Tag: Invitation Magazine

  • ಆಮಂತ್ರಣ ಪತ್ರಿಕೆ ಕೊಡಲು ಹೋದ ಮದುಮಗ ಅಪಘಾತದಲ್ಲಿ ದುರ್ಮರಣ

    ಆಮಂತ್ರಣ ಪತ್ರಿಕೆ ಕೊಡಲು ಹೋದ ಮದುಮಗ ಅಪಘಾತದಲ್ಲಿ ದುರ್ಮರಣ

    – ಮೂರೇ ದಿನ ಬಾಕಿ ಇದ್ದ ಮದ್ವೆ, ಕೈಕಾಲು ಛಿಧ್ರ ಛಿಧ್ರ

    ಚಿಕ್ಕಬಳ್ಳಾಪುರ: ಸಂಬಂಧಿಕರು ಮತ್ತು ಸ್ನೇಹಿತರಿಗೆ ವಿವಾಹ ಆಮಂತ್ರಣ ಪತ್ರಿಕೆ ಹಂಚಲು ಹೋಗಿದ್ದ ಮದುಮಗನೊರ್ವ ಅಪಘಾತದಲ್ಲಿ ಸಾವನ್ನಪ್ಪಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ತಡರಾತ್ರಿ ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ, ರಾಷ್ಟ್ರೀಯ ಹೆದ್ದಾರಿ ನಾಗಾರ್ಜುನ ಕಾಲೇಜು ಬಳಿಯ ಸೇತುವೆ ಬಳಿ ಅಪಘಾತ ನಡೆದಿದೆ. ಟಿಪ್ಪರ್ ಹಾಗೂ ಬುಲೆಟ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ದೇವನಹಳ್ಳಿ ತಾಲೂಕು ಸೋಮತನಹಳ್ಳಿ ಗ್ರಾಮದ ಹನುಮಂತೇಗೌಡ (28) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಮದುವೆಗೆ ಮೂರೇ ದಿನ ಬಾಕಿ ಇತ್ತು.

    ಹಿಂಬದಿ ಕಿಶೋರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತ ನಂತರ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದು, ನಂದಿಗಿರಿಧಾಮ ಪೊಲೀಸರು ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಮದುವೆ ಸಂಭ್ರಮದ ಮನೆಯಲ್ಲಿ ಈಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

  • ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ: ಕಸಾಪ ಅಧ್ಯಕ್ಷರನ್ನ ತರಾಟೆ ತಗೆದುಕೊಂಡ ಮಹಿಳಾ ಪದಾಧಿಕಾರಿ

    ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ: ಕಸಾಪ ಅಧ್ಯಕ್ಷರನ್ನ ತರಾಟೆ ತಗೆದುಕೊಂಡ ಮಹಿಳಾ ಪದಾಧಿಕಾರಿ

    ವಿಜಯಪುರ: ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿಲ್ಲ ಅಂತಾ ಕನ್ನಡ ಸಾಹಿತ್ಯ ಪದಾಧಿಕಾರಿಯೊಬ್ಬರು ಅಧ್ಯಕ್ಷ ಹಾಗೂ ಜಿಲ್ಲಾ ಪದಾಧೀಕಾರಿಯನ್ನು ತರಾಟೆಗೆ ತಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

    ಇಂದು ಜಿಲ್ಲಾ ಸಾಹಿತ್ಯ ಪರಿಷತ್‍ನಿಂದ ಇದೇ 22ರಂದು ವಿಜಯಪುರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸುವರ್ಣಾ ಅವರು, ಆಮಂತ್ರಣ ಪತ್ರಿಕೆಯಲ್ಲಿ ಮತ್ತು ಭಾಷಣದಲ್ಲಿ ತಮ್ಮ ಹೆಸರು ಸೇರಿಸಿಲ್ಲ ಎಂದು ಫುಲ್ ಗರಂ ಆದರು.

    ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಲಿಲ್ಲ ಅಂತಾ ಜಿಲ್ಲಾ ಕಸಾಪ ಪದಾಧಿಕಾರಿ ಲಕ್ಷ್ಮಿ ದೇಸಾಯಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮವನ್ನು ಲೆಕ್ಕಿಸದೆ ಅಶ್ಲೀಲ ಶಬ್ದಗಳಿಂದ ಇಬ್ಬರು ಬಾಯಿಗೆ ಬಂದಂತೆ ನಿಂದಿಸಿಕೊಂಡು ಜಗಳವಾಡಿದರು.

    ಕಾರ್ಯಕ್ರಮದಿಂದ ಹೊರಬಂದ ಸುವರ್ಣ ಅವರು, ಯಾರು ಹಣ ನೀಡತ್ತಾರೆ ಅವರ ಹೆಸರನ್ನು ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂಡಿಗೇರಿ ಆಮಂತ್ರಣ ಪತ್ರಿಕೆಯಲ್ಲಿ ಹಾಕುತ್ತಾರೆ. ನಿಷ್ಠಾವಂತರಿಗೆ ಬೆಲೆ ಕೊಡುವುದಿಲ್ಲ. ಕಸಾಪದಲ್ಲಿ ಹಣ ನೀಡದವರಿಗೆ ಕಿಮ್ಮತ್ತು ಇಲ್ಲ. ನಾನು ಒಬ್ಬ ಶಿಕ್ಷಕಿ ಎಲ್ಲಿಂದ ಹಣ ತಂದು ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    https://youtu.be/vfmkw-7EI20

  • ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬೆದರಿತಾ ರಾಜ್ಯ ಸರ್ಕಾರ?

    ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬೆದರಿತಾ ರಾಜ್ಯ ಸರ್ಕಾರ?

    ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯ ಸರ್ಕಾರ ಬೆದರಿತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಹೌದು. ಉತ್ತರ ಕನ್ನಡದ ಜಿಲ್ಲಾಡಳಿತ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯನ್ನು ಈಗ ಮುದ್ರಿಸದೇ ಇರುವ ತೀರ್ಮಾನ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಮೇಲಿನ ಪ್ರಶ್ನೆ ಎದ್ದಿದೆ.

    ನವೆಂಬರ್ 10ರ ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರು ನಮೂದಿಸದಂತೆ ಅನಂತಕುಮಾರ್ ಹೆಗಡೆ ಆಪ್ತ ಸಹಾಯಕರ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರ ಕೂಡ ಶಿಷ್ಟಾಚಾರದಲ್ಲಿ ಹೆಸರು ನಮೋದಿಸದಂತೆ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಿಗೆ ಶಿಷ್ಟಾಚಾರ ವಿಭಾಗದಿಂದ ಯಾವುದೇ ಪತ್ರ ಬಾರದ ಹಿನ್ನಲೆಯಲ್ಲಿ ಆಹ್ವಾನ ಪತ್ರಿಕೆ ಮುದ್ರಣಕ್ಕೆ ಬ್ರೇಕ್ ಹಾಕಿದೆ.

    ಇದನ್ನೂ ಓದಿ: ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕ್ಸೋದು ಪ್ರೋಟೋಕಾಲ್, ಬರೋದು ಬಿಡೋದು ಸಚಿವರಿಗೆ ಬಿಟ್ಟಿದ್ದು- ಸಿಎಂ

    ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಪೇಚೆಗೆ ಸಿಲುಕಿದ್ದು, ಒಂದುವೇಳೆ ಯಾವುದೇ ಪ್ರತಿಕ್ರಿಯೆ ಬಾರದೇ ಹೆಸರು ನಮೋದಿಸದೇ ಇದ್ದಲ್ಲಿ ಹಕ್ಕುಚ್ಯುತಿ ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಗೊಂದಲ ಆಗದೇ ಇರಲು ಈಗ ಆಹ್ವಾನ ಪತ್ರಿಕೆಯನ್ನು ಮುದ್ರಿಸದೇ ಇರಲು ಜಿಲ್ಲಾಡಳಿತ ಮುಂದಾಗಿದೆ.

    ಈ ಹಿಂದೆ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಅನಂತ್ ಕುಮಾರ್ ಹೆಗಡೆ, ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ. ಒಂದು ವೇಳೆ ಹೆಸರು ಪ್ರಕಟಿಸಿದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟಿಪ್ಪುವಿನ ಜನ್ಮ ಜಾಲಾಡುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ್ದರೂ ಬೆಳಗಾವಿ ಜಿಲ್ಲಾಡಳಿತ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರ ಹೆಸರನ್ನು ಹಾಕಿ ಮುದ್ರಿಸಿದೆ.

    ಇದನ್ನೂ ಓದಿ:  ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಹಾಕ್ಬೇಡಿ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪತ್ರ