Tag: IPFT

  • ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ಅಗರ್ತಲಾ: ತ್ರಿಪುರಾದಲ್ಲಿ ಮಹಿಳೆಯರಿಗಾಗಿ 33% ಸರ್ಕಾರಿ ಉದ್ಯೋಗಗಳು, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯವನ್ನು ನಿರ್ಮಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರು ತ್ರಿಪುರಾದಲ್ಲಿ ಶೇ. 33ರಷ್ಟು ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಘೋಷಿಸಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ರೈತರ ಸಾಲಮನ್ನಾ ಅಸಾಧ್ಯ: ಎಸ್.ಟಿ. ಸೋಮಶೇಖರ್

    ಈಶಾನ್ಯ ರಾಜ್ಯದಲ್ಲಿ ಬಿಜೆಪಿ-ಐಪಿಎಫ್‍ಟಿ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಅಗರ್ತಲಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಪ್ಲಬ್ ದೇಬ್ ಅವರ ಆಡಳಿತವು ರಾಜಕೀಯ ಹಿಂಸಾಚಾರಕ್ಕೆ ಪೂರ್ಣ ವಿರಾಮ ಹಾಕಿದೆ. ನಾವು 200 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತೇವೆ. ರಾಜ್ಯದ ಯುವಜನರಿಗಾಗಿ ಕೇವಲ 4 ವರ್ಷಗಳಲ್ಲಿ ಪ್ರತಿ ವ್ಯಕ್ತಿಯ ಆದಾಯವು 13% ರಿಂದ 1.30 ಲಕ್ಷಕ್ಕೆ ಏರಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

    ಪ್ರಸ್ತುತ ನಮ್ಮ ಸರ್ಕಾರದ ಅಡಿಯಲ್ಲಿ ರೈತರ ಆದಾಯವು ದ್ವಿಗುಣಗೊಂಡಿದೆ. ತಲಾ ಆದಾಯವು ರೂ 1.3 ಲಕ್ಷಕ್ಕೆ ಏರಿದೆ. ರೈಲಿನ ಮೂಲಕ ಅಗರ್ತಲಾವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲಾಗಿದೆ. ಒಟ್ಟು 542 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ತ್ರಿಪುರಾದಲ್ಲಿ ನಡೆಯುವ ಘೋರ ಅಪರಾಧಗಳಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ. ಶಿಕ್ಷೆಯ ಪ್ರಮಾಣವು ಶೇ.5 ರಿಂದ ಶೇ.53ಕ್ಕೆ ಏರಿದೆ ಎಂದು ತಿಳಿಸಿದರು.

    ಹಿಂದಿನ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಆಡಳಿತ ವ್ಯವಸ್ಥೆಯು ಈಡೇರಿಸುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಈಶಾನ್ಯ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಮತ ಕೇಳಲು ತ್ರಿಪುರಾಕ್ಕೆ ಮತ್ತೆ ಹಿಂದಿರುಗುತ್ತೇನೆ ಎಂದರು.