ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27,000 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಲಾಯಿತು.
The State clears ₹27,607 crore investment proposals creating 8,704 jobs.
At the 66th meeting of the State High-Level Clearance Committee, chaired by Hon’ble CM Shri Siddaramaiah , we approved 13 major projects—11 new and 2 expansions—reflecting investor confidence in… pic.twitter.com/RclnRHe4BJ
ಸಿದ್ದರಾಮಯ್ಯ ವಿಧಾನಸೌಧದಲ್ಲಿಂದು ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27 ಸಾವಿರ ಕೋಟಿ ಹೂಡಿಕೆಗೆ (Investment Proposals) ಒಪ್ಪಿಗೆ ನೀಡಲಾಗಿದೆ. ಅದರ ಅನ್ವಯ 11 ಹೊಸ ಯೋಜನೆಗಳು, 8 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ ಒಟ್ಟು 13 ಯೋಜನೆಗಳಿಂದ 8,704 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
11 ಹೊಸ ಹೂಡಿಕೆ ಯೋಜನೆಗಳ ಪೈಕಿ ತೇಜಸ್ ನೆಟ್ವರ್ಕ್ಸ್ 542.19 ಕೋಟಿ ರೂ., ವಾಯು ಅಸೆಟ್ಸ್ 1,251 ಕೋಟಿ ರೂ., ಜಿಂದಾಲ್ ಸ್ಟೀಲ್ಸ್ 1,300.57 ಕೋಟಿ ರೂ., ಜಿಂದಾಲ್ ಎಲೆಕ್ಟ್ರಿಕಲ್ ಸ್ಟೀಲ್ 7,102 ಕೋಟಿ ರೂ., ಗ್ರಾಸಿಂ ಇಂಡಸ್ಟ್ರೀಸ್ 1,386 ಕೋಟಿ ರೂ., ಎಸ್ಎಫ್ಎಕ್ಸ್ ಇಂಡಿಯಾ 9,298 ಕೋಟಿ ರೂ., ಸ್ನೀಡರ್ ಎಲೆಕ್ಟ್ರಿಕ್ ಐಟಿ ಬಿಝಿನೆಸ್, ಎಚ್ಎಸ್ಎಸ್ ಟೆಕ್ಸ್ಟೈಲ್ಸ್ 740 ಕೋಟಿ ರೂ., ಸ್ನೈಡರ್ ಎಲೆಕ್ಟ್ರಿಕ್ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,520.75 ಕೋಟಿ ರೂ., ಕ್ಯೂಪಿಐಎಐ ಇಂಡಿಯಾ 1,136 ಕೋಟಿ ರೂ., ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಲಿಮಿಟೆಡ್ 1,330 ಕೋಟಿ ರೂ. ಮತ್ತು ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ 1,622 ಕೋಟಿ ರೂ., ಹೂಡಿಕೆ ಮಾಡಲಿವೆ. ಮಿಕ್ಕಂತೆ, ಎಂಬೆಸಿ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಬಾಲಾಜಿ ವೇಫರ್ಸ್ ಕಂಪನಿಗಳು ಕ್ರಮವಾಗಿ 80 ಮತ್ತು 298.75 ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿವೆ.
– RE ವಲಯದ ಮತ್ತಷ್ಟು ವಿಸ್ತಾರ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ಕೇಂದ್ರ ಸರ್ಕಾರ (Central Government) ಇದೀಗ NLCILಗೆ ಹೂಡಿಕೆ ವಿನಾಯಿತಿ ನೀಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮಾಹಿತಿ ನೀಡಿದ್ದಾರೆ.
A historic surge in India’s green energy push!🌞
Under the decisive leadership of Hon’ble PM Shri @narendramodi ji, renewable capacity jumped 420% in June 2025 compared to last year — from 1.4 GW to 7.3 GW.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆಯಲ್ಲಿ ಹೂಡಿಕೆ ವಿನಾಯಿತಿಗೆ ಅನುಮೋದನೆ ನೀಡಿದ್ದು, ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಗೆ (CPSE) ಅನ್ವಯವಾಗುವಂತೆ ಸದ್ಯ ಚಾಲ್ತಿಯಲ್ಲಿರುವ ಹೂಡಿಕೆ ಮಾರ್ಗಸೂಚಿಗಳಿಂದ NLC ಇಂಡಿಯಾ ಲಿಮಿಟೆಡ್ (NLCIL)ಗೆ ವಿಶೇಷ ವಿನಾಯಿತಿ ನೀಡಲಾಗಿದೆ.
ಸಚಿವ ಸಂಪುಟ ಹೂಡಿಕೆ ವಿನಾಯಿತಿಗೆ ಅನುಮೋದನೆ ನೀಡಿದ್ದರಿಂದಾಗಿ NLCIL ಸ್ವಾಮ್ಯದ ಅಂಗಸಂಸ್ಥೆಯಾದ NLC ಇಂಡಿಯಾ ನವೀಕರಿಸಬಹುದಾದ ಲಿಮಿಟೆಡ್ (NIRL)ನಲ್ಲಿ 7,000 ಕೋಟಿ ರೂ. ಹೂಡಿಕೆ ಮಾಡಲು ಮತ್ತು NIRL ನೇರವಾಗಿ ಅಥವಾ ಜಂಟಿ ಉದ್ಯಮಗಳ ರಚನೆ ಮೂಲಕ ವಿವಿಧ ಯೋಜನೆಗಳಲ್ಲಿ ಹೂಡಿಕೆಗೆ ಅವಕಾಶವಾಗಲಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್ – ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಬಂಧನ
2030ರ ವೇಳೆಗೆ 10.11 GW ನವೀಕರಿಸಬಹುದಾದ ಇಂಧನ (RE) ಸಾಮರ್ಥ್ಯ ಅಭಿವೃದ್ಧಿಪಡಿಸುವ ಮತ್ತು 2047ರ ವೇಳೆಗೆ 32 GWಗೆ ವಿಸ್ತರಿಸುವ NLCILನ ಮಹತ್ವಾಕಾಂಕ್ಷೆಯ ಗುರಿಗೆ ಬೆಂಬಲವಾಗಿ ಈ ವಿನಾಯಿತಿ ಘೋಷಿಸಲಾಗಿದೆ. ಇದು ನೇರ ಮತ್ತು ಪರೋಕ್ಷವಾಗಿ ಗಮನಾರ್ಹ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆಯಿದೆ. ಸಮುದಾಯ ಮತ್ತು ದೇಶದ ಸಮಗ್ರ ಆರ್ಥಿಕ ಬೆಳವಣಿಗೆ ಸಾಕಾರಗೊಳ್ಳಲಿದೆ.
ʻಪಂಚಾಮೃತʼ ಯೋಜನೆ ಗುರಿ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ದೀರ್ಘಾವಧಿಯ ಬದ್ಧತೆಗೆ ಅನುಗುಣವಾಗಿ 2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನ ಸಾಧಿಸಲು ಭಾರತ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ವಲಯ ಮಹತ್ತರ ಹೆಜ್ಜೆಯಿರಿಸಿದೆ. ಇದನ್ನೂ ಓದಿ: ಬಿಜೆಪಿ ಬಂಡಾಯ ನಾಯಕರ ವಿರುದ್ಧ ವರಿಷ್ಠರಿಗೆ ದೂರು ನೀಡಿದ ಎಂ.ಪಿ ರೇಣುಕಾಚಾರ್ಯ ನೇತೃತ್ವದ ಟೀಂ
ಮಹತ್ವದ ವಿದ್ಯುತ್ ಸೌಲಭ್ಯ ಮತ್ತು ನವರತ್ನ CPSE ಆಗಿ, NLCIL ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹೂಡಿಕೆಯ ಮೂಲಕ, NLCIL ತನ್ನ ನವೀಕರಿಸಬಹುದಾದ ಇಂಧನ ಬಂಡವಾಳವನ್ನು ಗಣನೀಯವಾಗಿ ವಿಸ್ತರಿಸಲು ಮತ್ತು ರಾಷ್ಟ್ರೀಯ ಮತ್ತು ಜಾಗತಿಕ ಹವಾಮಾನ ಕ್ರಿಯೆಯ ಉದ್ದೇಶಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಪ್ರಯತ್ನಿಸುತ್ತದೆ.
ಕೇಂದ್ರ ಸಚಿವ ಸಂಪುಟ NLCILಗೆ ಹೂಡಿಕೆ ವಿನಾಯಿತಿ ನೀಡಿದ್ದರಿಂದಾಗಿ ಭವಿಷ್ಯದಲ್ಲಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಕಲ್ಲಿದ್ದಲು ಆಮದು ಸಹ ಕಡಿತಗೊಳಿಸುವ ಉದ್ದೇಶವಿದೆ. ದೇಶಾದ್ಯಂತ 24×7 ವಿದ್ಯುತ್ ಪೂರೈಕೆಯ ವಿಶ್ವಾಸಾರ್ಹತೆಗೆ ಪ್ರತೀಕವಾಗಿದ್ದು, ಈ ಮೂಲಕ ಹಸಿರು ಇಂಧನ ವಲಯದಲ್ಲಿ ಭಾರತದ ನಾಯಕತ್ವ ಸ್ಥಾನವನ್ನು ಬಲಪಡಿಸಲಿದೆ ಎಂದಿದ್ದಾರೆ.
ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ಬೃಹತ್ ಕೈಗಾರಿಕೆ ಇಲಾಖೆಯಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ತಿಳಿಸಿದರು.
ಪ್ರಗತಿಯ ಪಥದಲ್ಲಿ ಕೈಗಾರಿಕಾ ಕರ್ನಾಟಕ: ನಾವೀನ್ಯತೆ, ಹೂಡಿಕೆ, ಉದ್ಯೋಗದ ಬಲವಾದ ಅಡಿಪಾಯ
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು ಎರಡು ವರ್ಷಗಳು ಕಳೆದಿವೆ.— ಇದು ಉದ್ದೇಶ ಮತ್ತು ಪ್ರಗತಿಯಿಂದ ರೂಪಿತವಾದ ಒಂದು ಪಯಣ.
ವಿಧಾನಸೌಧದಲ್ಲಿ ಇಲಾಖೆಯ 2 ವರ್ಷಗಳ ಸಾಧನೆ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ವೇಳೆ, 2 ವರ್ಷಗಳಲ್ಲಿ ರಾಜ್ಯದಲ್ಲಿ 6,57,660 ಕೋಟಿ ರೂ. ಹೂಡಿಕೆ ಆಗಿದೆ. 115 ಒಡಂಬಡಿಕೆಗಳು ಆಗಿದೆ. ಇದರಿಂದ 2,32,771 ಉದ್ಯೋಗ ಸೃಷ್ಟಿ ಆಗಲಿದೆ. ಏಕಗವಾಕ್ಷಿ ಅನುಮೋದನೆ ಸಮಿತಿಯೂ 906 ಯೋಜನೆಗೆ ಒಪ್ಪಿಗೆ ನೀಡಿದೆ. ಇದರಿಂದ 1,13,200 ಕೋಟಿ ರೂ. ಹೂಡಿಕೆ ನಿರೀಕ್ಷೆ ಇದೆ. 2,23,982 ಉದ್ಯೋಗ ಸೃಷ್ಟಿ ಆಗಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಜಾತಿಗಣತಿಗೆ 10 ವರ್ಷ ಆಗಿದ್ದಕ್ಕೆ ಹೊಸ ಜಾತಿಗಣತಿ: ಎಂ.ಬಿ ಪಾಟೀಲ್
ಫೆಬ್ರವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದ್ದೆವು. 3,250 ಉದ್ಯಮಿಗಳು ಭಾಗಿಯಾಗಿದ್ರು. 1,200 ಕಂಪನಿಗಳು ಹೂಡಿಕೆ ಆಸಕ್ತಿ ತೋರಿಸಿವೆ. 6,23,845 ಕೋಟಿ ಹೂಡಿಕೆ ಒಪ್ಪಿಗೆ ಆಗಿದೆ. 4,03,533 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹೊಸ ಕೈಗಾರಿಕಾ ನೀತಿ 2025-30 ಘೋಷಣೆ ಮಾಡಲಾಗಿದೆ. ಹೊಸ ಕೈಗಾರಿಕೆ ನೀತಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿದೆ. 5 ವರ್ಷಗಳಲ್ಲಿ 7.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಣೆ ಮಾಡುವುದು ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು. ಇದನ್ನೂ ಓದಿ: ಬೋಯಿಂಗ್ ನಿರ್ಮಿತ ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಪರಿಸರ ಸ್ನೇಹಿ ಇಂಧನ ನೀತಿ 2024-29 ಜಾರಿ ಮಾಡಲಾಗಿದೆ. ಇದರಿಂದ 1 ಲಕ್ಷ ಹೊಸ ಉದ್ಯೋಗ ಸೃಷ್ಟಿ ಆಗಲಿದೆ. 50 ಸಾವಿರ ಹೂಡಿಕೆ ಆಕರ್ಷಣೆಯ ಗುರಿ ಇದೆ. ಕ್ವೀನ್ ಸಿಟಿ ವಿನೂತನ ಯೋಜನೆ ಅನುಷ್ಠಾನ ಮಾಡಲಾಗ್ತಿದೆ. 2000ಕ್ಕೂ ಹೆಚ್ಚು ಎಕ್ರೆಯಲ್ಲಿ ಈ ಕ್ವೀನ್ ಸಿಟಿ ಬರಲಿದೆ. 40 ಸಾವಿರ ಹೂಡಿಕೆ ಆಗಲಿದೆ. 80 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಮಾನ ದುರಂತ: ವಿಮಾನಯಾನ ಸಚಿವರ ರಾಜೀನಾಮೆಗೆ ಸಚಿವ ಈಶ್ವರ ಖಂಡ್ರೆ ಒತ್ತಾಯ
ಚಿಕ್ಕಬಳ್ಳಾಪುರದಲ್ಲಿ ಭಾರತದ ಮೊದಲ ಡೀಪ್ ಟೆಕ್ ಪಾರ್ಕ್ ನಿರ್ಮಾಣ ಆಗ್ತಿದೆ. 3 ಸಾವಿರಕ್ಕೂ ಹೆಚ್ಚು ಎಕ್ರೆಯಲ್ಲಿ ಇದು ನಿರ್ಮಾಣ ಆಗಲಿದೆ. ಇದರಲ್ಲಿ ಬಾಹ್ಯಾಕಾಶ ತಂತ್ರಜ್ಞಾನ, ಡೋಮ್ ತಯಾರಿಕೆ, ಸೇರಿ ಹಲವು ತಂತ್ರಜ್ಞಾನ ಇರಲಿದೆ. ಕರ್ನಾಟಕದಲ್ಲಿ ಫಾಕ್ಸ್ ಕಾನ್ 22 ಸಾವಿರಕ್ಕೂ ಹೆಚ್ಚು ಕೋಟಿ ರೂ. ಹೂಡಿಕೆ ಮಾಡಿದೆ. ಶೆವ್ರಾನ್ 8 ಸಾವಿರಕ್ಕೂ ಹೆಚ್ಚು ಕೋಟಿ ಹೂಡಿಕೆ. ಹೀರೋ ಎನರ್ಜಸ್ 11 ಸಾವಿರ ಕೋಟಿ ರೂ., ಟಾಟಾ ಸಮೂಹ 3,330 ಸಾವಿರ ಕೋಟಿ ರೂ., ಸನ್ಸೇರಾ 2,100 ಸಾವಿರ ಕೋಟಿ ರೂ., ಜಿಂದಾಲ್ 4 ಸಾವಿರಕ್ಕೂ ಹೆಚ್ಚು ಕೋಟಿ ಹೂಡಿಕೆ ಮಾಡಿದೆ. ಕರ್ನಾಟಕ ಎಂಆರ್‌ಒ ಹಬ್ ಆಗ್ತಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಲಾಗ್ತಿದೆ. ಇನ್ವೆಸ್ಟ್ ಕರ್ನಾಟಕ ಫೋರಂ ಪುನರ್ ರಚನೆ ಮಾಡಲಾಗಿದೆ. ಸೆಕ್ಟರ್ ವೈಸ್ ಇಂಡಸ್ಟ್ರಿ ತಜ್ಞರನ್ನ ನೇಮಕ ಮಾಡಿಕೊಳ್ಳಲಾಗ್ತಿದೆ. ನೇಮಕಾತಿ ಪ್ರಕ್ರಿಯೆ ಆಗ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ ಬ್ಯುಸಿನೆಸ್ ಹೆಚ್ಚಿಸಲು ತಮನ್ನಾ ಆಯ್ಕೆ: ಎಂ.ಬಿ ಪಾಟೀಲ್
ಕೆಐಎಡಿಬಿಯಲ್ಲೂ ಹಲವು ಕಾರ್ಯಕ್ರಮ ಆಗಿದೆ. ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್ ಮಾಡ್ತಿದ್ದೇವೆ.ಹುಬ್ಬಳ್ಳಿಯಲ್ಲಿ ಸ್ಟಾರ್ಟ್ ಅಪ್ ಪಾರ್ಕ್ ಆಗ್ತಿದೆ. ಸ್ವಿಫ್ಟ್ ಸಿಟಿ ಪ್ರಾರಂಭ ಮಾಡೋ ಕೆಲಸ ಮಾಡ್ತಿದ್ದೇವೆ. ಬಳ್ಳಾರಿಯಲ್ಲಿ ಜೀನ್ಸ್ ಕ್ಲಸ್ಟರ್ ಪ್ರಾರಂಭ ಮಾಡ್ತಿದ್ದೇವೆ ಅಂತ ತಿಳಿಸಿದರು.
ಎಂಎಸ್‌ಐಎಲ್‌ನಲ್ಲಿ ಇವತ್ತು ಉತ್ತಮವಾಗಿ ನಡೆಯುತ್ತಿದೆ. ಪ್ರವಾಸಿ ಪ್ಯಾಕೇಜ್ ಮಾಡ್ತಿದ್ದೇವೆ. ಶೀಘ್ರವೇ ಇ-ಕಾಮರ್ಸ್ ಸೇವೆ ಪ್ರಾರಂಭ ಮಾಡುತ್ತೇವೆ. ಎಂಎಸ್‌ಐಎಲ್‌ನಲ್ಲಿ ಚಿಟ್ ಫಂಡ್‌ಅನ್ನು ಆನ್‌ಲೈನ್‌ನಲ್ಲಿ ಮಾಡೋ ವ್ಯವಸ್ಥೆ ಜಾರಿ ಮಾಡ್ತಿದ್ದೇವೆ. 5 ವರ್ಷಗಳಲ್ಲಿ 10 ಸಾವಿರ ಕೋಟಿ ರೂ. ಬಿಸಿನೆಸ್ ಮಾಡುವ ಟಾರ್ಗೆಟ್ ಇದೆ. ಕೆಐಎಡಿಬಿ ಮೈಲುಗಲ್ಲು ಸಾಧಿಸಿದೆ. 2028ರ ವೇಳೆಗೆ 5 ಸಾವಿರ ಗುರಿ ಹಾಕಿಕೊಳ್ಳಲಾಗಿದೆ. ಉತ್ಕೃಷ್ಟ ಪರ್ಫ್ಯೂಮ್ ತಯಾರು ಮಾಡ್ತಿದ್ದೇವೆ. ಕೆಐಎಡಿಬಿ ಗತವೈಭವ ಮರುಗಳಿಸುವ ಕೆಲಸ ಮಾಡ್ತಿದ್ದೇವೆ. ಈ ತಿಂಗಳು 30 ಕೋಟಿ ರೂ. ವಹಿವಾಟು ಜಾಸ್ತಿ ಆಗ್ತಿದೆ ಎಂದು ಹೇಳಿದರು. ಇದನ್ನೂ ಓದಿ: 8 ಸೆಕೆಂಡ್ ನಂತ್ರ ವಿಮಾನ ಹಾರಾಟದಲ್ಲಿ ಅಸಹಜತೆ ಪತ್ತೆ; 7-12 ಸೆಕೆಂಡ್ ವರೆಗಿನ ಹಾರಾಟದ ಮೇಲೆ ತನಿಖೆ
ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್ ಅನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಪ್ರಯತ್ನ ಮಾಡ್ತಿದ್ದೇವೆ. ಶೀಘ್ರವೇ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ರಾಜ್ಯದ 9 ರೈಲು ಮಾರ್ಗಗಳನ್ನ ಆದಷ್ಟು ಬೇಗ ಮುಗಿಸಲು ಕ್ರಮ ಕೈಗೊಳ್ಳಲಾಗುವುದು. ರೈಲ್ವೆ ಸಚಿವರ ಜೊತೆ ಸಭೆ ಮಾಡಿದ್ದೇವೆ. ರೈಲ್ವೆ ದುರಸ್ಥಿ ಕಾರ್ಯ ಕೂಡ ವೇಗವಾಗಿ ಆಗುತ್ತಿದೆ. ರೈಲ್ವೆ ಮೂಲಭೂತ ಸೌಕರ್ಯಗಳ ನಿಗಮದಲ್ಲಿ ಹೆಚ್ಚುವರಿ ಸಬರ್ಬನ್ ರೈಲು ಪ್ರಾರಂಭಕ್ಕೆ ಮುಂದಾಗಿದ್ದೇವೆ. ಶಿವಮೊಗ್ಗ ವಿಮಾನ ನಿಲ್ದಾಣ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ನ್ಯಾಯಾಧೀಶರ ಮುಂದೆ ಹಾಜರಾದ ವಿನಯ್ ಕುಲಕರ್ಣಿ – ಶಾಸಕನನ್ನು ವಶಕ್ಕೆ ಪಡೆದ ಸಿಬಿಐ
ವಿಜಯಪುರ ವಿಮಾನ ನಿಲ್ದಾಣದ ಕೆಲಸ ಬಹುತೇಕ ಮುಕ್ತಾಯ ಆಗಿದೆ. ಆದಷ್ಟು ಬೇಗ ಪ್ರಾರಂಭ ಆಗಲಿದೆ. ಮೈಸೂರು ಏರ್‌ಪೋರ್ಟ್ ರನ್ ವೇ ವಿಸ್ತರಣೆ ಮಾಡುವ ಕೆಲಸ ಆಗ್ತಿದೆ. ಹಾಸನ, ರಾಯಚೂರು, ಬಳ್ಳಾರಿ ಏರ್‌ಪೋರ್ಟ್ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ. 3 ಹೆಲಿಪೋರ್ಟ್ ನಿರ್ಮಾಣದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾರವಾರ ಸಿವಿಲ್ ಎನ್ ಕ್ಲೈವ್‌ಗೆ ಭೂಸ್ವಾಧೀನ ಆಗ್ತಿದೆ. ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ಆಗಲಿದೆ. ಈಗಾಗಲೇ ಕೇಂದ್ರದ ತಂಡ ಪರಿಶೀಲನೆ ಮಾಡಿದೆ. ಕೇಂದ್ರ ಇನ್ನು ನಮಗೆ ಜಾಗ ಫೈನಲ್ ಮಾಡಿಲ್ಲ. ಶೀಘ್ರವೇ ಸಿಎಂ ಜೊತೆ ಕೇಂದ್ರ ಸಚಿವರ ಭೇಟಿ ಮಾಡಿ ಜಾಗ ಫೈನಲ್ ಮಾಡಲು ಮನವಿ ಮಾಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಮಗಳು – ಬಾರದ ಲೋಕಕ್ಕೆ ಹೋದ್ಳು..!
ಬಲ್ಡೋಟ ಕಂಪನಿಯಿಂದ ಸಮಸ್ಯೆ ಆದರೆ ಬೇರೆ ಕಡೆ ಶಿಫ್ಟ್ ಮಾಡ್ತೇವೆ. ಸ್ವಾಮೀಜಿ ಜೊತೆಗೂ ಮಾತಾಡಿ ಕ್ರಮ ಕೈಗೊಳ್ಳುತ್ತೇವೆ. ಮೂರನೇ ಪಾರ್ಟಿ ಸರ್ವೆ ಮಾಡಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಇದರ ಜೊತೆಗೆ ಎಲ್ಲಾ ಜಿಲ್ಲೆಗಳ ಎಲ್ಲಾ ಕೈಗಾರಿಕೆಗಳ ಪೊಲ್ಯೂಷನ್ ರಿವ್ಯೂ ಮಾಡೋಕೆ ಇಲಾಖೆ ನಿರ್ಧಾರ ಮಾಡಲಾಗಿದೆ. ಎಕ್ಸ್‌ಪರ್ಟ್‌ಗಳಿಂದ ರಿವ್ಯೂ ಮಾಡಿಸುತ್ತೇವೆ. ಯಾವುದಾದರು ಕೈಗಾರಿಕೆ ಸಮಸ್ಯೆ ಇದ್ದರೆ ಅದರ ಬಗ್ಗೆ ಕ್ರಮ ತೆಗೆದುಕೊಳ್ತೇವೆ. ಕೊಪ್ಪಳದಿಂದಲೇ ಸರ್ವೆ ಪ್ರಾರಂಭ ಮಾಡ್ತೀವೆ ಅಂತ ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಲವು ರಾಷ್ಟ್ರಗಳ ಮೇಲೆ ಪ್ರತಿಸುಂಕ ವಿಧಿಸಿದ ಬಳಿಕ ವ್ಯಾಪಾರ, ವಾಣಿಜ್ಯ ವಲಯದಲ್ಲಿ ಏರಿಳಿತ ಶುರುವಾಗಿದೆ. ಷೇರು ಮಾರುಕಟ್ಟೆಯಲ್ಲೂ ಕೂಡ ಹಾವು-ಏಣಿ ಆಟ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳು ಯುಎಸ್ ಟ್ರೆಷರಿ ಬಿಲ್‌ಗಳ (‘ಟಿ-ಬಿಲ್’ ಯುಎಸ್ ಸರ್ಕಾರದ ಖಜಾನೆ ಇಲಾಖೆಯಿಂದ ಬೆಂಬಲಿತವಾದ ಅಲ್ಪಾವಧಿಯ ಯುಎಸ್ ಸರ್ಕಾರದ ಸಾಲದ ಬಾಧ್ಯತೆಯಾಗಿದೆ) ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿವೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ಸಹ ಚಿನ್ನದ ಬೆಲೆ ಮಾತ್ರ ಗಗನಕ್ಕೆ ಏರುತ್ತಲೇ ಇದೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಸುರಕ್ಷಿತ ಎಂಬುದು ಜನರ ಭಾವನೆಯಾಗಿದ್ದು, ಹೂಡಿಕೆದಾರರು ಚಿನ್ನದ ಕಡೆ ಮುಖ ಮಾಡಿದ್ದಾರೆ. ಈ ಕಲ್ಪನೆ ನಿಜವೇ? ಪ್ರಸ್ತುತ ಆರ್ಥಿಕ ಪ್ರಕ್ಷುಬ್ಧತೆಯ ಸಮಯದಲ್ಲಿ ಚಿನ್ನ ತನ್ನ ಮೌಲ್ಯ ಕಾಪಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಹೌದು.. ಎಂಬುದೇ ಉತ್ತರ.
ಟ್ರಂಪ್ ಪ್ರತಿಸುಂಕ (Tariff) ವಿಧಿಸುವ ಮೂಲಕ ಜಾಗತಿಕ ಆರ್ಥಿಕತೆಗೆ ಚಾಟಿ ಬೀಸಿದ್ದರಿಂದ ಚಿನ್ನವು (Gold Price Hike) ಎಂದಿಗಿಂತಲೂ ಉತ್ತಮವಾಗಿದೆ ಎಂಬುದನ್ನು ಅದರ ಬೆಲೆಯೇ ಸೂಚಿಸುತ್ತಿದೆ. ಇದೇ ಮಾರ್ಚ್ 15ರ ಹೊತ್ತಿಗೆ ಮೊದಲ ಬಾರಿಗೆ ಚಿನ್ನವು ‘ಔನ್ಸ್’ಗೆ (28.34 ಗ್ರಾಂ) ಅಂದಾಜು 2,56,161 ರೂ. (3,000 ಡಾಲರ್) ಆಗಿದೆ. ಸ್ಥಳೀಯವಾಗಿ ಗಮನಿಸಿದರೆ, ಚಿನ್ನದ ಬೆಲೆಯು 10 ಗ್ರಾಂಗೆ 95,000 ರೂ.ಗೆ ಏರಿಕೆ ಕಂಡಿದೆ. ಹಳದಿ ಲೋಹದ ಹೊಳಪಿನ ಓಟವು, ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನ ಸಂಗ್ರಹಣೆ, ಹಣದುಬ್ಬರದ ಕಾಳಜಿ ಮತ್ತು ಸಾಂಕ್ರಾಮಿಕ ನಂತರ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಮುಂದುವರಿದಿದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ
ಏನಿದು ಯುಎಸ್ ಟ್ರೆಷರಿ ಬಾಂಡ್?
ಜಗತ್ತಿನ ದೈತ್ಯ ಅಮೆರಿಕದ ಆರ್ಥಿಕತೆ ನಿಂತಿರುವುದೇ ಟ್ರೆಷರಿ ಬಾಂಡ್ ಮೇಲೆ. ಯುಎಸ್ ಸರ್ಕಾರಕ್ಕೆ ಪ್ರತಿ ವರ್ಷ ಸಾಕಷ್ಟು ಹಣ ಬೇಕು, ಸಂಬಳ ನೀಡಬೇಕು, ಸೈನ್ಯಕ್ಕೆ ಹಣ ಬೇಕು, ರಸ್ತೆ-ಆಸ್ಪತ್ರೆ ಇತರೆ ಮೂಲಸೌಕರ್ಯಗಳಿಗೂ ಸಾಲ ಮಾಡಿ ಹಣ ತರುತ್ತದೆ. ಈ ಸಾಲವನ್ನು ಟ್ರೆಷರಿ ಬಾಂಡ್‌ನಿಂದ ಅಮೆರಿಕ ಸರ್ಕಾರಕ್ಕೆ ಬರುತ್ತದೆ. ಅಮೆರಿಕ ಸರ್ಕಾರ, ಅಲ್ಪಾವಧಿ-ಮಧ್ಯಮ-ಧೀರ್ಘಾವಧಿ ಎಂದು ಮೂರು ವಿಧದಲ್ಲಿ ಬಾಂಡ್ ಬಿಡುಗಡೆ ಮಾಡುತ್ತದೆ. ಈ ಬಾಂಡನ್ನು ಸಾಮಾನ್ಯ ಜನರು, ಕಂಪನಿಗಳು ಮತ್ತು ಯಾವುದೇ ದೇಶವು ಖರೀದಿಸಲು ಅವಕಾಶ ಇದೆ. ಅಮೆರಿಕದ ಸಾಲದಲ್ಲಿ ಶೇ.30 ವಿದೇಶಿ ಹೂಡಿಕೆಗಳಿಗೆ ಮಾತ್ರ ಅವಕಾಶ ಇದೆ. ಜಗತ್ತಿನಲ್ಲಿ ವ್ಯಾಪಾರ, ವಹಿವಾಟನ್ನು ಡಾಲರ್ ಮುಖಾಂತರವೇ ನಡೆಸಲಾಗುವುದು. ಹೀಗಾಗಿ, ಬಾಂಡ್ ಮೂಲಕ ಮೀಸಲು ನಿಧಿ ಖರೀದಿಸಲು ಇತರೆ ದೇಶಗಳು ಮುಂದಾಗುತ್ತವೆ. ಯಾವ ದೇಶ ಹೆಚ್ಚು ಮೀಸಲು ನಿಧಿ ಹೊಂದಿರುತ್ತೋ ಅದು ಆರ್ಥಿಕವಾಗಿ ಸುಭದ್ರವಾಗಿರುತ್ತದೆ.
ಟ್ಯಾರಿಫ್ ಅವ್ಯವಸ್ಥೆ ನಡುವೆ ಚಿನ್ನದ ಏರಿಕೆ
ಎಸ್&ಪಿ 500 (ಸ್ಟಾಕ್ ಮಾರುಕಟ್ಟೆ ಸೂಚ್ಯಂಕ) ಈ ತಿಂಗಳ ಆರಂಭದಲ್ಲಿ 10.5% ಕುಸಿದಾಗ, ಮಾರುಕಟ್ಟೆ ಮೌಲ್ಯ ಕೂಡ 6.6 ಮಿಲಿಯನ್ ಡಾಲರ್‌ನಷ್ಟು ಕುಸಿತ ಕಂಡಿತು. ಇದರ ಎಫೆಕ್ಟ್‌ನಿಂದಾಗಿ ಅಮೆರಿಕ ಬಾಂಡ್ ಮೇಲೆ ಹೂಡಿಕೆ ಮಾಡುತ್ತಿರುವವರು, ಅದನ್ನು ಹಿಂತೆಗೆದುಕೊಳ್ಳಬೇಕೇ ಎಂದು ಪ್ರಶ್ನಿಸುತ್ತಿದ್ದಾರೆ. ಚಿನ್ನದ ಮೇಲಿನ ಹೂಡಿಕೆ ಕಡೆ ಮುಖ ಮಾಡಿದ್ದಾರೆ. ಎಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಚಿನ್ನದ ಬೆಲೆಯಲ್ಲಾಗಲಿ ಅಥವಾ ಅದರ ಮೇಲಿನ ಹೂಡಿಕೆಗೆ ಎಫೆಕ್ಟ್ ಆಗಲಿ ಆಗಿಲ್ಲ. ಇದನ್ನೂ ಓದಿ: ಟ್ಯಾರಿಫ್ ವಾರ್‌ಗೆ ತಾತ್ಕಾಲಿಕ ಬ್ರೇಕ್ – ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ
‘ಚಿನ್ನ ಯಾವತ್ತೂ ಸುರಕ್ಷಿತ ಧಾಮ ಇದ್ದಂತೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಅದು ದುರ್ಬಲಗೊಂಡಿಲ್ಲ. ಆರ್ಥಿಕ ದಿವಾಳಿ ಆರಂಭದಲ್ಲಿ ಚಿನ್ನದ ಬೆಲೆ ಕುಸಿತ ಕಂಡರೂ, ನಂತರದ ದಿನಗಳಲ್ಲಿ ಅದರ ಬೆಲೆ ಏರಿಕೆಯನ್ನು ನಾವು ನೋಡುತ್ತೇವೆ. ಚಿನ್ನದ ಬೇಡಿಕೆಯಲ್ಲಿ ತೀವ್ರ ಹೆಚ್ಚಳವಾಗುತ್ತದೆ’ ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ಸರಕುಗಳ ವಿಶ್ಲೇಷಕ ಲೀನಾ ಥಾಮಸ್ ವಿಶ್ಲೇಷಿಸಿದ್ದಾರೆ. 2020ರ ಕೋವಿಡ್ ಸಂದರ್ಭದಲ್ಲೂ ಆರ್ಥಿಕತೆ ಕುಸಿತ ಕಂಡಾಗ, ಚಿನ್ನವೂ ಶೇ.5ರಷ್ಟು ಕುಸಿದಿತ್ತು. ಅಷ್ಟೇ ತ್ವರಿತವಾಗಿ ಏರಿಕೆ ಕಂಡಿತು ಎಂದು ಥಾಮಸ್ ತಿಳಿಸಿದ್ದಾರೆ.
‘ಸುರಕ್ಷಿತ ಧಾಮ’ ಚಿನ್ನ
ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ಸುರಕ್ಷಿತ ಧಾಮ ಎಂಬ ಭಾವನೆ ದೀರ್ಘಕಾಲದ್ದಾಗಿದೆ. ಯುಎಸ್, ಭಾರತ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಚಿನ್ನ ಜನಪ್ರಿಯ ಲೋಹವಾಗಿದೆ. ಮಾನವ ಇತಿಹಾಸದಲ್ಲಿ ಇದುವರೆಗೆ ಸುಮಾರು 2 ಲಕ್ಷ ಟನ್‌ಗಳಷ್ಟು ಚಿನ್ನವನ್ನು ಗಣಿಗಾರಿಕೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಮೇಲಿನ ಆಕರ್ಷಣೆಯೂ ಹೆಚ್ಚಾಗಿದೆ. ಹಿಂದೆ 28 ಗ್ರಾಂ ಚಿನ್ನದ ಬೆಲೆಯು ಅಂದಾಜು 85,387 ರೂ.ನಿಂದ 1,70,774 ಡಾಲರ್‌ಗೆ ಏರಲು ಬರೋಬ್ಬರಿ 12 ವರ್ಷಗಳನ್ನು ತೆಗೆದುಕೊಂಡಿತ್ತು. ಬಳಿಕ ಅಂದಾಜು 2,56,161 ರೂ. ಗಡಿದಾಟಲು ಕೇವಲ 5 ವರ್ಷಗಳನ್ನಷ್ಟೇ ತೆಗೆದುಕೊಂಡಿದೆ. ಇದು ಮೂರು ವರ್ಷದ ಅವಧಿಯಲ್ಲಿ 3,41,549 ರೂ.ಗೆ ಏರಬಹುದು ಎಂದು ಅಂದಾಜು 3,41,549 ರೂ.ಗೆ ಹೆಚ್ಚಬಹುದು ಎನ್ನಲಾಗಿದೆ. ಇದನ್ನೂ ಓದಿ: ‘ಆಪಲ್’ ಮೇಲೆ ಟ್ರಂಪ್ ಟ್ಯಾರಿಫ್ ಎಫೆಕ್ಟ್; ಮುಂದಿನ ಐಫೋನ್ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?
ಗೋಲ್ಡ್ಮನ್ ಸ್ಯಾಚ್ಸ್ ತನ್ನ 2025 ರ ಅಂತ್ಯದ ಚಿನ್ನದ ಬೆಲೆ ಮುನ್ಸೂಚನೆಯನ್ನು $3,300 ರಿಂದ $3,700ಗೆ, $3,650-$3,950 ರ ಯೋಜಿತ ಶ್ರೇಣಿಯೊಂದಿಗೆ ಹೆಚ್ಚಿಸಿತು. ‘ಕಳೆದ ನಾಲ್ಕು ವರ್ಷಗಳಲ್ಲಿ ಚಿನ್ನವು ವಾರ್ಷಿಕವಾಗಿ 24-25 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣೆಯ ನಂತರ, ಚಿನ್ನ ಮತ್ತಷ್ಟು ವಿಜೃಂಭಿಸುತ್ತಿದೆ. ಜಾಗತಿಕವಾಗಿ ಸೂಕ್ಷ್ಮ ಮತ್ತು ಸ್ಥೂಲ ರಂಗಗಳಲ್ಲಿ ಸುಂಕದ ಮೇಲಿನ ಅನಿಶ್ಚಿತತೆಯಿಂದಾಗಿ, ಚಿನ್ನವು ತುಂಬಾ ಪ್ರಬಲವಾಗಿ ಕಾಣುತ್ತದೆ. ಅನಿಶ್ಚಿತತೆ ಇದ್ದಾಗಲೆಲ್ಲಾ ಚಿನ್ನವು ಸುರಕ್ಷಿತ ಧಾಮ ಆಸ್ತಿ ಎಂದೇ ಪರಿಗಣಿತವಾಗಿದೆ’ ಎಂದು ಮೋತಿಲಾಲ್ ಒಸ್ವಾಲ್ ಫಿನಾಲ್ಸಿಯಲ್ ಸರ್ವಿಸಸ್‌ನ ರಿಸರ್ಚ್ ಕಮಾಡಿಟಿಸ್‌ನ ಮುಖ್ಯಸ್ಥ ನವನೀತ್ ದಮಾನಿ ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದತ್ತ ಕೇಂದ್ರೀಯ ಬ್ಯಾಂಕ್‌ಗಳ ಚಿತ್ತ
ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಮೀಸಲುಗಳಲ್ಲಿ ಅಮೆರಿಕ ಡಾಲರ್‌ಗಳ ಪಾಲನ್ನು (ಯುಎಸ್ ಮೀಸಲು ನಿಧಿ) ಕಡಿಮೆ ಮಾಡಲು ಮುಂದಾಗಿವೆ. ಬದಲಾಗಿ ಚಿನ್ನವನ್ನು ಖರೀದಿಸುತ್ತಿವೆ. ಇದು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಟ್ರಂಪ್ ಪ್ರತಿಸುಂಕ ವಿಧಿಸಿದಾಗಿನಿಂದ ಮಾರುಕಟ್ಟೆ ವಲಯದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದೆ. ಹೀಗಾಗಿ, ಜಾಗತಿಕ ಹೂಡಿಕೆದಾರರು, ಯುಎಸ್ ಟ್ರೆಷರಿ ಬಿಲ್ ನಮಗೆ ಸಮಸ್ಯೆ ತಂದೊಡ್ಡದ ಆಸ್ತಿಯಾಗಿ ಅರ್ಹತೆ ಪಡೆದಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೂಡಿಕೆದಾರರು ಚಿನ್ನದ ಕಡೆಗೆ ಹೆಚ್ಚಿನ ಒಲವು ತೋರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ
ಈಗ ಚಿನ್ನದ ಬೆಲೆ ಎಷ್ಟಿದೆ?
ದಿನ ಕಳೆದಂತೆ ಚಿನ್ನದ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂಗೆ 8,945 ರೂ. ಇದೆ. 24 ಕ್ಯಾರೆಟ್ 1 ಗ್ರಾಂ ಬೆಲೆ 9,758 ಕ್ಕೆ ಏರಿಕೆ ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಈಗಿನ ದರ 89,450 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 97,580 ರೂ.ಗೆ ಏರಿದೆ.
ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕ (Karnataka) ರಾಜ್ಯದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬಂಡವಾಳ ಹೂಡಿಕೆ (Investment) ವಿಚಾರದಲ್ಲಿ ಕರ್ನಾಟಕ ದೇಶದ ಇತರ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು. ಇದನ್ನೂ ಓದಿ : ರಕ್ಷಣಾ ಒಪ್ಪಂದ – ಭಾರತಕ್ಕೆ ಅಮೆರಿಕದ F-35 ಯುದ್ಧ ವಿಮಾನ
ಅರಮನೆ ಮೈದಾನದಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ 2025 (Invest Karnataka 2025) ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಲ್ಲಿ ಈ ಸಮಾವೇಶದಲ್ಲಿ ಅನೇಕ ಒಪ್ಪಂದಗಳು, ಚರ್ಚೆಗಳು ನಡೆದಿವೆ. ನೀವೆಲ್ಲರೂ ಕರ್ನಾಟಕ ರಾಜ್ಯದಲ್ಲಿ ಸೋಲುವ ಮಾತಿಲ್ಲ. ಹೀಗಾಗಿ ಈ ರಾಜ್ಯದ ಮೇಲೆ ನೀವು ವಿಶ್ವಾಸವಿಡಬಹುದು. ಈ ರಾಜ್ಯಕ್ಕೆ ಬಂದವರು ಬರಿಗೈಯಲ್ಲಿ ಹೋಗುವುದಿಲ್ಲ. ಈ ಸಮಾವೇಶದಲ್ಲಿ ಭಾಗವಹಿಸಿದ ಸಜ್ಜನ್ ಜಿಂದಾಲ್, ಆನಂದ್ ಮಹೀಂದ್ರಾ ಅವರ ಮಾತು ಕೇಳಿದ್ದೀರಿ. ಅವರ ಯೋಶೋಗಾಥೆ ಕೇಳಿದ್ದೀರಿ. ಇವರ ಮಾತು ಕೇಳಿದ ನಂತರ ವಿಶ್ವ ಭಾರತವನ್ನು ಬೆಂಗಳೂರು ಹಾಗೂ ಕರ್ನಾಟಕದ ಮೂಲಕ ನೋಡುತ್ತಿದೆ ಎಂದರು.
ನಿಮ್ಮ ಕರ್ನಾಟಕ ರಾಜ್ಯ ಹಾಗೂ ದೇಶದ ಭವಿಷ್ಯಕ್ಕಾಗಿ ನೀವು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು. ಇದು ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ ಮಾತ್ರವಲ್ಲ ಬೆಂಗಳೂರಿನ ಹೊರತಾಗಿ ಪ್ರಗತಿ ಸಾಧಿಸಲು ನಾವು ಗುರಿ ಹೊಂದಿದ್ದೇವೆ. ನಮ್ಮ ರಾಜ್ಯದಲ್ಲಿ ಏರೋಸ್ಪೇಸ್ ಕ್ಷೇತ್ರದಲ್ಲಿ ನಮ್ಮ ಎಂಎಸ್‌ಎಂಇಗಳು ದೊಡ್ಡ ಶಕ್ತಿ ತುಂಬುತ್ತಿವೆ. ಬಾಹ್ಯಾಕಾಶ ಕ್ಷೇತ್ರದ ಸಾಧನೆಗೆ ರಾಕೆಟ್‌ಗಳನ್ನು ನಮ್ಮ ಪೀಣ್ಯ ಕೈಗಾರಿಕಾ ಪ್ರದೇಶದಲ್ಲೇ ತಯಾರು ಮಾಡಿದ್ದೆವು ಎಂದು ಹೇಳಿದರು.
ನೆಹರೂ ಅವರ ಕಾಲದಿಂದ ದೊಡ್ಡ ಕೈಗಾರಿಕೆಗಳು ಆರಂಭವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿವೆ. ದೇಶದ ದೊಡ್ಡ ಕಂಪನಿಗಳು ನಮ್ಮ ರಾಜ್ಯದ ನೀತಿಗಳು, ಸ್ನೇಹ ಸಂಬಂಧವನ್ನು ಮೆಚ್ಚಿ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಸೇರಿ ಭವಿಷ್ಯದತ್ತ ಹೆಜ್ಜೆ ಹಾಕೋಣ. ಈ ಸಮಾವೇಶದ ಮೂಲಕ ರಾಜ್ಯಕ್ಕೆ 10 ಲಕ್ಷ ಕೋಟಿ ರೂ. ಗುರಿ ಹೊಂದಿದೆ. ನಮ್ಮ ನೂತನ ಕೈಗಾರಿಕಾ ನೀತಿಯು ಬೆಂಗಳೂರಿನ ಹೊರತಾಗಿ ರಾಜ್ಯದ ಇತರ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಅಂತ ಭರವಸೆ ನೀಡಿದರು.
ಸಚಿವ ಹೆಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಪ್ರವಾಸೋದ್ಯಮ ನೀತಿ ಪ್ರಕಟಿಸಿದೆ. ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿ 300 ಕಿ.ಮೀ ಕರಾವಳಿ ಪ್ರದೇಶವಿದ್ದು, ಈ ಭಾಗದಲ್ಲಿ ನಮ್ಮ ಐತಿಹಾಸಿಕ ಸ್ಥಳಗಳನ್ನು ಉಳಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗುವುದು. ಕರ್ನಾಟಕ ರಾಜ್ಯ ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ರೂಪಿಸಿದೆ. ಈ ಸಮಾವೇಶ ನಮ್ಮ ರಾಜ್ಯ ಜಾಗತಿಕ ಮಟ್ಟದಲ್ಲಿ ವ್ಯಾಪಾರ ವ್ಯವಹಾರ ಮಾಡುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ನಾವು ದೇಶದ ಇತರೆ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಇದು ನಮ್ಮ ಸಾಮರ್ಥ್ಯ ಎಂದು ತಿಳಿಸಿದರು. ಇದನ್ನೂ ಓದಿ :ಬೆಂಗಳೂರು | 5 ಕೋಟಿ ವೆಚ್ಚದಲ್ಲಿ ಬೀದಿನಾಯಿಗಳಿಗೆ ವ್ಯಾಕ್ಸಿನ್‌ಗೆ ಬಿಬಿಎಂಪಿ ಪ್ಲ್ಯಾನ್!
ಈ ದೇಶದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆರಂಭಿಸಿದ್ದೆ ಎಸ್.ಎಂ ಕೃಷ್ಣ ಅವರ ಸರ್ಕಾರ ಕರ್ನಾಟಕದಲ್ಲಿ. ಈ ಸಮಾವೇಶ ಕೇವಲ ಆರಂಭವಷ್ಟೇ, ಇಲ್ಲಿಂದ ನಿಮಗೆ ಅವಕಾಶಗಳು ತೆರೆದುಕೊಳ್ಳಲು ಆರಂಭವಾಗುತ್ತವೆ. ವರ್ಷದ 365 ದಿನಗಳು ಕೂಡ ನಿಮಗಾಗಿ ನಾವು ಬಾಗಿಲು ತೆರೆದಿರುತ್ತೇವೆ. ನೀವು ಯಾವಾಗ ಬಂದರೂ ನಾವು ನಿಮಗೆ ಅಗತ್ಯ ನೆರವು ನೀಡಿ ನಿಮ್ಮ ಪ್ರಗತಿ, ಕರ್ನಾಟಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ. ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಈ ಸಮಾವೇಶ ಯಶಸ್ವಿಯಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ನಾನು ಅಭಿನಂದನೆ ಎಂದು ಕೃತಜ್ಞತೆ ಸಲ್ಲಿಸಿದರು.
ಮಡಿಕೇರಿ: ರಿಯಲ್ ಎಸ್ಟೇಟ್ ಮಾಫಿಯಾದಿಂದ (Real Estate Mafia) ಮನನೊಂದು ಉದ್ಯಮಿಯೊಬ್ಬರು ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹೊನ್ನೂರ್ ಕಾವಲ್ ನಲ್ಲಿ ಬುಧವಾರ ಸಂಜೆ ನಡೆದಿದೆ. ಪ್ರಕರಣ ಸಂಬಂಧ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೊಡಗಿನ ಕುಶಾಲನಗರದಲ್ಲಿ (Kushalnagar) ಉದ್ಯಮ ನಡೆಸುತ್ತಿದ್ದ ಮೂಲತಃ ಕೊಪ್ಪ ನಿವಾಸಿ ಸುರೇಶ್ (40) ಹಾಗೂ ಅವರ ಪತ್ನಿ ಪಲ್ಲವಿ (28) ಆತ್ಮಹತ್ಯೆಗೆ ಶರಣಾದವರು. ಕೊಪ್ಪ ನಿವಾಸಿ ಜಯಣ್ಣ ಅವರ ಪುತ್ರ ಸುರೇಶ್ ತನ್ನ ಪತ್ನಿಯನ್ನು ದೇವಸ್ಥಾನಕ್ಕೆಂದು ಹೇಳಿ ದೊಡ್ಡಹೊನ್ನೂರು ಕಾವಲ್‌ನ ಜಮೀನಿನ ಹಳೆಯ ಖಾಲಿ ಮನೆಗೆ ಕರೆತಂದಿದ್ದು ಅಲ್ಲಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: 39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ
ರಿಯಲ್ ಎಸ್ಟೇಟ್ ಮಾಫಿಯಾ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಮೃತ ಸುರೇಶ್ ಆತ್ಮಹತ್ಯೆಗೆ ಕಾರಣರಾದವರ ಹೆಸರನ್ನ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ 12 ಮಂದಿ ವಿರುದ್ಧ ಕರಣ ದಾಖಲಾಗಿದೆ. ಮೃತ ದಂಪತಿ ಮರಣೋತ್ತರ ಪರೀಕ್ಷೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಇದನ್ನೂ ಓದಿ: ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು
ಈ ನಡುವೆ ಗುರುವಾರ (ಇಂದು) ಮಧ್ಯಾಹ್ನ ಮೃತದೇಹಗಳನ್ನು ಮುಂದಿಟ್ಟು ಮೃತನ ಸಂಬಂಧಿಕರು, ಸ್ನೇಹಿತರು ಹಾಗೂ ಕುಶಾಲನಗರ, ಕೊಪ್ಪ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಶವಾಗಾರದ ಮುಂಭಾಗ ದಂಪತಿಗಳ ಸಾವಿಗೆ ಕಾರಣರಾದ ರಿಯಲ್ ಎಸ್ಟೇಟ್ ಮಾಫಿಯಾಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ಆಗ್ರಹಿಸಿದರು. ಆರೋಪಿಗಳು ಪ್ರಭಾವ ಶಾಲಿಗಳಾಗಿದ್ದು ಹಲವರಿಗೆ ವಂಚನೆ ಎಸಗಿದ್ದಾರೆ. ಇದರಿಂದ ಅಮಾಯಕ ದಂಪತಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಆರೋಪಿಗಳನ್ನು ಕೂಡಲೆ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಪೊಲೀಸರನ್ನು ಒತ್ತಾಯಿಸಿದರು. ಇದನ್ನೂ ಓದಿ: ಕೊಡಗಿನಲ್ಲಿ ಹೆಚ್ಚಾದ ಕಾಡು ಪ್ರಾಣಿಗಳ ಹಾವಳಿ – ಜೀವ ಭಯದಲ್ಲಿ ದಿನ ಕಳೆಯುತ್ತಿರುವ ಜನ
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಸುರೇಶ್ ಅವರ ಸ್ನೇಹಿತ ಕೆ.ಜಿ ಮನು, ಸುರೇಶ್ ನಡೆಸುತ್ತಿದ್ದ ವ್ಯವಹಾರದಲ್ಲಿ ಕೆಲವರು ಮೂಗು ತೂರಿಸಿ ದ್ರೋಹ ಮಾಡಿದ್ದಾರೆ. ಕುಶಾಲನಗರ ಸರ್ಕಾರಿ ಡಿಗ್ರಿ ಕಾಲೇಜು ಬಳಿ ಬಡಾವಣೆ ನಿರ್ಮಾಣಕ್ಕೆ ಜಾಗವೊಂದನ್ನು ಅಭಿವೃದ್ದಿಪಡಿಸುತ್ತಿದ್ದರು. ಸುರೇಶ್ ವ್ಯವಹಾರಕ್ಕೆ ಅಡ್ಡಗಾಲು ಹಾಕಿದ ರಿಯಲ್ ಎಸ್ಟೇಟ್ ಮಾಫಿಯಾದ ಕೆಲವರು ಮಾಲೀಕರಿಗೆ ಹೆಚ್ಚಿನ ಲಾಭದ ಆಮೀಷವೊಡ್ಡಿ ಆತನಿಂದ ವ್ಯವಹಾರ ಕಸಿದುಕೊಂಡಿದ್ದಾರೆ. ಇದರಿಂದ ಹೂಡಿಕೆ ಮಾಡಿದ್ದ ಹಣ ಕಳೆದುಕೊಂಡು ಇತ್ತ ಜಾಗವೂ ಇಲ್ಲದೇ ಮನನೊಂದು ಕೊನೆಗೇ ಯಾವುದೇ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಕಾರಣರಾದ ಜಾಗ ಮಾಲೀಕರು ಹಾಗೂ ಸಂಬಂಧಿಸಿದವರಿಗೆ ಸೂಕ್ತ ಕಾನೂನು ಕ್ರಮ ಆಗಬೇಕಿದೆ ಎಂದು ಆಗ್ರಹಿಸಿದರು.
ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಸಾಕಷು ಹಣವನ್ನು ಉಳಿತಾಯ ಮಾಡಲು ಹಾಗೂ ಹೂಡಿಕೆ (Investment) ಮಾಡಲು ಬಯಸುತ್ತಾರೆ. ಈ ಮೂಲಕ ಬೇಗನೆ ನಿವೃತ್ತರಾಗಲು ಬಯಸುತ್ತಾರೆ. ಇಲ್ಲೊಬ್ಬ ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ (Google Software Engineer) ತನ್ನ 22 ವಯಸ್ಸಿನಲ್ಲಿ ವೃತ್ತಿಯನ್ನು ಪ್ರಾರಂಭಿಸುತ್ತಲೇ ತಮ್ಮ 35ನೇ ವಯಸ್ಸಿನೊಳಗೆ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂ.) ಹೂಡಿಕೆ ಮಾಡಿ, ನಿವೃತ್ತಿ (Retirement) ಹೊಂದುವ ಗುರಿಯನ್ನು ಹೊಂಡಿದ್ದಾರೆ. ಅವರ ಫ್ಯೂಚರ್ ಪ್ಲ್ಯಾನ್ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.
ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 22 ವರ್ಷದ ಎಥಾನ್ ನ್ಗುನ್ಲಿ (Ethan Nguonly) ಇಂತಹ ಒಂದು ಯೋಜನೆಯನ್ನು ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯಲ್ಲಿ ವಾಸವಿರೋ ಟೆಕ್ಕಿ ತನ್ನ ಹಣವನ್ನು ಉಳಿತಾಯ ಮಾಡುವುದಕ್ಕಿಂತ ಹೆಚ್ಚಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದರ ಮಹತ್ವದ ಬಗ್ಗೆ ತನ್ನ ಹೆತ್ತವರು ಹೇಗೆ ಪ್ರೋತ್ಸಾಹ ನೀಡಿದರು ಎಂದು ವಿವರಿಸಿದ್ದಾರೆ.
ನೀವು ನಿಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟು ಬಿಟ್ಟರೆ ಅದು ಯಾವುದೇ ಕೆಲಸಕ್ಕೂ ಬರಲ್ಲ. ಕಾಲಾನಂತರ ಅದು ನಿಷ್ಪ್ರಯೋಜಕ ಆಗಿಬಿಡುತ್ತದೆ. ಆದರೆ ನಿಮ್ಮ ಹಣದಿಂದ ಏನಾದರೂ ಪ್ರಯೋಜನ ಆಗಬೇಕೆಂದರೆ ಅದನ್ನು ಹೂಡಿಕೆ ಮಾಡಿ ಎಂದು ಪೋಷಕರು ತನಗೆ ತಿಳಿಸಿದ್ದಾಗಿ ನ್ಗುನ್ಲಿ ಹೇಳಿದ್ದಾರೆ.
ನಾನು ಚಿಕ್ಕವನಿದ್ದಾಗಲೇ ಯೋಚಿಸುತ್ತಿದ್ದ ಮುಖ್ಯ ವಿಷಯವೆಂದರೆ, ಈ ಹಣ ಎಲ್ಲಾ ದೊಡ್ಡದಾಗುತ್ತಾ ಹೋಗುತ್ತದೆ, ಬೆಳೆಯುತ್ತಲೇ ಇರುತ್ತದೆ. ಆದರೆ ಇದಕ್ಕಾಗಿ ನಾವು ಯಾವುದೇ ಕೆಲಸ ಮಾಡುವ ಅಗತ್ಯವೇ ಇಲ್ಲ. ಇದು ನಿಜವಾಗಿಯೂ ನನ್ನ ಹಣವನ್ನು ಹೂಡಿಕೆಗಳಲ್ಲಿ ವಿನಿಯೋಗಿಸಬಹುದು ಎಂಬ ನನ್ನ ಕಲ್ಪನೆಯನ್ನು ಬಹಿರಂಗಪಡಿಸಿತು. ಅದಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡೋ ಬದಲು ಅದನ್ನು ಹೂಡಿಕೆ ಮಾಡುವುದೇ ಉತ್ತಮ ಎಂದು ಹೇಳಿದರು.
ನ್ಗುನ್ಲಿ ಇಂತಹ ಯೋಜನೆಯೊಂದಿಗೆಯೇ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇದಕ್ಕಾಗಿ ಅವರು ಯಾವುದೇ ಸಾಲ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ನಂತರ ಅವರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ ಮಾಹಿತಿ ಹಾಗೂ ಡೇಟಾ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿದರು. 2022ರ ಆಗಸ್ಟ್‌ನಲ್ಲಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಸ್ನಾತಕೋತ್ತರ ಪದವಿ ಪಡೆಯುವುದಕ್ಕೂ ಮೊದಲೇ ನ್ಗುನ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.
ನ್ಗುನ್ಲಿ ವಾರ್ಷಿಕ ಆದಾಯ 194,000 ಡಾಲರ್ (ಸುಮಾರು 1.60 ಕೋಟಿ ರೂ.). ಪ್ರಸ್ತುತ ಅವರು ತಮ್ಮ ನಿವೃತ್ತಿ ಹಾಗೂ ಇತರ ಹೂಡಿಕೆ ಖಾತೆಗಳಲ್ಲಿ ಹಾಗೂ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದ ಮನೆಗಳಲ್ಲಿ 135,000 ಡಾಲರ್ (ಸುಮಾರು 1.11 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. ತಮ್ಮ ವೇತನದಲ್ಲಿ ಅವರು 35% ರಷ್ಟು ಹೂಡಿಕೆಗಳಲ್ಲಿ ವಿನಿಯೋಗಿಸಲು ಮುಂದಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್‌ನಲ್ಲೂ ವಿನಿಯೋಗಿಸಲು ಯೋಜಿಸಿದ್ದಾರೆ. ಇದನ್ನೂ ಓದಿ: ಪಾಕ್, ಚೀನಾಗೆ ಠಕ್ಕರ್ ಕೊಡಲು ʻಇಂದ್ರಜಾಲ್ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್ ಅನಾವರಣ
ನ್ಗುನ್ಲಿ ಊಟಕ್ಕಾಗಿ ಹೆಚ್ಚೇನೂ ಖರ್ಚು ಮಾಡಲ್ಲ. ಏಕೆಂದರೆ ಗೂಗಲ್ ಉಚಿತ ಊಟ, ಉಪಹಾರ ನೀಡುತ್ತದೆ. ಬ್ರ್ಯಾಂಡೆಡ್ ಬಟ್ಟೆಗಳಿಗಾಗಿ ಹೆಚ್ಚಿನ ಖರ್ಚು ಮಾಡಲ್ಲ. ಬದಲಿಗೆ ಸರಳ ಹಾಗೂ ಕೈಗೆಟಕೋ ಬೆಲೆಯಲ್ಲಿ ಸಿಗುವ ಬಟ್ಟೆಗಳಲ್ಲಿ ಧರಿಸಲು ಇಷ್ಟ ಪಡುತ್ತಾರೆ. ಪ್ರಯಾಣವನ್ನು ಹೆಚ್ಚು ಇಷ್ಟಪಡೋ ಅವರು ವರ್ಷಕ್ಕೆ 3-4 ಬಾರಿ ಪ್ರವಾಸ ಹೋಗುತ್ತಾರೆ. ಐಷಾರಾಮಿ ವಸತಿಗೆ ಹಣ ವ್ಯಯಿಸುವ ಬದಲು ಕಡಿಮೆ ವೆಚ್ಚದ ಆಯ್ಕೆಗಳನ್ನು ಮಾಡುತ್ತಾರೆ.
5 ಮಿಲಿಯನ್ ಡಾಲರ್‌ನೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯೋ ಗುರಿಯನ್ನು ತಲುಪಲು ನ್ಗುನ್ಲಿ ತಮ್ಮ ನಿವೃತ್ತಿ ಖಾತೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲು ಯೋಜಿಸಿದ್ದಾರೆ. ಪ್ರತಿ 2 ವರ್ಷಗಳಿಗೊಮ್ಮೆ ಹೊಸ ಆಸ್ತಿಯನ್ನು ಖರೀದಿ ಮಾಡುವ ಮೂಲಕ ತಮ್ಮ ರಿಯಲ್ ಎಸ್ಟೇಟ್ ಪೋರ್ಟ್ಫೋಲಿಯೋಗೆ ಸೇರಿಸುತ್ತಾರೆ. ನಾನು 67ನೇ ವಯಸ್ಸಿನಲ್ಲಿ ಪರ್ವತ ಏರಲು ಬಯಸಲ್ಲ. ಬದಲಿಗೆ ಎಲ್ಲಿಯವರೆಗೆ ಯುವಕನಾಗಿ, ಆರೋಗ್ಯವಾಗಿರುತ್ತೇನೋ ಅಲ್ಲಿಯವರೆಗೆ ಪ್ರಯಾಣವನ್ನು ಮಾಡಿ ಅನುಭವ ಪಡೆಯುತ್ತೇನೆ ಎಂದು ನ್ಗುನ್ಲಿ ಹೇಳುತ್ತಾರೆ. ಇದನ್ನೂ ಓದಿ: ದೇಶದಲ್ಲಿ ಲ್ಯಾಪ್‌ಟಾಪ್ ತಯಾರಿಸಲು 32 ಕಂಪನಿಗಳಿಂದ ಅರ್ಜಿ – 75 ಸಾವಿರ ಉದ್ಯೋಗ ಸೃಷ್ಟಿ
ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಲೆಜೆಂಡ್ ಎಂದೇ ಗುರುತಿಸಿಕೊಂಡಿರುವ ಟೀಂ ಇಂಡಿಯಾ (Team India) ಮಾಜಿ ನಾಯಕ ಹಾಗೂ ಸಿಎಸ್‌ಕೆ ತಂಡದ ನಾಯಕ ಎಂ.ಎಸ್ ಧೋನಿ (MS Dhoni) ಗ್ರೌಂಡ್ ಹೊರಗೂ ದಾಖಲೆ ಬರೆದಿದ್ದಾರೆ.
ಹೌದು. ಇನ್‌ಸ್ಟಾಗ್ರಾಮ್‌ನಲ್ಲಿ 4.4 ಕೋಟಿ ಹಾಗೂ ಟ್ವಿಟ್ಟರ್‌ನಲ್ಲಿ 80.8 ಲಕ್ಷ ಅಭಿಮಾನಿಗಳನ್ನ ಸಂಪಾದಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನೆಚ್ಚಿನ ನಾಯಕನಾಗಿ ಉಳಿದಿದ್ದಾರೆ. ಈಗ ಅವರ ಆಸ್ತಿಯ ಮೌಲ್ಯ 1 ಸಾವಿರ ಕೋಟಿ ರೂ.ಗೂ ಹೆಚ್ಚಾಗಿದೆ. ಇದನ್ನೂ ಓದಿ: ಸಾಕು ನಾಯಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ – ವೀಡಿಯೋ ಹಂಚಿಕೊಂಡ ಧೋನಿ
ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಯಾದ ಸ್ಟಾಕ್ ಗ್ರೋ (Stock Gro) ಪ್ರಕಾರ, ಧೋನಿ ಅವರ ಒಟ್ಟು ಆಸ್ತಿ ಮೌಲ್ಯ 1,040 ಕೋಟಿ ಇದೆ. ಆದ್ರೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಆಸ್ತಿ ಧೋನಿ ಅವರ ಆಸ್ತಿ (1,050 ಕೋಟಿ) ಮೌಲ್ಯಕ್ಕಿಂತಲೂ ಜಾಸ್ತಿ ಇದೆ ಎಂದು ಅಂದಾಜಿಸಿದೆ.
42 ವರ್ಷದ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಆಡುತ್ತಿದ್ದು, ಒಪ್ಪಂದದ ಪ್ರಕಾರ ಪ್ರತಿ ಸೀಸನ್‌ಗೆ 12 ಕೋಟಿ ಪಡೆಯುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ನಿಂದ ಪ್ರತಿ ಪೋಸ್ಟ್ಗೆ 1 ಕೋಟಿ, ಟ್ವಿಟ್ಟರ್‌ನಿಂದ 2 ಕೋಟಿ ರೂ. ಆದಾಯ ಬರಲಿದೆ. ಅಲ್ಲದೇ ಡೆಹ್ರಾಡೂನ್‌ನಲ್ಲಿ 17.8 ಕೋಟಿ ಮೌಲ್ಯದ ಮನೆ ಹಾಗೂ ರಾಂಚಿಯಲ್ಲಿ ದುಬಾರಿ ಫಾರ್ಮ್ಹೌಸ್ ಹೊಂದಿದ್ದಾರೆ. ಇದರೊಂದಿಗೆ ಮಹಿ, `ಧೋನಿ ಎಂಟರ್‌ಟೈನ್ಮೆಂಟ್ ಪ್ರೊಡಕ್ಷನ್ ಹೌಸ್, ಹೋಟೆಲ್ ಮಹಿ ರೆಸಿಡೆನ್ಸಿ, ಬೆಂಗಳೂರಿನಲ್ಲಿ ಎಂ.ಎಸ್ ಧೋನಿ ಗ್ಲೋಬಲ್ ಸ್ಕೂಲ್ ಅನ್ನು ಸಹ ಹೊಂದಿದ್ದಾರೆ.
ಜೊತೆಗೆ ಕೋಲ್ಗೇಟ್, ಓರಿಯೊ, ವಯೋಕಾಮ್, ಲಾವಾ, ಪೆಪ್ಸಿಕೋ, ಡ್ರೀಮ್-11, ರಿಬಾಕ್ ಸೇರಿದಂತೆ ಪ್ರಮುಖ 28 ಜಾಹೀರಾತು ಸಂಸ್ಥೆಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. 6 ಸ್ಪೋಟ್ಸ್ ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಕವಾಸಕಿ, ಸುಜುಕಿ ಸೇರಿದಂತೆ 5 ದುಬಾರಿ ಬೈಕ್‌ಗಳು ಹಾಗೂ ದುಬಾರಿ ಕಾರುಗಳನ್ನು ಮಹಿ ಹೊಂದಿದ್ದು ಒಟ್ಟು ಆಸ್ತಿ ಮೌಲ್ಯ 1,040 ಕೋಟಿ ಇದೆ ಎಂದು ಸ್ಟಾಕ್ ಗ್ರೋ ಅಂದಾಜಿಸಿದೆ. ಇದನ್ನೂ ಓದಿ: MSDಗೆ 42ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳಿಂದ KGF ರೇಂಜ್‌ನ ಟ್ರೈಲರ್ ರಿಲೀಸ್!
ಕೆಲವು ದಿನಗಳ ಹಿಂದೆಯಷ್ಟೇ ಸ್ಟಾಕ್ ಗ್ರೋ ಹೂಡಿಕೆ ಸಂಸ್ಥೆ ಕೊಹ್ಲಿ ಅವರ ಆಸ್ತಿ ಮೌಲ್ಯವನ್ನು ಅಂದಾಜಿಸಿತ್ತು. 34 ವರ್ಷದ ಕೊಹ್ಲಿ 2023ರ ವಾರ್ಷಿಕ ಒಪ್ಪಂದದ ಪ್ರಕಾರ `ಎ+ ಶ್ರೇಣಿಯಲ್ಲಿ ಆಯ್ಕೆಯಾಗಿದ್ದು ವಾರ್ಷಿಕ 7 ರೂ. ವಾರ್ಷಿಕ ಸಂಭಾವನೆ ಪಡೆಯುತ್ತಾರೆ. ಈ ಪೈಕಿ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಹಾಗೂ ಖಿ20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ. ಅಲ್ಲದೇ ಸಿಎಸ್‌ಕೆಯ ಮಾಜಿ ನಾಯಕಾಗಿರುವ ಅವರು ಐಪಿಎಲ್ ಒಂದು ಸೀಸನ್‌ಗೆ 15 ಕೋಟಿ ರೂ. ಗಳಿಸುತ್ತಾರೆ. ಜೊತೆಗೆ ಬ್ಲೂ ಟ್ರೈಬ್, ಯುನಿವರ್ಸಲ್ ಸ್ಪೋರ್ಟ್ಸ್ ಬಿಝ್, ಎಂಪಿಎಲ್ ಮತ್ತು ಸ್ಪೋರ್ಟ್ಸ್ ಕಾನ್ವೊ ಸೇರಿದಂತೆ 7 ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಅಲ್ಲದೇ 18 ಸಂಸ್ಥೆಗಳ ಜಾಹೀರಾತುಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿರುವ ಕಿಂಗ್ ಕೊಹ್ಲಿ ಪ್ರತಿ ಬ್ರ್ಯಾಂಡ್‌ನ ಜಾಹೀರಾತಿಗೂ 7.50 ಕೋಟಿ ರೂ. ನಿಂದ 10 ಕೋಟಿ ರೂ. ಪಡೆಯುತ್ತಾರೆ. ಇದರಿಂದಲೇ ಅವರು ವಾರ್ಷಿಕವಾಗಿ ಸುಮಾರು 175 ಕೋಟಿ ರೂ. ಗಳಿಸುತ್ತಾರೆ. ಅಷ್ಟೇ ಅಲ್ಲ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ನಿಂದ 8.9 ಕೋಟಿ ರೂ., ಒಂದು ಟ್ವಿಟ್ಟರ್ ಪೋಸ್ಟ್ನಿಂದ 2.5 ಕೋಟಿ ಗಳಿಸುತ್ತಾರೆ ಎಂದು ಪ್ರಕಟಿಸಿತ್ತು.
ಆಸ್ತಿಗಳ ಮೇಲೂ ಸಾಕಷ್ಟು ಹೂಡಿಕೆ ಮಾಡಿರುವ ಕೊಹ್ಲಿ ಮುಂಬೈನಲ್ಲಿ 34 ಕೋಟಿ ರೂ. ಬೆಲೆ ಬಾಳುವ ಹಾಗೂ ಗುರುಗ್ರಾಮದಲ್ಲಿ 80 ಕೋಟಿ ರೂ. ಮೌಲ್ಯದ ಮನೆಯನ್ನ ಹೊಂದಿದ್ದಾರೆ. 31 ಕೋಟಿ ರೂ. ಮೌಲ್ಯದ ಲಕ್ಷುರಿ ಕಾರನ್ನೂ ಹೊಂದಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ವೇಳೆ ಕಛ್ ಜಿಲ್ಲೆಯಲ್ಲಿಂದು ಸುಮಾರು 4,400 ಕೋಟಿ ಮೊತ್ತದ ಯೋಜನೆಗಳಿಗೆ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಅಲ್ಲದೇ 2001ರ ಜನವರಿ 21ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಭೂಕಂಪದ ಸಂತ್ರಸ್ತರ ಸ್ಮರಣಾರ್ಥವಾಗಿ ನಿರ್ಮಿಸಿರುವ `ಸ್ಮೃತಿ ವನ ಸ್ಮಾರಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಕೊಹ್ಲಿಯ ಈ ಸಾಧನೆಗೂ ಮುನ್ನವೇ ವಿಶ್ ಮಾಡಿದ ದೋಸ್ತಿ ABD
Here are some more glimpses from Smriti Van. It is my request to my fellow Indians to come to Smriti Van and Kutch. It would be an experience of a lifetime. pic.twitter.com/1RCFyTnG5a
There is agricultural success and industrial growth, there is innovation and better education…the development journey of Kutch is inspiring. pic.twitter.com/eonbFum09P
ದೇಶದಲ್ಲೇ ಮೊದಲ ಬಾರಿಗೆ ವಿಪತ್ತು ನಿರ್ವಹಣಾ ಕಾಯ್ದೆಯನ್ನು ರೂಪಿಸಿದ ರಾಜ್ಯ ಗುಜರಾತ್. ಕೋವಿಡ್ ಸಾಂಕ್ರಾಮಿಕ ನಿರ್ವಹಣೆ ವೇಳೆಯೂ ಆ ಕಾಯ್ದೆ ಉತ್ತೇಜನಕಾರಿ ಆಗಿತ್ತು. ಬಂಡವಾಳಕ್ಕೆ ತಡೆ ಒಡ್ಡುವ ಎಲ್ಲಾ ರೀತಿಯ ಸಂಚುಗಳನ್ನೂ ವಿಫಲಗೊಳಿಸಿ ಗುಜರಾತ್ ಮತ್ತು ಕಛ್ ಅಭಿವೃದ್ಧಿ ಹೊಂದಿದವು ಎಂದಿದ್ದಾರೆ.
ಇದೇ ವೇಳೆ ಗುಜರಾತ್‌ನಲ್ಲಿ ಈ ಹಿಂದೆ ಭೂಕಂಪ ಸಂಭವಿಸಿದಾಗ ನರೇಂದ್ರ ಮೋದಿ ಅವರು ಕೇವಲ ಬಿಜೆಪಿ ಕಾರ್ಯಕರ್ತರಾಗಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ದೆಹಲಿಯಿಂದ ಕಛ್‌ಗೆ ಆಗಮಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
ಆಣೆಕಟ್ಟು ವಿರೋಧಿಸುತ್ತಿರುವವರು ನಗರ ನಕ್ಸಲರು: ಇದೇ ವೇಳೆ ಮಾತನಾಡಿದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಜಿಲ್ಲೆಗೆ ನರ್ಮದಾ ನೀರು ಬರುವುದನ್ನು ಕಛ್ ಜನರು ಸಂಭ್ರಮಿಸುತ್ತಿದ್ದಾರೆ. ನಗರ ನಕ್ಸಲರು ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ. ಅವರಲ್ಲಿ ಒಬ್ಬ ನಗರ ನಕ್ಸಲ್ ಮೇಧಾ ಪಾಟ್ಕರ್ ಆಗಿದ್ದಾರೆ. ಅವರನ್ನು ಯಾವ ಪಕ್ಷ ಬೆಂಬಲಿಸುತ್ತಿದೆ ಎಂದೂ ತಿಳಿದಿದೆ ಎಂದು ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬರ್ನ್: ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದ್ದು, ಕರ್ನಾಟಕ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪ್ರಥಮ ಬಾರಿಗೆ 2 ಮಹತ್ವದ ಕಂಪನಿಗಳ ಜೊತೆ ಒಟ್ಟು 52 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.
ಇದು ಕರ್ನಾಟಕ ರಾಜ್ಯದ ಮೇಲೆ ದೊಡ್ಡ ದೊಡ್ಡ ಕಂಪನಿಗಳು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿ. ಇತ್ತೀಚಿನ ದಿನಗಳ ರಾಜ್ಯಕ್ಕೆ ಹರಿದು ಬರುತ್ತಿರುವ ಬಹುದೊಡ್ಡ ಮೊತ್ತದ ಬಂಡವಾಳ ಇದಾಗಿದೆ. ಹಲವಾರು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಂಪನಿಗಳು ಹೂಡಿಕೆ ಮಾಡಲಿರುವ ಬಂಡವಾಳದಿಂದ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಠಿ ಆಗಲಿವೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರ ಆಸಕ್ತಿಯಿಂದ ಸರ್ಕಾರ ಬೃಹತ್ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದನ್ನೂ ಓದಿ: ಪಿಎಸ್‍ಐ ಪರೀಕ್ಷೆ ಅಕ್ರಮ: ಕಿಂಗ್‍ಪಿನ್ ಆರ್.ಡಿ.ಪಾಟೀಲ್ ಮತ್ತೆ ಸಿಐಡಿ ವಶಕ್ಕೆ!
ನವೀಕರಿಸಬಹುದಾದ ಇಂಧನ ವಲಯದಲ್ಲಿ ರೆನ್ಯೂ ಪವರ್ ಕಂಪನಿ 50,000 ಕೋಟಿ ರೂ.ಗಳ ಬಂಡವಾಳ ಹೂಡಲು ಕರ್ನಾಟಕ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕರ್ನಾಟಕದ ಇಂಧನ ಕ್ಷೇತ್ರದಲ್ಲಿ ಈ ಒಪ್ಪಂದ ಪ್ರಮುಖ ಮೈಲಿಗಲ್ಲಾಗಿದೆ. ಮೆ.ಲುಲು ಗ್ರೂಪ್ ಇಂಟರ್ನ್ಯಾಷನಲ್ ಸಂಸ್ಥೆಯು ರಾಜ್ಯದಲ್ಲಿ ಸುಮಾರು 2000 ಕೋಟಿ ರೂ. ಹೂಡಿಕೆ ಮಾಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಯಿತು. ಇವೆರಡೂ ಒಪ್ಪಂದಗಳು ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ.
ಕರ್ನಾಟಕದಲ್ಲಿ ಕೈಗಾರಿಕೆ ಹಾಗೂ ಉದ್ಯಮಗಳ ಸ್ಥಾಪನೆಗೆ ಪೂರಕವಾಗಿ ಎರಡು ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಸಂಶೋಧನೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡುವ ಆರ್ ಎಂಡ್ ಡಿ ಪಾಲಿಸಿ, ಹೆಚ್ಚು ಉದ್ಯೋಗವನ್ನು ಒದಗಿಸುವ ಉದ್ಯಮಗಳಿಗೆ ಹೆಚ್ಚು ಪ್ರೋತ್ಸಾಹಕ ನೀತಿಗಳನ್ನು ಜಾರಿಗೆ ತರಲಾಗಿದೆ. ಈ ಎರಡೂ ನೀತಿಗಳ ಲಾಭಗಳನ್ನು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಸ್ಥೆಗಳು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದ ನವೆಂಬರ್‍ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಪಾಲ್ಗೊಳ್ಳುವಂತೆ ಹೂಡಿಕೆದಾರರಿಗೆ ಆಹ್ವಾನ ನೀಡಲಾಯಿತು.
I am blessed to be born & educated in Karnataka. Blessed that I represent my state & lead it. We have a rich culture & heritage. God has endowed Karnataka with nature’s bounty. We are blessed with rich bio-diversity, having 10 Agro-climatic zones & 300 days of sunshine. #Davos22pic.twitter.com/ThRp4aOCtq
ಮೆ. ಲುಲು ಗ್ರೂಪ್ ಇಂಟರ್ನ್ಯಾಷನಲ್:
ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ. 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ರೆನ್ಯೂ ಪವರ್ ಪ್ರೈ.ಲಿ:
ರೆನ್ಯೂ ಪವರ್ ಪ್ರೈ.ಲಿ. ಕಂಪೆನಿಯು ರಾಜ್ಯ ಸರ್ಕಾರದೊಂದಿಗೆ 50,000 ಕೋಟಿ ರೂ. ಹೂಡಿಕೆಯ ಒಪ್ಪಂದಕ್ಕೆ ಸಹಿ ಮಾಡಿತು. ಈ ಕಂಪೆನಿಯು ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್, ಗ್ರೀನ್ ಹೈಡ್ರೋಜನ್ ಘಟಕಗಳನ್ನು 2 ಹಂತಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ.
ಮೊದಲ ಹಂತದಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ 11,900 ಕೋಟಿ ರೂ.ಗಳ ಬಂಡವಾಳ ಹೂಡಿ, ಮುಂದಿನ 2 ವರ್ಷಗಳಲ್ಲಿ ಯೋಜನೆಗಳು ಕಾರ್ಯಾರಂಭ ಮಾಡಲಾಗುತ್ತದೆ.
ಎರಡನೇ ಹಂತದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಗ್ರೀನ್ ಹೈಡ್ರೋಜನ್ ಘಟಕಗಳನ್ನು ಮುಂದಿನ 5 ವರ್ಷಗಳಲ್ಲಿ ಸ್ಥಾಪಿಸಲು 37,500 ಕೋಟಿ ರೂ.ಗಳ ಬಂಡವಾಳವನ್ನು ಹೂಡಿಕೆ ಮಾಡಲಾಗುತ್ತದೆ. ಈ ಎರಡು ಹಂತದ ಯೋಜನೆಗಳಿಂದ ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ.
ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ ಸಂಸ್ಥೆಗಳು:
ಸೀಮೆನ್ಸ್ ಸಂಸ್ಥೆ:
ಬೆಂಗಳೂರಿನಲ್ಲಿ 2 ಯೋಜನೆಗಳನ್ನು ಸೀಮೆನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹಕಗಳನ್ನು ಕರ್ನಾಟಕ ಸರ್ಕಾರ ಒದಗಿಸುವ ಭರವಸೆ ನೀಡಿದೆ. ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮತ್ತು ಸೀಮನ್ಸ್ ಸಂಸ್ಥೆ ಮಾತುಕತೆ ನಡೆಸಿತು.
ದಸ್ಸಾಲ್ಸ್ ಸಿಸ್ಟಮ್ಸ್:
ರಾಜ್ಯದಲ್ಲಿ ವಿದ್ಯುತ್ ವಾಹನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ , ವಿದ್ಯಾರ್ಥಿಗಳಿಗೆ ಕೈಗಾರಿಕೆ 4.0, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ ,ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ದಸ್ಸಾಲ್ಸ್ ಸಿಸ್ಟಮ್ಸ್ ಉತ್ಸುಕತೆ ತೋರಿದರು. ಇದನ್ನೂ ಓದಿ: ಗೃಹಿಣಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಅರೆಸ್ಟ್
ನೆಸ್ಟ್ಲೆ ಸಂಸ್ಥೆ:
ನಂಜನಗೂಡಿನಲ್ಲಿ ನೆಸ್ಟ್ಲೆ ಇನ್ಸೆಂಟ್ ಕಾಫಿ ಕಾರ್ಖಾನೆಯನ್ನು ನವೀಕರಣ ಹಾಗೂ ವಿಸ್ತರಣಾ ಕಾರ್ಯಕ್ಕೆ ನೆಸ್ಟ್ಲೆ ಸಂಸ್ಥೆ ಮುಂದಾಗಿದ್ದಾರೆ.
ಮೆಗಾ ಡಾಟಾ ಸೆಂಟರ್:
ಭಾರ್ತಿ ಎಂಟರ್ ಪ್ರೈಸಸ್ ನ ಅಧ್ಯಕ್ಷ ಹಾಗೂ ಸಿಇಓ ಸುನಿಲ್ ಭಾರ್ತಿ ಮಿತ್ತಲ್ ಅವರು ರಾಜ್ಯದಲ್ಲಿ ಇನ್ನೊಂದು ಮೆಗಾ ಡಾಟಾ ಸೆಂಟರ್ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಎಲ್ಲ ಅಗತ್ಯ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಬೆಂಗಳೂರಿನಲ್ಲಿ ಐಕಿಯ ಸ್ಟೋರ್:
ಇಂಗ್ಕಾ ಗ್ರೂಪ್ (ಐಕಿಯ) ಸಿ.ಇ.ಓ. ಜೆಸ್ಪರ್ ಬ್ರಾಡಿನ್ ಅವರು ರಾಜ್ಯದಲ್ಲಿ ಐಕಿಯ ಸ್ಟೋರ್ ತೆರೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಜೂನ್‍ನಲ್ಲಿ ನಾಗಸಂದ್ರದಲ್ಲಿ ಐಕಿಯ ಸ್ಟೋರ್ ತೆರೆಯಲಿದ್ದು, ಜೆಸ್ಪರ್ ಬ್ರಾಡಿನ್ ಅವರು ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ಐಕಿಯದ ಭಾರತೀಯ ಕೇಂದ್ರ ಕಚೇರಿಯೂ ಬೆಂಗಳೂರಿನಲ್ಲಿದ್ದು ಪೀಠೋಪಕರಣಗಳ ತಯಾರಿಕೆಯ ಸಂದರ್ಭದಲ್ಲಿ ಬಿದಿರು ಮತ್ತಿತರ ಸ್ಥಳೀಯ ವಸ್ತುಗಳ ವ್ಯಾಪಕ ಬಳಕೆಯ ಕುರಿತೂ ಸಹ ಚರ್ಚಿಸಲಾಯಿತು.
ಆಕ್ಸಿಸ್ ಬ್ಯಾಂಕ್:
ಆಕ್ಸಿಸ್ ಬ್ಯಾಂಕ್ ಸಂಸ್ಥೆಯು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮಗಳಡಿ ರಾಜ್ಯದ ಕೆಲವು ಇಂಜಿನಿಯರಿಂಗ್ ಹಾಗೂ ವಿಶ್ವವಿದ್ಯಾಲಯಗಳ ಉನ್ನತೀಕರಣ ಯೋಜನೆಯನ್ನು ಹಮ್ಮಿಕೊಳ್ಳಲು ಸಲಹೆ ನೀಡಲಾಯಿತು.
ನೋಕಿಯಾ ಸಂಸ್ಥೆ:
ಕರ್ನಾಟಕದಲ್ಲಿ ಟೆಲಿಕಾಂ ಉತ್ಪನ್ನಗಳ ಉತ್ಪಾದನೆಯ ಅವಕಾಶಗಳನ್ನು ಬಳಸಿಕೊಳ್ಳಲು ನೋಕಿಯಾ ಸಂಸ್ಥೆಯ ಮುಖ್ಯಸ್ಥರಿಗೆ ಸಲಹೆ ನೀಡಲಾಯಿತು.
ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಕರ್ನಾಟಕ ಪೆವಿಲಿಯನ್‍ನಲ್ಲಿ ಹೀರೋ ಮೋಟೋಕಾರ್ಪ್, ಎಬಿಇನ್‍ಬೇವ್ ಸಂಸ್ಥೆ, ಅರ್ಸೆಲರ್ ಮಿತ್ತಲ್, ಅದಾನಿ ಗ್ರೂಪ್, ಜಾನ್ಸನ್ ಕಂಟ್ರೋಲ್ಸ್‍ನ ಸಿಇಓ ಜಾರ್ಜ್ ಒಲಿವರ್, ಹನಿವೆಲ್ ಕಂಪೆನಿ, ಐಬಿಎಂ, ಬೈಜೂಸ್, ಮೀಶೋ ಸಂಸ್ಥೆಯ ಮುಖ್ಯಸ್ಥರೊಂದಿಗೆ ಕರ್ನಾಟಕದಲ್ಲಿ ಹೂಡಿಕೆಗಳ ಅವಕಾಶಗಳ ಬಗ್ಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಈಶ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಚರ್ಚೆ ನಡೆಸಲಾಯಿತು. ಈ ವೇಳೆ, ರಾಜ್ಯದಲ್ಲಿ ಪರಿಸರ ಹಾಗೂ ಮಣ್ಣಿನ ಸಂರಕ್ಷಣೆ ಕುರಿತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ, ಬಿಟಿ, ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಮೊದಲಾದ ಹಿರಿಯ ಅಧಿಕಾರಿಗಳು ರಾಜ್ಯದ ತಂಡದಲ್ಲಿದ್ದರು.