Tag: iphone

  • ಶಾಲೆಯಲ್ಲಿ ಬ್ರೆಡ್‌ ಮಾರಾಟ ಮಾಡಿ iPhone-14 ಖರೀದಿಸಿದ 12ರ ಬಾಲಕಿ

    ಶಾಲೆಯಲ್ಲಿ ಬ್ರೆಡ್‌ ಮಾರಾಟ ಮಾಡಿ iPhone-14 ಖರೀದಿಸಿದ 12ರ ಬಾಲಕಿ

    ದುಬೈ: ಸಾಧಿಸುವ ಛಲವಿದ್ದರೆ ಸಾಕು ಏನುಬೇಕಾದರೂ ಮಾಡಬಹುದು ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಬಾಲಕಿಯೊಬ್ಬಳು ತನ್ನ ಸ್ವಂತ ದುಡಿಮೆಯಿಂದ 12ನೇ ವಯಸ್ಸಿಗೇ ಐಫೋನ್‌ (iPhone) ಖರೀದಿಸಿ ಸುದ್ದಿಯಾಗಿದ್ದಾಳೆ.

    ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ (Dubai City) ನಗರದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಬಿಯಾಂಕಾ ಜೇಮಿ ವರಿಯಾವಾ ಅವರ ಪುತ್ರಿ ಬಿಯಾಂಕಾ ತಾನೇ ತಯಾರಿಸಿದ ಬ್ರೆಡ್‌ ಮಾರಾಟ ಮಾಡಿ 6 ವಾರಗಳಲ್ಲಿ 3 ಸಾವಿರ ದಿರ್ಹಮ್ (67,362ರೂ.) ಗಳಿಸಿ ಐಫೋನ್‌-14 (iPhone 14) ಖರೀದಿಸಿದ್ದಾಳೆ. ಈ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ಐಫೋನ್‌-14 ಹಿಂದಿನ ಕಥೆಯೇ ರೋಚಕ?
    ದುಬೈ ನಗರದಲ್ಲಿ 7ನೇ ತರಗತಿ ಓದುತ್ತಿದ್ದ ಬಿಯಾಂಕಾ ಜೇಮಿ ವರಿಯಾವಾ ಐಫೋನ್‌ ತೆಗೆದುಕೊಳ್ಳಲೇಬೇಕೆಂದು ಬಯಸಿದ್ದಳು. ಆದರೆ ಮಗಳಿಗೆ ಐಫೋನ್‌ ಕೊಡಿಸುವಷ್ಟು ಹಣ ಪೋಷಕರ ಬಳಿ ಇರಲಿಲ್ಲ. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ಒಂದು ದಿನ ಬಿಯಾಂಕಾಳ ತಾಯಿ ಮಧ್ಯಾಹ್ನದ ಊಟಕ್ಕಾಗಿ ತಾನೇ ತಯಾರಿಸಿದ ಬ್ರೇಡ್‌ ಅನ್ನು ಪ್ಯಾಕ್‌ ಮಾಡಿಕೊಟ್ಟಿದ್ದರು. ಶಾಲೆಗೆ ಹೋದಾಗ ಬಿಯಾಂಕಾ ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ತಿಂದಿದ್ದಳು. ಬಿಯಾಂಕಾ ತಂದಿದ್ದ ಬ್ರೆಡ್‌ ತನ್ನ ಸ್ನೇಹಿತರಿಗೆಲ್ಲಾ ತುಂಬಾನೆ ಇಷ್ಟವಾಯಿತು. ಮರುದಿನ ಅಂತಹದ್ದೇ ಏನಾದರೂ ತರುವಂತೆ ಕೇಳಿಕೊಂಡರು. ಇದರಿಂದ ಆಕೆಗೆ ತಾನೇ ಬ್ರೆಡ್‌ ತಯಾರಿಸಿ ಏಕೆ ಮಾರಾಟ ಮಾಡಬಾರದು ಎಂಬ ಆಲೋಚನೆ ಬಂದಿತು.

    ಬಿಯಾಂಕಾಳ ಪೋಷಕರು ಈ ಹಿಂದೆ ದುಬೈನ ಪಂಚತಾರಾ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದರು. ಅಲ್ಲಿಯೇ ಬ್ರೆಡ್‌ ಮಾಡುವುದನ್ನೂ ಕಲಿತುಕೊಂಡಿದ್ದರು. ಬಿಯಾಂಕ ಸಹ ತನ್ನ ಪೋಷಕರಿಗೆ ಆಗಾಗ್ಗೆ ಸಹಾಯ ಮಾಡುತ್ತಾ ಬ್ರೆಡ್‌ ಮಾಡೋದನ್ನ ಕಲಿತುಕೊಂಡಿದ್ದಳು. ಇದರಿಂದ ತಾನೇ ಬ್ರೆಡ್‌ ತಯಾರಿಸಿ ಮಾರಾಟ ಮಾಡಲು ಮುಂದಾದಳು. ಶಾಲೆಯಲ್ಲಿ ಬ್ರೆಡ್‌ ಮಾರಾಟ ಮಾಡಲು ಹೋದಾಗ ಅನೇಕ ಸ್ನೇಹಿತರು ಗೇಲಿ ಮಾಡಿದರು. ಅದಕ್ಕೆಲ್ಲ ಹಿಂದೆ ಸರಿಯದ ಬಿಯಾಂಕಾ ತನ್ನ ಗುರಿಯತ್ತ ಮುನ್ನುಗ್ಗಿದಳು. ಬ್ರೆಡ್‌ ಮಾರಾಟ ಮಾಡಿ 6 ವಾರಗಳಲ್ಲಿ 3 ಸಾವಿರ ದಿರ್ಹಮ್ (67,362ರೂ.) ಗಳಿಸಿ ಐಫೋನ್‌ ಖರೀದಿಸಿದಳು. ಅಲ್ಲದೇ ತಂದೆ ಜೆಮಿ ವರಿಯಾವ ಅವರಿಗೆ 100 ದಿರ್ಹಮ್ (2 ಸಾವಿರದ 245 ರೂಪಾಯಿ) ನೀಡಿ ಹಣದಿಂದ ವೃತ್ತಿ ಆರಂಭಿಸುವಂತೆ ಕೇಳಿಕೊಂಡಳು. ಮಗಳ ಈ ವಿಚಾರ ತಿಳಿದು ಪೋಷಕರು ಸಂತಸಗೊಂಡಿದ್ದಾರೆ.

  • ಬೆಂಗ್ಳೂರಲ್ಲಿ ಐಫೋನ್ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳರು ಅರೆಸ್ಟ್

    ಬೆಂಗ್ಳೂರಲ್ಲಿ ಐಫೋನ್ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳರು ಅರೆಸ್ಟ್

    – 40 ಐಫೋನ್ ಸೇರಿ 110 ಫೋನ್ ವಶ

    ಬೆಂಗಳೂರು: ಐಫೋನ್ (iPhone) ಅಂದರೇನೇ ಒಂಥರಾ ಬ್ರ‍್ಯಾಂಡ್. ಕೆಲವರು ಕಷ್ಟನೊ, ಸುಖನೊ ಹೇಗೋ ಒಂದು ಐಫೋನ್ ತೆಗೆದುಕೊಂಡಿರುತ್ತಾರೆ. ಆದರೆ ಈ ಐಫೋನ್‌ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಖತರ್ನಾಕ್ ಟೀಂ ಒಂದು ಅರೆಸ್ಟ್ (Arrest) ಆಗಿದೆ.

    ಬಂಧಿತ ಕಳ್ಳರಿಂದ (Thieves) ಬರೋಬ್ಬರಿ 40 ಐಪೋನ್ ಸೇರಿ ಒಟ್ಟು 110 ಪೋನ್‌ಗಳನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದಲ್ಲಿ ನಡೆಯುತ್ತಿದ್ದ ಮೊಬೈಲ್ ರಾಬರಿ ಗ್ಯಾಂಗ್‌ನಲ್ಲಿ ಇವರದ್ದೂ ಸಹ ಎತ್ತಿದ ಕೈ. ಡಿಸಿಪಿ ಶ್ರೀನಿವಾಸ್ ಗೌಡ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್, ಪಿಎಸ್‌ಐ ಪ್ರಕಾಶ್ ಹಾಗೂ ಕ್ರೈಂ ತಂಡದಿಂದ ಕಾರ್ಯಾಚರಣೆ ನಡೆಸಿ ಕಳ್ಳರಾದ ಮಹಮ್ಮದ್ ಸಕ್ಲೈನ್, ಸುಹೇಲ್, ಸಾಕೀಬ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಜಿರಳೆಗಳು

    ಬಂಧಿತರೆಲ್ಲರೂ ಬೆಂಗಳೂರಿನ ಗೋರಿಪಾಳ್ಯ ನಿವಾಸಿಗಳಾಗದ್ದು, ಬರೋಬ್ಬರಿ 40 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ವಯಸ್ಸಾದ ವೃದ್ಧರಿಗೆ ಸೇರಬೇಕಾದ ಪಿಂಚಣಿ ವಯಸ್ಕರ ಜೇಬಿಗೆ – ಓರ್ವ ಅರೆಸ್ಟ್

  • ಐಫೋನ್‌ಗೆ ಕೊಡಲು ಹಣವಿಲ್ಲದೇ ಡೆಲಿವರಿ ಬಾಯ್ ಕತ್ತು ಕೊಯ್ದು ಕೊಲೆ

    ಐಫೋನ್‌ಗೆ ಕೊಡಲು ಹಣವಿಲ್ಲದೇ ಡೆಲಿವರಿ ಬಾಯ್ ಕತ್ತು ಕೊಯ್ದು ಕೊಲೆ

    ಹಾಸನ: ಬುಕ್ ಮಾಡಿದ್ದ ಐಫೋನ್‌ಗೆ (iPhone) ಕೊಡಲು ಹಣವಿಲ್ಲದೆ ಡೆಲಿವೆರಿ ಬಾಯ್‌ನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ ಪಟ್ಟಣದ ಅಂಚೆಕೊಪ್ಪಲಿನಲ್ಲಿ ನಡೆದಿದೆ.

    ಫೆಬ್ರವರಿ 11 ರಂದು ಅಂಚೆಕೊಪ್ಪಲು ಸಮೀಪದ ರೈಲ್ವೆ ಟ್ರ‍್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅರಸೀಕೆರೆ ನಗರ ಪೊಲೀಸರು (Arsikere City Police) ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಆಸ್ತಿ ವಿಷಯಕ್ಕೆ ರೈತನ ಮೇಲೆ ಮಾರಣಾಂತಿಕ ಹಲ್ಲೆ – ಸ್ವಾಮೀಜಿ, ಬೆಂಬಲಿಗರ ಮೇಲೆ ಎಫ್‌ಐಆರ್

    ಕೊಲೆ ಆರೋಪಿ ಹೇಮಂತ್ ದತ್ತ (20) ಸಿಕ್ಕಿಬಿದ್ದಿದ್ದು, ಹೇಮಂತ್ ನಾಯ್ಕ (23) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಆರೋಪಿ ಹೇಮಂತ್ ದತ್ತ ಕೊಲೆ ಮಾಡಿ ಮೃತದೇಹವನ್ನು ನಾಲ್ಕು ದಿನ ಮನೆಯಲ್ಲೇ ಇಟ್ಟುಕೊಂಡಿದ್ದ. ಸದ್ಯ ಈ ಘಟನೆ ಅರಸೀಕೆರೆ ಪಟ್ಟಣದ ಜನರನ್ನು ಬೆಚ್ಚಿಬೀಳಿಸಿದೆ.

    ಏನಿದು ಘಟನೆ?
    ಮೃತ ಹೇಮಂತ್ ನಾಯ್ಕ ಇ-ಕಾರ್ಟ್ ಎಕ್ಸ್‌ಪ್ರೆಸ್‌ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಹೇಮಂತ್ ದತ್ತ ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 46 ಸಾವಿರ ಮೌಲ್ಯದ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದ. ಇದರಿಂದ ಹೇಮಂತ್ ನಾಯ್ಕ ಫೆಬ್ರವರಿ 7ರಂದು ಅರಸೀಕೆರೆ ಪಟ್ಟಣದ, ಲಕ್ಷ್ಮೀಪುರ ಬಡಾವಣೆಯಲ್ಲಿರುವ ಹೇಮಂತ್ ದತ್ತ ಮನೆಗೆ ಐಫೋನ್ ಡೆಲಿವರಿ ಕೊಡಲು ಬಂದಿದ್ದ. ಅಲ್ಲಿಗೆ ಬಂದೊಡನೆ ಹೇಮಂತ್ ದತ್ತ ಐಫೋನ್ ಬಾಕ್ಸ್‌ ಅನ್ನು ಪನ್ ಮಾಡುವಂತೆ ಹೇಳಿದ್ದ. ಅದಕ್ಕೆ ನಾಯ್ಕ ಓಪನ್ ಮಾಡಲು ಆಗಲ್ಲ. ಮಾಡಿದ್ರೆ ಹಿಂದಿರುಗಿಸಿಲು ಸಾಧ್ಯವಿಲ್ಲ, 46 ಸಾವಿರ ಹಣ ಕೊಡಿ ಎಂದು ಕೇಳಿದ್ದ.

    ನಂತರ ಹೇಮಂತ್ ದತ್ತ ಇಲ್ಲೇ ಕುಳಿತುಕೊ ಹಣ ಕೊಡುತ್ತೇನೆ ಎಂದು ಹೇಳಿ ಹೋಗಿದ್ದ. ಬಳಿಕ ಕೊಡಲು ಹಣವಿಲ್ಲದೇ ಮನೆಯೊಳಗೆ ಕುಳಿತು ಮೊಬೈಲ್ ನೋಡುತ್ತಿದ್ದ ಹೇಮಂತ್ ನಾಯ್ಕನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ನಾಲ್ಕು ದಿನಗಳಾದರೂ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಫೆ.11 ರಂದು ಗೋಣಿಚೀಲದಲ್ಲಿ ಹೆಣ ತುಂಬಿಕೊಂಡು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಅಂಚೆಕೊಪ್ಪಲು ರೈಲ್ವೆ ಬ್ರಿಡ್ಜ್ ಬಳಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಮೃತದೇಹ ಸುಟ್ಟು ಹಾಕಿದ್ದ. ಈ ಸಂಬಂಧ ಅರಸೀಕೆರೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

    ಇದೇ ವೇಳೆ ಫೆ.7 ರಂದು ಕೆಲಸಕ್ಕೆ ಹೋಗಿದ್ದ ಸಹೋದರ ಮನೆ ಬಾರದ ಹಿನ್ನೆಲೆಯಲ್ಲಿ ಫೆ.8 ರಂದು ಹೇಮಂತ್ ನಾಯ್ಕ ಸಹೋದರ ಮಂಜ ನಾಯ್ಕ ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಪ್ರಕರಣ ಭೇದಿಸಿ, ಬೆಚ್ಚಿಬೀಳಿಸುವ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಜ್ಜಿಗೆ ಗುಂಡು ಹಾರಿಸಿದ 6ರ ಬಾಲಕಿ – ವೃದ್ಧೆ ಸಾವು

    ಆರೋಪಿ ಹೇಮಂತ್ ದತ್ತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ, ಐಫೋನ್‌ಗೆ ಕೊಡಲು ಹಣವಿಲ್ಲದೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನ್ನ ಸಂಬಳ ಭಾರೀ ಹೆಚ್ಚಾಯ್ತು: ಟಿಮ್‌ ಕುಕ್‌ ಸಂಬಳ ಅರ್ಧಕ್ಕರ್ಧ ಇಳಿಕೆ

    ನನ್ನ ಸಂಬಳ ಭಾರೀ ಹೆಚ್ಚಾಯ್ತು: ಟಿಮ್‌ ಕುಕ್‌ ಸಂಬಳ ಅರ್ಧಕ್ಕರ್ಧ ಇಳಿಕೆ

    ಕ್ಯಾಲಿಫೋರ್ನಿಯಾ: ಆಪಲ್‌(Apple) ಕಂಪನಿಯ ಸಿಇಒ ಟಿಮ್‌ ಕುಕ್‌ (Tim Cook) ಸಂಬಳ ಭಾರೀ ಕಡಿತವಾಗಿದೆ.

    ಅಚ್ಚರಿಯ ವಿಷಯ ಏನೆಂದರೆ ಕಂಪನಿ ಸಂಬಳವನ್ನು (Salary) ಕಡಿತ ಮಾಡಿಲ್ಲ. ಸ್ವತ: ಟಿಮ್‌ ಕುಕ್‌ ತನ್ನ ಸಂಬಳ ಬಹಳ ಹೆಚ್ಚಾಗಿದೆ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

    ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್‌ ಕಮಿಷನ್‌ಗೆ ಮಾಹಿತಿ ನೀಡಿದ ಆಪಲ್‌ ಟಿಮ್‌ ಕುಕ್‌ ಅವರ ಸಂಬಳವನ್ನು 49 ದಶಲಕ್ಷ ಡಾಲರ್‌ಗೆ (ಅಂದಾಜು 398 ಕೋಟಿ ರೂ.) ಪರಿಷ್ಕರಿಸಲಾಗಿದೆ ಎಂದು ತಿಳಿಸಿದೆ.

    ಕುಕ್‌ 2022ರಲ್ಲಿ 99.4 ದಶಲಕ್ಷ ಡಾಲರ್‌(ಅಂದಾಜು 808 ಕೋಟಿ ರೂ.) ಪಡೆಯುತ್ತಿದ್ದರು. ಈ ವರ್ಷದ ಪರಿಷ್ಕರಣೆಯಿಂದ ಅರ್ಧಕ್ಕರ್ಧ ಸಂಬಳ ಇಳಿಕೆಯಾಗಿದೆ.  ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

    ಕಳದ ವರ್ಷ ನಡೆದ ವಾರ್ಷಿಕ ಷೇರುದಾರರ ಸಭೆಯಲ್ಲಿ ಟಿಮ್‌ ಕುಕ್‌ ಸಂಬಳದ ಬಗ್ಗೆ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಬಹುಸಂಖ್ಯೆ ಷೇರುದಾರರು ಕುಕ್‌ ಸಂಬಳದ ಪರವಾಗಿಯೇ ಮತ ಹಾಕಿದ್ದರು. ಹೀಗಾಗಿ ಟಿಮ್‌ ಕುಕ್‌ ಸಂಬಳ ಪರಿಷ್ಕರಣೆಯಾಗಿರಲಿಲ್ಲ.

    ಕುಕ್  1998 ರಲ್ಲಿ ಆಪಲ್‌ ಕಂಪನಿ ಸೇರಿದ್ದರು. ಸ್ವೀವ್‌ ಜಾಬ್ಸ್‌ ನಿಧನದ ಬಳಿಕ 2011ರಲ್ಲಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಕುಕ್‌ ಅಧಿಕಾರದ ಅವಧಿಯಲ್ಲಿ ಆಪಲ್‌ ಕಂಪನಿಯ ಮಾರುಕಟ್ಟೆಯ ಮೌಲ್ಯ ಭಾರೀ ಏರಿಕೆಯಾಗಿದೆ. 2011ರಲ್ಲಿ 348 ಶತಕೋಟಿ ಡಾಲರ್‌ ಮೌಲ್ಯವನ್ನು ಹೊಂದಿದ್ದ ಆಪಲ್‌ ಕಂಪನಿ ಈಗ 2.12 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಹೆಚ್ಚಿಸುವಲ್ಲಿ ಕುಕ್‌ ಶ್ರಮ  ಬಹಳಷ್ಟಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

    ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

    ನವದೆಹಲಿ: ಐಫೋನ್‌ಗಳನ್ನು ಆಮದು ಮಾಡಿಕೊಳ್ಳುವ ಕಾಲ ಹೋಗಿದ್ದು ಈಗ ರಫ್ತು ಮಾಡುವ ಕಾಲ ಬಂದಿದೆ.  2022-23ರ ಹಣಕಾಸು ವರ್ಷದಲ್ಲಿನ ಮೊಬೈಲ್‌ ರಫ್ತುಗಳ ಪೈಕಿ ಐಫೋನ್‌(iPhone) ಪಾಲು ಶೇ.40 ರಷ್ಟಿದೆ ಎಂದು ನೀತಿ ಆಯೋಗದ ಮಾಜಿ ಸಿಇಒ, ಜಿ20 ಶೆರ್ಪಾ ಅಮಿತಾಬ್ ಕಾಂತ್(Amitabh Kant) ತಿಳಿಸಿದ್ದಾರೆ.

    2022 ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಭಾರತದ ಮೊಬೈಲ್‌ ರಫ್ತು(Mobile Exports) 50,000 ಕೋಟಿ ರೂ. ದಾಟಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು 110 ಪಟ್ಟು ಹೆಚ್ಚಾಗಿದೆ. ಆಪಲ್‌ ಐಫೋನ್‌ ತಯಾರಿಸುವ ಫಾಕ್ಸ್‌ಕಾನ್, ಪೆಗಾಟ್ರಾನ್,‌ ವಿಸ್ಟ್ರಾನ್‌ ಮತ್ತು ಸ್ಯಾಮ್‌ಸಂಗ್‌ನಿಂದ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ಆತ್ಮನಿರ್ಭರ್ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರ ಭಾರತದ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆಗಳನ್ನು ಆಕರ್ಷಿಸಿ ರಫ್ತುಗಳನ್ನು ಹೆಚ್ಚಿಸಲು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸಂಯೋಜಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು 14 ವಲಯಗಳಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ(Production Linked Incentive) ಯೋಜನೆ ಪ್ರಾರಂಭಿಸಿದೆ. ಇದನ್ನೂ ಓದಿ: ಐಫೋನ್ ಫ್ಯಾಕ್ಟರಿಯಲ್ಲಿ ಘರ್ಷಣೆ – ಲಾಕ್‌ಡೌನ್ ವಿಸ್ತರಿಸಿದ ಚೀನಾ

    ಮಂಗಳವಾರ ಕೇಂದ್ರ ಸರ್ಕಾರ ಪಿಎಲ್‌ಐ ಅಡಿ ಫಾಕ್ಸ್‌ಕಾನ್ ಇಂಡಿಯಾ ಮತ್ತು ಪ್ಯಾಜೆಟ್ ಎಲೆಕ್ಟ್ರಾನಿಕ್ಸ್ ಕಂಪನಿಗಳಿಗೆ ಕ್ರಮವಾಗಿ 357.17 ಕೋಟಿ ರೂ. ಮತ್ತು 58.29 ಕೋಟಿ ರೂ. ಪ್ರೋತ್ಸಾಹಧನ ನೀಡಲು ಸರ್ಕಾರ ಅನುಮೋದಿಸಿದೆ. ಇದನ್ನೂ ಓದಿ: ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ ಡಿಸ್‍ಪ್ಲೇ ಘಟಕ ಸ್ಥಳಾಂತರ

    ಭಾರತವನ್ನು ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್‍ಐ) ಯೋಜನೆಯನ್ನು 2021 ರಿಂದ  ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‍ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಮತ್ತು ವಿಶ್ವದ ಹಲವು ಕಂಪನಿಗಳು ಆಯ್ಕೆಯಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಪೋಷಕರು ಐಫೋನ್ ಕೊಡಿಸಿಲ್ಲವೆಂದು ಖಿನ್ನತೆಗೊಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ

    ಪೋಷಕರು ಐಫೋನ್ ಕೊಡಿಸಿಲ್ಲವೆಂದು ಖಿನ್ನತೆಗೊಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ

    ಮುಂಬೈ: ಎಷ್ಟೇ ಹೇಳಿದರೂ ಪೋಷಕರು (Parents) ಐಫೋನ್ (iPhone) ಕೊಡಿಸಿಲ್ಲ ಎಂದು ವಿದ್ಯಾರ್ಥಿನಿಯೊಬ್ಬಳು (Student)  ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ.

    ನಾಗ್ಪುರ (Nagpur) ಜಿಲ್ಲೆಯ ಹಿಂಗ್ನಾ ಪಟ್ಟಣದ ರೈಸೋನಿ ಕಾಲೇಜಿನಲ್ಲಿ 18 ವರ್ಷದ ವಿದ್ಯಾರ್ಥಿನಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿ ಮನೆಯವರ ಬಳಿ ಐಫೋನ್ ಕೊಡಿಸುವಂತೆ ಒತ್ತಾಯಿಸಿದ್ದಳು.

    crime

    ವಿದ್ಯಾರ್ಥಿನಿಯ ಪೋಷಕರು ಮನೆ ಕೆಲಸದವರಾಗಿದ್ದು, ತಕ್ಷಣ ಕೊಡಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಯಾವತ್ತಾದರೂ ಕೊಡಿಸುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯೂ ಕೂಡಲೇ ಐಫೋನ್ ಬೇಕೇ ಬೇಕು ಎಂದು ಹೇಳಿದ್ದಳು. ಆದರೆ ಪೋಷಕರಿಗೆ ತಕ್ಷಣ ಕೊಡಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ದೇವೇಗೌಡರ ಆರೋಗ್ಯ ವಿಚಾರಿಸುವ ನೆಪದಲ್ಲಿ ರಾಜಕೀಯ ನಾಯಕರು ಸಿಂಪತಿ ಗಿಟ್ಟಿಸಿಕೊಳ್ತಿದ್ದಾರೆ: ಶರವಣ

    crime

    ಇದರಿಂದ ನಿರಾಶೆಗೊಂಡ ಆಕೆ ತನ್ನ ಪೋಷಕರಿಗೆ ಐಫೋನ್ ಕೊಡಲು ಆಸೆಯಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ನಾಗ್ಪುರ ನಗರದ ಖಾರ್ಬಿ ಪ್ರದೇಶದಲ್ಲಿ ತನ್ನ ಮನೆಯ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾಳೆ. ಇದನ್ನೂ ಓದಿ: ಹೊಸ ರಾಷ್ಟ್ರೀಯ ಪಕ್ಷ ಘೋಷಿಸಲಿರುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್

    Live Tv
    [brid partner=56869869 player=32851 video=960834 autoplay=true]

  • ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ?

    ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ?

    ನವದೆಹಲಿ: ಅಟೋಮೊಬೈಲ್‌, ಸಾಫ್ಟ್‌ವೇರ್‌ ಸೇರಿದಂತೆ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಟಾಟಾ ಸಮೂಹ (Tata Group) ಸ್ಮಾರ್ಟ್‌ಫೋನ್‌ ಉದ್ಯಮಕ್ಕೆ ಕೈ ಹಾಕುವ ಸಾಧ್ಯತೆಯಿದೆ.

    ಆಪಲ್(Apple) ಕಂಪನಿಯ ಐಫೋನ್‌ಗಳನ್ನು(iPhone) ಉತ್ಪಾದನೆ ಮಾಡಲು ಟಾಟಾ ಕಂಪನಿ ಚಿಂತನೆ ನಡೆಸಿದ್ದು, ಈ ಸಂಬಂಧ ಮಾತುಕತೆ ನಡೆಯುತ್ತಿದೆ ಎಂಬ ವರದಿ ಪ್ರಕಟವಾಗಿದೆ.

    ಪ್ರಸ್ತುತ ಐಫೋನ್‌ಗಳನ್ನು ತೈವಾನ್‌ ಮೂಲದ ಫಾಕ್ಸ್‌ಕಾನ್‌ (Foxconn) ಮತ್ತು ವಿಸ್ಟ್ರಾನ್‌(Wistron ) ಕಂಪನಿ ತಯಾರಿಸುತ್ತಿದೆ. ಬಹುತೇಕ ಐಫೋನ್‌ಗಳ ಉತ್ಪಾದನೆ ಚೀನಾ ಮತ್ತು ತೈವಾನ್‌ನಲ್ಲಿ ಆಗುತ್ತಿದೆ. ಪ್ರಸ್ತುತ ಬಹುತೇಕ ದೇಶಗಳು ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಮುಂದಾಗುತ್ತಿದೆ. ಈ ಸಂದರ್ಭದಲ್ಲೇ ಟಾಟಾ ಭಾರತದಲ್ಲೇ ಐಫೋನ್ ಉತ್ಪಾದನೆ ಮಾಡುವ ಕುರಿತು ಮಾತುಕತೆ ಆರಂಭಿಸಿದೆ.

     

    ಈಗಾಗಲೇ ಫಾಕ್ಸ್‌ಕಾನ್‌ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್‌ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ. ಈಗ ವಿಸ್ಟ್ರಾನ್‌ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್‌ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್‌ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    2008ರಲ್ಲಿ ಐಫೋನ್‌ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್‌ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್‌ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್‌ ಭಾರತದಲ್ಲೇ ಹೆಚ್ಚು ಐಫೋನ್‌ ಉತ್ಪಾದನೆಗೆ ಮುಂದಾಗಿದೆ.

    2021ರಲ್ಲಿ ಆಪಲ್‌ ಕಂಪನಿ ಭಾರತದಲ್ಲಿ 75 ಲಕ್ಷ ಐಫೋನ್‌ ಉತ್ಪಾದನೆ ಮಾಡಿತ್ತು. 2022ರಲ್ಲಿ 1-2 ಕೋಟಿ ಫೋನ್‌ ಉತ್ಪಾದನೆ ಮಾಡಲು ಮುಂದಾಗಿದೆ.

    ವಿಶ್ವದ ಐಫೋನ್‌ ಮಾರಾಟದಲ್ಲಿ ಕಳೆದ ವರ್ಷ ಭಾರತದ ಘಟಕದ ಪಾಲು ಶೇ.3 ಇದ್ದರೆ 2022ರಲ್ಲಿ ಶೇ.5-7ಕ್ಕೆ ಏರಿಕೆಯಾಗಿದೆ. 2022ರಲ್ಲಿ ಭಾರತದಲ್ಲಿ ಮಾರಾಟವಾದ ಐಫೋನ್‌ ಪೈಕಿ ಶೇ.85 ರಷ್ಟು ಫೋನುಗಳು ಮೇಡ್‌ ಇನ್‌ ಇಂಡಿಯಾ ಫೋನ್‌ ಆಗಿರುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಐಫೋನ್, ಮ್ಯಾಕ್‌ಗಳಿಗೆ ಹ್ಯಾಕರ್‌ಗಳ ಭೀತಿ! – ಆಪಲ್ ಎಚ್ಚರಿಕೆ

    ಐಫೋನ್, ಮ್ಯಾಕ್‌ಗಳಿಗೆ ಹ್ಯಾಕರ್‌ಗಳ ಭೀತಿ! – ಆಪಲ್ ಎಚ್ಚರಿಕೆ

    ವಾಷಿಂಗ್ಟನ್: ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್ ಕಂಪ್ಯೂಟರ್‌ಗಳ ನಿಯಂತ್ರಣವನ್ನು ಹ್ಯಾಕರ್‌ಗಳು ವಶಪಡಿಸಿಕೊಳ್ಳಲು ಸಾಧ್ಯವಾಗುವಂತಹ ದೋಷದ ಬಗ್ಗೆ ಆಪಲ್ ಎಚ್ಚರಿಕೆ ನೀಡಿದೆ. ಹಾಗೂ ತುರ್ತಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವಂತೆ ಬಳಕೆದಾರರಿಗೆ ಒತ್ತಾಯಿಸಿದೆ.

    ಆಪಲ್ ಡಿವೈಸ್‌ಗಳಲ್ಲಿ ದೋಷ ಕಂಡುಬಂದಿದ್ದು, ಅದನ್ನು ಲಾಭವಾಗಿ ಉಪಯೋಗಿಸಿಕೊಂಡು ಹ್ಯಾಕರ್‌ಗಳು ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಕಂಪನಿ ತಿಳಿಸಿದೆ. ಇದನ್ನು ಸರಿಪಡಿಸಲು ತಕ್ಷಣವೇ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲು ಕೇಳಿಕೊಂಡಿದೆ. ಇದನ್ನೂ ಓದಿ: 2 ವಿಮಾನಗಳು ಪರಸ್ಪರ ಡಿಕ್ಕಿ – ಹಲವರು ಸಾವು

    ತಾಂತ್ರಿಕ ದೋಷಗಳನ್ನು ಬಳಸಿಕೊಂಡು ಹ್ಯಾಕರ್‌ಗಳು ಆಪಲ್ ಸಾಧನಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿದೆ ಎಂದಿದೆ. ಆದರೆ ಈಗಾಗಲೇ ಎಷ್ಟರ ಮಟ್ಟಿಗೆ ಆಪಲ್ ಡಿವೈಸ್‌ಗಳು ಹ್ಯಾಕರ್‌ಗಳ ವಶವಾಗಿದೆ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್ ಕಂಪ್ಯೂಟರ್‌ಗಳಿಗೆ ಈಗಾಗಲೇ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದೆ. ಇದನ್ನೂ ಓದಿ: ಮಹಿಳೆಯರು ಬಾಯ್‍ಫ್ರೆಂಡ್‍ನ ಯಾವಾಗ ಬೇಕಾದ್ರೂ ಚೇಂಜ್ ಮಾಡ್ತಾರೆ – ನಿತೀಶ್ ಕುಮಾರ್‌ಗೆ ಬಿಜೆಪಿ ನಾಯಕನ ಟಾಂಗ್

    Live Tv
    [brid partner=56869869 player=32851 video=960834 autoplay=true]

  • ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್

    ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್

    ವಾಷಿಂಗ್ಟನ್: ಆಪಲ್ ಕಂಪನಿ ತನ್ನ ಐಫೋನ್, ಐ ಪ್ಯಾಡ್, ಹಾಗೂ ಮ್ಯಾಕ್ ಸಾಧನಗಳಿಗಾಗಿ ಹೊಸ ಭದ್ರತಾ ಫೀಚರ್‌ಅನ್ನು ಹೊರತರುತ್ತಿದೆ. ಇದು ಮುಖ್ಯವಾಗಿ ಉನ್ನತ ಪ್ರೊಫೈಲ್ ಬಳಕೆದಾರರ ಮೇಲಿನ ಉದ್ದೇಶಿತ ಸೈಬರ್ ಅಟ್ಯಾಕ್‌ಗಳನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ.

    ಲಾಕ್‌ಡೌನ್ ಮೋಡ್ ಹೆಸರಿನ ಹೊಸ ಐಚ್ಛಿಕ(ಆಪ್ಶನಲ್) ಫೀಚರ್, ಕೆಲವು ಉನ್ನತ ವ್ಯಕ್ತಿಗಳು ತಮ್ಮ ಆಪಲ್ ಡಿವೈಸ್‌ಗಳಲ್ಲಿ ಬಳಸಬಹುದಾಗಿದ್ದು, ಇದು ಸೈಬರ್ ಅಟ್ಯಾಕ್‌ಗಳಿಂದ ರಕ್ಷಣೆ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಇದು ಬಳಕೆದಾರರ ಸಾಧನಗಳನ್ನು ಹ್ಯಾಕ್ ಮಾಡುವುದನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ

    ಕಳೆದ ಹಲವು ವರ್ಷಗಳಿಂದ ಉನ್ನತ ವ್ಯಕ್ತಿಗಳ ಡಿವೈಸ್‌ಗಳನ್ನು ಹ್ಯಾಕ್ ಮಾಡಿರುವಂತಹ ಹಲವು ಪ್ರಕರಣಗಳು ವರದಿಯಾಗಿವೆ. ಮುಖ್ಯವಾಗಿ ಕಂಪನಿ ಸ್ಪೈವೇರ್ ನಂತಹ ದಾಳಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಫೀಚರ್ ಅನ್ನು ಹೊರತಂದಿದೆ ಎಂದು ತಿಳಿಸಿದೆ.

    ಪ್ರಪಂಚದಾದ್ಯಂತ ಸುಮಾರು 150 ದೇಶಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳನ್ನು ಗುರಿಪಡಿಸಿಕೊಂಡು ಸೈಬರ್ ದಾಳಿಗಳು ನಡೆಯುತ್ತವೆ. ಇದಕ್ಕಾಗಿ ಲಾಕ್‌ಡೌನ್ ಮೋಡ್ ಫೀಚರ್ ಅನ್ನು ತರಲಾಗಿದ್ದು, ಇದನ್ನು ಬಳಕೆದಾರರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು 

    ವರದಿಗಳ ಪ್ರಕಾರ ಲಾಕ್‌ಡೌನ್ ಮೋಡ್, ಆಪಲ್ ಡಿವೈಸ್‌ಗಳಲ್ಲಿ ಮೆಸೇಜಿಂಗ್ ಆಪ್‌ಗಳ ಅಟ್ಯಾಚ್‌ಮೆಂಟ್‌ಗಳನ್ನು ಬ್ಲಾಕ್ ಮಾಡುತ್ತದೆ. ಇವು ಹ್ಯಾಕರ್‌ಗಳಿಗೆ ಡಿವೈಸ್‌ಗಳನ್ನು ಹ್ಯಾಕ್‌ಮಾಡಲು ಲಭ್ಯವಿರುವ ಸುಲಭದ ಹಾಗೂ ಮುಖ್ಯವಾದ ವಿಧಾನವಾಗಿದೆ.

    ಆಪಲ್ ಮುಂಬರುವ ಐಒಎಸ್ 16, ಐಪ್ಯಾಡ್ ಐಎಸ್ 16 ಹಾಗೂ ಮ್ಯಾಕ್ ಒಎಸ್‌ಗಳಲ್ಲಿ ನವೀಕರಣದ ಭಾಗವಾಗಿ ಲಾಕ್‌ಡೌನ್ ಮೋಡ್‌ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ಫೀಚರ್ ಸದ್ಯ ಬೀಟಾ ಆವೃತ್ತಿಯಲ್ಲಿ ಪರೀಕ್ಷೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕೆಲವು ಐಫೋನ್‌ಗಳಲ್ಲಿ ಸ್ಥಗಿತವಾಗಲಿದೆ ವಾಟ್ಸಪ್

    ಕೆಲವು ಐಫೋನ್‌ಗಳಲ್ಲಿ ಸ್ಥಗಿತವಾಗಲಿದೆ ವಾಟ್ಸಪ್

    ವಾಷಿಂಗ್ಟನ್: ವಾಟ್ಸಪ್ ಅಕ್ಟೋಬರ್ ತಿಂಗಳಿನಿಂದ ಕೆಲವು ಐಫೋನ್ ಮಾಡೆಲ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ ಎಂದು ವರದಿಯಾಗಿದೆ.

    ಮೆಟಾ ಮಾಲೀಕತ್ವದ ವಾಟ್ಸಪ್ ಐಫೋನ್‌ನ ಆಯ್ದ ಮಾಡೆಲ್‌ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಅಕ್ಟೋಬರ್ 24ರಿಂದ ನಿಲ್ಲಿಸಲಿದೆ ಎಂದು ವರದಿಯಾಗಿದೆ. ವಾಟ್ಸಪ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಸ್ಥಗಿತಗೊಳಿಸುವ ದಿನ ಹತ್ತಿರವಾದಂತೆ ಇದನ್ನು ದೃಢೀಕರಿಸುವ ಸಾಧ್ಯತೆ ಇದೆ.

    ವೆಬಿಟೈನ್ಫೋ ಇತ್ತೀಚಿನ ವರದಿ ಪ್ರಕಾರ, ಆಪಲ್ ಕೆಲವು ಐಫೋನ್ ಬಳಕೆದಾರರಿಗೆ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಬಗ್ಗೆ ಎಚ್ಚರಿಕೆ ನೀಡಿದೆ. ಐಒಎಸ್ 10 ಹಾಗೂ ಐಒಎಸ್ 11 ಸಾಫ್ಟ್ವೇರ್ ಉಳ್ಳ ಐಫೋನ್‌ಗಳಲ್ಲಿ ವಾಟ್ಸಪ್‌ನ ಸಂದೇಶ ಸೇವೆ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಹೀಗಾಗಿ ನಿಮ್ಮ ಐಪೋನ್ ಅನ್ನು ನವೀಕರಿಸಿ(ಅಪ್‌ಡೇಟ್) ಅಥವಾ ಪರಿಣಾಮ ಎದುರಿಸಲು ಸಿದ್ಧರಾಗುವಂತೆ ತಿಳಿಸಿದೆ. ಇದನ್ನೂ ಓದಿ: Unknown ನಂಬರ್ ಯಾರದು ಎಂದು ತಿಳಿಯಲು ಇನ್ಮುಂದೆ ಟ್ರೂ ಕಾಲರ್ ಬೇಡ

    ಆಪಲ್‌ನ ಹೊಸ ಫೋನ್‌ಗಳನ್ನು ಹೊಂದಿರುವ ಬಳಕೆದಾರರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಐಒಎಸ್ 10 ಹಾಗೂ ಐಒಎಸ್ 11 ಹಳೆಯ ಸಾಫ್ಟ್ವೇರ್‌ಗಳಾಗಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ ಐಫೋನ್‌ಗಳಲ್ಲಿ ಹೊಸ ಸಾಫ್ಟ್ವೇರ್‌ಗಳನ್ನು ಪಡೆಯಲು ನವೀಕರಣದ(ಅಪ್‌ಡೇಟ್) ಆಯ್ಕೆ ಇದೆ.

    ವಾಟ್ಸಪ್‌ನ ಸ್ಥಗಿತವನ್ನು ಎದುರಿಸಬಹುದಾದ ಆಪಲ್ ಫೋನ್‌ಗಳೆಂದರೆ ಐಫೋನ್ 5 ಹಾಗೂ ಐಫೋನ್ 5ಸಿ ಆಗಿದೆ. ನೀವು ಐಪೋನ್ ಹೊಂದಿದ್ದರೆ, ನಿಮ್ಮ ಫೋನ್ ಇತ್ತೀಚಿನ ಸಾಫ್ಟ್ವೇರ್ ಆವೃತ್ತಿಗೆ ಅಪ್‌ಡೇಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದನ್ನೂ ಓದಿ: 2030ರ ವೇಳೆಗೆ ಭಾರತಕ್ಕೆ 6ಜಿ ನೆಟ್‌ವರ್ಕ್ – ಪ್ರಧಾನಿ ಮೋದಿ

    ನಿಮ್ಮ ಐಫೋನ್ ಯಾವ ಸಾಫ್ಟ್ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಲು, ‘ಸೆಟ್ಟಿಂಗ್ಸ್ ಮೆನು’ ಹೋಗಿ, ‘ಎಬೌಟ್’ ಬಳಿಕ ‘ಸಾಫ್ಟ್ವೇರ್’ ಅಪ್‌ಡೇಟ್ ಕ್ಲಿಕ್ ಮಾಡಿ. ಇತ್ತೀಚಿನ ಹೆಚ್ಚಿನ ಆಪಲ್ ಪೋನ್‌ಗಳು ಐಒಎಸ್ 15ರ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.