Tag: International Yoga Day

  • ಮೊಣಕಾಲು ನೋವಿನ ನಡ್ವೆಯೂ ಅಕ್ಷಯ್ ಕುಮಾರ್ ತಾಯಿಯಿಂದ ಯೋಗ

    ಮೊಣಕಾಲು ನೋವಿನ ನಡ್ವೆಯೂ ಅಕ್ಷಯ್ ಕುಮಾರ್ ತಾಯಿಯಿಂದ ಯೋಗ

    ಮುಂಬೈ: ಪ್ರಪಂಚದ ಎಲ್ಲಾ ಕಡೆ ಅಂತಾರಾಷ್ಟೀಯ ಯೋಗ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಭಾರತದಲ್ಲೂ ಸೆಲಿಬ್ರಿಟಿಗಳು ಸೇರಿ ರಾಜಕಾರಣಿಗಳು ಇಂದು ಯೋಗ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ತಾಯಿ ಯೋಗ ಮಾಡುತ್ತಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಬಾಲಿವುಡ್ ಮಂದಿಯೂ ಇದಕ್ಕೆ ಹೊರತಾಗಿಲ್ಲ ಶಿಲ್ಪಾ ಶೆಟ್ಟಿ, ಬಿಪಾಶಾ ಬಸು, ಅನುಪಮ್ ಖೇರ್ ಮತ್ತು ಟ್ವಿಂಕಲ್ ಖನ್ನಾ ಸೇರಿದಂತೆ ಹಲವಾರು ಬಾಲಿವುಡ್ ಮಂದಿ ಅಂತಾರಾಷ್ಟೀಯ ಯೋಗ ದಿನದ ಅಂಗವಾಗಿ ಯೋಗ ಮಾಡಿ ತಮ್ಮ ಫೋಟೋಗಳನ್ನು ಸಾಮಾಜಿಕ ಜಾತಾಣದಲ್ಲಿ ಹಂಚಿಕೊಂಡಿದ್ದಾರೆ.

    ಈಗ ಈ ಸಾಲಿಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು ಸಹ ಸೇರಿಕೊಂಡಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ತಾಯಿ ಅರುಣಾ ಭಾಟಿಯಾ ಯೋಗ ಮಾಡುತ್ತಿರುವ ಫೋಟೋ ಹಾಕಿರುವ ಅಕ್ಷಯ್ ನಾವು ನೋಡುವ ಸ್ಪೂರ್ತಿದಾಯಕ ಫೋಟೋ ಇದು ಎಂದು ಹೇಳಿದ್ದಾರೆ.

    ತಾಯಿ ಯೋಗ ಮಾಡುತ್ತಿರುವ ಫೋಟೋ ಹಾಕಿರುವ ಅಕ್ಷಯ್, “75 ವಯಸ್ಸಿನ ನನ್ನ ತಾಯಿ ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ ಯೋಗ ಮಾಡಲು ಪ್ರಾರಂಭಿಸಿದರು. ಈಗ ಯೋಗ ಮಾಡುವುದು ಅವರ ದೈನಂದಿನ ದಿನಚರಿಯ ಭಾಗವಾಗಿದೆ. ದಿನ ಕಳೆದಂತೆ ಮೊಣಕಾಲಿನ ನೋವು ಸುಧಾರಿಸುತ್ತಿದೆ. ಈ ಫೋಟೋವನ್ನು ಹಂಚಿಕೊಳ್ಳಲು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

    ಅಕ್ಷಯ್ ಕುಮಾರ್ ಅವರು ತಮ್ಮ ತಾಯಿ ಫೋಟೋ ಟ್ವಿಟ್ಟರ್‍ನಲ್ಲಿ ಹಾಕಿದ ತಕ್ಷಣ ಅವರ ಅಭಿಮಾನಿಗಳು ಕೂಡ ತಮ್ಮ ತಾಯಿ ಯೋಗ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಒಬ್ಬ ಅಭಿಮಾನಿ ತನ್ನ ಅಂಗವಿಕಲ ತಾಯಿ ಯೋಗ ಮಾಡುತ್ತಿರುವ ಫೋಟೋ ಹಾಕಿದ್ದಾರೆ. ಇದನ್ನು ನೋಡಿದ ಅಕ್ಷಯ್ ಆ ಫೋಟೋಗೆ ನಿಮ್ಮ ತಾಯಿ ಸೂಪರ್‌ಮಾಮ್‌ ಎಂದು ರೀಟ್ವೀಟ್ ಮಾಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ ತಿಳಿಯಿರಿ

    ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ ತಿಳಿಯಿರಿ

    ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವಾಗಿದೆ. ಯೋಗ ಎಂಬುದು ಬರಿ ವಿದ್ಯೆಯಲ್ಲ. ಅದು ಭಾರತದಲ್ಲಿ ಹುಟ್ಟಿರುವ ಜಾಗತೀಕ ವಿದ್ಯೆಯಾಗಿದೆ. ಯೋಗದ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಪ್ರತೀ ವರ್ಷದ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕೆಂದು ವಿಶ್ವ ಸಂಸ್ಥೆಯು ಘೋಷಿಸಿದೆ.

    ಯೋಗ ದಿನದ ಅಂಗವಾಗಿ ಜಾರ್ಖಂಡ್ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಮೈದಾನ ನೂತನ ಇತಿಹಾಸ ದಾಖಲಿಸಲು ಸಜ್ಜಾದ್ದು, ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಂಚಿಯಲ್ಲಿ ಸಾವಿರಾರು ಜನರೊಂದಿಗೆ ಯೋಗ ಪ್ರದರ್ಶಿಸಿದ್ದಾರೆ. ರಾಂಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

    ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ. ಪ್ರತಿವರ್ಷದ ಯೋಗದ ಆಚರಣೆಯು ಯೋಗ, ಧ್ಯಾನ, ಸಭೆಗಳು, ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ಎಲ್ಲಾ ರಾಷ್ಟ್ರ್ರಗಳ ಜನರಿಂದ ಆಚರಿಸಲ್ಪಡುವ ದಿನವಾಗಿದೆ. 2014 ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಯೋಗ ದಿನಾಚರಣೆಯನ್ನು ಆಚರಿಸುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪವನ್ನು ಮಂಡಿಸಿದ್ದರು.

    ಯೋಗದ ಮಹತ್ವ
    ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ.

    ಇತಿಹಾಸ:
    ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015, ಜೂನ್ 21ನೇ ದಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.

    ಜೂನ್21 ರಂದೇ ಯೋಗದಿನಾಚರಣೆ ಏಕೆ?
    ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ.

    ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ.

    ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ, ಭಾರತೀಯರಿಗೆ ಪ್ರಕೃತಿಗೆ ಗೌರವ ಸಲ್ಲಿಸುವುದು ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಪ್ರಕೃತಿಯ ಕೊಡುಗೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ ಎಂದು ಹೇಳಿದ್ದರು.

    ಆಧ್ಯಾತ್ಮಿಕ ಹಿನ್ನೆಲೆ:
    ಇವೆಲ್ಲದರ ಹೊರತಾಗಿ, ಶಿವ ದೇವರು ಈ ದಿನದಂದು ಉಳಿದ ಮಾನವ ಜನಾಂಗಕ್ಕೆ ಯೋಗದ ದಿನವನ್ನು ಉಪನ್ಯಾಸ ನೀಡಲು ಪ್ರಾರಂಭಿಸಿದನೆಂಬ ನಂಬಿಕೆಯಿದೆ. ಶಿವ ದೇವರು ಯೋಗದ ಆದಿ ಗುರುವಾದ ದಿನವೂ ಹೌದು. ಕೆಲವು ಇತಿಹಾಸಕಾರರು ಶಿವನನ್ನು ಯೋಗದ ಪಿತಾಮಹ ಎನ್ನುತ್ತಾರೆ. ಇನ್ನೂ ಕೆಲವರು ಪತಂಜಲಿ ಆಧುನಿಕ ಯೋಗದ ಪಿತಾಮಹ ಎಂದು ಹೇಳುತ್ತಾರೆ.

    ಆಚರಣೆ:
    2015 ಜೂನ್ 21ರಂದು ಮೊದಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಆ ದಿನವನ್ನು ರಾಜಪಥದಲ್ಲಿ ಭಾರೀ ವಿಜ್ರಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ 21 ಯೋಗ ಆಸನಗಳನ್ನು ಅಭ್ಯಸಿಸಲಾಯಿತು.

    2015ರಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿಯ ನಾಣ್ಯವನ್ನು ಬಿಡುಗಡೆಮಾಡಿತು.ರಾಜಪಥದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಎರಡು ಹೊಸ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿತು. ಮೊದಲನೆಯದಾಗಿ ವಿಶ್ವದ ಅತಿ ದೊಡ್ಡ ಯೋಗ ಕ್ಲಾಸ್‍ನಲ್ಲಿ ದಾಖಲೆ ಸಂಖ್ಯೆಯ 35,985 ಮಂದಿ ಭಾಗವಹಿಸಿದ್ದರು. ಎರಡನೇಯದಾಗಿ ಗರಿಷ್ಠ ಸಂಖ್ಯೆಯ ರಾಷ್ಟ್ರೀಯತೆಯನ್ನು (84) ಹೊಂದಿರುವ ವ್ಯಕ್ತಿಗಳು ಭಾಗವಹಿಸಿದ್ದರು.

    2017ರಲ್ಲಿ ಲಕ್ನೊದಲ್ಲಿ 51,000 ಸ್ಪರ್ಧಿಗಳೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿಶ್ವದಾಖಲೆ ಬರೆದಿದೆ. ನಗರದ ರೇಸ್‍ಕೋರ್ಸ್ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸುವುದರ ಮೂಲಕ ದೇಶದಲ್ಲೇ ಬೃಹತ್ ಮಟ್ಟದ ಯೋಗ ದಿನಾಚರಣೆ ಅದಾಗಿತ್ತು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • 18 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಯೋಗ ಪ್ರದರ್ಶಿಸಿದ ಯೋಧರು!

    18 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಯೋಗ ಪ್ರದರ್ಶಿಸಿದ ಯೋಧರು!

    ಶ್ರೀನಗರ: ಅಂತರಾಷ್ಟ್ರೀಯ ಯೋಗ ದಿನವನ್ನು 18 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಪ್ರದರ್ಶಿಸಿ ಭಾರತೀಯ ಯೋಧರು ಸಾಹಸ ಮೆರೆದಿದ್ದಾರೆ.

    ಇಂಡೋ-ಟಿಬೇಟಿಯನ್ ಬಾರ್ಡರ್ ಸೇನಾ ವಿಭಾಗದ ಯೋಧರು ಈ ಸಾಹಸವನ್ನು ಮಾಡಿದ್ದಾರೆ. ಲಡಾಕ್‍ನ ಕಣಿವೆ ಪ್ರದೇಶಗಳಲ್ಲಿನ 18 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಯೋಧರು ಸೂರ್ಯ ನಮಸ್ಕಾರ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ್ದಾರೆ.

    ಲಡಾಕ್‍ನ ಅನೇಕ ಗಡಿ ಪ್ರದೇಶಗಳು ಯಾವಾಗಲೂ ಹಿಮದಿಂದ ಆವೃತವಾಗಿರುತ್ತದೆ. ಇಲ್ಲಿ ನಮಗೆ ಉಸಿರಾಡಲು ಅಸಾಧ್ಯವಾಗುವಷ್ಟು ಹಿಮ ಆವರಿಸಿಕೊಂಡಿರುತ್ತದೆ. ಇಂತಹ ಸ್ಥಳದಲ್ಲಿ ಯೋಧರು ಯೋಗ ಪ್ರದರ್ಶನ ಮಾಡಿ ತಮ್ಮ ಸಾಹಸವನ್ನು ಮೆರೆದಿದ್ದಾರೆ.

    ಇಂತಹ ಪ್ರದೇಶಗಳು ಉಗ್ರರು ಭಾರತದ ಗಡಿಯೊಳಗೆ ನುಸುಳುವುದಕ್ಕೆ ಅನುಕೂಲವಾಗಿದ್ದು, ಇಂತಹ ಸ್ಥಳಗಳಲ್ಲಿ ಭಾರತೀಯ ಸೇನೆಯು ಉನ್ನತ ತರಬೇತಿ ಪಡೆದ ಯೋಧರನ್ನು ನೇಮಿಸಿ ಉಗ್ರರ ನುಸುಳುವಿಕೆಯನ್ನು ತಡೆದಿದ್ದಾರೆ. ಮೈ ಕೊರೆಯುವ ಚಳಿ ಹಾಗೂ ಉಸಿರಾಟಕ್ಕೂ ತೊಂದರೆಯಾಗುವ ಈ ಪ್ರದೇಶದಲ್ಲಿ ಯೋಧರು ದೇಶಕ್ಕೊಸ್ಕರ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

  • ನಾನ್ಯಾರಿಗೂ ಚಾಲೆಂಜ್ ಹಾಕಲ್ಲ- ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

    ನಾನ್ಯಾರಿಗೂ ಚಾಲೆಂಜ್ ಹಾಕಲ್ಲ- ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

    ಬೆಂಗಳೂರು: ವಿಶ್ವಯೋಗ ದಿನಾಚರಣೆಯ ಅಂಗವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು, ಪ್ರಧಾನಿ ಮೋದಿಯವರು ಫಿಟ್ ನೆಸ್ ಚಾಲೆಂಜ್ ಗೆ ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮರಾ ಮುಂದೆ ಯೋಗ ಮಾಡಿದ್ದಾರೆ. ಯೋಗ ಗುರು ಕಾರ್ತಿಕ್ ಮಾರ್ಗದರ್ಶನದಲ್ಲಿ ದೇವೇಗೌಡರು ಯೋಗ ಮಾಡಿದ್ದಾರೆ.

    ಅದ್ಯಾರೋ ಚೇಂಬರ್ ಆಫ್ ಕಾಮರ್ಸ್ ನವರು ಬಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ಯೋಗಾ ಡೇ ಮಾಡ್ತೀವಿ ಅಂದ್ರು. ನೀವು ಬರಬೇಕು ಅಂತ ಆಹ್ವಾನ ನೀಡಿದ್ರು. ನಾನು ಯಾವಾಗ ನಾನೇ ಯೋಗ ಮಾಡ್ತೀನಿ ಅಂತ ಹೇಳಿದ್ನೋ, ಅವರು ವಾಪಸ್ ಬರಲೇ ಇಲ್ಲ. ಬಹುಶಃ ಮೋದಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕ್ತೀನಿ ಅಂತ. ಆದ್ರೆ ನಾನು ಯಾರಿಗೂ ಚಾಲೆಂಜ್ ಹಾಕಲ್ಲ ಎಂದು ಯೋಗ ಮಾಡುತ್ತಲೇ ಎಚ್ ಡಿಡಿ ಹೇಳಿದ್ದಾರೆ.

    ಇಂದು ವಿಶ್ವ ಯೋಗ ದಿನಾಚರಣೆ. ಮೂರು ವರ್ಷದಿಂದ ಪ್ರಧಾನಿ ಮೋದಿ ಈ ದಿನಾಚರಣೆಯನ್ನು ಆಚರಣೆಗೆ ತಂದಿದ್ದಾರೆ. ಮೋದಿ ಈಗ ಯೋಗಕ್ಕೆ ಒಂದು ಸ್ವರೂಪ ನೀಡಿದ್ದಾರೆ. ಹಿಂದೆ ಋಷಿ-ಮುನಿಗಳು ತಮ್ಮ ಆರೋಗ್ಯವನ್ನು ಯೋಗದಿಂದ ಕಾಪಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರು 100, 200 ವರ್ಷಗಳ ಕಾಲ ಬದುಕುತ್ತಿದ್ದರು. ಈಗಲೂ ಇಂತಹ ಸಾಧಕರು ಹಿಮಾಲಯದಲ್ಲಿ ಬದುಕಿದ್ದಾರೆ. ಇದು ಸತ್ಯ ಎಂದು ಯೋಗ ಬಳಿಕ ಅವರು ಹೇಳಿದ್ರು.

    ನಾನು ಆರೋಗ್ಯ ಕಾಪಾಡಲು ನನ್ನದೇ ಆದ ಕೆಲವೊಂದು ನಿಯಮಗಳನ್ನು ಇಟ್ಟುಕೊಂಡಿದ್ದೇನೆ. ಯೋಗದ ಜೊತೆ ಆಹಾರ ಪದ್ಧತಿಯನ್ನು ಕೂಡ ಅಳವಡಿಸಿಕೊಂಡಿದ್ದೇನೆ. ಆದುದರಿಂದ ನಾನು ಇನ್ನು ಕೆಲಸ ಮಾಡುವ ಮತ್ತು ದುಡಿಮೆ ಮಾಡುವ ಆಸಕ್ತಿ ಇದೆ. ಪ್ರಧಾನಿ ಮೋದಿ ಅವರು ಯೋಗಕ್ಕೆ ಒಂದು ಸ್ವರೂಪ ಕೊಟ್ಟಿದ್ದಾರೆ. ಯೋಗ ನಮಗೆ ಹೊಸದಾಗಿ ಬಂದಿರೋದಲ್ಲ. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಇನ್ನು ಅನೇಕರು ಯೋಗ ಮಾಡುತ್ತಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.

  • ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದೊಂದಿಗೆ ಸ್ವಾಗತಿಸ್ತಿದ್ದಾರೆ- ಪ್ರಧಾನಿ ಮೋದಿ

    ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದೊಂದಿಗೆ ಸ್ವಾಗತಿಸ್ತಿದ್ದಾರೆ- ಪ್ರಧಾನಿ ಮೋದಿ

    ಡೆಹ್ರಾಡೂನ್: ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 55 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಇಂದು ಯೋಗಸಾನ ಮಾಡಿದ್ರು.

    ಈ ಮೊದಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ವಿಶಾಲ ಹಾಗೂ ಸುಂದರ ಮೈದಾನದಲ್ಲಿರುವ ಎಲ್ಲರಿಗೂ ಹಾಗೂ ಎಲ್ಲಾ ಯೋಗ ಪ್ರೇಮಿಗಳಿಗೂ ನಾನು ದೈವ ಭೂಮಿ ಉತ್ತರಾಖಂಡ್ ನಿಂದ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯ ತಿಳಿಸುತ್ತೇನೆ ಅಂದ್ರು.

    ತಾಯಿ ಗಂಗಾ ನೆಲೆಸಿರುವ ಈ ಭೂಮಿಯಲ್ಲಿ ಆದಿಶಂಕರಚಾರ್ಯ ಕಾಲಿಟ್ಟಿದ್ದಾರೆ. ಈ ಜಾಗ ವಿವೇಕಾನಂದ ಅವರಿಗೆ ಪ್ರೇರಣೆ ಮಾಡಿತ್ತು. ಅಂತಹ ಭೂಮಿಯಲ್ಲಿ ನಾವು ಈ ರೀತಿ ಸೇರಿರುವುದು ಯಾವುದೇ ಸೌಭಾಗ್ಯಕ್ಕೆ ಕಡಿಮೆ ಇಲ್ಲ. ಉತ್ತರಾಖಂಡ್ ಹಲವಾರು ದಶಕಗಳಿಂದ ಯೋಗದ ಮುಖ್ಯ ಕೇಂದ್ರವಾಗಿದೆ. ಇಲ್ಲಿನ ಪರ್ವತಗಳು ಸ್ವತಃ ಯೋಗ ಹಾಗೂ ಆಯುರ್ವೇದಕ್ಕೆ ಪ್ರೇರಣೆ ನೀಡುತ್ತದೆ. ಸಾಮಾನ್ಯನಾಗಿರುವ ನಾಗರಿಕ ಈ ಭೂಮಿಗೆ ಬಂದಾಗ ಅವರಿಗೆ ಒಂದು ಬೇರೆ ರೀತಿಯ ದಿವ್ಯ ಅನುಭವ ಆಗುತ್ತದೆ ಅಂತ ತಿಳಿಸಿದ್ರು.

    ಇದು ನಮ್ಮ ಎಲ್ಲ ಭಾರತೀಯರಿಗೆ ಗೌರವದ ಮಾತು. ಏಕೆಂದರೆ ಸೂರ್ಯ ಹುಟ್ಟುತ್ತಲೇ ತಮ್ಮ ಕಿರಣವನ್ನು ಎಲ್ಲೆಡೆ ಹರಡಿಸಿದ್ದಾನೆ. ವಿಶ್ವದಾದ್ಯಂತ ಎಲ್ಲರೂ ಸೂರ್ಯನನ್ನು ಯೋಗದ ಮೂಲಕ ಸ್ವಾಗತಿಸುತ್ತಿದ್ದಾರೆ. ಡೆಹ್ರಾಡೂನ್‍ನಿಂದ ಡಬ್ಲಿನ್ ವರೆಗೂ, ಶಾಂಘೈಯಿಂದ ಚಿಕಾಗೋವರೆಗೂ ಎಲ್ಲಾ ಕಡೆ ಯೋಗ ಮಾಡುತ್ತಿದ್ದಾರೆ. ಹಿಮಾಲಯದ ಸಾವಿರಾರು ಮೇಲಿರುವ ಪರ್ವತಗಳಲ್ಲಿ ಹಾಗೂ ರಾಜಸ್ಥಾನದಲ್ಲಿರುವ ಮರಳುಗಾಡಿನಲ್ಲಿ ಜನರು ಎಲ್ಲ ಪರಿಸ್ಥಿತಿಯಲ್ಲಿ ತಮ್ಮ ಜೀವನವನ್ನು ಸಮೃದ್ಧಿ ಮಾಡುತ್ತಿದ್ದಾರೆ ಅಂದ್ರು.

    ಯುಎಎನ್ ಯೋಗಕ್ಕಾಗಿ ಪ್ರಸ್ತಾವನೆ ನೀಡಿದಾಗ ಎಲ್ಲ ದೇಶದವರು ಈ ಯೋಗಕ್ಕಾಗಿ ಸಹಕಾರ ನೀಡಿದ್ದಾರೆ. ಮೊದಲ ಬಾರಿಗೆ ಕಡಿಮೆ ಸಮಯದಲ್ಲಿ ಯೋಗ ಇಷ್ಟರ ಮಟ್ಟಿಗೆ ಖ್ಯಾತಿಗೊಂಡಿದೆ. ವಿಶ್ವದ ಎಲ್ಲ ಜನರು ಹಾಗೂ ಎಲ್ಲ ದೇಶದವರು ಯೋಗವನ್ನು ತಮ್ಮದೇ ಎಂದುಕೊಳ್ಳುತ್ತಿದ್ದಾರೆ ಅಂತ ಅವರು ನುಡಿದ್ರು.

    ಯೋಗದ ಕುರಿತು ಏರುತ್ತಿರುವ ಪ್ರಚಾರದಿಂದ ಭಾರತ ಇನ್ನಷ್ಟು ಪ್ರಸಿದ್ಧಿಗೊಂಡಿದೆ. ಸ್ವಸ್ತ ಹಾಗೂ ಒಳ್ಳೆಯ ಜೀವನಕ್ಕಾಗಿ ಯೋಗ ಸಮಾಜವನ್ನು ಹೆಚ್ಚು ಸಮೃದ್ಧಿಗೊಳಿಸುತ್ತಿದೆ ಎಂದು ಹೇಳುತ್ತಾ ಮತ್ತೊಮ್ಮೆ ಎಲ್ಲರಿಗೂ 4ನೇ ವಿಶ್ವ ಯೋಗ ದಿನಾಚರಣೆಯ ಶುಭಾಶಯವನ್ನು ಮೋದಿ ತಿಳಿಸಿದ್ರು.

    ಡೆಹ್ರಾಡೂನ್‍ನಲ್ಲಿ 55 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಪ್ರಧಾನಿ ಮೋದಿ ಯೋಗಾಸನ ಮಾಡಿದ್ರು. ಇದೇ ವೇಳೆ ಪ್ರಧಾನಿಯ ಸಂಪುಟ ಸಚಿವರು ಕೂಡ ಯೋಗದಲ್ಲಿ ಭಾಗಿಯಾಗಿದ್ದರು. ಲಕ್ನೋದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನಾಗ್ಪುರದಲ್ಲಿ ನಿತಿನ್ ಗಡ್ಕರಿ, ಚೆನ್ನೈನಲ್ಲಿ ಸುರೇಶ್ ಪ್ರಭು, ರುದ್ರಪ್ರಯಾಗದಲ್ಲಿ ಉಮಾ ಭಾರತಿ, ಹಜೀಪುರದಲ್ಲಿ ರಾಮ್ ವಿಲಾಸ್ ಪಾಸ್ವಾನ್, ಪಾಟ್ನಾದಲ್ಲಿ ರವಿಶಂಕರ್ ಪ್ರಸಾದ್ ಭಾಗಿಯಾಗಿದ್ದಾರೆ.

    ಇತ್ತ ಬೆಂಗಳೂರಿನಲ್ಲಿ ಅನಂತ್‍ಕುಮಾರ್, ಶಿಮ್ಲಾದಲ್ಲಿ ಜೆ.ಪಿ ನಡ್ಡಾ, ಗ್ವಾಲಿಯರ್ ನಲ್ಲಿ ನರೇಂದ್ರ ಸಿಂಗ್ ತೋಮರ್, ನೋಯ್ಡಾದಲ್ಲಿ ಪಿಯೂಸ್ ಗೋಯೆಲ್, ಮುಂಬೈನಲ್ಲಿ ಪ್ರಕಾಶ್ ಜಾವ್ಡೇಕರ್ ಯೋಗಾಸನ ಮಾಡಿದ್ದಾರೆ.

    ಬ್ರಹ್ಮ ಕುಮಾರಿ ಸಂಸ್ಥೆಯು ದೆಹಲಿ ಕೆಂಪು ಕೋಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಎಸ್‍ಎಫ್, ಸಿಆರ್ ಪಿಎಫ್, ಸಿಐಎಸ್‍ಎಫ್‍ನ ಅರೆಸೇನಾ ತುಕಡಿಯ ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 50 ಸಾವಿರ ಮಂದಿ ಯೋಗದಲ್ಲಿ ಪಾಲ್ಗೊಂಡಿದ್ದಾರೆ.

    ಕೇಂದ್ರ ಆಯುಷ್ಯ ಸಚಿವಾಲಯ ಯೋಗ ಲೋಕೇಟರ್ ಎಂಬ ಹೊಸ ಆ್ಯಪ್‍ನ್ನು ಬಿಡುಗಡೆ ಮಾಡಿದೆ. ಯೋಗವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಬಾರದು ಅಲ್ಲದೇ ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದಲ್ಲ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

  • ಋಷಿ ಮುನಿಗಳ ತಪಸ್ಸಿನ ಫಲ ಯೋಗ: ಮೋದಿ

    ಋಷಿ ಮುನಿಗಳ ತಪಸ್ಸಿನ ಫಲ ಯೋಗ: ಮೋದಿ

    ಲಖನೌ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಲಖನೌನಲ್ಲಿ 3ನೇ ಅಂತರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದರು.

    ಇಂದು ವಿಶ್ವದ 180 ದೇಶಗಳಲ್ಲಿ ಯೋಗ ಫೆಸ್ಟ್ ಮಾಡಲಾಗುತ್ತಿದೆ. ಋಷಿ ಮುನಿಗಳ ತಪಸ್ಸಿನ ಫಲವೇ ಯೋಗವಾಗಿದೆ. ಯೋಗ ಇಂದಿನ ಆಧುನಿಕ ಜೀವನ ಶೈಲಿಗೆ ಮದ್ದು. ಅದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದ್ರಿಂದ ನಿಷ್ಕ್ರೀಯಗೊಂಡಿರುವ ನಮ್ಮ ದೇಹದ ಅಂಗಗಳು ಚೈತನ್ಯ ಪಡೆದುಕೊಳ್ಳುತ್ತಿವೆ ಎಂದು ಮೋದಿ ತಿಳಿಸಿದರು.

    ಯೋಗ ನಾವೆಲ್ಲರೂ ಬದುಕಿನ ಮಾರ್ಗವಾಗಿದೆ. ಪ್ರತಿದಿನ ನಾವು ಊಟ ಮಾಡುವ ಅಡುಗೆಯಲ್ಲಿ ಉಪ್ಪು ಎಷ್ಟೋ ಮುಖ್ಯವೋ, ಜೀವನದಲ್ಲಿ ಯೋಗವೂ ಸಹ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ದಿನಕ್ಕೆ ಒಂದು ಗಂಟೆಯಾದ್ರೂ ಯೋಗ ಮಾಡಲು ಜನರು ರೂಢಿಸಿಕೊಳ್ಳಬೇಕು ಎಂದು ಮೋದಿ ಆಶಯ ವ್ಯಕ್ತಪಡಿಸಿದರು.

    ಸಾವಿರಾರು ಜನರ ಜೊತೆ ಮೋದಿ ಯೋಗ ಮಾಡುತ್ತಿದ್ದು, ಈ ನಡುವೆ ಲಖನೌನಲ್ಲಿ ಮಳೆಯ ಮಧ್ಯೆಯೇ ಯೋಗ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ರಾಜಕೀಯ ಗಣ್ಯರು, ಯೋಗ ಗುರುಗಳು ಸಾಥ್ ನೀಡಿದ್ದಾರೆ.

     

  • ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸಿದ್ಧತೆ

    ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸಿದ್ಧತೆ

    ಮೈಸೂರು: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಲಾಂಗೆಸ್ಟ್ ಯೋಗ ಚೈನ್ ಲಿಂಕ್ ಗಿನ್ನಿಸ್ ದಾಖಲೆಗೆ ಮುಂದಾಗಿರೋ ಮೈಸೂರಿನ ಯೋಗಪಟುಗಳು ಅರಮನೆ ಆವರಣದಲ್ಲಿ ಶನಿವಾರ ಪೂರ್ವ ತಯಾರಿ ನಡೆಸಿದರು. ಅರಮನೆಯ ಆವರಣದಲ್ಲಿ 6001 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ನುರಿತ ಯೋಗಪಟುಗಳಿಂದ ಚೈನ್ ಲಿಂಕ್ ಯೋಗಕ್ಕೆ ಪೂರ್ವಾಭ್ಯಾಸ ತರಬೇತಿ ನೀಡಲಾಯಿತು.

    2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.

    ವೀರಭದ್ರಾಸನ ಪ್ರಕಾರ 1 ಹಾಗೂ 2, ತ್ರಿಕೋನಾಸನ, ಪ್ರಸರಿತಪಡೋತ್ತಸನಗಳ ಪ್ರದರ್ಶನ ಮಾಡಲಾಯಿತು. 3 ನಿಮಿಷಗಳಲ್ಲಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆಗೆ ಪೂರ್ವಾಭ್ಯಾಸ ನಡೆಸಲಾಯಿತು. ಇದರಿಂದ ಇವತ್ತು ಅರಮನೆ ಆವರಣದ ತುಂಬೆಲ್ಲ ಮಕ್ಕಳ ಯೋಗಾಭ್ಯಾಸದ ಕಲರವ ತುಂಬಿತ್ತು.

     

    https://youtu.be/Savr_5ExB4w