ಸಿಡಿಸಿ ಮಿಂಚಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಸಹ ಪಡೆದರು. ಇನ್ನು ಟೂರ್ನಿಯಲ್ಲಿ ಒಟ್ಟಾರೆ 684 ರನ್ ಸಿಡಿಸಿದ ಪಂತ್ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಮೂಲಕ ಈ ಹಿಂದೆ ಕೆಕೆಆರ್ ಪರ 2014 ರಲ್ಲಿ ರಾಬಿನ್ ಉತ್ತಪ್ಪ (660 ರನ್) ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

    ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಪಂತ್ ದಾಖಲೆಯನ್ನು ಮುರಿಯುವ ಅವಕಾಶವಿತ್ತು. ಆದರೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ 7 ರನ್ ಗಳಿಸಿ ಟೂರ್ನಿಯಲ್ಲಿ ಒಟ್ಟಾರೆ 659 ರನ್ ಗಳೊಂದಿಗೆ ರಾಹುಲ್ ಈ ಐಪಿಎಲ್ ಆವೃತ್ತಿಯನ್ನು ಮುಕ್ತಾಯಗೊಳಿಸಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

    20 ವರ್ಷದ ಪಂತ್ ಟೂರ್ನಿಯಲ್ಲಿ 52.61 ಸರಾಸರಿ ಹಾಗೂ 173.60 ಸ್ಟ್ರೈಕ್ ರೇಟ್ ನಲ್ಲಿ 684 ರನ್ ಸಿಡಿಸಿದ್ದು, ಇದರಲ್ಲಿ 5 ಅರ್ಧ ಶತಕ ಹಾಗೂ ದಾಖಲೆಯ ಅಜೇಯ 128 ರನ್ ಗಳ ಶತಕವೂ ಸೇರಿದೆ. ಅಲ್ಲದೇ ಈ ಟೂರ್ನಿಯದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ಪಂತ್ ಹೊಂದಿದ್ದು, ಒಟ್ಟಾರೆ 37 ಸಿಕ್ಸರ್ ಸಿಡಿಸಿದ್ದಾರೆ.

    ಡೆಲ್ಲಿ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂಬೈ ತಂಡದವನ್ನು ಪ್ಲೇ ಆಫ್ ನಿಂದ ದೂರ ಮಾಡಿತ್ತು. ಇದರಲ್ಲಿ 64 ರನ್ ಸಿಡಿಸಿ ಪಂತ್ ತಂಡದ ಗೆಲುವಿಗೆ ಕಾರಣರಾಗಿದ್ದರು.

  • ಮೈದಾನದಲ್ಲೇ ತಮ್ಮ ಜರ್ಸಿ ಬದಲಿಸಿಕೊಂಡ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ -ವಿಡಿಯೋ ನೋಡಿ

    ಮೈದಾನದಲ್ಲೇ ತಮ್ಮ ಜರ್ಸಿ ಬದಲಿಸಿಕೊಂಡ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ -ವಿಡಿಯೋ ನೋಡಿ

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್, ಮುಂಬೈ ನಡುವಿನ ಪಂದ್ಯದ ಬಳಿಕ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ತಂಡದ ಟಿ-ಶಾರ್ಟ್ ಗಳನ್ನು ಪರಸ್ಪರ ಬದಲಿಸಿಕೊಂಡಿದ್ದಾರೆ.

    ಈ ಹಿಂದೆ ಪುಟ್ಬಾಲ್ ಪಂದ್ಯವಾಳಿಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಇಂತಹ ದೃಶ್ಯಗಳು ಕ್ರಿಕೆಟ್‍ನಲ್ಲೂ ಕಂಡಿತು. ಇದೇ ಮೊದಲ ಬಾರಿಗೆ ಆಟಗಾರರು ಪರಸ್ಪರ ಗೌರವದ ಸಂಕೇತವಾಗಿ ತಮ್ಮ ತಂಡಗಳ ಜರ್ಸಿಗಳನ್ನು ನೆರೆದಿದ್ದ ಸಾವಿರು ಅಭಿಮಾನಿಗಳ ಮುಂದೆಯೇ ಬದಲಾಯಿಸಿಕೊಂಡರು.

    ಈ ಪಂದ್ಯದಲ್ಲಿ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ಕೇವಲ 60 ಎಸೆತಗಳಲ್ಲಿ 94 ರನ್ ಸಿಡಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ಆದರೆ ಕೆಎಲ್ ರಾಹುಲ್ ಹೋರಟದ ನಡುವೆಯೂ ಮುಂಬೈ 3 ರನ್ ಗಳ ರೋಚಕ ಗೆಲುವು ಪಡೆಯಿತು. ಈ ಮೂಲಕ ಮುಂಬೈ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು.

    ಮುಂಬೈ ಪರ ಮಿಂಚಿನ ಬೌಲಿಂಗ್ ನಡೆಸಿದ ಬುಮ್ರಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಮುಂಬೈ ತಂಡಕ್ಕೆ ಮುಳುವಾಗಿದ್ದ ಕೆಎಲ್ ರಾಹುಲ್ ವಿಕೆಟ್ ಸಹ ಬುಮ್ರಾ ಉರುಳಿಸಿದ್ದರು. ಸದ್ಯ ಪಾಂಡ್ಯ ಹಾಗೂ ಕೆಎಲ್ ರಾಹುಲ್ ತಂಡದ ಜರ್ಸಿ ಬದಲಾಯಿಸಿದ ವಿಡಿಯೋವನ್ನು ಪಾಂಡ್ಯ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಇಬ್ಬರ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.

    https://twitter.com/prashan23S/status/996824768656556032?

  • ದಾಖಲೆಯ ಶತಕ ಸಿಡಿಸಿದ ರಿಷಭ್ ಪಂತ್ – ಕ್ರಿಕೆಟ್ ಅಭಿಮಾನಿಗಳು ಫಿದಾ

    ದಾಖಲೆಯ ಶತಕ ಸಿಡಿಸಿದ ರಿಷಭ್ ಪಂತ್ – ಕ್ರಿಕೆಟ್ ಅಭಿಮಾನಿಗಳು ಫಿದಾ

    ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಡೆಲ್ಲಿ ತಂಡದ ಯುವ ಆಟಗಾರ ರಿಷಭ್ ಪಂತ್ ದಾಖಲೆ ಶತಕ ಸಿಡಿಸಿದ್ದು, ಐಪಿಎಲ್ ನ 50 ನೇ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಫಿರೋಜ್ ಶಾ ಕೋಟ್ಲಾ ಮೈಧಾನದಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ ರಿಷಭ್ 63 ಎಸೆತಗಳಲ್ಲಿ 128 ರನ್ (15 ಬೌಂಡರಿ, 7 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ವಿಶೇಷವಾಗಿ ಇನ್ನಿಂಗ್ಸ್ ನ ಕೊನೆಯ ಓವರ್ ಎಸೆದ ಭುವನೇಶ್ವರ್ ಬೌಲಿಂಗ್ ನಲ್ಲಿ 26 ರನ್ ಸಿಡಿಸಿದರು.

    ಈ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರಿಷಭ್ ಐಪಿಎಲ್ ನಲ್ಲಿ ಶತಕ ಗಳಿಸಿದ 31 ಆಟಗಾರ ಹಾಗೂ ಭಾರತದ 13ನೇ ಆಟಗಾರ ಎನಿಸಿಕೊಂಡರು. ಅಲ್ಲದೇ ಈ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಕೂಡ ಆಗಿದ್ದಾರೆ. ಅಲ್ಲದೇ ಭಾರತದ ಪರ ಐಪಿಎಲ್ ನಲ್ಲಿ ಆತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ರಿಷಬ್ ಶತಕ ನಡುವೆಯೂ ಹೈದರಾಬಾದ್ ತಂಡ ಪಂದ್ಯದಲ್ಲಿ ಗೆಲುವು ಪಡೆಯಿತು.

    ಭಾರತೀಯ ಆಟಗಾರರ ಪೈಕಿ ಕಿಂಗ್ಸ್ ಇಲೆವನ್ ಪಂಜಾಬ್‍ನ ಮುರಳಿ ವಿಜಯ್ 128 ರನ್ ಗಳಿಸಿದ್ದರೆ, ಈ ಹಿಂದೆ ಪಂಜಾಬ್ ಪರ ಆಡಿದ್ದ ಸೆಹ್ವಾಗ್ 122 ರನ್ ಹೊಡೆದಿದ್ದರು.

    ಈ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಕೀ ಬೌಲರ್ ಎಂದೇ ಕರೆಸಿಕೊಂಡಿದ್ದ ಭುವನೇಶ್ವರ್ ಕುಮಾರ್ ಹಾಗೂ ರಷೀದ್ ಖಾನ್ ಬೌಲಿಂಗ್ ನಲ್ಲೇ ಅತೀ ರನ್ ಸಿಡಿಸಿದ ಪಂತ್ ಬ್ಯಾಟಿಂಗ್ ಹಲವು ಅಭಿಮಾನಿಗಳು ಫಿದಾ ಆಗಿದ್ದಾರೆ. ಐಪಿಎಲ್ ನಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿರುವ ಪಂತ್ 1 ಸಾವಿರ ರನ್ ಪೂರ್ಣಗೊಳಿಸಿದರು. ಈ ಹಿಂದೆ 2009 ರಲ್ಲಿ ಮನೀಶ್ ಪಾಂಡೆ ಆರ್‌ಸಿಬಿ ಪರ ಶತಕ ಸಿಡಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಈ ಟೂರ್ನಿಯ 11 ಪಂದ್ಯಗಳಲ್ಲಿ 521 ರನ್ ಗಳಿಸಿರುವ ಪಂತ್ ಪಂಜಾಬ್ ಕೆಎಲ್ ರಾಹುಲ್ ಜೊತೆ ಆರೆಂಜ್ ಕ್ಯಾಪ್ ಪಡೆದಿದ್ದಾರೆ.

     

  • ನಾಳೆ ಮಧ್ಯಾಹ್ನ ವಿಶೇಷ ಪ್ರಕಟಣೆಯನ್ನು ಪ್ರಕಟಿಸಲಿದ್ದಾರೆ ಕೊಹ್ಲಿ!

    ನಾಳೆ ಮಧ್ಯಾಹ್ನ ವಿಶೇಷ ಪ್ರಕಟಣೆಯನ್ನು ಪ್ರಕಟಿಸಲಿದ್ದಾರೆ ಕೊಹ್ಲಿ!

    ಬೆಂಗಳೂರು: ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಾನು ವಿಶೇಷ ಪ್ರಕಟಣೆಯನ್ನು ಪ್ರಕಟಿಸುವುದಾಗಿ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಈ ಕುರಿತು ವಿರಾಟ್ ಸ್ವತಃ ತಮ್ಮ ಟ್ವಿಟ್ಟರ್ ಹಾಗೂ ಇನ್‍ ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಜೊತೆ ಮುಖ್ಯವಾಗಿ ಮಾತನಾಡಬೇಕು. ನಾಳೆ ನಾನು 1.30ಕ್ಕೆ ಲೈವ್ ಬರುತ್ತಿದ್ದೇನೆ. ಯಾರೂ ಈ ಲೈವ್ ಮರೆಯಬೇಡಿ. ಏಕೆಂದರೆ ಇದು ಬಹಳ ಮುಖ್ಯವಾದದ್ದು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ವಿರಾಟ್ ನಾಳೆ ಲೈವ್ ಬರುತ್ತಿರುವುದರಿಂದ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿದೆ. ಐಪಿಎಲ್‍ನಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಐಪಿಎಲ್ 2018 ರ 11ನೇ ಆವೃತ್ತಿಯಲ್ಲಿ ಸತತ ನೀರಸ ಪ್ರದರ್ಶನ ತೋರಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದರು. ಹಾಗೆಯೇ ವಿರಾಟ್ ಕೊಹ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಾರಾ? ಈ ಕಾರಣಕ್ಕೆ ದಿನಾಂಕ ಫಿಕ್ಸ್ ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನು ಈಗ ಅಭಿಮಾನಿಗಳು ಕೇಳುತ್ತಿದ್ದಾರೆ.

    ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಡೆಲ್ಲಿ ತಂಡದ ನಾಯಕ ಪಟ್ಟದಿಂದ ಗೌತಮ್ ಗಂಭೀರ್ ಇಳಿದಿದ್ದರು. ಬಳಿಕ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

    Guys, I’m going live at 1:30pm tomorrow. Join me, we’ve got a lot to chat about.

    A post shared by Virat Kohli (@virat.kohli) on

  • ಧೋನಿ ಹೆಲಿಕಾಪ್ಟರ್ ಶಾಟ್ ಸಿಡಿಸಿ ಮಿಂಚಿದ ಈಶಾನ್ ಕಿಶಾನ್ -ವಿಡಿಯೋ ವೈರಲ್

    ಧೋನಿ ಹೆಲಿಕಾಪ್ಟರ್ ಶಾಟ್ ಸಿಡಿಸಿ ಮಿಂಚಿದ ಈಶಾನ್ ಕಿಶಾನ್ -ವಿಡಿಯೋ ವೈರಲ್

    ಕೋಲ್ಕತ್ತಾ: ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ, ವಿಕೆಟ್ ಕೀಪರ್ ಈಶಾನ್ ಕಿಶಾನ್ ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಹೆಲಿಕಾಪ್ಟರ್ ಶಾಟ್ ಹೊಡೆದು ಸಿಕ್ಸರ್ ಸಿಡಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರ ವಿಶಿಷ್ಟ ಶೈಲಿಯ ಹೆಲಿಕಾಪ್ಟರ್ ಶಾಟ್ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಸದ್ಯ ಈಶಾನ್ ಕಿಶಾನ್ ಈ ರೀತಿ ಬ್ಯಾಟ್ ಬೀಸಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ. ಬುಧವಾರ ಈಡಾನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇವಲ 21 ಎಸೆತ ಎದುರಿಸಿದ ಕಿಶಾನ್ 5 ಬೌಂಡರಿ, 6 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ ಮಿಂಚಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು.

    ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಈಶಾನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 210 ರನ್ ಸಿಡಿಸಿತ್ತು. ಇದಕ್ಕೂ ಮುನ್ನ ಪಂದ್ಯದ 14ನೇ ಓವರ್ ಎಸೆದ ಕುಲ್‍ದೀಪ್ ಬೌಲಿಂಗ್ ನಲ್ಲಿ ಸ್ಟ್ರೈಕ್ ನಲ್ಲಿದ್ದ ಈಶಾನ್ ಕಿಶಾನ್ 4 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 25 ರನ್ ಗಳಿಸಿ ಮಿಂಚು ಹರಿಸಿದ್ದರು.

    ಗೆಲುವಿನ ಗುರಿ ಬೆನ್ನತ್ತಿದ್ದ ಕೊಲ್ಕತ್ತಾ ತಂಡವನ್ನು 108 ರನ್ ಗಳಿಗೆ ಅಲೌಟ್ ಆಗುವ ಮೂಲಕ ಮುಂಬೈ 102 ರನ್ ಗಳ ಬೃಹತ್ ಅಂತರದಿಂದ ಜಯಗಳಿಸಿತು. ಅಲ್ಲದೇ ಈ ಟೂರ್ನಿಯಲ್ಲಿ ಪಡೆದ ದಾಖಲೆ ಅಂತರದ ಜಯ ಎಂಬ ಹೆಗ್ಗಳಿಕೆಗೂ ಕಾರಣವಾಯಿತು. ಕೊಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಮುಂಬೈ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಂಬೈ ನಾಲ್ಕನೇ ಸ್ಥಾನಕ್ಕೆ ಏರಿದೆ.

    https://twitter.com/videos_shots/status/994245698626334720?

    ಕೋಲ್ಕತ್ತಾ ವಿರುದ್ಧ ಮುಂಬೈ ಇದುವರೆಗೂ ಆಡಿರುವ 23 ಪಂದ್ಯಗಳಲ್ಲಿ 18 ರಲ್ಲಿ ಗೆಲುವು ಪಡೆದಿರುವುದು ವಿಶೇಷವಾಗಿದೆ. ಅಲ್ಲದೇ ಕೋಲ್ಕತ್ತಾ ಸತತ 8 ಪಂದ್ಯಗಳಲ್ಲಿ ಮುಂಬೈ ವಿರುದ್ಧ ಸೋಲುಂಡಿದೆ.

    ಕ್ಯಾಪ್ಟನ್ ಕೂಲ್ ಧೋನಿ ಹೆಲಿಕಾಪ್ಟರ್ ಶಾಟ್ ಹಿಂದೆ ನೋವಿನ ಕಥೆಯಿದೆ. ಧೋನಿ ಅವರಿಗೆ ಈ ರೀತಿಯ ಸಿಕ್ಸರ್ ಹೊಡೆಯುವುದನ್ನು ಕಲಿಸಿಕೊಟ್ಟವರು ಸ್ನೇಹಿತ ಮಾಜಿ ರಣಜಿ ಆಟಗಾರ ಸಂತೋಷ್ ಲಾಲ್. ಧೋನಿ ಮತ್ತು ಸಂತೋಷ್ ಲಾಲ್ ಈ ಹಿಂದೆ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಲಾಲ್ ಉತ್ತಮ ಬ್ಯಾಟ್ಸ್ ಮನ್ ಆಗಿದ್ದರು. ಇಬ್ಬರು ಒಟ್ಟಿಗೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಧೋನಿಗೆ ಹೆಲಿಕಾಪ್ಟರ್ ಶಾಟ್ ಹೊಡೆಯುವುದನ್ನು ಹೇಳಿಕೊಟ್ಟಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಸಂತೋಷ್ 2013ರ ಜೂನ್‍ನಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಧೋನಿಯ ಹೆಲಿಕಾಪ್ಟರ್ ಶಾಟ್ ಪ್ರಯತ್ನದಲ್ಲಿ ಸೆಹ್ವಾಗ್, ಬ್ರೇಟ್ ಲೀ ಫೇಲ್: ವಿಡಿಯೋ

     

  • ಐಪಿಎಲ್ 2018 – ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್: ಟಾಪ್ 3 ಆಟಗಾರರ ಪಟ್ಟಿ ಇಲ್ಲಿದೆ

    ಐಪಿಎಲ್ 2018 – ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್: ಟಾಪ್ 3 ಆಟಗಾರರ ಪಟ್ಟಿ ಇಲ್ಲಿದೆ

    ಮುಂಬೈ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರರು ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಿಗೆ ಭರಪುರ ಮನರಂಜನೆಯನ್ನು ನೀಡುತ್ತಿದ್ದು, ಇದುವರೆಗೂ ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್ ಸಿಡಿಸಿದ ಟಾಪ್ 3 ಸ್ಥಾನಗಳನ್ನು ಪಡೆದಿರುವ ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

    ಆರೆಂಜ್ ಕ್ಯಾಪ್
    1. ಅಂಬಟಿ ರಾಯುಡು  – 370 ರನ್ – ಸಿಎಸ್‍ಕೆ
    2. ವಿರಾಟ್ ಕೊಹ್ಲಿ        – 349 ರನ್ – ಆರ್‌ಸಿಬಿ
    3. ಕೇನ್ ವಿಲಿಯಮ್ಸ್    – 322 ರನ್ -ಎಸ್‍ಆರ್ ಎಚ್

    ಪರ್ಪಲ್ ಕ್ಯಾಪ್
    1. ಹಾರ್ದಿಕ್ ಪಾಂಡ್ಯ         – 11 ವಿಕೆಟ್ – ಮುಂಬೈ
    2. ಮಯಾಂಕ್ ಮಾರ್ಕಡೆ  – 11 ವಿಕೆಟ್ – ಮುಂಬೈ
    3. ಸಿದ್ದಾರ್ಥ್ ಕೌಲ್           – 11 ವಿಕೆಟ್ – ಮುಂಬೈ

    ಸಿಕ್ಸರ್
    1. ಕ್ರಿಸ್ ಗೇಲ್             – 23 – ಪಂಜಾಬ್
    2. ಎಬಿಡಿವಿಲಿಯರ್ಸ್   – 23 – ಆರ್‌ಸಿಬಿ
    3. ಆಂಡ್ರೆ ರುಸೆಲ್      – 23 – ಕೆಕೆಆರ್

    ಬೆಸ್ಟ್ ಎಕಾನಮಿ
    1. ಸಂದೀಪ್ ಶರ್ಮಾ    – 4.0 ಇ/ಆರ್ – ಎಸ್‍ಆರ್ ಎಚ್
    2. ಜೋಫ್ರಾ ಆರ್ಚರ್   – 6.00 ಇ/ಆರ್ – ಆರ್ ಆರ್
    3. ಅಂಕಿತ್ ರಜಪೂತ್  – 6.27 ಇ/ಆರ್ – ಪಂಜಾಬ್

    ಕಳೆದ ಬಾರಿಯ ಟೂರ್ನಿಯಲ್ಲಿ ಆಸೀಸ್, ಹೈದರಾಬಾದ್ ತಂಡದ ಆಟಗಾರ ಡೇವಿಡ್ ವಾರ್ನರ್ (641 ರನ್) ಆರೆಂಜ್ ಕ್ಯಾಪ್ ಪಡೆದಿದ್ದರು. ಭುವನೇಶ್ವರ್ ಕುಮಾರ್ 26 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದರು.

  • ಸಾಮಾನ್ಯರಂತೆ ಕುಳಿತು ಐಪಿಎಲ್ ಪಂದ್ಯ ವೀಕ್ಷಿಸಿದ ದ್ರಾವಿಡ್- ವಿಡಿಯೋ ವೈರಲ್!

    ಸಾಮಾನ್ಯರಂತೆ ಕುಳಿತು ಐಪಿಎಲ್ ಪಂದ್ಯ ವೀಕ್ಷಿಸಿದ ದ್ರಾವಿಡ್- ವಿಡಿಯೋ ವೈರಲ್!

    ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಭಾನುವಾರ ನಡೆದ ಆರ್‌ಸಿಬಿ-ಕೆಕೆಆರ್ ಪಂದ್ಯವನ್ನು ಸಾಮಾನ್ಯ ವ್ಯಕ್ತಿಯಂತೆ ಕುಳಿತು ವೀಕ್ಷಿಸಿದ್ದಾರೆ.

    ಭಾನುವಾರ ಆರ್‌ಸಿಬಿಯನ್ನು ಬೆಂಬಲಿಸೋಕ್ಕೆ ರಾಹುಲ್ ದ್ರಾವಿಡ್ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದರು. ಆದರೆ ಅವರನ್ನು ಅಲ್ಲಿ ನೋಡಿ ಅಭಿಮಾನಿಗಳು ಆಶ್ಚರ್ಯಪಟ್ಟರು. ದ್ರಾವಿಡ್ ವಿಐಪಿ ಬಾಕ್ಸ್ ನಲ್ಲಿ ಕುಳಿತುಕೊಳ್ಳದೇ ಅಭಿಮಾನಿಗಳ ನಡುವೆ ಸಾಮಾನ್ಯ ಜನರಂತೆ ಕುಳಿತುಕೊಂಡಿದ್ದರು.

    ದ್ರಾವಿಡ್ ಕುಳಿತುಕೊಂಡಿದ್ದ ವಿಡಿಯೋವನ್ನು ಐಪಿಎಲ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ. “ಆರ್‌ಸಿಬಿಯನ್ನು ಬೆಂಬಲಿಸಲು ಯಾರು ಬಂದಿದ್ದಾರೆ ನೋಡಿ. ದಿ-ವಾಲ್, ದಿ ಲೆಜೆಂಡ್, ರಾಹುಲ್ ದ್ರಾವಿಡ್” ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

    ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ರಾಹುಲ್ ದ್ರಾವಿಡ್ ಅವರನ್ನು ನೋಡಿ ಅಭಿಮಾನಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಅವರನ್ನು ಆರ್‌ಸಿಬಿ ಕೋಚ್ ಮಾಡಿ ಎಂದು ಕೆಲವು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

    ಇನ್ನೂ ಕೆಲವರು ದ್ರಾವಿಡ್ ಕ್ರಿಕೆಟ್‍ನಲ್ಲಿ ಮಾತ್ರ ನನ್ನ ರೋಲ್ ಮಾಡಲ್ ಅಲ್ಲ, ನನ್ನ ಬದುಕಿನಲ್ಲೂ ಅವರು ನನ್ನ ರೋಲ್ ಮಾಡಲ್ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಹೀಗೆ ಮತ್ತೊಬ್ಬರು ನಿಮಗಾಗಿ ನಾನು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಿದ್ದಿನಿ ಎಂದು ಅಭಿಮಾನಿಗಳು ಟ್ವಿಟ್ಟರ್ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಸದ್ಯ ಭಾರತ ಕಿರಿಯರ ತಂಡ ಕೋಚ್ ಆಗಿರುವ ದ್ರಾವಿಡ್ ಕಾರ್ಯಕ್ರಮಗಳಿಗೆ ಸಾಮಾನ್ಯ ವ್ಯಕ್ತಿಯಂತೆ ಹೋಗುವುದು ಇದೇ ಮೊದಲೆನಲ್ಲ. 2017ರಲ್ಲಿ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಲು ತೆರಳಿದ್ದರು. ಈ ವೇಳೆ ಸಾಮಾನ್ಯ ವ್ಯಕ್ತಿಯಂತೆ ಸರದಿಯಲ್ಲಿ ನಿಂತುಕೊಂಡಿದ್ದರು.

  • ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್

    ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್

    ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಮಂದೀಪ್ ಸಿಂಗ್ ತಮ್ಮದೇ ಬ್ಯಾಟಿಂಗ್ ಸ್ಟೈಲ್‍ನನ್ನು ತಮಾಷೆಯನ್ನಾಗಿ ಮಾಡಿ ಟ್ವಿಟ್ಟರಿನಲ್ಲಿ ಹಾಕಿದ್ದಾರೆ.

    ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಮಂದೀಪ್ 17 ಎಸೆತಗಳಲ್ಲಿ 32 ರನ್‍ಗಳು ಗಳಿಸಿದ್ದರು. ಈ ಪಂದ್ಯದಲ್ಲಿ ಮಂದೀಪ್ ಬೇರೆ ಬೇರೆ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಇದೇ ವೇಳೆ ಅಭಿಮಾನಿಯೊಬ್ಬರು ಮಂದೀಪ್ ರಿವರ್ಸ್ ಸ್ವೀಪ್‍ನಲ್ಲಿ ಆಟವಾಡುತ್ತಿದ್ದಾಗ ಅವರ ಫೋಟೋವನ್ನು ತೆಗೆದಿದ್ದಾರೆ.

    ಬಾಲಿವುಡ್‍ನಲ್ಲಿ ಬಿಡುಗಡೆಯಾಗಿದ್ದ, ಲಗಾನ್ ಚಿತ್ರದಲ್ಲಿ ನಟ ರಾಜೇಶ್ ವಿವೇಕ್ ಆಟವಾಡಿದ ಶೈಲಿಯಲ್ಲಿ ಮಂದೀಪ್ ಬ್ಯಾಟಿಂಗ್ ಶೈಲಿ ಹೋಲುತ್ತಿತ್ತು. ಮಂದೀಪ್ ತಮ್ಮ ಫೋಟೋ ಹಾಗೂ ಲಗಾನ್ ಚಿತ್ರದ ರಾಜೇಶ್ ವಿವೇಕ್ ಅವರ ಫೋಟೋವನ್ನು ಒಂದೇ ಫೋಟೋವನ್ನಾಗಿ ಮಾಡಿ ಟ್ವಿಟ್ಟರಿನಲ್ಲಿ ಹಾಕಿದ್ದಾರೆ.

    ಮಂದೀಪ್ ಟ್ವಿಟ್ಟರಿನಲ್ಲಿ ಹಾಕಿದ ಫೋಟೋಗೆ ಸಾಕಷ್ಟು ಜನ ಕಮೆಂಟ್ಸ್ ಮಾಡಿದ್ದಾರೆ. ಈ ಫೋಟೋಗೆ 2500ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 113 ಮಂದಿ ರೀ-ಟ್ವೀಟ್ ಮಾಡಿದ್ದಾರೆ. ಇನ್ನೂ ಮಂದೀಪ್ ಇಂದು ಕೆಕೆಆರ್ ವಿರುದ್ಧ ನಡೆಯುವ ಪಂದ್ಯದಲ್ಲಿ ಇದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಹೇಳಲಾಗಿದೆ.

    ಸದ್ಯ ಬೆಂಗಳೂರು ತಂಡ ಇವರೆಗೂ 6 ಪಂದ್ಯವನ್ನಾಡಿ 2 ಪಂದ್ಯದಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ.

  • ಧೋನಿಗೆ ಮುಂಬೈ ಅಭಿಮಾನಿಯಿಂದ ವಿಶೇಷ ಗೌರವ- ಇಂಟರ್‌ನೆಟ್ ನಲ್ಲಿ ಫುಲ್ ವೈರಲ್ ಆಯ್ತು ವಿಡಿಯೋ

    ಧೋನಿಗೆ ಮುಂಬೈ ಅಭಿಮಾನಿಯಿಂದ ವಿಶೇಷ ಗೌರವ- ಇಂಟರ್‌ನೆಟ್ ನಲ್ಲಿ ಫುಲ್ ವೈರಲ್ ಆಯ್ತು ವಿಡಿಯೋ

    ಮುಂಬೈ: ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಧೋನಿ ಸ್ಟೇಡಿಯಂಗೆ ಬರುತ್ತಿದ್ದಂತೆ ಮುಂಬೈ ಜೆರ್ಸಿ ಮೇಲೆ ಸಿಎಸ್‍ಕೆ ಜೆರ್ಸಿ ಧರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿಎಸ್‍ಕೆ ಫ್ಯಾನ್ ಕ್ಲಬ್ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಾಕಿದ್ದು, ಧೋನಿ ಮೈದಾನಕ್ಕೆ ಬರುತ್ತಿದ್ದಂತೆ ಅಭಿಮಾನಿ ಸಿಎಸ್‍ಕೆ ಜೆರ್ಸಿ ತೊಟ್ಟಿದ್ದಾನೆ. ಜೆರ್ಸಿ ಬದಲಿಸಿದಲ್ಲದೇ “ಧೋನಿ, ಧೋನಿ” ಎಂದು ಜೋರಾಗಿ ಕಿರುಚಿ ತಂಡವನ್ನು ಚಿಯರ್ ಮಾಡಿದ್ದಾನೆ.

    ಅಭಿಮಾನಿಯ ಈ ವರ್ತನೆಯನ್ನು ನೋಡಿದ ಕೆಲವರು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ಸಿಎಸ್‍ಕೆ ಫ್ಯಾನ್ ಕ್ಲಬ್ ಟ್ವಿಟ್ಟರಿನಲ್ಲಿ ಹಾಕಿ, ಧೋನಿ ಬ್ಯಾಟಿಂಗ್ ಮಾಡಲು ಬಂದರೆ ಆಗ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಸ್ಟೇಡಿಯಂನನ್ನು ಹಳದಿ ಮಾಡುತ್ತಾರೆ. ಇದರಿಂದ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಟ್ವೀಟ್ ಮಾಡಿದೆ.

    ವಿಡಿಯೋದಲ್ಲಿ ಕಾಣಿಸಿಕೊಂಡ ಕುನಾಲ್ ಸಾಮಂತ್ ಮುಂಬೈ ನಿವಾಸಿಯಾಗಿದ್ದು, ನಾನು ಜೆರ್ಸಿಯನ್ನು ಬದಲಾಯಿಸಿದ್ದು ಯಾಕೆ ಎನ್ನುವುದನ್ನು ಟ್ವೀಟ್ ಮಾಡಿ ಹೇಳಿದ್ದಾರೆ.

    “ನಾನು ಧೋನಿಗೆ ಗೌರವ ನೀಡಲು ಈ ರೀತಿ ಮಾಡಿದೆ. ಅವರು ಭಾರತದ ಅಭಿಮಾನಿಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ನಾನು ಯಾವಾಗಲೂ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತೇನೆ, ಏಕೆಂದರೆ ನಾನು ಮುಂಬೈ ನಿವಾಸಿ. ಆದರೆ ಧೋನಿ ನಮಗಾಗಿ ಮಾಡಿರುವುದನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ಈ ವರ್ತನೆಯಿಂದ ನಿಮಗೆ ಬೇಸರವಾಗಿದ್ದರೆ, ನನ್ನನ್ನು ಕ್ಷಮಿಸಿ” ಎಂದು ಟ್ವೀಟ್ ಮಾಡಿದ್ದಾರೆ.

  • ಆರ್‌ಸಿಬಿ, ಚೆನ್ನೈ ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

    ಆರ್‌ಸಿಬಿ, ಚೆನ್ನೈ ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾತ್ರಿ ನಡೆಯಲಿರುವ ಆರ್‌ಸಿಬಿ ಹಾಗೂ ಚೆನ್ನೈ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.

    ನಗರದಲ್ಲಿ ದಟ್ಟ ಮೋಡ ಮುಸುಕಿದ ವಾತಾವರಣವಿದ್ದು, ಪಂದ್ಯದ ವೇಳೆಗೆ ನಗರದ ಹಲವೆಡೆ ಮಳೆ ಬರುವ ಸಾಧ್ಯತೆ ಇದೆ. ಇಂದು ರಾತ್ರಿ 8 ಗಂಟೆಗೆ ಆರಂಭವಾಗುವ ಪಂದ್ಯಕ್ಕೆ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳು ಚಿನ್ನಸ್ವಾಮಿಯತ್ತ ಮುಖ ಮಾಡಿದ್ದು, ಭರ್ಜರಿ ಮನರಂಜನೆಯ ನಿರೀಕ್ಷೆಯಲ್ಲಿದ್ದಾರೆ.

    ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಲ್ಲಿ 5 ರಲ್ಲಿ ಗೆಲುವು ಪಡೆದಿರುವ ಧೋನಿ ಬಳಗ ಗೆಲ್ಲುವ ವಿಶ್ವಾಸದಲ್ಲಿದೆ. ಅಷ್ಟೇ ಪಂದ್ಯಗಳನ್ನು ಅಡಿ 2 ರಲ್ಲಿ ಮಾತ್ರ ಗೆಲುವು ಪಡೆದಿರುವ ಆರ್ ಸಿಬಿ ತವರಿನ ಅಭಿಮಾನಿಗಳ ಮುಂದೇ ಗೆಲ್ಲುವ ತವಕದಲ್ಲಿದೆ.

    ಟೂರ್ನಿಯಲ್ಲಿ ಭಾನುವಾರ ನಡೆದ ಕೊಲ್ಕತ್ತಾ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆದ ಪಂದ್ಯದಲ್ಲಿ ಮಳೆ ಆಟಕ್ಕೆ ಅಡ್ಡಿ ಪಡಿಸಿತ್ತು. ಈ ವೇಳೆ ಡಕ್ವರ್ಥ್ ಲೂಯಿಸ್ ನಿಯಮಗಳ ಅನ್ವಯ ಪಂದ್ಯವನ್ನು 12 ಓವರ್ ಗಳಿಗೆ ನಿಗಧಿ ಪಡಿಸಲಾಯಿತು. ಈ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಗೇಲ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ಗೆಲುವಿಗೆ ಕಾರಣರಾಗಿದ್ದರು. ಪಂದ್ಯದ ಬಳಿಕ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಡಕ್ವರ್ಥ್ ಲೂಯಿಸ್‍ ನಿಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.