Tag: Interracial marriage

  • ಸಲಿಂಗ ವಿವಾಹಗಳನ್ನು ರಕ್ಷಿಸುವ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ

    ಸಲಿಂಗ ವಿವಾಹಗಳನ್ನು ರಕ್ಷಿಸುವ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ

    ವಾಷಿಂಗ್ಟನ್: ಅಮೆರಿಕದ ಸೆನೆಟ್ (US Senate) ಮಂಗಳವಾರ ದೇಶದಲ್ಲಿ ಸಲಿಂಗ (Same-Sex Marriage) ಮತ್ತು ಅಂತರ್ಜಾತಿ ವಿವಾಹಗಳಿಗೆ (Interracial Marriage) ರಕ್ಷಣೆಯನ್ನು ನೀಡುವ ಕಾನೂನನ್ನು ಅಂಗೀಕರಿಸಿದೆ.

    ಮಸೂದೆ ಅಂಗೀಕಾರಕ್ಕೆ 60 ಮತಗಳ ಅಗತ್ಯವಿದ್ದು, ಸೆನೆಟ್ 61-36 ಮತಗಳಲ್ಲಿ ಸಲಿಂಗ ಹಾಗೂ ಅಂತರ್ಜಾತಿ ವಿವಾಹ ಕಾಯಿದೆಯನ್ನು ರಕ್ಷಿಸುವ ಮಸೂದೆಯನ್ನು ಅಂಗೀಕರಿಸಿತು. ಸೆನೆಟ್‌ನ ಅನುಮೋದನೆ ಎರಡೂ ಪಕ್ಷಗಳು ಒಮ್ಮತದಿಂದ ನಿರ್ಧರಿಸಿವೆ. ರಿಪಬ್ಲಿಕನ್ ಹಾಗೂ ಡೆಮೋಕ್ರಾಟ್ ಪಕ್ಷಗಳು ಒಟ್ಟಾಗಿಯೇ ಅಂತರ್ಜಾತಿ ಹಾಗೂ ಸಲಿಂಗ ವಿವಾಹದ ಹಕ್ಕನ್ನು ಬೆಂಬಲಿಸಿವೆ.

    ಈ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) , ಇಂದು ಉಭಯಪಕ್ಷೀಯ ನಿರ್ಧಾರದೊಂದಿಗೆ ಸೆನೆಟ್ ಮದುವೆ ಕಾಯಿದೆಯನ್ನು ಅಂಗೀಕರಿಸಿದೆ. ಇದೀಗ ಅಮೆರಿಕ ಒಂದು ಮೂಲಭೂತ ಸತ್ಯವನ್ನು ಪುನರುಚ್ಚರಿಸಲು ಸಿದ್ಧವಾಗಿದೆ. ಪ್ರೀತಿ ಎಂದರೆ ಪ್ರೀತಿಯೇ, ಅಮೆರಿಕನ್ನರು ತಾವು ಪ್ರೀತಿಸುವ ವ್ಯಕ್ತಿ ಯಾರೇ ಆದರೂ ಮದುವೆಯಾಗುವ ಹಕ್ಕನ್ನು ಹೊಂದಿರಬೇಕು. ಇದೀಗ ಲಕ್ಷಾಂತರ ಅಮೆರಿಕನ್ನರಿಗೆ ಈ ಮಸೂದೆ ಸಲಿಂಗ ಹಾಗೂ ಅಂತರ್ಜಾತಿ ವಿವಾಹಕ್ಕೆ ಅರ್ಹರಾಗಿರುವ ಹಕ್ಕುಗಳನ್ನು ನೀಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: BMTCಯಿಂದ ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್ – ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸ್ ನೀಡಲು ಚಿಂತನೆ

    joe biden

    ಮಸೂದೆಗೆ ಜುಲೈನಲ್ಲಿ ಅಂಗೀಕಾರ ಸಿಕ್ಕಿದ್ದು, ಅಧ್ಯಕ್ಷ ಜೋ ಬೈಡನ್ ಇದಕ್ಕೆ ಸಹಿ ಹಾಕಿದ್ದರು. ಇದೀಗ ಸಲಿಂಗ, ಅಂತರ್ಜಾತಿ ವಿವಾಹಗಳನ್ನು ರಕ್ಷಿಸುವ ಮಸೂದೆಯನ್ನು ಸೆನೆಟ್ ಅಂಗೀಕರಿಸಿದೆ. ಇದನ್ನೂ ಓದಿ: ಟೊಯೋಟ ಕಿರ್ಲೋಸ್ಕರ್‌ ಮೋಟಾರ್‌ ಉಪಾಧ್ಯಕ್ಷ ವಿಕ್ರಮ್‌ ಕಿರ್ಲೋಸ್ಕರ್‌ ಹೃದಯಾಘಾತದಿಂದ ನಿಧನ

    Live Tv
    [brid partner=56869869 player=32851 video=960834 autoplay=true]

  • ಪ್ರೇಮಿಗಳ ದಿನಕ್ಕೂ ಮುನ್ನ ಪ್ರೇಮಿಗಳಿಬ್ಬರ ಆತ್ಮಹತ್ಯೆ

    ಪ್ರೇಮಿಗಳ ದಿನಕ್ಕೂ ಮುನ್ನ ಪ್ರೇಮಿಗಳಿಬ್ಬರ ಆತ್ಮಹತ್ಯೆ

    ಬೀದರ್: ಪ್ರೇಮಿಗಳ ದಿನಕ್ಕೂ ಮುನ್ನವೇ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕಲಖೋರಾ ತಾಂಡದ ಬಳಿ ನಡೆದಿದೆ.

    ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ನಿವಾಸಿ ರಮೇಶ ಭೀಮಶಾ ಬೇಡರ್(28) ಹಾಗೂ ಭೀಮಾಬಾಯಿ ಅಶೋಕ ರಾಠೋಡ(19) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಟ್ರಿಪಲ್‌ ರೈಡಿಂಗ್‌ಗೆ ಅವಕಾಶ: SBSP ಭರವಸೆ

    ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತಿದ್ದ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇಬ್ಬರ ಜಾತಿ ಬೇರೆ ಬೇರೆ ಆಗಿದ್ದರಿಂದ ವಿವಾಹಕ್ಕೆ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

    ಇದೇ ವಿಷಯಕ್ಕೆ ಕೆಲವು ದಿನಗಳ ಹಿಂದೆ ಎರಡೂ ಕುಟುಂಬದ ನಡುವೆ ಜಗಳ ನಡೆದಿತ್ತು. ನಂತರ ಪರಸ್ಪರ ರಾಜಿ ಸಂಧಾನದ ಮೂಲಕ ಗಲಾಟೆ ಬಗೆಹರಿಸಿ ಇಬ್ಬರೂ ದೂರ ಇರುವಂತೆ ಸೂಚಿಸಲಾಗಿತ್ತು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಖಾಸಗಿ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ಇದೀಗ ಜಾತಿ ವಿಚಾರ ಹಾಗೂ ಕುಟುಂಬಸ್ಥರ ವಿರೋಧಕ್ಕೆ ಪ್ರೇಮಿಗಳಿಬ್ಬರು ಬಲಿಯಾಗಿದ್ದಾರೆ.