Tag: iphone

  • ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರಿಂದ ಹಲ್ಲೆ

    ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರಿಂದ ಹಲ್ಲೆ

    ನವದೆಹಲಿ: ಆಪಲ್‌ (Apple) ತನ್ನ ಲೇಟೆಸ್ಟ್‌ ಐಫೋನ್‌ 15 ಸೀರೀಸ್‌ ((iPhone 15 Series) ಮಾರಾಟವನ್ನು ಭಾರತದಲ್ಲಿ ಅಧಿಕೃತವಾಗಿ ಪ್ರಾರಂಭಿಸಿದೆ. ಐಫೋನ್‌ ಕೊಳ್ಳಲು ಗ್ರಾಹಕರ ದಂಡೇ ಸ್ಟೋರ್‌ಗಳ ಕಡೆ ಮುಖ ಮಾಡಿದೆ. ಐಫೋನ್‌ ವಿತರಣೆಗೆ ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆಯೇ ಗ್ರಾಹಕರು ಹಲ್ಲೆ ನಡೆಸಿರುವ ಘಟನೆ ನವದೆಹಲಿಯಲ್ಲಿ (New Delhi) ನಡೆದಿದೆ.

    ಉತ್ತರ ದೆಹಲಿಯ ಕಮಲಾ ನಗರ ಮಾರುಕಟ್ಟೆಯಲ್ಲಿ ಘಟನೆ ನಡೆದಿದ್ದು, ದೃಶ್ಯದ ವೀಡಿಯೋ ಇದೀಗ ವೈರಲ್ ಆಗಿದೆ. ಶುಕ್ರವಾರ ಇಬ್ಬರು ಗ್ರಾಹಕರು, ಎಲೆಕ್ಟ್ರಾನಿಕ್ಸ್ ಶೋರೂಮ್‌ನ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದವರನ್ನು ಜಸ್ಕಿರತ್ ಸಿಂಗ್ ಮತ್ತು ಮನದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ಐಫೋನ್‌ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರು ರೋಷಗೊಂಡು ಹಲ್ಲೆ ನಡೆಸಿದ್ದಾರೆ. 10 ಕ್ಕೂ ಹೆಚ್ಚು ಇತರೆ ಸಿಬ್ಬಂದಿ ಧಾವಿಸಿದರೂ ಹಲ್ಲೆ ತಪ್ಪಿಸುವುದನ್ನು ಸಾಧ್ಯವಾಗಿಲ್ಲ. ಸಿಬ್ಬಂದಿ ಟೀ-ಶರ್ಟ್‌ ಕೂಡ ಹರಿದು ಹಾಕಲಾಗಿದೆ.

    ನಾನು ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಇಲ್ಲಿದ್ದೇನೆ. ಭಾರತದ ಮೊದಲ ಆಪಲ್ ಸ್ಟೋರ್‌ನಲ್ಲಿ ಮೊದಲ ಐಫೋನ್ ಪಡೆಯಲು ನಾನು 17 ಗಂಟೆಗಳ ಕಾಲ ಸರದಿಯಲ್ಲಿ ಕಾಯುತ್ತಿದ್ದೇನೆ. ನಾನು ಅಹಮದಾಬಾದ್‌ನಿಂದ ಬಂದಿದ್ದೇನೆ ಎಂದು ಗ್ರಾಹಕರೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ‘ನಮೋ’ ಜೆರ್ಸಿ ಗಿಫ್ಟ್ ನೀಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ನವದೆಹಲಿ: ಆಪಲ್ (Apple) ತನ್ನ ಲೇಟೆಸ್ಟ್ ಐಫೋನ್ 15 ಸೀರೀಸ್ (iPhone 15 Series) ಮಾರಾಟವನ್ನು ಭಾರತದಲ್ಲಿ ಶುಕ್ರವಾರ ಅಧಿಕೃತವಾಗಿ ಪ್ರಾರಂಭಿಸಿದೆ. ಉದ್ಘಾಟನಾ ದಿನದಂದೇ ಐಫೋನ್ ಖರೀದಿಗಾಗಿ ಗ್ರಾಹಕರು ಐಫೋನ್ ಸ್ಟೋರ್‌ಗಳಲ್ಲಿ ತಮ್ಮ ತುದಿಗಾಲಿನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಬೆಳ್ಳಂಬೆಳಗ್ಗೆ ಗ್ರಾಹಕರು ದೆಹಲಿ (Delhi) ಹಾಗೂ ಮುಂಬೈನ (Mumbai) ಸ್ಟೋರ್‌ಗಳಲ್ಲಿ ಕ್ಯೂ ನಿಂತಿದ್ದು, ಅದರ ಫೀಚರ್‌ಗಳನ್ನು ಅನುಭವಿಸಲು ಮೊದಲಿಗರಾಗುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

    ಮುಂಬೈನ ಬಿಕೆಸಿ ಮತ್ತು ನವದೆಹಲಿಯ ಸಾಕೇತ್‌ನಲ್ಲಿರುವ ಆಪಲ್ ಸ್ಟೋರ್‌ಗಳಲ್ಲಿ ಮುಂಜಾನೆಯಿಂದಲೇ ಉದ್ದನೆಯ ಸರದಿ ಸಾಲುಗಳು ಕಂಡುಬಂದಿದೆ. ಮಳಿಗೆಗಳು ತೆರೆಯುವ ಮೊದಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನವದೆಹಲಿಯ ಸಾಕೇತ್‌ನ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿನ ಆಪಲ್ ಸ್ಟೋರ್‌ನಲ್ಲಿ ಮೊದಲ ಗ್ರಾಹಕ ರಾಹುಲ್, ನಾನು ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಖರೀದಿಸಿದ್ದು, ನಾನು ಮುಂಜಾನೆ 4 ಗಂಟೆಯಿಂದ ಸರದಿಯಲ್ಲಿದ್ದೆ ಮತ್ತು ನಂತರ ಫೋನ್ ಖರೀದಿಸಿದೆ ಎಂದು ಹೇಳಿದ್ದಾರೆ.

    ಆಪಲ್ ಇಂಡಿಯಾ ಪ್ರಸ್ತುತ ಐಫೋನ್ 15 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಮೇಲೆ 6,000 ರೂ. ಹಾಗೂ ಐಫೋನ್ 15 ಮತ್ತು 15 ಪ್ಲಸ್ ನಲ್ಲಿ 5,000 ರೂ. ರಿಯಾಯಿತಿಯನ್ನು ಪಡೆಯಲು ತಮ್ಮ ವೆಬ್‌ಸೈಟ್‌ನಲ್ಲಿ ಅರ್ಹ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಲು ಸೂಚಿಸಿದೆ.

    ಈ ಮೂಲಕ ಐಫೋನ್ 15ನ ಬೆಲೆ 79,900 ರೂ.ಯಿಂದ 74,900 ರೂ.ಗೆ ಕಡಿಮೆಯಾಗಿದೆ. 89,900 ರೂ.ಯ ಐಫೋನ್ 15 ಪ್ಲಸ್ 84,900 ರೂ.ಗೆ ಲಭ್ಯವಿದೆ. ಐಫೋನ್ 15 ಪ್ರೊ 1,34,900 ರೂ.ಯಿಂದ 1,28,900 ರೂ.ಗೆ ಕಡಿಮೆಯಾಗಿದೆ. ಐಫೋನ್ 15 ಪ್ರೊ ಮ್ಯಾಕ್ಸ್ 1,59,900 ರೂ. ಯಿಂದ 1,53.900 ರೂ. ಗೆ ರಿಯಾಯಿತಿಯಾಗಿದೆ. ಇದನ್ನೂ ಓದಿ: ಐಫೋನ್‌ನಲ್ಲಿದೆ ಭಾರತದ ನಾವಿಕ್ – ಏನಿದು ಸ್ವದೇಶಿ ಜಿಪಿಎಸ್‌ ವ್ಯವಸ್ಥೆ?

    ಗ್ರಾಹಕರು ಇಎಂಐ ಮಾಸಿಕ ಕಂತು ಯೋಜನೆಗಳಿಂದ ಐಫೋನ್ ಖರೀದಿ ಆಯ್ಕೆ ಮಾಡಬಹುದು. ಆಯ್ದ ಬ್ಯಾಂಕ್‌ಗಳಿಂದ 3 ಅಥವಾ 6 ತಿಂಗಳುಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ ಯೋಜನೆಗಳ ಆಯ್ಕೆಯನ್ನು ಸಹ ಪಡೆಯಬಹುದು. ಗ್ರಾಹಕರು ತಮ್ಮ ಆಪಲ್ ಸಾಧನವನ್ನು ತಮ್ಮ ಪ್ರಸ್ತುತ ಸ್ಮಾರ್ಟ್ಫೋನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತಷ್ಟು ರಿಯಾಯಿತಿಯನ್ನು ಪಡೆಯುವ ಟ್ರೇಡ್ ಇನ್ ಸ್ಕೀಮ್ ಲಭ್ಯವಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಫೋನ್‌ನಲ್ಲಿದೆ ಭಾರತದ ನಾವಿಕ್ – ಏನಿದು ಸ್ವದೇಶಿ ಜಿಪಿಎಸ್‌ ವ್ಯವಸ್ಥೆ?

    ಐಫೋನ್‌ನಲ್ಲಿದೆ ಭಾರತದ ನಾವಿಕ್ – ಏನಿದು ಸ್ವದೇಶಿ ಜಿಪಿಎಸ್‌ ವ್ಯವಸ್ಥೆ?

    ನವದೆಹಲಿ: ಆಪಲ್ (Apple) ಕಂಪನಿ ಸೆಪ್ಟೆಂಬರ್ 13ರಂದು ತನ್ನ ಐಫೋನ್ 15 (iPhone 15) ಜಾಗತಿಕವಾಗಿ ಅನಾವರಣಗೊಳಿಸಿದೆ. ಕಂಪನಿ ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ 15 ಪ್ರೋ, ಐಫೋನ್ 15 ಪ್ರೋ ಮ್ಯಾಕ್ಸ್ ಹ್ಯಾಂಡ್‌ಸೆಟ್‌ಗಳು ಭಾರತದ ನ್ಯಾವಿಗೇಷನ್ ಸಿಸ್ಟಂ ನಾವಿಕ್ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್‌ಸ್ಟೆಲೇಷನ್) ಅನ್ನು ಬೆಂಬಲಿಸಲಿದೆ ಎಂದು ತಿಳಿಸಿದೆ.

    ಐಫೋನ್ ನಾವಿಕ್ (NavIC) ಅನ್ನು ತನ್ನ ಉತ್ಪನ್ನಗಳಲ್ಲಿ ಬೆಂಬಲಿಸುವಂತೆ ಮಾಡುತ್ತಿರುವುದು ಇದೇ ಮೊದಲು. ಆದರೆ ಇದು ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಆವೃತ್ತಿಗಳನ್ನು ಬೆಂಬಲಿಸುವುದಿಲ್ಲ ಎಂಬುದು ಗಮನಿಸಬೇಕಾದ ವಿಚಾರ.

    ನಾವಿಕ್ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ದಿಂದ ನಡೆಸಲ್ಪಡುತ್ತದೆ. ಐಫೋನ್ 15ನಲ್ಲಿ ಇದರೊಂದಿಗೆ ಗೆಲಿಲಿಯೋ ಹಾಗೂ ಗ್ಲೋನಾಸ್ ನ್ಯಾವಿಗೇಷನ್ ವ್ಯವಸ್ಥೆಗಳು ಕೂಡಾ ಲಭ್ಯವಿರಲಿದೆ.

    ಏನಿದು ನಾವಿಕ್‌?
    ಇಲ್ಲಿಯವರೆಗೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದ ಫೋನ್ ಗಳು ಅಮೆರಿಕದ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಬಳಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಭಾರತದಲ್ಲಿ ಬಿಡುಗಡೆಯಾಗಲಿರುವ ಆಂಡ್ರಾಯ್ಡ್‌ ಫೋನ್‌ಗಳು ವಿಕ್ (ನಾವಿಗೇಷನ್ ವಿಥ್ ಕಾನ್‍ಸ್ಟೇಲೇಶನ್) ಬಳಸುವ ಸಾಧ್ಯತೆಯಿದೆ.

    ʼನಾವಿಕ್’ ವಿಶೇಷತೆ ಅಷ್ಟು ಸುಲಭವಾಗಿ ಫೋನಿನಲ್ಲಿ ಬರಲು ಸಾಧ್ಯವಿಲ್ಲ. ಫೋನ್ ತಯಾರಿಕಾ ಕಂಪನಿ ಮತ್ತು ಚಿಪ್ ತಯಾರಿಕಾ ಕಂಪನಿ ಇಸ್ರೋ ಜೊತೆ ಮಾತುಕತೆ ನಡೆಸಿ ನಾವಿಕ್ ಬೆಂಬಲಿಸುವ ಸಾಫ್ಟ್‌ವೇರ್ ತಯಾರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಈ ಹಿಂದೆ ಇಸ್ರೋ ಜೊತೆ ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಕ್ವಾಲಕಂ ಮಾತುಕತೆ ನಡೆಸಿತ್ತು.

    ಕ್ವಾಲಕಂ ಸ್ನಾಪ್‍ಡ್ರಾಗನ್ 720ಜಿ, 662 ಮತ್ತು 460 ಚಿಪ್‌ಗಳು ನಾವಿಕ್ ಬೆಂಬಲಿಸಲಿದೆ. ಮಧ್ಯಮ ಮತ್ತು ಎಂಟ್ರಿ ಲೆವೆಲ್ ಸ್ಮಾರ್ಟ್‍ಫೋನ್ ಗಳಲ್ಲಿ ಬಳಸುವ ಉದ್ದೇಶಕ್ಕಾಗಿ ಈ ಚಿಪ್ ಅಭಿವೃದ್ಧಿ ಪಡಿಸಲಾಗಿದೆ. ಕ್ವಾಲಕಂ ಬಿಡುಗಡೆ ಮಾಡಿದ ಚಿಪ್ ನಾವಿಕ್ ಅಲ್ಲದೇ ಅಮೆರಿಕದ ‘ಜಿಪಿಎಸ್’, ರಷ್ಯಾದ ‘ಗ್ಲೋನಾಸ್’, ಯುರೋಪಿಯನ್ ಒಕ್ಕೂಟದ ‘ಗೆಲಿಲಿಯೊ’, ಚೀನಾದ ‘ಬೈಡೂ’ವನ್ನು ಬೆಂಬಲಿಸುತ್ತದೆ.

    ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್) 7 ಉಪಗ್ರಹಗಳನ್ನು ಹೊಂದಿದೆ. ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ `ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಈ ಹಿಂದೆ ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದ ಜಿಪಿಎಸ್‍ಗಿಂತಲೂ ಭಾರತದ ನಾವಿಕ್ ಬೇಕಾದ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಇನ್ನು ಮುಂದೆ ಕಾರ್ಡ್ ಬೇಡ – UPI ಬಳಸಿ ATMನಿಂದ ಕ್ಯಾಶ್ ಪಡೆಯಬಹುದು

    ಐಆರ್‌ಎನ್‌ಎಸ್‌ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2018ರ ಏಪ್ರಿಲ್ 12 ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ `ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿದೆ.

    ನಾವಿಕ್ ಯೋಜನೆಗೆ ಭಾರತ ಕೈ ಹಾಕಿದ್ದು ಯಾಕೆ?
    1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1,420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಐಫೋನ್ ನಿಷೇಧಿಸಿದ ಚೀನಾ

    ಲಾಭ ಏನು?
    ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.

    ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
    ಒಟ್ಟು 4 ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂಗಳು ಇವೆ. ಅವುಗಳೆಂದರೆ ಜಿಪಿಎಸ್ (ಅಮೆರಿಕ) ಗ್ಲೋನಾಸ್ (ರಷ್ಯಾ), ಗೆಲಿಲಿಯೋ (ಯುರೋಪಿಯನ್ ಒಕ್ಕೂಟ), ಬೀಡೌ (ಚೀನಾ). 2 ಪ್ರಾದೇಶಿಕ ವ್ಯವಸ್ಥೆಗಳೆಂದರೆ, ಕ್ಯುಝಿಎಸ್‌ಎಸ್ (ಜಪಾನ್) ಹಾಗೂ ಐಆರ್‌ಎನ್‌ಎಸ್‌ಎಸ್ ಅಥವಾ ನಾವಿಕ್ (ಭಾರತ).

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರಿ ಅಧಿಕಾರಿಗಳಿಗೆ ಐಫೋನ್ ನಿಷೇಧಿಸಿದ ಚೀನಾ

    ಸರ್ಕಾರಿ ಅಧಿಕಾರಿಗಳಿಗೆ ಐಫೋನ್ ನಿಷೇಧಿಸಿದ ಚೀನಾ

    ಬೀಜಿಂಗ್: ಅಮೆರಿಕ ಹಾಗೂ ಚೀನಾ (China) ನಡುವೆ ಹೆಚ್ಚುತ್ತಿರುವ ಪೈಪೋಟಿಯ ಮಧ್ಯೆ ಕ್ಸಿ ಜಿನ್‌ಪಿಂಗ್‌ನ ಸರ್ಕಾರ ಕೆಲ ಅಧಿಕಾರಿಗಳಿಗೆ ಐಫೋನ್ (iPhone) ಬಳಸದಂತೆ ನಿಷೇಧ ಹೇರಿರುವುದಾಗಿ ಬುಧವಾರ ವರದಿಯಾಗಿದೆ.

    ವರದಿಯ ಪ್ರಕಾರ ಚೀನಾದ ಕೆಲ ಸರ್ಕಾರಿ ಸಿಬ್ಬಂದಿ ಚಾಟ್ ಗ್ರೂಪ್ ಅಥವಾ ಮೀಟಿಂಗ್‌ಗಳಲ್ಲಿ ಐಫೋನ್ ಬಳಕೆಯನ್ನು ನಿಲ್ಲಿಸುವಂತೆ ಸೂಚಿಸಿದೆ. ಆಪಲ್‌ನ (Apple) ಫೋನ್‌ಗಳು ಮತ್ತು ಇತರ ವಿದೇಶಿ ಬ್ರ್ಯಾಂಡ್‌ಗಳ ಸಾಧನಗಳನ್ನು ಸರ್ಕಾರಿ ಕೆಲಸಕ್ಕಾಗಿ ಬಳಸದಂತೆ ಹಾಗೂ ಕಚೇರಿಗೆ ತರದಂತೆ ಕೇಂದ್ರ ಸರ್ಕಾರಿ ಏಜೆನ್ಸಿಗಳ ಅಧಿಕಾರಿಗಳಿಗೆ ಚೀನಾ ಆದೇಶ ನೀಡಿದೆ. ಇದನ್ನೂ ಓದಿ: 41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್

    ಆಪಲ್ ಸಾಧನಗಳಿಗೆ ಅಮೆರಿಕ ಬಳಿಕ ಚೀನಾ 2ನೇ ದೊಡ್ಡ ಮಾರುಕಟ್ಟೆಯಾಗಿದೆ. ಚೀನಾದ ಈ ಕ್ರಮ ವ್ಯಾಪಕವಾಗಿ ಜಾರಿಯಾದಲ್ಲಿ ಕಂಪನಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಇದನ್ನೂ ಓದಿ: ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫಾಕ್ಸ್‌ಕಾನ್ ಕಂಪನಿಗೆ 300 ಎಕರೆ ಸದ್ಯದಲ್ಲೇ ಹಸ್ತಾಂತರ: ಎಂಬಿ ಪಾಟೀಲ್

    ಫಾಕ್ಸ್‌ಕಾನ್ ಕಂಪನಿಗೆ 300 ಎಕರೆ ಸದ್ಯದಲ್ಲೇ ಹಸ್ತಾಂತರ: ಎಂಬಿ ಪಾಟೀಲ್

    ಬೆಂಗಳೂರು: ಐಫೋನ್ (iPhone) ತಯಾರಿಸುವ ಬಹುರಾಷ್ಟ್ರೀಯ ಫಾಕ್ಸ್‌ಕಾನ್‌ (Foxconn) ಕಂಪನಿಗೆ 300 ಎಕರೆ ಭೂಮಿ ಹಸ್ತಾಂತರಿಸುವ ಸಂಬಂಧ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ಶೀಘ್ರವೇ ಕಂಪನಿಗೆ ಜಾಗ ಬಿಟ್ಟುಕೊಡಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ಶುಕ್ರವಾರ ವಿಧಾನಸಭೆಗೆ ತಿಳಿಸಿದರು.

    ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು (Dheeraj Muniraj) ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಂಪನಿಗೆ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಹೋಬಳಿಗೆ ಸೇರಿದ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದಲ್ಲಿ (ITIR) ದಲ್ಲಿ 300 ಎಕರೆ ಜಾಗ ಕೊಡಲಾಗುತ್ತದೆ. ಕಂಪನಿ ಸುಮಾರು 8,500 ಕೋಟಿ ರೂ. ಹೂಡಿಕೆ ಮಾಡಿ ತಯಾರಿಕಾ ಘಟಕ ಸ್ಥಾಪಿಸಲಿದೆ. ಭೂಮಿ ಹಸ್ತಾಂತರವಾಗುತ್ತಿದ್ದಂತೆ ಕಂಪನಿಯು ನಿರ್ಮಾಣ ಕಾಮಗಾರಿ ಶುರು ಮಾಡಬಹುದು. ನಿರೀಕ್ಷೆ ಪ್ರಕಾರ ಮುಂದಿನ ವರ್ಷ ಉತ್ಪಾದನೆ ಕೂಡ ಆರಂಭಿಸಲಿದೆ. 50 ಸಾವಿರ ಜನರಿಗೆ ಉದ್ಯೋಗ ದೊರಕಿಸುವ ಈ ಯೋಜನೆಯ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಿದೆ ಎಂದು ವಿವರಿಸಿದರು.  ಇದನ್ನೂ ಓದಿ: Made by Tata iPhones – ಕೋಲಾರದಲ್ಲಿ ಐಫೋನ್‌ ತಯಾರಿಸಲಿದೆ ಟಾಟಾ!

    ದೊಡ್ಡಬಳ್ಳಾಪುರ (Doddaballapura) ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 3 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇವು ಸುಮಾರು 110 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, 1,450ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೇಳಿದರು. ಇದನ್ನೂ ಓದಿ: ವೇದಾಂತ ಜೊತೆಗಿನ 1.61 ಲಕ್ಷ ಕೋಟಿ ಒಪ್ಪಂದವನ್ನ ರದ್ದುಗೊಳಿಸಿದ ಫಾಕ್ಸ್‌ಕಾನ್‌

    ಕೈಗಾರಿಕಾ ನೀತಿ (2020-25), ಕರ್ನಾಟಕ ಏರೋಸ್ಪೇಸ್ ಆಂಡ್‌ ಡಿಫೆನ್ಸ್ ನೀತಿ (2022-27) ಮತ್ತು ವಿದ್ಯುತ್‌ ಚಾಲಿತ ವಾಹನ ಆಂಡ್‌ ಇಂಧನ ಸಂಗ್ರಹಣೆ ನೀತಿ (2017) ಅಡಿಯಲ್ಲಿ ನಿಗದಿಗೊಳಿಸಿರುವ ಉತ್ತೇಜಕ ಕ್ರಮಗಳು ಈ ವಲಯದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಲು ಪೂರಕವಾಗಿವೆ ಎಂದು ಪಾಟೀಲ್ ಅಭಿಪ್ರಾಯಪಟ್ಟರು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Made by Tata iPhones – ಕೋಲಾರದಲ್ಲಿ ಐಫೋನ್‌ ತಯಾರಿಸಲಿದೆ ಟಾಟಾ!

    Made by Tata iPhones – ಕೋಲಾರದಲ್ಲಿ ಐಫೋನ್‌ ತಯಾರಿಸಲಿದೆ ಟಾಟಾ!

    ನವದೆಹಲಿ: ಎಲ್ಲವೂ ನಿಗದಿಯಂತೆ ನಡೆದರೆ ಮುಂದಿನ ದಿನಗಳಲ್ಲಿ ಟಾಟಾ ಕಂಪನಿ (Tata Company) ಕೋಲಾರದಲ್ಲಿ (Kolara) ತಯಾರಿಸಿದ ಮೇಡ್‌ ಇನ್‌ ಇಂಡಿಯಾ ಐಫೋನ್‌ (iPhone) ಗ್ರಾಹಕರ ಕೈ ಸೇರಲಿದೆ.

    ಹೌದು. ಟಾಟಾ ಕಂಪನಿ ತೈವಾನಿನ ವಿಸ್ಟ್ರಾನ್‌ ಕಂಪನಿಯ ಭಾರತದ ಘಟಕವನ್ನು ಖರೀದಿಸುವ ಮಾತುಕತೆ ಅಂತಿಮ ಹಂತದಲ್ಲಿದೆ. ಎಲ್ಲವೂ ನಿಗದಿಯಂತೆ ನಡೆದರೆ ಈ ಆಗಸ್ಟ್‌ನಲ್ಲೇ ಟಾಟಾ ಕಂಪನಿ ವಿಸ್ಟ್ರನ್‌ ಕಂಪನಿಯನ್ನು (Wistron Corp) ಖರೀದಿಸಲಿದೆ.

    155 ವರ್ಷ ಇತಿಹಾಸ ಹೊಂದಿರುವ ಟಾಟಾ ಗ್ರೂಪ್ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಆದರೆ ಈಗ ಮೊದಲ ಬಾರಿಗೆ ಫೋನ್‌ ಉತ್ಪದನಾ ಕ್ಷೇತ್ರಕ್ಕೆ ಕೈ ಹಾಕಿದೆ. ಈ ಡೀಲ್‌ ಪೂರ್ಣಗೊಂಡ ಬಳಿಕ ಐಫೋನ್‌ ತಯಾರಿಸಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಟಾಟಾ ಗ್ರೂಪ್‌ ಪಾತ್ರವಾಗಲಿದೆ.

    ಇದು 600 ದಶಲಕ್ಷ ಡಾಲರ್‌ (ಅಂದಾಜು 4,950 ಕೋಟಿ ರೂ.) ಮೊತ್ತದ ಖರೀದಿ ಡೀಲ್‌ ಆಗಿದ್ದು ಕಳೆದ ವರ್ಷವೇ ಮಾತುಕತೆ ಆರಂಭವಾಗಿತ್ತು. ಈಗ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆ ಎಂದು ವರದಿಯಾಗಿದೆ.

    ವಿಸ್ಟ್ರಾನ್‌ ಘಟಕದಲ್ಲಿ 10 ಸಾವಿರ ಮಂದಿ ಉದ್ಯೋಗದಲ್ಲಿದ್ದು, ಐಫೋನ್‌ 14 ತಯಾರಾಗುತ್ತಿದೆ. ಈ ಹಣಕಾಸು ವರ್ಷದಲ್ಲಿ ಕನಿಷ್ಠ 1.8 ಶತಕೋಟಿ ಡಾಲರ್‌ ಮೌಲ್ಯದ ಐಫೋನ್‌ ತಯಾರಿಸುವ ಗುರಿಯನ್ನು ವಿಸ್ಟ್ರಾನ್‌ ಹಾಕಿಕೊಂಡಿದೆ.  ಇದನ್ನೂ ಓದಿ: ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್‌ ಐಫೋನ್‌ ತಯಾರಕ ಫಾಕ್ಸ್‌ಕಾನ್‌

    2022-23ರ ಹಣಕಾಸು ವರ್ಷದಲ್ಲಿನ ಮೊಬೈಲ್‌ ರಫ್ತುಗಳ ಪೈಕಿ ಐಫೋನ್‌ ಪಾಲು ಶೇ.40 ರಷ್ಟಿದೆ ಎಂದು ನೀತಿ ಆಯೋಗದ ಮಾಜಿ ಸಿಇಒ, ಜಿ20 ಶೆರ್ಪಾ ಅಮಿತಾಬ್ ಕಾಂತ್(Amitabh Kant) ಈ ಹಿಂದೆ ತಿಳಿಸಿದ್ದರು.

    2008ರಲ್ಲಿ ಐಫೋನ್‌ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್‌ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್‌ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್‌ ಭಾರತದಲ್ಲೇ ಹೆಚ್ಚು ಐಫೋನ್‌ ಉತ್ಪಾದನೆಗೆ ಮುಂದಾಗಿದೆ.

    ವಿಶ್ವದ ಐಫೋನ್‌ ಮಾರಾಟದಲ್ಲಿ ಕಳೆದ ವರ್ಷ ಭಾರತದ ಘಟಕದ ಪಾಲು ಶೇ.3 ಇದ್ದರೆ 2022ರಲ್ಲಿ ಶೇ.5-7ಕ್ಕೆ ಏರಿಕೆಯಾಗಿದೆ. 2022ರಲ್ಲಿ ಭಾರತದಲ್ಲಿ ಮಾರಾಟವಾದ ಐಫೋನ್‌ ಪೈಕಿ ಶೇ.85 ರಷ್ಟು ಫೋನುಗಳು ಮೇಡ್‌ ಇನ್‌ ಇಂಡಿಯಾ ಫೋನ್‌ ಆಗಿರುವುದು ವಿಶೇಷ.

    ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕಿ ಸ್ವಾವಲಂಬಿಯಾಗಲು ಆತ್ಮನಿರ್ಭರ್ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರ ಭಾರತದ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆಗಳನ್ನು ಆಕರ್ಷಿಸಿ ರಫ್ತುಗಳನ್ನು ಹೆಚ್ಚಿಸಲು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸಂಯೋಜಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು 14 ವಲಯಗಳಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (Production Linked Incentive) ಯೋಜನೆ ಪ್ರಾರಂಭಿಸಿದೆ.

     

    ಭಾರತವನ್ನು ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್‍ಐ) ಯೋಜನೆಯನ್ನು 2021 ರಿಂದ ಆರಂಭಿಸಿತ್ತು. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‍ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಮತ್ತು ವಿಶ್ವದ ಹಲವು ಕಂಪನಿಗಳು ಆಯ್ಕೆಯಾಗಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 3 ಟ್ರಿಲಿಯನ್‌ ಡಾಲರ್‌ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್‌

    3 ಟ್ರಿಲಿಯನ್‌ ಡಾಲರ್‌ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್‌

    ಕ್ಯಾಲಿಫೋರ್ನಿಯಾ: ಐಫೋನ್‌ (iPhone) ತಯಾರಕಾ, ಜಾಗತಿಕ ಐಟಿ ಕಂಪನಿ ಆಪಲ್‌ (Apple) ಎರಡನೇ ಬಾರಿ 3 ಟ್ರಿಲಿಯನ್‌ (3 ಲಕ್ಷ ಕೋಟಿ) ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದ ಕಂಪನಿಯಾಗಿ ಹೊರಹೊಮ್ಮಿದೆ.

    ಆಪಲ್‌ ಕಂಪನಿಯ ಒಂದು ಷೇರು ಮೌಲ್ಯ 1.6% ಏರಿಕೆಯಾಗಿ ಕೊನೆಗೆ 192.6 ಡಾಲರ್‌ನಲ್ಲಿ(15,804 ರೂ.) ವ್ಯವಹಾರ ಮುಗಿಸಿತು. ಈ ವರ್ಷ ಕಂಪನಿಯ ಷೇರು ಮೌಲ್ಯ 46% ಏರಿಕೆಯಾಗಿದೆ. ಈ ಹಿಂದೆ ಕಳೆದ ವರ್ಷದ ಜನವರಿಯಲ್ಲಿ 3 ರಂದು 3 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದ ಅಮೆರಿಕದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

    ಮೇ ತಿಂಗಳಿನಲ್ಲಿ ಬಿಡುಗಡೆಯಾದ ಎರಡನೇ ತ್ರೈಮಾಸಿಕದಲ್ಲಿ ಆಪಲ್‌ ಕಂಪನಿ 94.8 ಶತಕೋಟಿ ಡಾಲರ್‌ ಆದಾಯ ಗಳಿಸಿತ್ತು. ಈ ಆದಾಯದ ಪೈಕಿ ಐಫೋನ್‌ ಮಾರಾಟದಿಂದಲೇ 54.1% ಆದಾಯ ಬಂದಿತ್ತು. ಅಮೆರಿಕದಲ್ಲಿ ಆರ್ಥಿಕ ಅನಿಶ್ಚಿತತೆ ಇದ್ದರೂ ಆಪಲ್‌ ಕಂಪನಿ ಹೂಡಿಕೆದಾರರ ನಂಬಿಕೆಯನ್ನು ಉಳಿಸಿಕೊಂಡಿದೆ.  ಇದನ್ನೂ ಓದಿ: ಕೇಂದ್ರದ ಆದೇಶವನ್ನು ಪಾಲಿಸಿ – ಟ್ವಿಟ್ಟರ್‌ ಅರ್ಜಿ ವಜಾ, 50 ಲಕ್ಷ ದಂಡ

     

    2018ರಲ್ಲಿ 1 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಅಮೆರಿಕದ ಕಂಪನಿ ಎಂಬ ಸಾಧನೆ ನಿರ್ಮಿಸಿತ್ತು. 1976ರಲ್ಲಿ ಆಪಲ್‌ ಕಂಪನಿಯನ್ನು ಸ್ವೀವ್‌ ಜಾಬ್ಸ್‌ ಸ್ಥಾಪಿಸಿದ್ದರು. ಸದ್ಯ ಟಿಮ್‌ ಕುಕ್‌ ಕಂಪನಿಯ ಸಿಇಒ ಆಗಿ ಕಾರ್ಯವಿರ್ವಹಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್‌ ಐಫೋನ್‌ ತಯಾರಕ ಫಾಕ್ಸ್‌ಕಾನ್‌

    ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್‌ ಐಫೋನ್‌ ತಯಾರಕ ಫಾಕ್ಸ್‌ಕಾನ್‌

    ಬೆಂಗಳೂರು: ಆಪಲ್‌ ಐಫೋನ್‌ (Apple iPhone) ತಯಾರಿಸುವ ತೈವಾನಿನ ಫಾಕ್ಸ್‌ಕಾನ್‌ (Foxconn) ಕಂಪನಿ ಬೆಂಗಳೂರಿನಲ್ಲಿ (Bengaluru) ಜಾಗ ಖರೀದಿಸಿದೆ.

    ದೇವನಹಳ್ಳಿ (Devanahalli) ಬಳಿ 13 ದಶಲಕ್ಷ ಚದರ ಅಡಿಯ ಜಾಗವನ್ನು ಖರೀದಿಸಿರುವುದಾಗಿ ಫಾಕ್ಸ್‌ಕಾನ್‌ ಕಂಪನಿ ಲಂಡನ್‌ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಮಂಗಳವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಫಾಕ್ಸ್‌ಕಾನ್‌ ಕಂಪನಿಯ ಅಂಗಸಂಸ್ಥೆಯಾದ Hon Hai Technology India Mega Development 37 ದಶಲಕ್ಷ ಡಾಲರ್‌ (ಅಂದಾಜು 300 ಕೋಟಿ ರೂ.) ನೀಡಿ ಈ ಜಾಗವನ್ನು ಖರೀದಿಸಿದೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಫಾಕ್ಸ್‌ಕಾನ್‌ 5.7 ಸಾವಿರ ಕೋಟಿ ರೂ. ಹೂಡಿಕೆ – 1 ಲಕ್ಷ ಉದ್ಯೋಗ ಸೃಷ್ಟಿ

    ಈ ಹಿಂದೆ ಮಾರ್ಚ್‌ ತಿಂಗಳಿನಲ್ಲಿ ಮಾಧ್ಯಮವೊಂದು ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು 300 ಎಕರೆ ಪ್ರದೇಶದಲ್ಲಿ ಉತ್ಪಾದನಾ ಘಟಕ ತೆರೆಯಲಿದೆ. ಇದಕ್ಕಾಗಿ ಕಂಪನಿ ಸುಮಾರು 700 ಮಿಲಿಯನ್ ಡಾಲರ್ (ಸುಮಾರು 5.7 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಮುಂದಾಗಿದೆ ಎಂದು ವರದಿ ಮಾಡಿತ್ತು.

    ಬೆಂಗಳೂರಿನ ಸಮೀಪ ನಿರ್ಮಾಣವಾಗುತ್ತಿರುವ ಆಪಲ್ ಉತ್ಪಾದನಾ ತಾಣ ಸುಮಾರು 1 ಲಕ್ಷದಷ್ಟು ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ.

    ತೆಲಂಗಾಣದಲ್ಲಿ ಐಫೋನ್‌ ಫ್ಯಾಕ್ಟರಿ (iPhone Factory), ಕರ್ನಾಟಕದಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌ (Project Elephant) ಆರಂಭಿಸಲಾಗುವುದು ಎಂದು ತೈವಾನಿನ ಎಲೆಕ್ಟ್ರಾನಿಕ್ಸ್‌ ದೈತ್ಯ ಕಂಪನಿ ಫಾಕ್ಸ್‌ಕಾನ್‌ ಈ ಹಿಂದೆ ಅಧಿಕೃತವಾಗಿ ತಿಳಿಸಿತ್ತು.

    ಫಾಕ್ಸ್‌ಕಾನ್‌ 2019ರಿಂದ ಆಪಲ್‌ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುತ್ತಿದ್ದು, ತಮಿಳುನಾಡಿನಲ್ಲಿ ತನ್ನ ಘಟಕ ತೆರದಿದೆ. ಕರ್ನಾಟಕದ ಕೋಲಾರದ ನರಸಾಪುರ ಮತ್ತು ಬೆಂಗಳೂರಿನ ಪೀಣ್ಯದಲ್ಲಿ ವಿಸ್ಟ್ರಾನ್‌ ಕಂಪನಿ ಐಫೋನ್‌ ತಯಾರಿಸುತ್ತಿದೆ.  ಇದನ್ನೂ ಓದಿ: ತೈವಾನ್‌ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ

    ಭಾರತದಲ್ಲಿ ತನ್ನ ಉತ್ಪನ್ನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಆಪಲ್‌ ಕಂಪನಿ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದೆ. ಏಪ್ರಿಲ್‌ನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಆಪಲ್‌ ತನ್ನ ಅಧಿಕೃತ ರಿಟೇಲ್‌ ಸ್ಟೋರ್‌ ತೆರೆದಿತ್ತು.

  • ತೈವಾನ್‌ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ

    ತೈವಾನ್‌ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ

    ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಆಪಲ್ (Apple) ಕಂಪನಿಯ ಐಫೋನ್ (iPhone) ಉತ್ಪಾದನೆ ಭಾರತದಲ್ಲಿ (India) ಹೊಸ ಬದಲಾವಣೆಗಳನ್ನು ತಂದಿದೆ. ಈಗಾಗಲೇ ಐಫೋನ್ 14, ಐಫೋನ್ 13 ಹಾಗೂ ಇತರ ಹೊಸ ಫೋನ್‌ಗಳನ್ನು ಭಾರತದಲ್ಲಿ ತಯಾರಿಸಿದೆ. ಭಾರತದಲ್ಲಿ ಐಫೋನ್ ತಯಾರಿಸುವ ಪ್ರಮುಖ ಕಂಪನಿಗಳಲ್ಲಿ ಫಾಕ್ಸ್ಕಾನ್ (Foxconn) ಹಾಗೂ ವಿಸ್ಟ್ರಾನ್ (Wistron) ಸೇರಿದೆ. ಆದರೆ ಇದೀಗ ಭಾರತದಲ್ಲಿ ಆಪಲ್‌ನ ಐಫೋನ್ ತಯಾರಿಸುವ ಜವಾಬ್ದಾರಿಯನ್ನು ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ವಹಿಸಿಕೊಳ್ಳಲು ಸಜ್ಜಾಗುತ್ತಿದೆ.

    ಆಪಲ್ ಕಂಪನಿಗೆ ಐಫೋನ್ ತಯಾರಿಸಿಕೊಡುವ ವಿಸ್ಟ್ರಾನ್ ಭಾರತದಲ್ಲಿ ತನ್ನ ಕಾರ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗುತ್ತದೆ. ಇದೀಗ ತೈವಾನ್‌ನ ಎಲೆಕ್ಟ್ರಾನಿಕ್ಸ್ ಕಂಪನಿಯನ್ನು ಶೀಘ್ರದಲ್ಲೇ ಟಾಟಾ ಎಲೆಕ್ಟ್ರಾನಿಕ್ಸ್ ಸ್ವಾಧೀನಪಡಿಸಿಕೊಳ್ಳಲಿದ್ದು, ಐಫೋನ್ ತಯಾರಿಕೆಯ ಜವಾಬ್ದಾರಿಯನ್ನೂ ಕೈಗೆತ್ತಿಕೊಳ್ಳಲಿದೆ.

    ಭಾರತದಲ್ಲಿ ವಿಸ್ಟ್ರಾನ್‌ನ ಘಟಕ ಕರ್ನಾಟಕದ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿದೆ. ಸುಮಾರು 4,000 ರಿಂದ 5,000 ಕೋಟಿ ರೂ. ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ ತಯಾರಿಸುವ ದೇಶದ 3 ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

    ಸುಮಾರು 5 ವರ್ಷಗಳ ಹಿಂದೆ ವಿಸ್ಟ್ರಾನ್ ಐಫೋನ್ ಎಸ್‌ಸಿ 2 ನೊಂದಿಗೆ ಐಫೋನ್ ತಯಾರಿಸಲು ಪ್ರಾರಂಭಿಸಿತ್ತು. ಪ್ರಸ್ತುತ ಕಂಪನಿ ಭಾರತದಲ್ಲಿ ಐಫೋನ್ ಎಸ್‌ಸಿ, ಐಫೋನ್ 12, ಐಫೋನ್ 13 ಹಾಗೂ ಐಫೋನ್ 14 ಅನ್ನು ತಯಾರಿಸುತ್ತಿದೆ.

    ಆಪಲ್ ಭಾರತಕ್ಕೆ 20 ವರ್ಷಗಳ ಹಿಂದೆ ಲಗ್ಗೆಯಿಟ್ಟಿದ್ದು, ಸುದೀರ್ಘ ಇತಿಹಾಸವನ್ನು ಹೊಂದಿದೆ. 2020ರ ಸೆಪ್ಟೆಂಬರ್‌ನಲ್ಲಿ ಆಪಲ್ ದೇಶದಲ್ಲಿ ತನ್ನ ಆನ್‌ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿತು. ಇತ್ತೀಚೆಗಷ್ಟೇ ಭಾರತದ ಮೊದಲ ಆಪಲ್ ಸ್ಟೋರ್ ಮುಂಬೈ ಹಾಗೂ ದೆಹಲಿಯಲ್ಲಿ ಉದ್ಘಾಟನೆಗೊಂಡಿದೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

  • ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

    ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

    ಮುಂಬೈ: ಆ್ಯಪಲ್ (Apple) ಉತ್ಪನ್ನಗಳು ಎಷ್ಟು ಜನಪ್ರಿವೆಂದರೆ ಭಾರತ (India) ಮಾತ್ರವಲ್ಲದೇ ವಿಶ್ವದ ಬಹತೇಕ ದೇಶಗಳಲ್ಲಿ ಜನರು ಇದನ್ನು ಮುಗಿಬಿದ್ದು ಖರೀದಿಸುತ್ತಾರೆ. ಬೆಲೆ ಹೆಚ್ಚಿದ್ದರೂ ಆ್ಯಪಲ್ ತನ್ನದೇ ಒಂದು ಸ್ಟ್ಯಾಂಡರ್ಡ್ ಅನ್ನು ಕಾಪಾಡಿಕೊಂಡು ಬಂದಿದೆ. ಇದೀಗ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ (Apple Store) ಮುಂಬೈನಲ್ಲಿ (Mumbai) ಉದ್ಘಾಟನೆಯಾಗಿದೆ.

    ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ದೇಶದ ಮೊದಲ ಆ್ಯಪಲ್ ಸ್ಟೋರ್ ಏಪ್ರಿಲ್ 18ರಂದು ಉದ್ಘಾಟನೆಗೊಂಡಿದ್ದು, ಗ್ರಾಹಕರಿಗೆ ಸೇವೆ ನೀಡಲು ಪ್ರಾರಂಭಿಸಿದೆ. ಸ್ಟೋರ್‌ಗೆ ಆಗಮಿಸುವ ಗ್ರಾಹಕರು ಆ್ಯಪಲ್ ಉತ್ಪನ್ನಗಳ ಸಂಪೂರ್ಣ ಮಾಹಿತಿ ಪಡೆಯಬಹುದು. ಈ ಸ್ಟೋರ್‌ಗೆ ಫ್ಯಾಕ್ಟರಿಯಿಂದ ನೇರವಾಗಿ ಉತ್ಪನ್ನಗಳು ಆಗಮಿಸುವುದರಿಂದ ಮಾರುಕಟ್ಟೆಯ ಬೆಲೆಗಿಂತ ಅಗ್ಗದಲ್ಲಿ ಉತ್ಪನ್ನಗಳು ಗ್ರಾಹಕರ ಕೈಗೆಟುಕಲಿದೆ.

    ಆ್ಯಪಲ್ ಸ್ಟೋರ್‌ನ ವಿಶೇಷತೆಗಳೇನು?
    ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನ ಮೂಲೆಯಲ್ಲಿ ಬೃಹತ್ 2 ಅಂತಸ್ತಿನ ಗಾಜಿನಿಂದ ಮಾಡಲಾದ ಸ್ಟೋರ್ ಇದಾಗಿದೆ. ಭಾರತದಲ್ಲಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಆ್ಯಪಲ್ ಉತ್ಪನ್ನಗಳು ಇಲ್ಲಿ ದೊರೆಯಲಿದೆ. ಮ್ಯಾಕ್‌ಬುಕ್, ಐಫೋನ್ (iPhone), ಐಪ್ಯಾಡ್, ವಾಚ್‌ಗಳನ್ನು ಹೊರತುಪಡಿಸಿ ಸ್ಟೋರ್ ಆ್ಯಪಲ್ ಆರ್ಕೇಡ್, ಆ್ಯಪಲ್ ಹೋಮ್‌ಪಾಡ್, ಆ್ಯಪಲ್ ಮ್ಯೂಸಿಕ್ ಹಾಗೂ ಆ್ಯಪಲ್ ಟಿವಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

    ಮುಂಬೈ ಆ್ಯಪಲ್ ಸ್ಟೋರ್‌ನ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ 100 ಸಿಬ್ಬಂದಿಯಿದ್ದಾರೆ. ಅದರಲ್ಲಿ ಶೇ.50 ರಷ್ಟು ಸಿಬ್ಬಂದಿ ಮಹಿಳೆಯರೇ ಇದ್ದಾರೆ. ಮುಖ್ಯವಾಗಿ ಕಂಪನಿ ಸ್ಥಳೀಯ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದ 18 ಭಾಷೆಗಳನ್ನು ಒಳಗೊಂಡಂತೆ 25 ಭಾಷೆಗಳನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನಿಯೋಜಿಸಿದೆ. ಇದನ್ನೂ ಓದಿ: ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

    ಇದೀಗ ಅಮೆರಿಕ ಮೂಲದ ಆ್ಯಪಲ್ ಕಂಪನಿಯ ಮೊದಲ ಮಳಿಗೆ ಭಾರತದಲ್ಲಿ ಏಪ್ರಿಲ್ 18ರಂದು ಮುಂಬೈನಲ್ಲಿ ಪ್ರಾರಂಭವಾಗಿದ್ದು, 2ನೇ ಮಳಿಗೆ ಏಪ್ರಿಲ್ 20ರಂದು ದೆಹಲಿಯಲ್ಲಿ (Delhi) ಆರಂಭಗೊಳ್ಳಲಿದೆ. ಈ ಎರಡೂ ಮಳಿಗೆಗಳ ಉದ್ಘಾಟನೆಗೆ ಸಂಸ್ಥೆಯ ಸಿಇಒ ಟಿಮ್ ಕುಕ್ (Tim Cook) ಸ್ವತಃ ಭಾರತಕ್ಕೆ ಆಗಮಿಸಿದ್ದಾರೆ.

    ಆ್ಯಪಲ್ ಕಂಪನಿ ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಮಾರಾಟ ಹಾಗೂ ಸೇವೆಯನ್ನು ನೀಡುತ್ತಿದ್ದರೂ ಕಂಪನಿಯ ಮಾನದಂಡಕ್ಕೆ ಪೂರಕವಾದ ಸ್ವಂತ ಮಳಿಗೆ ದೇಶದಲ್ಲಿ ಹೊಂದರಲಿಲ್ಲ. ಇದೀಗ ಭಾರತದಲ್ಲಿ ಪ್ರಾರಂಭವಾಗುತ್ತಿರುವ ಆ್ಯಪಲ್ ಸ್ಟೋರ್‌ಗಳಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ಬಿಸಿಲಿನ ಎಫೆಕ್ಟ್‌ನಿಂದ ಹಳಿಯ ರಬ್ಬರ್‌ಗೆ ಬೆಂಕಿ – 20 ನಿಮಿಷ ಮೆಟ್ರೋ ಸಂಚಾರ ಬಂದ್