Tag: IPC

  • IIT ವಿದ್ಯಾರ್ಥಿನಿ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ – ಪೊಲೀಸ್ ಕಾನ್‌ಸ್ಟೇಬಲ್ ಸಸ್ಪೆಂಡ್

    IIT ವಿದ್ಯಾರ್ಥಿನಿ ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ – ಪೊಲೀಸ್ ಕಾನ್‌ಸ್ಟೇಬಲ್ ಸಸ್ಪೆಂಡ್

    ಮುಂಬೈ: 19 ವರ್ಷದ ಐಐಟಿ ವಿದ್ಯಾರ್ಥಿನಿಯ (IIT Student) ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ಪೊಲೀಸ್ ಕಾನ್‌ಸ್ಟೇಬಲ್‌ (Police Constable)  ಒಬ್ಬನನ್ನ ಅಮಾನತುಗೊಳಿಸಿರುವ ಘಟನೆ ಮುಂಬೈನ (Mumbai) ಸಂಪದ ಪಾಮ್ ಬೀಚ್ ಬಳಿ ನಡೆದಿದೆ.

    ಪೊಲೀಸ್ ಕಾನ್‌ಸ್ಟೇಬಲ್ ಕುಡಿತ ಮತ್ತಿನಲ್ಲಿ ವಿದ್ಯಾರ್ಥಿನಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಆಕೆಯನ್ನು ಬೈಕ್‌ನಲ್ಲಿ ಕೂರುವಂತೆ ಒತ್ತಾಯಿಸಿದ್ದಾನೆ ಎಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊವೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಸದ್ಯ ಪೊಲೀಸ್ ಕಾನ್ಸ್ಸ್ಟೇಬಲ್‌ನನ್ನ ಅಮಾನತುಗೊಳಿಸಿದ್ದು, ನವಿ ಮುಂಬೈ ಪೊಲೀಸ್ ಆಯಕ್ತ ಮಿಲಿಂದ್ ಭರಾಂಬೆ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ ನಡುವೆ ಮೈಮರೆತ ಪ್ರೇಮಿಗಳು – ರಸ್ತೆ ಬ್ಲಾಕ್‍ಮಾಡಿ ನೋಡ್ಕೊಂಡು ನಿಂತಿದ್ದವರ ಮೇಲೆ ಲಾಠಿಚಾರ್ಜ್

    CRIME COURT

    ನಡೆದಿದ್ದೇನು?
    ಸಂತ್ರಸ್ತೆಯು ಶುಕ್ರವಾರ ಬೆಳಗ್ಗಿನ ಜಾವ 3:15ರ ವೇಳೆಗೆ ಸಂಪದ ಪಾಮ್ ಬೀಚ್ ರಸ್ತೆಯಲ್ಲಿರುವ ಭೂಮಿರಾಜ್ ಕೋಸ್ಟರಿಕಾ ಬಿಲ್ಡಿಂಗ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ಇದ್ದಳು. ಈ ವೇಳೆ ಅಲ್ಲಿಗೆ ಕಾನ್‌ಸ್ಟೇಬಲ್‌ ದೀಪಕ್ ರಾಥೋಡ್ ತನ್ನ ಬೈಕ್ ನಿಲ್ಲಿಸಿ, ಇಬ್ಬರೂ ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದಾನೆ. ಬಳಿಕ ಆಕೆಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಯನ್ನು ತನ್ನ ಬೈಕ್‌ನಲ್ಲಿ ಕೂರುವಂತೆ ಒತ್ತಾಯಿಸಿದ್ದಾನೆ. ಇದರಿಂದ ಕೋಪಗೊಂಡು ಆಕೆ ಮತ್ತು ಅವಳ ಸ್ನೇಹಿತ ಜೋರಾಗಿ ಗಲಾಟೆ ಮಾಡಿದಾಗ ಪೊಲೀಸ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಆಧುನಿಕ ಭಾರತದ ಪಿತಾಮಹ ದೇಶಕ್ಕಾಗಿ ಏನ್ ಮಾಡಿದ್ದಾರೆ – ನಿತೀಶ್ ಕುಮಾರ್ ಪ್ರಶ್ನೆ

    KILLING CRIME

    ಈ ಬಗ್ಗೆ ಸಂಪದ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ನಿರಾಕರಿಸಿದ್ದಾರೆ. ನಂತರ ಆಕೆ ಪೊವೈ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಥೋಡ್ ವಿರುದ್ಧ ಐಪಿಸಿ (IPC) ಸೆಕ್ಷನ್ 354 (ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿನಿಗೆ ಕಿಸ್ ಕೊಟ್ಟು ಯಾರಿಗೂ ಹೇಳ್ಬೇಡ ಎಂದ ಶಿಕ್ಷಕನ ವಿರುದ್ಧ ಕೇಸ್

    ವಿದ್ಯಾರ್ಥಿನಿಗೆ ಕಿಸ್ ಕೊಟ್ಟು ಯಾರಿಗೂ ಹೇಳ್ಬೇಡ ಎಂದ ಶಿಕ್ಷಕನ ವಿರುದ್ಧ ಕೇಸ್

    ಚಿಕ್ಕೋಡಿ: ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಯ (Private Educational Institution) ಪ್ರೌಢ ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕನೊಬ್ಬ (Teacher) ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದ್ದು, ಕಾಮುಕ ಶಿಕ್ಷಕನ ವಿರುದ್ಧ ಕೇಸ್ ದಾಖಲಾಗಿದೆ.

    ಪಟ್ಟಣದ ಖಾಸಗಿ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಶಿಕ್ಷಕ ಬಿ.ಆರ್. ಬಾಡಕರ 10ನೇ ತರಗತಿಯ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಕಾರಣಕ್ಕೆ ವಿದ್ಯಾರ್ಥಿನಿ ಡಿ.23 ರಂದು ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ. ಇದನ್ನೂ ಓದಿ: ಹಾಸನ ಜೆಡಿಎಸ್ ಕಾರ್ಯಕರ್ತರಿಗೆ ಮೈಸೂರಿನಲ್ಲಿ ಭರ್ಜರಿ ಬಾಡೂಟ

    ಅಲ್ಲದೇ ಕಾಮುಕ ಶಿಕ್ಷಕ ಬಾಡಕರ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವನ್ನೂ ನಡೆಸಿದ್ದಾನೆ. ಈ ವಿಷಯ ಯಾರಿಗಾದ್ರೂ ಹೇಳಿದ್ರೆ ಇಂಟರ್‌ನಲ್ ಅಂಕಗಳನ್ನ ಕಡಿತಗೊಳಿಸೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಶಿಕ್ಷಕನ ಈ ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಶಿಕ್ಷಕ ಕೆ.ಎಂ ಕೋಳಿ ವಿರುದ್ಧವೂ ದೂರು ನೀಡಲಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ

    ಈ ಹಿನ್ನೆಲೆಯಲ್ಲಿ ಆರೋಪಿಗಳ (Accused) ವಿರುದ್ಧ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ (Police Station) ಐಪಿಸಿ (IPC) ಸೆಕ್ಷನ್ 354 (A), 109, 506 ಅಡಿಯಲ್ಲಿ, ಪೋಕ್ಸೋ (POCSO Act) ಹಾಗೂ ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ-2015ರ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • SC-ST ಕಾಯ್ದೆಯಡಿ ಅಮಾಯಕರು ಸುಳ್ಳು ಪ್ರಕರಣಗಳಿಗೆ ಬಲಿಯಾಗ್ತಿದ್ದಾರೆ : ಕೇರಳ ಹೈಕೋರ್ಟ್

    SC-ST ಕಾಯ್ದೆಯಡಿ ಅಮಾಯಕರು ಸುಳ್ಳು ಪ್ರಕರಣಗಳಿಗೆ ಬಲಿಯಾಗ್ತಿದ್ದಾರೆ : ಕೇರಳ ಹೈಕೋರ್ಟ್

    ತಿರುನಂತರಪುರಂ: ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ (SC-ST (POA) Act) ಅಡಿಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ಎಚ್ಚರಿಕೆಯಿಂದ ವಿಶ್ಲೇಷಣೆ ಮಾಡಬೇಕು ಎಂದು ಕೇರಳ ಹೈಕೋರ್ಟ್ (Kerala High Court) ಸೂಚಿಸಿದೆ.

    ಅನೇಕ ಅಮಾಯಕರು ಸುಳ್ಳು ಪ್ರಕರಣಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಆದ್ದರಿಂದ ಎಸ್ಸಿ-ಎಸ್ಟಿ ಕಾಯ್ದೆ ಅಡಿಯ ಪ್ರಕರಣಗಳು ಬಂದಾಗ ನ್ಯಾಯಾಲಯಗಳು (Court) ಹೆಚ್ಚಿನ ವಿವರಗಳಿಗೆ ಗಮನ ಕೊಡಬೇಕು ಎಂದು ನ್ಯಾಯಮೂರ್ತಿ ಎ. ಬದ್ರುದ್ದೀನ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ

    ಎಸ್ಸಿ-ಎಸ್ಟಿ ಕಾಯ್ದೆ (ದೌರ್ಜನ್ಯ ತಡೆ) ಅಡಿಯಲ್ಲಿ ಅನೇಕ ಮುಗ್ಧರು ಸುಳ್ಳು ಪ್ರಕರಣಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ ಘಟನೆ. ಆದ್ದರಿಂದ ನ್ಯಾಯಾಲಯಗಳು ಪ್ರಕರಣಗಳನ್ನು ಮೂಲದಿಂದ ವಿಶ್ಲೇಷಣೆ ಮಾಡುವ ಅಗತ್ಯವಿದೆ. ಪ್ರಕರಣದ ಹುಟ್ಟು, ಅಪರಾಧದ ನೋಂದಣಿಯಾಗುವುದಕ್ಕೂ ಮುಂಚಿನ ಪೂರ್ವಕಥೆಗಳು, ದೂರುದಾರ ಮತ್ತು ಆರೋಪಿ (Accused) ನಡುವಿನ ದ್ವೇಷದ ಅಸ್ತಿತ್ವ ಈ ಎಲ್ಲ ಅಂಶಗಳನ್ನು ಉಲ್ಲೇಖಿಸಬೇಕು. ಜೊತೆಗೆ ಜಾಮೀನು ಅರ್ಜಿ ಪರಿಗಣಿಸುವಾಗ ಹಿಂದಿನ ವಿವಾದಗಳು, ಪ್ರಕರಣಗಳು ಹಾಗೂ ದೂರುಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ವಿಶೇಷ ನ್ಯಾಯಾಲಯ ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ಸಮಯದಲ್ಲಿ ಕೋರ್ಟ್ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ತನ್ನ ಚುನಾವಣೆಯ ಗೆಲುವಿನ ರಹಸ್ಯ ರಿವೀಲ್ ಮಾಡಿದ ಮೋದಿ

    court order law

    ಏನಿದು ಪ್ರಕರಣ?
    ಬ್ಯಾಂಕ್‌ಗೆ ಹೋದಾಗ ಅಲ್ಲಿದ್ದ ಮಹಿಳಾ ಉದ್ಯೋಗಿ ತನ್ನನ್ನು ಜಾತಿ ಹೆಸರಿನಿಂದ ನಿಂದಿಸಿದ್ದಾಳೆ ಎಂದು ಆರೋಪಿಸಿ ಎಸ್ಸಿ-ಎಸ್ಟಿ ಕಾಯ್ದೆ (ದೌರ್ಜನ್ಯ ತಡೆ) ಅಡಿ ಕೇಸ್ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದರು. ಆದರೆ ದೂರುದಾರ ವ್ಯಕ್ತಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿರಲಿಲ್ಲ. ಮಹಿಳೆಯೊಂದಿಗೆ ಕೆಲಸ ಮಾಡುತ್ತಿದ್ದವರಲ್ಲಿ ಒಬ್ಬರಾಗಿದ್ದರು. ಪದೇ-ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದರು. ಈ ಲೈಂಗಿಕ ಕಿರುಕುಳದ ದೂರನ್ನು ಹಿಂತೆಗೆದುಕೊಳ್ಳುವಂತೆ ಬೆದರಿಸಲು ಮಾಡಿದ ಪ್ರಯತ್ನಗಳಲ್ಲಿ ಇದೂ ಒಂದಾಗಿದೆ ಎಂದು ಮಹಿಳಾ ಪರ ವಕೀಲರು ವಾದಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪಿಂಕಿ-ರಿಂಕಿ ಅವಳಿ ಟೆಕ್ಕಿಗಳನ್ನು ವರಿಸಿದ ಮನ್ಮಥನಿಗೆ ಈಗ ಜೈಲಿನ ಭೀತಿ

    ಪಿಂಕಿ-ರಿಂಕಿ ಅವಳಿ ಟೆಕ್ಕಿಗಳನ್ನು ವರಿಸಿದ ಮನ್ಮಥನಿಗೆ ಈಗ ಜೈಲಿನ ಭೀತಿ

    ಮುಂಬೈ: ಮಹಾರಾಷ್ಟ್ರದ (Maharashtra) ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ಐಟಿ ಎಂಜಿನಿಯರ್ (IT Engineer) ಆಗಿರುವ ಅವಳಿ ಸಹೋದರಿಯರಿಬ್ಬರು ಒಬ್ಬನೇ ವ್ಯಕ್ತಿಯನ್ನು ಮದುವೆಯಾದರು (Marriage). ಇದೀಗ ಮದುವೆಯಾದ ಮನ್ಮಥನಿಗೆ ಜೈಲಿನ ಭೀತಿ ಎದುರಾಗಿದೆ.

    ಅವಳಿ ಸಹೋದರಿಯರನ್ನ ವರಿಸಿದ್ದ ಮಲಶಿರಾಸ್ ತಾಲೂಕಿನ ನಿವಾಸಿ ಅತುಲ್ ಉತ್ತಮ್ ಔತಾಡೆ ಮದುವೆ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಒಟ್ಟಿಗೆ ಇರಲು ಒಂದೇ ವ್ಯಕ್ತಿಯನ್ನು ಮದುವೆಯಾದ ಅವಳಿ ಟೆಕ್ಕಿಗಳು

    ವೀಡಿಯೋ ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು (Police) ಅತುಲ್ ವಿರುದ್ಧ ದ್ವಿಪತ್ನಿತ್ವದ ಆರೋಪ ಹೊರಿಸಲಾಗಿದೆ. ಇದು ಕಾನೂನುಬಾಹಿರವಾಗಿದ್ದು, 7 ವರ್ಷ ಶಿಕ್ಷೆಗೆ ಗುರಿಯಾಗಬಹುದು. ಅತುಲ್ ವಿರುದ್ಧ ಐಪಿಸಿ ಸೆಕ್ಷನ್ 494 (ಸಂಗಾತಿ ಜೀವಂತವಾಗಿರುವಾಗ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶಿರೀಶ್ ಸರ್ದೇಶಪಾಂಡೆ ತಿಳಿಸಿದ್ದಾರೆ.

    ರಾಷ್ಟ್ರೀಯ ಮಹಿಳಾ ಆಯೋಗ (National Women’s Commission)ಮತ್ತು ಮಹಾರಾಷ್ಟ್ರ ಮಹಿಳಾ ಸಂಘ ಸಂಸ್ಥೆಗಳು ಕೂಡ ಮೂವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ. ಇದನ್ನೂ ಓದಿ: ಕುಷ್ಟರೋಗ ನಿಯಂತ್ರಣಾಧಿಕಾರಿ ಸಾವಿನ ಸುತ್ತ ಅನುಮಾನ- ತಲೆಯಲ್ಲಿ ಹೊಕ್ಕಿದ ಗುಂಡಿನಿಂದ ಕೇಸ್‍ಗೆ ಟ್ವಿಸ್ಟ್

    ಏನಿದು ಮ್ಯಾರೇಜ್ ಸ್ಟೋರಿ?
    ಹೌದು ಇತ್ತೀಚೆಗಷ್ಟೇ ಐಟಿ ಎಂಜಿನಿಯರ್‌ಗಳಾದ (IT Engineer) ಅವಳಿ ಸಹೋದರಿ ಪಿಂಕಿ ಮತ್ತು ರಿಂಕಿ ಪ್ರಸ್ತುತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ರಿಂಕಿ ಮತ್ತು ಪಿಂಕಿ ಬಾಲ್ಯದಿಂದಲೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಇಬ್ಬರಿಗೂ ಒಬ್ಬರನೊಬ್ಬರು ಬಿಟ್ಟಿರಲು ಸಾಧ್ಯವಿರಲಿಲ್ಲ. ಇದರಿಂದಾಗಿ ಮದುವೆ ಆಗುವುದಾದರೇ ಇಬ್ಬರು ಒಂದೇ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು.

    ಮಲ್ಶಿರಾಸ್ ತಾಲೂಕಿನ ನಿವಾಸಿ ಅತುಲ್ ಉತ್ತಮ್ ಔತಾಡೆ ಎಂಬಾತ ಇವರಿಬ್ಬರಿಗೂ ಪರಿಚಯವಾಗಿದ್ದ. ಅದೇ ಸಮಯಕ್ಕೆ ಪಿಂಕಿ ಮತ್ತು ರಿಂಕಿಯ ತಂದೆಯು ಮರಣ ಹೊಂದಿದ್ದು, ತಾಯಿಯು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಳು. ಈ ವೇಳೆ ರಿಂಕಿ ಮತ್ತು ಪಿಂಕಿಯ ಸಹಾಯಕ್ಕೆ ಅತುಲ್ ಧಾವಿಸುತ್ತಿದ್ದ. ಇದೇ ಪರಿಚಯ ಪ್ರೀತಿಗೆ ತಿರುಗಿ ಮೂವರು ಮದುವೆ ಆಗಲು ನಿರ್ಧರಿಸಿದ್ದು, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಮದುವೆ ಆದರು.

    Live Tv
    [brid partner=56869869 player=32851 video=960834 autoplay=true]

  • ಗ್ಯಾಂಗ್ ರೇಪ್ – ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

    ಗ್ಯಾಂಗ್ ರೇಪ್ – ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

    ಮುಂಬೈ: ಮಹಿಳೆಯೊಬ್ಬರ (Women) ಮನೆಗೆ ನುಗಿದ್ದ ಮೂವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಹರಿತವಾದ ಕತ್ತಿಯಿಂದ ಹಲ್ಲೆ ಮಾಡಿ, ಸಿಗರೇಟ್ (Cigarettes) ನಿಂದ ಆಕೆಯ ಖಾಸಗಿ ಭಾಗಗಳನ್ನು ಸುಟ್ಟು ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    CRIME COURT

    ಮುಂಬೈನ ಕುರ್ಲಾದಲ್ಲಿರುವ 42 ವರ್ಷದ ಮಹಿಳೆ ಮೇಲೆ ಅತ್ಯಾಚಾರ (Gang Rape) ನಡೆದಿದ್ದು, ಹರಿತವಾದ ಆಯುಧಗಳಿಂದ ಮಹಿಳೆಗೆ ಕಿರುಕುಳ ನೀಡಲಾಗಿದೆ. ಅತ್ಯಾಚಾರ ಎಸಗಿದ ಕಾಮುಕರು ಹಾಗೂ ಸಂತ್ರಸ್ತೆ ಒಂದೇ ಪ್ರದೇಶದವರಾಗಿದ್ದರು ಎಂದು ಪೊಲೀಸರು (Mumbai Police) ತಿಳಿಸಿದ್ದಾರೆ. ಇದನ್ನೂ ಓದಿ: ತುರಹಳ್ಳಿ ಫಾರೆಸ್ಟ್‌ನಲ್ಲಿ ಆಪರೇಷನ್ ಚಿರತೆ- ಬೆಂಗ್ಳೂರಿನಲ್ಲೂ `ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ

    CRIME (1)

    ವಿಕೃತ ಮನಸ್ಥಿತಿ: ಮಹಿಳೆ ಒಂಟಿಯಾಗಿರುವುದನ್ನು ನೋಡಿಕೊಂಡ ಕಾಮುಕರು ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಮನಸ್ಸೋ ಇಚ್ಚೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟ್‌ನಿಂದ ಸುಟ್ಟಿದ್ದಾರೆ. ಎದೆ ಭಾಗದ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾರೆ. ಅದರಲ್ಲೊಬ್ಬ ಕೃತ್ಯವನ್ನೂ ವೀಡಿಯೋ ಮಾಡಿಕೊಂಡಿದ್ದು, ಪೊಲೀಸರಿಗೆ ಹೇಳಿದ್ರೆ ಜಾಲತಾಣದಲ್ಲಿ (Social Media) ವೀಡಿಯೋ ಹರಿಯಬಿಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಘಟನೆ ನಡೆದ ಒಂದೆರಡು ದಿನಗಳ ನಂತರ ಮಹಿಳೆ ನೆರೆಯವರೊಂದಿಗೆ ಕಷ್ಟ ವಿವರಿಸಿದ್ದಾಳೆ. ನಂತರ ಎನ್‌ಜಿಒ ಸಂಸ್ಥೆಯೊಂದು ಸಂಪರ್ಕಿಸಿ ಆಕೆಗೆ ಧೈರ್ಯ ತುಂಬಿದೆ. ನಂತರ ಮಹಿಳೆ ಕುರ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಇಕ್ಬಾಲ್ ಅನ್ಸಾರಿ ಹನುಮ ಮಾಲಾಧಾರಿಗಳಿಗೆ ಸ್ವಾಗತ ಕೋರಿ ಬ್ಯಾನರ್ – ಶ್ರೀರಾಮಸೇನೆ ಆಕ್ಷೇಪ

    Crime-Scene

    ಅತ್ಯಾಚಾರ ಎಸಗಿದ ಮೂವರು ಕಾಮುಕರ ವಿರುದ್ಧ ಐಪಿಸಿ (IPC) ಸೆಕ್ಷನ್ 376 (ಅತ್ಯಾಚಾರ), 376 ಡಿ (ಸಾಮೂಹಿಕ ಅತ್ಯಾಚಾರ), 377 (ಅಸ್ವಾಭಾವಿಕ ಲೈಂಗಿಕತೆ), 324 (ಅಪಾಯಕಾರಿ ಆಯುಧದಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಹಾಗೂ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು (Mumbai Police) ಶೋಧ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯಾವುದೇ ಹುಡ್ಗಿಯನ್ನ 14 ಸೆಕೆಂಡಿಗಿಂತ ಜಾಸ್ತಿ ಗುರಾಯಿಸಿದ್ರೆ, ನೋಡಿ ಕವಿತೆ ಹೇಳಿದ್ರೆ ಕೇಸ್

    ಯಾವುದೇ ಹುಡ್ಗಿಯನ್ನ 14 ಸೆಕೆಂಡಿಗಿಂತ ಜಾಸ್ತಿ ಗುರಾಯಿಸಿದ್ರೆ, ನೋಡಿ ಕವಿತೆ ಹೇಳಿದ್ರೆ ಕೇಸ್

    ನವದೆಹಲಿ: ಯಾವುದೇ ಹುಡುಗಿ ಅಥವಾ ಮಹಿಳೆಯನ್ನ 14 ಸೆಕೆಂಡ್‌ಗಿಂತ ಹೆಚ್ಚು ಕಾಲ ಗುರಾಯಿಸಿದ್ರೆ, ಅಶ್ಲೀಲ ಸನ್ನೆ ಮಾಡಿದ್ರೆ, ಹಾಡು ಅಥವಾ ಕವಿತೆ ಹೇಳಿದ್ರೆ ಐಪಿಸಿ (IPL) ಸೆಕ್ಷನ್ ಅಡಿಯಲ್ಲಿ ಬಂಧಿಸಬಹುದಾಗಿದೆ ಎಂದು ನ್ಯಾಷನಲ್ ಕ್ರೈಂ ಇನ್ವೆಷ್ಟಿಗೇಶನ್ ಬ್ಯೂರೋ (NCIB) ಹೆಸರಿನ ಸರ್ಕಾರೇತರ ಸಂಸ್ಥೆಯೊಂದು ತಿಳಿಸಿದೆ.

    ನ್ಯಾಷನಲ್ ಕ್ರೈಂ ಇನ್ವೆಷ್ಟಿಗೇಶನ್ ಬ್ಯೂರೋ ಹೆಸರಿನ ಎನ್‌ಜಿಒ (NGO) ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದ್ದು, ಯಾವುದೇ ಹುಡುಗಿ ಅಥವಾ ಮಹಿಳೆಯನ್ನ 14 ಸೆಕೆಂಡ್‌ಗಿಂತಲೂ ಹೆಚ್ಚುಕಾಲ ಗುರಾಯಿಸುವುದು, ಅಶ್ಲೀಲ ಸನ್ನೆ ಮಾಡಿದ್ರೆ, ಹಾಡು ಅಥವಾ ಕವಿತೆ ಹೇಳುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 294 (A) ಮತ್ತು (B) ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಪಠ್ಯ ಸಂದೇಶ ಕಳುಹಿಸುವ ಅಪರಾಧಕ್ಕೆ ಗರಿಷ್ಠ 3 ತಿಂಗಳ ಶಿಕ್ಷೆ ವಿಧಿಸಬಹುದಾಗಿದೆ. ಆದ್ದರಿಂದ ಈ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಬಹುದು ಎಂದು ತಿಳಿಸಿದೆ.

    ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ಜನರನ್ನು ದಾರಿ ತಪ್ಪಿಸುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದೆ. ಇದನ್ನೂ ಓದಿ: ನ.30 ರಿಂದ ಪುರುಷ ಸಂತಾನಹರಣ ಚಿಕಿತ್ಸಾ ಶಿಬಿರ – ಚಿಕಿತ್ಸೆಗುಂಟು 1,100 ರೂ. ಪ್ರೋತ್ಸಾಹಧನ

    ಎನ್‌ಸಿಐಬಿ ಕೇಂದ್ರಕಚೇರಿ ಹೆಸರಿನಲ್ಲಿ ಖಾತೆ ಪರಿಶೀಲನೆ ಆಗಿದೆ. ಇದರ ಲೋಗೋ ಪೊಲೀಸ್ ಇಲಾಖೆಯ ಲೋಗೋವನ್ನೇ ಹೋಲುತ್ತದೆ. ಎನ್‌ಜಿಒ ಸಂಸ್ಥೆ ಎಂಬುದನ್ನು ತನ್ನ ಟೈಮ್‌ಲೈನ್‌ನಲ್ಲಿ ಹೇಳಿಕೊಂಡಿದೆ. ಹೀಗಾಗಿ ಇದು ಸರ್ಕಾರದ ಆದೇಶವೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ಕಳುಹಿಸಿ ಮುಸ್ಲಿಮ್‌ ಯುವಕರ ತಲೆಕೆಡಿಸಿದ್ದ ಶಾರೀಕ್‌

    ಸೆಕ್ಷನ್ ಹೇಳೋದೇನು?
    ಯಾವುದೇ ಒಬ್ಬ ವ್ಯಕ್ತಿಯು ಮತ್ತೊಬ್ಬರಿಗೆ ಕಿರುಕುಳ ಉಂಟಾಗುವ ಹಾಗೆ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯವನ್ನು ಮಾಡಿದರೆ, ಅಥವಾ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಹಾಡುಗಳನ್ನು ಹಾಡಿದರೆ, ಕೇಳಿದರೆ ಅಥವಾ ಉಚ್ಚರಿಸಿದರೆ ಐಪಿಸಿ ಸೆಕ್ಷನ್ 294 ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ. ಹಾಗೆಯೇ ಒಬ್ಬ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಉದ್ದೇವಿರುವ ಶಬ್ಧ, ಸಂಜ್ಞೆ ಅಥವಾ ಕೃತ್ಯಗಳು ಸೆಕ್ಷನ್ 509ರ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಅದಾನಿ ಬಂದರು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ – 3 ಸಾವಿರಕ್ಕೂ ಅಧಿಕ ಮಂದಿ ವಿರುದ್ಧ ಕೇಸ್

    ಅದಾನಿ ಬಂದರು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ – 3 ಸಾವಿರಕ್ಕೂ ಅಧಿಕ ಮಂದಿ ವಿರುದ್ಧ ಕೇಸ್

    ತಿರುವನಂತಪುರಂ: ಕೇರಳದ (Kerala) ವಿಝಿಂಜಂನಲ್ಲಿ ಅದಾನಿ ಗ್ರೂಪ್ ನಿರ್ಮಿಸುತ್ತಿರುವ 900 ಮಿಲಿಯನ್ ಡಾಲರ್ (ಸುಮಾರು 7,350 ಕೋಟಿ ರೂ.) ಮೊತ್ತದ ಬೃಹತ್ ಬಂದರು (Adani Port ) ನಿರ್ಮಾಣ ಯೋಜನೆ ವಿರುದ್ಧದ ಪ್ರತಿಭಟನೆ (Protest_ ಹಿಂಸಾಚಾರಕ್ಕೆ ತಿರುಗಿದೆ.

    ಬಂದರು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಬಂಧಿತರಾಗಿರುವ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಭಾನುವಾರ ರಾತ್ರಿ ವಿಝಿಂಜಂನ ಪೊಲೀಸ್ ಠಾಣೆ (Vizhinjam Police Station) ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಘರ್ಷಣೆಯಲ್ಲಿ ಸುಮಾರು 40 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ 3,000 ಕ್ಕೂ ಅಧಿಕ ಮಂದಿ ಮೇಲೆ ಕೇಸ್ ದಾಖಲಿಸಲಾಗಿದೆ. ಐಪಿಸಿ (IPC) ಸೆಕ್ಷನ್ 143, 147, 120-ಬಿ, 447 ಹಾಗೂ 353 ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಬಂದಿದ್ದಕ್ಕೆ ಶಿಕ್ಷಕಿಗೆ `I Love You’ ಹೇಳಿ ಲೈಂಗಿಕ ಕಿರುಕುಳ

    ಭಾನುವಾರ ತಡರಾತ್ರಿ ಸುಮಾರು 3 ಸಾವಿರ ಮಂದಿ ವಿಝಿಂಜಂ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ಬಿಡುಗಡೆ ಮಾಡದಿದ್ದರೆ, ಠಾಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಹಿಂಸಾಚಾರದಲ್ಲಿ 40 ಪೊಲೀಸರು ಹಾಗೂ ಸ್ಥಳೀಯರು ಗಾಯಗೊಂಡಿದ್ದಾರೆ. ಐದು ಪೊಲೀಸ್ ವಾಹನಗಳನ್ನು ಹಾನಿಗೊಳಿಸಿ, ಠಾಣೆ ಉಪಕರಣಗಳನ್ನು ನಾಶಪಡಿಸಿದ್ದಾರೆ. ದಾಳಿಯಲ್ಲಿ ಸುಮಾರು 85 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಕೋವಿಡ್‌ ಹೆಚ್ಚಳ, ಭುಗಿಲೆದ್ದ ಪ್ರತಿಭಟನೆ – ತೈಲ ದರ ಭಾರೀ ಇಳಿಕೆ

    ಈ ಹಿನ್ನೆಲೆಯಲ್ಲಿ ಸೋಮವಾರ ಮಹಿಳೆಯರು, ಮಕ್ಕಳು ಸೇರಿದಂತೆ 3 ಸಾವಿರಕ್ಕೂ ಅಧಿಕ ಮಂದಿ ವಿರುದ್ಧ ಕಾನೂನು ಬಾಹಿರ, ಗಲಭೆ ಹಾಗೂ ಕ್ರಿಮಿನಲ್ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

    ತಿರುವನಂತಪುರಂ (Thiruvananthapuram) ನಗರ ಪೊಲೀಸ್ ಆಯುಕ್ತರು ಈ ಸಂಬಂಧ ಮಾತನಾಡಿ, ಜನರು ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ದಾಳಿ ನಡೆಸಿದ್ದಾರೆ. ಠಾಣೆ ಮೇಲಿನ ದಾಳಿಯನ್ನು ಯಾವುದೇ ರೀತಿಯಲ್ಲಿ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ನಾವು ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಸರ್ವಪಕ್ಷ ಸಭೆ ಕರೆದಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ದಿನ ದಿನಕ್ಕೂ ಹೆಚ್ಚುತ್ತಿರುವ ವಿರೋಧ ಅದಾನಿ ಗ್ರೂಪ್‌ಗೆ (Adani Group) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಭಾರತದ ದಕ್ಷಿಣ ತುದಿಯಲ್ಲಿರುವ ಬಂದರಿನ ಸ್ಥಳವು ದುಬೈ, ಸಿಂಗಾಪುರ ಮತ್ತು ಶ್ರೀಲಂಕಾದ ಬಂದರುಗಳಿಂದ ವ್ಯಾಪಾರವನ್ನು ಸೆಳೆಯಲು ಅತೀ ಮುಖ್ಯ ಸ್ಥಳ ಎನ್ನುವುದು ಅದಾನಿ ಮತ್ತು ಉದ್ಯಮ ಮಂದಿಯ ಅಂದಾಜು. ಹೀಗಾಗಿ ಇಲ್ಲೇ ಬಂದರು ನಿರ್ಮಿಸಲು ಅದಾನಿ ಕಂಪನಿ ಮುಂದಾಗಿದೆ. ಆದರೆ ಇದಕ್ಕೆ ಸ್ಥಳೀಯ ಮೀನುಗಾರರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

    ಈ ನಡುವೆ ಬಂಧಿತ ಲಿಯೋ ಸ್ಟಾನ್ಲಿ, ಮುತ್ತಪ್ಪನ್, ಪುಷ್ಪರಾಜ್ ಮತ್ತು ಶಂಕಿ ಅವರನ್ನು ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ತುಮಕೂರಿನ ಅಪರಾಧಿಗೆ 12 ವರ್ಷ ಜೈಲು

    ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ತುಮಕೂರಿನ ಅಪರಾಧಿಗೆ 12 ವರ್ಷ ಜೈಲು

    ತುಮಕೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ತುಮಕೂರು ಜಿಲ್ಲಾ ಸೆಷನ್ ನ್ಯಾಯಾಲಯವು (District Session Court Tumkur) 6 ತಿಂಗಳ ಬಳಿಕ 12 ವರ್ಷ ಜೈಲು ಶಿಕ್ಷೆ ಹಾಗೂ 75 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ತುಮಕೂರಿನ ಶಿರಾ ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಪಾರ್ಕ್ ಮೊಹಲ್ಲಾ ನಿವಾಸಿ ಜಾವದ್ ಶಿಕ್ಷೆಗೆ ಗುರಿಯಾದ ದೋಷಿ. ಇದನ್ನೂ ಓದಿ: ವೀರಶೈವರು ನಮ್ಮಲ್ಲಿ ದಲಿತರ ರಕ್ತ ಹರಿಯುತ್ತಿದೆ ಎಂದು ಹೇಳಲಿ: ಜ್ಞಾನ ಪ್ರಕಾಶ ಸ್ವಾಮೀಜಿ

    ಏನಿದು ಪ್ರಕರಣ?
    ಕಳೆದ ಮೇ 28 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ ಮೊಹಲ್ಲಾದ (Park Mohalla) ಪೋತರಾಜನ ಗದ್ದುಗೆ ಬಳಿ 7 ಮತ್ತು 9 ವರ್ಷದ ಬಾಲಕಿಯರು ಆಟವಾಡುತ್ತಿದ್ದರು. ಅಲ್ಲಿಗೆ ಬಂದ ಜಾವದ್ ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಇಬ್ಬರನ್ನೂ ಪಾರ್ಕ್ ಮೊಹಲ್ಲಾಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

    ಮಕ್ಕಳು ಅಳುತ್ತಿರುವುದು ಕಂಡು ತಾಯಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ನೊಂದ ಬಾಲಕಿಯರ ತಾಯಿ ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ಪಿಎಸ್‌ಐ (PSI) ಲಕ್ಷ್ಮೀನಾರಾಯಣ್ ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಿದ್ದರು. ನಂತರ ತನಿಖಾಧಿಕಾರಿಗಳಾದ ಪೊಲೀಸ್ ಇನ್ಸ್ಪೆಕ್ಟರ್ ವಿ.ಲಕ್ಷ್ಮಯ್ಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.‌ ಇದನ್ನೂ ಓದಿ: ಮಕ್ಕಳನ್ನು 1ನೇ ಕ್ಲಾಸಿಗೆ ಸೇರಿಸಲು 6 ವರ್ಷ ಕಡ್ಡಾಯ – ಸರ್ಕಾರದಿಂದ ಅಧಿಕೃತ ಆದೇಶ

    ಜಿಲ್ಲಾ ಸೆಷನ್ಸ್ ಪೋಕ್ಸೋ ನ್ಯಾಯಾಲಯದಲ್ಲಿ (District Session POCSO Speical Court) ಪ್ರಕರಣದ ವಿಚಾರಣೆ ನಡೆದಿದ್ದು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜಾವದ್’ಗೆ ಕಲಂ 363 ಐಪಿಸಿಗೆ (IPC) 5 ವರ್ಷ ಶಿಕ್ಷೆ, 25 ಸಾವಿರ ರೂ. ದಂಡ ಹಾಗೂ ಕಲಂ 9(M) ಅಡಿ 7 ವರ್ಷ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ಪೋಕ್ಸೋ ವಿಶೇಷ ನ್ಯಾಯಾಧೀಶರಾದ ಪಿ.ಸಂಧ್ಯಾ ರಾವ್ ತೀರ್ಪು ನೀಡಿದ್ದಾರೆ.

    ಸಂತ್ರಸ್ತರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್.ಆಶಾ ವಾದ ಮಂಡಿಸಿದ್ದರು. ಪ್ರಕರಣ ನಡೆದು 6 ತಿಂಗಳ ನಂತರವಾದ್ರೂ ತೀರ್ಪು ಪ್ರಕಟಿಸುವ ಮೂಲಕ ನ್ಯಾಯಾಲಯವು ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಕಿಡಿಗೇಡಿಗಳಿಗೆ ಕಠಿಣ ಎಚ್ಚರಿಕೆ ರವಾನಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಸೀದಿಯೊಳಗೆ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಓರ್ವ ಅರೆಸ್ಟ್

    ಮಸೀದಿಯೊಳಗೆ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಓರ್ವ ಅರೆಸ್ಟ್

    ನವದೆಹಲಿ: 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಪೊಲೀಸರು (Delhi Police) ಬಂಧಿಸಿರುವ ಘಟನೆ ಇಲ್ಲಿನ ಮೌಜ್‌ಪುರ ಪ್ರದೇಶದ ಮಸೀದಿಯಲ್ಲಿ (Delhi Mosque) ನಡೆದಿದೆ. ಕಳೆದ 2 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    CRIME COURT

    ಆರೋಪಿ ಮೊಹಮ್ಮದ್ ಅರ್ಮಾನ್ ಎಂದು ಗುರುತಿಸಲಾಗಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಬಂಧಿಸಿದ್ದು ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ (POCSO Act) ಹಾಗೂ ಐಪಿಸಿ (IPC) ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ನಾವೇನಾದರೂ ಸಿಡಿದೆದ್ದರೆ ನೀವು ಉಳಿಯುವುದಿಲ್ಲ – ಕಾಂಗ್ರೆಸ್‍ಗೆ ಮುತಾಲಿಕ್ ವಾರ್ನಿಂಗ್

    ಕೆಲ ಕಿಡಿಗೇಡಿಗಳು ಮೌಜ್‌ಪುರ ಪ್ರದೇಶದಲ್ಲಿರುವ ಮಸೀದಿಗೆ ಬಂದಿದ್ದರು. ಅವರು ಮಸೀದಿಯೊಳಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ನವೆಂಬರ್ 9 ರಂದು, ಬಾಲಕಿ ತನ್ನ ತರಗತಿ ಮುಗಿದ ನಂತರ ಮಸೀದಿಗೆ ಭೇಟಿ ನೀಡಿದ್ದಳು. ಆಕೆ ಒಂಟಿಯಾಗಿರುವುದು ಕಂಡು ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ

    IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ

    ಸೂರಜ್‌ಕುಂಡ್: ಭಾರತೀಯ ದಂಡ ಸಂಹಿತೆ (IPC) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶೀಗ್ರವೇ ಸದನದಲ್ಲಿ ಹೊಸ ಕರಡನ್ನು ಮಂಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

    ಹರಿಯಾಣದ ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ಭಾರತೀಯ ದಂಡ ಸಂಹಿತೆ (IPC) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಸುಧಾರಿಸುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ಸ್ವೀಕರಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಎರಡೂ ಶಾಸನಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಸದನದಲ್ಲಿ ಹೊಸದಾಗಿ ಕರಡು ಮಂಡಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರೆನ್ಸಿ ನೋಟುಗಳಲ್ಲಿರಲಿ ಗಣೇಶ, ಲಕ್ಷ್ಮೀ ಚಿತ್ರ – ಮೋದಿಗೆ ಕೇಜ್ರಿವಾಲ್ ಪತ್ರ

    ಐಪಿಸಿ, ಸಿಆರ್‌ಪಿಸಿ ಸುಧಾರಣೆಗಳಿಗಾಗಿ ಸಾಕಷ್ಟು ಸಮಯ ವಿನಿಯೋಗಿಸಿದ್ದು, ಆಳವಾಗಿ ಅಧ್ಯಯನ ಮಾಡಲಾಗುತ್ತಿದೆ. ಭಾರತದಲ್ಲಿ ಕ್ರಿಮಿನಲ್ ಕಾನೂನು (Law) ಸುಧಾರಣೆ ಶಿಫಾರಸ್ಸು ಮಾಡುವಂತೆ ಗೃಹ ಸಚಿವರು 2020ರ ಮೇನಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ದೆಹಲಿಯ ಕಾನೂನು ವಿಶ್ವವಿದ್ಯಾಲಯದ (Delhi Law University) ಕುಲಪತಿ ಪ್ರೊ. ರಣಬೀರ್ ಸಿಂಗ್ ಅವರು ಸಮಿತಿಯ ನೇತೃತ್ವ ವಹಿಸಿದ್ದಾರೆ. ಇದನ್ನೂ ಓದಿ: ದುಷ್ಕರ್ಮಿಗಳಿಂದ 52 ಅಡಿಕೆ ಗಿಡಗಳ ನಾಶ- ಜಮೀನಿನಲ್ಲಿಯೇ ಹೊರಳಾಡಿ ರೈತ ಕಣ್ಣೀರು

    ಸಮಿತಿ ರಚಿಸಿದಾಗ ವೈವಿಧ್ಯತೆ ಮತ್ತು ಪಾರದರ್ಶಕತೆ ಕೊರತೆಯ ಹಿನ್ನೆಲೆಯಲ್ಲಿ ವಕೀಲರು, ನಿವೃತ್ತ ನ್ಯಾಯಮೂರ್ತಿಗಳು, ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಸಮಿತಿಯು ಎಲ್ಲಾ ರೀತಿಯ ಅಭಿಪ್ರಾಯ ಮತ್ತು ಸಲಹೆಗಳನ್ನು ಗೌರವಿಸುವುದಾಗಿ ಹೇಳಿತ್ತು. ಪಾರದರ್ಶಕತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ಹೇಳಿತ್ತು. ಹಾಗಾಗಿ ಸೂಕ್ತ ಸಲಹೆಗಳನ್ನು ಸ್ವೀಕರಿಸಿದ್ದು, ಶೀಘ್ರದಲ್ಲೇ ಕರಡು ಮಂಡಿಸುವುದಾಗಿ ಅವರು ಘೋಷಿಸಿದ್ದಾರೆ.

    ಪ್ರತಿ ರಾಜ್ಯದಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇಂದ್ರ ಆರಂಭಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]