Tag: International Football

  • ಭಾರತೀಯ ಫೇಮಸ್ ಫುಟ್ಬಾಲ್ ಆಟಗಾರ ಇನ್ನಿಲ್ಲ

    ಭಾರತೀಯ ಫೇಮಸ್ ಫುಟ್ಬಾಲ್ ಆಟಗಾರ ಇನ್ನಿಲ್ಲ

    ಕೋಲ್ಕತ್ತಾ: ಭಾರತ ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ನರೇಂದ್ರ ತಾಪಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್ (AIFF) ತಿಳಿಸಿದೆ.

    ಥಾಪಾ 1984 ರಲ್ಲಿ ಸಿಂಗಾಪುರದಲ್ಲಿ ನಡೆದ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆದ ಭಾರತೀಯ ತಂಡದ ಭಾಗವಾಗಿದ್ದರು. ಕೊಚ್ಚಿನ್‌ನಲ್ಲಿ ನಡೆದ 1983ರ ನೆಹರೂ ಕಪ್‌ನಲ್ಲಿ ಚೀನಾ ವಿರುದ್ಧ ಮುರು ಗೋಲ್‌ಗಳನ್ನು ಸಿಡಿಸಿ ಮಿಂಚಿದ್ದರು. 29 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಇದನ್ನೂ ಓದಿ: ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೇಟ್‍ನಿಂದ ಹೊಡೆದು ಕೊಲೆಗೈದ್ರು

    ಅಷ್ಟೇ ಅಲ್ಲದೇ 1984 ರಲ್ಲಿ ಬೀಜಿಂಗ್‌ನಲ್ಲಿ ನಡೆದ ಗ್ರೇಟ್ ವಾಲ್ ಕಪ್‌ನಲ್ಲಿ ಭಾರತವು ಅಲ್ಜೀರಿಯಾ ವಿರುದ್ಧ 1-0 ಅಂತರದಲ್ಲಿ ಗೆಲುವು ಸಾಧಿಸಿತು, ಈ ಟೂರ್ನಿಯಲ್ಲಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಸಾಧನೆಯನ್ನು ಅವರು ಮಾಡಿದ್ದಾರೆ ಎಂದು ಎಐಎಫ್‌ಎಫ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ ತಂಡದ ಫುಟ್‍ಬಾಲ್ ಮಾಜಿ ಆಟಗಾರ ಚುನಿ ಗೋಸ್ವಾಮಿ ಇನ್ನಿಲ್ಲ

    ಭಾರತ ತಂಡದ ಫುಟ್‍ಬಾಲ್ ಮಾಜಿ ಆಟಗಾರ ಚುನಿ ಗೋಸ್ವಾಮಿ ಇನ್ನಿಲ್ಲ

    – 1962ರಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದ ಗೋಸ್ವಾಮಿ
    – ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ತಂದುಕೊಟ್ಟಿದ್ದರು

    ಕೋಲ್ಕತಾ: ಭಾರತ ತಂಡದ ಫುಟ್ಬಾಲ್ ಮಾಜಿ ಆಟಗಾರ ಚುನಿ ಗೋಸ್ವಾಮಿ(82)ಯವರು ನಿಧನರಾಗಿದ್ದಾರೆ.

    ಧೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚುನಿ ಗೋಸ್ವಾಮಿಯವರು ಗುರುವಾರ ಕೋಲ್ಕತಾದಲ್ಲಿ ನಿಧನರಾಗಿದ್ದಾರೆ. ಚುನಿ ಅವರು ಸಕ್ಕರೆ ಖಾಯಿಲೆ ಒಳಗೊಂಡಂತೆ ಪ್ರಾಸ್ಟೇಟ್, ನರಗಳ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಬುಧವಾರ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರ್ಡಿಯಾಕ್ ಅರೆಸ್ಟ್‍ನಿಂದಾಗಿ ಗುರುವಾರ ಸಂಜೆ 5 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ.

    ಗೋಸ್ವಾಮಿಯವರು 1962ರಲ್ಲಿ ನಡೆದ ಏಷಿಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಪಡೆದ ತಂಡದ ಕ್ಯಾಪ್ಟನ್ ಆಗಿದ್ದರು. ಅಲ್ಲದೆ ಗೋಸ್ವಾಮಿಯವರು ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಿದ್ದರು. ಇವರ ನಾಯಕತ್ವದಲ್ಲಿ ಭಾರತದ ಫುಟ್‍ಬಾಲ್ ತಂಡ 1962ರಲ್ಲಿ ನಡೆದ ಏಷಿಯನ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಪಡೆದಿತ್ತು. ಅಲ್ಲದೆ ರನ್ನರ್ ಅಪ್ ಹಂತ ತಲುಪುವ ಮೂಲಕ 1964ರಲ್ಲಿ ಏಷಿಯನ್ ಕಪ್ ಪೂರ್ಣಗೊಳಿಸಿತ್ತು. ಇದಾದ ಆರು ತಿಂಗಳ ನಂತರ ನಡೆದಿದ್ದ ಮರ್ಡೆಕಾ ಫುಟ್‍ಬಾಲ್ ನಲ್ಲಿ ಬರ್ಮಾ ವಿರುದ್ಧ ಭಾರತ ಸೋಲನುಭವಿಸಿತ್ತು.

    ಕ್ಲಬ್ ಫುಟ್‍ಬಾಲ್‍ನಲ್ಲಿ ಗೋಸ್ವಾಮಿಯವರು ಯಾವಾಗಲೂ ಮೋಹನ್ ಬಗಾನ್ ಪರ ಆಡುತ್ತಿದ್ದರು. ಅವರ ಕಾಲೇಜು ದಿನಗಳಲ್ಲಿ ಒಂದೇ ವರ್ಷದಲ್ಲಿ ಕೋಲ್ಕತಾ ವಿಶ್ವವಿದ್ಯಾಲಯದ ಫುಟ್‍ಬಾಲ್ ಹಾಗೂ ಕ್ರಿಕೆಟ್ ತಂಡ ಎರಡರ ಕ್ಯಾಪ್ಟನ್ ಆಗಿದ್ದರು.

    ಗೋಸ್ವಾಮಿಯವರು 1957ರಲ್ಲಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡಲು ಪ್ರಾರಂಭಿಸಿದ್ದರು. ಅವರು 1964ರಲ್ಲಿ 27 ವರ್ಷದವರಾಗಿದ್ದಾಗ ಅಂತರಾಷ್ಟ್ರೀಯ ಫುಟ್‍ಬಾಲ್ ಪಂದ್ಯ ಆಡುವುದನ್ನು ನಿಲ್ಲಿಸಿದ ನಂತರ ರಾಷ್ಟ್ರೀಯ ತಂಡದ ದೊಡ್ಡ ಸ್ಟಾರ್ ಆಗಿದ್ದರು. ಗೋಸ್ವಾಮಿಯವರು ಫುಟ್‍ಬಾಲ್ ಮಾತ್ರವಲ್ಲ ಕ್ರಿಕೆಟ್‍ನಲ್ಲಿಯೂ ಯಶಸ್ವಿ ಆಟಗಾರರಾಗಿದ್ದರು.