Tag: iphones

  • ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧಿಸಿದ ರಷ್ಯಾ

    ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧಿಸಿದ ರಷ್ಯಾ

    ಮಾಸ್ಕೋ: ರಷ್ಯಾದ ಡಿಜಿಟಲ್ ಅಭಿವೃದ್ಧಿ ಸಚಿವಾಲಯವು ಸರ್ಕಾರಿ ಉದ್ಯೋಗಿಗಳು (Government Employees) ಕೆಲಸದ ಉದ್ದೇಶಗಳಿಗೆ ಆಪಲ್ ಐಫೋನ್ (iPhones) ಅಥವಾ ಐಪ್ಯಾಡ್ (iPads) ಬಳಸುವುದನ್ನ ನಿಷೇಧಿಸಿದೆ ಎಂದು ಸಚಿವ ಮಕ್ಸುತ್ ಶಾದೇವ್ ಹೇಳಿದ್ದಾರೆ.

    ಸರ್ಕಾರಿ ಕೆಲಸದ ಅಪ್ಲಿಕೇಷನ್‌ಗಳನ್ನ ಬಳಸಲು, ಇಮೇಲ್ ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಐಫೋನ್ ಮತ್ತು ಐಪ್ಯಾಡ್ ಬಳಸದಂತೆ ಎಚ್ಚರಿಸಿದೆ. ಅಮೆರಿಕದ ಬೇಹುಗಾರಿಕೆ ಕಾರ್ಯಾಚರಣೆಯ ಪರಿಣಾಮವಾಗಿ ಆಪಲ್ ರಾಜಿ ಮಾಡಿಕೊಂಡಿದೆ ಎಂದು ರಷ್ಯಾದ ಭದ್ರತಾ ಸಂಸ್ಥೆ FSB ಹೇಳಿದ ಎರಡು ತಿಂಗಳ ನಂತರ ಈ ಬೆಳವಣಿಗೆ ಕಂಡುಬಂದಿದೆ. ಆದ್ರೆ ರಷ್ಯಾ ಭದ್ರತಾ ಸಂಸ್ಥೆಯ ಆರೋಪವನ್ನ ಅಮೆರಿಕ ತಳ್ಳಿಹಾಕಿದೆ.

    ಬೇಕಿದ್ದರೆ ವೈಯಕ್ತಿಕ ಅಗತ್ಯಗಳಿಗಾಗಿ ಐಫೋನ್ ಬಳಸಬಹುದು. ಆದ್ರೆ ಯಾವುದೇ ಕಾರಣಕ್ಕೂ ಸರ್ಕಾರಿ ಕೆಲಸಗಳಿಗೆ ಐಫೋನ್ ಬಳಸುವಂತಿಲ್ಲ ಎಂದು ಆದೇಶಿಸಿರುವುದಾಗಿ ಶಾವೇದ್ ತಿಳಿಸಿದ್ದಾರೆ. ಇದನ್ನೂ ಓದಿ: ರಕ್ಷಣಾ ಸಚಿವಾಲದ ಕಂಪ್ಯೂಟರ್‌ಗಳಲ್ಲಿ ಇನ್ನು Windows ಬದಲು ದೇಶೀ ನಿರ್ಮಿತ Maya OS

    ಈ ಹಿಂದೆ ಅಮೆರಿಕ ಬೇಹುಗಾರಿಕೆ ನಡೆಸುತ್ತಿದೆ, ಐಫೋನ್ ಮೂಲಕ ಕದ್ದಾಲಿಕೆ ಮಾಡುತ್ತಿದೆ ಎಂಬ ಸಂಶಯದ ಮೇಲೆ ಸರ್ಕಾರಿ ಉದ್ಯೋಗಿಗಳು ಐಫೋನ್ ಬಳಸದಂತೆ ಸಂಪೂರ್ಣ ನಿಷೇಧಿಸಿತ್ತು. ಇದೀಗ ವೈಯಕ್ತಿಕ ಬಳಕೆಗೆ ಅನುಮತಿ ನೀಡಿದೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ಉಡಾವಣೆ ಬೆನ್ನಲ್ಲೇ ಚಂದ್ರನೆಡೆಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ರಷ್ಯಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದಲ್ಲಿ ಆಪಲ್‍ನಿಂದ 700 ಕೋಟಿ ಹೂಡಿಕೆ

    ಭಾರತದಲ್ಲಿ ಆಪಲ್‍ನಿಂದ 700 ಕೋಟಿ ಹೂಡಿಕೆ

    ನವದೆಹಲಿ: ಭಾರತದಲ್ಲಿ ಐಫೋನ್ ಮಾರುಕಟ್ಟೆಯನ್ನು ವಿಸ್ತರಿಸಲು ಆಪಲ್ 1 ಶತಕೋಟಿ ಡಾಲರ್(ಅಂದಾಜು 714 ಕೋಟಿ ರೂ.) ಹೂಡಿಕೆ ಮಾಡಲಿದೆ.

    ಚೀನಾಕ್ಕಿಂತ ಭಾರತದಲ್ಲಿ ಐಫೋನ್ ಗಳನ್ನು ಉತ್ಪಾದನೆ ಮಾಡಲು ಆಪಲ್ ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ತನ್ನ ಪಾಲುದಾರರ ಮೂಲಕ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ ಎಂದು ವರದಿಯಾಗಿದೆ.

    ಅಮೆರಿಕ ಮತ್ತು ಚೀನಾದ ನಡುವೆ ಈಗ ವ್ಯಾಪಾರ ಸಮರ ಜೋರಾಗುತ್ತಿದೆ. ಹೀಗಾಗಿ ಭಾರತದಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಆಪಲ್ ಬಂದಿದ್ದು, ಭಾರತದಲ್ಲಿ ತಯಾರಾದ ಫೋನ್‍ಗಳನ್ನು ಇತರೇ ರಾಷ್ಟ್ರಗಳಿಗೆ ಮಾರಾಟ ಮಾಡಲು ಮುಂದಾಗುತ್ತಿದೆ.

    ಈ ಹಿಂದೆ ಆಪಲ್ ವಿಯೆಟ್ನಾಂ ಮತ್ತು ಭಾರತದಲ್ಲಿ ಹೂಡಿಕೆ ಮಾಡಲಿದೆ ಎಂದು ವರದಿಯಾಗಿತ್ತು. ಆದರೆ ಈಗ ಕ್ಯಾಲಿಫೋರ್ನಿಯಾ ಮೂಲದ ಆಪಲ್ ಕಂಪನಿ ಭಾರತದಲ್ಲಿ ಹೂಡಿಕೆಗೆ ಮುಂದಾಗಿದೆ.

    ಆಪಲ್ ಚೀನಾದಲ್ಲಿ ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿಯಲ್ಲಿ ಐಫೋನ್ ಗಳನ್ನು ತಯಾರಿಸುತ್ತಿದೆ. ಸಾಫ್ಟ್ ವೇರ್ ಗಳನ್ನು ಆಪಲ್ ಕಂಪನಿಯೇ ಅಭಿವೃದ್ಧಿ ಪಡಿಸಿದ್ದರೂ ಫೋನಿನ ಭಾಗಗಳು ಫಾಕ್ಸ್ ಕಾನ್ ಕಂಪನಿಯಲ್ಲಿ ಜೋಡಣೆಯಾಗಿ ಐಫೋನ್ ತಯಾರಾಗಿ ಮಾರಾಟಗೊಳ್ಳುತ್ತಿದೆ.

    ಆಪಲ್ ಈಗಾಗಲೇ ವಿಸ್ಟರ್ನ್ ಕಂಪನಿಯ ಜೊತೆ ಬೆಂಗಳೂರು ಸಮೀಪದ ಪೀಣ್ಯದಲ್ಲಿ ಐಫೋನ್ ಉತ್ಪಾದನೆ ಮಾಡುತ್ತಿದೆ. ಈಗ ಚೆನ್ನೈನಲ್ಲಿ ಫಾಕ್ಸ್ ಕಾನ್ ಜೊತೆಗೂಡಿ ಮಾರುಕಟ್ಟೆ ವಿಸ್ತರಿಸಲು ಆಪಲ್ ಮುಂದಾಗುತ್ತಿದೆ ಎಂದು ಮೂಲಗಳನ್ನು ಆಧಾರಿಸಿ ವರದಿಯಾಗಿದೆ.

    ಮೇಕ್ ಇನ್ ಇಂಡಿಯಾದ ಬಳಿಕ ಸರ್ಕಾರ ಈಗ ಕಂಪನಿಗಳಿಗೆ ವಿದೇಶಕ್ಕೆ ರಫ್ತು ಮಾಡುವಂತೆ ಉತ್ತೇಜನ ನೀಡುತ್ತಿದೆ. ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ರವಿಶಂಕರ್ ಪ್ರಸಾದ್, ಆಪಲ್ ಈಗಾಗಲೇ ಭಾರತದಲ್ಲಿ ಐಫೋನ್ ಗಳನ್ನು ಉತ್ಪಾದನೆ ಮಾಡುತ್ತಿದೆ. ಈಗ ಬಿಡಿ ಭಾಗಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ ವಿದೇಶಕ್ಕೆ ರಫ್ತು ಸಹ ಮಾಡುತ್ತಿದೆ. ಭಾರತದ ಸಾಧನೆ ಕಥೆಯನ್ನು ಪರಿಗಣಿಸಿದರೆ ಆಪಲ್ ಸಾಧನೆ ಉತ್ತಮವಾಗಿದೆ ಎಂದು ತಿಳಿಸಿದರು.

    ಆಪಲ್‍ಗೆ ಏನು ಲಾಭ?
    ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಾಗಿ 15 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಗಳು ಮಾರಾಟವಾಗುತ್ತದೆ. ಐಫೋನ್ ಗಳಿಗೆ ದುಬಾರಿ ದರ ಇರುವ ಪರಿಣಾಮ ಮಾರುಕಟ್ಟೆಯಲ್ಲಿ ಒನ್ ಪ್ಲಸ್, ಸ್ಯಾಮ್‍ಸಂಗ್ ಕಂಪನಿಗಳು ಭಾರೀ ಸ್ಪರ್ಧೆ ನೀಡುತ್ತಿದೆ. ಇದರ ಜೊತೆ ಶೇ.20 ಆಮದು ಸುಂಕ ಇರುವ ಕಾರಣ ಬೆಲೆ ಜಾಸ್ತಿಯಾಗಿ ಭಾರತದ ಮಾರುಕಟ್ಟೆಯಲ್ಲಿ ಐಫೋನ್ ಭಾರೀ ಸ್ಪರ್ಧೆಯನ್ನು ಎದುರಿಸುತ್ತಿದೆ.

    ವಿಶ್ವದಲ್ಲಿ ಚೀನಾ ಬಿಟ್ಟರೆ ಅತಿ ಹೆಚ್ಚು ಸ್ಮಾರ್ಟ್ ಫೋನ್ ಹೊಂದಿರುವ ದೇಶ ಭಾರತವಾಗಿದ್ದು ಇಲ್ಲಿನ ಮಾರುಕಟ್ಟೆಯನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ನಮಗೆ ನಷ್ಟ ಎಂದು ತಿಳಿದಿರುವ ಆಪಲ್ ಈಗ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದೆ.