Tag: International Yoga Day

  • ಯೋಗ ದಿನದಲ್ಲಿ 51 ಪುಷ್‌-ಅಪ್‌ ಸಲೀಸಾಗಿ ಪೂರ್ಣಗೊಳಿಸಿದ ತ.ನಾಡು ರಾಜ್ಯಪಾಲ ರವಿ

    ಯೋಗ ದಿನದಲ್ಲಿ 51 ಪುಷ್‌-ಅಪ್‌ ಸಲೀಸಾಗಿ ಪೂರ್ಣಗೊಳಿಸಿದ ತ.ನಾಡು ರಾಜ್ಯಪಾಲ ರವಿ

    * 73 ವಯಸ್ಸಿನ ರಾಜ್ಯಪಾಲರ ಸಾಮರ್ಥ್ಯ, ಉತ್ಸಾಹ ಕಂಡು ಪ್ರೇಕ್ಷಕರು ನಿಬ್ಬೆರಗು!

    ಚೆನ್ನೈ: ಯೋಗ ದಿನದಲ್ಲಿ 51 ಪುಷ್‌ ಅಪ್‌ ಪೂರ್ಣಗೊಳಿಸುವ ಮೂಲಕ ತಮಿಳುನಾಡು ರಾಜ್ಯಪಾಲ ಆರ್‌.ಎನ್.ರವಿ (R.N.Ravi) ಅವರು ನೆರೆದಿದ್ದವರನ್ನು ಬೆರಗುಗೊಳಿಸಿದ್ದಾರೆ.

    ಮಧುರೈನ ವೇಲಮ್ಮಳ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ (International Yoga Day) ತಮಿಳುನಾಡು ರಾಜ್ಯಪಾಲರ ಪುಷ್‌ ಅಪ್‌ ಕಂಡು ಸಾವಿರಾರು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ | ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

    ವೇಲಮ್ಮಳ್‌ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆಗಾಗಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರ ಸಮ್ಮುಖದಲ್ಲಿ 73 ವಯಸ್ಸಿನ ರಾಜ್ಯಪಾಲ ರವಿ ಅವರು 51 ಪುಷ್‌ ಅಪ್‌ ಪೂರ್ಣಗೊಳಿಸಿದರು. ಯೋಗ, ವ್ಯಾಯಾಮಕ್ಕೆ ಯಾವುದೇ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿದರು.

    ರವಿ ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು. ಅಲ್ಲಿಯ ತರಬೇತಿ ಆಧರಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಪ್ರತಿಯೊಂದು ಯೋಗಾಸನವನ್ನು ನಿಖರತೆ ಮತ್ತು ಸಮತೋಲದಿಂದ ಮಾಡಿದರು. ಇದನ್ನೂ ಓದಿ: Yoga Day 2025: ಯೋಗಾಂಧ್ರದಲ್ಲಿ ʻನಮೋʼ ಯೋಗ – 25,000 ವಿದ್ಯಾರ್ಥಿಗಳಿಂದ 108 ನಿಮಿಷ ಸೂರ್ಯ ನಮಸ್ಕಾರ

    ಯೋಗಾಸನದ ನಂತರ 51 ಪುಷ್-ಅಪ್‌ಗಳನ್ನು ಸಲೀಸಾಗಿ ಪೂರ್ಣಗೊಳಿಸಿದರು. ಇದನ್ನು ಕಂಡು ಪ್ರೇಕ್ಷಕರು ಹರ್ಷೋದ್ಘಾರ ವ್ಯಕ್ತಪಡಿಸಿದರು.

  • ಸಂಘರ್ಷ ತಾಂಡವ ಆಡ್ತಿರೋ ಜಗತ್ತಲ್ಲಿ ಯೋಗ ಶಾಂತಿ ತರಬಹುದು: ಮೋದಿ

    ಸಂಘರ್ಷ ತಾಂಡವ ಆಡ್ತಿರೋ ಜಗತ್ತಲ್ಲಿ ಯೋಗ ಶಾಂತಿ ತರಬಹುದು: ಮೋದಿ

    ವಿಶಾಖಪಟ್ಟಣಂ: ಸಂಘರ್ಷ ತುಂಬಿರುವ ಜಗತ್ತಿನಲ್ಲಿ ಯೋಗ (Yoga) ಶಾಂತಿಯನ್ನು ತರಬಹುದು. ಯೋಗ ʻವಿರಾಮದ ಬಟನ್ʼ ಆಗಿದ್ದು, ಈ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹೇಳಿದ್ದಾರೆ.

    ವಿಶಾಖಪಟ್ಟಣಂನ ಆರ್‌.ಕೆ ಬೀಚ್‌ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ (International Yoga Day) ಅವರು ಮಾತನಾಡಿದರು. ಈ ವೇಳೆ, ಮಾನವೀಯತೆಗಾಗಿ ಯೋಗ ಆರಂಭವಾಗಲಿ. ಈ ಮೂಲಕ ಜಾಗತಿಕ ಶಾಂತಿಯ ಆರಂಭವಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Yoga Day 2025: ಯೋಗಾಂಧ್ರದಲ್ಲಿ ʻನಮೋʼ ಯೋಗ – 25,000 ವಿದ್ಯಾರ್ಥಿಗಳಿಂದ 108 ನಿಮಿಷ ಸೂರ್ಯ ನಮಸ್ಕಾರ

    ಯೋಗವು ಎಲ್ಲಾ ಎಲ್ಲೆಗಳು, ವಯಸ್ಸು, ಸಾಮರ್ಥ್ಯವನ್ನು ಮೀರಿ ಎಲ್ಲರಿಗೂ ಸೇರಿದ್ದಾಗಿದೆ. ಇದು ಜಗತ್ತನ್ನು ಒಂದುಗೂಡಿಸಿದೆ. ಅಂತಾರಾಷ್ಟ್ರೀಯ ಯೋಗ ದಿನ ಆರಂಭಗೊಂಡ 11 ವರ್ಷಗಳ ಬಳಿಕ ಯೋಗ ಪ್ರಪಂಚದಾದ್ಯಂತದ ಕೋಟ್ಯಂತರ ಜನರ ಜೀವನದ ಭಾಗವಾಗಿದೆ ಎಂದಿದ್ದಾರೆ.

    ಯೋಗ ನಮ್ಮ ಪರಸ್ಪರ ಸಂಬಂಧವನ್ನು ಜಾಗೃತಗೊಳಿಸುತ್ತದೆ. ನಮ್ಮನ್ನು ʻನನ್ನಿಂದ ನಮ್ಮʼ ಕಡೆಗೆ ಕರೆದೊಯ್ಯುತ್ತದೆ. ಯೋಗದ ಮೂಲಕ ಭಾರತವು ಜಗತ್ತಿಗೆ ಚಿಕಿತ್ಸೆಯನ್ನು ನೀಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

    ಭಾರತವು ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಆಚರಿಸಲು ಯುಎನ್‌ಜಿಎಯಲ್ಲಿ ನಿರ್ಣಯವನ್ನು ಮಂಡಿಸಿ ದಶಕಗಳು ಕಳೆದಿದೆ. ಇದಾದ ಬಳಿಕ ವಿಶ್ವದ 175 ದೇಶಗಳು ನಮ್ಮ ನಿಲುವಿನೊಂದಿಗೆ ನಿಂತವು. ಇಂದು ಜಗತ್ತಿನಲ್ಲಿ ಈ ಏಕತೆ ಮತ್ತು ಬೆಂಬಲ ಸಾಮಾನ್ಯ ವಿಷಯವಲ್ಲ ಎಂದಿದ್ದಾರೆ.

    ಇದೇ ವೇಳೆ ಯೋಗವನ್ನು ಕ್ರಾಂತಿಯನ್ನಾಗಿ ಪರಿವರ್ತಿಸೋಣ. ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸಲು ಪ್ರತಿದಿನವನ್ನು ಯೋಗದೊಂದಿಗೆ ಪ್ರಾರಂಭಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಧಾನಸೌಧದ ಎದುರು 5,000 ಮಂದಿ ಯೋಗ ಪ್ರದರ್ಶನ

  • ರಾಜ್ಯದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಧಾನಸೌಧದ ಎದುರು 5,000 ಮಂದಿ ಯೋಗ ಪ್ರದರ್ಶನ

    ರಾಜ್ಯದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಧಾನಸೌಧದ ಎದುರು 5,000 ಮಂದಿ ಯೋಗ ಪ್ರದರ್ಶನ

    – ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್ಸ್‌ ಮೇಲೆ ರಾಜ್ಯಪಾಲರು, ಗಣ್ಯರಿಂದ ಯೋಗ
    – ಯೋಗ ಮಾಡಿ ನಿರೋಗಿ ಆಗಿ – ರಾಜ್ಯಪಾಲರಿಂದ ಕಿವಿಮಾತು

    ಬೆಂಗಳೂರು: ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ (Yoga) ಪರಂಪರೆಯಿಂದು ವಿಶ್ವವ್ಯಾಪಿಯಾಗಿ ಬೆಳೆದಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ (World Health) ಎನ್ನುವ ನಿಟ್ಟಿನಲ್ಲಿ ಸಾಕಾರಾರಗೊಂಡಿದೆ. ಹೀಗಾಗಿ ಕರ್ನಾಟವೂ ಈ ಆಚರಣೆಯಿಂದ ಹೊರತಾಗಿಲ್ಲ.

    ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿಂದು ಸಾವಿರಾರು ಯೋಗಪಟುಗಳಿಂದ ಯೋಗಭಾಸ್ಯ ನಡೆಯಿತು. ಆಯುಷ್ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಟ ಅನಿರುದ್ಧ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ನಟಿ ಸಾನ್ಯ ಅಯ್ಯರ್, ನಟ ಶೈನ್ ಶೆಟ್ಟಿ ಭಾಗಿಯಾಗಿ ವಿವಿಧ ಆಸನಗಳನ್ನ ಪ್ರದರ್ಶಿಸಿದರು.

    ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗʼ ಎನ್ನುವ ಧ್ಯೇಯವಾಕ್ಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೆಳಗ್ಗೆ 6 ಗಂಟೆಯಿಂದ ಶುರುವಾಗಿ 8:30ರ ವರೆಗೆ ಯೋಗ ಪ್ರದರ್ಶನ ನಡೆಯಿತು. ಹಿರಿಯ ರಾಜಕೀಯ ನಾಯಕರೂ ಸೇರಿ ವಿವಿಧ ಸಂಸ್ಥೆಯ ಯೋಗಪಟುಗಳು ಇದರಲ್ಲಿ ಪಾಲ್ಗೊಂಡಿದ್ದರು.

    ಬಳಿಕ ಯೋಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಕನ್ನಡದಲ್ಲಿ ಎಲ್ಲರಿಗೂ ಸ್ವಾಗತ ಕೋರಿ ಭಾಷಣ ಶುರು ಮಾಡಿದರು.

    ಯೋಗ ಭಾರತದ ಸಂಸ್ಕೃತಿಯ ಪ್ರತೀಕವಾಗಿದೆ. ಯೋಗ ಎಲ್ಲರ ಕಲ್ಯಾಣ ಮಾಡೋ ಭಾವನೆ ಆಗಿದೆ. ವಿಶ್ವದ ಬಹುತೇಕ ದೇಶಗಳಲ್ಲಿ ಯೋಗ ದಿನವನ್ನ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರದ ಯೋಗ ದಿನ ಉತ್ತಮವಾಗಿ ಆಚರಣೆ ‌ಮಾಡಿದೆ. ಸರ್ಕಾರಕ್ಕೆ ಧನ್ಯವಾದ ಹೇಳ್ತೀನಿ. ಯೋಗ ಜೀವನವನ್ನ ಪರಿಪೂರ್ಣ ಮಾಡುತ್ತದೆ. ʻಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗʼ ಅನ್ನೋ ಘೋಷ ವಾಕ್ಯ ಉತ್ತಮವಾಗಿದೆ ಎಂದರಲ್ಲದೇ ಯೋಗ ಮಾಡಿ ನಿರೋಗಿ ಆಗಿ ಎಂದು ಸಲಹೆ ನೀಡಿದರು.

    ಯೋಗದಿಂದ ಶಾಂತಿ ಸಿಗಲಿದೆ. ನಾನು ಚಿಕ್ಕವನಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಈಗಲೂ ನಿತ್ಯ ಯೋಗ ಮಾಡ್ತೀನಿ. ಜನರಿಗೆ ಮನವಿ ಮಾಡ್ತೀನಿ. ಎಲ್ಲರು ನಿತ್ಯ ಯೋಗಾಭ್ಯಾಸ ‌ಮಾಡಿ. ಯೋಗ ಜೀವನದ ಭಾಗವಾಗಿ ಸ್ವೀಕಾರ ಮಾಡೋಣ. ಎಲ್ಲರೂ ಯೋಗಾಭ್ಯಾಸ ಮಾಡೋಣ ಎಂದು ಸಂಕಲ್ಪ ಮಾಡುವಂತೆ ಕರೆ ಕೊಟ್ಟರು.

  • ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ – ಈ ದಿನದ ಮಹತ್ವ ನೀವೂ ತಿಳಿಯಿರಿ…

    ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ – ಈ ದಿನದ ಮಹತ್ವ ನೀವೂ ತಿಳಿಯಿರಿ…

    ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ (Yoga) ಪರಂಪರೆಯಿಂದು ವಿಶ್ವವ್ಯಾಪಿಯಾಗಿ ಬೆಳೆದಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ (World Health) ಎನ್ನುವ ನಿಟ್ಟಿನಲ್ಲಿ ಸಾಕಾರಾರಗೊಂಡಿದೆ.

    ವಿಶ್ವ ಎಂದರೇನು? ಆರೋಗ್ಯ ಎಂದರೇನು? ಎಂಬುನ್ನು ವಿಶ್ಲೇಷಿಸಿದಾಗ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳೆಂಬ ಅರಿಷಡ್ವರ್ಗಗಳು ಹೆಚ್ಚಾಗದೆಯೇ ಯೋಗ್ಯ ಸ್ಥಿತಿಯಲ್ಲಿ ಇರುವುದೇ ಆರೋಗ್ಯ. ಆದ್ರೆ ಇದೆಲ್ಲವನ್ನೂ ಮೀರಿ ನಾವು ಸಾಧಿಸಬೇಕು ಎಂದರೆ ತಾಳ್ಮೆ ಅತ್ಯಗತ್ಯ. ಅದಕ್ಕಾಗಿ ಅತ್ಯುತ್ತಮ ಮಾರ್ಗವನ್ನು ಯೋಗ ತೋರುತ್ತದೆ.

    ಯೋಗವು ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂಬುದನ್ನು ಯೋಗಗುರುಗಳು ಹೇಳಿದ್ದಾರೆ ಮತ್ತು ನಂಬಿದ್ದಾರೆ. ಭಾರತದಲ್ಲಿ ಪ್ರಸಿದ್ಧಿ ಪಡೆದ ಈ ಯೋಗವನ್ನು ಇಂದು 190ಕ್ಕೂ ಹೆಚ್ಚು ರಾಷ್ಟ್ರಗಳು ಅಳವಡಿಸಿಕೊಂಡು ಆಚರಣೆ ಮಾಡುತ್ತಿವೆ. ವಿಶ್ವದಾದ್ಯಂತ ಜನರು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಯೋಗಾಭ್ಯಾಸ ಮಾಡುವುದು ಸಾಮಾನ್ಯವಾಗಿದೆ. ಯೋಗದಿಂದ ನಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಬದುಕು ವೃದ್ಧಿಯಾಗುತ್ತದೆ. ಮಾನವನ ಯೋಗಕ್ಷೇಮ ಕಾಪಾಡುವಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ (International Yoga day) ಆಚರಿಸಲಾಗುತ್ತದೆ.

    ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ (ವಸ್ತು ವಿಷಯ) ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ (Yoga for One Earth, One Health) ಎಂಬುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಈ ಯೋಗದ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವಿಶೇಷ ದಿನವನ್ನು ಆಚರಣೆ ಮಾಡಿದ್ದರು. ಈ ಬಾರಿ ಬಂದರು ನಗರಿ ವಿಶಾಖಪಟ್ಟಣದಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿನ ಆರ್‌.ಕೆ ಬೀಚ್‌ನಿಂದ ಭೋಗಪುರಂವರೆಗೆ 26 ಕಿಮೀ ಉದ್ದದ ಕಾರಿಡಾರ್‌ನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, 3 ಲಕ್ಷಕ್ಕೂ ಅಧಿಕ ಮಂದಿಯೊಂದಿಗೆ ಪ್ರಧಾನಿ ಮೋದಿ ಯೋಗ ಪ್ರದರ್ಶನ ಮಾಡಲಿದ್ದಾರೆ.

    ಯೋಗ ಅಸ್ವಿತ್ತಕ್ಕೆ ಬಂದಿದ್ದು ಯಾವಾಗ?
    ಯೋಗಕ್ಕೆ ಸರಿಸುಮಾರು 2,500 ವರ್ಷಗಳ ಪುರಾತನ ಇತಿಹಾಸವಿದೆ. ನಾಗರಿಕತೆಯ ಆರಂಭದಿಂದಲೂ ಯೋಗವನ್ನು ಅಭ್ಯಾಸ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಯಾವುದೇ ಧರ್ಮ, ನಂಬಿಕೆಗಳು ಅಸ್ತಿತ್ವಕ್ಕೆ ಬರುವ ಮೊದಲೇ ಯೋಗ ಅಸ್ತಿತ್ವಕ್ಕೆ ಬಂದಿತು ಎಂಬುದು ನಂಬಿಕೆ. ಭಗವಾನ್ ಶಿವನನ್ನು ಯೋಗ ಪುರಾಣಗಳಲ್ಲಿ ಮೊದಲ ಯೋಗಿ ಅಥವಾ ಆದಿಯೋಗಿ ಎಂದು ಪರಿಗಣಿಸಲಾಗಿದೆ. ಪರಮೇಶ್ವರನನ್ನು ಯೋಗದ ಮೊದಲ ಗುರು ಎಂದು ಕೂಡ ಕರೆಯಲಾಗುತ್ತದೆ.

    ಆದಿಯೋಗಿ ಅಂದರೆ ಶಿವನು ಸಾವಿರಾರು ವರ್ಷಗಳ ಹಿಂದೆ ಹಿಮಾಲಯದ ಕಾಂತಿ ಸರೋವರದ ತೀರದಲ್ಲಿ ಸಪ್ತಋಷಿಗಳಿಗೆ ತನ್ನ ವ್ಯಾಪಕವಾದ ಬುದ್ಧಿವಂತಿಕೆ ಧಾರೆ ಎರೆಯುತ್ತಾರೆ. ಆ ಋಷಿಗಳು ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಜಗತ್ತಿನಲ್ಲಿ ಅತ್ಯಂತ ಶಕ್ತಿಯುತವಾದ ಯೋಗ ವಿಜ್ಞಾನ ಅಂಶವನ್ನು ಹರಡುತ್ತಾರೆ. ಆಯುಷ್ ಸಚಿವಾಲಯದ ಪ್ರಕಾರ, ಸಮಕಾಲೀನ ಸಂಶೋಧಕರು ಪ್ರಪಂಚದಾದ್ಯಂತದ ಪ್ರಾಚೀನ ಸಂಸ್ಕೃತಿಗಳ ನಡುವಿನ ಗಮನಾರ್ಹ ಸಾಮ್ಯತೆಗಳನ್ನು ಗಮನಿಸಿದ್ದಾರೆ.

    ಭಾರತದಲ್ಲಿ ಯೋಗ ಪ್ರಸಿದ್ಧಿ ಪಡೆದಿದ್ದು ಹೇಗೆ?
    ವಿವಿಧ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಯೋಗದ ಬಗ್ಗೆ ಅರಿವಿದ್ದರೂ ಅದರಲ್ಲಿನ ʻಆಸನʼಗಳ ಪರಿಕಲ್ಪನೆ ಇರಲಿಲ್ಲ. ನಮ್ಮ ದೇಶದ ಆಯುರ್ವೇದ ಪದ್ಧತಿಯಲ್ಲಿ ಹಲವು ಬಗೆಯ ಅನಾರೋಗ್ಯಕ್ಕೆ ಇಂತಿಂಥ ಆಸನ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಯೋಗಾಭ್ಯಾಸದಲ್ಲಿ ಇರುವ ಕೆಲವು ಆಸನಗಳನ್ನು ಮಾಡಿಯೇ ಅದೆಷ್ಟೊ ತೊಂದರೆಗಳನ್ನು ಕಡಿಮೆ ಮಾಡಿಕೊಂಡವರ ಉದಾಹರಣೆಗಳೂ ಇವೆ.

    2015ರಲ್ಲಿ ಭಾರತ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರ ಪಡಿಸುವ ಜೊತೆಗೆ ಯೋಗದ ವಿವಿಧ ಆಸನಗಳ ಮಹತ್ವವನ್ನೂ ಸಾರಿದೆ. ಆಸನಗಳಿಂದ ಅನಾರೋಗ್ಯ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನೂ ಲೋಕಕ್ಕೆ ತಿಳಿಸಿತು. ಅಷ್ಟೇ ಅಲ್ಲ, ಧ್ಯಾನ, ಪ್ರಾಣಾಯಾಮಗಳು ದೇಹಕ್ಕೆ ಕೊಡುವ ಚೈತನ್ಯವನ್ನು ತೋರಿಸಿಕೊಟ್ಟಿತು. ಪಾಶ್ಚಾತ್ಯ ರಾಷ್ಟ್ರಗಳು ಯೋಗದ ಬಗ್ಗೆ ಆಕರ್ಷಿತರಾಗಲು ಇದೇ ಕಾರಣವೂ ಆಯಿತು. ಚರ್ಮಕ್ಕೆ ಸಂಬಂಧಪಟ್ಟ, ಆಹಾರ ಸಂಬಂಧಿ, ಮತ್ತಿತರ ಕಾಯಿಲೆಗಳಿಂದ ಪಾರಾಗಲು, ಒತ್ತಡದ ಬದುಕಿಂದ ಮುಕ್ತಿ ಪಡೆಯಲು ವಿದೇಶಿಯರು ಯೋಗದ ಬಗ್ಗೆ ಹೆಚ್ಚೆಚ್ಚು ಆಸಕ್ತಿ ತೋರಿಸಲು ಪ್ರಾರಂಭಿಸಿದರು.

    ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಯಾಕಾಗಿ ಇದನ್ನ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂಬುದಕ್ಕೆ ಸಮರ್ಥ ವಿವರಣೆಯನ್ನೂ ಭಾರತ ಕೊಟ್ಟಿದೆ. ಅದನ್ನು ವಿಶ್ವ ಸಂಸ್ಥೆ ಒಪ್ಪಿಕೊಂಡು, ಸದಸ್ಯ ರಾಷ್ಟ್ರಗಳು ಅನುಮೋದಿಸಿವೆ. ಆಗಿನಿಂದ ಇಲ್ಲಿಯವರೆಗೆ ಭಾರತ, ಯೋಗಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಗಳನ್ನು ಆಯೋಜಿಸುತ್ತಿದೆ. ವಿದೇಶಗಳಲ್ಲೂ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಮಹತ್ವವನ್ನು ಸಾರುತ್ತಿದೆ.

  • Photos Gallery: ಯೋಗ ದಿನಾಚರಣೆ ವೇಳೆ ಕಾಶ್ಮೀರಿ ಮಹಿಳೆಯರೊಂದಿಗೆ ಮೋದಿ ಸೆಲ್ಫಿ!

    Photos Gallery: ಯೋಗ ದಿನಾಚರಣೆ ವೇಳೆ ಕಾಶ್ಮೀರಿ ಮಹಿಳೆಯರೊಂದಿಗೆ ಮೋದಿ ಸೆಲ್ಫಿ!

    10ನೇ ಅಂತಾರಾಷ್ಟ್ರೀಯ ಯೋಗ ದಿನದ (International Yoga Day 2024) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ‌ಜಮ್ಮು ಮತ್ತು ಕಾಶ್ಮೀರದ ದಾಲ್‌ ಸರೋವರ ತೀರದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶಿಸಿದರು. ಬಳಿಕ ಅಲ್ಲಿನ ಅಲ್ಲಿನ ಜನರೊಂದಿಗೆ ಸರಳ ಸಂವಾದ ನಡೆಸಿ, ವಿಶೇಷತೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಜನರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಈ ಫೋಟೋಗಳನ್ನು ಮೋದಿ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ದಾಲ್‌ ಸರೋವರ ತೀರದಲ್ಲಿ ಕಂಡ ಅದ್ಭುತ ಕ್ಷಣಗಳು ಹೇಗಿತ್ತು ಎಂಬುದನ್ನು ಫೋಟೋ ನೋಡಿ ಕಣ್ತುಂಬಿಕೊಳ್ಳಿ….

  • `ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ – ದಾಲ್‌ ಸರೋವರ ತೀರದಲ್ಲಿ ನಮೋ ಯೋಗ!

    `ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ – ದಾಲ್‌ ಸರೋವರ ತೀರದಲ್ಲಿ ನಮೋ ಯೋಗ!

    ಶ್ರೀನಗರ: 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ‌ಜಮ್ಮು ಮತ್ತು ಕಾಶ್ಮೀರದ ದಾಲ್‌ ಸರೋವರ ತೀರದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶಿಸಿದರು.

    ಈ ಬಾರಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ (Yoga for Self and Society) ವಸ್ತು ವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಇದರ ಉದ್ದೇಶವಾಗಿದೆ. ಇದನ್ನೂ ಓದಿ: International Yoga Day: ‘ಯೋಗ’ವೆಂಬ ಗಿನ್ನಿಸ್‌ ರೆಕಾರ್ಡ್‌ – ಯಾವ ವರ್ಷ, ಎಲ್ಲಿ ದಾಖಲೆಯಾಗಿತ್ತು?

    3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಮ್ಮು‌ ಮತ್ತು‌ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಮೋದಿ ಅವರು, ಶ್ರೀನಗರದ ದಾಲ್‌ ಸರೋವರದ (Darl Lake) ತೀರದಲ್ಲಿನ ಶೇರ್-ಐ-ಕಾಶ್ಮೀರ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಯೋಗ ಪ್ರದರ್ಶನ ನೀಡಿದರು. ಇದರೊಂದಿಗೆ ಸರಿಸುಮಾರು 7 ಸಾವಿರ ಮಂದಿ ಪಾಲ್ಗೊಂಡು ವಿಶ್ವಕ್ಕೆ ಆರೋಗ್ಯ ಜಾಗೃತಿಯ ಸಂದೇಶ ಸಾರಿದರು. ಇದನ್ನೂ ಓದಿ: ವಿಧಾನಸೌಧದ ಎದುರು ಡಿಕೆಶಿ ಯೋಗ – ನಟಿ ಅನು ಪ್ರಭಾಕರ್‌, ಕ್ರಿಕೆಟಿಗ ಮನಿಷ್‌ ಪಾಂಡೆ ಸಾಥ್‌

    ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತು. ಭದ್ರತಾ ಕ್ರಮದ ಭಾಗವಾಗಿ ಶ್ರೀನಗರದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಡ್ರೋನ್ (Drone) ಮತ್ತು ಕ್ವಾಡ್‌ಕ್ಯಾಪ್ಚರ್‌ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು.

    ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಎಲ್ಲ 20 ಜಿಲ್ಲೆಗಳಲ್ಲೂ ವರ್ಚುವಲ್ ವೇದಿಕೆಯನ್ನು ಕಲ್ಪಿಸಲಾಗಿತ್ತು. ವರ್ಚುವಲ್‌ನಲ್ಲೂ‌ ಪ್ರತಿ ಜಿಲ್ಲೆಯಿಂದು ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದನ್ನೂ ಓದಿ: 

  • ನಮೋ ಜಮ್ಮು-ಕಾಶ್ಮೀರ ಪ್ರವಾಸ ಇಂದಿನಿಂದ ಆರಂಭ – ಬಿಗಿ ಭದ್ರತೆ ನಿಯೋಜನೆ

    ನಮೋ ಜಮ್ಮು-ಕಾಶ್ಮೀರ ಪ್ರವಾಸ ಇಂದಿನಿಂದ ಆರಂಭ – ಬಿಗಿ ಭದ್ರತೆ ನಿಯೋಜನೆ

    – ಶುಕ್ರವಾರ ದಾಲ್‌ ಸರೋವರ ತೀರದಲ್ಲಿ ಮೋದಿ ಯೋಗ ಪ್ರದರ್ಶನ

    ಶ್ರೀನಗರ: ಪ್ರಧಾನಿ ಮೋದಿ (Narendra Modi) ಅವರ 2 ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಇಂದು (ಗುರುವಾರ) ಆರಂಭವಾಗಲಿದೆ. 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಮೋದಿ ಅವರ ಮೊದಲ ಭೇಟಿಯೂ ಇದಾಗಿದೆ.

    ಶ್ರೀನಗರದಲ್ಲಿ (Srinagar) ಜೂನ್‌ 21ರಂದು (ಶುಕ್ರವಾರ) ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಹಂತಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ. ಇದನ್ನೂ ಓದಿ: ವಿಶ್ವ ಆರೋಗ್ಯಕ್ಕಾಗಿ ಯೋಗ – ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗʼ

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, ಪ್ರಧಾನಿ ಅವರ ಈ ಭೇಟಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಶಿಷ್ಟಾಚಾರದ ಪ್ರಕಾರ, ಹಲವು ಹಂತಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೂಗೊಳ್ಳಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಧಿ ಕುಮಾರ್ ಬರ್ಡಿ ತಿಳಿಸಿದ್ದಾರೆ.

    ಭದ್ರತಾ ಕ್ರಮದ ಭಾಗವಾಗಿ ಶ್ರೀನಗರದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಡ್ರೋನ್ (Drone) ಮತ್ತು ಕ್ವಾಡ್‌ಕಾಪ್ಟರ್‌ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಡ್ರೋನ್ ನಿಯಮಗಳು 2021ರ ನಿಬಂಧನೆಗಳ ಪ್ರಕಾರ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭತ್ತ, ರಾಗಿ, ಹತ್ತಿ ಸೇರಿ 22 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ ಕೇಂದ್ರ – ಇಲ್ಲಿದೆ ನೋಡಿ ದರ ಪಟ್ಟಿ..

    ದಾಲ್‌ ಸರೋವರದ ತೀರದಲ್ಲಿ ಯೋಗ:
    10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಈ ಬಾರಿ ಪ್ರಧಾನಿ ಮೋದಿ ಅವರು ಯೋಗ ದಿನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಚರಿಸಲಿದ್ದಾರೆ. ಶ್ರೀನಗರದ ದಾಲ್‌ ಸರೋವರದ (Darl Lake) ತೀರದಲ್ಲಿನ ಶೇರ್-ಐ-ಕಾಶ್ಮೀರ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ 9,000 ಮಂದಿ ಯೋಗ ಪ್ರದರ್ಶನ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

    ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಎಲ್ಲ 20 ಜಿಲ್ಲೆಗಳನ್ನು ವರ್ಚುವಲ್ ಆಗಿ ಸಂಪರ್ಕಿಸುವ ಯೋಜನೆ ಇದೆ ಪ್ರತಿ ಜಿಲ್ಲೆಯಿಂದ 2,000 ಜನರು ಸಂಪರ್ಕ ಸಾಧಿಸಿದರೂ, ಕಾರ್ಯಕ್ರಮದಲ್ಲಿ ಸುಮಾರು 50,000 ಭಾಗವಹಿಸಿದಂತಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ. ಇದನ್ನೂ ಓದಿ: ರಾಮಾಯಣ ನಾಟಕ ಪ್ರದರ್ಶಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ 1.02 ಲಕ್ಷ ದಂಡ ವಿಧಿಸಿದ ಬಾಂಬೆ ಐಐಟಿ

    ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ:
    ಈ ಬಾರಿಯ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ (ವಸ್ತು ವಿಷಯ) ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ (Yoga for Self and Society) ಎಂದಾಗಿದೆ. ಜೂನ್‌ 21 ರಂದು ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವಿಶೇಷ ದಿನವನ್ನು ಆಚರಣೆ ಮಾಡಲಿದ್ದಾರೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಇದರ ಉದ್ದೇಶವಾಗಿದೆ.

  • ವಿಶ್ವ ಆರೋಗ್ಯಕ್ಕಾಗಿ ಯೋಗ – ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗʼ

    ವಿಶ್ವ ಆರೋಗ್ಯಕ್ಕಾಗಿ ಯೋಗ – ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗʼ

    ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ (Yoga) ಪರಂಪರೆಯಿಂದು ವಿಶ್ವವ್ಯಾಪಿಯಾಗಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ (World Health) ಎನ್ನುವ ನಿಟ್ಟಿನಲ್ಲಿ ಸಾಕಾರಾರಗೊಂಡಿದೆ.

    ವಿಶ್ವ ಎಂದರೇನು? ಆರೋಗ್ಯ ಎಂದರೇನು? ಎಂಬುನ್ನು ವಿಶ್ಲೇಷಿಸಿದಾಗ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳೆಂಬ ಅರಿಷಡ್ವರ್ಗಗಳು ಹೆಚ್ಚಾಗದೆಯೇ ಯೋಗ್ಯ ಸ್ಥಿತಿಯಲ್ಲಿ ಇರುವುದೇ ಆರೋಗ್ಯ. ಆದ್ರೆ ಇದೆಲ್ಲವನ್ನೂ ಮೀರಿ ನಾವು ಸಾಧಿಸಬೇಕು ಎಂದರೆ ತಾಳ್ಮೆ ಅತ್ಯಗತ್ಯ. ಅದಕ್ಕಾಗಿ ಅತ್ಯುತ್ತಮ ಮಾರ್ಗವನ್ನು ಯೋಗ ತೋರುತ್ತದೆ. ಯೋಗವು ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂಬುದನ್ನು ಯೋಗಗುರುಗಳು ಹೇಳಿದ್ದಾರೆ ಮತ್ತು ನಂಬಿದ್ದಾರೆ. ಭಾರತದಲ್ಲಿ ಪ್ರಸಿದ್ಧಿ ಪಡೆದ ಈ ಯೋಗವನ್ನು ಇಂದು 190ಕ್ಕೂ ಹೆಚ್ಚು ರಾಷ್ಟ್ರಗಳು ಅಳವಡಿಸಿಕೊಂಡು ಆಚರಣೆ ಮಾಡುತ್ತಿವೆ. ವಿಶ್ವದಾದ್ಯಂತ ಜನರು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಯೋಗಾಭ್ಯಾಸ ಮಾಡುವುದು ಸಾಮಾನ್ಯವಾಗಿದೆ. ಯೋಗದಿಂದ ನಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಬದುಕು ವೃದ್ಧಿಯಾಗುತ್ತದೆ. ಮಾನವನ ಯೋಗಕ್ಷೇಮ ಕಾಪಾಡುವಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ (International Yoga day) ಆಚರಿಸಲಾಗುತ್ತದೆ.

    ಈ ಬಾರಿಯ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ (ವಸ್ತು ವಿಷಯ) ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ (Yoga for Self and Society) ಎಂದಾಗಿದೆ. ಜೂನ್‌ 21 ರಂದು ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವಿಶೇಷ ದಿನವನ್ನು ಆಚರಣೆ ಮಾಡಲಿದ್ದಾರೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಇದರ ಉದ್ದೇಶ.

    ಕಾಶ್ಮೀರದಲ್ಲಿ ಮೋದಿ ʻಯೋಗʼ

    ಈ ಬಾರಿ ಪ್ರಧಾನಿ ಮೋದಿ (Narendra Modi) ಅವರು ಯೋಗ ದಿನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಆಚರಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಸುಮಾರು 7 ಸಾವಿರಕ್ಕೂ ಹೆಚ್ಚು ಜನ ಆಗಮಿಸಲಿದ್ದಾರೆ. ದಾಲ್‌ ಸರೋವರದ ದಡದಲ್ಲಿ ಯೋಗ ದಿನ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯ ಕಾರ್ಯಕ್ರಮವು ಶ್ರೀನಗರದ ಶೇರ್–ಇ–ಕಾಶ್ಮೀರ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ನಡೆಯಲಿದೆ.

    ಯೋಗ ಅಸ್ವಿತ್ತಕ್ಕೆ ಬಂದಿದ್ದು ಯಾವಾಗ?

    ಯೋಗಕ್ಕೆ ಸರಿಸುಮಾರು 2,500 ವರ್ಷಗಳ ಪುರಾತನ ಇತಿಹಾಸವಿದೆ. ನಾಗರಿಕತೆಯ ಆರಂಭದಿಂದಲೂ ಯೋಗವನ್ನು ಅಭ್ಯಾಸ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಯಾವುದೇ ಧರ್ಮ, ನಂಬಿಕೆಗಳು ಅಸ್ತಿತ್ವಕ್ಕೆ ಬರುವ ಮೊದಲೇ ಯೋಗ ಅಸ್ತಿತ್ವಕ್ಕೆ ಬಂದಿತು ಎಂಬುದು ನಂಬಿಕೆ. ಭಗವಾನ್ ಶಿವನನ್ನು ಯೋಗ ಪುರಾಣಗಳಲ್ಲಿ ಮೊದಲ ಯೋಗಿ ಅಥವಾ ಆದಿಯೋಗಿ ಎಂದು ಪರಿಗಣಿಸಲಾಗಿದೆ. ಪರಮೇಶ್ವರನನ್ನು ಯೋಗದ ಮೊದಲ ಗುರು ಎಂದು ಕೂಡ ಕರೆಯಲಾಗುತ್ತದೆ. ಆದಿಯೋಗಿ ಅಂದರೆ ಶಿವನು ಸಾವಿರಾರು ವರ್ಷಗಳ ಹಿಂದೆ ಹಿಮಾಲಯದ ಕಾಂತಿ ಸರೋವರದ ತೀರದಲ್ಲಿ ಸಪ್ತಋಷಿಗಳಿಗೆ ತನ್ನ ವ್ಯಾಪಕವಾದ ಬುದ್ಧಿವಂತಿಕೆ ಧಾರೆ ಎರೆಯುತ್ತಾರೆ. ಆ ಋಷಿಗಳು ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಜಗತ್ತಿನಲ್ಲಿ ಅತ್ಯಂತ ಶಕ್ತಿಯುತವಾದ ಯೋಗ ವಿಜ್ಞಾನ ಅಂಶವನ್ನು ಹರಡುತ್ತಾರೆ. ಆಯುಷ್ ಸಚಿವಾಲಯದ ಪ್ರಕಾರ, ಸಮಕಾಲೀನ ಸಂಶೋಧಕರು ಪ್ರಪಂಚದಾದ್ಯಂತದ ಪ್ರಾಚೀನ ಸಂಸ್ಕೃತಿಗಳ ನಡುವಿನ ಗಮನಾರ್ಹ ಸಾಮ್ಯತೆಗಳನ್ನು ಗಮನಿಸಿದ್ದಾರೆ.

    ಭಾರತದಲ್ಲಿ ಯೋಗ ಪ್ರಸಿದ್ಧಿ ಪಡೆದಿದ್ದು ಹೇಗೆ?

    ವಿವಿಧ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಯೋಗದ ಬಗ್ಗೆ ಅರಿವಿದ್ದರೂ ಅದರಲ್ಲಿನ ʻಆಸನʼಗಳ ಪರಿಕಲ್ಪನೆ ಇರಲಿಲ್ಲ. ನಮ್ಮ ದೇಶದ ಆಯುರ್ವೇದ ಪದ್ಧತಿಯಲ್ಲಿ ಹಲವು ಬಗೆಯ ಅನಾರೋಗ್ಯಕ್ಕೆ ಇಂತಿಂಥ ಆಸನ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಯೋಗಾಭ್ಯಾಸದಲ್ಲಿ ಇರುವ ಕೆಲವು ಆಸನಗಳನ್ನು ಮಾಡಿಯೇ ಅದೆಷ್ಟೊ ತೊಂದರೆಗಳನ್ನು ಕಡಿಮೆ ಮಾಡಿಕೊಂಡವರ ಉದಾಹರಣೆಗಳೂ ಇವೆ. 2015ರಲ್ಲಿ ಭಾರತ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರ ಪಡಿಸುವ ಜೊತೆಗೆ ಯೋಗದ ವಿವಿಧ ಆಸನಗಳ ಮಹತ್ವವನ್ನೂ ಸಾರಿದೆ. ಆಸನಗಳಿಂದ ಅನಾರೋಗ್ಯ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನೂ ಲೋಕಕ್ಕೆ ತಿಳಿಸಿತು. ಅಷ್ಟೇ ಅಲ್ಲ, ಧ್ಯಾನ, ಪ್ರಾಣಾಯಾಮಗಳು ದೇಹಕ್ಕೆ ಕೊಡುವ ಚೈತನ್ಯವನ್ನು ತೋರಿಸಿಕೊಟ್ಟಿತು. ಪಾಶ್ಚಾತ್ಯ ರಾಷ್ಟ್ರಗಳು ಯೋಗದ ಬಗ್ಗೆ ಆಕರ್ಷಿತರಾಗಲು ಇದೇ ಕಾರಣವೂ ಆಯಿತು. ಚರ್ಮಕ್ಕೆ ಸಂಬಂಧಪಟ್ಟ, ಆಹಾರ ಸಂಬಂಧಿ, ಮತ್ತಿತರ ಕಾಯಿಲೆಗಳಿಂದ ಪಾರಾಗಲು, ಒತ್ತಡದ ಬದುಕಿಂದ ಮುಕ್ತಿ ಪಡೆಯಲು ವಿದೇಶಿಯರು ಯೋಗದ ಬಗ್ಗೆ ಹೆಚ್ಚೆಚ್ಚು ಆಸಕ್ತಿ ತೋರಿಸಲು ಪ್ರಾರಂಭಿಸಿದರು. ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಯಾಕಾಗಿ ಇದನ್ನ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂಬುದಕ್ಕೆ ಸಮರ್ಥ ವಿವರಣೆಯನ್ನೂ ಭಾರತ ಕೊಟ್ಟಿದೆ. ಅದನ್ನು ವಿಶ್ವ ಸಂಸ್ಥೆ ಒಪ್ಪಿಕೊಂಡು, ಸದಸ್ಯ ರಾಷ್ಟ್ರಗಳು ಅನುಮೋದಿಸಿವೆ. ಆಗಿನಿಂದಲ ಇಲ್ಲಿಯವರೆಗೆ ಭಾರತ, ಯೋಗಕ್ಕೆ ಸಂಬಂಧಪಟ್ಟ ಹಲವು ಕಾರ್ಯಕ್ರಗಳನ್ನು ಆಯೋಜಿಸುತ್ತಿದೆ. ವಿದೇಶಗಳಲ್ಲೂ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಮಹತ್ವವನ್ನು ಸಾರುತ್ತಿದೆ.

  • ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

    ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

    ವಾಷಿಂಗ್ಟನ್‌: ಎರಡನೇ ದಿನದ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈಗ ವಾಷಿಂಗ್ಟನ್‌ ತಲುಪಿದ್ದಾರೆ.

    ಅಂತಾರಾಷ್ಟ್ರೀಯ ಯೋಗ ದಿನದಂದು (International Yoga Day) ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಕಟ್ಟಡದಲ್ಲಿ ಯೋಗ ಕಾರ್ಯಕ್ರಮವನ್ನು ನಡೆಸಿದ ಬಳಿಕ ವಾಷಿಂಗ್ಟನ್‌ಗೆ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.   ಇದನ್ನೂ ಓದಿ: ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ

    ಆಂಡ್ರ್ಯೂಸ್ ಏರ್ ಬೇಸ್‌ನಲ್ಲಿ ಇಳಿದ ಮೋದಿ ಅವರಿಗೆ ಗೌರವ ವಂದನೆಯನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಎರಡೂ ದೇಶಗಳ ರಾಷ್ಟ್ರಗೀತೆಗಳನ್ನು ನುಡಿಸಲಾಯಿತು.

    ನಂತರ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನಕ್ಕೆ  (White House) ಆಗಮಿಸಿದ ಮೋದಿ ಅವರಿಗೆ ಅಧ್ಯಕ್ಷ ಜೋ ಬೈಡನ್‌ (Joe Biden) ಮತ್ತು ಪತ್ನಿ ಜಿಲ್ ಬಿಡೆನ್ (Jill Biden) ಸ್ವಾಗತಿಸಿದರು. ವಿಶೇಷವಾಗಿ ವೈಟ್‍ಹೌಸ್‍ನಲ್ಲಿ ಪ್ರಧಾನಿ ಮೋದಿಗೆ ಬೈಡೆನ್ ದಂಪತಿ ಔತಣಕೂಟ ಏರ್ಪಡಿಸಿದ್ದಾರೆ.

    ಮೋದಿಗೆ ಸಸ್ಯಾಹಾರಿ ಭೋಜನವನ್ನು ಆಯೋಜಿಸಲಾಗಿದ್ದು ವಿಶೇಷವಾಗಿ ಸಿರಿಧಾನ್ಯಗಳ ಖಾದ್ಯ ಮಾಡಲಾಗಿದೆ. ಮೋದಿ ಔತಣಕೂಟಕ್ಕೆ ಬೈಡೆನ್ ಪತ್ನಿ ಉತ್ಸುಕರಾಗಿದ್ದಾರೆ. ಖುದ್ದು ಜಿಲ್ ಬೈಡೆನ್ ಅವರೇ ಖಾದ್ಯ ತಯಾರಿಸಿದ್ದಾರೆ ಎಂದು ವೈಟ್‍ಹೌಸ್ ಶೆಫ್ ಹೇಳಿದ್ದಾರೆ.

    ಇಂದು ಮೋದಿ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಅಮೆರಿಕ ಸಂಸತ್ತಿನಲ್ಲಿ ಎರಡನೇ ಬಾರಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ.