Tag: iphone

  • iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್‌ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?

    iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್‌ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?

    ನವದೆಹಲಿ: ಆಪಲ್‌ (Apple) ಕಂಪನಿ ಇದೇ ಮೊದಲ ಬಾರಿಗೆ ಬಿಡುಗಡೆಯಾಗಲಿರುವ ಐಫೋನ್‌ ಪ್ರೊ (iPhone Pro) ಮತ್ತು ಪ್ರೊ ಮ್ಯಾಕ್ಸ್‌ (Pro Max) ಫೋನ್‌ಗಳನ್ನು ಭಾರತದಲ್ಲಿ ತಯಾರಿಸುತ್ತಿದೆ.

    ಹೌದು. ಮುಂದಿನ ಸೆಪ್ಟೆಂಬರ್‌ನಲ್ಲಿ ಐಫೋನ್‌ 16 ಫೋನ್‌ಗಳನ್ನು ಆಪಲ್‌ ಬಿಡುಗಡೆ ಮಾಡಲಿದೆ. ಸಾಧಾರಣವಾಗಿ ಬಿಡುಗಡೆಯಾಗಲಿರುವ ತನ್ನ ಫೋನ್‌ಗಳನ್ನು ಹೆಚ್ಚಾಗಿ ಚೀನಾದ ಫ್ಯಾಕ್ಟರಿಗಳಲ್ಲಿ ತಯಾರಿಸುತ್ತಿತ್ತು. ಆದರೆ ಈ ಬಾರಿ ಭಾರತದ ಫಾಕ್ಸ್‌ಕಾನ್‌ ಘಟಕದಲ್ಲಿ ಐಫೋನ್‌ಗಳ ಪೈಕಿ ದುಬಾರಿ ಬೆಲೆ ಇರುವ ಪ್ರೊ ಮಾಡೆಲ್‌ ತಯಾರಿಸುತ್ತಿರುವುದು ವಿಶೇಷ.

    ತಮಿಳುನಾಡಿನಲ್ಲಿರುವ ಫಾಕ್ಸ್‌ಕಾನ್‌ ಘಟಕದಲ್ಲಿ ಐಫೋನ್‌ ಭಾಗಗಳ ಜೋಡಣೆ ಈ ವಾರದಿಂದ ಆರಂಭವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಉತ್ಪಾದನೆಗಾಗಿ ಕಾರ್ಮಿಕರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ಭಾರತದಲ್ಲಿ ಫೋನ್‌ ತಯಾರಾಗುವ ಕಾರಣ ಐಫೋನ್‌ಗಳಿಗೆ ಆಮದು ಸುಂಕ ಇರುವುದಿಲ್ಲ. ವಿದೇಶಗಳಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿದ್ದರೂ 10% ಬೆಲೆ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ.  ಇದನ್ನೂ ಓದಿ: ಟೋಕಿಯೋ – ಬೆಂಗಳೂರು ಮಾರ್ಗದ ವಿಮಾನ ಹಾರಾಟ ಹೆಚ್ಚಿಸಿದ BLR

    ಆಪಲ್‌ 2021ರಲ್ಲಿ ಐಫೋನ್‌ ಎಸ್‌ಇ ಮೂಲಕ ಭಾರತದಲ್ಲಿ ಐಫೋನ್‌ ಉತ್ಪಾದನೆ ಆರಂಭಿಸಿತ್ತು. ಕಳೆದ ವರ್ಷ ಐಫೋನ್ 15, ಐಫೋನ್ 15 ಪ್ಲಸ್ ತಯಾರಿಸಿತ್ತು. ಈಗ ಪ್ರೊ ಮಾಡೆಲ್‌ಗಳ ಉತ್ಪಾದನೆಯೊಂದಿಗೆ, ಆಪಲ್ ತನ್ನ ಜಾಗತಿಕ ಉತ್ಪಾದನೆಯಲ್ಲಿ ಭಾರತೀಯ ಉತ್ಪನ್ನಗಳ ಪಾಲನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ.

    ಜಾಗತಿಕವಾಗಿ ಮಾರಾಟವಾಗುವ ಐಫೋನ್‌ಗಳ ಪೈಕಿ 70% ಐಫೋನ್‌ಗಳನ್ನು ತೈವಾನ್‌ನಲ್ಲಿರುವ ಫಾಕ್ಸ್‌ಕಾನ್‌ ಕಂಪನಿ ಉತ್ಪಾದಿಸುತ್ತದೆ. ಈ ಕಂಪನಿ ಭಾರತ ಅಲ್ಲದೇ ಚೀನಾ,ಇಂಡೋನೇಷ್ಯಾ ಸೇರಿದಂತೆ ಹಲವು ಕಡೆ ತನ್ನ ಘಟಕವನ್ನು ತೆರಿದಿದೆ. ಮುಂದಿನ 3-4 ವರ್ಷಗಳಲ್ಲಿ ವಿಶ್ವದಲ್ಲಿ ಮಾರಾಟವಾಗುವ ಐಫೋನ್‌ಗಳ ಪೈಕಿ 25% ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುವ ಗುರಿಯನ್ನು ಐಫೋನ್‌ ಹಾಕಿಕೊಂಡಿದೆ.

    ಮುಂದಿನ ದಿನಗಳಲ್ಲಿ ಟಾಟಾ ಗ್ರೂಪ್ ಐಫೋನ್‌ಗಳನ್ನು ತಯಾರಿಸಲಿದೆ. ಬಹುಪಾಲು ಭಾರತ-ನಿರ್ಮಿತ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಸಾಧನಗಳನ್ನು ಆಪ್‌ಲ್‌ ಯುರೋಪ್, ಮಧ್ಯಪ್ರಾಚ್ಯ ಮತ್ತು ಅಮೆರಿಕಗೆ ರಫ್ತು ಮಾಡುವ ಸಾಧ್ಯತೆಯಿದೆ.

    ಭಾರತದಲ್ಲಿ ಯಾಕೆ?
    10 ವರ್ಷಗಳ ಹಿಂದೆ ಐಫೋನ್‌ ಬಿಡುಗಡೆಯಾದ 5-6 ತಿಂಗಳ ನಂತರ ಭಾರತದ ಮಾರುಕಟ್ಟೆಗೆ ಐಫೋನ್‌ಗಳನ್ನು ಆಪಲ್‌ ಬಿಡುಗಡೆ ಮಾಡುತ್ತಿತ್ತು. ಆದರೆ ಈಗ ಭಾರತದಲ್ಲಿ ಐಫೋನ್‌ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆಪಲ್‌ ಉತ್ಪನ್ನಗಳ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಭಾರತದಲ್ಲಿ ಉತ್ಪಾದನೆ ಮಾಡುತ್ತಿರುವ ಕಾರಣ ಬೆಲೆ ಸಹ ಕಡಿಮೆಯಿದೆ. ಹೀಗಾಗಿ ಕೆಲ ವರ್ಷಗಳಿಂದ ಜಾಗತಿಕವಾಗಿ ಬಿಡುಗಡೆಯಾಗುವ ಸಮಯದಲ್ಲೇ ಭಾರತದಲ್ಲೂ ಐಫೋನ್‌ ಬಿಡುಗಡೆಯಾಗುತ್ತಿದೆ.

  • ರೇಣುಕಾನನ್ನು ಹೊಡೆಯೋ ದೃಶ್ಯ ಮೊಬೈಲ್‌ನಲ್ಲಿ ರೆಕಾರ್ಡ್ – ದರ್ಶನ್ ಥಳಿಸ್ತಿರೋ 3 ಸೆಕೆಂಡ್ ದೃಶ್ಯ ಡಿಲೀಟ್

    ರೇಣುಕಾನನ್ನು ಹೊಡೆಯೋ ದೃಶ್ಯ ಮೊಬೈಲ್‌ನಲ್ಲಿ ರೆಕಾರ್ಡ್ – ದರ್ಶನ್ ಥಳಿಸ್ತಿರೋ 3 ಸೆಕೆಂಡ್ ದೃಶ್ಯ ಡಿಲೀಟ್

    – ಐಫೋನ್ ರಿಟ್ರೀವ್‌ಗಾಗಿ ಪೊಲೀಸರ ಸರ್ಕಸ್

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಒಂದೊಂದೇ ಸ್ಫೋಟಕ ಸತ್ಯಗಳು ಹೊರ ಬರುತ್ತಿವೆ. ದರ್ಶನ್ (Darshan) ಕರಾಳತೆ ಬಟಾ ಬಯಲಾಗುತ್ತಿದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ವಿಡಿಯೋವನ್ನ ದರ್ಶನ್ ಶಿಷ್ಯರು ರೆಕಾರ್ಡ್ ಮಾಡಿದ್ದಾರೆ.

    ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಹೊಡೆಯುತ್ತಿರುವ ದೃಶ್ಯವನ್ನು ಪ್ರದೂಷ್ ರೆಕಾರ್ಡ್ ಮಾಡಿದ್ದಾನೆ. 3 ಸೆಕೆಂಡ್ ವಿಡಿಯೋದಲ್ಲಿ ದರ್ಶನ್ ಕರಾಳತೆ ಇದೆ ಎನ್ನಲಾಗಿದೆ. ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವಾಗ ಪ್ರದೂಷ್ ತನ್ನ ಐಫೋನ್‌ನಲ್ಲಿ (iPhone)ವಿಡಿಯೋ ಮಾಡಿದ್ದನಂತೆ. ಹಲ್ಲೆ ನಡೆಸೋದನ್ನು ವಿಡಿಯೋ ಮಾಡಿಕೋ ಅಂತ ದರ್ಶನ್ ಹೇಳಿದ್ದರಂತೆ. ಅದರಂತೆ ಪ್ರದೂಷ್ ತನ್ನ ಐಫೋನ್ ತೆಗೆದು ರೆಕಾರ್ಡ್ ಮಾಡಿದ್ದಾನೆ. ಮೂರ್ನಾಲ್ಕು ಸೆಕೆಂಡ್ ಆಗುತ್ತಿದ್ದಂತೆ ಸ್ಟಾಪ್ ಮಾಡಿ ವಿಡಿಯೋ ಡಿಲೀಟ್ ಮಾಡಿದ್ದಾನೆ.

    ಈಗ ಪೊಲೀಸರು ಡಿಲೀಟ್ ಆಗಿರುವ ದೃಶ್ಯವನ್ನು ರಿಟ್ರೀವ್‌ಗೆ ಒದ್ದಾಡುತ್ತಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಸಿಐಡಿ ಟೆಕ್ನಿಕಲ್ ಸೆಲ್‌ಗೆ ಐಫೋನ್ ರವಾನಿಸಿದ್ದಾರೆ. ಐಫೋನ್‌ನಿಂದ ವಿಡಿಯೋ ರಿಟ್ರೀವ್ ಮಾಡೋದು ಅಷ್ಟು ಸುಲಭವಲ್ಲ. ಹಾಗಾಗಿ ಹೊಸ ಟೆಕ್ನಾಲಜಿ ಬಳಸಿ ವಿಡಿಯೋ ರಿಟ್ರೀವ್‌ಗೆ ಸಿಐಡಿ (CID) ಮುಂದಾಗಿದೆ. ಒಂದು ವೇಳೆ ವಿಡಿಯೋ ರಿಟ್ರೀವ್ ಆದರೆ ಅದು ಕೇಸ್‌ಗೆ ಮಹತ್ತರ ಸಾಕ್ಷಿಯಾಗೋದು ಸತ್ಯ.

  • ಆಪಲ್‌ ಐಫೋನ್‌ಗೆ ಭರ್ಜರಿ 16,584 ಕೋಟಿ ರೂ. ದಂಡ

    ಆಪಲ್‌ ಐಫೋನ್‌ಗೆ ಭರ್ಜರಿ 16,584 ಕೋಟಿ ರೂ. ದಂಡ

    ಲಂಡನ್‌: ಐಫೋನ್‌ (iPhone) ಉತ್ಪಾದಿಸುವ ಅಮೆರಿಕದ ಆಪಲ್‌ (Apple) ಕಂಪನಿಗೆ ಯೂರೋಪಿಯನ್‌ ಯೂನಿಯನ್‌ನ (European Union) ಆಂಟಿಟ್ರಸ್ಟ್ ನಿಯಂತ್ರಕ ಭರ್ಜರಿ 1.84 ಬಿಲಿಯನ್‌ ಯುರೋ (ಅಂದಾಜು 16,584 ಕೋಟಿ ರೂ.) ದಂಡವನ್ನು ವಿಧಿಸಿದೆ.

    ಸ್ಪರ್ಧಾತ್ಮಕ ನಿಯಮ ಉಲ್ಲಂಘಿಸಿ ಆ್ಯಪಲ್‌ ತನ್ನ ಉತ್ಪನ್ನಗಳಲ್ಲಿ ಸಂಗೀತ ಸೇವೆ ನೀಡುವ ಹಲವು ಕಂಪನಿಗಳ ಆಪ್‌ಗಳ ಸೇವೆ ನಿರ್ಬಂಧ ಹೇರಿ ತಾನು ಸೂಚಿಸಿದ ಉತ್ಪನ್ನಗಳನ್ನು ಮಾತ್ರ ಗ್ರಾಹಕರು ಬಳಸುವಂತೆ ಮಾಡಿದೆ. ಅನಾರೋಗ್ಯಕರ ಸ್ಪರ್ಧೆಗೆ ಉದಾಹರಣೆ ಎಂದು ಅಭಿಪ್ರಾಯಪಟ್ಟ ಒಕ್ಕೂಟ ಭಾರೀ ಪ್ರಮಾಣದ ದಂಡ ವಿಧಿಸಿದೆ. ಇದನ್ನೂ ಓದಿ: ಶೀಘ್ರವೇ ಭಾರತದಲ್ಲಿ ಪಿಕ್ಸೆಲ್ ಫೋನ್‌ ತಯಾರಿಸಲಿದೆ ಗೂಗಲ್‌

    ಐದು ವರ್ಷದ ಹಿಂದೆ ಡಿಜಿಟಲ್‌ ಮ್ಯೂಸಿಕ್‌ (Digital Music) ಸೇವೆ ನೀಡುವ ಸ್ಪಾಟಿಫೈ (Spotify) ನೀಡಿದ ದೂರಿನ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಒಕ್ಕೂಟ ಈಗ ಅಂತಿಮ ನಿರ್ಧಾರ ಪ್ರಕಟಿಸಿದೆ.

    ಒಂದು ದಶಕದವರೆಗೆ, ಆಪ್ ಸ್ಟೋರ್ ಮೂಲಕ ಸಂಗೀತ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ವಿತರಣೆಗಾಗಿ ಆಪಲ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ಯುರೋಪಿಯನ್‌ ಯೂನಿಯನ್‌ ಆಂಟಿಟ್ರಸ್ಟ್ ನಿಯಮಗಳ ಅಡಿಯಲ್ಲಿ ಈ ರೀತಿ ನಿರ್ಬಂಧ ಹೇರುವುದು ಕಾನೂನುಬಾಹಿರ ಎಂದು ಒಕ್ಕೂಟ ಹೇಳಿದೆ. ಇದನ್ನೂ ಓದಿ: ಎರಡನೇ ಐಫೋನ್‌ ಘಟಕ ತೆರೆಯಲು ಮಾತುಕತೆ ಆರಂಭಿಸಿದ ಟಾಟಾ

    ಯಾವುದೇ ಕಂಪನಿಗೆ ಗ್ರಾಹಕರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಗ್ರಾಹಕನಿಗೆ ಏನು ಬೇಕೋ ಅದನ್ನು ಪಡೆಯಲು ಸ್ವಾತಂತ್ರ್ಯ ನೀಡಬೇಕು. ಬೇರೆ ಸೇವೆ ಬಳಸಲು ಅವಕಾಶ ನೀಡದೇ ತಾನು ನೀಡಿದ್ದನ್ನೇ ಬಳಸಬೇಕು ಎಂಬ ನೀತಿಯನ್ನು ಅಳವಡಿಸಿದವರಿಗೆ ಈ ತೀರ್ಪು ಪ್ರಬಲ ಸಂದೇಶವನ್ನು ಕಳುಹಿಸಿದೆ ಎಂದು ಸ್ಪಾಟಿಫೈ ತೀರ್ಪನ್ನು ಸ್ವಾಗತಿಸಿ  ಅಭಿಪ್ರಾಯ ವ್ಯಕ್ತಪಡಿಸಿದೆ.

     

  • ಎರಡನೇ ಐಫೋನ್‌ ಘಟಕ ತೆರೆಯಲು ಮಾತುಕತೆ ಆರಂಭಿಸಿದ ಟಾಟಾ

    ಎರಡನೇ ಐಫೋನ್‌ ಘಟಕ ತೆರೆಯಲು ಮಾತುಕತೆ ಆರಂಭಿಸಿದ ಟಾಟಾ

    ಮುಂಬೈ: ಈಗಾಗಲೇ ಐಫೋನ್‌ (iPhone) ತಯಾರಿಸುತ್ತಿರುವ ಟಾಟಾ ಸಮೂಹ (Tata Group) ಈಗ ಎರಡನೇ ಐಫೋನ್‌ ಘಟಕವನ್ನು ತೆರೆಯಲು ಮತುಕತೆ ನಡೆಸುತ್ತಿದೆ.

    ಟಾಟಾ ಸಮೂಹ ಐಫೋನ್‌ ತಯಾರಿಸುತ್ತಿರುವ ಪೆಗಟ್ರಾನ್‌ (Pegatron) ಕಂಪನಿ ಜೊತೆ ಮಾತುಕತೆ ನಡೆಸುತ್ತಿದೆ. ಮಾತುಕತೆ ಯಶಸ್ವಿಯಾದರೆ ತೈವಾನ್‌ ಕಂಪನಿಯ ಜೊತೆಗೂಡಿ ತಮಿಳುನಾಡಿನ ಹೊಸೂರಿನಲ್ಲಿ ಐಫೋನ್‌ ಜೋಡಣಾ ಘಟಕ ಆರಂಭವಾಗಲಿದೆ. ಇದನ್ನೂ ಓದಿ: ಎಕ್ಸ್‌ನ ಸುರಕ್ಷತಾ ವಿಭಾಗದಿಂದ 1 ಸಾವಿರ ಉದ್ಯೋಗಿಗಳು ಮನೆಗೆ

    ಭಾರತದಲ್ಲಿ ಆಪಲ್‌ (Apple) ಮಾರುಕಟ್ಟೆಗೆ ಬೇಡಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಮಾತಕತೆಯ ಸುದ್ದಿ ಪ್ರಕಟವಾಗಿದೆ. ಜಂಟಿ ಹೂಡಿಕೆಯಲ್ಲಿ ಟಾಟಾ ಕಂಪನಿ ಪಾಲು ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ.

    ಐಫೋನ್‌ ತಯಾರಿಸುವ ವಿಸ್ಟ್ರಾನ್‌ (Wistron) ಕಂಪನಿಯ ಭಾರತದ ಘಟಕವನ್ನು ಖರೀದಿಸುವ ಮೂಲಕ ಐಫೋನ್‌ ತಯಾರಿಸಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಟಾಟಾ ಕಂಪನಿ ಪಾತ್ರವಾಗಿತ್ತು. ಪ್ರಸ್ತುತ, ಪೆಗಾಟ್ರಾನ್ 5,964 ಕೋಟಿ ರೂ. ಮೌಲ್ಯದ ಕಂಪನಿಯಾಗಿ ಗುರುತಿಸಿಕೊಂಡಿದೆ.

     

  • ವಿಪಕ್ಷ ನಾಯಕರ ಮೊಬೈಲ್‌ಗೆ ಹ್ಯಾಕಿಂಗ್ ಎಚ್ಚರಿಕೆ – ಆಪಲ್ ಅಧಿಕಾರಿಗಳ ವಿಚಾರಣೆಗೆ ಸಂಸದೀಯ ಸ್ಥಾಯಿ ಸಮಿತಿ ನಿರ್ಧಾರ

    ವಿಪಕ್ಷ ನಾಯಕರ ಮೊಬೈಲ್‌ಗೆ ಹ್ಯಾಕಿಂಗ್ ಎಚ್ಚರಿಕೆ – ಆಪಲ್ ಅಧಿಕಾರಿಗಳ ವಿಚಾರಣೆಗೆ ಸಂಸದೀಯ ಸ್ಥಾಯಿ ಸಮಿತಿ ನಿರ್ಧಾರ

    ನವದೆಹಲಿ: ವಿರೋಧ ಪಕ್ಷದ ನಾಯಕರ (Opposition Leader) ಐಫೋನ್‌ಗೆ (Iphone) ಹ್ಯಾಕಿಂಗ್ (Hacking) ಎಚ್ಚರಿಕೆ ಸಂದೇಶ ಬಂದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು (IT) ಮುಂಬರುವ ಸಭೆಯಲ್ಲಿ ಆಪಲ್ ಅಧಿಕಾರಿಗಳನ್ನು ಕರೆಸಿಕೊಂಡು ಮಾಹಿತಿ ಪಡೆಯಲು ನಿರ್ಧರಿಸಿದೆ.

    ಸಂಸದರ ಫೋನ್‌ಗೆ ಬಂದ ಇತ್ತೀಚಿನ ಎಚ್ಚರಿಕೆ ಬಗ್ಗೆ ಸಮಿತಿಯ ಕಾರ್ಯದರ್ಶಿ ಆಳವಾದ ಕಳವಳ ವ್ಯಕ್ತಪಡಿಸಿದ್ದು, ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ. ಮಂಗಳವಾರ ಹಲವು ವಿರೋಧ ಪಕ್ಷದ ನಾಯಕರು, ಸಂಸದರು ತಮ್ಮ ಐಫೋನ್‌ಗಳನ್ನು ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ‘ರಾಜ್ಯ ಪ್ರಾಯೋಜಿತ ದಾಳಿಕೋರರು’ ಕುರಿತು ಆಪಲ್‌ನಿಂದ ಅಧಿಸೂಚನೆಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದಾಗ ವಿವಾದ ಭುಗಿಲೆದ್ದಿತು. ಸರ್ಕಾರ ಹ್ಯಾಕಿಂಗ್ ಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಿದರು. ಆದರೆ ಈ ಆರೋಪವನ್ನು ನಿರಾಕರಿಸಿದ ಸರ್ಕಾರ, ಈ ವಿಷಯದ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಬುದ್ಧಿವಂತ.. ಗಲ್ಫ್‌ ರಾಷ್ಟ್ರದಲ್ಲಿ ಒಳ್ಳೆ ಸಂಬಳದ ಕೆಲಸ ಬಿಟ್ಟು ಬಾಂಬ್‌ ಸ್ಫೋಟಿಸಿದ್ಯಾಕೆ; ತಲೆ ಕೆಡಿಸಿಕೊಂಡ ಪೊಲೀಸರು

    ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಶಶಿ ತರೂರ್, ಪವನ್ ಖೇರಾ, ಕೆ.ಸಿ ವೇಣುಗೋಪಾಲ್, ಸುಪ್ರಿಯಾ ಶ್ರಿನಾಟೆ, ಟಿಎಸ್ ಸಿಂಘ್ದೇವ್ ಮತ್ತು ಭೂಪಿಂದರ್ ಸಿಂಗ್ ಹೂಡಾ ಸೇರಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ರೀತಿಯ ಎಚ್ಚರಿಕೆ ಸಂದೇಶ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ಉಪವಾಸ ಆಚರಿಸಿದ ಪಾಕ್‌ ಮಹಿಳೆ ಸೀಮಾ – ಕಾರಣ ಗೊತ್ತಾ.?

    ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಘವ್ ಚಡ್ಡಾ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕೆಲವು ಸಹಾಯಕರು ಕೂಡ ಆಪಲ್‌ನಿಂದ ಸಂದೇಶವನ್ನು ಸ್ವೀಕರಿಸಿದ್ದಾರೆ. ವಿವಾದ ಹೆಚ್ಚಾಗುತ್ತಿದ್ದಂತೆ ಆಪಲ್ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಯಾವುದೇ ನಿರ್ದಿಷ್ಟ ರಾಜ್ಯ ಪ್ರಾಯೋಜಿತ ದಾಳಿಕೋರ ಬೆದರಿಕೆ ಸೂಚನೆಗಳನ್ನು ನೀಡಿಲ್ಲ. ಇಂತಹ ಸಂದೇಶ ಸುಳ್ಳು ಎಚ್ಚರಿಕೆಗಳಾಗಿರಬಹುದು ಎಂದು ಹೇಳಿದೆ. ಇದನ್ನೂ ಓದಿ: ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ತಲೆ ಎತ್ತಲಿದೆ ಶ್ರೀರಾಮನ ಮೂರ್ತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತಿಪಕ್ಷ ನಾಯಕರನ್ನು ಪ್ರಾಂಕ್‌ ಮಾಡಿರಬಹುದು – ಪಿಯೂಷ್ ಗೋಯಲ್ ವ್ಯಂಗ್ಯ

    ಪ್ರತಿಪಕ್ಷ ನಾಯಕರನ್ನು ಪ್ರಾಂಕ್‌ ಮಾಡಿರಬಹುದು – ಪಿಯೂಷ್ ಗೋಯಲ್ ವ್ಯಂಗ್ಯ

    ನವದೆಹಲಿ: ಕೇಂದ್ರ ಸರ್ಕಾರಕ್ಕೆ (Union Government) ಫೋನ್‌ ಕದ್ದಾಲಿಕೆ ಮಾಡುವ ಅವಶ್ಯಕತೆಯಿಲ್ಲ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್‌ ಮಾಡಿರಬಹುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ವ್ಯಂಗ್ಯವಾಡಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಕೆಲ ಪ್ರತಿಪಕ್ಷ ನಾಯಕರಿಗೆ ಆಪಲ್‌ನಿಂದ (Apple) ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ ಎಂಬ ಆರೋಪವನ್ನ ತಳ್ಳಿಹಾಕಿದ್ದಾರೆ. ಬಹುಶಃ ವಿರೋಧ ಪಕ್ಷಗಳ ನಾಯಕರನ್ನು ಯಾರಾದರೂ ಪ್ರಾಂಕ್‌ ಮಾಡಿರಬಹುದು, ಅವರು ಅಧಿಕೃತವಾಗಿ ದೂರು ನೀಡಿದ್ರೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

    ಹ್ಯಾಕರ್ಸ್‌ ಸಕ್ರೀಯವಾಗಿದ್ದಾರೆ: ಪ್ರತಿಪಕ್ಷಗಳು ದುರ್ಬಲ ಸ್ಥಿತಿಯನ್ನು ಎದುರಿಸುತ್ತಿವೆ, ಎಲ್ಲದರಲ್ಲೂ ಪಿತೂರಿಯನ್ನ ಹುಡುಕುತ್ತಿದ್ದಾರೆ. ಆಪಲ್‌ ಕಂಪನಿ ಸ್ವತಃ ಸ್ಪಷ್ಟಪಡಿಸಿದೆ. ಸುಮಾರು 150 ದೇಶಗಳ ವ್ಯಕ್ತಿಗಳಿಗೆ ನೋಟಿಫಿಕೇಶನ್‌ ಹೋಗಿದೆ. ಉಗಾಂಡದ ರಾಜಕೀಯ ನಾಯಕರ ಐಫೋನಿಗೆ ಈ ರೀತಿಯ ಎಚ್ಚರಿಕೆ ಸಂದೇಶ ಬಂದಿದೆ. ಈ ದಾಳಿಯನ್ನ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಹೇಳಿದೆ. ವಿಶ್ವದಾದ್ಯಂತ ಹ್ಯಾಕರ್‌ಗಳು ಸಕ್ರಿಯರಾಗಿದ್ದಾರೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಪ್ರತಿಪಕ್ಷಗಳ ನಾಯಕರು ತಮ್ಮ ಆಂತರಿಕ ಕಚ್ಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪರಿಸ್ಥಿತಿ ಹೇಗಿದೆ ಎಂಬುದು ದೇಶದ ಜನರಿಗೆ ತಿಳಿದಿದೆ. ಮೊದಲು ಅವರು ತಮ್ಮ ದೌರ್ಬಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಫೋನ್‌ಗಳನ್ನು ಕದ್ದಾಲಿಕೆ ಮಾಡುವ ಅವಶ್ಯಕತೆಯೂ ಸರ್ಕಾರಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಏನಿದು ಆರೋಪ?
    ತಮ್ಮ ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ, ಕೇಂದ್ರದಿಂದ ಫೋನ್‌ ಕದ್ದಾಲಿಕೆ ನಡೆಯುತ್ತಿದೆ ಎಂದು ಪ್ರತಿಪಕ್ಷಗಳ ವಿವಿಧ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಐ-ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪೆನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.

    ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯಲ್ಲಿನ ಕೆಲವರಿಗೂ ಈ ಸಂದೇಶ ಬಂದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಈ ಸಂದೇಶಗಳ ಬಗ್ಗೆ ಅರಿವಿದೆ. ಐಫೋನ್‌ಗಳಲ್ಲಿ ಬೆದರಿಕೆ ಪತ್ತೆ ಮಾಡುವ ತಂತ್ರಜ್ಞಾನವು ಕೆಲವೊಮ್ಮೆ ಅಸಮಗ್ರ ಹಾಗೂ ಅಪೂರ್ಣವಾಗಿರುತ್ತದೆ ಎಂದು ಹೇಳಿದೆ.

    ಆಪಲ್‌ನಿಂದ ಬಂದ ಸಂದೇಶದಲ್ಲಿ ಏನಿತ್ತು?
    ನೀವು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಗುರಿಯಾಗುತ್ತಿದ್ದೀರಿ. ಅವರು ನಿಮ್ಮ ಆಪಲ್ ಐಡಿಗೆ ಸಂಬಂಧಿಸಿದ ಐಫೋನ್‌ಗೆ ದೂರದಿಂದ ಕದ್ದಾಲಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪಲ್‌ನ ಸಂದೇಶ ಹೇಳಿದೆ.

    ಈ ದಾಳಿಕೋರರು ನೀವು ಯಾರು ಅಥವಾ ನೀವು ಏನು ಮಾಡುತ್ತೀರಿ ಎಂಬ ಆಧಾರದಲ್ಲಿ ನಿಮ್ಮನ್ನು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸೂಕ್ಷ್ಮ ಡೇಟಾ, ಸಂಹವನಗಳು ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳನ್ನು ಕದಿಯಲು ಅವರಿಗೆ ಸಾಧ್ಯವಾಗಲಿದೆ. ಇದು ಸುಳ್ಳು ಎಚ್ಚರಿಕೆಯಾಗುವ ಸಾಧ್ಯತೆ ಇದ್ದರೂ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಂದೇಶದಲ್ಲಿದೆ.

    ಆಪಲ್‌ ಪ್ರತಿಕ್ರಿಯೆ ಏನು ಹೇಳಿಕೆಯಲ್ಲಿ ಏನಿದೆ?
    ರಾಜ್ಯ ಪ್ರಾಯೋಜಿತ ದಾಳಿ ಕಾಲಾನಂತರದಲ್ಲಿ ವಿಕಸನಗೊಳ್ಳುತ್ತದೆ. ಈ ದಾಳಿಗಳನ್ನು ಪತ್ತೆಹಚ್ಚುವುದು ಕಷ್ಟ. ಅಪೂರ್ಣವಾಗಿರುವ ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಆಪಲ್‌ನ ಕೆಲವೊಂದು ಬೆದರಿಕೆ ಸೂಚನೆಗಳು ತಪ್ಪು ಅಲಾರಂಗಳಾಗಿರಬಹುದು. ಈ ದಾಳಿಗಳು ಪತ್ತೆಯಾಗದಿರುವ ಸಾಧ್ಯತೆಯಿದೆ. ಈ ದಾಳಿಗಳನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ನಾವು ಬೆದರಿಕೆ ಅಧಿಸೂಚನೆಗಳನ್ನು ನೀಡಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್‌ ಹ್ಯಾಕಿಂಗ್‌ ಪ್ರಯತ್ನ ಯಾಕೆ? – ಯಾವುದಕ್ಕೂ ಹೆದರಲ್ಲ: ರಾಗಾ ತಿರುಗೇಟು

    ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್‌ ಹ್ಯಾಕಿಂಗ್‌ ಪ್ರಯತ್ನ ಯಾಕೆ? – ಯಾವುದಕ್ಕೂ ಹೆದರಲ್ಲ: ರಾಗಾ ತಿರುಗೇಟು

    ನವದೆಹಲಿ: ಸರ್ಕಾರ ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್‌ ಹ್ಯಾಕಿಂಗ್‌ ಪ್ರಯತ್ನ ಯಾಕೆ? ನಮ್ಮ ಫೋನ್‌ಗಳನ್ನು ಎಷ್ಟು ಬೇಕಾದರೂ ಟ್ಯಾಪ್ (Phone Tapping) ಮಾಡಬಹುದು, ಸರ್ಕಾರದ ಪ್ರಯತ್ನಗಳಿಗೆ ನಾವು ಹೆದರುವುದಿಲ್ಲ ಎಂದು ಸಂಸದ ರಾಹುಲ್ ಗಾಂಧಿ (Rahul Gandhi) ತಿರುಗೇಟು ನೀಡಿದರು.

    ಕೇಂದ್ರ ಸರ್ಕಾರದಿಂದ ವಿಪಕ್ಷ ನಾಯಕರ ಫೋನ್‌ ಕದ್ದಾಲಿಕೆ ಆರೋಪದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ (Union Government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಇಂತಹ ನಡೆ ವಿರುದ್ಧ ಬಹಳ ಕಡಿಮೆ ಜನರು ಹೋರಾಡುತ್ತಿದ್ದಾರೆ. ನೀವು ಎಷ್ಟು ಬೇಕಾದರೂ ಟ್ಯಾಪಿಂಗ್ ಮಾಡಬಹುದು, ನಾನು ಹೆದರುವುದಿಲ್ಲ, ಬೇಕಿದ್ದರೆ ನಾನೇ ನಿಮಗೆ ನನ್ನ ಫೋನ್‌ ಕೊಡುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

    ಸರ್ಕಾರವು ವಿಚಲಿತ ರಾಜಕೀಯದಲ್ಲಿ ತೊಡಗಿದೆ, ಈಗಿನ ಸರ್ಕಾರದ ಮುಖ್ಯಸ್ಥರು ಮರೆಮಾಚುತ್ತಿದ್ದ ಸತ್ಯ ಪ್ರತಿಪಕ್ಷಗಳಿಗೆ ಗೊತ್ತಾಗಿದೆ. ದೇಶದ ಜನತೆಗೆ ಪ್ರತಿಯೊಂದು ಸತ್ಯವೂ ಅರ್ಥವಾಗುತ್ತಿದೆ. ಸರ್ಕಾರದ ಟ್ಯಾಪಿಂಗ್ ಸಹ ಯಾವುದೇ ವ್ಯತ್ಯಾಸ ತೋರಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದೇಶ ಅನುಭವಿಸುತ್ತಿರುವ ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಸುಳ್ಳು ಕನಸುಗಳೇ ಮಾರಾಟವಾಗುತ್ತಿವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮತೀಯ ದ್ವೇಷಕ್ಕೆ ಪ್ರಚೋದನೆ ಆರೋಪ – ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇಸ್‌

    ನಾವು ವಿರೋಧ ಪಕ್ಷದಲ್ಲಿದ್ದು ನಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿದ್ದೇವೆ. ಅಲ್ಲದೇ ಪ್ರಧಾನಿ ಮೋದಿಯವರ ಆತ್ಮ ಅದಾನಿಯಲ್ಲಿದೆ, ಅಧಿಕಾರ ಬೇರೆಯವರ ಕೈಯಲ್ಲಿದೆ, ಕೃಷಿ ಕ್ಷೇತ್ರ ಅದಾನಿ (Gautam Adani) ಕೈಯಲ್ಲಿದೆ, ಮೂಲಸೌಕರ್ಯ ಅವರ ಕೈಯಲ್ಲಿದೆ. ದೇಶದ ಆಸ್ತಿ ಮಾರಾಟವಾಗುತ್ತಿದೆ. ಇದರಿಂದ ದೇಶದ ಯುವಕರಿಗೆ ತೊಂದರೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೇಂದ್ರದಿಂದ ಐಫೋನ್‌ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ

    ಈ ಹಿಂದೆ ಪ್ರಧಾನಿ ಮೋದಿ ಸರ್ಕಾರದಲ್ಲಿ ನಂ.1 ಮತ್ತು ಅಮಿತ್ ಶಾ (Amit Shah) 2ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಚಿತ್ರಣ ಬದಲಾಗಿದೆ, ಸರ್ಕಾರದಲ್ಲಿ ಅದಾನಿ ನಂಬರ್ 1, ಪಿಎಂ ಮೋದಿ 2 ಮತ್ತು ಅಮಿತ್ ಶಾ 3ನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿಯವರಿಗೆ ಯಾರು ಕೆಲಸ ಕೊಡಲು ಹೊರಟಿದ್ದಾರೆ ಎಂಬ ಸತ್ಯ ಸಾರ್ವಜನಿಕರಿಗೆ ಅರ್ಥವಾಗುತ್ತದೆ. ಕೃಷಿ ಕ್ಷೇತ್ರ ಮತ್ತು ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲಾಗಿದೆ, ಸರ್ಕಾರವು ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದಾದರೆ ಹ್ಯಾಕಿಂಗ್ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿದರು.

    ಈಗಿನ ಕೇಂದ್ರ ಸರ್ಕಾರ ಸಾಮಾನ್ಯ ಜನರ ಸರ್ಕಾರವಲ್ಲ, ಈ ಸರ್ಕಾರದಲ್ಲಿ ಶ್ರೀಸಾಮಾನ್ಯರ ಕಡೆಗಣನೆ ಮತ್ತು ಶ್ರೀಮಂತರ ಗಣನೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸರ್ಕಾರವು ಕೆಲವು ಕೈಗಾರಿಕದ್ಯೊಮಿಗಳ ಮನೆಗಳಿಗೆ ಕೆಲಸ ಮಾಡುತ್ತದೆ. ಈ ಸರ್ಕಾರದ ಅಡಿಯಲ್ಲಿ ಹಣದುಬ್ಬರ ಉತ್ತುಂಗದಲ್ಲಿದೆ, ಜನರ ದೈನಂದಿನ ಅಗತ್ಯಗಳನ್ನು ಪೂರೈಸಲು ಅವರ ಜೇಬಿನಲ್ಲಿ ಹಣವಿಲ್ಲ. ತರಕಾರಿಗಳ ಬೆಲೆ ಗಗನಕ್ಕೇರಿದೆ. ಅಷ್ಟೇ ಅಲ್ಲದೇ ದೇಶೀಯ ರಂಗದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

    ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ

    ನವದೆಹಲಿ : ವಿರೋಧ ಪಕ್ಷಗಳ ನಾಯಕರ ಐಫೋನ್‌ಗೆ ಹ್ಯಾಕಿಂಗ್ (iPhone Hack) ಸಂದೇಶ ಬಂದಿರುವ ತಾಂತ್ರಿಕ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಕೆಲವು ಏಜೆನ್ಸಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಹೇಳಿದ್ದಾರೆ.

    ವಿಪಕ್ಷಗಳ ಆರೋಪದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ಸಂಸದರು ಆಪಲ್‌ನಿಂದ ಎಚ್ಚರಿಕೆ ಸಂದೇಶ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಆ್ಯಪಲ್‌ (Apple) ಭಾರತದಲ್ಲಿ ಮಾತ್ರ ಇಂತಹ ಸಂದೇಶ ಕಳುಹಿಸಿಲ್ಲ ಬದಲಿಗೆ ಸುಮಾರು 150 ದೇಶಗಳ ಜನರಿಗೆ ಎಚ್ಚರಿಕೆ ಸೂಚನೆಗಳನ್ನು ಕಳುಹಿಸಿದೆ. ಈ ನಡುವೆ ಐಫೋನ್ ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆ್ಯಪಲ್ ಸ್ಪಷ್ಟೀಕರಣವನ್ನು ನೀಡಿದೆ ಎಂದರು.  ಇದನ್ನೂ ಓದಿ: ಕೇಂದ್ರದಿಂದ ಐಫೋನ್‌ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ

     

    ಸರ್ಕಾರದ ವಿರುದ್ಧ ಆರೋಪ ಮಾಡಿದ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ವೈಷ್ಣವ್, ದೇಶದ ಪ್ರಗತಿಯನ್ನು ನೋಡಲು ಬಯಸದ ಜನರು ಇಂತಹ ರಾಜಕೀಯದಲ್ಲಿ ತೊಡಗಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡುವ ಕೆಲವರು ಅವರ ಕುಟುಂಬ ಅಧಿಕಾರದಲ್ಲಿದ್ದಾಗ ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದರು ಆದರೆ ನಮ್ಮ ಸರ್ಕಾರವು ಈ ವಿಷಯದ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ತಿರುಗೇಟು ನೀಡಿದರು.  ಇದನ್ನೂ ಓದಿ: ಕೇಂದ್ರದಿಂದ ಸಂಸದರ ಐಫೋನ್‌ ಕದ್ದಾಲಿಕೆ – ಆಪಲ್‌ ಕಂಪನಿಯಿಂದ ಹೇಳಿಕೆ ಬಿಡುಗಡೆ

    ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಐ-ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪೆನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇಂದ್ರದಿಂದ ಐಫೋನ್‌ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ

    ಕೇಂದ್ರದಿಂದ ಐಫೋನ್‌ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ

    ನವದೆಹಲಿ: ತಮ್ಮ ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಕತ್ವದ ದಾಳಿ ನಡೆಯುತ್ತಿದೆ, ಕೇಂದ್ರದಿಂದ ಫೋನ್‌ ಕದ್ದಾಲಿಕೆ ನಡೆಯುತ್ತಿದೆ ಎಂದು ಪ್ರತಿಪಕ್ಷಗಳ ವಿವಿಧ ನಾಯಕರು ಕೇಂದ್ರ ಸರ್ಕಾರದ (Union Government) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra), ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ (Priyanka Chaturvedi) ಅವರು ತಮ್ಮ ಐ-ಫೋನ್‌ಗಳ (iPhone) ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ (E-mail) ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.

    ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರ ಕಚೇರಿಯಲ್ಲಿನ ಕೆಲವರಿಗೂ ಈ ಸಂದೇಶ ಬಂದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಈ ಸಂದೇಶಗಳ ಬಗ್ಗೆ ಅರಿವಿದೆ. ಐಫೋನ್‌ಗಳಲ್ಲಿ ಬೆದರಿಕೆ ಪತ್ತೆ ಮಾಡುವ ತಂತ್ರಜ್ಞಾನವು ಕೆಲವೊಮ್ಮೆ ಅಸಮಗ್ರ ಹಾಗೂ ಅಪೂರ್ಣವಾಗಿರುತ್ತದೆ ಎಂದು ಹೇಳಿದೆ.

    ಆಪಲ್‌ನಿಂದ ಬಂದ ಸಂದೇಶದಲ್ಲಿ ಏನಿದೆ?
    ನೀವು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಗುರಿಯಾಗುತ್ತಿದ್ದೀರಿ. ಅವರು ನಿಮ್ಮ ಆಪಲ್ ಐಡಿಗೆ (Apple ID) ಸಂಬಂಧಿಸಿದ ಐಫೋನ್‌ಗೆ ದೂರದಿಂದ ಕದ್ದಾಲಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪಲ್‌ನ ಸಂದೇಶ ಹೇಳಿದೆ.

    ಈ ದಾಳಿಕೋರರು ನೀವು ಯಾರು ಅಥವಾ ನೀವು ಏನು ಮಾಡುತ್ತೀರಿ ಎಂಬ ಆಧಾರದಲ್ಲಿ ನಿಮ್ಮನ್ನು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸೂಕ್ಷ್ಮ ಡೇಟಾ, ಸಂಹವನಗಳು ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳನ್ನು ಕದಿಯಲು ಅವರಿಗೆ ಸಾಧ್ಯವಾಗಲಿದೆ. ಇದು ಸುಳ್ಳು ಎಚ್ಚರಿಕೆಯಾಗುವ ಸಾಧ್ಯತೆ ಇದ್ದರೂ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಂದೇಶದಲ್ಲಿದೆ.

    ಬಿಜೆಪಿ ಪ್ರತಿಕ್ರಿಯೆ ಏನು?
    ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, ಆಪಲ್‌ನ ಸ್ಪಷ್ಟೀಕರಣ ಬರುವವರೆಗೂ ಕಾಯುವಂತೆ ಮನವಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಬ್ಬಬ್ಬಾ! ಬ್ಲೌಸ್‌ನಲ್ಲೂ ಚಿನ್ನ ಸಾಗಾಟ – ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ ಅಂದರ್‌

    ಅಬ್ಬಬ್ಬಾ! ಬ್ಲೌಸ್‌ನಲ್ಲೂ ಚಿನ್ನ ಸಾಗಾಟ – ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ ಅಂದರ್‌

    ಚಿಕ್ಕಬಳ್ಳಾಪುರ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಮೂರು ಪ್ರಕರಣಗಳಲ್ಲಿ 67 ಲಕ್ಷ ರೂ. ಮೌಲ್ಯದ 1 ಕೆಜಿ 133 ಗ್ರಾಂ ಚಿನ್ನ ಸೀಜ್‌ (Gold Seized) ಮಾಡಿದ್ದಾರೆ.

    ಭಾರತ ಮೂಲದ ಮಹಿಳೆ ಕೌಲಾಲಂಪುರ್‌ನಿಂದ ಬೆಂಗಳೂರಿಗೆ ಬಂದಿದ್ದಳು. ಈಕೆ ತನ್ನ ಬ್ಲೌಸ್‌ನ ಒಳಭಾಗದಲ್ಲಿ 300 ಗ್ರಾಂ ನಷ್ಟು ಪೇಸ್ಟ್‌ ರೂಪದ ಚಿನ್ನವನ್ನ ಇಟ್ಟುಕೊಂಡಿದ್ದಳು. ಇನ್ನೂ ಮಲೇಷಿಯಾ ಮೂಲದ ಮಹಿಳೆ ಸಹ 34 ಲಕ್ಷ ರೂ. ಮೌಲ್ಯದ 578 ಗ್ರಾಂ ಚಿನ್ನ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಇದನ್ನೂ ಓದಿ: ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್‌ ಅಧಿಕಾರಿ ಜೊತೆ ಪಾಕ್‌ ಅಭಿಮಾನಿ ವಾಗ್ವಾದ

    ಮತ್ತೊಂದು ಪ್ರಕರಣದಲ್ಲಿ ಭಾರತ ಮೂಲದ ವ್ಯಕ್ತಿಯೊರ್ವ ಕುವೈತ್‌ನಿಂದ ಬಂದಿದ್ದು, ಡ್ರೈಫ್ರೂಟ್ಸ್‌ ಪಾಕೆಟ್‌ನಲ್ಲಿ ಸಣ್ಣ ಸಣ್ಣ ಚೂರುಗಳ ರೂಪದಲ್ಲಿ ಚಿನ್ನ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, 15 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನ ಸೀಜ್‌ ಮಾಡಿದ್ದಾರೆ. ಜೊತೆಗೆ 1 ಐಪೋನ್ (iPhone) ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಿರುತೆರೆಯಲ್ಲಿ ಕ್ರಿಕೆಟ್: TPL-ಮೂರನೇ ಸೀಸನ್ ಟೀಂ ಲೋಗೋ ಲಾಂಚ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]