Tag: IOC

  • 120 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್? – 6 ತಂಡಗಳ ಟೂರ್ನಿಗೆ ಐಸಿಸಿ ಪ್ರಸ್ತಾಪ

    120 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್? – 6 ತಂಡಗಳ ಟೂರ್ನಿಗೆ ಐಸಿಸಿ ಪ್ರಸ್ತಾಪ

    ಮುಂಬೈ: 2028ರ ಒಲಿಂಪಿಕ್ಸ್ ಲಾಸ್ ಏಂಜಲೀಸ್‍ನಲ್ಲಿ ನಡೆಯಲಿದ್ದು 120 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ (Olympics) ಕ್ರಿಕೆಟ್ (Cricket) ಸೇರ್ಪಡೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ICC) ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಮಂಡಳಿ (IOC) ಜೊತೆ ಚರ್ಚಿಸಿದೆ.

    ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ ಆರು ತಂಡಗಳ ಟಿ20 ಪಂದ್ಯಾವಳಿಗೆ ಐಸಿಸಿ ಪ್ರಸ್ತಾಪವನ್ನಿಟ್ಟಿದೆ. ಆದರೆ ಈ ಬಗ್ಗೆ ಐಒಸಿ ಅಕ್ಟೋಬರ್‌ನಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ: ಸ್ಟೇಡಿಯಂನಿಂದ ಮೈದಾನಕ್ಕೆ ಬಂದು ರೋಹಿತ್‍ರನ್ನು ತಬ್ಬಿಕೊಂಡ ಬಾಲಕ

    ಒಲಿಂಪಿಕ್ಸ್‌ನ ಇತಿಹಾಸದಲ್ಲಿ 1900ನೇ ಇಸವಿಯಲ್ಲಿ ಪ್ಯಾರಿಸ್‍ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಕ್ರಿಕೆಟ್ ಆಡಿಸಲಾಗಿತ್ತು. ಈ ಟೂರ್ನಿಯಲ್ಲಿ ಎರಡು ತಂಡಗಳು ಸ್ಪರ್ಧಿಸಿದ್ದವು. ಫ್ರಾನ್ಸ್ ಹಾಗೂ ಗ್ರೇಟ್ ಬ್ರಿಟನ್ ತಂಡಗಳು ಸ್ಪರ್ಧಿಸಿದ್ದವು. ಇದರಲ್ಲಿ ಗ್ರೇಟ್ ಬ್ರಿಟನ್ ಗೆದ್ದು ಚಿನ್ನದ ಪದಕ ಗೆದ್ದುಕೊಂಡಿದ್ದರೆ ಫ್ರಾನ್ಸ್ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಆ ಬಳಿಕ ಕ್ರಿಕೆಟ್‍ನ್ನು ಒಲಿಂಪಿಕ್ಸ್ ಕ್ರೀಡೆಯಿಂದ ತೆಗೆದು ಹಾಕಲಾಗಿತ್ತು. ಇದನ್ನೂ ಓದಿ: Will You Marry Me – ಆರೆಂಜ್ ಆರ್ಮಿ ಒಡತಿ ಕಾವ್ಯ ಮಾರನ್‍ಗೆ ಮದುವೆ ಪ್ರಸ್ತಾಪವಿಟ್ಟ ಪ್ರೇಕ್ಷಕ

    ಐಸಿಸಿ ಪ್ರಸ್ತಾಪ:
    2028ರ ಒಲಿಂಪಿಕ್ಸ್ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ ಆರು ತಂಡಗಳ ಟಿ20 ಮಾದರಿಯಲ್ಲಿ ಟೂರ್ನಿ ನಡೆಸಲು ಸಲಹೆ ನೀಡಿತ್ತು. ಆರು ತಂಡಗಳು ತಲಾ ಮೂರು ತಂಡಗಳ ಎರಡು ಗುಂಪುಗಳಲ್ಲಿ ಮೊದಲಿಗೆ ಸೆಣೆಸಾಡಿ ಎರಡು ಗುಂಪುಗಳ ತಲಾ ಎರಡು ಅಗ್ರ ತಂಡಗಳು ಸೆಮಿಫೈನಲ್‍ಗೆ ಪ್ರವೇಶ ಪಡೆಯುವಂತೆ, ಇಲ್ಲಿ ಗೆದ್ದ ಎರಡು ತಂಡಗಳು ಫೈನಲ್‍ಗೆ ಪ್ರವೇಶಿಸಿ ಚಿನ್ನದ ಪದಕಕ್ಕಾಗಿ ಸೆಣೆಸಾಟ ನಡೆಸುವಂತೆ ಪ್ರಸ್ತಾಪದಲ್ಲಿ ತಿಳಿಸಿತ್ತು. ಆದರೆ ಈ ಪ್ರಸ್ತಾಪಕ್ಕೆ ಐಒಸಿ ಒಪ್ಪಿಗೆ ಸೂಚಿಸಿಲ್ಲ. ಅಕ್ಟೋಬರ್‌ನಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

    ಕ್ರಿಕೆಟ್ ಜೊತೆ ಬೇಸ್‍ಬಾಲ್, ಕರಾಟೆ, ಫ್ಲ್ಯಾಗ್ ಫುಟ್‍ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸ್, ಕಿಕ್‍ಬಾಕ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್ ಸ್ಪೋಟ್ಸ್ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಬೇಕೆಂದು ಮನವಿ ಸಲ್ಲಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 40 ವರ್ಷಗಳ ನಂತರ ಭಾರತದಲ್ಲಿ ಮತ್ತೆ IOC ಅಧಿವೇಶನ

    40 ವರ್ಷಗಳ ನಂತರ ಭಾರತದಲ್ಲಿ ಮತ್ತೆ IOC ಅಧಿವೇಶನ

    ನವದೆಹಲಿ: 2023ರ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ)ಯ ಅಧಿವೇಶನವನ್ನು ಮುಂಬೈನಲ್ಲಿ ಆಯೋಜಿಸುವ ಅವಕಾಶವನ್ನು ಭಾರತ ತನ್ನದಾಗಿಸಿಕೊಂಡಿದೆ.

    ದೇಶದ ಮೊದಲ ವೈಯಕ್ತಿಕ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಅಭಿನವ್‌ ಬಿಂದ್ರಾ, ಐಒಸಿ ಸದಸ್ಯೆ ನೀತಾ ಅಂಬಾನಿ, ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ನರೀಂದರ್‌ ಬಾತ್ರಾ ಮತ್ತು ಕ್ರೀಡಾ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರನ್ನು ಒಳಗೊಂಡ ನಿಯೋಗವು ಚೀನಾದಲ್ಲಿ ನಡೆಯುತ್ತಿರುವ 139ನೇ ಐಒಸಿ ಅಧಿವೇಶನದಲ್ಲಿ ಪಾಲ್ಗೊಂಡಿತ್ತು. ಇದನ್ನೂ ಓದಿ: ವಿರಾಟ್ ಅಭಿಮಾನಿಗಳಿಗಿಲ್ಲ ಗಡಿರೇಖೆ – ಪಾಕ್ ಕ್ರಿಕೆಟ್ ಲೀಗ್‍ನಲ್ಲಿ ರಾರಾಜಿಸಿದ ಕೊಹ್ಲಿ ಪೋಸ್ಟರ್

    ಭಾರತದಲ್ಲಿ ಎರಡನೇ ಬಾರಿಗೆ ಐಒಸಿ ಅಧಿವೇಶನ ಆಯೋಜಿಸುವ ಅವಕಾಶ ಲಭಿಸಿದೆ. 1983ರಲ್ಲಿ ನವದೆಹಲಿಯಲ್ಲಿ ಮೊದಲ ಬಾರಿಗೆ ಐಒಸಿ ಅಧಿವೇಶನ ಆಯೋಜಿಸಲಾಗಿತ್ತು.

    40 ವರ್ಷಗಳ ಬಳಿಕ ಒಲಿಂಪಿಕ್‌ ಆಂದೋಲನ ಭಾರತಕ್ಕೆ ಮರಳಿದೆ. 2023ರಲ್ಲಿ ಮುಂಬೈನಲ್ಲಿ ಐಒಸಿ ಅಧಿವೇಶನವನ್ನು ಆಯೋಜಿಸುವ ಗೌರವವನ್ನು ಭಾರತಕ್ಕೆ ವಹಿಸಿದ್ದಕ್ಕಾಗಿ ನಾನು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೆ ನಿಜವಾಗಿಯೂ ಕೃತಜ್ಞಳಾಗಿದ್ದೇನೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಆರ್​ಸಿಬಿಯಲ್ಲಿ K.G.F ಸ್ಟಾರ್ಸ್

    ಇದು ಭಾರತದ ಒಲಿಂಪಿಕ್‌ ಮಹತ್ವಾಕಾಂಕ್ಷೆಗೆ ಮಹತ್ವದ ಬೆಳವಣಿಗೆಯಾಗಲಿದ್ದು, ಭಾರತೀಯ ಕ್ರೀಡೆಗೆ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಲಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಕ್ರೀಡೆಯು ಯಾವಾಗಲೂ ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಹರಾಜು ಪ್ರಕ್ರಿಯೆಯ ಯಶಸ್ವಿ ನಂತರ ಮಾತನಾಡಿದ ನರೀಂದರ್‌ ಬಾತ್ರಾ, ನೀತಾ ಅಂಬಾನಿ ಅವರ ದೂರದೃಷ್ಟಿ ಮತ್ತು ನಾಯಕತ್ವಕ್ಕೆ ನನ್ನ ಸಲಾಮ್.‌ ಮುಂದಿನ ವರ್ಷ ಮುಂಬೈನಲ್ಲಿ ನಡೆಯಲಿರುವ ಐಒಸಿ ಅಧಿವೇಶನ ಭಾರತದ ಕ್ರೀಡೆಗೆ ಹೊಸ ಯುಗದ ಆರಂಭವಾಗಲಿದೆ. ಭಾರತದಲ್ಲಿ ಒಲಿಂಪಿಕ್‌ ಕ್ರೀಡಾಕೂಟವನ್ನು ಆಯೋಜಿಸುವ ದೀರ್ಘಾವಧಿಯ ಗುರಿಯ ಸಾರ್ಥಕತೆ ಲಭಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಐಒಸಿ ಅಧಿವೇಶನವು ಐಒಸಿ ಸದಸ್ಯರ ಸಾಮಾನ್ಯ ಸಭೆಯಾಗಿದೆ. ಇದು ಐಒಸಿಯ ಸರ್ವೋಚ್ಚ ಅಂಗವಾಗಿದೆ. ಇಲ್ಲಿ ಕೈಗೊಳ್ಳುವ ನಿರ್ಧಾರಗಳು ಅಂತಿಮವಾಗಿರುತ್ತವೆ. ವರ್ಷಕ್ಕೊಮ್ಮೆ ಸಾಮಾನ್ಯ ಅಧಿವೇಶನ ನಡೆಸಲಾಗುತ್ತದೆ. ಆದರೆ ಬೃಹತ್‌ ಅಧಿವೇಶನವನ್ನು ಅಧ್ಯಕ್ಷರು ಅಥವಾ ಕನಿಷ್ಠ ಮೂರನೇ ಒಂದು ಭಾಗದಷ್ಟು ಸದಸ್ಯರು ಲಿಖಿತ ಕೋರಿಕೆಯ ಮೇರೆಗೆ ಕರೆಯಬಹುದು. ಇದನ್ನೂ ಓದಿ: Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    ಐಒಸಿಯಲ್ಲಿ ಒಟ್ಟು 101 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಹೆಚ್ಚುವರಿಯಾಗಿ 45 ಗೌರವ ಸದಸ್ಯರು ಮತ್ತು ಒಬ್ಬರು ಗೌರವಾನ್ವಿತ ಸದಸ್ಯರು ಇದ್ದು, ಇವರಿಗೆ ಮತದಾನದ ಹಕ್ಕು ಇರುವುದಿಲ್ಲ. ಸದಸ್ಯರ ಜೊತೆಗೆ 50ಕ್ಕೂ ಹೆಚ್ಚು ಕ್ರೀಡಾ ಒಕ್ಕೂಟಗಳು (ಬೇಸಿಗೆ, ಚಳಿಗಾಲದ ಕ್ರೀಡಾ ವಿಭಾಗಗಳು), ಹಿರಿಯ ಪ್ರತಿನಿಧಿಗಳು (ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳು) ಸಹ ಐಒಸಿ ಅಧಿವೇಶನದಲ್ಲಿ ಭಾಗವಹಿಸುತ್ತಾರೆ.

  • ಏರಿಕೆಯಾಯ್ತು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ

    ಏರಿಕೆಯಾಯ್ತು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ

    ನವದೆಹಲಿ: ಪೆಟ್ರೋಲಿಯಂ ಕಂಪನಿಗಳು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿವೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 25 ರೂ.ಏರಿಕೆಯಾಗಿದೆ.

    ಬೆಲೆ ಏರಿಕೆ ನಂತರ ದೆಹಲಿಯಲ್ಲಿ ಗೃಹ ಬಳಕೆಯ 14.2 ಕೆಜಿಯ ಎಲ್‍ಪಿಜಿ ಸಿಲಿಂಡರ್ ಬೆಲೆ 859.5 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 886 ರೂ. ಮುಂಬೈನಲ್ಲಿ 859.5 ರೂ. ಲಕ್ನೋದಲ್ಲಿ 897.5 ರೂ.ಗೆ ತಲುಪಿದೆ. ವಾಣಿಜ್ಯ ಬಳಕೆಯ 19 ಕೆಜಿ ತೂಕದ ಸಿಲಿಂಡರ್ ಬೆಲೆ 68 ರೂ.ನಷ್ಟು ಹೆಚ್ಚಳವಾಗಿದೆ. ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಒಂದು ಸಿಲಿಂಡರ್ ಬೆಲೆ 1,618 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ 14.2 ಕೆಜಿಯ ಎಲ್‍ಪಿಜಿ ಸಿಲಿಂಡರ್ ಬೆಲೆ 837.50 ರೂ.ಗಳಿಂದ 863 ರೂ.ಗೆ ತಲುಪಲಿದೆ ಎಂದು ವರದಿಯಾಗಿದೆ.

    ತೈಲ ಕಂಪನಿಗಳು ಪ್ರತಿ ತಿಂಗಳು ಮೊದಲ ಮತ್ತು 15ನೇ ತಾರೀಖಿನಂದು ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ದರವನ್ನು ಪರಿಶೀಲಿಸುತ್ತವೆ. ಇದಕ್ಕೂ ಮೊದಲು ಜುಲೈ 1ರಂದು ತೈಲ ಕಂಪನಿಗಳು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 25 ರೂ.ನಷ್ಟು ಹೆಚ್ಚಿಸಿದ್ದವು.

    ಮನೆಯಲ್ಲಿಯೇ ಕುಳಿತು ಕನೆಕ್ಷನ್ ಪಡೆದುಕೊಳ್ಳಿ:
    ಈಗ ನೀವು ಹೊಸ ಎಲ್‍ಪಿಜಿ ಕನೆಕ್ಷನ್ ಪಡೆಯಲು ಡಿಸ್ಟ್ರಿಬ್ಯೂಟರ್ ಆಫಿಸ್ ಗೆ ಹೋಗುವ ಅವಶ್ಯಕತೆ ಇಲ್ಲ. ನೀವು ಹೊಸ ಕನೆಕ್ಷನ್ ಪಡೆಯಲು ಇಚ್ಛಿಸಿದ್ರೆ ಕೇವಲ ಒಂದು ಮಿಸ್ಡ್ ಕಾಲ್ ನೀಡಬೇಕು. ಈ ವ್ಯವಸ್ಥೆಯನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಓಸಿ) ಕಲ್ಪಿಸಿದೆ. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ

    ಹೊಸ ಕನೆಕ್ಷನ್ ಗಾಗಿ 8454955555 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು. ಸಿಲಿಂಡರ್ ತುಂಬಿಸಬೇಕಾದ್ರೆ ಇದೇ ನಂಬರ್ ಬಳಸಬಹುದು. ಗ್ಯಾಸ್ ರೀಫಿಲ್ಲಿಂಗ್ ಗಾಗಿ ನಿಮ್ಮ ಕಡ್ಡಾಯವಾಗಿ ರಿಜಿಸ್ಟರ್ ನಂಬರ್ ಬಳಸಬೇಕು. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?

  • ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?

    ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?

    ಟೋಕಿಯೊ: ಕೊರೊನಾ ವೈರಸ್ ಮರಣ ಮೃದಂಗಕ್ಕೆ ವಿಶ್ವವೇ ತತ್ತರಿಸಿದ್ದು ಅನಿವಾರ್ಯವಾಗಿ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

    ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಆತಿಥೇಯ ರಾಷ್ಟ್ರ ಜಪಾನ್ ನಿಗದಿತ ವೇಳಾಪಟ್ಟಿಯಂತೆ ಒಲಿಂಪಿಕ್ಸ್ ನಡೆಸುವುದಾಗಿ ಹೇಳುತ್ತಿದ್ದವು. ಆದರೆ ಈಗ ಒಲಿಂಪಿಕ್ಸ್ ಮುಂದೂಡುವ ನಿಲುವನ್ನು ತೋರಿಸುತ್ತಿವೆ ಎಂದು ವರದಿಯಾಗಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‍ಗೆ ಸಂಬಂಧಿಸಿದಂತೆ ಕೆನಡಾ ಮತ್ತು ಆಸ್ಟ್ರೇಲಿಯಾ ಪ್ರಮುಖ ನಿರ್ಧಾರ ಕೈಗೊಂಡಿವೆ. ಟೋಕಿಯೊ ಕ್ರೀಡಾಕೂಟಕ್ಕೆ ತಮ್ಮ ಆಟಗಾರರನ್ನು ಕಳುಹಿಸುವುದಿಲ್ಲ ಎಂದು ಉಭಯ ದೇಶಗಳು ಸ್ಪಷ್ಟನೆ ನೀಡಿವೆ. ಇದನ್ನೂ ಓದಿ: ಕೊರೊನಾ ಭೀತಿ ಇದ್ರೂ ಒಲಿಂಪಿಕ್ ಜ್ಯೋತಿ ನೋಡಲು ಅರ್ಧ ಕಿ.ಮೀ. ಕ್ಯೂ

    ಕೆನಡಾ ಒಲಿಂಪಿಕ್ಸ್ ಸಮಿತಿ (ಸಿಒಸಿ) ಮತ್ತು ಕೆನಡಾ ಪ್ಯಾರಾ ಒಲಿಂಪಿಕ್ಸ್ ಸಮಿತಿ (ಸಿಪಿಸಿ) ಕ್ರೀಡಾಪಟುಗಳ ಆಯೋಗವು ರಾಷ್ಟ್ರೀಯ ಕ್ರೀಡಾ ಒಕ್ಕೂಟ ಮತ್ತು ಕೆನಡಾ ಸರ್ಕಾರದೊಂದಿಗೆ ಚರ್ಚಿಸಿದ್ದು, ತಮ್ಮ ಆಟಗಾರರನ್ನು ಟೋಕಿಯೊಗೆ ಕಳುಹಿಸದಿರಲು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಜೊತೆಗೆ ಆಟಗಾರರ ಮತ್ತು ವಿಶ್ವ ಸಮುದಾಯದ ಆರೋಗ್ಯಕ್ಕಿಂತ ಬೇರೆ ಯಾವುದೂ ನಮಗೆ ಮುಖ್ಯವಲ್ಲ ಎಂದು ಅಭಿಪ್ರಾಯಪಟ್ಟಿದೆ.  ಇದನ್ನೂ ಓದಿ: ಕೊರೊನಾ ಎಫೆಕ್ಟ್ – ಮನೆಯಲ್ಲೇ ಏಕಾಂಗಿಯಾಗಿ ಬೀಚ್ ವಾಲಿಬಾಲ್ ಆಡಿದ ರಾಸ್: ವಿಡಿಯೋ

    ಒಲಿಂಪಿಕ್ಸ್ ಅನ್ನು ಮುಂದೂಡಲು ಒಂದು ಆಯ್ಕೆ ಇದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ. ಆದರೆ ರದ್ದು ಮಾಡುವುದು ನಮ್ಮ ಕಾರ್ಯಸೂಚಿಯಲ್ಲಿಲ್ಲ. ‘ನಾವು ಜಗತ್ತಿನಾದ್ಯಂತÀ ಪರಿಸ್ಥಿತಿ ಮತ್ತು ಒಲಿಂಪಿಕ್ಸ್‍ನ ಪ್ರಭಾವದ ಬಗ್ಗೆ ಪಾಲುದಾರರೊಂದಿಗೆ ಚರ್ಚಿಸಿದ್ದೇವೆ. ಮುಂದಿನ 4 ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಸೋಮವಾರ ಜಪಾನ್ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಶಿಂಜೊ ಅಬೆ, ‘ನಾವು ಕ್ರೀಡಾಕೂಟವನ್ನು ಆಯೋಜಿಸಲು ಬದ್ಧರಾಗಿದ್ದೇವೆ. ಆಟಗಾರರ ಸುರಕ್ಷತೆಗೆ ಧಕ್ಕೆಯುಂಟಾಗುವುದಿಲ್ಲ. ಆದರೆ ಒಲಿಂಪಿಕ್ಸ್ ಅನ್ನು ಸುರಕ್ಷಿತವಾಗಿ ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿದರೆ, ನಾವು ಮುಂದೂಡುತ್ತೇವೆ ಎಂದು ಹೇಳಿದ್ದರು.

    ಶೇ.70ರಷ್ಟು ಅಮೆರಿಕದ ಆಟಗಾರರು ಒಲಿಂಪಿಕ್ಸ್ ಅನ್ನು ಮುಂದೂಡಲು ಒಲವು ತೋರಿದ್ದಾರೆ. ಇತ್ತ ಕ್ರೀಡಾಕೂಟವು 2020ರ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆದರೆ ಆಟಗಾರರನ್ನು ಕಳುಹಿಸುತ್ತೇವೆ ಎಂದು ಕೆನಡಾ ಮತ್ತು ಆಸ್ಟ್ರೇಲಿಯಾ ಪಟ್ಟು ಹಿಡಿದಿವೆ.

  • ಗೃಹಬಳಕೆ ಸಿಲಿಂಡರ್ ಬೆಲೆ ದಿಢೀರ್ ಇಳಿಕೆ – ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಭಾರೀ ಇಳಿಕೆ

    ಗೃಹಬಳಕೆ ಸಿಲಿಂಡರ್ ಬೆಲೆ ದಿಢೀರ್ ಇಳಿಕೆ – ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಭಾರೀ ಇಳಿಕೆ

    ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಇಳಿಕೆಯಾಗುತ್ತಿದ್ದಂತೆ ಗೃಹಬಳಕೆಯ ಸಬ್ಸಿಡಿ ಸಹಿತ ಸಿಲಿಂಡರಿನ ದರ 6.52 ರೂಪಾಯಿಯಷ್ಟು ಇಳಿಕೆಯಾಗಿದೆ.

    ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಗೃಹಬಳಕೆಯ ಸಿಲಿಂಡರಿನ ದರವನ್ನು ಕಡಿತಗೊಳಿಸಿದೆ. ಪರಿಷ್ಕೃತ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

    14.2 ಕೆಜಿ ಸಿಲಿಂಡರಿನ ಬೆಲೆ 507.42 ರೂಪಾಯಿ ಆಗಿದ್ದು, ದರ ಇಳಿಕೆಯಿಂದ 500.90 ರೂಪಾಯಿ ಆಗಿದೆ. ಸಬ್ಸಿಡಿ ಸಿಲಿಂಡರಿನ ದರಗಳು ಏರಿಳಿಕೆ ಕಾಣುತ್ತಲೇ ಇರುತ್ತವೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲೂ 133 ರೂಪಾಯಿ ಇಳಿಕೆಯಾಗಿದೆ. ಪ್ರತಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ದೆಹಲಿ ಮಾರುಕಟ್ಟೆಗೆ ಈ ಮೊದಲು 942.50 ರೂಪಾಯಿ ಇತ್ತು. ನೂತನ ದರ ಪರಿಷ್ಕರಣೆಯಿಂದಾಗಿ 809.50 ರೂಪಾಯಿಗೆ ಇಳಿದಿದೆ.

    ಸಬ್ಸಿಡಿ ಸಹಿತ ಸಿಲಿಂಡರ್ ಪಡೆದ ಗ್ರಾಹಕರ ಖಾತೆಗೆ ಡಿಸೆಂಬರ್ ತಿಂಗಳಿನಲ್ಲಿ 308.60 ರೂ. ಜಮೆ ಆಗಲಿದ್ದರೆ, ನವೆಂಬರ್ ನಲ್ಲಿ 433.66 ರೂ. ಜಮೆ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv