– ಮೇಕೆದಾಟುಗೆ ಮಾತ್ರ ಅಲ್ಲ, ನಾನು ಕಾಂಗ್ರೆಸ್‌ಗಾಗಿ ಕೆಲಸ ಮಾಡುತ್ತಿದ್ದೇನೆ
ಬೆಂಗಳೂರು: ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (International Film Festival) ಎಲ್ಲರಿಗೂ ಆಹ್ವಾನ ಹೋಗಿದೆ. ಪಿಆರ್‌ಓ ಅವರು ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ವರ್ಷ ವರ್ಷ ಯಾವ ರೀತಿ ನೀಡುತ್ತಿದ್ದರೋ ಆ ರೀತಿ ಆಹ್ವಾನ ನೀಡಲಾಗಿದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ (Sadhu Kokila) ಅವರು ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ ಅಕಾಡೆಮಿ ಅಧ್ಯಕ್ಷತೆಯಲ್ಲಿ ಚಲನಚಿತ್ರೋತ್ಸವ ಚೆನ್ನಾಗಿ ನಡೆಯುತ್ತಿದೆ. ಪ್ರೇಕ್ಷಕರು ಹೆಚ್ಚಾಗಿ ಬರ್ತಿದ್ದಾರೆ. ಮಂಗಳವಾರ ದುನಿಯಾ ವಿಜಿ ಬಂದಿದ್ರು. ಪೂಜಾ ಗಾಂಧಿ ಅವರು ಬಂದು ಮಾತಾಡಿ ಹೋಗಿದ್ದಾರೆ. ಅತ್ಯದ್ಭುತವಾಗಿ ಕಾರ್ಯಕ್ರಮ ನಡೆಯುತ್ತಿದೆ. ಕಲಾವಿದರು ಎಲ್ಲರೂ ಒಟ್ಟಾಗಿ ಹೋಗಬೇಕು. ಕಿಕ್ಕಿರಿದು ಜನ ಬರುತ್ತಿದ್ದಾರೆ, ಎಲ್ಲರೂ ಪ್ರಶಂಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ಸುಮಾರು ವರ್ಷಗಳಿಂದ ಕಾಂಗ್ರೆಸ್‌ಗೆ ಕೆಲಸ ಮಾಡುತ್ತಿದ್ದೇನೆ. ಮೇಕೆದಾಟುಗೆ ಮಾತ್ರ ಕೆಲಸ ಮಾಡುತ್ತಿಲ್ಲ. ಉಪಚುನಾವಣೆ, ಭಾರತ್ ಜೋಡೋದಲ್ಲೂ ಭಾಗಿಯಾಗಿದ್ದೇನೆ. ನನ್ನನ್ನು ಗುರುತಿಸಿದ್ದಾರೆ. ಜವಾಬ್ದಾರಿ ನೀಡಿದ್ದಾರೆ. ನಮ್ಮದು ಕಲಾವಿದರ ಕುಟುಂಬ. ನಾಗಾಭರಣ ಸರ್ ಇದ್ದಾರೆ, ಎಲ್ಲರೂ ಬರುತ್ತಿದ್ದಾರೆ. ಏನೂ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು: 13ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಂಜೆ ವರ್ಣರಂಜಿತವಾಗಿ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಬೊಮ್ಮಾಯಿ ಅವರು ದೀಪ ಬೆಳಗಿಸುವ ಮೂಲಕ ಚಲನಚಿತ್ರೋತ್ಸವಕ್ಕೆ ವೈಭವಕ್ಕೆ ಚಾಲನೆ ಕೊಟ್ಟರು. ಈ ವೇಳೆ ಸಿನಿಮಾ ಕುರಿತು ಮಾತನಾಡಿದ ಅವರು, ವೇದಿಕೆ ಮೇಲಿರುವ ಎಲ್ಲರೂ ಬಹಳ ಸಂತೋಷದಿಂದ ಚಾಲನೆ ನೀಡಿದ್ದೇವೆ. 1934 ಮಾರ್ಚ್ 03 ಅಂದರೆ ಇದೇ ದಿನ ಕನ್ನಡದ ‘ಸತಿ ಸುಲೋಚನಾ’ ಸಿನಿಮಾ ತೆರೆಕಂಡಿತು. ಈ ದಿನವನ್ನು ‘ವಿಶ್ವ ಕನ್ನಡ ಸಿನಿಮಾ ದಿನ’ವೆಂದು ಘೋಷಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಇಷ್ಟು ಕಡಿಮೆ ಸಮಯದಲ್ಲಿ ಚಿತ್ರೋತ್ಸವ ಆಗಿದೆ. ಡಿಜಿಟಲ್ ವಲ್ರ್ಡ್ ನಿರ್ಮಾಣವಾಗಿದೆ. ಇಂದು ತಂತ್ರಜ್ಣಾನ ತುಂಬಾ ಮುಂದೆ ಬಂದಿದೆ. ಇಲ್ಲಿ ಯಾರು ಬಂದಿಲ್ಲದಿದ್ದರೂ ಬಂದಿದ್ದಾರೆ ಎಂದು 4ಡಿ ಮೂಲಕ ತೋರಿಸಬಹುದು. ಕನ್ನಡ ಚಿತ್ರರಂಗ ಉಳಿಯಬೇಕಾದಂತೆ ವಿಶೇಷ ಶ್ರಮವನ್ನು ನಾವು ಹಾಕಬೇಕಾಗುತ್ತೆ. ಸ್ಪೆಶಲ್ ಎಫೆಕ್ಟ್ ಜೊತೆಗೆ ಸ್ಪೆಷಲ್ ಎಫರ್ಟ್ ಬೇಕು. ಕನ್ನಡ ಉಳಿಸಲು ಸಿನಿಮಾಗಳ ಅಗತ್ಯವಿದೆ. ಹಲವು ಚಿತ್ರಂದಿರಗಳು ಮುಚ್ಚುತ್ತಿವೆ. ಅದಕ್ಕಾಗಿ ಹೊಸ ತಂತ್ರಜ್ಞಾನದ ಚಿತ್ರರಂಗ ದೊರೆಯಬೇಕು. ಕುಟುಂಬದವರು ಮತ್ತೆ ಒಟ್ಟಾಗಿ ಬಂದು ಸಿನಿಮಾ ನೋಡುವಂತೆ ಮಾಡಬೇಕು. ಇದಕ್ಕೆ ಸರ್ಕಾರ ಎಲ್ಲರೀತಿಯ ಸಹಕಾರ ನಿಡಲಿದೆ ಎಂದು ಭರವಸೆಯನ್ನು ನೀಡಿದರು. ಇದನ್ನೂ ಓದಿ: ‘ಕೊನೆಗೂ ಸಾಧಿಸಿದ್ವಿ’ – ರಷ್ಯಾ ಟ್ಯಾಂಕ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಉಕ್ರೇನಿ ಪ್ರಜೆಗಳು!
ಬೆಂಗಳೂರು ಚಲನಚಿತ್ರೋತ್ಸವ ನಂಬರ್ ಒನ್ ಆಗುವಂತೆ ಮಾಡಬೇಕು. ಸಾಮಾಜಿಕ ಸಂದೇಶ ಇರುವಂಥ ಸಿನಿಮಾಗಳನ್ನು ಮಾಡಬೇಕು. ಕಪ್ಪುಬಿಳುಪು ಸಿನಿಮಾಗಳಲ್ಲಿ ಸೃಜನಾತ್ಮಕತೆ ಅಪಾರ. ಇತ್ತೀಚೆಗೆ ಸ್ಪೆಷಲ್ ಎಫೆಕ್ಟ್ ತೋರಿಸಲು ಕಪ್ಪುಬಿಳುಪು ಬಳಸಲಾಗುತ್ತೆ. ಸಿನಿಮಾದವರು ಚಿತ್ರೋತ್ಸವ ನೋಡಬೇಕು ಎಂದು ಮನವಿ ಮಾಡಿದರು.
ಖ್ಯಾತ ನಟ ದಿ.ಪುನೀತ್ ರಾಜ್‍ಕುಮಾರ್ ಅವರನ್ನು ಈ ವೇಳೆ ಬೊಮ್ಮಾಯಿ ಅವರು ನೆನಪಿಸಿಕೊಂಡರು. ಪುನೀತ್ ಅವರು ಸಮಾಜಕ್ಕೆ ಮತ್ತು ಸಿನಿಮಾರಂಗಕ್ಕೆ ಕೊಟ್ಟ ಕೊಡುಗೆ ಎಂದು ಶಾಶ್ವತವಾಗಿ ಉಳಿಯುತ್ತವೆ. ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನಿಡಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ಸಮಾರಂಭದ ದಿನಾಂಕ ಪ್ರಕಟಿಸಲಾಗುವುದು. ಮೈಸೂರಿನಲ್ಲಿ ಚಿತ್ರನಗರಿ ಮಾಡಲು ಮುಂದಿನ ವರ್ಚ ಅಗತ್ಯ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸೂಚಿಸಿದರು.
ಈ ಕಾರ್ಯಕ್ರಮಕ್ಕೆ ಸಚಿವ ಮುನಿರತ್ನ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಖ್ಯಾತ ನಟಿ ಭಾರತಿ, ಮಲೆಯಾಳಂ ಚಿತ್ರರಂಗದ ನಿರ್ದೇಶಕ ಪ್ರಿಯದರ್ಶನ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಉಪಸ್ಥಿತರಿದ್ದರು.
ಮಾರ್ಚ್ 3 ರಿಂದ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಗಲಿದ ಇಬ್ಬರು ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯಲಿದೆ. ಇದನ್ನೂ ಓದಿ : ಹೊಸ ಮುಖಗಳ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್
ಇತ್ತೀಚೆಗಷ್ಟೇ ನಿಧನರಾದ ಪುನೀತ್ ರಾಜ್ ಕುಮಾರ್ ಮತ್ತು ಕಳೆದ ವರ್ಷ ಅಗಲಿರುವ ಸಂಚಾರಿ ವಿಜಯ್ ಅವರ ನೆನಪಿಗಾಗಿ ಚಿತ್ರೋತ್ಸವದಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್.
ಪುನೀತ್ ಮತ್ತು ಸಂಚಾರಿ ವಿಜಯ್ ನಟನೆಯ ಚಿತ್ರಗಳ ಪ್ರದರ್ಶನ, ಅವರ ಸಾಧನೆ ಅವಲೋಕನ ಹಾಗೂ ಪುನೀತ್ ಮತ್ತು ವಿಜಯ್ ಕುರಿತಾಗಿ ಗಣ್ಯರು ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್
ಈಗಾಗಲೇ ಸಿನಿಮೋತ್ಸವಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ ಚಲನಚಿತ್ರ ಅಕಾಡಮಿ. ಸಿನಿಮಾಗಳ ಪ್ರದರ್ಶನ, ಸಿನಿಮಾಗಳ ಕುರಿತಾದ ಚರ್ಚೆ, ಅಂತಾರಾಷ್ಟ್ರೀಯ ನಿರ್ದೇಶಕರುಗಳ ಜತೆ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜನೆ ಮಾಡಲಾಗಿದೆ.
ಶಿವಮೊಗ್ಗ : ಬೆಂಗಳೂರಿನಲ್ಲಿ ಫೆ.26 ರಿಂದ ಮಾ.4ರವರೆಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ತಿಳಿಸಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಚಲನಚಿತ್ರೋತ್ಸವದಲ್ಲಿ 50 ದೇಶಗಳ ಸುಮಾರು 150 ಚಿತ್ರಗಳು ಹಾಗೂ ಕನ್ನಡದ 32 ಚಿತ್ರಗಳು ಪ್ರದರ್ಶನಗೊಳ್ಳಲಿದೆ ಎಂದರು.
ಕಂಠೀರವ ಸ್ಟುಡಿಯೋದಲ್ಲಿ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, ಕಂಠೀರವ ಸ್ಟುಡಿಯೋ ಹಾಗೂ ಒರಾಯನ್ ಮಾಲ್ ನಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಚಲನಚಿತ್ರೋತ್ಸವದಲ್ಲಿ ರಾಷ್ಟ್ರದ ಪ್ರಮುಖ ನಿರ್ದೇಶಕರು, ನಟರು, ತಂತ್ರಜ್ಞರು ಸೇರಿದಂತೆ ವಿದೇಶದಿಂದಲೂ ನಿರ್ದೇಶಕರು, ತಂತ್ರಜ್ಞರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ಅಕಾಡೆಮಿ ಪ್ರಶಸ್ತಿಗಳು ಘೋಷಣೆ ಮಾಡುವುದು ಹಾಗೂ ಸಿನಿಮಾಗೆ ಸಬ್ಸಿಡಿ ನೀಡುವ ಕಾರ್ಯ ವಾರ್ತಾ ಇಲಾಖೆ ಬಳಿ ಇದೆ. ಆದರೆ ಇದನ್ನು ಚಲನಚಿತ್ರ ಅಕಾಡೆಮಿಗೆ ವಹಿಸಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಹೀಗಾಗಿ ಚಲನಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ಅಕಾಡೆಮಿ ಮೂಲಕ ನಡೆಯಬೇಕು ಎಂಬುದು ಎಲ್ಲರ ಆಶಯವಾಗಿದೆ. ಜೊತೆಗೆ ಅಕಾಡೆಮಿ ಸಹ ಇದರಲ್ಲಿ ಯಶಸ್ವಿಯಾಗುತ್ತದೆ ಎಂದು ಸುನಿಲ್ ಪುರಾಣಿಕ್ ತಿಳಿಸಿದರು.
ಪಣಜಿ: ಬಹುಭಾಷಾ ನಟಿ ತಾಪ್ಸಿ ಪನ್ನು ಹಿಂದಿಯಲ್ಲಿ ಮಾತನಾಡಿ ಎಂದ ವ್ಯಕ್ತಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದು, ಅವರ ಉತ್ತರ ಕೇಳಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ.
ಇತ್ತೀಚೆಗೆ ತಾಪ್ಸಿ ಗೋವಾದಲ್ಲಿ ನಡೆದ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ತಾಪ್ಸಿ ಪ್ರೇಕ್ಷಕರ ಜೊತೆ ಇಂಗ್ಲಿಷ್ ಭಾಷೆಯಲ್ಲಿ ಸಂವಾದ ನಡೆಸುತ್ತಿರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬರು ಎದ್ದು ನಿಂತು ನೀವು ಹಿಂದಿ ಚಿತ್ರದ ನಟಿ. ನೀವು ಹಿಂದಿಯಲ್ಲಿ ಮಾತನಾಡಿ ಎಂದು ಹೇಳಿದ್ದಾರೆ.
ವ್ಯಕ್ತಿ ಮಾತನ್ನು ಕೇಳಿದ ತಾಪ್ಸಿ, ಸರ್. ನಾನು ಈ ಇಡೀ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಮಾತನಾಡುತ್ತೇನೆ. ಆದರೆ ಇಲ್ಲಿರುವ ಎಲ್ಲರಿಗೂ ಹಿಂದಿ ಅರ್ಥವಾಗುತ್ತಾ ಎಂದು ಮರು ಪ್ರಶ್ನಿಸಿದ್ದಾರೆ. ಅದಕ್ಕೆ ಅಲ್ಲಿದ್ದ ಪ್ರೇಕ್ಷಕರು ಇಲ್ಲ ಎಂದು ಉತ್ತರಿಸಿದ್ದಾರೆ. ಬಳಿಕ ತಾಪ್ಸಿ ನಾನು ದಕ್ಷಿಣ ಭಾರತದ ನಟಿ ಕೂಡ. ಹಾಗಂತ ನಾನು ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಮಾತನಾಡಬೇಕೇ ಎಂದು ಕೇಳಿದ್ದಾರೆ.
ತಾಪ್ಸಿ ಅವರು ಈ ರೀತಿ ಖಡಕ್ಕಾಗಿ ಪ್ರತಿಕ್ರಿಯೆ ನೀಡುತ್ತಿದ್ದಂತೆ ಅಲ್ಲಿದ್ದ ಜನರು ಜೋರಾಗಿ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ತಾಪ್ಸಿ ಅವರು ನೀಡಿದ ಖಡಕ್ ಉತ್ತರದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಬೆಂಗಳೂರು: ನಗರದಲ್ಲಿ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ಸಿಗಲಿದೆ. ಸಂಜೆ ಆರು ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಉದ್ಘಾಟನೆಗೊಳ್ಳುವ ಈ ಕಾರ್ಯಕ್ರಮದಲ್ಲಿ ದೇಶವಿದೇಶಗಳ ಹಲವಾರು ಗಣ್ಯರು ಸಾಕ್ಷಿಯಾಗಲಿದ್ದಾರೆ.
ಫೆಬ್ರವರಿ 3 ರಿಂದ ಫೆಬ್ರವರಿ 8ರ ವರೆಗೆ ಬೆಂಗಳೂರಿನ ಹಲವೆಡೆ ವಿವಿಧ ಸ್ಕ್ರೀನ್‍ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಬಂಗಾಲಿ ನಿರ್ದೇಶಕ ಬುದ್ಧದೇವ ದಾಸ್‍ಗುಪ್ತಾ, ಈಜಿಪ್ಟ್ ನ ಖ್ಯಾತ ನಿರ್ದೇಶಕಿ ಹಲಾ ಖಲೀಲ್, ನಟ ಪುನೀತ್ ರಾಜ್‍ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕನ್ನಡದ ನಟ ರಮೇಶ್ ಅರವಿಂದ್ ಹಾಗೂ ಬಹುಭಾಷಾ ನಟಿ ಸುಹಾಸಿನಿ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಈ ಬಾರಿ 60 ದೇಶಗಳ ಒಟ್ಟೂ 240 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಕನ್ನಡದ 40 ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಿವೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 9ರಂದು ಸಂಜೆ ಮೈಸೂರು ಅರಮನೆ ಮುಂದೆ ಜರುಗಲಿದೆ.