Tag: Interstate Thieves

  • ನ್ಯಾಯಾಧೀಶರು, ಪೊಲೀಸರ ಮನೆಯಲ್ಲಿ ಕಳ್ಳತನ ಮಾಡ್ತಿದ್ದ ಮೂವರು ಅರೆಸ್ಟ್

    ನ್ಯಾಯಾಧೀಶರು, ಪೊಲೀಸರ ಮನೆಯಲ್ಲಿ ಕಳ್ಳತನ ಮಾಡ್ತಿದ್ದ ಮೂವರು ಅರೆಸ್ಟ್

    – 140 ಗ್ರಾಂ ಚಿನ್ನ ಸೇರಿ 10 ಲಕ್ಷ ರೂ. ಮೌಲ್ಯದ ವಸ್ತು ವಶ

    ಕೊಪ್ಪಳ: ನ್ಯಾಯಾಧೀಶರು ಹಾಗೂ ಪೊಲೀಸರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಅಂತರ್ ರಾಜ್ಯ ಕಳ್ಳರನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಮಧ್ಯಪ್ರದೇಶ ಮೂಲದ ಮುಖೇಶ್, ಜಶ್ವಂತ್ ಸಿಂಹ, ಸಂದೀಪ್ ಸೋನಿ ಬಂಧಿತ ಕಳ್ಳರು. ಆರೋಪಿಗಳು ಜಿಲ್ಲೆಯ ಗಂಗಾವತಿ ನಗರದ ಪೊಲೀಸ್ ಕ್ವಾಟ್ರಸ್‍ನಲ್ಲಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿಯ ನ್ಯಾಯಾಧೀಶರ ಮನೆಗಳಲ್ಲಿ ಕಳ್ಳತನ ಮಾಡಿದ್ದರು.

    ಆರೋಪಿಗಳ ಬಂಧನಕ್ಕಾಗಿ ಗಂಗಾವತಿ ನಗರ ಠಾಣೆಯ ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದ್ದರು. ಈ ತಂಡ ಸತತ ಪ್ರಯತ್ನದ ಮೂಲಕ ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 140 ಗ್ರಾಂ ಚಿನ್ನ, 390 ಗ್ರಾಂ ಬೆಳ್ಳಿ, 2 ಬೈಕ್ ಸೇರಿದಂತೆ ಒಟ್ಟು 10 ಲಕ್ಷ ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದಾರೆ.

    ಈ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • 12 ಮಂದಿ ಅಂತರ್ ರಾಜ್ಯ ಕಳ್ಳರ ಬಂಧನ: 3 ಲಕ್ಷ ಮೌಲ್ಯದ ನಗದು ಚಿನ್ನಾಭರಣ ವಶ

    12 ಮಂದಿ ಅಂತರ್ ರಾಜ್ಯ ಕಳ್ಳರ ಬಂಧನ: 3 ಲಕ್ಷ ಮೌಲ್ಯದ ನಗದು ಚಿನ್ನಾಭರಣ ವಶ

    ಬಾಗಲಕೋಟೆ: 12 ಜನ ಅಂತರ್ ರಾಜ್ಯ ಕಳ್ಳರನ್ನು ಜಿಲ್ಲೆಯ ಇಳಕಲ್ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 1.50 ಲಕ್ಷ ರೂ. ನಗದು, 1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 4 ಬೈಕ್ ವಶಕ್ಕೆ ಪಡೆದಿದ್ದಾರೆ.

    ಆಂಧ್ರಪ್ರದೇಶ ಮೂಲದ ಗೂಗಲ್ ಜಿನ್ನಾ, ದಾಸ್ ಬಾಬು, ನಾನಿ ಗುಗಲಾ, ಬಾಣಾಲ್ ಚಿನ್ನಾ, ವಿಜಯ ಅಕುಲಾ, ಇಳಯ ರಾಜಾ, ಪ್ರಸಂಗಿ ಬಾನಾಲಾ, ರಾಜು, ಮೈಕಲ್ ರಾಜು ಉಪತೊಲ್ಲಾ, ಆಂಜನೇಯ ಬೆಲ್ದಾರಾ, ಎಲಿಜಾ ಬಾಣಾಲ್ ಹಾಗೂ ನಂದಾ ಚೆಲ್ಲಾ ಬಂಧಿತ ಆರೋಪಿಗಳು.

    ಬಂಧಿತರು ಇದೇ ವರ್ಷ ಮಾರ್ಚ್ 29ರಂದು ಇಳಕಲ್ ನಗರದ ವಿಶ್ವನಾಥ ಪಾಟೀಲ್ ಮನೆಯಲ್ಲಿ 3 ಲಕ್ಷ ರೂ. ನಗದು, 151 ಗ್ರಾಂ ಚಿನ್ನ ದೋಚಿದ್ದರು. ಮಾರ್ಕಂಡಯ್ಯ ವಗ್ಗಾ ಎಂಬವರು ಆಗಸ್ಟ್ 16ರಂದು ಇಳಕಲ್ ನ ಎಸ್.ಬಿ.ಐ ಬ್ಯಾಂಕಿನಿಂದ ಹಣ ಬ್ಯಾಗ್ ಹಿಡಿದು ಹೊರಗೆ ಬಂದಿದ್ದರು. ಆಗ ಹಿಂಬದಿಯಿಂದ ಬಂದ ಆರೋಪಿಗಳು ಬ್ಯಾಗ್ ಕಿತ್ತುಕೊಂಡು ಹೋಗಿದ್ದರು.

    ರಾಜ್ಯದ ವಿವಿಧ ಭಾಗದಲ್ಲಿ ಇವರು ಕಳ್ಳತನ ಮಾಡುತ್ತಿದ್ದು, ಇವರ ಪತ್ತೆಗಾಗಿ ಬಲೆ ಬೀಸಿದ್ದ ಇಳಕಲ್ ಪೊಲೀಸರು 12 ಜನರನ್ನು ತುಮಕೂರಿನಲ್ಲಿ ಬಂಧಿಸಿದ್ದಾರೆ. ಇವರೆಲ್ಲರೂ ವಿವಿಧ ಗ್ರಾಮಗಳಿಗೆ ಹೋಗಿ, ಅಲ್ಲಿ ಕೆಲವು ದಿನಗಳ ಕಾಲವಿದ್ದು, ಎಲ್ಲವನ್ನೂ ವೀಕ್ಷಿಸಿ ಕಳ್ಳತನ ಮಾಡುತ್ತಿದ್ದರು. ಇವರ ಜೊತೆಗೆ ದೊಡ್ಡ ತಂಡವೇ ಬಂಧಿತರ ಹಿಂದಿದೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಉಳಿದವರನ್ನು ಪತ್ತೆ ಹಚ್ಚಲು ವಿಚಾರಣೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೋಕಿ ಜೀವನಕ್ಕಾಗಿ ಕಳ್ಳತನ- ಅಂತರ್ ರಾಜ್ಯ ಗ್ಯಾಂಗ್ ಅಂದರ್, ಅರ್ಧ ಕೆಜಿ ಚಿನ್ನ ವಶ

    ಶೋಕಿ ಜೀವನಕ್ಕಾಗಿ ಕಳ್ಳತನ- ಅಂತರ್ ರಾಜ್ಯ ಗ್ಯಾಂಗ್ ಅಂದರ್, ಅರ್ಧ ಕೆಜಿ ಚಿನ್ನ ವಶ

    – ಕಳ್ಳತನ ಮಾಡಿದ ಹಣದೊಂದಿಗೆ ಯುವತಿರೊಂದಿಗೆ ಟೂರ್, ಐಷಾರಾಮಿ ಜೀವನ

    ಕಲಬುರಗಿ: ಐಷಾರಾಮಿ ಜೀವನ ನಡೆಸಲು ಕಳ್ಳತನ ದಂಧೆಗೆ ಇಳಿದಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಕಲಬುರಗಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆರೋಪಿಗಳಿಂದ ಅರ್ಧ ಕೆಜಿ ಚಿನ್ನ, ಒಂದು ಕೆಜಿ ಬೆಳ್ಳಿ, ಒಂದು ನಾಡಪಿಸ್ತೂಲ್ ಸೇರಿದಂತೆ ಕೃತ್ಯಕ್ಕೆ ಬಳಕೆ ಮಾಡಲಾಗುತ್ತಿದ್ದ ಶಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಧಿತರನ್ನು ಜಿಲ್ಲೆಯ ನಾಗರಾಜ್ ಕಚೇರಿ, ಮಹಾರಾಷ್ಟ್ರ ರಾಜ್ಯದ ಸೋಲ್ಲಾಪುರ ಮೂಲದ ಹುಸೇನ್ ಗಾಯ್ಕ್ವಡ್, ಶ್ರೀಕಾಂತ್ ಸಿಂಧೆ ಹಾಗೂ ಶಂಕರ್ ಜಾಧವ್ ಎಂದು ಗುರುತಿಸಲಾಗಿದೆ.

    ಬಂಧಿತ ಕಳ್ಳರು ಕಳೆದ ಹಲವು ವರ್ಷಗಳಿಂದ ಕರ್ನಾಟಕದ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಅನೇಕ ಮನೆಗಳನ್ನ ಕಳ್ಳತನ ಮಾಡಿದ್ದಾರೆ. ಹಗಲಿನ ವೇಳೆಯಲ್ಲಿ ಬೀಗ ಇರುವ ಮನೆಗಳನ್ನು ನೋಡಿ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ರಾತ್ರಿಯಾಗುತ್ತಿದಂತೆ ಕಳ್ಳತನಕ್ಕೆ ಇಳಿಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮನೆಯ ಬೀಗ ಮುರಿದು ಒಳ ಪ್ರವೇಶಿಸುತ್ತಿದ್ದ ಆರೋಪಿಗಳು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಚಿನ್ನಭರಣ ದೋಚಿ ಪರಾರಿಯಾಗುತ್ತಿದ್ದರು. ಹೀಗೆ ಕದ್ದ ಹಣದಲ್ಲಿ ವಿವಿಧೆಡೆ ಯುವತಿಯರ ಜೊತೆ ಪ್ರವಾಸ ಕೈಗೊಂಡು ಮೋಜು ಮಸ್ತಿ ಮಾಡುತ್ತಿದ್ದರು. ಕಳೆದ ತಿಂಗಳಷ್ಟೇ ಕಲಬುರಗಿ ನಗರದ ಖೂಬಾ ಪ್ಲಾಟ್‍ನಲ್ಲಿ ಖ್ಯಾತ ವಕೀಲರೊಬ್ಬರ ಮನೆಗೆ ಸಹ ಈ ಗ್ಯಾಂಗ್ ಕನ್ನ ಹಾಕಿತ್ತು. ತಾವು ಕಳ್ಳತನ ಮಾಡುವ ನಗರದಲ್ಲಿ 15 ದಿನಗಳು ಮಾತ್ರ ಇರುತ್ತಿದ್ದ ಈ ಗ್ಯಾಂಗ್ ಈ ವೇಳೆಯಲ್ಲೇ ವಿವಿಧೆಡೆ ಮನೆಗಳಿಗೆ ಕನ್ನ ಹಾಕಿ ತಮ್ಮ ಕೈಚಳಕ ತೋರುತ್ತಿದ್ದರು. ಕೃತ್ಯದ ವೇಳೆ ಯಾರಾದರೂ ಪ್ರತಿರೋಧ ತೋರಿದರೆ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗುತ್ತಿದ್ದರು.

    ಬಂಧಿತರಿಂದ ಅರ್ಧ ಕೆಜಿ ಚಿನ್ನ, ಒಂದು ಕೆಜಿ ಬೆಳ್ಳಿ, ಒಂದು ನಾಡಪಿಸ್ತೂಲ್ ಸೇರಿದಂತೆ ಒಂಭತ್ತು ಜೀವಂತ ಗುಂಡುಗಳು, ಮಹಿಂದ್ರಾ ಎಕ್ಸ್‍ಯುವಿ ಕಾರು, ಕಳ್ಳತನಕ್ಕೆ ಬಳಸುವ ವಸ್ತುಗಳಾದ ಕಬ್ಬಿಣದ ರಾಡ್, ಸ್ಕ್ರೂಡ್ರೈವರ್, ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ. ಕಲಬುರಗಿ ನಗರದ ಬ್ರಹ್ಮಪುರ, ಅಶೋಕನಗರ, ಚೌಕ್ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ವಿವಿಧೆಡೆ ಹದಿನಾರು ಮನೆಗಳನ್ನ ಕಳ್ಳತನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv